Wednesday, March 11, 2026
Wednesday, March 11, 2026
Home Blog Page 403

Guarantee scheme ರಾಜ್ಯ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರ ಮೆಚ್ಚುಗೆ

0

Guarantee scheme ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಕರ್ನಾಟಕ ಸಾಧಿಸಿರುವ ಲಿಂಗ ಸಮಾನತೆಯ ಉಪಕ್ರಮಗಳಿಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಕ್ಯಾಮರೂನ್‌ನ ಫಿಲೆಮನ್ ಯಾಂಗ್ ಮೆಚ್ಚುಗೆ ಸೂಚಿಸಿದ್ದಾರೆ. ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಖಾಸಗಿ ಹೋಟೆಲ್ ತಾಜ್ ವೆಸ್ಟೆಂಡ್‌ನಲ್ಲಿಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಸ್ವಸಹಾಯ ಗುಂಪಿನ ಮಹಿಳೆಯರು ರೇಷ್ಮೆ ಗೂಡುಗಳಿಂದ ತಯಾರಿಸಿದ ಪುಷ್ಪಗುಚ್ಛದೊಂದಿಗೆ ಸ್ವಾಗತಿಸಿದರು. ಒಂದು ಜಗತ್ತು ಹಲವು ಸಾಧ್ಯತೆಗಳನ್ನು ಬಿಂಬಿಸುವ ಕರ್ನಾಟಕ ಕುರಿತಾದ ಪುಸ್ತಕವನ್ನು ನೀಡಿದರು.

ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಸಾಧನೆಯಲ್ಲಿ ಕರ್ನಾಟಕವು ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿರುವ ಬಗ್ಗೆ ವಿಶ್ವಸಂಸ್ಥೆಯ ಅಧ್ಯಕ್ಷರು ಆಸಕ್ತಿಯಿಂದ ಹೆಚ್ಚು ಮಾಹಿತಿ ಹಾಗೂ ವಿವರಗಳನ್ನು ಬಯಸಿದರು.

ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರ ಕೈಗೆ ನಗದು ಹಣ ನೀಡುವ ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡುವ ಶಕ್ತಿ, ಕಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ದರವನ್ನು ಸುಧಾರಿಸಲು ಕೈಗೊಂಡಿರುವ ಕ್ರಮಗಳು , ಹಸಿವು ಮತ್ತು ಅಪೌಷ್ಟಿಕತೆಯನ್ನು ತಡೆಗಟ್ಟಲು ತಲಾವಾರು ಪೋಷಕಾಂಶ ನೀಡಿಕೆ , ಕೌಶಲ್ಯದ ಮೂಲಕ ಉದ್ಯೋಗ ಗಳಿಕೆ, ಅಡುಗೆ ಅನಿಲ ಪೂರೈಕೆ,ಉಚಿತ ವಿದ್ಯುತ್ ಪೂರೈಕೆ ಕುರಿತ ಕಾರ್ಯಕ್ರಮಗಳ ವಿವರಗಳನ್ನು ಮುಖ್ಯ ಕಾರ್ಯದರ್ಶಿಗಳು ನೀಡಿದರು.
ಮಹಿಳೆಯರು ಸ್ವಸಹಾಯ ಗುಂಪುಗಳನ್ನು (SHG) ಸಂಘಟಿಸಲು , ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆಗೆ ಪ್ರೋತ್ಸಾಹ, ವಿಷಕಾರಿ ಮುಕ್ತ ವಾತಾವರಣಕ್ಕಾಗಿ ಸಮಗ್ರ ಮತ್ತು ಸಾವಯವ ಕೃಷಿಗೆ ಪ್ರೋತ್ಸಾಹ ಕ್ರಮಗಳು ಸಮಗ್ರ ಹವಾಮಾನ ಬದಲಾವಣೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಉತ್ತೇಜಿಸಲು ಮಹಿಳಾ ಪರ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯನ್ನು ವಿಶ್ವಸಂಸ್ಥೆಯ ಅಧ್ಯಕ್ಷರು ಶ್ಲಾಘಿಸಿದರು.ಮುಂಬರುವ ವಿಶ್ವಸಂಸ್ಥೆಯ ಕಾರ್ಯಾಗಾರಗಳಲ್ಲಿ ಕರ್ನಾಟಕದ ಯಶೋಗಾಥೆಗಳನ್ನು ಹಂಚಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು, ಇದರಿಂದ ಇತರ ದೇಶಗಳು ಸಹ ಈ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು.

ನವೀಕರಿಸಬಹುದಾದ ಇಂಧನ ಉತ್ಪಾದನೆ ರಾಜ್ಯಕ್ಕೆ ಅಗ್ರಸ್ಥಾನ

Guarantee scheme ಒಟ್ಟು ಇಂಧನ ಉತ್ಪಾದನೆಯಲ್ಲಿ ಶೇ. 40 ರಷ್ಟು ಪಾಲು ನವೀಕರಿಸಬಹುದಾದ ಮೂಲಗಳಿಂದ ಬರುತ್ತಿರುವುದರಿಂದ ಕರ್ನಾಟಕವು ಶುದ್ಧ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ದೇಶದಲ್ಲಿಯೇ ಅಗ್ರಸ್ಥಾನ ಪಡೆದಿರುವುದಕ್ಕೆ ವಿಶ್ವಸಂಸ್ಥೆಯ ಅಧ್ಯಕ್ಷರು ಸಂತೋಷ ವ್ಯಕ್ತಪಡಿಸಿದರು.
ಮಾಹಿತಿ ತಂತ್ರಜ್ಞಾನ, ತಂತ್ರಾಂಶ ಅಭಿವೃದ್ಧಿ, ಕೃತಕ ಬುದ್ಧಿ ಮತ್ತೆ (AI), ಸಂಶೋಧನೆ ಮತ್ತು ನಾವೀನ್ಯತೆಗಾಗಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಯಲ್ಲಿ ಕರ್ನಾಟಕವು ಸಾಧಿಸಿರುವ ಪ್ರಗತಿಯನ್ನು ವಿಶ್ವಸಂಸ್ಥೆಯ ಮೆಚ್ಚಿದರು. ಇತರ ದೇಶಗಳಿಗೆ ಡಿಜಿಟಲ್ ರೂಪಾಂತರವನ್ನು ಉತ್ತೇಜಿಸುವ ಸಲುವಾಗಿ ಸಹಾಯದ ಅಗತ್ಯವಿದ್ದು, ರಾಜ್ಯದ ಬೆಂಬಲವನ್ನು ಕೋರಿದರು. ರಾಜ್ಯ, ಜಿಲ್ಲೆ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಸೂಚಕಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಕರ್ನಾಟಕ ರಚಿಸಿದ ಸುಸ್ಥಿರ ಅಭಿವೃದ್ದಿ ಗುರಿಗಳ (SDG) ಡ್ಯಾಶ್‌ಬೋರ್ಡ್ ವೀಕ್ಷಿಸಿ ಶ್ಲಾಘಿಸಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಜಿ.ಸತ್ಯವತಿ ಮತ್ತಿತರರು ಇದ್ದರು

DC Shivamogga ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ‌ಕ್ಕೆ ಒತ್ತು‌ ನೀಡಲಾಗುವುದು- ಗುರುದತ್ತ ಹೆಗಡೆ

0

DC Shivamogga ಕೈಗಾರಿಕಾ ಪ್ರದೇಶಗಳಲ್ಲಿ ಕುಡಿಯುವ ನೀರು, ಬೀದಿ ದೀಪ, ಯುಜಿಡಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ, ಹಂತ ಹಂತವಾಗಿ ಅಭಿವೃದ್ದಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಕೈಗಾರಿಕಾ ಪ್ರದೇಶಗಳನ್ನು ಹಂತ ಹಂತವಾಗಿ ಅಭಿವೃದ್ದಿಪಡಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳಿಗೆ ಸಂಬAಧಿಸಿದAತೆ ಪ್ರಸ್ತುತ ಇರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಕುಡಿಯುವ ನೀರು, ಬೀದಿ ದೀಪ, ಯುಜಿಡಿ, ತ್ಯಾಜ್ಯ ನಿರ್ವಹಣೆಯನ್ನು ಪಾಲಿಕೆ, ಸ್ಥಳೀಯ ಸಂಸ್ಥೆಗಳ ಸಮನ್ವಯದೊಂದಿಗೆ ನಿರ್ವಹಿಸಲಾಗುವುದು ಎಂದರು.

ಕೈಗಾರಿಕಾ ಸಂಘಗಳ ಅಧ್ಯಕ್ಷರು, ಶಾಹಿ ಎಕ್ಸ್ಪೋರ್ಟ್ಸ್ ನ ಅಪಾಯಕಾರಿ ತ್ಯಾಜ್ಯ ತುಂಬಿರುವ ವಾಹನಗಳು ಮತ್ತು ಐಓಸಿಲ್‌ನ ಅನಿಲ ತುಂಬಿರುವ ವಾಹನಗಳು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯನ್ನು ಬಳಸಿಕೊಳ್ಳುತ್ತಿರುವುದರಿಂದ ತೊಂದರೆಯಾಗುತ್ತಿದೆ. ಗಾರ್ಮೆಂಟ್ಸ್ನ ವಾಯುಮಾಲಿನ್ಯ ಮತ್ತು ಜಲ ಮಾಲಿನ್ಯ ನಿಯಂತ್ರಿಸಲು ಕ್ರಮ ವಹಿಸಬೇಕು. ಹಾಗೂ ಜಿಟಿಟಿಸಿ ಆವರಣದ ಮುಂದೆ ಮತ್ತು ಇಲ್ಲಿರುವ ಕ್ಯಾಂಟಿನ್ ಬಳಿ ಐಓಸಿಲ್‌ನ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದನ್ನು ನಿಯಂತ್ರಿಸಬೇಕೆಂದು ಕೋರಿದರು.

ಜಿಲ್ಲಾಧಿಕಾರಿಗಳು, ಶಾಹಿ ಎಕ್ಸ್ಪೋರ್ಟ್ಸ್ ಮತ್ತು ಐಓಸಿಲ್ ವಾಹನಗಳನ್ನು ತಮ್ಮ ಪ್ರತ್ಯೇಕ ರಸ್ತೆಗಳಲ್ಲಿ ಬರುವಂತೆ ಕ್ರಮ ವಹಿಸಬೇಕು. ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ಸಾಗಿಸುವಾಗ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು. ವಾಹನಗಳನ್ನು ಸಮರ್ಪಕವಾಗಿ ನಿಲುಗಡೆಯಲ್ಲಿಯೇ ನಿಲ್ಲಿಸುವಂತೆ ಸೂಚನೆಗಳನ್ನು ನೀಡಬೇಕೆಂದು ತಿಳಿಸಿದರು.

ಶಾಹಿ ಎಕ್ಸ್ಪೋರ್ಟ್ ಸುತ್ತಮುತ್ತಲ ಪ್ರದೇಶದಲ್ಲಿ ಆಸಿಡ್ ವಾಸನೆ ಬರುತ್ತಿದೆ ಎಂಬ ದೂರು ಸಹ ಇದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಹಾಗೂ ಶಾಹಿ ಎಕ್ಸ್ಪೋರ್ಟ್ಸ್ನವರು ವಾಸನೆ ಬಾರದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದರು.

ಇ-ಖಾತಾ : ಶಿವಮೊಗ್ಗ ಆಟೋ ಕಾಂಪ್ಲೆಕ್ಸ್ನಲ್ಲಿ ನಿವೇಶನ ಹಾಗೂ ಕಟ್ಟಡಗಳ ಇ-ಖಾತಾ ಮಾಡಿಸಲು ತೊಂದರೆಯಾಗುತ್ತಿದೆ. ಸುಮಾರು 27 ವರ್ಷಗಳ ಹಿಮದೆ ಕೆಐಎಡಿಬಿ ಯಿಂದ ಅಭಿವೃದ್ದಿ ಪಡಿಸಿದ ಈ ಪ್ರದೇಶವನ್ನು ಒಂದೆರಡು ವರ್ಷಗಳ ಹಿಂದೆ ಪಾಲಿಕೆಗೆ ಹಸ್ತಾಂತರವಾಗಿವೆ. ಪಾಲಿಕೆಯವರು ಇ-ಖಾತಾ ಮಾಡಿಸಲು ಅನುಮತಿ ಪತ್ರ ಕೇಳುತ್ತಿದ್ದಾರೆ, ದಿಕ್ಕುಗಳಲ್ಲಿ ವ್ಯತ್ಯಾಸವಿದೆ ಎಂದೆಲ್ಲ ಹೇಳುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಿ ಇ-ಖಾತಾ ಮಾಡಿಸಿಕೊಡಬೇಕೆಂದು ಕೈಗಾರಿಕೋದ್ಯಮಿಗಳು ಕೋರಿದರು.

DC Shivamogga ಭದ್ರಾವತಿ ಇಂಡಸ್ಟಿçಯಲ್ ಎಸ್ಟೇಟ್‌ನಲ್ಲಿ ಬೌಂಡ್ರಿ ಫೆನ್ಸಿಂಗ್, ಅಸಮರ್ಪಕ ಬೆಳಕು, ಕೆಲವು ಆಂತರಿಕ ರಸ್ತೆಗಳ ದುರಸ್ತಿ ಇದೆ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬೀದಿ ದೀಪಗಳು ದುರಸ್ತಿಯಲ್ಲಿವೆ. ಹಾಗೂ ಪಾಲಿಕೆಯಿಂದ ಕೈಗಾರಿಕೆಗಳಿಗೆ ಸಮರ್ಪಕ ಮತ್ತು ನಿಯಮಿತವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕನಿಷ್ಟ 2 ಗಂಟೆ ನೀರು ಬಿಡಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಇ-ಖಾತಾ, ಕುಡಿಯುವ ನೀರು, ಯುಜಿಡಿ ಸೇರಿದಂತೆ ಪಾಲಿಕೆ ಸಮಸ್ಯೆಗಳ ಕುರಿತು ಆಯುಕ್ತರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಒಂದೊಂದೇ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಭದ್ರಾವತಿ ಇಂಡಸ್ಟಿçಯಲ್ ಎಸ್ಟೇಟ್‌ನಲ್ಲಿ ಭದ್ರಾವತಿ ನಗರಸಭೆ ವತಿಯಿಂದ ಆದ್ಯತೆ ಮೇರೆಗೆ ಫೆನ್ಸಿಂಗ್ ಮತ್ತು ಬೀದಿ ದೀಪ ಇತರೆ ಕೆಲಸಗಳನ್ನು ಹಂತ ಹಂತವಾಗಿ ಮಾಡುವಂತೆ ಸೂಚಿಸಿದರು.

ಸಾಗರ ರಸ್ತೆ ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ವಸಾಹತು ಪಾಲಿಕೆಗೆ ಹಸ್ತಾಂತರವಾಗಿದ್ದು ವಸಾಹತುವಿನ ನಿರ್ವಹಣೆಯನ್ನು ಮಾಡಬೇಕು. ನಾವು ಸಮರ್ಪಕವಾಗಿ ತೆರಿಗೆ ಪಾವತಿ ಮಾಡುತ್ತಿದ್ದರೂ ನಿರ್ವಹಣೆ ಆಗುತ್ತಿಲ್ಲ. ಆಟೋ ಕಾಂಪ್ಲೆಕ್ಸ್ನ ಕೈಗಾರಿಕಾ ಘಟಕಗಳಿಗೆ ಪ್ರತ್ಯೇಕ ಯುಜಿಡಿ ಸಂಪರ್ಕ ಒದಗಿಸುವಂತೆ ಹಾಗೂ ಮಾಚೇನಹಳ್ಳಿ ಆಟೋ ಕಾಂಪ್ಲೆಕ್ಸ್ ಬಳಿ ಸುಲಭ ಶೌಚಾಲಯ ನಿರ್ಮಿಸುವಂತೆ, ಕಲ್ಲೂರು-ಮಂಡ್ಲಿ ಪ್ರದೇಶದಲ್ಲಿ ಎಲೆಕ್ಟಿçಕಲ್ ಸಬ್ ಸ್ಟೇಷನ್ ನಿರ್ಮಿಸಲು ಅವಕಾಶ ಮಾಡಿಕೊಡುವಂತೆ ಕೈಗಾರಿಕೋದ್ಯಮಿಗಳು ಮನವಿ ಮಾಡಿದರು.

ಸಾಗರ ರಸ್ತೆಯ ಎಪಿಎಂಸಿ ಯಿಂದ ಆಟೋ ಕಾಂಪ್ಲೆಕ್ಸ್ವೆಗೆ ಟ್ರಾವೆಲ್ಸ್ಗಳ ಬಸ್‌ಗಳು ಪಾರ್ಕಿಂಗ್ ಮಾಡುತ್ತಿದ್ದು ಅಪಘಾತ ಮತ್ತು ಅವಘಡಗಳು ಹೆಚ್ಚುತ್ತಿವೆ ಎಂಬ ದೂರನ್ನು ಆಲಿಸಿದ ಜಿಲ್ಲಾಧಿಕಾರಿಗಳು ಎಸ್‌ಪಿ ಯವರೊಂದಿಗೆ ಮಾತನಾಡಿ, ಈ ಭಾಗದಲ್ಲಿ ಟ್ರಾವೆಲ್ಸ್ ಬಸ್, ವಾಹನಗಳು ಪಾರ್ಕಿಂಗ್ ಮಾಡದಂತೆ ಕ್ರಮ ವಹಿಸಲು ಕೋರಿದರು.
ಮಾಚೇನಹಳ್ಳಿ ಮತ್ತು ಇತರೆ ಕೈಗಾರಿಕಾ ಪ್ರದೇಶಗಳಲ್ಲಿ ಸೊಳ್ಳೆಗಳು ಹೆಚ್ಚಿದ್ದು, ಪ್ರದೇಶದ ಸುತ್ತಮುತ್ತ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ವತಿಯಿಂದ ಫಾಗಿಂಗ್ ಮಾಡಿಸಲಾಗುವುದು. ಜ್ವರದಂತಹ ಲಕ್ಷಣಗಳು ಕಂಡುಬAದಲ್ಲಿ ಸ್ವಂತ ಔಷಧಿ ತೆಗೆದುಕೊಳ್ಳದೆ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲೆಯ ವಿವಿಧ ಕೈಗಾರಿಕಾ ವಸಾಹತುವಿನಲ್ಲಿ ಖಾಲಿ ಇರುವ ನಿವೇಶನ/ಮಳಿಗೆಗಳ ಅರ್ಜಿ ಪರಿಶೀಲಿಸಿ ಲಾಟರಿ ಮೂಲಕ ನಿವೇಶನ ಮತ್ತು ಮಳಿಗೆಗಳನ್ನು ಹಂಚಿಕೆ ಮಾಡಲಾಯಿತು.

ಸಭೆಯಲ್ಲಿ ಜಿ.ಪಂ ಸಿಇಓ ಹೇಮಂ ಎನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಣೇಶ್, ಕೆಐಎಡಿಬಿ ಕಾರ್ಯಪಾಲಕ ಅಭಿಯಂತರ ನಾರಾಯಣಪ್ಪ, ಕರ್ನಾಟಕ ನಗರ ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರರು, ಪರಿಸರ ಅಧಿಕಾರಿಗಳು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಜಿಲ್ಲಾ ಕೈಗಾರಿಕಾ ಸಂಘ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಕೈಗಾರಿಕೋದ್ಯಮಿಗಳ ಸಂಘ, ಕೆಎಸ್‌ಎಸ್‌ಐಡಿಸಿ ಸಂಘ, ಆಟೋ ಕಾಂಪ್ಲೆಕ್ಸ್ ಅಸೋಸಿಯೇಷನ್ ನ ಅಧ್ಯಕ್ಷರುಗಳು, ಪದಾಧಿಕಾರಿಗಳು, ಅಧಿಕಾರಿಗಳು ಹಾಜರಿದ್ದರು.

Zee kannada ಜೀ ಕನ್ನಡ ಸರಿಗಮಪ ಕಲಾವಿದ ಕಾರ್ತೀಕ್ ಗೆ ಪ್ರೋತ್ಸಾಹಿಸಲು ಪೋಷಕರ ಮನವಿ

0


Zee kannada
ಜೀ ಕನ್ನಡ ಸರಿಗಮಪ ಕಲಾವಿದ ಕಾರ್ತೀಕ್ ಗೆ ಪ್ರೋತ್ಸಾಹಿಸಲು ಪೋಷಕರ ಮನವಿ ಶಿವಮೊಗ್ಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಸರಿಗಮಪ ಹಾಡುಗಾರಿಕೆ ನಗರದ ಕಾರ್ತಿಕ ನಾಗಲಾಪುರ ಅವರು ಪ್ರತಿ ಹಂತ ದಲ್ಲೂ ಅದ್ಬುತವಾಗಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಿಲ್ಲೆಗೆ ಕೀರ್ತಿ ತರುತ್ತಿರುವ ಇವರು ಸ್ಪರ್ಧೆಯ ಕೊನೆಯ ಹಂತದವರಗೆ ಸಾಗಿ ವಿಜೇತರಾಗಲಿ ಎಂದು ಶಿವಮೊಗ್ಗದ ಜನತೆ ಅರಸಿ ಪ್ರೋತ್ಸಾಹಿಸಲು ಪೋಷಕರಾದ ಕುಮಾರ ಸ್ವಾಮಿ ಮತ್ತು ಮೀರಾ ದಂಪತಿಗಳು ವಿನಂತಿಸಿದ್ದಾರೆ.

Royal English Medium School ಸೈಬರ್ ಅಪರಾಧಗಳ ಬಗ್ಗೆಜಾಗೃತಿ‌ ಕಾರ್ಯಕ್ರಮ

0

Royal English Medium School ಶಿವಮೊಗ್ಗದ ವಿನೋಭನಗರದ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆ ಹಾಗೂ ಪರಿಸರ (ರಿ) ಶಿವಮೊಗ್ಗ ಸಂಸ್ಥೆಯ ಸಹಯೋಗದಲ್ಲಿ ಸೈಬರ್ ಅಪರಾಧಗಳ ಕುರಿತು ಮಕ್ಕಳಿಗೆ ಮತ್ತು ಪೋಷಕರಿಗೆ ಜಾಗೃತಿ ಮೂಡಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಅರಿವನ್ನ ಮೂಡಿಸುವ ಸಲುವಾಗಿ ಶಿವಮೊಗ್ಗ ಜಯನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಶ್ರೀಯುತ ವಿರೂಪಾಕ್ಷಪ್ಪ ಎಎಸ್ ಐ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇವರು ಮೊಬೈಲ್ಗಳಿಂದ ಪ್ರತಿನಿತ್ಯ ಕರೆಮಾಡಿ ಜನಸಾಮಾನ್ಯರ ಹಣವನ್ನು ಬ್ಯಾಂಕ್ ಖಾತೆಯಿಂದ ತೆಗೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಗೆ ಬ್ಯಾಂಕುಗಳಿಂದ ಎಂದು ಹೇಳಿ ಯಾವ ಯಾವ ರೀತಿ ಯಾಮಾರಿಸುತ್ತಿರುವರು ಎಂಬುದನ್ನು ತಿಳಿಸಿಕೊಟ್ಟರು.

ಅಲ್ಲದೆ ವಿದ್ಯಾರ್ಥಿಗಳ ಫೇಸ್ಬುಕ್, ವಾಟ್ಸಾಪ್, ಹಾಗೂ ಇನ್ಸ್ಟಾಗ್ರಾಮ್ ಗಳ ಬಳಕೆ ಹೆಚ್ಚಾಗುತ್ತಿದ್ದು ಅವರುಗಳ ಅಕೌಂಟನ್ನು ಮತ್ತೊಬ್ಬರು ಬಳಸಿಕೊಂಡು ಸಮಸ್ಯೆಯನ್ನು ಉಂಟು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಪೋಷಕರು ತಲೆತಗ್ಗಿಸಬೇಕಾದ ಕೆಲಸವನ್ನು ಮಾಡುತ್ತಿದ್ದಾರೆ. ಆದ ಕಾರಣ ಈ ಜಾಲ ತಾಣದಿಂದ ಹಲವು ಸುರಕ್ಷತಾ ತಂತ್ರಾಂಶಗಳನ್ನು ಉಪಯೋಗಿಸಿಕೊಂಡು ವಂಚನೆಗಳಿಂದ ಎಚ್ಚೆತ್ತು ಕೊಳ್ಳಬಹುದು ಎಂದು ತಿಳಿಸಿದರು.

ಅಲ್ಲದೆ ಎಟಿಎಂ ಗಳಿಂದ, ಕೊರಿಯರ್ ಗಳಿಂದ, ಆಗುವ ಮೋಸಗಳನ್ನು ವಿಡಿಯೋ ತುಣುಕುಗಳನ್ನು ತೋರಿಸುವುದರ ಮೂಲಕ ಎಚ್ಚರಿಸಿದರು. ಈ ಕಾರ್ಯಕ್ರಮದ ಪೂರ್ಣ ವಿವರದ ನಂತರ ವಿದ್ಯಾರ್ಥಿಗಳಿಂದ ಮತ್ತು ಪೋಷಕರುಗಳಿಂದ ಹಲವು ಪ್ರಶ್ನೆಗಳು ಉದ್ಭವಿಸಿದವು. ಈ ಪ್ರಶ್ನೆಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರು. ಶಾಲೆಯ ಕಾರ್ಯದರ್ಶಿಗಳಾದ ಶ್ರೀಮತಿ ಪೂಜಾ ನಾಗರಾಜ್ ಪರಿಸರ ಪ್ರಸ್ತಾವಿಕವಾಗಿ ಮಾತನಾಡಿ ನಮ್ಮ ಶಾಲೆಯ ಹಲವು ಪೋಷಕರು ಈ ಒಂದು ಕಾರ್ಯಕ್ರಮವನ್ನು ನಮಗೆ ಮಾಡಿಸಿಕೊಡಿ ಮಕ್ಕಳು ಮೊಬೈಲ್ ಗಳಿಂದ ಹೇಗೆ ಸುರಕ್ಷಿತವಾಗಿರಬಹುದು ಎಂಬುದನ್ನು ತಿಳಿಸಿದ ಕಾರಣ ನಾವು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,ಇದರ ಸದುಪಯೋಗವನ್ನು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.

Royal English Medium School ಕಾರ್ಯಕ್ರಮದಲ್ಲಿ ಪರಿಸರ ಸಂಸ್ಥೆಯ ನಿರ್ದೇಶಕರಾದ ಡಾ. ನಾಗರಾಜ್ ಪರಿಸರ ಮಾತನಾಡಿ ಈ ಒಂದು ಕಾರ್ಯಕ್ರಮದ ಪ್ರಯೋಜನವನ್ನು ನೀವು ಪಡೆಯುವುದಲ್ಲದೆ ನಿಮ್ಮ ಸ್ನೇಹಿತರಿಗೆ ಕುಟುಂಬಸ್ಥರಿಗೆ ತಿಳಿಸಿ ವಂಚಕರಿಂದ ರಕ್ಷಿಸಿ ಎಂದು ಸಲಹೆ ನೀಡಿದರು. ಪೋಷಕರು ತಮ್ಮ ಮಕ್ಕಳು ಮೊಬೈಲ್ ಬಳಸುವಾಗ ಅವರೆಡೆ ನಿಮ್ಮ ಗಮನವಿರಬೇಕು ಅವರ ಸ್ನೇಹಿತರು ಯಾರು ಮತ್ತು ಮೊಬೈಲ್ ನಲ್ಲಿ ಏನು ನೋಡುತ್ತಿರುವರು ಎಂಬುದನ್ನು ತಾವು ಗಮನಿಸುತ್ತಾ ಇದ್ದರೆ ಅಪಾಯಗಳಿಂದ ಪಾರಾಗಬಹುದು ಎಂದು ತಿಳಿಸಿದರು.

ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶ್ರೀದೇವಿ, ಮುಖ್ಯೋಪಾಧ್ಯಾಯರಾದ ಶ್ರೀ ವಿನಯ್ , ಶಿಕ್ಷಕ ವೃಂದದವರು, ಪೋಷಕರು, ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು. ಶಿಕ್ಷಕರಾದ ಅರುಣ್ ನಿರೂಪಿಸಿ, ಸೋನಿಕ ಸ್ವಾಗತಿಸಿ, ಶ್ರೀಮತಿ ಸುನಿತಾ ವಂದಿಸಿದರು.

Sri Ranganatha Seva Samiti ಹೊಳೆಹಟ್ಟಿಯಲ್ಲಿ ದೇವಾಲಯ ಕಳಸಾರೋಹಣ ಸಮಾರಂಭ

0

Sri Ranganatha Seva Samiti ಹೊಳೆಹಟ್ಟಿ ಗ್ರಾಮದಲ್ಲಿ ಶ್ರೀ ರಂಗನಾಥ ಸೇವಾ ಸಮಿತಿ ವತಿಯಿಂದ ಫೆ. 8ರಿಂದ 10ರವರೆಗೆ ಶ್ರೀ ಕಾಡ ವೀರಭದ್ರೇಶ್ವರ ಸ್ವಾಮಿ, ಶ್ರೀ ಪಾರ್ವತಿ ದೇವಿ ಪ್ರಾಣ ಪ್ರತಿಷ್ಠಾಪನೆ, ಶ್ರೀ ರಂಗನಾಥ ಸ್ವಾಮಿ ಮಂದಿರ, ಮಹಾದ್ವಾರ ಪ್ರವೇಶ ಹಾಗೂ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಫೆ. 8ರ ಬೆಳಗ್ಗೆ 6ರಿಂದ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ.

ಫೆ. 9ರ ಬೆಳಗ್ಗೆ 4ರಿಂದ ಶ್ರೀ ಕಾಡ ವೀರಭದ್ರೇಶ್ವರ ಸ್ವಾಮಿ, ಶ್ರೀ ಪಾರ್ವತಿ ದೇವಿ ಪ್ರಾಣ ಪ್ರತಿಷ್ಠಾಪನೆ, ಕಳಾಸಾರೋಹಣ, ಸಂಜೆ 6ರಿಂದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಮಹಾಸುದರ್ಶನ ಹೋಮ, ಪೂಜಾ ಕಾರ್ಯಕ್ರಮಗಳು ಜರುಗಲಿವೆ.

ಫೆ. 10ರಂದು ಬೆಳಗ್ಗೆ 11ಕ್ಕೆ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಜನಜಾಗೃತಿ ಧರ್ಮ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಛಾಯಾನಗರ ಶ್ರೀ ಶನೈಶ್ಚರ ದೇವಾಲಯ ಧರ್ಮದರ್ಶಿ ಹನುಮಂತಪ್ಪ ಉಪಸ್ಥಿತರಿರುವರು.

Sri Ranganatha Seva Samiti ಪ್ರಭಾವತಿ ಆರ್.ಪ್ರಸನ್ನಕುಮಾರ್, ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕಿ ಶಾರದಾ ಪರ‍್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಆರ್.ಪ್ರಸನ್ನಕುಮಾರ್, ಅಶೋಕನಾಯ್ಕ್ ಮತ್ತಿತರರು ಉಪಸ್ಥಿತರಿರುವರು. ಬಿ.ಕೆ.ಶೇಖರಪ್ಪ ಅಧ್ಯಕ್ಷತೆ ವಹಿಸುವರು. ಸಿ.ಎಸ್.ಕಾಡವೀರಪ್ಪ ಪ್ರಾಸ್ತವಿಕ ಮಾತನಾಡುವರು. ಜಿ.ಎಸ್.ನಟೇಶ್ ಉಪನ್ಯಾಸ ನೀಡುವರು. ಪಿ.ಡಿ.ಚಿಕ್ಕಪ್ಪ ಹಾಜರಿರುವರು.

Atma Yogana ತೀರ್ಥಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇಲೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ನೇಮಕಾತಿ

0

Atma Yogana ಶಿವಮೊಗ್ಗ ಜಿಲ್ಲೆಯ 2024-25ನೇ ಸಾಲಿನ ಆತ್ಮ ಯೋಜನೆಯಡಿ ನೇರ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ತೀರ್ಥಹಳ್ಳಿ ತಾಲೂಕಿನ ದೇವಂಗಿ ರೈತ ಸಂಪರ್ಕ ಕೇಂದ್ರದಲ್ಲಿ ಖಾಲಿಯಿರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ 45 ವರ್ಷ ವಯೋಮಿತಿಯುಳ್ಳ ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರುವವರಿಂದ ಅರ್ಜಿ ಆಹ್ವಾನಿಸಿದೆ.

Atma Yogana ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಯೋಜನಾ ನಿರ್ದೇಶಕರು (ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರು, ಶಿವಮೊಗ್ಗ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸ್ವವಿವರಗಳೊಂದಿಗೆ ಪದವಿ ಪ್ರಮಾಣ ಪತ್ರ, ಅಂತಿಮ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಸೇವಾ ಅನುಭವ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಫೆ. 15 ರೊಳಗಾಗಿ ಯೋಜನಾ ನಿರ್ದೇಶಕರು (ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹಳೇ ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ ಇಲ್ಲಿಗೆ ಸಲ್ಲಿಸುವಂತೆ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

Akash Educational Services Limited ಶಿವಮೊಗ್ಗದಲ್ಲಿ XI & XII ತರಗತಿಗಳಿಗೆ ‌ಕೋಚಿಂಗ್ ಸೌಲಭ್ಯ ಆರಂಭ

0

Akash Educational Services Limited ಪರೀಕ್ಷಾ ತರಬೇತಿ ಸೇವೆಗಳಲ್ಲಿ ರಾಷ್ಟ್ರದ ಮುಂಚೂಣಿಯ ವಿದ್ಯಾಸಂಸ್ಥೆಯಾದ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ (AESL) ಕರ್ನಾಟಕದ XI & XII ತರಗತಿಯ ವಿದ್ಯಾರ್ಥಿಗಳಿಗೆ ಕೋರ್ಸುಗಳನ್ನು ಪ್ರಾರಂಭಿಸಿದೆ.

ಈ ಕೋರ್ಸುಗಳು ಇಂಜಿನಿಯರಿಂಗ್ ಕಾಲೇಜುಗಳು ನಡೆಸುವ ಪ್ರಾದೇಶಿಕ ಪ್ರವೇಶ ಪರೀಕ್ಷೆಗಳು ಮತ್ತು ಜೆಇಇ (ಮೇನ್) ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುವಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವನ್ನು ಒದಗಿಸುವ ಉದ್ದೇಶವನ್ನು ಹೊಂದಿವೆ. ಇಂಗ್ಲಿಷ್ನಲ್ಲಿ ನಡೆಯುವ ಈ ಕೋರ್ಸ್ ಪದವಿಪೂರ್ವ ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಪ್ರಾರಂಭವಾಗುತ್ತವೆ. ಈ KCET ಕೋರ್ಸುಗಳು ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ತನ್ನ ನೆಲೆಗಳನ್ನು ವಿಸ್ತರಿಸುವ ಮತ್ತು ರಾಜ್ಯಗಳ ಪದವಿಪೂರ್ವ ಮಂಡಳಿಗಳ ವಿದ್ಯಾರ್ಥಿಗಳೊಂದಿಗೆ ಸಿಬಿಎಸ್ಇ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಗುಣಮಟ್ಟದ ತರಬೇತಿಯನ್ನು ಒದಗಿಸುವ ಆಕಾಶ್ ಅವರ ಕಾರ್ಯತಂತ್ರದ ಭಾಗವಾಗಿದೆ.

ಸತತವಾಗಿ ಮೂರು ವರ್ಷಗಳ ಕಾಲ KCETನಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ರಾಜ್ಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಹೆಗ್ಗಳಿಕೆ ಆಕಾಶ್ ಹೊಂದಿದೆ, 2021ರಲ್ಲಿ ಮೇಘನ್ ಎಚ್.ಕೆ., 2022ರಲ್ಲಿ ಅಪೂರ್ವ್ ಟಂಡನ್ ಮತ್ತು 2023ರಲ್ಲಿ ವಿಘ್ನೇಶ್ ಎನ್. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ನ ವ್ಯಾಪಾರ ಮತ್ತು ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ ಅವರು, “ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರವಾದ ತರಬೇತಿಯೊಂದಿಗೆ ವಿದ್ಯಾರ್ಥಿಗಳನ್ನು ಸಬಲರಾಗಿಸಲು ಆಕಾಶ್ ಆಳವಾದ ಬದ್ಧತೆಯನ್ನು ಹೊಂದಿದೆ ಎಂದರು.

Akash Educational Services Limited 10ನೆಯ ತರಗತಿಯಿಂದ 11ನೆಯ ತರಗತಿಗೆ ಪ್ರವೇಶಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ, 10ನೆಯ ತರಗತಿಯ ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಮಾರ್ಚ್ 2025ರಿಂದ ಮೇ 2025ರ ನಡುವೆ ಹಾಗೂ ಫಲಿತಾಂಶಗಳ ಘೋಷಣೆಯಾದ ನಂತರ ಜೂನ್-ಜುಲೈ 2025ರಲ್ಲಿ ಕೆಸಿಇಟಿ ಮತ್ತು ಜೆಇಇ (ಮೇನ್) 2027 (ಸಿಬಿಎಸ್ಇ/ಪಿಯುಸಿ) ಪ್ರವೇಶ ಪರೀಕ್ಷೆಗಳಿಗಾಗಿ ಎರಡು ವರ್ಷದ ಇಂಟೆಗ್ರೇಟೆಡ್ ತರಗತಿ ಕೋರ್ಸನ್ನು ಆಕಾಶ್ ನಡೆಸುತ್ತಿದೆ. 11ನೆಯ ತರಗತಿಯಿಂದ 12ನೆಯ ತರಗತಿಗೆ ಪ್ರವೇಶಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ, ಕೆಸಿಇಟಿ ಮತ್ತು ಜೆಇಇ (ಮೇನ್) 2026 (ಸಿಬಿಎಸ್ಇ/ಪಿಯುಸಿ) ಪ್ರವೇಶ ಪರೀಕ್ಷೆಗಳಿಗಾಗಿ ಒಂದು ವರ್ಷದ ಇಂಟೆಗ್ರೇಟೆಡ್ ತರಗತಿ ಕೋರ್ಸು ಮಾರ್ಚ್-ಏಪ್ರಿಲ್ 2025ರಲ್ಲಿ, ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾರಂಭವಾಗುತ್ತದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯು (KCET) ಇಂಜಿನಿಯರಿಂಗ್, ತಂತ್ರಜ್ಞಾನ, ವಾಸ್ತುಶಿಲ್ಪ, ಬ್ಯಾಚಲರ್ ಆಫ್ ಯೋಗ &ನ್ಯಾಚುರೋಪತಿ (BNYS), ಬಿ.ಎಸ್ಸಿ. ನರ್ಸಿಂಗ್, ಮತ್ತು ಬ್ಯಾಚಲರ್ ಆಫ್ ವೆಟರಿನರಿ ಸೈನ್ಸ್ &ಅನಿಮಲ್ ಹಸ್ಬೆಂಡ್ರಿ (B.V.Sc. & A.H.)ಕೋರ್ಸುಗಳ ಪ್ರವೇಶಕ್ಕೆ ಹೆದ್ದಾರಿಯಾಗಿದೆ.

ಪ್ರಮುಖ ಅಂಶಗಳು : ಪಠ್ಯಕ್ರಮವನ್ನುಕೆಸಿಇಟಿ ಮತ್ತು ಜೆಇಇಪಠ್ಯಗಳನ್ನುಆಧರಿಸಿ ಸಿದ್ಧಪಡಿಸಲಾಗುವುದು., ಇಂಗ್ಲಿಷ್ನಲ್ಲಿಅಧ್ಯಯನ ಸಾಮಗ್ರಿಯನ್ನುಒದಗಿಸಲಾಗುವುದು, ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಪರಿಣತರು ಸಿದ್ಧಪಡಿಸುತ್ತಾರೆ. XI& ಘXII ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬ್ಯಾಚ್ಗಳನ್ನು ಒದಗಿಸಲಾಗುವುದು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ರಾಜ್ಯ ಮುಖ್ಯಸ್ಥ ಅನಿಲ್ ಕುಮಾರ್, ಶಿವಮೊಗ್ಗ ಬ್ರಾಂಚ್ ಹೆಡ್ ವೀರಭದ್ರೇಶ್ವರ ಕೋರಿ, ಅಸಿಸ್ಟೆಂಟ್ ಬ್ರ್ಯಾಂಚ್ ಮ್ಯಾನೇಜರ್ ಗೀರೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

Bangalore Water Supply and Sewerage Board ಫೆಬ್ರವರಿ 9 . ನೀರಿನ‌ಕಂದಾಯ ಸ್ವೀಕೃತಿಗೆ ವಿಶೇಷ ಕೌಂಟರ್ ವ್ಯವಸ್ಥೆ

0

Bangalore Water Supply and Sewerage Board 2024-25ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗದ ವತಿಯಿಂದ ಫೆ.09 ರ ಭಾನುವಾರದಂದು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ತರೆಯಲಾಗಿದೆ.

ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾಶೀಪುರ ಮುಖ್ಯರಸ್ತೆ ಕೆನರಾ ಬ್ಯಾಂಕ್ ಎದುರು, ಪುರಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ, ಅಶೋಕನಗರ ನಂದಿನಿ ಬ್ಲಾಕ್ ಪೊಲೀಸ್ ಕ್ವಾಟ್ರಸ್ ಹತ್ತಿರ, ದೇವರಾಜ್ ಅರಸ್ ಬಡಾವಣೆ ಚೌಡಮ್ಮ ದೇವಸ್ಥಾನದ ಎದುರು ಪೆಟ್ರೋಲ್ ಬಂಕ್ ಹತ್ತಿರ ಹಾಗೂ ಸೀಗೆಹಟ್ಟಿ ಸರ್ಕಾರಿ ಶಾಲೆ ಆವರಣದಲ್ಲಿ ವಿಶೇಷ ವಸೂಲಾತಿ ಕೌಂಟರ್ ತೆರೆದಿದ್ದು, ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.

Shimoga District Health and Family Welfare ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ವಿವಿಧ ತಾತ್ಕಾಲಿಕ ಹುದ್ದೆಗಳ ನೇಮಕಾತಿ‌ ಪ್ರಕಟಣೆ

0

Shimoga District Health and Family Welfare ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಅಧೀನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿಯಿರುವ 13 ತುರ್ತು ಚಿಕಿತ್ಸಾ ವೈದ್ಯರು/ಅಪಘಾತ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ರೋಸ್ಟರ್ ಮತ್ತು ಮೆರಿಟ್ ಅಧಾರದಲ್ಲಿ ನೇಮಕ ಮಾಡಲು ಅರ್ಹ ಎಂ.ಬಿ.ಬಿ.ಎಸ್. ಪದವೀಧರ ವೈದ್ಯರುಗಳ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳ ಒಂದು ಸೆಟ್ ನಕಲು ಮತ್ತು ಮೂಲ ಪ್ರತಿಗಳು, ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಫೆ. 12 ರಂದು ಬೆಳಿಗ್ಗೆ 11.00 ರಿಂದ ಮ. 1.00 ರವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಆ & ಕು.ಕ.ಅಧಿಕಾರಿಗಳು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222382 ನ್ನು ಸಂಪರ್ಕಿಸುವುದು.

MESCOM ಫೆಬ್ರವರಿ 10 . ಗಾಂಧಿಬಜಾರ್ ಸುತ್ತಮುತ್ತ ವಿದ್ಯುತ್ ಸರಬರಾಜು‌‌ ವ್ಯತ್ಯಯ

0

MESCOM ಶಿವಮೊಗ್ಗ ನಗರದ ಗಾಂಧಿ ಬಜಾರ್‌ನ ರಾಮಣ್ಣಶ್ರೇಷ್ಠಿ ಪಾರ್ಕ್ ಬಳಿ ಹೊಸ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.10 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ಗಾಂಧಿಬಜಾರ್, ಎಲೆರೇವಣ್ಣ ಕೇರಿ, ರಾಮಣ್ಣಶ್ರೇಷ್ಠಿ ಪಾರ್ಕ್, ಎಸ್‌ಪಿಎಂ ರಸ್ತೆ, ವಿನಾಯಕ ರಸ್ತೆ, ಅನವೇರಪ್ಪ ಕೇರಿ, ಯಾಲಕಪ್ಪ ಕೇರಿ, ಬೇಡರ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ