Wednesday, March 11, 2026
Wednesday, March 11, 2026
Home Blog Page 404

Akashvani Bhadravathi ಭದ್ರಾವತಿ ಆಕಾಶವಾಣಿ ವಜ್ರಮಹೋತ್ಸವದ ಸಂಭ್ರಮ

0

Akashvani Bhadravathi ಆಕಾಶವಾಣಿ ಕಾರ್ಯಕ್ರಮಗಳು ಹೆಚ್ಚು ನಿಖರ ಮತ್ತು ಸ್ಪಶ್ಟತೆಯಿಂದ ಕೂಡಿದ್ದು ಈ ಹೊತ್ತಿಗು ಕೂಡ ತನ್ನ ಛಾಪನ್ನ ಉಳಿಸಿಕೊಂಡು ಬಂದಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವರಾದ ಡಾ. ಶ್ರೀಕಂಠ ಕೂಡಿಗೆ ಅವರು ಹೇಳಿದರು. ಅವರು ಆಕಾಶವಾಣಿ ಭದ್ರಾವತಿ ಕೇಂದ್ರಕ್ಕೆ ೬೦ ವರ್ಷ ತುಂಬಿದ ಹಿನ್ನಲೆಯಲ್ಲಿ ಆಕಾಶವಾಣಿ ಆವರಣದಲ್ಲಿ ಹಮ್ಮಿಕೊಂಡ ವಜ್ರಮಹೋತ್ಸದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ೧೯೬೫ರಲ್ಲಿ ಆರಂಭಗೊಂಡ ಆಕಾಶವಾಣಿ ಅಂದಿನಿಂದಲೂ ಇಂದಿನವರೆಗೆ ಹಲವು ನಿರ್ದೇಶಕರು ಹಾಗು ಸಿಬ್ಬಂದಿ ತಮ್ಮದೆ ಆದ ಕೊಡುಗೆಯನ್ನ ನೀಡಿದ್ದಾರೆ ಎಂದು ಹೇಳಿದರು. ಎಸ್.ಆರ್.ಭಟ್ ಅವರ ಕಲ್ಪನೆಯ ಹಲವು ವಿಶೇಷ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ದೇಶವಿದೇಶಗಳಲ್ಲಿ ಭದ್ರಾವತಿ ಆಕಾಶವಾಣಿ ಕಾರ್ಯಕ್ರಮಗಳ ಕಂಪು ಪಸರಿಸಿವೆ ಎಂದರು. Akashvani Bhadravathi ನಂತರ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಕೆ.ಸಿ.ಶಶಿಧರ್ ರವರು ಮಾತನಾಡಿ ದೇಶದಲ್ಲಿ ಕೃಷಿಗೆ ಸಂಬಂಧಿಸಿದಂತೆ ರೈತ ಬಂಧುಗಳಿಗೆ ಉಪಯುಕ್ತ ಮಾಹಿತಿಯನ್ನ ನೀಡಿ ಸ್ವಾವಲಂಭನೆ ಬದುಕಿಗೆ ಬಹುದೊಡ್ಡ ಕೊಡುಗೆ ಆಕಾಶವಾಣಿ ನೀಡಿದೆ ಎಂದರು. ಕುವೆಂಪು ವಿಶ್ವವಿದ್ಯಾಲಯದ ಉಪಕುಲಸಚಿವರಾದ ಡಾ.ಕೆ.ಆರ್.ಮಂಜುನಾಥ್ ಅವರು ಮಾತನಾಡಿ ಎಲೆಮರೆಕಾಯಿಯಂತಿರುವ ಎಷ್ಟೋ ಪ್ರತಿಭೆಗಳಿಗೆ ಆಕಾಶವಾಣಿಯು ವೇದಿಕೆಯನ್ನು ಕೊಟ್ಟು ರಾಜ್ಯ ಮತ್ತು ರಾಷ್ಟ್ರಮಟ್ಟದದಲ್ಲಿ ಗುರುತಿಸುವುಕೊಳ್ಳುವದರಲ್ಲಿ ಬಹು ದೊಡ್ಡ ಕೊಡುಗೆಯನ್ನು ನೀಡಿದೆ ಎಂದರು. ಇನ್ನು ಕೆಲವೇ ದಿನಗಳಲ್ಲಿ ಆಕಾಶವಾಣಿಯ ಪ್ರಸಾರಣ ಸಾಮರ್ಥ್ಯ, ಶಿವಮೊಗ್ಗದಲ್ಲಿ ಸ್ಥಾಪನೆಯಾಗುತ್ತಿರುವ ೧೦ ಕಿಲೊವ್ಯಾಟ್ ಸಾಮರ್ಥ್ಯದ ಎಫ್ ಎಂ ಟ್ರಾನ್ಸ್ಮಿಟ್ಟರ್ ನಿಂದಾಗಿ ಹೆಚ್ಚು ವ್ಯಾಪ್ತಿಯನ್ನು ತಲುಪಲು ಅವಿರತವಾಗಿ ಶ್ರಮಿಸುತ್ತಿರುವ ಶಿವಮೊಗ್ಗದ ಸಂಸದರಾದ ಬಿ.ವೈ.ರಾಘವೇಂದ್ರರವರನ್ನು ನೆನಪಿಸಿಕೊಳ್ಳುತ್ತ, ಅವರ ಪಾತ್ರ ದೊಡ್ಡದು ಎಂದರು. ಈ ಅಂತದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಆಕಾಶವಾಣಿ ಭದ್ರಾವತಿ ಮತ್ತು ಚಿತ್ರದುರ್ಗ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಸುಬ್ರಾಯ ಆರ್ ಭಟ್ ರವರು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ. ನೆಲ್ಲಿಕಟ್ಟೆ ಸಿದ್ದೇಶ್, ಶಿವಮೊಗ್ಗದ ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ಬಿ.ಗೋಪಿನಾಥ್, ಪಿ.ಇ.ಎಸ್ ಸಮೂಹ ಸಂಸ್ಥೆಯ ಮುಖ್ಯ ಸಂಯೋಜಕರಾದ ಡಾ. ನಾಗರಾಜ್ ಆರ್, ಶಿವಮೊಗ್ಗದ ಐ.ಎಂ.ಎ ಕಾರ್ಯದರ್ಶಿಗಳಾದ ಹಾಗು ಸುಬ್ಬಯ್ಯ ಸಮೂಹ ಸಂಸ್ಥೆಯ ಸಿ.ಇ.ಒ ಡಾ. ವಿನಯ ಶ್ರೀನಿವಾಸ್ ಉಪಸ್ಥಿತರಿದ್ದರು. ನಂತರ ಕಥಾ ಸ್ವರ್ಧೆಯಲ್ಲಿ ವಿಜೇತರಾದ ದೀಪ್ತಿ ಭದ್ರಾವತಿ, ಶ್ರೇಯ ಕೆ ಎಂ ಹಾಗು ಸಂತೆಬೆನ್ನೂರು ಫೈಜ್‌ನಟ್ರಾಜ್ ಮತ್ತು ಪಾಕಸ್ಪರ್ಧೆಯಲ್ಲಿ ವಿಜೇತರಾದ ಗಿರಿಜಾ ಹೆಗಡೆ, ಎಂ.ಎನ್.ಸುಶೀಲ, ಡಾ. ಮೈತ್ರೇಯಿ ಅವರಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕರಾದ ಬಿ.ಎಲ್.ಚಾಂದ್‌ವಾನಿ, ಮತ್ತು ಕೆ.ಎಸ್. ಸುರೇಶ್, ಮುಖ್ಯಮಹಾಪ್ರಭಂಧಕರು ಸ್ತಾವರ, ಎಲ್.ಪ್ರವೀಣ್‌ಕುಮಾರ್ ಮಹಾಪ್ರಭಂಧಕರು, ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಮಾನವ ಸಂಪನ್ಮೂಲ, ಮುತ್ತಣ್ಣ ಸುಬ್ಬರಾವ್, ಮಹಾಪ್ರಭಂಧಕರು, ಪರಿಸರ ವಿಭಾಗ ಹಾಗು ವಿಕಾಸ್ ಬಸೀರ್ ಸಹಾಯಕ ಮಹಾಪ್ರಭಂಧಕರು, ಮತ್ತು ಇತರ ಸಿಬ್ಬಂದಿವರ್ಗದವರು, ೬೦ವರ್ಷದ ಸವಿನೆನಪಿಗೆ ೬೦ ಸಸಿಗಳನ್ನು ವಿತರಿಸಿದರು. ಆಕಾಶವಾಣಿ ಕೇಂದ್ರದಲ್ಲಿ ನಿವೃತ್ತ ಹೊಂದಿದವರಿಗೆ ಮತ್ತು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂಧಿವರ್ಗದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ಕೇಳುಗರು ತಮ್ಮ ಅಭಿಪ್ರಾಯಗಳನ್ನು ಹಚ್ಚಿಕೊಂಡರು. ಕಾರ್ಯಕ್ರಮವನ್ನು ಶೋಭ ಮತ್ತು ತಂಡದವರಿಂದ ಸ್ವಾಗತಗೀತೆಯೊಂದಿಗೆ ಆರಂಭಿಸಿದರೆ ಕಾರ್ಯಕ್ರಮ ಅಧಿಕಾರಿ ಎಸ್.ಎಲ್.ರಮೇಶ್‌ಪ್ರಸಾದ್ ಅವರು ಎಲ್ಲರನ್ನು ಸ್ವಾಗತಿಸಿದರು. ಡಾ.ಗಣೇಶ್ ಆರ್ ಕೆಂಚನಾಳ ಅವರು ಪ್ರಾಸ್ತವಿಕ ನುಡಿಗಳನ್ನಾಡಿದರೆ ಶಕೀಲ್ ಅಹ್ಮದ್ ಮತ್ತು ಮೀನ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಕಾಶವಾಣಿಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Sahyadri Narayana Multispeciality Hospital ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಫೆ.9ರಂದು ಕ್ಯಾನ್ಸ‌ರ್ ಜಾಗೃತಿಗಾಗಿ ಸೈಕ್ಲೋಥಾನ್ ಕಾರ್ಯಕ್ರಮ

0

Sahyadri Narayana Multispeciality Hospital ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶಿವಮೊಗ್ಗದ ಸೈಕಲ್ ಕ್ಲಬ್ ಸಹಯೋಗದಲ್ಲಿ, ಫೆಬ್ರವರಿ 9, ಭಾನುವಾರ ಬೆಳಿಗ್ಗೆ 6:30ಕ್ಕೆ ಸಾರ್ವಜನಿಕರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಸೈಕ್ಲೋಥಾನ್ ಆಯೋಜಿಸಿದೆ.

ಪ್ರತಿ ವರ್ಷ, ಫೆಬ್ರವರಿ 4ರಂದು ವಿಶ್ವ ಕ್ಯಾನ್ಸ‌ರ್ ದಿನವನ್ನು ಆಚರಿಸಲಾಗುತ್ತದೆ, ಇದನ್ನು ಕ್ಯಾನ್ಸರ್ ಬಗ್ಗೆ ಜಾಗೃತಿ ಹೆಚ್ಚಿಸಲು ಮತ್ತು ಅದರ ತಡೆಗಟ್ಟುವಿಕೆ, ಪತ್ತೆ ಮತ್ತು ಚಿಕಿತ್ಸೆ ಉತ್ತೇಜಿಸಲು ನಡೆಸಲಾಗುತ್ತದೆ. ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಜನರಲ್ಲಿ ಕ್ಯಾನ್ಸ‌ರ್ ಕುರಿತು ಅರಿವು ಮೂಡಿಸಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಈ ಜಾಗೃತಿ ಕಾರ್ಯಕ್ರಮಗಳ ಅಂಗವಾಗಿ, ಶಿವಮೊಗ್ಗ ಸೈಕಲ್ ಕ್ಲಬ್ ಸಹಯೋಗದಲ್ಲಿ ಸೈಕ್ಲೋಥಾನ್ ಆಯೋಜಿಸಲಾಗಿದೆ. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀಯುತ ವರ್ಗಿಸ್ ಪಿ. ಜಾನವರು ಮತ್ತು ಆಡಳಿತ ಮಂಡಳಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿವಮೊಗ್ಗದ ನಿವಾಸಿಗಳನ್ನು ಆಹ್ವಾನಿಸಿದ್ದಾರೆ.

Sahyadri Narayana Multispeciality Hospital ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕಡ್ಡಾಯವಾಗಿ ನೀಡಲಾದ QR ಕೋಡ್ ಅನ್ನು ಸ್ಕಾನ್ ಮಾಡಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿತ ಭಾಗವಹಿಸುವ ಎಲ್ಲರಿಗೂ ಆಸ್ಪತ್ರೆಯಿಂದ ವಿಶೇಷ ಉಡುಗೊರೆಗಳು ಇರುತ್ತವೆ.

ಸೈಕ್ಲೋಥಾನ್ ಮಾರ್ಗ:

ಸೈಕ್ಲೋಥಾನ್, ನಾರಾಯಣ ಕ್ಲಿನಿಕ್, ಕುವೆಂಪು ರಸ್ತೆ ಯಿಂದ ಪ್ರಾರಂಭವಾಗಿ ಉಷಾ ನರ್ಸಿಂಗ್ ಹೋಂ, ವಿನೋಬಾನಗರ ಪೊಲೀಸ್ ಠಾಣೆ, ಆಲ್ಕೂಳ ಸರ್ಕಲ್, ಗೋಪಾಳ ಬಸ್ ನಿಲ್ದಾಣ, NT ರಸ್ತೆ ಮೂಲಕ ಸಾಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಹರಕೆರೆ ನಲ್ಲಿ ಅಂತ್ಯಗೊಳ್ಳಲಿದೆ.

ವಿಶೇಷ ಉದ್ದೇಶ

2.ಕ್ಯಾನ್ಸರ್ ತಡೆಯಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು, ಈ ವರ್ಷ “ಯುನೈಟೆಡ್ ಬೈ ಯೂನಿಕ್” ಎಂಬ ವಿಷಯದಡಿ ನಗರದ ಹೃದಯ ಭಾಗದಲ್ಲಿರುವ ನಾರಾಯಣ ಕ್ಲಿನಿಕ್ ನಲ್ಲಿ ಹಾಗೂ ಆಸ್ಪತ್ರೆಯ ಆವರಣದಲ್ಲಿರುವ ಕ್ಯಾನ್ಸರ್ ಕೇರ್ ವಿಭಾಗದಲ್ಲಿ ಕ್ಯಾನ್ಸ‌ರ್ ಕುರಿತು ಜಾಗೃತಿ ಮೂಡಿಸಲು ಕ್ಯಾನ್ಸರ್ ಅನ್ನು ಬಿಂಬಿಸುವ ವಿವಿಧ ಬಣ್ಣಗಳ ವಿದ್ಯುತ್ ದ್ವೀಪಗಳನ್ನು ಹಾಕಿ ಅಲಂಕರಿಸುವುದರ ಮೂಲಕ ನಗರದಲ್ಲಿನ ಎರಡು ಕಟ್ಟಡಗಳು ವಿದ್ಯುತ್ ದ್ವೀಪಗಳ ಅಲಂಕಾರದಿಂದ ಕಂಗೊಳಿಸುತ್ತ ಜನರಲ್ಲಿ ಹೆಚ್ಚಿನ ಜಾಗೃತಿ ಮತ್ತು ಅರಿವನ್ನು ಮೂಡಿಸಲಾಗುತ್ತಿದೆ.

Karnataka Media Academy ಮಾಧ್ಯಮ ಅಕಾಡೆಮಿಯಿಂದ ಪ್ರಥಮ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನ

0

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿಯು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಸುದ್ದಿ ಛಾಯಾಚಿತ್ರಗ್ರಾಹಕರಿಗಾಗಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಿದೆ.
ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಮೊದಲ ಮೂರು ಛಾಯಾಚಿತ್ರಗಳಿಗೆ ಕ್ರಮವಾಗಿ 35,000/- ರೂ., 25,000/- ರೂ. ಹಾಗೂ 15,000/- ರೂ. ನಗದು ಬಹುಮಾನ ನೀಡಲಾಗುವುದು. ಆಯ್ದ ಅತ್ಯುತ್ತಮ ಛಾಯಾಚಿತ್ರಗಳನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಮಾರ್ಚ್‌ ತಿಂಗಳಲ್ಲಿ ಅಕಾಡೆಮಿ ವತಿಯಿಂದ ಏರ್ಪಡಿಸಲಾಗುವ ಸುದ್ದಿ ಛಾಯಾಗ್ರಹಣ ಕುರಿತ ಕಾರ್ಯಾಗಾರದ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನದಲ್ಲಿ ಇರಿಸಲಾಗುವುದು.
ಸ್ಪರ್ಧೆಯ ಷರತ್ತುಗಳು:
• ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು, ದಿನಾಂಕ :01-01-.202 4 ರಿಂದ 31-01-2025 ರ ಅವಧಿಯಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು. ಪ್ರತಿ ಸುದ್ದಿ ಛಾಯಾಚಿತ್ರ ಗ್ರಾಹಕರು ತಾವೇ ಚಿತ್ರಿಸಿರುವ ಎರಡು ಸುದ್ದಿ ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸಲ್ಲಿಸಬಹುದು.
• ಸುದ್ದಿ ಛಾಯಾಚಿತ್ರಗಳನ್ನು ಚಿತ್ರಿಸಿರುವುದಕ್ಕೆ ಯಾವುದೇ ಭೌಗೋಳಿಕ ಪರಿಮಿತಿ ಇರುವುದಿಲ್ಲ.
• ಪ್ರತಿ ಸ್ಪರ್ಧಿಯೂ ಅವರು ಸುದ್ದಿ ಛಾಯಾಚಿತ್ರಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ಸಂಪಾದಕರಿಂದ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣ ಪತ್ರ ಅಥವಾ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಕರ್ತರಿಗಾಗಿ ನೀಡುವ Accreditation Card ಹೊಂದಿರುವವರು ಅದರ ದೃಢೀಕೃತ ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು.
• ಛಾಯಾಚಿತ್ರಗಳ ಮೇಲೆ ಹೆಸರು, ಶೀರ್ಷಿಕೆ ಹಾಗೂ ವಾಟರ್ ಮಾರ್ಕ್‌ಗಳು ಇರಬಾರದು.
• ಸ್ಪರ್ಧೆಗೆ ಕಳಿಸುವ ಛಾಯಾಚಿತ್ರಗಳ ಅಂದರೆ ಡಿಜಿಟಲ್ ಇಮೇಜ್ ಗಳನ್ನುJPEG format ನಲ್ಲಿಮಾತ್ರ ಸಲ್ಲಿಸಬೇಕು.
• ಪ್ರದರ್ಶನಕ್ಕೆಆಯ್ಕೆಯಾಗುವ ಛಾಯಾಚಿತ್ರಗಳನ್ನು20”x 30” ಅಳತೆಯಲ್ಲಿಮುದ್ರಣ ಮಾಡಿಸಬೇಕಾಗಿರುವುದರಿಂದ ನೀವು ಕಳಿಸುವ ಇಮೇಜ್ ಗಳು 20”x 30” ಅಳತೆಯ ,300 DPI ನಲ್ಲಿದ್ದು ಕನಿಷ್ಠ 5MB ಗಾತ್ರದಲ್ಲಿರಬೇಕು.
• ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಿರುವ ಚಿತ್ರಗಳನ್ನುಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ.
• ಸ್ಪರ್ಧೆಯಲ್ಲಿ ಭಾಗವಹಿಸುವ ಸುದ್ದಿಛಾಯಾಚಿತ್ರಗಳು ಸಹಜವಾಗಿರಬೇಕು. ಚಿತ್ರದಲ್ಲಿನ ಯಾವುದೇ ಭಾಗವನ್ನುತೆಗೆಯುವುದಾಗಲಿ ಅಥವಾ ಸೇರಿಸುವುದಾಗಲಿ ಮಾಡಿರಬಾರದು.
Karnataka Media Academy ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಛಾಯಾಗ್ರಾಹಕರು mediaacademy.karnataka.gov.in ವೆಬ್ಸೈಟ್ನಲ್ಲಿಇರುವ ನಿಗದಿತ ಅರ್ಜಿಯನ್ನುDown load ಮಾಡಿಕೊಂಡು ಭರ್ತಿಮಾಡಿ, ತಮ್ಮ ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಇಮೇಜ್ಗಳನ್ನು photo.karnatakamediaacademy@gmail.com ಇ-ಮೇಲ್ ವಿಳಾಸಕ್ಕೆ ದಿನಾಂಕ: 15-02-2025 ರಂದು ಸಂಜೆ 5:00ಗಂಟೆ ಒಳಗಾಗಿ ಸಲ್ಲಿಸತಕ್ಕದ್ದು. ನಂತರ ಬಂದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
• ಸ್ಪರ್ಧೆಗೆ ಬಂದಿರುವ ಛಾಯಾಚಿತ್ರಗಳನ್ನುಪ್ರಶಸ್ತಿಗೆ ಹಾಗೂ ಪ್ರದರ್ಶನಕ್ಕೆಆಯ್ಕೆಮಾಡಲು ಸುದ್ದಿ ಛಾಯಾಗ್ರಹಣ ಕ್ಷೇತ್ರದಲ್ಲಿಅನುಭವ ಹೊಂದಿರುವ ಮೂವರು ತೀರ್ಪುಗಾರರಿದ್ದುಅವರು ತೆಗೆದುಕೊಂಡ ತೀರ್ಮಾನವೇ ಅಂತಿಮವಾಗಿರುತ್ತದೆ.
• ಪ್ರಶಸ್ತಿಗೆ ಆಯ್ಕೆಯಾದ ಮೂರು ಛಾಯಾಚಿತ್ರಗಳಿಗೆ ಪ್ರಥಮ ಬಹುಮಾನ: ರೂ.35,000/ ದ್ವಿತೀಯ ಬಹುಮಾನ: ರೂ. 25000, ಹಾಗೂ ತೃತೀಯ ಬಹುಮಾನ: ರೂ.15000ಗಳನ್ನುನೀಡಲಾಗುವುದು.
• ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ 9448227768 ಹಾಗೂ 9449245980 ನ್ನು ಸಂಪರ್ಕಿಸಬಹುದು.

City Corporation Shivamogga ಫೆ.10 ರಂದು ಶಿವಮೊಗ್ಗದಲ್ಲಿ ಕಾಯಕ ಶರಣರ ಜಯಂತಿ

0

City Corporation Shivamogga ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಫೆ.10 ರ ಬೆಳಿಗ್ಗೆ 11.00 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಇವರು ನೆರವೇರಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಶಾಸಕರಾದ ಎಸ್.ಎನ್. ಚನ್ನಬಸಪ್ಪ ಇವರು ಅಧ್ಯಕ್ಷತೆ ವಹಿಸುವರು. City Corporation Shivamogga ಶಾಸಕರು ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಬಿ.ಕೆ. ಸಂಗಮೇಶ್ವರ ಮತ್ತು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷರಾದ ಬಿ.ಕೆ. ಗೋಪಾಲಕೃಷ್ಣ ಬೇಳೂರು, ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಹಾನಗರ ಪಾಲಿಕೆ, ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಸೋಮಶೇಖರ್ ಹೆಚ್. ಶಿಮೊಗ್ಗಿ ಇವರು ವಿಶೇಷ ಉಪನ್ಯಾಸ ನೀಡುವರು.

MESCOM ಫೆ.08 ರಂದು ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ-6ರ ವ್ಯಾಪ್ತಿಯಲ್ಲಿ ಎನ್.ಟಿ.ರಸ್ತೆ ನ್ಯಾಷನಲ್ ಹೈವೆ ಕಾಮಗಾರಿ ಹಮ್ಮಿಕೊಂಡಿರುವುದ ರಿಂದ ಫೆ. 08 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹರಕೆರೆ, ಹಳೇ ಮಂಡ್ಲಿ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಮಂಜುನಾಥ ರೈಸ್‌ಮಿಲ್, ಬೆನಕೇಶ್ವರ ರೈಸ್‌ಮಿಲ್, ರಾಮಿನಕೊಪ್ಪ ಅನ್ನಪೂರ್ಣೇಶ್ವರಿ ಬಡಾವಣೆ, ಹೊಸಹಳ್ಳಿ, ಲಕ್ಷ್ಮೀಪುರ, ಹೊಸೂರು, ಐಹೊಳೆ, ಭಾರತಿನಗರ, ಶಾರದನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

JCI Shivamogga ಪ್ರಕೃತಿಯ ವಿಸ್ಮಯಗಳನ್ನು ಅರಿಯಲು ಚಾರಣ ಸಹಕಾರಿ: ಜಿ.ಗಣೇಶ್

0

JCI Shivamogga ಪ್ರಕೃತಿಯ ವಿಸ್ಮಯಗಳನ್ನು ಅರಿಯಲು ಚಾರಣ ಸಹಕಾರಿ. ಚಾರಣದಲ್ಲಿ ಪಾಲ್ಗೊಳ್ಳುವುದರಿಂದ ದೇಹ, ಮನಸ್ಸು ಸದೃಢವಾಗುತ್ತದೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ಗಣೇಶ್ ಹೇಳಿದರು.
ದಿಕ್ಸೂಚಿ ಅಡ್ವೆಂಚರ‍್ಸ್ ವತಿಯಿಂದ ಹಿಮಾಲಯದ ಅತ್ಯಂತ ಸುಂದರ ಹಾಗೂ ಚಾರಣಿಗರಿಗೆ ಸವಾಲಾಗಿರುವ 12 ಸಾವಿರ ಅಡಿ ಎತ್ತರದ ಕೌರಿ ಪಾಸ್ ಚಳಿಗಾಲದ ಚಾರಣಕ್ಕೆ ಚಾರಣಿಗರನ್ನು ಬಿಳ್ಕೋಡುಗೆ ನೀಡಿ ಮಾತನಾಡಿ, ಚಾರಣದಿಂದ ಪರಸ್ಪರರಲ್ಲಿ ಓಡನಾಟ, ಪರಿಚಯವಾಗುತ್ತದೆ. ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ವರ್ಷಕ್ಕೊಂದು ಬಾರಿಯಾದರೂ ಹಿಮಾಲಯ ಚಾರಣ ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಯೂತ್ ಹಾಸ್ಟೆಲ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಚಾರಣದಲ್ಲಿ ಭಾಗಿಯಾಗುವುದರಿಂದ ವಿಶೇಷ ಸ್ಥಳಗಳ ಪರಿಚಯದ ಜತೆಗೆ ಪ್ರಕೃತಿಯ ಹಾಗೂ ಪರಿಸರದ ಸಂಸ್ಕೃತಿ, ಜನರ ಜೀವನಶೈಲಿ, ವೈವಿಧ್ಯತೆ ಪರಿಚಯವಾಗುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಜನರು ನಡೆಸುವ ಜೀವನ ವಿಧಾನದ ಬಗ್ಗೆ ಮಾಹಿತಿ ತಿಳಿಯುತ್ತದೆ. ಬೆಟ್ಟಗಳ ಚಾರಣದಿಂದ ವಿಶೇಷ ಅನುಭವ ನಮ್ಮದಾಗುತ್ತದೆ. ದಿಕ್ಸೂಚಿ ಅಡ್ವೆಂಚರ್ ವತಿಯಿಂದ ಅತ್ಯಂತ ಕಡಿಮೆ ದರದಲ್ಲಿ ಚಾರಣ ಆಯೋಜಿಸಲಾಗಿದೆ ಎಂದರು.
JCI Shivamogga ಇದೇ ಸಂದರ್ಭದಲ್ಲಿ ದಿಕ್ಸೂಚಿ ಅಡ್ವೆಂಚರ್ ಅಧ್ಯಕ್ಷ ಪೃಥ್ವಿರಾಜ್ ಗಿರಿಮಾಜಿ ಮಾತನಾಡಿ, ಈಗಾಗಲೇ ನಮ್ಮ ಸಂಸ್ಥೆ ವತಿಯಿಂದ ಜಿಲ್ಲೆ ಹಾಗೂ ರಾಜ್ಯಮಟ್ಟದ ಚಾರಣಗಳನ್ನು 100ಕ್ಕೂ ಹೆಚ್ಚು ಬಾರಿ ಆಯೋಜಿಸಿದ್ದೇವೆ. ಚಾರಣದಲ್ಲಿ ಭಾಗವಹಿಸುವುದರಿಂದ ಸಾಹಸ ಮನೋಭಾವ, ಕ್ರೀಡಾಸಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಚಾರಣಿಗರು ಕೌರಿ ಪಾಸ್ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ಕೆ.ವೈಷ್ಣವಿ, ಜಿ.ಓಂಕಾರ್, ಅಶ್ವಿನಿ ಸಿ ಗೋಗಿ, ಜಿ.ಪಿ.ಸುಧೀರ್ ಕುಮಾರ್, ಜಿ.ಇ.ಅರ್ಚನಾ, ಎಂ.ರಘು, ಸಿ.ಎನ್.ಅನ್ನಪೂರ್ಣ, ಜಿ.ಆರ್.ವಿನೋದ್ ಕುಮಾರ್, ಗಣೇಶ್ ಗಾಣಿಗೆರೆ, ವಿ.ಶ್ರೇಯಸ್, ಧ್ರುವ ಗೋಗಿ, ಎಂ.ಜಿ.ಅಶೋಕ್, ಬಿ.ಎಸ್.ಕಿರಣ್‌ಕುಮಾರ್ ಇತರರಿದ್ದರು.

Karnataka Sanga ಫೆ.08 ರಂದು ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿ-2024 ಪ್ರದಾನ ಸಮಾರಂಭ

0

Karnataka Sanga ಫೆಬ್ರವರಿ 08, 2025ರ ಶನಿವಾರ ಸಂಜೆ 5;30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣಶಾಸ್ತ್ರೀ ಇವರ ಅಧ್ಯಕ್ಷತೆಯಲ್ಲಿ “ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿ-2024 ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ನೀನಾಸಂ ಹೆಗ್ಗೋಡಿನ ರಂಗಕರ್ಮಿ, ಸಾಹಿತಿ ಶ್ರೀ ಕೆ.ವಿ. ಅಕ್ಷರ ಅವರು ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿ-೨೦೨೪ನ್ನು ಸ್ವೀಕರಿಸಲಿದ್ದಾರೆ.
ಪ್ರೊ. ಬಿ.ಎಂ. ಕುಮಾರಸ್ವಾಮಿ, ಆರ್ಥಿಕ ತಜ್ಞರು, ಪರಿಸರ ಚಿಂತಕರು ಹಾಗೂ ರಂಗಕರ್ಮಿಗಳು, ಶಿವಮೊಗ್ಗ ಇವರು ಶ್ರೀ ಕೆ.ವಿ. ಅಕ್ಷರ ಅವರ ಕುರಿತು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸಲಾಗಿದೆ.

Klive Special Article ಆಕಾಶವಾಣಿ ಭದ್ರಾವತಿ.ವಜ್ರಮಹೋತ್ಸವ ಸಂಭ್ರಮ.ಲೇ; ಬಿ.ಎನ್.ಜ್ವಾಲನಪ್ಪ. ಮೈಸೂರು

0

Klive Special Article ‘ ಆಕಾಶವಾಣಿ ‘ ಸಂಸ್ಕ್ರತ ಮೂಲದ ಒಂದು ಪದ‌.ಇದರರ್ಥ ಆಕಾಶದಿಂದ ಬರುವ ‘ ಘೋಷಣೆ ‘, ಅಥವ ‘ ಸ್ವರ್ಗದಿಂದ ಬರುವ ಧ್ವನಿ”. ಯುರೋಪ್ನಲ್ಲಿ ನಡೆದ ಪುನರುತ್ಥಾನ ಕಾಲದಲ್ಲಿ ವಿಜ್ಞಾನಿ ಮಾರ್ಕೋನಿ ರೇಡಿಯೋವನ್ನು ಕಂಡು ಹಿಡಿದ. 1936 ರಲ್ಲಿ ರೇಡೀಯೋ ವಿಷಯದಲ್ಲಿ ಆಕಾಶವಾಣಿ ಶಬ್ಧವ‌ನ್ನು ಎಂ‌.ವಿ.ಗೋಪಾಲಸ್ವಾಮಿ ತಮ್ಮ ನಿವಾಸದಲ್ಲಿ ಬಾನುಲಿ ಕೇಂದ್ರ ಸ್ಥಾಪನೆಯಾದ ನಂತರ ಈ ಶಬ್ಧ ಚಾಲ್ತಿಯಲ್ಲಿ ಬಂತು.
ನಭೋಮಂಡಲದ ಪೂರ್ವದಿಕ್ಕಿನಲ್ಲಿ ವರ್ಣಮಯ ರಂಗೋಲಿಯ ಚಿತ್ತಾರವನ್ನು ಬಾನಿನಂಗಳದಲ್ಲಿ ಬಿಡಿಸುವುದರೊಂದಿಗೆ
ಮತ್ತು ಆಕಾಶವಾಣಿಯಲ್ಲಿ ಮುಂಜಾನೆ ಪ್ರಸಾರವಾಗುತ್ತಿದ್ದ ” Signature Tune ‘ ಅನ್ನು ಖುಷಿಯಿಂದ ಕಿವಿಗೊಟ್ಟು ಆಲಿಸುವುದರೊಂದಿಗೆ ನಮ್ಮೆಲ್ಲರ ದೈನಂದಿನ ಬದುಕು ಆರಂಭವಾಗುತಿತ್ತು.
ಶ್ರವ್ಯ ಮಾದ್ಯಮದಲ್ಲಿ ಅತ್ಯಂತ ಪರಿಣಾಮಕಾರಿಯಾಗಿದ್ದ ಆಕಾಶವಾಣಿಯ ಜತೆಗಿನ ನಮ್ಮೆಲ್ಲರ ಒಡನಾಟ- ಸಂಬಂಧ,ಆತ್ಮೀಯತೆ ಇಂದಿಗೂ ಕಾಡುತ್ತೆ. ಲೇಖಕರು,ಕಲಾವಿದರು,ಜಾನಪದ ಗಾಯಕರು ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಿಸಲು ಸೂಕ್ತ ವೇದಿಕೆಯನ್ನು ಒದಗಿಸಿ, ಬೊಗಸೆ ತುಂಬಾ ಕಾಸು ತುಂಬುತ್ತಿದ್ದ ಆಕಾಶವಾಣಿ ಅನೇಕರಿಗೆ ಒಂದು ರೀತಿಯ ತವರುಮನೆ. ಸದ್ದುಗದ್ದಲ ಮಾಡದೆ, ಜುಜುಬಿ ಪ್ರಚಾರದಿಂದ ದೂರವಿರುತ್ತಿದ್ದ , ಮೂಲೆ ಮೂಲೆಗಳಲ್ಲಿನ ಪ್ರತಿಭೆಗಳ ಶೋಧಿಸಿ ಅವಕಾಶ ಕಲ್ಪಿಸಿಕೊಟ್ಟದ್ದು ಆಕಾಶವಾಣಿ.
ತನ್ನ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಶೋತೃಗಳ ಮನದಂಗಳಲ್ಲಿ ಬೆಚ್ಚನೆಯ ನೆನಪು,ಸಾರ್ಥಕತೆಯ ಭಾವದ ಹಿತವಾದ ಸ್ಪರ್ಶದ ಬೀಜ ಬಿತ್ತಿದ್ದ ಆಕಾಶವಾಣಿಯ ಸಾಧನೆ ಒಂದಲ್ಲ,ಎರಡಲ್ಲ…
Klive Special Article ಸರ್ಕಾರ-ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಆಕಾಶವಾಣಿ ಮಾಹಿತಿ-ಮನರಂಜನೆಯ ಆಶಯದೊಂದಿಗೆ ಅಸ್ತಿತ್ವಕ್ಕೆ ಬಂದಿದೆ.ಆಯಾ ಪ್ರದೇಶದ ಸಂಸ್ಕ್ರತಿ,ಪರಂಪರೆ,ವಾಣಿಜ್ಯ,ಕೈಗಾರಿಕೆ- ಕೃಷಿಯ ಮೇಲೆ ಬೆಳಕು ಬೀರುವಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಬಿತ್ತರಿಸುವುದರಲ್ಲಿ ಮನೆಮಾತಾಗಿ ,ಎಲ್ಲರ ಮನವನ್ನು ಅಪಹರಿಸಿರುವ ಭದ್ರಾವತಿ ಆಕಾಶವಾಣಿಗೆ ವಜ್ರಮಹೋತ್ಸವದ ಸಂಭ್ರಮ- ದೊಡ್ಡ ಗೌರವ.ಕಳೆದೋದ ೬೦ ವರ್ಷಗಳ ಸುಧೀರ್ಘ ಅವಧಿಯಲ್ಲಿ ಆಕಾಶವಾಣಿಯ ಪ್ರಗತಿಗಾಗಿ ನಿಷ್ಠೆ , ಪ್ರಾಮಾಣಿಕತೆ , ಕಾರ್ಯತತ್ಪರತೆ ಮತ್ತು ಬದ್ದತೆಯಿಂದ ಸದಾ ಹಸನ್ಮುಖರಾಗಿ ಸೇವೆ ಸಲ್ಲಿಸಿರುವ ಅಧಿಕಾರಿ ವೃಂದ ಮತ್ತು ಸಿಬ್ಬ‌ಂದಿ ವರ್ಗವನ್ನು ನಾವಿಂದು ಸ್ಮರಿಸಬೇಕಾಗಿದೆ..
ಆಕಾಶವಾಣಿಯ ವಜ್ರಮಹೋತ್ಸವ ಸಮಾರಂಭ ಗಣ್ಯರ ,ಶೋತೃಗಳ ಉಪಸ್ಥಿತಿಯಲ್ಲಿ ಅರ್ಥಪೂರ್ಣವಾಗಿ,ಯಶಸ್ವಿಯಾಗಿ ಚಂದಗಾಣಲಿ.
ಮತ್ತೊಮ್ಮೆ ಶುಭಾಶಯ
ಶರಣುಶರಣಾರ್ಥಿ
ಬಿ.ಎನ್.ಜ್ವಾಲನಪ್ಪ
” ಪರ್ವ ” ,ರೂಪಾನಗರ
ಮೈಸೂರು

Kannada Sahitya Parishat ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ. ಕನ್ನಡ ಮಾಧ್ಯಮ‌ ನಿರಂತರವಾಗಿರಲಿದೆ- ಸಚಿವ‌ ಮಧುಬಂಗಾಪ್ಪ

0

Kannada Sahitya Parishat ಶಿವಮೊಗ್ಗ ನಗರದ ಸಾಹಿತ್ಯ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಪರಿಷತ್‌ಕಟ್ಟಡದ ಮುಂದುವರೆದ ಕಾಮಗಾರಿಗಳಿಗಾಗಿ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ನೀಡುವುದರ ಜೊತೆಗೆ ವೈಯಕ್ತಿಕವಾಗಿ 5ಲಕ್ಷ ರೂ.ಗಳನ್ನು ಪರಿಷತ್‌ಚಟುವಟಿಕೆಗಳಿಗಾಗಿ ನೀಡಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಗ್ರಾಮ ಚಾಲುಕ್ಯ ನಗರದಲ್ಲಿ ಏರ್ಪಡಿಸಿದ್ದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಷತ್‌ಕಟ್ಟಡದ ನೀಲನಕ್ಷೆಯನ್ನು ಉದ್ಘಾಟಿಸಿದ ನಂತರ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಕನ್ನಡಿಗರ ಹೆಮ್ಮೆಯ ಅಸ್ಮಿತತೆಯ ಪ್ರತೀಕವಾಗಿರುವ ಹಾಗೂ ಕನ್ನಡಿಗರ ಪ್ರಾತಿನಿಧಿಕ ಏಕೈಕ ಸಂಸ್ಥೆಯಾಗಿರುವ ಸಾಹಿತ್ಯ ಪರಿಷತ್ತು ಕನ್ನಡದ ಉಳಿವು, ವಿಕಾಸದ ಕುರಿತು ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅದಕ್ಕಾಗಿ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದ ಅವರು, ಕನ್ನಡದ ನೆಲ, ಜಲ. ಭಾಷೆಯ ಉಳಿವು ವಿಕಾಸದ ಕಾರ್ಯಕ್ರಮಗಳು ಮುಂದುವರೆಯಲಿ ಎಂದವರು ನುಡಿದರು.
Kannada Sahitya Parishat ಈ ನೆಲದ ಶ್ರೀಮಂತ ಸಾಹಿತ್ಯ, ಕಲೆ, ಸಂಗೀತ, ನೃತ್ಯ, ಜನಪದ ಮತ್ತಿತರ ಎಲ್ಲಾ ಪ್ರಕಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಹಿಂದೆಂದಿಗಿಂತ ಇಂದು ಹೆಚ್ಚು ಅಗತ್ಯವಿದೆ. ವಿಶೇಷವಾಗಿ ಕನ್ನಡದ ಪ್ರತಿ ಕಾರ್ಯಕ್ರಮಗಳು ಹಬ್ಬದ ಸಂಭ್ರಮವನ್ನು ಮೈದಳೆಯಬೇಕು. ನಾನೂ ಓರ್ವ ಕನ್ನಡಿಗನೆಂಬ ಹೆಮ್ಮೆ ನನಗಿದೆ. ಆ ಭಾಷಾಭಿಮಾನವನ್ನು ಯಾರೂ ನನ್ನಿಂದ ಅಳಿಸಲಾಗದು ಎಂದವರು ನುಡಿದರು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಲವು ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ ಆದರೂ ಕನ್ನಡ ಕಲಿಕೆ ಕಡ್ಡಾಯವಾಗಿರಲಿದೆ. ಕನ್ನಡ ಮಾಧ್ಯಮ ನಿರಂತರವಾಗಿರಲಿದೆ. ಜಿಲ್ಲೆಯ ಹಿರಿಯ ಸಾಹಿತಿ ನಾ.ಡಿಸೋಜ ಅವರು ಭಾಷೆಗೆ ನೀಡಿದ ಕೊಡುಗೆ ಅಪಾರವಾಗಿದೆ. ಅವರನ್ನು ನೆನೆಯವುದು ಎಲ್ಲರ ಕರ್ತವ್ಯವಾಗಿದೆ. ಕುವೆಂಪು ವಿಶ್ವವಿದ್ಯಾಲಯದ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರವು ಎಲ್ಲ ರೀತಿಯ ನೆರವು ಸಹಕಾರವನ್ನು ನೀಡಲಿದೆ. ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಅಧಿಕಾರಾವಧಿಯಲ್ಲಿ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಅವರಿಗೆ ಹಾಗೂ ನಟಸಾರ್ವಭೌಮ ಡಾ|| ರಾಜ್‌ಕುಮಾರ್‌ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿರುವುದನ್ನು ನೆನಪಿಸಿಕೊಂಡರು.
ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಆಶಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಸಮ್ಮೇಳನಾಧ್ಯಕ್ಷ ಡಾ.ಎಸ್.ಪಿ.ಪದ್ಮಪ್ರಸಾದ್‌ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರುಗಳು ಹಾಗೂ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದರು.

Gruhalakshmi yojana ಬೆಳೆ ಹಾನಿಗೆ ಪರಿಹಾರಧನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

0

Gruhalakshmi yojana ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗುವ ಹಣವನ್ನು ಬ್ಯಾಂಗಳ ವ್ಯವಸ್ಥಾಪಕರು ಸಾಲದ ಖಾತೆಗೆ ಜಮಾ ಮಾಡಿಕೊಳ್ಳದಂತೆ ಸೂಚಿಸಿದರು.

ಸೌಲಭ್ಯಕ್ಕಾಗಿ ಬಂದ ಅರ್ಜಿಗಳನ್ನು ತ್ವರಿತವಾಗಿ ವಿಲೇ ಮಾಡುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ 4000 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆಗೆ ಕೊಳೆರೋಗ ತಗುಲಿದ್ದರಿಂದಾಗಿ ಶೇ. 30ರಷ್ಟು ಬೆಳೆ ಹಾನಿಗೋಳಗಾಗಿದೆ. ಬೆಳೆ ಹಾನಿಗೆ ಪರಿಹಾರಧನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಿಕಾರಿಪುರ ಕೃಷಿ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.