Thursday, March 5, 2026
Thursday, March 5, 2026
Home Blog Page 354

Bhadra Dam ಏಪ್ರಿಲ್ 1 ರಿಂದ‌ 3 ವರೆಗೆ ತುಂಗಭದ್ರಾ‌ ಜಲಾಶಯಕ್ಕೆ ಭದ್ರಾ‌ ಜಲಾಶಯದಿಂದ‌ ನೀರು‌ ಬಿಡುಗಡೆ. ಸಾರ್ವಜನಿಕರಿಗೆ ಮುಂಜಾಗ್ರತೆಗೆ ಮನವಿ

0

Bhadra Dam ಸರ್ಕಾರದ ಆದೇಶದನ್ವಯ ಭದ್ರಾ ಜಲಾಶಯದಿಂದ
ತುಂಗಭದ್ರಾ ಜಲಾಶಯಕ್ಕೆ ಕುಡಿಯಲು ಮತ್ತು ಬೆಳೆ ರಕ್ಷಣೆಗೆ ಪ್ರತಿನಿತ್ಯ 8000 ಕ್ಯೂಸೆಕ್ಸ್‌ ನಂತೆ
ದಿನಾಂಕ:01.04.2025ರ ಸಂಜೆ 6.00 ಗಂಟೆಯಿಂದ‌ ಮೂರು ದಿನಗಳವರೆಗೆ ಭದ್ರಾ ನದಿಯ ಮೂಲಕ
ನೀರನ್ನು ಹರಿಸಲಾಗುವುದು.
ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ರೈತರುಗಳು ಜಾನುವಾರು
ತೊಳೆಯುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುನ್ನು ನಿಷೇಧಿಸಲಾಗಿದೆ. ನದಿಯಿಂದ
ಅನಧಿಕೃತವಾಗಿ ವಿದ್ಯುತ್‌ ಪಂಪ್/ಡಿಸೆಲ್ ಪಂಪ್‌ ಸೆಟ್ ಮತ್ತು ಟ್ಯಾಂಕರ್‌ಗಳ ಮೂಲಕ ನೀರು
ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ನದಿ ಪಾತ್ರದಿಂದ ಸಾರ್ವಜನಿಕರು ಮತ್ತು ರೈತರು ಸುರಕ್ಷಿತ
ಸ್ಥಳಗಳಿಗೆ ತೆರಳಲು ಈ ಮೂಲಕ ಸೂಚಿಸಲಾಗಿದೆ. ಭದ್ರಾ ನದಿ ಪಾತ್ರದ ರೈತರು ಮತ್ತು ಸಾರ್ವಜನಿಕರು
ಇಲಾಖೆಯೊಂದಿಗೆ ಸಹಕರಿಸಲು
ಸದಸ್ಯ ಕಾರ್ಯದರ್ಶಿ,
Bhadra Dam ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ,
ಹಾಗೂ ಅಧೀಕ್ಷಕ ಅಭಿಯಂತರರು,
ಕ.ನೀ.ನಿ.ನಿ., ಭದ್ರಾ ಯೋಜನಾ ವೃತ್ತ,ಇವರು ತಮ್ಮ ಪ್ರಕಟಣೆಯಲ್ಲಿ‌
ಕೋರಿದ್ದಾರೆ.

NEHRU Stadium ದೈಹಿಕ ಶಿಕ್ಷಣ ಶಿಕ್ಷಕರಾದ ಕೆ. ಜಿ.ಮಠಪತಿ, ಸೋಮಶೇಖರ್ ಎಸ್. ಆರ್. ರಾಜ್ಯಮಟ್ಟಕ್ಕೆ ಆಯ್ಕೆ.

0

NEHRU Stadium ಶಿವಮೊಗ್ಗದ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಉತ್ತಮ ಆಟದ ಪ್ರದರ್ಶನ ನೀಡಿ, ವಾಲಿಬಾಲ್ ಪಂದ್ಯಾವಳಿಯಲ್ಲಿ ತೀರ್ಥಹಳ್ಳಿ, ತಂಡದ ಎದುರು 2-0 ನೇರ ಸೆಟ್ಟುಗಳಿಂದ ಭರ್ಜರಿ ಜಯವನ್ನು ಸಾಧಿಸಿ ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ಕೆ.ಜಿ ಮಠಪತಿ ಹಾಗೂ ಸೋಮಶೇಖರ್ ಎಸ್. ಆರ್. ಇವರು ಭಾಗವಹಿಸಲಿದ್ದಾರೆ. ಕೆ. ಜಿ. ಮಠಪತಿಯವರು ಗುಂಡು ಎಸತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟದಲ್ಲಿ ಆಡಲು ಅರ್ಹತೆಯನ್ನು ಪಡೆದುಕೊಂಡಿರುತ್ತಾರೆ.
NEHRU Stadium ಇವರ ಕ್ರೀಡಾ ಜೀವನವು ಯಶಸ್ವಿಯಾಗಲಿಯಂದು ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ರಾ. ಹ.ತಿಮ್ಮೇನಹಳ್ಳಿ ಹಾಗೂ ಪದಾಧಿಕಾರಿಗಳು ಹಾಗೂ ಮಹಾವೀರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಅಜಿತ್ ರವರು ಶುಭ ಹಾರೈಸಿದ್ದಾರೆ.

Veterinary College ಪಶು ವೈದ್ಯಕೀಯ ಕಾಲೇಜಿನ ಬೃಂದಾ.ಕೆ.ಎನ್ ಅವರಿಗೆ ಚಿನ್ನದ ಪದಕ

0

Veterinary College ಬೃಂದಾ.ಕೆ.ಎನ್ ಇವರು ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನಲ್ಲಿ ಲ್ಲಿ ಅತಿ ಹೆಚ್ಚು ಅಂಕ ಪಡೆದು ಗೋಲ್ಡ್ ಮೆಡಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾ.25 ರಂದು ಬೀದರ್ ನ ವೆಟರ್ನರಿ ಮತ್ತು ಫಿಶರಿ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದ ಸಮಾರಂಭದಲ್ಲಿ ಗೋಲ್ಡ್ ಮೆಡಲ್ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಪ್ರಶುಸಂಗೋಪನ ಸಚಿವರಾದ ಕೆ.ವೆಂಕಟೇಶ್ ಇವರಿಂದ ಪಡೆದರು.

ಸಮಾರಂಭದಲ್ಲಿ ಬೀದರ್ ನ ಪಶುಸಂಗೋಪನಾ ಮತ್ತು ಫಿಶರಿ ಕಾಲೇಜಿನ ಕುಲಾಧಿಪತಿಗಳಾದ ಡಾ. ವೀರಣ್ಣ ಹಾಗೂ ಇತರ ಉಪನ್ಯಾಸಕರುಗಳು ಉಪಸ್ಥಿತರಿದ್ದರು.

Veterinary College ಬೃಂದಾ.ಕೆ.ಎನ್ ತಂದೆ ದಿ. ನಾಗರಾಜ್ ತಾಯಿ ರಂಗಮ್ಮ ತಳ್ಳಿಕಟ್ಟೆ ಇವರ ಪುತ್ರಿಯಾಗಿದ್ದಾರೆ. ಭದ್ರಾವತಿ ಸರ್ಕಾರಿ ಐಟಿಐ ಕಾಲೇಜ್ ಶೋಭ ಪುಟ್ಟಲಿಂಗಮೂರ್ತಿ, ಎಂ.ರಮೇಶ್ ಶುಭ ಹಾರೈಸಿದ್ದಾರೆ. ಸುಶೀಲಮ್ಮ, ಜಿ.ನೀಲಪ್ಪ ತಳ್ಳಿಕಟ್ಟೆ, ಶ್ರೀಕಾಂತ್ ಕೆ.ಎನ್ ಕುಂಸಿ ಹಾಗೂ ಬಂಧು ಬಾಂಧವರು ಅಭಿನಂದಿಸಿದ್ದಾರೆ.

CSC – Devalaya ರಾಜ್ಯದ ಪ್ರಮುಖ ‌ದೇವಾಲಯದ ಪ್ರಸಾದಗಳು ಇನ್ನು ಮುಂದೆ “ಇ-ಪ್ರಸಾದ” ರೂಪದಲ್ಲಿ‌ ಮನೆ ಬಾಗಿಲಿಗೇ ಡೆಲಿವರಿ.

0

CSC – Devalaya ಮುಂದೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದಗಳು ಭಕ್ತರ ಮನೆ ಬಾಗಿಲಿಗೆ ಬರಲಿದೆ.

ಧಾರ್ಮಿಕ ದತ್ತಿ ಇಲಾಖೆಯಡಿ 35 ಸಾವಿರಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ ʼಎʼ ಮತ್ತು ʼಬಿʼ ದರ್ಜೆಯ 390 ದೇವಾಲಯಗಳಿವೆ. ಭಕ್ತಾದಿಗಳು ʼಇ-ಪ್ರಸಾದʼ ವೆಬ್‌ಸೈಟ್‌ ಮೂಲಕ ಮೊದಲ ಹಂತದಲ್ಲಿ 14 ಪ್ರಮುಖ ದೇವಾಲಯಗಳಿಂದ ಪ್ರಸಾದವನ್ನು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ಪಡೆಯಲು ಅನುಕೂಲ ಕಲ್ಪಿಸಲಾಗಿದೆ.

CSC – Devalaya “ನಾನಾ ಕಾರಣಗಳಿಂದಾಗಿ ಎಲ್ಲರಿಗೂ ದೇವಸ್ಥಾನಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ವಯಸ್ಸಾದವರು, ವಿಶೇಷ ಚೇತನರು, ಒಬ್ಬಂಟಿಗರು ಒಳಗೊಂಡಂತೆ ಗ್ರಾಮೀಣ, ನಗರ ಹಾಗೂ ಹೊರ ರಾಜ್ಯದ ಭಕ್ತಾದಿಗಳ ಅನುಕೂಲಕ್ಕಾಗಿ ʼಇ-ಪ್ರಸಾದʼ ಸೇವೆ ಆರಂಭಿಸಲಾಗಿದೆ.

ರಾಜ್ಯದ ಯಾವುದೇ ಭಾಗದ ಭಕ್ತಾದಿಗಳು ಪ್ರಸಾದಕ್ಕೆ ಆರ್ಡರ್‌ ಮಾಡಿದರೆ ಸಿಎಸ್‌ಸಿ ಇ ಗವರ್ನೆನ್ಸ್‌ ಸಂಸ್ಥೆಯು ಮನೆ ಬಾಗಿಲಿಗೆ ತಲುಪಿಸಲಿದೆ” ಎಂದು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.

Krishna Byre Gowda ರೈತರ ಮನೆಬಾಗಿಲಿಗೇ ತೆರಳಿ ” ನನ್ನ‌ಭೂಮಿ” ಎಂಬ ಖಾತರಿ‌‌ ಯೋಜನೆ- ಸಚಿವ‌‌ ಕೃಷ್ಣ ಭೈರೇಗೌಡ

0

Krishna Byre Gowda ಸರ್ಕಾರದಿಂದ ಭೂಮಿ ಮಂಜೂರಾಗಿ 50-60 ವರ್ಷ ಕಳೆದರೂ ಪಕ್ಕಾ ದಾಖಲೆ ಸಿಗದೇ, ಪೋಡಿ ದುರಸ್ತಿಯಾಗದೇ ಫಲಾನುಭವಿಗಳಿಗೆ ತೊಂದರೆಯಾಗುತ್ತಿತ್ತು. ಈಗ ಕಂದಾಯ ಇಲಾಖೆ ಅಧಿಕಾರಿಗಳೇ ಗ್ರಾಮಕ್ಕೆ ಹೋಗಿ ಸರ್ವೆ ನಡೆಸಿ ನಕ್ಷೆ, ಹೊಸ ಸರ್ವೆ ನಂಬರ್‌ ನೀಡಿ ಹೊಸ ಆರ್‌ಟಿಸಿ ಹಸ್ತಾಂತರಿಸುವ ಮೂಲಕ ʼನನ್ನ ಭೂಮಿʼ ಎಂಬ ಖಾತರಿ ನೀಡುತ್ತಿದ್ದಾರೆ. ಏಪ್ರಿಲ್‌ ಅಂತ್ಯಕ್ಕೆ 20,000 ಕುಟುಂಬಗಳಿಗೆ ಸೌಲಭ್ಯ ಕಲ್ಪಿಸುವ ಗುರಿ ಇದೆ. ಆರು ತಿಂಗಳ ಕಾಲ ಅಭಿಯಾನ ಯಶಸ್ವಿಯಾಗಿ ನಡೆದರೆ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ತಿಳಿಸಿದ್ದಾರೆ.

Cervical cancer free Karnataka ಗರ್ಭಕಂಠ‌‌ ಕ್ಯಾನ್ಸರ್ಮುಕ್ತ ಕರ್ನಾಟಕ‌ ನಮ್ಮ ಗುರಿ- ಸಚಿವ‌‌ ದಿನೇಶ್‌ ಗುಂಡೂರಾವ್

0

Cervical cancer free Karnataka ಗರ್ಭಕಂಠ ಕ್ಯಾನ್ಸರ್ ಮುಕ್ತ ಕರ್ನಾಟಕ’ ಧ್ಯೇಯ ಹೊಂದಿರುವ ನಮ್ಮ ಸರ್ಕಾರ ಭವಿಷ್ಯದಲ್ಲಿ ಮಹಿಳೆಯರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಕಾಪಾಡಲು ಹದಿಹರೆಯದ ಹೆಣ್ಣು ಮಕ್ಕಳಿಗೆ ಎಚ್‍ಪಿವಿ ಲಸಿಕೆ ಹಾಕುವ ಅಭಿಯಾನಕ್ಕೆ ಒತ್ತು ನೀಡುತ್ತಿದೆ.

ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟಲು ಹದಿಹರೆಯದ ಹೆಣ್ಣು ಮಕ್ಕಳಿಗೆ ಎಚ್‍ಪಿವಿ ಲಸಿಕೆ ನೀಡಲಾಗುವುದು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದರ ಪ್ರಾಯೋಗಿಕ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಸ್ತಾಪವಿದ್ದು, ಶೀಘ್ರವೇ ನಿರ್ಧರಿಸಲಾಗುವುದು.

Cervical cancer free Karnataka ಈಗಾಗಲೇ ಗೃಹ ಆರೋಗ್ಯ ಯೋಜನೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ತಪಾಸಣೆಯೂ ಒಳಗೊಂಡಿದೆ. ಗೃಹ ಆರೋಗ್ಯ ಯೋಜನೆಯನ್ನು ಏಪ್ರಿಲ್ ತಿಂಗಳಿನಿಂದ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದ್ದು, ರಾಜ್ಯವನ್ನು ‘ಗರ್ಭಕಂಠ ಕ್ಯಾನ್ಸರ್ ಮುಕ್ತ ಕರ್ನಾಟಕ’ ಮಾಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವ‌ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

B.Y. Vijayendra ಶಾಸಕ ಯತ್ನಾಳ್ ಉಚ್ಚಾಟನೆ.‌ ಸುದೀರ್ಘ ಅವಧಿಯಿಂದ ಸ್ಥಿತಿಗತಿ‌ ಅವಲೋಕಿಸಿದ ನಂತರದಲ್ಲಿ ಪಕ್ಷದ ವರಿಷ್ಠರ ಕ್ರಮ- ಬಿ.ವೈ.ವಿಜಯೇಂದ್ರ

0

B.Y. Vijayendra ಭಾರತೀಯ ಜನತಾ ಪಾರ್ಟಿ, ಲಕ್ಷಾಂತರ ಕಾರ್ಯಕರ್ತರನ್ನು ಹೊಂದುವ ಮೂಲಕ ವಿಶ್ವದಲ್ಲಿ ಅಗ್ರಮಾನ್ಯತೆ ಪಡೆದಿರುವ ರಾಜಕೀಯ ಪಕ್ಷ, ಸಂಘ ಸಂಸ್ಕಾರ ಪಡೆದಿರುವ ಸಮರ್ಪಣಾ ಮನೋಭಾವದ ಕಾರ್ಯಕರ್ತರ ಬೆವರ ಪರಿಶ್ರಮದಿಂದ ಸಮೃದ್ಧ ವೃಕ್ಷದಂತೆ ಬೆಳೆದಿರುವ ಪಕ್ಷದಲ್ಲಿ ಶಿಸ್ತು-ತ್ಯಾಗಕ್ಕೆ ಮೊದಲ ಆದ್ಯತೆ.

ಪಕ್ಷದ ಹಿರಿಯರು ಹಾಗೂ ವರಿಷ್ಠರು ಈ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರುವ ಉದಾಹರಣೆ ನಮ್ಮ ಮುಂದಿಲ್ಲ, ಸದ್ಯ ಬಸನಗೌಡಬಿಜೆಪಿ ರವರ ವಿರುದ್ಧದ ಶಿಸ್ತುಕ್ರಮ ವರಿಷ್ಠರು ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ಅನಿವಾರ್ಯವಾಗಿ ತೆಗೆದುಕೊಂಡಿರುವ ಕ್ರಮವಾಗಿರುತ್ತದೆ. ಪಕ್ಷದ ಬೆಳವಣಿಗೆಯಲ್ಲಿನ ಕಹಿ ಘಟನೆಗಳನ್ನು ಉಲ್ಲೇಖಿಸಿ ಪಕ್ಷದ ವರಿಷ್ಠರಿಗೆ ನಾನು ಎಂದೂ ದೂರುಗಳನ್ನು ಹೇಳಿಕೊಂಡಿಲ್ಲ, ದಾಖಲಿಸಿಯೂ ಇಲ್ಲ. ಪೂಜ್ಯ ತಂದೆ ಯಡಿಯೂರಪ್ಪನವರು ಎಲ್ಲರನ್ನೂ ಸಮಚಿತ್ತ ಭಾವದಿಂದ ನೋಡಿ, ಪಕ್ಷವನ್ನು ಕುಟುಂಬದಂತೆ ಬೆಳೆಸಿದ ಮಾದರಿಯಲ್ಲಿಯೇ ನಡೆಯಬೇಕೆಂಬ ಸಂಕಲ್ಪ ಹೊತ್ತು, ಸಂಘದ ಹಿರಿಯರು ಮತ್ತು ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇನೆ.

ಕೆಲ ದಿನಗಳ ಹಿಂದೆ ನಡೆದ ಕಹಿ ಪ್ರಸಂಗಗಳಿಂದ ಎಂದಿಗೂ ನಾನು ಉದ್ವೇಗಗೊಳ್ಳಲಿಲ್ಲ, ಯಾರೊಂದಿಗೂ ದುಃಖ ತೋಡಿಕೊಂಡಿಲ್ಲ, ಸಮರ್ಪಣೆ-ತ್ಯಾಗದ ಪಾಠವನ್ನು ಹೇಳಿಕೊಡುವ ಸಂಸ್ಕಾರವಂತ ಸಂಘಟನೆಯ ವ್ಯವಸ್ಥೆಯಲ್ಲಿ ಬೆಳೆದು ಬಂದ ನಾನು ಸಹನೆ-ತಾಳ್ಮೆಯನ್ನು ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಆಧಾರ ಸ್ಥಂಭವೆಂದು ಪರಿಗಣಿಸಿ ಮುನ್ನಡಿದಿದ್ದೇನೆ. ಈ ನಿಟ್ಟಿನಲ್ಲಿ ವರಿಷ್ಠರು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ನಾನು ಸಂಭ್ರಮಿಸಲಾರೆ ಬದಲಾಗಿ ಈ ಬೆಳವಣಿಗೆಯನ್ನು ದುರದೃಷ್ಟಕರವೆಂದು ದುಃಖಿಸುತ್ತೇನೆ. ವಿಶ್ವಾಸ ರಾಜಕಾರಣವನ್ನು ಎಲ್ಲರೊಡಗೂಡಿ ಮುಂದುವರೆಸಿ ಪಕ್ಷ ಸಂಘಟನೆಗೆ ಕಟ್ಟಕಡೆಯ ಕಾರ್ಯಕರ್ತರನ್ನೂ ಅಣಿಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯಲಿದ್ದೇನೆ.
ಭವಿಷ್ಯದಲ್ಲಿಯೂ ನಾನು ನಡೆಯುವ ಹಾದಿಯಲ್ಲಿ ಎಲ್ಲಾದರೂ ಎಡವಿದರೆ, ಅದನ್ನು ತಿದ್ದಿ ತೀಡುವ ಅಧಿಕಾರ ಪಕ್ಷದ ಹಿರಿಯರೆಲ್ಲರಿಗೂ ಇದ್ದೇ ಇದೆ.

B.Y. Vijayendra ಎಲ್ಲರೂ ಸೇರಿ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಿ ಪಕ್ಷವನ್ನು ಮುನ್ನಡೆಸೋಣ, ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದಲ್ಲಿ ಮುಳುಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಸಮೃದ್ಧ ಕರ್ನಾಟಕವನ್ನು ಕಟ್ಟುವ ನಿಟ್ಟಿನಲ್ಲಿ ವಿಕಸಿತ ಭಾರತದ ಸಂಕಲ್ಪ ಹೊತ್ತ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಹೆಗಲು ಕೊಡೋಣ, ಪಕ್ಷದ ವರಿಷ್ಟರ ನಿರೀಕ್ಷೆಯ ಗುರಿ ತಲುಪೋಣ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ,ಶಾಸಕ ಬಿ.ವೈ.ವಿಜಯೇಂದ್ರ‌ ಸದ್ಯ ಪಕ್ಷದಿಂದ ಯತ್ನಾಳ್ ಅವರ ಉಚ್ಚಾಟನೆ ಆದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿ ಮಾತನಾಡಿದ್ದಾರೆ.

Kimmane Ratnakar ಬಿಜೆಪಿಯವರು ಕ್ರಿಶ್ಚಿಯನ್ ಮುಸ್ಲೀಂ ವಿರುದ್ಧ ಮಾತಾಡುವುದು ಬಿಟ್ಟು ಹಿಂದೂ ಸಮಾಜದಲ್ಲಿನ ಅಸಮಾನತೆ ಬಗ್ಗೆ ಮಾತಾಡಿಲ್ಲ-ಕಿಮ್ಮನೆ ರತ್ನಾಕರ್

0

Kimmane Ratnakar ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಸಂವಿಧಾನ ಬದಲಾವಣೆಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ನಡೆಸಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದರು.

ಸಂವಿಧಾನದ ಮೂಲ ಸ್ವರೂಪ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಂದು ಬದಲಾವಣೆ ಮಾಡಬಹುದು ಅಷ್ಟೇ.
ಆದರೆ ಆರ್ ಎಸ್ ಎಸ್ ನ ಮೂಲ ಕೃತಿಯಾದ ಚಿಂತನ ಗಂಗಾ ಎಂಬ ಪುಸ್ತಕದಲ್ಲೇ ಈ ಪ್ರಸ್ತಾಪ ಇದೆ ಎಂದರು.

1962 ರಲ್ಲಿ ಹೊರ ತಂದ ಕೃತಿಯಲ್ಲಿ ಸಂವಿಧಾನ ಬದಲಾವಣೆ ಪೂರ್ಣವಾಗಿ ಬದಲಾಗಬೇಕು ಎಂದಿದೆ.
ಹಾಗೆ ನೋಡಿದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಉತ್ತರ ನೀಡಬೇಕು.ಒಂದು ದೇಶ, ಒಂದು ಭಾಷೆ ಹಾಗೂ ಒಂದು ಸಂವಿಧಾನ‌ ಆರ್ಎಸ್ಎಸ್ ಉದ್ದೇಶವೆಂದರು.

Kimmane Ratnakar ಹಾಗಾದರೆ ಬೇರೆ ಬೇರೆ ಭಾಷೆ ಮಾತನಾಡುವ ಇತರ ರಾಜ್ಯಗಳ ಪರಿಸ್ಥಿತಿ ಏನಾಗಬೇಕು.1925 ರಿಂದ ಈ ತನಕದ ಸಂಘಟನೆಗಳು ದೇಶದ ಅಸಮಾನತೆ ವಿರುದ್ಧ ಹೋರಾಡಿದ ಒಂದೇ ಒಂದು ನಿದರ್ಶನ ಇಲ್ಲ.ಬಿಜೆಪಿಯವರು ಕ್ರಿಶ್ಚಿಯನ್-ಮುಸ್ಲಿಂ‌ ವಿರುದ್ಧ ಮಾತನಾಡುವುದು ಬಿಟ್ಟು ಹಿಂದೂ ಸಮಾಜದ ಅಸಮಾನತೆ ಬಗ್ಗೆ ಎಂದೂ ಮಾತನಾಡಿಲ್ಲ.
ಅದರ ಬದಲಿಗೆ ದೇಶದ ಜನರನ್ನು
ಧರ್ಮದ ಹೆಸರಿನಲ್ಲಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದರು.

shakti yojana ಒಡಲ ಧ್ವನಿ” ಗೆ ” ಶಕ್ತಿ” ಯೋಜನೆಯ‌‌‌ ಸಾರ್ಥಕ ಚೇತನ

0

shakti yojana ನಾಡಿನ ಪ್ರತಿಯೊಬ್ಬ ಮಹಿಳೆಯೂ ಕೂಡ ಆರ್ಥಿಕ ಸಂಕಷ್ಟಗಳಿಂದ ಹೊರಬಂದು ಸುಖ ಸಂತೋಷದಿಂದ ಜೀವನ ಸಾಗಿಸುವಂತಾಗಬೇಕು ಎಂಬ ರಾಜ್ಯ ಸರ್ಕಾರದ ಉದ್ದೇಶವನ್ನು ಗ್ಯಾರಂಟಿ ಯೋಜನೆಗಳು ಈಡೇರಿಸುತ್ತಿದೆ.

ನಾಡಿನ ಸ್ವಾಭಿಮಾನಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದೊಂದಿಗೆ ಜಾರಿಗೆ ತಂದ ಶಕ್ತಿ ತನ್ನ ಗುರಿಯನ್ನು ಯಶಸ್ವಿಯಾಗಿ ಈಡೇರಿಸುತ್ತಾ ಮುನ್ನಡೆಯುತ್ತಿರುವುದು ಯೋಜನೆಯ ಯಶಸ್ಸಿಗೆ ಹಿಡಿದಿರುವ ಕೈಗನ್ನಡಿ.

shakti yojana ʼಒಡಲ ಧ್ವನಿʼಯೆಂಬ ಮಹಿಳಾ ಸಂಘ ಕಟ್ಟಿಕೊಂಡು, ವಿಜಯಪುರದ ಇಂಡಿಯಲ್ಲಿ ಹೋಳಿಗೆ ತಯಾರಿಸಿ ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಬೆಳೆಸಿ ಬೆಂಗಳೂರಿಗೆ ತಂದು ವ್ಯಾಪಾರ ಮಾಡಿ ಕೈತುಂಬ ಆದಾಯ – ನೆಮ್ಮದಿಯ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಈ ಮಹಿಳೆಯರ ಕತೆ ಸ್ಪೂರ್ತಿದಾಯಕವಾಗಿದೆ ಎಂದು ರಾಜ್ಯ ಪ್ರಚಾರ ಇಲಾಖೆ ಪ್ರಕಟಣೆ ತಿಳಿಸಿದೆ.

B.Y.Raghavendra ನೂತನ ವಿಶ್ವಾವಸು ಸಂವತ್ಸರ ಎಲ್ಲರಿಗೂ ಶುಭ ತರಲಿ- ಸಂಸದ ಬಿ.ವೈ.ರಾಘವೇಂದ್ರ

0

B.Y.Raghavendra ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ನೂತನ ವಿಶ್ವಾವಸು ಸಂವತ್ಸರ ಎಲ್ಲರಿಗೂ ಶುಭವನ್ನುಂಟು ಮಾಡಲಿ, ಎಲ್ಲರ ಬಾಳಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ತರಲಿ ಎಂದು ಶಿವಮೊಗ್ಗ ಲೋಕಸಭಾಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಜನತೆಗೆ ಯುಗಾದಿ ಶುಭಾಶಯ ಕೋರಿದ್ದಾರೆ.