Thursday, March 12, 2026
Thursday, March 12, 2026
Home Blog Page 411

Karnataka Sarvodya Mandala National Conference ಈಸೂರು,ದೇಶದಲ್ಲಿ‌ ಸ್ವಾತಂತ್ರ್ಯ ಘೋಷಿಸಿಕೊಂಡ ಮೊದಲ ಗ್ರಾಮ- ಚಂದನ್ ಪಾಲ್

0

Karnataka Sarvodya Mandala National Conference ಈಸೂರಿನ ಹೋರಾಟಗಾರರ ಸ್ವಾತಂತ್ರ್ಯದ ಕೂಗು ಇಡೀ ದೇಶಾದ್ಯಂತ ಪ್ರತಿಧ್ವನಿಸಿತ್ತು. ದೇಶದಲ್ಲಿ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಊರು ಈಸೂರು ಗ್ರಾಮ ಎಂದು ಅಖಿಲ ಭಾರತ ಸರ್ವೋದಯ ಮಂಡಲದ ಅಧ್ಯಕ್ಷ ಚಂದನ್ ಪಾಲ್ ಹೇಳಿದರು.

ಈಸೂರಿನ ಹುತಾತ್ಮರ ಸ್ಮಾರಕದ ಆವರಣದಲ್ಲಿ ಸರ್ವೋದಯ ಮಂಡಲ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಮತ್ತು ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶ ಸ್ವಾತಂತ್ರ್ಯವಾಗಲು ಲಕ್ಷಾಂತರ ಹೋರಾಟಗಾರರು ಹುತಾತ್ಮವಾಗಿದ್ದಾರೆ. ಅವರೆಲ್ಲರ ಹೋರಾಟದ ಬದುಕು ನಮಗೆ ಸ್ಪೂರ್ತಿ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಪಾಟೀಲ್ ಮಾತನಾಡಿ, ಗ್ರಾಮದಲ್ಲಿ ಸರ್ವೋದಯ ಮಂಡಲ ವತಿಯಿಂದ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ. ಸ್ವಾತಂತ್ರ್ಯ ಹೋರಾಟ ಮತ್ತಷ್ಟು ಬಲಿಷ್ಠವಾಗಲು ಪ್ರೇರಣೆ ನೀಡಿದ ಗ್ರಾಮ ಈಸೂರು ಎಂದು ಹೇಳಿದರು.

Karnataka Sarvodya Mandala National Conference ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಡಾ. ಸುರೇಶ್ ಮಾತನಾಡಿ, ಸಮಾನತೆ ಮತ್ತು ಸಹೃದಯತೆ ಬೆಳೆಸುವುದೇ ಪ್ರಮುಖ ಉದ್ದೇಶ. ಸರ್ವೋದಯದ ಸಂದೇಶಗಳು ಪ್ರತಿ ಮನೆಗೂ ತಲುಪಬೇಕು ಎಂದು ತಿಳಿಸಿದರು.

ಈಸೂರಿನಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮೀಪ ಧ್ವಜಾರೋಹಣೆ ನೆರವೇರಿಸಿ ಮೆರವಣಿಗೆಯು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಹುತಾತ್ಮರ ಸ್ಮಾರಕದವರೆಗೂ ನಡೆದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಈಸೂರಿನ ಶಿವಯೋಗಿಗೌಡ, ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ್ ತುಕರಾಮ್, ಗ್ರಾಪಂ ಉಪಾಧ್ಯಕ್ಷ ಕುಮಾರ್, ಸರ್ವೋದಯ ಮಂಡಲ ಸಂಚಾಲಕ ಸುಂದರರಾಜ್, ಬಸವರಾಜಪ್ಪ, ಡಾ. ವಿ.ಪ್ರಶಾಂತ್, ರೇಣುಕಮ್ಮ, ಲೀಲಾವತಿ, ಸತೀಶ್‌ಚಂದ್ರ, ಉಜ್ಜಳ್ಳಿ ಸುರೇಶ್, ಪ್ರಮುಖರಾದ ಜಿ.ವಿಜಯಕುಮಾರ್, ಮನೋಹರ, ಕೆ .ಲೈವ್ ನ್ಯೂಸ್ ಪ್ರಧಾನ ಸಂಪಾದಕ‌ ಡಾ.ಸುಧೀಂದ್ರ, ಕಾಂತೇಶ್, ವೆಂಕಟೇಶ್ ಮತ್ತಿತರರು ಇದ್ದರು.

Gurudutt Hegde ಬಾಣಂತಿ & ಅಭಿಜಾತ ಶಿಶುಗಳ ಚಿಕಿತ್ಸೆಯಲ್ಲಿ‌ ವೈದ್ಯಾಧಿಕಾರಿ ಗಳು ನಿರ್ಲಕ್ಷ್ಯ ತೋರದೇ ಮಾನವೀಯ ಸೇವೆ‌ ನೀಡಿ- ಗುರುದತ್ತ‌ ಹೆಗಡೆ

0

Gurudutt Hegde ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿ ಮತ್ತು ಅಭಿಜಾತ ಶಿಶುಗಳ ಸಾವು-ನೋವು ನಿಯಂತ್ರಿಸುವಲ್ಲಿ ತಜ್ಞ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ತೋರದೇ ಮಾನವೀಯ ನೆಲೆಯಲ್ಲಿ ಸೇವೆ ಒದಗಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ವೈದ್ಯರಿಗೆ ಕಿವಿಮಾತು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬಾಣಂತಿಯ ಸಾವು ಕುರಿತು ಪರಾಮರ್ಶನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಳೆದ 2024ರ ಸೆಪ್ಟಂಬರ್‌ಮಾಹೆಯಿಂದ ಇಂದಿನವರೆಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 08 ಪ್ರಕರಣಗಳು ದಾಖಲಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದ ಅವರು, ಗಂಡಾಂತರ ಗರ್ಭಿಣಿಯರು ಹೆರಿಗೆಯ ದಿನಕ್ಕೆ ಮುಂಚಿತವಾಗಿಯೇ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ, ಅವರ ಸಲಹೆ ಪಡೆದು, ಮಾನಸಿಕವಾಗಿ ಸಿದ್ಧರಾಗಿರಬೇಕು. ಹೆರಿಗೆಯ ಕೊನೆಯ ಕ್ಷಣದವರೆಗೆ ಕಾಲಹರಣ ಮಾಡದೆ ತಾವು ಮತ್ತು ಕೂಸಿನ ಆರೋಗ್ಯ ಮತ್ತು ಸುರಕ್ಷತೆಯ ಕಡೆಗೆ ಗಮನಹರಿಸುವಂತೆ ಅವರು ಸೂಚಿಸಿದರು.
ಗಂಡಾಂತರ ಗರ್ಭಿಣಿಯರ ಆರೈಕೆ ನೋಡಿಕೊಳ್ಳುತ್ತಿರುವ ವೈದ್ಯರು ಸಾಂದರ್ಭಿಕ ಸ್ಥಿತಿಗತಿಯ ಬಗ್ಗೆ ಕಾಲಕಾಲಕ್ಕೆ ಸಲಹೆ ನೀಡಬೇಕಲ್ಲದೇ ಅಗತ್ಯವಿದ್ದಾಗ ತಜ್ಞ ವೈದ್ಯರಿಗೆ ಶಿಫಾರಸ್ಸು ಮಾಡಬೇಕು. ಇದರೊಂದಿಗೆ ವೈದ್ಯರು ಶಿಫಾರಸ್ಸು ಮಾಡುವ ವೈದ್ಯರಿಗೆ ಮುಂಚಿತವಾಗಿ ಗರ್ಭಿಣಿಯ ಮಾಹಿತಿಯನ್ನು ನೀಡಿರಬೇಕು. ಜೊತೆಗೆ ಶುಶ್ರೂಷೆಯೊಬ್ಬರನ್ನು ಕಳುಹಿಸಿಕೊಡಬೇಕು ಎಂದವರು ಸಲಹೆ ನೀಡಿದರು.
Gurudutt Hegde ಅಲ್ಲದೇ ಸಂಭಾವ್ಯ ರಕ್ತಹೀನತೆ ಹಾಗೂ ಸೇವಿಸಲೇಬೇಕಾದ ಪೌಷ್ಟಿಕ ಆಹಾರದ ಕುರಿತು ಸೂಕ್ತ ಹಾಗೂ ಸಕಾಲಿಕ ಸಲಹೆ ನೀಡುವಂತೆ ಸೂಚಿಸಿದ ಅವರು, ಬಾಣಂತಿಯರು ಪ್ರತಿ ಗರ್ಭ ಧರಿಸುವುದಕ್ಕೆ ಮುನ್ನ ಕನಿಷ್ಟ ಅಂತರ ಹೊಂದಿದ್ದು, ಕಾಲಕಾಲಕ್ಕೆ ರಕ್ತದೊತ್ತಡ, ಮಧುಮೇಹ ಮುಂತಾದ ತಪಾಸಣೆಗಳನ್ನು ಮಾಡಿಸುವಂತೆ ಅವರು ಸಲಹೆ ನೀಡಿದರು.
ಕೆಲವು ಬಾಣಂತಿಯರ ಸಾವಿನ ಪ್ರಕರಣಗಳಲ್ಲಿ ವೈದ್ಯರ ನಿರ್ಲಕ್ಷ್ಯ ಇರುವ ಬಗ್ಗೆ ದೂರುಗಳಿದ್ದು, ವಾಸ್ತವ ವರದಿಯನ್ನು ಪಡೆದು ಕೂಡಲೇ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್‌ಅವರಿಗೆ ಸೂಚಿಸಿದ ಅವರು, ಬಾಣಂತಿಯರ ಕೆಲವು ಸಾವಿನ ಪ್ರಕರಣಗಳಲ್ಲಿ ಕೊನೆ ಕ್ಷಣದಲ್ಲಿ ನೆರೆಯ ಜಿಲ್ಲೆಗಳಿಂದ ಶಿಫಾರಸ್ಸುಗೊಂಡ ಪ್ರಕರಣಗಳೇ ಆಗಿರುವುದು ಕಂಡುಬರುತ್ತದೆ. ಆದಾಗ್ಯೂ ವೈದ್ಯರು ಸಕಾಲಿಕವಾಗಿ ಚಿಕಿತ್ಸೆ ನೀಡುವ ಮೂಲಕ ಬಾಣಂತಿಯ ಸಾವಿನ ಪ್ರಕರಣಗಳು ನಡೆಯದಂತೆ ಕ್ರಮ ವಹಿಸಬೇಕೆಂದು ಅವರು ಸೂಚಿಸಿದರು.
ರಾಜ್ಯದಾದ್ಯಂತ ಇಂತಹ ಪ್ರಕರಣಗಳು ಅಲ್ಲಲ್ಲಿ ಕೇಳಿಬರುತ್ತಿದ್ದು, ಸರ್ಕಾರವೂ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬರದಂತೆ, ಸಕಾಲಿಕ ಚಿಕಿತ್ಸೆ ನೀಡುವ ಮೂಲಕ ತಾಯಿ ಮಗುವಿನ ಸುರಕ್ಷತೆಗೆ ವಿಶೇಷ ಕಾಳಜಿ ವಹಿಸುವಂತೆ ಅವರು ವೈದ್ಯರಿಗೆ ಸೂಚಿಸಿದರು.
ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುವ ಬಹುಸಂಖ್ಯಾತರು ಸಾಮಾನ್ಯ ಕುಟುಂಬದವರಾಗಿರುತ್ತಾರೆ. ಅಂತಹವರಿಗೆ ಸಕಾಲದಲ್ಲಿ ಚಿಕಿತ್ಸೆದೊರೆಯುವಂತೆ ನೋಡಿಕೊಳ್ಳಬೇಕು. ನಿಯಮಾನುಸಾರ ಹಾಗೂ ಅಗತ್ಯವಿದ್ದಲ್ಲಿ ತುರ್ತು ಚಿಕಿತ್ಸೆ ನೀಡುವಲ್ಲಿ ವೈದ್ಯಕೀಯ ಸಿಬ್ಬಂಧಿ ಗಮನಹರಿಸುವಂತೆ ಅವರು ಸೂಚಿಸಿದ ಅವರು ಚಿಕಿತ್ಸೆ ನೀಡುವಲ್ಲಿ ವೈದ್ಯರಿಂದ ಯಾವುದೇ ಲೋಪಗಳಾಗದಂತೆ ನೋಡಿಕೊಳ್ಳಬೇಕು. ಚಕಿತ್ಸೆಗೆ ದಾಖಲಾಗುವ ಪ್ರತಿ ರೋಗಿಯ ಬಗ್ಗೆಯೂ ಇದೇ ಕಾಳಜಿ ವಹಿಸುವಂತೆ ಸಾವು ನಿಯಂತ್ರಿಸಿ, ಅಮೂಲ್ಯ ಜೀವ ಉಳಿಸುವಂತೆ ಅವರು ಸೂಚಿಸಿದರು.
ತುರ್ತು ಸಂದರ್ಭಗಳಲ್ಲಿ ರಕ್ತ ದೊರೆಯುವಂತೆ ಎಲ್ಲಾ ತಾಲೂಕು ಆಸ್ಪತ್ರೆಗಳ ,ಮುಖ್ಯಾಧಿಕಾರಿಗಳು ಕ್ರಮವಹಿಸಿ, ಅಲ್ಲದೇ ಉತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ಅಡಚಣೆಗಳಿದ್ದಲ್ಲಿ ಕೂಡಲೇ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಲಿಖಿತವಾಗಿ ಮಾಹಿತಿ ನೀಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಟರಾಜ್‌, ಡಾ|| ಸಿದ್ದನಗೌಡ, ಆರ್.ಸಿ.ಹೆಚ್.ಡಾ||ಮಲ್ಲಪ್ಪ, ಡಾ|| ನಾಗರಾಜನಾಯ್ಕ್‌, ಡಾ|| ಸ್ಮೃತಿ, ಡಾ|| ಹೇಮಾಮಹೇಶ್‌ಸೇರಿದಂತೆ ಎಲ್ಲಾ ತಾಲೂಕುಗಳ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

H.K. Patil ಫೆಬ್ರವರಿ26 ರಿಂದ 28 ರವರೆಗೆ ಅಂತಾರಾಷ್ಟ್ರೀಯ ಟ್ರಾವೆಲ್ ಎಕ್ಸ್ ಪೊ. – ಸಚಿವ ಎಚ್.ಕೆ.ಪಾಟೀಲ್

0

H.K. Patil ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ
ಬೆಂಗಳೂರು ನಗರದಲ್ಲಿ ಫೆಬ್ರವರಿ 26 ರಿಂದ 28ರವರೆಗೆ ನಡೆಯಲಿರುವ ಕರ್ನಾಟಕ ಇಂಟರ್ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ (ಕೈಟ್) 2025ರ ಪೂರ್ವಭಾವಿಯಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೈಟ್ ನ “ಕರ್ಟನ್ ರೈಸರ್, ಬ್ರೋಚರ್ ಮತ್ತು ಲಾಂಛನವನ್ನು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು
ಲೋಕಾರ್ಪಣೆಗೊಳಿಸಿದರು.

H.K. Patil ಈ ಸಂದರ್ಭದಲ್ಲಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಾಜನೀಶ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಹೀಂ, ನಿರ್ದೇಶಕ ಡಾ. ರಾಜೇಂದ್ರ ಕೆ.ವಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Distributors Day ವಿತರಕರ ದಿನಾಚರಣೆ ನಿರ್ಧಾರಕ್ಕೆ‌ ಚರ್ಚಿಸಲು‌ ಫೆಬ್ರವರಿ‌ 2 ರಂದು ಸಭೆ- ಎಂ.ಸಿ.ದೇವರಾಜ್

0

Distributors Day ತಿಯೊಂದು ಕ್ಷೇತ್ರದಲ್ಲಿ ವಾರ್ಷಿಕವಾಗಿ ವಿಶೇಷ ದಿನಾಚರಣೆ ಆಚರಿಸಲಾಗುತ್ತಿದೆ. ಉದಾಹರಣೆ ಇಂಜಿನಿಯರ್ ದಿನ, ವೈದ್ಯರ ದಿನ.. ಹೀಗೆ ವಿವಿಧ ದಿನ ಇರುತ್ತದೆ. ಆದರೆ ಸರ್ಕಾರಕ್ಕೆ ಹೆಚ್ಚು ಜಿಎಸ್‌ಟಿ ಮೂಲಕ ತೆರಿಗೆ ಸಂಗ್ರಹಿಸಿ ನೀಡುವ ವಿತರಕರಿಗೆ ಅವರದ್ದೆ ಒಂದು ದಿನ ಇಲ್ಲ. ವಿತರಕರ ಸಂಘದಿಂದ ಆಚರಿಸಿದ್ದ ಉತ್ಸವ 2020ರ ನೆನಪಿಗಾಗಿ ಪ್ರತಿ ವರ್ಷ ಫೆ. 2ರಂದು ವಿತರಕರ ದಿನಾಚರಣೆಯಾಗಿ ಆಚರಿಸುವುದಕ್ಕೆ ಹಾಗೂ ಸರ್ಕಾರದಿಂದ ಮನ್ನಣೆ ಪಡೆಯುವುದಕ್ಕೆ ಶಿವಮೊಗ್ಗ ಜಿಲ್ಲಾ ವಿತರಕರ ಸಂಘದಿಂದ ಅಭಿಯಾನ ಶುರು ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಂ.ಸಿ.ದೇವರಾಜ್ ಹೇಳಿದರು.

ಕಂಪನಿಗಳಿಗೆ ಹಾಗೂ ವರ್ತಕರಿಗೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿತರಕರ ಹಿತ ಕಾಪಡುವುದೇ ಸಂಘದ ಮೂಲ ಉದ್ದೇಶ. ಆನ್ ಲೈನ್, ಮಾಡರ್ನ ಟ್ರೇಡ್ ಹಾಗೂ ಇ-ಕಾಮರ್ಸ್ ವ್ಯವಹಾರದ ಸವಾಲುಗಳನ್ನು ಎದುರಿಸಲು ವಿತರಕರು ಹಾಗೂ ವರ್ತಕರನ್ನು ಸಶಕ್ತಗೊಳಿಸುವುದು ನಮ್ಮ ಸಂಘದ ಉದ್ದೇಶ. ಮೊದಲ ವರ್ಷದ ದಿನಾಚರಣೆ ಉದ್ದೇಶಕ್ಕಾಗಿ 2025ರ ಫೆ. 2 ರಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಸಭೆ ನಡೆಸಲಾಗುತ್ತಿದೆ. ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

Distributors Day ಸಂಘದ ಕಾರ್ಯದರ್ಶಿ ಗಿರೀಶ್ ಒಡೆಯರ್ ಮಾತನಾಡಿ, ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದ ಒಕ್ಕೂಟಗಳ ಅಧ್ಯಕ್ಷ ಹುಬ್ಬಳ್ಳಿ ಮೂಲದ ಗಿರೀಶ್ ಸುಂಕದ್ ಹಾಗೂ ಬೆಂಗಳೂರು ಮೂಲದ ಜಯಂತ್ ಗಾಣಿಗ್ ಸೇರಿದಂತೆ ಶಿವಮೊಗ್ಗ – ಚಿಕ್ಕಮಗಳೂರು ಜಿಲ್ಲೆಯ ಹಾಗೂ ವಿವಿಧ ತಾಲ್ಲೂಕುಗಳ ನಾಯಕರು ಪಾಲ್ಗೊಳ್ಳುವರು. ಸಂಘದ ಸದಸ್ಯರ ಗುರುತಿಗಾಗಿ ಕಚೇರಿಯಲ್ಲಿ ತೂಗು ಹಾಕಲು ಫಲಕ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಮಾಜಿ ಅಧ್ಯಕ್ಷ ಶಿವರಾಜ್ ಉಡುಗಣಿ, ಉಪಾಧ್ಯಕ್ಷ ಬದ್ರಿನಾಥ್, ಸಹ ಕಾರ್ಯದರ್ಶಿ ಅರವಿಂದ್ ರಾವ್, ಖಜಾಂಚಿ ಚಂದ್ರಶೇಖರ್ ಕೆಕೆ ಸಂಘದ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.

Water Supply and Sewerage Board ನೀರಿನ ಕಂದಾಯ ಸ್ವೀಕೃತಿಗೆ ಫೆ.2. ಭಾನುವಾರ ವಿಶೇಷ ಕೌಂಟರ್ ವ್ಯವಸ್ಥೆ

0

Water Supply and Sewerage Board 2024-25ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗದ ವತಿಯಿಂದ ಫೆ.02 ರ ಭಾನುವಾರದಂದು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ತರೆಯಲಾಗಿದೆ.
ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗುರುಪುರ ಸರ್ಕಾರಿ ಪ್ರಾಥಮಿಕ ಶಾಲೆ ಆವರಣ, ಮಂಡ್ಲಿ ಸರ್ಕಲ್ ಆಟೋ ನಿಲ್ದಾಣದ ಹತ್ತಿರ, ದ್ರೌಪದಮ್ಮ ಸರ್ಕಲ್ ಸಿಟಿಬಸ್ ನಿಲ್ದಾಣದ ಹತ್ತಿರ, ಶಾಂತಿನಗರ ಯಲ್ಲಮ್ಮನ ದೇವಸ್ಥಾನದ ಹತ್ತಿರ ಮತ್ತು ಸೂಳೇಬೈಲ್ ಗಣಪತಿ ದೇವಸ್ಥಾನದ ಹತ್ತಿರ ವಿಶೇಷ ವಸೂಲಾತಿ ಕೌಂಟರ್ ತೆರೆದಿದ್ದು, ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.

Urban Society ಅರ್ಬನ್ ಸೊಸೈಟಿಗೆ ‌ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

0

Urban Society ಅರ್ಬನ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಒಡೆಯರ್ ಉಪಾಧ್ಯಕ್ಷರಾಗಿ ಸುಲೋಚನ ಅವಿರೋಧ ಆಯ್ಕೆ
ಶಿವಮೊಗ್ಗ ನಗರದ ಜೆಪಿಎನ್ ರಸ್ತೆಯಲ್ಲಿರುವ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಎಂ.ಎನ್. ಒಡೆಯರ್ ಉಪಾಧ್ಯಕ್ಷರಾಗಿ ಶ್ರೀಮತಿ ಸುಲೋಚನಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ತಿಳಿಸಿದ್ದಾರೆ. ಆಯ್ಕೆಯಾದ ಇವರನ್ನು ಅರ್ಬನ್ ಸೊಸೈಟಿ ಕಾರ್ಯ ಕಾರಿ ಮಂಡಳಿ ಅಭಿನಂದಿಸಿದೆ.

Style Dance Crew  ಸ್ಟೈಲ್ ಡಾನ್ಸ್ ಕ್ರಿವ್ ‌ಸಂಸ್ಥಾಪಕ ಶಶಿಕುಮಾರ್ ಗೆ “ಪುನೀತ ರತ್ನ” ಬಿರುದು

0


Style Dance Crew  ಶಿವಮೊಗ್ಗದ ಪ್ರತಿಷ್ಟಿತ ನೃತ್ಯ ಸಂಸ್ಥೆಯಾದ ಸ್ಟೈಲ್ ಡಾನ್ಸ್ ಕ್ರಿವ್ ಸ್ಟುಡಿಯೋ ಸಂಸ್ಥಾಪಕ ಶಶಿಕುಮಾರ್ ಎನ್ ಅವರ ನೃತ್ಯ, ಸಿನಿಮಾ ಆಸಕ್ತಿ ಜೊತೆಗೆ ಇವರ ಸಮಾಜಮುಖಿ ಕೆಲಸವನ್ನು ಮೆಚ್ಚಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಬೆಂಗಳೂರಿನ ಸಿನಿಮಾ ಕಾರ್ಯಕ್ರಮದಲ್ಲಿ ಪುನೀತರತ್ನ ಬಿರುದು ನೀಡಿ ಗೌರವಿಸಿದರು.

Prayagraj Kumbhamela ಪ್ರಯಾಗ್ ರಾಜ್ ಕುಂಭಮೇಳ, ‌ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರ ನೆರವಿಗೆ ಸಹಾಯವಾಣಿ

0

Prayagraj Kumbhamela ಮಹಾಕುಂಭ ಮೇಳ ಜರುಗುತ್ತಿರುವ ಪ್ರಯಾಗ್‌ರಾಜ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಕರ್ನಾಟಕ ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದೆ. ನಿಮ್ಮ ಕುಟುಂಬಸ್ಥರು ಸಂಪರ್ಕಕ್ಕೆ ಸಿಗುತ್ತಿಲ್ಲವಾದರೆ 080-22340676 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ‌ ವಿನಂತಿಸಿದ್ದಾರೆ

Shivaganga Yoga Kendra ಫೆಬ್ರವರಿ 4 ಸೂರ್ಯದೇವನಿಗೆ ಕೃತಜ್ಞತೆ ಅರ್ಪಣೆ ಕಾರ್ಯಕ್ರಮ

0

Shivaganga Yoga Kendra ಶಿವಮೊಗ್ಗ ನಗರದ ವಿನೋಬನಗರ ಕಲ್ಲಹಳ್ಳಿಯಲ್ಲಿರುವ ಶಿವಗಂಗಾ ಯೋಗ ಕೇಂದ್ರದಲ್ಲಿ ರಥಸಪ್ತಮಿ ಹಬ್ಬ ಸೂರ್ಯನ ಜನ್ಮದಿನದಂದು ಯೋಗಾಸಕ್ತರಿಂದ ಅಖಂಡ ಸೂರ್ಯ ನಮಸ್ಕಾರದ ಮೂಲಕ ಸೂರ್ಯ ದೇವನಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. Shivaganga Yoga Kendra ದಿನಾಂಕ 4.2.2025 ಮಂಗಳವಾರ ಬೆಳಿಗ್ಗೆ 5:30ಕ್ಕೆ ಸೂರ್ಯದೇವನಿಗೆ ಪೂಜೆ ಮಂಗಳಾರತಿ ಸಾಮೂಹಿಕ ಪ್ರಾರ್ಥನೆ ರಥಸಪ್ತಮಿ ಆಚರಣೆ ವಿಶೇಷತೆ ಕುರಿತು ಮಾತು ಶ್ರೀ ಡಾ. ಪದ್ಮನಾಭ ಅಡಿಗರಿಂದ, ಯೋಗ ಶಿಕ್ಷಣಾರ್ಥಿಗಳಿಂದ ಬೀಜಾಕ್ಷರ ಮಂತ್ರಗಳೊಂದಿಗೆ ಅಖಂಡ ಸೂರ್ಯ ನಮಸ್ಕಾರದ ಮೂಲಕ ಸೂರ್ಯದೇವನಿಗೆ ಧನ್ಯತಾ ಪೂರ್ವಕವಾಗಿ ಭಕ್ತಿ ಸಮರ್ಪಣೆ ಮತ್ತು ಮಹಾಪ್ರಾಸಾದ ವಿತರಣೆ. ಕಾರ್ಯಕ್ರಮದಲ್ಲಿ ಯೋಗಾಸಕ್ತ ಸಾರ್ವಜನಿಕರು ಭಾಗವಹಿಸಿ ಸೂರ್ಯನ ದೇವನ ಕೃಪೆಗೆ ಪಾತ್ರರಾಗುವಂತೆ ಶ್ರೀ ಶಿವಗಂಗಾ ಯೋಗ ಕೇಂದ್ರದ ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಡಾ. ಸಿ.ವಿ. ರುದ್ರಾರಾಧ್ಯ ಕೋರಿದ್ದಾರೆ.

CM Siddharamaiah ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ಬಲಿಷ್ಠ ಕಾಯಿದೆ ತರಲಾಗುವುದು- ಸಿದ್ಧರಾಮಯ್ಯ

0

CM Siddharamaiah ಮೈಕ್ರೋ ಫೈನಾನ್ಸ್‌ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆ ಹಾಗೂ ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಕಡಿವಾಣ ಹಾಕುವ ಸಂಬಂಧ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಮಾತನಾಡಿದರು.

ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಬಲಿಷ್ಠ ಕಾಯ್ದೆಯನ್ನು ಆದಷ್ಟು ಬೇಗನೆ ಜಾರಿ ಮಾಡಲಾಗುವುದು. ಈ ಕುರಿತು ಕಾನೂನು ಇಲಾಖೆ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದರು.

ಕಾಯ್ದೆ ಸಂಪೂರ್ಣ ಸಂವಿಧಾನ ಬದ್ಧವಾಗಿದ್ದು, ಯಾವುದೇ ಲೋಪದೋಷಗಳನ್ನು ಹೊಂದಿರಬಾರದು. ಸಾಲಗಾರರು ಎದುರಿಸುತ್ತಿರುವ ಕಿರುಕುಳವನ್ನು ತಪ್ಪಿಸಲು ಹಾಗೂ ಸಾಲ ನೀಡಿದವರು ಬಲವಂತದ ವಸೂಲಿ ಮಾಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಬಲಿಷ್ಠ ಕಾಯ್ದೆ ರಚಿಸಲಾಗುವುದು. ಕಾಯ್ದೆಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಒಂಬುಡ್ಸ್‌ಮೆನ್‌ ಗಳ ನೇಮಕ ಮಾಡಲಾಗುವುದು. ಅಮಾನವೀಯವಾಗಿ ಬಲವಂತದ ಸಾಲ ವಸೂಲಾತಿ ಮಾಡುವವರಿಗೆ ಜಾಮೀನುರಹಿತ ಪ್ರಕರಣ ದಾಖಲು ಸೇರಿದಂತೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ಸಿಗುವಂತೆ ಕಾನೂನು ರೂಪಿಸಲಾಗುವುದು ಎಂದು ತಿಳಿಸಿದರು.

CM Siddharamaiah ನೋಂದಣಿಯಾಗದ ಲೇವಾದೇವಿಗಾರರ ಕಿರುಕುಳವನ್ನು ತಪ್ಪಿಸಲು ಕಠಿಣ ಕಾನೂನು ಜಾರಿ ಮಾಡಲಾಗುವುದು. ಪ್ರಸ್ತುತವಿರುವ ಕಾನೂನಿನಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ನಿಯಂತ್ರಿಸಲು ಹಲವು ಅವಕಾಶಗಳಿದ್ದು, ತಾತ್ಕಾಲಿಕವಾಗಿ ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು, ಸಂತ್ರಸ್ತರು ದೂರು ದಾಖಲು ಮಾಡುವ ತನಕ ಕಾಯದೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.