Karnataka SC & ST Development Corporation ಕೊರಚರ ಹಟ್ಟಿ, ತಿಮ್ಲಾಪುರ ಗ್ರಾಮ ಹೊಳೆಹೊನ್ನೂರು ಹೋಬಳಿ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ /ವರ್ಗಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ. ವೀಕ್ಷೆಣೆ ಮಾಡಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಜಾಗೃತಿ ಮೂಡಿಸಿದೆ..
ಇ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಅಲೆಮಾರಿ ಕೊರಚ ಸಮುದಾಯದ ಸುಮಾರು 45 ಕುಟುಂಬಗಳು ಹಕ್ಕುಪತ್ರ ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ತಮ್ಮ ಅಹವಾಲು ಸಲ್ಲಿಸಿದರು.
ಈ ಪ್ರದೇಶವು ಕಂದಾಯ ಉಪಗ್ರಾಮಕ್ಕೆ ಒಳಪಡಲು ಎಲ್ಲ ಅವಕಾಶವಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮಾರು 50 ವರ್ಷಗಳಿಂದಲು ಸರ್ಕಾರದ ಅಭಿವೃದ್ಧಿ ಯೋಜನೆಗಳು ತಲುಪದೆ, ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದಿರುವುದು ಬೇಸರದ ಸಂಗತಿ.
Karnataka SC & ST Development Corporation ಮನೆಯೊಂದು ಸಂಪೂರ್ಣವಾಗಿ ಹಾನಿಯಾಗಿ ನೆಲಸಮವಾದ ಕಾರಣ ಗುಡಿಲಸು ನಿರ್ಮಿಸಿಕೊಂಡು ಪುಟ್ಟ ಮಗುವೊಂದಿಗೆ ವಿಧವೆ ಹೆಣ್ಣುಮಗಳು ಜೀವನ ಸಾಗಿಸುತ್ತಿದ್ದರು ಸಹ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಅತ್ಯಂತ ಅಮಾನವೀಯ ಸಂಗತಿಯಾಗಿದೆ.
ಕೂಡಲೆ ಇಲ್ಲಿನ ಎಲ್ಲಾ ಸಮಸ್ಯೆಯನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಉಪ ತಹಶಿಲ್ದಾರರ ವಿಜಯ್ ಕುಮಾರ್, ಸಹಾಯಕ ನಿರ್ದೇಶಕಿ ಸವಿತ ರವರಿಗೆ ತಾಕೀತು ಮಾಡಿ ಒಂದು ವಾರದ ಒಳಗಾಗಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಹಕ್ಕುಪತ್ರವನ್ನು ಹಂಚಲು ಕ್ರಮ ವಹಿಸುವಂತೆ ಸೂಚಿಸಲಾಯಿತು.
ನಗರ ಸಭೆ ಮುಖ್ಯಾಧಿಕಾರಿ ಸುಹಾಸಿನಿ , ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್.ಆನಂದ್ ಕುಮಾರ್ , ಮುಖಂಡರಾದ ಲಕ್ಷ್ಮೀದೇವಿ, ಶಿವಕುಮಾರ್, ಸಂತೋಷ್, ಉಪಸ್ಥಿತರಿದ್ದರು
Shivaganga Yoga Centre ಸೂರ್ಯ ನಮಸ್ಕಾರದಿಂದ ಸರ್ವ ರೋಗವು ಗುಣವಾಗುವುದರ ಜೊತೆಗೆ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಹೇಳಿದರು. ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಏರ್ಪಡಿಸಿದ್ದ ರಥಸಪ್ತಮಿ ಕಾರ್ಯಕ್ರಮದಲ್ಲಿ ಮಾತನಾಡಿ, ಸೂರ್ಯ ನಮಸ್ಕಾರ ಆಸನಗಳ ಒಂದು ರಾಜ. ದೇಹದಲ್ಲಿ ಎಲ್ಲಾ ಅಂಗಾಂಗಗಳಲ್ಲಿ ರಕ್ತ ಚೆನ್ನಾಗಿ ಸಂಚಾರ ಆಗುವುದರಿಂದ ದೇಹದಲ್ಲಿ ಯಾವುದೇ ಕಾಯಿಲೆಗಳು ನಮಗೆ ಬರುವುದಿಲ್ಲ. ನಿರಂತರವಾಗಿ ಅಭ್ಯಾಸ ಮಾಡುವುದರಿಂದ ನಾವುಗಳು ಸದಾ ಲವಲವಿಕೆ ಹಾಗೂ ಆರೋಗ್ಯವಂತರಾಗಿರುತ್ತೇವೆ ಎಂದು ತಿಳಿಸಿದರು. ಸಕಲ ಜೀವರಾಶಿಗೂ ಸೂರ್ಯನು ಬೇಕೇ ಬೇಕು. ಸೂರ್ಯನಿಲ್ಲದಿದ್ದರೆ ಬದುಕೇ ಇಲ್ಲ. ಸೂರ್ಯದೇವನನ್ನು ಪ್ರಾರ್ಥಿಸಿ ಶಕ್ತಿ ಅನುಸಾರ ನಮಸ್ಕಾರಗಳನ್ನು ಮಾಡಿದರೆ ಆರೋಗ್ಯ ವೃದ್ಧಿಯಾಗುವುದು ಎಂದರು. Shivaganga Yoga Centre ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ರಥಸಪ್ತಮಿ ಕಾರ್ಯಕ್ರಮವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಯಿತು. 15 ದಿನ ಸೂರ್ಯ ನಮಸ್ಕಾರವನ್ನು ಅಭ್ಯಾಸ ಮಾಡಿರುವ ಎಲ್ಲರಿಗೂ ಸೂರ್ಯದೇವ ಒಳಿತು ಮಾಡಲಿ ಎಂದು ಆಶಿಸಿದರು. ಬೆಳಗ್ಗೆ 5.30ಕ್ಕೆ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿ 6 ಗಂಟೆಗೆ ಸರಿಯಾಗಿ ಅಖಂಡ ಸೂರ್ಯ ನಮಸ್ಕಾರ ಪ್ರಾರಂಭವಾಯಿತು. ಯೋಗ ಗುರು ಡಾ. ಪದ್ಮನಾಭ ಅಡಿಗ ಅವರು ರಥಸಪ್ತಮಿ ಹಾಗೂ ಸೂರ್ಯ ನಮಸ್ಕಾರದ ಪ್ರಾಮುಖ್ಯತೆ ಕುರಿತು ವಿವರಿಸಿದರು. ಶಿವಗಂಗಾ ಯೋಗ ಕೇಂದ್ರದ ಎಲ್ಲಾ ಶಾಖೆಗಳಿಂದ ಸಾವಿರಕ್ಕೂ ಹೆಚ್ಚು ಶಿಕ್ಷಣಾರ್ಥಿಗಳು ರಥಸಪ್ತಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೂರ್ಯ ನಮಸ್ಕಾರ ಮಾಡಿದರು. 300ಕ್ಕೂ ಹೆಚ್ಚು ಶಿಬಿರಾರ್ಥಿಗಳು 12 ಮಂಡಲ ಸೂರ್ಯ ನಮಸ್ಕಾರ ಮಾಡಿ ವಿಶೇಷ ಸಾಧನೆ ಮಾಡಿದರು. ಕಾರ್ಯಕ್ರಮದಲ್ಲಿ ಚಂದ್ರಶೇಖರಯ್ಯ, ಓಂಕಾರ್, ಡಾ. ನಾಗರಾಜ ಪರಿಸರ, ಜಿ.ವಿಜಯಕುಮಾರ್, ಜಗದೀಶ್, ಲವಕುಮಾರ, ಚಂದ್ರಶೇಖರಯ್ಯ, ಹರೀಶ್, ನೀಲಕಂಠ ರಾವ್ ಹಾಗೂ ಎಲ್ಲ ಶಾಖೆಯ ಯೋಗ ಶಿಕ್ಷಕರಗಳು ಭಾಗವಹಿಸಿದ್ದರು.
MESCOM ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ-1 ವ್ಯಾಪ್ತಿಯಲ್ಲಿ ನಿಸರ್ಗ ಬಡಾವಣೆ ಹತ್ತಿರ ವಿದ್ಯುತ್ ಪರಿವರ್ತಕ ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.05 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಬೈಪಾಸ್ ರಸ್ತೆ, ನಿಸರ್ಗ ಬಡಾವಣೆ, ಊರಗಡೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾ ತಿಳಿಸಿದೆ.
Shivamogga Police ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತುಂಗಾನದಿಯ ಮಧ್ಯದಲ್ಲಿ ಮರಳು ಕಲ್ಲು ಮಣ್ಣಿನ ದಂಡೆಯ ಮೇಲೆ ರುಂಡ ಇಲ್ಲದ ಗಂಡಸ್ಸಿನ ಶವ ಕೊಳೆತು ಹೋಗಿರುವ ಸ್ಥಿತಿಯಲ್ಲಿ ದೊರಕಿದ್ದು, ಹೆಸರು, ವಿಳಾಸ ದೊರೆತಿಲ್ಲ.
ಮೃತ ದೇಹದ ಮೇಲೆ ಒಂದು ಮೆರೂನ್ ಕಲರಿನ ತುಂಬು ತೋಳಿನ ವುಡಿ ಇದ್ದು ಕಾಲರ್ ಹತ್ತಿರ ಟೀಮ್ ಸ್ಪಿರಿಟ್ ಹಾಗೂ ಹಡ್ಸನ್ ಎವರ್ ಮೆನ್ ಸ್ಟ್ರಾಂಗ್ ಎಂಬ ಸ್ಟಿಕರ್ ಇದ್ದು ಎಂ ಸೈಜಿನದಾಗಿರುತ್ತದೆ. ಅದರ ಒಳಭಾಗದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಅಡ್ಡ ಗೀರಿನ ಟೀಶರ್ಟ್ ಧರಿಸಿದ್ದು, ತಿಳಿ ನೀಲಿ ಬಣ್ಣದ ಜೀನ್ಸ್ ಇರುತ್ತದೆ.
Shivamogga Police ಈ ವ್ಯಕ್ತಿಯ ವಾರಸ್ಸುದಾರರ ಇದ್ದಲ್ಲಿ ದೂ.ಸಂ.: 08182-261418/ 261410/ 261422/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ.
Klive Special Article ಆಧುನಿಕ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯು ಏಕ ವಿಧಾನದಿಂದ ಬಹುಮಾದರಿ ವಿಧಾನಕ್ಕೆ ವಿಕಸನಗೊಂಡಿದೆ. ಕ್ಯಾನ್ಸರ್ ಆರೈಕೆಯಲ್ಲಿ ನಿಖರತೆಯನ್ನು ಒದಗಿಸಲು ಆಂಕೊಸರ್ಜನ್, ವೈದ್ಯಕೀಯ ಆಂಕೊಲಾಜಿಸ್ಟ್, ವಿಕಿರಣ ಆಂಕೊಲಾಜಿಸ್ಟ್, ಉಪಶಮನ ಆರೈಕೆ ತಜ್ಞ, ರೇಡಿಯಾಲಜಿಸ್ಟ್, ರೋಗಶಾಸ್ತ್ರಜ್ಞರ ತಂಡವು ಕ್ಯಾನ್ಸರ್ ಆರೈಕೆ ಟ್ಯೂಮರ್ ಮಂಡಳಿಯ ಕೇಂದ್ರಬಿಂದುವಾಗಿದೆ.
1895ರಲ್ಲಿ ವಿಲ್ಹೆಲ್ಮ್ ಕಾನ್ರಾಡ್ ರೊಂಟ್ಜೆನ್ ಅವರಿಂದ ಎಕ್ಸ್-ಕಿರಣಗಳ ಆವಿಷ್ಕಾರ ಮತ್ತು ಒಂದು ವರ್ಷದ ನಂತರ ಹೆನ್ರಿ ಬೆಕ್ವೆರೆಲ್ ಅವರಿಂದ ವಿಕಿರಣಶೀಲತೆ ಮತ್ತು ನಂತರ ಮೇರಿ ಕ್ಯೂರಿ ಅವರಿಂದ ರೇಡಿಯಂನ ಆವಿಷ್ಕಾರದ ನಂತರ ವಿಕಿರಣ ಆಂಕೊಲಾಜಿ ವಿಕಸನಗೊಂಡಿದೆ. ಮತ್ತೊಂದು ಮೈಲಿಗಲ್ಲು- ಐರೀನ್ ಜೋಲಿಯಟ್-ಕ್ಯೂರಿ ಮತ್ತು ಫ್ರೆಡೆರಿಕ್ ಜೋಲಿಯಟ್ 1934ರಲ್ಲಿ ಕೃತಕ ವಿಕಿರಣಶೀಲತೆಯನ್ನು ಕಂಡುಹಿಡಿದರು ಮತ್ತು ಕೋಬಾಲ್ಟ್ 59 (ಸಾಮಾನ್ಯ) ಅಂಶವನ್ನು ಕೋಬಾಲ್ಟ್ 60 (ವಿಕಿರಣಶೀಲ ಐಸೊಟೋಪ್) ಆಗಿ ಪರಿವರ್ತಿಸುವುದು ಟೆಲಿರೇಡಿಯೊಥೆರಪಿ ಯಂತ್ರಗಳ ಬಳಕೆಗೆ ಕಾರಣವಾಗಿದೆ.
ಟೆಲಿರೇಡಿಯೊಥೆರಪಿ (ದೂರದಿಂದ ಚಿಕಿತ್ಸೆ ನೀಡುವುದು) ಮತ್ತು ಬ್ರಾಕಿಥೆರಪಿ (ಗೆಡ್ಡೆಯ ಬಳಿ ವಿಕಿರಣಶೀಲ ಮೂಲದೊಂದಿಗೆ ಚಿಕಿತ್ಸೆ ನೀಡುವುದು) 1960 ರ ದಶಕದಲ್ಲಿ ಮತ್ತೆ ರೋಗನಿರ್ಣಯದ ಉದ್ದೇಶಗಳಿಗಾಗಿ ಕೆವಿ ಎಕ್ಸ್-ಕಿರಣಗಳ ಬಳಕೆಯು ಲೀನಿಯರ್ ಆಕ್ಸಿಲರೇಟರ್‌ನೊಂದಿಗೆ ಮೆಗಾ ವೋಲ್ಟೇಜ್ ಎಕ್ಸ್-ಕಿರಣಗಳು (ಫೋಟಾನ್‌ಗಳು) ಹೊಂದಿರುವ ಆಂಕೊಲಾಜಿಯಲ್ಲಿ ಬಳಕೆಗೆ ಬದಲಾಯಿತು.
ಕಾಲಾನಂತರದಲ್ಲಿ ಈ ಯಂತ್ರವು ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ಅಡ್ಡಪರಿಣಾಮಗಳು ಮತ್ತು ಜೀವನದ ಗುಣಮಟ್ಟದಲ್ಲಿ ಸುಧಾರಣೆಯೊಂದಿಗೆ ಹೆಚ್ಚು ಹೆಚ್ಚು ನಿಖರವಾಗಿ ಚಿಕಿತ್ಸೆ ನೀಡಲು ವಿಕಸನಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಬಾಹ್ಯ ಕಿರಣ ರೇಡಿಯೊಥೆರಪಿ ಅಥವಾ ಟೆಲಿರೇಡಿಯೊಥೆರಪಿಯನ್ನು ಯೋಜಿಸಲು ೩ ಡಿ ಸಿಆರ್‌ಟಿ, ಐಎಂಆರ್‌ಟಿ, ಐಜಿಆರ್‌ಟಿ, ಎಸ್‌ಬಿಆರ್‌ಟಿ, ಎಸ್‌ಆರ್‌ಎಸ್, ಎಸ್‌ಆರ್‌ಟಿ, ಆರ್ಕ್ ಥೆರಪಿ ಮತ್ತು ಮುಂತಾದ ಹಲವು ತಂತ್ರಗಳನ್ನು ಬಳಸಲಾಗುತ್ತದೆ. ಚಿಕಿತ್ಸೆ ನೀಡುವ ಉದ್ದೇಶವನ್ನು ಯೋಜನೆ ಮತ್ತು ಚಿಕಿತ್ಸೆಯು ಅನುಸರಿಸುತ್ತದೆ – ಇದು ಸರಿಸುಮಾರು – ಗುಣಪಡಿಸುವ ಅಥವಾ ಉಪಶಮನಕಾರಿ (ಕ್ಯಾನ್ಸರ್ ಮುಂದುವರಿದ ಹಂತಗಳಲ್ಲಿ ಗುಣಪಡಿಸಲು ಕಷ್ಟ ಎಂದು ಭಾವಿಸಿದಾಗ ರೋಗ ಲಕ್ಷಣಗಳನ್ನು ಶಮನಗೊಳಿಸಲು ಮಾತ್ರ). Klive Special Article ಈ ವರ್ಷದ ಘೋಷಣೆ ಹಲವು ವಿಧಗಳಲ್ಲಿ ಬಹಳ ಮುಖ್ಯವಾಗಿದೆ – ವಿಶಿಷ್ಟತೆಯಿಂದ ಒಗ್ಗೂಡಿಸಲಾಗಿದೆ! ಪ್ರತಿಯೊಬ್ಬ ಕ್ಯಾನ್ಸರ್ ರೋಗಿಯು ಕ್ಯಾನ್ಸರ್ ಊPಇ ಯ ಹಂತ ಮತ್ತು ಪ್ರಕಾರದಲ್ಲಿ ವ್ಯತ್ಯಾಸವನ್ನು ಹೊಂದಿರುವುದು ಮಾತ್ರವಲ್ಲದೆ ನಿರ್ದಿಷ್ಟ ಚಿಕಿತ್ಸೆಗೆ ಪ್ರತಿಕ್ರಿಯೆಯಾಗಿ, ಒಟ್ಟು ಚಿಕಿತ್ಸಾ ಪ್ರಕ್ರಿಯೆಯನ್ನು ತಡೆದುಕೊಳ್ಳುವ ಸಾಮರ್ಥ್ಯ, ಜೀವಿತಾವಧಿ, ಹೊಸದು ಅಥವಾ ಮರುಕಳಿಸುವ ಕ್ಯಾನ್ಸರ್ ಇತ್ಯಾದಿಗಳಲ್ಲಿಯೂ ವಿಶಿಷ್ಟವಾಗಿದೆ. ಆದ್ದರಿಂದ ಟೈಲರ್ ಸ್ಥಾಪಿತ ಮಾರ್ಗಸೂಚಿಗಳೊಳಗೆ ಪ್ರತಿ ರೋಗಿಗೆ ಚಿಕಿತ್ಸೆಯನ್ನು ಒದಗಿಸಿದ್ದಾರೆ. ನಾವು ಪ್ರಪಂಚದಾದ್ಯಂತ ನೋಡಿದರೆ ಅಗಾಧವಾಗಿದೆ ಕ್ಯಾನ್ಸರ್ ಆರೈಕೆಯಲ್ಲಿ ಸುಧಾರಣೆ – ರೋಗನಿರ್ಣಯ ಮತ್ತು ಗುಣಪಡಿಸುವಿಕೆ ಎರಡರಲ್ಲೂ ಹಾಗೆಯೇ ಆಂಕೊಲಾಜಿಯಲ್ಲಿ ತಡೆಗಟ್ಟುವ ಆರೈಕೆಯಲ್ಲೂ ಸಹ. ಇದು ಎಲ್ಲಾ ದೇಶಗಳಿಗೆ ವ್ಯಾಪಿಸಿಲ್ಲ ಮತ್ತು ಒಂದು ದೇಶದ ಕೆಲವು ಉತ್ತಮ ಕೇಂದ್ರಗಳಲ್ಲಿ ನವೀಕರಿಸಿದ ಸೌಲಭ್ಯಗಳು ಇದ್ದರೂ ಸಹ, ಬಾಹ್ಯ ಪಟ್ಟಣಗಳು ಮತ್ತು ಜಿಲ್ಲೆಗಳಲ್ಲಿ ಕೆಲವು ಅಂಶಗಳಲ್ಲಿ ಇದು ಕೊರತೆಯಿದೆ.
ಕ್ಯಾನ್ಸರ್ ಆರೈಕೆ ಕೇಂದ್ರದ ತಿರುಳು ಒಂದು ಪ್ರಮುಖ ಅಂಶವೆಂದರೆ ಅದು ಹೊಂದಿರುವ ವಿಕಿರಣ ಸೌಲಭ್ಯ. ೨ ಪ್ರಮುಖ ಅಂಶಗಳೆಂದರೆ ಟೆಲಿರೇಡಿಯೊಥೆರಪಿ – ಇದು ಹಿಂದಿನ ದಿನಗಳಲ್ಲಿ ಕೋಬಾಲ್ಟ್ 60 ಯಂತ್ರದೊಂದಿಗೆ ಇತ್ತು, ಆದರೆ ಆಧುನಿಕ ಕೇಂದ್ರವು ಲೀನಿಯರ್ ಆಕ್ಸಿಲರೇಟರ್ ಅಥವಾ ಲಿನಾಕ್ ಎಂದು ಕರೆಯಲ್ಪಡುವದನ್ನು ಹೊಂದಿದೆ. ೨ ನೇ ಪ್ರಮುಖ ಭಾಗವೆಂದರೆ ಬ್ರಾಕಿಥೆರಪಿ ಎಂದರೆ ಅದು ಆಧುನಿಕ ಸೆಟಪ್‌ನಲ್ಲಿದೆ -Iಡಿ 192 ಅಥವಾ ಕೃತಕ ರೇಡಿಯೊಐಸೋಟೋಪ್‌ನೊಂದಿಗೆ ರಿಮೋಟ್ ಆಫ್ಟರ್‌ಲೋಡರ್. ಎಲ್ಲಾ ರೋಗಿಗಳು ಮತ್ತು ಅವರ ಸಂಬಂಧಿಕರ ಕಡೆಗೆ ದಯೆಯ ರೂಪದಲ್ಲಿ ಮಾನವ ಸ್ಪರ್ಶವು ಪ್ರಮಾಣೀಕೃತ ಆಧುನಿಕ ವೈದ್ಯಕೀಯ ಆರೈಕೆಯೊಂದಿಗೆ ಗುಣಪಡಿಸುವ ಸ್ಪರ್ಶದ ವಿಶೇಷತೆಯನ್ನು ಸೇರಿಸುವಲ್ಲಿ ಬಹಳ ದೂರ ಹೋಗಬಹುದು.
– ಡಾ. ರವಿ ನಡಹಳ್ಳಿ ರೇಡಿಯೇಷನ್ ಅಂಕಾಲಜಿಸ್ಟ್, ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಶಿವಮೊಗ್ಗ.
CM Siddharamaiah ಜನಸಾಮಾನ್ಯರಿಗೆ ವಿಧಾನಸೌಧ ಆವರಣ ಮುಕ್ತವಾಗಿಸಿ, ಅವರಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶ ದೊಂದಿಗೆ ಫೆ.28ರಿಂದ ಮಾ.3ರವರೆಗೆ ವಿಧಾನ ಸೌಧ ಆವರಣದಲ್ಲಿ ಪುಸ್ತಕ ಮತ್ತು ಸಾಹಿತ್ಯ ಮೇಳ ಆಯೋಜಿಸಲಾಗುತ್ತಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಅವರು ಮಂಗಳೂರು ಸಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸೌಧದ ಆವರಣ ದಲ್ಲಿ ಫೆ.28ರಿಂದ ಮಾ.3ರವರೆಗೆ ಪುಸ್ತಕ ಮತ್ತು ಸಾಹಿತ್ಯ ಮೇಳ ನಡೆಯಲಿದೆ. ನಾಡಿನ ಸಾಹಿತಿಗಳು, ಬುದ್ದಿಜೀವಿಗಳು, ಬರಹಗಾರರು, ಸಚಿವರು, ಶಾಸಕರು ಸೇರಿದಂತೆ ಪುಸ್ತಕಗಳನ್ನು ಪ್ರೀತಿಸುವವರು ಭಾಗವಹಿಸಲಿರುವ ಈ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.28ರಂದು ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಪುಸ್ತಕ ಮೇಳದೊಂದಿಗೆ ಸಾಹಿತ್ಯ ಚರ್ಚೆ, ಗೋಷ್ಠಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೂ ಇಲ್ಲಿ ಅವಕಾಶ ನೀಡಲಾಗಿದೆ. ಪುಸ್ತಕ ಮೇಳದ ಯಶಸ್ಸಿಗೆ ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದು ಅವರು ಹೇಳಿದರು.
ಪುಸ್ತಕ ಮೇಳದಲ್ಲಿ ಖಾಸಗಿ ಪುಸ್ತಕ ಪ್ರಕಾಶನ ಗಳಿಗೂ ಪುಸ್ತಕಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ಲೇಖಕರು ಅಥವಾ ಸಾಹಿತಿಗಳು ತಮ್ಮ ಪುಸ್ತಕಗಳನ್ನು ಬಿಡುಗಡೆಗೊಳಿಸಲು ಅವಕಾಶ ಕಲ್ಪಿಸಲಾಗುವುದು. ಇದಲ್ಲದೆ, ಉತ್ತಮ ಸಾಹಿತ್ಯ ಕೃತಿಗೆ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ ಎಂದು ಸ್ಪೀಕರ್ ವಿವರಿಸಿದರು.
ಶಾಸಕರ ಅನುದಾನದಲ್ಲಿ ಖರೀದಿಗೆ ಅವಕಾಶ: ಸ್ಪರ್ಧಾತ್ಮಕ ಪುಸ್ತಕಗಳು ಸೇರಿದಂತೆ ನಾನ ಪ್ರಕಾರದ ಬೇಡಿಕೆಯ ಪುಸ್ತಕಗಳನ್ನು ಶಾಸಕರ ಇಲ್ಲಿ ಖರೀದಿಸಿ ತಮ್ಮ ಕ್ಷೇತ್ರಗಳಲ್ಲಿನ ಗ್ರಂಥಾಲಯಗಳು, ಸರಕಾರಿ ಕಾಲೇಜುಗಳಿಗೆ ಪೂರೈಸಬಹುದು. ಇದಕ್ಕೆ ಪೂರಕವಾಗಿ ಶಾಸಕ ನಿಧಿಯಲ್ಲಿನ 2ರಿಂದ 3 ಲಕ್ಷರೂ.ವರೆಗೆ ಪುಸ್ತಕಗೆ ಖರೀದಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸಭಾಧ್ಯಕ್ಷರು ಹೇಳಿದರು.
CM Siddharamaiah ಪುಸ್ತಕ ಮೇಳದ ಅವಧಿಯಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು, ಮೇಳದ ಸಂದರ್ಭದಲ್ಲಿ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಇಲ್ಲಿ ಭೇಟಿ ನೀಡುವವರಿಗೆ ತರಹೇವಾರಿ ತಿಂಡಿ-ಖಾದ್ಯಗಳನ್ನು ಒಳಗೊಂಡ ಆಹಾರ ಮೇಳವೂ ಇರಲಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ವಿಚಾರಗೋಷ್ಠಿಗಳು, ಚರ್ಚೆಗಳೂ ನಡೆಯಲಿವೆ ಎಂದು ಯು.ಟಿ. ಖಾದರ್ ತಿಳಿಸಿದರು.
ಲಾಂಛನ ವಿನ್ಯಾಸ ಆಹ್ವಾನ
ನಾಲ್ಕು ದಿನಗಳ ಪುಸ್ತಕ-ಸಾಹಿತ್ಯ ಮೇಳಕ್ಕೆ ಸಂಬಂಧಪಟ್ಟಂತೆ ಪ್ರಶಸ್ತಿ ನೀಡಲು ಹಾಗೂ ಲಾಂಛನ ವಿನ್ಯಾಸಗೊಳಿಸಲು ಉದ್ದೇಶಿಸಿದ್ದು, ಈ ಸಂಬಂಧ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದೆ. ಪ್ರಶಸ್ತಿಗೆ ಸೂಕ್ತ ಹೆಸರನ್ನು ಹಾಗೂ ಪುಸ್ತಕ ಮೇಳದ ಲಾಂಛನವನ್ನು ಕಳುಹಿಸಬಹುದು. ಆಯ್ಕೆಯಾಗುವವರಿಗೆ ಬಹುಮಾನ ನೀಡಲಾಗುವುದು. ಆಸಕ್ತರು ಪುಸ್ತಕ ಮೇಳಕ್ಕೆ ಸರಿಹೊಂದುವ ಲಾಂಛನವನ್ನು ವಿನ್ಯಾಸಗೊಳಿಸಿ ಹಾಗೂ ಪ್ರಶಸ್ತಿಯ ಹೆಸರನ್ನು ತಮ್ಮ ವಿವರಗಳೊಂದಿಗೆ ಫೆ.3ರೊಳಗೆ ಇಮೇಲ್ secy-kla-kar@nic.in ಅಥವಾ ವಾಟ್ಸಾಪ್ ಸಂಖ್ಯೆ 9448108798 ಇದಕ್ಕೆ ಕಳುಹಿಸಬಹುದು ಎಂದು ವಿಧಾನಸಭಾಧ್ಯಕ್ಷರು ತಿಳಿಸಿದರು.
B.Y.Vijayendra ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಒಂದು ವಾರದ ಬಳಿಕ ಎಲ್ಲವೂ ಸರಿಯಾಗಲಿದೆ.ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ.ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲ. ವ್ಯವಸ್ಥಿತವಾಗಿ ಸಂಘಟನೆ ಚುನಾವಣೆ ನಡೆಯುತ್ತದೆ ಎಂದರೆ ಅದು ಬಿಜೆಪಿಲಿ ಮಾತ್ರ ಎಂದಿರು.
ಮಂಡಲ ಮಟ್ಟದಿಂದ ರಾಜ್ಯಮಟ್ಟದವರೆಗೂ ಚುನಾವಣೆ ನಡೆಯುತ್ತದೆ.ರಾಜ್ಯ, ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ವ್ಯವಸ್ಥಿತವಾಗಿ ನಡೆಯುತ್ತಿದೆ.ಪಕ್ಷದ ಕಾರ್ಯಕರ್ತರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕಳೆದ ಒಂದು ವರ್ಷದಿಂದ ಭ್ರಷ್ಟ, ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ. ನಾನು ಯಾವ ರೀತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆನೆ ಎಂಬುದು ಕಾರ್ಯಕರ್ತರಿಗೆ, ಪಕ್ಷದ ಮುಖಂಡರಿಗೆ ಗೊತ್ತಿದೆ ಎಂದು ಹೇಳಿದರು.
ನಾನು ರಾಜ್ಯದ ಬಿಜೆಪಿ ಅಧ್ಯಕ್ಷನಾಗುತ್ತೆನೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಜಿಲ್ಲಾಧ್ಯಕ್ಷ ಚುನಾವಣೆಗೂ ಪೈಪೋಟಿ ಇತ್ತು. ರಾಜ್ಯಾಧ್ಯಕ್ಷ ಸ್ಥಾನಕ್ಕೂ ಅದೇರೀತಿ ಪೈಪೋಟಿ ಇದೆ. ಎಲ್ಲದೂ ಕೇಂದ್ರದ ವರಿಷ್ಠರು ಗಮನಿಸುತ್ತಿದ್ದಾರೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
B.Y.Vijayendra ಯತ್ನಾಳ್ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂಬ ಸದಾನಂದಗೌಡ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಈಗಾಗಲೇ ಏನೇನು ಡ್ಯಾಮೇಜ್ ಆಗಬೇಕೋ ಅವೆಲ್ಲವೂ ಆಗಿ ಹೋಗಿದೆ. ಒಂದು ವಾರದಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬ ಉತ್ತರ ಸಿಗುತ್ತದೆ.ಅದಾದನಂತರ ಎಲ್ಲವೂ ಸರಿಯಾಗಲಿದೆ. ಕಳೆದ ವರ್ಷದಿಂದ ನಾನು ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಯಾರೇ ಏನೇ ಹೇಳಿದರೂ ಯಾರ ವಿರುದ್ಧವೂ ಬಹಿರಂಗ ಹೇಳಿಕೆ ಕೊಟ್ಟಿಲ್ಲ.
ಪಕ್ಷದ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ.ರಾಜ್ಯದ ಅಧ್ಯಕ್ಷನಾಗಿ ಕರ್ತವ್ಯದ ಅರಿವು ನನಗಿದೆ. ಬಹಳ ದೊಡ್ಡ ಜವಾಬ್ದಾರಿಯನ್ನು ಕಳೆದೊಂದು ವರ್ಷದಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೆನೆ.8-10 ದಿನಗಳಲ್ಲಿ ರಾಜ್ಯದ ಅಧ್ಯಕ್ಷ ಯಾರೆಂಬುದಕ್ಕೆ ಉತ್ತರ ಸಿಗಲಿದೆ ಬಳಿಕ ಎಲ್ಲಾ ಸಮಸ್ಯೆಗಳು ಬಗೆ ಹರಿಯಲಿದೆ.ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು.
Rotary Club Shivamogga ರೋಟರಿ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣಕುಮಾರ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ವಿಶೇಷ ಅಭಿಯಾನಗಳನ್ನು ನಡೆಸಿದೆ ಎಂದು ತಿಳಿಸಿದರು.
ರೋಟರಿ ಜಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್, ನಿಯೋಜಿತ ಸಹಾಯಕ ಗವರ್ನರ್ ಎಂ.ಬಿ.ಲಕ್ಷ್ಮಣ್ ಗೌಡ ಹಾಗೂ ಮಾಜಿ ಶಾಸಕ ಅಶೋಕ್ ನಾಯ್ಕ್ ಅವರನ್ನು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಸನ್ಮಾನಿಸಲಾಯಿತು. ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಮಾತನಾಡಿ, ಜಿಲ್ಲಾ ಗವರ್ನರ್ ಆಗಿ ಆಯ್ಕೆ ಆಗಿರುವುದು ಹೆಚ್ಚು ಸಂತಸ ತಂದಿದೆ.
ಜವಾಬ್ದಾರಿಯನ್ನು ಉತ್ತಮ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಿರ್ವಹಿಸುತ್ತೇನೆ. ಈವರೆಗೂ ರೋಟರಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದೇನೆ ಎಂದು ತಿಳಿಸಿದರು.
Rotary Club Shivamogga ನಿಯೋಜಿತ ಸಹಾಯಕ ಗವರ್ನರ್ ಎಂ.ಬಿ.ಲಕ್ಷ್ಮಣ್ ಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ರೋಟರಿ ಸಂಸ್ಥೆಗಳಿಂದ ಸಮಾಜಕ್ಕೆ ಉತ್ತಮವಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಮತ್ತಷ್ಟು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಈಶ್ವರ್ ಹಾಗೂ ಮಾಜಿ ಸಹಾಯಕ ಗವರ್ನರ್ ರವಿ ಕೂಟೋಜಿ, ಜಿ.ವಿಜಯಕುಮಾರ್, ಗೀತಾ ಜಗದೀಶ್, ಜಿ.ಎನ್.ಪ್ರಕಾಶ್, ಎಸ್.ಕೆ.ಕುಮಾರ್, ಅರುಣ್ ಕುಮಾರ್, ಚುಡಾಮಣಿ ಪವಾರ್, ಬಸವರಾಜ, ಜಯಶೀಲಶೆಟ್ಟಿ ಹಾಗೂ ಸೆಂಟ್ರಲ್ ಕಬ್ಬಿನ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ಹಾಜರಿದ್ದರು.
Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಇಂದು ಮಲ್ಲೇಶ್ವರಂ ಸಿ.ವಿ.ರಾಮನ್ ರಸ್ತೆಯಲ್ಲಿರುವ ಐ.ಐ.ಎಸ್.ಸಿ ಆವರಣದ ಜೆ.ಎನ್.ಟಾಟಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ 2023 ಮತ್ತು 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.
ಈ ಸಮಯದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ. ಬಿ.ಬಿ. ಕಾವೇರಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಆಯೇಶಾ ಖಾನಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ಸೇರಿದಂತೆ ಗಣ್ಯರು, ಹಿರಿಯ ಅಧಿಕಾರಿಗಳು, ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.
Malpe Beach ಶಿವಮೊಗ್ಗ ನಗರದ ಡೆಡ್ ಬಾಡಿ ರವಿ ಹಾಗೂ ಮಕ್ಕಳಾದ ಧನುಶ್ರೀಗೆ ಮಲ್ಪೆ ಬೀಚ್ ನಡೆದ ಟೀಮ್ ಈಶ್ವರ್ ಮಲ್ಪೆ ಆಪತ್ಬಾಂಧವ ಈಶ್ವರ ಮಲ್ಪೆ ಅವರ ಮಗ ದಿ, ನಿರಂಜನ್ ಸವಿ ನೆನಪಿಗಾಗಿ ಎರಡನೇ ವರ್ಷದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಹಾಗೂ ಸನ್ಮಾನಿಸಲಾಯಿತು. ಡೆಡ್ ಬಾಡಿ ರವಿ ಶಿವಮೊಗ್ಗ ಭಾಗದಲ್ಲಿ ತಮ್ಮ ಮಗಳಾದ ಕುಮಾರಿ ಧನುಶ್ರೀರವರೊಂದಿಗೆ ಸೇರಿ ಸುಮಾರು ೨೦೦೫ ನೇ ಸಾಲಿನಿಂದ ಇಲ್ಲಿಯವರೆವಿಗೂ ಶಿವಮೊಗ್ಗ ಜಿಲ್ಲ್ಲೆಯಾದಂತ ಅನಾಥ ಶವಗಳು ಕಂಡುಬಂದಂತ ಸಂದರ್ಭದಲ್ಲಿ ಪೋಲೀಸ್ ಇಲಾಖೆಯಿಂದ ಮಾಹಿತಿ ಬಂದ ತಕ್ಷಣ ಪೋಲಿಸ್‌ಸರ ಸಹಕಾರದೊಂದಿಗೆ ಅನಾಥ ಶವಗಳನ್ನು ಸ್ವಂತ ಆಟೋ ರಿಕ್ಷದಲ್ಲಿಯೇ ಸಾಗಿಸಿ ಶವ ಸಂಸ್ಕಾರ ಮಾಡಿ ಸಹಕರಿಸುತ್ತಿದ್ದಾರೆ. ಈ ನಿಸ್ವಾರ್ಥ ಸೇವೆಯನ್ನು ಶಿವಮೊಗ್ಗ ಜಿಲ್ಲಾ ಪೋಲೀಸ್ ಇಲಾಖೆ ಕೂಡ ಸನ್ಮಾನಿಸಿ ಗೌರವಿಸಿದೆ. ಈಶ್ವರ ಮಲ್ಪೆಯವರ ಈ ಸಮಾಜ ಸೇವೆಯ ಕಾಯಕವನ್ನು ನಿರಂತರವಾಗಿ ನಡೆಸುವಂತೆ ಭಗವಂತನು ಆಯುರಾರೋಗ್ಯ, ಸುಖ,ಶಾಂತಿ, ಸಂಪತ್ತು ನೀಡಿ ಕರುಣಿಸಲಿ ಎಂದು ಹರಸುತ್ತಾ ಗೌರವಿಸಿ ಸನ್ಮಾನಿಸಿದರು. ಶಿವಮೊಗ್ಗ ನಗರದ ಅನಾಥ ಶವಗಳ ಸಂಸ್ಕಾರ ಮಾಹಿತಿಗೆ ಡೆತ್ ಬಾಡಿ ರವಿ 9972226200 ಇವರನ್ನು ಸಂಪರ್ಕಿಸಬಹುದಾಗಿದೆ