Wednesday, March 11, 2026
Wednesday, March 11, 2026
Home Blog Page 397

Agastya International Foundation ವಿಜ್ಞಾನ ಶಿಕ್ಷಕರ ಮಾದರಿ ತಯಾರಿಕಾ ತರಬೇತಿ ಕಾರ್ಯಾಗಾರ

0

Agastya International Foundation ಶಿವಮೊಗ್ಗ ಸಮೀಪದ ಆಯನೂರಿನಲ್ಲಿರುವ ಅಗಸ್ತ್ಯ ಫೌಂಡೇಶನ್ ನ ವಿಜ್ಞಾನ ಕೇಂದ್ರದಲ್ಲಿ ಎರಡು ದಿನಗಳ ಕಾಲ ಆಯನೂರಿನಲ್ಲಿ ವಿಜ್ಞಾನ ಶಿಕ್ಷಕರ ಮಾದರಿ ತಯಾರಿಕಾ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.
ಕಾರ್ಯಾಗಾರದ ಉದ್ಘಾಟನೆಯನ್ನು ಡಯಟ್ ನ ಉಪಪ್ರಾಂಶುಪಾಲರಾದ ರೇಣುಕಾ, ಹಿರಿಯ ಉಪನ್ಯಾಸಕಿಯರಾದ ಸುವರ್ಣಾ, ಶಶಿಕಲಾ , ಆಯನೂರು ಕ್ಲಸ್ಟರ್ ನ ಸಿ ಆರ್ ಪಿ ಗಳಾದ ಮಾಧವ್ ಹಾಗೂ ಡಯಟ್ ನ ಇನ್ನಿತರೇ ಉಪನ್ಯಾಸಕರು ಉದ್ಘಾಟಿಸಿದರು.
ಮಾದರಿ ತಯಾರಿಕಾ ತರಬೇತಿ ಕಾರ್ಯಾಗಾರಗಳು ನವೀನ ಆಲೋಚನೆಗಳು ಮತ್ತು ಕ್ರಿಯಾ ಶೀಲ ಮನೋಭಾವನೆಯನ್ನು ಹುಟ್ಟು ಹಾಕುತ್ತವೆ ಹಾಗೂ ವಿದ್ಯಾರ್ಥಿಗಳಿಗೆ ಈ ರೀತಿಯ ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಹೆಚ್ಚು ಅರ್ಥಪೂರ್ಣ ಜ್ಞಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ, ಈ ರೀತಿಯಲ್ಲಿ ಜಿಲ್ಲೆಯ ಶೈಕ್ಷಣಿಕ ಹಾಗೂ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸುವ ದಿಶೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಗಸ್ತ್ಯ ಫೌಂಡೇಶನ್ ನಮ್ಮ ಜಿಲ್ಲೆಯ ಆಯನೂರಿನಲ್ಲಿರುವದು ಒಂದು ಖುಷಿಯ ವಿಚಾರ ಎಂದು ಡಯಟ್ ನ ಉಪಪ್ರಾಂಶುಪಾಲರಾದ ರೇಣುಕಾ ಅವರು ಮಾತನಾಡಿದರು.
ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವರಾಜ್ ಗೊರನಾಳ ಮಾತನಾಡಿ ನಮ್ಮ ಜೀವನದ ಉದ್ದೇಶವೇ ನಮ್ಮನ್ನು ನಾವು ಅರಿಯುವುದು ಹಾಗೂ ಜ್ಞಾನವನ್ನು ಸಂಪಾದಿಸುವದೇ ಆಗಿದೆ ಹಾಗೆ ಕಲಿತ ಜ್ಞಾನವನ್ನು ನವಪೀಳಿಗೆಗಳಿಗೆ ತಿಳಿಸುತ್ತಾ ಒಂದು ಉತ್ತಮ ರಾಷ್ಟ್ರ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯವಾಗಿದೆ, ಈ ದೆಸೆಯಲ್ಲಿ ಈ ತರಬೇತಿ ಕಾರ್ಯಾಗಾರದಲ್ಲಿ ತಿಳಿಸಲ್ಪಡುವ ಚಟುವಟಿಕೆಗಳನ್ನು ಮಕ್ಕಳಿಗೆ ಹೇಳಿಕೊಡುವದರೊಂದಿಗೆ ಅವರನ್ನು ಸದಾ ಕ್ರಿಯಾಶೀಲರಾಗಿ ನಾವೆಲ್ಲರೂ ಕೈ ಜೋಡಿಸೋಣ ಎಂದರು.
ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ 9 ಕ್ಲಸ್ಟರ್ ನ ಸುಮಾರು 50 ವಿಜ್ಞಾನ ಶಿಕ್ಷಕರು ಇದರ ಸದುಪಯೋಗ ಪಡೆದುಕೊಂಡರು.
ತರಬೇತಿ ಕಾರ್ಯಾಗಾರವನ್ನು ವಿಜ್ಞಾನ ಕೇಂದ್ರದ ಮಾರ್ಗದರ್ಶಕರಾದ ಶ್ವೇತಾ ಕೆ ಯಶಸ್ವಿಯಾಗಿ ನಡೆಸಿಕೊಟ್ಟರು. ಹಾಗೂ ಈ ಕಾರ್ಯಾಗಾರಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿಗಳಾದ ನಾಗರತ್ನಮ್ಮ ಅವರನ್ನು ಸನ್ಮಾನಿಸಿ ಗೌರವಿಸುವದರೊಂದಿಗೆ ಅವರ ಮುಂದಿನ ನಿವೃತ್ತಿ ಜೀವನಕ್ಕೆ ಶುಭ ಹಾರೈಸಲಾಯಿತ

Madhu Bangarappa ನಗರದ ಆಸ್ತಿ ಮಾಲೀಕರ ಸ್ವತ್ತಿನ ದಾಖಲೆಗಳನ್ನು ಸೃಜಿಸಲು ನಕ್ಷಾ ಯೋಜನೆ ಸಹಕಾರಿ : ಸಚಿವ ಎಸ್. ಮಧು ಬಂಗಾರಪ್ಪ

0

Madhu Bangarappa ನಗರ ಮತ್ತು ಪಟ್ಟಣ ಪ್ರದೇಶದಲ್ಲಿನ ಸಾರ್ವಜನಿಕರ ಅಸ್ತಿಗಳ ಭೂ ಮಾಲೀಕತ್ವದ ಕುರಿತು ಪ್ರತಿಯೊಬ್ಬ ನಾಗರಿಕರಿಗೆ ಸರ್ಕಾರದಿಂದಲೇ ಅಸ್ತಿಯ ಮಾಲೀಕತ್ವ ಪ್ರಮಾಣ ಪತ್ರವನ್ನು ಒದಗಿಸಿ ಕಾನೂನಾತ್ಮಕ ಸ್ಪಷ್ಟತೆ ಒದಗಿಸುವುದರ ಜೊತೆಗೆ ವಿವಾದಗಳನ್ನು ಪರಿಹರಿಸಿ ಅತಿಕ್ರಮಣಗಳನ್ನು ತಡೆಯಲು ನಕ್ಷಾ ಯೋಜನೆ ಸಹಕಾರಿಯಾಗಲಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು.

ಸೊರಬ ತಾಲ್ಲೂಕು ಆನವಟ್ಟಿಯ ಪಟ್ಟಣ ಪಂಚಾಯಿತಿ ಆವರಣದಲ್ಲಿ ಕಂದಾಯ ಇಲಾಖೆ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ, ಹಾಗೂ ಪೌರಾಡಳಿತ ಇಲಾಖೆಯ ಸಹಯೋಗದಲ್ಲಿ ನಗರದ ಆಸ್ತಿ ಮಾಲೀಕರಿಗೆ ಸರ್ಕಾರದ ವತಿಯಿಂದಲೇ ಸರ್ವೇ ನಡೆಸಿ, ದಾಖಲೆಗಳನ್ನು ಸೃಜಿಸಿ, ಉಚಿತವಾಗಿ ನೀಡುವ ನಕ್ಷಾ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ರಾಜ್ಯ ಸರ್ಕಾರವು ಇದೆ ಮೊದಲ ಬಾರಿಗೆ ರಾಜ್ಯದ ಹತ್ತು ಜಿಲ್ಲೆಗಳ ಆಯ್ದ ಹತ್ತು ಪ್ರದೇಶಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಶಿವಮೊಗ್ಗ ಜಿಲ್ಲೆಯ ಅನವಟ್ಟಿಯನ್ನು ಆಯ್ಕೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗುವುದು ಎಂದರು.

ಅಸ್ತಿಗಳ ಮಾಲೀಕರು ತಮ್ಮ ಅಸ್ತಿ ಹಕ್ಕುಗಳಿಗೆ ಮೂಲ ದಾಖಲೆಯಾಗಿ ಈ ದಾಖಲೆಯನ್ನು ಪರಿಗಣಿಸಬಹುದಾಗಿದೆ ಅಲ್ಲದೆ ಮಾಲೀಕತ್ವವನ್ನು ಕಾನೂನಾತ್ಮಕರಾಗಿ ಹಾಗೂ ದಾಖಲೆಗಳ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ ಎಂದರು.

ಭೂದಾಖಲೆಗಳ ಕಾಲೋಚಿತಗೊಳಿಸುವಿಕೆಯಿಂದ ಪರಿಣಾಮಕಾರಿಯಾಗಿ ನಗರ ಯೋಜನೆಯನ್ನು ಸುಗಮಗೊಳಿಸಳು ಸಾಧ್ಯವಾಗಲಿದೆ. ಸ್ಥಳೀಯ ಪ್ರಾಧಿಕಾರಿಗಳು ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಮತ್ತು ವಲಯ ನಿಯಮಾವಳಿಗಳನ್ನು ಜಾರಿಗೆ ತರಲು ಅನುವು ಮಾಡಿಕೊಡುವಲ್ಲಿ ಅನುಕೂಲವಾಗಲಿದೆ ಎಂದರು.

ಭೂಮಿಯ ಬಳಕೆಯ ವಿವರಗಳನ್ನು ನಿರ್ಣಯಿಸಿ, ವಸತಿ, ಸಾರಿಗೆ ಮತ್ತು ಇತರೆ ಸೇವೆಗಳನ್ನು ಒದಗಿಸುವಲ್ಲಿ ನಕ್ಷಾ ಸಹಾಯಕವಾಗಲಿದೆ ಅಲ್ಲದೆ ಆಸ್ತಿ ಮೌಲ್ಯಗಳನ್ನು ನಿರ್ಣಯಿಸಲು, ತೆರಿಗೆಗಳನ್ನು ನ್ಯಾಯಯುತವಾಗಿ ವಿಧಿಸಲು ಮತ್ತು ಪರಿಣಾಮಕಾರಿಯಾಗಿ ಸಂಗ್ರಹಿಸಲು ಸಹಕಾರಿಯಾಗುವ ನಿರೀಕ್ಷೆ ಇದೆ ಎಂದರು.

Madhu Bangarappa ಹೂಡಿಕೆದಾರರಿಗೆ ಭೂಮಿಯ ಮಾಲೀಕತ್ವದ ನಿಖರತೆಯಿಂದ ಭೂಮಿಯ ಬಳಕೆಯನ್ನು ಹೆಚ್ಚಿನ ರೀತಿಯಲ್ಲಿ ಉತ್ತಮವಾಗಿ ಬಳಸಲು ಸಹಾಯಕವಾಗಲಿದೆ ಎಂದರು.

ವಿಶೇಷವಾಗಿ ಸರ್ಕಾರಿ ಶಾಲೆ ಸೇರಿದಂತೆ ವಿವಿಧ ಇಲಾಖೆಗಳ ಅಸ್ತಿಯನ್ನು ಗುರುತಿಸಿ, ಸಂರಕ್ಷಣೆ ಮಾಡಲು ಅನುಕೂಲವಾಗಲಿದೆ. ಅಲ್ಲದೆ ಜನರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿದಂತಾಗಲಿದೆ, ಎಂದ ಅವರು ಸೊರಬ ತಾಲೂಕಿನಲ್ಲಿ ಸುಮಾರು 75ಲಕ್ಷ ಅಸ್ತಿಗಳಿದ್ದು, ಮುಂದಿನ ಆರು ತಿಂಗಳೊಳಗಾಗಿ ದಾಖಲೆಗಳನ್ನು ಸೃಜಿಸುವ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ಇದೆ ಸಂದರ್ಭದಲ್ಲಿ ಉಪಹಾರದೊಂದಿಗೆ ಪೌರಕಾರ್ಮಿಕರ ಅಹವಾಲುಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಸಾಗರ ಉಪವಿಭಾಗಾಧಿಕಾರಿ ಯತೀಶ್, ಭೂ ಮಾಪನ ಇಲಾಖೆಯ ಉಪನಿರ್ದೇಶಕ ಪಿ. ಶ್ರೀನಿವಾಸ್, ಸರ್ವೇ ಆಫ್ ಇಂಡಿಯಾದ ಪ್ರತಿನಿಧಿ ರಮೇಶ್, ಶ್ರೀಮತಿ ಮಂಜುಳಾ ಹೆಗಡಾಳ್, ಸಂತೋಷಕುಮಾರ್ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಪೌರಸೇವಾ ಕಾರ್ಮಿಕರು, ಸಾರ್ವಜನಿಕರು ಉಪಸ್ಥಿತರಿದ್ದರು.

Nimhans Bangalore ಯುವ ಪರಿವರ್ತಕರು ಹಾಗೂ ಸಮಾಲೋಚಕ ಆಯ್ಕೆಗೆ ಅರ್ಜಿ ಆಹ್ವಾನ

0

Nimhans Bangalore ಯುವ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಜನ ಆರೋಗ್ಯ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್ ಬೆಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸಲು ಯುವ ಪರಿವರ್ತಕರು ಹಾಗೂ ಸಮಾಲೋಚಕರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿನಾಂಕವಾಗಿದ್ದು, ಪ್ರಸ್ತುತ 3 ಯುವ ಪರಿವರ್ತಕರು ಮತ್ತು 1 ಯುವ ಸಮಾಲೋಚಕರ ಹುದ್ದೆ ಖಾಲಿ ಇದ್ದು, ಪದವಿ ಒಳಗೊಂಡಂತೆ ಸೈಕಾಲಜಿ, ಸೋಷಿಯಲ್ ವರ್ಕ್ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಯುವ ಪರಿವರ್ತಕರ ಹುದ್ದೆಗೆ ಕನಿಷ್ಠ 21 ರಿಂದ 35 ವರ್ಷದ ವಯಸ್ಸಿನವರಾಗಿರಬೇಕು. ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಮತ್ತು ಉತ್ತಮ ಸಂವಹನ ಕೌಶಲ್ಯ, ಸ್ಪಷ್ಟವಾದ ಕನ್ನಡ ಉಚ್ಛಾರಣೆ ಇರಬೇಕು. ಇವರಿಗೆ ಗೌರವಧನವಾಗಿ ರೂ. 7 ಸಾವಿರ ನೀಡಲಿದ್ದು, ಪ್ರತಿ ಜಿಲ್ಲೆ ಓರ್ವ ಯುವ ಸಮಾಲೋಚಕರನ್ನು ಆಯ್ಕೆ ಮಾಡಲಾಗುತ್ತದೆ.
ಯುವ ಸಮಾಲೋಚಕರ ಹುದ್ದೆಗೆ 21 ರಿಂದ 35 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದ್ದು ಪದವಿ ಹಾಗೂ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ಆಪ್ತ ಸಮಾಲೋಚನೆಯನ್ನು ಒದಗಿಸುವ ಕೌಶಲ್ಯ, ಸಮುದಾಯದಲ್ಲಿ ಕೆಲಸ ಮಾಡುವ ಆಸಕ್ತಿ, ಉತ್ತಮ ಸಂವಹನ ಕೌಶಲ್ಯ, ಸ್ಪಷ್ಟವಾದ ಕನ್ನಡ ಉಚ್ಛಾರಣೆ ಹೊಂದಿರಬೇಕು ರೂ.9000 ಗೌರವಧನ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಗರದ ನೆಹರು ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

University of Agricultural & Horticultural Sciences ಆರ್ಥಿಕ ಸಬಲೀಕರಣಕ್ಕೆ ಜೇನು ಸಾಕಾಣಿಕೆ ಸಹಕಾರಿ : ಶೈಲಾ ಎನ್

0

University of Agricultural & Horticultural Sciences ಆರ್ಥಿಕ ಸಬಲೀಕರಣಕ್ಕೆ ಜೇನು ಸಾಕಾಣಿಕೆ ಒಂದು ಉತ್ತಮ ಮಾರ್ಗವಾಗಿದ್ದು, ಜೇನು ಸಾಕಾಣಿಕೆ ತರಬೇತಿಯ ಸದುಪಯೋಗ ಪಡೆಯಬೇಕೆಂದು ತೀರ್ಥಹಳ್ಳಿ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಶೈಲಾ ಎನ್ ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ತಾ.ಪಂ ತೀರ್ಥಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಐಸಿಎಆರ್, ಟಿಎಸ್‌ಪಿ ಯೋಜನೆ ‘ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಜೇನು ಸಾಕಾಣಿಕೆಯ ತಂತ್ರಗಳೊAದಿಗೆ ಪರಿಶಿಷ್ಟ ಪಂಗಡಗಳ ಸಬಲೀಕರಣ’ ಎಂಬ ವಿಷಯದಡಿ ಫೆ.14 ರಿಂದ 16 ರವರೆಗೆ ತೀರ್ಥಹಳ್ಳಿ ಗ್ರಾಮೀಣಾಭಿವೃದ್ದಿ ಭವನದಲ್ಲಿ ಏರ್ಪಡಿಸಲಾಗಿದ್ದ ಜೇನು ಸಾಕಾಣಿಕೆ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೇನು ಸಾಕಾಣಿಕೆ ಒಂದು ಉತ್ತಮ ತರಬೇತಿಯಾಗಿದೆ. ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಸಾಕಾಣಿಕೆ ಕೈಗೊಂಡು ನಂತರ ಹಲವಾರು ಪೆಟ್ಟಿಗೆಗಳನ್ನು ಇಟ್ಟು ದೊಡ್ಡ ಪ್ರಮಾಣದಲ್ಲಿ ಮಾಡಿ ಕುಟುಂಬದ, ಸಮಾಜದ ಹಾಗೂ ದೇಶದ ಅಭಿವೃದ್ದಿಗೆ ಕಾರಣರಾಗುವಂತೆ ಕರೆ ನೀಡಿದರು.
ಆರ್ಥಿಕ ಸಬಲೀಕರಣಕ್ಕೆ ಈ ತರಬೇತಿಯು ಸಹಕಾರಿಯಾಗಿದ್ದು ಆಸಕ್ತರೆಲ್ಲ ಈ ತರಬೇತಿಯ ಪ್ರಯೋಜನ ಪಡೆದುಕೊಂಡು ತಮ್ಮ ಜೀವನ ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದೇ ವೇಳೆ ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರದೊಂದಿಗೆ ಜೇನು ಸಾಕಾಣಿಕೆಗೆ ಅಗತ್ಯವಾದ ಪರಿಕರಗಳನ್ನು ವಿತರಣೆ ಮಾಡಲಾಯಿತು.
ನೋಡಲ್ ಅಧಿಕಾರಿ ಹಾಗೂ ಪ್ರಧಾನ ಪರಿಶೋಧಕರಾದ ಡಾ.ಜಯಲಕ್ಷಿö್ಮ ನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿ, ಮೂರು ದಿನಗಳ ಕಾಲ ನಡೆದ ತರಬೇತಿಯ ಕುರಿತು ವಿವರಣೆ ನೀಡಿದರು. ವಿಘ್ನೇಶ ತಲಕಾಲಕೊಪ್ಪ, ಪ್ರತೀಕ್ ಇತರರು ಹಾಜರಿದ್ದರು. ತೀರ್ಥಹಳ್ಳಿ ತಾಲ್ಲೂಕಿನ ಸುತ್ತಮುತ್ತಲಿನ ಪರಿಶಿಷ್ಟ ಪಂಗಡಗಳ 30 ರೈತ ಮಹಿಳೆಯರು, ರೈತರು, ಯುವಕ ಯುವತಿಯರು ಭಾಗವಹಿಸಿದ್ದರು.

Skill Development Entrepreneurship Department ಫೆ. 24 ರಂದು ಉದ್ಯೋಗ ಮೇಳ

0

Skill Development Entrepreneurship Department ಕೌಶಾಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಇವುಗಳ ಸಂಯುಕ್ತಾಶ್ರಯದಲ್ಲಿ ಫೆ. 24 ರಂದು ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜ ಆವರಣದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಸಂದರ್ಶನದಲ್ಲಿ ಪ್ರತಿಷ್ಟಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಎಸ್‌ಎಸ್‌ಎಲ್‌ಸಿ/ಪಿಯುಸಿ/ ಐಟಿಐ/ ಡಿಪ್ಲೊಮಾ/ಬಿಇ ಮತ್ತು ಯಾವುದೇ ಪದವಿ/ಸ್ನಾತಕೋತ್ತರ ಪದವಿ ಉತ್ತೀರ್ಣ/ಅನುತ್ತೀರ್ಣ ಹೊಂದಿದ ಅಭ್ಯರ್ಥಿಗಳು ಬಯೊಡಾಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸುವುದು.
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ http://forms.gle/se41paGCoRiexPPP9 ರಲ್ಲಿ ಅಥವಾ ಸ್ಥಳದಲ್ಲೆ ನೇರವಾಗಿ ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-255294/ 9019485688 ಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ಹೆಚ್.ಎಂ.ತಿಳಿಸಿದ್ದಾರೆ.

Narayana Health ಪಶ್ಚಿಮ ಬಂಗಾಳದಲ್ಲಿ ನಾರಾಯಣ ಹೆಲ್ತ್ ನ 21ನೇ ಘಟಕಕ್ಕೆ ಶಂಕುಸ್ಥಾಪನೆ

0

Narayana Health ಪಶ್ಚಿಮ ಬಂಗಾಳದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ನಾರಾಯಣ ಹೆಲ್ತ್ ಸಂಸ್ಥೆಯು ಇಂದು ಕೋಲ್ಕತ್ತಾದ ನ್ಯೂ ಟೌನ್‌ ನಲ್ಲಿ ತನ್ನ ಅತಿದೊಡ್ಡ ಘಟಕವಾದ ನಾರಾಯಣ ಹೆಲ್ತ್ ಸಿಟಿಗೆ ಶಂಕುಸ್ಥಾಪನೆ ನೆರವೇರಿಸಿದೆ.

ಈ ಘಟಕವು ನಾರಾಯಣ ಹೆಲ್ತ್ ನ 21ನೇ ಘಟಕವಾಗಿದ್ದು, ಪೂರ್ವ ಭಾರತದಲ್ಲಿನ ಅತಿದೊಡ್ಡ ಖಾಸಗಿ ಆಸ್ಪತ್ರೆ ಘಟಕ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ. ಈ ಘಟಕವು ಅತ್ಯಾಧುನಿಕ ತಂತ್ರಜ್ಞಾನಗಳುಳ್ಳ ಮಲ್ಟಿ ಸ್ಪೆಷಾಲಿಟಿ ಘಟಕವಾಗಲಿದ್ದು, 10 ಲಕ್ಷ ಚದರ ಅಡಿಯಷ್ಟು ವಿಶಾಲವಾಗಿದೆ. ಆಂಕಾಲಜಿ, ಕಾರ್ಡಿಯಾಕ್ ಸೈನ್ಸಸ್, ಆರ್ಗನ್ ಟ್ರಾನ್ಸ್‌ ಪ್ಲ್ಯಾಂಟ್‌, ಆರ್ಥೋಪೆಡಿಕ್ಸ್ ಮತ್ತು ಅಡ್ವಾನ್ಸ್ಡ್ ಟ್ರಾಮಾ ಕೇರ್, ನ್ಯೂರಾಲಜಿ, ಗ್ಯಾಸ್ಟ್ರೋಎಂಟರಾಲಜಿ, ರೀನಲ್ ಸೈನ್ಸಸ್ ಮತ್ತು ಕ್ರಿಟಿಕಲ್ ಕೇರ್‌ ಸೇರಿದಂತೆ ಹಲವಾರು ವೈದ್ಯಕೀಯ ವಿಭಾಗಗಳಲ್ಲಿ ಅತ್ಯಾಧುನಿಕ ಚಿಕಿತ್ಸೆ ನೀಡಲಿದೆ.

ನ್ಯೂ ಟೌನ್‌ ನಲ್ಲಿರುವ ನಾರಾಯಣ ಹೆಲ್ತ್ ಸಿಟಿ ಯೋಜನೆಯು ಪೂರ್ಣಗೊಂಡ ಬಳಿಕ 1,100 ಹಾಸಿಗೆಗಳನ್ನು ಹೊಂದಿರುವ ಈ ವಲಯದ ವಿಶೇಷ ಘಟಕ ಆಗಲಿದೆ. ಈ ಮೂಲಕ ನಾರಾಯಣ ಹೆಲ್ತ್‌ ಸಂಸ್ಥೆಯು ಒಟ್ಟು 7,350 ಹಾಸಿಗೆಗಳನ್ನು ಹೊಂದಿರುವ ಸಾಮರ್ಥ್ಯ ಗಳಿಸಲಿದೆ ಎಂಬುದು ಗಮನಾರ್ಹವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ನಾರಾಯಣ ಹೆಲ್ತ್‌ ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಗ್ರೂಪ್ ಸಿಇಓ ಡಾ. ಇಮ್ಯಾನ್ಯುಯೆಲ್ ರೂಪರ್ಟ್ ಅವರು, “ನಾರಾಯಣ ಹೆಲ್ತ್ ಸಿಟಿ ಪೂರ್ವ ಭಾರತದ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ಒದಗಿಸುವ ಅತಿದೊಡ್ಡ ಖಾಸಗಿ ಆಸ್ಪತ್ರೆ ಘಟಕವಾಗಲಿದೆ. ಈ ಘಟಕದ ಮೂಲಕ ನಾರಾಯಣ ಹೆಲ್ತ್ ಸಂಸ್ಥೆಯು ಪಶ್ಚಿಮ ಬಂಗಾಳದ ಅತಿದೊಡ್ಡ ಮತ್ತು ಅತ್ಯಂತ ಸಮಗ್ರವಾದ ಖಾಸಗಿ ಆರೋಗ್ಯ ಸೇವಾ ಸಂಸ್ಥೆಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲಿದೆ” ಎಂದು ಹೇಳಿದರು.

ನಾರಾಯಣ ಹೆಲ್ತ್‌ ನ ಗ್ರೂಪ್ ಸಿಓಓ ಶ್ರೀ ಆರ್ ವೆಂಕಟೇಶ್ ಅವರು, “ಅತ್ಯುತ್ತಮ ವೈದ್ಯಕೀಯ ಸೇವೆಗೆ ಬೇಡಿಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸುಸಜ್ಜಿತ ತುರ್ತು ಆರೈಕೆ ಘಟಕವನ್ನು ಹೊಂದಿರುವುದು ಅತ್ಯವಶ್ಯವಾಗಿದೆ. ಈ ಹೊಸ ಘಟಕವು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಹೊಂದಲಿದ್ದು, ಸಂಕೀರ್ಣ ಮತ್ತು ತುರ್ತು ಪ್ರಕರಣಗಳನ್ನು ನಿಭಾಯಿಸುವ ಈ ಪ್ರದೇಶದ ಸಾಮರ್ಥ್ಯವನ್ನು ಜಾಸ್ತಿ ಮಾಡುತ್ತದೆ” ಎಂದು ಹೇಳಿದರು.

ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ವರ್ಗೀಸ್ ಪಿ. ಜಾನ್ ಅವರು, “ನಮ್ಮ ಸಂಸ್ಥೆಯ ಅಭಿವೃದ್ಧಿಯನ್ನು ನೋಡುವುದು ನಮ್ಮೆಲ್ಲರಿಗೆ ಹೆಮ್ಮೆ ತರುವ ವಿಷಯವಾಗಿದೆ. ಈ ಹೊಸ ಘಟಕದ ಮೂಲಕ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ತನ್ನ ಬದ್ಧತೆಯನ್ನು ನಾರಾಯಣ ಹೆಲ್ತ್ ಸಂಸ್ಥೆಯು ಸಾರಿದೆ” ಎಂದು ಹೇಳಿದರು.

ನಾರಾಯಣ ಹೆಲ್ತ್ ಈಗಾಗಲೇ ದಕ್ಷಿಣ ಭಾರತದ ಬೆಂಗಳೂರು, ಶಿವಮೊಗ್ಗ, ಮೈಸೂರು, ಧಾರವಾಡ, ದಾವಣಗೆರೆ ಮತ್ತು ಕೋಲಾರ ಪ್ರದೇಶದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ. ಪೂರ್ವ ಭಾರತದ ಕೋಲ್ಕತ್ತಾ, ಹೌರಾ, ಬರಾಸತ್, ರಾಯ್‌ಪುರ, ಗುವಾಹಟಿ, ಜಮ್‌ಶೆಡ್‌ಪುರ ಮತ್ತು ಪಶ್ಚಿಮ ಭಾರತದ ಮುಂಬೈ, ಅಹಮದಾಬಾದ್ ಮತ್ತು ಉತ್ತರ ಭಾರತದ ದೆಹಲಿ ಎನ್ ಸಿ ಆರ್, ಜೈಪುರ ಮತ್ತು ಕತ್ರಾಗಳಲ್ಲಿ ಕೂಡ ವೈದ್ಯಕೀಯ ಸೇವೆ ಒದಗಿಸುತ್ತಿದೆ ಎಂಬುದನ್ನು ಇಲ್ಲಿ ಸ್ಮರಿಸಿಬಹುದು.

Rotary Club Shivamogga ಸಂಧಿ ಮತ್ತು ಮೂಳೆ ನೋವುಗಳ ಉಚಿತ ತಪಾಸಣೆ ಶಿಬಿರ

0

Rotary Club Shimoga ಕೃತ್ವಿ ಆಯುರ್ವೇದ ಮೊದಲನೇ ವಾರ್ಷಿಕೋತ್ಸವದ ಪ್ರಯುಕ್ತ ದುರ್ಗಿಗುಡಿ, ಮೊದಲ ಪ್ಯಾರಲಲ್ ರಸ್ತೆಯ ಆಸ್ವತ್ರೆ ಕಟ್ಟಡದಲ್ಲಿ ಡಾ.ಪ್ರಕೃತಿ ಮಂಚಾಲೆಯವರು ದಿನಾಂಕ:22-02-25ರ ಶನಿವಾರ ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಗುಫಿಕ್ ಬಯೋ ಸೈನ್ಸ್ ಪ್ರಾಯೊಜಕತ್ವದಲ್ಲಿ ಉಚಿತ ಬಿ.ಎಂ.ಡಿ. ಪರೀಕ್ಷೆ ನಡೆಸುವರು. ಮಂಡಿನೋವು, ಭುಜನೋವು,
ಕೈ ಮತ್ತು ಕಾಲು, ಕುತ್ತಿಗೆ, ಸೊಂಟ ಹಾಗೂ ಇತರೆ ಕೀಲು ನೋವುಗಳಿಗೆ ಉಚಿತ ತಪಾಸಣೆ ನಡೆಸಲಾಗುವುದು ಹಾಗು ಮೂಳೆ ಸಾಂದ್ರತೆ ಪರೀಕ್ಷೆ ಮಾಡಲಾಗುವುದು. ಅಂದಾಜು ಎರಡು ಸಾವಿರ ಮೌಲ್ಯದ ಸಾಂದ್ರತೆ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುವುದು. ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ಸಹಕಾರದಲ್ಲಿ ಈ ಕಾರ್ಯ ಕ್ರಮಹಮ್ಮಿಕೊಂಡಿದ್ದು, ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಧ್ಯಕ್ಷೆ ರೂಪಪುಣ್ಯಕೋಟಿ ಕೋರಿರುತ್ತಾರೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ :9482255355 ಕರೆ ಮಾಡಬಹುದು.

Chamber Of Commerce Shivamogga ಆರ್ಥಿಕ ತಜ್ಞ ವಿಶ್ವನಾಥ್ ಭಟ್ ಅವರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸನ್ಮಾನ

0

Chamber Of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕೇಂದ್ರ ಬಜೆಟ್ ವಿಶ್ಲೇಷಣೆ ಹಾಗೂ ಗಣ್ಯರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಆರ್ಥಿಕ ತಜ್ಞ ವಿಶ್ವನಾಥ್ ಭಟ್ ಅವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಆರ್ಥಿಕ ತಜ್ಞ ವಿಶ್ವನಾಥ್ ಭಟ್ ಅವರು ಸಂಘದ ಕಚೇರಿಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಮಾಜಿ ಅಧ್ಯಕ್ಷರ ಜತೆ ವಾಣಿಜ್ಯ ಮತ್ತು ಕೈಗಾರಿಕಾ ಸಮಸ್ಯೆಗಳು, ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಕೇಂದ್ರ ಮುಂಗಡ ಪತ್ರದ ಕುರಿತು ಸಮಾಲೋಚನೆ ನಡೆಸಿದರು.
Chamber Of Commerce Shivamogga ವಾಣಿಜ್ಯ ಮತ್ತು ಕೈಗಾರಿಕಾ ಸಂಘ ನಡೆಸುತ್ತಿರುವ ಕಾರ್ಯಕ್ರಮಗಳ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವನಾಥ್ ಭಟ್ ಅವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಸನ್ಮಾನಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಸುಕುಮಾರ್, ಖಜಾಂಚಿ ಆರ್.ಮನೋಹರ್, ಮಾಜಿ ಅಧ್ಯಕ್ಷರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಎನ್.ಗೋಪಿನಾಥ್ ಹಾಗೂ ನಿರ್ದೇಶಕರಾದ ಗಣೇಶ ಎಂ.ಅAಗಡಿ, ಶರತ್, ಎಸ್.ಪಿ.ಶಂಕರ್, ವಿ.ಕೆ.ಜೈನ್, ಲಕ್ಷಿö್ಮÃ ಗೋಪಿನಾಥ್, ಬಿ.ಸುರೇಶ್ ಕುಮಾರ್, ಕಾರ್ಯಕಾರಿ ಕಾರ್ಯದರ್ಶಿ ಎಚ್.ಎಚ್.ಕಮಲಾಕ್ಷರಪ್ಪ, ಬಿಜೆಪಿ ಪ್ರಮುಖರಾದ ಎಸ್.ದತ್ತಾತ್ರಿ, ಎನ್.ಡಿ.ಸತೀಶ್, ಸುರೇಂದ್ರ ಕಟ್ಟೆ ಹಾಗೂ ಇತರರು ಭಾಗವಹಿಸಿದ್ದರು.

Department of Labour ಕಾರ್ಮಿಕ‌ ಇಲಾಖೆ ಕಾರ್ಮಿಕ ಸ್ನೇಹಿ‌ ಇಲಾಖೆ:ಸಚಿವ ಸಂತೋಷ್ ಲಾಡ್

0

Department of Labour ಬಾಲಕಾರ್ಮಿಕ ಪದ್ಧತಿಯನ್ನು‌ ಬುಡದಿಂದಲೇ ಕಿತ್ತೊಗೆಯಬೇಕು.ಕಾರ್ಮಿಕರ ಸ್ನೇಹಿ ಇಲಾಖೆ ಆಗಿದ್ದು, ಯಾವುದೇ ಕಾರಣಕ್ಕೂ ಶಾಲಾಪುಸ್ತಕ ಕೈಹಿಡಿಯುವುದನ್ನು ಬಿಟ್ಟು ಮಕ್ಕಳ‌ಕೈ ದುಡಿಮೆಗೆ ಇಳಿಯದಂತೆ ನೋಡಿಕೊಳ್ಳುವುದು ಕಾರ್ಮಿಕ ಇಲಾಖೆಯ ಕರ್ತವ್ಯ ಎಂದು ಕಾರ್ಮಿಕ‌‌ ಸಚಿವ ಸಂತೋಷ್‌ಲಾಡ್ ಸೂಚಿಸಿದರು.

ಗದಗ ಜಿಲ್ಲಾ‌ಸಭಾಂಗಣದಲ್ಲಿ ಇಲಾಖೆಯ ಪ್ರಗತಿಪರಿಶೀಲನಾ‌ ಸಭೆ ನಡೆಸಿದ‌ ಅವರು, ಅಧಿಕಾರಿಗಳು ಬಾಲಕಾರ್ಮಿಕರ ಮೇಲೆ ತಮ್ಮತಮ್ಮ ವ್ಯಾಪ್ತಿಯಲ್ಲಿ ನಿಗಾವಹಿಸುತ್ತಿರಬೇಕು.ಇನ್ನು ಕಾರ್ಮಿಕರ ಕಲ್ಯಾಣಾಭಿವೃದ್ಧಿ ಕಡೆಗೂ ಗಮನ ನೀಡುತ್ತಿರಬೇಕು.ಕಾರ್ಮಿಕರಿಗೆ ಸರಿಯಾಗಿ ಅವರು ಕೆಲಸ ಮಾಡುವ ಸಂಸ್ಥೆ,ಕಚೇರಿಗಳು ಸರಿಯಾದ ಸಮಯಕ್ಕೆ ಪಿಎಫ್ ಹಣ ನೀಡುತ್ತಿವೆಯೋ ಇಲ್ಲವೋ ಎಂಬುದನ್ನು ಗಮನಿಸಬೇಕು.ಪಿಎಫ್ ನೀಡದ ಕಂಪೆನಿ ಸಂಸ್ಥೆಗಳ ಮೇಲೆ ಕ್ರಮಜರುಗಿಸುವಂತೆ ಸಂತೋಷ್ ಖಡಕ್ ಸೂಚನೆ ನೀಡಿದರು.

ಬಾಲಕಾರ್ಮಿಕರನ್ನಿಟ್ಟುಕೊಂಡು ಲಾಭ ಮಾಡಿಕೊಳ್ಳುತ್ತಿರುವವರ ಮೇಲೆ ಗಮನವಿರಬೇಕು.ಇಲಾಖಾಧಿಕಾರಿಗಳ ಗಮನಕ್ಕೆ ಕಾರ್ಮಿಕರ ಸಮಸ್ಯೆಗಳು ಕಂಡುಬಂದಲ್ಲಿ ಆದಷ್ಟುಬೇಗ ಸ್ಥಳದಲ್ಲಿಯೇ ಪರಿಹರಿಸುವಂತೆ ನೋಡಿಕೊಳ್ಳಬೇಕು.ಕಾರ್ಮಿಕರ ಹಿತಾರಕ್ಷಣೆಗೆ ಕಾರ್ಮಿಕರ ಇಲಾಖೆ ಇದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು.ಗಂಭೀರ ತುರ್ತು ಸಮಸ್ಯೆಗಳಿದ್ದರೆ ತಮ್ಮ ಗಮನಕ್ಕೆ ಕಡ್ಡಾಯವಾಗಿ ತರಲೇಬೇಕು.ಕಾರ್ಮಿಕರ ಸ್ನೇಹಿಯಾಗಿ ಇಲಾಖೆ ಇರಬೇಕೆಂದರು.

ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸಂತೋಷ್ ಲಾಡ್ ಗದಗ ಸರ್ಕ್ಯೂಟ್ ಹೌಸ್ ನಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಜಿಲ್ಲಾಧಿಕಾರಿ ಸಿ.ಎಂ.ಶ್ರೀಧರ್, ಪೋಲೀಸ್ ವರಿಷ್ಠಾಧಿಕಾರಿ ನೇಮಗೌಡ, ವಿಧಾನ ಪರಿಷತ್ ಸದಸ್ಯ ಸಂಕನೂರು , ಶಿರಹಟ್ಟಿ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್ ಸೇರಿದಂತೆ ಸ್ಥಳೀಯ ಮುಖಂಡರೊಂದಿಗೆ ಕಾರ್ಮಿಕರ ಕುರಿತು ಚರ್ಚೆ ಮಾಡಿದರು.

ಫೆ. 22, 23 ಹಾಗೂ 24 ರಂದು ಮುಧೋಳ ಹಾಗೂ ಬೆಳಗಲಿಯಲ್ಲಿ ಕವಿ ಚಕ್ರವರ್ತಿ ರನ್ನ ವೈಭವ ಕಾರ್ಯಕ್ರಮ

0

ವಿಧಾನಸೌಧದ ಆವರಣದಲ್ಲಿರುವ ನಾಡದೇವಿ ಭುವನೇಶ್ವರಿ ಪ್ರತಿಮೆ ಮುಂಭಾಗದಲ್ಲಿ ಕವಿ ಚಕ್ರವರ್ತಿ ರನ್ನ ವೈಭವದ ‘ರನ್ನರಥ’ಕ್ಕೆ ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಚಾಲನೆ ನೀಡಿದರು.

ಫೆಬ್ರವರಿ 22, 23 ಹಾಗೂ 24 ರಂದು ಮುಧೋಳ ಹಾಗೂ ಬೆಳಗಲಿಯಲ್ಲಿ ಕವಿ ಚಕ್ರವರ್ತಿ ರನ್ನ ವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರನ್ನ ವೈಭವ 2025 ಸಾಂಸ್ಕೃತಿಕ ಉತ್ಸವದ ಅಂಗವಾಗಿ ಇಂದು‌ ರನ್ನರಥಕ್ಕೆ ಚಾಲನೆ ನೀಡಲಾಯಿತು. ರನ್ನರಥವೂ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಫೆಬ್ರವರಿ 22 ರಂದು ಬೆಳಗಲಿಗೆ ತಲುಪಲಿದೆ.

ಕಾರ್ಯಕ್ರಮದಲ್ಲಿ ಶಾಸಕರಾದ ಜೆ ಟಿ ಪಾಟೀಲ್, ಬಿಬಿ ಚಿಮ್ಮನಕಟ್ಟಿ, ಪರಿಷತ್ ಸದಸ್ಯರಾದ ಪಿ ಹೆಚ್ ಪೂಜಾರ್, ಹನುಮಂತ ನಿರಾಣಿ, ಮಾಜಿ ಸಚಿವ ಅಜಯ್ ಕುಮಾರ್ ಸರ್ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಧರಣಿದೇವಿ ಮಾಲಗತ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.