Saturday, April 26, 2025
Saturday, April 26, 2025

Sarji Foundation ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗೆ ಸರ್ಜಿ‌ ಸ್ಕಾಲರ್ ಷಿಪ್‌ ಟೆಸ್ಟ್

Date:

Sarji Foundation ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಪೂರ್ವಸಿದ್ಧತೆಯೇ ಪ್ರಮುಖ ಕೀಲಿ ಕೈ. ಸಿದ್ಧತೆ ಇಲ್ಲದೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದೆಂದರೆ ಈಜು ಬಾರದವ ಸಮುದ್ರಕ್ಕೆ ಇಳಿದಂತೆ . ಈ ದಿಸೆಯಲ್ಲಿ ರಾಜ್ಯದ ಪದವೀಧರರು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಅವಕಾಶವೊಂದನ್ನು ನೀಡಲು ಸರ್ಜಿ ಫೌಂಡೇಶನ್ ಮತ್ತು ಸ್ಪರ್ಧಾ ಲೈನ್ಸ್ ಸಂಸ್ಥೆಗಳು ಜಂಟಿಯಾಗಿ ನೈಋತ್ಯ ಪದವೀಧರರ ಕ್ಷೇತ್ರಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ಕೊಡಗು, ಉಡುಪಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ದಿನಾಂಕ 11 ಮೇ 2025 ರಂದು “ಸರ್ಜಿ ಸ್ಕಾಲರ್ಶಿಪ್ ಟೆಸ್ಟ್” ಎಂಬ ಶೀರ್ಷಿಕೆಯ ಅಡಿಯಲ್ಲಿ ಸ್ಕಾಲರ್ಶಿಪ್ ಟೆಸ್ಟ್ ನಡೆಸಲಾಗುವುದು.

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆಎಎಸ್‌ ಪರೀಕ್ಷೆ ಬರೆದು ರಾಜ್ಯ ಸೇವೆಗೆ ಸೇರಬೇಕು. ಅಥವಾ ಬ್ಯಾಂಕಿಂಗ್ ಪರೀಕ್ಷೆ ಬರೆದು ಉತ್ತಮ ಸಂಬಳದ ಜಾಬ್‌ ಪಡೆಯಬೇಕು. ಇನ್ನಷ್ಟು ಶ್ರಮ ಪಡೆದು ಆರ್‌ಆರ್‌ಬಿ, ಎಸ್‌ಎಸ್‌ಸಿ ಪರೀಕ್ಷೆ ಬರೆದು ಯಾವುದಾದರೂ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಬೇಕು. ಇಂತಹ ಕನಸು ಹೊತ್ತ ಮನಸ್ಸುಗಳ ಸಂಖ್ಯೆ ರಾಜ್ಯದಲ್ಲಿ ಕಡಿಮೆ ಏನಿಲ್ಲ. ಪ್ರತಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಗಳಲ್ಲಿ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳ ದಂಡು ರಾಜ್ಯದ ಪ್ರತಿ ಕೇಂದ್ರಗಳಲ್ಲೂ ತುಂಬಿಯೇ ಇರುತ್ತವೆ. ಆದರೆ ಕೆಲವರಿಗೆ, ಬಡತನ ಹಿನ್ನೆಲೆಯ ಉದ್ಯೋಗ ಆಕಾಂಕ್ಷಿಗಳಿಗೆ ಪರೀಕ್ಷೆ ತರಬೇತಿ ಕೇಂದ್ರಗಳು ಕೇಳುವ ಶುಲ್ಕ ಬರಿಸಲು ಸಾಧ್ಯವಾಗದೇ, ಇತ್ತ ಸ್ವಯಂ ಮಾರ್ಗದರ್ಶನವು ಸಾಲದೇ ಸಮಸ್ಯೆ ಎದುರಿಸುವ ಅಭ್ಯರ್ಥಿಗಳಿಗೆ  ಇದೊಂದು ಉತ್ತಮ ಅವಕಾಶ

ಕರ್ನಾಟಕದಲ್ಲಿ 4,430 ಪದವಿ ಕಾಲೇಜುಗಳು ಹಾಗೂ 26 ವಿಶ್ವ ವಿದ್ಯಾಲಯಗಳಿವೆ, 26 ವಿಶ್ವ ವಿದ್ಯಾಲಯದಿಂದ ಪ್ರತಿ ವರ್ಷ ಸರಿ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಬರುತ್ತಾರೆ. ವರದಿಗಳ ಪ್ರಕಾರ ಪ್ರತಿ ವರ್ಷ ಸುಮಾರು 1,50,000 ದಿಂದ 2,00,000 ಅಭ್ಯರ್ಥಿಗಳು ಕೆ.ಪಿ.ಎಸ್.ಸಿ ಪರೀಕ್ಷೆಗೆ ಅರ್ಜಿ ಹಾಕುತ್ತಾರೆ ಇದರಲ್ಲಿ 10,000 ದಿಂದ 12,000 ಅಭ್ಯರ್ಥಿಗಳು ಪ್ರಿಲಿಮ್ಸ್ ಪರೀಕ್ಷೆ ಕ್ಲಿಯರ್ ಮಾಡಿದರೆ 1,500 ದಿಂದ 2,000 ಅಭ್ಯರ್ಥಿಗಳು ಮೈನ್ಸ್ ಕ್ಲಿಯರ್ ಮಾಡಿ 300 ರಿಂದ 400 ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಇದರಲ್ಲಿ ಒಂದುವರೆ ಲಕ್ಷ ಅಭ್ಯರ್ಥಿಗಳು ಸರಿಯಾದ ಮಾರ್ಗದರ್ಶನ ಇಲ್ಲದೆ, ಗುಣಮಟ್ಟದ ತರಬೇತಿ ಇಲ್ಲದೆ ಪರೀಕ್ಷೆಗೆ ಸರಿಯಾದ ಪೂರ್ವಸಿದ್ಧತೆ ಇಲ್ಲದೆ ಹಲವಾರು ಅಭ್ಯರ್ಥಿಗಳು
ವಿಫಲರಾಗುತ್ತಾರೆ.

Sarji Foundation ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಅಂದರೆ ಸುಮಾರು 11 ರಿಂದ 18 ತಿಂಗಳ ಸಮಗ್ರ ಅಧ್ಯಯನ ಅಗತ್ಯವಾಗಿರುತ್ತದೆ. ಪರೀಕ್ಷೆಗೆ ಬೇಕಾದ ಸ್ಟಾರ್ಟರ್ಜಿ ಇರಬೇಕು, ತಜ್ಞರಿಂದ ನಿಖರ ಮಾರ್ಗದರ್ಶನ ಬೇಕಾಗುತ್ತದೆ ಇವುಗಳಿಗೆ ಅಭ್ಯರ್ಥಿಗಳು ತರಬೇತಿ ಪಡೆಯಲು ಹೋದರೆ 2 ರಿಂದ 3 ಲಕ್ಷ ಫೀಸ್ ಕಟ್ಟಬೇಕಾಗುತ್ತದೆ, ಅದರಲ್ಲಿ ಅವರ ಸ್ಟಡಿ ಮೆಟಿರಿಯಲ್ ನಿಯತಕಾಲಿಕೆಗಳಿಗೆ ಅಂತ 50 ಸಾವಿರದಿಂದ 1 ಲಕ್ಷ ಖರ್ಚಾಗುತ್ತದೆ. ಹಾಗಾಗಿ ನಮ್ಮ ಸರ್ಜಿ ಫೌಂಡೇಶನ್ ಈ ಸ್ಕಾಲರ್ಶಿಪ್ ಟೆಸ್ಟ್ ನಡೆಸಿ ಇದರಲ್ಲಿ ಆಯ್ಕೆಯಾಗುವ ಪ್ರತಿಭೆ ಇರುವ ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಸೂಕ್ತವಾದ ಮಾರ್ಗದರ್ಶನ ಮಾಡುವಲ್ಲಿ ಈ ಸ್ಕಾಲರ್ಶಿಪ್ ಟೆಸ್ಟ್ ಉಪಯುಕ್ತವಾಗುತ್ತದೆ.

ಯಾರು ಪರೀಕ್ಷೆ ಬರೆಯಬಹುದು. ?

ರಾಜ್ಯದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದವರಾಗಿರಬೇಕು.

ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರು. ( ಪ್ರಸ್ತುತ ಕೊನೆಯ ವರ್ಷ/ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು )

ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ಕೊಡಗು, ಉಡುಪಿ ಮತ್ತು ದಾವಣಗೆರೆ ಜಿಲ್ಲೆಯವರಾಗಿರಬೇಕು.

ಸ್ಕಾಲರ್ಶಿಪ್ ಟೆಸ್ಟ್ ನಿಂದಾಗುವ ಲಾಭಗಳು

IAS/KAS ಪರೀಕ್ಷಾ ಪೂರ್ವ ಸಿದ್ದತಾ ತಯಾರಿಕೆಗೆ 11 ತಿಂಗಳು ನಿರಂತರ ಆನ್ಲೈನ್ ಕೋರ್ಸ್.

N C E R T ಪಠ್ಯಧಾರಿತ ಪ್ರಮುಖ ವಿಷಯಗಳ ಆನ್ಲೈನ್ ಫೌಂಡೇಶನ್ ತರಗತಿಗಳು ನಡೆಸಲಾಗುವುದು.

ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ತರಗತಿಗಳು ನಡೆಯಲಿದೆ.

ನುರಿತ ಮಾರ್ಗದರ್ಶಕರಿಂದ ಪರಿಕ್ಷೆಯ ಕುರಿತು ಮಾರ್ಗದರ್ಶನ ದೊರೆಯಲಿದೆ.

ವಾರಕ್ಕೊಮ್ಮೆ ಟೆಸ್ಟ್ ಸರಣಿ ನಡೆಸಲಾಗುತ್ತದೆ.

ಐ.ಎ.ಎಸ್, ಕೆ.ಎ.ಎಸ್ ಮತ್ತು ಐ.ಪಿ.ಎಸ್ ಅಧಿಕಾರಿಗಳಿಂದ ಮೋಟಿವೇಷನ್ ಸೆಶನ್, ಕಲಿಯುವ ಕಾರ್ಯ ತಂತ್ರಗಳು

ಪ್ರಮುಖ ವಿಷಯಗಳ ಪ್ರಚಲಿತ ಘಟನೆ ಮತ್ತು ಮಾಸಿಕ ನಿಯತಕಾಲಿಕೆಗಳ ಉಪನ್ಯಾಸ.


ಪರೀಕ್ಷಾ ನೋಂದಣಿಗೆ ಕೊನೆಯ ದಿನಾಂಕ : 09 ಮೇ 2025

ಪರೀಕ್ಷಾ ಸಮಯ : ಬೆಳಿಗ್ಗೆ 10: 30 ರಿಂದ ಮದ್ಯಾಹ್ನ 12 : 30 ರ ವರೆಗೆ

ಹೆಚ್ಚಿನ ಮಾಹಿತಿಗಾಗಿ ಅಥವಾ ಪರೀಕ್ಷಾ ನೋಂದಣಿಗೆ 7204747789 ಈ ನಂಬರ್ ಗೆ ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Defense University ಪಠ್ಯಕ್ರಮದ ರಚನೆ & ಕೌಶಲ್ಯಾಭಿವೃದ್ಧಿಗೆಒತ್ತು-ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ವೃತ್ತಿ ಸಮಾಲೋಚನೆ ಯಶಸ್ವಿ

National Defense University ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (RRU), ಶಿವಮೊಗ್ಗ ಕ್ಯಾಂಪಸ್ನಲ್ಲಿ,...

Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ

Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು...

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...