Thursday, March 12, 2026
Thursday, March 12, 2026
Home Blog Page 407

Klive Special Article ಹೊಸ ಹೊಳಹುಗಳ ಬಳುಕಿನಲ್ಲಿ ಸಾಗುವ ” ಸೀತಾಪಹರಣ” ಯಕ್ಷಗಾನ ಪ್ರದರ್ಶನ. ಸಮೀಕ್ಷೆ -ಡಾ.ಮೈತ್ರೇಯಿ‌ ಆದಿತ್ಯ ಪ್ರಸಾದ್

0

Klive Special Article ಯಕ್ಷಗಾನವು ನಮ್ಮ ಸಂಸ್ಕೃತಿಯ ಪ್ರತೀಕ. ಅದು ತನ್ನ ವಿಶಿಷ್ಟ ಶೈಲಿಯಿಂದಲೇ ಜನರ ಮನರಂಜಿಸಿದೆ. ಎಲ್ಲ ಪ್ರಕಾರಗಳಿಗೂ ಇರುವಂತೆ ಇದಕ್ಕೊಂದು ಸಾಂಪ್ರದಾಯಿಕ ಚೌಕಟ್ಟಿದೆ. ಕಲೆಗೆ ಸಹೃದಯನ ಮನಸ್ಸು ಗೆಲ್ಲುವ ತಾಕತ್ತಿದೆ ರಸಾಸ್ವಾದಕ್ಕೆ ಅದು ಸ್ಪಂದಿಸುತ್ತದೆ. ಹೊಸತನಕ್ಕೆ ತೆರೆದುಕೊಳ್ಳುವ ಭರದಲ್ಲಿ ಒಮ್ಮೊಮ್ಮೆ ಮೂಲ ಸಾಂಪ್ರದಾಯಿಕತೆಯನ್ನು ಬಿಟ್ಟು ಹೋಗುವ ಅಪಾಯಕ್ಕೆ ಸಿಲುಕಿರುವ ಕಲೆಗಳಲ್ಲಿ ಯಕ್ಷಗಾನವೂ ಒಂದು. ಆದರೆ ಇಡಗುಂಜಿಯ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿ ತನ್ನೆಲ್ಲ ಸಾಂಪ್ರದಾಯಿಕತೆಯನ್ನು ಉಳಿಸಿಕೊಳ್ಳುತ್ತಲೇ ಹೊಸ ಹೊಳಹುಗಳಿಗೆ ತೆರೆದುಕೊಳ್ಳುತ್ತಾ ಅದು UNESCO ದ ಮಾನ್ಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ಅನೇಕ ಕಲಾ ಪ್ರಕಾರಗಳಿದ್ದರೂ ಸಹ ಸಧ್ಯಕ್ಕೆ ಮಾನ್ಯತೆ ದೊರೆತಿರುವುದು ಕೇವಲ 8 ಕಲಾ ಪ್ರಕಾರಗಳಿಗೆ ಮಾತ್ರ. ಅದರಲ್ಲಿ ನಮ್ಮ ಕರ್ನಾಟಕದ ಗಂಡುಮಟ್ಟಿದ ಕಲೆ ಎಂದೇ ಖ್ಯಾತಿಯಾಗಿರುವ ( ಇದೀಗ ಸ್ತ್ರೀಯರು ಪಾಲ್ಗೊಳ್ಳುತ್ತಿರುವ ) ಯಕ್ಷಗಾನವು ಒಂದೆಂಬ ಹೆಮ್ಮೆ ನಮ್ಮನ್ನು ಮತ್ತಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತದೆ. ಕರಾವಳಿ ಹಾಗೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಪ್ರಸಿದ್ಧವಾದ ಈ ಕಲೆ ಪ್ರಸ್ತುತ ಎಲ್ಲೆಡೆ ಹರಡುತ್ತಿದೆ. ಇತ್ತೀಚಿನ ಎಷ್ಟೋ ಯಕ್ಷಗಾನ ಮೇಳಗಳು ಪ್ರೇಕ್ಷಕ ಪ್ರಭುಗಳನ್ನು ತನ್ನತ್ತ ಸೆಳೆಯಲು ಮಾಡುವ ಏನೇನೋ ಗಿಮಿಕ್ಕುಗಳು ಯಕ್ಷಗಾನದ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿಬಿಡುತ್ತಿದೆ. ಹಳೆ ಬೇರಿನೊಂದಿಗೆ ಹೊಸ ಚಿಗುರಿದ್ದರೆ ಮರ ಸೊಗಸೆನಿಸುವಂತೆ ಆಗಬೇಕೆ ಹೊರತು ಪೂರ್ಣ ಹೊಸತನಕ್ಕೆ ತೆರೆದುಕೊಳ್ಳುವುದಲ್ಲ. ಆ ರೀತಿಯಲ್ಲಿ 90ರ ವಸಂತದಲ್ಲಿ ತುಂಬು ಶ್ರೀಮಂತವಾಗಿ ತನ್ನ ಘನತೆ ಗಾಂಭೀರ್ಯವನ್ನು ಹಾಗೆ ಉಳಿಸಿಕೊಂಡು ಬಂದಿರುವ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಶಿವಾನಂದ ಹೆಗಡೆಯವರ ಸಾರಥ್ಯದಲ್ಲಿ ಮುನ್ನಡೆಯುತ್ತಿದೆ. Klive Special Article ಸಾಂಪ್ರದಾಯಿಕತೆಗೆ ಈ ಮೇಳ ಎಷ್ಟು ಒಗ್ಗಿಕೊಂಡಿದೆ ಎಂದರೆ, ಎಷ್ಟೋ ಮನೆಗಳಲ್ಲಿ ತಂದೆ ಕೃಷಿ ಜಮೀನನ್ನು ಮಾಡುತ್ತಿದ್ದರೆ ಅದು ತುಂಬಾ ಕಷ್ಟದ ಕೆಲಸ ನೀನು ಬೇರೆ ಯಾವುದಾದರೂ ಹೆಚ್ಚು ಸಂಬಳ ತರುವ ಉದ್ಯೋಗ ಮಾಡು ಮಗನೇ. ಈ ಕಷ್ಟಗಳು ನಮಗೆ ಕೊನೆಯಾಗಲಿ ಎಂದು ಹೇಳಿ ಕಳುಹಿಸುವ ತಂದೆ ತಾಯಿಯರೇ ಹೆಚ್ಚಿರುವ ಈ ಕಾಲಘಟ್ಟದಲ್ಲಿ ಹಳ್ಳಿಗಳು ಬರಿದಾಗುತ್ತಿವೆ ಕೇವಲ ವೃದ್ಧಾಶ್ರಮಗಳಂತೆ ಆಗುತ್ತಿದೆ. ಹಾಗಾದಾಗ ಮೂಲ ಸ್ರೋತವನ್ನೇ ಮರೆಯುವ ಸ್ಥಿತಿ ಬಂದಿದೆ. ಅದೇ ರೀತಿಯಲ್ಲಿ ನಮ್ಮ ಶಿವಾನಂದಣ್ಣ ಯೋಚನೆ ಮಾಡಿದರೆ ಮುಂದಿನ ತಲೆಮಾರು ರಂಗದ ಮೇಲೆ ಬರದೆ ಅಲ್ಲಿಗೆ ಕೊನೆಯಾಗುವಂತಾಗುತ್ತಿತ್ತು ಈ ಮೇಳ. ಆದರೆ ಬಹು ಸಮರ್ಥವಾಗಿ ತಮ್ಮ ಹೆಗಲಿನ ನೊಗವನ್ನು ಮುಂದೆ ತನ್ನ ಮಗನ ಹೆಗಲಿಗೆ ದಾಟಿಸಿದಂತೆ ಭಾಸವಾಗುತ್ತಿದೆ. ಅಷ್ಟು ಸಾಂಪ್ರದಾಯಿಕತೆಯನ್ನು ರಕ್ತಗತ ಮಾಡಿಕೊಂಡು ಬಂದಿದ್ದಾರೆಂದರೆ ಅತಿಶಯೋಕ್ತಿ ಅಲ್ಲ.

ಇಷ್ಟೆಲ್ಲಾ ಬರೆಯಲು ಕಾರಣವೇನೆಂದರೆ ಇತ್ತೀಚಿಗೆ ಅಭ್ಯುದಯ ಹಾಗೂ ಶ್ರೀಮಯ ಶಿವಮೊಗ್ಗ ಇವರುಗಳು ಸೇರಿ ಆಯೋಜಿಸಿದ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಇಡಗುಂಜಿ ಮೇಳದ ಕೆರೆಮನೆ ಶಿವಾನಂದ ಹೆಗಡೆಯವರಿಗೆ ಸನ್ಮಾನ ಹಾಗೂ ಅದೇ ಮೇಳದ ‘ಸೀತಾಪಹರಣ ‘ ಎಂಬ ಪ್ರಸಂಗ ನೋಡಿ ಬಂದದ್ದರಿಂದ. ನಿಜಕ್ಕೂ ಅದ್ಭುತವಾಗಿ ಮೂಡಿ ಬಂದ ಪ್ರಸಂಗ. ಸೀತಾಪಹರಣ ಎಂಬುದು ತುಂಬಾ ಸಣ್ಣ ಕಥಾ ಹಂದರ ಅದನ್ನು ಪ್ರಸ್ತುತಪಡಿಸಿದ ರೀತಿ ಹೃನ್ಮನಗಳಿಗೆ ರಸದೌತಣ ಮಾಡಿಸಿದಂತೆ ಇತ್ತು. ಕಣ್ಣಿಗೆ ಹಬ್ಬ, ಮನಕ್ಕೆ ಆನಂದ ತಂದಿತು.

Klive Special Article ದಂಡಕಾರಣ್ಯದಲ್ಲಿ ರಾಮ ಸೀತೆ ಲಕ್ಷ್ಮಣರಿರುವಾಗಲೇ ಶೂರ್ಪನಖಿಗೆ ಆದ ಅವಮಾನ. ಅದನ್ನು ಅಣ್ಣ ರಾವಣನಿಗೆ ಹೇಳಿ ತನಗಾದ ನೋವು ಅವಮಾನ ಅದು ರಾಜನಾದ ನಿನಗೂ ಲಂಕೆಗೂ ಅವಮಾನ ಎಂದು ಬಿಂಬಿಸುವುದು. ನಂತರ ರಾವಣ ಮಾರೀಚನ ಬಳಿ ತೆರಳಿ ಸೀತೆ ಅಪಹರಿಸಲು ಸಹಾಯ ಬೇಡಿದಾಗ ರಾಮನ ತಂಟೆಗೆ ಹೋಗಲು ಮೊದಲು ಒಪ್ಪದ ಮಾರೀಚ ರಾಮಬಾಣಕ್ಕೆ ಜೀವ ಅಥವಾ ಜೀವನದ ಗತಿ ಬದಲಿಸುವ ಶಕ್ತಿ ಇದೆ ಎಂದು ಹೇಳಿ ಪರಿಪರಿಯಾಗಿ ರಾಮನ ತಂಟೆಗೆ ಹೋಗುವುದು ಬೇಡ ಎಂದಾಗ ಒಪ್ಪದ ರಾವಣನು ಮಾರೀಚನನ್ನು ಸಾಯಿಸಲು ಮುಂದಾಗುತ್ತಾನೆ. ಆಗ ಮಾರೀಚ ತನಗೆ ಹೇಗೂ ಶಿಕ್ಷೆ ಆಗುವುದಾದರೆ ಅದು ಯಾರಿಂದ ಆಗುತ್ತದೆ ಎಂಬುದು ಸಹ ಮುಖ್ಯ. ಹಾಗಾಗಿ ಹೇಗೂ ಪ್ರಾಣ ಬಿಡುವುದೇ ಆದರೆ ನಾನು ರಾಮನ ಬಾಣಕ್ಕೆ ತುತ್ತಾಗುತ್ತೇನೆ ಎಂದೆನ್ನುವ ಸುಂದರ ಸನ್ನಿವೇಶ, ಇವುಗಳು ಕಟ್ಟಿಕೊಡುತ್ತಿದ್ದ ಮೌಲ್ಯಗಳೆಷ್ಟು ಸೊಗಸು ಎಂದು ಅಂದುಕೊಂಡೆ. ಏಕೆಂದರೆ ಇದೇ ಸನ್ನಿವೇಶ ಇಟ್ಟುಕೊಂಡೆ ಮಕ್ಕಳಿಗೆ ತರಗತಿಯಲ್ಲಿ ಶಿಕ್ಷಕರ ಬಳಿ ಶಿಕ್ಷೆಗೊಳಗಾಗದೆ ಆರಕ್ಷಕರ ಬಳಿ ಶಿಕ್ಷ ಪಡೆಯುವಂತಾಗಿದೆ ಎಂದು ಹೇಳುತ್ತಿರುತ್ತೇನೆ. ಎಷ್ಟು ನಿಜ ಅಲ್ವಾ.
ಈ ಎಲ್ಲವನ್ನು ಅದ್ಭುತವಾಗಿ ನಿರೂಪಿಸುತ್ತಲೇ ಮಾಯಾಜಿಂಕೆಯಾಗಿ ಮಾರೀಚ ಬಂದಾಗ ಮತ್ತಷ್ಟು ಯಕ್ಷಗಾನ ಕಳೆಗಟ್ಟಿತ್ತು. ನಂತರ ಬಂದ ಸನ್ಯಾಸಿಯ ವೇಷದ ರಾವಣ, ಆನಂತರ ತನ್ನ ನಿಜ ರೂಪ ತೋರಿಸುವ ಬಗೆ, ಸೀತೆಯನ್ನು ಕೊಂಡೊಯ್ಯುವ ಸನ್ನಿವೇಶ, ಸಂಪಾತಿಯ ಆಗಮನ ಇವೆಲ್ಲವೂ ರೋಚಕತೆಯಿಂದ ಕೂಡಿ ಕಣ್ಮನಗಳಿಗೆ ಸಂತೋಷ ನೀಡಿ ಅದು ಪ್ರದರ್ಶನವಾಗದೆ ದರ್ಶನದ ಅನುಭವ ತಂದೊಡ್ಡಿತು. ಎಲ್ಲರೂ ಅದ್ಭುತವಾಗಿ ನಟಿಸಿದವರೇ. ಅಲ್ಲಿ ಬಳಸುವ ಸ್ವಚ್ಛ ಕನ್ನಡದ ಭಾಷೆ ನೋಡಿದರೆ ಕಲಾ ಮಾಧ್ಯಮಗಳಲ್ಲಿ ಯಕ್ಷಗಾನದಲ್ಲಿ ಮಾತ್ರ ಸ್ವಚ್ಛ ಕನ್ನಡ ಭಾಷೆ ಜೀವಂತವಾಗಿರುವುದು. ಹಾಗಾಗಿ ಒಟ್ಟಾರೆ ಹೇಳುವುದಾದರೆ ಬಹಳ ದಿನಗಳ ನಂತರ ಶಾಸ್ತ್ರೀಯ ಸಾಂಪ್ರದಾಯಿಕ ಶೈಲಿಯ ಯಕ್ಷಗಾನ ನೋಡಲು ಅವಕಾಶ ಮಾಡಿಕೊಟ್ಟ ಸಹೃದಯರೆಲ್ಲರಿಗೂ ಅನಂತಾನಂತ ಧನ್ಯವಾದಗಳು. ಹಾಗೂ ಪ್ರಸಂಗ ಒಂದು ಚೆನ್ನಾಗಿ ಜನ ವೀಕ್ಷಿಸುವಂತಾಗಲು ಸಿನಿಮಾ ಹಾಡು ಬೇಕು ಗಿಮಿಕ್ಸ್ ಬೇಕು ಪ್ರೇಕ್ಷಕರು ಕೇಳ್ತಾರೆ ಅದನ್ನು ಅಂತೆಲ್ಲ ಅಭಿಮಾನದಿಂದ ಹೇಳುವವರು ಇಡಗುಂಜಿ ಮೇಳದ ಆಟವನ್ನು ಒಮ್ಮೆ ನೋಡಬೇಕು. ಜನ ಮೆಚ್ಚಿ ಕುತೂಹಲದಿಂದ ವೀಕ್ಷಿಸುವಂತೆ ಮಾಡಿದ 90ರ ಸಂಭ್ರಮದಲ್ಲಿರುವ ಮೇಳಕ್ಕೂ ಅಭಿನಂದನೆಗಳು.

ಡಾ. ಮೈತ್ರೇಯಿ ಆದಿತ್ಯ ಪ್ರಸಾದ್
ಉಪನ್ಯಾಸಕರು ಪೇಸ್ ಕಾಲೇಜ್ ಶಿವಮೊಗ್ಗ.
ಚಿತ್ರಕೃಪೆ : ಸಿದ್ದಾರ್ಥ ಎ ಕಶ್ಯಪ.

DC Shivamogga ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ. ಜಿಲ್ಲಾ ಸರ್ವೇಕ್ಷಣಾ ಕಾರ್ಯಾಲಯ ಪ್ರಕಟಣೆ

0

DC Shivamogga ಶಿವಮೊಗ್ಗ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಐ.ಡಿ.ಎಸ್.ಪಿ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಎಪಿಡಮಾಲಾಜಿಸ್ಟ್ 01 ಹುದ್ದೆ ಮತ್ತು ಹೆಚ್.ಡಬ್ಲ್ಯೂಸಿ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರ 01 ಹುದ್ದೆಯ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಚೇರಿಯ ಪ್ರಕಟಣ ಫಲಕದಲ್ಲಿ ಪ್ರಕಟಿಸಲಾಗಿದ್ದು, ಯಾವುದೇ ಆಕ್ಷೇಪಣೆ ಇದ್ದಲ್ಲಿ 7 ದಿನದೊಳಗಾಗಿ ಲಿಖಿತವಾಗಿ ಸಲ್ಲಿಸುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Mysore University ಮುಖ್ಯ ಸಾರಿಗೆ ಇಂಜಿನಿಯರ್ ಕೆ‌‌.ವೀರೇಗೌಡರಿಗೆ ಮೈಸೂರ ವಿವಿಯ ಗೌರವ ಡಾಕ್ಟರೇಟ್

0

Mysore University ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಬಾಬು ಕೆ ವೀರೇಗೌಡ ಅವರಿಗೆ ನೀಡಲಾಗಿರುವ ಗೌರವ ಡಾಕ್ಟರೇಟ್ ಅನ್ನು ರಾಜಭವನದ ಬಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, “ಮೈಸೂರು ವಿಶ್ವವಿದ್ಯಾಲಯವು ದೇಶದ ಆರನೇ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯದ ಮೊದಲ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯವು ಈ ದೇಶಕ್ಕೆ ಅನೇಕ ವಿಜ್ಞಾನಿಗಳು, ತತ್ವಜ್ಞಾನಿಗಳು ಮತ್ತು ರಾಜಕಾರಣಿಗಳನ್ನು ನೀಡಿದ್ದು, ಇವೆರಲ್ಲರೂ ಕರ್ನಾಟಕ ಮತ್ತು ಭಾರತದ ನಿರ್ಮಾಣದಲ್ಲಿ ಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ” ಎಂದು ಶ್ಲಾಘಿಸಿದರು.

“ಘಟಿಕೋತ್ಸವದ ಸಂದರ್ಭದಲ್ಲಿ ಶಿಕ್ಷಣ, ವಿಜ್ಞಾನ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮತ್ತು ದೇಶದ ಪ್ರಗತಿಗೆ ಗಣನೀಯ ಕೊಡುಗೆ ನೀಡಿದ ಮಹನೀಯರಿಗೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ” ಎಂದು ಹೇಳಿದರು.

Mysore University “ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಈ ದಿನ ಡಾ.ಬಾಬು ಕೆ ವೀರೇಗೌಡ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಎಚ್ ಎನ್ ಟಿಬಿ ಯ ಈಶಾನ್ಯ ವಿಭಾಗದ ಉಪಾಧ್ಯಕ್ಷರಾಗಿ ಮತ್ತು ಮುಖ್ಯಸಾರಿಗೆ ಮತ್ತು ಸಂಚಾರ ಇಂಜಿನಿಯರ್ ಆಗಿ, ನೀವು ಅನೇಕ ಸಂಕೀರ್ಣ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಉನ್ನತ ಮಟ್ಟದ ಮೂಲಸೌಕರ್ಯ ಯೋಜನೆಗಳ ನಿಮ್ಮ ಸಮರ್ಥ ನಿರ್ವಹಣೆಗಾಗಿ ನೀವು ಪ್ರಸಿದ್ಧರಾಗಿದ್ದೀರಿ. ಯುನೈಟೆಡ್ ಸ್ಟೇಟ್ಸ್‌ನ ಅನೇಕ ದೇವಾಲಯಗಳಿಗೆ ಪ್ರೊ ಬೊನೊ ಎಂಜಿನಿಯರಿಂಗ್ ಮತ್ತು ಸೈಟ್ ವಿನ್ಯಾಸ ಸೇವೆಗಳ ಮೂಲಕ ನೀವು ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಅವರಿಗೆ ಅಭಿನಂದಿಸುತ್ತಾ, ಅವರ ಸಮಾಜ ಸೇವೆ ಹೀಗೆ ನಿರಂತರವಾಗಿರಲಿ ಇತರರಿಗೆ ಸ್ಫೂರ್ತಿಯಾಗಲಿ” ಎಂದು ಆಶಿಸುತ್ತೇನೆಂದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

DC Shivamogga ಡೆಂಗ್ಯೂ, ಚಿಕುನ್ ಗುನ್ಯಾ, ಮಂಗನ ಕಾಯಿಲೆ ಉಲ್ಬಣವಾಗದಂತೆ ಮುನ್ನೆಚ್ಚರಿಕೆ ವಹಿಸಿ & ಗುರುದತ್ತ ಹೆಗಡೆ

0

DC Shivamogga ಪ್ರತಿವರ್ಷ ಬೇಸಿಗೆಯಲ್ಲಿ ಉಲ್ಬಣಗೊಳ್ಳಬಹುದಾದ ಡೇಂಗ್ಯೂ, ಚಿಕೂನ್‌ಗುನ್ಯ ಮತ್ತು ಮಂಗನಕಾಯಿಲೆಯಂತಹ ರೋಗಗಳ ಉಲ್ಬಣಗೊಳ್ಳದಂತೆ ನಿಯಂತ್ರಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಅಗತ್ಯ ಸುರಕ್ಷತಾ ಕ್ರಮಗಳನ್ನುಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಡೇಂಗ್ಯೂ, ಚಿಕೂನ್‌ಗುನ್ಯ ಮತ್ತು ಮಂಗನಕಾಯಿಲೆಯ ಇಂದಿನ ಸ್ಥಿತಿಗತಿ ಹಾಗೂ ಕೈಗೊಳ್ಳಬಹುದಾದ ನಿಯಂತ್ರನ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ವೈದ್ಯಾಧಿಕಾರಿಗಳೊಂದಿಗಿನ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯ ಯಾವುದೇ ತಾಲೂಕುಗಳ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ನಿವಾಸಿಗಳು ಯಾವುದೇ ಜ್ವರ ಬಂದಲ್ಲಿ ತಕ್ಷಣದ ಕ್ರಮವಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ, ತಪಾಸಣೆ ಮಾಡಿಸಿ, ಚಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದ ಅವರು, ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ತಕ್ಷಣದ ಚಿಕಿತ್ಸೆಗೆ ಕ್ರಮಕೈಗೊಳ್ಳಲಾಗಿದ್ದು, ಸಾರ್ವಜನಿಕರು ಈ ಸದವಕಾಶದ ಲಾಭ ಪಡೆದುಕೊಳ್ಳಬೇಕಲ್ಲದೇ ಆರೋಗ್ಯ ಇಲಾಖೆಯು ಸೂಚಿಸುವ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಅವರು ಸಲಹೆ ನೀಡಿದರು.
ಈಗಾಗಲೇ ಡೇಂಗ್ಯೂ ಜ್ವರದ ತಪಾಸಣೆಗಾಗಿ ಪ್ರಸಕ್ತ ಮಾಹೆಯಲ್ಲಿ ಈಗಾಗಲೇ ಶಂಕಿತ 390 ಜನರ ರಕ್ತಪರೀಕ್ಷೆ ನಡೆಸಿ, ಅವರಲ್ಲಿ ಬಾಧಿತ 28ಜನರನ್ನು ಗುರುತಿಸಿ, ಸಕಾಲಿಕ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಪರೀಕ್ಷೆ ನಡೆಸಿದ 223 ಮಂದಿಯಲ್ಲಿ 23ಮಂದಿ ಚಿಕನ್‌ಗುನ್ಯ ಸೋಂಕಿಗೆ ತುತ್ತಾಗಿರುವುದು ಪತ್ತೆ ಮಾಡಲಾಗಿದ್ದು ಸಕಾಲಿಕವಾಗಿ ಚಿಕಿತ್ಸೆ ನೀಡಲಾಗಿದೆ ಎಂದರು.
ಸಾರ್ವಜನಿಕರು ತಾವು ವಾಸಿಸುವ ಸುತ್ತಮುತ್ತಲ ಪ್ರದೇಶದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಅಲ್ಲದೇ ಲಾರ್ವಾಗಳನ್ನು ನಾಶಪಡಿಸಲು ಗಮನಹರಿಸಬೇಕು. ವಿಶೇಷವಾಗಿ ನಿರ್ಮಾಣಕಾರ್ಯ, ಪ್ರಗತಿಯಲ್ಲಿರುವ ನಿವೇಶನಗಳು, ಪಾಳುಬಿದ್ದ ನಿರ್ಮಾಣಗಳ ನಿವೇಶನಗಳು, ಖಾಲಿ ನಿವೇಶನಗಳು, ಬಯಲು ಜಮೀನು ಮುಂತಾದವುಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯಾಗದಂತೆ ನೋಡಿಕೊಳ್ಳುವಂತೆ ಅವರು ಸೂಚಿಸಿದ ಅವರು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸುವಂತೆ ಅವರು ಸೂಚಿಸಿದರು.
DC Shivamogga ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು ಡೇಂಗ್ಯೂ ತಪಾಸಣೆಯನ್ನು ಹೆಚ್ಚಿಸಲು ಗಮಹರಿಸಬೇಕು.ಸೋಂಕಿತರು, ಶಂಕಿತರು ಚಿಕಿತ್ಸಾಲಯಕ್ಕೆ ಬಂದಲ್ಲಿ ಯಾವುದೇ ರೋಗಿಯನ್ನು ನಿರ್ಲಕ್ಷಿಸದೇ ಸಕಾಲಿಕ ಚಿಕಿತ್ಸೆ ನೀಡಿ ಅಮೂಲ್ಯ ಜೀವ ರಕ್ಷಣೆಗೆ ಮುಂದಾಗಬೇಕು. ಅಲ್ಲದೇ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಕಾಲಕಾಲಿಕವಾಗಿ ಲಾರ್ವಾ ಸಮೀಕ್ಷೆ ನಡೆಸಬೇಕು. ಅಗತ್ಯವಿದ್ದಲ್ಲಿ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದುಕೊಳ್ಳಬೇಕು ಎಂದ ಅವರು, ಡೇಂಗ್ಯೂ ನಿಯಂತ್ರಣ ಕಾರ್ಯಕ್ರಮಗಳು ನಿರಂತರವಾಗಿರುವಂತೆ ಆರೋಗ್ಯಾಧಿಕಾರಿಗಳು ನೋಡಿಕೊಳ್ಳುವಂತೆ ಅವರು ಸೂಚಿಸಿದರು.

• ಜಿಲ್ಲೆಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಡೇಂಗ್ಯೂ ಬಾದಿತರು ದಾಖಲಾದಲ್ಲಿ ಅವರ ಬಗ್ಗೆ ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಿ. ಇದರಿಂದಾಗಿ ಕಾಯಿಲೆಯ ನಿಯಂತ್ರಣಕ್ಕೆ ಸಕಾಲಿಕ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡುದಪ್ಪ ಕುಸುಬಿ ತಿಳಿಸಿದ್ದಾರೆ.

ಮಂಗನಕಾಯಿಲೆ ನಿಯಂತ್ರಣ ಕ್ರಮ :
ಈಗಾಗಲೇ ಮಂಗನಕಾಯಿಲೆ ಕಂಡುಬಂದ ತಾಲೂಕಗಳ ಆಯ್ದ ಪ್ರದೇಶಗಳಲ್ಲಿ ಆಯಾ ತಾಲೂಕು ವೈದ್ಯಾಧಿಕಾರಿಗಳು ಕಾಯಿಲೆ ಹರಡದಂತೆ ತಕ್ಷಣದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದ ಅವರು, ಅದರ ನಿಯಂತ್ರಣ ಕ್ರಮವಾಗಿ ಸ್ಥಳೀಯ ನಿವಾಸಿಗಳಿಗೆ ಔ಼ಷಧಗಳನ್ನು ವಿತರಿಸಿ, ಬಳಸಲು ಸೂಚಿಸಿದರು.
ಮಂಗನ ಕಾಯಿಲೆಯನ್ನು ಸಕಾಲದಲ್ಲಿ ಪತ್ತೆಹಚ್ಚಿ ಕ್ರಮ ವಹಿಸಲು ಮಂಗಳ ಸಾವಿನ ಪ್ರಕರಣಗಳನ್ನು ಗುರುತಿಸಿ, ಪರೀಕ್ಷೆಗೊಳಪಡಿಸಬೇಕು. ಇದರಿಂದಾಗಿ ಸಕಾಲಿಕ ನಿಯಂತ್ರಣ ಕ್ರಮ ಸಾಧ್ಯವಾಗಲಿದೆ. ಅರಣ್ಯ ರಕ್ಷಕರು ತಮ್ಮ ಕರ್ತವ್ಯದ ಅವಧಿಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಸ್ಥಳೀಯ ಗ್ರಾಮಪಂಚಾಯಿತಿಗಳ ಆಡಳಿತಾಧಿಕಾರಿಗಳು ಮಂಗಗಳು ಮರಣಹೊಂದಿದ ಸ್ಥಳದಲ್ಲಿ ಸಾರ್ವಜನಿಕರು ಸಂಚರಿಸದಂತೆ ಸೂಚನಾಫಲಕಗಳನ್ನು ಅಳವಡಿಸುವಂತೆ ಹಾಗೂ ಸಕ್ರಿಯ ಉಣುಗಗಳು ಇರುವ ಸಾಧ್ಯತೆಯ ಬಗ್ಗೆ ಪ್ರಕಟಿಸುವಂತೆ ಅವರು ಸಲಹೆ ನೀಡಿದರು.

• ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳಿಗೆ ಒಳಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಕಾಲಿಕ ಚಿಕಿತ್ಸೆಗಾಗಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಸುಸಜ್ಜಿತವಾಗಿ 10ಹಾಸಿಗೆಗಳನ್ನು ಕಾಯ್ದಿರಸಲಾಗಿದೆ. ಡಾ. ನಾಗರಾಜನಾಯ್ಕ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು. ಕೃಷಿ ಮತ್ತು ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತರು ತಮ್ಮ ಜಮೀನುಗಳ ಸಮೀಪದಲ್ಲಿ ಮಂಗಗಳ ಸಾವು ಕಂಡುಬಂದಲ್ಲಿ ಯಾವುದೇ ನಿರ್ಲಕ್ಷ್ಯ ತೋರದೇ ತಕ್ಷಣವೇ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಮಾಹಿತಿ ನೀಡಿ. ಅಲ್ಲದೇ ಗ್ರಾಮಸ್ಥರು ಸತ್ತ ಮಂಗಗಳ ವಿಲೇವಾರಿಗೆ ಮುಂದಾಗದಂತೆಯೂ ಸೂಚಿಸಿದರು ಅಲ್ಲದೇ ಈ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಸಹಾಯವಾಣಿಯನ್ನು ಸ್ಥಾಪಿಸಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಪ್ರವಾಸಿತಾಣಗಳಿಗೆ ಬರುವ ಪ್ರವಾಸಿಗರ ಆರೋಗ್ಯದ ಹಿತದೃಷ್ಟಿಯಿಂದ ಮಂಗನಕಾಯಿಲೆಯ ನಿಯಂತ್ರಣ ಕುರಿತು ಮಾಹಿತಿಫಲಕ ಅಳವಡಿಸಬೇಕು. ಅಲ್ಲದೇ ಒಂದೆರೆಡು ದಿನದಲ್ಲಿ ಜ್ವರಬಂದಲ್ಲಿ ತಕ್ಷಣ ರಕ್ತಪರೀಕ್ಷೆ ಮಾಡಿಸಿಕೊಳ್ಳುವಂತೆಯೂ ಅವರು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್‌, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್‌, ಡಾ. ಸಿದ್ಧನಗೌಡ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Child Welfare Committee ಶಿವಮೊಗ್ಗದ ಶ್ರೀರಾಂಪುರದಲ್ಲಿ ಎಳೆಕಂದ ಪತ್ತೆ ವಾರಸುದಾರರ ಪತ್ತೆಗೆ ಸಹಕರಿಸಲು ಪ್ರಕಟಣೆ

0

Child Welfare Committee ಶಿವಮೊಗ್ಗ ನಗರದ, ಶ್ರೀರಾಂಪುರ ನಗರ, ಮೊದಲ ತಿರುವಿನ ರಸ್ತೆಯ ಪಕ್ಕದಲ್ಲಿ ಕೈಚೀಲದಲ್ಲಿ ಸುಮಾರು 1 ದಿನದ ಗಂಡು ಮಗು ಪತ್ತೆಯಾಗಿದ್ದು ಸಾರ್ವಜನಿಕರು ರಕ್ಷಣೆ ಮಾಡಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಡಿಸಿಪಿಯು ಘಟಕ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ ಇಲ್ಲಿಗೆ ದಾಖಲಿಸಿರುತ್ತಾರೆ.
ಮಗುವಿನ ಮುಂದಿನ ಪುನರ್ವಸತಿ ಹಿತದೃಷ್ಠಿಯಿಂದ ಮಗುವಿನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಆಲ್ಕೊಳ, ಶಿವಮೊಗ್ಗ ಇವರ ಕಛೇರಿಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08182-295511 ಗೆ ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Malnad Cancer Hospital Shimoga ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ

0

Malnad Cancer Hospital Shimoga ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳ ಕಚೇರಿ,ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಎನ್ ಸಿ ಡಿ ಘಟಕ, ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮ, DAPCU ವಿಭಾಗ, ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜು, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ಹಾಗೂ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಶಿವಮೊಗ್ಗ ಸಹಯೋಗದೊಂದಿಗೆ ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ “ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ” ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ನಾಗೇಶ್ ವಹಿಸಿದ್ದರು. ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ರೇಖಾ, ತಾಲೂಕು ಆರೋಗ್ಯ ಅಧಿಕಾರಿ ಡಾ.ಡಿ.ಬಿ
ಚಂದ್ರಶೇಖರ್ , ಸಹಾಯಕ ಕಾರ್ಯಪಾಲಕ ಅಭಿಯಂತರರು ಪುಷ್ಪವತಿ, ಪರಿಸರ ಅಭಿಯಂತರು ತ್ರಿವೇಣಿ, ಜಿಲ್ಲಾ ದಂತ ನೋಡಲ್ ಅಧಿಕಾರಿ ಡಾ. ಮೋಹನ್, ಸುಬ್ಬಯ್ಯ ದಂತ ಮಹಾವಿದ್ಯಾಲಯದ
ಡಾ. ವಿವೇಕ್ ,ದಂತ ಆರೋಗ್ಯ ಅಧಿಕಾರಿ ಡಾ. ಸತೀಶ್, ಮಲ್ನಾಡ್ ಕ್ಯಾನ್ಸರ್ ಹಾಸ್ಪಿಟಲ್ ನ ರೇಡಿಯೋ ಅಂಕಾಲಜಿಸ್ಟ್ ಡಾ. ಅಮಿತ್ ರಾಜ್, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಡಾ. ಹರ್ಷವರ್ಧನ್ , ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರು ಹೇಮಂತ್ ರಾಜ್ ಅರಸ್, ಎನ್.ಸಿ.ಡಿ ವಿಭಾಗದ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ. ಅಫೀಫಾ ಉಪಸ್ಥಿತರಿದ್ದರು.
Malnad Cancer Hospital Shimoga ಸಮಾಜ ಕಾರ್ಯಕರ್ತರಾದ ರವಿರಾಜ್ ಜಿ.ಕೆ, ಆಪ್ತ ಸಮಾಲೋಚಕರಾದ ಶಿವಕುಮಾರ್ ಎಸ್.ಟಿ, ಪ್ರವೀಣ್ ಕೆ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಗಳು ಮತ್ತು ಸಿಬ್ಬಂದಿಗಳು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮ
ದಲ್ಲಿ ಭಾಗವಹಿಸಿದ್ದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 282 ಜನ ಪೌರ ಕಾರ್ಮಿಕರು ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದರು.

Nagachoudeshwari Temple ಫೆಬ್ರವರಿ 7. ಶ್ರೀನಾಗಚೌಡೇಶ್ವರಿ ದೇವಾಲಯದ 9 ನೇ ವರ್ಧ್ಯಂತ್ಯೋತ್ಸವ

0

Nagachoudeshwari Temple ಶಿವಮೊಗ್ಗ ನಗರದ ಸ್ವಾಮಿವಿವೇಕಾನಂದ ಬಡಾವಣೆಯ ಶ್ರೀನಾಗಚೌಡೇಶ್ವರಿ ಅಮ್ಮನವರ ದೇವಸ್ಥಾನದ ಒಂಬತ್ತೇ ವರ್ಷದ ವರ್ಧಂತ್ಯೋತ್ಸವ ಫೆ: 7 ರ ಶುಕ್ರವಾರ ರಂದು ನಡೆಯಲಿದೆ.
ಅಂದು ಬೆಳಿಗ್ಗೆ 8:30ಕ್ಕೆ ಶ್ರೀಕುಲದೇವತಾ ಪ್ರಾರ್ಥನೆ, ಸ್ವಸ್ತಿವಾಚನ,ಪುಣ್ಯಾಹ, ಋತ್ವಿಗ್ವರ್ಣನೆ ಹಾಗೂ ಕಲಾತತ್ವ ಹೋಮ,108 ಕಲಶಾಭಿಷೇಕ ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ,ತೀರ್ಥ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
Nagachoudeshwari Temple ಕಲಶಾಭಿಷೇಕ ಸೇವೆಗೆ ರೂ.250 ಹಾಗೂ ಸರ್ವ ಸೇವೆಗೆ 500 ರೂಪಾಯಿ ನಿಗದಿಗೊಳಿಸಲಾಗಿದೆ. ಆಸ್ತಿಕ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತನು-ಮನ-ಧನ ಹಾಗೂ ಅಕ್ಕಿ,ಬೇಳೆ, ಬೆಲ್ಲ, ತರಕಾರಿಗಳನ್ನು ಕೊಡಬಹುದಾಗಿದ್ದು, ಶ್ರೀದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ಶ್ರೀನಾಗಚೌಡೇಶ್ವರಿ ಅಮ್ಮನವರ ಸೇವಾ ಸಮಿತಿ(ರಿ) ಪರವಾಗಿ ಕಾರ್ಯಾಧ್ಯಕ್ಷ ಎಂ.ಜಿ.ಕೇಶವಪ್ಪ ಕೋರಿದ್ದಾರೆ.

Chamber Of Commerce Shivamogga ಕರ್ನಾಟಕ ತೆರಿಗೆ ಸಂಗ್ರಹದಲ್ಲಿ‌ ಎರಡನೇ ಸ್ಥಾನಕ್ಕೆ ತರುವಲ್ಲಿ ವಿತರಕರ ಪಾತ್ರ ಪ್ರಮುಖವಾಗಿದೆ- ಡಿ.ಎಸ್.ಅರುಣ್

0

Chamber Of Commerce Shivamogga ದೇಶದಲ್ಲಿ ಕರ್ನಾಟಕವನ್ನು ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿ ನಿಲ್ಲಿಸುವಲ್ಲಿ ವಿತರಕರ ಪಾತ್ರ ಮಹತ್ವದ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ವಿತರಕರ ಸಂಘದ ವತಿಯಿಂದ ಫೆ. 2ರಂದು ಆಯೋಜಿಸಿದ್ದ ವಿತರಕರ ದಿನಾಚರಣೆ ಉದ್ಘಾಟನೆ ಮಾತನಾಡಿ, ಕರ್ನಾಟಕದ ಆರ್ಥಿಕ ಪ್ರಗತಿಯಲ್ಲಿ ವಿತರಕರ ಕೊಡುಗೆ ಮಹತ್ವದ್ದು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಚಿಲ್ಲರೆ ಮಾರುಕಟ್ಟೆಯನ್ನು ಬೆಳೆಸುವ ಬಗ್ಗೆ ವಿತರಕರಿಗೆ ಮಾಹಿತಿಗಳನ್ನು ನೀಡುತ್ತ ದೇಶದ ಆರ್ಥಿಕತೆಗೆ ವಿತರಕರ ಉದ್ಯಮ ಅತಿ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದರು.
ಕರ್ನಾಟಕ ಗ್ರಾಹಕ ವಸ್ತುಗಳ ವಿತರಕರ ಸಂಘಗಳ ಒಕ್ಕೂಟ ಅಧ್ಯಕ್ಷ ಗಿರೀಶ್ ಶಂಕರ್ ಸುಂಕದ ಮಾತನಾಡಿ, ಕಂಪನಿಗಳ ಹಾಗೂ ಸರ್ಕಾರದ ಕೆಲ ನೀತಿಗಳಿಂದ ವಿತರಕರ ಅಸ್ತಿತ್ವಕ್ಕೆ ಧಕ್ಕೆ ಬಂದಿರುತ್ತದೆ. ಇಂತಹ ಸಂದರ್ಭದಲ್ಲಿ ನಾವುಗಳೆಲ್ಲರೂ ಒಗ್ಗಟ್ಟಾಗಿ ನಮ್ಮ ಮುಂದಿರುವ ಸವಾಲುಗಳನ್ನ ಎದುರಿಸಬೇಕು ಎಂದರು.
ಕರ್ನಾಟಕ ಫೆಡರೇಶನ್ ಆಫ್ ಡಿಸ್ಟ್ರಿಬ್ಯೂಟರ್ಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಜಯಂತ್ ಗಾಣಿಗ್
ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿತರಕರ ಮಂಡಳಿ ರಚಿಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಮಟ್ಟದ ಭದ್ರತೆಯನ್ನು ವಿತರಿಕರಿಗೆ ನೀಡುವ ಭರವಸೆ ನೀಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಕಂಪನಿ ಹಾಗೂ ವರ್ತಕರಿಗೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿತರಕರಿಗೆ ಆಧುನಿಕ ಮಾರುಕಟ್ಟೆಯ ವ್ಯವಸ್ಥೆಗೆ ನಾವು ನಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಬೇಕಾಗಿದೆ. ತಾಂತ್ರಿಕತೆಯನ್ನು ನಾವು ಉಪಯೋಗಿಸಿ ನಮ್ಮ ಆರ್ಡರ್ ಬುಕಿಂಗ್ ಹಾಗೂ ಸಪ್ಲೈ ಕೆಲಸಗಳಿಗೆ ಆಧುನಿಕತೆ ಸ್ಪರ್ಶ ನೀಡಿದಲ್ಲಿ ನಮ್ಮ ಹಲವಾರು ಸಮಸ್ಯೆಗಳನ್ನ ನಾವು ನೀಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ನಮ್ಮ ವಿತರಕರು ಗಮನಹರಿಸಬೇಕು ಎಂದರು.
Chamber Of Commerce Shivamogga ಶಿವಮೊಗ್ಗ ಜಿಲ್ಲಾ ವಿತರಕ ಸಂಘದ ಅಧ್ಯಕ್ಷ ದೇವರಾಜ್ ಎಂ ಸಿ ಮಾತನಾಡಿ, ನಮ್ಮ ದೇಶದಲ್ಲಿ ಯಾವುದೇ ಚಳವಳಿ ಪ್ರಾರಂಭವಾಗಿದ್ದಲ್ಲಿ ಅದು ಶಿವಮೊಗ್ಗ ಜಿಲ್ಲೆಯಿಂದ ಮಾತ್ರ. ಹೀಗೆ ವಿತರಕರ ದಿನ ಆಚರಣೆಯನ್ನು ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭಿಸಿ ರಾಷ್ಟ್ರಮಟ್ಟದವರೆಗೆ ಯಶಸ್ವಿಗೊಳಿಸಬೇಕು ಎಂದರು. ರಾಜ್ಯಮಟ್ಟದ ನಾಯಕರುಗಳಿಗೆ ಮನವಿ ಪತ್ರ ಸಲ್ಲಿಸುವುದರ ಮೂಲಕ ಆಗ್ರಹಿಸಿದರು.
ವಿತರಕರ ದಿನಾಚರಣೆ ಅಂಗವಾಗಿ 29 ಜನ ಸಂಸ್ಥಾಪಕ ಸದಸ್ಯರುಗಳಿಗೆ ಸನ್ಮಾನಿಸಲಾಯಿತು. 27 ಕಂಪೆನಿಗಳಿಂದ ಫ್ರೀ ಸ್ಯಾಂಪಲ್ ಪಡೆದು 125 ಕಿಟ್‌ಗಳನ್ನು ತಯಾರಿಸಿ ಬಂದಂತಹ ಎಲ್ಲ ಸದಸ್ಯರುಗಳಿಗೆ ವಿತರಿಸಲಾಯಿತು. ಭದ್ರಾವತಿ, ಶಿಕಾರಿಪುರ, ಸಾಗರ, ಗದಗ ಹಾಗೂ ಕೊಪ್ಪದಿಂದ ಆಗಮಿಸಿದ ಪದಾಧಿಕಾರಿಗಳಿಗೂ ಗೌರವಿಸಿ ಸನ್ಮಾನಿಸಲಾಯಿತು. ಶಿವಮೊಗ್ಗ ವಿತರಕರ ಸಂಘದ ಉಪಾಧ್ಯಕ್ಷ ಬದರಿನಾಥ್ ಬಿ ಆರ್ ಸ್ವಾಗತಿಸಿದರು. ಕಾರ್ಯದರ್ಶಿ ಗಿರೀಶ್ ಅತಿಥಿಗಳನ್ನು ಪರಿಚಯಿಸಿದರು. ಶ್ರೀನಿವಾಸ್ ವಂದನಾರ್ಪಣೆ ಮಾಡಿದರು. ಜಂಟಿ ಕಾರ್ಯದರ್ಶಿ ಅರವಿಂದ್ ಮನವಿ ಪತ್ರವನ್ನು ಓದಿದರು. ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.

JCI Shimoga Sahyadri Institute ಕಂಪ್ಯೂಟ‌ರ್, ಮೊಬೈಲ್ ಗಳ ಅತೀ ವೀಕ್ಷಣೆ. ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚುಮಾಡುತ್ತಿದೆ ಡಾ.ದೀಪಾ

0

JCI Shimoga Sahyadri Institute ಕಂಪ್ಯೂಟರ್, ಮೊಬೈಲ್‌ನ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಕಣ್ಣಿಗೆ ವಿಶ್ರಾಂತಿ ಇಲ್ಲದಿರುವುದು ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞೆ ಡಾ. ದೀಪಾ ಹೇಳಿದರು.

ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ವತಿಯಿಂದ ಕಣ್ಣಿನ ಆರೋಗ್ಯದ ಜಾಗೃತಿ ಹಾಗೂ ಉಚಿತ ನೇತ್ರ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಧುನಿಕ ಉಪಕರಣ ಬಳಕೆಯು ಕಣ್ಣು ನೋವು ಹೆಚ್ಚಲು ಕಾರಣ. ಸಕಾಲದಲ್ಲಿ ಕಣ್ಣು ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯ. ಪ್ರೋಟಿನ್‌ಯುಕ್ತ ಆಹಾರ ಸೇವಿಸಬೇಕು. ಸರಿಯಾದ ನಿದ್ರೆ ಮಾಡಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ರೆಟಿನೋ, ರೆಟಿನೋಪತಿ, ಮ್ಯಾಕ್ಯುಲರ್ ಹಾಗೂ ಗ್ಲೊಕೊಮಾ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಬಾಲ್ಯದಲ್ಲೇ ಮಕ್ಕಳಿಗೆ ಕಣ್ಣಿನ ತಪಾಸಣೆ ಜತೆಗೆ ಅದರ ಅರಿವು ಮೂಡಿಸುವುದು ಅಗತ್ಯ ಎಂದರು.

JCI Shimoga Sahyadri Institute ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಗಣೇಶ್ ಮಾತನಾಡಿ, ಕಣ್ಣು ದೇಹದ ಪ್ರಮುಖ ಅಂಗ. ನಾವುಗಳು ಕಣ್ಣಿನ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಮಕ್ಕಳಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ಉಚಿತ ತಪಾಸಣಾ ಶಿಬಿರ ಆಯೋಜಿಸಿದ್ದೇವೆ. ಕಣ್ಣಿನ ಬಗ್ಗೆ ಹೆಚ್ಚು ಜಾಗೃತಿ ಹೊಂದಬೇಕು ಎಂದು ಹೇಳಿದರು.

ಶಿಬಿರದ ಅಧ್ಯಕ್ಷತೆ ವಹಿಸಿದ್ದ ಶ್ರೀನಿಧಿ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಶ್ರೀಕಂಠಯ್ಯ ಮಾತನಾಡಿ, ಆರು ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.

ಆಡಳಿತಾಧಿಕಾರಿ ಟಿ.ಪಿ.ನಾಗರಾಜ, ಗುರುಮೂರ್ತಿ ಗೌಡ, ಮುಖ್ಯಶಿಕ್ಷಕ ಉಮ್ಮಸಲ್ಮ, ಕೆ.ಪಿ.ಕುಮಾರಸ್ವಾಮಿ, ಕಾರ್ಯದರ್ಶಿ ಮಂಜುನಾಥ ರಾವ್ ಕದಂ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಶೋಭಾ ಎಸ್.ಎನ್., ನಾಗರತ್ನ, 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Karnataka SC ST Development Corporation ಶಿಳ್ಳೆಕ್ಯಾತ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತನ್ನಿ- ಜಿ.ಪಲ್ಲವಿ

0

Karnataka SC ST Development Corporation ಶಿವಮೊಗ್ಗ ಜಿಲ್ಲೆಯಲ್ಲಿ ಅಸಂಘಟಿತರಾಗಿರುವ ಶಿಳ್ಳೇಕ್ಯಾತ ಸಮುದಾಯದ ವಿಕಾಸಕ್ಕೆ ಸರ್ಕಾರದ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾದ ಯೋಜನೆಗಳಲ್ಲಿ ಸೌಲಭ್ಯವನ್ನು ಒದಗಿಸಿಕೊಟ್ಟು, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಕರೆತರುವಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುವಂತೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಜಿ.ಪಲ್ಲವಿ ಅವರು ಹೇಳಿದರು.
ಶಿವಮೊಗ್ಗ ಸಮೀಪದ ಗೋಂದಿ ಚಟ್ನಳ್ಳಿ ಗ್ರಾಮದ ಶಿಳ್ಳೇಕ್ಯಾತ ಸಮುದಾಯದ ನಿವಾಸಿಗಳ ಬೀದಿಗೆ ಭೇಟಿ ನೀಡಿ, ಅಲ್ಲಿನ ಬೀದಿ ದೀಪ, ಚರಂಡಿ, ಕುಡಿಯುವ ನೀರು, ಸ್ವಚ್ಛತೆ, ನೈರ್ಮಲ್ಯ ಮುಂತಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಅಲ್ಲಿನ ನಿವಾಸಿಗಳಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಳ್ಳೇಕ್ಯಾತ ಜನಾಂಗವು ಪರಿಶಿಷ್ಟ ಜಾತಿಗೆ ಸೇರಿದ್ದು, ಜೀವನೋಪಾಯಕ್ಕಾಗಿ ಎಲ್ಲೆಂದರಲ್ಲಿ ಚದುರಿ ಹೋಗಿ, ಜೀವನ ನಿರ್ವಹಣೆಗಾಗಿ, ನೆಮ್ಮದಿಯ ಬದುಕಿಗಾಗಿ ಅಲೆದಾಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದ ಅವರು ಸ್ವಾತಂತ್ರ್ಯ ನಂತರ ಹಲವು ದಶಕಗಳು ಉರುಳಿದರೂ ಕನಿಷ್ಟ ಜೀವನ ನಿರ್ವಹಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದರು.
ಅತ್ಯಂತ ಹಿಂದುಳಿದಿರುವ, ಶಿಕ್ಷಣದಿಂದ ದೂರವೇ ಇರುವ, ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿರುವ ಈ ಜನಾಂಗದವರಿಗೆ, ಅವರ ನೆಲೆಸಿರುವ ಬೀದಿಗಳಿಗೆ ಶುದ್ಧ ಕುಡಿಯುವ ನೀರು, ಸೂರು, ಶಾಲೆ, ವಿದ್ಯುತ್ಸಂಪರ್ಕ, ನೀರು-ನೈರ್ಮಲ್ಯ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ ಸ್ವಚ್ಚತೆಗೆ ಗಮನಹರಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
Karnataka SC ST Development Corporation ಅಲ್ಲದೇ ಇಲ್ಲಿನ ಅನೇಕ ಕುಟುಂಬಗಳ ಸದಸ್ಯರಿಗೆ ಸೂಕ್ತ ವಸತಿ ಸೌಲಭ್ಯವಿಲ್ಲದೇ ಒಂದೇ ಸೂರಿನಡಿ ಅನೇಕ ಕುಟುಂಬಗಳ ಜೀವನ ನಿರ್ವಹಿಸುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಇಂತಹ ಮನೆಗಳಲ್ಲಿರುವ ಅನೇಕ ಕುಟುಂಬಗಳಿಗೆ ಪಡಿತರ ಚೀಟಿ ಇಲ್ಲವಾಗಿದೆ. ಇನ್ನೂ ಅನೇಕ ಕುಟುಂಬಗಳ ಮನೆಗಳಿಗೆ ಕನಿಷ್ಟ ವಿದ್ಯುತ್ಸೌಲಭ್ಯವೂ ಇಲ್ಲದಿರುವುದು ಬೇಸರ ತಂದಿದೆ. ಇಂತಹ ಕುಟುಂಬಗಳಿಗೆ ಕೂಡಲೇ ಸೌಲಭ್ಯ ಒದಗಿಸಿಕೊಡುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ಪ್ರಸ್ತುತ ಇವರು ವಾಸಿಸುತ್ತಿರುವ ಅನೇಕರಿಗೆ ಹಕ್ಕುಪತ್ರಗಳಿಲ್ಲದಿರುವುದರಿಂದ ಮಳೆಗಾಲದಲ್ಲಿ ಹಾನಿಗೊಳಗಾದ ಮನೆಗಳಿಗೆ ಪರಿಹಾರಧನ ಹೊರತುಪಡಿಸಿ, ಶಾಶ್ವತ ಮನೆ ನಿರ್ಮಾಣಕ್ಕೆ ಇಲಾಖೆಯಿಂದ ದೊರೆಯಬೇಕಾದ ಸೌಲಭ್ಯ ದೊರೆಯುತ್ತಿಲ್ಲ. ಆದ್ದರಿಂದ ಇವರಿಗೆ ತುರ್ತಾಗಿ ಅಗತ್ಯ ದಾಖಲೆಗಳನ್ನು ನೀಡುವಲ್ಲಿ ಆಗಿರುವ ಅಡಚಣೆ ಹಾಗೂ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಬೇಕಲ್ಲದೇ ಕೂಡಲೇ ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಹಶೀಲ್ದಾರರಿಗೆ ಸೂಚಿಸಿದರು.
ಗ್ರಾಮದಲ್ಲಿ ಸರ್ಕಾರದ ವತಿಯಿಂದ ನಿರ್ಮಿಸಿಕೊಡಲಾದ ರಸ್ತೆ, ನೀರು ಮುಂತಾದವುಗಳನ್ನು ಸರ್ಕಾರವೇ ನಿರ್ವಹಿಸುವುದು ಕಷ್ಟಕರ. ಇಲ್ಲಿನ ಗ್ರಾಮಸ್ಥರೂ ಕೂಡ ಅದರ ಸದ್ಭಳಕೆ ಮತ್ತು ರಕ್ಷಣೆಗೆ ಮುಂದಾಗಬೇಕು. ಇಲ್ಲಿನ ಬೀದಿನಾಯಿಗಳು, ಬಿಡಾಡಿ ಹಂದಿಗಳ ನಿಯಂತ್ರಣ ಮಾಡುವಲ್ಲಿ ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು.
ಈ ಸಮುದಾಯ ವಿದ್ಯಾವಂತ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಆರಂಭಿಸಿ, ಸ್ವಾವಲಂಬಿ ಜೀವನ ಸಾಗಿಸಲು ಮುಂದಾಗುವಂತೆ ಸಲಹೆ ನೀಡಿದ ಅವರು, ನಿಗಮದ ವತಿಯಿಂದ ಸಹಾಯಧನದೊಂದಿಗೆ ನೇರಸಾಲಸೌಲಭ್ಯ, ವಾಹನ ಸಾಲ ಇತ್ಯಾದಿಗಳನ್ನು ನೀಡಲಾಗುತ್ತಿದ್ದು, ಅರ್ಹರು ಈ ಯೋಜನೆಗಳ ಲಾಭ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.
• ಸಂಕಷ್ಟದಲ್ಲಿದ್ದು, ಅತ್ಯಂತ ಕನಿಷ್ಟ ಜೀವನ ನಿರ್ವಹಿಸುತ್ತಿರುವ ಶಿಳ್ಳೇಕ್ಯಾತ ಸಮುದಾಯದವರು ಮೀನುಗಾರಿಕೆ ನಡೆಸಲು ಅನುಕೂಲವಾಗುವಂತೆ ಒಂದಷ್ಟು ಕೆರೆಗಳನ್ನು ಮೀಸಲಿರಿಸಬೇಕು. ಅಲ್ಲದೇ ಮೀನುಗಾರರಿಗೆ ಅಗತ್ಯ ಸಲಕರಣೆಗಳ ಜೊತೆಗೆ ಮಾರುಕಟ್ಟೆ ಸೌಲಭ್ಯ, ಶೀತಲೀಕರಣ ಘಟಕಗಳನ್ನು ಕಲ್ಪಿಸಿಕೊಡಬೇಕು. -ನಾಗಪ್ಪ, ಶಿಳ್ಳೇಕ್ಯಾತ ಸಮುದಾಯದ ರಾಜ್ಯ ಅಧ್ಯಕ್ಷ.

• ಗ್ರಾಮಕ್ಕೆ ಹೊಂದಿಕೊಂಡಂತಿರುವ ಸರ್ವೇ ನಂ.104ರಲ್ಲಿ ಸರ್ಕಾರದ ಕಾಯ್ದಿರಿಸಿದ ಜಮೀನಿದ್ದು, ಇಲ್ಲಿನ ನಿರ್ವಸತಿಗ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಿ, ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು. – ಶಿಳ್ಳೇಕ್ಯಾತ ಸಮುದಾಯದ ಮುಖಂಡ. ಗೋಂದಿ ಚಟ್ನಳ್ಳಿ.

• ಶಿಳ್ಳೆಕ್ಯಾತ ಜನಾಂಗದ ಮಕ್ಕಳು ಆರನೇ ತರಗತಿಯಿಂದ ಹತ್ತನೆ ತರಗತಿಯವರೆಗಿನ ಶಿಕ್ಷಣ ಪಡೆಯಲು ಪ್ರವೇಶ ಪರೀಕ್ಷೆಗಳಿಲ್ಲದೆ ಸರ್ಕಾರಿ ವಸತಿ ನಿಲಯಗಳಲ್ಲಿ ಪ್ರವೇಶಾವಕಾಶ ಹಾಗೂ ಉಚಿತ ವಸತಿ ಸೌಲಭ್ಯವನ್ನು ಒದಗಿಸಿಕೊಡಲಾಗುತ್ತಿದೆ. ಐಎಎಸ್, ಐಪಿಎಸ್., ಐಎಫ್ಎಸ್ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ದೇಶದ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ತರಬೇತಿಗೆ ಸರ್ಕಾರದ ವತಿಯಿಂದಲೇ ನಿಯೋಜಿಸಲಾಗುತ್ತಿದೆ. – ಮಲ್ಲೇಶಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ, ಡಿ.ವೈ.ಎಸ್ಪಿ., ಸಂಜೀವಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧು, ಅಲೆಮಾರಿ ಅಭಿವೃದ್ಧಿ ನಿಗಮದ ಸದಸ್ಯ ಸಂದೀಪ್, ತಹಶೀಲ್ದಾರ್ರಾಜೀವ್, ನಿಗಮದ ವ್ಯವಸ್ಥಾಪಕ ಸುರೇಶ್, ಶಿಳ್ಳೇಕ್ಯಾತ ಸಮುದಾಯದ ರಾಜ್ಯಾಧ್ಯಕ್ಷ ನಾಗಪ್ಪ, ಆನಂದ್ ಮತ್ತಿತರರು ಉಪಸ್ಥಿತರಿದ್ದರು.