Wednesday, March 4, 2026
Wednesday, March 4, 2026
Home Blog Page 340

Ambedkar Jayanti 2025 ಶಿವಮೊಗ್ಗದ ಮಾರ್ನವಮಿ ಬೈಲಿನಲ್ಲಿ ಮಾನವತಾವಾದಿ ಡಾ.ಅಂಬೇಡ್ಕರ್ ದಿನಾಚರಣೆ

0

Ambedkar Jayanti 2025 ಶಿವಮೊಗ್ಗ ಜಿಲ್ಲಾ ತೆಲುಗು ‌ಅರುಂಧತಿ ಆದಿಕರ್ನಾಟಕ ಸಮಾಜದಿಂದ ಹಾಗೂ ಮಾರ್ನಮಿ ಬೈಲ್ ನ ಮೂರನೇ ತಿರುವಿನ ಹಲವು ಗಣ್ಯರ ಸಮ್ಮುಖದಲ್ಲಿ ಇಂದು ಬೆಳಗ್ಗೆ 134 ನೇ ಅಂಬೇಡ್ಕರ್ ಜಯಂತಿಯನ್ನು ಮಾರ್ನಮಿ ಬೈಲ್ ನ ಮೂರನೇ ತಿರುವಿನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ರಾಜಶೇಖರ್, ಶಾಂತಯ್ಯ, ಪೆಂಚಲಯ್ಯ, ಎಸ್.ಜಿ‌‌.ಮಂಜಣ್ಣ, ಚಿನ್ನಸ್ವಾಮಿ, ರಮೇಶ, ಶ್ರೀಧರ್ ಸೇರಿದಂತೆ ಮೂರನೇ ತಿರುವಿನ ಹಲವು ಗಣ್ಯರು ಉಪಸ್ಥಿತರಿದ್ದರು.

Ambedkar Jayanti 2025 ಪ್ರಪಂಚದ ಎಲ್ಲಾ ಶೋಷಿತರಿಗೆ ವಿಮೋಚನಾ ಮಾದರಿ‌ಪುರುಷ,ಡಾ.ಅಂಬೇಡ್ಕರ್- ಎಸ್.ಸಿ.ರಾಮಚಂದ್ರ

0

Ambedkar Jayanti 2025 ಡಾ|| ಬಿ.ಆರ್. ಅಂಬೇಡ್ಕರ್ ಅವರು ಸಮಾಜಿಕ ಸುಧಾರಣೆಯ ಪ್ರಭಲ ಪ್ರತಿಪಾದಕರು – ಎಸ್.ಸಿ ರಾಮಚಂದ್ರ.
ರೋಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಅವರ ೧೩೪ ನೇ ಜಯಂತಿ ಸಮಾರಂಭವನ್ನು ಆಚರಿಸಲಾಯಿತು . ಈ ಸಮಾರಂಭದಲ್ಲಿ ರೋಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯ ಕಾರ್ಯದರ್ಶಿ ಎಸ್.ಸಿ ರಾಮಚಂದ್ರರವರು ಮಾತನಾಡುತ್ತ ಡಾ|| ಬಿ.ಆರ್. ಅಂಬೇಡ್ಕರ್ ರವರು ಭಾರತದÀ ಸಂವಿಧಾನದ ಶಿಲ್ಪಿ ಅಷ್ಟೆಅಲ್ಲ ಆಧುನಿಕ ಭಾರತದÀ ಸೃಷ್ಷಿಕರ್ತರು ಶೇಷ್ಠ ಸಮಾಜ ಸುಧಾರಕರಾಗಿದ್ದ ಅಂಬೇಡ್ಕರ್ ಅವರು ಸಮಾಜಿಕ ಸುಧಾರಣೆಯ ಪ್ರಭಲ ಪ್ರತಿಪಾದಕರಾಗಿದ್ದರು. ಭಾರತದ ಮೊದಲ ಕಾನೂನು ಮಂತ್ರಿಯಾಗಿ ಕೇವಲ ದಲಿತ ಸಮುದಾಯಕ್ಕೆ ಮಾತ್ರವಲ್ಲದೆ, ಪ್ರಪಂಚದ ಎಲ್ಲಾ ಶೋಷಿತ ವರ್ಗಕ್ಕೆ ವಿಮೋಚಕನೊಬ್ಬನು ತೋರಿಸುವ ದಿವ್ಯ ಮಾರ್ಗದರ್ಶಕರಾಗಿದ್ದರು ಎಂದು ಹೇಳುತ್ತ ಡಾ|| ಬಿ.ಆರ್. ಅಂಬೇಡ್ಕರ್ ರವರು ರಾಷ್ಷçಕೆ ನೀಡಿದ ಕೊಡುಗೆಯನ್ನು ಮರೆಯಲಾಗದು. ಈ ಕಾರಣಕ್ಕಾಗಿ ಭಾರತದ ಅತ್ಯುನ್ನತ ಪದವಿಯಾದ ಭಾರತ ರತ್ನಕ್ಕೆ ಭಾಜನರಾಗಿರುತ್ತಾರೆಂದು ತಿಳಿಸಿದರು. ಬಹಳ ಮುಖ್ಯವಾಗಿ ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದ ಮೇಲೆ ಇತರರ ಜೊತೆ ಹಂಚಿಕೊAಡಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾದ್ಯವೆಂದು ಅಭಿಪ್ರಾಯ ಪಟ್ಟರು.
Ambedkar Jayanti 2025 ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಪದ್ಯಕ್ಷರಾದ ಡಾ| ಪರಮೇಶ್ವರ ಶಿಗ್ಗಾವ್ ಅವರು ಮಾತನಾಡುತ್ತ ಡಾ|| ಬಿ.ಆರ್. ಅಂಬೇಡ್ಕರ್ ರವರು ಸಮಾಜ ಸುಧಾರಣೆಯ ಪ್ರತಿಪಾದಕರಲ್ಲದೆ ಶ್ರೇಷ್ಠ ದಾರ್ಶನಿಕ ಮತ್ತು ತ್ತತ್ವಙ್ಞನಿ ಎಂದು ಭಾರತಕ್ಕೆ ಮಾತ್ರವಲ್ಲದೆ ಅವರು ಇಡೀ ಪ್ರಪಂಚದಲ್ಲಿರುವ ಶೋಷಿತ ಸಮಾಜದ ಆಶಾಕಿರಣವಾಗಿದ್ದರೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಖಜಾಂಜಿಯಾದ ರೊ.ಜಿ ವಿಜಯ ಕುಮಾರ್ ಅವರು ಮಾತನಾಡುತ್ತ, ಡಾ|| ಬಿ.ಆರ್. ಅಂಬೇಡ್ಕರ್ ರವರು ಅಸಮಾನತೆಯ ವಿರುದ್ಧ ದಲಿತರ ಹಕ್ಕುಗಳ ಪ್ರತಿಪಾದಕರಾಗಿದ್ದರೆಂದು ದಲಿತರ ಹಕ್ಕುಗಳ ಸ್ಥಾಪನೆಗಾಗಿ ನಿರಂತರ ಹೋರಾಟ ಮಾಡಿದವರಾಗಿದ್ದಾರೆಂದು ತಿಳಿಸಿದರು.
ಸಮರಂಭದಲ್ಲಿ ರೋಟರಿ ಪೂರ್ವ ಎಜುಕೇಷನಲ್ ಟ್ರಸ್ಟ್ನÀ ಸಹಕಾರ್ಯದರ್ಶಿ ಶ್ರೀಮತಿ ನಾಗವೇಣಿ ಪ್ರಾಂಶುಪಾಲರಾದ ಶ್ರೀ ಸರ‍್ಯನಾರಾಯಣ್ ಅವರು ಉಪಸ್ಥಿತರಿದ್ದರು. ಸಮಾರಂಭಕ್ಕೆ ಆಗಮಿಸಿದ ಎಲ್ಲಾರನನ್ನು ಶ್ರೀಮತಿ ಕಾವ್ಯ ಸಹಶಿಕ್ಷಕಿ ಸ್ವಾಗತಿಸಿ ಕೊನೆಯಲ್ಲಿ ಶ್ರೀಮತಿ ದೀಪಿಕಾ ಸಹಶಿಕ್ಷಕಿ ಇವರ ವಂದನಾರ್ಪಣೆಯೊAದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.

2nd PUC Exam Result 2025 ಗುರುಪುರ ಬಿಜಿಎಸ್ ಪಿಯು ಕಾಲೇಜಿಗೆ ಶೇ.99.1 ಫಲಿತಾಂಶ.

0

2nd PUC Exam Result 2025 ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಮಾದರಿಯ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಗ್ರಾಮೀಣ ಭಾಗದ ಹೆಚ್ಚು ಮಕ್ಕಳನ್ನು ಹೊಂದಿರುವ ಈ ಕಾಲೇಜು ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಯಲ್ಲಿ ಅತ್ಯುನ್ನತ ಫಲಿತಾಂಶವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ: 114 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 25 ಉನ್ನತ ಶ್ರೇಣಿ, 86 ಪ್ರಥಮ ಶ್ರೇಣಿ, ಎರಡು ದ್ವಿತೀಯ ಶ್ರೇಣಿ ಪಡೆದಿದ್ದು, ವಾಣಿಜ್ಯ ವಿಭಾಗದಲ್ಲಿ: 45 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 08 ಉನ್ನತ ಶ್ರೇಣಿ ಹಾಗು 35 ಪ್ರಥಮ ಶ್ರೇಣಿ ಯಲ್ಲಿ, ಒಂದು ದ್ವಿತೀಯ ಶ್ರೇಣಿಯಲ್ಲಿ ಲಭಿಸಿದೆ.
ವಿಜ್ಞಾನ ವಿಭಾಗದಲ್ಲಿ ತ್ರಿವೇಣಿ ವೈ. 600 ಕ್ಕೆ 579 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರೆ, ಲಿಖಿತ್ ಕೆ. ಜಿ.570 ಅಂಕಗಳಿಸುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಸೃಷ್ಟಿ, ಯುಕ್ತ, ಸುಪರ್ಣ, ಚಂದ್ರಮ್ಮ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
2nd PUC Exam Result 2025 ವಾಣಿಜ್ಯ ವಿಭಾಗದಲ್ಲಿ ವಿಷ್ಮಯಎಂ. 600 ಕ್ಕೆ 557 ಅಂಕ ಪಡೆದುಕೊಂಡು ಕಾಲೇಜಿಗೆ ಪ್ರಥಮಳಾಗಿದ್ದಾಳೆ,ನಿತ್ಯಶ್ರೀ 555 ಅಂಕಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್., ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ

Nittur hanging bridge ನಿಟ್ಟೂರು ತೂಗು ಸೇತುವೆಯ ಭವಿಷ್ಯವೇತೂಗುಯ್ಯಾಲೆಯಲ್ಲಿ!

0

Nittur hanging bridge ತೂಗು ಸೇತುವೆ ಎಂಬ ತೂಗು ಕತ್ತಿಯ ಮೇಲೆ ಮೂರು ಗ್ರಾಮಗಳ ಜನರ ಸಂಚಾರ ಲಿಂಗನಮಕ್ಕಿ ಆಣೆ ಕಟ್ಟಿಗೆ ತಮ್ಮ ಬದುಕನ್ನೆ ಬಾಗಿನದ ರೀತಿಯಲ್ಲಿ ಅರ್ಪಿಸಿದವರ ಜೀವನ ಈಗ ಅತಂತ್ರವಾಗಿದೆ. ದೀಪದ ಬುಡದಲ್ಲಿ ಕತ್ತಲೆ ಎನ್ನುವಂತೆ ಕಗ್ಗತ್ತಲೆಯ ನರಕದಲ್ಲೆ ಬದುಕುವಂತಾಗಿದೆ ನಾಡಿಗೆ ಬೆಳಕು ಕೊಟ್ಟವರೀಗ ಅಂಧಕಾರದಲ್ಲಿ‌ ಮುಳುಗಿದ್ದಾರೆ. ರಾಜ್ಯದ ಎರಡನೇ ಅತಿ ಉದ್ದದ ತೂಗುಸೇತುವೆ ಈಗ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೀಡಾಗಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು ತೂಗುಸೇತುವೆ ಇದೆ.

ಅನುದಾನ ಬಿಡುಗಡೆಯಾಗಿ ವರ್ಷವಾದ್ರೂ ಕೆಲಸ ಮಾತ್ರ ಮರಿಚೀಕೆ ಈ ವಿಚಾರವಾಗಿ ಈ ಹಿಂದೆ ಎಂಎಲ್ಎ ಅಗಿದ್ದ ಹಾಲಪ್ಪರನ್ನ ಈಗಿನ ಶಾಸಕ ಬೇಳೂರು ಗೋಪಾಲಕೃಷ್ಣ ಟೀಕಿಸಿದ್ದರು. ಅಂದು ತೂಗುಸೇತುವೆ ದುರಸ್ಥಿ ಮಾಡುವಂತೆ ಒತ್ತಡ ಹಾಕಿದ್ದ ಬೇಳೂರು ಇಂದು ಸೈಲೆಂಟ್ ಆಗಿದ್ದರಾರೆ. ಈ ಜಾಣ‌ತನ‌ ಯಾಕೋ ಗೊತ್ತಿಲ್ಲ. ಈಗ ತಾವೇ ಎಂಎಲ್ ಎ ಅಗಿ ಎರಡು ವರ್ಷ ಕಳೆದರೂ ದುರಸ್ಥಿ ಕಾರ್ಯದ ಬಗ್ಗೆ ತುಟಿಯೆರಡು ಮಾಡಿಲ್ಲ. ಒಟ್ಟಿನಲ್ಲಿ ಮಲೆನಾಡಿನ ಹಿನ್ನೀರ ಜನರ ಸಂಪರ್ಕ ಕೊಂಡಿ ತೂಗುಸೇತುವೆಗೆ ಸಂಚಕಾರ ಬಂದಿದೆ. ಈಗಲೇ ಎಚ್ಚೆತ್ತು ನಿರ್ವಹಣೆ ಮಾಡದೆ ಇದ್ದರೆ ಬರಲಿರುವ ಮಳೆಗಾಲದಲ್ಲಿ ಕಂಟಕ ಎದುರಾಗುವುದು ಗ್ಯಾರಂಟಿ.

Nittur hanging bridge ನಾಗೋಡಿ ಮತ್ತು ಹೆಬ್ಬಿಗೆ ಗ್ರಾಮಗಳನ್ನು  ಸಂಪರ್ಕಿಸಲು 2011 ರಲ್ಲಿ ತೂಗು ಸೇತುವೆ ನಿರ್ಮಾಣವಾಗಿತ್ತು.
ಮಲೆನಾಡು ಅಭಿವೃದ್ಧಿ ಪ್ರಾಧಿಕಾರವು ಅಂದಿನಿಂದ ಇಂದಿನ ವರೆಗೂ ಒಮ್ಮೆಯೂ ದುರಸ್ಥಿ ಮಾಡದೇ ನಿರ್ಲಕ್ಷ್ಯ ತೋರುತ್ತಿದೆ ಎಂಬುದು ಗ್ರಾಮಸ್ಥರ ಒಳಗುದಿ. ಮುಳುಗಡೆ ಸಂತ್ರಸ್ತರ ಸಂಪರ್ಕಕೊಂಡಿ ತೂಗು ಸೇತುವೆ ಸಂಪೂರ್ಣ ಶಿಥಿಲವಾಗಿದೆ. ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ ಗ್ರಾಮಸ್ಥರು ಹೆಬ್ಬಿಗೆ, ಬರುವೆ, ಏಳಿಗೆ ಗ್ರಾಮಸ್ಥರಿಗೆ ಸಂಪರ್ಕ ಕಡಿತದ ಭೀತಿ ಎದುರಾಗಿದೆ. 2011 ರಿಂದ ತೂಗು ಸೇತುವೆಯ ರೋಪ್ ಗೆ ಒಮ್ಮೆಯೂ ಅಯಿಲ್ ಹಚ್ಚಿಲ್ಲ ,ನಿರ್ವಹಣೆಯ ಕೊರತೆ ಎದ್ದುಕಾಣುತ್ತಿದೆ. ತೂಗು ಸೇತುವೆಯ ಕಬ್ಬಿಣ ಸಂಪೂರ್ಣವಾಗಿ ತುಕ್ಕು ಹಿಡಿದಿದ್ದು ಸಂಚಾರಕ್ಕೆ ಸೂಕ್ತವಾಗಿಲ್ಲ ಸೇತುವೆಗೆ ಬಳಸಲಾಗಿರುವ ಮಧ್ಯದ ಕಡಪಗಳಲ್ಲೆವೂ ಬಿರುಕು ಬಿಟ್ಟುವೆ

ಪ್ರವಾಸಿಗರ ನೆಚ್ಚಿನ ಸ್ಥಳವಾಗಿರುವ ಹಿನ್ನೀರಿನ ಮೇಲಿರುವ ತೂಗುಸೇತುವೆಯು ಸ್ವತಃ ಪ್ರವಾಸಿಗರನ್ನ ಸೆಳೆಯಲು ಅಂಜಿಕೊಳ್ಳುತ್ತಿದೆ.

ಪ್ರವಾಸಿಗರು
ಸಾವಿರ ಸಂಖ್ಯೆಯಲ್ಲಿ ತೂಗುಸೇತುವೆ ವೀಕ್ಷಣೆಗೆ ಆಗಮಿಸುತ್ತಾರೆ.
ಈಗ ಬೇಸಿಗೆಯಲ್ಲಿ
ತೂಗುಸೇತುವೆ
ಕಾಯಕಲ್ಪಕ್ಕೆ ಕಾಯುತ್ತಿದೆ.
ಸರ್ಕಾರ,ಜನನಾಯಕರು ಶೀಘ್ರ ಈ ಕಡೆ ನೋಡಿ ಎಂಬುದೇ ಎಲ್ಲರ ಕಲಕಳಿಯಾಗಿದೆ..

S N Channabasappa ಅಂಬೇಡ್ಕರ್ ಜೀವನಾದರ್ಶಗಳು ಅಮೂಲ್ಯ- ಶಾಸಕ ‘ಚೆನ್ನಿ’

0

S N Channabasappa ಅಂಬೇಡ್ಕರ್ ಅವರ ಜೀವನದ ಆದರ್ಶಗಳು ಮತ್ತು ಸಮಾಜ ಪರಿವರ್ತನೆಗೆ ಅವರು ನೀಡಿದ ಅಮೂಲ್ಯ ಕೊಡುಗೆಗಳ ಎಂದಿಗೂ ಅಜರಾಮರ!

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಅಂಗವಾಗಿ ಇಂದು ಶಿವಮೊಗ್ಗ ನಗರದ ಬಾಪೂಜಿನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದಲ್ಲಿ ನಡೆದ ಭಾವಪೂರ್ಣ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಭಾಗವಹಿಸಿ, ಮಾತನಾಡಿದರು.

S N Channabasappa ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಹಲವಾರು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸರ್ಕಾರಿ ಶಾಲೆಯ ಶಿಕ್ಷಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಇದರೊಂದಿಗೆ, ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ಸಮಾಜ ಸೇವಕರು ಉಪಸ್ಥಿತರಿದ್ದರು.

Ambedkar Jayanti 2025 ನಮ್ಮ ಅಂಬೇಡ್ಕರ್ನಮಗೆ ಮಾದರಿ -ಸಿದ್ಧರಾಮಯ್ಯ

0

Ambedkar Jayanti 2025 ಬಾಬಾ ಸಾಹೇಬರ ಹೆಸರನ್ನು ಅಮರವಾಗಿಸಲು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ “ಡಾ|| ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್” ಸ್ಥಾಪನೆಗೈದದ್ದು ನಾವು.

Ambedkar Jayanti 2025 ಬಾಬಾ ಸಾಹೇಬರ ಆಶಯಗಳು ನಮ್ಮ ಸರ್ಕಾರದ ಯೋಚನೆ ಮತ್ತು ಯೋಜನೆಗಳಿಗೆ ದಾರಿದೀಪ. ಅಂಬೇಡ್ಕರರು ರಚಿಸಿದ ಭಾರತೀಯ ಸಂವಿಧಾನದ ಪ್ರತಿ ಅಕ್ಷರಕ್ಕೂ ನಾವು ಬದ್ಧರಾಗಿದ್ದು, ಅದನ್ನು ಅನುಷ್ಠಾನಗೊಳಿಸಲು ಅನುದಿನವೂ ಶ್ರಮಿಸುತ್ತಿದ್ದೇವೆ.

ನಮ್ಮ‌ ಅಂಬೇಡ್ಕರ್ ನಮಗೆ ಮಾದರಿ

CM Siddaramaiah ರಾಜ್ಯ ಬಿಜೆಪಿ ನಾಯಕರಿಗೆ ಜನಾಕ್ರೋಶ‌ ಯಾತ್ರೆ ಮಾಡುವ‌ ಯಾವ‌ ನೈತಿಕತೆಯೂಇಲ್ಲ- ಸಿದ್ದರಾಮಯ್ಯ

0

CM Siddaramaiah ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಏರಲು ಕಾರಣ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ. ಕೇಂದ್ರದ ಬಿಜೆಪಿಯ ತಪ್ಪು ನೀತಿಗಳಿಂದಾಗಿ ಇಡೀ ದೇಶದಲ್ಲಿ ಬೆಲೆ ಏರಿಕೆಯಾಗಿದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ಜನಾಕ್ರೋಶ ಯಾತ್ರೆಗೆ ಚುರುಕು ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯ ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆ ಮಾಡುವ ಯಾವ ನೈತಿಕತೆಯು ಇಲ್ಲ.

ರಾಜ್ಯ ಸರ್ಕಾರ ಹೆಚ್ಚಿಸಿರುವ ಹಾಲಿನ ದರದಿಂದ ರೈತರಿಗೆ ಲಾಭ ಹೋಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಚ್ಚಾ ತೈಲದ ಬೆಲೆಯ ಮೇಲೆ ನಿಗದಿಯಾಗುತ್ತದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಒಂದು ಬ್ಯಾರಲ್ ಕಚ್ಚಾತೈಲಕ್ಕೆ 120 ಡಾಲರ್ ಇತ್ತು, ಈಗ 65 ಡಾಲರ್ ಗೆ ಇಳಿದಿದೆ. ಅಂದು ಗ್ಯಾಸ್ ಸಿಲಿಂಡರ್ ಬೆಲೆ 400 ರೂ. ಇತ್ತು, ಇಂದು 800 ರೂ. ಮೀರಿದೆ. ಪೆಟ್ರೋಲ್ – ಡೀಸೆಲ್ ಬೆಲೆಯನ್ನು ನರೇಂದ್ರ ಮೋದಿಯವರ ನೇತೃತ್ವದ‌ ಸರ್ಕಾರ ಹೆಚ್ಚಿಸಿರುವ ಬಗ್ಗೆ ಜನರು ಪ್ರಶ್ನೆ ಕೇಳಬೇಕಿದೆ ಎಂದು ಮರು ಸವಾಲು ಹಾಕಿದ್ದಾರೆ.

CM Siddaramaiah ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂಬ ಬಿಜೆಪಿಯವರ ಆರೋಪ ಅವರಿಗೇ ನಾಚಿಕೆಗೇಡಿನದು. ಬಿಜೆಪಿಯವರ ಕಾಲದಲ್ಲಿ ಅನುದಾನವಿಲ್ಲದಿದ್ದರೂ ಕಾಮಗಾರಿಗಳಿಗೆ ಮಂಜೂರಾತಿ ನೀಡಿ, ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದರು. ಈಗ ನಮಗೆ ಪಾಠ ಹೇಳುತ್ತಿದ್ದಾರೆ.

ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರ ಸರ್ಕಾರದ ಅವಧಿಯಲ್ಲಿಯೇ ರಾಜ್ಯದ ಆರ್ಥಿಕತೆ ಕುಸಿದಿತ್ತು. ನಮ್ಮ ಅವಧಿಯಲ್ಲಿ ಹಿಂದಿನ ವರ್ಷಕ್ಕಿಂತ ಈ ಸಾಲಿನ ಬಜೆಟ್ ನ ಪ್ರಮಾಣ ಸುಮಾರು 38 ಸಾವಿರ ಕೋಟಿಯಷ್ಟು ಹೆಚ್ಚಾಗಿದೆ. ಇದು ಸರ್ಕಾರವೊಂದರ ಆರ್ಥಿಕ ದಿವಾಳಿತನವೇ?

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುಂಚೆ ದೇಶದ ಮೇಲೆ 53,11,000 ಕೋಟಿ ಸಾಲವಿತ್ತು. ಆದರೆ ಈಗ 200 ಲಕ್ಷ ಕೋಟಿಗೂ ಹೆಚ್ಚಾಗಿದೆ. ದೇಶದ ಸಾಲ ನಾಲ್ಕು ಪಟ್ಟು ಹೆಚ್ಚಲು ನರೇಂದ್ರ ಮೋದಿಯವರೇ ಕಾರಣ ಅಲ್ವಾ? ಎಂದು ರಾಜ್ಯದ ಮುಖ್ಯಮಂತ್ತಿ ಸಿದಧರಾಮಯ್ಯನವರು ರಾಜ್ಯದ ಬಿಜೆಪಿ ನಾಯಕರಿಗೆ ಮಾತಿನ ಈಟಿಯಿಂದ ತಿವಿದಿದ್ದಾರೆ

B.Y. Vijayendra ಸುರಿಯುವ ಮಳೆಯಲ್ಲೂ ತಣ್ಣಗಾಗದ ಬಿಜೆಪಿ ಜನಾಕ್ರೋಶ. ಕಾಂಗ್ರೆಸ್ ಪಕ್ಷಕ್ಕೆ ಮಾತಿನ ಬಿಸಿ ಮುಟ್ಟಿಸಿದ ಬಿ.ವೈ ವಿಜಯೇಂದ್ರ

0

B.Y. Vijayendra “ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಳೆಗೂ ಜಗ್ಗದೇ ನಡೆದ ಜನಾಕ್ರೋಶ ಯಾತ್ರೆ”

ಶಿವಮೊಗ್ಗದಲ್ಲಿ ಶನಿವಾರ ರಾಜ್ಯದ ಭ್ರಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸಲಾಯಿತು.
ಬೆಲೆ ಏರಿಕೆಯ ಮೂಲಕ ನಿತ್ಯವೂ ಜನಸಾಮಾನ್ಯರ ಜೇಬಿಗೆ ಕತ್ತರಿ ಪ್ರಯೋಗ ಮಾಡುತ್ತಿರುವ ನಿರ್ಧಾರಗಳು, ಅಭಿವೃದ್ಧಿ ಶೂನ್ಯ ಆಡಳಿತ, ಭ್ರಷ್ಟಾಚಾರ ಹಾಗೂ ಓಲೈಕೆ ರಾಜಕಾರಣಕ್ಕಾಗಿ ಸಮಸ್ತ ಹಿಂದೂಗಳಿಗೆ ದ್ರೋಹ ಬಗೆಯುತ್ತಿರುವ ಕಾಂಗ್ರೆಸ್ ಸರ್ಕಾರದ ನಿಲುವುಗಳನ್ನು ಖಂಡಿಸಿ ರಾಜ್ಯದ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು.

ಸುರಿಯುವ ಮಳೆಯ ನಡುವೆಯೂ ಸಾರ್ವಜನಿಕರು ಹಾಗೂ ಕಾರ್ಯಕರ್ತರು ತೋರಿದ ಆಕ್ರೋಶ ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿಸಲೇಬೇಕೆಂಬ ಸಂಕಲ್ಪವನ್ನು ಸಾಕ್ಷೀಕರಿಸಿತು.

B.Y. Vijayendra ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಸಂಸದರಾದ ಶ್ರೀ ಗೋವಿಂದ ಕಾರಜೋಳ, ಸಂಸದರಾದ ಶ್ರೀ ಕೋಟಾ ಶ್ರನಿವಾಸ ಪೂಜಾರಿ, ಶ್ರೀ ಬಿ.ವೈ.ರಾಘವೇಂದ್ರ,ಮಾಜಿ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ, ಶಾಸಕರಾದ ಶ್ರೀ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ,ರಾಜ್ಯ ಉಪಾಧ್ಯಕ್ಷರಾದ ಶ್ರೀ ಹರತಾಳು ಹಾಲಪ್ಪ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷರಾದ ಕು.ಸಿ.ಮಂಜುಳಾ, ಮಾಜಿ ಶಾಸಕರಾದ ಶ್ರೀ ಅಶೋಕ್ ನಾಯಕ್, ಶ್ರೀ ಎಂ.ಡಿ.ಲಕ್ಷ್ಮೀನಾರಾಯಣ್, ವಿವಿಧ ಪ್ರಕೋಷ್ಠಕಗಳ ರಾಜ್ಯ ಸಂಚಾಲಕರಾದ ಶ್ರೀ ದತ್ತಾತ್ರಿ, ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್, ಸೇರಿದಂತೆ ರಾಜ್ಯ ಪದಾಧಿಕಾರಿಗಳು, ಪ್ರಮುಖರು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

Missing case ಮಹಿಳೆ ನಾಪತ್ತೆ. ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯ ಮಾಹಿತಿ

0

Missing case ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭದ್ರಾವತಿ ಸಿದ್ಧಾರೂಢನಗರ ಮಾತೃಶ್ರಿ ನಿಲಯ ವಾಸಿ ಬಿ.ಎಸ್.ನವೀನ್‌ಕುಮಾರ್ ಎಂಬುವವರ ತಾಯಿ 70 ವರ್ಷದ ಲಲಿತಮ್ಮ ಎಂಬ ಮಹಿಳೆ ಮನೆಯಿಂದ ಏ. 08 ರಂದು ಹೊರಗೆ ಹೋದವರು ಈವರೆಗೂ ವಾಪಸ್ಸು ಬಂದಿರುವುದಿಲ್ಲ.
ಈಕೆಯ ಚಹರೆ 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಹಣೆಯ ಮೇಲೆ ಸಾಸಿವೆ ಕಾಳು ಗಾತ್ರದ 3 ಕಪ್ಪು ಮಚ್ಚೆ ಇರುತ್ತದೆ. ಮೈಮೇಲೆ ಬಿಳಿ ಹೂವಿನ ಕೆಂಪು ಬಣ್ಣದ ನೈಟಿ ಧರಿಸಿದ್ದು, ಕೈಯಲ್ಲಿ 4 ಕಾಲಿನ ಸಿಲ್ವರ್ ವಾಕಿಂಟ್ ಸ್ಟಿಕ್ ಇರುತ್ತದೆ.
Missing case ಈ ಮಹಿಳೆಯ ಕುರಿತು ಯಾವುದೇ ಮಾಹಿತಿ ಸಿಕ್ಕಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ

Death news ಅಪರಿಚಿತ ವ್ಯಕ್ತಿಯ ಸಾವು.ಮಾಹಿತಿ ನೀಡಿ ಸಹಕರಿಸಲು,ಭದ್ರಾವತಿ ಹಳೇನಗರ ಪೊಲೀಸ್ ಪ್ರಕಟಣೆ

0

Death news ಏ.10 ರಂದು ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಯೋ ಕಚೇರಿ ಹಿಂಭಾಗದಲ್ಲಿ ಮಲಗಿದ್ದ ಸುಮಾರು 35-40 ವರ್ಷ ವಯಸ್ಸಿನ ವ್ಯಕ್ತಿಯನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರು ಪರೀಕ್ಷಿಸಿ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಮೃತ ವ್ಯಕ್ತಿಯ ಚಹರೆ ಸುಮಾರು 5.6 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈ ಮೇಲೆ ಮಾದೇಶ ಎಂದು ಕನ್ನಡದಲ್ಲಿ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ಕಪ್ಪು ಬಣ್ಣದ ಬಿಳಿಗೆರೆಗಳಿರುವ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
Death news ಈ ವ್ಯಕ್ತಿಯ ವಾರಸ್ಸುದಾರರು ಇದ್ದಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.