Wednesday, March 4, 2026
Wednesday, March 4, 2026
Home Blog Page 345

Pace PU College Shivamogga ಶಿವಮೊಗ್ಗ ಪೇಸ್ ಕಾಲೇಜಿಗೆ ಉತ್ತಮ ಪಿಯು ಪರೀಕ್ಷಾ ಫಲಿತಾಂಶ

0

Pace PU College Shivamogga 2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ-1ಕ್ಕೆ ಹಾಜರಾದ ಶಿವಮೊಗ್ಗದ ಪೇಸ್ ಪಿಯು ಕಾಲೇಜಿನ ಒಟ್ಟು 624 ವಿದ್ಯಾರ್ಥಿಗಳಲ್ಲಿ 380 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 236 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು, 03 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದು 99.2% ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಕಾಲೇಜಿಗೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

Pace PU College Shivamogga ಈ ಸಾಧನೆಗೆ ಕಾಲೇಜಿನ ಟ್ರಸ್ಟಿಗಳು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

State Innovation and Technology Society ಶಿವಮೊಗ್ಗದ ರಾಘವೇಂದ್ರ ಅವರಿಗೆ “ಎಲಿವೇಟ್ -2024” ವಿಶೇಷ ಪ್ರಶಸ್ತಿ

0

State Innovation and Technology Society ರಾಜ್ಯ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್) ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಯಿಂದ ಬೆಂಗಳೂರಿನಲ್ಲಿ ನಡೆದ ಕರ‍್ಯಕ್ರಮದಲ್ಲಿ ಶಿವಮೊಗ್ಗ ನಗರದ ಆಕೃತಿ 3ಡಿ ಪ್ರೈವೇಟ್ ಲಿಮಿಟೆಡ್‌ಗೆ ರಾಜ್ಯದಲ್ಲಿಯೇ ಪ್ರಥಮ ಭಾರಿಗೆ ಎಲಿವೇಟ್ 2024 ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
State Innovation and Technology Society ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ್ ಅವರು ರಾಘವೇಂದ್ರರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಈ ಪ್ರತಿಭಾನ್ವಿತರು ರಾಘವೇಂದ್ರ ಅಸೋಸಿಯೇಷನ್‌ನ ಆಡಿಟರ್ ಸುರೇಂದ್ರ ಮತ್ತು ಶೋಭಾವತಿ ಅವರ ಪುತ್ರ.

Shri Mahavir Jayanti ಏಪ್ರಿಲ್ 10. ಜಿಲ್ಲಾಡಳಿತದಿಂದ ಶ್ರೀಮಹಾವೀರ ಜಯಂತಿ ಆಚರಣೆಗೆ ಸಿದ್ಧತೆ

0

Shri Mahavir Jayanti ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ ಸಮಾಜದ ವಿವಿಧ ಸಂಘಟನೆಗಳು, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಏ.10 ರ ಸಂಜೆ 4.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.

ಶಾಸಕ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪರವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

Shri Mahavir Jayanti ಶಿವಮೊಗ್ಗ ಡಿ.ವಿ.ಎಸ್. ಪಾಲಿಟೆಕ್ನಿಕ್ ಪ್ರಾಂಶುಪಾಲೆ ಶ್ರೀಮತಿ ಪೂರ್ಣಿಮ ಅಶೋಕಕುಮಾರ್‌ರವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಸ್ತುತ ಸಂಸತ್ ಭವನದಂತೆ ಅಂದಿನ ಅನುಭವ ಮಂಟಪ- ಡಾ.ಭೀಮ ಶಂಕರ ಜೋಷಿ

0

ಅಂದಿನ ಅನುಭವ ಮಂಟಪ ಇಂದಿಗೂ ಪ್ರಸ್ತುತ, ಸಂಸತ್ ಭವನ ಅಂದಿನ ರೀತಿಯಲ್ಲೆ ನಡೆದು ಬರುತ್ತಿದ್ದು, ವಿಶ್ವಸಾಹಿತ್ಯಕ್ಕೆ ವಚನ ಸಾಹಿತ್ಯ ಅತ್ಯುತ್ತಮ ಕೊಡುಗೆ ಎಂದು ಪ್ರೊ. ಡಾ. ಭೀಮಶಂಕರ ಜೋಶಿರವರು ಹೇಳಿದರು.

ಲಿಂಗಾಯತ ಧರ್ಮ ಮಹಾಸಭಾದಲ್ಲಿ ಜರುಗಿದ ದೇವೀರಪ್ಪ ಟ್ರಸ್ಟ್ ಪ್ರಾಯೋಜಿತ ರಾಗವಾಂಕ ರಚಿತ ಸಿದ್ದರಾಮ ಚರಿತೆಯ ಬಗ್ಗೆ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭು. ಆದರೆ ನಾಯಕ ಬಸವಣ್ಣ ಇವರು ವಚನ ಸಾಹಿತ್ಯವನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಬರೆದರಲ್ಲದೆ, ತಮ್ಮಂತೆ ಇತರರ ವಚನಗಳಿಗೂ ಗೌರವ ನೀಡಿದರು. ಆಸ್ಥಾನಕ್ಕೆ ಕರೆತಂದ ಸಿದ್ದರಾಮರ ಚರಿತ್ರೆಯನ್ನು ರಾಘವಾಂಕ ಒಂಬತ್ತು ಅಧ್ಯಯದಲ್ಲಿ, ಐದುನೂರ ಒಂಬತ್ತು ಕವಿತೆಗಳನ್ನು ಅತ್ಯುತ್ತಮವಾಗಿ ಬರೆದಿದ್ದಾರೆ ಓದಿ ಎಂದರು.

ಸುಗ್ಗವೆ-ಮುದ್ದರ ಮಗು ಗರ್ಭದಲ್ಲಿ ಇದ್ದಾಗಲೇ ರೇವಣಸಿದ್ದರು ಅತ್ಯಂತ ದೈವಭಕ್ತ ತಮಗೆ ಹುಟ್ಟುತ್ತಾನೆ. ಆದರೆ ಅವರನ್ನು ಬೇಟಿಮಾಡಲು ನನಗೆ ಸಾಧ್ಯವಿಲ್ಲ. ಆದ್ದರಿಂದ ಆತನ ಹೆರಲಿರುವ ತಮ್ಮ ಗರ್ಭಕ್ಕೆ ಈಗಲೇ ವಂದಿಸುತ್ತೇನೆ ಎಂದು ಭವಿಷ್ಯ ನುಡಿದಿದ್ದರಂತೆ. ಹಾಗೆಯೆ ದೂಳಿಮಾಃಕಾಳ ಎಂದು ಹೆಸರಿಡಲು ಸೂಚಿಸಿದ್ದರಂತೆ. ಅಂತೆಯೆ ಮಗು ಎಲ್ಲ ಮಕ್ಕಳಂತೆ ಇರದೆ, ಧನ ಕಾಯುವನಾದರು ದೈವಭಕ್ತನಾಗಿ ಪ್ರತಿದಿನ ಶಿವನ ಪೂಜೆ ಮಾಡಿ, ತಾಯಿ ಕೊಟ್ಟ ಗಂಜಿಯನ್ನೆ ನೈವೇದ್ಯ ಮಾಡುತ್ತಿದ್ದರಂತೆ. ಒಮ್ಮೆ ಶಿವ ಪರೀಕ್ಷೆ ಮಾಡಲು ಹುಡುಗನ ಬಳಿ ಬಂದು ನಾನು ಮಲ್ಲಪ್ಪ, ಶ್ರೀಶೈಲದಿಂದ ಬಂದಿದ್ದೇನೆ ಹಸಿವಾಗುತ್ತಿದೆ, ಊಟಕ್ಕೆ ಅವನ ಬಳಿಯಿದ್ದ ಗಂಜಿಯನ್ನು ಕೇಳಿದರಂತೆ, ಅದನ್ನು ಕುಡಿದು, ಇನ್ನೂ ಬೇಕು ಎಂದಾಗ ಅವರನ್ನು ಕುಳ್ಳರಿಸಿ ಮನೆಯಿಂದ ತರುವ ತನಕ ಎಲ್ಲಿಗೂ ಹೋಗ ಬಾರದೆಂದು ಹೇಳಿ, ಮನೆಗೆ ಹೋಗಿ ತರುವಾಗ ಇರದೇ ಇದ್ದಾಗ, ಮಲ್ಲಪ್ಪನನ್ನು ಹುಡುಕಿಕೊಂಡು ಶ್ರೀಶೈಲಕ್ಕೆ ಹೊರಟರಂತೆ ಎಂದು ಸಿದ್ದರಾಮರ ಚರಿತೆಯನ್ನು ವಿವರಿಸಿದರು.

ಕತ್ತಿಗೆ ಚನ್ನಪ್ಪರವರ ಗುಜರಾತ್ ನೋಟ ಪುಸ್ತಕ ಬಿಡುಗಡೆ ಮಾಡಿದ ಡಾ. ಅಶೋಕ್ ಪಾಳೇದ್ ಮಾತನಾಡಿ, ಅಭಿವೃದ್ಧಿ ಹೊಂದಿದ ರಾಷ್ಟ್ರದ ಪರಿಚಯ ಮಾಡಿಕೊಡುವಂತಿದೆ ಆ ಪ್ರೇಕ್ಷಣೀಯ ಸ್ಥಳಗಳು. ಎರಡು ಜೋತಿರ್ಲಿಂಗ, ವಲ್ಲಭ ಬಾಯ್ ಪ್ರತಿಮೆ ಹೀಗೆ ಅಲ್ಲಿ ನೋಡಬಹುದಾದ ಪ್ರೇಕ್ಷಣೀಯ ಸ್ಥಳಗಳ ಸ್ತೂಲ ಪರಿಚಯ ಅತ್ಯಂತ ಸೊಗಸಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಲಪ್ಪನವರು ಪ್ರತಿ ತಿಂಗಳು ರಾಷ್ಟ್ರೀಯ ಬಸವದಳ ಟ್ರಸ್ಟ್, ಕಲ್ಲಹಳ್ಳಿಯಲ್ಲಿ ಸಭೆ ಸೇರಲಾಗುತ್ತದೆ ಅಲ್ಲಿ ಮಹಾಮಹಿಮರ ಬಗ್ಗೆ ಉಪನ್ಯಾಸ ಏರ್ಪಡಿಸಲಾಗುತ್ತದೆ. ಇಂದು ಭೀಮಶಂಕರ್ ರವರು ಬಹಳ ಸವಿಸ್ತಾರವಾಗಿ ಸಿದ್ದರಾಮ ಚರಿತ್ರೆ ತಿಳಿಸಿದ್ದಾರೆ. ಹಿರಿಯ ನಾಗರೀಕರು ಅಂಜಿಕೊಂಡು ಕೂರಬಾರದು. ಇಂದಿನ ಯುವಕರಿಗೆ ಮಾದರಿಯಾಗಿ, ಅನುಭವ ಹಂಚಿಕೊಂಡಾಗ, ಮನಃಶಾಂತಿ ದೊರಕಿ ಜೀವನ ಸುಖಮಯವಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಂತಮ್ಮ ಪ್ರಾರ್ಥಿಸಿದರು, ತೀರ್ಥಲಿಂಗಪ್ಪ ಸ್ವಾಗತಿಸಿ, ಚಂದ್ರಶೇಖರ್ ವಂದಿಸಿದರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಕಲಿ ಗೋಲ್ಡ್ ಪ್ರಕರಣ ವಿವಿಧೆಡೆ ‘ಇಡಿ’ ದಾಳಿ

0

ಶಿವಮೊಗ್ಗದಲ್ಲಿ ಏಕಕಾಲಕ್ಕೆ ಏಳು ಪ್ರತ್ಯೇಕ ಸ್ಥಳಗಳಲ್ಲಿ ಇಡಿ ದಾಳಿ ನಡೆದಿದೆ.

ನಕಲಿ ಚಿನ್ನವನ್ನ ಅಡವಿಟ್ಟು ಹಣ ಪಡೆದು ಅನ್ಯ ಉದ್ದೇಶಕ್ಕೆ ಬಳಸಿರುವ ಆರೋಪದ ಮೇರೆಗೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ.

ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶೋಭಾ ನಿವಾಸ, ಬ್ಯಾಂಕ್ ಮಾಜಿ ಚಾಲಕ ಶಿವಕುಮಾರ್, ಹಾಲಿ ಜನರಲ್ ಮ್ಯಾನೇಜರ್ ನಾಗಭೂಷಣ್ ಮನೆ ಸೇರಿದಂತೆ ಏಳಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ.

30ಕ್ಕೂ ಹೆಚ್ಚು ವಾಹನಗಳಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಆಗಮಿಸಿ ದಾಖಲೆಗಳ ಪರಿಶೀಲನೆ ನಡೆಸಿದರು.

Actor Prakash Belawadi ಏಪ್ರಿಲ್ 9, ಶಿವಮೊಗ್ಗದಲ್ಲಿ ನಟ, ರಂಗಕರ್ಮಿ ಪ್ರಕಾಶ್ ಬೆಳವಾಡಿ ವಿಶೇಷ ಉಪನ್ಯಾಸ

0

Actor Prakash Belawadi ಶಿವಮೊಗ್ಗ ನಗರದ ಸಮಾನ ಮನಸ್ಕರ ವೇದಿಕೆ ಬಹುಮುಖಿಯ 50ನೇ ಕಾರ್ಯಕ್ರಮವಾಗಿ ನಾಡಿನ ಹೆಸರಾಂತ ಹಿರಿತೆರೆ-ಕಿರುತೆರೆ ಕಲಾವಿದ, ರಂಗಕರ್ಮಿ ಪ್ರಕಾಶ್ ಬೆಳವಾಡಿಯವರಿಂದ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿದೆ.
ಏ.09ರ ಬುಧವಾರ ಸಂಜೆ 05:30 ಕ್ಕೆ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಕಾಶ್ ಬೆಳವಾಡಿಯವರು ತಂತ್ರಜ್ಞಾನ ಮತ್ತು ರಂಗಭೂಮಿ ಕುರಿತು ಮಾತನಾಡಲಿದ್ದಾರೆ. ಜೊತೆಗೆ ರಂಗಾಸಕ್ತರು ಹಾಗೂ ಸಭಿಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಪರಿಚಯ
ಪ್ರಸ್ತುತ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ರಂಗಭೂಮಿಯಲ್ಲಿ ಪ್ರಕಾಶ್ ಬೆಳವಾಡಿಯವರದ್ದು ಪ್ರಮುಖ ಹೆಸರು, ಇವರು ಟಿವಿ ಹಾಗೂ ಸಿನಿಮಾ ರಂಗಗಳಲ್ಲಿ ದೇಶದಾದ್ಯಂತ ಪರಿಚಿತರು. ಅನೇಕ ಅಂತಾ ರಾಷ್ಟ್ರೀಯ ಕಮ್ಮಟ, ಸಮ್ಮೇಳನ ಹಾಗೂ ಸಿನಿಮಾ ಉತ್ಸವಗಳಲ್ಲಿ ಭಾಗವಹಿಸಿರುವ ಇವರು, ಕನ್ನಡ, ಹಿಂದಿ,ಮಲಯಾಳಂ, ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಸಿನಿಮಾ, ರಂಗಭೂಮಿ ಹಾಗೂ ಟಿವಿ ಕ್ಷೇತ್ರಗಳಿಗೆ ಸಲ್ಲುವ ಇವರಿಗೆ ಹಲವು ಪ್ರಶಸ್ತಿಗಳು ದೊರೆತಿವೆ. ಅವುಗಳಲ್ಲಿ ಮುಖ್ಯವಾಗಿ, ಇವರ ನಿರ್ದೇಶನದ ಪ್ರಥಮ ಇಂಗ್ಲಿಷ್ ಸಿನಿಮಾ ಸ್ಟಂಬಲ್‌ಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ರಾಜ್ಯ ಸರ್ಕಾರ ನೀಡುವ ಪ್ರತಿಭಾ ಭೂಷಣ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ನ್ಯೂಸ್ 18 ಟಿವಿ ವಾಹಿನಿಯ ವರ್ಷದ ಕನ್ನಡಿಗ (2015), ಆಸ್ಟ್ರೇಲಿಯಾದ ಹೆಲ್‌ಮನ್ ಪ್ರಶಸ್ತಿ ದೊರಕಿವೆ. ಹಲವರು ಇಂದಿಗೂ ಮೇಲುಕು ಹಾಕುವ ಇವರ ನಿರ್ದೇಶನದ ಟಿವಿ ಗರ್ವ ಧಾರವಾಹಿ ಹಲವು ಕಾರಣಗಳಿಗೆ ಬಹಳ ವಿಶಿಷ್ಟವಾದದ್ದು.
Actor Prakash Belawadi ಎಸ್. ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ಪರ್ವ ನಾಟಕ ಅನೇಕ ಕಾರಣಗಳಿಗಾಗಿ ಕನ್ನಡರಂಗ ಭೂಮಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದರೆ ತಪ್ಪಾಗಲಿಕ್ಕಿಲ್ಲ . ಈ ನಾಟಕದ ವಿಮರ್ಶೆ/ ಅನಿಸಿಕೆಯ ಬಗ್ಗೆ ಒಂದು ವಿಶೇಷ ಕಾರ್ಯಕ್ರಮವನ್ನು “ಬಹುಮುಖಿ” ಈ ಹಿಂದೆ ಆಯೋಜಿಸಿತ್ತು.
ರಂಗಾಸಕ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9449284495, 9845014229, 95380 20367ರಲ್ಲಿ ಸಂಪರ್ಕಿಸಬಹುದು.

Canara Bank Institute For Self-Employment ಟೈಲರಿಂಗ್, ಕುರಿ ಸಾಕಾಣಿಕೆ & ಟ್ಯಾಲಿ ಅಕೌಂಟಿಂಗ್ ಕಲಿಯಬೇಕೆ ? ಉಚಿತ ತರಬೇತಿ‌. ಆಸಕ್ತರಿಗೆ ಇಲ್ಲಿದೆ ಮಾಹಿತಿ

0

Canara Bank Institute For Self-Employment ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರು (ಶಿವಮೊಗ್ಗ ತಾಲ್ಲೂಕು) ಇಲ್ಲಿ ಉಚಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕ ಮತ್ತು ಯುವತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು ಮತ್ತು 8ನೇ ತರಗತಿ ಉತ್ತೀರ್ಣರಾಗಿರಬೇಕು. ಮತ್ತು ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿದು ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ.

ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಕೃಷಿ ಉದ್ಯಮಿ ( ಹೈನುಗಾರಿಕೆ, ಕುರಿ, ಎರೆಹುಳು ಗೊಬ್ಬರ ತಯಾರಿಕೆ ) 13 ದಿನಗಳ ತರಬೇತಿ ನೀಡಲಾಗುವುದು . ಈ ತರಬೇತಿಯು 15/04/2025ರಂದು ಆರಂಭಗೊಳ್ಳಲಿದೆ. ಕಂಪ್ಯೂಟರೈಸಡ್ (ಟ್ಯಾಲಿ) 38 ದಿನಗಳ ಅಕೌಂಟಿಂಗ್ ತರಬೇತಿಯು 28/04/2025 ರಿಂದ ಆರಂಭಗೊಳ್ಳಲಿದೆ.

6 ದಿನಗಳ ಕುರಿ ಸಾಕಾಣಿಕೆ ತರಬೇತಿಯು 23/04/2025 ರಿಂದ ಆರಂಭಗೊಳ್ಳಲಿದೆ.

ವಿಭಿನ್ನ ಶೈಲಿಯಾ ಬ್ಲೌಸ್ ಸ್ಟಿಚಿಂಗ್

( ಟೈಲರಿಂಗ್ ) ತರಬೇತಿಯು 6 ದಿನಗಳ ಕಾಲ ನಡೆಯಲಿದ್ದು , ಈ ತರಬೇತಿಯು 23/04/2025 ರಿಂದ ಪ್ರಾರಂಭಗೊಳ್ಳಲಿದೆ.
ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ:
ನಿರ್ದೇಶಕರು,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು-೫೭೭ ೨೧೬ (ಶಿವಮೊಗ್ಗ ತಾಲ್ಲೂಕು)
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9743429595, 9164411580, 8105378735 9449371579, 9481955721,
ಇವರನ್ನು ಸಂಪರ್ಕಿಸಬಹುದಾಗಿದೆ.

State Finance Commission ಸ್ಥಳೀಯ ಸಂಸ್ಥೆಗಳು ತಮ್ಮದೇ ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡಬೇಕು- ಡಾ.ಸಿ.ನಾರಾಯಣ ಸ್ವಾಮಿ

0


State Finance Commission ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಹಣಕಾಸು ಹಂಚಿಕೆ ಹಾಗೂ ಆಡಳಿತ ಸುಧಾರಣೆಗಾಗಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ 5ನೇ ರಾಜ್ಯ ಹಣಕಾಸು ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ.ಸಿ.ನಾರಾಯಣ ಸ್ವಾಮಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಎಲ್ಲ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕ ಹಣಕಾಸು ಹಂಚಿಕೆ ಮತ್ತು ಆಡಳಿತ ಸುಧಾರಣೆ ಈ ಎರಡು ಮುಖ್ಯ ಅಂಶಗಳ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ. 22 ಜಿಲ್ಲೆಗಳಲ್ಲಿ ಸಭೆ ನಡೆದಿದೆ. 2023 ರ ಅಕ್ಟೋಬರ್‌ಲ್ಲಿ ಆಯೋಗ ನೇಮಕವಾಗಿದ್ದು ಪ್ರಸಕ್ತ ಸಾಲಿನ ಜೂನ್ ಒಳಗೆ ಆಯೋಗವು ರಾಜ್ಯಪಾಲರಿಗೆ 5ನೇ ಹಣಕಾಸು ಶಿಫಾರಸುಗಳನ್ನು ಸಲ್ಲಿಸಲಿದೆ.
ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆಗಳು ಆಗಬೇಕು. ಹೀಗೆ ಆಗದಿರುವ ಕಾರಣ ಸಂಸ್ಥೆಗಳಿಗೆ ಮಂಜೂರಾದ ಹಣ ಬಿಡುಗಡೆ ಆಗಿಲ್ಲ. ಕಳೆದ ವರ್ಷದ ಅಂತ್ಯಕ್ಕೆ ಕೇಂದ್ರ ಹಣಕಾಸು ಆಯೋಗದಿಂದ ರೂ.2100 ಕೋಟಿ ಹಣವನ್ನು ತಡೆ ಹಿಡಿಯಲಾಗಿದೆ. 2026 ರ ಮಾರ್ಚ್ ಅಂತ್ಯಕ್ಕೆ 15 ನೇ ಹಣಕಾಸು ಆಯೋಗದ ಅವಾರ್ಡ್ ಅವಧಿ ಮುಗಿಯಲಿದೆ.

ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದರೆ ಅನುದಾನ ಬಳಕೆ ಮಾಡಬಹುದು. 5 ನೇ ರಾಜ್ಯ ಹಣಕಾಸು ಆಯೋಗ ಸಹ ಸ್ವಲ್ಪ ತಡವಾಗಿ ನೇಮಕವಾಗಿದೆ. ಆಯೋಗವು ಸರ್ಕಾರಕ್ಕೆ ಈಗಾಗಲೇ 2024 ರ ಫೆಬ್ರವರಿ 19 ಕ್ಕೆ ವರದಿ ಸಲ್ಲಿಸಿದ್ದು ಸಮಾಲೋಚನಾ ಸಭೆಗಳ ನಂತರ ಜೂನ್ ಒಳಗೆ ಅಂತಿಮ ಶಿಫಾರಸುಗಳನ್ನು ಸಲ್ಲಿಸಲಿದೆ.

ಸ್ಥಳೀಯ ಸಂಸ್ಥೆಗಳಲ್ಲಿ ಬಹಳ ಮುಖ್ಯವಾಗಿ ತಾಂತ್ರಿಕ, ವೃತ್ತಿಪರ ನೇಮಕಗಳು ಆಗಬೇಕು. ಗ್ರಾ.ಪಂ ಗಳಲ್ಲಿ ಅಭಿವೃದ್ದಿಗಾಗಿ ಮೀಸಲಾದ ಹಣವನ್ನು ವಿದ್ಯುತ್ ಪಾವತಿಗೆ ಬಳಸಲಾಗುತ್ತಿದೆ. ಸುಮಾರು ರೂ.8000 ಕೋಟಿ ಅಭಿವೃದ್ದಿಯ ಹಣವನ್ನು ವಿದ್ಯುತ್ ಬಿಲ್ ಪಾವತಿಗೆ ಖರ್ಚು ಮಾಡಲಾಗಿದೆ.

ಆದ್ದರಿಂದ ಸರ್ಕಾರ 2023 ರ ಮಾರ್ಚ್ ಅಂತ್ಯಕ್ಕೆ ಎಲ್ಲ ಸ್ಥಳೀಯ ಸಂಸ್ಥೆಗಳ ಬೇಬಾಕಿ ವಿದ್ಯುತ್ ಬಿಲ್‌ನ್ನು ಮನ್ನಾ ಮಾಡಿ ಶೂನ್ಯ ಬಿಲ್ ತೋರಿಸಲು ಆದೇಶಿಸಿದ್ದು, ಹಲವೆಡೆ ವಿದ್ಯುತ್ ಶುಲ್ಕ ಮರು ಹೊಂದಾಣಿಕೆ ಸಾಧ್ಯವಾಗಿಲ್ಲ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಬಿಲ್‌ಗೆ ಹೆಚ್ಚಿನ ಹಣ ಪಾವತಿಯಾಗುತ್ತಿದ್ದು. ಇಓ ಗಳು ವಿದ್ಯುತ್ ಇಲಾಖೆಯೊಂದಿಗೆ ವಿದ್ಯುತ್ ಶುಲ್ಕ ಮರು ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಜವಾಬ್ದಾರಿ ವಹಿಸಿ ಕೆಲಸ ಮಾಡಬೇಕು ಎಂದರು.

ಕರಾವಳಿ ಪ್ರದೇಶ, ಮಲೆನಾಡು ಭಾಗಕ್ಕೆ ಆಯೋಗವು ಹೆಚ್ಚುವರಿಯಾಗಿ ಶೇ.1 ರಷ್ಟು ಅನುದಾನ ನೀಡಲು ಶಿಫಾರಸು ಮಾಡಲಿದೆ. ಹಾಗೂ ಸ್ಥಳೀಯ ಸಂಸ್ಥೆಗಳು ತಮ್ಮದೇ ಸಂಪನ್ಮೂಲ ಕ್ರೋಢೀಕರಣ ಮಾಡುವುದಕ್ಕೆ ಆದ್ಯತೆ ನೀಡಬೇಕು. ವಿದ್ಯುತ್ ಬಿಲ್ ಬಾಕಿಯಿಂದ ಅನೇಕ ಕೊಳವೆ ಬಾವಿ, ಬೋರ್‌ವೆಲ್‌ಗಳು ನಿಷ್ಕಿçಯಗೊಂಡಿವೆ. ಅಭಿವೃದ್ದಿ ಹಣ ಅದಕ್ಕಾಗಿಯೇ ಉಪಯೋಗವಾಗಬೇಕು. ಆದ್ದರಿಂದ ವಿದ್ಯುತ್ ಬಿಲ್ ಬೇಬಾಕಿ ಮನ್ನಾ ಹೊಂದಾಣಿಕೆ ಬಗ್ಗೆ ಕ್ರಮ ವಹಿಸಬೇಕು ಹಾಗೂ ವಿದ್ಯುತ್ ಬಾಕಿ ಬಿಲ್ ಕುರಿತು ಅಧಿಕಾರಿಗಳು ಅಧ್ಯಯನ ಮಾಡಿ ಟಿಪ್ಪಣಿ ನೀಡಿದರೆ ಅನುಕೂಲವಗುತ್ತದೆ. ಎಸ್ಕಾಂ ಗಳು ಕೆಇಆರ್‌ಸಿ(ಕರ್ನಾಟಕ ಎಲೆಕ್ಟ್ರೀಸಿಟಿ ರೆಗ್ಯುಲೇಟರಿ ಕಮಿಷನ್) ಪ್ರಕಾರ ಬಿಲ್ ಮಾಡಬೇಕು. ಜಿ.ಪಂ ಸಿಇಓ ಗಳು ಸಹ ಬಿಲ್‌ನ್ನು ಪರಿಶೀಲಿಸಬೇಕೆಂದು ಸಲಹೆ ನೀಡಿದರು.

ತೂದೂರು ಗ್ರಾ.ಪಂ ಅಧ್ಯಕ್ಷರಾದ ಭುಜಂಗ ಮಾತನಾಡಿ, ಗ್ರಾ.ಪಂ ಗಳು ಕುಡಿಯುವ ನೀರು ನಿರ್ವಹಣೆಯನ್ನು ಸ್ವಂತ ಲಭ್ಯ ಅನುದಾನದಿಂದ ಮಾಡುತ್ತಿವೆ. ವಿದ್ಯುತ್ ಶುಲ್ಕ ಮರುಹೊಂದಾಣಿಕೆ ಸಮರ್ಪಕವಾಗಿ ಆಗುತ್ತಿಲ್ಲ. ಹೆಚ್ಚುವರಿ ಶುಲ್ಕಗಳನ್ನು ಕಡಿತಗೊಳಸಲು ಮತ್ತು ಪ್ರತಿ ಸ್ಥಾವರಕ್ಕೆ ವಿವರವಾದ ಪ್ರತ್ಯೇಕ ಬಿಲ್ಲುಗಳನ್ನು ನೀಡಿದರೆ ಗ್ರಾ.ಪಂ ಗಳಿಗೆ ಅನುಕೂಲವಾಗುತ್ತದೆ. ಮಲೆನಾಡು ಭಾಗದಲ್ಲಿ ಸರ್ಕಾರಿ ಜಾಗದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡಿ ಸಕ್ರಮಗೊಳಿಸಿದಲ್ಲಿ ತೆರಿಗೆ ಸಂಗ್ರಹ ಹೆಚ್ಚಿಸಬಹುದು. ಗ್ರಾಮಾಠಾಣಾ ಒತ್ತುವರಿಗೆ ಕಡಿವಾಣ, ಬಾಪೂಜಿ ಕೇಂದ್ರಗಳಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶ, ಮಲೆನಾಡು ಭಾಗಕ್ಕೆ ವಿಶೇಷ ಅನುದಾನ, ಎನ್‌ಆರ್‌ಎಲ್‌ಎಂ ಯೋಜನೆಯಡಿ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಿದರೆ ಒಳಿತಾಗುತ್ತದೆ ಎಂದ ಅವರು ಗ್ರಾ.ಪಂ ಆದಾಯ ಹೆಚ್ಚಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮತ್ತು ಇತರೆ ಸುಧಾರಣಾ ಕ್ರಮಗಳ ಬಗ್ಗೆ ತಿಳಿಸಿದರು.


State Finance Commission ತೀರ್ಥಹಳ್ಳಿ ಪ.ಪಂ ಅಧ್ಯಕ್ಷರು ಮಾತನಾಡಿ, ಮಲೆನಾಡಿನಲ್ಲಿ ಗುಡ್ಡಗಾಡು ಪ್ರದೇಶ ಹೆಚ್ಚಿದ್ದು ಪೌರ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಬೇಕು. ಜೆಜೆಎಂ ಅಡಿಯಲ್ಲಿ ರೂ.1 ಕೋಟಿ ಹೆಚ್ಚುವರಿ ಅನುದಾನ ನೀಡಬೇಕೆಂದು ಕೋರಿದರು. ಭದ್ರಾವತಿ ನಗರ ಸಭೆ ಉಪಾಧ್ಯಕ್ಷರು, ಹೆಚ್ಚಿನ ಅನುದಾನ ನೀರು, ವಿದ್ಯುತ್ ಮತ್ತು ಸಿಬ್ಬಂದಿ ವೇತನಕ್ಕೆ ವಿನಿಯೋಗವಾಗುತ್ತಿದೆ. ನಗರಸಭೆ ಮಳಿಗೆಗಳು ಸುಮಾರು 50 ಖಾಲಿ ಇದ್ದು ನಿಯಮಾವಳಿ ಸಡಿಲಿಸಿದಲ್ಲಿ ಅನುಕೂಲವಾಗುತ್ತದೆ. ಹಾಗೂ ಜನರಿಗೆ ಮೊಬೈಲ್‌ನಲ್ಲೇ ತಮ್ಮ ಕಂದಾಯ ಕುರಿತು ತಿಳಿದು ಆನ್‌ಲೈನ್‌ನಲ್ಲಿ ಪಾವತಿ ಮಾಡಲು ಅವಕಾಶ ಮಾಡಬೇಕೆಂದು ಕೋರಿದರು.

ಸಾಗರ ನಗರಸಭೆ ಅಧ್ಯಕ್ಷರು 500 ಜನರಿಗೆ ಓರ್ವ ಪೌರ ಕಾರ್ಮಿಕರನ್ನು ನೇಮಿಸಲು ಅವಕಾಶ ಮಾಡುವಂತೆ, ಜೋಗ ಕಾರ್ಗಲ್ ಪ.ಪಂ ಯಲ್ಲಿ ಅನುದಾನ ಲಭ್ಯತೆ ಕಡಿಮೆ ಇರುವ ಕಾರಣ ಎಸ್‌ಎಫ್‌ಸಿ ಅಡಿಯಲ್ಲಿ ಹೆಚ್ಚುವರಿ ಅನುದಾನ ನೀಡುವಂತೆ ಕೋರಿದರು. ಹೀಗೆ ವಿವಿಧ ಸ್ಥಳೀಯ ಸಂಸ್ಥೆಗಳು, ವಿದ್ಯುತ್ ಬಿಲ್ ಪಾವತಿ, ಹೆಚ್ಚುವರಿ ಪೌರ ಕಾರ್ಮಿಕರ ನೇಮಕ, ತ್ಯಾಜ್ಯ ನಿರ್ವಹಣೆ, ಆಸ್ತಿ ತೆರಿಗೆ ಸಂಗ್ರಹ ಇತರೆ ವಿಷಯ ಕುರಿತು ಚರ್ಚಿಸಿದರು.

ಹೊಸನಗರ ಪ.ಪಂ ಸದಸ್ಯರು ಮಾತನಾಡಿ, ತಮ್ಮಲ್ಲಿ ಮಳೆ ಹೆಚ್ಚು. ರಸ್ತೆ, ಚರಂಡಿ ಪದೇ ಪದೇ ಹಾಳಾಗುತ್ತವೆ. ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇದ್ದು ಹೆಚ್ಚುವರಿ ಕಾರ್ಮಿಕರನ್ನು ಒದಗಿಸಬೇಕು ಹಾಗೂ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಮಾಡಲು ಅವಕಾಶ ಮಾಡಬೇಕೆಂದರು
ಜಿ.ಪಂ ಸಿಇಓ ಎನ್ ಹೇಮಂತ್ ಮಾತನಾಡಿ, ಮಲೆನಾಡು ಭಾಗದಲ್ಲಿ ಅದರದ್ದೇ ಆದ ಸಮಸ್ಯೆಗಳಿರುವ ಕಾರಣ ವಿಶೇಷವಾಗಿ ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ. ಜೆಜೆಎಂ ಯೋಜನೆ ಬಂದ ನಂತರ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ವಿದ್ಯುತ್ ಬಿಲ್ ಹೆಚ್ಚು ಬರುತ್ತಿದೆ. ದಂಡವೇ ಸುಮಾರು ರೂ.50 ಸಾವಿರದಿಂದ 1 ಲಕ್ಷದವರೆಗೆ ಬರುತ್ತಿದೆ. ಕೆಲವೆಡೆ ಬೇಬಾಕಿ ಹೊಂದಾಣಿಕೆ ಸಮರ್ಪಕವಾಗಿ ಆಗಿಲ್ಲ. ತ್ರೈಮಾಸಿಕವಾಗಿ ಹೊಂದಾಣಿಕೆ ಸರಿ ಹೋಗಬೇಕಿದೆ ಈ ನಿಟ್ಟಿನಲ್ಲಿ ಒಂದು ವಿದ್ಯುತ್ ಮಂಡಳಿಯಿಂದ ಒಂದು ಸ್ಪಷ್ಟವಾದ ಎಸ್‌ಓಪಿ ಬಂದರೆ ಒಳ್ಳೆಯದು ಎಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ವೃಂದ ನೇಮಕಾತಿ, ತರಬೇತಿ, ಆಸ್ತಿ ತೆರಿಗೆಗೆ ಜಿಪಿಎಸ್ ಸರ್ವೇ, ಟ್ರೇಡ್ ಲೈಸೆನ್ಸ್ ಅಭಿಲೇಖಾಲಯ ನಿರ್ವಹಣೆ, ಇ-ಆಫೀಸ್, ಕೆರೆ ಕಟ್ಟೆ ನಿರ್ವಹಣೆ, ಆರೋಗ್ಯ, ಶಿಕ್ಷಣ, ಅಂಗನವಾಡಿ, ಶಾಲಾ ಕಾಲೇಜು ನಿರ್ವಹಣೆ, ಸ್ಮಶಾನ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ, ಪೌರ ಕಾರ್ಮಿಕರ ವೇತನ, ಇತರೆ ವಿಷಯಗಳ ಕುರಿತು ಸ್ಥಳೀಯ ಸಂಸ್ಥೆಗಳ ಕಾರ್ಯ ನಿರ್ವಹಣೆ ಸುಧಾರಣೆ ಕುರಿತು ವಿವರಣೆ ನೀಡಿದರು.

ಅಧ್ಯಕ್ಷರು, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆಗಳು ನಡೆಯಬೇಕು. ಈ ಕುರಿತು ವರದಿಯಲ್ಲಿ ತೀವ್ರವಾಗಿ ಹೇಳಲಾಗುತ್ತದೆ ಹಾಗೂ ಸ್ಥಳೀಯ ಸಂಸ್ಥೆಗಳ ವಿದ್ಯುತ್ ಶುಲ್ಕ ಕುರಿತು ಸಹ ಸರ್ಕಾರದ ಗಮನಕ್ಕೆ ತರಲಾಗುವುದು. ಗ್ರಾ.ಪಂ ಗಳು ವಿದ್ಯುತ್ ದೀಪಗಳಿಗೆ ಮೀಟರ್ ಅಳವಡಿಸುವ ಕುರಿತು ಒತ್ತಾಯ ಮಾಡಬೇಕು. ವಿದ್ಯುತ್ ಶುಲ್ಕ ಮರು ಹೊಂದಾಣಿಕೆ ಮಾಡಿಕೊಳ್ಳಬೇಕು. ಇದರಲ್ಲಿ ಇಓ ಗಳ ಪಾತ್ರ ಮುಖ್ಯವಾಗಿರುತ್ತದೆ ಎಂದರು.

ಆಯೋಗದ ಸದಸ್ಯರಾದ ಆರ್.ಎಸ್.ಕೋಂಡೆ ಮಾತನಾಡಿ, ಸ್ಥಳೀಯ ಸಂಸ್ಥೆಗಳ ವಿದ್ಯುತ್ ಭಾರ ಇಳಿಸುವ, ಬಿಲ್ ಕಡಿತಗೊಳಿಸುವ ಕುರಿತು ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಧ್ಯಯನ ಮಾಡಿ ಟಿಪ್ಪಣಿ ನೀಡಿದರೆ ಪರಿಶೀಲಿಸಿ ಶಿಫಾರಸು ಮಾಡಲಾಗುವುದು ಎಂದರು.

ಸಭೆಯಲ್ಲಿ ಆಯೋಗದ ಸದಸ್ಯರಾದ ಮೊಹಮ್ಮದ್ ಸನಾವುಲ್ಲಾ, ಸಮಾಲೋಚಕರಾದ ಎಂ.ಕೆ.ಕೆಂಪೇಗೌಡ, ಸುಪ್ರಸನ್ನ, ಯಾಲಕ್ಕಿಗೌಡ, ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಚಿತ್ರದುರ್ಗ ಜಿ ಪಂ ಸಿಇಒ ಎಸ್ ಜೆ ಸೋಮಶೇಖರ್, ಎರಡು ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು

Bapuji Institute of Hi-Tech Education ಕೃತಕ ಬುದ್ಧಿಮತ್ತೆಯಿಂದಾಗಿಪ್ರಸಕ್ತ ವರ್ಷದಲ್ಲಿ 85 ಮಿಲಿಯನ್ ಉದ್ಯೋಗ ಸೃಷ್ಟಿ-ಡಾ.ಜಿ.ರಂಗರಾಜ್

0

Bapuji Institute of Hi-Tech Education ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕೃತಕ ಬುದ್ಧಿಮತ್ತೆಯಿಂದಾಗಿ 85 ಮಿಲಿಯನ್ ಉದ್ಯೋಗಗಳು ಹೋಗುವ ಅಂದಾಜಿದ್ದರೂ ಆತಂಕ ಪಡಬೇಕಾದ ಕಾರಣವಿಲ್ಲ, ಏಕೆಂದರೆ ಇದು 97 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ ಎಂದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ಅತಿಥಿ ಉಪನ್ಯಾಸಕ ಡಾ. ರಂಗರಾಜ್. ಜಿ. ಅಭಿಪ್ರಾಯಪಟ್ಟರು.

ಅವರಿಂದು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ನ ವಾಣಿಜ್ಯ ವಿಭಾಗದ ವತಿಯಿಂದ ಏರ್ಪಾಡಾಗಿದ್ದ ರಾಜ್ಯಮಟ್ಟದ ವಿದ್ಯಾರ್ಥಿಗಳ ಪ್ರಬಂಧ ಮಂಡನೆ ವಿಚಾರ ಸಂಕಿರಣ ‘ಪ್ರಜ್ಞಾ’ದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಮಾಹಿತಿಗಳ ಮಹಾಪೂರದ ವಿಶ್ಲೇಷಣೆ ಇಲ್ಲದೆ ವಾಣಿಜ್ಯ ಮತ್ತು ನಿರ್ವಹಣೆ ಸಾಧ್ಯವಿಲ್ಲ, ದೊಡ್ಡ ಪ್ರಮಾಣದ ಮಾಹಿತಿ ಹಾಗೂ ಅಂಕಿ ಅಂಶಗಳನ್ನು ಕೃತಕ ಬುದ್ಧಿಮತ್ತೆಯು ಸುಲಭವಾಗಿ ಕ್ಷಿಪ್ರವಾಗಿ ವಿಶ್ಲೇಷಿಸಬಲ್ಲದು, ಕೃತಕ ಬುದ್ಧಿಮತ್ತೆಯಲ್ಲಿ ಯಂತ್ರಗಳು ಹೊಸಹೊಸದನ್ನು ಸ್ವಯಂ ಕಲಿತು ಮಾಡಬಲ್ಲವಾಗಲಿವೆ, ಆರ್ಥಿಕತೆ, ಉತ್ಪಾದನೆ, ಮಾರುಕಟ್ಟೆ, ಮಾನವ ಸಂಪನ್ಮೂಲ ಹಾಗೂ ಉದ್ಯೋಗ ಎಲ್ಲ ಕ್ಷೇತ್ರದಲ್ಲೂ ನುರಿತ ಸಲಹೆಗಾರರಾಗಿ ಯಂತ್ರಮಾನವರು ಬರಲಿದ್ದಾರೆ, 407 ಬಿಲಿಯನ್ ಡಾಲರ್ ಅಂದರೆ ಸುಮಾರು 35 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ವಾರ್ಷಿಕ ಮಾರುಕಟ್ಟೆಯನ್ನು ಕೃತಕಬುದ್ಧಿಮತ್ತೆ ಹೊಂದಲಿದೆ, ಮಾನವರು ಬದಲಾಗಲು ಬಯಸದಿದ್ದರೂ, ಒಪ್ಪದಿದ್ದರೂ ತಂತ್ರಜ್ಞಾನಗಳು ಬದಲು ಮಾಡುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆಯ ಬಗ್ಗೆ ವಿದ್ಯಾರ್ಥಿಗಳೇ ಬರೆದ ಪ್ರಬಂಧಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಂಶುಪಾಲ ಡಾ. ಬಿ. ವೀರಪ್ಪನವರು ವಾಣಿಜ್ಯ ವಿದ್ಯಾರ್ಥಿಗಳು ಪಠ್ಯಜ್ಞಾನದ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ದೈನಂದಿನ ಔದ್ಯಮಿಕ ವಿದ್ಯಮಾನಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದರು.

Bapuji Institute of Hi-Tech Education ಸ್ವಾಗತ ಕೋರುತ್ತಾ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ರಾಜ್ಯ ಮಟ್ಟದ ಈ ವಿಚಾರ ಸಂಕಿರಣದಲ್ಲಿ ವಿವಿಧ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು 65ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದರು.

ವಿಚಾರ ಸಂಕಿರಣದ ವಿವರಗಳನ್ನು ಜ್ಞಾನೇಶ್ವರ ಸುಳಕೆ ನೀಡಿದರು. ತೀರ್ಪುಗಾರರಾಗಿ ಡಾ.ವಾಸುದೇವ ನಾಯಕ್, ಡಾ.ಸುಜಿತ್ ಕುಮಾರ್ ಎಸ್ ಹೆಚ್, ಡಾ. ಶ್ರುತಿ ಮಾಕನೂರು, ಡಾ. ಪ್ರಕಾಶ್ ಅಳಲಗೇರಿ, ಮೊಹಮ್ಮದ್ ಮುಂತಕ್ವೀಮ್, ಡಾ.ವಿನಾಯಕ ಪಾಟೀಲ್,ಡಾ.ರಮೇಶ್ ಚಂದ್ರಹಾಸ, ವಿಶಾಲ್ ಬೆಂಚಳಿ ಮುಂತಾದವರು ಆಗಮಿಸಿದ್ದು, ಅದಿಲ್ ಅತ್ತರ್ ಹಾಗೂ ಲಕ್ಷ್ಮಿ ಆರ್. ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಸ್ಫೂರ್ತಿ ಸಿ ಕೆ, ಪ್ರಜ್ಞಾ ಎನ್ ಸಿ ಹಾಡಿದರೆ ಅತಿಥಿಗಳ ಪರಿಚಯವನ್ನು ಜಿ ವೈಷ್ಣವಿ ಮಾಡಿದರು. ವಿಚಾರ ಸಂಕಿರಣದ ನಿರ್ವಹಣೆಯನ್ನು ಬಿ ಬಿ ಮಂಜುನಾಥ, ಶ್ವೇತಾ ಬಿ ವಿ, ಲತಾ ಓ ಹೆಚ್, ನಾಗರಾಜ ಎಂ ಎಸ್, ಮಂಜುಳಾ ಎ ಎನ್, ನರೇಂದ್ರ ಡಿ ಆರ್, ಪ್ರಜ್ವಲ್ ಎ ಆರ್ ಮಾಡಿದರು. ಪ್ರಜ್ಞಾ ಪಾಟೀಲ್ ವಂದನೆ ಸಲ್ಲಿಸಿದರು.

-ಚಿತ್ರ ಹಾಗೂ ವರದಿ: ಡಾ. ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು-

World Health Day ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು- ಬೆನಕಪ್ಪ

0

World Health Day ವಿಶ್ವ ಆರೋಗ್ಯ ದಿನದ ಅಂಗವಾಗಿ ಮಾಚೇನಹಳ್ಳಿ ಕೈಗಾರಿಕೆಗಳ ಸಂಘ ಮತ್ತು ಶಿವಮೊಗ್ಗದ ಚಂದ್ರಗಿರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಮಾಚೇನಹಳ್ಳಿ, ನಿಧಿಗೆ ಮತ್ತು ಜೇಡಿಕಟ್ಟೆ ಕೈಗಾರಿಕಾ ಪ್ರದೇಶಗಳಲ್ಲಿರುವ ಕಾರ್ಖಾನೆಗಳ ಸಿಬ್ಬಂದಿಗಳಿಗೆ ಮತ್ತು ಕಾರ್ಮಿಕರಿಗೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್ ರುದ್ರೇಗೌಡರ ಮಾರ್ಗದರ್ಶನದಂತೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕಾರ್ಖಾನೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬಹುದಾದ ಪ್ರಥಮ ಚಿಕಿತ್ಸಾ ವಿಧಾನಗಳ ಬಗ್ಗೆ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ಮಾಚೇನಹಳ್ಳಿ ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷ ಬೆನಕಪ್ಪ, ಮನುಷ್ಯನಿಗೆ ಆರೋಗ್ಯ ಅತ್ಯಂತ ಅವಶ್ಯಕ. ಹಾಗಾಗಿ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಪ್ರಸ್ತುತ ದಿನಮಾನದಲ್ಲಿ ಆರೋಗ್ಯದ ಬಗ್ಗೆ ಎಷ್ಟು ಜಾಗೃತರಾಗಿದ್ದರೂ ಸಾಲದು ಎಂದು ಹೇಳಿದರು.

ಶಿಬಿರದಲ್ಲಿ ಸುಮಾರು 300 ಜನರಿಗೆ ಮಧುಮೇಹ, ರಕ್ತದೊತ್ತಡ, ಇ ಸಿ ಜಿ ಮುಂತಾದ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ಮತ್ತು ಸುಮಾರು 70 ಜನರು ಜಾಗೃತಿ ಶಬಿರದಲ್ಲಿ ಭಾಗವಹಿಸಿದ್ದರು. ಚಂದ್ರಗಿರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸಂಗಮೇಶ್ ಮತ್ತು ಡಾ. ಮೇಘಾರವರು ಪ್ರಾತ್ಯಕ್ಷಿಕೆಗಳ ಮೂಲಕ ನೆರೆದವರ ಮನ ಮುಟ್ಟುವಂತೆ ವಿವರಿಸಿದರು.

ಈ ಸಂದರ್ಭದಲ್ಲಿ ಮಾಚೇನಹಳ್ಳಿ ಕೈಗಾರಿಕೆಗಳ ಸಂಘದ ವತಿಯಿಂದ ಚಂದ್ರಗಿರಿ ಆಸ್ಪತ್ರೆಯ ಡಾ. ಸಂಗಮೇಶ್, ಡಾ. ಮೇಘಾ.ವಿ, ಡಾ. ಮೇಘನಾ ಮತ್ತು ಇತರೆ ಸಹಾಯಕ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

World Health Day ಮಾಚೇನಹಳ್ಳಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಖಜಾಂಚಿ ದಿನೇಶ್.ಹೆಚ್.ಎಲ್, ನಿರ್ದೇಶಕರುಗಳಾದ ಸೌರಭ್, ಸಂಜಯ್ ಪಾಟೀಲ್, ಸುರೇಂದ್ರ ಮತ್ತು ವಿವಿಧ ಕಾರ್ಖಾನೆಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.