J. N. N. C. Engineering College ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜ್ .ಸಿ.ಎಸ್.ಇ(ಡೇಟಾ ಸೈನ್ಸ್) ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸುಷ್ಮಾ ಆರ್.ಬಿ ಇವರು ಪಿಹೆಚ್.ಡಿ ಪುರಸ್ಕೃತರಾಗಿದ್ದಾರೆ. ಇವರು ‘ಡಿಸೈನ್ ಅಂಡ್ ಇಂಪ್ಲಿಮೆಂಟೇಷನ್ ಆಫ್ ಸ್ಟಾಗ್ನೋಗ್ರಾಫಿಕ್ ಟೆಕ್ನೀಕ್ಸ್ ಟು ಸೆಕ್ಯೂರ್ ಡಾಟ್ ಫಾರ್ ನೆಕ್ಸ್ಟ್ ಜನರೇಷನ್ ನೆಟ್ವರ್ಕ್ ‘ ಎಂಬ ವಿಷಯ ಕುರಿತು ಮಾರ್ಗದರ್ಶಕರಾದ ಡಾ.ಮಂಜುಳ ಜಿ.ಆರ್ ಪ್ರಾಧ್ಯಾಪಕರು. ಸಿ.ಎಸ್.ಇ(ಡೇಟಾ ಸೈನ್ಸ್) ವಿಭಾಗ ಮುಖ್ಯಸ್ಥರು.ಜೆ.ಎನ್.ಎನ್ ಕಾಲೇಜು ಇವರ ಮಾರ್ಗದರ್ಶನದಲ್ಲಿ ವಿ.ಟಿ. ಯುನಿವರ್ಸಿಟಿಯಲ್ಲಿ ಮಹಾ ಪ್ರಬಂಧ ಮಂಡಿಸಿ ಪಿ ಎಚ್ ಡಿ ಪಡೆದಿದ್ದಾರೆ. ಇವರ ಈ ಸಾಧನೆಯನ್ನು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯು ಅಭಿನಂದಿಸಿದೆ.
Prakash Belawadi ರಂಗಭೂಮಿಯ ಮೇಲೂ ತಂತ್ತಜ್ಞಾನವು ಅನುಕೂಲ & ಪ್ರತಿಕೂಲ ಪರಿಣಾಮ ಬೀರಿದೆ- ನಟ ಪ್ರಕಾಶ್ ಬೆಳವಾಡಿ
Prakash Belawadi ರಂಗಭೂಮಿ ಕ್ಷೇತ್ರವು ತಂತ್ರಜ್ಞಾನದ ಪರಿಣಾಮ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಉತ್ತಮ ಪ್ರೇಕ್ಷಕರು ಇರುವವರೆಗೂ ನಾಟಕ ಕ್ಷೇತ್ರ ನಿರಂತರವಾಗಿ ಮುನ್ನಡೆಯುತ್ತದೆ ಎಂದು ನಟ ಪ್ರಕಾಶ್ ಬೆಳವಾಡಿ ಹೇಳಿದರು.
ಬಹುಮುಖಿ ಸಂಘಟನೆಯಿಂದ ಬುಧವಾರ ಆಯೋಜಿಸಿದ್ದ 50ನೇ ಕಾರ್ಯಕ್ರಮದಲ್ಲಿ ರಂಗಭೂಮಿ ತಂತ್ರಜ್ಞಾನ ಕುರಿತು ಮಾತನಾಡಿ, ತಂತ್ರಜ್ಞಾನ ಅನೇಕ ಕ್ಷೇತ್ರಗಳ ಅನುಕೂಲ ಮತ್ತು ಪ್ರತಕೂಲ ಪರಿಣಾಮ ಬೀರುತ್ತಿರುವುದು ವಾಸ್ತವ ಸಂಗತಿ. ರಂಗಭೂಮಿ ಮೇಲೂ ತಂತ್ರಜ್ಞಾನ ಪರಿಣಾಮ ಬೀರಿದೆ ಎಂದು ತಿಳಿಸಿದರು.
ಸಿನಿಮಾ ಒಂದೇ ಸಮಯದಲ್ಲಿ ಸಾವಿರಾರು ಪರದೆಗಳ ಮೇಲೆ ಪ್ರದರ್ಶನ ಆಗಲು ಸಾಧ್ಯವಿದೆ. ಈ ಮೂಲಕ ಕೋಟ್ಯಂತರ ರೂ. ಹಣ ಗಳಿಸಲು ಸಾಧ್ಯವಿದೆ. ಆದರೆ ನಾಟಕ ಕ್ಷೇತ್ರ ಕಲಾವಿದ ಮತ್ತು ಪ್ರೇಕ್ಷಕನ ನಡುವೆ ಬಾಂಧವ್ಯ ಮೂಡಿಸುತ್ತದೆ. ತಂತ್ರಜ್ಞಾನ ದುಬಾರಿ ಆಗಿರುವುದರಿಂದ ಅಳವಡಿಸಿಕೊಳ್ಳಲು ಕಷ್ಟ. ಹೆಚ್ಚಿನ ಹಣ ಅವಶ್ಯಕವಾಗಿ ಬೇಕಾಗುತ್ತದೆ. ಆದರೆ ತಂತ್ರಜ್ಞಾನದ ಹೊರತಾಗಿ ಉತ್ತಮ ನಾಟಕ ಮೂಡಿಬರಲು ಸಾಧ್ಯವಿದೆ ಎಂದರು.
Prakash Belawadi ಸಿನಿಮಾ ಏಕಕಾಲಕ್ಕೆ ಸಾವಿರಾರು ಪರದೆಗಳಲ್ಲಿ ಪ್ರದರ್ಶನಗೊಂಡು ವಿಮರ್ಶೆ ಪ್ರಕಟ ಆಗುವ ಮುನ್ನವೇ ಕೋಟ್ಯಂತರ ರೂಪಾಯಿ ಗಳಿಸುತ್ತದೆ. ಆದರೆ ನಾಟಕ ಹತ್ತಾರು ಕಡೆ ಪ್ರದರ್ಶನ ಏಕಕಾಲದಲ್ಲಿ ಸಾಧ್ಯವಾಗುವುದಿಲ್ಲ. ಸಿನಿಮಾಗಳಿಗೆ ದೊಡ್ಡ ಮಟ್ಟದ ಪ್ರಚಾರ ನೀಡಿದಂತೆ ನಾಟಕಗಳಿಗೂ ದೊಡ್ಡ ಪ್ರಚಾರ ನೀಡಲು ಸಾಧ್ಯವಿಲ್ಲ. ಇದರಿಂದ ನಾಟಕ ಕ್ಷೇತ್ರ ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.
ಬಹುಮುಖಿ ಸಂಘಟಕ ಪ್ರೊ ಎಚ್.ಎಸ್.ನಾಗಭೂಷಣ, ಜಿ.ವಿಜಯಕುಮಾರ್, ಅನಿಲಕುಮಾರ್ ಭೂಮರಡ್ಡಿ, ಡಾ. ಉಷಾ ರಮೇಶ್, ಕಾಂತೇಶ್ ಕದರಮಂಡಲಗಿ, ಡಾ. ಕೆ.ಜಿ.ವೆಂಕಟೇಶ್ ಇತರರಿದ್ದರು.
Shivamogga News ಶಿವಮೊಗ್ಗದಿಂದ ಪುಣೆಗೆ ವಿಮಾನ ಸಂಚಾರ ಅಗತ್ಯವಿದೆ- ಚಂದ್ರಶೇಖರ್
Shivamogga News ಶಿವಮೊಗ್ಗ ನಗರವನ್ನು ಕೇಂದ್ರವಾಗಿ ಇಟ್ಟುಕೊಂಡು ಪ್ರಮುಖ ನಗರಗಳಿಗೆ ನೇರ ವಿಮಾನ ಸಂಪರ್ಕ ಒದಗಿಸುವ ಅಗತ್ಯವಿದೆ ಎಂದು ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸ್ಪೈಸ್ ಜೆಟ್ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಸ್ಪೈಸ್ ಜೆಟ್ ಸಂಸ್ಥೆಯು ಫಿಕ್ಕಿ ವಾಣಿಜ್ಯ ಸಂಸ್ಥೆಗೆ ಒದಗಿಸಿರುವ ರಿಯಾಯಿತಿ ಮಾದರಿಯಂತೆ ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಸ್ಥೆಯ ಸದಸ್ಯರಿಗೆ ಕಾರ್ಪೊರೇಟ್ ರಿಯಾಯಿತಿ ನೀಡಬೇಕು ಎಂದು ತಿಳಿಸಿದರು.
ಐ ಐ ಎಫ್ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಶಿವಮೊಗ್ಗ ಜಿಲ್ಲೆ ಫೌಂಡ್ರಿ ಉದ್ಯಮಕ್ಕೆ ಹೆಸರಾಗಿದ್ದು, ಪುಣೆಯ ಕೈಗಾರಿಕಾ ಉದ್ಯಮಿಗಳೊಂದಿಗೆ ಕೈಗಾರಿಕಾ ಸಂಬಂಧ ಹೊಂದಿರುವುದರಿಂದ ಶಿವಮೊಗ್ಗದಿಂದ ಪುಣೆಗೆ ನೇರ ವಿಮಾನಯಾನ ಸಂಪರ್ಕ ಕಲ್ಪಿಸುವುದರಿಂದ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
Shivamogga News ಸ್ಪೈಸ್ ಜೆಟ್ ಎಜಿಎಂ ಸೇಲ್ಸ್ ಹಿರಿಯ ಅಧಿಕಾರಿ ಲಲಿತ್ ಆದಿತ್ಯ ಚಲ್ಲ ಮಾತನಾಡಿ, ಶಿವಮೊಗ್ಗ ವಿಮಾನಯಾನದ ಸಂಪರ್ಕದ ಕುರಿತು ಹೆಚ್ಚಿನ ಮಾಹಿತಿ ನೀಡುತ್ತಾ ವಿಮಾನ ಸಂಪರ್ಕದ ಕುರಿತು ಯಾವುದಾದರೂ ಸಲಹೆ ಸೂಚನೆ ಇದ್ದರೆ ನೀಡಬೇಕು ಎಂದರು.
ಸೇಲ್ಸ್ ಮ್ಯಾನೇಜರ್ ಜೀತು ಥಾಮಸ್ ಮಾತನಾಡಿ ಸ್ಪೈಸ್ ಜೆಟ್ ವಿಮಾನ ಯಾನದ ರಿಯಾಯಿತಿ ಕುರಿತು ಸಭೆಗೆ ವಿವರಿಸಿದರು. ಉದ್ಯಮಿಗಳು ಪುಣೆ, ಅಹಮದಬಾದ್ ನಗರಕ್ಕೆ ವಿಮಾನ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್. ಮನೋಹರ್, ನಿರ್ದೇಶಕರಾದ ಗಣೇಶ ಎಂ ಅಂಗಡಿ, ಎಸ್.ಪಿ.ಶಂಕರ್, ವಿ.ಕೆ.ಜೈನ್, ಲಕ್ಷ್ಮೀದೇವಿ ಗೋಪಿನಾಥ್, ಪ್ರದೀಪ್ ಎಲಿ, ರವಿ ಪ್ರಕಾಶ್ ಜನ್ನಿ, ಕಾರ್ಯಕಾರಿ ಕಾರ್ಯದರ್ಶಿ ಎಚ್. ಎಚ್. ಕಮಲಾಕ್ಷರಪ್ಪ ಮತ್ತು ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ, ಐ ಐ ಎಫ್ ದಕ್ಷಿಣ ಪ್ರಾದೇಶಿಕ ಕೇಂದ್ರದ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಸಾಗರ ರಸ್ತೆ ಕೈಗಾರಿಕಾ ಸಂಘದ ಅಧ್ಯಕ್ಷ ಉಮೇಶ್ ಶಾಸ್ತ್ರಿ, ಕಲ್ಲೂರು ಮಂಡಳಿ ಕೈಗಾರಿಕಾ ಸಂಘದ ಅಧ್ಯಕ್ಷ ಗೇವರ್ ಚಂದ್, ಜಿಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಶ್ವೇಶರಾಯ ಹಾಗೂ ಅನೇಕ ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮಿಗಳು ಭಾಗವಹಿಸಿದ್ದರು.
Dinesh Gundu Rao ನೀರಿನ ಬಾಟಲಿ ಖರೀದಿಸುವಾಗ ಸಾರ್ವಜನಿಕರು ಜಾಗ್ರತೆ ವಹಿಸಬೇಕು- ಸಚಿವ ದಿನೇಶ್ ಗುಂಡೂರಾವ್
Dinesh Gundu Rao ಸಾರ್ವಜನಿಕರು ಕುಡಿಯುವ ನೀರಿನ ಬಾಟಲಿಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಹೊರಗಡೆ ದೊರೆಯುವ ನೀರಿನ ಬಾಟಲಿಗಳಲ್ಲಿ ಹಲವು ಅಸುರಕ್ಷಿತವಾಗಿರುವುದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಡೆಸಿದ ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ. ಇಲಾಖೆಯು ಒಟ್ಟು 296 ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಿದ್ದು, ಅವುಗಳಲ್ಲಿ 255 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಳಿಸಿದೆ. ಇದರಲ್ಲಿ 72 ಮಾದರಿಗಳು ಸುರಕ್ಷಿತ, 95 ಮಾದರಿಗಳು ಅಸುರಕ್ಷಿತ ಹಾಗೂ 88 ಮಾದರಿಗಳು ಕಳಪೆ ಗುಣಮಟ್ಟದ್ದು ಎಂದು ವರದಿಯಾಗಿದೆ. ಶೀಘ್ರದಲ್ಲಿಯೇ ಲೀಗಲ್ ಸ್ಯಾಂಪಲ್‌ಗಳ ಪರೀಕ್ಷೆ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.
CM Siddaramaiah ಎಂಟು ಗಣಿ ಕಂಪೆನಿಗಳ ಕುರಿತ ಮಾಧ್ಯಮ ವರದಿಗಳ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಏನು ಹೇಳ್ತಾರೆ?
CM Siddaramaiah ಇಂದು ಮಾಧ್ಯಮಗಳಲ್ಲಿ 8 ಗಣಿ ಕಂಪೆನಿಗಳ ಕುರಿತಾಗಿ ಪ್ರಕಟಗೊಂಡ ಸುದ್ದಿ ಗಮನಿಸಿದೆ. ಈ ಬಗ್ಗೆ ಕೆಲವು ಸ್ಪಷ್ಟನೆ ನೀಡಬಯಸಿದ್ದೇನೆ.
ಗಣಿ ಗುತ್ತಿಗೆ ನವೀಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ.
ಇಂತಹ ಅಪ ಪ್ರಚಾರಗಳು ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ನಡೆದುಕೊಂಡು ಬರುತ್ತಿದೆ. ಕೆಲವು ದುಷ್ಟಶಕ್ತಿಗಳು ರಾಜಭವನವನ್ನು ತಪ್ಪು ದಾರಿಗೆಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ.
2015 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಎಂಎಂಡಿಆರ್-1957 ಕಾಯ್ದೆಯಲ್ಲಿ ನವೀಕರಣವು 20 ವರ್ಷಗಳ ಅವಧಿಗೆ ಅನ್ವಯವಾಗುತ್ತಿತ್ತು. ಅದರ ಪ್ರಕಾರ ಸರ್ಕಾರವು “ಗಣಿ ಗುತ್ತಿಗೆಯ ನವೀಕರಣಕ್ಕೆ ಫಾರೆಸ್ಟ್ ಕ್ಲಿಯರೆನ್ಸ್‌ನ್ನು ಪಡೆದುಕೊಳ್ಳುವ ಸಲುವಾಗಿ ಮಾತ್ರ ಷರತ್ತುಬದ್ಧ ತಾತ್ವಿಕ ಅನುಮೋದನೆ ನೀಡಲಾಗಿದೆ.”
ದಿನಾಂಕ: 12.01.2015 ರಂದು ಕೇಂದ್ರ ಸರ್ಕಾರವು ಎಂಎಂಡಿಆರ್ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿಯನ್ನು ತಂದ ಕಾರಣ ವಿವಿಧ ಹಂತದ ಪರಿಶೀಲನೆಗಳನ್ನು ನಡೆಸಿ, ದಿನಾಂಕ: 09.02.2015 ರಂದು ಗಣಿ ಗುತ್ತಿಗೆ ನವೀಕರಣಕ್ಕಾಗಿ ನೀಡಿದ್ದ ಷರತ್ತುಬದ್ಧ 8 ಕಂಪನಿಗಳ ತಾತ್ವಿಕ ಅನುಮತಿ ಪತ್ರಗಳು ಊರ್ಜಿತವಲ್ಲ ಎಂದು ತೀರ್ಮಾನಿಕಸಿ ಅವುಗಳನ್ನು ರದ್ದುಪಡಿಸಿ ತಿದ್ದುಪಡಿ ಕಾಯ್ದೆಯಂತೆ ಕ್ರಮವಹಿಸಲು ಸೂಚಿಸಲಾಯಿತು.
ನಂತರ, ಗಣಿ ಇಲಾಖೆಯು ಸಲ್ಲಿಸಿದ ಡೀಮ್ಡ್ ಅವಧಿ ವಿಸ್ತರಣೆ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ರಾಜ್ಯ ಸರ್ಕಾರವು ಒಂದು ಪ್ರಕರಣವನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಡೀಮ್ಡ್ ಅವಧಿ ವಿಸ್ತರಣೆಗೆ ಪರಿಗಣಿಸದೆ ರದ್ದುಪಡಿಸಲಾಗಿದೆ. ಉಳಿದ 7 ಪ್ರಕರಣಗಳಿಗೆ ಶಾಸನಬದ್ಧವಾದ ಅರಣ್ಯ, ಪರಿಸರ ಮುಂತಾದ ತೀರುವಳಿ ಪತ್ರಗಳನ್ನು ಹಾಜರುಪಡಿಸುವ, ಬೇಬಾಕಿ ಪತ್ರ ಸಲ್ಲಿಸುವ ಹಾಗೂ ಸಿಬಿಐ, ಎಸ್‌ಐಟಿ ಸೇರಿದಂತೆ ವಿವಿಧ ಸಂಸ್ಥೆಗಳ ತನಿಖೆಯ ಅಂತಿಮ ವರದಿಯನ್ನು ಆಧರಿಸಿ ಸರ್ಕಾರದ ಕ್ರಮಕ್ಕೆ ಬದ್ಧರಾಗಲು ಷರತ್ತು ವಿಧಿಸಿ ಡೀಮ್ಡ್ ಅವಧಿ ವಿಸ್ತರಣೆ ಪತ್ರ ನೀಡಲಾಗಿದೆ.
CM Siddaramaiah ಆದರೆ, ಈ 7 ಕಂಪನಿಗಳ ಪೈಕಿ 2 ಕಂಪನಿಗಳು ಶಾಸನಬದ್ಧವಾದ ತೀರುವಳಿಗಳನ್ನು ಸಲ್ಲಿಸದ ಕಾರಣ, ಯಾವುದೇ ಗಣಿಗಾರಿಕೆ ಹಕ್ಕುಗಳನ್ನು ನೀಡಿರುವುದಿಲ್ಲ. ಉಳಿದ 5 ಪ್ರಕರಣಗಳಲ್ಲಿ 3 ಪ್ರಕರಣಗಳನ್ನು ಬಿಜೆಪಿ ಆಡಳಿತದ ಅವಧಿಯಲ್ಲಿ ಅಂದರೆ 2020 ಹಾಗೂ 2021 ರಲ್ಲಿ ಗಣಿ ಗುತ್ತಿಗೆ ಹಕ್ಕನ್ನು ನೀಡಲಾಗಿದೆ. ಉಳಿದ ಎರಡು ಪ್ರಕರಣಗಳನ್ನು 2016 ಮತ್ತು 2018 ರಲ್ಲಿ ಪೂರಕ ಕರಾರು ಪತ್ರದ ಮುಖಾಂತರ ಷರತ್ತುಬದ್ಧ ಡೀಮ್ಡ್ ವಿಸ್ತರಣೆಯ ಗಣಿ ಗುತ್ತಿಗೆ ಹಕ್ಕನ್ನು ನೀಡಲಾಗಿದೆ.
ಹಾಗಾಗಿ, ಈ ಎಲ್ಲಾ 8 ಪ್ರಕರಣಗಳಲ್ಲಿ ಸರ್ಕಾರಕ್ಕೆ ನಯಾಪೈಸೆಯಷ್ಟೂ ನಷ್ಟವಾಗಲಿಲ್ಲ. ಈ ಅವಧಿಯಲ್ಲಿ ಒಂದು ಹಿಡಿಯಷ್ಟೂ ಅದಿರು ತೆಗೆದಿಲ್ಲ.
ಈ ಕುರಿತಂತೆ ಈ ಹಿಂದೆ ಕೂಡ ವಿರೋಧ ಪಕ್ಷಗಳವರು ಹಾಗೂ ಕೆಲವು ವ್ಯಕ್ತಿಗಳು ಹಲವು ಸಂಸ್ಥೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ಈ ದೂರುಗಳಲ್ಲಿ ಯಾವುದೇ ಹುರುಳಿಲ್ಲವೆಂದು ದೂರುಗಳನ್ನು ಮುಕ್ತಾಯಗೊಳಿಸಲಾಗಿದೆ.
ವಿರೋಧ ಪಕ್ಷಗಳವರು ಸದರಿ ವಿಚಾರವನ್ನು ಸದನದಲ್ಲೂ ಪ್ರಶ್ನಿಸಿದ್ದರು. ಈಗಿನ ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಮಂತ್ರಿಯಾಗಿರುವ ಕುಮಾರಸ್ವಾಮಿಯವರು ದಿನಾಂಕ: 14.01.2018 ರಂದು ಪತ್ರಿಕಾ ಗೋಷ್ಠಿಯನ್ನೂ ಮಾಡಿದರು.
ಆದರೆ, ಈ ಯಾವುದೇ ಪ್ರಕರಣಗಳಲ್ಲಿ ಹುರುಳೆ ಇರಲಿಲ್ಲ. ಏಕೆಂದರೆ, ಈ ಎಲ್ಲಾ 8 ಪ್ರಕರಣಗಳನ್ನು ಹೊಸ ಸುಗ್ರೀವಾಜ್ಞೆಯ ನಿಯಮಾವಳಿಗಳಿಗೆ ಅನುಗುಣವಾಗಿ ಕ್ರಮವಹಿಸಲಾಗಿದೆ. ಅವಧಿ ಮುಗಿದ ಗಣಿ ಗುತ್ತಿಗೆಗಳನ್ನು ನಂತರ ನಿಯಮಾನುಸಾರ ಹರಾಜಿಗೆ ಒಳಪಡಿಸಿ ವಿಲೇ ಮಾಡಲಾಗಿದೆ.
ಸುಮಾರು 10 ವರ್ಷಗಳ ನಂತರ ಈ ಪ್ರಕರಣವನ್ನು ರಾಜಕೀಯ ದುರುದ್ದೇಶದಿಂದ ಜಗಿಯಲು ಪ್ರಾರಂಭಿಸಿದ್ದಾರೆ.
ಹುರುಳಿಲ್ಲದ ವಿಷಯಕ್ಕೆ ವಿಷ ತುಂಬಿ ನಾಡಿನ ಜನರ ಮೆದುಳನ್ನು ಕಲುಷಿತಗೊಳಿಸಲು ಹೊರಟಿರುವ ದುಷ್ಟ ರಾಜಕೀಯ ಪಿತೂರಿಗಳನ್ನು ನಾಡಿನ ಪ್ರಜ್ಞಾವಂತ ಜನ ನಂಬಬಾರದು ಎಂದು ಮನವಿ ಮಾಡುತ್ತೇನೆ ಎಂದು ಸಾಮಾಜಿಕ ಜಾಲತಾಣ X ಖಾತೆಯಲ್ಲಿ ತಮ್ಮ ಅಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಂಚಿಕೊಂಡಿದ್ದಾರೆ
Shimoga News ಬಲಪ್ರಯೋಗದ ಬದಲು ಸಹಮತದ ಆಳ್ವಿಕೆಯಿಂದ ಅಧಿಕಾರ ಚಲಾವಣೆ – ಫಣಿರಾಜ್
Shimoga News ಬಲ ಪ್ರಯೋಗ ಯಾವಾಗಲೂ ಸಾಧ್ಯವಿಲ್ಲ, ಅದರ ಬದಲು ಸಹಮತಿಯ ಆಳ್ವಿಕೆಯಿಂದ ಅಧಿಕಾರ ಚಲಾಯಿಸುತ್ತಾರೆ ಚಿಂತಕ ಕೆ.ಫಣಿರಾಜ್ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ಮತ್ತು ಇಂಗ್ಲಿಷ್ ವಿಭಾಗ, ಐಕ್ಯೂಎಸಿ ಘಟಕ ಹಾಗೂ ಸಮುದಾಯ ಶಿವಮೊಗ್ಗದ ವತಿಯಿಂದ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಮತ್ತು ಆಂಟೋನಿಯೋ ಗ್ರಾಮ್ಷಿ ಹಾಗೂ ಮಿಷಲ್ ಫುಕೊ ಬಗ್ಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಇಂದು ಅಧಿಕಾರಕ್ಕೆ ಬಂದ ಎಲ್ಲರೂ ಈ ರೀತಿಯಲ್ಲಿ ಸಂಸ್ಕೃತಿಯನ್ನು ಅರ್ಥೈಸಿಕೊಂಡು ಅಧಿಕಾರ ನಡೆಸುತ್ತಾರೆ. ಆಳ್ವಿಕೆ ಕುರಿತಾದ ಗ್ರಾಮ್ಷಿ ಚಿಂತನೆ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.
ಕೆ.ಪ್ರಭಾಕರನ್ ಅನುವಾದಿಸಿರುವ ಇಎಂಎಸ್ ನಂಬೂದಿರಿ ಪಾಡ್ ಮತ್ತು ಪಿ.ಗೋವಿಂದ ಪಿಳ್ಳೈ ಬರೆದಿರುವ ಗ್ರಾಮ್ಷಿಯ ಚಿಂತನೆಗಳು ಪುಸ್ತಕ ಬಿಡುಗಡೆ ಮಾಡಲಾಯಿತು. ಕೇಶವ ಶರ್ಮಾ ಅನುವಾದಿಸಿರುವ ಪುಕೋ ವಿಚಾರಧಾರೆ, ಆಂಟೋನಿಯೊ ಗ್ರಾಮ್ಷಿ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಮಾತನಾಡಿ, ಇಂದು ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಡಾ. ಕೇಶವ ಶರ್ಮ ಅವರು ಗ್ರಾಮ್ಷಿಯಂತಹವರ ಬರವಣಿಗೆಯನ್ನು ಕನ್ನಡಕ್ಕೆ ತಂದಿರುವುದು ಒಳ್ಳೆಯದು. ಪುಸ್ತಕವನ್ನು ಕೊಂಡು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಈ ಪುಸ್ತಕದಲ್ಲಿ ಸಂಸ್ಕೃತಿ ಬಗ್ಗೆ ಅತ್ಯಂತ ವೈಚಾರಿಕ ವಿಷಯ ಇದೆ ಎಂದರು.
Shimoga News ಡಾ. ಹೆಚ್. ಎಸ್. ನಾಗಭೂಷಣ್ ಮಾತನಾಡಿ, ಕೆಲ ವಿಷಯಗಳನ್ನು ನಾವು ಪ್ರಶ್ನಿಸದೇ ಒಪ್ಪಿಕೊಳ್ಳುತ್ತೇವೆ. ಅಡುಗೆ ಮನೆ ಎಂದ ಕೂಡಲೇ ಹೆಣ್ಣು ನೆನಪಾಗುತ್ತಾಳೆ. ಹಾಗೇ ನಮಗೆ ಗೊತ್ತಿಲ್ಲದೆ ನಿರ್ದಿಷ್ಟ ವಿಷಯದ ಬಗ್ಗೆ ಈ ನೀತಿ ಶಾಶ್ವತ ಎಂದು ಭಾವಿಸುತ್ತೇವೆ ಎಂದರು.
ಡಿವಿಎಸ್ ಉಪಾಧ್ಯಕ್ಷ ಎಸ್ ಪಿ .ದಿನೇಶ್ , ಕಾರ್ಯದರ್ಶಿ ಎಸ್.ರಾಜಶೇಖರ್ , ಸಹ ಕಾರ್ಯದರ್ಶಿ
ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಕೋಶಾಧ್ಯಕ್ಷ ಬಿ.ಗೋಪಿನಾಥ್, ಚಿಂತಕ ಡಾ. ಕೆ.ಪ್ರಕಾಶ್, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಅವಿನಾಶ್, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ್, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ,ಎಸ್ ಕೆ ಸಾವಿತ್ರಿ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ ,ಕೇತನ ಅರ್ತಿ ಡಾ. ಉಮೇಶ್ ಅಂಗಡಿ, ಮಂಜುನಾಥ್ ಎಸ್.ಕೆ., ಪುಸ್ತಕ ಪ್ರಕಾಶಕರಾದ ಸೃಷ್ಟಿ ನಾಗೇಶ್, ಹಾಜರಿದ್ದರು.
Karnataka 2nd PUC Exam Result 2025 ಪ್ರತಿಭಾವಂತ ವಿದ್ಯಾರ್ಥಿನಿಯರಾದ ಕು.ದೀಕ್ಷಾ & ಕು.ಸಿಂಚನಾ ಅವರಿಗೆ ಜಿಲ್ಲಾ ಪಂಚಾಯತ್ ಅಭಿನಂದನಾ ಸಮಾರಂಭ.
Karnataka 2nd PUC Exam Result 2025 ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅಂಕಗಳಿಗೆ 599 ಅಂಕಗಳಿಸಿ, ರಾಜ್ಯಕ್ಕೆ ಪ್ರಥಮ ರ್ಯಾಂಕ್‌ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ ತೀರ್ಥಹಳ್ಳಿಯ ವಾಗ್ದೇವಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು.ದೀಕ್ಷಾ ಆರ್ ಮತ್ತು 600 ಅಂಕಗಳಿಗೆ 591ಅಂಕ ಗಳಿಸಿದ ಅದೇ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ ಕು.ಸಿಂಚನಾ ಅವರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್‌ನಜೀರ್‌ಸಾಬ್‌ಸಭಾಂಗಣದಲ್ಲಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ Karnataka 2nd PUC Exam Result 2025 ಚಂದ್ರಪ್ಪ ಗುಂಡಪಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಸುಜಾತಾ, ಯೋಜನಾ ನಿರ್ದೇಶಕಿ ಶ್ರೀಮತಿ ನಂದಿನಿ, ಜಿ.ಪಂ.ಮುಖ್ಯಯೋಜನಾಧಿಕಾರಿ ಹನುಮಾನಾಯ್ಕ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು.
DC Gurudatta Hegde ಜಿಲ್ಲೆಯ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯ ಸಮಿತಿಗಳಿಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅನುಮೋದನೆ
DC Gurudatta Hegde ಮಾನ್ಯ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್‌ಸಭೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇವಸ್ಥಾನಗಳ ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಯಂತೆ ನೂತನವಾಗಿ ರಚಿಸಲಾದ ಸಮಿತಿಯ ಪದಾಧಿಕಾರಿಗಳ ಪಟ್ಟಿಗೆ ಜಿಲ್ಲಾ ಧಾರ್ಮಿಕ ಪರಿಷತ್‌ಸಭೆಯಲ್ಲಿ ಅನುಮೋದಿಸಲಾಯಿತು. ಈ ಸಭೆಯಲ್ಲಿ ತಹಶೀಲ್ದಾರ್‌ಪ್ರದೀಪ್‌ನಿಕ್ಕಂ ಸೇರಿದಂತೆ ಜಿಲ್ಲಾ ಧಾರ್ಮಿಕ ಪರಿಷತ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
Gurudatta Hegde ಬೀದಿಬದಿ ವ್ಯಾಪಾರಿಗಳಿಗೆ ಸಹಕರಿಸಿ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಿ- ಗುರುದತ್ತ ಹೆಗಡೆ.
Gurudatta Hegde ಶಿವಮೊಗ್ಗ ನಗರದ ಗಾಂಧಿಬಜಾರ್‌ಸೇರಿದಂತೆ ಹಲವು ಜನನಿಬಿಡ ಪ್ರದೇಶಗಳಲ್ಲಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರಿಗಳು ಸಣ್ಣ ಸಣ್ಣ ಅಂಗಡಿಗಳನ್ನು ತೆರೆದುಕೊಂಡು ವ್ಯವಹಾರ ನಡೆಸುತ್ತಿರುವ ಕಾರಣ ಜನಸಾಮಾನ್ಯರ ಸುಗಮ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ತೀವ್ರ ತರಹದ ಅಡಚಣೆಯಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಬರುತ್ತಿರುವ ದೂರುಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಕಲ್ಪಿಸಬೇಕಾದ ಮೂಲಭೂತ ಸೌಕರ್ಯಗಳು ಹಾಗೂ ಸಮಸ್ಯೆಯ ಪರಿಹಾರಕ್ಕೆ ಕೈಗೊಳ್ಳಬಹುದಾದ ತುರ್ತು ಕ್ರಮಗಳ ಬಗ್ಗೆ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಗಾಂಧೀಬಜಾರಿನ ರಸ್ತೆಯ ಇಕ್ಕೆಲಗಳಲ್ಲಿ ವ್ಯವಹರಿಸುತ್ತಿರುವ ವ್ಯಾಪಾರಿಗಳು ಮುಂದಿನ 15ದಿನಗಳಲ್ಲಿ ಈಗಾಗಲೇ ಸೂಚಿಸಲಾದ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರ ನಡೆಸುತ್ತಿರುವವರನ್ನು ಗುರುತಿಸಿ, ಅವರಿಗೆ ತಮ್ಮ ವ್ಯವಹಾರದ ಸ್ಥಳಕ್ಕೆ ಅನುಕೂಲವಾಗುವಂತೆ ಲಭ್ಯವಾಗಬಹುದಾದ ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿಪಡಿಸಿ, ನೀರು, ಶೌಚಾಲಯ ಮತ್ತು ವಿದ್ಯುತ್‌ಸಂಪರ್ಕ ಸೌಲಭ್ಯಗಳನ್ನು ಮುಂದಿನ 15ದಿನಗಳೊಳಗಾಗಿ ಒದಗಿಸುವಂತೆ ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆಯ ಆಯುಕ್ತರಿಗೆ ಸೂಚಿಸಿದರು.
ಹೈಟೆನ್ಶನ್‌ವಿದ್ಯುತ್‌ತಂತಿ ಹಾದು ಹೋಗಿರುವ ಪ್ರದೇಶಗಳಲ್ಲಿ ಹಾಗೂ ಪ್ಲೈಓವರ್‌ಗಳ ಕೆಳಭಾಗಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸಿಕೊಡಬಹುದಾದ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸುವಂತೆ ಸೂಚಿಸಿದ ಅವರು, ಬೀದಿಬದಿ ವ್ಯಾಪಾರಿಗಳಿಂದಲೂ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥಪಡಿಸಲು ಕ್ರಮವಹಿಸುವಂತೆಯೂ ಸಲಹೆ ನೀಡಿ ಅವರು, ವ್ಯಾಪಾರಕ್ಕೆ ಸೂಕ್ತವಾದ ಪ್ರದೇಶಗಳನ್ನು ಗುರುತಿಸಿ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಜೊತೆಗೆ ನಿರ್ಬಂಧಿತ ಪ್ರದೇಶಗಳಲ್ಲಿ ವ್ಯಾಪಾರ ರಹಿತ ವಲಯಗಳೆಂದು ಫಲಕಗಳನ್ನು ಅಳವಡಿಸುವಂತೆಯೂ ಅವರು ಸೂಚಿಸಿದರು.
ಬಹುಮುಖ್ಯವಾಗಿ ನಗರದ ಮಿಳ್ಳಘಟ್ಟ ರಸ್ತೆಯಲ್ಲಿ ಪ್ರತಿ ಮಂಗಳವಾರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಬಂದು ಸಂತೆ ಸೇರುವ ಜನರು, ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋ ಪಕ್ಕದಲ್ಲಿ ಪರ್ಯಾಯವಾಗಿ ಗುರುತಿಸಲಾಗಿರುವ ಸ್ಥಳದಲ್ಲಿ ಸಂತೆ ಸೇರಿ ವಹಿವಾಟು ನಡೆಸುವಂತೆ, ಹಾಗೂ ವಿನೋಬನಗರದ ಶಿವಾಲಯದ ಬಳಿ ಮೂರು ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿಯೇ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಮಳಿಗೆಗಳನ್ನು ಪಡೆದವರು ಅವುಗಳನ್ನು ಬಳಸದೇ ಹಾಗೇ ಉಳಿದಿವೆ. ಅಲ್ಲದೇ ಪುನಃ ಬೀದಿ ಬದಿ ವ್ಯಾಪಾರಕ್ಕೆ ಮುಂದಾಗಿರುವುದು ಸರಿಯಲ್ಲ. ಮಳಿಗೆಗಳನ್ನು ಪಡೆದವರು ಕೂಡಲೇ ಮಳಿಗೆಗಳಲ್ಲಿ ವಹಿವಾಟು ನಡೆಸಲು ಮುಂದಾಗಬೇಕು. ತಪ್ಪಿದಲ್ಲಿ ಅವುಗಳನ್ನು ಅಗತ್ಯವಿರುವವರಿಗೆ ವಿಲೇ ಮಾಡಲು ಕ್ರಮ ಕೈಗೊಳ್ಳಲಾಗುವುದು. ಪಾಲಿಕೆಯ ಅಧಿಕಾರಿಗಳು ಸದರಿ ಸ್ಥಳವನ್ನು ಕೂಡಲೇ ಸ್ವಚ್ಚಗೊಳಿಸಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಡುವಂತೆ ಅವರು ಸೂಚಿಸಿದರು.
Gurudatta Hegde ಹಣ್ಣು-ಹೂವಿನ ವ್ಯಾಪಾರಿಗಳನ್ನು ಸಮೀಪದ ಕನ್ಸರ್‌ವೆನ್ಸಿ ರಸ್ತೆಗಳಿಗೆ ಸ್ಥಳಾಂತರಗೊಳಿಸುವಂತೆ, ನಗರದ ಗೌರವ ಲಾಡ್ಜ್‌ಸಮೀಪದ ನೂತನವಾಗಿ ನಿರ್ಮಿಸಲಾಗಿರುವ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ ಅವರು, ನಗರದ ಸುಮಾರು 14ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಅಭಿವೃಧ್ಧಿಪಡಿಸಿ, ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕೆ ಒದಗಿಸಲು ಸೂಚಿಸಲಾಗಿದೆ ಎಂದವರು ನುಡಿದರು.
ವಿನಾಯಕ ಚಿತ್ರಮಂದಿರದ ಸಮೀಪದ ಪಾಲಿಕೆಯಸ್ವತ್ತಿನ ವಿಷಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ, ನ್ಯಾಯಾಲಯದ ತೀರ್ಪಿನಂತೆ ಕ್ರಮ ವಹಿಸಲಾಗುವುದು.ವಿದ್ಯಾನಗರ, ಎಂ.ಆರ್.ಎಸ್., ಗುರುಪುರ, ಸೆಕ್ರೇಡ್‌ಹಾರ್ಟ್‌ಚರ್ಚ್-ಮೀನಾಕ್ಷಿ ಭವನ, ಹಾಗೂ ಸುತ್ತಮುತ್ತಲ ಪ್ರದೇಶದ ಬೀದಿಬದಿ ವ್ಯಾಪಾರಿಗಳು ಮತ್ತೂರು ರಸ್ತೆಗೆ ಸ್ಥಳಾಂತರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಬೀದಿಬದಿ ವ್ಯಾಪಾರಿಗಳ ಸುರಕ್ಷತೆ ಹಾಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಮತ್ತೊಂದು ಸಭೆ ಆಯೋಜಿಸಿ ಚರ್ಚಿಸಲಾಗುವುದು ಎಂದ ಅವರು, ವ್ಯಾಪಾರಿಗಳು ಉತ್ಪತ್ತಿಯಾದ ಕಸವನ್ನು ಬೇರ್ಪಡಿಸಿ ನೀಡಬೇಕು. ಅಲ್ಲದೇ ಎಲ್ಲೆಂದರಲ್ಲಿ ಬಿಸಾಕಬಾರದು ಮಾತ್ರವಲ್ಲ ಜವಾಬ್ದಾರಿಯುತವಾಗಿ ಜಿಲ್ಲಾಡಳಿತದೊಂದಿಗೆ ವರ್ತಿಸಬೇಕು. ನಗರವನ್ನು ರಾಜ್ಯದ ಮಾದರಿ ನಗರವನ್ನಾಗಿ ನಿರ್ಮಿಸಲು ಅಗತ್ಯ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಅನಿಲ್‌ಕುಮಾರ್‌ಭೂಮರೆಡ್ಡಿ ಅವರು ಮಾತನಾಡಿ, ನಗರದಲ್ಲಿ ವಾಹನಗಳ ನಿಲುಗಡೆ ಮತ್ತು ಬೀದಿಬದಿ ವ್ಯಾಪಾರಿಗಳಿಂದಾಗಿ ವಾಹನಗಳ ಚಾಲಕರಿಗೆ ಹಾಗೂ ಪಾದಚಾರಿಗಳಿಗೆ ಅಡಚಣೆ ಉಂಟಾಗುತ್ತಿದೆ. ವಿಶೇಷವಾಗಿ ಉಷಾ ನರ್ಸಿಂಗ್‌ವರ್ತುಲದಲ್ಲಿ ತೀರ್ವ ತರಹದ ಅಡಚಣೆ ಉಂಟಾಗುತ್ತಿರುವುದನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿ ಸಮಸ್ಯೆಯ ಇತ್ಯರ್ಥಕ್ಕೆ ಕ್ರಮವಹಿಸಬೇಕಾದ ಅಗತ್ಯವಿದೆ ಎಂದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್, ಡಿ.ವೈ.ಎಸ್ಪಿ., ಸಂಜೀವ್‌ಕುಮಾರ್, ಪಾಲಿಕೆ ಅಧಿಕಾರಿ ಶ್ರೀಮತಿ ಅನುಪಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಬೀದಿಬದಿ ವ್ಯಾಪಾರಿ ಮಣಿಕಂಠ, ಚನ್ನವೀರಪ್ಪ ಮುಂತಾದವರು ಉಪಸ್ಥಿತರಿದ್ದರು.
Sahyadri Arts College, Shivamogga ಕುವೆಂಪು ವಿವಿ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ.ಹೊಸನಗರ ಕೊಡಚಾದ್ರಿ ಕಾಲೇಜಿಗೆ ಪ್ರಥಮ ಸ್ಥಾನ
Sahyadri Arts College, Shivamogga ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆದ ಕುವೆಂಪು ವಿವಿ ಮಟ್ಟದ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಡೆದುಕೊಂಡಿದೆ.
ಉಳಿದAತೆ ಜಾನಪದ ನೃತ್ಯಕ್ಕೆ ಎಜುರೇಟ್ ಕಾಲೇಜು ಆಫ್ ಮ್ಯಾನೇಜ್‌ಮೆಂಟ್ ಶಿವಮೊಗ್ಗ ಪ್ರಥಮ ಬಹುಮಾನ, ಶಿಕಾರಿಪುರ ಪ್ರಥಮ ದರ್ಜೆ ಕಾಲೇಜು ಎರಡನೇ ಬಹುಮಾನ ಪಡೆದುಕೊಂಡಿದೆ. ಸಿನಿಮಾ ನೃತ್ಯದಲ್ಲಿ ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಪ್ರಥಮ, ಸಾಗರದ ಎಲ್‌ಬಿ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡಿದೆ. ಸಮೂಹ ಗಾಯನದಲ್ಲಿ ಚಿಕ್ಕಮಗಳೂರು ಪ್ರಥಮ, ಹೊಸನಗರ ಕಾಲೇಜು Sahyadri Arts College, Shivamogga ದ್ವಿತೀಯ ಬಹುಮಾನ ಪಡೆದಿದೆ. ಭರತನಾಟ್ಯದಲ್ಲಿ ಪ್ರಥಮ ಎಜುರೇಟ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಆಫ್ ಶಿವಮೊಗ್ಗ, ಸಾಗರ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡಿದೆ. ನಿರೂಪಣೆಯಲ್ಲಿ ಎಜುರೇಟ್ ಕಾಲೇಜು ಪ್ರಥಮ, ಸಹ್ಯಾದ್ರಿ ವಿಜ್ಞಾನ ಕಾಲೇಜು ದ್ವಿತೀಯ ಬಹುಮಾನ ಪಡೆದರೆ, ಪ್ರಹಸನ ವಿಭಾಗದಲ್ಲಿ ಶಿಕಾರಿಪುರ ಕಾಲೇಜು ಪ್ರಥಮ, ಎಜುರೇಟ್ ಕಾಲೇಜು ದ್ವಿತೀಯ ಬಹುಮಾನ ಪಡೆದಿದೆ.
