Wednesday, February 19, 2025
Wednesday, February 19, 2025

Karnataka SC & ST Development Corporation ಕೊರಚರಹಟ್ಟಿ, ಮೂಲಭೂತ ಸೌಕರ್ಯಗಳ‌ ಕೊರತೆ‌ ಬಗ್ಗೆ ನಿವಾಸಿಗಳಿಂದ ಅಹವಾಲು ಸಲ್ಲಿಕೆ

Date:

Karnataka SC & ST Development Corporation ಕೊರಚರ ಹಟ್ಟಿ, ತಿಮ್ಲಾಪುರ ಗ್ರಾಮ ಹೊಳೆಹೊನ್ನೂರು ಹೋಬಳಿ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ /ವರ್ಗಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ. ವೀಕ್ಷೆಣೆ ಮಾಡಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಜಾಗೃತಿ ಮೂಡಿಸಿದೆ..

ಇ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಅಲೆಮಾರಿ ಕೊರಚ ಸಮುದಾಯದ ಸುಮಾರು 45 ಕುಟುಂಬಗಳು ಹಕ್ಕುಪತ್ರ ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ತಮ್ಮ ಅಹವಾಲು ಸಲ್ಲಿಸಿದರು.

ಈ ಪ್ರದೇಶವು ಕಂದಾಯ ಉಪಗ್ರಾಮಕ್ಕೆ ಒಳಪಡಲು ಎಲ್ಲ ಅವಕಾಶವಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮಾರು‌ 50 ವರ್ಷಗಳಿಂದಲು ಸರ್ಕಾರದ ಅಭಿವೃದ್ಧಿ ಯೋಜನೆಗಳು ತಲುಪದೆ, ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದಿರುವುದು ಬೇಸರದ ಸಂಗತಿ.

Karnataka SC & ST Development Corporation ಮನೆಯೊಂದು ಸಂಪೂರ್ಣವಾಗಿ ಹಾನಿಯಾಗಿ ನೆಲಸಮವಾದ ಕಾರಣ ಗುಡಿಲಸು ನಿರ್ಮಿಸಿಕೊಂಡು ಪುಟ್ಟ ಮಗುವೊಂದಿಗೆ ವಿಧವೆ ಹೆಣ್ಣುಮಗಳು ಜೀವನ ಸಾಗಿಸುತ್ತಿದ್ದರು ಸಹ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಅತ್ಯಂತ ಅಮಾನವೀಯ ಸಂಗತಿಯಾಗಿದೆ.

ಕೂಡಲೆ ಇಲ್ಲಿನ ಎಲ್ಲಾ ಸಮಸ್ಯೆಯನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಉಪ ತಹಶಿಲ್ದಾರರ ವಿಜಯ್ ಕುಮಾರ್‌, ಸಹಾಯಕ ನಿರ್ದೇಶಕಿ ಸವಿತ ರವರಿಗೆ ತಾಕೀತು ಮಾಡಿ ಒಂದು ವಾರದ ಒಳಗಾಗಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಹಕ್ಕುಪತ್ರವನ್ನು ಹಂಚಲು ಕ್ರಮ ವಹಿಸುವಂತೆ ಸೂಚಿಸಲಾಯಿತು.

ನಗರ ಸಭೆ ಮುಖ್ಯಾಧಿಕಾರಿ ಸುಹಾಸಿನಿ , ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್.ಆನಂದ್ ಕುಮಾರ್ , ಮುಖಂಡರಾದ ಲಕ್ಷ್ಮೀದೇವಿ, ಶಿವಕುಮಾರ್, ಸಂತೋಷ್, ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Chennabasappa ಜಗಜೀವನ್ ರಾಂ ಭವನದ ಕಾಮಗಾರಿ ಪರಿಶಿಲಿಸಿದ ಶಾಸಕ‌ ಎಸ್.ಎನ್.ಚನ್ನಬಸಪ್ಪ

S.N. Chennabasappa ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು...

Shikaripura Horticulture Department ತರಕಾರಿ ಬೀಜಗಳ ‌ಕಿಟ್ ವಿತರಣೆಗೆ ಅರ್ಜಿ ಆಹ್ವಾನ

Shikaripura Horticulture Department ಶಿಕಾರಿಪುರ ತೋಟಗಾರಿಕೆ ಇಲಾಖೆಯು 2024-25ನೇ ಸಾಲಿನಲ್ಲಿ ತರಕಾರಿ...

Shimoga Rangayana ಫೆಬ್ರವರಿ 13. ಶಿವಮೊಗ್ಗ ರಂಗಾಯಣ ಆಶ್ರಯದಲ್ಲಿ ” ಮೈ ಫ್ಯಾಮಿಲಿ‌” ನಾಟಕ‌ ಪ್ರದರ್ಶನ

Shimoga Rangayana ಶಿವಮೊಗ್ಗ ರಂಗಾಯಣದ ಆಯೋಜನೆಯಲ್ಲಿ ಫೆ. 13 ರಂದು ಸಂಜೆ...