Thursday, March 5, 2026
Thursday, March 5, 2026
Home Blog Page 352

Rotary ಮಕ್ಕಳ ಸುಪ್ತ ಪ್ರತಿಭೆ‌ ಹೊರಹಾಕಲು ‌ಕ್ರಿಯಾಶೀಲ‌ ಚಟುವಟಿಕೆಗಳು ಪೂರಕ- ಎಸ್.ಸಿ.ರಾಮಚಂದ್ರ

0

Rotary ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಕ್ರಿಯಾಶೀಲ ಚಟುವಟಿಕೆಗಳು ತುಂಬಾ ಪೂರಕ ಎಂದು ನಿವೃತ್ತ ಕಾರ್ಮಿಕ ಅಧಿಕಾರಿ ರೂ.ಣಿ.ಷ ಛಾರಟಿ/ಬಿಲ್ ಟ್ರಸ್ಟ್ ನ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ ಅಭಿಮತ ವ್ಯಕ್ತಪಡಿಸಿದರು.

ಶಿವಮೊಗ್ಗದ ರಾಜೇಂದ್ರ ನಗರದಲ್ಲಿರುವ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಚಿಕ್ಕ ಮಕ್ಕಳ ಗ್ರಾಜುಯೇಷನ್ ಸೆರಮನಿ 2024-25’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ಕಲಿಕೆಯ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಕಲೆ ಬಹಳ ಮುಖ್ಯ. ಚಿಕ್ಕ ಮಕ್ಕಳಿಗೆ ಈಗ ಗ್ರಾಜುಯೇಷನ್ ಡೇ ಅವರ ಜೀವನದಲ್ಲಿ ಸದಾ ಹಸಿರಾಗಿರುತ್ತದೆ ಎಂದು ನುಡಿದರು.

ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಹಿಂದೆ ಪದವಿ ಪಡೆದಾಗ ಈ ರೀತಿ ಕೋರ್ಟ್ ಹಾಗೂ ಪೇಟ ಹಾಕಿ ಗೌರವಿಸಿದ್ದನ್ನು ಮರೆಯಲು ಆಗುವುದಿಲ್ಲ. ಇಂದಿನ ಮಕ್ಕಳಿಗೆ ಈ ರೀತಿ ಗ್ರಾಜುಯೇಷನ್ ಡೇ ಮಾಡುವುದರಿಂದ ಚಿಕ್ಕ ಮಕ್ಕಳ ಪೋಷಕರು ಮತ್ತು ಮಕ್ಕಳಿಗೆ ಆತ್ಮವಿಶ್ವಾಸ ಹಾಗೂ ಉತ್ಸಾಹ ಹೆಚ್ಚುತ್ತದೆ. ಇದರಿಂದ ಅವರ ಕಲಿಕಾ ಸಾಮರ್ಥ್ಯವು ಕೂಡ ಹೆಚ್ಚುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.

Rotary ಇದೇ ಸಂದರ್ಭದಲ್ಲಿ ಟ್ರಸ್ಟಿನ ಕಾರ್ಯದರ್ಶಿ ನಾಗವೇಣಿ.ಎಸ್.ಆರ್ ಮಾತನಾಡಿ, ಇಂದು ಮಕ್ಕಳು ತುಂಬಾ ಬುದ್ಧಿವಂತರು ಮತ್ತು ಪರಿಣಿತರು ಇದ್ದಾರೆ. ಹಾಗಾಗಿ ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ಓದಲು ಹುರಿದುಂಬಿಸಬೇಕು. ಆಗ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಗ್ರಾಜುಯೇಷನ್ ಡೇ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಸೂರ್ಯನಾರಾಯಣ, ಶಿಕ್ಷಕರು ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

University of Agricultural & Horticultural Sciences ಏಪ್ರಿಲ್ 14 ರಿಂದ ಮೇ15 ವರೆಗೆ ಬೇಕರಿ‌ ಉತ್ಪನ್ನಗಳ‌ ತಯಾರಿಕಾ ಕೌಶಲ್ಯ ತರಬೇತಿ‌‌ ಕಾರ್ಯಾಗಾರ

0

University of Agricultural & Horticultural Sciences ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ದಿ:15/04/2025 ರಿಂದ ದಿ:14/05/2025 ರವರೆಗೆ 30 ದಿನಗಳು ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ.

ತರಬೇತಿಯಲ್ಲಿ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್, ಕೋಕೋನಟ್ ಕುಕಿಸ್, ಕೋಕೋನಟ್ ಬಿಸ್ಕತ್, ಮಸಾಲ ಬಿಸ್ಕತ್, ಮೆಲ್ಟಿಂಗ್ ಮೊಮೆಂಟ್ ಬಿಸ್ಕತ್, ಪೀನಟ್ ಕುಕಿಸ್, ವೆನಿಲಾ ಬಟನ್, ಬನಾನಾ ಕೇಕ್, ಕೋಕೊನಟ್ ಕ್ಯಾಸಲ್ಸ, ಫ್ರೂಟ್ ಕೇಕ್, ಸ್ಪಾಂಜ್ ಕೇಕ್, ಆರೆಂಜ್ ಕೇಕ್, ಬ್ಲಾಕ್ ಫಾರೆಸ್ಟ್ ಕೇಕ್, ಸ್ವಿಸ್ ರೋಲ್, ಜೆಲ್ ಕೇಕ್, ಬಟರ್ ಐಸಿಂಗ್, ಮಸಾಲಾ ಡೋನಟ್, ಮಿಲ್ಕ್ ಬ್ರೆಡ್, ಬ್ರೌನಬ್ರೆಡ್, ಫಿಜ್ಜಾ, ಪಪ್ ಪೇಸ್ಟ್ರೀ, ಡ್ಯಾನಿಷ್ ಪೇಸ್ಟ್ರೀ, ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಉತ್ಪನ್ನಗಳ ತಯಾರಿಕೆಯ ಬಗ್ಗೆ ತರಬೇತಿ ನೀಡಲಾಗುವುದು.

ತರಬೇತಿ ಶುಲ್ಕ ರೂ. 4500/- ಆಗಿದ್ದು, ಊಟ ಮತ್ತು ವಸತಿ ಸೌಲಭ್ಯ ಇರುವುದಿಲ್ಲ.
ಈ ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವವರು ದಿ:13/04/2025 ರೊಳಗಾಗಿ ಡಾ. ಜಯಶ್ರೀ ಎಸ್.-9449187763, ಜಯಶಂಕರ-9686555897 ಇವರುಗಳನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ಸಂಪರ್ಕಿಸಿ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ

CM Siddharamaiah ಪದಕ ಪಡೆದವರು ಬೇರೆಯವರಿಗೆ ಪ್ರೇರಣೆಯಾಗಬೇಕು- ಸಿದ್ಧರಾಮಯ್ಯ

0

CM Siddharamaiah ಕಾನೂನು ಸುವ್ಯವಸ್ಥೆ ಮತ್ತು ಬಂಡವಾಳ ಹೂಡಿಕೆ, ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಒಂದಕ್ಕೊಂದು ನೇರ ಸಂಬಂಧ ಹೊಂದಿದೆ.

ನಿರುದ್ಯೋಗ ಬಹಳ ದೊಡ್ಡ ಸಮಸ್ಯೆ ಆಗ್ತಿದೆ. ಇದನ್ನು ನಿರ್ವಹಿಸಬೇಕಾದರೆ ಕಾನೂನು ಸುವ್ಯವಸ್ಥೆ , ಶಾಂತಿ ಪಾಲನೆ ಉತ್ತಮವಾಗಿರಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಮೂರು ವರ್ಷಗಳಿಂದ ಬಾಕಿ ಉಳಿದಿದ್ದ ಮುಖ್ಯಮಂತ್ರಿಗಳ ಪದಕವನ್ನು ಈ ಬಾರಿ ಒಟ್ಟಾಗಿ ವಿತರಿಸಿ ಅವರು ಮಾತನಾಡುತ್ತಿದ್ದರು.

ಎಲ್ಲಾ ಪದಕ ಪುರಸ್ಕೃತರಿಗೂ ಅಭಿನಂದನೆಗಳು. ನಿಮ್ಮ‌ ಶ್ರಮ ಮತ್ತು ಸೇವೆ ಶ್ಲಾಘನೀಯ.ತಂತ್ರಜ್ಞಾನದ ಬೆಳವಣಿಗೆಯಿಂದ ಸೈಬರ್ ಅಪರಾಧಗಳು ವ್ಯಾಪಕವಾಗಿ ಹೆಚ್ವುತ್ತಿವೆ. ಅದೇ ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಂಡು ಸೈಬರ್ ಅಪರಾಧಗಳನ್ನು ನಿಗ್ರಹಿಸಬೇಕು.
ಮಾದಕ ವಸ್ತು ಮುಕ್ತ ರಾಜ್ಯ ಮಾಡುವುದು ನನ್ನ ಗುರಿ. ಇದಕ್ಕಾಗಿ ಬಹಳಷ್ಟು ಶ್ರಮಿಸಬೇಕು. ಪೊಲೀಸರು ಮಾದಕ ವಸ್ತು ಜಾಲವನ್ನು ಬೇರು ಸಮೇತ ಕಿತ್ತಾಕಲು ಪಣ ತೊಡಬೇಕು.

ಪದಕಗಳನ್ನು ಪಡೆದವರು ಬೇರೆಯವರಿಗೆ ಪ್ರೇರಣೆ ಆಗಬೇಕು. ಸಿಎಂ ಪದಕ ಪಡೆಯಲು ದಕ್ಷತೆ, ಪ್ರಾಮಾಣಿಕತೆಯಿಂದ ವೃತ್ತಿಪರತೆ ತೋರಿಸಬೇಕು.
ಕಳೆದ ಎರಡು ವರ್ಷಗಳಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖ ಆಗುತ್ತಿದೆ. ಇದು ಇನ್ನಷ್ಟು ಕಡಿಮೆ ಆಗಬೇಕು ಕಿವಿಮಾತು ಹೇಳಿದರು.

ಜರ್ಮನಿ ದೇಶದ ಪ್ರಧಾನಿಗಳು, ಪ್ರತಿನಿಧಿಗಳು ರಾಜ್ಯದ ಪೊಲೀಸ್ ಕೌಶಲ್ಯ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ. ಇದು ಹೆಮ್ಮೆಯ ವಿಷಯ.

CM Siddharamaiah ಪೊಲೀಸರ ಅಗತ್ಯ ಮತ್ತು ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಸದಾ ಸಿದ್ಧ ಇದೆ. ನಾವು ನಿರಂತರವಾಗಿ ನಿಮ್ಮ ಜೊತೆಗಿರುತ್ತವೆ. ಆದರೆ ಕರ್ತವ್ಯಲೋಪವನ್ನು ಮಾತ್ರ ಸಹಿಸುವುದಿಲ್ಲ. ಪೊಲೀಸ್ ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಗೂಂಡಾಗಿರಿ, ರೌಡಿಸಂ ಪೂರ್ಣ ಮಟ್ಟ ಹಾಕಿ. ಅಗತ್ಯ ಸಹಕಾರ, ಸವಲತ್ತುಗಳನ್ನು ಕೊಡಲು ಸರ್ಕಾರ ಸಿದ್ಧವಿದೆ. ಮೊನ್ನೆಯ ಬಜೆಟ್ ನಲ್ಲಿ ಇಲಾಖೆ ಮತ್ತು ಸಿಬ್ಬಂದಿಯ ಅನುಕೂಲಕ್ಕೆ ಘೋಷಿಸಿರುವ ಎಲ್ಲವನ್ನೂ ಜಾರಿ ಮಾಡಲಾಗುವುದು ಎಂದು‌ ಸಿದ್ಧರಾಮಯ್ಯ ತಿಳಿಸಿದರು.

ಕೋರಮಂಗಲ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯಮಂತ್ರಿಗಳ ಪದಕ ವಿಜೇತ ಪೊಲೀಸ್ ಸಿಬ್ಬಂದಿಗಳಿಗೆ ಗೌರವಿಸಿ ಮುಖ್ಯಮಂತ್ರಿಗಳು ಮಾತನಾಡಿದರು.

MESCOM ಏಪ್ರಿಲ್ 5, ಶಿವಮೊಗ್ಗ ಮೆಸ್ಕಾಂ ಉಪವಿಭಾಗ-1 ಕಚೇರಿಯಲ್ಲಿ‌ ಜನಸಂಪರ್ಕ ಸಭೆ

0

MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ -1 ಕಛೇರಿಯಲ್ಲಿ ಏ. 05 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ; 9448289448.

M.Chinnaswamy Stadium ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಟಿ-20 ‌ಕ್ರಿಕೆಟ್ ಪಂದ್ಯಗಳ ನಿಮಿತ್ತ “ನಮ್ಮ ಮೆಟ್ರೋ” ಸೇವೆ ಸೌಲಭ್ಯ

0

M.Chinnaswamy Stadium ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್‌ ಟಿ-20 ಕ್ರಿಕೆಟ್‌ ಪಂದ್ಯಗಳ ವೀಕ್ಷಣೆಗಾಗಿ ನಮ್ಮ ಮೆಟ್ರೋ ಏಪ್ರಿಲ್‌ 02, 10, 18, 24 ಹಾಗೂ ಮೇ 03, 13, 17 ರಂದು ಎಲ್ಲಾ ನಾಲ್ಕು ಟರ್ಮಿನಲ್‌ ಅಂದರೆ ವೈಟ್‌ಫೀಲ್ಡ್‌ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದವರ ಮೆಟ್ರೋ ರೈಲು ಸೇವೆಯನ್ನು ರಾತ್ರಿ 12.30ರ ವರೆಗೆ ವಿಸ್ತರಿಸಿದೆ.

ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್‌ ನಿಲ್ದಾಣದಿಂದ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 1.15ಕ್ಕೆ ಹೊರಡಲಿದೆ.

Ramakrishna Vivekananda Ashram ಶ್ರೀಶಾರದಾ ದೇವಿ ಸತ್ಸಂಗ ಕೇಂದ್ರದಲ್ಲಿ ಏಪ್ರಿಲ್ 14 ರಿಂದ 20 ವರೆಗೆ “ವಸಂತ ವಿಹಾರ 2025” ಬೇಸಿಗೆ ಶಿಬಿರ

0

Ramakrishna Vivekananda Ashram ಶಿವಮೊಗ್ಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಮಾರ್ಗದರ್ಶನದಲ್ಲಿ ವಿನೋಬ ನಗರದ ಮೂರನೇ ಹಂತದ 8ನೇ ತಿರುವಿನಲ್ಲಿರುವ ಶ್ರೀ ಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಏಪ್ರಿಲ್ 14ರಿಂದ 20ರವರೆಗೆ 5 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ವಾರದ ವಿಶೇಷ ಬೇಸಿಗೆ ಶಿಬಿರ “ ವಸಂತ ವಿಹಾರ 2025 “ ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 14ರ ಸೋಮವಾರದಿಂದ ಏಪ್ರಿಲ್ 20ರ ಭಾನುವಾರದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಶಿಬಿರ ನಡೆಯಲಿದೆ. ಧ್ಯಾನ, ದಿವ್ಯತ್ರಯರ ದಿವ್ಯ ಜೀವನ, ಸಂಸ್ಕೃತ ಶ್ಲೋಕಗಳು, ರಾಮಾಯಣ, ಮಹಾಭಾರತದ ಕಥೆಗಳು, ಚಿತ್ರಕಲೆ, ಆರ್ಟ್ ಅಂಡ್ ಕ್ರಾಫ್ಟ್, ಸಂಗೀತ ಮತ್ತು ಭಜನೆ, ಸ್ವಾತಂತ್ರ‍್ಯ ಹೋರಾಟ, ಮಹಾಪುರುಷರ ಜೀವನ, ಆಟಗಳು, ಕ್ವಿಜ್, ಸೈನಿಕರು ಇವೆಲ್ಲವುಗಳ ಸಂಕ್ಷಿಪ್ತ ಪರಿಚಯವನ್ನು ನುರಿತ ಸಂಪನ್ಮೂಲ ವ್ಯಕ್ತಿಗಳು ಮಾಡಿಕೊಡುವರು. ಉಚಿತ ಶಿಬಿರ ಇದಾಗಿರುತ್ತದೆ.
ಮೊದಲು ನೋಂದಾಯಿಸಿದ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ. 8317443637 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

McGann District Hospital ಪ್ರಜ್ಞೆ ತಪ್ಪಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವು, ದೊಡ್ಡಪೇಟೆ ಪೊಲೀಸ್ ಪ್ರಕಟಣೆ

0

McGann District Hospital ಮಾ. 29 ರಂದು ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಹತ್ತಿರ ಸುಮಾರು 50 ವರ್ಷದ ವ್ಯಕ್ತಿ ಪ್ರಜ್ಞೆಯಿಲ್ಲದೆ ಬಿದ್ದಿದ್ದು, ಸಾರ್ವಜನಿಕರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಏ.01ರಂದು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಮೃತ ವ್ಯಕ್ತಿಯ ಹೆಸರು, ವಿಳಾಸ ತಿಳಿದಿರುವುದಿಲ್ಲ.
ಮೃತನು 5.4 ಅಡಿ ಎತ್ತರವಿದ್ದು, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿರುತ್ತಾರೆ. ಮೃತನ ಬಲಗೈನ ಒಳಭಾಗದಲ್ಲಿ ಅಮ್ಮ ಎಂಬ ಹಚ್ಚೆ ಗುರುತು ಇರುತ್ತದೆ.
ಮೃತನ ವಾರಸ್ಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 / 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

DC Shivamogga ಆಸ್ತಿ ಮಾಲೀಕತ್ವ ವಿವಾದ, ಶಿವಮೊಗ್ಗ ಡಿಸಿ ಕಚೇರಿ ಎದುರ ಮೈದಾನ ಪ್ರವೇಶ ದ್ವಾರ ಸಂಪೂರ್ಣ ಬಂದ್

0

DC Shivamogga ಶಿವಮೊಗ್ಗದ ಡಿಸಿ ಕಚೇರಿ ಎದುರಿನ ಮೈದಾನದ ಮಾಲೀಕತ್ವ ವಿವಾದದ ಹಿನ್ನೆಲೆಯಲ್ಲಿ
ಮೈದಾನದ ಪ್ರವೇಶ ದ್ವಾರ ಸಂಪೂರ್ಣ ಬಂದ್ ಮಾಡಲಾಗಿದೆ.

ನಿನ್ನೆ ಮಧ್ಯಾಹ್ನದಿಂದ ಮೈದಾನಕ್ಕೆ ಹೊಂದಿಕೊಂಡಂತಿರುವ ಅಂಗಡಿ ಮುಂಗಟ್ಟುಗಳನ್ನು ಸಹ ಬಂದ್ ಮಾಡಲಾಗಿದ್ದು,
ಮೈದಾನ ತಮಗೆ ಸೇರಿದ್ದು ಎಂದು ಮುಸ್ಲಿಮರು ಹೇಳುತ್ತಿದ್ದಾರೆ.ಮೈದಾನ ಮಹಾನಗರ ಪಾಲಿಕೆಗೆ ಸೇರಿದ್ದು ಎಂದು ಹಿಂದುಪರ ಸಂಘಟನೆಗಳು ಹೇಳುತ್ತಿವೆ.

ಮೈದಾನದ ಪ್ರವೇಶ ದ್ವಾರಕ್ಕೆ ಹಾಕಿದ್ದ ಬೇಲಿಯನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಬೇಲಿ ತಿರುಗು ಗೊಳಿಸಿದ ನಂತರ ಬ್ಯಾರಿ ಕೇಡ್ ಹಾಕಿ ಮೈದಾನದ ಪ್ರವೇಶವನ್ನು ಪೊಲೀಸರು ಬಂದ್ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮೈದಾನದ ಮಾಲೀಕತ್ವ ಕುರಿತಂತೆ ಡಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ.

DC Shivamogga ಮುಂಜಾಗ್ರತಾ ಕ್ರಮವಾಗಿ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ‌

Vijayanagara Empire ಕರ್ನಾಟಕದ ಇತಿಹಾಸಕ್ಕೆ ಹೊಸತೊಂದು ತಾಮ್ರಶಾಸನ ಸೇರ್ಪಡೆ- ಕೀರ್ತಿ ಎಂ.ಪರೇಖ್

0

Vijayanagara Empire ಕರ್ನಾಟಕದ ಇತಿಹಾಸದ ಹೊಸ ಸೇರ್ಪಡೆಗೆ ದಾಖಲಾಗಲು ಹೊಸತೊಂದು ತಾಮ್ರದ‌ ತಾಮ್ರದ ಪಟದ ಶಾಸನ ಇದೀಗ ಬೆಳಕಿಗೆ ಬಂದಿದೆ.ಅಂದ್ಹಾಗೆ ಇತ್ತೀಚೆಗಷ್ಟೇ ಪತ್ತೆಯಾದ ಈ ತಾಮ್ರದ ಪಟದ ಶಾಸನ ವಿಜಯನಗರ ರಾಜವಂಶಕ್ಕೆ ಸೇರಿದ್ದಾಗಿದ್ದು, ಹೀಗೆ ಬೆಳಕಿಗೆ ಬಂದ ತಾಮ್ರದ ಈ ಶಾಸನವನ್ನು ಬೆಂಗಳೂರಿನ ಫಾಲ್ಕನ್ ಕಾಯಿನ್ಸ್ ಗ್ಯಾಲರಿಯಲ್ಲಿ ಸಂರಕ್ಷಿಸಲಾಗಿದೆ.
ತಾಮ್ರದ ಈ ಶಾಸನ ಕರ್ನಾಟಕ ಮೂಲದ್ದಾಗಿದ್ದು, ವಿಜಯನಗರದ ಸಂಗಮ ದೊರೆ ದೇವರಾಯ-1 ಈತನ ಆಡಳಿತದಲ್ಲಿದ್ದವು ಎಂದು ತಿಳಿದುಬಂದಿದೆ. ಅದಲ್ಲದೆ ಈ ತಾಮ್ರದ ಶಾಸನದ ಮೇಲೆ ಶಕ 1328 ವ್ಯಾಯಾ, ಕಾರ್ತಿಕ, ಬಾ. 10, ಶುಕ್ರವಾರದಂದು ಕೆತ್ತಲಾದ ಸಂಸ್ಕೃತ ಭಾಷೆಯಲ್ಲಿನ ನಾಗರಿ ಲಿಪಿಯಲ್ಲಿ ಕನ್ನಡದ ಬರವಣಿಗೆಗಳು ಕಂಡುಬಂದಿವೆ‌.ಇದು ಚಂದ್ರ, ಯದು, ಸಂಗಮ ಮತ್ತು ಅವನ ಐದು ಮಕ್ಕಳಾದ ಹರಿಹರ, ಕಂಪ, ಬುಕ್ಕ, ಮಾರಪ, ಮುದ್ದಪ್ಪರಿದ ಆರಂಭಗೊಂಡು ಸಂಗಮ ರಾಜವಂಶದ ವಂಶಾವಳಿಯನ್ನು ಪ್ರತಿನಿಧಿಸುತ್ತಿದೆ. ಬುಕ್ಕ ಎನ್ನುವವನು ಹರಿಹರ ಮತ್ತು ಅವನ ರಾಣಿ ಮೇಲಾಂಬಿಕಾಗೆ ಜನಿಸಿದ್ದನು. Vijayanagara Empire ನಂತರ ಬುಕ್ಕನ ಮಗನಾಗಿ ದೇವರಾಯ ಜನಿಸಿದನು.ಇನ್ನು ಪಟ್ಟಾಭಿಷೇಕದ ಸಮಯದಲ್ಲಿ ಹರಿಹರನ ಮಗನಾದ ರಾಜ ದೇವರಾಯ-1 ಗುಡಿಪಲ್ಲಿ ಗ್ರಾಮವನ್ನು ರಾಜೇಂದ್ರಮಡಾ ಮತ್ತು ಉದಯಪಲ್ಲಿ ಎಂಬ ಎರಡು ಕುಗ್ರಾಮಗಳ ಜೊತೆಗೆ ದೇವರಿಯಾಪುರ-ಅಗ್ರಹಾರ ಎಂದು ಮರುನಾಮಕರಣ ಮಾಡಿ ಅವುಗಳನ್ನು 61 ಭಾಗಗಳಾಗಿ ವಿಭಜಿಸಿದನು.ತದನಂತರ ಹಲವಾರು ಬ್ರಾಹ್ಮಾಸಗಳು ಮತ್ತು ವಿವಿಧ ಕುಲಗಳ ಬಾವಿಗಳಿಗೆ ವೇದಗಳು ಮತ್ತು ವಿವಿಧ ಶಾಸ್ತ್ರಗಳಲ್ಲಿ ಪಾರಂಗತರಾದರು. ಋಗ್ವೇದರಿಗೆ 26.5 ಪಾಲುಗಳು, ಯಜುರ್ವೇದಿಗಳಿಗೆ 29.5 ಪಾಲುಗಳು, ಶುಕ್ಲ-ಯಜುರ್ವೇದಿಗಳಿಗೆ 3 ಪಾಲುಗಳು, ದೇವಭಾಗಕ್ಕೆ 2 ಪಾಲು ಸಾಮನಾಥ ಲೆ, ಶಿವ ಮತ್ತು ಜನಾರ್ದನರಿಗೆ ಹೀಗೆ ಪುರದಲ್ಲಿ ನೆಲೆಗೊಂಡಿರುವ ಗ್ರಾಮವನ್ನು ಉಲ್ಲೇಖಿಸಲಾಗಿದೆ. ಗಮನಾರ್ಹವೆಂದರೆ ಮುಳಬಾಗಿಲು ರಾಜ್ಯ, ಹೊಡೆನಾಡ-ಸ್ಥಳ ಎಂಬುದಾಗಿ ಕನ್ನಡ ಭಾಷೆಯಲ್ಲಿ ಇರುವುದು ತಾಮ್ರದ ಪಟ್ಟಿಗಳಲ್ಲಿ ಕಂಡುಬಂದಿದೆ.

ವಿಜಯನಗರ ಸಾಮ್ರಾಜ್ಯದ ರಾಜ ಲಾಂಛನವಾದ ವರಾಹ ಅನ್ನು ಸಾಮಾನ್ಯ ಚಿತ್ರದ ಸ್ಥಳದಲ್ಲಿ ಮುದ್ರೆಯ ಚಿತ್ರದಂತೆ ಇಲ್ಲಿ ಕಂಡುಬಂದಿರುವುದು ಬಹಳ ಆಸಕ್ತಿದಾಯಕವಾಗಿದೆ.

ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಇಲ್ಲಿಯವರೆಗೆ ದೃಢೀಕರಿಸದ ರಾಜ ದೇವರಾಯ I ರ ಪಟ್ಟಾಭಿಷೇಕದ ದಿನಾಂಕವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.ಹಾಗೂ ಪಟ್ಟಾಭಿಷೇಕ ನಡೆಯುತ್ತಿರುವಾಗ ಅನುದಾನವನ್ನು ನೀಡಲಾಯಿತು ಎಂದು ತಿಳಿದುಬಂದಿದೆ.
ಹೀಗೆ ಐದು ತಾಮ್ರಗಳ ಪಟ್ಟಿಯುಳ್ಳ ಶಾಸನ ಬೆಳಕಿಗೆ ಬಂದಿರುವುದು ಕೇವಲ ಐತಿಹಾಸಿಕ ಆವಿಷ್ಕಾರ ಮಾತ್ರ ಅಲ್ಲದೇ ವಿಜಯನಗರ ಸಾಮ್ರಾಜ್ಯವನ್ನು ನೋಡುವ ಇತಿಹಾಸವನ್ನು ಸಹ ಬದಲಾಯಿಸುತ್ತದೆ ಎಂದರೆ ಬಹುಶಃ ತಪ್ಪಾಗಲಾರದು.

ಅಂದ್ಹಾಗೆ ಹೊಸತಾಗಿ ಬೆಳಕಿಗೆ ಬಂದ ಶಾಸನವನ್ನು ಫಾಲ್ಕಾನ್ ಕಾಯಿನ್ಸ್ ಗ್ಯಾಲರಿಯ ವ್ಯವಸ್ಥಾಪಕ ನಿರ್ದೇಶಕ ಕೀರ್ತಿ ಎಂ.ಪರೇಖ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಗಮನಕ್ಕೆ ತಂದಿದ್ದು,ಕರ್ನಾಟಕ ರಾಜ್ಯದ ಇತಿಹಾಸಕ್ಕೆ ಬೆಳಕುಹಿಡಿಯುವ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ಬಹಿರಂಗಪಡಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ ಡಾ.ಕೆ.ಎಂ.ರೆಡ್ಡಿ, ಫಾಲ್ಕಾನ್ ಗ್ಯಾಲರಿಯ ಎಂ.ಡಿ.ಕೀರ್ತಿ ಪರೇಖ್,ಮುಖ್ಯಸ್ಥ ಹಾರ್ದಿಕ್ ಪರೇಖ್ ಸೇರಿದಂತೆ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.

Sri Veeranjaneya ಏಪ್ರಿಲ್ 11 ವರೆಗೆ ಬಂಗಾರಮಕ್ಕಿಯಲ್ಲಿ ಶ್ರೀವೀರಾಂಜನೇಯ ಜಾತ್ರಾ ಮಹೋತ್ಸವ

0

Sri Veeranjaneya ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಬಂಗಾರಮಕ್ಕಿ ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್, ಹೇಮಪುರ ಮಹಾಪೀಠಮ್, ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ(ರಿ.) ಆಶ್ರಯದಲ್ಲಿ ಮಾ. 31ರಿಂದ ಏ.11ರವರೆಗೆ ಸಂಸ್ಕೃತಿ ಕುಂಭ, ಶ್ರೀ ವೀರಾಂಜನೇಯರ ಜಾತ್ರಾ ಮಹೋತ್ಸವ ನಡೆಯಲಿದೆ.
ಮಾ. 31ರಂದು ಈ ಸಂಬಂಧವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪ್ರಾರಂಭವಾಗಲಿದ್ದು, ಏ. ೩ರಂದು ಶ್ರೀ ವೀರಾಂಜನೇಯ ದೇವರ ಪ್ರತಿಷ್ಠೆ, ಸ್ವರ್ಣಕಲಶ ಪ್ರತಿಷ್ಠೆ, ಶ್ರೀ ಮಹಾಗಣಪತಿ ಪ್ರತಿಷ್ಠೆ, ಶ್ರೀ ಸುಬ್ರಹ್ಮಣ್ಯ ಪ್ರತಿಷ್ಠೆ (ನಾಗಬನದಲ್ಲ), ಶ್ರೀ ಚೌಡೇಶ್ವರೀ ಪ್ರತಿಷ್ಠೆ, ನವಗ್ರಹ ಪ್ರತಿಷ್ಠೆ, ಏ. 04 ರಂದು ಪುಷ್ಟ ರಥೋತ್ಸವ, 05ರಂದು ಬ್ರಹ್ಮ ರಥೋತ್ಸವ, 06 ರಂದು ಶ್ರೀರಾಮ ನವಮಿ, 07 ರಂದು ಶರಾವತಿ ಆರತಿ, 8 ಮತ್ತು 9 ರಂದು ಶರಾವತಿ ಕುಂಭ, 11 ರಂದು ಪುಷ್ಟ ರಥೋತ್ಸವ, ಏ.12 ರಂದು ಗುರೂಜಿಯವರ ಪೀಠಾರೋಹಣದ ರಜತ ಮಹೋತ್ಸವ ಹಾಗೂ ಹನುಮ ಜಯಂತಿ ಹಾಗೂ ಮಹಾಸ್ಯಂದನ ಬ್ರಹ್ಮ ರಥೋತ್ಸವ ನಡೆಯಲಿದೆ.
Sri Veeranjaneya ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ವಿವರಗಳಿಗೆ 6361011288, 7019342699, 9449109299ರಲ್ಲಿ ಸಂಪರ್ಕಿಸಬಹುದು.