Wednesday, March 11, 2026
Wednesday, March 11, 2026
Home Blog Page 396

Madhu Bangarappa ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಸಚಿವ ಎಸ್. ಮಧು ಬಂಗಾರಪ್ಪ

0

Madhu Bangarappa ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ತೀರ್ಥಹಳ್ಳಿ ತಾಲೂಕು ತೂದೂರಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

Madhu Bangarappa ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಆರ್. ಎಂ. ಮಂಜುನಾಥಗೌಡ, ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ತಹಸೀಲ್ದಾರ್ ರಂಜಿತ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Madhu Bangarappa ಬೇಗುವಳ್ಳಿ ನೂತನ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

0

Madhu Bangarappa ಬೇಗುವಳ್ಳಿಯ ನೂತನ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ತಾಪನೆ ನೆರವೇರಿಸಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಲು ಹಾಗೂ ಅವರ ಉಜ್ವಲ ಭವಿಷ್ಯ ನಿರ್ಮಿಸಲು ವಿಶೇಷ ಗಮನ ಹರಿಸುವಂತೆ ಮನವಿ ಮಾಡಿದರು.

ಸರ್ಕಾರಿ ಶಾಲೆಗಳಲ್ಲಿ ಶ್ರೇಷ್ಠ ದರ್ಜೆಯ ಶಿಕ್ಷಕರಿದ್ದಾರೆ. ಈಗಾಗಲೇ ರಾಜ್ಯದ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೀರು ಮತ್ತು ವಿದ್ಯುತ್ತನ್ನು ಏಕಕಾಲಕ್ಕೆ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ ಎಂದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನೇಕ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಇಲ್ಲಿಂದ ಶಿಕ್ಷಕರು ಉತ್ತಮ ಫಲಿತಾಂಶ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಅಲ್ಲದೆ ಇಲಾಖೆಯು ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸೂಚಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು. ಆರ್. ಅನಂತಮೂರ್ತಿ ಅವರು ವ್ಯಾಸಂಗ ಮಾಡಿದ ಹೆಮ್ಮೆಯ ಶಾಲೆ ಇದಾಗಿರುವುದು ವಿಶೇಷವಾಗಿದೆ. ಈ ಶಾಲೆಯ ಕೊಠಡಿ ಸೇರಿದಂತೆ ಸರ್ವಾoಗಿಣ ಉನ್ನತಿಗೆ ಅಗತ್ಯವಿರುವ ನೆರವನ್ನು ಒದಗಿಸುವುದಾಗಿ ಅವರು ತಿಳಿಸಿದರು.

ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಇರುವ ಶಿಕ್ಷಕರ ಕೊರತೆ ನೀಗಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು.

Madhu Bangarappa ರಾಜ್ಯದ ಪ್ರತಿ ಮನೆಮನೆಯಲ್ಲೂ ಗ್ಯಾರೆಂಟಿ ಯೋಜನೆಗಳ ಪಲಾನುಭವಿಗಳಿರುವುದು ಸಂತಸದ ಸಂಗತಿಯಾಗಿದೆ ಎಂದ ಅವರು, ಅಜೀಮ್ ಪ್ರೇಮ್ ಜಿ ಅವರ ಫೌಂಡೇಶನ್ ಅವರು ನೀಡಿದ 1591ಕೋಟಿ ರು. ಗಳ ಆರ್ಥಿಕ ನೆರವಿನೊಂದಿಗೆ ಶಾಲೆಯ ಎಲ್ಲಾ ಮಕ್ಕಳಿಗೆ ವಾರದ ಆರು ದಿನಗಳ ಕಾಲ ಬಿಸಿ ಊಟದ ಜೊತೆಗೆ ಪೌಷ್ಟಿಕ ಆಹಾರ ಮೊಟ್ಟೆ, ಹಾಲು ವಿತರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ ಅವರು ಮಾತನಾಡಿ ಸರ್ಕಾರವು ನೂತನವಾಗಿ ಅನುಷ್ಠಾನಗೊಳಿಸಿರುವ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಸರ್ಕಾರದೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. ಅಲ್ಲದೆ ಮಂಡಳಿಯಿಂದ ಹಾಗೂ ವೈಯಕ್ತಿಕವಾಗಿ ಆರ್ಥಿಕ ನೆರವನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಇಂದು ತೀರ್ಥಹಳ್ಳಿ ತಾಲೂಕು ಬೇಗುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ಶಾಲೆಯ ಜಾಗ ಮಂಜೂರಾಗಿರುವ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಆರ್. ಎಂ. ಮಂಜುನಾಥಗೌಡ, ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ತಹಸೀಲ್ದಾರ್ ರಂಜಿತ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Prayag Raj ಶಿವಮೊಗ್ಗ-ಪ್ರಯಾಗ್ ರಾಜ್-ಬನಾರಸ್ ವಿಶೇಷ ರೈಲಿಗೆ ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಚಾಲನೆ

0

Prayag Raj ಸನಾತನ ಹಿಂದೂ ಧರ್ಮದ ಶ್ರೀಮಂತ ಸಾಂಸ್ಕೃತಿಕ ವೈಭವದ “ಮಹಾ ಕುಂಭಮೇಳ” ಎಂಬ ವಿಶ್ವದರ್ಶನದಲ್ಲಿ ನನ್ನ ಲೋಕಸಭಾ ಕ್ಷೇತ್ರದ ಮಹಾಜನತೆ ಅತ್ಯಂತ ಅತ್ಮ ಸಧ್ಬಾವನ ಹಾಗೂ ಧನ್ಯತಾ ಭಾವದಿಂದ ಭಾಗಿಯಾಗಲಿ ಎಂಬ ಮಹಾದಾಸೆಯಿಂದ ಹೊರಡಿಸಿದ “ಶಿವಮೊಗ್ಗ-ಪ್ರಯಾಗ್ ರಾಜ್-ಬನಾರಸ್” ವಿಶೇಷ ರೈಲಿಗೆ ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಚಾಲನೆ ಕೊಟ್ಟು ಯಾತ್ರಾರ್ತಿಗಳನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರು, ಆರ್.ಎಸ್.ಎಸ್ ಪ್ರಮುಖರಾದ ಶ್ರೀ ಗಿರೀಶ್ ಕಾರಂತ್ ಅವರು ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ನಗರ ಪ್ರಮುಖರು, ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.

International Abacus Olympiad ಅಬಾಕಸ್ ಅಂಡ್ ಮೆಂಟಲ್ ಅರ್ಥಮೆಟಿಕ್ ಪರೀಕ್ಷೆಯಲ್ಲಿ ಮಕ್ಕಳ ಸಾಧನೆ

0

International Abacus Olympiad ಕಲಬುರ್ಗಿಯಲ್ಲಿ ನಡೆದ ಗ್ಯಾಲಕ್ಸಿ ಇಂಟರ್ನ್ಯಾಷನಲ್ ಅಬಾಕಸ್ ಅಂಡ್ ಮೆಂಟಲ್ ಅರ್ಥಮೇಟಿಕ್ ಕಾಂಪಿಟೇಷನ್ ಪರೀಕ್ಷೆಯಲ್ಲಿ ಬಹುಮಾನವನ್ನು ಪಡೆದಿದ್ದಾರೆ.
1) ಮಾಹಿ ಚೇತನಾ – ಸೂಪರ್ ಚಾಪಿಯನ್
2)ಪೃಥ್ವಿ ಎಸ್ – ಚಾಂಪಿಯನ್
3)ಮೋಹಮದ್ ಸುಫೀಯ- ರನ್ನರಪ್ 1
4)ಮೊಹಮದ್ ಜುನೈದ್ – ರನ್ನರಪ್ 1
5)ಜ್ಞಾನೇಶ್ ಬಿ ಎಸ್ -ರನ್ನರಪ್ 1
6)ಪೂರ್ವಿಕ ಗೌಡ ಬಿ. ಎಸ್ -ರನ್ನರಪ್ 2
7)ಮೋಕ್ಷಿತ್ ರಾಜ್ ಕೆ ಬಿ -ರನ್ನರಪ್ 2
8)ಆಯುಷಿ K- ರನ್ನರಪ್ 2
9)ಕುಶಾಲ್ ತೇಜ್ ಎಂ ಡಿ – ರನ್ನರಪ್ 2
10)ಆಯಿಷಾ ಸಿದ್ಧಿಕ್ – ರನ್ನರಪ್ – 2
11)ಗಣೇಶ್ ಎಂ ಆರ್ -ರನ್ನರಪ್ 3
12)ಕೃತಿಕಾ ಅಶೋಕ್ ಕುಮಾರ್ -ರನ್ನರಪ್ 3 ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಈ ಎಲ್ಲಾ ವಿದ್ಯಾರ್ಥಿಗಳು ನೊಬೆಲ್ ವರ್ಲ್ಡ್ ರೆಕಾರ್ಡ್ ಸರ್ಟಿಫಿಕೇಟ್ ಮತ್ತು ಮೆಡಲ್ ಪಡೆದಿರುತ್ತಾರೆ.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಸಹಕರಿಸಿದ ಪೋಷಕರಿಗೂ ಗ್ಯಾಲಕ್ಸಿ ಅಬಾಕಸ್ ಸೆಂಟರ್ ನ ಮುಖ್ಯಸ್ಥರಾದ ಶ್ರೀಮತಿ ಕುಶ ರಾಜುಸ್ವಾಮಿ ಇವರು ಅಭಿನಂದನೆಗಳನ್ನು ಅಭಿನಂದನೆ ಸಲ್ಲಿಸಿದ್ದಾರೆ.

Rotary Club Shivamogga ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ರೊ. ರೂಪ ಪುಣ್ಯಕೋಟಿ

0

Rotary Club Shivamogga ಇಂದು ಆರೋಗ್ಯವೆ ಭಾಗ್ಯ. ಪ್ರತಿನಿತ್ಯದ ಜಂಜಾಟದಿಂದ, ಆಹಾರದ ವ್ಯತ್ಯಾಸದಿಂದಾಗಿ ಮಧ್ಯವಯಸ್ಕರಿಗೆ ಹಲವಾರು ತೊಂದರೆ ಉಂಟಾಗುತ್ತಿದ್ದು, ಅದರ ನಿವಾರಣೆಗೆ ಆಗಿಂದಾಗೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರೋಗ ಉಲ್ಬಣ ಆಗುವ ಮುಂಚಿತವಾಗಿ ಪರಿಹಾರ ಕಂಡು ಕೊಳ್ಳಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಅಧ್ಯಕ್ಷರಾದ ರೊ. ರೂಪ ಪುಣ್ಯಕೋಟೆ ಹೇಳಿದರು.

ಕೃತ್ವಿ ಆಯುರ್ವೇದ ಮೊದಲನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಂಧಿ ಮತ್ತು ಮೂಳೆ ನೋವುಗಳ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಯಿಲೆ ಬರುವುದನ್ನು ತಡೆಗಟ್ಟಲು ಅನುಕೂಲವಾಗುವಂತೆ ರೋಟರಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಮೂಳೆ ಸಾಂಧ್ರತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.

ಡಾ. ಪ್ರಕೃತಿ ಮಂಚಾಲೆ ಮಾತನಾಡಿ, ನಮ್ಮ ಕೃತ್ವಿ ಆಯುರ್ವೇದ ಪ್ರಾರಂಭವಾಗಿ ಒಂದು ವರ್ಷವಾಯಿತು. ಈ ಸಂದರ್ಭದಲ್ಲಿ ನಾಗರೀಕರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿ, ಗುಫಿಕ್ ಬಯೋ ಸೈನ್ಸ್ ರವರ ಪ್ರಯೋಜಕತ್ವದಲ್ಲಿ ಉಚಿತವಾಗಿ ಬಿ.ಎಂ.ಡಿ.ಪರೀಕ್ಷೆ ಮೂಲಕ ಮಂಡಿ, ಭುಜ, ಕೈ-ಕಾಲು, ಕುತ್ತಿಗೆ, ಕೀಲು ನೋವುಗಳ ತಪಾಸಣೆ ಮಾಡಲಾಗುತ್ತಿದೆ ಎಂದರು.

ತಾಂತ್ರಿಕ ಯುಗದಲ್ಲಿ ಮನುಷ್ಯ ಚಟುವಟಿಕೆಯಿಂದ ದೂರವಾಗುತ್ತಿದ್ದು, ಪೌಷ್ಟಿಕ ಆಹಾರ ಉಪಯೋಗಿಸದಿರುವುದು, ಎಲ್ಲಾ ಕೆಲಸಗಳಿಗೂ ಯಂತ್ರಗಳನ್ನು ಉಪಯೋಗಿಸುತ್ತಿರುವುದರಿಂದ ದೇಹ ದಂಡಿಸುವುದು ಕಡಿಮೆಯಾಗಿ, ಹಲವಾರು ಕೀಲು ನೋವುಗಳು ಚಿಕ್ಕ ವಯಸ್ಸಿನಲ್ಲೆ ಬರುತ್ತಿದೆ. ಅದನ್ನು ತಡೆಗಟ್ಟಲು ಆಗಿಂದಾಗೆ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಮೂಳೆ ಸವಕಳಿ ತಡೆಗಟ್ಟಲು ಸೊಪ್ಪು, ತರಕಾರಿ, ಮೊಟ್ಟೆ ಯಥೇಚ್ಛವಾಗಿ ಬಳಸಬೇಕು. ಜಂಕ್ ಫುಡ್ ಕಡಿಮೆ ಬಳಸುವುದರೊಂದಿಗೆ, ದೇಹ ದಂಡಿಸಲು ವ್ಯಾಯಾಮ, ಕನಿಷ್ಟ ವಾಯು ವಿಹಾರ ಪ್ರತಿ ನಿತ್ಯ ಒಂದು ಗಂಟೆ ನಡಿಗೆಯನ್ನು ಅಭ್ಯಾಸ ಮಾಡಿಕೊಳ್ಳುವ ಮೂಲಕ ಉತ್ತಮ ಜೀವನ ಶೈಲಿಯಿಂದ ರೋಗ ಮುಕ್ತರಾಗಿ ಬಾಳಬಹುದು ಎಂದು ಸಲಹೆ ನೀಡಿದರು.

Rotary Club Shivamogga ರೋಟರಿ ಮಾಜಿ ಸಹಾಯಕ ಗವರ್ನರ ಜಿ.ವಿಜಯಕುಮಾರ್, ಆರೋಗ್ಯ ಎಲ್ಲರಿಗೂ ಅತಿಮುಖ್ಯ. ಪ್ರಸ್ತುತ ದಿನದಲ್ಲಿ ಯಾರ ಬಳಿಯೂ ಸಮಯ ಇಲ್ಲದಂತಾಗಿದೆ. ಸಣ್ಣಪುಟ್ಟ ಸಮಸ್ಯೆಗಳಿಗೆ ಆಗಿಂದಾಗ್ಗೆ ವೈದ್ಯರ ಬಳಿ ಹೋಗಿ ಸಲಹೆ ಪಡೆದುಕೊಳ್ಳದೇ, ಆರೋಗ್ಯದ ಮೇಲೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪೌಷ್ಟಿಕಾಂಶಯುಕ್ತ ಆಹಾರದ ಸೇವನೆ ಜೊತೆಗೆ ದೈಹಿಕ ವ್ಯಾಯಾಮಗಳನ್ನು ಪ್ರತಿನಿತ್ಯ ಮಾಡುವುದರಿಂದ ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಬಹುದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸುಶ್ಮಿತ ಪ್ರಾರ್ಥನೆ ನೆರವೇರಿಸಿಕೊಟ್ಟರು. ಶ್ರೀಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತ ಸ್ವಾಗತಿಸಿ, ಸುರೇಶ್ ನಿರೂಪಿಸಿದರು. ಭಾರದ್ವಾಜ್, ಸತ್ಯನಾರಾಯಣ, ರೇಣುಕಾರಾದ್ಯ, ವಾಗೇಶ್, ವೆಂಕಟೇಶ್ ನಾಯಕ್, ಪದ್ಮಾವತಿ ಮುಂತಾದವರು ಇದ್ದರು. ಸುಮಾರು ಇನ್ನೂರೈವತ್ತು ಮಂದಿ ಈ ಶಿಬಿರದ ಸದುಪಯೋಗ ಪಡೆದುಕೊಂಡರು.

Navule Govt Senior Primary School ಕನ್ನಡಕ್ಕಾಗಿ ದುಡಿದ ಮಹನೀಯರ ಪರಿಚಯ ಇಂದಿನ ಪೀಳಿಗೆಗೆ ಅಗತ್ಯವಿದೆ: ಜಿ.ಗಣೇಶ್ ಕರೆ

0

Navule Govt Senior Primary School ಕನ್ನಡಕ್ಕಾಗಿ ದುಡಿದ ಮಹನೀಯರು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ನಮ್ಮ ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ ಎಂದು ಸಹ್ಯಾದ್ರಿ ಅಧ್ಯಕ್ಷ ಜಿ.ಗಣೇಶ್ ಅಭಿಮತ ವ್ಯಕ್ತಪಡಿಸಿದರು. ನವುಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಶ್ವ ಮಾತೃಭಾಷಾ ದಿನಾಚರಣೆ ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಮಕ್ಕಳು ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಇಂದು ಕನ್ನಡ ಉಳಿಸಿ ಬೆಳೆಸಿ ಎನ್ನುವುದಕ್ಕಿಂತ ಕನ್ನಡವನ್ನು ಹೆಚ್ಚಾಗಿ ಬಳಸಿ ಎಂದರೆ ಒಳ್ಳೆಯದು. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಅನ್ಯ ಭಾಷೆಯನ್ನು ಗೌರವಿಸೋಣ ಕನ್ನಡ ಭಾಷೆ ಉಳಿಸೋಣ ಎಂದು ನುಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ ವಿಜಯಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕನ್ನಡ ಶಾಲೆಗಳು ಇಂದು ಅವಸಾನದ ಅಂಚಿನಲ್ಲಿವೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಸವಲತ್ತುಗಳಿದ್ದರೂ ದಾಖಲಾತಿಯಲ್ಲಿ ಕನ್ನಡ ಶಾಲೆಗಳು ಸೊರಗುತ್ತಿವೆ. ಕನ್ನಡದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳು ನಮ್ಮಲ್ಲಿ ಇದ್ದಾರೆ. ಈ ನಿಟ್ಟಿನಲ್ಲಿ ನಾವುಗಳು ಮನೆಗಳಲ್ಲಿ ವ್ಯಾಪಾರ ಸ್ಥಳಗಳಲ್ಲಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಬೇಕು ಎಂದು ವಿನಂತಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಅನ್ನಪೂರ್ಣ ಎಲ್ ಆರ್ ಮಾತನಾಡಿ ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಸಂಸ್ಥೆ ವತಿಯಿಂದ ಈಗಾಗಲೇ ನಮ್ಮ ಶಾಲೆಗೆ ಬ್ಯಾಂಡ್ ಸೆಟ್ ಹಾಗೂ ಗೋಡೆ ಬರಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದ್ದನ್ನು ನಾವು ಸ್ಮರಿಸುತ್ತೇವೆ. ಇಂದು ಬಹಳ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ನೀಡಿ ಸಹಕರಿಸಿದ್ದಾರೆ ಎಂದು ಗೌರವಿಸಿದರು. ಸಮಾರಂಭದಲ್ಲಿ ಸಿ ಆರ್ ಪಿ ವೀರು ಆರ್ ಆಚಾರ್ಯ, ಶಿಕ್ಷಕರಾದ ಪ್ರೇಮಲತಾ.ಬಿ.ಜಿ, ಜಿ.ಕೆ.ಮಾಲ, ಆಂಜನೇಯ.ಬಿ, ಶ್ರೀಲತಾ.ಟಿ.ಸಿ, ಹಂಸ.ಹೆಚ್.ಎಂ, ವೀಣಾ.ಆರ್, ಜೆ ಸಿ ಐ ಸಹ್ಯಾದ್ರಿ ಘಟಕದ ನಿತಿನ್, ಸಿಂಚನ ಹಾಗೂ ಮಕ್ಕಳು ಉಪಸ್ಥಿತರಿದ್ದರು.

Ministry of Information and Broadcasting ಯುವಜನತೆಯಲ್ಲಿನ ಕ್ರಿಯಾಶೀಲತೆಗೆ ಇದೊಂದು ಅವಕಾಶ, ಜನಪ್ರಿಯ ಕಾರ್ಯಕ್ರಮಗಳ ಟ್ರೇಲರ್ ತಯಾರಿಕಾ ಸ್ಪರ್ಧೆ

0

Ministry of Information and Broadcasting ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ನೆಟ್‌ಫ್ಲಿಕ್ಸ್, ವಿಶ್ವ ಧ್ವನಿ ಶ್ರವಣ ಮನೋರಂಜನಾ ಶೃಂಗ ಸಭೆ (ವೇವ್ಸ್) ಗಳ ಸಂಯುಕ್ತ ಆಶ್ರಯದಲ್ಲಿ ಯುವ ಜನತೆಯಲ್ಲಿನ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅನ್ ಲಾಕ್ ಕ್ರಿಯೇಟಿವಿಟಿ ಶೀರ್ಷಿಕೆ ಅಡಿಯಲ್ಲಿ ನೆಟ್‌ಫ್ಲಿಕ್ಸ್ನಲ್ಲಿ ಪ್ರಸಾರಗೊಂಡ ಧಾರಾವಾಹಿ, ಚಲನಚಿತ್ರಗಳ ಕುರಿತಾದ ಟ್ರೇಲರ್ ತಯಾರಿಕೆಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಇದು ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಒಂದು ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, ಡಿಜಿಟಲ್ ಕಥೆ ಹೇಳುವಿಕೆ, ಚಲನಚಿತ್ರ ನಿರ್ಮಾಣ ಮತ್ತು ವಿಷಯ ರಚನೆಯ ಭವಿಷ್ಯವನ್ನು ಚರ್ಚಿಸಲು ಉತ್ತಮ ಅವಕಾಶಗಳನ್ನುತೆರೆದಿಡಲಿದೆ.
ನೆಟ್‌ಫ್ಲಿಕ್ಸ್ನ ಜನಪ್ರಿಯ ಕಾರ್ಯಕ್ರಮಗಳಾದ ಹೀರಮಂಡಿ, ಜಾನೆ ಜಾನ್, ಚೋರ್ ನಿಕಲ್ ಕೆ ಭಾಗಾ, ಮೋನಿಕಾ, ಓ ಮೈ ಡಾರ್ಲಿಂಗ್, ದಿ ಆರ್ಚೀಸ್, ಮಾಲಾ ಮಾಲ್ ಮತ್ತು ಗನ್ಸ್ ಗುಲಾಬ್ಸ್ ಸೇರಿದಂತೆ ಭಾರತೀಯ ಹಿಟ್ ಚಿತ್ರಗಳ ಟ್ರೇಲರ್ ಗಳನ್ನು ಮರು ರೂಪಿಸುವ ಮೂಲಕ ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮ ಸೃಜನಶೀಲತೆಯನ್ನು ಅನಾವರಣಗೊಳಿಸಬಹುದು.
ಉತ್ತಮ-ಗುಣಮಟ್ಟದ ಟ್ರೇಲರ್ ಗಳನ್ನು ನಿರ್ಮಿಸಲು ಸೂಕ್ತ ಅವಕಾಶ ಇದಾಗಿದ್ದು, ಕೇವಲ ಸ್ಪರ್ಧೆಗಿಂತ ಹೆಚ್ಚಾಗಿ, ಅನ್‌ಲಾಕಿಂಗ್ ಕ್ರಿಯೇಟಿವಿಟಿ ಮೂಲಕ ಯುವ ಜನತೆಯಲ್ಲಿನ ಕ್ರಿಯಾಶೀಲ ಚಟುವಟಿಕೆಗಳಿಗೆ ಇದು ಸಹಕಾರಿಯಾಗಲಿದೆ. ಸ್ಪರ್ಧೆಯಲ್ಲಿ ಆಯ್ಕೆಯಾದ ಟ್ರೇಲರ್‌ಗಳನ್ನು ಮುಂಬೈನಲ್ಲಿ ನಡೆಯುವ ಅಂತಿಮ ಸುತ್ತಿನ ಪ್ರದರ್ಶಿಸಲಾಗುತ್ತಿದೆ.
ಭಾಗವಹಿಸುವ ಎಲ್ಲಾ ಸ್ಪರ್ಧೆಗಳಿಗೆ ಪ್ರಮಾಣ ಪತ್ರ, ನೆಟ್‌ಫ್ಲಿಕ್ಸ್ ವತಿಯಿಂದ ಆಯ್ದ 20 ಮಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದಲ್ಲದೇ ಮುಂಬೈನ ಜಿಯೋ ಕನ್ವೆನ್ಷನ್ನಲ್ಲಿ 2025 ರ ಮೇ 1 ರಿಂದ ಮೇ 4 ರವರೆಗೆ ನಡೆಯಲಿರುವ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಶೃಂಗಸಭೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವುದು.
ಈ ಸ್ಪರ್ಧೆಗೆ ಈಗಾಗಲೇ ನೋಂದಣಿ ಆರಂಭವಾಗಿದ್ದು, ಮಾ. 21ರವರೆಗೆ ಟ್ರೇಲರ್ ಸಲ್ಲಿಸಲು ಅವಕಾಶವಿದೆ. ಆಯ್ದ ಅತ್ಯುತ್ತಮ 20 ಟ್ರೇಲರ್‌ಗಳನ್ನು ಏಪ್ರಿಲ್ 15ರಂದು ಪ್ರಕಟಿಸಲಾಗುತ್ತದೆ. ವಿಜೇತ ಟ್ರೇಲರ್‌ಗಳಿಗೆ ಮೇ.1 ರಿಂದ 4ರವರೆಗೆ ನಡೆಯುವ ವೇವ್ಸ್ ಶೃಂಗ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.

Marikamba Temple ಸೊರಬ ತಾಲೂಕಿನಲ್ಲಿ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ

0

Marikamba Temple ಸೊರಬ ತಾಲೂಕಿನ ಜಡೆ-ಕೋಟೆ ಯಡಗೊಪ್ಪ, ಕಲ್ಲಕೊಪ್ಪ ಗ್ರಾಮಗಳ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.
ಪ್ರತಿ ಐದು ವರ್ಷಕೊಮ್ಮೆ ನಡೆಯುವ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ ವಿಶೇಷತೆಗಳಿಂದ ಕೂಡಿದ್ದು, ದೇಶ ಕಲ್ಯಾಣಾರ್ಥ ಪೂಜಾ ಉತ್ಸವಗಳನ್ನು ಒಳಗೊಂಡ ಉತ್ಸವ ಇದಾಗಿದೆ. ಗುರುವಾರದಿಂದ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಮಾ. ೩ರವರೆಗೆ ಜರುಗಲಿದೆ. ಮಹಾರಥೋತ್ಸವ ಸಕಲ ವಾಧ್ಯ ಮೇಳಗಳೊಂದಿಗೆ ಜರುಗಿತು. ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಉತ್ಸವ ಸಾಗಿತು.
ಡೊಳ್ಳು ಕುಣಿತ, ಬೆಳ್ತಂಗಡಿಯ ವಂಶಕಿಕ ಮತ್ತು ತಂಡದವರ ಮಿರರ್ ಡ್ಯಾನ್ಸ್ ರಥೋತ್ಸವಕ್ಕೆ ಮೆರಗು ತಂದವು. ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ದೇವಿಗೆ ಭಕ್ತರಿಂದ ಹರಕೆ ತುಲಾಭಾರ ಅರ್ಪಿಸುವ ಕಾರ್ಯ ನಡೆಯಿತು. ಫೆ.23 ಮತ್ತು 24ರಂದು ಬಯಲು ಜಂಗಿ ಕುಸ್ತಿ ಏರ್ಪಡಿಸಲಾಗಿದೆ. ನಿತ್ಯ ಸಂಜೆ ದೇವಿ ಸನ್ನಿಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
ಜಾತ್ರಾ ಸಮಿತಿ ಅಧ್ಯಕ್ಷ ರುದ್ರಗೌಡ ಕಮರೂರು, ಉಪಾಧ್ಯಕ್ಷ ನಟರಾಜ್ ಗೌಡ, ಖಜಾಂಚಿ ವಿರೂಪಾಕ್ಷಪ್ಪ ಯಡಗೊಪ್ಪ, ಪ್ರಧಾನ ಕಾರ್ಯದರ್ಶಿ ಬಸವಂತಪ್ಪ ಕೋಟೆ, ಗೌರವಾಧ್ಯಕ್ಷ ರಘು ಕಲ್ಲಕೊಪ್ಪ, ಕಾರ್ಯಾಧ್ಯಕ್ಷ ನಿಂಗಪ್ಪ, ಕಾರ್ಯದರ್ಶಿ ನಾರಾಯಣಪ್ಪ, ರಥ ನಿರ್ಮಾಣ ಸಮಿತಿ ಅಧ್ಯಕ್ಷ ನಾಗರಾಜ ಕಲ್ಲಕೊಪ್ಪ, ವೀರೇಶ್, ಚಂದ್ರಪ್ಪ ಸೇರಿದಂತೆ ಸಮಿತಿಯ ಸದಸ್ಯರು, ಸುತ್ತಲಿನ ಗ್ರಾಮಸ್ಥರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.

Sahyadri Science College ನಾನು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಓದಿದ್ದು ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ :ಕೆ.ಬಿ. ಅಶೋಕ್ ನಾಯ್ಕ್

0

Sahyadri Science College ನಾನು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಓದಿದ್ದು ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ, ಅಂತಹ ಪ್ರತಿಷ್ಠಿತ ಕಾಲೇಜು ನಮ್ಮ ಸಹ್ಯಾದ್ರಿ ವಿಜ್ಞಾನ ಕಾಲೇಜು, ನಾವು ಓದಿದ ವಿದ್ಯಾ ಸಂಸ್ಥೆಗೆ ಏನಾದರೂ ಕೊಡುಗೆ ನೀಡುವ ಮೂಲಕ ನಮ್ಮ ಋಣವನ್ನು ತೀರಿಸಬೇಕು ಎಂದು ಶ್ರೀ ಕೆ.ಬಿ. ಅಶೋಕ್ ನಾಯ್ಕ್ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ಶಾಸಕರು ತಿಳಿಸಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಮನವಿ ಮೇರೆಗೆ 1989ನೇ ಬ್ಯಾಚ್ ನ ವಿದ್ಯಾರ್ಥಿಗಳಾದ ಶ್ರೀ ಕೆ. ಬಿ. ಅಶೋಕ್ ನಾಯ್ಕ್ ಮತ್ತು ಸ್ನೇಹಿತರು ಕಾಲೇಜಿಗೆ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿ ಉದ್ಘಾಟಿಸಿ ಮಾತನಾಡಿದರು. ಈ ಕಾಲೇಜು ನಮಗೆಲ್ಲ ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಕಾರಣವಾಗಿದೆ ಇಂತಹ ಕಾಲೇಜಿನಲ್ಲಿ ಓದಿದ ನಾವು ಧನ್ಯರು. ಈ ಕಾಲೇಜಿನಲ್ಲಿ ಓದಿದ ಪ್ರತಿಯೊಬ್ಬರು ಯಾವುದಾದರು ರೀತಿಯಲ್ಲಿ ಅಳಿಲು ಸೇವೆ ಮಾಡುವ ಮೂಲಕ ಕಾಲೇಜಿನ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು. ಕಾಲೇಜಿನ ಪ್ರಾಚಾರ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಆದ ಡಾ. ರಾಜೇಶ್ವರಿ. ಎನ್ ಮಾತನಾಡಿ ಸುಮಾರು ಮೂರು ಲಕ್ಷ ರೂಪಾಯಿ ಬೆಲೆಬಾಳುವ ನೀರಿನ ಘಟಕವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನೆರವು ನೀಡಿದ ಶ್ರೀ ಅಶೋಕ್ ನಾಯ್ಕ್ ಮತ್ತು ಅವರ ಸ್ನೇಹಿತರಿಗೆ ಕಾಲೇಜಿನ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು. ಸಾಕಷ್ಟು ಜನ ಹಿರಿಯ ವಿದ್ಯಾರ್ಥಿಗಳು ನಾವು ಏನಾದರೂ ಕಾಲೇಜಿಗೆ ಕೊಡುಗೆ ಕೊಡಬೇಕು ಎಂಬ ಆಶಯ ವ್ಯಕ್ತಪಡಿಸಿರುವರು ಎಂಬುದನ್ನು ತಿಳಿಸಿದರು.
Sahyadri Science College ಹಿರಿಯ ವಿದ್ಯಾರ್ಥಿಗಳ ಸಂಘದ ಶ್ರೀ ಉಮೇಶ್ ಶಾಸ್ತ್ರಿ ಅವರು ಮಾತನಾಡಿ ನಮ್ಮ ಬ್ಯಾಚಿನಲ್ಲಿ ಸಾಕಷ್ಟು ಜನ ನಾವು ಕಾಲೇಜಿಗೆ ಏನಾದರೂ ಕೊಡುಗೆ ನೀಡೋಣ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿರುತ್ತಾರೆ ಎಂದು ತಿಳಿಸಿದರು. ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಗಳಾದ ಡಾ. ನಾಗರಾಜ ಪರಿಸರ ಅಭಿನಂದನೆಗಳನ್ನು ತಿಳಿಸಿ ಇನ್ನೂ ಕಾಲೇಜಿನಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿದೆ ಕಾಲೇಜಿನ ಅಭಿವೃದ್ಧಿಗೆ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದು ವಿನಂತಿಸಿದರು. ಕೂಡಲೇ ಆಗಬೇಕಿರುವ ಕೆಲವು ಕೆಲಸಗಳ ಬಗ್ಗೆ ತಿಳಿಸಿದರು.
೧.ಕಟ್ಟಡದ ಸುರಕ್ಷತೆಗೆ ಮೇಲ್ಭಾಗದಲ್ಲಿ ಶೀಟ್ ಹಾಕಿಸುವುದು
೨. ಕಾಲೇಜಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡುವುದು
೩. ಪ್ರಯೋಗಶಾಲೆಗಳಿಗೆ ಬೇಕಿರುವ ಉಪಕರಣಗಳನ್ನು ಒದಗಿಸುವುದು.
ಹೀಗೆ ಪಟ್ಟಿ ಬೆಳೆಯುತ್ತದೆ ಆದರೆ ತುರ್ತಾಗಿ ಆಗಬೇಕಿರುವ ಕೆಲಸಗಳನ್ನು ನಮ್ಮ ನಮ್ಮ ಬ್ಯಾಚಿನ ಎಲ್ಲಾ ಸ್ನೇಹಿತರು ಒಟ್ಟಾಗಿ ಸೇರಿ ನಾವು ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ಸಿ.ಎಸ್.ಆರ್ ಅನುದಾನವನ್ನು ಬಳಸಿ ಕಾಲೇಜಿನ ಶ್ರೇಯೋಭಿವೃದ್ಧಿಗೆ ಕೈಜೋಡಿಸಲು ಡಾ.ನಾಗರಾಜ ಪರಿಸರ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಯಾದ ಶ್ರೀ ವಿಜಯಕುಮಾರ್ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಡಾ. ಲತಾ ಕೆ. ಪಿ., ಡಾ. ಕೆ. ಎಲ್. ನಾಯ್ಕ್ , ಹಾಗೂ ಅಧ್ಯಾಪಕ ಅದ್ಯಾಪಕೇತರ ವೃಂದದವರು ಭಾಗವಹಿಸಿದ್ದರು.

Kateel Ashok Pai Memorial College ಆರೋಗ್ಯದ ಮೂರು ಸೂತ್ರಗಳನ್ನು ಪಾಲಿಸಿ-ಡಾ ಧನಂಜಯ ಸರ್ಜಿ

0

Kateel Ashok Pai Memorial College ಮಂಡಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಚಿಕೊಪ್ಪ ಗ್ರಾಮದಲ್ಲಿ ಕಟೀಲು ಅಶೋಕ ‌ಪೈ ಸ್ಮಾರಕ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ವಾರ್ಷಿಕ ‌ವಿಶೇಷ ಗ್ರಾಮೀಣ ಶಿಬಿರದಲ್ಲಿ ಮುಖ್ಯ ‌ಅತಿಥಿಗಳಾಗಿ ಭಾಗವಹಿಸಿದ ವಿಧಾನ‌ ಪರಿಷತ್ ಸದಸ್ಯರಾದ ಡಾ ಧನಂಜಯ್ ಸರ್ಜಿ ರವರು ಗ್ರಾಮಸ್ಥರನ್ನು ಹಾಗೂ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ವಿವರಿಸಿದ್ದರು. ಮನುಷ್ಯನ ದೇಹ ಒಂದು ವಿಶೇಷವಾದ ಸೃಷ್ಟಿ. ಈ ದೇಹದ ಅಂಗಾಂಗಗಳು ಹಾಗೂ ಅದರ ಕಾರ್ಯ ವೈಖರಿ ವಿಶೇಷವಾದುದು ಇಂತಹ ವಿಶೇಷ ಸೃಷ್ಟಿಯ ಅಂಗಾಂಗಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಈ ಎಲ್ಲಕ್ಕು ಪ್ರಮುಖವಾಗಿರುವ ನಮ್ಮ ಹೃದಯವನ್ನು ನಾವು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕು .ಹಾಗೆಯೆ ನಮ್ಮ ಆರೋಗ್ಯಕ್ಕೆ ಮೂರು ಮುಖ್ಯ ಸೂತ್ರಗಳಿವೆ ಅವುಗಳೆಂದರೆ ನಾವು ಸೇವಿಸುವ ನೀರು, ಗಾಳಿ ಹಾಗೂ ಆಹಾರ .ಈ ಮೂರರಲ್ಲೂ ನಾವು ಸ್ವಚ್ಛತೆಯನ್ನು ಹಾಗೂ‌ ಸರಿಯಾದ ಕ್ರಮವನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಆಹಾರ ಸೇವನೆಯಲ್ಲಿ ಪೌಷ್ಟಿಕ ಆಹಾರ ಹಾಗೂ ಸಮತೋಲನವನ್ನು ಕಾಯ್ದುಕೊಳ್ಳಬೇಕು .ಇದಕ್ಕಿರುವ ಸರಳ ಸೂತ್ರವೆಂದರೆ ನಮ್ಮ ಊಟದ ತಟ್ಟೆಯನ್ನು ತಿರುಗಿಸಿ ಇಡುವುದು …ಅಂದರೆ ನಾವು ಮುಖ್ಯ ಆಹಾರ ಎಂದುಕೊಂಡಿರುವ ಅನ್ನ ,ರೊಟ್ಟಿ, ದೋಸೆ ಇತ್ಯಾದಿಯನ್ನು ಕಡಿಮೆ ಪ್ರಮಾಣದಲ್ಲಿಯೂ ತಟ್ಟೆಯ ಬದಿಯಲ್ಲಿರುವ ಪಲ್ಯ ತರಕಾರಿ ಕಾಳುಗಳನ್ನು ಹೆಚ್ಚಿನ ಪ್ರಮಾಣದಲ್ಲಿಯೂ ಸೇವಿಸಬೇಕು ಎಂದು ತಿಳಿಸಿದರು. ಇದಲ್ಲದೆ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಸೇವಿಸುವುದು ಮುಖ್ಯ .ಹಾಗೆಯೇ ಶ್ವಾಸಕೋಶದ ಆರೋಗ್ಯಕ್ಕೆ ದೀರ್ಘ ಉಸಿರಾಟ ಬಹಳ ಮುಖ್ಯ ಎಂದು ತಿಳಿಸಿದರು. Kateel Ashok Pai Memorial College ಹಲವಾರು ಉದಾಹರಣೆಗಳ ಮೂಲಕ ಈ ಮೂರು ಸೂತ್ರಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ರೀತಿಯನ್ನು ತಿಳಿಸಿಕೊಟ್ಟರು .ಇಷ್ಟು ಮಾತ್ರವಲ್ಲದೆ ದೇಹದ ಆರೋಗ್ಯಕ್ಕೆ ಮನಸ್ಸಿನ ಆರೋಗ್ಯವು ಮುಖ್ಯ ಎಂದು ತಿಳಿಸಿದರು ನಮ್ಮ ಮನಸ್ಸಿನಲ್ಲಿ ಅಪಾರವಾದ ಶಕ್ತಿ ಇದೆ ನಾವು ಧನಾತ್ಮಕವಾಗಿ ಆಲೋಚಿಸುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು. ದೊಡ್ಡ ಕನಸನ್ನು ಕಾಣುವುದು ಡ್ರೀಮ್ ಬಿಗ್ ,ಅದಕ್ಕಾಗಿ ನಿರ್ಧಾರಗಳನ್ನು ಮಾಡುವುದು ಡಿಸಿಷನ್ ಮೇಕಿಂಗ್ ಹಾಗೂ ನಮ್ಮ ಕನಸನ್ನು ಹಂಚಿಕೊಳ್ಳುವುದು ಡಿಕ್ಲೇರ್ ಯುವರ್ ಡ್ರೀಮ್ಸ್ ಮತ್ತು ಕೊನೆಯದಾಗಿ ಸತತವಾಗಿ ನಿರಂತರವಾಗಿ ಶ್ರಮ ವಹಿಸುವುದು ಡೆಡಿಕೇಶನ್ ಎಂದು ಅರ್ಥಪೂರ್ಣವಾಗಿ ತಿಳಿಸಿದರು .ತಾನು ಸ್ವತಃ ಒಬ್ಬ ಪ್ರಸಿದ್ಧ ವೈದ್ಯನಾಗಬೇಕೆಂದು ಮತ್ತು ಜನಪರ‌ ವ್ಯಕ್ತಿಯಾಗಬೇಕೆಂದು ಕಂಡಿದ್ದ ಕನಸು ನನಸಾಗುತ್ತಿದೆ ಹಾಗೂ ಹಾಗೂ ನನ್ನ ಕನಸನ್ನು ನನಸಾಗಿಸುವಲ್ಲಿ ತನ್ನ ಪ್ರಯತ್ನ ಹಾಗೂ ಶ್ರಮ ಮತ್ತು ಎಲ್ಲರ ಬೆಂಬಲ ಕಾರಣ ಎಂದು ತಿಳಿಸಿದರು . ಡಾಕ್ಟರ್ ಅಶೋಕ್ ಪೈರವರು ಬಹಳ ದೊಡ್ಡ ಸಾಧನೆಯನ್ನು ಮಾಡಿದ್ದರು ಹಾಗೂ ಸರಳವಾಗಿ ಜೀವನವನ್ನು ನಡೆಸಿದರು ಅದರಂತೆಯೇ ಮಾನಸ ಸಂಸ್ಥೆ ಅತ್ಯಂತ ದೊಡ್ಡ ಸಂಸ್ಥೆಯಾದರೂ ಅಲ್ಲಿರುವ ವೈದ್ಯರೆಲ್ಲರೂ ಸರಳ ಜೀವನವನ್ನು ನಡೆಸುತ್ತಿದ್ದಾರೆ ಆದುದರಿಂದ ಇಂದಿನ ಯುವಕ ಯುವತಿಯರು ಸಾಧನೆಯನ್ನು ಮಾಡಬೇಕು ಹಾಗೆಯೇ ಸರಳತೆಯನ್ನು ಪಾಲಿಸಬೇಕು. ಎಷ್ಟು ದೊಡ್ಡವರಾದರು ಅಥವಾ ಧನಿಕರಾದರು ಪರೋಪಕಾರವನ್ನು ಮರೆಯಬಾರದು ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದರು ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಮಾತನಾಡುತ್ತಾ ಡಾಕ್ಟರ್ ಧನಂಜಯ ಸರ್ಜಿ ವೈದ್ಯರಾಗಿ ಹಾಗೂ ಜನ ಪ್ರತಿನಿಧಿಯಾಗಿ ಒಬ್ಬ ಮಾದರಿ ವ್ಯಕ್ತಿಯಾಗಿ ಇದ್ದಾರೆ. ತಮಗೆ ಗೊತ್ತಿರುವ ಮಾಹಿತಿಯನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಅವರ ಸಾಮರ್ಥ್ಯ ಅತ್ಯಂತ ವಿಶೇಷವಾದದು. ಡಾ. ಧನಂಜಯ ಸರ್ಜಿ ಅವರು ತಮ್ಮ ಜನಪರ ಕೆಲಸಗಳಿಂದಲೇ ಜನಪ್ರತಿನಿಧಿಯಾದ ವಿಶೇಷ ರಾಜಕಾರಣಿ ಎಂದು ಅವರು ತಿಳಿಸಿದರು. ಈ ದಿನದ ಕಾರ್ಯಕ್ರಮದಲ್ಲಿ ಕಾಚಿ ಕೊಪ್ಪದ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಶಿವಕುಮಾರ್, ಊರ ಮುಖಂಡರಾದ ಶ್ರೀ ಮಹೇಶ್ವರಪ್ಪ ,ಗುರುಗಳಾದ ಶ್ರೀ ರಾಜಣ್ಣ ,ಹಾಲು ಒಕ್ಕೂಟದ ಪ್ರತಿನಿಧಿಗಳು ,ಎನ್ಎಸ್ಎಸ್ ಅಧಿಕಾರಿಗಳು ಉಪನ್ಯಾಸಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು .ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಮಂಜುಳಾ ನಿರ್ವಹಿಸಿದರು ಕುಮಾರಿ ತನ್ಮಯಿ ಪ್ರಾರ್ಥನೆಯನ್ನು ಹಾಡಿದರು.ಕುಮಾರಿ ಸಂಗೀತ ಎಲ್ಲರನ್ನು ವಂದಿಸಿದರು. ಈ ದಿನದ ಶಿಬಿರದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಹಾಗು ದಂತ ವೈದ್ಯಕೀಯ ಮಹಾವಿದ್ಯಾಲಯ ದಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆರೋಗ್ಯದ ಮಹತ್ವವನ್ನು ಶಿಬಿರಾರ್ಥಿಗಳು‌ ಸಾರಿದರು.