Thursday, March 5, 2026
Thursday, March 5, 2026
Home Blog Page 347

Babu Jagjivanram ಹಸಿರು ಕ್ರಾಂತಿಯ ಪಿತಾಮಹ, ಸೇವಾಮಯಿ ಬಾಬು ಜಗಜೀವನ್ ರಾಂ- ಮಧುಬಂಗಾರಪ್ಪ

0

Babu Jagjivanram ಡಾ.ಬಾಬು ಜಗಜೀವನರಾಮ್‌ರವರು ಓರ್ವ ಸಕ್ರಿಯ ರಾಜತಂತ್ರಜ್ಞ, ದಕ್ಷ ಆಡಳಿತಾರರಾಗಿ ಅನೇಕ ಖಾತೆಗಳನ್ನು ನಿರ್ವಹಿಸಿದರೂ ಜೀವನಪರ್ಯಂತ ಸೇವಾಮಯಿಯಾಗೇ ಉಳಿದು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕುವೆಂಪು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್‌ರವರ 118 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗಜೀವನರಾಮ್‌ರವರು ದಕ್ಷ ಆಡಳಿತಗಾರ, ಸಮಾಜ ಸುಧಾರಕ. ಹಸಿರು ಕ್ರಾಂತಿಯ ಪಿತಾಮಹರಾಗಿದ್ದು, ಆಹಾರ ರಂಗದಲ್ಲಿ ಸ್ವಾವಲಂಬನೆ ಹೊಂದಲು ಮಾರ್ಗದರ್ಶನ ನೀಡಿದ ಕೀರ್ತಿವಂತ. ಹರಿಜನ/ಗಿರಿಜನ ಮತ್ತು ಹಿಂದುಳಿದ ಪಂಗಡಗಳ, ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ನೆಚ್ಚಿನ ರಾಜಕೀಯ ಮುತ್ಸದ್ದಿ. ನಿಸ್ವಾರ್ಥ ದೇಶ ಸೇವೆಗೆ ಸಮರ್ಪಿಸಿಕೊಂಡ ಇವರು ಸುಮಾರು 32 ಖಾತೆಗಳನ್ನು ನಿರ್ವಹಿಸಿದರೂ ವೈಯಕ್ತಿಕ ಜೀವನದಲ್ಲಿ ಬಡವರಾಗೇ ಸೇವಾಮಯಿಯಾಗಿ ಉಳಿದರು ಎಂದು ಸ್ಮರಿಸಿದರು.
ನಮ್ಮ ಸಂವಿಧಾನಕ್ಕೆ ಡಾ. ಅಂಬೇಡ್ಕರ್, ಬಾಬು ಜಗಜೀವನ್‌ರಾಮ್ ಸೇರಿದಂತೆ ಅನೇಕ ಮಹನೀಯರ ಕೊಡುಗೆ ಇದೆ. ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿವುದರಿಂದಲೇ ನಾವಿಂದು ಸ್ವತಂತ್ರವಾಗಿ ಪ್ರಶ್ನಿಸುವ ಮತ್ತು ಉತ್ತರಿಸುವ ಹಕ್ಕನ್ನು ಹೊಂದಿದ್ದೇವೆ. ಮಾನವೀಯ ಹಕ್ಕುಗಳೇ ಸಂವಿಧಾನದ ಮೂಲಾಧಾರವಾಗಿದ್ದು, ಶಿಕ್ಷಣ ಇಲಾಖೆಯ 1 ರಿಂದ 12 ನೇ ತರಗತಿವರೆಗೆ ಸುಮಾರು 1.8 ಕೋಟಿ ವಿದ್ಯಾರ್ಥಿಗಳು ಪ್ರತಿದಿನ ಬೆಳಿಗ್ಗೆ ಸಂವಿಧಾನ ಪೀಠಿಕೆಯನ್ನು ಓದಲು ಸರ್ಕಾರ ಆದೇಶಿಸಿದೆ.
ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದೊಂದಿಗೆ ಪೌಷ್ಟಿಕ ಆಹಾರ ಕೂಡ ನೀಡುತ್ತಿದೆ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದವರೆಲ್ಲ ಮುಂದೆ ಬರಬೇಕೆಂದು ಯಾವುದೇ ತಾರತಮ್ಯ, ಮತಬೇಧವಿಲ್ಲದೇ ಎಲ್ಲರಿಗೂ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅರ್ಹರೆಲ್ಲ ಸೌಲಭ್ಯ ಪಡೆಯುತ್ತಿದ್ದಾರೆ.
Babu Jagjivanram ಸಂಘಟನೆಗಳು ಹಿರಿಯರ ಮಾರ್ಗದರ್ಶನಿದಂದ ಶಕ್ತಿ ಪಡೆಯಬೇಕು. ಸಂಘಟನೆಗಳು ಶಕ್ತಿಯಾಗಿ ಹೊರ ಹೊಮ್ಮಬೇಕು. ನಗರದಲ್ಲಿ ಬಾಬು ಜಗಜೀವನರಾಮ್‌ರವರ ಪುತ್ಥಳಿ ಪ್ರತಿಷ್ಟಾಪನೆ ಬಗ್ಗೆ ಕ್ರಮ ವಹಿಸುತ್ತೇನೆ. ಡಾ.ಬಾಬು ಜಗಜೀವನರಾಮ್‌ರವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಶಿಫಾರಸು ಮಾಡುವಂತೆ ಮನವಿ ಸಲ್ಲಿಕೆಯಾಗಿದ್ದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಕುರಿತು ಮಾನ್ಯ ಮುಖ್ಯಮಂತ್ರಿಗಳು, ಚಿಂತಕರ ಜೊತೆ ಚರ್ಚಿಸಿ ಕ್ರಮ ವಹಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ನಿಮ್ಮ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ನಿಮ್ಮ ಜೊತೆ ಇದ್ದೇನೆ. ಸರ್ಕಾರ ನಿಮ್ಮ ಜೊತೆ ಇದೆ ಎಂದ ಅವರು ಎಸ್‌ಸಿ ಎಸ್‌ಟಿ ಶಿಕ್ಷಣ ಸಂಸ್ಥೆಗಳ ಕುಂದು ಕೊರತೆಗಳನ್ನು ಆಲಿಸಿ, ಉಳಿಸುವ ಭರವಸೆ ನೀಡಿದರು.
ಮೈಸೂರಿನ ಸಾಹಿತಿಗಳು ಹಾಗೂ ಸಮುದಾಯ ಚಿಂತಕರಾದ ದಾಸನೂರು ಕೂಸಣ್ಣ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಡಾ.ಬಾಬು ಜಗಜೀವನರಾಮ್‌ರವರು ದೇಶಕ್ಕಾಗಿ, ಸಮಾಜಕ್ಕಾಗಿ ತಮ್ಮನ್ನು ತೊಡಗಿಸಿಕೊಂಡ ದಿವ್ಯ ಚೇತನ. ಅತ್ಯಂತ ಬಡ ಕುಟುಂಬದಿAದ ಬಂದ ಇವರು 1908 ರ ಏಪ್ರಿಲ್ 5 ರಂದು ಬಿಹಾರ್ ರಾಜ್ಯದ ರ‍್ಹಾನಗರದ ಹತ್ತಿರದ ಚಂದವಾ ಗ್ರಾಮದಲ್ಲಿ ಜನಿಸಿದರು. ಓದುವಾಗಲೇ ಅವರಿಗೆ ಅಸ್ಪೃಶ್ಯ ಆಚರಣೆ ಬಗ್ಗೆ ಜಿಜ್ಞಾಸೆ ಕಾಡಿತು. ಆದ್ದರಿಂದ ಅವರು ಚಿಕ್ಕವಯಸ್ಸಿನಲ್ಲೇ ಸಂಸ್ಕೃತ ಕಲಿತು ಈ ಕುರಿತು ಅಧ್ಯಯನ ಮಾಡಿದರು. ಕುಡಿಯುವ ನೀರಿನ ಕುರಿತು ಶಾಲೆಯಲ್ಲಿ ಮಾಡುತ್ತಿದ್ದ ತಾರತಮ್ಯವನ್ನು ತಮ್ಮದೇ ರೀತಿಯಲ್ಲಿ ಪ್ರತಿಭಟಿಸಿದರು.
ರಾಜಕೀಯ ಜೀವನ ಪ್ರವೇಶಿಸಿದ ಅವರು ಅನೇಕ ಮುಖ್ಯ ಖಾತೆಗಳನ್ನು ನಿರ್ವಹಿಸಿ ಬಡವರಿಗೆ, ಹಿಂದುಳಿದ ವರ್ಗಗಳಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿ ಬದಲಾವಣೆ ತಂದ ಅವರು ದೇಶದ ಶಕ್ತಿ ಮತ್ತು ಬಡವರ ಬೆಳಕಾಗಿದ್ದಾರೆ. ಅಂಬೇಡ್ಕರ್ ಮತ್ತು ಜಗಜೀವನರಾಂ ತಮ್ಮದೇ ನೆಲೆಯಲ್ಲಿ ದೇಶಕ್ಕಾಗಿ ಹೋರಾಡಿದ ಎರಡು ಕಣ್ಣುಗಳು. ರಾಷ್ಟçದಲ್ಲಿ ಸಹೋದರತ್ವ ಹಂಚಿದವರು.
ರೈಲ್ವೇ, ಕಾರ್ಮಿಕ ಸಚಿವರಾದಾಗ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡಿದರು. ಕಾರ್ಮಿಕರಿಗೆ ಭದ್ರ ನೆಲೆ ಒದಗಿಸಿದರು. ರೈಲ್ವೇ ಇಂದು ಇಷ್ಟೊಂದು ಆದಾಯ ಪಡೆಯುತ್ತಿದ್ದರೆ ಅದಕ್ಕೆ ಕಾರಣ ಜಗಜೀವನರಾಮ್‌ರವರು. ರೈಲ್ವೆಯಲ್ಲಿ ತಾರತಮ್ಯ ತೆಗೆದು ಹಾಕಿದರು. 2 ಬಾರಿ ಕೃಷಿ ಸಚಿವರಾದ ವೇಳೆ ಬಡತನ ಹೋಗಲಾಡಿಸಿ ಆಹಾರ ಭದ್ರತೆ ಒದಗಿಸಲು ಶ್ರಮಿಸಿದರು. ಹೈನುಗಾರಿಕೆ, ಸಹಕಾರ ಕ್ಷೇತ್ರದಲ್ಲಿ ಹಲವು ಆವಿಷ್ಕಾರ ತಂದರು. ಅವರೊಬ್ಬ ಮೇಧಾವಿ ಮುತ್ಸದ್ದಿ ಎಂದು ಕೊಂಡಾಡಿದ ಅವರು ಪ್ರಸ್ತುತ ಎಸ್‌ಸಿ ಎಸ್‌ಟಿ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಕೆಲಸ ಮಾಡಬೇಕೆಂದು ಉಸ್ತುವಾರಿ ಸಚಿವರಲ್ಲಿ ಮಾಡಿದರು.
ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿದ ‘ಗ್ಯಾರಂಟಿ ಸರ್ಕಾರದ ವಿಕಾಸ ಪಥ’ ಕಿರು ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆ ಮಾಡಿದರು. ಹಾಗೂ ಭದ್ರಾವತಿಯ ಸಿದ್ದಾರ್ಥ ಅಂಧರ ಕೇಂದ್ರದ ಮುಖ್ಯಸ್ಥರಾದ ಶಿವಬಸಪ್ಪ ಇವರನ್ನು ಸನ್ಮಾನಿಸಿದರು.
ಅಧ್ಯಕ್ಷತೆಯನ್ನು ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ ವಹಿಸಿದ್ದರು. ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಎಂಎಡಿಬಿ ಅಧ್ಯಕ್ಷರಾದ ಆರ್ ಎಂ ಮಂಜುನಾಥಗೌಡ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಓ ಎನ್ ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಿ.ಮಲ್ಲೇಶಪ್ಪ, ದಲಿತ ಸಂಘಟನೆಗಳ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Madhu Bangarappa ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಶಿವಮೊಗ್ಗದಲ್ಲಿ ನಡೆಸುವ ಉದ್ದೇಶವಿದೆ- ಸಚಿವ‌ ಮಧು ಬಂಗಾರಪ್ಪ

0

Madhu Bangarappa ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಶಿವಮೊಗ್ಗ ನಗರದ ನೆಹರೂ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತಮ್ಮ ಕಾರ್ಯಕ್ಷೇತ್ರದಲ್ಲಿ ದಿನನಿತ್ಯ ಒತ್ತಡದಿಂದ ದಿನಕಳೆಯುವ ನೌಕರರು ತಮ್ಮಲ್ಲಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ಹಾಗೂ ಕೆಲಕ್ಷಣಗಳಾದರೂ ಒತ್ತಡದ ಬದುಕಿನಿಂದ ಮುಕ್ತಗೊಳ್ಳಲು ಈ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದರು.
ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರರು ಸ್ವೀಕರಿಸಿದ ಪ್ರಮಾಣದಂತೆ ಸ್ಪರ್ಧಾತ್ಮಕಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರೂ ವಿಜೇತರಾಗುವುದು ಸಾಧ್ಯವಿಲ್ಲ. ಆದರೆ ಸ್ಪರ್ಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿಜೇತರಾದವರು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ, ಜಿಲ್ಲೆಯ ಕೀರ್ತಿಗೆ ಕಾರಣರಾಗುವಂತೆ ಮನವಿ ಮಾಡಿದರು.
Madhu Bangarappa ಪ್ರಸಕ್ತ ಸಾಲಿನಲ್ಲಿ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಶಿವಮೊಗ್ಗದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದು, ಜಿಲ್ಲಾಢಳಿತದೊಂದಿಗೆ ರಾಜ್ಯ ಸರ್ಕಾರದ ಎಲ್ಲಾ ಸಹಕಾರ ಹಾಗೂ ನೆರವನ್ನು ಒದಗಿಸಿಕೊಡಲಾಗುವುದು ಎಂದ ಅವರು, ಯುರೋಪಿಯನ್ಪ್ರೀಮಿಯರ್ಲೀಗ್ನ ಸಹಕಾರದಲ್ಲಿ ರಾಜ್ಯದ ಸುಮಾರು 60ಕ್ರೀಡಾಪಟುಗಳಿಗೆ ಮಾಸ್ಟರ್ಟ್ರೈನಿಂಗ್ನೀಡಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳಿಗೂ ತರಬೇತಿ ನೀಡಲು ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಸರ್ಕಾರವೂ ಕೂಡ ನೌಕರರ ಸ್ನೇಹಿಯಾಗಿದ್ದು, ಈಗಾಗಲೇ ಆರೋಗ್ಯ ಸಂಜೀವಿವಿ ಯೋಜನೆಯನ್ನು ಜಾರಿಗೊಳಿಸಿದ್ದು, ರಾಜ್ಯದ ಸುಮಾರು 4.50;ಲಕ್ಷ ನೌಕರರು ಮತ್ತು ಅವರ ಕುಟುಂಬದ ಅವಲಂಬಿತರು ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ.ರಾಜ್ಯ ಸರ್ಕಾರು ರಾಷ್ಟೀಯ ಬ್ಯಾಂಕುಗಳೊಂದಿಗೆ ಮಾಡಿಕೊಂಡ ಒಪ್ಪಂದ-ಕರಾರಿನಂತೆ ವಿಮಾ ಸೌಲಭ್ಯ ನೀಡಲು ಉತ್ಸುಕವಾಗಿದೆ. ನೌಕರರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಬದಲಾವಣೆ ಮಾಡಲು ಉದ್ದೇಶಿಸಿದೆ. ಬ್ಯಾಕ್ಲಾಗ್ಹುದ್ದೆಗಳ ನೇಮಕಾತಿಗೆ ಈಗಾಗಲೇ ಗಮನಹರಿಸಿದೆ. 13000ಶಿಕ್ಷಕರ ನೇಮಕಾತಿ ಕ್ರಮಕೈಗೊಳ್ಳಲಾಗಿದೆ. ಮುಂದಿನ ಒಂದು ವರ್ಷದೊಳಗಾಗಿ ನೌಕರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ರಾಜ್ಯಮಟ್ಟದ ನೌಕರರ ಕ್ರೀಡಾಕೂಟವನ್ನು ಏಪ್ರಿಲ್ಮಾಹೆಯಲ್ಲಿ ಶಿವಮೊಗ್ಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರು ವೇತನಾಧಾರಿತ ಬ್ಯಾಂಕ್ಖಾತೆ ತೆರೆದು, 1.20ಕೋಟಿ ಮೊತ್ತದ ವಿಮಾ ಸೌಲಭ್ಯ ಮತ್ತು ಮಕ್ಕಳ ಶೈಕ್ಷಣಿಕ ಸೌಲಭ್ಯ, ಆಕಸ್ಮಿಕ ಅಪಘಾತ ಮುಂತಾದ ಸೌಲಭ್ಯಗಳ ಲಾಭ ಪಡೆದುಕೊಳ್ಳಬೇಕು. ಈಗಾಗಲೇ ಸಂಘವು ಕೈಗೊಂಡು ನಿರ್ಣಯದಂತೆ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅದರ ಅಧ್ಯಯನಕ್ಕಾಗಿ ಹಿರಿಯ ಅಧಿಕಾರಿ ಅಂಜುಂ ಫರ್ವೇಜ್ಅವರ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಈ ಸಮಿತಿಯು ಶೀಘ್ರದಲ್ಲಿ ವರದಿ ಸಲ್ಲಿಸಲಿದ್ದು, ವರದಿಯಂತೆ ಸರ್ಕಾರ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಆಶಾಭಾವನೆ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಮೋಹನ್ಕುಮಾರ್ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ಸದಸ್ಯೆ ಶ್ರೀಮತಿ ಬಲ್ಕಿಶ್ಬಾನು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Thawar Chand Gehlot ಚಿಲಿ ಅಧ್ಯಕ್ಷರಿಗೆ ಆತ್ಮೀಯ ಸ್ವಾಗತ ಕೋರಿದ ರಾಜ್ಯಪಾಲ ಗೆಹ್ಲೋಟ್

0

Thawar Chand Gehlot ಬೆಂಗಳೂರಿನ ಪ್ರವಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಚಿಲಿ ಗಣರಾಜ್ಯದ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ ಅವರು ಇಂದು ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದರು.

ಗೌರವಾನ್ವಿತ ರಾಜ್ಯಪಾಲರು ಚಿಲಿ ಗಣರಾಜ್ಯದ ಅಧ್ಯಕ್ಷರನ್ನು ಗುಲಾಬಿ ಹೂ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ನಂತರ ರಾಜ್ಯಪಾಲರೊಂದಿಗೆ ಚಿಲಿಯಿಂದ ಆಗಮಿಸಿದ್ದ ಸಚಿವರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ನಡೆಸಿದರು.

Thawar Chand Gehlot ಈ ಸಮಯದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಚಿಲಿ ಗಣರಾಜ್ಯದ ಗಣ್ಯರು, ಅಧಿಕಾರಿಗಳು ಹಾಗೂ ರಾಜಭವನದ ಅಧಿಕಾರಿಗಳು ಉಪಸ್ಥಿತರಿದ್ದರು.

CM Siddharamaiah ಬಾಬು ಜಗಜೀವನ ರಾಂ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಲಾರ್ಪಣೆ

0

CM Siddharamaiah ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿರುವ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ, ಭಾರತದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಂ ರವರ 118ನೇ ಜನ್ಮದಿನಾಚರಣೆ ಅಂಗವಾಗಿ ವಿಧಾನ ಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

CM Siddharamaiah ಈ ಸಂದರ್ಭದಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಗೃಹ ಸಚಿವ ಡಾ.ಜಿ. ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ‌ ರಜನೀಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದ

Jagjivan Ram ವಿಧಾನ ಸೌಧದ ಭವ್ಯ ಸೋಪಾನಗಳ ಮೇಲೆ ವರ್ಣರಂಜಿತಬಾಬು ಜಗಜೀವನ ರಾಂ ಜನ್ಮದಿನಾಚರಣೆ

0


Jagjivan Ram ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 118ನೇ ಜನ್ಮದಿನಾಚರಣೆ ಅಂಗವಾಗಿ ವಿಧಾನ ಸೌಧದ ಭವ್ಯ ಮೆಟ್ಟಿಲುಗಳ ಮೇಲೆ, ಹಮ್ಮಿಕೊಳ್ಳಲಾದ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಗೃಹ ಸಚಿವ ಡಾ.ಜಿ. ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಾಜನೀಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Tourism Development Board ಸವದತ್ತಿ ಯಲ್ಲಮ್ಮ ನ ಗುಡ್ಡದಲ್ಲಿ ಭಕ್ತರ ಅನುಕೂಲಕ್ಕೆ ಮೂಲಸೌಕರ್ಯ ಕಲ್ಪಿಸಲು ಯೋಜನೆ ಸಿದ್ಧ-ಸಚಿವ ಎಚ್.ಕೆ.ಪಾಟೀಲ್

0

Tourism Development Board ಉತ್ತರ ಕರ್ನಾಟಕದ ಪ್ರಮುಖ ಶ್ರದ್ಧಾಕೇಂದ್ರ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸುವ ಸಮಗ್ರ ಯೋಜನೆ ಸಿದ್ಧಗೊಂಡಿದ್ದು, ಕಾಲಮಿತಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಇಂದಿಲ್ಲಿ ತಿಳಿಸಿದರು.

ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ರಾಜ್ಯಮಟ್ಟದ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸವದತ್ತಿಯಲ್ಲಮ್ಮನ ಗುಡ್ಡದಲ್ಲಿ ಸಮಗ್ರ ಅಭಿವೃದ್ಧಿಯ ಬದ್ಧತೆಯನ್ನು ಪ್ರಕಟಿಸಲಾಗಿತ್ತು.

ಭಾರತ ಹುಣ್ಣಿಮೆಯ ಸಂದರ್ಭದಲ್ಲಿ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಬದಲಾವಣೆ ಕಾಣುತ್ತೆವೆ ಎಂಬುದು ಭಕ್ತರಿಗೆ ವಿಧಿತವಾಯಿತು ಎಂದು ಸಚಿವರು ಬೆಳಗಾವಿ ಜಿಲ್ಲಾ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ ಭಾರತ ಹುಣ್ಣಿಮೆ ಸಂದರ್ಭದಲ್ಲಿ 3 ಲಕ್ಷ ಭಕ್ತರಿಗೆ ಮಜ್ಜಿಗೆ ದಾಸೋಹ ಕೈಗೊಂಡಿದ್ದು, ಭಕ್ತರನ್ನು ಸರ್ಕಾರ ಕಾಳಜಿ ಮಾಡುತ್ತಿದೆ ಎಂಬ ಭಾವನೆ ಮೂಡಿತು ಎಂದು ಸಚಿವರು ಹೇಳಿದರು.

ಈ ಸಲ ಭಾರತ ಹುಣ್ಣಿಮೆಯ ಸಂದರ್ಭದಲ್ಲಿ ಎಲ್.ಇ.ಡಿ ಸ್ಕ್ರೀನ್ಗಳನ್ನು ಅಳವಡಿಸಿದ್ದರಿಂದ ಭಕ್ತಾದಿಗಳು ಆ ಸ್ಕ್ರೀನ್ಗಳಿಗೆ ಪೂಜೆ ಮಾಡಿದ್ದು ಸಹ ಕಂಡು ಬಂದಿತು ಎಂದು ಸಚಿವರು ಹೇಳಿದರು.

Tourism Development Board ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ತಿರುಪತಿ ಮಾದರಿಯಲ್ಲಿ ಕ್ಯೂ ಕಾಂಪ್ಲೆಕ್ಸ್ ಉಳಿದುಕೊಳ್ಳಲು ವ್ಯವಸ್ಥೆ, ಚಕ್ಕಡಿ ಕಟ್ಟಿಕೊಂಡು ಬರುವವರಿಗೆ ಪಶು ಆಹಾರಕ್ಕಾಗಿ ಮೇವು ದಾಸೋಹ, ರಿಂಗ್ ರಸ್ತೆ, ವಯಸ್ಸಾದವರಿಗೆ ದರ್ಶನಕ್ಕೆ ವ್ಯವಸ್ಥೆ ಮುಂತಾದವು ಸೇರಿದಂತೆ ಎಲ್ಲಾ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಪ್ರವಾಸೋದ್ಯಮ ಕಾರ್ಯದರ್ಶಿ, ಸಲ್ಮಾ ಫಾಹೀಮ್, ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಟಿ.ವೆಂಕಟೇಶ, ಬೆಳಗಾವಿ ಜಿಲ್ಲಾಧಿಕಾರಿ ರೋಶನ್ ಮುಂತಾದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

MESCOM Shiralakoppa ಶಿರಾಳಕೊಪ್ಪ ಮೆಸ್ಕಾಂ ಉಪವಿಭಾಗೀಯ ಕಛೇರಿಯಲ್ಲಿ ಏಪ್ರಿಲ್ 8 ರಂದು ಜನ ಸಂಪರ್ಕ ಸಭೆ

0

MESCOM Shiralakoppa ಮೆಸ್ಕಾಂ ಶಿರಾಳಕೊಪ್ಪ ಉಪವಿಭಾಗ ಕಛೇರಿಯಲ್ಲಿ ಏ. 08 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 9448998776.

Karnataka State Road Transport Corporation ಈಗ ಶಿವಮೊಗ್ಗ ಏರ್ ಪೋರ್ಟಿಗೆ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಸಾರಿಗೆ ಬಸ್ ಸೌಕರ್ಯ

0

Karnataka State Road Transport Corporation ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ವಿಭಾಗದಿಂದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ/ಕಾಚಿನಕಟ್ಟೆಗೆ 2 ನಗರ ಸಾರಿಗೆ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ.
ಶಿವಮೊಗ್ಗ ಬಸ್ ನಿಲ್ದಾಣದಿಂದ ಬೆಳಗ್ಗೆ 9.45, 10.00, 12.45, 02.00, 03.00 ಮತ್ತು 3.30ಕ್ಕೆ ಅದೇ ರೀತಿ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ/ಕಾಚಿನಕಟ್ಟೆಯಿಂದ ಬೆಳಗ್ಗೆ 10.40, 11.40, 01.30, 02.45, 3.35 ಹಾಗೂ 4.05 ರ ಸಮಯದಲ್ಲಿ ಓಡಾಟ ನಡೆಸಲಾಗುತ್ತಿದ್ದು, ಸಾರ್ವಜನಿಕರು ಈ ಬಸ್‌ಗಳ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕರಾರಸಾನಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿರುತ್ತಾರೆ.

Rotary Club Shivamogga ಮಕ್ಕಳಲ್ಲಿನ ಕಲಿಕಾ ನ್ಯೂನ್ಯತೆ,ವರ್ತನಾ ವ್ಯತ್ಯಾಸಗಳ ಬಗ್ಗೆ ಪೋಷಕರು ಗಂಭೀರ ಗಮನ ವಹಿಸಬೇಕು- ಡಾ.ರಾಮಪ್ರಸಾದ್

0

Rotary Club Shivamogga ಚಿಕ್ಕಂದಿನಿಂದ ಮಕ್ಕಳಲ್ಲಿ ಕಲಿಕಾ ನ್ಯೂನ್ಯತೆ ಹಾಗೂ ವರ್ತನಾ ಸಮಸ್ಯೆಗಳ ಬಗ್ಗೆ ಪೋಷಕರು ಶಿಕ್ಷಕರು ಹೆಚ್ಚು ಗಮನಹರಿಸುತ್ತಿರಬೇಕು ಇದರಿಂದ ಮುಂದೆ ಆಗುವ ದೊಡ್ಡ ಪರಿಣಾಮಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಮೇಘನಾ ಆಸ್ಪತ್ರೆಯ ಮನಶಾಸ್ತ್ರ ಮಾನಸಿಕ ತಜ್ಞ ರೋಗದ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ರಾಮ್ ಪ್ರಸಾದ್ ಅವರು ಅಭಿಮತ ವ್ಯಕ್ತಪಡಿಸಿದರು. ಅವರು ರೋಟರಿ ಬ್ಲಡ್ ಬ್ಯಾಂಕ್ ಆವರಣದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಿಟ್ ಟೌನ್ ವತಿಯಿಂದ ಆಯೋಜಿಸಲಾಗಿದ್ದ ಆಟಿಸಂ. ಏಡಿ ಎಚ್ ಡಿ. ಕಲಿಕಾ ನ್ಯೂನ್ಯತೆ ಮತ್ತು ವರ್ತನಾ ಸಮಸ್ಯೆಗಳ ಬಗ್ಗೆ ಪೋಷಕರಿಗೆ ಆಯೋಜಿಸಲಾದ ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅಣುವಂಶಿತಿಯಿಂದ ಪರಿಸರದಿಂದ ಹಾಗೂ ಗರ್ಭಾವಸ್ಥೆಯಲ್ಲಿ ಇದ್ದಾಗ ಆಗುವ ಸಮಸ್ಯೆಗಳಿಂದ ಮಕ್ಕಳ ಬೆಳವಣಿಗೆಯಲ್ಲಿ ಈ ರೀತಿಯಾದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಇದನ್ನು ಪ್ರಾರ್ಥಮಿಕ ಹಂತದಲ್ಲೇ ಗುರುತು ಹಚ್ಚಿ ಅವರಿಗೆ ನೀಡುವ ತರಪಿಗಳ ಮುಖಾಂತರ ಇದನ್ನು ನಿಯಂತ್ರಿಸಬಹುದು ಎಂದು ನುಡಿದರು. Rotary Club Shivamogga ಇದೇ ಸಂದರ್ಭದಲ್ಲಿ ಹೈದರಾಬಾದ್ ಟೋಟಲ್ ಸೊಲ್ಯೂಷನ್ ಪುನರ್ವಸತಿ ಸೊಸೈಟಿಯ ಪ್ರಖ್ಯಾತ ಮಾನಸಿಕ ತಜ್ಞರಾದ ಡಾಕ್ಟರ್ ಪೂಜಾ ಜಾ ನಾಯರ್. ರವರು ಮಾತನಾಡುತ್ತಾ ಮಕ್ಕಳು ನಾವು ಹೇಳುವ ವಿಷಯದ ಕಡೆ ಗಮನ ಕೊಡುತ್ತಿಲ್ಲ ಸೂಚನೆಗಳನ್ನು ಪಾಲಿಸುತ್ತಿಲ್ಲ ಹಾಗೂ ಹೆಸರಿಗೆ ಪ್ರತಿಕ್ರಿಯೆ ನೀಡುತ್ತಾ ಇಲ್ಲ ಹಾಗೂ ಒಂದೇ ಸ್ಥಳದಲ್ಲಿ ಪೂರನು ಕಷ್ಟವಾಗುತ್ತಿರುವ ಈ ಸಮಸ್ಯೆಗಳನ್ನು ಗುರುತು ಹಚ್ಚಿ ಕೂಡಲೇ ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಇತ್ತೀಚಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮಕ್ಕಳಲ್ಲಿ ತುಂಬಾ ಕಾಡುತ್ತಿವೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಹೈದರಾಬಾದಿನ ಮಕ್ಕಳ ಮಾನಸಿಕ ತಜ್ಞ ಸಂಸ್ಥೆಯ ಉಪಾಧ್ಯಕ್ಷರಾದ ಸುಮಾ ಸಿಂಗ್ ಅವರು ಮಾತನಾಡುತ್ತಾ ಈಗಾಗಲೇ ಹೈದರಾಬಾದಿನಲ್ಲಿ 11 ಸೆಂಟರ್ ಗಳಲ್ಲಿ ಈ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಾ ಇದ್ದೇವೆ ಆದ್ದರಿಂದ ಇಂದು ಪೋಷಕರಿಗೆ ಹಾಗೂ ವೈದ್ಯರಿಗೆ ಇದರ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿದಾಗ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ನೋಡಿದರು ರೋಟರಿ ಕ್ಲಬ್ ಮಿಟ್ ಟೌನ್ ನ ಅಧ್ಯಕ್ಷ ಸುರೇಶ್ ದುರ್ಗಪ್ಪ ಮಾತನಾಡುತ್ತಾ ಇಂದು ಈ ಜಾಗೃತಿ ಕಾರ್ಯಗಾರಕ್ಕೆ 150ಕ್ಕೂ ಹೆಚ್ಚು ಪೋಷಕರು ಆಗಮಿಸಿರುವುದು ತುಂಬಾ ಸಂತೋಷವಾಗುತ್ತಿದೆ ಈ ಒಂದು ದಿನದ ಕಾರ್ಯಗಾರವನ್ನು ಪೋಷಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ನುಡಿದರು. ವೇದಿಕೆಯಲ್ಲಿ ರೋಟರಿ ಮಾಜಿ ಸಹಾಯಕ ಗೌರ್ನರ್ಜಿ. ಜಿ ವಿಜಯಕುಮಾರ್. ಮಾಜಿ ಅಧ್ಯಕ್ಷರು ಹಾಗೂ ಯೋಜನಾ ನಿರ್ದೇಶಕಿ. ರೋ
ವೀಣಾ ಸುರೇಶ್. ಮಾನಸಿಕ ತಜ್ಞ ಡಾಕ್ಟರ್ ಎಸ್ ಟಿ ಅರವಿಂದ್ ಕಾರ್ಯದರ್ಶಿ ಪಹಿಂ ಹುಸೇನ್. ಸಹಕಾರದ ಶ್ರೀ ಕೆವಿಎಲ್ ರಾಜು ಉಪಸ್ಥಿತರಿದ್ದರು ಕಾರ್ಯಗಾರಕ್ಕೆ ವಿವಿಧ ಜಿಲ್ಲೆಗಳಿಂದ ಪೋಷಕರುಗಳು ಆಗಮಿಸಿದ್ದಾರೆ

ಸರ್ಕಾರಿ ನೌಕರರ ಕ್ರೀಡಾಕೂಟ. ವಾಲಿಬಾಲ್ ನಲ್ಲಿ ಸೊರಬ ತಂಡದ ವಿರುದ್ಧ ಶಿವಮೊಗ್ಗ ತಂಡಕ್ಕೆ ಭಾರೀ ಜಯ

0

ಸರ್ಕಾರಿ ನೌಕರ ಜಿಲ್ಲಾ ಮಟ್ಟದ ಕ್ರೀಡಾಕೂಟದ ವಾಲಿಬಾಲ್ ನ ಫೈನಲ್ ಪಂದ್ಯಾವಳಿಯಲ್ಲಿ ಸೊರಬ ತಂಡದ ವಿರುದ್ದ ಶಿವಮೊಗ್ಗ ತಂಡ ಜಯಗಳಿಸಿತು. ಗೆದ್ದ ತಂಡದ ಸದಸ್ಯರಿಗೆ ಜಿಲ್ಲಾಧ್ಯಕ್ಷರಾದ ಆರ್ ಮೋಹನ್ ಕುಮಾರ್ ರವರು ಶುಭ ಕೋರಿದರು.