Wednesday, March 11, 2026
Wednesday, March 11, 2026
Home Blog Page 398

ಫೆ. 22 ರಿಂದ ಎರಡು ದಿನಗಳ ಕಾಲ “ಶ್ರೀಕಾಂತಣ್ಣ ಕಪ್ ಸೀಸನ್ – 2″ ಕ್ರಿಕೆಟ್ ಪಂದ್ಯಾವಳಿ” ಆಯೋಜನೆ – ಟ್ರೋಫಿ – ಸಮವಸ್ತ್ರ ಅನಾವರಣ

0

ಕ್ರೀಡಾಕೂಟ ಆಯೋಜನೆಗಳಿಂದ ಹಲವಾರು ಪ್ರಯೋಜನಗಳಿವೆ ಎಂದು ಭಾವಸಾರ ಕ್ಷತ್ರಿಯ ಮಹಜನ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ ಅಭಿಪ್ರಾಯ ವ್ಯಕ್ತಪಡಿಸಿದರು. ಶಿವಮೊಗ್ಗ ನಗರದ ಹೊಟೆಲ್ ವೊಂದರಲ್ಲಿ ಆಯೋಜಿಸಲಾಗಿದ್ದ “ಶ್ರೀಕಾಂತಣ್ಣ ಕಪ್” ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಬಹುಮಾನ ಟ್ರೋಫಿಗಳ ಅನಾವರಣ ಹಾಗೂ ತಂಡಗಳ ಟೀ ಶರ್ಟ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ. ಕ್ರೀಡಾಕೂಟಗಳ ಆಯೋಜನೆಯಿಂದಾಗಿ ಭ್ರಾತೃತ್ವ ಬೆಳೆಯುತ್ತದೆ. ಜೊತೆಗೆ ಸಮಾನ ಮನಸ್ಕರನ್ನು, ಸ್ನೇಹಿತರನ್ನು ಒಗ್ಗೂಡಿಸುತ್ತದೆ ಎಂದರು. ಎಲ್ಲಾ ಕ್ರೀಡೆಗಳಲ್ಲಿ ಸೋಲು ಗೆಲುವು ಎಂಬುದು ಸಹಜವಾಗಿದ್ದು, ಇದನ್ನು ಯುವಕರು, ಸಮಾನವಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ ಎಂದರು. ಅದರಲ್ಲೂ ಸಮುದಾಯಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿರುವುದು ನಿಜಕ್ಕೂ ಹರ್ಷದಾಯಕ ವಿಚಾರವಾಗಿದ್ದು, ಶ್ರೀಕಾಂತಣ್ಣ ಕಪ್ ಪಂದ್ಯಾವಳಿ ಸಮಯೋಚಿತವಾಗಿದೆ ಎಂದು ಹೇಳಿದರು.

ಈ ವೇಳೆ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ಟ್ರೋಫಿ ಅನಾವರಣಗೊಳಿಸಲಾಯಿತು. ಜೊತೆಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ 12 ತಂಡಗಳ ಸಮವಸ್ತ್ರಗಳನ್ನು ಕೂಡ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಆಯೋಜಕರಾದ ವಿನಯ್ ತಾಂದ್ಲೆ ಹಾಗೂ ಮಂಜುನಾಥ್ ಬೇದ್ರೆ ಇವರು ಪಂದ್ಯಾವಳಿ ಕುರಿತು ಎಲ್ಲಾ ತಂಡಗಳ ಆಟಗಾರರಿಗೆ ಮಾಹಿತಿ ನೀಡಿದರು. ನಗರದ ATNCC ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿರುವ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 12 ತಂಡಗಳ ಲೀಗ್ ಹಂತದ 6 ಓವರ್ ಗಳ ಪಂದ್ಯಗಳಾಗಿರುತ್ತದೆ. ಈ ಪಂದ್ಯಾವಳಿಯ ಪ್ರಥಮ ಬಹುಮಾನ 30,000 ರೂ. ಹಾಗೂ ಆಕರ್ಷಕ ಟ್ರೋಫಿ ದ್ವಿತೀಯ ಬಹುಮಾನ 15,000 ರೂ. ಹಾಗೂ ಆಕರ್ಷಕ ಟ್ರೋಫಿ. ಈ ಕ್ರಿಕೆಟ್ ಪಂದ್ಯಾವಳಿ ಗಲ್ಲಿ ಕ್ರಿಕೆಟ್ ಯುಟ್ಯೂಬ್ ಚಾನೆಲ್ ನಲ್ಲಿ ಲೈವ್ ಇರುತ್ತದೆ. MBC ಇವರ ನೇತೃತ್ವದಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಮುಂದಿನ ವರ್ಷ ಇನ್ನು ಹೆಚ್ಚು ತಂಡಗಳು ಈ ಪಂದ್ಯಾವಳಿಯಲ್ಲಿ ಸೇರ್ಪಡೆಯಾಗಲಿವೆ ಎಂದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀರಾಮಸೇವಾ ಭಾವಸಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ, ಹಿರಿಯ ಪತ್ರಕರ್ತರಾದ ಗೋ.ವ. ಮೋಹನಕೃಷ್ಣ, ಕಾಂಗ್ರೆಸ್ ಮುಖಂಡರಾದ ಭಾಸ್ಕರ್, ಅನಿಲ್, ಉಮೇಶ್, ಸಂತೋಷ್, ಗ್ಯಾರಂಟಿ ಯೋಜನೆ ಸದಸ್ಯರಾದ ಬಸವರಾಜ್, ಯುವ ಮುಖಂಡರಾದ ಆರ್‌,ಟಿ,ಆರ್ ಮಂಜು, ಹಾಲೇಶ್, ಸತ್ಯನಾರಾಯಣ, ವಿನಯ್, ಮೋಹನ್, ಅನಿಲ್, ರಂಜನ್, ದರ್ಶನ್ ಸೇರಿದಂತೆ ಹಲವರಿದ್ದರು

Chhatrapati Shivaji ಶಿವಾಜಿ ಮಹಾರಾಜರ ತತ್ವ ಆದರ್ಶ ಗುಣಗಳು ಹಾಗೂ ಸಾಧನೆಗಳು ಇಂದಿಗೂ ಅಸ್ಮರಣೀಯ :ಎಚ್. ಬಿ. ಗೋವಿಂದಪ್ಪ

0

Chhatrapati Shivaji ಛತ್ರಪತಿ ಶಿವಾಜಿ ಮಹಾರಾಜರ ತತ್ವ ಆದರ್ಶ ಗುಣಗಳು ಅಜರಾಮರ ಎಂದು ನ್ಯಾಮತಿ ತಹಸೀಲ್ದಾರರಾದ ಎಚ್ ಬಿ ಗೋವಿಂದಪ್ಪನವರು ಅಭಿಮತ ವ್ಯಕ್ತಪಡಿಸಿದರು ಅವರು ತಾಸಿಲ್ದಾರ್ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಭಾವಸಾರ್ ಕ್ಷತ್ರಿಯ ಸಮಾಜ ನಾಮದೇವ ಸಿಂಪಿ ಸಮಾಜ ಮರಾಠ ಸಮಾಜ ಹಾಗೂ ಹಲವಾರು ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿಂದೂ ಸಾಮ್ರಾಜ್ಯವನ್ನು ನಿರ್ಮಾಣ ಮಾಡುವುದರಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದುಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಹಿಡಿ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ಬಂದರು ಶಿವಾಜಿ ಮಹಾರಾಜರ ಶೌರ್ಯ ಸಾಹಸ ರಾಷ್ಟ್ರಭಕ್ತಿ ಆಡಳಿತಗಾರರಿಗೆ ಎಂದೆಂದೂ ಪ್ರೇರಣಾದಿಯ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಆಗ್ರ ಫಂಕ್ತೆಯಲ್ಲಿ ನಿಲ್ಲುವಂಥದ್ದು ಎಂದು ನುಡಿದರು. ಇದೇ ಸಂದರ್ಭದಲ್ಲಿ ಭಾವಸಾರ್ ಕ್ಷತ್ರಿಯ ಸಮಾಜದ ಶಾಮ್ ಸುಂದರವರು ಮಾತನಾಡುತ್ತಾ ಎಲ್ಲಾ ಮಾರಾಟ ಒಳಪಂಗಡಿಗಳು ಸಮಾಜದಲ್ಲಿ ಒಗ್ಗೂಡಿ ಒಳ್ಳೆಯ ಕೆಲಸಗಳನ್ನು ಮಾಡುವುದರ ಮುಖಾಂತರ ನಮ್ಮ ಅಸ್ತಿತ್ವವನ್ನು ನಿರ್ಮಾಣ ಮಾಡಬೇಕಾಗಿದೆ ಇದೇ ಸಂದರ್ಭದಲ್ಲಿ ಹನುಮಂತರಾವ್ ಅವರು ಮಾತನಾಡುತ್ತಾ ಇಂದು ಸಾಧಕ ಹಾಗೂ ಕರ್ನಾಟಕದ ಉದ್ದಕ್ಕೂ ಮರಾಠಿಗರಿಗೂ ಹಾಗೂ ಹಿಂದೂ ಸಮಾಜಕ್ಕೂ ಹೋರಾಡಿದ ವೀರ ಯುಗಪುರುಷ ಶಿವಾಜಿ ಮಹಾರಾಜರ ನಮ್ಮ ಯುವ ಪೀಳಿಗೆಗೆ ದಾರಿ ದೀಪವಾಗಿದೆ ಎಂದು ನೋಡಿದರು. Chhatrapati Shivaji ಇದೇ ಸಂದರ್ಭದಲ್ಲಿ ಶಿಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಮಾತನಾಡುತ್ತ ಶಿವಾಜಿ ಮಹಾರಾಜರ ತತ್ವ ಆದರ್ಶ ಗುಣಗಳು ಹಾಗೂ ಅವರ ನಡೆದ ಬಂದ ದಾರಿ ಕೇವಲ ಜಯಂತಿ ಗೆ ಸೀಮಿತವಾಗದೆ ಅವರ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ಇಂತಹ ಜಯಂತಿಗಳು ಸಾರ್ಥಕವಾಗುತ್ತವೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಮಾರಂಭದಲ್ಲಿ ನಾಮದೇವಿ ಸಿಂಪಿ ಸಮಾಜದ ನಾನೊಬ್ಬ ರಾವ್. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ರಾಜಾರಾಮ್ ಎಮ್ ಪಿ. ಮಹೇಂದ್ರ ಕಾರ್. ನಾಗರಾಜ್. ಹಾಗೂ ತಹಸಿಲ್ದಾರ್ ಕಚೇರಿಯ. ಶಿರಸ್ತೆದಾರ್ ಶ್ರೀಮತಿ ಕೆಂಚಮ್ಮ ಎಂ ಹೆಚ್. ಶ್ರೀಮತಿ ಸೌಮ್ಯ ಸಿ. ಉಪ ತಹಸೀಲ್ದಾರರಾದ ನಂದಪ್ಪ ಎಸಿ. ಧನುಷ್ ಹೆಚ್ ವಿ. ಡಿಎಂ ವಿಜಯೇಂದ್ರ. ಹಾಗೂ ಪ್ರಮುಖರು ಉಪಸ್ಥಿತರಿದ್ದರು

Kateel Ashok Pai Memorial College ವಿದ್ಯೆಗಿಂತಲೂ ಮಿಗಿಲಾದುದು ಮಾನವೀಯತೆಯ ಸಂಸ್ಕಾರ – ಶ್ರೀ ಮಹೇಶ್ವರಪ್ಪ

0

Kateel Ashok Pai Memorial College ಶಿವಮೊಗ್ಗದ ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಗ್ರಾಮೀಣ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾಚಿಕೊಪ್ಪ ಗ್ರಾಮದ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಮಹೇಶ್ವರಪ್ಪರವರು ಮಾತನಾಡುತ್ತಾ ಅವ್ವ ಮಕ್ಕಳಿಗೆ ಕೊಡುವ ಸಂಸ್ಕಾರ ಮಾನವೀಯತೆಯ ಸಂಸ್ಕಾರ, ಅದು ವಿದ್ಯೆಗಿಂತಲೂ ಮಿಗಿಲಾದುದು. ಜೀವನಕ್ಕೆ ಬೇಕಾಗಿರುವ ಈ ಸಂಸ್ಕಾರವನ್ನು ನೀಡಿದ ತಂದೆ-ತಾಯಿಯರನ್ನು ವಿದ್ಯೆ ಪಡೆದು ನೌಕರಿ ಪಡೆಯುವವರು ಮರೆಯಬಾರದು ಎಂದು ಹೇಳಿದರು. ಇಂದು ನೌಕರಿಗಾಗಿ ಹಳ್ಳಿಬಿಟ್ಟು ಪಟ್ಟಣ ಸೇರುವ ಹಲವರಿರುತ್ತಾರೆ. ಆದರೆ ಜೀವನ ಪಾಠ ಕಲಿಸಿದ ಊರು, ಸಂಸ್ಕಾರ ಕಲಿಸಿದ ತಾಯಿಯನ್ನು ಮರೆತು, ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಆಧುನಿಕತೆಗೆ ಮಾರು ಹೋಗಬೇಡಿರಿ ಎಂದು ಅವರು ಕಿವಿಮಾತು ಹೇಳಿದರು. ಆಯನೂರು ಬಳಿಯ ಮಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಚಿಕೊಪ್ಪ ಎಂಬ ಗ್ರಾಮದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್‌ಎಸ್‌ಎಸ್ ಗ್ರಾಮೀಣ ಶಿಬಿರವನ್ನು ದಿನಾಂಕ: ೧೮.೦೨.೨೦೨೫ ರಿಂದ ೨೪.೦೨.೨೦೨೫ ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಶಿಬಿರವನ್ನು ಮಂಡಘಟ್ಟ ಗ್ರಾಮಪಂಚಾಯಿತಿಯ ಅಧ್ಯಕ್ಷೆ ಶ್ರೀಮತಿ ಗಿರಿಜಮ್ಮನವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಮಂಡಘಟ್ಟ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಮತಿ ರೇಷ್ಮಾ ಸಂತೋಷ್‌ರವರು ಮಾತನಾಡುತ್ತಾ ಕಾಚಿಕೊಪ್ಪ ಗ್ರಾಮದ ಗ್ರಾಮಸ್ಥರು ಯಾವುದೇ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಾಗೂ ಪ್ರೀತಿಯಿಂದ ನಡೆಸಿಕೊಡುತ್ತಾರೆ. ಆದುದರಿಂದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದಿಂದ ವಿದ್ಯಾರ್ಥಿಗಳಿಗೂ, ಗ್ರಾಮಸ್ಥರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿಯ ಸದಸ್ಯರಾದ ಕಾಚಿಕೊಪ್ಪದ ಶ್ರೀ ಶಿವಕುಮಾರ್ ರವರು ಇಂದಿನ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನವನ್ನು ಅನುಭವಿಸುವ ಅವಕಾಶ ನೀಡಬೇಕಾದುದು ಹಿರಿಯರ ಕರ್ತವ್ಯವಾಗಿದೆ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಗಳು ಅತ್ಯಂತ ಮುತುವರ್ಜಿಯಿಂದ ಶಿಬಿರಕ್ಕಾಗಿ ಈ ಗ್ರಾಮವನ್ನು ಆಯ್ಕೆ ಮಾಡಿರುತ್ತಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿರಿ ಎಂದು ಹೇಳಿದರು. Kateel Ashok Pai Memorial College ಮಾನಸ ಟ್ರಸ್ಟ್ನ ಡಾ ರಾಜೇಂದ್ರ ಚೆನ್ನಿಯವರು ಮಾತನಾಡುತ್ತಾ ಕಾಚಿಕೊಪ್ಪದ ಗ್ರಾಮಸ್ಥರು ಆದರದಿಂದ ಕಾಲೇಜಿನ ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬೇರೆ ಬೇರೆ ಪ್ರದೇಶಗಳಿಂದ, ಗ್ರಾಮಗಳಿಂದ, ಪಟ್ಟಣಗಳಿಂದ ಬಂದಿರುವ ವಿದ್ಯಾರ್ಥಿಗಳು ಈ ಕಾಚಿಕೊಪ್ಪದ ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮೂಲಕ ಒಂದು ಸಾಂಸ್ಕೃತಿಕ ಸಮ್ಮಿಲನವಾಗುತ್ತದೆ. ಹಿಂದಿನಿಂದ ಇಂದಿನವರೆಗೂ ನಡೆಯುತ್ತಿರುವ ಭಾರತದ ಕೋಮುಗಲಭೆಗಳಾವುವು ಗ್ರಾಮಗಳಲ್ಲಿ ನಡೆದಿಲ್ಲ ಎಂಬುದನ್ನು ನಾವು ಗಮನಿಸಿದರೆ, ಗ್ರಾಮಗಳೇ ನಿಜವಾದ ಸಾಮರಸ್ಯದ ಬದುಕಿನ ಪಾಠಕಲಿಸುವ ಪಾಠಶಾಲೆಗಳು ಎನ್ನಬಹುದು. ಆದುದರಿಂದ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳಿಗೆ ಬಹಳ ದೊಡ್ಡ ಅನುಭವ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ ಸಂಧ್ಯಾ ಕಾವೇರಿ ಕೆ ಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳು ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕಾಚಿಕೊಪ್ಪ ಗ್ರಾಮದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲು ಅವಕಾಶ ಮಾಡಿರುವುದು ಅತ್ಯಂತ ಸಂತೋಷದ ವಿಷಯ ಎಂದು ಹೇಳಿದರು. ಶಿಬಿರದ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ ಸುಕೀರ್ತಿಯವರು ೭ ದಿನಗಳ ಕಾರ್ಯಕ್ರಮಗಳ ರೂಪುರೇಷೆಯನ್ನು ತಿಳಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಊರ ಮುಖಂಡರಾದ ಶ್ರೀ ರೇಣುಕಪ್ಪ, ಶ್ರೀ ನಾಗರಾಜಪ್ಪ ಕಾಲೇಜಿನ ಕಾರ್ಯಕ್ರಮಾಧಿಕಾರಿ ಶ್ರೀ ರಾಬರ್ಟ್ ರಾಯಪ್ಪ ಉಪಸ್ಥಿತರಿದ್ದರು. ಶಿಬಿರಾರ್ಥಿ ಶ್ರೀ ಶಂಕರ್ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳು ಪ್ರಾರ್ಥನೆಯನ್ನು ಹಾಗೂ ಎನ್‌ಎಸ್‌ಎಸ್ ಗೀತೆಯನ್ನು ಹಾಡಿದರು. ಸಹಶಿಬಿರಾಧಿಕಾರಿ ಶ್ರೀ ಮೋಹನ್‌ಕುಮಾರ್ ಎಲ್ಲರನ್ನು ವಂದಿಸಿದರು.

Compass Holidays & Adventure ಹಿಮಾಲಯ ಚಾರಣದಲ್ಲಿ ಹೆಚ್ಚಿನ ಜಾಗೃತಿ ಅವಶ್ಯಕ : ಜಿ.ಗಣೇಶ್

0

Compass Holidays & Adventure ಹಿಮಾಲಯ ಚಾರಣದಲ್ಲಿ ಎಚ್ಚರಿಕೆ ವಹಿಸುವುದು ಮುಖ್ಯ. ಚಾರಣ ಮಾಡುವಾಗ ಪೂರ್ವ ತಯಾರಿ ಬಹಳ ಅಗತ್ಯ. ಆರೋಗ್ಯದ ಪರಿಸ್ಥಿತಿ ಹಾಗೂ ಹಿಮಾಲಯದ ಪ್ರದೇಶಗಳಿಗೆ ಅಗತ್ಯವಾಗಿ ಬೇಕಾಗಿರುವ ಚಾರಣದ ವಸ್ತುಗಳು ಮುಖ್ಯವಾಗುತ್ತವೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ಗಣೇಶ್ ಹೇಳಿದರು.
ದಿಕ್ಸೂಚಿ ಅಡ್ವೆಂಚರ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ 10 ದಿನಗಳ ಹಿಮಾಲಯದ ಕೌರಿ ಪಾಸ್ ಯಶಸ್ವಿ ಚಾರಣ ಮುಗಿಸಿ ಮಾತನಾಡಿ, ಪ್ರಪಂಚದ ಅತ್ಯಂತ ಸುಂದರ ಹಾಗೂ ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ದೇವಭೂಮಿಗಳಲ್ಲಿ ಹಿಮಾಲಯದ ಕೌರಿ ಪಾಸ್ ಚಾರಣ ಒಂದಾಗಿದೆ. ಇಂತಹ ಸಾಹಸ ಚಟುವಟಿಕೆಗಳಿಂದ ನಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ತಿಳಿಸಿದರು.
ನಾವು ಚಳಿಗಾಲದಲ್ಲಿ ಎಂದೂ ನೋಡದ ಹಿಮ ಹಾಗೂ ಬಹಳ ಸುಂದರವಾದ ಪ್ರಕೃತಿ ಪರಿಸರ ಕೈಲಾಸ ಪರ್ವತ ನೋಡಿದ ಅನುಭವ ಆಗುತ್ತದೆ. ಆದ್ದರಿಂದ ಬಾಲ್ಯದಲ್ಲೇ ಮಕ್ಕಳಿಗೆ ಚಾರಣದ ಆಸಕ್ತಿ ಮೂಡಿಸಬೇಕು. ಆದ್ದರಿಂದ ಸದಾ ಆರೋಗ್ಯವಂತರಾಗಿರಲು ಸಾಧ್ಯ ಎಂದು ನುಡಿದರು.
ದಿಕ್ಸೂಚಿ ಅಡ್ವೆಂಚರ್ ಸಂಸ್ಥೆಯ ಚೇರ್ಮನ್ ಪೃಥ್ವಿ ಗಿರಿಮಾಜಿ ಮಾತನಾಡಿ, ದಿಕ್ಸೂಚಿ ಅಡ್ವೆಂಚರಸ್ ಸಂಸ್ಥೆ ವತಿಯಿಂದ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಚಾರಣಗಳ ಜತೆಗೆ ಅಂತರಾಷ್ಟ್ರೀಯ ಚಾರಣಗಳನ್ನು ಆಯೋಜಿಸಲಾಗುತ್ತದೆ. ಈಗಾಗಲೇ ನಮ್ಮ ಸಂಸ್ಥೆ ವತಿಯಿಂದ ನೂರಕ್ಕೂ ಹೆಚ್ಚು ವಿವಿಧ ಚಾರಣಗಳನ್ನು. ಪ್ರಕೃತಿ ಅಧ್ಯಯನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ ಕಾಲೇಜುಗಳಲ್ಲಿ ಪರಿಸರ ಜಾಗೃತಿ ಶಿಬಿರದ ಜತೆಗೆ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನುಡಿದರು. ಮುಂದಿನ ದಿನಗಳಲ್ಲಿ ಚಾರಣ ಮಾಡಲು ಆಸಕ್ತಿ ಇರುವವರು ನಮ್ಮ ಸಂಸ್ಥೆಗೆ ಸದಸ್ಯರಾಗಿ ಚಾರಣದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದರು.
ಚಾರಣದಲ್ಲಿ ವಿವಿಧ ಜಿಲ್ಲೆಗಳಿಂದ ರಾಜ್ಯಾದ್ಯಂತ ಆಗಮಿಸಿದ ಚಾರಣಿಗರು ಭಾಗವಹಿಸಿದ್ದರು. ಕೆ.ವೈಷ್ಣವಿ, ಜಿ.ಓಂಕಾರ್, ಅಶ್ವಿನಿ ಸಿ ಗೋಗಿ, ಜಿ.ಪಿ.ಸುಧೀರ್ ಕುಮಾರ್, ಜಿ.ಇ.ಅರ್ಚನಾ, ಎಂ.ರಘು, ಸಿ.ಎನ್.ಅನ್ನಪೂರ್ಣ, ಜಿ.ಆರ್.ವಿನೋದ್ ಕುಮಾರ್, ಗಣೇಶ್ ಗಾಣಿಗೆರೆ, ವಿ.ಶ್ರೇಯಸ್, ಧ್ರುವ ಗೋಗಿ, ಎಂ.ಜಿ.ಅಶೋಕ್, ಬಿ.ಎಸ್.ಕಿರಣ್‌ಕುಮಾರ್ ಇತರರಿದ್ದರು.

Bhava Theera Yaana Movie ಫೆ.21ಕ್ಕೆ ಭಾವ ತೀರ ಯಾನ ಚಲನಚಿತ್ರ ಬಿಡುಗಡೆ

Bhava Theera Yaana Movie ಇಡೀ ಕುಟುಂಬ ಕುಳಿತು ನೋಡಬಹುದಾದ ಭಾವನಾತ್ಮಕ ಸಿನಿಮಾ ‘ಭಾವ ತೀರ ಯಾನ’ ಚಲನಚಿತ್ರ ರಾಜ್ಯಾದ್ಯಂತ ಫೆ.21ರಂದು ತೆರೆ ಕಾಣಲಿದೆ ಎಂದು ಚಿತ್ರವನ್ನು ಪ್ರಸ್ತುತಪಡಿಸುತ್ತಿರುವ ಕೀಳಂಬಿ ಮೀಡಿಯಾದ ಮುಖ್ಯಸ್ಥರು ಮತ್ತು ‘ಶಾಖಾಹಾರಿ’ ಚಿತ್ರದ ನಿರ್ಮಾಪಕರಾದ ರಾಜೇಶ್ ಕೀಳಂಬಿ ಅವರು ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಹ ಫಿಲಂಸ್ ಬ್ಯಾನರ್ ಅಡಿಯಲ್ಲಿ ಭಾವ ತೀರ ಯಾನ ಸಿನಿಮಾ ಮೂಡಿ ಬಂದಿದ್ದು, ಹೊಸ ಪ್ರತಿಭೆಗಳು ಸೇರಿ ಸಿನಿಮಾ ಮಾಡಿದ್ದಾರೆ. ಮಯೂರ್ ಅಂಬೇಕಲ್ ಮತ್ತು ತೇಜಸ್ ಕಿರಣ್ ನಿರ್ದೇಶನ ಚಿತ್ರಕ್ಕಿದೆ. ಯುವ ಕಲಾವಿದರ ಸಿನಿಮಾ ನೋಡಿ ಪ್ರೋತ್ಸಾಹಿಸಿ ಬೇಕೆಂದರು.

ತಾರಾಗಣದಲ್ಲಿ ರಮೇಶ್ ಭಟ್, ತೇಜಸ್ ಕಿರಣ್, ಆರೋಹಿ ನೈನಾ, ಅನುಷಾ ಕೃಷ್ಣ
ವಿದ್ಯಾಮೂರ್ತಿ, ಚಂದನ ಅನಂತ ಕೃಷ್ಣ ಮುಂತಾದವರಿದ್ದಾರೆ ಎಂದು ತಿಳಿಸಿದರು

ನಟ ನಿರ್ದೇಶಕ ಮಯೂರ್ ಅಂಬೆಕಲ್ಲು ಮಾತನಾಡಿ, ಈ ಚಿತ್ರವು ಪ್ರೇಮದ ಸುತ್ತವಿದ್ದು, ಪ್ರೀತಿಯ ಹಲವು ಮಜಲುಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಒಟ್ಟು 5 ಹಾಡುಗಳಿದ್ದು, ಇದರ ಸಂಗೀತದ ಹೊಣೆಯನ್ನು ಮಯೂರ್ ಅಂಬೇಕಲ್ ಹೊತ್ತಿದ್ದಾರೆ. ವಾಸುಕಿ ವೈಭವ್, ಇನ್ನಿತರರು ಹಾಡಿದ್ದಾರೆ. ಹಾಡುಗಳು ತುಂಬಾ ಇಂಪಾಗಿದ್ದು, ಈಗಾಗಲೇ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡುಗಳು ಅಪಾರ ಜನಮನ್ನಣೆ ಗಳಿಸಿದೆ ಎಂದು ಹೇಳಿದರು.

Bhava Theera Yaana Movie ಪ್ರೀತಿ, ಪ್ರೇಮ, ಭಾವನೆ,ಇಂಪಾದ ಹಾಡುಗಳು, ಒಂದಿಷ್ಟು ಕಾಮಿಡಿ ಇವಲ್ಲವೂ ಹಿತಮಿತವಾಗಿ ಚಿತ್ರದಲ್ಲಿವೆ. ಇಂದು ಕುಟುಂಬ ಸಮೇತ ನೋಡುವ ಚಿತ್ರಗಳು ತುಂಬಾ ಕಡಿಮೆ. ಆದರೆ ನಮ್ಮ ಭಾವತೀರ ಯಾನ ಕುಟುಂಬ ಸಮೇತ ನೋಡುವ ಚಿತ್ರವಾಗಿದೆ ಎಂದು ತೇಜಸ್ ಕಿರಣ್ ಹೇಳೀದರು.

ನಟಿ ಆರೋಹಿ ನೈನಾ ಮಾತನಾಡಿ, ತುಂಬಾ ಇಷ್ಟಪಟ್ಟು ಈ ಚಿತ್ರ ಮಾಡಿದ್ದೇವೆ. ಕನ್ನಡ ಚಿತ್ರರಸಿಕರು ಫೆ.21ರಂದು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ನಟಿ ಅನುಷಾ ಕೃಷ್ಣ ಮಾತನಾಡಿ, ನಾನು ಶಿವಮೊಗ್ಗದ ಮಗಳು. ಇದು ನನಗೆ ಹೆಮ್ಮೆ ಇದೆ. ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರವಿದ್ದು, ಸ್ನೇಹದ ಮಹತ್ವವನ್ನು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ.ಈ ಚಿತ್ರವು ಪ್ರೀತಿ ಪ್ರೇಮದ ಸುತ್ತವಿದ್ದರೂ ಕೂಡ ಇದಕ್ಕೊಂದು ವಿಶೇಷತೆ ಇದೆ. ಒಳ್ಳೆಯ ಸಂದೇಶ ಕೂಡ ಸಿನಿಮಾದಲ್ಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂದೀಪ್, ಕ್ಷೇಮಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು

S.N. Chennabasappa ಜಗಜೀವನ್ ರಾಂ ಭವನದ ಕಾಮಗಾರಿ ಪರಿಶಿಲಿಸಿದ ಶಾಸಕ‌ ಎಸ್.ಎನ್.ಚನ್ನಬಸಪ್ಪ

0

S.N. Chennabasappa ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಇಂದು ಬೆಳಿಗ್ಗೆ ಕುವೆಂಪು ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಾಣವಾಗಿ ನೆನೆಗುದಿಯಲ್ಲಿ ಬಿದ್ದಿರುವ ಬಾಬು ಜಗಜೀವನ್ ರಾಮ್ ಭವನದ ಕಾಮಗಾರಿಗಳನ್ನು ವೀಕ್ಷಿಸಿದರು.

ನಿರ್ಮಾಣಗೊಂಡ ಬಾಬು ಜಗಜೀವನ್ ರಾಮ್ ಭವನವು ಪುಂಡ ಪೋಕರಿಗಳ ತಾಣವಾಗಿದ್ದು, ಅಧಿಕಾರಿಗಳೊಡನೆ ಭೇಟಿ ನೀಡಿ ಶೀಘ್ರವೇ ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಿ, ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಚರ್ಚಿಸಿದರು.

Shikaripura Horticulture Department ತರಕಾರಿ ಬೀಜಗಳ ‌ಕಿಟ್ ವಿತರಣೆಗೆ ಅರ್ಜಿ ಆಹ್ವಾನ

0

Shikaripura Horticulture Department ಶಿಕಾರಿಪುರ ತೋಟಗಾರಿಕೆ ಇಲಾಖೆಯು 2024-25ನೇ ಸಾಲಿನಲ್ಲಿ ತರಕಾರಿ ಬೆಳೆಯಲು ಉತ್ತೇಜನ ನೀಡುವ ಉದ್ದೇಶದಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ರೈತರಿಗೆ ರೂ. 2000/- ಮೊತ್ತದ ತರಕಾರಿ ಬೀಜಗಳ ಕಿಟ್‌ನ್ನು ವಿತರಣೆ ಮಾಡಲಾಗುತ್ತಿದ್ದು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ಹಾಗೂ ಇತರೆ ರೈತರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ರೈತರು ನಿಗದಿತ ನಮೂನೆ ಅರ್ಜಿಯನ್ನು ಶಿಕಾರಿಪುರ ತೋಟಗಾರಿಕೆ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಪಹಣಿ, ಆಧಾರ್‌ಕಾರ್ಡ್ ಜೇರಾಕ್ಸ್, ಬ್ಯಾಂಕ್ ಪಾಸ್ ಬುಕ್ ಜೇರಾಕ್ಸ್, ಜಾತಿ ಪ್ರಮಾಣ ಪತ್ರ(ಪ.ಜಾ/ಪ.ಪಂ.ದವರಿಗೆ ಮಾತ್ರ) ಗಳನ್ನು ಸಲ್ಲಿಸಿ ಫೆ. 11 ರಿಂದ ತರಕಾರಿ ಬೀಜಗಳ ಕಿಟ್‌ನ್ನು ಪಡೆಯುವಂತೆ ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿರುತ್ತಾರೆ.
Shikaripura Horticulture Department ಹೆಚ್ಚಿನ ಮಾಹಿತಿಗಾಗಿ ಶಿಕಾರಿಪುರ ತೋಟಗಾರಿಕೆ ಇಲಾಖೆ ಕಚೇರಿಯನ್ನು ಹಾಗೂ ಮೊ.ಸಂ. : ಕಸಬಾ-7019808174, ಅಂಜನಾಪುರ-8151810552, ಹೊಸೂರು-6363095898, ಉಡುಗಣೆ-9108548454, ತಾಳಗುಂದ-7975515575 ಗಳನ್ನು ಸಂಪರ್ಕಿಸುವುದು

Shimoga Rangayana ಫೆಬ್ರವರಿ 13. ಶಿವಮೊಗ್ಗ ರಂಗಾಯಣ ಆಶ್ರಯದಲ್ಲಿ ” ಮೈ ಫ್ಯಾಮಿಲಿ‌” ನಾಟಕ‌ ಪ್ರದರ್ಶನ

0

Shimoga Rangayana ಶಿವಮೊಗ್ಗ ರಂಗಾಯಣದ ಆಯೋಜನೆಯಲ್ಲಿ ಫೆ. 13 ರಂದು ಸಂಜೆ 6.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಮೈಸೂರು ರಂಗಾಯಣದ ಪ್ರಸ್ತುತಿಯ ಸತೀಶ್ ತಿಪಟೂರು ರಚನೆಯ ಗಣೇಶ್ ಹೆಗ್ಗೋಡು ವಿನ್ಯಾಸ ಮತ್ತು ನಿರ್ದೇಶನದ ಶ್ರವಣ್ ಹೆಗ್ಗೋಡು ಗೊಂಬೆಗಳ ಪರಿಕಲ್ಪನೆ ಮತ್ತು ವಿನ್ಯಾಸದ “ಮೈ ಫ್ಯಾಮಿಲಿ” ನಾಟಕವು ಪ್ರದರ್ಶನಗೊಳ್ಳಲಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಭೂಮಿಯನ್ನು ಪ್ರೋತ್ಸಾಹಿಸುವಂತೆ ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ಪ್ರಕಟಣೆಯಲ್ಲಿ ಕೋರಿರುತ್ತಾರೆ.
ಟಿಕೇಟ್ ದರ ಒಬ್ಬರಿಗೆ ರೂ. 30/- ಇದ್ದು, ಹನ್ನೆರಡು ವರ್ಷದೊಳಿಗಿನ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ.

Department of Women and Child Development ಪ್ರತೀ ಬಾಲ್ಯ ವಿವಾಹ ಪ್ರಕರಣವನ್ನು ಹಾಟ್ ಸ್ಪಾಟ್ ಆಗಿ ಪರಿಗಣಿಸಿ ತೀವ್ರ ಕ್ರಮ‌ಕೈಗೊಳ್ಳಿ- ಗುರುದತ್ತ ಹೆಗಡೆ

0

Department of Women and Child Development ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೇ ಬಾಲ್ಯ ವಿವಾಹ ಪ್ರಕರಣ ನಡೆದರೂ ಅದನ್ನು ಹಾಟ್‌ಸ್ಪಾಟ್ ಎಂದು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮುದಾಯವನ್ನೊಳಗೊಂಡ ಪರಿಣಾಮಕಾರಿ ಕ್ರಮ ಕೈಗೊಂಡು ಶಾಶ್ವತ ಪರಿಹಾರಕ್ಕೆ ಒತ್ತು ನೀಡಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಒಂದು ಬಾಲ್ಯ ವಿವಾಹ ಪ್ರಕರಣವನ್ನು ಹಾಟ್‌ಸ್ಪಾಟ್ ಎಂದು ಪರಿಗಣನೆಗೆ ತೆಗೆದುಕೊಂಡು ಚಟುವಟಿಕೆ ಕೈಗೊಳ್ಳಬೇಕು. ಶಾಶ್ವತ ಪರಿಹಾರ ಒದಗುವಂತಹ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಮುಖಂಡರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಸಹಾಯ ತೆಗೆದುಕೊಂಡು ಸಮುದಾಯದಲ್ಲಿ ಮತ್ತು ಪೋಷಕರಲ್ಲಿ ಅರಿವು ಮೂಡಿಸುವಂತಾಗಬೇಕು. ಬಾಲ್ಯ ವಿವಾಹ ತಡೆಯುವಲ್ಲಿ ಶ್ರಮಿಸಿದ ಮುಖಂಡರು, ಪ್ರೇರಕರನ್ನು ಗೌರವಿಸಬೇಕು. ಸ್ಥಳೀಯವಾಗಿ ಕಾರ್ಯವೆಸಗುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಸದ್ಬಳಕೆ ಮಾಡಿಕೊಂಡು ಅವರನ್ನೂ ಗೌರವಿಸಬೇಕು. ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಬಾಲ್ಯ ವಿವಾಹ ತಡೆ ಕಾರ್ಯದೊಂದಿಗೆ ಸಮುದಾಯಗಳಲ್ಲಿ ಶಾಶ್ವತವಾಗಿ ಬಾಲ್ಯ ವಿವಾಹ ತಡೆಯುವ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಹಾಗೂ ಪ್ರಾಥಮಿಕ ಹಂತದ ಶಾಲೆಗಳಿಂದ ಹಿಡಿದು ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತಿ ದಿನ ಪೋಕ್ಸೋ ಮತ್ತು ಬಾಲ್ಯ ವಿವಾಹ ಜಾಗೃತಿ ಕುರಿತು ಪ್ರತಿಜ್ಞಾ ವಿಧಿ ಬೋಧನೆ, ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿ ಕಾರ್ಯಾಗಾರ ಸೇರಿದಂತೆ ಉತ್ತಮ ಫಲಿತಾಂಶ ಬರುವಂತಹ, ಶಾಶ್ವತ ಪರಿಹಾರ ಒದಗುವಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾಡಳಿತದಿಂದ ಸಹ ಬಾಲ್ಯ ವಿವಾಹ ತಡೆಗೆ ಸಹಕರಿಸಿದ ಪ್ರೇರಕರು, ಮುಖಂಡರನ್ನು ಗೌರವಿಸಲಾಗುವುದು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಜಿಲ್ಲೆಯಲ್ಲಿ 2024 ರ ಏಪ್ರಿಲ್ ನಿಂದ ಡಿಸೆಂಬರ್ ಅಂತ್ಯದವರೆಗೆ ಬಾಲ್ಯ ವಿವಾಹದ ಬಗ್ಗೆ ಒಟ್ಟು 89 ದೂರುಗಳನ್ನು ಸ್ವೀಕರಿಸಲಾಗಿದ್ದು ಒಟ್ಟು 26 ಬಾಲ್ಯ ವಿವಾಹ ತಡೆಯಲಾಗಿದೆ. 63 ಬಾಲ್ಯ ವಿವಾಹ ನಡೆದಿದೆ.
ಬಾಲ್ಯ ವಿವಾಹ ತಡೆಯಲು ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ, ವಸತಿ ನಿಲಯಗಳಲ್ಲಿ ಮಕ್ಕಳ ಹಕ್ಕುಗಳು ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ಜಾಗೃತಿ ಕಾರ್ಯಕ್ರಮ, ವಿಶೇಷ ಗ್ರಾಮ ಸಭೆಗಳಲ್ಲಿ ಜಾಗೃತಿ, ಗೋಡೆ ಬರಹ, ರಕಷಣೆ ನೀಡಿದ ಮಕ್ಕಳಿಗೆ ಕೌಶಲ್ಯ ತರಬೇತಿ, ರಕ್ಷಣಾ ಕ್ರಮಗಳು ಮತ್ತು ಸಹಕಾರ ಸಂಘಗಳಿAದ ಪೋಷಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಇತ್ತೀಚಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ ವೇಳೆ ಅಂಗನವಾಡಿಯೊAದರಲ್ಲಿ ಆರೋಗ್ಯ ತಪಾಸಣೆ ಆಗದಿರುವುದು ಕಂಡು ಬಂದಿದೆ. ಸಂಬAಧಿಸಿದ ಪಿಹೆಚ್‌ಸಿ ವೈದ್ಯರು ಮತ್ತು ಸಿಡಿಪಿಓ ಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಗಳಿಗೆ ಗ್ರಾಮೀಣ ಭಾಗದಲ್ಲಿ 145 ಸೇರಿದಂತೆ ಒಟ್ಟು 258 ನಿವೇಶನಗಳ ಅಗತ್ಯವಿದ್ದು, ಗ್ರಾಮೀಣ ಭಾಗದಲ್ಲಿ ಆದ್ಯತೆಯಲ್ಲಿ ತಹಶೀಲ್ದಾರರು ನಿವೇಶನ ಗುರುತಿಸಿ ಒದಗಿಸಲು ಸೂಚಿಸಿದರು.
ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಗೆ ಆರೋಗ್ಯ ಇಲಾಖೆಯಿಂದ ತಾಯಿ ಕಾರ್ಡ್ ಸರಬರಾಜಿನಲ್ಲಿ ಕೊರತೆಯಿದ್ದು, ಶೀಘ್ರವಾಗಿ ಪೂರೈಸಬೇಕು. ಹಾಗೂ ರಾಜ್ಯ ಮಹಿಳಾ ನಿಲಯದ ನಿವಾಸಿಗಳಿಗೆ ಔಷಧಿ ಮತ್ತು ಮಾತ್ರೆಗಳನ್ನು ಬೇಡಿಕೆಯನ್ವಯ ಆರೋಗ್ಯ ಇಲಾಖೆಯಿಂದ ಸರಬರಾಜು ಮಾಡಲು ಕ್ರಮ ವಹಿಸುವಂತೆ ಡಿಹೆಚ್‌ಒ ರವರಿಗೆ ಸೂಚನೆ ನೀಡಿದರು.
ಜಿಲ್ಲೆಯ ಸ್ತ್ರೀಶಕ್ತಿ ಭವನಗಳ ದುರಸ್ತಿ, ಮಳಿಗೆಗಳ ಮರು ಹಂಚಿಕೆ, ಒಕ್ಕೂಟಗಳ ಪುನರ್ ರಚನೆ ಕಾರ್ಯ ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
Department of Women and Child Development ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಲೈಂಗಿಕ ಕಾರ್ಯಕರ್ತರು/ ಲೈಂಗಿಕ ಶೋಷಣೆಗೊಳಗಾದವರ ಪುನರ್ವಸತಿಗಾಗಿ ಚೇತನ ಯೋಜನೆಯಡಿ ಪ್ರತಿ ಫಲಾನುಭವಿಗೆ ನೇರವಾಗಿ ರೂ. 30,000 ಪ್ರೋತ್ಸಾಹ ನೀಡಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಈವರಗೆ ರೂ.3 ಲಕ್ಷ ಬಿಡುಗಡೆಯಾಗಿದೆ. ಇತರರಿಗೆ ರೂ. 1,50,000, ಎಸ್‌ಸಿ ರೂ. 90 ಸಾವಿರ, ಎಸ್‌ಟಿ ರೂ. 60 ಸಾವಿರ, ಪ್ರೋತ್ಸಾಹ ಧನ ನೀಡಲಾಗಿದೆ. 2024-25 ನೇ ಸಾಲಿನ ಕೌಟುಂಬಿಕ ಹಿಂಸೆಯಿAದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ 87 ಪ್ರಕರಣಗಳು ಬಾಕಿ ಇದ್ದು, ಇದರಲ್ಲಿ ಸಂರಕ್ಷಣಾಧಿಕಾರಿಗಳ ಬಳಿ 40 ಹಾಗೂ ನ್ಯಾಯಾಲಯದಲ್ಲಿ 47 ಪ್ರಕರಣಗಳು ಬಾಕಿ ಇವೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ ಮಾತನಾಡಿ, ರಾಜ್ಯ ಮಹಿಳಾ ನಿಲಯದಲ್ಲಿ 81 ಮಾನಸಿಕ ಅಸ್ವಸ್ಥರು ನಿವಾಸಿಯಾಗಿರುತ್ತಾರೆ. ಪ್ರಸ್ತತು ಸಂಸ್ಥೆಯ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ. ನಿಲಯಕ್ಕೆ ಓರ್ವ ನರ್ಸ್ ನಿಯೋಜನೆ ಹಾಗೂ ಸಾಗರ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಖಾಯಂ ಪೊಲೀಸ್ ನಿಯೋಜನೆ ಮಾಡುವಂತೆ ಕೋರಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸುಜಾತಾ, ಡಿಹೆಚ್‌ಓ ಡಾ.ನಟರಾಜ್, ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ತಾಜುದ್ದೀನ್ ಖಾನ್, ತಾಲ್ಲೂಕುಗಳ ಸಿಡಿಪಿಓ, ಇತರೆ ಅಧಿಕಾರಿಗಳು ಹಾಜರಿದ್ದರು.

B.Y. Raghavendra ಎಲ್ಲರೂ ಎಣ್ಣೆಗಾಣದಿಂದ ತೆಗೆದ ಎಣ್ಣೆ ಉಪಯೋಗಿಸಿ- ಬಿ.ವೈ.ರಾಘವೇಂದ್ರ

0

B.Y. Raghavendra ಸಣ್ಣ ಉದ್ಯಮಗಳನ್ನು ಹೆಚ್ಚು ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ ನಗರದ ಮೂರ್ತಿ ಸೈಕಲೋತ್ಸವ ಸಮೀಪ ಶ್ರೀ ಸೇವಾ ಎಣ್ಣೆಗಾಣವನ್ನು ಉದ್ಘಾಟಿಸಿ ಮಾತನಾಡಿ, ಮರದ ಗಾಣದ ಎಣ್ಣೆಯನ್ನು ಪ್ರಸ್ತುತ ದಿನಗಳಲ್ಲಿ ಎಲ್ಲರೂ ಬಳಸಿದರೆ ಉತ್ತಮ. ಕಳಪೆ ಹಾಗೂ ಕೆಮಿಕಲ್ ಇರುವ ಎಣ್ಣೆಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬಿರುತ್ತವೆ. ಹೃದಯಾಘಾತ, ಹೃದಯ ಸಂಬಂಧಿ ಕಾಯಿಲೆಗಳು ಬರುವುದನ್ನು ನೋಡುತ್ತೇವೆ. ಮರದಗಾಣ ಶುದ್ಧ ಪರಿಶುದ್ಧ ಎಣ್ಣೆಯನ್ನು ನೀಡುತ್ತದೆ. ಕೆಮಿಕಲ್ ಮುಕ್ತವಾಗಿರುವುದರಿಂದ ಎಲ್ಲರೂ ಎಣ್ಣೆಗಾಣಗಳಿಂದ ತೆಗೆದ ಎಣ್ಣೆಗಳನ್ನೆ ಬಳಸುವುದು ಸೂಕ್ತ ಎಂದು ತಿಳಿಸಿದರು.

ಶಾಸಕಿ ಶಾರದಾ ಪರ‍್ಯಾನಾಯ್ಕ್ ಮಾತನಾಡಿ, ಪ್ರಾಚೀನ ಕಾಲದಲ್ಲಿ ಎಲ್ಲರೂ ಅವರವರ ಮನೆಗಳಲ್ಲಿ ಎತ್ತಿನ ಗಾಣಗಳನ್ನು ಬಳಸಿ ಎಣ್ಣೆಗಳನ್ನು ತಯಾರಿ ಮಾಡಿಕೊಂಡು ಉಪಯೋಗಿಸುತ್ತಿದ್ದರು. ಹಿಂದಿನ ಪದ್ಧತಿ ಮರುಕಳಿಸುತ್ತಿದೆ. ಎಲ್ಲರೂ ಮರದ ಗಾಣಗಳನ್ನು ಬಳಸುವ ದಿನಗಳು ಮರುಕಳಿಸುತ್ತಿದೆ. ಆರೋಗ್ಯ ಹಿತ ದೃಷ್ಟಿಯಿಂದ ಉತ್ತಮವಾದ ವಿಧಾನ ಎಂದರು.

B.Y. Raghavendra ಶ್ರೀ ಸೇವಾ ಎಣ್ಣೆಗಾಣದ ಮಾಲೀಕ ಅನುಷಾ ಸಂತೋಷ್ ಕುಮಾರ್ ಮಾತನಾಡಿ, ಮರದ ಗಾಣದ ಎಣ್ಣೆ ಹೃದಯ ಸಂಬಂಧ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ತಡೆಗಟ್ಟುತ್ತದೆ. ಎಣ್ಣೆಯು ನೈಸರ್ಗಿಕ ಬಣ್ಣ, ನೈಸರ್ಗಿಕ ಸುವಾಸನೆ ಮತ್ತು ನೈಸರ್ಗಿಕ ರುಚಿಯಿಂದ ಕೂಡಿರುತ್ತದೆ. ನೈಸರ್ಗಿಕ ಪೋಷಕಾಂಶಗಳನ್ನು ಹೊಂದಿರುತ್ತದೆ ಎಂದರು.

ಬಂಜಾರ ಗುರು ಶ್ರೀ ಸೈನಾಭಗತ್ ಗುರು, ನಾಗರಾಜ ಸ್ವಾಮಿ, ಸಂತೋಷ್ ಕುಮಾರ್, ಜಿ.ವಿಜಯ್ ಕುಮಾರ್, ಅಭಿಷೇಕ, ಸತೀಶ್ ಚಂದ್ರ, ಮಂಜುನಾಥ್ ಕದಂ, ಕಿಶೋರ್ ಕುಮಾರ್, ಅರುಣ್ ದಿಕ್ಷಿತ್, ಶಶಿಕಾಂತ್ ನಾಡಿಗ್ ಇತರರು ಭಾಗವಹಿಸಿದ್ದರು.