Department of Social Welfare ಸಮಾಜ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ ಅರ್ಹತಾ ಪರೀಕ್ಷೆಯ ಮೂಲಕ 6ನೇ ತರಗತಿಯ 35 ಸ್ಥಾನಗಳಿಗೆ ದಾಖಲಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖಾ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಮೇ 03ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ತಿಳಿಸಿರುತ್ತಾರೆ.
Department of Social Welfare ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ದೂ.ಸಂ.: 08182-249241 ನ್ನು ಹಾಗೂ ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸುವುದು.
Department of Social Welfare ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ
Madhu Bangarappa ನಮ್ಮೂರು ನಮ್ಮ ಶಾಲೆ, ಜೊತೆಗೆ ಸರ್ಕಾರದ ಆಸ್ತಿ ರಕ್ಷಣೆಯ ಹೊಣೆಯೂ ನಮ್ಮದಾಗಿರಲಿ- ಮಧು ಬಂಗಾರಪ್ಪ
Madhu Bangarappa ಸಾರ್ವಜನಿಕವಾಗಿರುವ ಎಲ್ಲಾ ಕೆಲಸ ಕಾರ್ಯಗಳನ್ನು ಸರ್ಕಾರವೇ ಮಾಡಲೆಂದು ಅಪೇಕ್ಷಿಸದೆ ತಾವು ಕೂಡ ಸ್ವಯಂ ಪ್ರೇರಿತರಾಗಿ ಕೈಲಾದ ಸೇವೆ ಸಲ್ಲಿಸಲು ಸಿದ್ದರಾಗಬೇಕು. ಎಲ್ಲರಲ್ಲೂ ನಮ್ಮ ಊರು, ನಮ್ಮ ಶಾಲೆ ಎಂಬ ಅಭಿಮಾನವಿರಬೇಕು. ಮಕ್ಕಳ ಭವಿಷ್ಯ ರೂಪಿಸುವುದು ಮಾತ್ರವಲ್ಲ ಸರ್ಕಾರದ ಅಸ್ತಿಯ ರಕ್ಷಣೆಯ ಹೊಣೆಯೂ ನಮ್ಮೆಲ್ಲರದ್ದಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಅವರು ಸೊರಬ ತಾಲೂಕು ಹುರುಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗೆ ನೂತನ ಶಾಲಾ ಕಾಂಪೌಂಡ್ ಮತ್ತು ಅಡುಗೆ ಕೋಣೆಯ ಕಾಮಗಾರಿಗಳಿಗೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಯೋಜನೆ ಮತ್ತು ಸಾಂಕಿಕ ಸಚಿವ ಡಿ. ಸುಧಾಕರ್ ಹಾಗೂ ಸ್ಥಳೀಯರೊಂದಿಗೆ ಭಾಗವಹಿಸಿ, ಶಾಲಾ ಕಾಂಪೌಂಡ್ ಮತ್ತು ಅಡುಗೆ ಕೋಣೆ ನಿರ್ಮಾಣಕ್ಕೆ ಶ್ರಮದಾನ ಮಾಡಿದ ನಂತರ ಗಿಡನೆಟ್ಟು ಶಂಕುಸ್ಥಾಪನೆ ನೆರವೇರಿಸಿದರು. ನಂತರ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿದ ಅವರು ಶಾಲಾ ಸ್ವತ್ತು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ನೂತನ ಶಾಲಾ ಕೊಠಡಿಯ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗಿತ್ತು. ಪ್ರಸ್ತುತ ಹೆಚ್ಚುವರಿಯಾಗಿ ಎರಡು ಕೊಠಡಿಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದರು.
ದೇಶದ ಉಜ್ವಲ ಭವಿಷ್ಯ ರೂಪಿಸುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವ ಶಿಕ್ಷಣ ಇಲಾಖೆ ಸಚಿವನಾಗಿ ಕಾರ್ಯನಿರ್ವಹಿಸುತ್ತಿರುವುದು ತೃಪ್ತಿ ತಂದಿದೆ. ಎಲ್ಲರಿಗೂ ಸ್ಫೂರ್ತಿ ದಾಯಕವಾದ ಇಂತಹ ಕಾರ್ಯಕ್ರಮದಲ್ಲಿ ಶ್ರಮದಾನಕ್ಕೆ ಭಾಗಿಯಾದ ತಮಗೆ ಅಭಿನಂದನೆಗಳು ಎಂದರು.
Madhu Bangarappa ಅಜೀಮ್ ಪ್ರೇಮ್ ಜಿ ಫೌಂಡೇಶನ್ ಅವರ 1591 ಕೋಟಿ ರೂ. ಗಳ ಆರ್ಥಿಕ ನೆರವಿನೊಂದಿಗೆ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ ಆರು ದಿನಗಳು ಪೌಷ್ಟಿಕ ಆಹಾರ ಮೊಟ್ಟೆ, ಹಾಲು, ರಾಗಿಮಾಲ್ಟ್, ನೀಡಲಾಗುತ್ತಿದೆ. ಅಲ್ಲದೆ ಬಟ್ಟೆ, ಶೂ, ಸಾಕ್ಸ್ ಮತ್ತಿತರ ಸೌಲಭ್ಯಗಳೊಂದಿಗೆ ಶಾಲೆಗೆ ಉಚಿತ ವಿದ್ಯುತ್ ಮತ್ತು ನೀರನ್ನು ಒದಗಿಸಲಾಗುತ್ತಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಇಂದಿನ ಮಕ್ಕಳು ದೇಶದ ಅತ್ಯಂತ ಉಚ್ಚ ಸ್ಥಾನ ಅಲಂಕರಿಸಿ ಸೇವೆ ನೀಡುವಂತಾಗಬೇಕು. ರಾಜ್ಯದ ಎಲ್ಲಾ ವರ್ಗದ ಜನರಿಗೆ ಮದ್ಯವರ್ತಿಗಳ ನೆರವಿಲ್ಲದೆ ಗ್ಯಾರಂಟಿ ಯೋಜನೆಗಳ ಲಾಭ ದೊರೆಯುತ್ತಿದೆ. ರಾಜ್ಯದ ಪ್ರತಿ ಮನೆಗೂ ಯೋಜನೆಯ ಲಾಭ ದೊರೆತಿದೆ. ಮುಂದಿನ ದಿನಗಳಲ್ಲಿ ಜನರ ಅಶೋತ್ತರಾಗಳಿಗೆ ಪೂರಕವಾಗಿ ಇನ್ನಷ್ಟು ಸೇವೆ ಮಾಡುವ ಉತ್ಸಾಹ ಬಂದಿದೆ ಎಂದರು.
ರಾಜ್ಯದ ಅತಿಹೆಚ್ಚು ಅಂದರೆ 1300 ಕೆರೆಗಳನ್ನು ಹೊಂದಿರುವ ಸೊರಬ ತಾಲೂಕಿನ ಕೆರೆಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸಂಜೀವಿನಿಯಾಗಿದೆ ಎಂದರು.
ಸಾರ್ವಜನಿಕವಾಗಿರುವ ಎಲ್ಲಾ ಕೆಲಸ ಕಾರ್ಯಗಳನ್ನು ಸರ್ಕಾರವೇ ಮಾಡಲೆಂದು ಅಪೇಕ್ಷಿಸದೆ ತಾವು ಕೂಡ ಸ್ವಯಂ ಪ್ರೇರಿತರಾಗಿ ಕೈಲಾದ ಸೇವೆ ಸಲ್ಲಿಸಲು ಸಿದ್ದರಾಗಬೇಕು. ಎಲ್ಲರಲ್ಲೂ ನಮ್ಮ ಊರು, ನಮ್ಮ ಶಾಲೆ ಎಂಬ ಅಭಿಮಾನವಿರಬೇಕು. ಮಕ್ಕಳ ಭವಿಷ್ಯ ರೂಪಿಸುವುದು ಮಾತ್ರವಲ್ಲ ಸರ್ಕಾರದ ಅಸ್ತಿಯ ರಕ್ಷಣೆಯ ಹೊಣೆಯೂ ನಮ್ಮೆಲ್ಲರದ್ದಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ಸೊರಬ ತಾಲೂಕು ಹುರುಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗೆ ನೂತನ ಶಾಲಾ ಕಾಂಪೌAಡ್ ಮತ್ತು ಅಡುಗೆ ಕೋಣೆಯ ಕಾಮಗಾರಿಗಳಿಗೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಯೋಜನೆ ಮತ್ತು ಸಾಂಕಿಕ ಸಚಿವ ಡಿ. ಸುಧಾಕರ್ ಹಾಗೂ ಸ್ಥಳೀಯರೊಂದಿಗೆ ಭಾಗವಹಿಸಿ, ಶಾಲಾ ಕಾಂಪೌAಡ್ ಮತ್ತು ಅಡುಗೆ ಕೋಣೆ ನಿರ್ಮಾಣಕ್ಕೆ ಶ್ರಮದಾನ ಮಾಡಿದ ನಂತರ ಗಿಡನೆಟ್ಟು ಶಂಕುಸ್ಥಾಪನೆ ನೆರವೇರಿಸಿದರು. ನಂತರ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿದ ಅವರು ಶಾಲಾ ಸ್ವತ್ತು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ನೂತನ ಶಾಲಾ ಕೊಠಡಿಯ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗಿತ್ತು. ಪ್ರಸ್ತುತ ಹೆಚ್ಚುವರಿಯಾಗಿ ಎರಡು ಕೊಠಡಿಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದರು.
ದೇಶದ ಉಜ್ವಲ ಭವಿಷ್ಯ ರೂಪಿಸುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವ ಶಿಕ್ಷಣ ಇಲಾಖೆ ಸಚಿವನಾಗಿ ಕಾರ್ಯನಿರ್ವಹಿಸುತ್ತಿರುವುದು ತೃಪ್ತಿ ತಂದಿದೆ. ಎಲ್ಲರಿಗೂ ಸ್ಫೂರ್ತಿ ದಾಯಕವಾದ ಇಂತಹ ಕಾರ್ಯಕ್ರಮದಲ್ಲಿ ಶ್ರಮದಾನಕ್ಕೆ ಭಾಗಿಯಾದ ತಮಗೆ ಅಭಿನಂದನೆಗಳು ಎಂದರು.
ಅಜೀಮ್ ಪ್ರೇಮ್ ಜಿ ಫೌಂಡೇಶನ್ ಅವರ 1591 ಕೋಟಿ ರೂ. ಗಳ ಆರ್ಥಿಕ ನೆರವಿನೊಂದಿಗೆ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ ಆರು ದಿನಗಳು ಪೌಷ್ಟಿಕ ಆಹಾರ ಮೊಟ್ಟೆ, ಹಾಲು, ರಾಗಿಮಾಲ್ಟ್, ನೀಡಲಾಗುತ್ತಿದೆ. ಅಲ್ಲದೆ ಬಟ್ಟೆ, ಶೂ, ಸಾಕ್ಸ್ ಮತ್ತಿತರ ಸೌಲಭ್ಯಗಳೊಂದಿಗೆ ಶಾಲೆಗೆ ಉಚಿತ ವಿದ್ಯುತ್ ಮತ್ತು ನೀರನ್ನು ಒದಗಿಸಲಾಗುತ್ತಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಇಂದಿನ ಮಕ್ಕಳು ದೇಶದ ಅತ್ಯಂತ ಉಚ್ಚ ಸ್ಥಾನ ಅಲಂಕರಿಸಿ ಸೇವೆ ನೀಡುವಂತಾಗಬೇಕು. ರಾಜ್ಯದ ಎಲ್ಲಾ ವರ್ಗದ ಜನರಿಗೆ ಮದ್ಯವರ್ತಿಗಳ ನೆರವಿಲ್ಲದೆ ಗ್ಯಾರಂಟಿ ಯೋಜನೆಗಳ ಲಾಭ ದೊರೆಯುತ್ತಿದೆ. ರಾಜ್ಯದ ಪ್ರತಿ ಮನೆಗೂ ಯೋಜನೆಯ ಲಾಭ ದೊರೆತಿದೆ. ಮುಂದಿನ ದಿನಗಳಲ್ಲಿ ಜನರ ಅಶೋತ್ತರಾಗಳಿಗೆ ಪೂರಕವಾಗಿ ಇನ್ನಷ್ಟು ಸೇವೆ ಮಾಡುವ ಉತ್ಸಾಹ ಬಂದಿದೆ ಎಂದರು.
ರಾಜ್ಯದ ಅತಿಹೆಚ್ಚು ಅಂದರೆ 1300 ಕೆರೆಗಳನ್ನು ಹೊಂದಿರುವ ಸೊರಬ ತಾಲೂಕಿನ ಕೆರೆಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸಂಜೀವಿನಿಯಾಗಿದೆ ಎಂದರು.
- ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು ಸರ್ಕಾರದ ಪ್ರತಿನಿಧಿಯಾಗಿ ಸಾರ್ವಜನಿಕ ರೊಡಗೂಡಿ ಕಾಂಪೌAಡ್ ನಿರ್ಮಾಣ ಕಾರ್ಯದಲ್ಲಿ ಶ್ರಮದಾನಕ್ಕೆ ಮುಂದಾಗಿರುವುದು ರಾಜ್ಯಕ್ಕೆ ಮಾದರಿಯಾಗಿದೆ.
- ಆರ್. ಎಂ. ಮಂಜುನಾಥಗೌಡ, ಅಧ್ಯಕ್ಷರು, ಒಂಆಃ ಶಿವಮೊಗ್ಗ.
- ಶ್ರಮಿಕ ವರ್ಗಕ್ಕೆ ಬಲ ತುಂಬುವ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ದೂರದೃಷ್ಟಿಯ ಯೋಜನೆ ನರೇಗಾ ಅತ್ಯದ್ಭುತ ಯೋಜನೆಯಾಗಿದೆ. ಹಲವು ದಶಕಗಳ ನಂತರವು ಯೋಜನೆ ಪ್ರಚಲಿತದಲ್ಲಿರುವುದು ಯೋಜನೆಯ ಮಹತ್ವ ವನ್ನು ಸಾರಿ ಹೇಳುತ್ತದೆ.
- ಶ್ರೀಮತಿ ಬಲ್ಕಿಶ್ ಬಾನು, ವಿಧಾನ ಪರಿಷತ್ ಸದಸ್ಯರು, ಶಿವಮೊಗ್ಗ .
ಕಾರ್ಯಕ್ರದಲ್ಲಿ ಉಪಸ್ಥಿತರಿದ್ದ ರಾಜ್ಯ ಯೋಜನೆ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಅವರು ಮಾತನಾಡಿ, ರಾಜ್ಯದ ಪ್ರಗತಿಗೆ ಮುಖ್ಯಮಂತ್ರಿ ದೇವರಾಜ ಅರಸು ಅವರ ನಂತರ ಎಸ್. ಬಂಗಾರಪ್ಪ ಅವರು ಮೇಲ್ಪಕ್ತಿಯಲ್ಲಿ ಗುರುತಿಸಲಾಗುತ್ತಿದೆ. ಅವರ ಉಚಿತ ವಿದ್ಯುತ್ ನೀಡುವ ಯೋಜನೆ ಇಂದಿಗೂ ಪ್ರಚಲಿತದಲ್ಲಿದೆ. ದೇವಸ್ಥಾನಕ್ಕಿಂತ ಶಾಲಾ ಕಟ್ಟಡ ನಿರ್ಮಾಣ ಅತ್ಯಂತ ಪುಣ್ಯದ ಕಾರ್ಯ. ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿರುವ ಸಚಿವ ಮಧು ಅವರು ಅಭಿನಂದನಾರ್ಹರು ಎಂದರು.
ಕಾರ್ಯಕ್ರಮದಲ್ಲಿ ಹುರುಳಿ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಅನಸೂಯ ಶಿವಕುಮಾರ್, ಮುಖಂಡ ಆರ್. ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
“ ಸಚಿವ ಎಸ್. ಮಧು ಬಂಗಾರಪ್ಪ ಅವರೇ ಸ್ವತಃ ಗುದ್ದಲಿ, ಪಿಕಾಸಿ ಹಿಡಿದು, ಗುಂಡಿ ತೆಗೆದು, ಅಕ್ಷರಷಃ ತಲೆಯ ಮೇಲೆ ಮಣ್ಣಿನ ಬುಟ್ಟಿ ಹೊತ್ತು ಶ್ರಮದಾನ ಮಾಡಿದ್ದು, ಎಲ್ಲರಿಗೂ ಪ್ರೇರಣೆಯಾಗಿತ್ತು. ”
Diksuchi Adventures Shivamogga ಚಿಕ್ಕಮಗಳೂರಿನ ಹೊರನಾಡಿನಲ್ಲಿ ವಿಶೇಷ ಬೇಸಿಗೆ ಶಿಬಿರ
Diksuchi Adventures Shivamogga ಚಿಕ್ಕಮಗಳೂರಿನ ಹೊರನಾಡಿನಲ್ಲಿ ಏಪ್ರಿಲ್ 12ರಿಂದ 20ರವರೆಗೆ ದಿಕ್ಸೂಚಿ ಅಡ್ವೆಂರ‍್ಸ್ ಶಿವಮೊಗ್ಗ ವತಿಯಿಂದ ವಿಶೇಷ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. 10 ವರ್ಷ ಮೇಲ್ಪಟ್ಟವರು ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಕ್ಯಾಂಪಿಂಗ್, ಮ್ಯೂಸಿಕ್, ಫಿಲ್ಮ್, ಗೇಮ್ಸ್, ಟ್ರೆಕ್ಕಿಂಗ್, ಪ್ರಥಮ ಚಿಕಿತ್ಸೆ, ಕ್ರಾಫ್ಟ್, ಅಡುಗೆ ಸೇರಿದಂತೆ ವೈವಿಧ್ಯ ವಿಷಯಗಳ ಬಗ್ಗೆ ಬೇಸಿಗೆ ಶಿಬಿರದಲ್ಲಿ ಕಲಿಸಲಾಗುತ್ತದೆ. ಇಟ್ಸಿ ಬಿಟ್ಸಿ, ಕಲಾತರಂಗ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಘಟಕ, ಮಲ್ನಾಡ್ ಓಪನ್ ಗ್ರೂಪ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಗಳ ಸಹಯೋಗದಲ್ಲಿ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಸಕ್ತ 50 ಜನರಿಗೆ ಅವಕಾಶ ಇರಲಿದೆ. ವಿಶೇಷ ಬೇಸಿಗೆ ಶಿಬಿರಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಫ್ವಥಿರಾಜ್ ಗಿರಿಮಾಜಿ 8277314779, ವಿಭಾ 6361993239, ಹರೀಶ್ ಪಂಡಿತ್ 9886422078 ಸಂಪರ್ಕಿಸಬಹುದಾಗಿದೆ.
K.E. Kantesh ನೂತನವಾಗಿ ಆರಂಭಿಸಲಾಗಿರುವ ಜಸ್ ಶಿವಮೊಗ್ಗ ಮಾರ್ಟ್ ನ್ನು ಉದ್ಘಾಟಿಸಿದ ಜಿ.ಪಂ. ಮಾಜಿ ಸದಸ್ಯ.ಕೆ.ಇ.ಕಾಂತೇಶ್
K.E. Kantesh ಶಿವಮೊಗ್ಗದ ಪಾಸಿಟಿವ್ ಮೈಂಡ್ ಹಾಸ್ಪಿಟಲ್ ವಿನೋಬನಗರ ಹತ್ತಿರ ನೂತನವಾಗಿ ಆರಂಭಿಸಲಾಗಿರುವ ಜಸ್ ಶಿವಮೊಗ್ಗ ಮಾರ್ಟ್ ನ್ನು ಜಿ.ಪಂ.ಮಾಜಿ ಸದಸ್ಯ.ಕೆ.ಇ.ಕಾಂತೇಶ್ ಉದ್ಘಾಟಿಸಿದರು.
ಜಸ್ ಮಾರ್ಟ್ ಮಾಲೀಕರಾದ ಚಂದ್ರಶೇಖರ್ ಮಾತನಾಡಿ, ಅತ್ಯಂತ ಸುಸಜ್ಜಿತವಾದ ಕಟ್ಟಡದಲ್ಲಿ ,ವಾಹನಗಳ ಪಾರ್ಕಿಂಗ್ ವ್ಯವಸ್ಥೆಯ ಸೇರಿದಂತೆ ಜೊತೆಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ಹಾಗೂ ವಿಶೇಷ ಆಫರ್ ಮೂಲಕ ತನ್ನ ಗ್ರಾಹಕರಿಗೆ ಶಿವಮೊಗ್ಗ ಜಸ್ ಮಾರ್ಟ್ ಆರಂಭಿಸಲಾಗಿದೆ. ನಗರದ ಜನತೆಗೆ ದಿನಸಿ ಸಾಮಾಗ್ರಿಗಳು ಸೇರಿದಂತೆ ಗೃಹ ಬಳಕೆಯ ಎಲ್ಲಾ ಸಾಮಾಗ್ರಿಗಳು ಒಂದೇ ಸೂರಿನಡಿ ಸಿಗಬೇಕೆನ್ನುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ನಾವು ಶಿವಮೊಗ್ಗದಲ್ಲಿ ಶಿವಮೊಗ್ಗ ಜಸ್ ಮಾರ್ಟ್ ಆರಂಭಿಸಿದ್ದೇವೆ. ಇದಕ್ಕೆ ಗ್ರಾಹಕರ ಪ್ರೋತ್ಸಾಹ ಬೇಕಿದೆ ಎಂದರು.
K.E. Kantesh ಈ ಸಂದರ್ಭದಲ್ಲಿ ಡಿ.ಎಸ್.ಎಸ್.ಗುರುಮೂರ್ತಿ, ಮಾಟ್೯ ಮಾಲೀಕರು ಸೇರಿದಂತೆ ಇತರರಿದ್ದರು.
ಏನಿಲ್ಲ ಸಿಗಲಿವೆ?
ಮನೆಗೆ ಬೇಕಾದ ಉತ್ತಮ ದಿನ ನಿತ್ಯದ ದಿನಸಿ ಸಾಮಾಗ್ರಿಗಳು, ಹಣ್ಣು, ಹಂಪಲು, ಡ್ರೈ ಪ್ರೂಟ್ಸ್ ,ತರಕಾರಿ, ಮಕ್ಕಳ ನೋಟ್ ಬುಕ್ ಸೇರಿದಂತೆ ಅಗತ್ಯ ವಸ್ತುಗಳು ಒಂದೇ ಸೂರಿನಡಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದೊಂದಿಗೆ ಗೃಹ ಬಳಕೆಯ ಎಲ್ಲಾ ಸಾಮಾಗ್ರಿಗಳು ಲಭ್ಯವಾಗುವಂತೆ ಶಿವಮೊಗ್ಗ ಜಸ್ ಮಾರ್ಟ್ ತನ್ನ ಮೊದಲ ಶಾಖೆಯನ್ನು ಶಿವಮೊಗ್ಗ ಪಾಸಿಟಿವ್ ಮೈಂಡ್ ಹಾಸ್ಪಿಟಲ್ ಪಕ್ಕ ೬೦ ಅಡಿ ರಸ್ತೆ ವಿನೋಬನಗರದಲ್ಲಿ ಶಿವಮೊಗ್ಗ ಜಸ್ ಮಾರ್ಟ್ ಆರಂಭಿಸಿದೆ.
Department of Mining Geology ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ದಾಳಿ, ಅಕ್ರಮ ಮರಳುಗಾರಿಕೆಗೆ ಬಳಸಿದ ಸಲಕರಣೆಗಳು ವಶಕ್ಕೆ
Department of Mining Geology ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಹೋಬಳಿ ಯ ಹಾಡೋನಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ತುಂಗಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮೇಲೆ ಉಪವಿಭಾಧಿಕಾರಿ ಸತ್ಯನಾರಾಯಣ್. ತಹಶೀಲ್ದಾರ್.ವಿ.ಎಸ್.ರಾಜೀವ್ ನೇತೃತ್ವದಲ್ಲಿ. ಮತ್ತು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 50 ಟನ್ ಮರಳು ಸೇರಿದಂತೆ ಅಕ್ರಮ ಮರಳುಗಾರಿಕೆಗೆ ಬಳಸಿದ ಕೆಲವು ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ಮಾಹಿತಿ ತಿಳಿದ ಅಕ್ರಮ ಮರಳು ದಂಧೆಕೊರರು ಸ್ಥಳದಿಂದ ಪರಾರಿಯಾಗಿದ್ದರು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಖಡಕ್ ದಾಳಿ ನಡೆಸಲಾಗಿದ್ದು ಹೀಗೆ ಮರಳು ಗಣಿಗಾರಿಕೆ ಮುಂದುವರೆದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ .
ಅಕ್ರಮ ಮರಳುಗಾರಿಕೆಗೆ ಬಳಸಿದಂತಹ ಕೆಲವೊಂದು ಸಲಕರಣೆಗಳನ್ನು ವಶಕ್ಕೆ ಪಡೆದು ಪೋಲಿಸ್ ಇಲಾಖೆಗೆ ಹಸ್ತಾಂತರಿಸಿ
ಈ ಕೂಡಲೇ ತಪ್ಪಿತಸ್ಥರ ವಿರುದ್ದ ಕ್ರಮ ಕ್ಕೆ ಕೈಗೊಳ್ಳು ಪೋಲಿಸ್ ಇಲಾಖೆಗೆ ಸೂಚಿಸಲಾಯಿತು.
Department of Mining Geology ಈ ಹಿಂದೆಯೂ ಸಹ ತಹಶೀಲ್ದಾರ್ .ವಿ.ಎಸ್ .ರಾಜೀವ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ರಮ ಮರಳು ದಂಧೆಕೋರರಿಗೆ ಖಡಕ್ ಎಚ್ಚರಿಕೆ ನೀಡಿ ಅಕ್ರಮ ಮರಳನ್ನ ವಶಪಡಿಸಿ ಪಿಡಬ್ಯೂ ಇಲಾಖೆಗೆ ಹಸ್ತಾಂತರಿಸಿದರು.
Rama Navami ರಾಮನವಮಿ ಕೇವಲ ಒಂದು ಹಬ್ಬವಲ್ಲ, ಅದು ಧರ್ಮ ನೀತಿ ಮತ್ತು ಸತ್ಯ ಹೇಗೆ ಜೀವನದಲ್ಲಿ ಪಾಲಿಸಬೇಕು ಎಂಬುದನ್ನು ತೋರಿಸುವ ದಾರಿ ದೀಪ : ಸಂದೇಶ್ ಉಪಾಧ್ಯ
Rama Navami ರಾಮನ ತತ್ವ ಆದರ್ಶ ಗುಣಗಳು ಇಂದಿಗೂ ಸಹ ಪ್ರಸ್ತುತ ಶ್ರೀ ರಾಮನವಮಿ ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾಗಿದೆ ಈ ಹಬ್ಬವನ್ನು ಮರ್ಯಾದಾ ಪುಷೋತ್ತಮ ಶ್ರೀರಾಮನ ಜನ್ಮದಿನ ವೆಂದು ಆಚರಿಸಲಾಗುತ್ತಿದೆ. ರಾವನವಮಿ ಹಬ್ಬವು ಭಕ್ತರಿಗೆ ಧರ್ಮ, ಶಿಷ್ಟಾಚಾರ, ಸತ್ಯ ಮತ್ತು ನೀತಿ ಮಾರ್ಗವನ್ನು ನೆನಪಿಸುವ ಪವಿತ್ರ ದಿನವಾಗಿದೆ ಶ್ರೀ ರಾಮನವಮಿ ಕೇವಲ ಒಂದು ಹಬ್ಬವಲ್ಲ ಅದು ಧರ್ಮ ನೀತಿ ಮತ್ತು ಸತ್ಯ ಸಂಧತೆ ಇವುಗಳನ್ನು ಹೇಗೆ ಜೀವನದಲ್ಲಿ ಪಾಲಿಸಬೇಕು ಎಂಬುದನ್ನು ತೋರಿಸುವ ದಾರಿ ದೀಪವಾಗಿದೆ ಎಂದು ಗೋಪಾಲದ ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ವೇದಬ್ರಹ್ಮ ಸಂದೇಶ್ ಉಪಾಧ್ಯ ನುಡಿದರು. Rama Navami ಅವರು ರಾಮ ನವಮಿ ಅಂಗವಾಗಿ ನಾಗಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ ರಾಮ,ಸೀತೆ ಹಾಗೂ ರಾಮಾಯಣದ ವೇಷ ಭೂಷಣ ಅಲಂಕಾರ, ಹಾಗೂ ರಾಮನ ಭಕ್ತಿ ಗೀತೆಗಳು ಮತ್ತು ಭಜನೆ ರಾಮನ ಕುರಿತು ಶ್ಲೋಕ ಕಂಠಪಾಠ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಇದರಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನಾಗ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ರಾಮಲಿಂಗಪ್ಪನವರು ಮಾತನಾಡುತ್ತಾ ಇಂದು ದೇಶಾದ್ಯಂತ ರಾಮನವಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಿ ಕೋಸಂಬರಿ ಪಾನಕ ವಿತರಣೆ ಮಾಡಿ ರಾಮನನ್ನು ಸ್ಮರಿಸುವುದರ ಮುಖಾಂತರ ರಾಮನವಮಿಯನ್ನು ಆಚರಿಸಲಾಗುತ್ತಿದೆ ಹಾಗೆ ಪ್ರತಿ ವರ್ಷ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲಾ ಭಕ್ತ ಮಹಾಶಯರು ಹಾಗೂ ಭಜನಾ ಮಂಡಳಿಯ ಸದಸ್ಯರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಅವರನ್ನು ಸ್ಮರಿಸಿದರು. Rama Navami ಇದೇ ಸಂದರ್ಭದಲ್ಲಿ ರೋಟರಿ ವಿಜಯಕುಮಾರ್ ಅವರು ಮಾತನಾಡುತ್ತಾ ರಾಮನ ನಾಡಿನಲ್ಲಿ ಹುಟ್ಟಿರುವುದೇ ನಮ್ಮ ಭಾಗ್ಯ ಜೀವನದಲ್ಲಿ ಒಮ್ಮೆಯಾದರೂ ಅಯೋಧ್ಯೆಯ ರಾಮಲಲ್ಲನ ದರ್ಶನ ಮಾಡಲೇಬೇಕು ಇಂದು ನಾಗಸುಬ್ರಹ್ಮಣ್ಯ ದೇವಸ್ಥಾನ ಪ್ರತಿಯೊಂದು ಹಬ್ಬ ಹರಿ ದಿನಗಳಲ್ಲಿ ತುಂಬಾ ವೈವಿಧ್ಯಮಯ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುತ್ತಾ ಬಂದಿರುವುದು ತುಂಬಾ ವಿಶೇಷತೆ ಎಂದು ನುಡಿದರು ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದ ಪೇಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾ. ಮೈತ್ರೇಯಿ ಆದಿತ್ಯ ಪ್ರಸಾದ್ ಅವರು ರಾಮನ ಚರಿತೆಯ ಬಗ್ಗೆ ಮಾತನಾಡಿದರು. ಇನ್ನೋರ್ವ ತೀರ್ಪುಗಾರರಾದ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜ್ ನ ಉಪನ್ಯಾಸಕರಾದ ಶ್ರೀ ಮಂಜುನಾಥ್ ಸ್ವಾಮಿ ಮಾತನಾಡುತ್ತಾ ಮಕ್ಕಳನ್ನು ಈ ದಿಸೆಯಲ್ಲಿ ತಯಾರು ಮಾಡಿದ ಪೋಷಕರಿಗೂ ಹಾಗೂ ದೇವಸ್ಥಾನದ ಅರ್ಚಕರು ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಶಾರದಾ ಭಜನಾ ಮಂಡಳಿಯ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾರದಾ ಭಜನಾ ಮಂಡಳಿ ಅವರಿಂದ ಭಜನೆ ಹಾಗೂ ನೃತ್ಯ ಕಾರ್ಯಕ್ರಮ ನೆರವೇರಿತು.
District Consumer Disputes Redressal Commission ವಿಮಾ ಮೊತ್ತ ನೀಡಲು ನಿರಾಕರಿಸಿ ಸೇವಾನ್ಯೂನತೆ : ಪರಿಹಾರ ನೀಡಲು ಆದೇಶ
District Consumer Disputes Redressal Commission ದೂರುದಾರರಾದ ಚಿದಾನಂದ, ಹದಿಕೆರೆ, ತರಿಕೆರೆ ತಾ. ಚಿಕ್ಕಮಗಳೂರು ಜಿಲ್ಲೆ ಇವರು ಚೋಳ ಎಂ.ಎಸ್.ಜನರಲ್ ಇನ್ಶೂರೆನ್ಸ್ ಕಂಪೆನಿ ಲಿ., ಶೇಷಾದ್ರಿಪುರಂ ಎಕ್ಸಟೆನ್ಷನ್, ಶಿವಮೊಗ್ಗ ಹಾಗೂ ಚೋಳ ಎಂ.ಎಸ್.ಜನರಲ್ ಇನ್ಶೂರೆನ್ಸ್ ಕಂಪೆನಿ ಲಿ., ತಂಬುಚೆಟ್ಟಿ ಸ್ಟ್ರೀಟ್ , ಚೆನೈ ಇವರುಗಳ ವಿರುದ್ದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರ ಚಿದಾನಂದ ಇವರ ಮಗ 2022ರಲ್ಲಿ ದ್ವಿಚಕ್ರ ವಾಹನದ ಅಪಘಾತದಿಂದ ಮರಣ ಹೊಂದಿದ್ದು, ಇನ್ಷೂರೆನ್ಸ್ ಕಂಪನಿಗೆ ಓ.ಡಿ ಕ್ಲೇಮ್ ಮತ್ತು ವೈಯಕ್ತಿಕ ಅಪಘಾತದ ಕ್ಲೇಮ್ ಮೊತ್ತವನ್ನು ನೀಡಲು ಕೋರಿರುತ್ತಾರೆ. ಆದರೆ ಎದುರುದಾರ ಇನ್ಷೂರನ್ಸ್ ಕಂಪನಿಯು ಅಪಘಾತದ ವಿಷಯವನ್ನು ತಿಳಿಸಲು 424 ದಿನಗಳ ವಿಳಂಬವಾಗಿದೆ ಎಂಬ ಕಾರಣ ನೀಡಿ ವಿಮಾ ಹಣವನ್ನು ನೀಡಲು ನಿರಾಕರಿಸಿರುತ್ತಾರೆ ಎಂದು ದೂರು ಸಲ್ಲಿರುತ್ತಾರೆ.
ಆಯೋಗವು ನೀಡಿದ ನೋಟಿಸ್‌ಗೆ ಎದುರುದಾರರು ವಕೀಲರ ಮೂಲಕ ಹಾಜರಾಗಿ ಅಪಘಾತದ ವಿಷಯವನ್ನು ವಿಳಂಬವಾಗಿ ತಿಳಿಸಿರುವುದರಿಂದ ಕ್ಲೇಮ್‌ನ್ನು ತಿರಸ್ಕರಿಸಿರುವುದಾಗಿ ಹಾಗೂ ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವಾದ ಕಾರಣ ದೂರನ್ನು ವಜಾ ಮಾಡಬೇಕಾಗಿ ವಿನಂತಿಸಿರುತ್ತಾರೆ.
District Consumer Disputes Redressal Commission ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣನೆಗೆ ತೆಗೆದುಕೊಂಡು, ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರುದಾರರು ಸಲ್ಲಿಸಿರುವ ದೂರನ್ನು ಭಾಗಶಃ ಪುರಸ್ಕರಿಸಿ, ವೈಯಕ್ತಿಕ ಅಪಘಾತ ಕ್ಲೇಮ್ ಮೊತ್ತ ರೂ.15,00,000 ಗಳನ್ನು ದಿ:31/05/2024ರಿಂದ ಅನ್ವಯವಾಗುವಂತೆ ಶೇ.9 ರಂತೆ ಬಡ್ಡಿ ಸಹಿತ ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸಲು, ತಪ್ಪಿದಲ್ಲಿ ವಿಮಾ ಮೊತ್ತಕ್ಕೆ ಶೇ.12 ರಂತೆ ಬಡ್ಡಿ ಸಹಿತ ಪಾವತಿಸಲು ಹಾಗೂ ರೂ.25,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಏ. 02 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ತಿಳಿಸಿದ್ದಾರೆ.
CM Siddharamaiah ವಿಧಾನ ಸೌಧಕ್ಕೆ ಶಾಶ್ವತ ವಿದ್ಯುದ್ದೀಪಾಲಂಕಾರ ಉದ್ಘಾಟನೆ
CM Siddharamaiah ವಿಧಾನ ಸೌಧದ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸೌಧದ ಭವ್ಯ ಮೆಟ್ಟಿಲುಗಳ ಬಿಳಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಿದರು.
CM Siddharamaiah ಈ ಸಮಾರಂಭದಲ್ಲಿ, ವಿಧಾನ ಸಾಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ಇಂಧನ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Klive Special Article ಏಪ್ರಿಲ್ 8, ಕೋಟೆ ಆಂಜನೇಯ ಮಂದಿರದಲ್ಲಿ ಸತ್ಸಂಗದ ಸಂಪತ್ತು ಪಡೆಯಲು ಸುವರ್ಣಾವಕಾಶ ಲೇ; ಡಾ.ಮೈತ್ರೇಯಿ ಆದಿತ್ಯ ಪ್ರಸಾದ್
Klive Special Article ಮಾಡೋಣ ಬನ್ನಿ ರಾಮ ನಾಮ ಸ್ಮರಣೆಯ…..
ಒಮ್ಮೆ ನಾರದರು ಬ್ರಹ್ಮನಲ್ಲಿ ಹೋಗಿ ಸತ್ಸಂಗದ ಮಹತ್ವ ಏನೆಂದು ಕೇಳಿದರು. ಆಗ ಬ್ರಹ್ಮದೇವನು ಭೂಲೋಕದಲ್ಲಿ ಒಂದು ಪಾರಿವಾಳವಿದೆ ಅದರ ಬಳಿ ಹೋಗಿ ಕೇಳು ನಿನಗೆ ಅಲ್ಲಿ ಉತ್ತರ ಸಿಗುತ್ತದೆ ಎಂದು ಹೇಳಿ ಕಳುಹಿಸುತ್ತಾರೆ. ಅದರಂತೆ ನಾರದರು ಪಾರಿವಾಳವೊಂದನ್ನು ಕಂಡು ಅದರ ಬಳಿ ಸತ್ಸಂಗದ ಮಹತ್ವ ಏನು ಎಂದು ಕೇಳುತ್ತಾರೆ. ಆಗ ಆ ಪಾರಿವಾಳವು ಒಂದು ಮರಿಗೆ ಜನ್ಮವಿತ್ತು ಆ ಕೂಡಲೇ ಮರಣಿಸುತ್ತದೆ. ತನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲವಲ್ಲ ಎಂದು ಮತ್ತೆ ಬ್ರಹ್ಮದೇವನ ಬಳಿ ಹೋಗಿ ಅದೇ ಪ್ರಶ್ನೆ ಕೇಳಿದಾಗ, ಆಗ ಬ್ರಹ್ಮದೇವನು ಭೂಲೋಕದಲ್ಲಿರುವ ಹಸುವೊಂದನ್ನು ತೋರಿಸಿ ಅದರ ಬಳಿ ಕೇಳು ನಿನ್ನ ಪ್ರಶ್ನೆಗೆ ಉತ್ತರ ದೊರಕುತ್ತದೆ ಎಂದು ಹೇಳಿ ಕಳುಹಿಸುತ್ತಾರೆ. ಹಾಗೆಯೇ ಹಸುವಿನ ಬಳಿ ನಾರದರು ಬಂದು ಸತ್ಸಂಗದ ಮಹತ್ವದ ಕುರಿತಾಗಿ ಕೇಳಿದಾಗ ಅದು ಕೂಡ ಒಂದು ಕರುವಿಗೆ ಜನ್ಮವಿತ್ತು ಕೂಡಲೇ ಸಾವನ್ನಪ್ಪುತ್ತದೆ. ಇಲ್ಲೂ ತನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲವಲ್ಲ ಎಂದು ನಾರದರು ಮತ್ತೊಮ್ಮೆ ಬ್ರಹ್ಮದೇವನ ಬಳಿ ಹೋಗಿ ಕೇಳುತ್ತಾರೆ. ಆಗಲೂ ಬ್ರಹ್ಮದೇವನು ಭೂಲೋಕದಲ್ಲಿ ಒಬ್ಬ ಪ್ರತಿಷ್ಠಿತ ರಾಜನಿಗೆ ಒಂದುಬಹು ವರ್ಷಗಳ ನಂತರ ಗಂಡು ಮಗು ಆಗಿದೆ ಅದರ ಬಳಿ ಹೋಗಿ ಕೇಳು ನಿನ್ನ ಪ್ರಶ್ನೆಗೆ ಅಲ್ಲಿ ಉತ್ತರ ಸಿಗುತ್ತದೆ ಎನ್ನುತ್ತಾರೆ. ಆಗ ನಾರದರಿಗೆ ಆತಂಕ ಮತ್ತು ಭಯ ಎರಡೂ ಉಂಟಾಗುತ್ತದೆ. ಮೊದಲೇ ನಡೆದ ಘಟನೆಗಳನ್ನು ನಡೆಸಿಕೊಂಡು ಇಲ್ಲೂ ಅಂತಹುದೇ ಅನಾಹುತ ನಡೆದು ಹೋದರೆ ರಾಜ ತನ್ನ ತಲೆ ತೆಗೆಯುತ್ತಾನೆ, ಎಂದು ಬ್ರಹ್ಮನ ಬಳಿ ತನಗಾದ ಸಂಕಟ ಹೇಳಿಕೊಂಡಾಗ ನೀ ಹೋಗಿ ಆ ಮಗುವಿನ ಬಳಿ ಕೇಳು ಖಂಡಿತವಾಗಿಯೂ ನಿನ್ನ ಪ್ರಶ್ನೆಗೆ ಉತ್ತರ ದೊರಕಿಯೇ ದೊರಕುತ್ತದೆ ಎಂಬ ಭರವಸೆ ಬ್ರಹ್ಮ ನೀಡುತ್ತಾನೆ. ಹಾಗೆಯೇ ಆಗಲಿ ಇದೊಂದು ಪ್ರಯತ್ನ ಮಾಡುತ್ತೇನೆ ಎಂದು ಭಯದಿಂದಲೇ ಆ ಮಗುವಿಗೆ ಸತ್ಸಂಗದ ಮಹತ್ವ ಏನೆಂದು ಕೇಳಿದಾಗ ಆ ಕೂಡಲೇ ಆ ಮಗು ನಗುನಗುತ್ತಾ ‘ಎಲೈ ನಾರದರೇ, ಸತ್ಸಂಗದ ಮಹತ್ವವೇನು ಎಂದು ನೀವು ಕೇಳುತ್ತಿರುವಿರಲ್ಲ ಅದಕ್ಕೆ ನಾನೇ ಸಾಕ್ಷಿ. ನಿಮ್ಮಂತಹ ಸಜ್ಜನರ ಸಂಗದಿಂದಲೇ ಪಾರಿವಾಳವಾಗಿದ್ದ ನಾನು ನಂತರ ಹಸುವಾಗಿ ಈಗ ಮನುಷ್ಯ ಜನ್ಮ ತಾಳಿದ್ದೇನೆ ಇದಕ್ಕಿಂತ ಬೇರೆ ಮಹತ್ವ ಬೇಕೆ?’ ಎಂದು ಸಂತೋಷದಿಂದ ಉತ್ತರಿಸುವ ಘಟನೆಯೇ ನಮಗೆ ಪ್ರೇರೇಪಣೆಯನ್ನು ಕೊಡುವಂತದ್ದಾಗಿದೆ.
Klive Special Article ಸತ್ಸಂಗ ಎಂಬುದು ಸತ್ಪುರುಷರ, ಸದ್ವಿಚಾರಗಳ ಜೊತೆಗಿನ ಸಂಪರ್ಕವೇ ಆಗಿದ್ದು, ಮಾನವ ಜೀವನದ ಅಧ್ಯಾತ್ಮಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾದ ಸಾಧನವಾಗಿದ್ದು, ಮನಸ್ಸನ್ನು ಶುದ್ಧಗೊಳಿಸಿ ವ್ಯಕ್ತಿತ್ವವನ್ನು ಉದಾತ್ತಗೊಳಿಸುತ್ತದೆ. ಇದು ಬದುಕಿನ ಮೌಲ್ಯಗಳನ್ನು ಬೆಳೆಸುವ ಒಂದು ಪವಿತ್ರ ಸಂಸ್ಕಾರವಾಗಿದೆ. ಇದರಿಂದ ನೈತಿಕತೆ ಬೆಳೆಯುತ್ತದೆ. ಪರಿವರ್ತನೆಯ ಮಾರ್ಗವಾಗಿ ಅನೇಕರು ತಮ್ಮ ಜೀವನದ ದೃಷ್ಟಿಕೋನವನ್ನೇ ಬದಲಿಸಿಕೊಂಡ ಉದಾಹರಣೆಗಳಿವೆ. ಮನಸ್ಸಿಗೆ ಶಾಂತಿ ದೊರೆತು, ದೋಷಗಳಿಂದ ವ್ಯಕ್ತಿ ದೂರವಿರುವಂತೆ ಆಗುತ್ತದೆ. ಇದನ್ನೇ ಸಾಧನೆ- -ಸೇವೆ-ಸತ್ಸಂಗ ಎಂದು ಆರ್ಟ್ ಆಫ್ ಲಿವಿಂಗ್ ನ ಪರಮಪೂಜ್ಯ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಅವರು ಹೇಳಿರುವುದು. ಮನುಷ್ಯ ಗುರು ಮುಖೇನ ಕಲಿಯುವಂತಹ ವಿದ್ಯೆಯಾಗಿ ಅದನ್ನು ಆತ ನಿತ್ಯ ಅನುಷ್ಠಾನ ಮಾಡಿ ಸಾಧನೆ ಮಾಡುತ್ತಾನೆ. ಅದರಿಂದ ಆ ವ್ಯಕ್ತಿ ವಿಕಾಸವಾಗುತ್ತಾನೆ. ವ್ಯಕ್ತಿಯ ವಿಕಾಸವಾದರೆ ಖಂಡಿತವಾಗಿಯೂ ರಾಷ್ಟ್ರದ ವಿಕಾಸವಾದಂತೆಯೇ. ನಂತರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕಾರ್ಯವೆಸಗತೊಡಗುತ್ತಾನೆ, ಅದರಿಂದಲೇ ಅವನಿಗೆ ಸಜ್ಜನರ ಸಹವಾಸ ದೊರೆಯುತ್ತದೆ ಎಂದಿರುವುದು. ಇದು ಭಗವನ್ ನಾಮ ಸ್ಮರಣೆಯಿಂದ ಸಾಧ್ಯ ಎಂದು ಹೇಳಿ ಭಜನೆಯ ಮೂಲಕ ಈ ಸಾಧನೆ ಮಾಡಬಹುದು. ಇಂತಹ ಸತ್ಸಂಗ ಒಂದು ಶಿವಮೊಗ್ಗದಲ್ಲಿ ಛಾಯಣ್ಣನವರಿಂದ ಏರ್ಪಡಿಸಿರುವುದು ವಿಶೇಷವೇ ಸರಿ.
ಪರಮಪೂಜ್ಯ ಶ್ರೀ ಶ್ರೀ ಸೂರ್ಯ ಪಾದ ಸ್ವಾಮೀಜಿ (ಛಾಯಣ್ಣ )
ಪರಮಪೂಜ್ಯ ಶ್ರೀ ಶ್ರೀ ಸೂರ್ಯ ಪಾದ ಸ್ವಾಮೀಜಿಯವರು ಎಲ್ಲರಿಗೂ ಛಾಯಣ್ಣ ಎಂದೇ ಚಿರಪರಿಚಿತ. ಇವರ ಪೂರ್ವಾಶ್ರಮದ ಹೆಸರು ಎಂ. ಎಸ್. ಛಾಯಾಪತಿ ಎಂದು. 90ರ ದಶಕದಲ್ಲಿ ಇವರು ಬೆಂಗಳೂರಿನ ಪ್ರತಿಷ್ಠಿತ ಆರ್ ವಿ ಇಂಜಿನಿಯರಿಂಗ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಅನಿಲ್ ಕುಂಬ್ಳೆ ಯಾದಿಯಾಗಿ ಅನೇಕ ಶಿಷ್ಯ ವೃಂದವನ್ನ ಹೊಂದಿದಂತಹ ಇವರು ಆಗಿನ ಕಾಲದಲ್ಲಿ ಮಕ್ಕಳುಗಳಿಗೆ ಉಚಿತವಾಗಿ ಟ್ಯೂಷನ್ ಸಹ ಮಾಡುತ್ತಿದ್ದರು. ಭೌತಶಾಸ್ತ್ರಕ್ಕೂ ಅಧ್ಯಾತ್ಮಕ್ಕೂ ಒಂದು ವಿಶೇಷವಾದ ನಂಟಿದೆ. ಅದರಂತೆ ಇವರಿಗೆ ಬಾಲ್ಯದಿಂದಲೂ ಕೂಡ ರಾಮಕೃಷ್ಣ ಮಿಷನ್ ಹಾಗೂ ಚಿನ್ಮಯ ಮಿಷನ್ ಇವುಗಳ ಒಡನಾಟ ಇದ್ದ ಕಾರಣ ಅಧ್ಯಾತ್ಮದ ಕಡೆಗೆ ಒಲವು ಹೆಚ್ಚು ಮೂಡಿತು. ಆದಕಾರಣ ಎಲ್ಲೇ ಸತ್ಸಂಗ ನಡೆದರೂ ಇವರು ತಪ್ಪದೇ ಅಲ್ಲಿಗೆ ಹೋಗಿ ಅದರಲ್ಲಿ ಭಾಗವಹಿಸುತ್ತಿದ್ದರು. ಅದರಲ್ಲಿಯೂ ಸ್ವಾಮಿ ಪುರುಷೋತ್ತಮಾನಂದಜೀ ಎಂದರೆ ಪಂಚಪ್ರಾಣ. ಅವರ ಸತ್ಸಂಗ ಮುಗಿಸಿ ಮನೆಗೆ ಬಂದ ಮೇಲೆ ತಾನು ಕೂಡ ಅವರಂತೆ ಹಾರ್ಮೋನಿಯಂ ಜೊತೆಗೆ ಹಾಡಲು ಆರಂಭಿಸುತ್ತಿದ್ದರು. ಅದೇ ಹಾದಿಯಲ್ಲಿ ಇಂದಿಗೂ ಹಾರ್ಮೋನಿಯಂ ಜೊತೆಗೆ ಹಾಡುವಂತಹ ವಿಶೇಷ ಗಾಯಕರಾಗಿ ಇವರು ಮೂಡಿದ್ದಾರೆ. ಹೀಗೆ ಇವುಗಳಿಂದ ಪ್ರಭಾವಿತರಾಗಿ ನಂತರ 90ರ ದಶಕದಲ್ಲಿ ಶ್ರೀಯುತರಿಗೆ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಸಂಪರ್ಕವಾಯಿತು. ಆ ಕಾರಣದಿಂದ ಅಧ್ಯಾತ್ಮದ ಹಾದಿ ಪೂರ್ಣವಾಗಿ ಹಿಡಿದು ತಮ್ಮ ವೃತ್ತಿಯಿಂದ ನಿವೃತ್ತಿ ಪಡೆದು ಪೂರ್ಣ ಸಮಯ ಆರ್ಟ್ ಆಫ್ ಲಿವಿಂಗ್ ನ ಅಧ್ಯಾತ್ಮ ಬೋಧನೆ, ಸತ್ಸಂಗ, ಭಜನೆ ಇವುಗಳಿಗೆ ಮೀಸಲಿಟ್ಟರು. ತಮ್ಮ ಆಳವಾದ ಅಧ್ಯಯನದ ಪ್ರಭಾವದಿಂದ ಜ್ಞಾನ-ವಿಜ್ಞಾನ ಮೇಳೈಸಿ ಶಿಬಿರದ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಇವರ ವಿಶೇಷತೆ ಎಂದರೆ ಹದಿನೈದು ಭಾಷೆಗಳಲ್ಲಿ ಇವರಿಗೆ ಹಿಡಿತ ಇದೆ. ಆ ಕಾರಣದಿಂದಲೇ ಯಶಸ್ವಿಯಾಗಿ ದೇಶ ವಿದೇಶಗಳಲ್ಲಯೂ ಶಿಬಿರಗಳನ್ನು ನಡೆಸಿದ ಹೆಗ್ಗಳಿಕೆ ಇವರದು. ಕರ್ನಾಟಕದಲ್ಲಂತೂ ಆರ್ಟ್ ಆಫ್ ಲಿವಿಂಗ್ ನಡೆಸುವ ಸತ್ಸಂಗ ಪ್ರಸಿದ್ಧಿ ಯಾಗಲು ವಿಶೇಷವಾಗಿ ಇವರ ಪಾತ್ರ ತುಂಬಾ ಹಿರಿದು.
ಶಿವಮೊಗ್ಗ, ಶೃಂಗೇರಿ, ಚಿತ್ರದುರ್ಗ, ದಾವಣಗೆರೆ ಈ ಭಾಗಗಳಲ್ಲಿ 1996ರಲ್ಲಿ ಆಟ ಲಿವಿಂಗ್ ನ ಶಿಬಿರಗಳನ್ನು ನಡೆಸಿ ಅದನ್ನು ಪರಿಚಯಿಸಿದವರಾಗಿದ್ದಾರೆ. ಸತ್ಸಂಗಕ್ಕೊಂದು ಸ್ವಾಮೀಜಿಯವರು ತಮ್ಮ ದಿನಾಂಕವನ್ನು ನಿಗದಿಪಡಿಸಿದರೆ ಅದೇ ಮಹತ್ಭಾಗ್ಯವೆನ್ನುವಂತೆ ಆಗಿತ್ತು. ವಾಸವಿ ಶಾಲೆಯಲ್ಲಿ ಆದಂತಹ ಸತ್ಸಂಗವನ್ನು ನಾನು ನೆನಪಿಸಿಕೊಳ್ಳುವುದಾದರೆ ಅಲ್ಲಿ ಹಾಡಿದ ಸುಂದರಾನನ ಹಾಡಿಗೆ ರೋಮಾಂಚನವಾಗಿ ಮೈಮರೆತು ಕುಣಿದ ದಿನಗಳು ಇನ್ನೂ ಹಸಿರಾಗಿಯೇ ಇದೆ.
ಛಾಯಣ್ಣರ ಪತ್ಸಂಗವಂತು ಆರ್ಟ್ ಆಫ್ ಲಿವಿಂಗ್ ನಲ್ಲಿ ವಿಶಿಷ್ಟ ಮಹತ್ವವನ್ನು ಹೊಂದಿದ್ದು ಅವರ ಧ್ವನಿ ಭಾವನೆ ಮತ್ತು ಭಕ್ತಿ ತುಂಬಿದ ಗೀತೆಗಳು ಭಕ್ತರ ಹೃದಯವನ್ನು ಸ್ಪರ್ಶಿಸುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರಿಗೂ ಛಾಯಣ್ಣನ ಸತ್ಸಂಗ ಇಷ್ಟವಾಗುತ್ತದೆ. ಯುವ ಜನತೆಯಂತೂ ಇವರಿಂದ ವಿಶೇಷವಾಗಿ ಪ್ರಭಾವಿತರಾಗಿದ್ದಾರೆ. ಛಾಯಣ್ಣನ ಸತ್ಸಂಗ ಎಂದರೆ ಅದು ಕೇವಲ ಸಂಗೀತ ಕಾರ್ಯಕ್ರಮವಲ್ಲ, ಮನಸ್ಸನ್ನು ನಿತ್ಯದ ತಾಣದಿಂದ ಎತ್ತಿ ದೈವೀ ಚಿಂತನೆಗೆ ಒಯ್ಯುವ ಪವಿತ್ರ ಕ್ಷಣಗಳಾಗಿವೆ. ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಆಶೀರ್ವಾದದೊಂದಿಗೆ ಛಾಯಣ್ಣರು ತಮ್ಮ ಕಲೆಯ ಮೂಲಕ ಲಕ್ಷಾಂತರ ಜನರ ಮನಸ್ಸುಗಳಲ್ಲಿ ಅಧ್ಯಾತ್ಮದ ದೀಪ ಬೆಳಗಿಸಿದ್ದಾರೆ. ಅವರ ಸತ್ಸಂಗದಲ್ಲಿ ಭಾಗವಹಿಸುವುದರಿಂದ ವ್ಯಕ್ತಿಯ ಭಾವನೆ ಶುದ್ಧವಾಗಿ ಹೃದಯ ಹೊಸತೊಂದು ಶಕ್ತಿ ಪಡೆಯುತ್ತದೆ. ಇಂತಹ ಮಹನೀಯರ ಸತ್ಸಂಗ ಕೋಟೆ ಶ್ರೀ ಸೀತಾರಾಮ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಆಯೋಜಿತವಾಗಿದೆ. ಎಲ್ಲರೂ ಅದರಲ್ಲಿ ಭಾಗವಹಿಸಿ ಭಗವನ್ ನಾಮ ಸ್ಮರಣೆಯ ಭಕ್ತಿರಸ ಸಂಗಮದಲ್ಲಿ ಮಿಂದೆಳೋಣ.
ದೂರ್ವಾಸ ಕ್ಷೇತ್ರವಾದ ಕೋಟೆ ಶ್ರೀ ಸೀತಾ ರಾಮಾಂಜನೇಯನ ಸನ್ನಿಧಿಯಲ್ಲಿ ಮಾಡುವ ಭಜನೆಗೆ ನೂರು ವರ್ಷಗಳ ಇತಿಹಾಸವಿದೆ. ಅಂತಹ ಮಹಾಮಹಿಮನ ಸನ್ನಿಧಿಯಲ್ಲಿ ಶ್ರೀರಾಮನವಮಿಯ ಪ್ರಯುಕ್ತ ಪರಮಪೂಜ್ಯ ಶ್ರೀ ಸೂರ್ಯ ಪಾದ ಸ್ವಾಮೀಜಿ (ಛಾಯಣ್ಣ) ಹಾಗೂ ಅವರ ತಂಡದವರಿಂದ ರಾಮನಾಮ ಸ್ಮರಣೆಯ ಸತ್ಸಂಗವನ್ನು ದಿನಾಂಕ 8-4-2025 ರ ಸಂಜೆ ಏರ್ಪಡಿಸಲಾಗಿದೆ. ಅಲ್ಲದೆ ಸಂಜೆ ಆರರಿಂದ ದೇವಸ್ಥಾನದ ಆವರಣದಲ್ಲಿ ಲೋಕ ಕಲ್ಯಾಣ ಅರ್ಥವಾಗಿ ಶ್ರೀರಾಮ ತಾರಕ ಮಂತ್ರದ ಜಪ ಯಜ್ಞವು ಸಹ ಇರುತ್ತದೆ. ನಂತರ ಗಾನ ಧ್ಯಾನ ಇದರಲ್ಲಿ ಶಿವಮೊಗ್ಗದ ಜನರೆಲ್ಲರೂ ಭಾಗವಹಿಸಿ ಪುನೀತರಾಗಬೇಕೆಂದು ಆಯೋಜಕರು ಸಮಸ್ತ ನಾಗರಿಕರಲ್ಲಿ ವಿನಂತಿಸಿದ್ದಾರೆ.
ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜ್, ಶಿವಮೊಗ್ಗ
Madhu Bangarappa ಸಮಸ್ಯೆ ಪರಿಹರಿಸುವಲ್ಲಿ ಶರಾವತಿ ಸಂತ್ರಸ್ತರು ಸರ್ಕಾರದೊಂದಿಗೆ ಸಹಕರಿಸಬೇಕು- ಮಧು ಬಂಗಾರಪ್ಪ
Madhu Bangarappa ಶರಾವತಿ ಸಂತ್ರಸ್ಥರ ನೆಮ್ಮದಿಯ ಬದುಕಿಗೆ ಸರ್ಕಾರ ಬದ್ಧವಾಗಿದ್ದು, ಅವರ ರಕ್ಷಣೆಯ ಕುರಿತು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಂತ್ರಸ್ಥರು ಸರ್ಕಾರದೊಂದಿಗೆ ಸಹಕರಿಸುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಅವರು ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಶರಾವತಿ ಸಂತ್ರಸ್ಥರ ನೆರವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರೆಡೂ ಸಕಾರಾತ್ಮಕವಾಗಿ ಹೆಜ್ಜೆ ಇರಿಸಿದೆ. ಹಲವು ದಶಕಗಳಿಂದ ಇತ್ಯರ್ಥವಾಗದೇ ಉಳಿದಿದ್ದ ಶರಾವತಿ ಸಂತ್ರಸ್ಥರಿಗೆ ಪುನರ್ವಸತಿ ಹಾಗೂ ಬದುಕು ರೂಪಿಸುವಲ್ಲಿ ನ್ಯಾಯಾಲಯಕ್ಕೆ ಮಾಡಿದ ಮನವಿಯಂತೆ ಅಲ್ಲಿನ ಸಮೀಕ್ಷೆಗೆ ಚಾಲನೆ ನೀಡಿ ಆದೇಶ ಹೊರಡಿಸಿರುವುದು ಸಹಜವಾಗಿ ಎಲ್ಲರಲ್ಲೂ ಹರ್ಷ ಮೂಡಿಸಿದೆ ಎಂದರು.
ಈ ಸಂಬಂಧ ನ್ಯಾಯಾಲಯದ ಸೂಚನೆಯಂತೆ ಜಿಲ್ಲಾಡಳಿತ ಸರ್ವೇ ಕಾರ್ಯಕ್ಕೆ ಸದ್ಯದಲ್ಲೇ ಚಾಲನೆ ನೀಡಲಿದೆ. ಸಂತ್ರಸ್ಥರೂ ಕೂಡ ಸಮೀಕ್ಷಾ ಕಾರ್ಯಕ್ಕೆ ಬರುವ ಅಧಿಕಾರಿ-ಸಿಬ್ಬಂಧಿಗಳಿಗೆ ಸಲ್ಲದ ಅಡಚಣೆ ಮಾಡದಂತೆ ಸಹಕರಿಸುವಂತೆ ಮನವಿ ಮಾಡಿದ ಅವರು, ಪ್ರಸ್ತುತ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಂತೆ ಸಮೀಕ್ಷಾ ಕಾರ್ಯ ನಡೆಯಲಿದೆ. ನಂತರವೂ ಸಂತ್ರಸ್ಥ ಕುಟುಂಬಗಳಲ್ಲಿ ಅಹವಾಲುಗಳಿದ್ದಲ್ಲಿ ಅವುಗಳನ್ನು ಶಾಂತವಾಗಿ ಆಲಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಸಂತ್ರಸ್ಥರ ಹಿತಕಾಯುವ ನಿಟ್ಟಿನಲ್ಲಿ ಹಲವು ದಶಕಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು, ಇದೀಗ ತಾರ್ಕಿಕ ಅಂತ್ಯ ಕಾಣುವ ನಿರೀಕ್ಷೆ ಇದೆ. ಅಲ್ಲದೇ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು, ತಜ್ಞರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿತ್ತು. ಈ ಭಾಗದ ಜನರ ಸಮಸ್ಯೆಗಳನ್ನು ಆಲಿಸಿದ್ದ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ದೇಶದ ಸರ್ವೋಚ್ಛ ನ್ಯಾಯಾಲಯವೂ ಕೂಡ ನಿಗಧಿಪಡಿಸಿದ ಅತ್ಯಲ್ಪ 4-5 ಸಾವಿರ ಸಂಖ್ಯೆಯ ಜನರ ಸಮೀಕ್ಷೆಗೆ ಮುಂದಾಗಿತ್ತು. ಆದರೆ, ಇಲ್ಲಿನ ಜನರ ಒಕ್ಕೊರಲಿನ ಅಭಿಪ್ರಾಯವನ್ನು ರಾಜ್ಯ ಸರ್ಕಾರ ನೇಮಿಸಿದ ಸಮರ್ಥ ವಕೀಲರು ನ್ಯಾಯಾದೀಶರೆದುರು ವ್ಯವಸ್ಥಿತವಾಗಿ ಮಂಡಿಸಿದ ಪರಿಣಾಮವಾಗಿ ಸಂತ್ರಸ್ತರ 9000ಹೆಕ್ಟೇರ್‌ಪ್ರದೇಶದ ವ್ಯಾಪ್ತಿಯ ಹಳ್ಳಿಗಳು, ವಸತಿ ಪ್ರದೇಶಗಳು ಸೇರಿದಂತೆ ಸಮೀಕ್ಷೆಗೆ ಮುಂದಾಗಿರುವುದು ಸಂತೋಷವಾಗಿದೆ. ಈ ಸಮೀಕ್ಷೆ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡುವುದಾಗಿ ಅವರು ತಿಳಿಸಿದರು.
Madhu Bangarappa ಈ ಸಮೀಕ್ಷಾ ಕಾರ್ಯಕ್ಕೆ ಅತ್ಯಾಧುನಿಕವಾದ ಸಮೀಕ್ಷಾ ಪರಿಕರಗಳು, ಅಗತ್ಯ ಸಿಬ್ಬಂಧಿಗಳನ್ನು ನಿಯೋಜಿಸಲಾಗಿದೆ. ಸದ್ಯದಲ್ಲಿ ಸಮೀಕ್ಷೆ ಆರಂಭಗೊಳ್ಳಲಿದೆ. ಅದಕ್ಕಾಗಿ ವಿಭಾಗೀಯ ಶಾಖೆಯನ್ನು ಆರಂಭಿಸಲು ಸೂಚಿಸಲಾಗಿದೆ. ಸಂತ್ರಸ್ಥರು ವಾಗ್ವಾದಗಳಿಗೆ ಇಳಿಯದೇ ಸಹಕರಿಸಬೇಕು. ಮೂರು ತಿಂಗಳೊಳಗಾಗಿ ಪೂರ್ಣಗೊಳಿಸಲು ಕೋರಲಾಗಿದೆ ಎಂದ ಅವರು ಈ ಸಮೀಕ್ಷೆ ಇಂತಹ ಅನೇಕ ಸಂತ್ರಸ್ಥ ಭೂಪ್ರದೇಶಗಳಿಗೆ ಮಾಧರಿಯಾಗಿ ಉಳಿಯಲಿದೆ ಎಂದರು.
ನಗರದ ಈದ್ಗಾ ಮೈದಾನದ ಸಮಸ್ಯೆಯನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ. ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಕಾರ್ಯದರ್ಶಿಗಳು ಸೂಚಿಸಿದ್ದಾರೆ ಎಂದವರು ತಿಳಿಸಿದರು.
