Scouts and Guides ರಾಜ್ಯಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರ ತರಬೇತಿ ಶಿಬಿರದಲ್ಲಿ ಶಿವಮೊಗ್ಗ ಜಿಲ್ಲೆಯ ನಾಲ್ವರು ಸ್ಕೌಟ್ ಆಯುಕ್ತರಿಗೆ ಇನ್ಸಿಗ್ನಿಯಾ ಪದಕ ಗೌರವ ನೀಡಿ ಸನ್ಮಾನಿಸಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರ ತರಬೇತಿ ಶಿಬಿರವು ಐದು ದಿನ ನಡೆಯಿತು. ದೊಡ್ಡಬಳ್ಳಾಪುರದ ಡಾ. ಅನಿಬೆಸೆಂಟ್ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಶಿಬಿರದ ಆವರಣದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿವಮೊಗ್ಗ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಸಹಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ಮಲ್ಲಿಕಾರ್ಜುನ ಕಾನೂರು ಅವರು ರಾಜ್ಯಮಟ್ಟದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಭಾಗವಹಿಸಿದ್ದರು.
Scouts and Guides ರಾಜ್ಯ ಆಯುಕ್ತ ಸಿ.ಎಸ್.ರೆಡ್ಡಿ, ರಾಜ್ಯ ತರಬೇತಿ ಆಯುಕ್ತ ನಾಗೇಶ್ ಆರ್ ಶಿವಪೂರ್, ಗೋಪಾಲಕೃಷ್ಣ ಅಡಿಗ, ರಾಜ್ಯ ಗೈಡ್ಸ್ ತರಬೇತಿ ಆಯುಕ್ತೆ ಕೆ.ವಿ.ಶ್ಯಾಮಲಾ ಅವರು ಪ್ರಮಾಣ ಪತ್ರ, ಪದಕ ವಿತರಿಸಿ ಗೌರವಿಸಿದರು.
ರಾಜ್ಯಮಟ್ಟದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಪದಕ ಪಡೆದ ಶಿವಮೊಗ್ಗ ನಾಲ್ವರಿಗೆ ಶಿವಮೊಗ್ಗ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಆಯುಕ್ತರಾದ ಎಸ್.ಜಿ.ಆನಂದ್, ರವಿ.ಕೆ., ಚೂಡಾಮಣಿ ಪವಾರ್, ರಾಜೇಶ್ ಅವಲಕ್ಕಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ನ ಪದಾಧಿಕಾರಿಗಳು ಅಭಿನಂದಿಸಿದರು.
Scouts and Guides ಶಿವಮೊಗ್ಗ ಸ್ಕೌಟ್ಸ್ & ಗೈಡ್ ನ ನಾಲ್ವರಿಗೆ ಇನ್ಸಿಗ್ನಿಯಾ ಪದಕ ಗೌರವ
Inner Wheel Club Shimoga ಹಿಂದುಳಿದ ಮಹಿಳೆಯರ ಬದುಕು ಹಸನಾಗಲು ಸಂಘ ಸಂಸ್ಥೆಗಳ ಪ್ರೋತ್ಸಾಹ ಅಗತ್ಯ- ಶಿವಾನಿ ಕೋಣಂದೂರ್
Inner Wheel Club Shimoga ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಬದುಕು ಹಸನವಾಗಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ಸಂಘ ಸಂಸ್ಥೆಗಳ ನೆರವು ಅಗತ್ಯ ಎಂದು ಇಸ್ರೋ ಸಂಸ್ಥೆಯ ಡೆಪ್ಯೂಟಿ ಡೈರೆಕ್ಟರ್ ಶಿವಾನಿ ಕೋಣಂದೂರ್ ಅಬಿಮತ ವ್ಯಕ್ತಪಡಿಸಿದರು. ಅವರು ಶಿವಮೊಗ್ಗ ನಗರದ ನವ್ಯಶ್ರೀ ಸಭಾಂಗಣದಲ್ಲಿ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಇಂದು ತಂತ್ರಜ್ಞಾನ ಮುಂದುವರಿದ ಹಾಗೆ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾದ ಅವಕಾಶಗಳಿವೆ ಮಹಿಳೆಯರು ಸರ್ಕಾರದಿಂದ ಸಿಗುವ ಯೋಜನೆಗಳನ್ನು ಸದುಪಯೋಗ ಹಾಗೂ ಸ್ವಾವಲಂಬಿಗಳಾಗಿ ಬದುಕಿದಾಗ ಕುಟುಂಬ ಸುರಕ್ಷಿತವಾಗಿ ಸುಭಿಕ್ಷವಾಗಿ ಇರುತ್ತದೆ ಎಂದು ನುಡಿದರು.
ಶರಾವತಿ ಮಹಿಳಾ ಸಂಘ ಮತ್ತು ದೈವಜ್ಞ ಮಹಿಳಾ ಸಂಘ. ಇನ್ನರ್ ವಿಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಯವರು ನಿಜಕ್ಕೂ ಮಾನವೀಯ ಸೇವೆಯನ್ನು ಮಾಡುತ್ತಿರುವುದು ತಂದಿದೆ ಎಂದು ನುಡಿದರು. ಇಸ್ರೋ ಸಂಸ್ಥೆಯಲ್ಲಿ ಕರ್ನಾಟಕದ ಮಹಿಳೆಯರು ಕಾರ್ಯನಿರ್ವಹಿಸುತ್ತಿರುವುದು ತುಂಬಾ ಕಡಿಮೆ ಸಂಖ್ಯೆಯಲ್ಲಿ ಇದೆ ಆದ್ದರಿಂದ ನಮ್ಮ ರಾಜ್ಯದ ಮಹಿಳೆಯರು ಉತ್ತಮ ಕೌಶಲ್ಯಗಳನ್ನು ರೂಡಿಸಿಕೊಂಡು ಇಂತಹ ಸಂಸ್ಥೆಯಲ್ಲಿ ಅವಕಾಶಗಳನ್ನು ಕಲ್ಪಿಸಿಕೊಳ್ಳಬಹುದು ಎಂದು ನುಡಿದರು ನಾನು ಇದೇ ಜಿಲ್ಲೆಯಲ್ಲಿ ಹುಟ್ಟಿ ಬೆಳೆದುಇಸ್ರೋ ದಂತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನೋರ್ವ ಶಿವಮೊಗ್ಗ ಸಂಸ್ಥೆಯ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ವಹಿಸಿ ಇಸ್ರೋ ಸಂಸ್ಥೆಯ. ಡೆಪ್ಯೂಟಿ ಡೈರೆಕ್ಟರ್ ಆದ ಶಿವಾನಿ ಕೋಣಂದೂರ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ರಾತ್ರಿ ಹಗಲು ಗೊತ್ತಾಗುವುದೇ ಇಲ್ಲ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳಲ್ಲಿ ಕುಟುಂಬದವರ ಸಹಕಾರವು ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದ ಅವರು ನಮ್ಮ ಇನ್ನರ್ ವೀಲ್ ಕ್ಲಬ್ ವತಿಯಿಂದ ಈಗಾಗಲೇ ಈ ವರ್ಷವಿಡಿ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಅಂಗವಿಕಲರಿಗೆ ಅಶಕ್ತರಿಗೆ ಹಾಗೂ ಶಾಲಾ ಕಾಲೇಜುಗಳಿಗೆ ದಾನಿಗಳ ಸಹಾಯದಿಂದ ಸಾಕಷ್ಟು ನೆರವನ್ನ ನೀಡಿ ಪ್ರೋತ್ಸಾಹಿಸಿದ್ದೇವೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಇನ್ನರ್ ವೀಲ್ ಜಿಲ್ಲೆ 318 ಜಿಲ್ಲಾ ವೈಸ್ ಚೇರ್ಮನ್ ಶಬರಿ ಕಡಿದಾಳ್ ಅವರು ಮಾತನಾಡುತ್ತ ಕೇವಲ ದಿನಾಚರಣೆಯನ್ನಾಗಿ ಆಚರಿಸದೆ ಮನುಕುಲದ ಸೇವೆಗಳ ಮುಖಾಂತರ ಆಚರಿಸುತ್ತಿರುವುದು ತುಂಬಾ ಅರ್ಥಪೂರ್ಣವಾಗಿದೆ ಎಂದು ನುಡಿದರು ಇದೇ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಮೂರು ಜನ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ದೈವಜ್ಞ ಮಹಿಳಾ ಸಂಘದ ಅಧ್ಯಕ್ಷರಾದ ಸೀಮಾ ಸದಾನಂದ. ಕಾರ್ಯದರ್ಶಿ ವಾಣಿ ಪ್ರವೀಣ್. ಇನ್ನರ್ ವೀಲ್ ಕಾರ್ಯದರ್ಶಿ, ಲತಾ ಸೋಮಶೇಖರ್
ಶರಾವತಿ ಮಹಿಳಾ ಸಂಘದ ಅಧ್ಯಕ್ಷರಾದ ಮಾಲಾ ರಾಮಪ್ಪ.. ನಮಿತಾ ಸೂರ್ಯನಾರಾಯಣ್. ವಿಜಯ ರಾಯ್ಕರ್. ರಾಜೇಶ್ವರಿ ಪ್ರತಾಪ್. ವೀಣಾ ಹರ್ಷ. ವೇದಾ ನಾಗರಾಜ್. ಮಧುರ ಮಹೇಶ್. ಆಶಾ ಶ್ರೀಕಾಂತ್. ಶ್ವೇತಾ ಆಶಿತ್. ಉಮಾ ವೆಂಕಟೇಶ್. ಇನ್ನರ್ ವೀಲ್ ಕ್ಲಬ್ಬಿನ ಮಾಜಿ ಅಧ್ಯಕ್ಷರುಗಳು ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು
Dr. Sharan Prakash Patil ದೂರದಿಂದ ಬಂದ ಹಿಂದುಳಿದ ವರ್ಗಗಳ ರೋಗಿಗಳಿಗೆ ಆರ್ಥಿಕ ಹೊರೆ ಹಾಕದೇ ಒಳರೋಗಿಗಳಾಗಿ ಸೇರಿಸಿಕೊಳ್ಳಿ- ಡಾ.ಶರಣ ಪ್ರಕಾಶ ಪಾಟೀಲ್
Dr. Sharan Prakash Patil ಬೆಂಗಳೂರಿನ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಗೆ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಭೇಟಿ ನೀಡಿ, ಅಲ್ಲಿನ ಒಳರೋಗಿಗಳ ಯೋಗಕ್ಷೇಮವನ್ನು ವಿಚಾರಿಸಿದರು.
ಇದೇ ಸಂದರ್ಭದಲ್ಲಿ ದೂರದೂರಿನಿಂದ ಬಂದ, ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಹಾಕದೇ, ಅವರನ್ನು ಒಳರೋಗಿಗಳಾಗಿ ಸೇರಿಸಿಕೊಳ್ಳಬೇಕು ಎಂದು ಕಿದ್ವಾಯಿ ಆಡಳಿತ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ಜೊತೆ ಸಭೆ ನಡೆಸಿ
ರೋಗಿಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಾಗದಂತೆ ನಿಗಾವಹಿಸಿ, ದೂರದ ಊರಿಗಳಿಂದ ಬಂದ ರೋಗಗಳ ಬಗ್ಗೆ ಹೆಚ್ಚಿನ ಗಮನ ನೀಡಿ ಎಂದು ತಿಳಿಸಿದರು
ಅಂತಿಮ ಆರೋಗ್ಯದ ವರದಿಗಳನ್ನು ನೀಡಲು ಒಂದೆರಡು ದಿನಗಳು ತೆಗೆದುಕೊಳ್ಳಬಹುದು, ಈ ಅವಧಿಯಲ್ಲಿ ಒಳರೋಗಿಗಳಾಗಿ ದಾಖಲಾಗಲು ಬಯಸುವವರಿಗೆ ಒಪ್ಪಿಗೆ ಪತ್ರವನ್ನು ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು
Dr. Sharan Prakash Patil ಕಿದ್ವಾಯಿ ಆಸ್ಪತ್ರೆಗೆ ಬರುವ ಶೇ. 90ಕ್ಕಿಂತ ಹೆಚ್ಚು ರೋಗಿಗಳು ಬಿಪಿಎಲ್ ವರ್ಗವಾಗಿರುವುದರಿಂದ, ವಿಶೇಷ ವಾರ್ಡ್, ಶಾಂತಿಧಾಮ ಮತ್ತು ಅನಿಕೇತನ, ಅರೆ-ವಿಶೇಷ ವಾರ್ಡನ್ನು ಸಾಮಾನ್ಯ ವಾರ್ಡ್ ಗಳಾಗಿ ಪರಿವರ್ತಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕಿದ್ವಾಯಿ ಆಡಳಿತಾಧಿಕಾರಿ ವೈ.ನವೀನ್ ಭಟ್ ಮತ್ತು ನಿರ್ದೇಶಕ ಡಾ.ನವೀನ್ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು
S.N. Channabasappa ಶಾಸಕ ಚೆನ್ನಿ ಅವರಿಂದ ಶಿವಮೊಗ್ಗ ವಾರ್ಡ್ 21 ಕ್ಕೆ ಭೇಟಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನ
S.N. Channabasappa ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಮಹಾನಗರ ಪಾಲಿಕೆ, ಜಲ ಮಂಡಳಿ ಮತ್ತು ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ಇಂಜಿನಿಯರ್‌ಗಳೊಂದಿಗೆ ವಾರ್ಡ್ ನಂ. 21 ತಿಲಕ್ ನಗರ ಬಡಾವಣೆಗೆ ಭೇಟಿ ನೀಡಿ, ಅಲ್ಲಿನ ನೀರಿನ ಸಮಸ್ಯೆ ಕುರಿತು ಸ್ಥಳೀಯ ನಿವಾಸಿಗಳಿಂದ ನೇರವಾಗಿ ಮಾಹಿತಿ ಪಡೆದರು.
ಬೇಸಿಗೆಯಲ್ಲಿ ನೀರಿನ ಸೊರಬರಾಜು ಅತ್ಯಂತ ಅವಶ್ಯಕವಾಗಿದ್ದು, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಸ್ಥಳೀಯ ನಿವಾಸಿಗಳಿಗೆ ಸ್ಪಂದಿಸಿ, ಶೀಘ್ರದಲ್ಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
S.N. Channabasappa ಈ ಸಂದರ್ಭದಲ್ಲಿ ಪರ್ಫೆಕ್ಟ್ ಅಲಾಯ್ ನ ಮಾಲೀಕರಾದ ವಸಂತ ಕೃಷ್ಣ ದಿವೇಕರ್, ಪಕ್ಷದ ಮುಖಂಡರು, ವಾರ್ಡ್ ನ ಪ್ರಮುಖರು ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು
B.Y. Vijayendra ಬೆಲೆ ಏರಿಕೆ ವಿರುದ್ಧ ಏಪ್ರಿಲ್ 2. ಅಹೋರಾತ್ರಿ ಧರಣಿ, ಎಪ್ರಿಲ್ 7 ರಂದು ಜನಾಕ್ರೋಶ ಜಾಥಾ- ಬಿ.ವೈ.ವಿಜಯೇಂದ್ರ
B.Y. Vijayendra ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಬಳಿಕ ಬೆಲೆ ಏರಿಕೆಯ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಾರೆ. ಇದರಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಗಳ ವಿರುದ್ಧ ಏಪ್ರಿಲ್ 2 ರಂದು ಬಿಜೆಪಿ ಅಹೋರಾತ್ರಿ ಧರಣಿ ನಡೆಸಲಿದೆ.
B.Y. Vijayendra ಮುಸಲ್ಮಾನರಿಗೆ ಮೀಸಲಾತಿ ನೀಡಿರುವುದು, ದಲಿತರ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿರುವುದು ಸೇರಿದಂತೆ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಏಪ್ರಿಲ್ 7 ರಂದು ಮೈಸೂರಿನಿಂದ ಜನಾಕ್ರೋಶ ಯಾತ್ರೆ ಆರಂಭಿಸಲಿದ್ದೇವೆ.ಎಂದು ರಾಜ್ಯ ಬಿಜೆಪಿ ಅಧ್ಯಕ್ಷ
ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ
Department of School Education ದೈಹಿಕ ಶಿಕ್ಷಣ ಶಿಕ್ಷಕ ಎಲ್.ಎಸ್. ರಘು ಅವರಿಗೆ ಟೇಬಲ್ ಟೆನ್ನೀಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ
Department of School Education ಶಿವಮೊಗ್ಗ ನಗರದ ನೆಹರೂ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ನಗರದ ಕಿದ್ವಾಯಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಘು ಎಲ್. ಎಸ್. ಟೇಬಲ್ ಟೆನ್ನಿಸ್ ನಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು, ಷಟಲ್ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿಯ ಪದಕವನ್ನು ಪಡೆದುಕೊಂಡು ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
Department of School Education ಇವರು ರಾಜ್ಯ ಮಟ್ಟದ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಕಿದ್ವಾಯಿ ಪ್ರೌಢಶಾಲೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
CM Siddharamaiah ಕಿತ್ತೂರು ಚೆನ್ನಮ್ಮ ಸಮಾಧಿಯನ್ನ ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಸಿಎಂ ಮನವಿ ಪತ್ರ
CM Siddharamaiah ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಾವು ಬರೆದಿರುವ ಪತ್ರದ ಕನ್ನಡ ಭಾಷಾಂತರವನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೇ,
ವಿಷಯ: ಪ್ರಾಚೀನ ಸ್ಮಾರಕಗಳು, ಐತಿಹಾಸಿಕ ತಾಣಗಳು ಮತ್ತು ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಮನವಿ
ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆ ಸಾರುವ ವೀರ ರಾಣಿ ಕಿತ್ತೂರು ಚೆನ್ನಮ್ಮನ ಸಮಾಧಿ ತಾಣ ಇರುವುದನ್ನು ಸಮಸ್ತ ಕನ್ನಡಿಗರ ಪರವಾಗಿ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಸಶಸ್ತ್ರ ಹೋರಾಟವನ್ನು ಮುನ್ನಡೆಸಿದ ಮಹಿಳೆಯರಲ್ಲಿ ರಾಣಿ ಚೆನ್ನಮ್ಮ ಮೊದಲಿಗರು. ಅವರ ಶೌರ್ಯ ಮತ್ತು ಅದಮ್ಯ ಚೈತನ್ಯ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ.
ಈ ಅಪ್ರತಿಮ ನಾಯಕಿಯ ಸಮಾಧಿಯು ಕೇವಲ ವಿಶ್ರಾಂತಿ ಸ್ಥಳವಲ್ಲ, ಬದಲಾಗಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಪ್ರತಿನಿಧಿಸುವ ಮಹಾನ್ ಶಕ್ತಿ ಸ್ಥಳವಾಗಿದೆ. 1824ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ರಾಣಿ ಚೆನ್ನಮ್ಮ ಕೆಚ್ಚೆದೆಯಿಂದ ಹೋರಾಡಿದ ಕಾರಣ ಇಂದಿಗೂ ಈ ಸಮಾಧಿ ತಾಣವು ಧೈರ್ಯ ಮತ್ತು ತ್ಯಾಗದ ಸಂಕೇತವಾಗಿ ನಿಂತಿದೆ.
ಹೀಗಾಗಿ, ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸಮಾಧಿಯನ್ನು ಪ್ರಾಚೀನ ಸ್ಮಾರಕಗಳು, ಐತಿಹಾಸಿಕ ತಾಣಗಳು ಮತ್ತು ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಮನವಿ ಮಾಡುತ್ತೇನೆ. ಈ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿನ ಅವರ ಹೋರಾಟವನ್ನು ಸ್ಮರಿಸಿ, ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
CM Siddharamaiah ರಾಣಿ ಚೆನ್ನಮ್ಮನ ಸಮಾಧಿ ತಾಣವು ಅಪಾರ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಆದಾಗ್ಯೂ, ಅದಕ್ಕೆ ಸರಿಯಾದ ಸಂರಕ್ಷಣೆ ಮತ್ತು ಅಭಿವೃದ್ಧಿಯ ಅಗತ್ಯವಿದೆ. ಈ ಸಮಾಧಿ ತಾಣವು ರಾಷ್ಟ್ರೀಯ ಸ್ಮಾರಕ ಆಗುವುದರಿಂದ ದೇಶದ ಪ್ರೇಕ್ಷಣಿಯ ಸ್ಥಳವಾಗಿಯೂ ಗುರುತಿಸಿಕೊಳ್ಳುತ್ತದೆ. ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದರೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ. ಇದಕ್ಕೂ ಮುಖ್ಯವಾಗಿ ರಾಣಿ ಚೆನ್ನಮ್ಮಳ ಧೈರ್ಯ, ಶೌರ್ಯ, ತ್ಯಾಗವನ್ನು ಮುಂದಿನ ಪೀಳಿಗೆಗೂ ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಸ್ವಾತಂತ್ರ್ಯ ಹೋರಾಟದ ಮೂಲಕ ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸುವಲ್ಲಿ ಇದು ಒಂದು ಸ್ಮರಣೀಯ ಹೆಜ್ಜೆಯಾಗಿದೆ. ಅಲ್ಲದೇ ಪ್ರಾಚೀನ ಸ್ಮಾರಕಗಳು ಮತ್ತು ಐತಿಹಾಸಿಕ ತಾಣಗಳನ್ನು ಸಂರಕ್ಷಿಸುವಲ್ಲಿ ಭಾರತ ಸರ್ಕಾರದ ಬದ್ಧತೆಯನ್ನು ಇದು ಖಾತ್ರಿಪಡಿಸುತ್ತದೆ.
ಹೀಗಾಗಿ ಈ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವೆಂದು ಮೌಲ್ಯಮಾಪನ ಮಾಡುವ ಮತ್ತು ಘೋಷಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ತಾವು ಸಂಸ್ಕೃತಿ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಬೇಕೆಂದು ವಿನಂತಿಸುತ್ತೇನೆ.
ಈ ಮೂಲಕ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿರುವ ಕರ್ನಾಟಕವು ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸಮಾಧಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಉತ್ಸುಕವಾಗಿದೆ ಎಂದು ಮುಖ್ಯಮಂತ್ರಿ
ಸಿದ್ಧರಾಮಯ್ಯ ಪತ್ರ ಮುಖೇನ ಆಗ್ರಹಪಡಿಸಿದ್ದಾರೆ.
Ramzan Festival In Shivamogga ಶಿವಮೊಗ್ಗದಲ್ಲಿ ಸಂಭ್ರಮದ ರಂಜಾನ್ ಆಚರಣೆ
Ramzan Festival In Shivamogga ನಾಡಿನೆಲ್ಲೆಡೆ ನಡೆಯುತ್ತಿರುವ ಮುಸ್ಲಿಂ ಬಾಂಧವರಿಂದ ಸಂಭ್ರಮದ ರಂಜಾನ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಮಲೆನಾಡು ಶಿವಮೊಗ್ಗದಲ್ಲೂ ಅದ್ಧೂರಿಯಾಗಿ ರಂಜಾನ್ ಹಬ್ಬ ಆರಂಭಗೊಂಡಿದೆ.
ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಇಂದು ರಂಜಾನ್ ಆಚರಿಸಲಾಯಿತು. ಹೊಸ ಉಡುಪು ತೊಟ್ಟ ಮುಸ್ಲೀಮ್ ಸಮುದಾಯದವರು ಸೋಮವಾರ ಬೆಳಗ್ಗೆಯೇ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
Ramzan Festival In Shivamogga ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಈದ್ಗಾ ಮೈದಾನದಲ್ಲಿ ಸಾವಿರಾರು ಜನರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಪರಸ್ಪರ ಶುಭಾಶಯ ಕೋರುವ ಮೂಲಕ ರಂಜಾನ್ ಹಬ್ಬವನ್ನು ಆಚರಿಸಿದರು
Karnataka Government ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಶೇ2 ತುಟ್ಟಿಭತ್ಯೆ ಹೆಚ್ಚಳ
Karnataka Government ಡಿಎ ಈಗ 53% ರಿಂದ 55% ಕ್ಕೆ ಹೆಚ್ಚಾಗುತ್ತದೆ. ಪಿಂಚಣಿದಾರರಿಗೂ ಡಿಯರ್‌ನೆಸ್ ರಿಲೀಫ್ (ಡಿಆರ್) ನಲ್ಲಿ ಇದೇ ರೀತಿಯ ಹೆಚ್ಚಳವಾಗಲಿದೆ.
ಉದಾಹರಣೆಗೆ.. ಉದ್ಯೋಗಿಯ ಮೂಲ ವೇತನ ರೂ 18,000 ಆಗಿದ್ದರೆ, ಅವರು ಈಗ ತಿಂಗಳಿಗೆ ರೂ 360 (ರೂ 18,000 ರಲ್ಲಿ 2%) ಹೆಚ್ಚು ಪಡೆಯುತ್ತಾರೆ, ಅಂದರೆ, ವಾರ್ಷಿಕವಾಗಿ ರೂ 4,320 ಪ್ರಯೋಜನ ಪಡೆಯುತ್ತಾರೆ..
Bhadra Dam ಕಲ್ಯಾಣ ಕರ್ನಾಟಕ ಭಾಗದ ನೀರಾವರಿ ರೈತರಿಗೆ ಗುಡ್ ನ್ಯೂಸ್
Bhadra Dam ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ಜನರಿಗೆ ಯುಗಾದಿ ಕೊಡುಗೆಯಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ ಎರಡು ಟಿಎಂಸಿ ನೀರು ಹರಿಸಲಾಗುವುದು.
ಎಪ್ರಿಲ್ 1ರಿಂದ 5ರ ಅವಧಿಯಲ್ಲಿ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇದು ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಮತ್ತು ಇಲ್ಲಿನ ಜನರಿಗೆ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಲಿದೆ.
ಮಾರ್ಚ್ 30ರಂದು ಭದ್ರಾ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ ಲಭ್ಯವಿದೆ. ಇದರಲ್ಲಿ ಮೇ 8ರವರೆಗೆ ನೀರಾವರಿಗೆ 11ಟಿಎಂಸಿ ಮತ್ತು ಕುಡಿಯುವ ನೀರಿಗಾಗಿ 14ಟಿಎಂಸಿ ಅಗತ್ಯವಿದ್ದು, 3ಟಿಎಂಸಿ ನೀರು ಜಲಾಶಯದಲ್ಲಿ ಉಳಿಸಿಕೊಳ್ಳಬೇಕಾಗಿದೆ. ಎಪ್ರಿಲ್ 6ರಿಂದ ಕಾಲುವೆಗಳನ್ನು ಕೇವಲ ಕುಡಿಯುವ ನೀರಿನ ಪೂರೈಕೆಗೆ ಮಾತ್ರ ಬಳಸಿಕೊಳ್ಳಲಾಗುವುದು.
Bhadra Dam ರೈತಾಪಿ ಜನರ ಬೆಳೆಗಳಿಗೆ ಮತ್ತು ಜನರಿಗೆ ಕುಡಿಯುವ ನೀರು ಪೂರೈಸಲು ಸರ್ಕಾರ ಎಲ್ಲಾ ಹಂತದಲ್ಲೂ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
