Water Supply and Sewerage Board 2024-25ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗದ ವತಿಯಿಂದ ಫೆ.02 ರ ಭಾನುವಾರದಂದು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ತರೆಯಲಾಗಿದೆ.
ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗುರುಪುರ ಸರ್ಕಾರಿ ಪ್ರಾಥಮಿಕ ಶಾಲೆ ಆವರಣ, ಮಂಡ್ಲಿ ಸರ್ಕಲ್ ಆಟೋ ನಿಲ್ದಾಣದ ಹತ್ತಿರ, ದ್ರೌಪದಮ್ಮ ಸರ್ಕಲ್ ಸಿಟಿಬಸ್ ನಿಲ್ದಾಣದ ಹತ್ತಿರ, ಶಾಂತಿನಗರ ಯಲ್ಲಮ್ಮನ ದೇವಸ್ಥಾನದ ಹತ್ತಿರ ಮತ್ತು ಸೂಳೇಬೈಲ್ ಗಣಪತಿ ದೇವಸ್ಥಾನದ ಹತ್ತಿರ ವಿಶೇಷ ವಸೂಲಾತಿ ಕೌಂಟರ್ ತೆರೆದಿದ್ದು, ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.
Water Supply and Sewerage Board ನೀರಿನ ಕಂದಾಯ ಸ್ವೀಕೃತಿಗೆ ಫೆ.2. ಭಾನುವಾರ ವಿಶೇಷ ಕೌಂಟರ್ ವ್ಯವಸ್ಥೆ
Urban Society ಅರ್ಬನ್ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
Urban Society ಅರ್ಬನ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಒಡೆಯರ್ ಉಪಾಧ್ಯಕ್ಷರಾಗಿ ಸುಲೋಚನ ಅವಿರೋಧ ಆಯ್ಕೆ
ಶಿವಮೊಗ್ಗ ನಗರದ ಜೆಪಿಎನ್ ರಸ್ತೆಯಲ್ಲಿರುವ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಎಂ.ಎನ್. ಒಡೆಯರ್ ಉಪಾಧ್ಯಕ್ಷರಾಗಿ ಶ್ರೀಮತಿ ಸುಲೋಚನಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ತಿಳಿಸಿದ್ದಾರೆ. ಆಯ್ಕೆಯಾದ ಇವರನ್ನು ಅರ್ಬನ್ ಸೊಸೈಟಿ ಕಾರ್ಯ ಕಾರಿ ಮಂಡಳಿ ಅಭಿನಂದಿಸಿದೆ.
Style Dance Crew ಸ್ಟೈಲ್ ಡಾನ್ಸ್ ಕ್ರಿವ್ ಸಂಸ್ಥಾಪಕ ಶಶಿಕುಮಾರ್ ಗೆ “ಪುನೀತ ರತ್ನ” ಬಿರುದು
Style Dance Crew ಶಿವಮೊಗ್ಗದ ಪ್ರತಿಷ್ಟಿತ ನೃತ್ಯ ಸಂಸ್ಥೆಯಾದ ಸ್ಟೈಲ್ ಡಾನ್ಸ್ ಕ್ರಿವ್ ಸ್ಟುಡಿಯೋ ಸಂಸ್ಥಾಪಕ ಶಶಿಕುಮಾರ್ ಎನ್ ಅವರ ನೃತ್ಯ, ಸಿನಿಮಾ ಆಸಕ್ತಿ ಜೊತೆಗೆ ಇವರ ಸಮಾಜಮುಖಿ ಕೆಲಸವನ್ನು ಮೆಚ್ಚಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಬೆಂಗಳೂರಿನ ಸಿನಿಮಾ ಕಾರ್ಯಕ್ರಮದಲ್ಲಿ ಪುನೀತರತ್ನ ಬಿರುದು ನೀಡಿ ಗೌರವಿಸಿದರು.
Prayagraj Kumbhamela ಪ್ರಯಾಗ್ ರಾಜ್ ಕುಂಭಮೇಳ, ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರ ನೆರವಿಗೆ ಸಹಾಯವಾಣಿ
Prayagraj Kumbhamela ಮಹಾಕುಂಭ ಮೇಳ ಜರುಗುತ್ತಿರುವ ಪ್ರಯಾಗ್‌ರಾಜ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಕರ್ನಾಟಕ ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದೆ. ನಿಮ್ಮ ಕುಟುಂಬಸ್ಥರು ಸಂಪರ್ಕಕ್ಕೆ ಸಿಗುತ್ತಿಲ್ಲವಾದರೆ 080-22340676 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ವಿನಂತಿಸಿದ್ದಾರೆ
Shivaganga Yoga Kendra ಫೆಬ್ರವರಿ 4 ಸೂರ್ಯದೇವನಿಗೆ ಕೃತಜ್ಞತೆ ಅರ್ಪಣೆ ಕಾರ್ಯಕ್ರಮ
Shivaganga Yoga Kendra ಶಿವಮೊಗ್ಗ ನಗರದ ವಿನೋಬನಗರ ಕಲ್ಲಹಳ್ಳಿಯಲ್ಲಿರುವ ಶಿವಗಂಗಾ ಯೋಗ ಕೇಂದ್ರದಲ್ಲಿ ರಥಸಪ್ತಮಿ ಹಬ್ಬ ಸೂರ್ಯನ ಜನ್ಮದಿನದಂದು ಯೋಗಾಸಕ್ತರಿಂದ ಅಖಂಡ ಸೂರ್ಯ ನಮಸ್ಕಾರದ ಮೂಲಕ ಸೂರ್ಯ ದೇವನಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. Shivaganga Yoga Kendra ದಿನಾಂಕ 4.2.2025 ಮಂಗಳವಾರ ಬೆಳಿಗ್ಗೆ 5:30ಕ್ಕೆ ಸೂರ್ಯದೇವನಿಗೆ ಪೂಜೆ ಮಂಗಳಾರತಿ ಸಾಮೂಹಿಕ ಪ್ರಾರ್ಥನೆ ರಥಸಪ್ತಮಿ ಆಚರಣೆ ವಿಶೇಷತೆ ಕುರಿತು ಮಾತು ಶ್ರೀ ಡಾ. ಪದ್ಮನಾಭ ಅಡಿಗರಿಂದ, ಯೋಗ ಶಿಕ್ಷಣಾರ್ಥಿಗಳಿಂದ ಬೀಜಾಕ್ಷರ ಮಂತ್ರಗಳೊಂದಿಗೆ ಅಖಂಡ ಸೂರ್ಯ ನಮಸ್ಕಾರದ ಮೂಲಕ ಸೂರ್ಯದೇವನಿಗೆ ಧನ್ಯತಾ ಪೂರ್ವಕವಾಗಿ ಭಕ್ತಿ ಸಮರ್ಪಣೆ ಮತ್ತು ಮಹಾಪ್ರಾಸಾದ ವಿತರಣೆ. ಕಾರ್ಯಕ್ರಮದಲ್ಲಿ ಯೋಗಾಸಕ್ತ ಸಾರ್ವಜನಿಕರು ಭಾಗವಹಿಸಿ ಸೂರ್ಯನ ದೇವನ ಕೃಪೆಗೆ ಪಾತ್ರರಾಗುವಂತೆ ಶ್ರೀ ಶಿವಗಂಗಾ ಯೋಗ ಕೇಂದ್ರದ ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಡಾ. ಸಿ.ವಿ. ರುದ್ರಾರಾಧ್ಯ ಕೋರಿದ್ದಾರೆ.
CM Siddharamaiah ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ಬಲಿಷ್ಠ ಕಾಯಿದೆ ತರಲಾಗುವುದು- ಸಿದ್ಧರಾಮಯ್ಯ
CM Siddharamaiah ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆ ಹಾಗೂ ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಕಡಿವಾಣ ಹಾಕುವ ಸಂಬಂಧ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಮಾತನಾಡಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಬಲಿಷ್ಠ ಕಾಯ್ದೆಯನ್ನು ಆದಷ್ಟು ಬೇಗನೆ ಜಾರಿ ಮಾಡಲಾಗುವುದು. ಈ ಕುರಿತು ಕಾನೂನು ಇಲಾಖೆ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದರು.
ಕಾಯ್ದೆ ಸಂಪೂರ್ಣ ಸಂವಿಧಾನ ಬದ್ಧವಾಗಿದ್ದು, ಯಾವುದೇ ಲೋಪದೋಷಗಳನ್ನು ಹೊಂದಿರಬಾರದು. ಸಾಲಗಾರರು ಎದುರಿಸುತ್ತಿರುವ ಕಿರುಕುಳವನ್ನು ತಪ್ಪಿಸಲು ಹಾಗೂ ಸಾಲ ನೀಡಿದವರು ಬಲವಂತದ ವಸೂಲಿ ಮಾಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಬಲಿಷ್ಠ ಕಾಯ್ದೆ ರಚಿಸಲಾಗುವುದು. ಕಾಯ್ದೆಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಒಂಬುಡ್ಸ್‌ಮೆನ್ ಗಳ ನೇಮಕ ಮಾಡಲಾಗುವುದು. ಅಮಾನವೀಯವಾಗಿ ಬಲವಂತದ ಸಾಲ ವಸೂಲಾತಿ ಮಾಡುವವರಿಗೆ ಜಾಮೀನುರಹಿತ ಪ್ರಕರಣ ದಾಖಲು ಸೇರಿದಂತೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ಸಿಗುವಂತೆ ಕಾನೂನು ರೂಪಿಸಲಾಗುವುದು ಎಂದು ತಿಳಿಸಿದರು.
CM Siddharamaiah ನೋಂದಣಿಯಾಗದ ಲೇವಾದೇವಿಗಾರರ ಕಿರುಕುಳವನ್ನು ತಪ್ಪಿಸಲು ಕಠಿಣ ಕಾನೂನು ಜಾರಿ ಮಾಡಲಾಗುವುದು. ಪ್ರಸ್ತುತವಿರುವ ಕಾನೂನಿನಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ನಿಯಂತ್ರಿಸಲು ಹಲವು ಅವಕಾಶಗಳಿದ್ದು, ತಾತ್ಕಾಲಿಕವಾಗಿ ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು, ಸಂತ್ರಸ್ತರು ದೂರು ದಾಖಲು ಮಾಡುವ ತನಕ ಕಾಯದೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.
B.Y. Raghavendra ವಾಹನ ಅಪಘಾತ ನಿಯಂತ್ರಿಸಲು ಸಂಸದ ರಾಘವೇಂದ್ರ ಸೂಚನೆ
B.Y. Raghavendra ಶಿವಮೊಗ್ಗ ಜಿಲ್ಲೆಯ ವಿವಿಧ ಜನನಿಬಿಡ ಸ್ಥಳಗಳಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ವಾಹನ ಅಪಘಾತಗಳು, ಸಾವು-ನೋವುಗಳನ್ನು ನಿಯಂತ್ರಿಸಲು ಸಾರಿಗೆ, ಲೋಕೋಪಯೋಗಿ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ವಿಶೇಷ ಗಮನಹರಿಸುವಂತೆ ಸಂಸದ ಬಿ.ವೈ.ರಾಘವೇಂಧ್ರ ಅವರು ಹೇಳಿದರು.
ಶಿವಮೊಗ್ಗ ನಗರದ ಪ್ರವಾಸಿ ಮಂದಿರದಲ್ಲಿ ಸಾರಿಗೆ ಸುರಕ್ಷತಾ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಪದೇಪದೇ ಆಕಸ್ಮಿಕ ಅನಾಹುತಗಳು ಸಂಭವಿಸುವ ಸ್ಥಳಗಳನ್ನು ಆಯಾ ತಾಲೂಕುಗಳ ಪೊಲೀಸ್‌ಠಾಣೆಗಳಿಂದ ಪಡೆದು, ಅದರ ನಿಯಂತ್ರಣಕ್ಕಾಗಿ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳ ಕುರಿತು ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಲು ಕ್ರಿಯಾಯೋಜನೆಯನ್ನು ತಯಾರಿಸಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕೇಂದ್ರ ಸಾರಿಗೆ ಮತ್ತು ರಸ್ತೆ ಮಂತ್ರಾಲಯದಿಂದ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಸಲು ಯತ್ನಿಸಲಾಗುವುದು ಎಂದವರು ನುಡಿದರು. ದೇಶದ ಪ್ರತಿಯೊಬ್ಬ ಪ್ರಜೆಯೂ ಅಮೂಲ್ಯ ಆಸ್ತಿಯಾಗಿದ್ದು, ಯಾವುದೇ ವ್ಯಕ್ತಿ ಅಪಘಾತಗಳಿಂದ ಮರಣ ಹೊಂದಬಾರದು. ಆಕಸ್ಮಿಕ ಸಾವು ದೇಶಕ್ಕೂ ಅವರ ಅವಲಂಬಿತ ಕುಟುಂಬಕ್ಕೂ ಅತೀವ ನಷ್ಟ ಉಂಟುಮಾಡಲಿದೆ. ಆದ್ದರಿಂದ ಅಪಘಾತಗಳ ನಿಯಂತ್ರಣ ಕೇಂದ್ರ ಸಾರಿಗೆ ಸಚಿವ ನಿತಿನ್‌ಘಡ್ಕರಿ ಅವರ ಆಶಯವೂ ಇದೇ ಆಗಿದೆ ಎಂದವರು ನುಡಿದರು.
ನಗರದ ಕೇಂದ್ರ ಸ್ಥಳದಿಂದ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಲೇ ಬಸ್‌ಸಂಪಕ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖಾಧಿಕಾರಿಗಳು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ನಗರದ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ ಎಲ್ಲೆಂದರಲ್ಲಿ ನಿಂತಿರುವ ಆಟೋಗಳಿಂದಾಗಿ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಅನಗತ್ಯ ಕಿರಿಕಿರಿ, ಅಶಿಸ್ತು ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ನಿರಂತರವಾಗಿ ಬರುತ್ತಲೇ ಇವೆ. ಆದ್ದರಿಂದ ಪಾವತಿ ಬಳಸುವ ಆಟೋ ಕೌಂಟರ್‌ಗಳನ್ನು ತೆರೆಯಬೇಕು. ಅದಕ್ಕಾಗಿ ಆಟೋ ಚಾಲಕರ ಸಂಘಟನೆಗಳ ಸಹಕಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಅವರುಮ ಈ ವ್ಯವಸ್ಥೆ ಅಧಿಕೃತವಾಗಿ ಜಾರಿಯಾಗುವವರೆಗೆ ಪೊಲೀಸ್‌ಸಿಬ್ಬಂಧಿಯನ್ನು ನಿಯೋಜಿಸುವಂತೆ ಅವರು ಸಲಹೆ ನೀಡಿದರು.
B.Y. Raghavendra ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಮಾರ್ಗದಲ್ಲಿ ಬರುವ ಹಾರೋಗೊಪ್ಪ ಗ್ರಾಮದ ಸಮೀಪದಲ್ಲಿ ಭಾರೀ ವಾಹನ ಅನಾಹುತಗಳ ಸಂಭವಿಸುತ್ತಲೆ ಇರುತ್ತವೆ. ಅವುಗಳ ನಿಯಂತ್ರಣಕ್ಕಾಗಿ ಲೋಕೋಪಯೋಗಿ ಇಲಾಖಾಧಿಕಾರಿಗಳು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ಕೆಲವು ರಾಷ್ಟ್ರೀಯ ಹೆದ್ದಾರಿಗಳ ನಿಗಧಿತ ಪ್ರದೇಶಗಳಲ್ಲಿಯೂ ಅಪಘಾತಗಳು ಆಗುತ್ತಿರುವ ಮಾಹಿತಿ ಇದೆ. ಅವುಗಳನ್ನು ನಿಯಂತ್ರಿಸಲು ಕೂಡಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.
ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಮತ್ತು ತಡಗಣಿ ಗ್ರಾಮಗಳಿಗೆ ಹೊಂದಿಕೊಂಡಂತಿರುವ ಮುಖ್ಯರಸ್ತೆಗಳೂ ಸಹ ಸಂಭವನೀಯ ಅಪಘಾತ ವಲಯಗಳೆಂದು ಪರಿಗಣಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಅವರು ಸೂಚಿಸಿದರು.
ಈಗಾಗಲೇ ಕೆಲವು ಕಡೆ ರಸ್ತೆಗಳಲ್ಲಿ ಅಳವಡಿಸಿರುವ ಹಂಪ್‌ಗಳಿಗೆ ಬಣ್ಣ ಬಳಿಯದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಅವುಗಳಿಗೆ ಬಣ್ಣ ಬಳಿಯಿರಿ ಎಂದು ಮಾಜಿ ಸಚಿವರಾದ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
ಆಲ್ಕೊಳ ವರ್ತುಲದಿಂದ ಗಾಡಿಕೊಪ್ಪದವರೆಗೆ ರಸ್ತೆ ಅತ್ಯಂತ ಕಿರಿಯದಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ. ಆ ಪ್ರದೇಶದಲ್ಲಿನ ರಸ್ತೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಬೇಕು. ರಸ್ತೆಯ ಇಕ್ಕೆಲಗಳಲ್ಲಿರುವ ದುರ್ಬಲ ಹಾಗೂ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ತಿಳಿಸಿದ್ದಾರೆ.
ರಸ್ತೆ ದುರಸ್ತಿ, ಪೈಪ್‌ಲೈನ್‌ಅಳವಡಿಕೆ ಸೇರಿದಂತೆ ಜಿಲ್ಲೆಯ ಪ್ರಮುಖ ರಸ್ತೆಗಳ ನಿರ್ಮಾಣಕ್ಕಾಗಿ ಅಗತ್ಯವಿರುವ ಜಲ್ಲಿ ಅಥವಾ ಮರಳನ್ನು ಒದಗಿಸಲು ಪ್ರಸ್ತಾವನೆ ಸಲ್ಲಿಸಿದಲ್ಲಿ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಸುಮಾರು 51ಕಪ್ಪುಸ್ಥಳಗಳನ್ನು ಗುರುತಿಸಲಾಗಿದ್ದು, ಅದರ ನಿಯಂತ್ರಣಕ್ಕಾಗಿ ಲೋಕೋಪಯೋಗಿ ಇಲಾಖೆಗೆ ಕ್ರಮಕ್ಕಾಗಿ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ವರಿಷ್ಟಾಧಿಕಾರಿಗಳಾದ ಜಿ.ಕೆ.ಮಿಥುನ್‌ಕುಮಾರ್ ಅವರು ತಿಳಿಸಿದ್ದಾರೆ.
ಸಭೆಯಲ್ಲಿ ರಸ್ತೆ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಪೊಲೀಸ್‌ಇಲಾಖೆ ವಿಧಿಸಿದ ದಂಡವನ್ನು ಪಾವತಿಸಲು ಕೈಗೊಳ್ಳುತ್ತಿರುವ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತರಲು ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು.
ಅಲ್ಲದೇ ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತಾ ನಿಯಮದ ಪ್ರಚಾರ ಫಲಕಗಳನ್ನು ಮಾನ್ಯ ಸಂಸದರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶಾಸಕ ಡಿ.ಎಸ್.ಅರುಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್, ಲೋಕೋಪಯೋಗಿ ಇಲಾಖೆ ಅಭಿಯಂತರ ವಿಜಯ್‌ಕುಮಾರ್, ವಲಯ ಅರಣ್ಯಾಧಿಕಾರಿ ಶಿವಶಂಕರ್‌ಮತ್ತಿತರರು ಉಪಸ್ಥಿತರಿದ್ದರು.
State Police Department ಪೊಲೀಸ್ ಇಲಾಖೆ ನೇರ ನೇಮಕಾತಿಯಲ್ಲಿ ಪ್ರಶಂಸನೀಯ ಕ್ರೀಡಾಪಟುಗಳ ಮೀಸಲಾತಿ ಶೇ 2 ರಿಂದ ಶೇ3 ಕ್ಕೆ ಏರಿಕೆ
State Police Department ರಾಜ್ಯ ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕಾನ್ಸ್‌ಟೇಬಲ್ ಹುದ್ದೆಯಿಂದ ಡಿವೈಎಸ್‌ಪಿ ಹುದ್ದೆವರೆಗೆ ಪ್ರಶಂಸನೀಯ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣವನ್ನು ಶೇ.2ರಿಂದ ಶೇ. 3ಕ್ಕೆ ಹೆಚ್ಚಿಸಲು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ
Nehru Youth Centre ಶಿಕ್ಷಣದಂತೆಯೇ ಕ್ರೀಡೆಯೂ ವಿದ್ಯಾರ್ಥಿ ಜೀವನದ ಬಹುಮುಖ್ಯ ಅಂಗ-ಎಂ.ಎನ್.ಸುಧಾಕರ್
Nehru Youth Centre ಕ್ರೀಡೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದ್ದು ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆಗೂ ವಿದ್ಯಾರ್ಥಿಗಳು ಮಹತ್ವವನ್ನು ನೀಡಬೇಕು ಎಂದು ಹೊಸನಗರ ಜಿಮ್ಮಿ ಜಾರ್ಜ್ ವಾಲಿಬಾಲ್ ಕ್ಲಬ್ ನ ಅಧ್ಯಕ್ಷರಾದ ಎಂ.ಎನ್ ಸುಧಾಕರ್ ತಿಳಿಸಿದರು. ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಶಿವಮೊಗ್ಗ ಹಾಗೂ ಜಿಮ್ಮಿ ಜಾರ್ಜ್ ವಾಲಿಬಾಲ್ ಕ್ಲಬ್, ಹೊಸನಗರ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 30.01.2025 ರಂದು ಹೊಸನಗರದ ನೆಹರು ಮೈದಾನದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ 2024-25 ಆಯೋಜಿಸಲಾಗಿತ್ತು. Nehru Youth Centre ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡಾಕೂಟಗಳಲ್ಲಿ ಗೆಲುವು ಸೋಲು ಸಹಜ ಎರಡನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಕ್ರೀಡಾಪಟುಗಳಲ್ಲಿ ಇರಬೇಕು ಜೊತೆಗೆ ತೀರ್ಪುಗಾರರ ತೀರ್ಪನ್ನ ಗೌರವಿಸುವ ಕೆಲಸವನ್ನು ಮಾಡಬೇಕು. ಶಿಕ್ಷಣದಂತೆ ಕ್ರೀಡೆಯು ಸಹ ವಿದ್ಯಾರ್ಥಿ ಜೀವನದ ಬಹು ಮುಖ್ಯ ಅಂಗವಾಗಿರುತ್ತದೆ. ಕ್ರೀಡಾಪಟುಗಳು ದುಶ್ಚಟಗಳಿಗೆ ದಾಸರಾಗದೆ ಕ್ರೀಡೆಯನ್ನ ರೂಡಿಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮವಾದಂತಹ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದರು. ಕ್ರೀಡಾಕೂಟದಲ್ಲಿ ವೈಯುಕ್ತಿಕ ಕ್ರೀಡೆಗಳಾದ 100 ಮೀ.ಓಟದಲ್ಲಿ ಸಾದ್ವಿನಿ ಪ್ರಥಮ, ಸ್ಲೋ ಸೈಕಲಿಂಗ್ನಲ್ಲಿ ಮಿನುತ ಪ್ರಥಮ, ಬ್ಯಾಡ್ಮಿಂಟನ್ನಲ್ಲಿ ನಿಖಿಲ್ ಪ್ರಥಮ ಬಹುಮಾನ ಪಡೆದಿರುತ್ತಾರೆ. ಗುಂಪು ಕ್ರೀಡೆಗಳಾದ ವಾಲಿಬಾಲ್ ನಲ್ಲಿ ಶ್ರೀ ಸಿದ್ಧಿವಿನಾಯಕ ವಾಲಿಬಾಲ್ ಕ್ಲಬ್ ರಿಪ್ಪನ್ಪೇಟೆ, ಪ್ರಥಮ, ಹಗ್ಗಜಗ್ಗಾಟದಲ್ಲಿ ಛಾಯಾ ಟೀಮ್ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಕ್ರೀಡೆಕೂಟದಲ್ಲಿ ಮಹಿಳೆಯರು ಮತ್ತು ಪುರುಷರು ಎಂಬ ಭೇದವಿಲ್ಲದೆ ಭಾಗವಹಿಸಿದ್ದರು. ವಿಜೇತರಿಗೆ ಸ್ಪೋಟ್ಸ್೯ ಕಿಟ್ , ಪಾರಿತೋಷಕ,ಸರ್ಟಿಫಿಕೇಟ್ ನೀಡಲಾಯಿತು. ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಉಲ್ಲಾಸ್, ಲೆಕ್ಕಾಧಿಕಾರಿಗಳಾದ ಎಂ. ರಮೇಶ್, ಜಿಮ್ಮಿ ಜಾರ್ಜ್ ಸಂಸ್ಥೆಯ ಸದಸ್ಯರಾದ ಕೆ ಇಲಿಯಾಸ್, ರವಿಕುಮಾರ್, ಗಣೇಶ್, ಅಖಿಲೇಶ್, ದೈಹಿಕ ಶಿಕ್ಷಕರಾದ ಧನಂಜಯ, ಸುಹಾಸ್ ಉಪಸ್ಥಿತರಿದ್ದರು.
Karnataka Lokayukta ಭದ್ರಾವತಿ ತಾಲ್ಲೂಕಿನ ಕೆಲವು ಅಂಗನವಾಡಿ ಕೇಂದ್ರಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನಾ ವರದಿ
Karnataka Lokayukta ಶ್ರೀ ಮಂಜುನಾಥ್ ಚೌದರಿ ಎಂ.ಹೆಚ್ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ಮಾರ್ಗದರ್ಶದಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರವರುಗಳಾದ ಶ್ರೀ.ಸುರೇಶ್ ಹೆಚ್.ಎಸ್. ಶ್ರೀ.ಪ್ರಕಾಶ. ಶ್ರೀ.ವೀರಬಸಪ್ಪ.ಎಲ್ ಕುಸಲಾಪುರ ಮತ್ತು ಸಿಬ್ಬಂದಿಗಳೊಂದಿಗೆ ಭದ್ರಾವತಿ ತಾಲ್ಲೂಕ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನು ಕೈಗೊಂಡಿದ್ದರು.
ಭದ್ರಾವತಿ ತಾಲ್ಲೂಕಿನ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಾದ 1.ಬೊಮ್ಮನಕಟ್ಟೆ-01, 2. ಬೊಮ್ಮನಕಟ್ಟಿ ಆಶ್ರಯ ಕಾಲೋನಿ, 3.ಹಿರಿಯೂರು-01, 4.ಹಿರಿಯೂರು-02 5.ಸಿರಿಯೂರು ಕ್ಯಾಂಪ್, 6.ಸಿರಿಯೂರು ತಾಂಡ, 7. ಸಿರಿಯೂರು ವೀರಾಪುರ, 8. ಕಲ್ಲಹಳ್ಳಿ, 9.ಹೊಸಸಿದ್ದಾಪುರ, 10.ಸಿದ್ದಾಪುರ ತಾಂಡ, 11. ಹೊಸೂರು 12. ಹೊಸೂರು ಕ್ಯಾಂಪ್ ಗಳಿಗೆ ಭೇಟಿ ನೀಡಿದಾಗ ಕೆಲವೊಂದು ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕೊರೆತೆ ಕಂಡು ಬಂದಿರುತ್ತದೆ. ಕೆಲವು ಅಂಗನವಾಡಿ ಕೇಂದ್ರದ ಕೊಠಡಿಗಳು ಶಿಥಲಾ ವ್ಯವಸ್ಥೆಯಲ್ಲಿದ್ದು, ಯಾವುದೇ ಸಮಯದಲ್ಲಿ ಕೊಠಡಿಗಳು ಬಿದ್ದು ಅನಾಹುತವುಂಟಾಗುವ ಸಾಧ್ಯತೆ ಕಂಡು ಬಂದಿರುತ್ತದೆ. ಅಂಗನವಾಡಿ ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಇರುವುದಿಲ್ಲ, ಸಮರ್ಪಕವಾಗಿ ದಾಖಲಾತಿಗಳನ್ನು ನಿರ್ವಹಿಸದೇ ಕಂಡು ಬಂದಿರುತ್ತದೆ. ಅಂಗನವಾಡಿಗಳಿಗೆ ಸರಬರಾಜು ಮಾಡಿದ ಸಾಮಗ್ರಿಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಂಡಿರುವುದಿಲ್ಲ. ಅಹಾರ ಪದಾರ್ಥಗಳ ಭೌತಿಕ ದಾಸ್ತಾನಗಳಿಗೂ ಹಾಗೂ ದಾಸ್ತಾನು ನಿರ್ವಹಣೆ ಪುಸ್ತಕಗಳ ಅಂಕಿ-ಸಂಖ್ಯೆಗಳಲ್ಲಿ ವ್ಯತ್ಯಾಸ ಕಂಡು ಬಂದಿರುತ್ತದೆ. ಅಂಗನವಾಡಿಗಳಲ್ಲಿ ಸ್ವಚ್ಚತೆಯನ್ನು ಸರಿಯಾಗಿ ನಿರ್ವಹಿಸಿರುವುದಿಲ್ಲ. ಗರ್ಭಿಣಿಯರಿಗೆ ಮತ್ತು ಬಾಣಂತಿಯವರಿಗೆ ವಿತರಿಸಬೇಕಾದ ಆಹಾರ ಪದಾರ್ಥವನ್ನು ಸರಿಯಾಗಿ ವಿತರಿಸದೇ ಇರುವುದು ಕಂಡು ಬಂದಿರುತ್ತದೆ.
Karnataka Lokayukta ಆಹಾರದಲ್ಲಿ ತರಕಾರಿಗಳನ್ನು ಬಳಸದೇ ಇರುವುದು ಕಂಡು ಬಂದಿರುತ್ತದೆ. ಬೊಮ್ಮನಕಟ್ಟೆ ಆಶ್ರಯ ಕಾಲೋನಿಯಲ್ಲಿರುವ ಅಂಗನವಾಡಿಯು ಸುಮಾರು 30ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿದ್ದು, ಇಲ್ಲಿಯವರೆಗೂ ಅಂಗನವಾಡಿ ಕೇಂದ್ರದ ಕಟ್ಟಡವನ್ನು ನಿರ್ಮಾಣವಾಗಿರುವುದಿಲ್ಲ. ಕೆಲವೊಂದು ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾದ ಶೌಚಾಲಯಗಳ ವ್ಯವಸ್ಥೆ ಇರುವುದಿಲ್ಲ ಹಾಗೂ ಮಕ್ಕಳಿಗೆ ವೈಧ್ಯಾಧಿಕಾರಿಗಳು ಕಾಲ-ಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡದೇ ಇರುವುದು ಕಂಡು ಬಂದಿರುತ್ತದೆ. ಸದರಿ ನ್ಯೂನತೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗುವುದು.
