Thursday, March 12, 2026
Thursday, March 12, 2026
Home Blog Page 413

Bhadravati MESCOM ಫೆಬ್ರವರಿ 3. ಭದ್ರಾವತಿ ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಜನಸಂಪರ್ಕ ಸಭೆ

0

Bhadravati MESCOM ಭದ್ರಾವತಿ ಮೆಸ್ಕಾಂ ನಗರ ಉಪವಿಭಾಗ ಕಛೇರಿಯಲ್ಲಿ ಫೆ 03 ರಂದು ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ಜನಸಂಪರ್ಕ ಸಭೆ ನಡೆಯಲ್ಲಿದೆ, ಮೆಸ್ಕಾಂನ ಈ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ; 9448289454.

BSNL ರಸ್ತೆ ಸುರಕ್ಷತೆ & ಭವಿಷ್ಯದಲ್ಲಿ ನೆಟ್ ವರ್ಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕುರಿತು ಜಿಲ್ಲಾ ಮಟ್ಟದ ಸಭೆ

0

BSNL ಶಿವಮೊಗ್ಗದ ನಿರೀಕ್ಷಣಾ ಮಂದಿರದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ಭಾರತೀಯ ಸಂಚಾರ ನಿಗಮ ನಿಯಮಿತ (BSNL) ಇದರ ಸಲಹಾ ಸಮಿತಿ ಸಭೆ ಹಾಗು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಲಾಯಿತು.

ಈ ಮಹತ್ವದ ಸಭೆಯಲ್ಲಿ..

  1. ಕೇಂದ್ರ ಸರ್ಕಾರದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಟ್ಟು ಅನುಮೋದನೆಗೊಂಡ ನೂತನ ಮೊಬೈಲ್ ಟವರ್ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು.
  2. ಅನುಮೋದನೆಗೊಂಡ ಮೊಬೈಲ್ ಟವರ್ ಗಳಲ್ಲಿ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ಧವಿರುವ ಟವರ್ ಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು.
  3. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಹಾಗೂ ತಾಂತ್ರಿಕ ಕಾರಣದಿಂದ ಅನುಮತಿಗೆ ತೊಡಕಾಗಿರುವ ಒಟ್ಟು ಮೊಬೈಲ್ ಟವರ್ ಗಳ ವರದಿ ಪಡೆದುಕೊಳ್ಳಲಾಯಿತು.
  4. ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನ ಸಾಮಾನ್ಯರ Network ಸಮಸ್ಯೆಗೆ ಇತಿಶ್ರೀ ಹಾಡಲು ಅರಣ್ಯ ವ್ಯಾಪ್ತಿಯಲ್ಲಿ ಟವರ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಆಗಿರುವ ತೊಡಕುಗಳ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲಾಯಿತು.
  5. ಈಗಾಗಲೇ ನಿರ್ಮಾಣವಾಗಿ 4G ಮತ್ತು 5G Network ಗಳಿಗೆ ಉನ್ನತಿಕರಣಗೊಳ್ಳಬೇಕಿರುವ ಟವರ್ ಗಳ ಮಾಹಿತಿ ಕೇಳಲಾಯಿತು.
  6. ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸದಾಗಿ ಅವಶ್ಯಕತೆ ಇರುವ ಮೊಬೈಲ್ ಟವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೂತನ ಸದಸ್ಯರೊಂದಿಗೆ ಚರ್ಚೆ ನಡೆಸಿ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಲಾಯಿತು.
  7. ಮೊಬೈಲ್ ಟವರ್ ನಿರ್ಮಾಣದ ನಂತರ ವಿದ್ಯುತ್ ಇಲಾಖೆಯಿಂದ ಟವರ್ ಗಳಿಗೆ ವಿದ್ಯುತ್ ನೀಡಲು ಆಗುತ್ತಿರುವ ವಿಳಂಬ ಕುರಿತು ಚರ್ಚೆ ನಡೆಸಲಾಯಿತು.
  8. ಮೊಬೈಲ್ ಟವರ್ ಗಳ ತ್ವರಿತ ದುರಸ್ತಿ ಮತ್ತು ಸೂಕ್ತ ನಿರ್ವಹಣೆ ಕುರಿತು ಅಗತ್ಯ ಸಲಹೆ ಸೂಚನೆ ನೀಡಲಾಯಿತು.
  9. ⁠ನಗರದ ಸಾಗರದ ಬಿಹೆಚ್ ರಸ್ತೆ ಗಾಡಿ ಕೊಪ್ಪದ ಬಳಿ ಶರವತಿ ಬ್ರಿಡ್ಜ್ ಹತ್ತಿರ ಹಾಗು ದ್ವಾರಕ ಕಲ್ಯಾಣ ಮಂಟಪದ ಹತ್ತಿರ ಕೂಡ ಬ್ಲಾಕ್ ಸ್ಪಾಟ್ಸ್ ಮಾಡಬೇಕು, ಇತ್ತೀಚಿನ ದಿನಗಳಲ್ಲಿ ಹಲವು ಅಪಘಾತಗಳು ಆಗುತ್ತಿರುವುದರಿಂದ ಬ್ಲಾಕ್ ಸ್ಪಾಟ್ಸ್ ಮಾಡಬೇಕೆಂದು ಚರ್ಚೆ ಮಾಡಲಾಯಿತು.

BSNL ಕ್ಷೇತ್ರದ ಜನಸಾಮಾನ್ಯರ ಅನುಕೂಲಕ್ಕೆ ಮತ್ತು ಭವಿಷ್ಯದಲ್ಲಿ ನೆಟ್ವರ್ಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಲು ಸೇರಿದಂತೆ ಹಾಗು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಮತ್ತು ಇನ್ನು ಅನೇಕ ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಹಾಗೂ ಸದಸ್ಯರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಲಾಯಿತು.

Scheduled Caste Welfare Department ಪಜಾ/ಪಪಂಗಡಗಳ ಕಲ್ಯಾಣಕ್ಕೆ ಶ್ರಮಿಸುತ್ತಿರುವ‌ ಸ್ವಯಂಸೇವಾ ಸಂಸ್ಥೆಗಳಿಂದ ಸಹಾಯಧನ‌ಕ್ಕಾಗಿ ಅರ್ಜಿ‌ ಆಹ್ವಾನ

0

Scheduled Caste Welfare Department ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹೊಸ ಪ್ರಾಜೆಕ್ಟ್ಗಳಿಗಾಗಿ ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಿದೆ.
Scheduled Caste Welfare Department ಆಸಕ್ತ ಸ್ವಯಂ ಸೇವಾ ಸಂಸ್ಥೆಗಳು ಕೇಂದ್ರ ಸರ್ಕಾರ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯನ್ವಯ ngo.tribal.gov.in ವೆಬ್‌ಸೈಟ್ ಮೂಲಕ ಫೆ. 15 ರೊಳಗಾಗಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

Chhatrapati Shivaji Maratha Trust ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಎನ್.ಕೆ.ಜಗದೀಶ್ ಆಯ್ಕೆ

0

Chhatrapati Shivaji Maratha Trust ಮರಾಠ ಸಮಾಜದ ವತಿಯಿಂದ ಹಾಗೂ ಶ್ರೀಛತ್ರಪತಿ ಶಿವಾಜಿ ಮರಾಠ ಟ್ರಸ್ಟಿನ ವತಿಯಿಂದ ಸಮಾಜದ ಯುವ ಮುಖಂಡರಾದ ಎನ್.ಕೆ.ಜಗದೀಶ್ ರವರು ಶಿವಮೊಗ್ಗ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಯಲ್ಲಿ ಅಭಿನಂದಿಸಿ ಗೌರವಿಸಲಾಯಿತು.

Chhatrapati Shivaji Maratha Trust ಇದೇ ಸಂದರ್ಭದಲ್ಲಿ ಬೆಂಗಳೂರು ಕರ್ನಾಟಕ ಕ್ಷತ್ರಿಯ ಮರಾಠ ಅಧ್ಯಕ್ ಪರಿಷತ್ತು ಇದರ ಅಧ್ಯಕ್ಷರಾದ ಚಂದ್ರು ರಾವ್ ಗಾರ್ಗಿ, ಕಾರ್ಯದರ್ಶಿಯಾದ ಚುಡಾಮಣಿ ರಾವ್ ಪವರ್, ಸುರೇಶ್ ಬಾಬು, ದಿನೇಶ್ ರಾವ್, ರಾಜಕುಮಾರ್ ಬಲರಾಮ್, ತುಕಾರಾಂ, ರಮೇಶ್ ಘಾಟಿಗೆ, ಜಗದೀಶ್, ಆಶಾ ತನ್ವಿಲ್ಕರ್ ಮತ್ತು ಮರಾಠ ಸಮಾಜದ ಬಾಂಧವರು, ಮುಖಂಡರು ಸೇರಿ ಸನ್ಮಾನಿಸಿದರು.

MG Palace Shivamogga ಶಿವಮೊಗ್ಗದ ಪ್ರಸಿದ್ಧ ಒಡವೆ ವರ್ತಕ ಗಣೇಶ್ ವಾಸುದೇವ ಶೇಟ್ ನಿಧನ

0

MG Palace Shivamogga ಶಿವಮೊಗ್ಗ ನಗರದ ಪ್ರಖ್ಯಾತ ಚಿನ್ನ-ಬೆಳ್ಳಿ ವರ್ತಕರು, ಗಾಂಧಿ ಬಜಾರ್ ನ ಶ್ರೀ ಗಣೇಶ ಜ್ಯುವೆಲ್ಲರಿ ಹಾಗೂ ಎಂಜಿ ಪ್ಯಾಲೆಸ್ ಮಾಲೀಕರು ಆಗಿದ್ದ ಶ್ರೀಯುತ ಗಣೇಶ ವಾಸುದೇವ ಶೇಟ್ (88) ಅವರು 30-01-2025 ರಂದು ರವೀಂದ್ರನಗರ 6ನೇ ತಿರುವಿನ ತಮ್ಮ ನಿವಾಸದಲ್ಲಿ ನಿಧನರಾದರು.

ಮೃತರು ಈರ್ವ ಪುತ್ರರು, ಎಂಟು ಜನ ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುಮಾರು 6 ದಶಕಗಳ ಕಾಲ ಚಿನ್ನ-ಬೆಳ್ಳಿ ಉದ್ಯಮದಲ್ಲಿ ಸೇವೆ ಸಲ್ಲಿಸಿ ಖ್ಯಾತ ಪಡೆದಿದ್ದ ಶ್ರೀಯುತರು ದೈವಜ್ಞ ಕಲ್ಯಾಣ ಮಂದಿರದ ಸ್ಥಾಪಕರಲ್ಲೋರ್ವರು. ದೈವಜ್ಞ ಬ್ರಾಹ್ಮಣ ಸಮಾಜ ಹಾಗೂ ಶ್ರೀ ಕಾಳಿಕ ಪರಮೇಶ್ವರಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶಿವಮೊಗ್ಗ ಚಿನ್ನ ಬೆಳ್ಳಿ ಮತ್ತು ಗಿರವಿ ವರ್ತಕರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. MG Palace Shivamogga ಶ್ರೀಯುತರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಡಿ.ಎಸ್. ಅರುಣ್ ಹಾಗೂ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸಿ. ಪ್ರಕಾಶ್, ಕಾರ್ಯದರ್ಶಿ ಎಲ್. ಸುಬ್ರಹ್ಮಣ್ಯ ಮತ್ತು ಪಾದಾಧಿಕಾರಿಗಳು ಹಾಗೂ ಶಿವಮೊಗ್ಗ ಚಿನ್ನಿ ಬೆಳ್ಳಿ ಗಿರವಿ ವರ್ತಕರ ಸಂಘದ ಅಧ್ಯಕ್ಷ ವಿನೋದ್‌ಕುಮಾರ್ ಜೈನ್ ಮತ್ತು ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ಜ 31ರ ರಂದು ಮಧ್ಯಾಹ್ನ ರೋಟರಿ ಚಿತಾಗಾರದಲ್ಲಿ ಜರುಗಲಿದೆ.

CM Siddharamaih ಹುತಾತ್ಮರ ದಿನಾಚರಣೆ. ಸಿದ್ಧರಾಮಯ್ಯನವರಿಂದ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಮಾಲೆ

0

CM Siddharamaih ವಿಧಾನ ಸೌಧ ಹಾಗೂ ವಿಕಾಸ ಸೌಧದ ಕಟ್ಟಡಗಳ ಮಧ್ಯದಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಯ ಬಳಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥವಾಗಿ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಬಳಿಕ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥವಾಗಿ ಮೌನಾಚರಣೆಯಲ್ಲಿ ಭಾಗವಹಿಸಿದರು.

CM Siddharamaih ಈ‌ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗ್ಯಾರಂಟಿ ಯೋಜನಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Madivala Machideva Jayanti ಫೆಬ್ರವರಿ 1. ಶೀವಮೊಗ್ಗ ಜಿಲ್ಲಾಡಳಿತದಿಂದ ಮಡಿವಾಳ ಮಾಚಿದೇವ ಜಯಂತಿಗೆ ಸಿದ್ಧತೆ

0

Madivala Machideva Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಸಮಾಜ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 01 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಮಡಿವಾಳ ಮಾಚಿದೇವ ಜಯಂತಿಯನ್ನು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪರವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕರಾದ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.

Madivala Machideva Jayanti ಸಂಸದರು, ವಿಧಾನಸಭಾ, ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರುಗಳು, ಮಹಾನಗರಪಾಲಿಕೆ ಮಹಾಪೌರರು, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದ ನಾಮ ನಿರ್ದೇಶಕರು, ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ ಸಿಇಓ, ಪಾಲಿಕೆ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು/ಸಿಬ್ಬಂದಿಗಳು ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಪಾಲ್ಗೊಳ್ಳುವರು.
ಕಾರ್ಯಕ್ರಮದಲ್ಲಿ ಶಿವಮೊಗ್ಗದ ನಿವೃತ್ತ ಪ್ರೌಢಶಾಲಾ ಶಿಕ್ಷಕ ಕೆ.ಬಿ.ಮಂಜಪ್ಪ ರವರು ವಿಶೇಷ ಉಪನ್ಯಾಸ ನೀಡುವರು.

Puttaraja Gawai ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ‌ ರಸಿಕರ ಮನಗೆದ್ದ ಸಂಗೀತ ಸಂಜೆ

0

Puttaraja Gawai ಶಿವಮೊಗ್ಗ ನಗರದ ಸಾಗರ ರಸ್ತೆ ಆಟೋ ಕಾಂಪ್ಲೆಕ್ಸ್ ಪಕ್ಕದ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯದಲ್ಲಿ (ಶ್ರೀ ವೀರೇಶ್ವರ ಪುಣ್ಯಾಶ್ರಮ) ಗಾನಲಹರಿ ಸಂಗೀತ ಸಂಜೆ ಕಾರ್ಯಕ್ರಮ ವಿಶೇಷವಾಗಿ ನಡೆಯಿತು.

ಪಂಡಿತ್ ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿದ್ದರು. ವಿನೋಬನಗರ ಭಕ್ತಸಂಗಮ ಕಲಾವೃಂದದಿಂದ ಭಜನಾ ಸೇವೆ ಆಕರ್ಷಿಸಿತು. ಖ್ಯಾತ ಹಿಂದುಸ್ಥಾನಿ ಗಾಯಕ ಲಕ್ಷ್ಮೇಶ್ವರದ ಗಾಯಕ ಅರ್ಜುನ್ ವಟಾರ್ ಅವರಿಂದ ಹಿಂದೂಸ್ಥಾನಿ ಗಾಯನ ನಡೆಯಿತು.

Puttaraja Gawai ರಾಮಣ್ಣ ಬಜಂತ್ರಿ ಅವರಿಂದ ಶಹನಾಯಿ, ವೀರಭದ್ರಯ್ಯ ಶಾಸ್ತಿç ಗಳಿಂದ ವೇದ ಘೋಷ, ತುಕಾರಾಮ ರಂಗದೋಳ್, ವಿನಾಯಕ ಭಟ್ ತಬಲ, ರವಿಶಂಕರ ಆಚಾರ್ ಹರ‍್ಮೋ ನಿಯಂ, ಶಿವರಾಜಪ್ಪ, ಸಿದ್ದಪ್ಪ ಬಡಿ ಗೇರ, ಇಂದಿರಾ ಸಾಥ್ ನೀಡಿದರು.

DC Shivamogga ಗಣಿ ದುರ್ಬಳಕೆಯಾದರೆ ಮುಖ್ಯಾಧಿಕಾರಿಗಳೇ ಹೊಣೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

0

DC Shivamogga ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲಭ್ಯವಿರುವ ಮರಳು ಬ್ಲಾಕ್‌ಗಳನ್ನು ಸರ್ಕಾರದ ವಿವಿಧ ಕಾಮಗಾರಿಗಳಿಗೆ ಹಾಗೂ ಇನ್ನಿತರೆ ಕಾಮಗಾರಿಗಳಿಗೆ ನಿಯಮಾನುಸಾರ ಸರ್ಕಾರದ ಮರಳು ನೀತಿಯ ನಿಬಂಧನೆಗಳಿಗೊಳಪಟ್ಟು ಇಲಾಖೆಗಳಿಗೆ ಕಾಯ್ದಿರಿಸಲು ಜಿಲ್ಲಾ ಸಮಿತಿಗೆ ಇರುವ ಪ್ರದತ್ತ ಅಧಿಕಾರವನ್ನು ಬಳಸಿ, ಗಣಿಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಗಣಿಯನ್ನು ಕಾಯ್ದಿರಿಸಲು ಕೋರಿಕೆ ಸಲ್ಲಿಸಿದ ಇಲಾಖಾಧಿಕಾರಿಗಳು ಸಲ್ಲಿಸಿದ ಕೋರಿಕೆಯನ್ನು ಪರಿಶೀಲಿಸಿ, ತಮ್ಮ ಕೋರಿಕೆಯ ಗಣಿಯನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗುವುದು ಎಂದರು.
ಗಣಿಯನ್ನು ಬಳಸಿಕೊಳ್ಳಲು ಕೋರಿಕೆ ಸಲ್ಲಿಸಿದ ಇಲಾಖಾಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು, ಬೇಕಾದ ಮರಳಿನ ಪ್ರಮಾಣವನ್ನು ಲಿಖಿತವಾಗಿ ಬರೆದುಕೊಡಬೇಕು. ಗಣಿಯನ್ನು ದು‍ರ್ಬಳಕೆ ಮಾಡಿದಲ್ಲಿ ಸಂಬಂದಿಸಿದ ಇಲಾಖಾ ಮುಖ್ಯಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಮರಳನ್ನು ಉದ್ದೇಶಿಕ ಕಾ‍ರ್ಯಕ್ಕೆ ಬಳಸಿಕೊಳ್ಳಬೇಕು. ನೆರೆಯ ಜಿಲ್ಲೆಗಳಿಗೇ ರವಾನಿಸಿದಲ್ಲಿ, ದುರ್ಬಳಕೆ ಮಾಡಿಕೊಂಡ ಬಗ್ಗೆ ಮಾಹಿತಿ ದೊರೆತಲ್ಲಿ ಅಂತಹ ಅಧಿಕಾರಿ-ಸಿಬ್ಬಂಧಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದ ಅವರು, ಮರಳು ಗಣಿಗಾರಿಕೆ ಕೈಗೊಳ್ಳುವ ಸ್ಥಳದಲ್ಲಿ ಸಿ.ಸಿ.ಕ್ಯಾಮರಾಗಳ ಅಳವಡಿಕೆ ಮಾಡಿಕೊಳ್ಳಬೇಕು. ಅಗತ್ಯವಿರುವಾಗ ಸಿಸಿ.ಕ್ಯಾಮರಾ ಚಿತ್ರೀಕರಣದ ಪ್ರತಿಯನ್ನು ಸಂಬಂದಿಸಿದ ಇಲಾಖೆಗೆ ಒದಗಿಸಲು ಬದ್ದರಾಗಿರಬೇಕು ಎಂದರು.

ಕಾಯ್ದಿರಿಸಿದ ಗಣಿಗಳಲ್ಲದೆ ಉಳಿದ ಗಣಿಗಳನ್ನು ನಿಯಮಾನುಸಾರ ವಿಲೇ ಮಾಡುವಂತೆ ಜಿಲ್ಲಾ ಹಿರಿಯ ಭೂವಿಜ್ಞಾನಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಶಿವಮೊಗ್ಗ-ಭದ್ರಾವತಿ ತಾಲೂಕುಗಳ ವ್ಯಾಪ್ತಿಯಲ್ಲಿ ಹರಿಯುವ ತುಂಗ-ಭದ್ರಾ ನದಿ ಪ್ರದೇಶದಲ್ಲಿ ಯಾಂತ್ರಿಕ ದೋಣಿಗಳನ್ನು ಬಳಸಿ, ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದು, ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಗಣಿಗಳಿಂದ ಮರಳು ಸಾಗಾಣಿಕೆ ನಡೆಸುವ ಗುತ್ತಿಗೆದಾರರು ತಮ್ಮ ವಾಹನಗಳಿಗೆ ಜಿ.ಪಿ.ಎಸ್ ಅಳವಡಿಸಿರಬೇಕು.ಸ್ವಂತದ್ದಾಗಿರುವ ವೇಬ್ರಿಡ್ಜ್‌ ಹೊಂದಿರಬೇಕು. ಎನ್.ಜಿ.ಟಿ.ನಿಯಮಾನುಸಾರ ಯಂತ್ರಗಳನ್ನು ಬಳಸಬಾರದು. ಮಾನವ ಸಂಪನ್ಮೂಲವನ್ನೇ ಬಳಸಿ ಗಣಿಗಾರಿಕೆ ನಡೆಸಬೇಕು. ಐ.ಎಲ್ಎಂ.ಎಸ್.ನೋಂದಣಿ ಕಡ್ಡಾಯವಾಗಿ ಮಾಡಿಕೊಂಡಿರಬೇಕು ಹಾಗೂ ಮರಳು ದಾಸ್ತಾನಿಗೆ ಸ್ಥಳವನ್ನು ಹೊಂದಿರಬೇಕು ಎಂದರು.

ಮರಳು ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಸುರಕ್ಷತಾ ಸಿಬ್ಬಂಧಿಯನ್ನು ನಿಯೋಜಿಸಿಕೊಳ್ಳಬೇಕು. ಜವಾಬ್ದಾರಿಯುತ ಅಧಿಕಾರಿಗಳೇ ನಿರ್ವಹಣೆಯ ಹೊಣೆ ಹೊರಬೇಕು ಎಂದ ಅವರು, ಗಣಿಗಳ ಉಸ್ತುವಾರಿಗಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳನ್ನು ನಿಯೋಜಿಸುವಂತೆ ಹಾಗೂ ಖುದ್ದು ಭೇಟಿ ನೀಡಿ ಪರಿಶೀಲಿಸುವಂತೆ ಅವರು ಸೂಚಿಸಿದರು.

DC Shivamogga ಈ ಹಿಂದೆ ಗಣಿಯನ್ನು ಪಡೆದುಕೊಂಡಿದ್ದ ಪಂಚಾಯತ್‌ರಾಜ್‌ ಇಲಾಖೆಯಿಂದ ಕಾಲಕಾಲಕ್ಕೆ ಇಲಾಖೆಗೆ ಸರಿಯಾದ ಮಾಹಿತಿ ನೀಡಿರುವುದಿಲ್ಲ. ಆದ್ದರಿಂದ ಅವರಿಗೆ ತಿಳುವಳಿಕೆ ನೀಡಬೇಕಲ್ಲದೆ ನೀಡಿರುವ ಗಣಿಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದೆಂದವರು ನುಡಿದರು.

ಜಿಲ್ಲೆಯ ಎಲ್ಲಾ ಗಣಿಗಳ ಸಮರ್ಪಕ ನಿರ್ವಹಣೆಯ ಕುರಿತು ಆಯಾ ಪಂಚಾಯಿತಿ ವ್ಯಾಪ್ತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇಲಾಖಾ ನಿಯಮ ಅನುಸರಿಸುತ್ತಿರುವ ಬಗ್ಗೆ ವಿಶೇಷ ಗಮನಹರಿಸಬೇಕಲ್ಲದೆ ಸಂಬಂಧಿಸಿದ ಕಂದಾಯ ಹಾಗೂ ಪೊಲೀಸ್‌ ಇಲಾಖಾಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಬೇಕೆಂದವರು ಸೂಚಿಸಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಎತ್ತುವಳಿ ಮಾಡಿ ಆಂತರಿಕ ಸ್ಥಳಗಳಲ್ಲಿನ ನದಿ ಪಾತ್ರಗಳಲ್ಲಿ ದಾಸ್ತಾನು ಮಾಡಲಾಗುವ ಮರಳನ್ನು ಜಪ್ತಿ ಮಾಡಿ, ವಶಪಡಿಸಿಕೊಂಡು ವಿಲೇವಾರಿ ಮಾಡಲು ಹಾಗೂ ದರ ನಿಗಧಿಪಡಿಸಿಕೊಡುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌, ಜಿಲ್ಲಾ ಪಂಚಾಯಿತಿ ಉಪಕಾರ್ಯದಶಿ ಶ್ರೀಮತಿ ಜಯಲಕ್ಷ್ಮಮ್ಮ, ಹಿರಿಯ ಭೂವಿಜ್ಞಾನಿ ಟಿ.ಕೆ.ನಾಯಕ್‌ ಸೇರಿದಂತೆ ಸಂಬಂದಿಸಿದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Klive Special Article “ಸೀತಾಪಹರಣ” ಸಿಹಿಮೊಗೆ ರಸಿಕರ ಮನಗೆದ್ದ ಯಕ್ಷಗಾನ

0

ಡಾ.ಸುಧೀಂದ್ರ. ಪ್ರಧಾನ ಸಂಪಾದಕ ಕೆ ಲೈವ್ ಪೋರ್ಟಲ್ ಶಿವಮೊಗ್ಗ.

Klive Special Article ಇಡಗುಂಜಿ ಮೇಳ ಅಂದರೆ ನಮಗೆ ಅಲ್ಲಿನ ಶ್ರೀಮಹಾಗಣಪತಿಯ ಭವ್ಯ ಮೂರ್ತಿ…
ಅಲ್ಲಿನ ಪರಿಸರದಲ್ಲಿ ಮರ್ಮರಿಸುವ ಯಕ್ಷಗಾನದ ಚಂಡೆ,ಮದ್ದಳೆ, ಭಾಗವತರ ಕಂಚಿನ ಕಂಠ, ವೇಷತೊಟ್ಟ ಯಕ್ಷಗಾನ ಕಲಾವಿದರು, ಅವರ ಮಾತು, ಹಾವಭಾವ ಏನೆಲ್ಲ ಯಕ್ಷಗಾನದ ವೇದಿಕೆ ಥಟ್ಟನೆ ನೆನಪಾಗುತ್ತದೆ.

ಸ್ಥಾಪಕ ಶಿವರಾಮ ಹೆಗಡೆ ನಂತರ ಪುತ್ರರಾದ ಕೆರೆಮನೆ ಶಂಭು ಹೆಗಡೆ, ಶಂಭುಹೆಗಡೆ ಪುತ್ರ ಶಿವಾನಂದ ಹೆಗಡೆ ಅಲ್ಲದೆ ಯುವ ಪೀಳಿಗೆಯ ಶ್ರೀಧರ ಹೆಗಡೆ ತನಕ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ತನ್ನ ಕಲಾ ಪರಂಪರೆಯ
ಮಡಿಹಾಸಿನ ಮೇಲೆ ಕುಣಿದು ಕುಪ್ಪಳಿಸಿದೆ. ಯಕ್ಷಗಾನ ಪ್ರಿಯರ ಮನದಾಳದಲ್ಲಿ ಇಡಗುಂಜಿ ಮೇಳದ ಆಟ ಎಂದರೆ ಬಹುದಿನಗಳ ಹಸಿವೆಗೆ ದೊರಕುವ ರಸದೂಟವೇ ಸರಿ.

ಈಗ ಇಡಗುಂಜಿ ಮೇಳಕ್ಕೆ ಈಗ
ಒಂಭತ್ತು ದಶಕಗಳು ಪೂರೈಸಿದ ಸಂಭ್ರಮ.
ಕರ್ನಾಟಕವೇ ಅಲ್ಲದೇ ಹೊರ ರಾಜ್ಯಗಳಲ್ಲಿ ಮೇಳ ಸುಳಿದಾಡಿ
ತನ್ನದೇ ಯಕ್ಷಗಾನದ ಪ್ರತಿಭೆಯಿಂದ ರಸಿಕರ ಮನಸೂರೆಮಾಡಿದೆ. ರಾಷ್ಟ್ರೀಯ ಉತ್ಸವಗಳಲ್ಲಿ ರಾರಾಜಿಸಿದ ಇಡಗುಂಜಿಯ ಮೇಳ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ.

ಈ ವರ್ಷ ಯುನಸ್ಕೋದಿಂದ ಜಾಗತಿಕವಾಗಿ
ಪಾರಂಪರಿಕ ಕಲಾತಂಡವೆಂಬ
ಮನ್ನಣೆ ಪಡೆದು ಮತ್ತಷ್ಟೂ ನಭದತ್ತ ತನ್ನ ಯಕ್ಷ ಚಿತ್ತಾರ ಹರಡಿದೆ.

ಇಂತಹ ಸಂದರ್ಭದಲ್ಲಿಯೇ ಅಭ್ಯುದಯ,ಶ್ರೀಮಯ-90 ಸಾರಥಿಗಳು‌ . ಯಕ್ಷಗಾನ ರಸಿಕರು
ಎಲ್ಲರೂ ಒಂದಾಗಿ‌ ಯಕ್ಷಗಾನ ಕಲಾ ಸಂಘಟಕ ಶಿವಾನಂದ ಹೆಗಡೆ ಅವರಿಗೆ‌ ಆತ್ಮೀಯ ಸನ್ಮಾನ‌ವನ್ನ ಜನವರಿ 26 ರಂದು ಏರ್ಪಡಿಸಿತ್ತು.

ಈಗ ಸನ್ಮಾನ ,ಸತ್ಕಾರ ಅಂದರೆ ಅದು‌ ಮಾಮೂಲಿನ ವಿಷಯವಾಗಿದೆ. ಅದಕ್ಕೆಂದೇ
ಒಂದುಷ್ಟು ಕಲಾರಸದೌತಣವಿರಲಿ
ಎಂಬ ಆಶಯದ‌” ಸೀತಾಪಹರಣ”
ಪ್ರಸಂಗದ ಪ್ರದರ್ಶನವನ್ನು ಅಣಿಗೊಳಿಸಲಾಗಿತ್ತು.

ಕತೆ ಹೂರಣ ಸರ್ವವಿದಿತ.ಆದರೆ‌
ಶಿವಾನಂದ ಹೆಗಡೆ ಅವರ ತಾಲೀಮಿನಲ್ಲಿ‌ ಅಂದು ಸೀತಾಪಹರಣ ಕತೆ, ( ನನ್ನ ಮಟ್ಟಿಗಂತೂ)ವಿನೂತನವಾಗಿ‌
ನಿರೂಪಿಸಲ್ಪಟ್ಟಿತು.

Klive Special Article ರಂಗಪೂಜೆಯ ಸಂಪ್ರದಾಯದ ನಂತರ‌ದ ಕ್ಷಣದಲ್ಲೇ ಕಥಾರಂಭ.
ಇದೊಂದು‌ ವಿಶಿಷ್ಟ. ಮೊದಲಲ್ಲೇ‌ ರಾಮ ಲಕ್ಷ್ಮಣ ವೇಷಗಳು ಸಮೃದ್ಧವಾಗಿ ಪ್ರೇಕ್ಷಕರ ಕಣ್ತುಂಬಿಕೊಂಡವು. ರಾಮನ ಪಾತ್ರಧಾರಿ‌ ಶಿವಾನಂದ‌ಹೆಗಡೆ
ತುಂಬಿದ‌ಕೊಡದಂತೆ ಮಾತು, ಅಭಿನಯ, ಆಭೂಷಣಗಳಿಂದ
ರಾಮನೇ ಮೈವೆತ್ತಿ ಕೊಂಡಂತೆ ಭಾಸ. ಅವರದು ಲೀಲಾಜಾಲ‌ ನಟನೆ. ಲಕ್ಷ್ಮಣನಾಗಿ‌ ಅವರ ಪುತ್ರ ಶ್ರೀಧರ ಹೆಗಡೆ ಅಷ್ಟೇ ಸಮನಾಗಿ
ಅಭಿನಯದ ತೂಕ ನೀಡಿ ,ಅನುಭವಸ್ಥ ಪಾತ್ರಧಾರಿಯ‌ ಜೊತೆ‌
ಹಾಲು ಜೇನಂತೆ ಬೆರೆತು‌ ಇಡೀದೃಶ್ಯ
ಕಟ್ಟಿಕೊಡುವಲ್ಲಿ ಯಶಸ್ವಿಯಾದರು.
ಶ್ರೀಧರ ಹೆಗಡೆ ,ನಾಳಿನ ನಕ್ಷತ್ರ ಅಲ್ಲ
ಇಂದೇ ಬೆಳಗುವ‌ ತಾರೆ‌‌ ಎಂಬ ಭರವಸೆ ಮೂಡಿಸಿದರು.

ಪಂಚವಟಿಯಲ್ಲಿ ಸೀತೆಯು ಲಕ್ಷ್ಮಣನಿಗೆ ರಾಮನು‌ ಸಂಕಷ್ಟದಲ್ಲಿರುವಂತಿದೆ ತೆರಳು ಎಂದಾಗ‌ ಆವನು ರಾಮನ ಮಾತಿಗೆ‌ ಕಟ್ಟುಬಿದ್ದಿದ್ದೇನೆ ಎಂಬ ಇಬ್ಬಂದಿಸ್ಥಿತಿಯಲ್ಲಿದ್ದಾಗ ಸೀತೆ ಅಪಾರ್ಥಮಾಡಿಕೊಳ್ಳುವ ಸನ್ನಿವೇಶದಲ್ಲಿ ಹತಾಶನಾಗಿ‌ ನೆಲಕ್ಕೆ ಬೀಳುವ‌ ಅಭಿನಯ ಶ್ರೀಧರ‌ಹೆಗಡೆ ತನ್ಮಯತೆ ಮತ್ತು
ಮನೋಜ್ಞತೆಯನ್ನ ಬಿಂಬಿಸಿತು.

ರಾಮ ಸೀತೆಯರ‌ ಮಾಯಾಮೃಗದ
ಕುರಿತ ಸಂಭಾಷಣೆ ರಸಿಕರಿಗೆ ಕಚಗುಳಿಯಾಗಿತ್ತು. ಅಂದಿನ ಕತೆಯಲ್ಲಿ‌ ಇಂದಿನ ಸ್ತ್ರೀಯರ ಹಳದಿಲೋಹದ ವ್ಯಾಮೋಹಗಳನ್ನ ಎಳೆಎಳೆಯಾಗಿ ಬಿಡಿಸಿಟ್ಟದ್ದು
ರಸಿಕಾಂಗಣಕ್ಕೆ ಒಂದಿಷ್ಟು ಹೊತ್ತು
ಲವಲವಿಕೆ ನೀಡಿತು.
ರಾವಣನ‌ ಆಗಮನ ( ಪಾತ್ರಧಾರಿ:
ಕೆ.ಜಿ.ಮಂಜುನಾಥ) ‌ಪ್ರಸಂಗಕ್ಕೆ ತಿರುವು .ಅದರಲ್ಲೂ ಶೂರ್ಪನಖಿ‌
ಎದೆನಡುಗಿಸುವ‌ ವೇಷ. ಅವರೀರ್ವರ ಸಂಭಾಷಣೆ ಬೇಸರ ತರಿಸದೇ ಚುರುಕಾಗಿ‌ ಕತೆಯನ್ನು
ಸಾಗಿಸಿತು. ಶೂರ್ಪನಖಿ ಪಾತ್ರಧಾರಿ
( ವಿಘ್ನೇಶ್ವರ ಹಾಲುಗೋಡಿ ) ರಂಗವನ್ನ‌ ಆಕ್ರಮಿಸುವಂತೆ
ಆರ್ಭಟ. ಸೂಕ್ತ ಆಂಗಿಕ, ಆಹಾರ್ಯಗಳಿಂದ‌‌ ಪ್ರೇಕ್ಷಕರನ್ನ‌ ಸೆಳೆದರು.
ಮತ್ತೊಂದು‌ಘಟ್ಟವೆಂದರೆ ರಾವಣನು‌ ,ಮಾವ ಮಾರೀಚನ‌ ನೆರವು‌‌ಬೇಡುವ‌ ಪ್ರಸಂಗ. ಸಂಪೂರ್ಣ ಲೋಕಧರ್ಮೀ ಅಭಿನಯ‌‌ ತುಂಬಿದ ದೃಶ್ಯ. ಈರ್ವರ ಮಾತುಕತೆ ನಮ್ಮ‌ಲೌಕಿಕ ಜೀವನಕ್ಕೆ ಹಿಡಿದ ಕನ್ನಡಿ. ಮಾರೀಚನಾಗಿ ತಿಮ್ಮಪ್ಪ‌ಹೆಗಡೆ ಶಿರಳಗಿ‌ಕೂಡ ಪ್ರೇಕ್ಷರೊಂದಿಗೆ‌
ಸಂವಾದ ಮಾಡುವಂತಿತ್ತು. ಪಾಪಿಯ‌ ಕೈ ಸಾವಿಗಿಂತ‌ ದೇವರಾಮನ‌‌ ಬಾಣಕ್ಕೆ‌‌ ಎದೆಕೊಡುವುದೇ ಸೂಕ್ತ ಎಂಬ‌ ನಿರ್ಧಾರ ತಾಳುವಲ್ಲಿ‌ ಸಹೃದಯ‌ನೇ
ಆ ಪಾತ್ರಕ್ಕೆ ಭೇಷ್‌ ಹೇಳಿ ಬಿಡುವಂತಿದೆ.

ಹೀಗೆಯೇ ಮಾಯಾಮೃಗ‌ ಸನ್ನಿವೇಷ. ಅದಂತೂ‌ ಸಂಪೂರ್ಣ ಲೋಕಧರ್ಮೀ ಅಭಿನಯಕ್ಕೆ‌ ಸೋದಾಹರಣ ನಿರೂಪಣೆ. ಇಂದಿನ ರಮಣಿಯರ ಬಂಗಾರದ ವ್ಯಾಮೋಹಗಳನ್ನ ತರತರವಾಗಿ‌
ಲಘುಹಾಸ್ಯ ಮಿಶ್ರಿತವಾಗಿ ಮಾತಾಡುವ ರಾಮ( ಶಿವಾನಂದ ಹೆಗಡೆ) ಅಷ್ಟೇ ಸಂವಾದಿಯಾಗಿ
ಅಭಿನಯಿಸಿದ ಸೀತೆ‌( ಪಾತ್ರಧಾರಿ;
ಸದಾಶಿವ ಭಟ್ಟ) ಸಮಯ ಸರಿದದ್ದೇ‌ ತಿಳಿಯುವುದಿಲ್ಲ.

ಸಹೃದಯರಲ್ಲಿ ಅಂತಹ ಸೀತೆಯೇ ಬಂಗಾರಕ್ಕೆ ಆಸೆ ಪಟ್ಟಳಲ್ಲ‌ ಎಂದು‌
ವರ್ತಮಾನಕ್ಕೂ‌‌ ಬೆಸುಗೆ ಹಾಕುತ್ತದೆ. ಇದೇ‌ ಅಭಿನಯದ ಪ್ಲಸ್ ಪಾಯಿಂಟ್.
ಮಾಯಾಜಿಂಕೆಯಾಗಿ ಬಂದ‌‌
( ಪಾತ್ರಧಾರಿ; ಎನ್.ಚಂದ್ರಶೇಖರ್)
ರಂಗದ ಸಂಪೂರ್ಣ ಸ್ಥಳವನ್ನ ಬಳಸಿಕೊಂಡ ಏಕೈಕ‌ಪಾತ್ರ. ಜಿಂಕೆಯಾಗಿ‌ ಆಹಾರ್ಯದಲ್ಲಿ‌ ಯಶ. ಆಂಗಿಕದಲ್ಲಂತೂ‌ ಮತ್ತಷ್ಟು‌
ಸಿದ್ಧಿಪಡೆದ ಕಲಾವಿದ.
ಜಟಾಯು‌ ಪುಟ್ಟ ಪಾತ್ರವಾದರೂ
ಅದರ ಪ್ರವೇಶ ಮತ್ತು‌ ಅಭಿನಯ
ಸರಿಯಾದ ತೂಕದಲ್ಲಿತ್ತು.
ಪಾತ್ರಧಾರಿ, ಗಣಪತಿ‌ ಕುಣಬಿ ಕೂಡ
ಚೊಕ್ಕದಾದ ಪ್ರವೇಶ ಮತ್ತು‌ ಪರಿಣಾಮಕಾರಿ ಅಭಿನಯ.

ಕತೆಯ ಸರಿದಾಟ ಅರಿವಿಗೇ ಬರುವುದಿಲ್ಲ. ಪ್ರೇಕ್ಷಕರೇ ಮುಂದಿನ ಘಟನೆಗಳನ್ನ ನಿರೀಕ್ಷಿಸುವಂತೆಯೇ
ಆಟ ಮೋಡಿಯಂತೆ ನಡೆಯುತ್ತಿರುತ್ತದೆ. ಶಿಖರ ಘಟ್ಟವೇ
ಸೀತಾಪಹರಣ.
ಸನ್ಯಾಸಿ ರಾವಣನಾಗಿ‌ ಬಂದ ದೃಶ್ಯ‌
ಒಂದಷ್ಟು ಕ್ಷಣ ಅನಿಮಿಷನಾಗಿ
ಬಿಡುತ್ತಾನೆ‌ ಪ್ರೇಕ್ಷಕ. ಸೀತೆ‌ ಮೂರುಗೆರೆ ದಾಟುವ‌ ‌ಚಲನೆ, ರಾವಣ ( ಪಾತ್ರಧಾರಿ: ಈಶ್ವರ ಹಂಸಳ್ಳಿ) ದಿಟ್ಟ ನಿಲುವಿನಿಂದ, ವಂಚನೆಯ‌ ಮಾತುಗಳಿಂದ ಖಳನಾಯಕನಾಗಿ ನಮ್ಮ ಭಾವಕೋಶವನ್ನ‌‌ ಆಕ್ರಮಿಸಿ ಬಿಡುತ್ತಾನೆ.
ಅಪಹರಣದ ಸನ್ನಿವೇಷದಲ್ಲಿ
ಸೀತೆಯ ಆಕ್ರಂದನ‌ ಎಂಥವರಿಗೂ
ಮನ ಕಲಕದೇ ಇರದು.ಅಷ್ಟು ಸಹಜತೆ‌ ಆ ದೃಶ್ಯದಲ್ಲಿ ತುಂಬಿಕೊಂಡಿತ್ತು.
ಇಲ್ಲಿ ಭಾಗವತರ‌‌ ಬಗ್ಗೆ ಹೇಳದಿದ್ದರೆ
ಕರ್ತವ್ಯಚ್ಯುತಿಯಾದೀತು.
ಸಂಗೀತಜ್ಞರಲ್ಲದವರೂ‌ ಆ ರಾಗ,ಆಲಾಪಕ್ಕೆ ಶರಣಾಗಬೇಕು
( ಅನಂತ ಹೆಗಡೆ,ನರಸಿಂಹ ಹೆಗಡೆ, ರಾಮನ್ ಹೆಗಡೆ) ಹಾಗಿತ್ತು ಅವರ ಭಾಗವತಿಕೆ.
ಚಂಡೆಮದ್ದಳೆ ಅದೇ ಆಟದ ಜೀವಂತಿಕೆ.ಸಹೃದಯನ ಎದೆಬಡಿತಕ್ಕೆ ಸಂವಾದಿಯಾಗಿ‌
ಪ್ರಸಂಗ ಚಾಲಕನಾಗುವ ಶಕ್ತಿ.
ಬಂಗಾರದ ಜಿಂಕೆಯ ಚಲನೆಗೆ
ಹಾಕುವ ಮಟ್ಟುಗಳು ಕಳೆಕೊಟ್ಟವು.

ಒಟ್ಟಿನಲ್ಲಿ ಇದೊಂದು ಪ್ರಯೋಗ.
ಯಾಕೆಂದರೆ ಆಟವೆಂದರೆ ರಾತ್ರಿಯಿಡೀ ನಡೆಯುವ ದೀರ್ಘ ಪ್ರಸಂಗ.
ಆದರೆ ಈಗಿನ ಕಾಲಮಾನಕ್ಕೂ
ಯಕ್ಷಗಾನ ಪ್ರಸಂಗವನ್ನ. ಹೃಸ್ವವಾಗಿಸಿ, ಲೋಪಬಾರದಂತೆ
ಎರಡೇ ಗಂಟೆಗಳಲ್ಲೂ‌ ಯಕ್ಷಗಾನವನ್ನ ಪರಿಣಾಮಕಾರಿ
ಆಗಿಸಬಹುದು‌ ಎಂಬ ವಾದಕ್ಕೆ ಪುಷ್ಠಿ ಮತ್ತು ಮಾದರಿ.

ಇರುಳಿಡೀ ಪ್ರಸಂಗ ಒಂದು ಟೆಸ್ಟ್ ಕ್ರಿಕೆಟ್ ಮ್ಯಾಚ್. ಆದರೆ ಇಂತಹ‌ ಹೃಸ್ವ ಪ್ರಯೋಗಗಳು ಟಿ-20
ಮ್ಯಾಚ್ ಇದ್ದಂತೆ. ಎರಡರಲ್ಲೂ ಅದರದೇ ವಿಶೇಷತೆಗಳಿವೆ. ಆಕರ್ಷಣೆಗಳಿವೆ ಅಲ್ಲವೆ?

ಇದೆಲ್ಲವೂ ಸೂತ್ರಧಾರ ಶಿವಾನಂದ‌ಹೆಗಡೆ ಅವರ ಕರ್ತೃತ್ವಶಕ್ತಿ , ಸೃಜನಶೀಲತೆಗೆ ಸಾಕ್ಷಿ.
ನಮಗೆ ನಮ್ಮ ಕಲೆ, ಸಂಸ್ಕೃತಿ ,ಪರಂಪರೆ ಬೇಕು. ಬೇಕಿದ್ದರೆ ಮೊದಲು ಅವು‌ ಉಳಿಯ ಬೇಕು.
ಅಂತಹ ಬೇರನ್ನು ಪಳೆಯುಳಿಕೆ ಮಾಡದೇ ಜೀವಂತ‌ ಇರಿಸುವ ಛಲಗಾರಿಕೆಯನ್ನ. ಈ ಕ್ಷೇತ್ರದಲ್ಲಿ
ಶಿವಾನಂದ ಹೆಗಡೆ ತೋರಿಸುತ್ತಿದ್ದಾರೆ.
ಆ ಪಟ್ಟುಬಿಡದ ಶ್ರಮದ ಸಂಕೇತವಾಗಿ ಶ್ರೀಮಹಾಗಣಪತಿ‌ ಯಕ್ಷಗಾನ ಮಂಡಳಿಗೆ “ಯುನೆಸ್ಕೊ” ಮಾನ್ಯತೆ ನೀಡಿ
ಗೌರವಿಸಿದೆ. ಕನ್ನಡನಾಡಿಗೂ ಇದು‌ ಹೆಮ್ಮೆಯ ಸಂಗತಿಯಾಗಿದೆ.

ಇದು ಸುಲಭದ ಸಾಧನೆಯಲ್ಲ ದೇಶೀಯವಾಗಿ
ಈ ಮನ್ನಣೆ ಆರೇಳು ತಂಡಗಳಿಗೆ ಸಿಕ್ಕಿವೆ. ಈ ಸಾಧನೆಯ ಹಿಂದೆ ಕೆರೆಮನೆ ಕುಟುಂಬದ ಶ್ರಮ, ತ್ಯಾಗ, ಅರ್ಪಣಾ ಮನೋಭಾವ ಮತ್ತು ಇಡೀ ಊರಿನವರ ಸಹಕಾರ ಘನವಾಗಿ ನಿಂತಿದೆ.

ಹೊನ್ನಾವರ ಸನಿಹದ ಗುಣವಂತೆ ಎಂಬ ಪುಟ್ಟಗ್ರಾಮದಲ್ಲಿ ಕೆರೆಮನೆ ಶಂಭುಹೆಗಡೆ ಕಲಾಲೋಕವೇ ಮೈದಳೆದು ನಿಂತಿದೆ. ಯಕ್ಷಗಾನವನ್ನ ಒಂದು ಶೈಕ್ಷಣಿಕ ಶಿಸ್ತಾಗಿ ಅಧ್ಯಯನ ಮಾಡುವ
ಅಕಾಡೆಮಿಕ್ ಪ್ರಯತ್ನ ಅಲ್ಲಿ ಸಾಕಾರಗೊಂಡಿದೆ.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ,ಯಕ್ಷಗಾನ ಗುರುಕುಲ,ಪ್ರಾತ್ಯಕ್ಷತೆ ಆಟವೇ ಪಾಠ,ಕಾರ್ಯಾಗಾರಗಳು,ತರಬೇತಿ..ಒಂದೆ ಎರಡೆ ಹೀಗೆ ಹತ್ತು ಹಲವು ಆಯಾಮಗಳಿಂದ ಇಡೀ ಯಕ್ಷಗಾನ ಕಲೆಗಿರುವ ಸಹಸ್ರ ಮುಖಗಳ ಬಗ್ಗೆ ಎಲ್ಲರೂ ನೋಡುವಂತೆ ಮಾಡಲಾಗುತ್ತಿದೆ
ಯಕ್ಷಗಾನ ಕಲಾಪ್ರಪಂಚದ ದಿಗ್ಗಜರೆಲ್ಲರೂ ಈ ಕಲಾವೇದಿಕೆಯ ಹೊನಲು‌ಬೆಳಕಿನಲ್ಲಿ ಬಣ್ಣಹಚ್ಚಿದ್ದಾರೆ. ಕಂಚು‌ಕಂಠದ ಭಾಗವತರು ಪಾತ್ರಗಳಿಗೆ ರಾಗ ಕಂಠ ನೀಡಿದ್ದಾರೆ. ಮದ್ದಳೆ ಪ್ರವೀಣರ ಮಾಂತ್ರಿಕ ಕೈಗಳು ಇಲ್ಲಿ ಸೋತಿಲ್ಲ.. ಅದಕ್ಕೆ ಹೊಯ್ ಕೈಯಾಗಿ ಪಾತ್ರಧಾರಿಗಳ ಮಾತುಗಾರಿಕೆ ಹೆಜ್ಜೆಗಳೂ ದಣಿದಿಲ್ಲ.

ಪ್ರಸ್ತುತ ಇಡಗುಂಜಿ ಮೇಳದ ನಿರ್ದೇಶಕರಾಗಿರುವ ಕೆರೆಮನೆ ಶಿವಾನಂದ ಹೆಗಡೆ ಅವರ ಅವಿರತ ಶ್ರಮದಿಂದಾಗಿ ಗುಣವಂತೆ ಜಾಗತಿಕ ಯಕ್ಷ ನಕ್ಷೆಯಲ್ಲಿ ಮಿನುಗುವಂತಾಗಿದೆ.
ಶಿವಮೊಗ್ಗದ ಯಕ್ಷಗಾನ ಪ್ರೇಮಿಗಳಿಗೆ ಇಡಗುಂಜಿ ಮೇಳ ಬಹಳ ಆಪ್ತವಾಗಿರುವ ಕಲಾತಂಡ. ಅದರ ಕಲಾವಿದರಂತೂ
ಮಿತ್ರರಂತೆ ಬೆರೆತುಹೋಗಿದ್ದಾರೆ.

ಶಿವಮೊಗ್ಗದ ಸಾಂಸ್ಕೃತಿಕ ಚಟುವಟಿಕೆಯ ಮುಂಚೂಣಿಯಲ್ಲಿರುವ ಅಭ್ಯುದಯ ಸಂಸ್ಥೆಯ ಲಷ್ಮೀನಾರಾಯಣ ಕಾಶಿ. ಎನ್.ರಾಮಚಂದ್ರ,ಡಾ.ರತ್ನಾಕರ್, ಬಾಬಣ್ಣ, ಡಾ.ಟಿ.ಜೆ.ಲಕ್ಷ್ಮೀನಾರಾಯಣ.
ಡಾ.ಅನಿಲ್ ಕುಮಾರ್, ಶ್ರೀನಿವಾಸ ಕಾರಂತ್ ಮುಂತಾದವರ ಶ್ರಮ ಸಾರ್ಥಕವಾಗಿದೆ.