Thursday, March 5, 2026
Thursday, March 5, 2026
Home Blog Page 348

Sri Ram Navami ಶ್ರೀರಾಮನವಮಿ – ಶ್ರೀರಾಮಸ್ಮರಣೆ ಲೇ: ಎನ್.ಜಯಭೀಮ ಜೊಯಿಸ್, ಶಿವಮೊಗ್ಗ

0

ಶ್ರೀರಾಮನವಮಿ

Sri Ram Navami ಪ್ರತಿ ವರ್ಷ ಹೊಸ ಸಂವತ್ಸರ ಪ್ರಾರಂಭವಾದ ಚೈತ್ರಮಾಸದ ಶುಕ್ಲಪಕ್ಷದನವಮಿಯಂದುಶ್ರೀರಾಮ
ನವಮಿಯನ್ನು ಆಚರಿಸುತ್ತಾರೆ.
ಶ್ರೀರಾಮನವಮಿಯಂದು ಭೂಮಿಯಲ್ಲಿ ರಾಮ
ನವತರಿಸಿದ ದಿನ.ಶ್ರೀಹರಿಯ ದಶಾವತಾರದಲ್ಲಿ ವಿಷ್ಣುವಿನ ಏಳನೇ ಅವತಾರವೇ ರಾಮವತಾರವು.
ಶ್ರೀರಾಮಚಂದ್ರನು ಮಹಾವಿಷ್ಣುವಿನ ಅವತಾರ
ವಾದರೂ ತನ್ನ ಆದರ್ಶ ನಡೆಯಿಂದ ಭೂಮಿಯಲ್ಲಿ ಮಹಾ ಪುರುಷನಾದನು.
ಶ್ರೀರಾಮನು ಒಬ್ಬ ಆದರ್ಶ ಪುತ್ರ,ಆದರ್ಶ ಮಿತ್ರ
,ಆದರ್ಶಬಂಧು,ಪ್ರಜೆಗಳಅಭ್ಯುದಯವನ್ನುಬಯಸಿದಆದರ್ಶ ರಾಜ.
ಧರ್ಮಪರಿಪಾಲಕನಾಗಿದ್ದವನು,ಸತ್ಯನಿಷ್ಠನಾಗಿದ್ದವನು.ಆದ್ದರಿಂದಲೇ ಸಮಸ್ತ ಮಾನವಕುಲಕ್ಕೆಆದರ್ಶ
ನಾಗಿದ್ದವನು.
ಮನುಷ್ಯನಾಗಿ ಕಂಡು ಮಾನವ ಸಮಾಜದಜೊತೆಗೆ
ದೀರ್ಘಕಾಲಿಕವಾಗಿ ಸಹ ಜೀವನ ನಡೆಸಿದಎರಡು
ಅವತಾರಗಳು ಅಂದರೆ ರಾಮಾವತಾರ ಮತ್ತು ಕೃಷ್ಣಾವತಾರ.ಭಗವಂತ ಸರ್ವ ಸಮರ್ಥ ಸರ್ವಶಕ್ತ ಎಂಬ ತಿಳಿವಳಿಕೆಸಹಜವಾದದ್ದೇಆದರೆರಾಮನನ್ನು ಸಾಮಾನ್ಯಮನುಷ್ಯನನೆಲೆಯಲ್ಲಿನಿಂತುನೋಡಿದರೆ ರಾಮನಿಂದ ಜೀವನದಲ್ಲಿ ಪಡೆಯಬಹುದಾದದ್ದು ಬಹಳಷ್ಟಿದೆ.
ರಾಮನು ಅರಮನೆಯ ಶ್ರೀಮಂತಿಕೆಯಲ್ಲಿ ಹುಟ್ಟಿ
ಬೆಳೆದವನಾದರೂ,ಕೂಡು ಕುಟುಂಬದಲ್ಲಿ ಎಂದರೆ
ತಂದೆತಾಯಿ,ಚಿಕ್ಮಮ್ಮಂದಿರು,ತಮ್ಮಂದಿರು ಎಲ್ಲರ
ಜತೆ ಬಾಲ್ಯ ಕಳೆದವನು.ನಯ ವಿನಯದ ಸೌಜನ್ಯ ಮೂರ್ತಿಯಾಗಿದ್ದವನು ಶ್ರೀರಾಮ.ಮಕ್ಕಳಿಲ್ಲದ ದಶರಥ ಮಹಾರಾಜನಿಗೆ ದೈವಾನುಗ್ರಹದಿಂದ
ಮಕ್ಕಳು ಹುಟ್ಟುತ್ತಾರೆ,ಅದರಲ್ಲೂ ರಾಮನೆಂದರೆ ದಶರಥನಿಗೆ ಮುದ್ದಿನ ಮಗ.
ರಾಜವೈಭವವಿದ್ದರೂ,ಸ್ವಲ್ಪವೂಅಹಂಕಾರವಿಲ್ಲದವನಾಗಿದ್ದನು.ಎಲ್ಲರಜೊತೆಯಲ್ಲೂಪ್ರೀತಿವಾತ್ಸಲ್ಯದಿಂದ ಇದ್ದವನು.ಇವನಗುಣಗಳಿಗೆಸದ್ಗುಣಸಂಪನ್ನೆ
ಯಾದ ಸೀತೆಯುಇವನ ಧರ್ಮಪತ್ನಿಯಾಗಿ ಕೈಹಿಡಿ
ಯುತ್ತಾಳೆ.
Sri Ram Navami ದಶರಥನು ತಾನು ಇನ್ನು ರಾಜ್ಯಭಾರವನ್ನುನಡೆಸಲು ತನ್ನ ಹಿರಿಯ ಮಗ ರಾಮನಿಗೆಪಟ್ಟಾಭಿಷೇಕವನ್ನುಮಾಡಬೇಕೆಂದು
ತೀರ್ಮಾನಿಸುತ್ತಾನೆ.
ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಸಂತೋಷದಿಂದ ಅರಮನೆಯಲ್ಲಿ ಸಿದ್ಧತೆಗಳು ನಡೆದಿದ್ದಾಗದಶರಥನ
ರಾಣಿಯಾದ ಕೈಕೇಯಿಯಿಂದ ಪಟ್ಟಾಭಿಷೇಕ ಮಹೋತ್ಸವವು ನಿಂತು ರಾಮನನ್ನು14 ವರ್ಷಗಳ ಕಾಲವನವಾಸಕ್ಕೆಕಾಡಿಗೆಹೋಗಬೇಕಾಗಿಬರುತ್ತದೆ.ದಶರಥನಿಂದ ರಾಮನಿಗೆಹೇಳಲಿಕ್ಕಾಗದ ಮಾತನ್ನು ಕೈಕೇಯಿ ಹೇಳುತ್ತಾಳೆ.
ರಾಮನು ಸ್ವಲ್ಪವೂ ವಿಚಲಿತನಾಗದೆ ಸಂತೋಷ
ದಿಂದಲೇಕೈಕೇಯಿಯಮಾತನ್ನುಕೇಳುತ್ತಾನೆ.ಅದರಂತೆ ಪಿತೃವಾಕ್ಯ ಪರಿಪಾಲನೆಗಾಗಿವನವಾಸಕ್ಕಾಗಿ ಕಾಡಿಗೆತೆರಳುತ್ತಾನೆ.ಕೈಕೇಯಿತನಗೆಪಟ್ಟಾಭಿಷೇಕವನ್ನು ತಪ್ಪಿಸಿದಳಲ್ಲಾ ಎಂದು ಕಿಂಚಿತ್ತೂ ತನ್ನ ಅಸಹನೆ
ಯನ್ನು ತೋರ್ಪಡಿಸದೆತಾಯಿಗೆ ಕೊಡುವಗೌರವ
ವನ್ನು ಕೊಡುತ್ತಾನೆ.ಅಂತಹ ಒಳ್ಳೆಯ ಮನಸ್ಸು ಹೊಂದಿದ್ದವನು ಶ್ರೀರಾಮ.ಇಂತಹ ರಾಮನಿಗೆ ನೆಚ್ಚಿನಬಂಟನಾಗಿದೊರಕಿದವನುಹನುಮಂತ.
ಹನುಮಂತಸ್ವಾಮಿನಿಷ್ಠಸೇವಕನಾಗಿತನ್ನಭಕ್ತಿಯನ್ನು ರಾಮನಲ್ಲಿ ಅರ್ಪಿಸುತ್ತಾನೆ.
ನಾವು ಈಗಲೂ ರಾಮರಾಜ್ಯವಾಗಿರಬೇಕುಎನ್ನುವ ಮಾತನ್ನುಕೇಳುತ್ತೇವೆ.ಅಂದರೆರಾಮನಆಡಳಿತದಲ್ಲಿ “ರಾಮರಾಜ್ಯ”ವಾಗಿತ್ತುಎಂದುತಿಳಿಯುತ್ತದೆ.ಶ್ರೀರಾಮಚಂದ್ರನರಾಜ್ಯಪಾಲನೆಯಲ್ಲಿಪ್ರಜೆಗಳುಧರ್ಮತತ್ಪರರಾಗಿದ್ದರು.ಸತ್ಪ್ರಜೆಗಳಾಗಿದ್ದರು,ಸತ್ಯವಂತರಾಗಿದ್ದರು.
ದೇವರ ಅವತಾರವಾದರೂ,ಮನುಷ್ಯರಂತೆಜೀವನ ನಡೆಸಿ ಆದರ್ಶ ವ್ಯಕ್ತಿತ್ವವನ್ನು ತೋರಿಸಿದವನು ಶ್ರೀರಾಮಚಂದ್ರ.ಹನುಮಂತನ ಮೂಲಕ ಪರಿಚಯವಾದ ಸುಗ್ರೀವನಿಗೆ ಸ್ನೇಹ ಹಸ್ತ ಚಾಚಿ ಅವನಅಣ್ಣನಾದವಾಲಿಯನ್ನುಸಂಹರಿಸಿಕಿಷ್ಕಿಂಧೆಯ ರಾಜನನ್ನಾಗಿ ಮಾಡಿದ ರಾಮ.
ರಾಮನು ಸುಗ್ರೀವನಿಂದ ಯಾವುದೇ ಧನಕನಕಗಳ ಅಪೇಕ್ಷೆಯಿಲ್ಲದೇ ಕೇವಲ ಅವನಿಗೆ ಅಣ್ಣನಿಂದ
ನಿಜವಾಗಿಯೂ ಮೋಸವಾಗಿದೆಯೆಂದು ತಿಳಿದು
ಅವನಿಗೆ ಸಹಾಯ ಮಾಡುತ್ತಾನೆ.ಶಬರಿಯು ರಾಮನಲ್ಲಿ ಎಷ್ಟು ಭಕ್ತಿ ಹೊಂದಿದ್ದಳೆಂದರೆ ಅವನಿಗೆ ಹಣ್ಣು ತಿನ್ನಲಿಕ್ಕೆ ಕೊಡುವಾಗ ಒಂದೊಂದುಹಣ್ಣನ್ನು ತಾನು ಕಚ್ಚಿಅದರ ರುಚಿ ಚೆನ್ನಾಗಿದೆ ಎಂದುಅನಿಸಿದ ಮೇಲೆರಾಮನಿಗೆಆಹಣ್ಣನ್ನುತಿನ್ನಲಿಕ್ಕೆಕೊಡುತ್ತಿದ್ದಳು
ಶ್ರೀರಾಮನು ತಾಯಿ ಸ್ವರೂಪಳಾಗಿದ್ದ ಶಬರಿಗೆ
ಮೋಕ್ಷವನ್ನು ಕರುಣಿಸುತ್ತಾನೆ.
ಶ್ರೀರಾಮನು ಭಕ್ತಿಯಲ್ಲಿ,ಸ್ನೇಹದಲ್ಲಿ ಇತರ ವಿಷಯ
ಗಳನ್ನುಬೆರೆಸುತ್ತಿರಲಿಲ್ಲ.ಶುದ್ಧತೆ,ನಿರ್ಮಲಮನ
ಸ್ಸೊಂದೇ ಮಾನದಂಡ ಅವನಿಗೆ.
ಲಂಕೆಯ ಮೇಲೆ ರಾಮನು ಮಾಡುವ ಯುದ್ಧವೂ
ಕೂಡ ರಾಜ್ಯ ವಿಸ್ತಾರಕ್ಕಾಗಲಿ,ಹೊನ್ನುಗಳಿಗಾಗಿ ಅಲ್ಲ.ಇತರರ ರಾಜ್ಯದ ಮೇಲೆ ದಂಡೆತ್ತಿ ಹೋಗಿ
ಗೆದ್ದು ಚಕ್ರವರ್ತಿಯಾಗಿ ಮೆರೆಯ ಬೇಕೆಂಬ ಆಸೆಯಂತೂ ರಾಮನಲ್ಲಿ ಇರಲೇಯಿಲ್ಲ.ತನ್ನಪ್ರಿಯ ಮಡದಿಯನ್ನುಅಪಹರಿಸಿದರಾವಣನಮೇಲೆಯುದ್ಧಮಾಡುವುದುರಾಮನಿಗೆಅನಿವಾರ್ಯವಾಗಿತ್ತು.ನ್ಯಾಯಕ್ಕಾಗಿಹೋರಾಡುವುದುಧರ್ಮಯುದ್ಧವಾಗಿತ್ತು.ಯುದ್ಧ ಮಾಡುವುದು ಬೇಡ ,ತನ್ನ ಪತ್ನಿಯನ್ನು ತನಗೊಪ್ಪಿಸಿ ಯುದ್ಧದಿಂದಾಗುವ ಅಪಾರ ಪ್ರಾಣ
ಹಾನಿಯನ್ನು ತಪ್ಪಿಸುವಂತೆ ತಿಳಿಸಿ ಸಂದೇಶವನ್ನು ಕಳಿಸಿಕೊಡುತ್ತಾನೆ.ರಾಮನ ಮಾತಿಗೆ ಬೆಲೆಕೊಡದೇ ಯುದ್ಧಕ್ಕೇ ಸಿದ್ಧನಾಗುತ್ತಾನೆಲಂಕಾಧಿಪತಿ.ರಾವಣನ ತಮ್ಮವಿಭೀಷಣಅಣ್ಣನವ್ಯಕ್ತಿತ್ವಕ್ಕೆವಿರುದ್ಧವಾಗಿದ್ದವನು.ಶ್ರೀರಾಮನ ಭಕ್ತ.ಶ್ರೀರಾಮನ ಆಶ್ರಯವನ್ನು ಕೋರಿ ಬಂದಾಗ ರಾವಣನ ತಮ್ಮನೆಂತ ತಿಳಿದೂ
ಮಾನವೀಯತೆಯನ್ನು ಮೆರೆದು ವಿಭೀಷಣನಿಗೆ
ಆಶ್ರಯ ಕೊಡುತ್ತಾನೆ.
ರಾಮ ರಾವಣರ ಯುದ್ಧವಾಗಿ ರಾವಣನ ಸಂಹಾರ
ವಾಗಿ ವಿಭೀಷಣನನ್ನು ಲಂಕಾರಾಜ್ಯದ ಅಧಿಪತಿ
ಯಾಗಿ ಸಿಂಹಾಸನದಲ್ಲಿ ಕೂಡಿಸುತ್ತಾನೆ ರಾಮ.ತನ್ನ ಪತ್ನಿ ಸೀತೆಯನ್ನು ಕರೆದುಕೊಂಡುಅಯೋಧ್ಯೆಗೆ ಹಿಂದಿರುಗಿ ರಾಜ್ಯಭಾರವನ್ನು ವಹಿಸಿಕೊಂಡು ಪ್ರಜೆಗಳಿಗೆ ಸಂತೋಷವನ್ನು ತಂದು ಕೊಡುತ್ತಾನೆ ಶ್ರೀರಾಮಚಂದ್ರ.
ಆದರ್ಶ ವ್ಯಕ್ತಿಯಾಗಿದ್ದವನು ಶ್ರೀರಾಮ.ಇಡೀ
ಮನು ಕುಲಕ್ಕೆ ಮಾದರಿಯಾಗಿದ್ದವನು ಶ್ರೀರಾಮ.
ಶ್ರೀರಾಮ ನವಮಿಯಂದು ರಾಮನಆದರ್ಶಗಳನ್ನು ಪಾಲಿಸುವ ಸಂಕಲ್ಪ ತೊಟ್ಟು ಅನುಸರಿಸಿದರೆರಾಮ
ನವಮಿಆಚರಣೆಯುಅರ್ಥಪೂರ್ಣವಾಗುವು
ದರಲ್ಲಿ ಸಂದೇಹವಿಲ್ಲ

ಎನ್.ಜಯಭೀಮ್ ಜೊಯ್ಸ್

District Court Shivamogga ಅಕ್ರಮ ಗಾಂಜಾ ಸಾಗಾಣಿಕೆ ಆರೋಪ ದೃಢ ವ್ಯಕ್ತಿಗೆ ಕಠಿಣ ಶಿಕ್ಷೆ, ಕೋರ್ಟ್ ತೀರ್ಪು

0

District Court Shivamogga ಭದ್ರಾವತಿ ತಾಲೂಕು ಕಲ್ಲಹಳ್ಳಿ ಗ್ರಾಮದ ಮುರುಗ ಎಲ್. ಬಿನ್ ಲಕ್ಷ್ಮಣ ಎಂಬ 34 ವರ್ಷದ ವ್ಯಕ್ತಿ 2021ರಲ್ಲಿ ಓಮಿನಿ ವ್ಯಾನ್ ಮೂಲಕ ಆಂದ್ರದ ರಾಜಮಂಡ್ರಿಯಿಂದ 50 ಕೆ.ಜಿ.430 ಗ್ರಾಂ ತೂಕದ ಒಣ ಗಾಂಜಾವನ್ನು ಕಾನೂನು ಬಾಹಿರವಾಗಿ ಸಾಕಾಣಿಕೆ ಮಾಡುವಾಗ ಸೊರಬ ವಲಯ ಅಬಕಾರಿ ನಿರೀಕ್ಷಕರ ತಂಡವು ಸೆರೆಹಿಡಿದು, ಪ್ರಕರಣ ದಾಖಲಿಸಿಕೊಂಡು ಕಲಂ: 8(ಸಿ), 20(ii)(ಸಿ), 20(ಬಿ), 25 ಎನ್.ಡಿ.ಪಿ.ಎಸ್. ಕಾಯ್ದೆ 1985 ರಡಿಯಲ್ಲಿ ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವನ್ನು ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಾಕ್ಷಿ ಮತ್ತು ಇನ್ನಿತರೆ ಪೂರಕ ಸಾಕ್ಷ್ಯಾಧಾರಗಳಿಂದ ಹಾಗೂ ಸರ್ಕಾರದ ಪರ ಅಭಿಯೋಜಕರು ಮಂಡಿಸಿದ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪವು ದೃಡಪಟ್ಟಿದೆ ಎಂದು ಈ ಅಪರಾಧಕ್ಕೆ 10 ವರ್ಷಗಳ ಕಠಿಣ ಕಾರಾಗೃಹ ವಾಸ ಸಜೆ ಮತ್ತು ರೂ. 1.00 ಲಕ್ಷ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 2 ವರ್ಷ ಹೆಚ್ಚುವರಿ ಸಾಧಾರಣ ಸಜೆಯನ್ನು ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್‌ರವರು ಏ.04 ರಂದು ತೀರ್ಪು ನೀಡಿ ಆದೇಶಿಸಿದ್ದಾರೆ.
ಸರ್ಕಾರದ ಪರ ಅಭಿಯೋಜಕರಾದ ಸುರೇಶ್ ಕುಮಾರ್ ಎ.ಎಂ. ವಾದ ಮಂಡಿಸಿದ್ದರು

Rotary Jubilee Club ಪ್ರಗತಿಯ ಹೆಸರಿನಲ್ಲಿ ಪರಿಸರದ ಮೇಲೆ ದೌರ್ಜನ್ಯ ಹೆಚ್ಚಾಗಿದೆ- ಸುಮಾರಾಣಿ

0

Rotary Jubilee Club ಮಾನವ ಕುಲ ಉದ್ದಾರಕ್ಕಾಗಿ ಭೂಮಿತಾಯಿ ನೀಡುವ ಪ್ರತಿಯೊಂದು ವಸ್ತು ಮುಖ್ಯವಾದದ್ದು ಹಾಗೂ ಅತ್ಯವಶ್ಯಕ ಎಂದು ರೋಟರಿ ಜ್ಯುಬಿಲಿ ಕ್ಲಬ್ ವಾರದ ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸುಮಾರಾಣಿ ಮಾತನಾಡುತ್ತಿದ್ದರು.
ಪ್ಲಾಸ್ಟಿಕ್ ಪ್ರಕೃತಿಗೆ ಬಹಳ ಹಾನಿಕರ, ಆದರೆ ಮನುಷ್ಯ ತನ್ನ ಅಗತ್ಯತೆ ಪೂರೈಸಿಕೊಳ್ಳಲು ಎಲ್ಲದ್ದಕೂ ಅದನ್ನು ಉಪಯೋಗಿಸಿ ಹಲವಾರು ರೋಗ ರುಜಿನಕ್ಕೆ ಗುರಿಯಾಗುತ್ತಿದ್ದಾನೆ. ಜನ ಸಂಖ್ಯೆ, ವಾಹನಗಳ ಬಳಕೆ ಹೆಚ್ಚಾಗಿ ಶಬ್ದ, ವಾಯು
ಮಾಲಿನ್ಯ ಹೆಚ್ಚಾಗಿ ಪರಿಸರ ಹಾನಿಯುಂಟಾಗುತ್ತಿದೆ.
ಸಮಯಕ್ಕೆ ಸರಿಯಾಗಿ ಸಾಂಪ್ರದಾಯಿಕ ಮಳೆಗಳು ಬರುತ್ತಿಲ್ಲ. ಇದರಿಂದ ಹವಾಗುಣ ಏರುಪೆರಾಗುತ್ತಿದೆ, ಅರಣ್ಯನಾಶ ಮಾನವನು
ಹವಾಗುಣದ ಮೇಲೆ ಮಾಡುತ್ತಿರುವ ದೌರ್ಜನ್ಯ. ಓಝೋನ್ ಪದರ ನಮ್ಮ ಭೂಮಿಗೆ ಸಿಕ್ಕಿರುವ ಅತ್ಯುತ್ತಮ ತಡೆಗೊಡೆ ಅದು ಆಳಿಯುವ ಅಂಚಿಗೆ ಹೋಗುತ್ತಿದೆ.
ಪ್ರಗತಿಯ ಹೆಸರಿನಲ್ಲಿ ಪರಿಸರದ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಪ್ರತಿಯೊಬ್ಬರು ತಮ್ಮ ಕೈಲಾದ ಮಟ್ಟಿಗೆ ಪ್ರಕೃತಿಗೆ ಪೂರಕವಾದ ಕಾರ್ಯವನ್ನು ಮಾಡಲೇಬೇಕು. ಆಗ ಮುಂದಿನ ಪೀಳಿಗೆಗೆ ನಾವು ಸ್ವಲ್ಪಮಟ್ಟಿಗೆ ಅನುಕೂಲ ಮಾಡಿದಂತಾಗುತ್ತದೆ.

Rotary Jubilee Club ಮನೆ ಉಪಯೋಗಕ್ಕೆ ಸವಯವ ಗೊಬ್ಬರ ತಯಾರಿಸಿಕೊಳ್ಳಿ, ಮನೆ ಹಸಿಕಸ, ಹಣ್ಣಿನ ಸಿಪ್ಪೆ ಉಳಿದ ಎಲ್ಲಾ ವಸ್ತುಗಳನ್ನು ಒಂದು ಬಕ್ಕೆಟ್ ನಲ್ಲಿ ಹಾಕಿ ಒಂದು ಪದರ ಮಣ್ಣು ಹಾಕಿ ಸ್ವಲ್ಪ ನೀರು ಸಿಂಪಡಿಸಿ, ಪ್ರತಿದಿನ ಹೀಗೆ ಮಾಡಿ. ಮೂರುತಿಂಗಳಲ್ಲಿ ಉತ್ತಮ ಸವಯವ ಗೊಬ್ಬರ ಉತ್ಪತಿಯಾಗುತ್ತದೆ. ಇದರಿಂದ ಮನೆಯ ಕೈತೋಟಕ್ಕೆ, ರಾಸಯನಿಕ ಮುಕ್ತ ತರಕಾರಿ ಬೆಳೆಯಲು ಅನುಕೂಲ ವಾಗುತ್ತದೆ. ಇಂಗು ಗುಂಡಿಗಳನ್ನು ಮಾಡಿ, ಮಳೆನೀರು ಕೊಯ್ಲು ಮಾಡಲೇಬೇಕು ಎಂದರು.
ಆಗಮಿಸಿದ ಎಲ್ಲರನ್ನು ಅಧ್ಯಕ್ಷೆ ರೊ. ರೂಪಪುಣ್ಯಕೊಟಿ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಕೃತಿ ಮಂಚಾಲೆ ವಂದಿಸಿದರು. ಭಾರದ್ವಾಜ್, ಅಶ್ವತ್, ನಾಗರಾಜ್, ವಾಗೇಶ್, ಸತ್ಯನಾರಾಯಣ್, ರೇವಣಸಿದ್ದಪ್ಪ, ರೇಣುಕಾರಾದ್ಯ, ರಾಜಶೇಖರ್ ಮುಂತಾದವರು ಭಾಗವಹಿಸಿದ್ದರು.

Bharat Scouts and Guides ವಿದ್ಯಾಭ್ಯಾಸದ ಸಂಗಡ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುತ್ತವೆ- ಶಕುಂತಲಾ ಚಂದ್ರಶೇಖರ್

0

Bharat Scouts and Guides ಮಕ್ಕಳಲ್ಲಿ ಸಕಾರಾತ್ಮಕ ಭಾವನೆಗಳನ್ನು ಮೂಡಿಸಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತ ಶಕುಂತಲಾ ಚಂದ್ರಶೇಖರ್ ಹೇಳಿದರು.
ಈಸೂರು ಸರ್ಕಾರಿ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಆಯೋಜಿಸಿದ್ದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾಭ್ಯಾಸದ ಜತೆಗೆ ಇಂತಹ ಶಿಬಿರಗಳು ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಸಾಂಸ್ಕೃತಿಕ ಕ್ರೀಡಾ ಮನೋಭಾವ ಬೆಳೆಸುತ್ತವೆ. ಕಲಿಕಾ ಆಸಕ್ತಿ ವೃದ್ಧಿಸಲು ನೆರವಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಬೇಸಿಗೆ ರಜೆಯಲ್ಲಿ ಮಕ್ಕಳು ಅಮೂಲ್ಯವಾದ ಸಮಯವನ್ನು ಮೊಬೈಲ್, ಟಿವಿ ಹಾವಳಿಯಿಂದ ಹಾಳು ಮಾಡಿಕೊಳ್ಳುತ್ತಾರೆ. ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಧ್ಯಾನ, ಯೋಗ, ಗ್ರಾಮೀಣ ಕ್ರೀಡೆ ಸೇರಿದಂತೆ ವೈವಿಧ್ಯ ವಿಷಯಗಳ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಮಕ್ಕಳ ದೈಹಿಕ ಮತ್ತು ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಿದರು.
Bharat Scouts and Guides ಶಿಕಾರಿಪುರ ತಾಲೂಕು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಪರಮೇಶ್ವರಯ್ಯ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಎಲ್ಲ ಕಡೆ ಬೇಸಿಗೆ ಶಿಬಿರಗಳು ಆಯೋಜನೆಗೊಂಡಿದ್ದು, ಶಾಲೆಯ ಎಸ್‌ಡಿಎಂಸಿ ಸಮಿತಿ, ಪೋಷಕರ ಸಹಕಾರ ಅತ್ಯಂತ ಮುಖ್ಯ. ಇದರಿಂದ ಕ್ರೀಯಾಶೀಲ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗುವುದರ ಜತೆಗೆ ಹೊಸ ಹೊಸ ವಿಷಯಗಳನ್ನು ಕಲಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಬುಲ್ ಬುಲ್ ತರಬೇತಿ ಆಯುಕ್ತೆ ಮೀನಾಕ್ಷಮ್ಮ ವಿವಿಧ ಕ್ಷೇತ್ರಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಿದರು. ಕೇಂದ್ರ ಸ್ಥಾನಿಕ ಆಯುಕ್ತ ಮಲ್ಲಿಕಾರ್ಜುನ್ ಕಾನೂರು, ಕರಿಬಸಪ್ಪ, ಶಾರದಮ್ಮ, ಬೆನಕಪ್ಪ, ಶ್ರೀದೇವಿ ಹಾಗೂ ವಿದ್ಯಾರ್ಥಿಗಳು ಇದ್ದರು.

Sahyadri Narayana Hospital ಸಹ್ಯಾದ್ರಿ‌‌ನಾರಾಯಣ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕ್ಲಿಷ್ಟಕರ ಚಿಕಿತ್ಸೆ ಯಶಸ್ವಿ- ಡಾ.ಶಿವಕುಮಾರ್

0

Sahyadri Narayana Hospital ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು ಮತ್ತೊಂದು ಕ್ಲೀಷ್ಟಕರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೇರವೇರಿಸಿದ್ದು, ಮಲೆನಾಡಿನ ಭಾಗದಲ್ಲಿ ಪ್ರಥಮ ಬಾರಿಗೆ ಆಂಪುಲ್ಲರಿ ಅಡಿನೋಮಾಗಳನ್ನು (ಕ್ಯಾನ್ಸರ್‌ನ ಪೂರ್ವ ಉಂಟಾಗುವ ಗಡ್ಡೆಗಳು) ಎಂಡೋಸ್ಕೋಪಿಕ್ ಆಂಪ್ಯುಲೆಕ್ಟಮಿ ಚಿಕಿತ್ಸೆ ಮೂಲಕ ಗುಣಪಡಿಸಿ ರೋಗಿಗೆ ಮರುಜನ್ಮ ನೀಡಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಡಿಕಲ್‌ ಗ್ಯಾಸ್ಟೋಎಂಟರಾಲಜಿ ವಿಭಾಗದ ಹಿರಿಯ ತಜ್ಞ ಡಾ. ಶಿವಕುಮಾರ್ ವಿ ಅವರು, ಸುಮಾರು ೭೨ ವರ್ಷದ ಅಧಿಕ ರಕ್ತದೊತ್ತಡ ದಿಂದ ತೀವ್ರ ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರನ್ನು ನಮ್ಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಮೇದೋಜೀರಕ ಗ್ರಂಥಿಯ ಊತದ (pancreatitis) ಕಾರಣ ERCP ಗೆ ಶಿಫಾರಸು ಮಾಡಲಾಯಿತು. ಡ್ಯುವೋಡೆನೋಸ್ಕೋಪಿ (duodenoscopy) ಮಾಡಿದಾಗ ಆಂಪ್ಯುಲರಿ ಗೆಡ್ಡೆಯು ಕಂಡುಬಂದಿದೆ, ಮತ್ತು ಎಂಡೋಸೋನಾಗ್ರಫಿ ಪರೀಕ್ಷೆಯಲ್ಲಿ ಪಿತ್ತನಾಳದಿಂದ ಸಣ್ಣ ಕರುಳಿನ ಮೊದಲನೇ ಭಾಗದವರೆಗೆ ವಿಸ್ತರಿಸುತ್ತಿರುವ ಗೆಡ್ಡೆ ಇರುವುದು (CT Scan)ನಲ್ಲಿ ದೃಢಪಡಿಸಲಾಯಿತು. ಬಯಾಪ್ಸಿಯ ಫಲಿತಾಂಶವು ಇದು ಕ್ಯಾನ್ಸರ್ ರೋಗಕ್ಕೆ ತಿರುಗುವ ಲಕ್ಷಣಗಳನ್ನು ಹೊಂದಿದೆ ಎಂದು ನಮೋದಿಸಿದರಿಂದ ರೋಗಿಯನ್ನು ಎಂಡೋಸ್ಕೋಪಿಕ್ ಆಂಪ್ಯುಲೆಕ್ಟಮಿಗೆ ಒಳಪಡಿಸಿ ಚಿಕಿತ್ಸೆ ನೀಡಲಾಯಿತು ಎಂದರು. ಈ ಎಲ್ಲಾ ಕಾರ್ಯವಿಧಾನದ ನಂತರ ಕೇವಲ ೪೮ ಗಂಟೆಯೊಳಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಡಾ ಶಿವಕುಮಾರ ಹರ್ಷ ವ್ಯಕ್ತಪಡಿಸಿದರು.

ಆಂಪ್ಯುಲ್ಲರಿ ಅಡೆನೊಮಾಗಳು (ಕ್ಯಾನ್ಸರ್‌ನ ಪೂರ್ವ) ಅಪರೂಪದ ಕಾಯಿಲೆಗಳಾಗಿದ್ದು ಅದು ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳಲು ತುಂಬ ಕಡಿಮೆ ಸಮಯವಿರುತ್ತದೆ. ಇದನ್ನು ತುರ್ತಾಗಿ ಪತ್ತೆಹಚ್ಚಿ ಸೂಕ್ತ ಪರಿಣಾಮಕಾರಿ ಚಿಕಿತ್ಸೆ ನೀಡಿ ರೋಗಿ ಗುಣಮುಖವಾಗುವಂತೆ ಮಾಡಲಾಗಿದೆ ಎಂದರು.

ಇದರ ಸಾಮಾನ್ಯ ರೋಗ ಲಕ್ಷಣಗಳೆಂದರೆ ಕಾಮಾಲೆ (ಜಾಂಡೀಸ್), ಹೊಟ್ಟೆ ನೋವು, ತೂಕ ಕಡಿಮೆಯಾಗುವುದು, ಮೈತುರಿಕೆ, ವಾಂತಿ, ವಾಕರಿಕೆ, ಮೇಧೋಜೀರಕ ಗ್ರಂಥಿಯ ಊತ, ಕಬ್ಬಿಣಾಂಶದ ಕೊರತೆ, ರಕ್ತ ಹೀನತೆ ಮತ್ತು ಜೀರ್ಣಾಂಗವ್ಯೂಹದ ರಕ್ತಸ್ರಾವಗಳು ಸೇರಿವೆ.

ಇದಕ್ಕೆ ಲಭ್ಯವಿರುವ ಚಿಕಿತ್ಸಾ ವಿಧಾನಗಳೆಂದರೆ ಎಂಡೋಸ್ಕೋಪಿ ಮತ್ತು ಶಸ್ತçಚಿಕಿತ್ಸೆ.

ಶಸ್ತ್ರಚಿಕಿತ್ಸೆಯ ಅಡ್ಡ ಪರಿಣಾಮಗಳೆಂದರೆ ಕರುಳು ರಂಧ್ರ ಬೀಳುವ ಸಾಧ್ಯತೆ, ಜಾಂಡೀಸ್, ರಕ್ತಸ್ರಾವ ಮತ್ತು ಗುಣಮುಖವಾಗುವ ಸಮಯವು ತುಂಬಾ ಧೀರ್ಘವಾಗಿರುತ್ತದೆ. ನಮ್ಮಲ್ಲಿ ಚಿಕಿತ್ಸೆಗೆಂದು ಬಂದ ರೋಗಿಯು ವೃದ್ದರಾಗಿದ್ದು ಶಸ್ತçಚಿಕಿತ್ಸೆಯು ಇವರಿಗೆ ಅಷ್ಟು ಸೂಕ್ತವಲ್ಲದ ಕಾರಣದಿಂದ ಅವರಿಗೆ ಎಂಡೋಸ್ಕೋಪಿಕ್ ಆಂಪ್ಯುಲೆಕ್ಟಮಿ ಮಾಡಿ ೪೮ ಗಂಟೆಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು, ಎಂದರು.

Sahyadri Narayana Hospital ಎಂಡೋಸ್ಕೋಪಿಯಲ್ಲಿ ಅಡೆನೊಮಾದ ಮಾರಕತೆಯ ಪುರಾವೆಗಳಿಲ್ಲದ ರೋಗಿಗಳಿಗೆ ಶಸ್ತçಚಿಕಿತ್ಸೆಯ ಛೇದನದ ನಂತರ ಎಂಡೋಸ್ಕೋಪಿಕ್ ಆಂಪ್ಯುಲೆಕ್ಟಮಿಯ ಆದ್ಯತೆ ನೀಡಲಾಗುತ್ತದೆ. ಏಕೆಂದರೆ ಇದರಿಂದ ಅಸ್ವಸ್ಥತೆ ಫಲಿತಾಂಶವು [೧೦%] ಕಡಿಮೆಯಾಗುತ್ತದೆ.

ಸಂಪೂರ್ಣ ಪ್ಯಾಂಕ್ರಿಯಾಟಿಕೊ-ಡ್ಯುವೋಡೆನೊಸ್ಟೊಮಿ, ಸರ್ಜಿಕಲ್ ಆಂಪ್ಯುಲೆಕ್ಟಮಿ, ಅಸ್ವಸ್ಥತೆಯ ಪ್ರಮಾಣ ಮತ್ತು ಶಸ್ತçಚಿಕಿತ್ಸಾ ಆಂಪ್ಯುಲೆಕ್ಟಮಿ ಅಸ್ವಸ್ಥತೆ ಗ್ಯಾಸ್ಟಿçಕ್ ಔಟ್ಲೆಟ್ ಅಡಚಣೆಗಳು ೪೨% ಮೇದೋಜೀರಕ ಗ್ರಂಥಿಯ ಊತ ಮತ್ತು ಕೋಲಾಂಜೈಟಿಸ್‌ನಂತಹ ತೊಡಕುಗಳನ್ನು ಹೊಂದಿರುತ್ತದೆ.

ಇAತಹ ಕ್ಲೀಷ್ಟಕರವಾದ ಚಿಕಿತ್ಸೆಯನ್ನು ನಿರ್ವಹಿಸಿ ಹಾಗೂ ಅತಿ ಕಡಿಮೆ ಸಮಯದಲ್ಲಿ ವೃದ್ಧ ರೋಗಿಯನ್ನು ಗುಣಮುಖರನ್ನಾಗಿಸಿ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾದ ಡಾ. ಶಿವಕುಮಾರ್ ವಿ ಮತ್ತು ತಂಡದವರನ್ನು ಆಸ್ಪತ್ರೆಯ ವ್ಯವಸ್ಥಾಕ ನೀರ್ದೆಶಕರಾದ ಶ್ರೀಯುತ ವರ್ಗಿಸ್ ಪಿ ಜಾನ್ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯು ಅಭಿನಂದಿಸಿದೆ.

Airports Authority of India ಕೇಂದ್ರ ವಿಮಾನ ಯಾನ ಸಚಿವರಿಗೆ ಸೀಎಂ ಸಿದ್ಧರಾಮಯ್ಯ ನೀಡಿದ ಪತ್ರದ ವಿವರ

0

Airports Authority of India ದೆಹಲಿಯಲ್ಲಿ ಇಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಕಿಂಜರಾಪು ರಾಮಮೋಹನ ನಾಯ್ಡು ಅವರಿಗೆ ನೀಡಿದ ಪತ್ರದ ವಿವರ ಹೀಗಿದೆ;

ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ರಾಜ್ಯ ಸರ್ಕಾರವು ದಿನಾಂಕ 6-10-2005 ರಂದು ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ನಿಯಮ ಬಿ (2) (v) ಪ್ರಕಾರ ಕಾರ್ಯನಿಯೋಜಕರು ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಅಗತ್ಯ ವಿರುವ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಯಾವುದೇ ಋಣಭಾರವಿಲ್ಲದೆ ನಿಯೋಜಿತರಿಗೆ ಉಚಿತವಾಗಿ ವರ್ಗಾಯಿಸಬೇಕು. ಅದರಂತೆ, ಅಗತ್ಯವಿರುವ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಉಚಿತವಾಗಿ ವರ್ಗಾಯಿಸಲಾಗಿದೆ. ಒಪ್ಪಂದದ ಷರತ್ತು ಬಿ 2 (VI) ಪ್ರಕಾರ, ನಿಯೋಜಿತರು ಮೈಸೂರು ವಿಮಾನ ನಿಲ್ದಾಣದ ಹೆಚ್ಚಿನ ಅಭಿವೃದ್ಧಿಯ ಬಂಡವಾಳ ವೆಚ್ಚ, ಮಾರ್ಪಾಡುಗಳು, ಬಲಪಡಿಸುವಿಕೆ ಮತ್ತು ಮೇಲ್ದರ್ಜೆಗೇರಿಸುವ ಎಲ್ಲಾ ವೆಚ್ಚಗಳನ್ನು ಭರಿಸಬೇಕು. ಅದರಂತೆ, ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ ಅಗತ್ಯವಿರುವ ಬಂಡವಾಳ ಹಾಗೂ ಇನ್ನಿತರೆ ವೆಚ್ಚಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವೇ ಭರಿಸಬೇಕಿದೆ.

ಈ ಹಿನ್ನೆಲೆಯಲ್ಲಿ, ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಅಗತ್ಯವಿರುವ 240 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರವು 319.14 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಭೂ ಸ್ವಾಧೀನ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ.

ನವೆಂಬರ್ 2024 ರಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತವು(ಸಿ. ಎನ್.ಎನ್.ಎಲ್) ವಿಮಾನ ನಿಲ್ದಾಣ ವಿಸ್ತರಣೆ ಪ್ರದೇಶದಲ್ಲಿ ಎರಡು ಕಂದಕಗಳ ಮತ್ತು 7 ಕಾಲುವೆಗಳ ಸ್ಥಳಾಂತರಕ್ಕೆ ವರದಿಯನ್ನು ಸಲ್ಲಿಸಿದ್ದು, ಇದಕ್ಕೆ ₹70 ಕೋಟಿಗಳ ವೆಚ್ಚವಾಗಲಿದೆ. ಅಂತೆಯೇ, ಕೆ.ಪಿ.ಟಿ.ಸಿಎಲ್ ಕೂಡ ಹೈ-ಟೆನ್ಷನ್ ಲೈನ್ ಗಳ ಮತ್ತು ಚೆಸ್ಕಾಂ ಲೋ ಟೆನ್ಶನ್ ವೈರ್ ಗಳ ಮಾರ್ಗ ಬದಲಾವಣೆಗೆ 31.82 ಕೋಟಿಗಳ ಅಂದಾಜು ವೆಚ್ಚವಾಗಲಿದೆ ಎಂದು ತಿಳಿಸಿದ್ದು, ಒಟ್ಟಾರೆ ಸದರಿ ಕಾಮಗಾರಿಗೆ 101.82 ಕೋಟಿಗಳ ಅನುದಾನದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

Airports Authority of India ಆದ್ದರಿಂದ, ರಾಜ್ಯ ಸರ್ಕಾರವು ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 240 ಎಕರೆ ಭೂ ಸ್ವಾಧೀನಕ್ಕೆ ತಗಲುವ 319.14 ಕೋಟಿ ವೆಚ್ಚವನ್ನು ಭರಿಸಿದ್ದು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ವಿಸ್ತರಣೆಯ ಅಂದಾಜು ವೆಚ್ಚ 101.84 ಕೋಟಿಗಳ ಯುಟಿಲಿಟಿ ಸ್ಥಳಾಂತರದ ಯೋಜನೆಯನ್ನು ರೂಪಿಸಿ ಶ್ರೀಘ್ರವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ಕೋರಿದೆ.

MESCOM ಏಪ್ರಿಲ್ 7ರಂದು ಉಂಬ್ಳೆಬೈಲು‌ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ತಾಲೂಕು ಸಂತೇಕಡೂರು 66/11 ಕೆವಿ ವಿವಿ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಉಂಬ್ಳೇಬೈಲು, ಲಕ್ಕಿನಕೊಪ್ಪ, ಮತ್ತೂರು ಕುಡಿಯುವ ನೀರಿನ ಘಟಕ, ಸಂತೇಕಡೂರು, ಗಣಿದಾಳು ವಿದ್ಯುತ್ ಕೇಂದ್ರಗಳಿಂದ ಸರಬರಾಜು ಪಡೆಯುವ ಸಂತೇಕಡೂರು, ಶ್ರೀರಾಮನಗರ, ರಾಂಪುರ, ಕೂರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೇಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಟ್ಟಿಲು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಏ. 07 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

The Waqf ವಕ್ಫ್ ತಿದ್ದುಪಡಿ 2025 ಮಸೂದೆ ಸಂಸತ್ತಿನಲ್ಲಿ ಅಂಗೀಕೃತ, ವಿವಿಧ ಪಕ್ಷಗಳ ಧುರೀಣರ ಪ್ರತಿಕ್ರಿಯೆ ಏನಿದೆ?

0

The Waqf ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಬಹು ಚರ್ಚಿತ ವಕ್ಫ್ ತಿದ್ದುಪಡಿ -2025 ಅನ್ನು ರಾಜ್ಯಸಭೆಯಲ್ಲಿ ಕೆಂದ್ರ ಸರ್ಕಾರ ಮಂಡಿಸಿತ್ತು.
ಲೋಕಸಭೆಯಲ್ಲಿ ಸುದೀರ್ಘ ಚರ್ಚೆಯನಂತರ
288-232 ಅಂತರದಲ್ಲಿ‌ ವಕ್ಫ್ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದೆ.
ರಾಜ್ಯಸಭೆಯಲ್ಲಿ
127-95 ಅಂತರದಲ್ಲಿ ಅಂಗೀಕಾರ ಪಡೆಯಿತು. ರಾಷ್ಟ್ರಪತಿಗಳು ‌ಸಹಿ ಹಾಕಿದರೆ ಕಾನೂನಾಗಿ ಜಾರಿಗೆ ಬರುವುದು ಬಾಕಿ ಇದೆ.

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡ ಬೆನ್ನಲ್ಲೇ ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಮಾತನಾಡಿ , ಈಗ ವಕ್ಫ್ ತಿದ್ದುಪಡಿ ವಿಧೇಯಕದ ಮೂಲಕ ಸಂವಿಧಾನದ ಮೇಲೆ ಕೇಂದ್ರ ಸರ್ಕಾರ ಘೋರ ದಾಳಿ ನಡೆಸಿದೆ. ಸಂಸತ್ತು ಅಂಗೀಕರಿಸಿದ ಮಹಿಳಾ ಮೀಸಲು ವಿಧೇಯಕವನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ ಎಂದು ಕಿರಿಕಾರಿದರು.

ದೇಶದಲ್ಲಿರುವ ವಕ್ಫ್ ಬೋರ್ಡ್ ಗಳ ಆಸ್ತಿ ಸುಮಾರು 1.2 ಲಕ್ಷ ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಇಂತಹ ಬೆಲೆಬಾಳುವ ಆಸ್ತಿಯನ್ನು ದಾನಿಗಳು ನೀಡಿದ್ದಾರೆ. ಈ ಆಸ್ತಿಯನ್ನು ರಕ್ಷಣೆ ಮಾಡಿ ಬಡ ಮುಸ್ಲಿಮರಿಗೆ ಅನುಕೂಲವಾಗುವ ಕೆಲಸವನ್ನು ಈ ವಿಧೇಯಕ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ ಎಂಬ ವರದಿಗಳು ತೀವ್ರ ಸಂಚಲನ ಮೂಡಿಸಿದೆ.
ವಕ್ಫ್ ಮಂಡಳಿಯು ತನ್ನ ಆಸ್ತಿಗಳ ಮೇಲೆ ಅನಿಯಂತ್ರಿತವಾದ ಹಿಡಿತ ಸಾಧಿಸಿದ್ದು, ಅದನ್ನು ತೆರವುಗೊಳಿಸುವುದು ತಿದ್ದುಪಡಿಯ ಉದ್ದೇಶಗಳಲ್ಲಿ ಒಂದು ಎನ್ನಲಾಗಿದೆ.

National Safety Day ಬಳ್ಳಾರಿ- ವಿಜಯನಗರ- ಕೊಪ್ಪಳ ವಲಯ ಮಟ್ಟದ ಸುರಕ್ಷತಾ ದಿನಾಚರಣೆ

0

National Safety Day ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಆಚರಿಸಲಾಗುತ್ತದೆ. ಈ ದಿನಾಚರಣೆ ಬಳಿಕ ಬಳ್ಳಾರಿ-ವಿಜಯನಗರ-ಕೊಪ್ಪಳ ವಲಯ ಸುರಕ್ಷತಾ ಸಮಿತಿಯ ವತಿಯಿಂದ 2002ರಿಂದ ವಲಯ ಮಟ್ಟದ ಸುರಕ್ಷತಾ ದಿನಾಚರಣೆಯ ಆಚರಣೆ ನಡೆಯುತ್ತಿದೆ.

ಅದರಂತೆ, ಈ ವರ್ಷದ ಕಾರ್ಯಕ್ರಮವನ್ನು 04-04-2025 ರಂದು ಬಳ್ಳಾರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜು ಆವರಣದಲ್ಲಿ ಆಯೋಜಿಸಲಾಯಿತು.

ಬಿ.ಕೆ.ರೈಸ್ ಹಿನ್ನೆಲೆ

2000ರಿಂದ 2002ರ ನಡುವೆ ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ಗುಲ್ಬರ್ಗಾ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಅಡಿಯಲ್ಲಿ ವಿದ್ಯುತ್, ಉಕ್ಕು, ಕಬ್ಬಿಣ, ಸಕ್ಕರೆ, ಸಿಮೆಂಟ್ ಮೊದಲಾದ ವಲಯಗಳಲ್ಲಿ ಸಣ್ಣ-ಮಧ್ಯಮ ಕೈಗಾರಿಕೆಗಳು ಪ್ರಾರಂಭಗೊಂಡವು. ಈ ಉದ್ಯಮಗಳಲ್ಲಿ:

ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್
ಜಿಂದಾಲ್ ಸ್ಟೀಲ್ ಲಿಮಿಟೆಡ್
ಆರ್.ಟಿ.ಪಿ.ಎಸ್
ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್
ಎಸಿ ಸಿಮೆಂಟ್
ಎಂಎಸ್‌ಪಿಎಲ್
ಬಿಎಮ್ಮ್ ಇಸ್ಪಾತ್
ಬಿಟಿಪಿಎಸ್
ಎಸ್‌ಎಲ್‌ಆರ್

National Safety Day ಹೀಗೆ ಅನೇಕ ಸಂಸ್ಥೆಗಳು ಸ್ಥಾಪನೆಯಾಗಿ ಉತ್ಪಾದನೆಯನ್ನು ಗುರಿಯಾಗಿಸಿಕೊಂಡು ಕಾರ್ಮಿಕರ ಸುರಕ್ಷತೆಯ ಕಡೆ ಹೆಚ್ಚಿನ ಗಮನವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿದ್ದವು.

ಅಂದು ಗುಲ್ಬರ್ಗಾ ಪ್ರದೇಶದ ಅಧಿಕಾರಿಗಳು ಬಂದು ಈ ಭಾಗಕ್ಕೆ ಭೇಟಿ ನೀಡುವುದು ಕಷ್ಟವಾಗುತ್ತಿತ್ತು. ಈ ಸಮಸ್ಯೆಗಳಿಗೆ ಪರಿಹಾರವಾಗಿ, 2002 ರಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಶ್ರೀ ಡಿಸಿ ಜಗದೀಶ್, ಶ್ರೀ ನವನೀತ್ ಮೋಹನ್, ಹಾಗೂ ಮೇಲ್ವಿಚಾರಕಿ ಶ್ರೀಮತಿ ಭಾರತಿ ಎಂ ಅವರ ನೇತೃತ್ವದಲ್ಲಿ ಗುಲ್ಬರ್ಗಾ ರೀಜನಲ್ ಸೇಫ್ಟಿ ಕಮಿಟಿ ಪ್ರಾರಂಭವಾಯಿತು. ಈ ಸಮಿತಿಯ ಮುಖ್ಯ ಉದ್ದೇಶಗಳು:

  1. ಅಪಘಾತಗಳ ಪ್ರಮಾಣ ಕಡಿಮೆ ಮಾಡುವ ಮಾಹಿತಿ ನೀಡುವುದು
  2. ಸುರಕ್ಷತಾ ಅಧಿಕಾರಿಗಳನ್ನು ನೇಮಕ ಮಾಡುವುದು
  3. ಸುರಕ್ಷತಾ ತರಬೇತಿಗಳನ್ನು ನೀಡುವುದು
  4. ಸುರಕ್ಷತಾ ಸಾಧನಗಳನ್ನು ಒದಗಿಸುವುದು
  5. ಸುರಕ್ಷತಾ ಆಡಿಟ್ ನಡೆಸುವುದು
  6. ಸ್ಪರ್ಧೆಗಳ ಮೂಲಕ ಜಾಗೃತಿ ಮೂಡಿಸುವುದು

ನಂತರ, ಕಾರ್ಯವ್ಯಾಪ್ತಿ ವಿಸ್ತರಿಸಿ ಸಮಿತಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು

  1. ಗುಲ್ಬರ್ಗಾ ರೀಜನಲ್ ಸೇಫ್ಟಿ ಕಮಿಟಿ (GRSC)
  2. ಬಳ್ಳಾರಿ-ಕೊಪ್ಪಳ ವಲಯ ಸುರಕ್ಷತಾ ಸಮಿತಿ (BKRAISE)

ವಿಜಯನಗರ ಜಿಲ್ಲೆಯ ಸೇರ್ಪಡೆ ಹಾಗೂ ಬದಲಾವಣೆಗಳನ್ನು ಪರಿಗಣಿಸಿ ಬಿಕೆರೈಸ್ ಸಮಿತಿಯನ್ನು ಪುನರ್ ಸಂಘಟಿಸಲಾಯಿತು.

ರಾಷ್ಟೀಯ ಸುರಕ್ಷತಾ ದಿನಾಚರಣೆ- 2024-25

ಈ ವರ್ಷ ಮೆ. ಮಿನರಾ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಆತಿಥ್ಯದಲ್ಲಿ 2024-25ನೇ ಸಾಲಿನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಸ್ಥಾಪನೆಯ ನಂತರದಿಂದ ಇಂದಿನವರೆಗೆ ಮಾರ್ಗದರ್ಶನ ನೀಡಿದ ಶ್ರೀ ಶ್ರೀನಿವಾಸ್, ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಇವರ ಸೇವೆಗಳಿಗೆ ಕೃತಜ್ಞತೆ ವ್ಯಕ್ತಪಡಿಸಲಾಯಿತು.

ಉದ್ಘಾಟನಾ ಕಾರ್ಯಕ್ರಮ

2025 ಏಪ್ರಿಲ್ 4 ರಂದು ಬೆಳಿಗ್ಗೆ ಬಳ್ಳಾರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಆವರಣದಲ್ಲಿ 54ನೇ ಸುರಕ್ಷತಾ ದಿನಾಚರಣೆಯ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದ ಆರಂಭ ಸುರಕ್ಷತಾ ದ್ವಜಾರೋಹಣ, ಸುರಕ್ಷತಾ ಸಾಧನ ಸಾಮಗ್ರಿಗಳ ಪ್ರದರ್ಶನ ಸ್ಟಾಲ್ ಉದ್ಘಾಟನೆ, ಹಾಗೂ ಸುರಕ್ಷತಾ ಜ್ಯೋತಿ ಬೆಳಗಿಸುವುದರ ಮೂಲಕ ಪ್ರಾರಂಭವಾಯಿತು.

ವೇದಿಕೆಯಲ್ಲಿ ಉಪಸ್ಥಿತರಿದ್ದರು

ಶ್ರೀ ಹನುಮಂತರೆಡ್ಡಿ, ಡೈರೆಕ್ಟರ್, ಮಿನರಾ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್
ಶ್ರೀ ಡಿ.ಸಿ. ಜಗದೀಶ್, ನಿವೃತ್ತ ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ
ಶ್ರೀ ಕೆ.ಜೆ. ನಂಜಪ್ಪ, ಅಡಿಷನಲ್ ಡೈರೆಕ್ಟರ್ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ
ಶ್ರೀ ರವೀಂದ್ರನಾಥ್ ರಾಥೋಡ್, ಜಂಟಿ ನಿರ್ದೇಶಕರು, ಹುಬ್ಬಳ್ಳಿ ವಲಯ (ಬಿಕೆರೈಸ್ ಅಧ್ಯಕ್ಷರು)
ಶ್ರೀ ವರುಣ್, ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್
ಶ್ರೀ ವಿಜಯಕುಮಾರ್, ಅಸಿಸ್ಟೆಂಟ್ ಡೈರೆಕ್ಟರ್

•ಸುರಕ್ಷತಾ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ*
ಶ್ರೀ ಡಿ.ಸಿ. ಜಗದೀಶ್, ನಿವೃತ್ತ ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ,
ಶ್ರೀ ನಾಗರಾಜ್ ಸಿ ಇ ಓ – ಐಎಲ್ ಸಿ ಐರನ್ ಅಂಡ್ ಸ್ಟೀಲ್ಸ್ ಕೊಪ್ಪಳ ಹಾಗೂ
ಶ್ರೀ ಕೆ.ಜೆ. ನಂಜಪ್ಪ, ಅಡಿಷನಲ್ ಡೈರೆಕ್ಟರ್ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಇವರುಗಳಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು.
ಶ್ರೀ ಸಾದಿಕ್ ಬಾಷ ಜೆ ಎಸ್ ಡಬ್ಲೂ ಕಾರ್ಖಾನೆಯ ಸುರಕ್ಷತಾ ವಿಭಾಗದ ಉದ್ಯೋಗಿಗಳಿಂದ ಸುರಕ್ಷತಾ ವಿಷಯದ ಮೇಲೆ ಉಪನ್ಯಾಸ ನೀಡಿದರು.

ಸಮಾರೋಪ ಸಮಾರಂಭ
ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು. ಆರಂಭದಲ್ಲಿ ಸುರಕ್ಷತಾ ನಾಟಕ ಪ್ರದರ್ಶನವಾಯಿತು. ನಂತರ ಸಮಾರೋಪ ಸಮಾರಂಭ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಆರ್.ವಿ. ಗುಮಾಸ್ತೆ, ವ್ಯವಸ್ಥಾಪಕ ನಿರ್ದೇಶಕರು, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಶ್ರೀ ಹನುಮಂತರೆಡ್ಡಿ, ಡೈರೆಕ್ಟರ್, ಮಿನರಾ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್, ಶ್ರೀ ಡಿ.ಸಿ. ಜಗದೀಶ್, ನಿವೃತ್ತ ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಶ್ರೀ ಕೆ.ಜೆ. ನಂಜಪ್ಪ, ಅಡಿಷನಲ್ ಡೈರೆಕ್ಟರ್ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಮತ್ತು ಶ್ರೀ ರವೀಂದ್ರನಾಥ್ ರಾಥೋಡ್, ಜಂಟಿ ನಿರ್ದೇಶಕರು, ಹುಬ್ಬಳ್ಳಿ ವಲಯ (ಬಿಕೆರೈಸ್ ಅಧ್ಯಕ್ಷರು) ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ನೇರವೇರಿತು. ಸ್ವಾಗತ, ಪ್ರಾಸ್ತಾವಿಕ ಭಾಷಣ ಮತ್ತು ಅತಿಥಿಗಳು ಮತ್ತು ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ಮುಂದಿನ ಬಿಕೆರೈಸ್ ಯೋಜನೆಗಳು, ಸರ್ಕಾರದ ನವೀಕರಣಗಳು ಹಾಗೂ ಸುರಕ್ಷತಾ ಮಾರ್ಗದರ್ಶನಗಳ ಬಗ್ಗೆ ಪ್ರಸ್ತಾಪಿಸಿದರು.
ಈ ಸಂಧ

ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಕೊಪ್ಪಳ ಇವರಿಂದ ಅಭಿನಂದನೆ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಕೊಪ್ಪಳ – ವಿಶೇಷ ಪ್ರಶಸ್ತಿಗಳು ಲಭಿಸಿದ್ದು ಕಾರ್ಖಾನೆಯ ಶ್ರೀ ಆರ್.ವಿ. ಗುಮಾಸ್ತೆ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯ ನಿರ್ವಾಹಕ ಉಪಾಧ್ಯಕ್ಷರಾದ ಡಾ.ಪಿ.ನಾರಾಯಣ್ ಇವರು ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಗೆ ಅಭಿನಂದಿಸಿ ಧನ್ಯವಾದಗಳನ್ನು ತಿಳಿಸಿದರು.

ಡಾ. ಪಿ. ನಾರಾಯಣ – ಮಾನವ ಸಂಪನ್ಮೂಲ ವಿಭಾಗದಲ್ಲಿ ಸಾಧನೆ
ಶ್ರೀ ಎಂ.ಎಂ. ನಾಡಿಗೇರ್ – ಸುರಕ್ಷತಾ ಸೇವಾ ಪ್ರಶಸ್ತಿ
ಡಾ. ಪ್ರವೀಣ್ ಕುಮಾರ್ – ಉತ್ತಮ ವೈದ್ಯಾಧಿಕಾರಿ ಪ್ರಶಸ್ತಿ
ಶ್ರೀ ಎಂ. ಉಮೇಶ್ – ಉತ್ತಮ ಕಾರ್ಮಿಕ ಕಲ್ಯಾಣ ಸೇವೆ.‌

ಕಾರ್ಯಕ್ರಮದ ಯಶಸ್ವಿ ಆಯೋಜನೆಯು ಎಲ್ಲಾ ಸಂಸ್ಥೆಗಳ ಸಹಕಾರದಿಂದ ಸಾಧ್ಯವಾಯಿತು.
ಮೆ. ಮಿನರಾ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಬಿಕೆರೈಸ್ ಸಮಿತಿಯ ಪರವಾಗಿ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಲಾಯಿತು.

ವರದಿ:
ಮುರುಳಿಧರ್ ನಾಡಿಗೇರ್
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್

National Indian Military College ಏರ್ ಫೋರ್ಸ್ ನ ಮಾಜಿ ಯೋಧರಿಗೆ ಏಪ್ರಿಲ್ 18 & 19 ರಂದು ಸ್ಪರ್ಶ್ ಸಹಾಯಕ ಶಿಬಿರ

0

National Indian Military College ಏರ್‌ಫೋರ್ಸ್ ಅಸೋಸಿಯೇಷನ್ (ಕರ್ನಾಟಕ ಬ್ರಾಂಚ್) ಮಾಜಿ ಸೈನಿಕರಿಗಾಗಿ ಏ.18 ಮತ್ತು 19 ರಂದು ಎರಡು ದಿನಗಳ ಸ್ಪರ್ಶ್ (SPARSH) ಸಹಾಯಕ ಶಿಬಿರವನ್ನು ನಗರದ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದ್ದು, ಏರ್‌ಫೋರ್ಸ್ ಮಾಜಿ ಸೈನಿಕರುಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-23513319/23411081 ಹಾಗೂ ಇಮೇಲ್: afa.bangalore@gmail.com / afakarnataka@gmail.com ಗಳನ್ನು ಸಂಪರ್ಕಿಸುವುದು.