Wednesday, March 4, 2026
Wednesday, March 4, 2026
Home Blog Page 342

Shimoga-Bhadravati Urban Development Authority ‘ಸೂಡಾ’ವತಿಯಿಂದ ಶಿವಮೊಗ್ಗ ಹಸುರೀಕರಣಕ್ಕೆ ಪ್ರಯತ್ನ- ಹೆಚ್.ಎಸ್.ಸುಂದರೇಶ್

0

Shimoga-Bhadravati Urban Development Authority ಮಲೆನಾಡು ಬಯಲು ಸೀಮೆಯಾಗುತ್ತಿರುವ ಪ್ರಸ್ತುತ ದಿನಮಾನದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು ಅತಿ ಅವಶ್ಯಕವಾಗಿದ್ದು ಸೂಡಾ ವತಿಯಿಂದ ನಗರ ಹಸುರೀಕರಣಗೊಳಿಸಲು ಉದ್ಯಾನವನ ಅಭಿವೃದ್ದಿ, ಗಿಡ ನೆಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಹೇಳಿದರು.

ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ಬಡಾವಣೆಯ ಪಕ್ಕದ ಪೊಲೀಸ್ ಲೇಔಟ್ ಉದ್ಯಾನವನ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಅಂದಾಜು ಮೊತ್ತ ರೂ.25 ಲಕ್ಷದಲ್ಲಿ ಈ ಉದ್ಯಾನವನ ಪ್ರದೇಶಕ್ಕೆ ಫೌಂಡೇಶನ್ ಸಹಿತ ಕಾಂಪೌಂಡ್ ಗೋಡೆ ನಿರ್ಮಾಣ ಮತ್ತು ಮುಂಭಾಗದಲ್ಲಿ ಟೈಲ್ಸ್ ಅಳವಡಿಸಲಾಗುವುದು. ಈ ಪಾರ್ಕಿನಲ್ಲಿ ಬನ್ನಿ, ಮುತ್ತುಗ, ಪಾರಿಜಾತ, ಸುರಗಿ, ಬಿಲ್ವ, ನಾಗಲಿಂಗ ಪುಷ್ಪ, ಮಾವು, ತೆಂಗು ಸೇರಿದಂತೆ ಅನೇಕ ವಿಶೇಷವಾದ ಗಿಡ ಮರಗಳಿದ್ದು ನೀರಿಗಾಗಿ ಬೋರ್‌ವೆಲ್ ಮತ್ತು ಪಾಥ್‌ವೇ ಅಗಲೀಕರಣಕ್ಕೆ ನಿವಾಸಿಗಳು ಮನವಿ ಮಾಡಿದ್ದು ಒಟ್ಟು ರೂ.50 ಲಕ್ಷ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ ಎಂದ ಅವರು ಎಲ್ಲರೂ ತಮ್ಮ ಮನೆಗಳ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕೆಂದು ಕರೆ ನೀಡಿದರು.

ನಂತರ ಗೋಪಾಳ ಬಡಾವಣೆಯ ಚಂದನ ಉದ್ಯಾನವನ ಅಭಿವೃದ್ದಿಗಾಗಿ ರೂ.15 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಉದ್ಯಾನವನದಲ್ಲಿ ಹಳೆಯ ಹೊರಾಂಗಣ ಸಾಮಗ್ರಿಗಳನ್ನು ತೆಗೆದು ಪುನರ್ ಅಳವಡಿಕೆ ಮತ್ತು ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ ಹೊಸದಾಗಿ 05 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಸಲಾಗುವುದು ಎಂದರು.

ಗೋಪಾಳ ಬಡಾವಣೆಯ ಸಿ ಮತ್ತು ಎಫ್ ಬ್ಲಾಕ್ ಉದ್ಯಾನವನಗಳ ಅಭಿವೃದ್ದಿಗಾಗಿ ರೂ.25 ಲಕ್ಷ ಮೊತ್ತದ ಕಾಮಗಾರಿ ಕೈಗೊಳ್ಳಲಿದ್ದು ಸಿ-ಬ್ಲಾಕ್ ಉದ್ಯಾನವನದಲ್ಲಿ 6 * 9 ಮೀ. ಅಳತೆಯ ಮೇಲ್ಚಾವಣಿಯೊಂದಿಗೆ ಯೋಗ ಮಂಟಪ ನಿರ್ಮಾಣ, ಸಿ ಮತ್ತು ಎಫ್ ಬ್ಲಾಕ್‌ಗಳ ಉದ್ಯಾನವನಗಳಲ್ಲಿ ಅಂದಾಜು 185 ಮೀ. ಪಾಥ್‌ವೇ ನಿರ್ಮಾಣ, ಉದ್ಯಾನವನದ ಮುಖ್ಯ ದ್ವಾರದ ಬಳಿ ಡೆಕ್‌ಸ್ಲ್ಯಾಂಬ್ ನಿರ್ಮಾಣ ಮಾಡಲಾಗುವುದು ಎಂದರು.

ಗೋಪಾಳ ಬಡಾವಣೆಯ ಡಿ ಮತ್ತು ಇ ಬ್ಲಾಕ್‌ಗಳ ಉದ್ಯಾನವನ ಅಭಿವೃದ್ದಿಗೆ ರೂ.25 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಉದ್ಯಾನವನದಲ್ಲಿ ಪ್ಲಾಟ್‌ಫಾರಂ ನಿರ್ಮಾಣದೊಂದಿಗೆ 09 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಫೆನ್ಸಿಂಗ್ ದುರಸ್ತಿ, ಹಾಲಿ ಇರುವ ಪಾಥ್‌ವೇ ದುರಸ್ತಿ, ಉದ್ಯಾನವನದಲ್ಲಿ 07 ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಸಲಾಗುವುದು ಎಂದರು.

Shimoga-Bhadravati Urban Development Authority ಪಂಪಾ ನಗರದಲ್ಲಿರುವ ಮಲೆನಾಡು ಸೊಸೈಟಿ ಪಕ್ಕದ ಉದ್ಯಾನವನದ ಅಭಿವೃದ್ದಿ ಮತ್ತು ಗಾಡಿಕೊಪ್ಪ ಪೊಲೀಸ್ ಲೇಔಟ್ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ಅಳವಡಿಸುವ ರೂ.25 ಲಕ್ಷ ಮೊತ್ತದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಉದ್ಯಾನವನದಲ್ಲಿ ಪ್ಲಾಟ್‌ಫಾರಂ ನಿರ್ಮಾಣದೊಂದಿಗೆ 8 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಉದ್ಯಾನವನದಲ್ಲಿ ಸುಮಾರು 100 ಮೀ. ಪಾಥ್ ವೇ ನಿರ್ಮಾಣ ಹಾಗೂ 03 ಸಂಖ್ಯೆಯ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸೂಡಾ ಅಭಿಯಂತರರಾದ ಬಸವರಾಜಪ್ಪ, ಗಂಗಾಧರ ಸ್ವಾಮಿ, ಅಧಿಕಾರಿಗಳು, ಹಸಿರೇ ಉಸಿರು ಸಂಘದ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಗಂಗಾಧರ್, ಜಿ.ಡಿ.ಮಂಜುನಾಥ್, ಜಿತೇಂದ್ರ ಗೌಡ, ಹಾಲಪ್ಪ, ನಿವಾಸಿಗಳು ಪಾಲ್ಗೊಂಡಿದ್ದರು.

ಶಿವಮೊಗ್ಗ ಜೆಪಿಎನ್ ಪಿಯು ಕಾಲೇಜಿನ ವಿದ್ಯಾರ್ಥಿ ದರ್ಶನ್ ಗೆ ಶೇ 90 ಅಂಕ

0

ಶಿವಮೊಗ್ಗದ ಜಯಪ್ರಕಾಶ್ ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿ ದರ್ಶನ್ ಜಿ. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಶೇ.90% (535) ಅಂಕಗಳಿಸಿದ್ದು, ಕಾಲೇಜಿಗೆ ಕೀರ್ತಿ ತಂದಿದ್ದಾನೆ.

ದರ್ಶನ್ ಜಿ. ಅವರನ್ನು ಕಾಲೇಜಿನ ಪ್ರಾಂಶುಪಾಲರು, ಮುಖ್ಯೋಪಾಧ್ಯರು ಅಭಿನಂದಿಸಿದ್ದಾರೆ. ದರ್ಶನ್ ಜಿ. ಗೋಪಾಲ ಮತ್ತು ಮಂಜುಳಾ ಅವರ ಪುತ್ರ.

sri adichunchanagiri mahasamsthana math ಶ್ರೀಕಾಲ ಭೈರವೇಶ್ವರ ದೇಗುಲದಲ್ಲಿ ಸುವರ್ಣ ದಂಪತಿಗಳಿಗೆ ಸನ್ಮಾನ

0

sri adichunchanagiri mahasamsthana math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಡಾ॥ ನಿರ್ಮಲಾನಂದ ಸ್ವಾಮೀಜಿರವರು ಹಾಗೂ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿರವರ ದಿವ್ಯ ಸಾನಿಧ್ಯದಲ್ಲಿ, ಶರಾವತಿ ನಗರದಲ್ಲಿರುವ ಪವಿತ್ರ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಮಹೋತ್ಸವದಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭಾಗವಹಿಸಿದ್ದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ವಿವಾಹ ಜೀವನದಲ್ಲಿ 50 ವರ್ಷ ಪೂರೈಸಿದ ಆದರ್ಶ ಹಿರಿಯ ದಂಪತಿಗಳನ್ನು ವೇದಿಕೆಗೆ ಆಮಂತ್ರಿಸಿ, ಅವರ ಶ್ರದ್ಧಾ, ಸಹನೆ, ಬದ್ಧತೆ ಮತ್ತು ಪಾವಿತ್ರ್ಯಪೂರ್ಣ ದಾಂಪತ್ಯ ಬದುಕಿಗೆ ಗೌರವ ಸೂಚಿಸಿ ಸನ್ಮಾನಿಸಲಾಯಿತು.

sri adichunchanagiri mahasamsthana math ಈ ಸಂದರ್ಭದಲ್ಲಿ ಸಂಸದರಾದ ಬಿ ವೈ ರಾಘವೇಂದ್ರ, ಕನ್ನಡ ಚಿತ್ರರಂಗದ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್, ದೇವಸ್ಥಾನದ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

Sarji Foundation ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗೆ ಸರ್ಜಿ‌ ಸ್ಕಾಲರ್ ಷಿಪ್‌ ಟೆಸ್ಟ್

0

Sarji Foundation ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಪೂರ್ವಸಿದ್ಧತೆಯೇ ಪ್ರಮುಖ ಕೀಲಿ ಕೈ. ಸಿದ್ಧತೆ ಇಲ್ಲದೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದೆಂದರೆ ಈಜು ಬಾರದವ ಸಮುದ್ರಕ್ಕೆ ಇಳಿದಂತೆ . ಈ ದಿಸೆಯಲ್ಲಿ ರಾಜ್ಯದ ಪದವೀಧರರು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಅವಕಾಶವೊಂದನ್ನು ನೀಡಲು ಸರ್ಜಿ ಫೌಂಡೇಶನ್ ಮತ್ತು ಸ್ಪರ್ಧಾ ಲೈನ್ಸ್ ಸಂಸ್ಥೆಗಳು ಜಂಟಿಯಾಗಿ ನೈಋತ್ಯ ಪದವೀಧರರ ಕ್ಷೇತ್ರಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ಕೊಡಗು, ಉಡುಪಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ದಿನಾಂಕ 11 ಮೇ 2025 ರಂದು “ಸರ್ಜಿ ಸ್ಕಾಲರ್ಶಿಪ್ ಟೆಸ್ಟ್” ಎಂಬ ಶೀರ್ಷಿಕೆಯ ಅಡಿಯಲ್ಲಿ ಸ್ಕಾಲರ್ಶಿಪ್ ಟೆಸ್ಟ್ ನಡೆಸಲಾಗುವುದು.

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆಎಎಸ್‌ ಪರೀಕ್ಷೆ ಬರೆದು ರಾಜ್ಯ ಸೇವೆಗೆ ಸೇರಬೇಕು. ಅಥವಾ ಬ್ಯಾಂಕಿಂಗ್ ಪರೀಕ್ಷೆ ಬರೆದು ಉತ್ತಮ ಸಂಬಳದ ಜಾಬ್‌ ಪಡೆಯಬೇಕು. ಇನ್ನಷ್ಟು ಶ್ರಮ ಪಡೆದು ಆರ್‌ಆರ್‌ಬಿ, ಎಸ್‌ಎಸ್‌ಸಿ ಪರೀಕ್ಷೆ ಬರೆದು ಯಾವುದಾದರೂ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಬೇಕು. ಇಂತಹ ಕನಸು ಹೊತ್ತ ಮನಸ್ಸುಗಳ ಸಂಖ್ಯೆ ರಾಜ್ಯದಲ್ಲಿ ಕಡಿಮೆ ಏನಿಲ್ಲ. ಪ್ರತಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಗಳಲ್ಲಿ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳ ದಂಡು ರಾಜ್ಯದ ಪ್ರತಿ ಕೇಂದ್ರಗಳಲ್ಲೂ ತುಂಬಿಯೇ ಇರುತ್ತವೆ. ಆದರೆ ಕೆಲವರಿಗೆ, ಬಡತನ ಹಿನ್ನೆಲೆಯ ಉದ್ಯೋಗ ಆಕಾಂಕ್ಷಿಗಳಿಗೆ ಪರೀಕ್ಷೆ ತರಬೇತಿ ಕೇಂದ್ರಗಳು ಕೇಳುವ ಶುಲ್ಕ ಬರಿಸಲು ಸಾಧ್ಯವಾಗದೇ, ಇತ್ತ ಸ್ವಯಂ ಮಾರ್ಗದರ್ಶನವು ಸಾಲದೇ ಸಮಸ್ಯೆ ಎದುರಿಸುವ ಅಭ್ಯರ್ಥಿಗಳಿಗೆ  ಇದೊಂದು ಉತ್ತಮ ಅವಕಾಶ

ಕರ್ನಾಟಕದಲ್ಲಿ 4,430 ಪದವಿ ಕಾಲೇಜುಗಳು ಹಾಗೂ 26 ವಿಶ್ವ ವಿದ್ಯಾಲಯಗಳಿವೆ, 26 ವಿಶ್ವ ವಿದ್ಯಾಲಯದಿಂದ ಪ್ರತಿ ವರ್ಷ ಸರಿ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಬರುತ್ತಾರೆ. ವರದಿಗಳ ಪ್ರಕಾರ ಪ್ರತಿ ವರ್ಷ ಸುಮಾರು 1,50,000 ದಿಂದ 2,00,000 ಅಭ್ಯರ್ಥಿಗಳು ಕೆ.ಪಿ.ಎಸ್.ಸಿ ಪರೀಕ್ಷೆಗೆ ಅರ್ಜಿ ಹಾಕುತ್ತಾರೆ ಇದರಲ್ಲಿ 10,000 ದಿಂದ 12,000 ಅಭ್ಯರ್ಥಿಗಳು ಪ್ರಿಲಿಮ್ಸ್ ಪರೀಕ್ಷೆ ಕ್ಲಿಯರ್ ಮಾಡಿದರೆ 1,500 ದಿಂದ 2,000 ಅಭ್ಯರ್ಥಿಗಳು ಮೈನ್ಸ್ ಕ್ಲಿಯರ್ ಮಾಡಿ 300 ರಿಂದ 400 ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಇದರಲ್ಲಿ ಒಂದುವರೆ ಲಕ್ಷ ಅಭ್ಯರ್ಥಿಗಳು ಸರಿಯಾದ ಮಾರ್ಗದರ್ಶನ ಇಲ್ಲದೆ, ಗುಣಮಟ್ಟದ ತರಬೇತಿ ಇಲ್ಲದೆ ಪರೀಕ್ಷೆಗೆ ಸರಿಯಾದ ಪೂರ್ವಸಿದ್ಧತೆ ಇಲ್ಲದೆ ಹಲವಾರು ಅಭ್ಯರ್ಥಿಗಳು
ವಿಫಲರಾಗುತ್ತಾರೆ.

Sarji Foundation ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಅಂದರೆ ಸುಮಾರು 11 ರಿಂದ 18 ತಿಂಗಳ ಸಮಗ್ರ ಅಧ್ಯಯನ ಅಗತ್ಯವಾಗಿರುತ್ತದೆ. ಪರೀಕ್ಷೆಗೆ ಬೇಕಾದ ಸ್ಟಾರ್ಟರ್ಜಿ ಇರಬೇಕು, ತಜ್ಞರಿಂದ ನಿಖರ ಮಾರ್ಗದರ್ಶನ ಬೇಕಾಗುತ್ತದೆ ಇವುಗಳಿಗೆ ಅಭ್ಯರ್ಥಿಗಳು ತರಬೇತಿ ಪಡೆಯಲು ಹೋದರೆ 2 ರಿಂದ 3 ಲಕ್ಷ ಫೀಸ್ ಕಟ್ಟಬೇಕಾಗುತ್ತದೆ, ಅದರಲ್ಲಿ ಅವರ ಸ್ಟಡಿ ಮೆಟಿರಿಯಲ್ ನಿಯತಕಾಲಿಕೆಗಳಿಗೆ ಅಂತ 50 ಸಾವಿರದಿಂದ 1 ಲಕ್ಷ ಖರ್ಚಾಗುತ್ತದೆ. ಹಾಗಾಗಿ ನಮ್ಮ ಸರ್ಜಿ ಫೌಂಡೇಶನ್ ಈ ಸ್ಕಾಲರ್ಶಿಪ್ ಟೆಸ್ಟ್ ನಡೆಸಿ ಇದರಲ್ಲಿ ಆಯ್ಕೆಯಾಗುವ ಪ್ರತಿಭೆ ಇರುವ ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಸೂಕ್ತವಾದ ಮಾರ್ಗದರ್ಶನ ಮಾಡುವಲ್ಲಿ ಈ ಸ್ಕಾಲರ್ಶಿಪ್ ಟೆಸ್ಟ್ ಉಪಯುಕ್ತವಾಗುತ್ತದೆ.

ಯಾರು ಪರೀಕ್ಷೆ ಬರೆಯಬಹುದು. ?

ರಾಜ್ಯದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದವರಾಗಿರಬೇಕು.

ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರು. ( ಪ್ರಸ್ತುತ ಕೊನೆಯ ವರ್ಷ/ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು )

ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ಕೊಡಗು, ಉಡುಪಿ ಮತ್ತು ದಾವಣಗೆರೆ ಜಿಲ್ಲೆಯವರಾಗಿರಬೇಕು.

ಸ್ಕಾಲರ್ಶಿಪ್ ಟೆಸ್ಟ್ ನಿಂದಾಗುವ ಲಾಭಗಳು

IAS/KAS ಪರೀಕ್ಷಾ ಪೂರ್ವ ಸಿದ್ದತಾ ತಯಾರಿಕೆಗೆ 11 ತಿಂಗಳು ನಿರಂತರ ಆನ್ಲೈನ್ ಕೋರ್ಸ್.

N C E R T ಪಠ್ಯಧಾರಿತ ಪ್ರಮುಖ ವಿಷಯಗಳ ಆನ್ಲೈನ್ ಫೌಂಡೇಶನ್ ತರಗತಿಗಳು ನಡೆಸಲಾಗುವುದು.

ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ತರಗತಿಗಳು ನಡೆಯಲಿದೆ.

ನುರಿತ ಮಾರ್ಗದರ್ಶಕರಿಂದ ಪರಿಕ್ಷೆಯ ಕುರಿತು ಮಾರ್ಗದರ್ಶನ ದೊರೆಯಲಿದೆ.

ವಾರಕ್ಕೊಮ್ಮೆ ಟೆಸ್ಟ್ ಸರಣಿ ನಡೆಸಲಾಗುತ್ತದೆ.

ಐ.ಎ.ಎಸ್, ಕೆ.ಎ.ಎಸ್ ಮತ್ತು ಐ.ಪಿ.ಎಸ್ ಅಧಿಕಾರಿಗಳಿಂದ ಮೋಟಿವೇಷನ್ ಸೆಶನ್, ಕಲಿಯುವ ಕಾರ್ಯ ತಂತ್ರಗಳು

ಪ್ರಮುಖ ವಿಷಯಗಳ ಪ್ರಚಲಿತ ಘಟನೆ ಮತ್ತು ಮಾಸಿಕ ನಿಯತಕಾಲಿಕೆಗಳ ಉಪನ್ಯಾಸ.


ಪರೀಕ್ಷಾ ನೋಂದಣಿಗೆ ಕೊನೆಯ ದಿನಾಂಕ : 09 ಮೇ 2025

ಪರೀಕ್ಷಾ ಸಮಯ : ಬೆಳಿಗ್ಗೆ 10: 30 ರಿಂದ ಮದ್ಯಾಹ್ನ 12 : 30 ರ ವರೆಗೆ

ಹೆಚ್ಚಿನ ಮಾಹಿತಿಗಾಗಿ ಅಥವಾ ಪರೀಕ್ಷಾ ನೋಂದಣಿಗೆ 7204747789 ಈ ನಂಬರ್ ಗೆ ಸಂಪರ್ಕಿಸಬಹುದು

Adichunchanagiri Mahasamsthana Math ನಮ್ಮ ಧರ್ಮ,ಆಚಾರ, ವಿಚಾರಗಳು ಅನ್ಯದೇಶಗಳಿಗೆ ಮಾದರಿ-ಶ್ರೀನಿರ್ಮಲಾನಂದಶ್ರೀ

0

Adichunchanagiri Mahasamsthana Math ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂಸ್ಕಾರವನ್ನು ಹೊಂದಿದ ಭಾರತ. ದೇಶದಲ್ಲಿ ಕುಟುಂಬ ವ್ಯವಸ್ಥೆ ಜೀವಂತವಾಗಿ ಉಳಿಯಲು ಕಾರಣ ನಮ್ಮ ನಡುವಿನ ಧರ್ಮಗಳು ಹಾಗೂ ಆಚಾರ, ವಿಚಾರಗಳು ಕಾರಣ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.
ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗೂ 50 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಹಿರಿಯ ದಂಪತಿಗಳ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು, ನಮ್ಮ ನಡುವಿನ ವ್ಯವಸ್ಥೆಗಳು, ನಮ್ಮ ಧರ್ಮ, ನಮ್ಮ ಆಚಾರ,ವಿಚಾರಗಳು ಅನ್ಯ ದೇಶಗಳಿಗೆ ಮಾಡರಿ, ನಮ್ಮ ಇತ್ತೀಚಿನ ಆಚಾರ ವಿಚಾರಗಳನ್ನು ಮರೆಯುತ್ತಿರುವುದು ದುರಂತದ ಸಂಗತಿ. ಗುರು ಹಿರಿಯರನ್ನು ಪೂಜ್ಯ ತಂದೆ-ತಾಯಿಯರನ್ನು ನಾವು ಪ್ರೀತಿಯಿಂದ ಕಾಣುವುದು, ಆರಾಧಿಸುವುದು, ಆರೈಕೆ ಮಾಡುವುದು ಅತ್ಯಂತ ಅಗತ್ಯ. ಏಕೆಂದರೆ ಮುಂದೆ ನೀವು ಸಹ ವಯಸ್ಸಾದವರಾಗುತ್ತೀರಿ ಎಂಬ ಕಾಳಜಿ ಹಾಗೂ ಕಳಕಳಿ ನಿಮಗಿರಲಿ ಎಂದರು.
ಇತ್ತೀಚಿನ ದಿನಮಾನಗಳಲ್ಲಿ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಆರೋಪವನ್ನು ಕೇಳುತ್ತಿದ್ದೇವೆ. ಇಲ್ಲಿ ಗಂಡು ಹೆಣ್ಣಿನ ಮಧ್ಯದ ಅಂತರ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬದಲಾಗದಿದ್ದರೂ ಸಹ, ಹೊಂದಾಣಿಕೆ ಮನೋಭಾವ ಹಾಗೂ ಅತ್ಯಧಿಕ ದುರಾಸೆಯ ಮನಸ್ಸು ಇಂತಹ ಕ್ಲಿಷ್ಟತೆ ತರಲು ಕಾರಣವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಪ್ರತಿ ವರ್ಷ ಇದೇ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಿಂದ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಏರ್ಪಡಿಸುತ್ತಿತ್ತು, ಆದರೆ ಇತ್ತೀಚಿನ ಮದುವೆಗಳು ಹೈ ಫೈ ಕಲ್ಯಾಣ ಮಂದಿರಗಳನ್ನು ಕುಡುಕುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುವುದು ಉಚಿತ ಸಾಮೂಹಿಕ ವಿವಾಹದ ಸರಳ ಸಮಾರಂಭಕ್ಕೆ ಅಡ್ಡಿಯಾಗಿದೆ. ಎಂದಿನಂತೆ ಮುಂದಿನ ಬಾರಿ ಇದು ನಡೆಯುವುದಾಗಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿರುವುದು ಸಂತೋಷದ ವಿಷಯ. ಇಲ್ಲಿ 50 ವರ್ಷ ತುಂಬಿದ ದಂಪತಿಗಳನ್ನು ಮುಂದಿಟ್ಟುಕೊಂಡು, ಹೊಸ ದಾಂಪತ್ಯ ಜೀವನಕ್ಕೆ ಕಾಲಿರಿಸುವವರನ್ನು ಸೇರಿಸುವ ಉದ್ದೇಶವೆಂದರೆ ಬದುಕಿದರೆ ಹೀಗೆ ಸಾರ್ಥಕ ವರ್ಷಗಳನ್ನು ಕಳೆಯಬೇಕು ಎಂಬುದನ್ನು ನೆನಪಿಸುವ ಮಹತ್ತರ ಅಂಶವನ್ನು ಹೊಂದಿದೆ ಎಂದರು.
ಇತ್ತೀಚಿನ ದಿನಮಾನಗಳಲ್ಲಿ ನಾವು ತಿನ್ನುತ್ತಿರುವ ರಾಸಾಯನಿಕ ಗೊಬ್ಬರಗಳ ಕೆಮಿಕಲ್ ನಮ್ಮ ದೇಹವನ್ನು,ದೇಹದ ಅಂಗಾಂಶಗಳನ್ನು ಹಾಳುಮಾಡುತ್ತದೆ,ಅದಕ್ಕಾಗಿ ನಾವು ಆಯುರ್ವೇದದ ಮೊರೆ ಹೋಗುತ್ತೇವೆ. ಮುಖದ ಮೇಲೆ ಕೊಳೆ ಹತ್ತಿದರೆ ಸೋಪು ಹಚ್ಚಿ ತೊಳೆದುಕೊಳ್ಳುತ್ತೇವೆ ಆದರೆ ಮನಸ್ಸಿನ ಕೊಳೆ ತೊಳೆಯುವ ಕಾರ್ಯ ಇದರೊಂದಿಗೆ ನಡೆಯಬೇಕು. ಇದಕ್ಕೆ ಧರ್ಮ ಹಾಗೂ ಮಠಗಳು ಒಂದು ಪ್ರೇರಣೆಯಾಗುತ್ತದೆ ಎಂದರು.
ಶಿವಮೊಗ್ಗ ಶಾಸಕ ಎಸ್. ಎನ್. ಚನ್ನಬಸಪ್ಪ ಮಾತನಾಡುತ್ತಾ, ಆದಿಚುಂಚನಗಿರಿ ಶ್ರೀಗಳು ಹಿಂದೂ ಸಂಸ್ಕೃತಿಗೆ ಶಕ್ತಿ ಕೊಡುವಂತಹ ಕಾರ್ಯ ಮಾಡುತ್ತಿದ್ದಾರೆ.ಹಿಂದಿನಿಂದಲೂ ಭಾರತದ ಸಂಸ್ಕೃತಿಯ ಪ್ರತೀಕವಾಗಿದ್ದ ಶ್ರೀಮಠವು, ಈಗ ದೇಶ – ವಿದೇಶಗಳಲ್ಲಿ ನಮ್ಮ ಆಚಾರ, ವಿಚಾರಗಳನ್ನು,ಸಂಸ್ಕೃತಿ ಹಾಗೂ ಸಂಸ್ಕಾರವನ್ನು ನೀಡುತ್ತಿದ್ದಾರೆ. ಹಾಗಾಗಿ ಶ್ರೀಮಠವು ಎಲ್ಲರ ಗೌರವಕ್ಕೆ ಪಾತ್ರವಾಗುತ್ತದೆ ಎಂದರು.
Adichunchanagiri Mahasamsthana Math ಮಾಜಿ ನಗರಸಭಾ ಅಧ್ಯಕ್ಷ ಹಾಗೂ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೆಗಡೆ ಮಾತನಾಡಿ, ಶ್ರೀಗಳು ಈಗಿನ ವ್ಯವಸ್ಥೆಯಲ್ಲಿ ಮಲೆನಾಡಿನ ಭೂಮಿಯ ಉಳಿವಿಗಾಗಿ ರೈತನ ಬದುಕು ಹಸಿರು ಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಮಾತನಾಡಿ, ನೆಮ್ಮದಿ ಬದುಕನ್ನು ರೈತನಿಗೆ ಕೊಡಿಸುವ ಕಾರ್ಯ ಮಾಡಲಿ ಎಂದರು.ಶ್ರೀ ಆದಿಚುಂಚನಗಿರಿ ಹಿಂದಿನ ವಿದ್ಯಾರ್ಥಿ ಹಾಗೂ ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ,ಉಮಾಪತಿ ಶ್ರೀನಿವಾಸ್ ಮಾತನಾಡಿ, ನನಗೆ ತಂದೆ ತಾಯಿ ರಕ್ತವನ್ನು ಹೇಗೆ ಕೊಟ್ಟು ಬೆಳೆಸಿದರು ಹಾಗೆಯೇ ಆದಿಚುಂಚನಗಿರಿ ಶಿವಮೊಗ್ಗ ಮಠದ ಶ್ರೀಗಳಾದ ಪ್ರಸನ್ನನಾಥ ಸ್ವಾಮೀಜಿ ಅವರು ನನಗೆ ಅನ್ನದಾನದ ಜೊತೆ ಶಿಕ್ಷಣ ದಾನದ ಮಾಡಿದ ಹಿನ್ನೆಲೆಯಲ್ಲಿ,ನಾನು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ ಎಂದು ಶ್ರೀ ಗಳಿಗೆ ಹಾಗೂ ಮಠಕ್ಕೆ ಅಭಿನಂದಿಸಿದರು.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಶಾಖಾಮಠದ ಶ್ರೀ ಸಾಯಿನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿಗೌಡ ಉಪಸ್ಥಿತರಿದ್ದರು. ಸಂಗೀತ ಶಿಕ್ಷಕ ಅಂದ ಕಲಾವಿದ ಶರಣಪ್ಪ ಅವರ ಅತ್ಯದ್ಭುತ ಪ್ರಾರ್ಥನಾ ಗಾಯನದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಭದ್ರಾವತಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಜಗದೀಶ್ ಸ್ವಾಗತಿಸಿದರು. ಶಿಕ್ಷಕಿ ಸುಜಾತಾ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

CM Siddharamaiah ಎಲ್ಲಾ ಗ್ರಾಮಗಳು ಪೋಡಿಮುಕ್ತವಾಗಬೇಕು. ಕೆರೆ ಕಟ್ಟೆ ಒತ್ತುವರಿ ಸರ್ವೆ ಬೇಗ ಮುಗಿಸಿ- ಸಿದ್ಧರಾಮಯ್ಯ

0

CM Siddharamaiah ಕಂದಾಯ ಇಲಾಖೆ ಸರ್ಕಾರಕ್ಕೆ ಮಾತೃ ಇಲಾಖೆ ಇದ್ದಂತೆ. ಎಲ್ಲಾ ಗ್ರಾಮಗಳು ಪೋಡಿಮುಕ್ತ ಗ್ರಾಮಗಳಾಗಬೇಕು. ಕೂಡಲೇ ಸರ್ವೇ ಕಾರ್ಯ ಪೂರ್ಣಗೊಳ್ಳಬೇಕು. ಕೆರೆ-ಕಟ್ಟೆ ಒತ್ತುವರಿ ತೆರವುಗೊಳಿಸಲು ಕೂಡಲೇ ಕ್ರಮವಹಿಸಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಮಂತ್ರಿಗಳು ಪರವಾನಗಿ ಭೂಮಾಪಕರ ಖಾಯಂ ಮಾಡಲು ಗಂಭೀರ ಕ್ರಮ ವಹಿಸುವುದರ ಜೊತೆಗೆ 36 ಎ.ಡಿ.ಎಲ್.ಆರ್ ಗಳ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಕಂದಾಯ ಇಲಾಖೆ ಸರ್ಕಾರದ ಮಾತೃ ಇಲಾಖೆ ರೀತಿ ಇದೆ. ಈ ಇಲಾಖೆ ಅಚ್ಚುಕಟ್ಟಾಗಿ ಕೆಲಸ ಮಾಡಿದರೆ ರೈತ ಸಮುದಾಯ ನೆಮ್ಮದಿಯಾಗಿರುತ್ತದೆ. ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಅತ್ಯುತ್ತಮ ಕೆಲಸಗಳಾಗುತ್ತಿವೆ. ಕೃಷ್ಣಬೈರೇಗೌಡರು ಇಲಾಖೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡು, ನಾಲಗೆ ತುದಿಯಲ್ಲಿ ಅಂಕಿ ಅಂಶ ಇಟ್ಟುಕೊಂಡಿರುವ ಮಂತ್ರಿಗಳು. ಕೇವಲ ಮಂತ್ರಿ ಆದರೆ ಸಾಲದು. ಪರಿಣತಿ, ಕಾಳಜಿ ಇರಬೇಕು. ಇವೆರಡೂ ಕೃಷ್ಣಬೈರೇಗೌಡ ಅವರಲ್ಲಿದೆ ಅವರೊಬ್ಬ ಸಮರ್ಥ ಮಂತ್ರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

CM Siddharamaiah ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿ ಕಂದಾಯ ಇಲಾಖೆಯ, ನೌಕರರ ಬಹಳಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಪೂರ್ತಿ ಸಮಸ್ಯೆ ಬಗೆಹರಿದಿಲ್ಲ ಎನ್ನುವ ಬೇಸರ ನನಗೂ ಇದೆ. ತಹಶೀಲ್ದಾರ್, ಎಸಿ ಕಚೇರಿಗಳಲ್ಲಿ ಸುಗಮವಾಗಿ, ಪ್ರಾಮಾಣಿಕವಾಗಿ ಕೆಲಸಗಳು ಆದರೆ ನಾಡಿನ ಜನತೆ, ರೈತ ಸಮುದಾಯ ಅತ್ಯಂತ ನೆಮ್ಮದಿಯಾಗಿರುತ್ತದೆ ಕಂದಾಯ ಇಲಾಖೆಗೆ ಅಗತ್ಯ ಇರುವಷ್ಟು ಹಣ ಕೊಟ್ಟಿದ್ದೇವೆ, ಮುಂದೆಯೂ ಕೊಡುತ್ತೇವೆ. ಅಗತ್ಯ ಸಿಬ್ಬಂದಿ ಬಲವನ್ನೂ ಕೊಟ್ಟಿದ್ದೇವೆ. ಅಗತ್ಯ ಇದ್ದರೆ ಮತ್ತೂ ಕೊಡುತ್ತೇನೆ. ಖಾಲಿ ಇರುವ ಎಲ್ಲಾ ಸರ್ವೇಯರ್ ಹುದ್ದೆಗಳ ನೇಮಕಾತಿ ಅತ್ಯಂತ ಪಾರದರ್ಶಕವಾಗಿ ಆಗಿದೆ. ಸದ್ಯದಲ್ಲೇ ನೇಮಕಾತಿ ಪತ್ರವನ್ನೂ ಕೊಡುತ್ತೇವೆ ಎಂದರು. ಹಿಂದೆ ಗೋವಿಂದೇಗೌಡರು ಅವರ ಕಾಲದಲ್ಲಿ ಪ್ರಾಮಾಣಿಕವಾಗಿ ಒಂದು ಲಕ್ಷ ಶಿಕ್ಷಕರ ನೇಮಕಾತಿ ಆಗಿರುವ ರೀತಿಯಲ್ಲೇ ಕೃಷ್ಣಬೈರೇಗೌಡರು ಸರ್ವೇಯರ್ ಗಳ ನೇಮಕಾತಿ ಮಾಡಿದ್ದಾರೆ.

ನಮ್ಮದು ಹಳ್ಳಿಗಳ ಮತ್ತು ರೈತರ ದೇಶ. ಗ್ರಾಮಗಳು ಮತ್ತು ರೈತರು ನೆಮ್ಮದಿಯಾಗಿ ಉತ್ಪಾದನೆಯಲ್ಲಿ ತೊಡಗಬೇಕಾದರೆ ಸರ್ವೇ ಕಾರ್ಯ ಸರಿಯಾಗಿ ಪೂರ್ಣಗೊಳ್ಳಬೇಕು. ಕೆರೆ ಕಟ್ಟೆಗಳ ಒತ್ತುವರಿ ತೆರವುಗೊಳಿಸಬೇಕು, ಪೋಡಿ ಮುಕ್ತ ಗ್ರಾಮಗಳಾಗಬೇಕು. ಇದಕ್ಕಾಗಿ ಇಲಾಖೆಯ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಶ್ರಮಿಸಿ, ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡುವುದೇ ನಿಜವಾದ ಪುಣ್ಯದ ಕಾರ್ಯ ಎಂದು ಕರೆ ನೀಡುವುದರೊಂದಿಗೆ ಪ್ರತೀ ವರ್ಷ ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಆಚರಿಸಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಸಚಿವರಾದ ಕೃಷ್ಣಬೈರೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ರಿಜ್ವಾನ್ ಅರ್ಷದ್ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಕಂದಾಯ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಸೇರಿದಂತೆ ಗಣ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Inner Wheel Club Shimoga ಮಾನಸಿಕ ಶಾಂತಿಗೆ & ನೆಮ್ಮದಿಗೆ ವಿಪಶ್ಯನ ಧ್ಯಾನ ಸಹಕಾರಿ- ಮಧುರಾ ಸಾಹುಕಾರ್

0

Inner Wheel Club Shimoga ನಿಜವಾದ ಮಾನಸಿಕ ಶಾಂತಿಯನ್ನು ಪಡೆಯಲು ಮತ್ತು ನೆಮ್ಮದಿಯಿಂದ ಕೂಡಿದ ಉಪಯುಕ್ತವಾದ ಜೀವನವನ್ನು ನಡೆಸಲು ವಿಪಶ್ಯನ ಧ್ಯಾನ ತುಂಬಾ ಉಪಯುಕ್ತವಾಗಿದೆ ಎಂದು ವಿಪಶ್ಯನ ಮಧುರ ಸಾಹುಕಾರ್ ಅಭಿಮತ ವ್ಯಕ್ತಪಡಿಸಿದರು ಅವರು ರೋಟರಿ ಕ್ಲಬ್ ಶಿವಮೊಗ್ಗ ಮಿಟ್ಟೌನ್ ಹಾಗೂ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವಾ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಹಾಗೂ ರೋಟರಿ ಸದಸ್ಯರಿಗೆ ಸಾರ್ವಜನಿಕರಿಗೆ ಆಯೋಜಿಸಲಾದ ವಿಪಶ್ಯನ ಧ್ಯಾನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು.

ವಿಪಶ್ಯನ ಎಂದರೆ ವಸ್ತು ಸ್ಥಿತಿಯನ್ನು ಅದು ಇರುವಂತೆಯೇ ನೋಡುವುದು ಎಂದರ್ಥ ಇದು ತನ್ನ ಒಳಗನ್ನೇ ತಾನು ಗಮನಿಸುತ್ತಾ ಮನಸ್ಸನ್ನು ನಿರ್ಮಲ ಮಾಡುವ ವೈಜ್ಞಾನಿಕ ವಿಧಾನವಾಗಿದೆ ಎಂದು ನೋಡಿದ ಅವರು ನಾವೆಲ್ಲರೂ ಆಗಿಂದಾಗೆ ತಳಮಳ ನಿರಾಸೆ ಅಸಹಾಯಕತೆಗಳಿಗೆ ಒಳಗಾಗುತ್ತೇವೆ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳಲಾರದೆ ಹೋಗುತ್ತೇವೆ ಹೀಗೆ ನಾವು ವ್ಯಾಕುಲತೆಗೆ ಒಳಗಾದಾಗ ನಮ್ಮ ಈ ದುಃಖವನ್ನು ಇದನ್ನು ಇತರರಿಗೂ ಹಂಚಲಾರಂಬಿಸುತ್ತೇವೆ. ಖಂಡಿತವಾಗಿಯೂ ಇದು ಸರಿಯಾಗಿ ಬದುಕುವ ರೀತಿ ಅಲ್ಲ ನಾವೆಲ್ಲ ಶಾಂತಿಯಿಂದ ಇರಲು ಹಂಬಲಿಸುತ್ತೇವೆ ಮತ್ತು ನಮ್ಮ ಸುತ್ತಮುತ್ತಲಿ ನವರೊಂದಿಗೂ ಸಾಮರಸ್ಯದಿಂದ ಇರಲು ಬಯಸುತ್ತೇವೆ
ವಿಪಶ್ಯನವೂ ಭಾರತದ ಅತ್ಯಂತ ಪ್ರಾಚೀನವಾದ ಸಾಧನ ವಿಧಿಯಾಗಿದೆ ಇದನ್ನು ಗೌತಮ ಬುದ್ಧನು ಪುನಹ ಸಂಶೋಧಿಸಿ ತೆಗೆದ ತೆಗೆದ ಹಲವು ಕಾರಣಗಳಿಂದ ಇದು ಭಾರತದಲ್ಲಿ ಲುಪ್ತ ವಾಯಿತು ಧ್ಯಾನವು ಮನುಷ್ಯನ ಖಿನ್ನತೆ ಬೇಸರ ಹಾಗೂ ದುಗುಡ ದುಮ್ಮಾನಗಳನ್ನ ದೂರಮಾಡುತ್ತದೆ ನಮ್ಮ ಅಂತರಂಗವನ್ನ ಶುದ್ದಿ ಮಾಡುವುದರೊಂದಿಗೆ ನಮ್ಮ ದೇಹದಲ್ಲಿ ಚೈತನ್ಯ ಹಾಗೂ ಕಾಂತಿಯನ್ನು ಮೂಡಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ಧ್ಯಾನವನ್ನು ಮಾಡುವುದರ ಮುಖಾಂತರ ತಮ್ಮ ಜೀವನವನ್ನು ಸುಂದರವಾಗಿ ಇರಿಸಿಕೊಳ್ಳಬೇಕೆಂದು ಕರೆ ನೀಡಿದರು.

ಶಿಬಿರದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ
ಸುರೇಶ್ ದುರ್ಗಪ್ಪ ವಹಿಸಿ ಇಂದಿನ ದಿನ ವಾಹನಗಳಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಯೋಗ ಪ್ರಾಣಾಯಾಮ ಧ್ಯಾನ. ಬಹಳ ಪ್ರಮುಖವಾಗಿವೆ. ಆನ
ಪಾನ.ಸತಿ.ಧ್ಯಾನ. ಇವುಗಳ ಮುಖಾಂತರ ನಾವು ನೆಮ್ಮದಿಯನ್ನ ಕಂಡುಕೊಳ್ಳಬೇಕಾಗಿದೆ ಎಂದು ನುಡಿದರು.

Inner Wheel Club Shimoga ಇದೇ ಸಂದರ್ಭದಲ್ಲಿ ಇನ್ನರ್ವಿಲ್ ಕ್ಲಬ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ಮಾತನಾಡುತ್ತಾ ಕರ್ನಾಟಕದಾದ್ಯಂತ ಹಲವಾರು ಜಿಲ್ಲಾ ಕೇಂದ್ರ ಹಾಗೂ ತಾಲೂಕುಗಳಲ್ಲಿ ವಿಪಶ್ಯನದ ಕೇಂದ್ರಗಳು ಉಚಿತವಾಗಿ ಕಾರ್ಯನಿರ್ವಹಿಸುತ್ತಿದ್ದು ಇದನ್ನು ಸದುಪಯೋಗಪಡಿಸಿ
ಕೊಳ್ಳಬೇಕೆಂದು ಕರೆ ನೀಡಿದರು ವೇದಿಕೆಯಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್. ರೋಟರಿ ಮಿಡ್ ಟೌನ್ ಮಾಜಿ ಅಧ್ಯಕ್ಷರಾದ ವೀಣಾ ಸುರೇಶ್. ಪಿಯೂಷ್. ರೋಟರಿ ಮಿಡ್ ಟೌನ್ ಕಾರ್ಯದರ್ಶಿ ಪಹೀಮ್ ಹುಸೇನ್
ಶರವಣ ಹಾಗೂ ಇನ್ನರ್ ವೀಲ್ ಪದಾಧಿಕಾರಿಗಳು ಉಪಸ್ಥಿತರಿದ್ದರು

Mahavir Jayanti ಸಮಾಜಕ್ಕೆ ಶಕ್ತಿ ನೀಡಿದ ಜೈನ ಸಮಾಜಕ್ಕೆ ನಾವೂ ಶಕ್ತಿ ತುಂಬೇಕು- ಎಸ್.ಎನ್.ಚನ್ನಬಸಪ್ಪ

0

Mahavir Jayanti ಸತ್ಯ, ಅಹಿಂಸೆ ಮತ್ತು ಧರ್ಮ ಆಚರಣೆಯ ಮೂಲಕ‌ ಇಡೀ ಸಮಾಜಕ್ಕೆ ಶಕ್ತಿ ನೀಡಿದ ಜೈನ ಸಮಾಜಕ್ಕೆ ನಾವೂ ಶಕ್ತಿ ತುಂಬಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ ಸಮಾಜದ ವಿವಿಧ ಸಂಘಟನೆಗಳು, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಸಂಜೆ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸತ್ಯ, ಅಹಿಂಸೆ ಪರಮೋ ಧರ್ಮ ಎಂದು ನಂಬಿರುವ ಜೈನರು ಓಡಾಡುತ್ತಲೇ ದೇಶ ಕಟ್ಟಿದವರು. ಅವರ ನಡೆ ಧರ್ಮದ ಕಡೆ ಇರುತ್ತದೆ. ಧರ್ಮ ಆಚರಣೆಯ ಮೂಲಕ‌ ಇಡೀ ಸಮಾಜಕ್ಕೆ ಶಕ್ತಿ ನೀಡಿದ ಜೈನ ಸಮಾಜದದೊಂದಿಗೆ ನಾವೆಲ್ಲ ಇರಬೇಕು ಎಂದರು.

ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮಾಜದವರು ಸೇರಿ ಈ ಜಯಂತಿ ಆಚರಣೆ ಮಾಡಬೇಕು.
ಅಶಾಂತಿ, ಅಸೂಯೆ, ಅವಿಶ್ವಾಸಕ್ಕೆ ಕಾರಣ ನಾವೆಲ್ಲ ಒಗ್ಗಟ್ಟಾಗಿಲ್ಲದಿರುವುದು. ನಾವೆಲ್ಲ ಒಗ್ಗೂಡಬೇಕು. ಅಹಿಂಸೆ ಬಹು ದೊಡ್ಡ ಅಸ್ತ್ರ. ನಾವೆಲ್ಲ ಇದನ್ನು ಅಳವಡಿಸಿಕೊಳ್ಳಬೇಕು. ಆಸೆಯೇ ದುಖಕ್ಕೆ ಕಾರಣ ಎಂದು ಮಹಾವೀರರು ಹೇಳಿದ್ದು ಅವರು ತೋರಿರುವ ಮಾರ್ಗದಲ್ಲಿ ನಡೆಯಬೇಕು. ಜೈನ ಸಮುದಾಯದವರು ಸ್ನೇಹಜೀವಿಗಳು, ಆರ್ಥಿಕ ಸುಧಾರಣೆಯಲ್ಲಿ ಉತ್ತಮ‌ ಕೊಡುಗೆ ನೀಡಿದ್ದಾರೆ ಎಂದರು.

ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್ ಮಾತನಾಡಿ, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಎಲ್ಲರೂ ಸೇರಿ ಜಯಂತಿ ಆಚರಣೆ ಮಾಡಬೇಕು ಎಂದ ಅವರು ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ‌ ಎಂದು ಕರೆ ನೀಡಿದರು.

Mahavir Jayanti ಶಿವಮೊಗ್ಗ ಡಿ.ವಿ.ಎಸ್. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಪೂರ್ಣಿಮ ಅಶೋಕಕುಮಾರ್‌ ವಿಶೇಷ ಉಪನ್ಯಾಸ ನೀಡಿ ಮಾತನಾಡಿ,
ಭಗವಾನ್ ಮಹಾವೀರರು ಸಮಾಜಕ್ಕೆ ತೋರಿದ ಸನ್ಮಾರ್ಗ ಎಷ್ಟು ಪ್ರಮುಖವಾಗಿದ್ದು ಎಂಬುದನ್ನು ನಾವು ಸ್ಮರಿಸಬೇಕು.‌ ಅವರ ಉಪದೇಶಗಳನ್ನು ನಮ್ಮ‌ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಕ್ರಿ ಪೂ ೫೯೯ ರಲ್ಲಿ ಬಿಹಾರ ಭಾಗದ ಕುಂಡಲಪುರದ ಲಿಚ್ಚವಿ ಪ್ರಾಂತ ದಲ್ಲಿ ಜನಿಸಿದ ಇವರು ಜೈನ ಸಮಾಜದ ೨೪ ನೇ ಅಂದರೆ ಕೊನೆಯ ತೀರ್ಥಂಕರರು.

ಸಮಾಜದಲ್ಲಿ‌ ವಿವಿಧ ಕಾಲಘಟ್ಟದಲ್ಲಿ ಉದ್ಭವಿಸಿದ ಅಂಧಕಾರ, ಅಜ್ಞಾನ ಹೋಗಲಾಡಿಸಲು ಕ್ರಿಯಾಶೀಲ ಮಹಾಪುರುಷರ ಜನನ ಆಗುತ್ತದೆ. ಹೀಗೆ
ಮಹಾವೀರರ ಜನನ ಆಗುತ್ತದೆ. ಬುದ್ದ ಹಾಗೂ ಮಹಾವೀರರು ಸಮಕಾಲೀನರು.‌
ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಶಾಂತಿ, ಹಿಂಸೆ, ದ್ವೇಷ ತೊಡೆದು ಶಾಂತಿ ನೆಲೆಸಲು ಮುಂದಾಗುತ್ತಾರೆ.
ಬಾಲ್ಯಾವಸ್ಥೆಯಲ್ಲಿಯೇ ಹಿಂಸೆ , ದ್ವೇಷ , ಅಶಾಂತಿ ನಿವಾರಣೆ ಮಾಡಲು ಸಂಕಲ್ಪ ಮಾಡಿಕೊಳ್ಳುತ್ತಾರೆ.‌ ಯೌವನಾವಸ್ಥೆಯಲ್ಲಿ ವೈರಾಗ್ಯದತ್ತ ಸಾಗುತ್ತಾರೆ.

ಮುನಿ ಧೀಕ್ಷೆ ಪಡೆದು ೧೨ ವರ್ಷ ತಪಸ್ಸಿನಿಂದ ಕೇವಲ ಜ್ಞಾನ ಪಡೆಯುತ್ತಾರೆ.‌೩೦ ವರ್ಷ ಧರ್ಮೋಪದೇಶ ಮಾಡುತ್ತಾರೆ. ಮುಕ್ತಿ ಮಾರ್ಗದತ್ತ ನಡೆಯುತ್ತಾ ಇತರಿರಿಗೂ ಮಾರ್ಗದರ್ಶನ ಮಾಡುತ್ತಾರೆ.
ಜೀವಿಸು, ಇತರರನ್ನೂ ಜೀವಿಸಲು ಬಿಡು ಎಂದು ಸಾರುತ್ತಾರೆ.

ಪಂಚವ್ರತಗಳಾದ ಅಹಿಂಸೆ, ಸತ್ಯ, ಆಸ್ತೇಯ, ಬ್ರರ್ಹಚರ್ಯ ಮತ್ತು ಅಪರಿಗ್ರಹ ವ್ರತವನ್ನು ಬೋಧಿಸುತ್ತಾರೆ. ಅನೇಕಾಂತ ವಾದ ಪ್ರತಿಪಾದಿಸುತ್ತಾರೆ‌ಎಂದರು.
ದಿಗಂಬರ ಜೈನ ಸಂಘದ ಅಧ್ಯಕ್ಷರಾದ ಜಯರಾಜ ಬಿ.ಪಾಂಡಿ, ಶ್ವೇತಾಂಬರ ಜೈನ‌ ಸಮಾಜದ ಅಧ್ಯಕ್ಷರಾದ ದೇವಿಚಂದ್ ಷಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ ಭೂಮರಡ್ಡಿ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಅಶೋಕ ಕುಮಾರ್ ವಂದಿಸಿದರು.

Navodaya Vidyalaya ನವೋದಯ ವಿದ್ಯಾಲಯ ಪ್ರವೇಶಾತಿ ಪರೀಕ್ಷೆಗೆ ವಿಶೇಷ ಕೋಚಿಂಗ್

0

Navodaya Vidyalaya ಪ್ರತಿ ಜಿಲ್ಲೆಗೆ ಒಂದು ಕೇಂದ್ರ ಸರ್ಕಾರದ ಉಚಿತ ಸಿಬಿಎಸ್‌ಇ ವಸತಿ ಶಾಲೆ ಇದ್ದು, 6ನೇ ತರಗತಿಯಿಂದ ಪಿಯುಸಿ 12ನೇ ತರಗತಿಯವರೆಗೆ ಗುಣಮಟ್ಟದ ಶಿಕ್ಷಣ ಉಚಿತವಾಗಿರುತ್ತದೆ.

ಈ ವಸತಿ ಶಾಲೆಗೆ ಪ್ರವೇಶ ಪರೀಕ್ಷೆಯ ಮೂಲಕ 80 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರಸ್ತುತ 5 ನೇ ತರಗತಿ ಓದುತ್ತಿರುವ ಮಕ್ಕಳು ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ನವೋದಯ ಶಾಲೆಯ ಪ್ರವೇಶ ಪರೀಕ್ಷಾ ತರಬೇತಿ ಪಡೆಯುವುದರಿಂದ ಮಕ್ಕಳು ಅತ್ಯಂತ ಪ್ರತಿಭಾನ್ವಿತರಾಗುತ್ತಾರೆ. ಮಕ್ಕಳ ಪ್ರತಿಭೆ , ಶಿಸ್ತು, ಸಮಯ ಪರಿಪಾಲನೆ, ಬೌದ್ಧಿಕ ಸಾಮರ್ಥ್ಯ, ಭಾಷಾ ಸಾಮರ್ಥ್ಯ ಹೆಚ್ಚಿಗೆ ಆಗುವುದರ ಜೊತೆಗೆ ಗಣಿತದಲ್ಲಿ ಪ್ರಾವೀಣ್ಯತೆ ಗಳಿಸುತ್ತಾರೆ.

Navodaya Vidyalaya ಸದ್ಗುರು ಅಕಾಡೆಮಿ ವತಿಯಿಂದ ಕೇಂದ್ರ ಸರ್ಕಾರದ ನವೋದಯ ವಿದ್ಯಾಲಯ ಸಮಿತಿಯವರು ನಡೆಸುವ ಪ್ರವೇಶ ಪರೀಕ್ಷೆಗೆ ಸದ್ಗುರು ಎಕ್ಸಲೆಂಟ್ ನವೋದಯ ಕೋಚಿಂಗ್ ಮೂಲಕ ಮಕ್ಕಳಿಗೆ ಅತ್ಯುತ್ತಮವಾಗಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಆನ್‌ಲೈನ್ ಮೂಲಕ ವಸತಿ ಸಹಿತ, ವಸತಿ ರಹಿತ, ವಾರಾಂತ್ಯದ ತರಗತಿಗಳ ಮೂಲಕ ತರಬೇತಿ ನೀಡಲಾಗುತ್ತದೆ. ತರಬೇತಿಯು ಏ. 20ರ ಭಾನುವಾರದಿಂದ ಪ್ರಾರಂಭವಾಗುವುದು. ಈಗಾಗಲೇ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಲು ಮೊ. 94482 16180, 72043 80230ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

“ಓಟಿಟಿ” ಯಲ್ಲಿ ಶಿವಮೊಗ್ಗ ಮಧು ನಿರ್ದೇಶನದ “ದುಡ್ ಬೇಕಾ?” ಸಿನಿಮಾ ಬಿಡುಗಡೆ

0

ದುಡ್ ಬೇಕಾ..! ಎನ್ನುವ ಪ್ರಶ್ನೆಗೆ ಬೇಡ ಎನ್ನುವವರು ಯಾರು ಇಲ್ಲ. ಇಂತಹ ಹುಬ್ಬೆರುವಂತಹ ಶೀರ್ಷಿಕೆಯನ್ನು ಹೊತ್ತ ‘ದುಡ್ ಬೇಕಾ’ ಚಿತ್ರವನ್ನು ಶಿವಮೊಗ್ಗದ ಹುಡುಗ ಮಧು ಶಿವಮೊಗ್ಗ ರಚಿಸಿ ನಿರ್ದೇಶಿಸಿದ್ದಾರೆ. ಹೆಚ್. ಎಸ್. ರಾಜೇಶ್ ಗೌಡರವರು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಹೆಚ್. ಎಸ್. ಅರುಣ್ ರವರ ಸಂಗೀತ ಹಾಗು ಬಿ. ಜಿ. ಸಚಿನ್ ಅವರ ಛಾಯಾಗ್ರಹಣವಿದೆ.
ಈ ಚಿತ್ರವನ್ನು ಶಿವಮೊಗ್ಗ ಸುತ್ತಮುತ್ತಲಿನ ಮಲೆನಾಡಿನ ಸುಂದರ ವಾತಾವರಣದಲ್ಲಿ ಚಿತ್ರಿಸಲಾಗಿದೆ. ಚಿತ್ರದ ಕಥಾನಾಯಕ `ಸೂರ್ಯ’ ತನ್ನ ತಾಯಿ ಆಸೆಯಂತೆ ಸರ್ಕಾರಿ ನೌಕರಿ ಪಡೆಯಲು ಪ್ರಯತ್ನಿಸುತ್ತಿರುವ ಹುಡುಗ. ಸೂರ್ಯನ ಸ್ನೇಹಿತ, ಸತೀಶ ಸೂರ್ಯನಿಂದ ಸ್ವಲ್ಪ ಹಣ ತೆಗೆದುಕೊಂಡು ಹಿಂದಿರುಗಿಸಲು ವಿಳಂಬ ಮಾಡುವುದರೊಂದಿಗೆ ಕಥೆ ಆರಂಭವಾಗುತ್ತದೆ. ಸೂರ್ಯ ಸತೀಶನಿಗೆ ಕೊಟ್ಟು ಕಳೆದುಕೊಂಡ ಸಣ್ಣ ಮೊತ್ತದ ಬಗ್ಗೆ ಚಿಂತಿಸುತ್ತಿರುವಾಗ, ಸ್ವಾಮಿ ಎಂಬ ರೌಡಿ ಕಥೆಗೆ ಪ್ರವೇಶಿಸಿ, ಕಥೆಯು ಇನ್ನೊಂದು ತಿರುವು ತೆಗೆದುಕೊಳ್ಳುತ್ತದೆ. ಒಂದೆಡೆ ಪ್ರೇಮಕಥೆ. ಮತ್ತೊಂದೆಡೆ ತಾಯಿಯ ಆರೋಗ್ಯ ಸಮಸೆ, ಇನ್ನೊಂದೆಡೆ ಹಿಂತಿರುಗದ ಸಾಲ.. ಇವುಗಳ ಮಧ್ಯದ ಅವನ ಒದ್ದಾಟದಲ್ಲಿ ಹಣವು ಮನುಷ್ಯನಿಗೆ ಎಷ್ಟು ಮುಖ್ಯ..? ಹಣಕ್ಕೆ ಎಷ್ಟು ಪ್ರಾಮುಖ್ಯತೆ ಕೊಟ್ಟರೆ ಒಳ್ಳೆಯದು ? ಮಾನವ ನಿರ್ಮಿತ ದುಡ್ಡಿಗೆ ಮಾನವ ಹೇಗೆ ಬಲಿ..! ಎಂಬ ಸಾರಾಂಶಗಳನ್ನು ಈ ಚಿತ್ರ ಬಿಂಬಿಸುತ್ತದೆ..
ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಮಧು ಶಿವಮೊಗ್ಗ, ಮೇಘ ಗೌಡ, ಪೂರ್ಣಿಮ ಪ್ರಸನ್ನ ಹಾಗು ಶ್ರೀಕಾಂತ್ ಮುರುಂಡಿ ನಟಿಸಿದ್ದಾರೆ. ಹಾಗು ಸಹಕಲಾವಿದರಾಗಿ ನವನ್ ಶ್ರೀನಿವಾಸ್, ದಾನಂ ಶಿವಮೊಗ್ಗ, ಶಿವಮೊಗ್ಗ ರಾಮಣ್ಣ, ಬಿ. ವಿ. ತಿಪ್ಪಣ್ಣ, ಹೆಚ್. ಎಸ್.ರಾಜೇಶ್ ಗೌಡ, ಸುದೀಪ್, ಜೆ. ಕೆ. ನಾಯಕ್, ಪ್ರಸನ್ನ, ವಿ. ಬಿ. ಸತೀಶ್ ಮಾಸ್ಟರ್, ಮಂಜು ರಂಗಾಯಣ, ಟಿ. ಮನು, ರಾಜ ನಾಯ್ಕ್ ಹಾಗೂ ಇನ್ನಿತರ ಶಿವಮೊಗ್ಗ ಕಲಾವಿದÀರು ನಟಿಸಿದ್ದಾರೆ.
ಈ ಚಿತ್ರವೂ ಹಾಸ್ಯ ಹಾಗು ಡ್ರಾಮ ಪ್ರಕಾರವಾಗಿದ್ದು, ಪ್ರೀತಿ-ಪ್ರೇಮ ಎಂದೆಲ್ಲಾ ಲವಲವಿಕೆ ಇಂದ ಶುರುವಾಗಿ ಕಥೆಯು ಸಾಗುತಿದ್ದಂತೆ ಗಂಭೀರವಾಗುತ್ತಾ ಭಾವನಾತ್ಮಕವಾಗಿ ಕೊನೆಗೊಳ್ಳುತ್ತದೆ.
ದುಡ್ ಬೇಕಾ ಚಿತ್ರವೂ ಏಪ್ರಿಲ್ ೧೧ ರಿಂದ “ನಮ್ಮ ಫ್ಲಿಕ್ಸ್” ನಲ್ಲಿ ವೀಕ್ಷಿಸಲು ಲಭ್ಯವಿದೆ.