Wednesday, March 4, 2026
Wednesday, March 4, 2026
Home Blog Page 341

RANGAYANA SHIVAMOGGA ಏಪ್ರಿಲ್ 19. ಶಿವಮೊಗ್ಗದಲ್ಲಿ” ನಾಯಿ ಕಳೆದಿದೆ” ನಾಟಕ ಪ್ರದರ್ಶನ

0

‘ಲಾವಣ್ಯ’ ಬೈಂದೂರು
ಹವ್ಯಾಸಿ ರಂಗದಲ್ಲೊಂದು
ಅಪೂರ್ವ ಸೇವೆ ಸಲ್ಲಿಸುತ್ತಿರುವ
ತಂಡದಿಂದನಾಯಿಕಳೆದಿದೆ…

RANGAYANA SHIVAMOGGA ಕಳೆದ ನಾಲ್ಕು ದಶಕಗಳಿಂದ ಸದ್ದುಗದ್ದಲವಿಲ್ಲದೆ ತನ್ನ ಕಲಾ ಸಾಧನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ‘ಲಾವಣ್ಯ’ ಬೈಂದೂರು. ರಂಗ
ಚಟುವಟಿಕೆ ಗಳನ್ನು ಮುಖ್ಯವಾಗಿರಿಸಿಕೊಂಡು ಅನೇಕ ಸಾಂಸ್ಕೃತಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸದ್ದಿಲ್ಲದೇ ಕಾರ್ಯ ನಿರ್ವಹಿಸುತ್ತಿದೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕಲಾಸಂಸ್ಥೆ ಬೈಂದೂರಿನ ‘ಲಾವಣ್ಯ’. ಇದು ಕಳೆದ 48 ವರ್ಷಗಳಿಂದ ನಿರಂತರವಾಗಿ ರಂಗಚಟುವಟಿಕೆ ನಡೆಸುತ್ತ ಹವ್ಯಾಸಿ ರಂಗ
ಚರಿತ್ರೆಯಲ್ಲಿ ವಿಶಿಷ್ಟ ಸಾಧನೆ ಮೆರೆಯುತ್ತಿದೆ.1977 ರಲ್ಲಿ ಸ್ಥಾಪಿತವಾದ ಈ ಕಲಾಸಂಸ್ಥೆ ನಾಟಕ, ಸಂಗೀತ, ನೃತ್ಯ, ಯಕ್ಷಗಾನ ಮುಂತಾದ ಎಲ್ಲ ಕಲಾಪ್ರಕಾರಗಳನ್ನು ಪ್ರೋತ್ಸಾಹಿಸುತ್ತ ಬೈಂದೂರಿನ ಜನರಲ್ಲಿ ಸಾಂಸ್ಕೃತಿಕ ದಾಹ ಹುಟ್ಟಿಸಿದೆ. ಪ್ರತಿಯೊಂದು ಕಾರ್ಯಕ್ರಮವನ್ನೂ ಸ್ವಂತದ್ದೇ ಎನ್ನುವಷ್ಟು ಪ್ರೀತಿಯಿಂದ ಆದರಿಸುತ್ತಾರೆ ಇಲ್ಲಿನ ಜನ. ಇಂದಿನ ದೃಶ್ಯಮಾಧ್ಯಮಗಳಲ್ಲಿ ಎಷ್ಟೆಲ್ಲ ವೈವಿಧ್ಯಮಯ ಕಾರ್ಯಕ್ರಮಗಳು ಬರುತ್ತಿದ್ದರೂ ಅವನ್ನು ಬದಿಗೊತ್ತಿ ರಂಗದ ಮೇಲೆ ನಡೆಯುವ ಜೀವಂತ ಚಟುವಟಿಕೆಯನ್ನು ನೋಡುವ ಹಂಬಲವನ್ನು ಜೀವಂತವಾಗಿರಿಸುವಲ್ಲಿ ಲಾವಣ್ಯ ಬೈಂದೂರು ತನ್ನ ಲಾವಣ್ಯವನ್ನು ಇಂದಿಗೂ ಉಳಿಸಿಕೊಂಡಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಇಂದಿನ ದಿನಮಾನಗಳಲ್ಲಿ ಬದುಕಿನ ಬಂಡಿ ಎಳೆಯಲು ಊರು ತೊರೆದು ನಗರಗಳ ಕಡೆ ಮುಖ ಮಾಡುವುದು ಯುವ ಜನತೆಗೆ ಅನಿವಾರ್ಯವೆಂಬಂತಾಗಿದೆ. ಅಂತಹ ಸಂದರ್ಭದಲ್ಲೂ ರಂಗ
ಚಟುವಟಿಕೆ ಗಳ ಮೂಲಕ ಯುವಜನರನ್ನ ತನ್ನತ್ತ ಸೆಳೆದುಕೊಂಡು ಅವರಲ್ಲಿ ಸಾಂಸ್ಕೃತಿಕ ಮನೋಭಾವವನ್ನು ಬೆಳೆಸಿ, ಹಲವಾರು ಪ್ರತಿಭೆಗಳನ್ನು ಮುನ್ನೆಲೆಗೆ ತರುವಲ್ಲಿ `ಲಾವಣ್ಯ’ದ ಕಾರ್ಯ ಶ್ಲಾಘನೀಯ.
ನಾಲ್ಕು ದಶಕಗಳ ಹಿಂದೆ ಹವ್ಯಾಸಿ ಕಲಾವಿದರ ಕನಸಿನ ಕೂಸಾಗಿ ಜನ್ಮತಳೆದ ‘ಲಾವಣ್ಯ’, ಇಂದು ತನ್ನದೇ ಅಚ್ಚುಕಟ್ಟಾದ ಕಚೇರಿಯನ್ನು ಹೊಂದಿದೆ. ಯಾವುದೇ ರಾಜಾಶ್ರಯವಿಲ್ಲದೇ, ಸರ್ಕಾರದ ಧನಸಹಾಯವಿಲ್ಲದೇ ನಾಲ್ಕು ದಶಕಗಳನ್ನ ಪೂರೈಸಿದ್ದು ಕೇವಲ ರಂಗಾಸಕ್ತರ, ನಾಟಕಾಭಿಮಾನಿಗಳ, ಊರ ದಾನಿಗಳ ಪ್ರೋತ್ಸಾಹದಿಂದಲೇ ಎಂದರೆ ಇಲ್ಲಿನ ಜನರ ಅಭಿರುಚಿ ಮತ್ತು ಶ್ರದ್ಧೆ ಎದ್ದು ಕಾಣುತ್ತದೆ.
RANGAYANA SHIVAMOGGA ಇಲ್ಲಿಯವರೆಗೆ ೭೦ ನಾಟಕಗಳನ್ನು ರಂಗಕ್ಕೇರಿಸಿ, ೧೫೦ಕ್ಕೂ ಹೆಚ್ಚು ಪ್ರದರ್ಶನ ನೀಡಿರುವುದು ಇದರ ಹೆಗ್ಗಳಿಕೆ, ರೊಟ್ಟಿ ಋಣ, ಮಾವಮಾನ ಕಥೆ ಕೇಳು. ಟಿಂಗರ ಬುಡ್ಡಣ್ಣ, ಸಮಯಕ್ಕೊಂದುಸುಳ್ಳು. ನಾವೆಲ್ಲೋಗ್ಬೇಕು, ಉತ್ಸವ, ಚೋರಚರಣದಾಸ, ಏಕಲವ್ಯ, ಬೇಲಿ ಮತ್ತು ಹೊಲ, ನಾಯಿ ಕತೆ, ಬಾವಿ ಕಳೆದಿದೆ. ಪೊಲೀಸ್, ದೃಷ್ಟಿ. ಮರಣ ಮೃದಂಗ ಮುಂತಾದ ನಾಟಕಗಳು ನಾಡಿನ ಹಲವೆಡೆ ಹಲವಾರು ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿವೆ. “ಲಾವಣ್ಯ’ದ ಬಹುತೇಕ
ನಾಟಕಗಳು ೫ಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ‘ಲಾವಣ್ಯ’ ತಂಡವು ಅಘೋಷಿತ ರೆಪರ್ಟರಿ ತರಹ ಕೆಲಸ ಮಾಡುತ್ತಾ ಬಂದಿದೆ. ಗ್ರಾಮೀಣ ಭಾಗದಲ್ಲಿ ಪ್ರದರ್ಶನ ನೀಡಿ, ಸಾಮಾನ್ಯರಲ್ಲೂ ರಂಗಾಸಕ್ತಿಯನ್ನು ಪಸರಿಸುತ್ತಲಿದೆ. ಅಲ್ಲದೆ, ನಾಡಿನ ಹಲವಾರು ಹವ್ಯಾಸಿ ನಾಟಕ ತಂಡಗಳನ್ನು ಕರೆಸಿ ಬೈಂದೂರಿನಲ್ಲಿ ಪ್ರದರ್ಶನ ಏರ್ಪಡಿಸುತ್ತಲಿದೆ. ಮಕ್ಕಳ ರಂಗಶಿಬಿರ ಏರ್ಪಡಿಸಿ ವಿದ್ಯಾರ್ಥಿಗಳಿಗೂ ಸದಭಿರುಚಿ ಮೂಡಿಸುತ್ತಲಿದೆ.
‘ಲಾವಣ್ಯ’ ತಂಡ ನಾಡಿನ ಪ್ರತಿಷ್ಠಿತ ೨೨ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಉತ್ತಮ ನಾಟಕ, ನಿರ್ದೇಶನ, ಅಭಿನಯ, ಸಂಗೀತ, ರಂಗಸಜ್ಜಿಕೆ ಮುಂತಾದ ವಿಭಾಗಗಳಲ್ಲಿ ಸುಮಾರು ೧೨೦ಕ್ಕೂ ಹೆಚ್ಚು ಪಾರಿತೋಷಕಗಳನ್ನು ಗೆದ್ದಿದೆ. ರಂಗಭೂಮಿಯ ಖ್ಯಾತ ನಿರ್ದೇಶಕರನ್ನು ಕರೆಸಿ ರಂಗ ತರಬೇತಿ ಶಿಬಿರ ನಡೆಸಿದೆ. ಇದಕ್ಕೆ ಹೊರತಾಗಿ ಸಂಘಟನೆಯ ದಶಮಾನೋತ್ಸವ, ವಿಂಶತಿ, ಬೆಳ್ಳಿಹಬ್ಬ, ೩೦ನೇ ವರ್ಷ, ೩೨ನೇ ವರ್ಷ, ೪೦ನೇ ವರ್ಷಗಳನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಆಗೆಲ್ಲ ರಾಜ್ಯಮಟ್ಟದ ನಾಟಕ ಸ್ಪರ್ಧೆ, ನಾಟಕೋತ್ಸವ ನಡೆಸಿ ನಾಡಿನ ಗಮನ ಸೆಳೆದಿದೆ ಲಾವಣ್ಯ. ಅಲ್ಲದೆ, ಸಾಹಿತ್ಯ, ಸಮಾಜಸೇವೆ, ಶಿಕ್ಷಣ, ಕ್ರೀಡೆ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರತಿವರ್ಷ ವಾರ್ಷಿಕೋತ್ಸವದಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸುತ್ತಿದೆ.
ಟಿ.ವಿ., ಕಂಪ್ಯೂಟರ್, ಮೊಬೈಲ್ ಮುಂತಾದ ಆಧುನಿಕ ಸೌಕರ್ಯಗಳಿಂದ ತನ್ನ ನಿಜಸೊಗಡನ್ನೇ ನಾಶಮಾಡಿಕೊಳ್ಳುತ್ತಿರುವ ಯುವಜನತೆಗೆ ಲಾವಣ್ಯ ಒಂದು ಜೀವ ಕಡಲು ಎನ್ನಬಹುದು. ಇಂದು ತನ್ನ ಸಾಂಸ್ಕೃತಿಕ ಶ್ರೀಮಂತಿಕೆ ನಾಶಮಾಡಿಕೊಳ್ಳುತ್ತ ನಗರಗಳ ಕಡೆ ಮುಖಮಾಡುತ್ತಿರುವ ಯುವಜನಾಂಗಕ್ಕೆ ಒಂದು ಮಾದರಿ ಈ ‘ಲಾವಣ್ಯ’. ಹಳ್ಳಿಗಳಲ್ಲಿ ಏನೂ ಇಲ್ಲ ಎಂದು ಅಸಡ್ಡೆ ಮಾಡಿಕೊಳ್ಳುವವರೇ ಇಂದು ಹೆಚ್ಚಾಗಿದ್ದಾರೆ. ಆದರೆ ಏನಿದೆ ಎಂದು ಕಂಡುಕೊಳ್ಳಲೂ ಒಂದಿಷ್ಟು ಸಹನೆ ಬೇಕು, ಒಂದಿಷ್ಟು ಜನರ ತ್ಯಾಗ ಬೇಕು. ಅದರಿಂದ ಊರಿಗೆ ಊರೇ ಆನಂದಿಸುತ್ತದೆ
ಎಂತಾದರೆ ಅದಕ್ಕಿಂತ ದೊಡ್ಡ ಸಾರ್ಥಕತೆ ಎಲ್ಲಿದೆ? ಅಲ್ಲವೇ!
ಇಂತಹ ಲಾವಣ್ಯ ತಂಡ ಮಲೆನಾಡಿಗೂ ಬರುತ್ತಿದೆ. ಇಂದು ಮೊಬೈಲ್ ಜೀವನದಿಂದಾಗಿ ಆಗುತ್ತಿರುವ ಸಾಮಾಜಿಕ ಪರಿಣಾಮಗಳು ಏನೆಲ್ಲ ಎಂಬುದನ್ನ ನಾಟಕ ರೂಪದಲ್ಲಿ ನಿಮ್ಮ ಮುಂದೆ ಪ್ರಸ್ತುತಪಡಿಸಲಿದೆ.
ರಾಜೇಂದ್ರ ಕಾರಂತರ ರಚನೆ ಮತ್ತು ನಿರ್ದೇಶನದಲ್ಲಿ ದೆಹಲಿಯ ಕನ್ನಡ ಭವನದಲ್ಲಿಯೂ ಲಾವಣ್ಯ ತಂಡದಿAದ ಪ್ರದರ್ಶನ ಕಂಡ ನಾಯಿಕಳೆದಿದೆ ನಾಟಕ ಏಪ್ರಿಲ್ ೧೯ ೨೦೨೫ರ ಶನಿವಾರ ಶಿವಮೊಗ್ಗ ನಗರದ ಕುವೆಂಪು ರಂಗಮAದಿರದಲ್ಲಿ ಅಜೇಯ ಸಂಸ್ಕೃತಿ ಬಳಗ ಪ್ರದರ್ಶನ ಏರ್ಪಡಿಸಿದೆ.
ಶಿವಮೊಗ್ಗದ ರಂಗಾಸಕ್ತರಿಗೆ ಇದೊಂದು ಸುವರ್ಣ ಅವಕಾಶವೇ ಸರಿ…

ಬರಹ: ಆದಿತ್ಯಪ್ರಸಾದ್ ಎಮ್. ಶಿವಮೊಗ್ಗ

Ambedkar Jayanti ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿಐಎಸ್ ಎಲ್ ನಿಂದ ಸಸಿಗಳ ಉಚಿತ ವಿತರಣೆ

0

Ambedkar Jayanti ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಯ ಅಂಗವಾಗಿ 750 ಹೈಬ್ರೀಡ್ ನುಗ್ಗೆ, ಪಪಾಯ, ತುಳಸಿ ಮತ್ತು ಹೊಂಗೆ ಸಸಿಗಳನ್ನ ಸಾರ್ವಜನಿಕರಿಗೆ ವಿಐಎಸ್‌ಎಲ್ ಮುಖ್ಯ ದ್ವಾರದ ಬಳಿ 14 ನೇ ಏಪ್ರಿಲ್, 2025 ರ ಮಧ್ಯಾನ್ಹ 2 ಘಂಟೆಯಿಂದ ಸಂಜೆ 5 ಘಂಟೆವರೆಗೆ ಉಚಿತವಾಗಿ ವಿತರಿಸಲಾಗುವುದು. ಆಸಕ್ತ ಸಾರ್ವಜನಿಕರು ಸಸಿಗಳನ್ನು ಪ್ರತಿಯೊಬ್ಬರಿಗೆ 2 ಸಸಿಗಳಿಗೂ ಮೀರದಂತೆ ಸ್ವೀಕರಿಸಲು ಕೋರಲಾಗಿದೆ.

Shimoga News ಅಧ್ಯಾಪಕರು ಹೊಸ ಬದಲಾವಣೆಗಳನ್ನ ಮುಕ್ತವಾಗಿ ಸ್ವೀಕರಿಸಬೇಕು- ಡಾ.ಕೆ.ವಿಕ್ರಮ್

0

Shimoga News ಅಧ್ಯಾಪಕರು ಹೊಸ ಬದಲಾವಣೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಿರುವುದರಿಂದ ಯಾವುದೇ ಸಂದರ್ಭದಲ್ಲಿ ತರಗತಿ ರಹಿತ ವ್ಯಾಸಂಗ ಮುಂದುವರಿಯಬಹುದು ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಆಂತರಿಕ ಗುಣಮಟ್ಟಕೋಶದ ನೋಡಲ್ ಅಧಿಕಾರಿ ಡಾ. ವಿಕ್ರಮ್ ಕೆ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ ವಿಭಾಗ, ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಆಂತರಿಕ ಗುಣಮಟ್ಟ ಕೋಶ ವಿಭಾಗದ ಆಶ್ರಯದಲ್ಲಿ ಇತ್ತೀಚಿನ ಬದಲಾವಣೆಗಳು ಮತ್ತು ಹೊಸ ವಿನ್ಯಾಸಗಳ ಕುರಿತು ಆಯೋಜಿಸಿದ್ದ ಒಂದು ವಿಶೇಷ ಕಾರ್ಯಗಾರದಲ್ಲಿ ಮಾತನಾಡಿದರು.
ಆನ್ ಲೈನ್ ಮೂಲಕವೇ ಎಲ್ಲ ರೀತಿಯ ಮೌಲ್ಯಮಾಪನಗಳು ಸಾಧ್ಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಪ್ರತಿಯೊಂದನ್ನು ತಿರಸ್ಕರಿಸುವ ಮನೋಭಾವನೆಯನ್ನು ಬಿಟ್ಟು ಹೆದರಿಕೆಯಿಂದ ಹೊರಬಂದು ಹೊಸ ವಿಷಯಗಳಿಗೆ ಮನಸ್ಸುಗಳನ್ನು ಸಿದ್ಧಪಡಿಸಿಕೊಳ್ಳುವುದು ಉತ್ತಮ ಎಂದು ತಿಳಿಸಿದರು.
ಕಾರ್ಯಗಾರವನ್ನು ಉದ್ಘಾಟಿಸಿದ ಕುವೆಂಪು ವಿಶ್ವವಿದ್ಯಾನಿಲಯದ
Shimoga News ಐ ಕ್ಯೂ ಎಂ ಸಿ ನಿರ್ದೇಶಕ ಡಾ. ಸೈಯದ್ ಅಶ್ವಕ್ ಅಹಮದ್ ಮಾತನಾಡಿ, ಬದಲಾವಣೆ ಜಗದ ನಿಯಮ. ಈ ಬದಲಾವಣೆಗಳನ್ನು ಎಲ್ಲರೂ ಸಮ್ಮತಿಸಿ ವಿದ್ಯಾರ್ಥಿ ಸ್ನೇಹಿ ವಿಚಾರಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಿವಿಎಸ್ ಆಡಳಿತ ಸಮಿತಿಯ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಮಾತನಾಡಿ, ಅಧ್ಯಾಪಕರಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ವಿನ್ಯಾಸಗಳನ್ನು ಅಳವಡಿಸಿಕೊಳ್ಳುವ ಮನಸ್ಥಿತಿ ಕಡಿಮೆ ಇದೆ. ಅಧ್ಯಾಪಕರು ಹೊಸ ವಿಷಯಗಳ ಕಲಿಕೆಯಲ್ಲಿ ಆಸಕ್ತಿ ತೋರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಮತ್ತು ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು ಪ್ರಾಂಶುಪಾಲರು ಭಾಗವಹಿಸಿದ್ದರು
ಡಿವಿಎಸ್ ಆಡಳಿತ ಸಮಿತಿಯ ಕಾರ್ಯದರ್ಶಿ ಎಸ್.ರಾಜಶೇಖರ್, ಕೋಶಾಧ್ಯಕ್ಷ
ಬಿ .ಗೋಪಿನಾಥ್, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ ವೆಂಕಟೇಶ್ , ಐ ಕ್ಯೂ ಎ ಸಿ ಕೋ ಆರ್ಡಿನೇಟರ್ ಪ್ರೊ ಕುಮಾರಸ್ವಾಮಿ ಭಾಗವಹಿಸಿದ್ದರು.

Shimoga Chariot Festival ಗಾಂಧಿ ಬಜಾರಿನ ಶ್ರೀಬಸವೇಶ್ವರ & ಶ್ರೀ ವೀರಭದ್ರಸ್ವಾಮಿ ರಥೋತ್ಸವ

0

Shimoga Chariot Festival ಶಿವಮೊಗ್ಗದ ಪ್ರತಿಷ್ಠಿತ ಗಾಂಧಿ ಬಜಾರಿನ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ. ಹಾಗೂ ಚೌಕಿ ಮಠದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೆಂಡಾರ್ಚನೆ ಹಾಗೂ ಗುಗ್ಗಳ
ಇದೇ ಏಪ್ರಿಲ್ 12 ರ ಬೆಳಿಗ್ಗೆ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ ಡಾ ವತಿಯಿಂದ ಪ್ರತಿಷ್ಠಿತ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಮಹಾರಥೋತ್ಸವ
ಹಾಗೂ ಶ್ರೀ ವೀರಭದ್ರ ಸ್ವಾಮಿಯ ಮುಗಳ ಮತ್ತು ಕೆಂಡಾರ್ಚನೆ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ನಡೆಯಿತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಡಿಯೂರು ಶ್ರೀಗಳಾದ ಶ್ರೀ ರೇಣುಕಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದು ರಥೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿಪ್ರಕಾಶ್ ಮಾತನಾಡಿ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಥೋತ್ಸವ ಕ್ಕೆ ಬಂದು ಯಶಸ್ವಿಯಾಗಿ ನಡೆಸಿಕೊಟ್ಟರು. ಮುಂದಿನ ದಿನಗಳಲ್ಲಿ ಭಕ್ತಾದಿಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಆಶಿಸುತ್ತೇವೆ.
Shimoga Chariot Festival ಗೌರವ ಕಾರ್‍ಯದರ್ಶಿ ಎಸ್.ಪಿ ದಿನೇಶ್, ಸಮಾಜದ ನಿರ್ದೇಶಕರಾದ ರತ್ನಮ್ಮ,ಬಳ್ಳೇಕೆರೆ ಸಂತೋಷ್, ಬಾಳೆಕಾಯಿ ಮೋಹನ್. ಪಿ ರುದ್ರೇಶ್,ಶಾಂತ ಆನಂದ್ ಜಿ, ಕಾಯಕಯೋಗಿ ಚನ್ನಬಸಪ್ಪ, ಮರುಳೇಶ್ ,ಶಶಿಕುಮಾರ್ ,ವಿಜಯಕುಮಾರ್ ,ಹಾಲನಗೌಡರು. ಸಂಜಯ್ ಕುಮಾರ್ ಚೀಲೂರು ಚಂದ್ರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು ಪಲ್ಲಕ್ಕಿ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ. ನಂತರ ಚೌಕಿ ಮಠಕ್ಕೆ ಹೋಗಿ ವಾಪಸ್ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು. ರಥವನ್ನು ಗಾಂಧಿ ಬಜಾರೀನಾ ಪ್ರಮುಖ ಬೀದಿಗಳಲ್ಲಿ ಎಳೆಯುವುದರ ಮುಖಾಂತರ ಭಕ್ತರು ಬಸವೇಶ್ವರರಿಗೆ ಧಾರ್ಮಿಕ ಶ್ರದ್ಧೆ ಭಕ್ತಿಯಿಂದ ನಮಸ್ಕರಿಸಿದರು.

India Book of Records ಶಿವಮೊಗ್ಗದ ಪುಟಾಣಿ ಎಂ.ಎಂ.ದೃಷ್ಟಿ ಹೆಸರೀಗ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆ

0

India Book of Records ದೃಷ್ಟಿಳಿಂದ ದಾಖಲೆಯ ಶ್ಲೋಕ ಪಠಣ
ಇಂಡಿಯಾ ಬುಕ್ ಆಪ್ ರೆಕಾರ್ಡ್ನಲ್ಲಿ ದಾಖಲೆ
ಶಿವಮೊಗ್ಗಃ
ಧಾರವಾಡದ ಅಂಬು ಪ್ರಕಾಶನ ಆಯೋಜಿಸಿದ್ದ ಹಾಡಿನ ಬಂಡಿ ಸ್ಪರ್ಧೆಯಲ್ಲಿ ನಗರದ ಮೂರು ವರ್ಷದ ಬಾಲೆ ಎಂ. ಎಂ. ದೃಷ್ಟಿ ಗುಪ್ತ, ೧೫ ಶ್ಲೋಕಗಳನ್ನು ಒಳಗೊಂಡ ಶಿವತಾಂಡವ ಸ್ತೋತ್ರವನ್ನು ೦೫.೦೨ ನಿಮಿಷಗಳಲ್ಲಿ ಪಠಿಸಿ, ಇಂಡಿಯಾ ಬುಕ್ ಆಪ್ ರೆಕಾರ್ಡ್ನಲ್ಲಿ ಅತ್ಯಂತ ಕಿರಿಯ ಪ್ರತಿಭೆ ಎಂಬ ದಾಖಲೆಗೆ ಪಾತ್ರಳಾಗಿದ್ದಾಳೆ.
India Book of Records ನಗರದ ಮದನ್ ಹಾಗೂ ಪೂಜಾ ಮದನ್ ದಂಪತಿಗಳ ಪುತ್ರಿಯಾದ ದೃಷ್ಟಿ, ಸಂಸ್ಕೃತಿ ಕಿಡ್ಸ್ ಶಾಲೆಯಲ್ಲಿ ನರ್ಸರಿ ಪೂರ್ಣಗೊಳಿಸಿದ್ದಾಳೆ. ಶ್ಲೋಕಗಳು, ದೇವರನಾಮ, ಭಗವದ್ಗೀತೆ, ಭರತನಾಟ್ಯ, ಹಾಗೂ ಡ್ಯಾನ್ಸ್ ಕಲಿಯುತ್ತಿದ್ದಾಳೆ. ಫ್ಯಾಷನ್ ಶೋಗಳಲ್ಲಿ ಭಾಗವಹಿಸಿರುವ ಈಕೆಗೆ ರೀಲ್ಸ್ ಮಾಡುವ ಹವ್ಯಾಸವು ಇದೆ.
ಆಕೆಯ ಕುಟುಂಬಸ್ಥರು ಶುಭ ಹಾರೈಸಿದ್ದಾರೆ

Klive Special Article ಎಲ್ಲಿ ರಾಮನೊ..ಅಲ್ಲಿ ಹನುಮನು..! ಲೇ: ಎನ್.ಜಯಭೀಮ ಜೊಯಿಸ್.ಶಿವಮೊಗ್ಗ

0

Klive Special Article ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ
ಅರೋಗತಾಂ/
ಅಜಾಡ್ಯಂ ವಾಕ್ಪಟುತ್ವಂಚ ಹನುಮತ್ ಸ್ಮರಣಾತ್
ಭವೇತ್//
ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದು ಶ್ರೀರಾಮದೇವರು ಅವತಾರ ಮಾಡಿದ ದಿನವಾದರೆ,ಚೈತ್ರಮಾಸದ ಶುಕ್ಲಪಕ್ಷದ ಪೌರ್ಣಿಮೆಯಂದು ಶ್ರೀರಾಮದೇವರ ಅಂತರಂಗಭಕ್ತ ಶ್ರೀಹನುಮಂತದೇವರು ಅವತಾರಮಾಡಿದ ದಿನ.
ಶ್ರೀಹನುಮಂತದೇವರ ಭಕ್ತಿಯ ಸ್ಮರಣೆ ಮಾತ್ರದಿಂದಲೇ ಅವರ ಭಕುತರಿಗೆ ಶೌರ್ಯ,ಧೈರ್ಯ,ಬುದ್ಧಿ,ಬಲ,ವಾಕ್ಪಟುತ್ವ ಈ ಎಲ್ಲಾ ಗುಣಗಳೂ ಪ್ರಾಪ್ತಿಯಾಗುವುವು. ಹನುಮಂತ ದೇವರನ್ನುಜ್ಞಾನ,ಬುದ್ಧಿ,ಶಕ್ತಿಯ ಸಂಗಮಮೂರ್ತಿಎಂದುಹೇಳಬಹುದು.
ಹನುಮಂತ ದೇವರ ಭಕ್ತರ ಸಂಖ್ಯೆ
ಜಾತಿ,ಮತ ಭೇದವಿಲ್ಲದೇ ಅಪಾರವಾಗಿದೆ.
ಹನುಮಂತದೇವರ ಅವತಾರ ಪೂರ್ತಿ ಅವರ ಜೀವೋತ್ತಮತೆ ಪ್ರಸಿದ್ಧವಾಗುತ್ತದೆ.ಎಲ್ಲಾ ವಾನರ ಸೇನಾನಿಗಳೂ ಸೀತೆಯನ್ನು ಹುಡುಕುವುದಕ್ಕಾಗಿ ಸಮುದ್ರಲಂಘನ ಮಾಡಲಿಕ್ಕಾಗದೆ ಕೈಚೆಲ್ಲಿ ಕುಳಿತಾಗ ಹನುಮಂತದೇವರು ಬಹಳ ಲೀಲಾ
ಜಾಲವಾಗಿ ಶರಧಿಯನ್ನು ದಾಟಿ,ಸೀತೆಯನ್ನು ಕಂಡು ಶ್ರೀರಾಮಚಂದ್ರನು ಕೊಟ್ಟಿದ್ದ ಮುದ್ರೆಯುಂಗುರಕೊಟ್ಟು,ದೈತ್ಯರಸೆದೆಬಡಿದು,
ಲಂಕಾಪಟ್ಟಣವನ್ನು ಸುಟ್ಟು,ಲಂಕಾಧೀಶನಾಗಿದ್ದ ರಾವಣನಅಹಂಕಾರವನ್ನುಪುಡಿಪುಡಿಮಾಡಿದವರು ಹನುಮಂತದೇವರು.
ಲಂಕಾ ಯುದ್ಧದಲ್ಲಿ ಲಕ್ಷ್ಮಣನುಮೂರ್ಛೆಹೋದಾಗ ಸಂಜೀವಿನಿ ಸಸ್ಯವನ್ನು ಗುರುತಿಸಲಾಗದೇ ಇಡೀ ಸಂಜೀವಿನಿ ಪರ್ವತವನ್ನೇಕ್ಷಣ ಮಾತ್ರದಲ್ಲಿ ತಂದು ಸಂಜೀವಿನಿಯಿಂದ ಲಕ್ಷ್ಮಣನಿಗೆ ಎಚ್ಚರ ಬರುವಂತೆ ಮಾಡಿ ತನ್ನ ಸ್ವಾಮಿಶ್ರೀರಾಮನಿಗೆ ಸೇವೆ ಸಲ್ಲಿಸಿದ ಅಂತರಂಗ ಭಕ್ತಹನುಮ.ವಾಲಿಯಿಂದ ಅನ್ಯಾಯ
ವಾಗಿದ್ದ ಸುಗ್ರೀವನಿಗೆ ಶ್ರೀರಾಮನಿಂದ ನ್ಯಾಯ ಕೊಡಿಸಿದವನು ಹನುಮಂತ.ಹನುಮಂತನ ಸಹಾಯವಿಲ್ಲದಿದ್ದರೆಸುಗ್ರೀವನಿಗೆಅಣ್ಣವಾಲಿ
ಯಿಂದಪ್ರಾಣರಕ್ಷಿಸಿಕೊಳ್ಳುವುದೇಕಷ್ಟವಾಗಿತ್ತು.ವಾಲಿ ಸುಗ್ರೀವನನ್ನು ಕೊಲ್ಲಲು ಬೆನ್ನತ್ತಿ ಹೋದಾಗ ,ಸುಗ್ರೀವನಿಗೆ ಋಷ್ಯಮೂಕಪರ್ವತಕ್ಕೆ ಹೋಗುವಂತೆಸಲಹೆಮಾಡುತ್ತಾನೆ.ಏಕೆಂದರೆವಾಲಿಗೆ ಋಷಿಗಳ ಶಾಪವಿದ್ದುದರಿಂದ ಋಷ್ಯಮೂಕ ಪರ್ವತಕ್ಕೆ ಹೋಗುವಂತಿರಲಿಲ್ಲ.ಸಕಾಲದಲ್ಲಿ ಸಲಹೆ ಕೊಡುವುದರಲ್ಲಿ ಹನುಮಂತ ತುಂಬ ಜಾಣ.
ಅಂತಃಕರಣ ತುಂಬಿ ಪೋಷಿಸಿ ಉದ್ಧರಿಸುವ ತಾಯಿ-ಹನುಮಂತ,ಆಧ್ಯಾತ್ಮ ಸಂಸ್ಕಾರ ಕೊಟ್ಟು ಬೆಳೆಸುವ ತಂದೆ-ಹನುಮಂತ.ಅಮೃತ-ಮೋಕ್ಷಕ್ಕೆ ಕಾರಣವಾಗುವ ನಿಜ ವಿದ್ಯೆ ಕೊಟ್ಟು ಆತ್ಮೋದ್ಧಾರ ಮಾಡುವ ಸರಿಸಮಾನರಿನ್ನಿಲ್ಲದ ಪರಮ ಗುರು-ಪವಮಾನರಾಯ(ಹನುಮಂತದೇವರು).
ಭಕ್ತಿಯ ದ್ಯೋತಕ ಹನುಮಂತದದೇವರು.
Klive Special Article ತನ್ನ ಸ್ವಾಮಿಯಾದ ಶ್ರೀರಾಮಚಂದ್ರನಲ್ಲಿನ ಭಕುತಿಯ ಎದುರು,ಸಂಪತ್ತು ತುಂಬಿದ ಜಗತ್ತು
ಏನೂ ಅಲ್ಲ ಹನುಮಂತದೇವರಿಗೆ.ಅವರಿಗೆ ತಮ್ಮ
ಪ್ರಾಣಕ್ಕಿಂತಲೂ ಮಿಗಿಲಾದದ್ದು ಶ್ರೀರಾಮ ಸೇವೆ.
ಹನುಮಂತನ ಭಕ್ತಿಯ ,ಶಕ್ತಿಯನ್ನು ಸರ್ವಜ್ಞನಾದ ಶ್ರೀರಾಮನಿಗೆ ಗೊತ್ತಿದ್ದರಿಂದಲೇ ಶ್ರೀರಾಮ ಸೀತೆಗೆ ಉಂಗುರ ಕೊಡಲು ಕೊಟ್ಟಿದ್ದು ಹನುಮಂತ
ದೇವರಿಗೆ,ಸಮುದ್ರಲಂಘನ ಮಾಡಲು ಆಯ್ಕೆ ಮಾಡಿದ್ದು ಹನುಮಂತನನ್ನೆ,ಲಂಕೆಯನ್ನು ಸುಟ್ಟು ರಾವಣನ ಅಹಂಕಾರ ಅಡಗಿಸಲು ರಾಮನು ಆಯ್ಕೆ ಮಾಡಿದ್ದು ಹನುಮಂತದೇವರನ್ನೆ.
ನೆರೆದ ರಾಜಸಭೆಯಲ್ಲಿ ರಾವಣನು ಹನುಮಂತನನ್ನು ಉದ್ದೇಶಿಸಿ “ಕಪಿಯೇ ನೀನು ಯಾರು?ಎಂದು ಕೇಳಿದಾಗ ಹನುಮಂತನು
ನಾನುರಾಮಭಕ್ತಎಂದುಹೇಳುತ್ತಾನೆ.ಹನುಮಂತದೇವರಿಗೆ ಎಲ್ಲಕ್ಕಿಂತ ಪ್ರಿಯವಾದದ್ದು ಶ್ರೀರಾಮ
ದೇವರ ಪಾದಕಮಲಗಳಲ್ಲಿ ನಿಶ್ಚಲವಾದ ಭಕುತಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಸ್ವಾಮಿ ನಿಷ್ಠೆಗೆ ಹೆಸರಾದವರು ಶ್ರೀಹನುಮಂತದೇವರು.ಇಂತಹ ಶ್ರೀಹನುಮಂತದೇವರು ಅವತರಿಸಿದ ದಿನವಾದ ಇಂದು ನಾವೂ ಭಕ್ತಿಯಿಂದ ನಮಿಸಿ ಶ್ರೀಹನುಮಂತದೇವರ ಅನುಗ್ರಹ ಪಡೆಯೋಣ.

Rotary Club Shimoga ಪ್ರಾಥಮಿಕ ಹಂತದಲ್ಲಿಯೇ ಸಂಸ್ಕೃತವನ್ನ ಮಕ್ಕಳಿಗೆ ಕಲಿಸುವ ಯತ್ನ ಆಗಬೇಕು-ವಿಮಲಾ ರೇವಣಕರ್

0

Rotary Club Shimoga ವಿಶ್ವಕ್ಕೆ ಭಾರತೀಯ ಸಂಸ್ಕೃತಿಯ ಕೊಡುಗೆ ಅಪಾರ, ಋಷಿಮುನಿಗಳು ತಾಳೆಗರಿಗಳಲ್ಲಿ ಬರೆದಿಟ್ಟಿರುವ ಇತಿಹಾಸಗಳು ಹಾಗೂ ಖಗೋಳ ವಿಸ್ಮಯಗಳು ಇರುವುದು ಸಂಸ್ಕೃತದಲ್ಲಿ. ಇದನ್ನು ದೇವ ಭಾಷೆಯೆಂದು ಕರೆಯಲಾಗುತ್ತದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ವಾರದ ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಮಲ ರೇವಣ್ ಕರ್ ರವರು ಮಾತನಾಡುತ್ತಿದ್ದರು.
ಎಲ್ಲಾ ಭಾಷೆಗಳ ಪಿತಾಮಹ ಎಂದು ಸಂಸ್ಕೃತಕ್ಕೆ ಹೆಸರಿದೆ, ವಿಶ್ವದಭಾಷೆಯಾಗಿತ್ತು. ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಲು ವಿದೇಶಗಳಿಂದ ವಿದ್ಯಾರ್ಥಿಗಳು ಆಗಮಿಸಿ ವೇದ ಕಲಿಯುತ್ತಿದ್ದರೆಂದು ಇತಿಹಾಸವಿದೆ. ನಮ್ಮ ನಾಡಿನ ವಿವಿದ ಇತಿಹಾಸ ಪ್ರಸಿದ್ದ ಮಹಾಕಾವ್ಯ ಗಳು ಮೂಡಿರುವುದು ಸಂಸ್ಕೃತದಲ್ಲಿ.
ಬ್ರಿಟಿಷರು ಆಂಗ್ಲಭಾಷೆ ಅಭಿವೃದ್ಧಿ ಪಡಿಸಲು ನಮ್ಮ ಭಾಷೆಗಳಿಗೆ ಮಾನ್ಯತೆ ನೀಡಲಿಲ್ಲ. ಇಂದು ಕೇವಲ ಪೂಜೆ, ಪುನಸ್ಕಾರಗಳಿಗೆ ಈ ಭಾಷೆ ಉಪಯೋಗ ಆಗುತ್ತಿದೆ ಎಂದುಕೊಂಡಿದ್ದೇವೆ. ವಿಶ್ವದ ಹಲವಾರು ವಿಜ್ಞಾನಿಗಳು, ಇದರ ಸಾರ ತಿಳಿದುಕೊಳ್ಳಲು ಮತ್ತು ಜ್ಞಾನ ಹೆಚ್ಚಿಸಿಕೊಳ್ಳಲು ಈಗಲು ಬಳಸಿ ಕೊಳ್ಳುತ್ತಿದ್ದಾರೆ. ಆದರೆ ಹಿತ್ತಲಗಿಡ ಮದ್ದಲ್ಲ ಎಂಬಂತಾಗಿ ನಾವು, ಈ ಭಾಷೆಗೆ ಹೆಚ್ಚಿನ ಮಾನ್ಯತೆ ನೀಡುತ್ತಿಲ್ಲ, ಇದನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಕೊಟ್ಟು ಹೊಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದಕ್ಕೆ ಜಾತಿಯ ಅಡೆತಡೆಗಳಿಲ್ಲ, ಧರ್ಮ, ಶಾಂತಿ, ಪ್ರಾರ್ಥನೆ, ಧ್ಯಾನ ಇವೆಲ್ಲ ಸಂಸ್ಕೃತ ಪದಗಳು. ಹಿಗೆ ಎಲ್ಲಾ ಭಾಷೆಯಲ್ಲಿ ಸಂಸ್ಕೃತ ಬೆರೆತಿದೆ. ಮತ್ತೂರು ಗ್ರಾಮದಲ್ಲಿ ಎಲ್ಲರೂ ಸಂಸ್ಕೃತ ದಲ್ಲಿ ಮಾತನಾಡುತ್ತಾರೆ. ಉಳಿಸಿಬೆಳೆಸಲು ಪಠಾಮಿ ಸಂಸ್ಕೃತಂ ಆನ್ ಲೈನ್ ನಲ್ಲಿ ಮಾತನಾಡುವುದನ್ನು, ಮುವತ್ತೈದು ಕಡೆ ಬಾಲಗೋಕುಲಗಳಲ್ಲಿ ಮಕ್ಕಳಿಗೆ ಸಂಸ್ಕೃತ ಅಭ್ಯಾಸ ಮಾಡಿಸಲಾಗುತ್ತಿದೆ. ನಮ್ಮ ಭಾಷೆಗಳೊಂದಿಗೆ ಪ್ರಾಥಮಿಕ ಹಂತದಲ್ಲಿಯೆ ಮಕ್ಕಳಿಗೆ ಈ ಭಾಷೆ ಕಲಿಸಿದರೆ, ಬುದ್ದಿ ಶಕ್ತಿ ಚುರುಕೊಂಡು, ವಿದ್ಯಾಭ್ಯಾಸದಲ್ಲಿ ಏಳಿಗೆ ಕಾಣಲು ಸಾಧ್ಯ ಎಂದರು.
Rotary Club Shimoga ಅಧ್ಯಕ್ಷತೆ ವಹಿಸಿದ್ದ ರೊ.ರೂಪಪುಣ್ಯಕೊಟಿ ಯವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಅಶ್ವಥ್ ವಂದಿಸಿದರು, ಸತ್ಯನಾರಾಯಣ್, ನಾಗರಾಜ್, ರೇವಣಸಿದ್ದಪ್ಪ, ರೇಣುಕಾರಾದ್ಯ ವಾಗೇಶ್, ರಾಜಶೇಖರ ಮುಂತಾದವರು ಇದ್ದರು.

shimoga district chamber of commerce and industry ಆದಾಯ ತೆರಿಗೆ ಸಂಬಂಧಿಸಿದ ಸಮಸ್ಯೆ ಪರಿಹಾಕ್ಕೆ ಪ್ರಯತ್ನ-ಶಾನವಾಜ್ ಉಲ್ ರಹಮಾನ್

0

shimoga district chamber of commerce and industry ಆದಾಯ ತೆರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಂತೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ನೇತೃತ್ವದಲ್ಲಿ ಪದಾಧಿಕಾರಿಗಳು ಆದಾಯ ತೆರಿಗೆ ಆಯುಕ್ತ ಶಾನವಾಜ್ ಉಲ್ಲ ರೆಹಮನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಆದಾಯ ತೆರಿಗೆ ಮೇಲ್ಮನವಿ ಸಲ್ಲಿಕೆಗೆ ಸಂಬಂಧಿಸಿ ಸಮಸ್ಯೆಗಳು, ಟಿಡಿಎಸ್ ಕಟಾವು, ಅಲ್ಪಾವಧಿ ಬಂಡವಾಳ ಲಾಭಕ್ಕೆ ಸಂಬಂಧಿಸಿ ಸೆಕ್ಷನ್ 87 ಎ ರಿಯಾಯಿತಿ ನೋಟಿಸ್, ಸಹಕಾರಿ ಸಂಘಗಳ 80 ಪಿ ವಿನಾಯಿತಿ, ಹಳೆಯ ಮೆಲ್ಮನವಿಗಳು ಇನ್ನೂ ಇತ್ಯರ್ಥವಾಗದಿರುವ ಬಗ್ಗೆ, ರೆಕ್ಟಿಫಿಕೇಶನ್ ಮನವಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದರು. ಆದಾಯ ತೆರಿಗೆ ಇಲಾಖೆಯಿಂದ ನಡೆಸುತ್ತಿರುವ ಕರದಾತರ ಸಂಪರ್ಕ ಕಾರ್ಯಕ್ರಮವನ್ನು ಹೆಚ್ಚು ಮಾಡಬೇಕು ಎಂದರು.
ಅಡಿಕೆ ಮಂಡಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ ಮಾತನಾಡಿ ತೆರಿಗೆಯ ಸಮಸ್ಯೆಗಳ ಬಗ್ಗೆ ಆಯುಕ್ತರ ಗಮನ ಸೆಳೆದರು.
shimoga district chamber of commerce and industry ಆದಾಯ ತೆರಿಗೆ ಆಯುಕ್ತ ಶಾನವಾಜ್ ಉಲ್ ರೆಹಮನ್ ಮಾತನಾಡಿ, ಆದಾಯ ತೆರಿಗೆಗೆ ಸಂಬಂಧಿಸಿ ಕರದಾತರು ಅನುಸರಿಸಬೇಕಾದ ಶಾಸನಬದ್ಧ ವಿಧಿ ವಿಧಾನಗಳ ಬಗ್ಗೆ ವಿಸ್ಕೃತವಾಗಿ ವಿವರಣೆ ನೀಡಿದರು. ಎಲ್ಲಾ ಆದಾಯ ತೆರಿಗೆ ಕರದಾತರು, ಹೆಚ್ಚಿನ ಕೃಷಿ ಆದಾಯ ಹೊಂದಿರುವವರು ರಿಟರ್ನ್ಸ್ ಫೈಲ್ ಮಾಡುವುದರಿಂದ ಇಲಾಖೆಯಿಂದ ಆದಾಯ ಮೂಲದ ವಿವರಣೆ ಕೋರಿ ನೋಟಿಸ್ ಬರುವುದನ್ನು ತಪ್ಪಿಸಿಕೊಳ್ಳಬಹುದು. ಆದಾಯ ತೆರಿಗೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ ಎಂ ಸುರೇಶ್, ಖಜಾಂಚಿ ಆರ್ ಮನೋಹರ, ನಿರ್ದೇಶಕರಾದ ಪ್ರದೀಪ್ ವಿ ಎಲಿ, ಹಿರಿಯ ಆದಾಯ ತೆರಿಗೆ ಅಧಿಕಾರಿ ಎಚ್ ಸಿ ವಾಗೀಶ್, ಇತರೆ ಅಧಿಕಾರಿಗಳು ಸಿಬ್ಬಂದಿ, ಎಪಿಎಂಸಿ ಅಧ್ಯಕ್ಷ ಮಾದೇಶ್ ಹೆಗ್ಡೆ , ಸಹ ಕಾರ್ಯದರ್ಶಿ ಕುಡುವಲ್ಲಿ ಅನೂಪ್, ಸೂರ್ಯ ನಾರಾಯಣ್ ಹಾಗೂ ಅಡಿಕೆ ಮಂಡಿ ವರ್ತಕರು ಭಾಗವಹಿಸಿದ್ದರು.

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಉದ್ಯಮಿ ಎಸ್.ರುದ್ರೇಗೌಡ ಆಯ್ಕೆ

0

Shivaganga Yoga Center ಶಿವಗಂಗಾ ಯೋಗಕೇಂದ್ರದ ನೂತನ ಅಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ಆಯ್ಕೆಯಾಗಿದ್ದಾರೆ.
ಶಿವಗಂಗಾ ಯೋಗಕೇಂದ್ರವು ನಗರದಲ್ಲಿ ನಿಸ್ವಾರ್ಥವಾಗಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಶಿಬಿರಗಳನ್ನು ನಗರದ 35 ಬಡಾವಣೆಗಳಲ್ಲಿ ಉಚಿತವಾಗಿ ನಡೆಸಿಕೊಂಡು ಬರುತ್ತಿದೆ. ಧಾರ್ಮಿಕ, ಸಾಮಾಜಿಕ ಹಾಗೂ ಆರೋಗ್ಯ ಜಾಗೃತಿ ಶಿಬಿರಗಳನ್ನು ಆಯೋಜಿಸುತ್ತದೆ.
ಶಿವಗಂಗಾ ಯೋಗಕೇಂದ್ರ 21 ವರ್ಷಗಳಿಂದ ಶಿವಮೊಗ್ಗ ನಗರದಲ್ಲಿ ತರಬೇತಿ ನೀಡುತ್ತಿದೆ. ಪರ್ಫೆಕ್ಟ್ ಅಲಾಯ್ಸ್ ನ ದಿವಾಕರ್, ನಂತರ ನಂಜುಂಡಶೆಟ್ಟರ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್ ಮಾರ್ಗದರ್ಶನ ಹಾಗೂ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಗೌರವಾಧ್ಯಕ್ಷತೆಯಲ್ಲಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
Shivaganga Yoga Center ಸಾವಿರಾರು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಿ ಮುನ್ನಡೆಯುತ್ತಿರುವ ಪ್ರತಿಷ್ಠಿತ ಸಂಸ್ಥೆಯ ಮೂರನೇ ಅಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ಅವರನ್ನು ಎಲ್ಲ ಟ್ರಸ್ಟಿಗಳು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಎಸ್.ರುದ್ರೇಗೌಡ ಅವರನ್ನು ಕೃಷಿನಗರ ಶಕ್ತಿ ಗಣಪತಿ ಯೋಗ ಕೇಂದ್ರದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಬಳ್ಳೇಕೆರೆ ಸಂತೋಷ್, ಚಂದ್ರಶೇಖರಯ್ಯ, ಗಣಪತಿ ದೇವಸ್ಥಾನದ ಅಧ್ಯಕ್ಷ ಅರವಿಂದ್, ನೀಲಕಂಠರಾವ್, ಗಣಪತಿ, ಜಿ.ವಿಜಯಕುಮಾರ್, ಕಾಟನ್ ಜಗದೀಶ್ ಇತರರಿದ್ದರು.

Department of Youth Empowerment and Sports ಯು‌ವ ಸಬಲೀಕರಣ ಇಲಾಖೆಯಿಂದ ಅರ್ಹ ಕ್ರೀಡಾಪಟುಗಳ ” ವಿಶೇಷ ಆಯ್ಕೆ ಶಿಬಿರ” ಮಾಹಿತಿ

0

Department of Youth Empowerment and Sports ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26 ನೇ ಸಾಲಿನಲ್ಲಿ ಕ್ರೀಡಾ ವಸತಿ ಶಾಲೆ/ನಿಲಯಗಳಿಗೆ 8ನೇ ತರಗತಿ ಮತ್ತು ಪ್ರಥಮ ಪಿಯುಸಿ ಮಟ್ಟದ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಪ್ರವೇಶಾವಕಾಶ ಕಲ್ಪಿಸಲು ರಾಜ್ಯದ ಕೆಲವು ಸ್ಥಳಗಳಲ್ಲಿ ‘ವಿಶೇಷ ಆಯ್ಕೆ ಶಿಬಿರ’ ಆಯೋಜಿಸಲಾಗಿದೆ.

ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಪ್ರವೇಶ ನೀಡಲು ಈಗಾಗಲೇ ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿರುತ್ತದೆ. ಆದರೆ ಸದರಿ ಆಯ್ಕೆ ಶಿಬಿರಗಳಲ್ಲಿ ವಿವಿಧ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶವನ್ನು ನೀಡುವ ದೃಷ್ಟಿಯಿಂದ ರಾಜ್ಯದ ಕೆಳಕಂಡ ಸ್ಥಳಗಳಲ್ಲಿ ವಿಶೇಷ ಆಯ್ಕೆ ಶಿಬಿರ ಏರ್ಪಡಿಸಲಾಗಿದೆ.

ಏ.15 ರಂದು ಕಂಠೀರವ ಕ್ರೀಡಾಂಗಣ ಬೆಂಗಳೂರು ಇಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಫೆನ್ಸಿಂಗ್, ಆರ್ಚರಿ. ಧಾರವಾಡ ಜಿಲ್ಲಾ ಕ್ರೀಡಾಂಗಣ ಅಥ್ಲೆಟಿಕ್ಸ್, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಸೈಕ್ಲಿಂಗ್. ಕಲ್ಬುರ್ಗಿ ಜಿಲ್ಲಾ ಕ್ರೀಡಾಂಗಣ ಅಥ್ಲೆಟಿಕ್ಸ್, ವಾಲಿಬಾಲ್ ,ಹಾಸನ ಜಿಲ್ಲಾ ಕ್ರೀಡಾಂಗಣ ಫುಟ್‌ಬಾಲ್, ದಾವಣಗೆರೆ ಜಿಲ್ಲಾ ಕ್ರೀಡಾಂಗಣ ಕುಸ್ತಿ ಮತ್ತು ಕಬಡ್ಡಿ, ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣ ಹಾಕಿ, ತುಮಕೂರು ಜಿಲ್ಲಾ ಕ್ರೀಡಾಂಗಣ ಜಿಮ್ನಾಸ್ಟಿಕ್, ಏ.17 ರಂದು ಉಡುಪಿ ಜಿಲ್ಲಾ ಕ್ರೀಡಾಂಗಣ ಅಥ್ಲೆಟಿಕ್ಸ್, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಕಬಡ್ಡಿ. ಬೀದರ್ ಜಿಲ್ಲಾ ಕ್ರಿಡಾಂಗಣ ಸೈಕ್ಲಿಂಗ್. ಬಳ್ಳಾರಿ ಜಿಲ್ಲಾ ಕ್ರೀಡಾಂಗಣ ಫುಟ್‌ಬಾಲ್, ಗದಗ ಜಿಲ್ಲಾ ಕ್ರೀಡಾಂಗಣ ಹಾಕಿ, ಚಿಕ್ಕಮಗಳೂರು ಜಿಲ್ಲಾ ಕ್ರೀಡಾಂಗಣ ಜುಡೋ ಆಯ್ಕೆ ಇರುತ್ತದೆ.

ರಾಜ್ಯದ ಯಾವುದೇ ಭಾಗದ ಕ್ರೀಡಾಪಟುಗಳು ಭಾಗವಹಿಸಲು ಮುಕ್ತ ಅವಕಾಶವಿದೆ. 2025-26 ನೇ ಸಾಲಿನ ಪ್ರವೇಶಕ್ಕೆ ಈಗಾಗಲೇ ಆಯೋಜಿಸಲಾದ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಈ ವಿಶೇಷ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸಬಹುದು.

Department of Youth Empowerment and Sports ಈಗಾಗಲೇ ಆಯ್ಕೆ ಶಿಬಿರಗಳಲ್ಲಿ ಭಾಗಿಯಾಗಿರುವ ಆದರೆ, ರಾಜ್ಯ ಮಟ್ಟದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗದ ಅಭ್ಯರ್ಥಿಗಳು ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ಉದ್ದೇಶಿಸಿದಲ್ಲಿ ಈ ಬಗ್ಗೆ ಅರ್ಜಿ ನಮೂನೆಯಲ್ಲಿ ಕಡ್ಡಾಯವಾಗಿ ದಾಖಲಿಸಿ, ವಿಶೇಷ ಆಯ್ಕೆ ಶಿಬಿರದಲ್ಲಿ ಭಾಗವಹಿಸಬಹುದು.

8 ನೇ ತರಗತಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಪ್ರಸ್ತುತ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 6ನೇ ತರಗತಿ ಪ್ರವೇಶಕ್ಕೆ ಜೂನ್ 2025 ಕ್ಕೆ ಅನ್ವಯವಾಗುವಂತೆ 14 ವರ್ಷ ವಯಸ್ಸಿನ ಒಳಗೆ ಇರಬೇಕು. ಪ್ರಥಮ ಪಿಯುಸಿ ಪ್ರವೇಶ ಬಯಸುವ ಅಭ್ಯರ್ಥಿಗಳ ವಯಸ್ಸು ಜೂನ್ 2025 ಕ್ಕೆ ಅನ್ವಯವಾಗುವಂತೆ 18 ವರ್ಷ ವಯಸ್ಸಿನ ಒಳಗೆ ಇರಬೇಕು.

ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಚೇರಿಯನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.