Wednesday, March 4, 2026
Wednesday, March 4, 2026
Home Blog Page 344

Dr Ambedkar’s birth anniversary celebration ಏಪ್ರಿಲ್ 14. ಬಾಬಾಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆಗೆ ಸಕಲ ಸಿದ್ಧತೆ

0

Dr Ambedkar’s birth anniversary celebration ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏ.14 ರ ಬೆಳಗ್ಗೆ 11.00ಕ್ಕೆ ನಗರದ ಡಾ|| ಬಿ.ಆರ್. ಅಂಬೇಡ್ಕರ್ ಭವನ, ಗಾಂಧಿ ಪಾರ್ಕ್ ಹತ್ತಿರ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ|| ಬಿ.ಆರ್ ಅಂಬೇಡ್ಕರ್‌ರವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರ ಉಪಸ್ಥಿತಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್.ಸಿ.ಮಹಾದೇವಪ್ಪ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಭದ್ರಾವತಿ ಕ್ಷೇತ್ರ ಶಾಸಕ ಬಿ.ಕೆ.ಸಂಗಮೇಶ್ವರ ಮತ್ತು ಕರ್ನಾಟಕ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷರು ಹಾಗೂ ಸಾಗರ ಕ್ಷೇತ್ರ ಶಾಸಕ ಬೇಳೂರು ಗೋಪಾಲಕೃಷ್ಣ ಇರವರುಗಳು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.

ಶಾಸಕ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

Dr Ambedkar’s birth anniversary celebration ಅಂದು ಬೆಳಗ್ಗೆ 8.30ಕ್ಕೆ ಮಹಾನಗರ ಪಾಲಿಕೆಯ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಜನೆ ಹಾಗೂ ಬೆಳಗ್ಗೆ 9.00 ಕ್ಕೆ ಸೈನ್ಸ್ ಮೈದಾನದಿಂದ ಡಾ|| ಬಿ.ಆರ್. ಅಂಬೇಡ್ಕರ್ ಭವನದವರೆಗೆ ಡಾ|| ಬಿ.ಆರ್. ಅಂಬೇಡ್ಕರ್‌ರವರ ಭಾವಚಿತ್ರ ಮೆರವಣಿಗೆ ಆಯೋಜಿಸಲಾಗಿದೆ.

ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿರುವ ಪ್ರೊ ಮೇಟಿ ಮಲ್ಲಿಕಾರ್ಜುನರವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ

Department of Social Welfare ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೀಡುವ ನೂತನ ವಾಹನಗಳ ಲೋಕಾರ್ಪಣೆ

0

Department of Social Welfare ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಿ.ಸಿ.ಆರ್.ಇ. ಪೊಲೀಸ್ ಠಾಣೆಗಳಿಗೆ ನೀಡಲಾಗುವ ನೂತನ ವಾಹನಗಳನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಸಮ್ಮುಖದಲ್ಲಿ ವಿಧಾನ ಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗದಲ್ಲಿ ಲೋಕಾರ್ಪಣೆಗೊಳಿಸಿಲಾಯಿತು.

Department of Social Welfare ಈ ಸಂದರ್ಭದಲ್ಲಿ, ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ ಡಾ. ಅಲೋಕ್ ಮೋಹನ್, ಸಿ.ಐ.ಡಿ ವಿಭಾಗದ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಹಿತೇಂದ್ರ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೆ. ಅರುಣ್‌ ಚಕ್ರವರ್ತಿ, ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ. ಹರೀಶೇಖರನ್, ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೌಮೇಂದು ಮುಖರ್ಜಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Yuvanidhi Scheme ಯುವನಿಧಿ ಯೋಜನೆ ಬಗ್ಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಪ್ರಕಟಣೆ

0

Yuvanidhi Scheme ಕರ್ನಾಟಕ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಯುವನಿಧಿಗೆ 2022-23 ರಲ್ಲಿ ಹಾಗೂ ನಂತರದ ಸಾಲಿನಲ್ಲಿ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ತೇರ್ಗಡೆಯಾದ ಉದ್ಯೋಗ ಸಿಗದೆ, ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯದೆ ಇರುವ ಅರ್ಹ ಅಭ್ಯರ್ಥಿಗಳಿಗೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಮಾಸಿಕವಾಗಿ ಸಲ್ಲಿಸುತ್ತಿರುವ ಸ್ವಯಂ ಘೋಷಣೆಯ ಅವಧಿಯನ್ನು ತ್ರೈಮಾಸಿಕವಾಗಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.

Yuvanidhi Scheme ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ದೂ.ಸಂ: 08182255293, 9380663606 ಗೆ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ಖಲಂದರ್ ಖಾನ್ ತಿಳಿಸಿದ್ದಾರೆ.

Shimoga-Bhadravati Urban Development Authority ಶಿವಮೊಗ್ಗದ ಹಸಿರೀಕರಣಕ್ಕೆ ಎಲ್ಲರೂ ಸಹಕರಿಸಬೇಕು- ಹೆಚ್.ಎಸ್.ಸುಂದರೇಶ್

0

Shimoga-Bhadravati Urban Development Authority ಶಿವಮೊಗ್ಗ ನಗರವನ್ನು ಸುಂದರ ಹಾಗೂ ಹಸುರೀಕರಣಗೊಳಿಸಲು ಸೂಡಾ ವತಿಯಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳು, ಬಡಾವಣೆಗಳಲ್ಲಿ ಗಿಡಗಳನ್ನು ನೆಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನಗರವನ್ನು ಹಸಿರಾಗಿ ಮತ್ತು ಸುಂದರವಾಗಿಟ್ಟುಕೊಳ್ಳಲು ಎಲ್ಲರೂ ಸಹಕರಿಸಬೇಕೆಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮನವಿ ಮಾಡಿದರು.

ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಪಕ್ಕದ ಉದ್ಯಾನವನ, ಸೂರ್ಯ ಬಡಾವಣೆ ಹಾಗೂ ಸೋಮಿನಕೊಪ್ಪ ರಸ್ತೆಯ ಕೆಹೆಚ್‌ಬಿ ಕಾಲೊನಿ ಬಳಿ ಉದ್ಯಾನವನಗಳ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಪಕ್ಕದಲ್ಲಿ ಅಂದಾಜು ಮೊತ್ತ ರೂ.25 ಲಕ್ಷದಲ್ಲಿ ಉದ್ಯಾನವನದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಫೌಂಡೇಶನ್ ಸಹಿತ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಸಲಾಗುವುದು. ಉದ್ಯಾನವನದ ದಕ್ಷಿಣ ಭಾಗದಲ್ಲಿ ಫೌಂಡೇಶನ್ ರಹಿತ ಚೈನ್‌ಲಿಂಕ್ ಫೆನ್ಸಿಂಗ್ ಅಳವಡಿಕೆ, ಉದ್ಯಾನವನದಲ್ಲಿ 6.00 * 9.00 ಮೀ ಅಳತೆಯ ಮೇಲ್ಛಾವಣಿಯೊಂದಿಗೆ ಯೋಗ ಮಂಟಪ ನಿರ್ಮಾಣ ಮಾಡಲಾಗುವುದು.
ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಜಿ-ಬ್ಲಾಕ್‌ನಲ್ಲಿ ಹೊರಾಂಗಣ ಸಾಮಗ್ರಿ ಅಳವಡಿಸಿರುವ ಉದ್ಯಾನಕ್ಕೆ ಸುತ್ತಲೂ ಗ್ರಿಲ್ ಫೆನ್ಸಿಂಗ್ ಅಳವಡಿಸುವ ಕಾಮಗಾರಿಯನ್ನು ರೂ.20 ಲಕ್ಷದಲ್ಲಿ ಕೈಗೆತ್ತಿಗೊಳ್ಳಲು ಗುದ್ದಲಿ ಪೂಜೆ ನೆರವೇರಿಸಿದ್ದು, ಉದ್ಯಾನವನದ ಉತ್ತರ, ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಫೌಂಡೇಶನ್ ಸಹಿತ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಕೆ ಮಾಡಲಾಗುವುದು ಹಾಗೂ ಸುಮಾರು 35.00 ಮೀ. ಪಾಥ್ ವೇ ನಿರ್ಮಿಸಲಾಗುವುದು ಎಂದರು.

ಸೂರ್ಯ ಬಡಾವಣೆಯಲ್ಲಿರುವ ಹಾ.ಮ.ನಾಯ್ಕರವರ ಮನೆಯ ಹತ್ತಿರದ ಉದ್ಯಾನವನದ ಅಭಿವೃದ್ದಿ ಕಾಮಗಾರಿಯನ್ನು ಅಂದಾಜು ಮೊತ್ತ 25 ಲಕ್ಷದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು ಉದ್ಯಾನವನ ಪ್ರದೇಶಕ್ಕೆ ಎಂ ಎಸ್ ಪೋಲ್‌ನೊಂದಿಗೆ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಕೆ , ಪಾರ್ಕ್ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 08 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ ಹಾಗೂ ಅಂದಾಜು 50.00 ಮೀ.ಪಾಥ್ ವೇ ನಿರ್ಮಾಣ ಹಾಗೂ 04 ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಸಲಾಗುವುದು.
ಸೋಮಿನಕೊಪ್ಪ ರಸ್ತೆಯ ಕೆಹೆಚ್‌ಬಿ ಕಾಲೋನಿಯ 5ನೇ ತಿರುವಿನಲ್ಲಿ ರೂ.20 ಲಕ್ಷ ಮೊತ್ತದಲ್ಲಿ ಉದ್ಯಾನವನ ಪ್ರದೇಶಕ್ಕೆ ಫೌಂಡೇಷನ್‌ಸಹಿತ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಕೆ, ಉದ್ಯಾನದಲ್ಲಿ 6.00*9.00 ಮೀ.ಅಳತೆಯ ಮೇಲ್ಚಾವಣಿಯೊಂದಿಗೆ ಯೋಗ ಮಂಟಪ ನಿರ್ಮಾಣ, ಹೊರ ಭಾಗದಲ್ಲಿ ಅಂದಾಜು 32.00 ಮೀ ಪಾಥ್‌ವೇ ನಿರ್ಮಾಣ ಹಾಗೂ 06 ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಸೂಡಾ ಸದಸ್ಯರಾದ ಎಸ್ ಎಂ ಸಿದ್ದಪ್ಪ, ಪ್ರವೀಣ್ ಕುಮಾರ್ ಎಂ, ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸೂಡಾ ಅಭಿಯಂತರರಾದ ಬಸವರಾಜಪ್ಪ, ಗಂಗಾಧರ ಸ್ವಾಮಿ, ಅಧಿಕಾರಿಗಳು, ನಿವಾಸಿಗಳು ಪಾಲ್ಗೊಂಡಿದ್ದರು.

Klive Special Article ರಾಜ್ಯಪಾಲರ ಕಾರ್ಯ ವೈಖರಿ ಮತ್ತು ರಾಜ್ಯ ಸರ್ಕಾರ

0

ಡಾ.ಸುಧೀಂದ್ರ.
ಪ್ರಧಾನ ಸಂಪಾದಕ.
ಕೆ ಲೈವ್ ನ್ಯೂಸ್

Klive Special Article ಸಂವಿಧಾನಾತ್ಮಕ ಹುದ್ದೆಯಾಗಿರುವ‌ ರಾಜ್ಯಪಾಲರ ‌ಕಾರ್ಯವೈಖರಿ‌ ಬಗ್ಗೆ ಈಗೀಗ‌ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.

ಜಮ್ಮು & ಕಾಶ್ಮೀರ‌ , ತಮಿಳುನಾಡು, ಕರ್ನಾಟಕ ,ದೆಹಲಿ ರಾಜ್ಯಗಳ‌ಲ್ಲಿನ. ರಾಜ್ಯಪಾಲರ ‌ ಕರ್ತವ್ಯಗಳ ಬಗ್ಗೆ ಬಹಳ ‌ಟೀಕೆ ಟಿಪ್ಪಣಿ‌ ಬಂದಿವೆ.

ಕೇಂದ್ರ ಮತ್ತು ರಾಜ್ಯಗಲ್ಲಿ ಒಂದೇ ಪಕ್ಷದ ಸರ್ಕಾರವಿದ್ದಾಗ ಈ ವಿವಾದ ಏಳದು. ಆದರೆ ಮುಖ್ಯವಾಗಿ
ವಿಪಕ್ಷ ಸರ್ಕಾರಗಳಿರುವ ಸನ್ನಿವೇಶದಲ್ಲಿ ಮಾತ್ರ ಈ‌ ಸಮಸ್ಯೆ ಉದ್ಭವಿಸಿರುವುದನ್ನ ಗಮನಿಸಬಹುದು.

ರಾಷ್ಟ್ರಪತಿಗಳ ಪ್ರತಿನಿಧಿಯಾಗಿ, ಸಂವಿಧಾನದ ತಳಹದಿಯಲ್ಲಿ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ ಎಂಬ ವಿವೇಚನೆಗಳಿಂದ
ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ವ್ಯವಸ್ಥೆ ರೂಪಿತವಾಗಿದೆ.
ಜನತೆಯ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರದ ನಡೆಯನ್ನ
ರಾಜ್ಯಪಾಲರ ಕಛೇರಿ‌
ನೋಡುತ್ತಿರುತ್ತದೆ.
ರಾಜಕೀಯ ಮತ್ತು ಮತ ಬ್ಯಾಂಕ್ ಗಳ
ಸೀಮಿತ ಸರಹದ್ದಿನಲ್ಲೇ ರಸಜ್ಯ ಸರ್ಕಾರ ನಡೆಯುತ್ತಿದ್ದರೆ ರಾಜ್ಯಪಾಲರು ಎಲ್ಲ ಅವಕಾಶಗಳ ಮೂಲಕ ಸರ್ಕಾರದ
ಬಿಲ್ ಗಳಿಗೆ ಸಹಿ‌ಹಾಕದೇ ,ಸವಿವರ ಕೇಳಿ ಹಿಂದಕ್ಕೆ ಕಳಿಸಬಹುದಾಗಿದೆ.

ಈಗ ಉದ್ಭವಿಸಿರುವ ಸಮಸ್ಯೆ ಜಟಿಲವಾಗಿದೆ. ದೀರ್ಘ ಅವಧಿ ಯಾವುದೇ ಬಿಲ್ ಗಳನ್ನ ಸಹಿ‌ಹಾಕದೇ‌ಇಟ್ಟುಕೊಳ್ಳುವಂತಿಲ್ಲ ಎಂದು‌‌ ಸುಪ್ರೀಂ ಕೊರ್ಟ್ , ತಮಿಳುನಾಡು ‌ ಪ್ರಕರಣದಲ್ಲಿ ಅಭಿಪ್ರಾಯ ಪಟ್ಟಿದೆ.
ಅದರ ಬಗ್ಗೆ ಮಾಧ್ಯಮವೊಂದರಲ್ಲಿ ಹೀಗೆ ವರದಿ‌ಹೇಳುತ್ತದೆ

ʼರಾಜ್ಯಪಾಲರು, ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ನಿರಾಕರಿಸುವಂತಿಲ್ಲ. ಅವರು ಸಂಪೂರ್ಣ ವೀಟೋವನ್ನು ಹೊಂದಿರುವಂತೆ ವರ್ತಿಸುವಂತಿಲ್ಲ. ವಿಧಿ 200ರ ಪ್ರಕಾರ, ರಾಜ್ಯಪಾಲರು ಚುನಾಯಿತ ರಾಜ್ಯ ಸರಕಾರದ ಸಲಹೆ ಮತ್ತು ಬೆಂಬಲದ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕುʼ ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೇಳಿದರು”

ರಾಜ್ಯ ಸರ್ಕಾರ ಮತ್ತು‌ ರಾಜ್ಯಪಾಲರ ನಡುವಣ ಜಟಾಪಟಿಗೆ ಇಲ್ಲಿ ಪುಟ್ಟ ಮತ್ತು‌ ಸ್ಪಷ್ಟ
ಅಭಿಪ್ರಾಯ ದೊರೆತಿದೆ.

ತಾನು ಮಾಡಿದ್ದಕ್ಕೆಲ್ಲಾ
ರಾಜ್ಯಪಾಲರು‌ ಸಹಿ ಹಾಕಬೇಕು ಎಂಬ‌ ಧೋರಣೆ ರಾಜ್ಯ ಸರ್ಕಾರಗಳಿಗೆ ತಕ್ಕುದ್ದಲ್ಲ. ಏಕೆಂದರೆ
ರಾಜಕೀಯ ಆಧಾರಿತ ತೀರ್ಮಾನ ಮತ್ತು‌ ಸಂವಿಧಾನಾತ್ಮಕ ಆಧರಿತ ತೀರ್ಮಾನಗಳೇ‌‌ ಬೇರೆ ಬೇರೆ.
ಈ ಅಂಕುಶ‌ಹಾಕಲು ರಾಜ್ಯಪಾಲರ ವಿವೇಚನೆ ಅಗತ್ಯವಿದೆ. ಅವರು ಸಂವಿಧಾನ ರಕ್ಷಿಸುವಲ್ಲಿ‌ ರಾಜ್ಯದ ಪ್ರಥಮ ಪೀಠಸ್ಥರು.

ತಮಿಳುನಾಡು ಸರ್ಕಾರದ. ಆಡಳಿತ ಪಕ್ಷವು ಸದಸನದಲ್ಲಿ
ರಾಷ್ಟ್ರಗೀತೆಗೆ ಗೌರವ ನೀಡಲಿಲ್ಲ ಎಂಬ ಕಾರಣಕ್ಕೆ ರಾಜ್ಯಪಾಲರಾದ ರವಿ ವಿಚಲಿತರಾಗಿದ್ದರು.
ಈ ಕುರಿತು ದೇಶದಾದ್ಯಂತ ಬಲಿಷ್ಠ ಪ್ರತಿಕ್ರಿಯೆಗಳು ಬರಲೇ ಇಲ್ಲ.ಇದೊಂದು ಪರಮಾಶ್ಚರ್ಯ.

ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷ ಪ್ರಸ್ತುತ ರಾಜ್ಯಪಾಲರ
ಕಾರ್ಯವೈಖರಿ ಬಗ್ಗೆ ಅಸಮಾಧಾನ ತಾಳಿದೆ. ವಿವಿಗಳಲ್ಲಿನ ನೇಮಕಾತಿ, ಮತ್ತು ಇತರೆ ನಿರ್ಧಾರಗಳು ರಾಜ್ಯಪಾಲರ ವಿವೇಚನಾ ಪರಿಧಯಿಂದ ಹೊರಗೆ ಬರಬೇಕು ಎಂದು ರಾಜ್ಯದಲ್ಲಿ ಅಧಿಕಾರ ಪಡೆದಿರುವ ಕಾಂಗ್ರೆಸ್ ಹೇಳುತ್ತಿದೆ.

ಇಂತಹ ಸಂಗತಿಗಳು‌ ಮತ್ತೆ ಸಂಸತ್ತಿನಲ್ಲಿ‌ ಆಳ ಚರ್ಚೆಗೊಳಪಡಬೇಕಿದೆ. ಇಂತಹ‌ ಸಮಸ್ಯೆ ಹಲವಿವೆ.ಅದು‌ಬಿಟ್ಟು‌ಸಂಸತ್ತಿನಲ್ಲಿ ಬಹಳ ತೆಳುವಾದ ವಿವಾದಗಳನ್ನೇ ದೊಡ್ಡದು ಮಾಡಿ ಕಾಲವ್ಯರ್ಥಮಾಡುವುದು ಸಲ್ಲದು.

Scheduled Castes Welfare Department ಸ್ಪ್ರಿಂಕ್ಲರ್ ಸೆಟ್ ಪಡೆಯಲು‌ ಪರಿಶಿಷ್ಠ ಕಲ್ಯಾಣ ಇಲಾಖೆ ಪ್ರಕಟಣೆ

0

Scheduled Castes Welfare Department ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ವಿಶೇಷ ಕೇಂದ್ರಿಯ ನೆರವಿನಡಿ ಶಿವಮೊಗ್ಗ ಜಿಲ್ಲೆಯ ಪರಿಶಿಷ್ಟ ಪಂಗಡದವರಿಗೆ ಸ್ಪಿಂಕ್ಲರ್ ಸೆಟ್ (ರೈನ್‌ಗನ್) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅರ್ಜಿಯನ್ನು ಅಹ್ವಾನಿಸಲಾಗಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಕಚೇರಿಯಲ್ಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಮೇ. 08 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ.ಶ್ರೀನಿವಾಸ್ ತಿಳಿಸಿದ್ದಾರೆ.

Adichunchanagiri Mahasansthan Mutt ಶ್ರೀಕಾಲಭೈರವ ಸ್ವಾಮಿ ದೇಗುಲ ವಾರ್ಷಿಕೋತ್ಸವ, ಸುವರ್ಣ ವರ್ಷೋತ್ಸವ ದಂಪತಿಗಳಿಗೆ ಸನ್ಮಾನ

0

Adichunchanagiri Mahasansthan Mutt ಶ್ರೀಕಾಲಭೈರವ ಸ್ವಾಮಿ ದೇಗುಲ ವಾರ್ಷಿಕೋತ್ಸವ, ಸುವರ್ಣ ವರ್ಷೋತ್ಸವ ದಂಪತಿಗಳಿಗೆ ಸನ್ಮಾನ ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಗಳವರ ಕೃಪಾಶೀರ್ವಾದಗಳೊಂದಿಗೆ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಇಲ್ಲಿನ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ, ಶ್ರೀ ಆದಿಚುಂಚನಾಗಿರಿ ಮಹಾಸಂಸ್ಥಾನ ಮಠ ಶಿವಮೊಗ್ಗ ಶಾಖೆಯಲ್ಲಿ ನಡೆಯಲಿದ್ದು, ವಿವಾಹವಾಗಿ 50 ವರ್ಷ ಪೂರೈಸಿದ ಆದರ್ಶ ಹಿರಿಯ ದಂಪತಿಗಳಿಗೆ ಸನ್ಮಾನ ಕೂಡ ನಡೆಯುವುದು.

ಏಪ್ರಿಲ್ 11 ರಂದು ಬೆಳಿಗ್ಗೆ 5:30 ರಿಂದ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಸಮಾರಂಭದ ನಿಮಿತ್ತ ಶ್ರೀ ಕಾಲಬೈರ ವೇಶ್ವರ ಸ್ವಾಮಿಗೆ ಹೋಮ, ಹವನಾದಿಗಳೊಂದಿಗೆ ಕುಂಭಾಭಿಷೇಕ, ಮಹಾಮಂಗಳಾರತಿ, ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ನಂತರ ಬೆಳಿಗ್ಗೆ 8 ಗಂಟೆಗೆ ಆದರ್ಶ ಹಿರಿಯ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಸಹ ಇದೇ ಸ್ಥಳದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಪೂಜ್ಯರು ಉಪಸ್ಥಿತರಿರುವರು.

50ವರ್ಷ ಪೂರೈಸಿದ ಹಿರಿಯ ದಂಪತಿಗಳನ್ನು ಸನ್ಮಾನಿಸುವ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕೆ ಈಗಾಗಲೇ ಅರ್ಹ ಹಿರಿಯರನ್ನು ಗುರುತಿಸಿ ಅವರನ್ನು ಆಮಂತ್ರಿಸಲಾಗಿದೆ.

Adichunchanagiri Mahasansthan Mutt ಶ್ರೀಕಾಲಭೈರವ ಸ್ವಾಮಿ ದೇಗುಲ ವಾರ್ಷಿಕೋತ್ಸವ, ಸುವರ್ಣ ವರ್ಷೋತ್ಸವ ದಂಪತಿಗಳಿಗೆ ಸನ್ಮಾನ ಈ ಎಲ್ಲಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿ ನಿದಿಗಳು,ಗಣ್ಯ ವ್ಯಕ್ತಿಗಳು, ಅಧಿಕಾರಿಗಳು, ಪಾಲ್ಗೊಳ್ಳುವರು. ನಗರದ ನಾಗರಿಕರು ಹಾಗೂ ಪೋಷಕ ಬಂಧುಗಳು ಹಾಗೂ ಶ್ರೀ ಮಠದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕಾರ್ಯಕ್ರಮದ ಆಯೋಜಕರು ಕೋರಿದ್ದಾರೆ.

Friends Center Organization ಗೋಪಾಳ ಮುಖ್ಯರಸ್ತೆ. ಪಾನಿಪೂರಿ ತಿಂಡಿಗಾಡಿಗಳ ತ್ಯಾಜ್ಯಗಳಿಂದ ಮಾಲಿನ್ಯ‌ ಮುಕ್ತಮಾಡಲು ಮನವಿ

0

Friends Center Organization ಶಿವಮೊಗ್ಗ ನಗರದ ಗೋಪಾಲ ಬಡಾವಣೆಯ ಮುಖ್ಯ ರಸ್ತೆಯಲ್ಲಿ ತಿಂಡಿ ಗಾಡಿಗಳಿಂದ ಆಗುತ್ತಿರುವ ಹಾನಿಯನ್ನು ತಪ್ಪಿಸುವಂತೆ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಹಾಗೂ ಸ್ಥಳೀಯ ನಾಗರೀಕರು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಫ್ರೆಂಡ್ಸ್ ಸೆಂಟರ್ ಸಂಸ್ಥೆಯ ಪ್ರಮುಖರು, ಫ್ರೆಂಡ್ಸ್ ಸೆಂಟರ್ ಸಂಸ್ಥೆಯು 1966 ರಿಂದಲೂ ವಿವಿಧ ಸಮಾಜ ಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು, ಹಾಲಿ. ಗೋಪಾಳ ಮುಖ್ಯ ರಸ್ತೆಯಲ್ಲಿರುವ ವಿಶಾಲ್ ಮಾಟ್ ಎದುರು ನಮ್ಮ ಸಂಸ್ಥೆಯ ವತಿಯಿಂದ ಫ್ರೆಂಡ್ನ ಸೆಂಟರ್ ನೇತ್ರ ಭಂಡಾರದ ಕಟ್ಟಡವನ್ನು ಹೊಂದಿದ್ದು, ಸಾರ್ವಜನಿಕರಿಗಾಗಿ ಆರೋಗ್ಯದ ದೃಷ್ಟಿಯಿಂದ ಲ್ಯಾಬೋರೇಟರಿ ಕ್ಲಿನಿಕ್ ಮತ್ತು ನಮ್ಮ ಸಭೆ ನೆಡೆಸಲು ಸಭಾಂಗಣವನ್ನು ಹೊಂದಿರುತ್ತೇವೆ.

ಆದರೆ ಈಗ ಪ್ರತಿದಿನ ಸಂಜೆಯ ನಂತರ ತಿಂಡಿಗಾಡಿಗಳನ್ನಿಟ್ಟುಕೊಂಡು ತಮ್ಮ ವ್ಯಾಪಾರ ವ್ಯವಹಾರಗಳನ್ನು ಮಾಡಿಕೊಂಡು ಮತ್ತು ಅದರ ತ್ಯಾಜ್ಯ ವಸ್ತುಗಳನ್ನು ನಮ್ಮ ಫ್ರೆಂಡ್ಸ್ ಸೆಂಟರ್ ನೇತ್ರ ಭಂಡಾರದ ಹತ್ತಿರದಲ್ಲೇ ಹಾಕಿ ಹೋಗುತ್ತಿದ್ದಾರೆ. ಇದರಿಂದ ಬೀಡಾಡಿ ಪ್ರಾಣಿಗಳು ಅವುಗಳನ್ನು ಸೇವಿಸಿ, ಮತ್ತದರ ಉಳಿದ ಭಾಗಗಳನ್ನು ಬಿಟ್ಟು ಹೋಗುತ್ತಿವೆ. ಆದುದರಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ತಿಂಡಿಗಾಡಿಗಳ ಮಾಲೀಕರಿಗೆ ಬೇರೆಡೆ ತೆರಳಲು ಸೂಚನೆ ನೀಡಿ ನಮ್ಮ ನೇತ್ರ ಭಂಡಾರದ ಆವರಣವನ್ನು ಶುಚಿ ಶುಚಿಯಾಗಿಟ್ಟುಕೊಳ್ಳಲು ಸಹಕರಿಸಬೇಕು. ಇದರಿಂದ ಅಲ್ಲಿನ ಪರಿಸರದ ಸ್ವಚ್ಚತೆಯನ್ನು ಕಾಪಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ದಯಮಾಡಿ ಈ ಬಗ್ಗೆ ಕೂಡಲೇ ಗಮನ ಹರಿಸಬೇಕಾಗಿ ಮನವಿಯಲ್ಲಿ ಕೋರಿದ್ದಾರೆ .

Friends Center Organization ಈ ಸಂದರ್ಭದಲ್ಲಿ ಫ್ರೆಂಡ್ಸ್ ಸೆಂಟರ್ ಸಂಸ್ಥೆಯ ಅಧ್ಯಕ್ಷರಾದ ಬಿ.ಜಿ.ಧನರಾಜ್, ನೇತ್ರ ಭಂಡಾರದ, ಚೇರ್ಮನ್ ವಿ.ನಾಗರಾಜ್, ಕಾರ್ಯದರ್ಶಿ ಜಿ.ವಿಜಯಕುಮಾರ್, ಖಜಾಂಚಿ ರಮೇಶ್, ನಿಯೋಜಿತ ಅಧ್ಯಕ್ಷ ಮಲ್ಲಿಕಾರ್ಜುನ ಕಾನೂರು, ನಿರ್ದೇಶಕ ಎಂ.ಮೋಹನ್ ಮತ್ತು ಫ್ರೆಂಡ್ ಸೆಂಟರ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಾಧನೆಯ ಶಿಖರದಲ್ಲಿ… ಡಾ.ಉಮಾಶ್ರೀ ಕುಲಕರ್ಣಿ

0

ಒಂದು ಹಂತಕ್ಕೆ ಬಂದರೆ ಓದು ಮುಂದುವರಿಸಲು ಸಾಧ್ಯವಾಗುವು ದಿಲ್ಲ. ಅದರಲ್ಲೂ ಮಹಿಳೆಯರಿಗೆ ಒಂದು ಸರ್ಕಾರಿ ನೌಕರಿ ಸಿಕ್ಕರೆ, ಮದುವೆ ಹಾಗೂ ಮಕ್ಕಳಾದರೆ ಅವರಓದುಅಲ್ಲಿಗೆ ಮುಗಿಯಿ ತೆಂದೆಅರ್ಥ.ಆದರೆ, ಇಲ್ಲೊಬ್ಬ ಅಪ್ಪಟ್ಟಗ್ರಾಮೀಣ ಹಿನ್ನೆಲೆಯಿಂದ ಬಂದ ಸರ್ಕಾರಿ ಶಾಲೆ ಶಿಕ್ಷಕಿಗೆ ಓದಿನ ದಾಹವೇ ತೀರಿದಂತಿಲ್ಲ. ಹೌದು ಅವರೇ ಉಮಾಶ್ರೀ ಕುಲಕರ್ಣಿ (ಉಮಾ ನಾಗರಾಜ ಚರಂತಿಮಠ ವಿವಾಹ ನಂತರ), 18 ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುವ ಉಮಾ, ತನ್ನ ವೃತ್ತಿಯೊಂದಿಗೆಉನ್ನತ ವ್ಯಾಸಂಗ ಪೂರ್ಣಗಳಿಸಿದ್ದಲ್ಲದೇ ಈಗ ಪಿಎಚ್‌ಡಿ ಪದವಿಯನ್ನೂ ಪಡೆದಿದ್ದಾರೆ.

ಕೌಟುಂಬಿಕ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ, ದಿನವೊಂದಕ್ಕೆ ಎರಡು ನೂರು ಕಿಮೀ ಕ್ರಮಿಸುವ ಮೂಲಕ ವೃತ್ತಿಯಲ್ಲಿ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಇಂತಹ ಸಾಧನೆ ಮಾಡಿದ ಕೆಲವೇ ಕೆಲವರಲ್ಲಿ ಉಮಾ ಅಗ್ರಗಣ್ಯರು ಎಂದರೆ ಅತಿಶಯೋಕ್ತಿಯಾಗಲಾರದು.

ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣವನ್ನ ಮೊಟಕುಗೊಳಿಸುವ ಅನಿವಾರ್ಯತೆ ನಡುವೆಯೂತಾಯಿ ಮಹದೇವಮ್ಮ ಹಾಲಯ್ಯ ಕುಲಕರ್ಣಿ ಅವರ ಪ್ರೋತ್ಸಾಹ ಹಾಗೂ ಛಲದಿಂದಾಗಿ ಪ್ರೌಢ ಶಿಕ್ಷಣ ಪೂರೈಸಿದರು.

ಆ ನಂತರ ಉತ್ತಮ ಅಂಕಗಳಿಸುವ ಮೂಲಕ ತಾವೇ ಇತರರಿಗೆ ಪ್ರೇರಣೆಯಾಗಿ ಶಿಕ್ಷಕರ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದರು. ಇದರ ಜೊತೆಗೆ ಸಂಗೀತಕ್ಕೂ ಅಷ್ಟೇ ಪ್ರಾಧಾನ್ಯತೆ ನೀಡಿದ ಉಮಾ, ಉತ್ತಮ ಗಾಯಕಿ ಯಾಗಿ ಹಲವು ಬಹುಮಾನಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.
ಒಂದು ಸರ್ಕಾರಿ ನೌಕರಿ, ಮದುವೆ ಮಕ್ಕಳು ಅಂತಾ ಆದರೆ ಅಲ್ಲಿಗೆ ಓದಿಗೆ ಪೂರ್ಣ ವಿರಾಮ ಇಡುವ ಇಂದಿನ ಬಹುತೇಕ ಮಹಿಳೆಯರಿಗೆ ರೈತ ಹಾಗೂ ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದ ಉಮಾ ಒಂದು ಪ್ರೇರಣೆ. ಕೇವಲ 500 ಜನಸಂಖ್ಯೆ ಇರುವ ಹಾವೇರಿ ತಾಲೂಕಿನ ಗ್ರಾಮ ಕೆಸರಳ್ಳಿ ಅರಳಿದ ಕಮಲ ಈ ಉಮಾ. ನಂತರ ವೃತ್ತಿಗಾಗಿ ಧಾರವಾಡ ಜಿಲ್ಲೆಯ ಬಿ. ಹುಲಿಕಟ್ಟಿಯಲ್ಲಿ 13 ವರ್ಷಗಳ ಕಾಲ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈಗ ಆಗುಂಬೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ಪ್ರತಿಭಾನ್ವಿತರಿಗೆ ಪತಿ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ತಮ್ಮ ವಿದ್ಯಾದಾನದ ಸೇವೆಗೆಂದು ಪ್ರತಿದಿನ ಅಂದಾಜು 200 ಕಿಮೀ ಸಂಚಾರ ಇದು ಉಮಾ ಅವರ ದೈನಂದಿನ ದಿನಚರಿಯಾಗಿದೆ.
ಇದರ ಮಧ್ಯೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪೂರೈಸಿ ಬಿ.ಇಡ್ ಪದವಿಯನ್ನೂ ಮುಗಿಸಿದ್ದ ಉಮಾ ಅವರಿಗೆ ಓದಿನ ದಾಹ ತೀರಲಿಲ್ಲ. ನಂತರ ಹಂಪಿ ಕನ್ನಡವಿಶ್ವ ವಿದ್ಯಾಲಯದಲ್ಲಿ ಸಂಶೋಧನೆಗೆ ನೋಂದಣಿ ಮಾಡಿಸಿಯೇ ಬಿಟ್ಟರು. ನಂತರ ತಮ್ಮ ಬಿಡುವಿಲ್ಲದ ದಿನಚರಿಯಲ್ಲಿಯೇ ಮನೆ, ಮಕ್ಕಳನ್ನ ಆರೈಕೆ ಮಾಡಿಕೊಂಡು ಸತತ ಐದು ವರ್ಷಗಳ ಕಾಲ ಸಂಶೋಧನೆ ಮಾಡಿ ಇತ್ತಿಚಿಗೆ ಡಾಕ್ಟರೇಟ್ ಪದವಿಯನ್ನೂ ಪಡೆದುಕೊಂಡಿದ್ದಾರೆ. ಸಮಾಜಶಾಸ್ತ್ರ ವಿಭಾಗದಲ್ಲಿ ಆರಂಭ ದಿಂದಲೂ ಆಸಕ್ತಿ ಹೊಂದಿದ ಇವರು, ಕೊಳಚೆ ಪ್ರದೇಶದ ಮಹಿಳೆ ಯರು ಎಂಬ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು.

ಈ ಪ್ರಬಂಧ ಮಂಡಿಸುವುದಕ್ಕೂ ಮೊದಲು ಉಮಾ ಹಲವಾರು ಕೊಳಗೆರೆ ಮಹಿಳೆಯರನ್ನು ಭೇಟಿ ಮಾಡಿ ಅವರ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಗಳ ಕುರಿತು ಅಧ್ಯಯನ ಮಾಡಿದ್ದರು. ಕೊಳಗೆರೆ ಮಹಿಳೆಯರ ಜೀವನದ ಎಲ್ಲ ಆಯಾಮಗಳ ಕುರಿತು ಮನವರಿಕೆ ಮಾಡಿಕೊಂಡಿದ್ದರಲ್ಲದೇ, ಅವರು ಎದುರಿಸುವ ಹಲವಾರು ಸಮಸ್ಯೆಗಳ ಕುರಿತುತಮ್ಮ ಮಹಾ ಪ್ರಬಂಧದಲ್ಲಿ ಬೆಳಕು ಚೆಲ್ಲಿದ್ದಾರೆ.

ಉಮಾ ಅವರ ಓದು ಬರಹ ಇಲ್ಲಿಗೆ ನಿಲ್ಲುವುದಿಲ್ಲ. ಹಲವಾರು ಕನ್ನಡ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.ಇವರ ಕವನಗಳು ಪತ್ರಿಕೆಗಳಲ್ಲಿ ಪ್ರಕಟ ವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಬಿಡುವಿಲ್ಲದಜೀವನ ಶೈಲಿಯಲ್ಲಿಯೂ ಸಾಂಸ್ಕತಿಕ ಚಟು ವಟಿಕೆಗಳ ಹಿಂದೆಉಮಾ ಬಿದ್ದಿರು ತ್ತಾರೆ. ಆದರೆ, ತಮ್ಮ ಈ ಸಂಶೋಧನೆಗೆ ಬೆನ್ನೆಲುಬಾಗಿ ನಿಂತಿದ್ದ ತಮ್ಮ ಪತಿ ನಾಗರಾಜ ಚರಂತಿಮಠ ಅವರನ್ನ ಉಮಾ ಸ್ಮರಿಸದೇ ಇರಲಿಲ್ಲ. ತಮ್ಮ ಪ್ರತಿ ಹೆಜ್ಜೆಯಲ್ಲಿಯೂ ಪತಿ ನಾಗರಾಜಅವರ ಪ್ರೋತ್ಸಾಹ ಹಾಗೂ ಬೆಂಬಲವೇ ಕಾರಣ ಎಂಬುದು ಉಮಾ ಅವರ ಮಾತು. ಅದೇ ರೀತಿ ತಮ್ಮ ಈ ಸಾಧನೆಗೆ ತಮ್ಮ ಅತ್ತೆ ಶಾರದಮ್ಮ ಚರಂತಿಮಠ, ಮಕ್ಕಳಾದ ಪ್ರಾರ್ಥನಾ ಹಾಗೂ ಸ್ಪಂದನಾ, ತಾಯಿ ಮಹದೇವಮ್ಮ, ತಂದೆ ಹಾಲಯ್ಯ, ತಮ್ಮ ಸಹೋದರರು ಚಿಕ್ಕಪ್ಪ ಚಿಕ್ಕಮ್ಮಂದಿರು ನಮ್ಮ ಶಾಲೆಯ ಸಹೋದ್ಯೋಗಿಗಳು ಹಾಗೂ ಇಲಾಖೆಯ ಮೇಲಾಧಿಕಾರಿಗಳ ಸಹಕಾರವನ್ನು ಇಲ್ಲಿ ಸ್ಮರಿಸುತ್ತಾರೆ.

ಇವರ ಸಾಧನೆಗೆ ಬಿ ಹುಲಿಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆಗೊಂಬೆ ಪ್ರಾಥಮಿಕ ಶಾಲೆಯ ಮಕ್ಕಳು, ಸಿಬ್ಬಂದಿ ಹಾಗೂ ಶಾಲಾ ಆಡಳಿತ ಮಂಡಲಿಯವರು, ಗ್ರಮಾಸ್ಥರು ಹೆಮ್ಮೆ ಪಟ್ಟಿದ್ದಾರೆ. ಜೊತೆಗೆ ಓದಿನ ದಾಹ ಮುಂದು ವರೆಯಲಿ ಎಂದು ಆಶಿಸಿದ್ದಾರೆ.

PUC ಜಿಲ್ಲೆಗೆ ಕೀರ್ತಿ ತಂದ ಪಿಯು (ವಿಜ್ಞಾನ) ಪರೀಕ್ಷೆಯಲ್ಲಿಆರ್.ದೀಕ್ಷಾ ರಾಜ್ಯಕ್ಕೇ ಪ್ರಥಮ

0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 599 ಅಂಕ ಕಳಿಸಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದ ತೀರ್ಥಹಳ್ಳಿ ವಾಗ್ದೇವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ .ಆರ್.
ದೀಕ್ಷಾ ರಾಘವೇಂದ್ರ ಕಲ್ಕೂರ್ ಹಾಗೂ ಉಷಾ ಕಲ್ಕೂರು ಅವರ ಪುತ್ರಿ