Thursday, March 5, 2026
Thursday, March 5, 2026
Home Blog Page 349

Karnataka Janapada Academy ಜಾನಪದ ಸಂಪತ್ತಿ “ಸಿರಿ”ಯಜ್ಜಿಗೆ ಅಕಾಡೆಮಿಯಿಂದ ವಾರ್ಷಿಕ ಗೌರವ

0

Karnataka Janapada Academy ಕರ್ನಾಟಕ ಜಾನಪದ ಅಕಾಡೆಮಿಯು ದಿನಾಂಕ: 03-04-2025 ರಂದು ಕರ್ನಾಟಕ ಜಾನಪದ ಅಕಾಡೆಮಿ ಕಾರ್ಯಾಲಯದಲ್ಲಿ ಜೀವಮಾನ ಸಾಧನೆಗಾಗಿ 2023 ನೇ ಸಾಲಿನ ಡಾ. ಜೀ.ಶಂ.ಪ ಜಾನಪದ ತಜ್ಞ ಪ್ರಶಸ್ತಿಯನ್ನು ಡಾ. ಕೆ.ಚಿನ್ನಪ್ಪಗೌಡ, ಜಾನಪದ ವಿದ್ವಾಂಸರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ 2023 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರಾದ ಚಿತ್ರದುರ್ಗ ಜಿಲ್ಲೆಯ ಜನಪದ ಮಹಾಕಾವ್ಯಗಳ ಹಾಡುಗಾರ್ತಿ ಶ್ರೀಮತಿ ಸಿರಿಯಮ್ಮ, ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

Karnataka Janapada Academy ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಮಾನ್ಯ ಅಧ್ಯಕ್ಷರಾದ ಶ್ರೀ ಗೊಲ್ಲಹಳ್ಳಿ ಶಿವಪ್ರಸಾದ, ಅಕಾಡೆಮಿ ಸದಸ್ಯರಾದ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹಾಗೂ ರಿಜಿಸ್ಟ್ರಾರ್ ರವರಾದ ಶ್ರೀಮತಿ ಎನ್. ನಮ್ರತ ಹಾಗೂ ಪ್ರಶಸ್ತಿ ಪುರಸ್ಕೃತರ ಕುಟುಂಬಸ್ಥರು ಹಾಗೂ ಅಕಾಡೆಮಿ ಸಿಬ್ಬಂದಿ ಉಪಸ್ಥಿತರಿದ್ದರು

DC Shivamogga ಶರಾವತಿ‌ ಸಂತ್ರಸ್ತರ‌ ಅರಣ್ಯ ಜಮೀನು‌ಗಳ ಜಂಟಿ ಸರ್ವೆ ಕಾರ್ಯದಲ್ಲಿ‌‌ ಯಾವುದೇ ಒತ್ತಡಕ್ಕೆ ಮಣಿಯದೇ ಸಮರ್ಪಕ ಕಾರ್ಯ ನಿರ್ವಹಿಸಿ- ಗುರುದತ್ತ ಹೆಗಡೆ

0

DC Shivamogga ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಗೆಂದು ಅರಣ್ಯ ಜಮೀನು ಡಿ ರಿಸರ್ವ್ ಸಂಬಂಧಿಸಿದ ನಡೆಸುವ ಜಂಟಿ ಸರ್ವೇ ಒಂದು ವಿಭಿನ್ನ ಮತ್ತು ದೊಡ್ಡ ಕಾರ್ಯವಾಗಿದ್ದು ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಸಮರ್ಪಕವಾಗಿ ಈ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪನರ್ವಸತಿ ಸೌಲಭ್ಯ ಕಲ್ಪಿಸಲು ಅರಣ್ಯ ಜಮೀನನ್ನು ಡಿ-ರಿಸರ್ವ್ ಮಾಡಲು ಜಂಟಿ ಸರ್ವೇ ಕಾರ್ಯ ನಡೆಸುವ ಕುರಿತು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸರ್ವೇ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶರಾವತಿ ಮುಳಗಡೆ ಸಂತ್ರಸ್ತರ ಪುನರ್ವಸತಿಗೆಂದು ಅರಣ್ಯ ಜಮೀನು ಬಿಡುಗಡೆಗಾಗಿ ಅನುಮತಿ ಕೋರಿ ಕೇಂದ್ರ ಸರ್ಕಾರ ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಜಂಟಿ ತನಿಖೆ ಮತ್ತು ಸರ್ವೇ ವರದಿಗೆ ಸೂಚಿಸಲಾಗಿದೆ.
ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮೂರು ಹಂತದ ಸಭೆ ನಡೆಸಿದೆ. ಮತ್ತು ಸುಪ್ರೀಂ ಕೋರ್ಟಿನಲ್ಲಿ ಈ ಕುರಿತು ಪ್ರಕರಣ ನಡೆಯುತ್ತಿದೆ. ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಸೇರಿ ಒಟ್ಟು 9129 ಎಕರೆ ಪ್ರಸ್ತಾವಿತ ಪ್ರದೇಶದ ಜಂಟಿ ಸರ್ವೇ ನಡೆಯಬೇಕಿದೆ. ಜಂಟಿ ಸರ್ವೇ ಮಾಡಲು ವಿಎ, ಆರ್‌ಐ, ಡಿಆರ್‌ಎಫ್ ಗಳನ್ನೊಳಗೊಂಡ 42 ತಂಡಗಳನ್ನು ನಿಯೋಜನೆ ಮಾಡಲಾಗಿದೆ. 7 ತಾಲ್ಲೂಕುಗಳಲ್ಲಿಯೂ ಸಂತ್ರಸ್ತರು ಇದ್ದು, ಸ್ಥಳ ಅಳತೆ ಮಾಡಿ ನಕ್ಷೆ ತಯಾರಿಸಲು ಜಿಲ್ಲೆಗೆ 20 ರೋವರ್‌ಗಳನ್ನು ನೀಡಲಾಗಿದೆ. ಈ ಬಗ್ಗೆ ತರಬೇತಿ ಸಹ ನೀಡಲಾಗಿದೆ ಎಂದರು.
ಪ್ರಸ್ತಾವನೆಯಲ್ಲಿನ ದಾಖಲೆ, ಸ್ಕೆಚ್, ಜಿಪಿಎಸ್ ದತ್ತಾಂಶಗಳನ್ನು ಆಧರಿಸಿ ಪ್ರಸ್ತಾಪಿತ ಬ್ಲಾಕ್ ಹಾಗೂ ಸ.ನಂ ನಲ್ಲಿರುವ ಬ್ಲಾಕ್‌ನ ಗಡಿ ಹಾಗೂ ವಿಸ್ತೀರ್ಣವನ್ನು ಭೂಮಾಪಕರುಗಳು ಮೋಜಣಿ ಮಾಡಿ ಡಿಜಿಪಿಎಸ್ ದತ್ತಾಂಶಗಳನ್ನು ಸಂಗ್ರಹಿಸಿ ನಂತರ ಬ್ಲಾಕ್ ಗಡಿಯ ಒಳಗಿರುವ ಪ್ರದೇಶದಲ್ಲಿನ ಭೂ ಅನುಭೋಗದಾರರು/ ಅನುಭೋಗದಲ್ಲಿರುವ ಪ್ರದೇಶದ ಹಾಗೂ ವಿಸ್ತೀರ್ಣವನ್ನು ಮೋಜಣಿ ಮಾಡಿಕೊಂಡು ಡಿಜಿಪಿಎಸ್ ದತ್ತಾಂಶಗಳು ಹಾಗೂ ವಿಸ್ತೀರ್ಣದ ವಿವರಗಳನ್ನು ಸಂಗ್ರಹಿಸಿಕೊAಡು ನಿಯಮಾನುಸಾರ ಕ್ರಮ ವಹಿಸಲಾಗುವುದು.
DC Shivamogga ಹೊರ ಬೌಂಡರಿಗೆ ಯಾವುದೇ ಬದಲಾವಣೆಗೆ ಅವಕಾಶವಿಲ್ಲ. ಇದು ಸ್ಥಿರವಾಗಿರುತ್ತದೆ. ಅನುಭೋಗದಾರರ ನಿಖರ ವಿವರ ಪಡೆಯಬೇಕು. ಸರ್ವೇ ಮಾಡುವ ವೇಳೆ ಅಧಿಕಾರಿ/ಸಿಬ್ಬಂದಿಗಳು ಆದಷ್ಟು ಸಂಬಂಧಿಸಿದ ಗ್ರಾಮದ ಪ್ರಮುಖರ ಜೊತೆ ಮಾತನಾಡಿ ನಂತರ ಕ್ರಮ ವಹಿಸಬೇಕು. ಅನುಭೋಗದಾರರನ್ನು ಗುರುತಿಸಿ ಅವರ ಗುರುತಿನ ಪುರಾವೆಯ ದಾಖಲೆ ಪರಿಶೀಲಿಸಿ ತೆಗೆದುಕೊಳ್ಳಬೇಕು. ಬಹಳ ವರ್ಷಗಳಿಂದ ಇರುವ ಅನುಭೋಗದಾರರ ಬಗ್ಗೆ ಮಹಜರು ಮಾಡಿ ನಿಗದಿತ ನಮೂನೆಗಳಲ್ಲಿ ವಿವರ ತುಂಬಬೇಕು. ಅರಣ್ಯ ಭೂಮಿಯನ್ನು ಗುರುತಿಸಬೇಕು. ಹೊಸ ಒತ್ತುವರಿಗೆ ಅವಕಾಶ ಇಲ್ಲ ಎಂದರು.
ಇದೊಂದು ದೊಡ್ಡ ಕಾರ್ಯವಾಗಿದ್ದು, ರೆಗ್ಯುಲರ್ ಸರ್ವೇಗಿಂತ ಇದು ವಿಭಿನ್ನವಾಗಿದೆ. ಅಧಿಕಾರಿ, ನೌಕರರು ಸುಮಾರು 60 ವರ್ಷಗಳಿಂದ ಬಾಕಿ ಇರುವ ಈ ಸಮಸ್ಯೆ ಬಗೆಹರಿಯಲು ಶ್ರಮಿಸಬೇಕಿದೆ. ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಉತ್ತಮ ಫಲಿತಾಂಶ ನೀಡಬೇಕು. ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಒಂದು ತಿಂಗಳ ಅವಧಿಯಲ್ಲಿ ಈ ಜಂಟಿ ಸರ್ವೇ ಕಾರ್ಯ ಮುಗಿಸಬೇಕು ಎಂದು ತಿಳಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, ಈಗಾಗಲೇ ಕ್ಷೇತ್ರ ಮಟ್ಟದ ಜಿಪಿಎಸ್ ಸರ್ವೇ, ಸ್ಕೆಚ್ ಆಗಿದೆ. ಆದರೆ ಈಗ ನಿಖರವಾದ ಡಿಜಿಪಿಎಸ್ ವರದಿ ಹಾಗೂ ಅನುಭೋಗದಾರರ ವಿವರವನ್ನು ಸಂಗ್ರಹಿಸಲು ಜಂಟಿ ಸರ್ವೇ ಆಗಬೇಕಿದ್ದು, ತಂಡವನ್ನು ನೇಮಕ ಮಾಡಲಾಗಿದೆ. 341 ಬ್ಲಾಕ್‌ಗಳನ್ನು ಗುರುತಿಸಿದ್ದು ಬ್ಲಾಕ್‌ವಾರು ನಮೂನೆ ತುಂಬುವ ಬಗೆ, ಡಿಜಿಪಿಎಸ್ ರೀಡಿಂಗ್ ತೆಗೆದುಕೊಳ್ಳುವ ಬಗೆ, ಸ್ಥಳ ಮಹಜರು ಮಾಡುವ ಕುರಿತು ಹಾಗೂ ಕೇಂದ್ರ ಸರ್ಕಾರಕ್ಕೆ ನಿಖರವಾಗಿ, ತಾಂತ್ರಿಕವಾಗಿ ಪ್ರಸ್ತಾವನೆ ಸಲ್ಲಿಸುವ ಕುರಿತು ಮಾಹಿತಿ ನೀಡಿದರು.
ಸರ್ವೇ ಇಲಾಖೆಯಿಂದ ಪಿಪಿಟಿ ಪ್ರದರ್ಶನ ಮಾಡಿ, ಜಂಟಿ ಸರ್ವೇ ನಡೆಸುವ ತಾಂತ್ರಿಕ ಮತ್ತು ಇತರೆ ಅಂಶಗಳ ಬಗ್ಗೆ ವಿವರಣೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪ ಅರಣ್ಯಗಳಾದ ಸಂರಕ್ಷಣಾಧಿಕಾರಿ ಶಿವಶಂಕರ್, ಪ್ರಸನ್ನಕೃಷ್ಣ ಪಟಗಾರ್, ಮೋಹನ್ ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಡಿಡಿಎಲ್ ಆರ್ ಆಶಾ, ಎಸಿ ಸತ್ಯನಾರಾಯಣ, ತಾಲ್ಲೂಕುಗಳ ತಹಶೀಲ್ದಾರರು, ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಅರಣ್ಯ ಮತ್ತು ಸರ್ವೇ ಇಲಾಖೆ ನೌಕರರು ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Prahlad Joshi ನ್ಯಾಯಬೆಲೆ ಅಂಗಡಿಗಳ ಮೂಲಕ ಎಣ್ಣೆ, ಬೇಳೆ ವಿತರಣೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಗೆ ಮನವಿ ಸಲ್ಲಿಸಿದ ಸಚಿವ ಮುನಿಯಪ್ಪ‌

0

Prahlad Joshi ಕೇಂದ್ರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ನವದೆಹಲಿಯಲ್ಲಿ ಭೇಟಿ ಮಾಡಿ ಆಹಾರ ಇಲಾಖೆಯಲ್ಲಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ಅಕ್ಕಿಯೊಂದಿಗೆ ಎಣ್ಣೆ, ಬೇಳೆ ವಿತರಣೆಗೆ ಕ್ರಮ ವಹಿಸಲು ಮನವಿ ಮಾಡಿದರು.

Veerabhadreshwar Temple ನಾಟಕಗಳು ನಮ್ಮ ಸುತ್ತಲಿನ ವಿದ್ಯಮಾನಗಳ ಪ್ರತಿಬಿಂಬ- ಹಿರಣ್ಯಪ್ಪ ಕುಂಬ್ರಿ

0

Veerabhadreshwar Temple ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಜೊತೆಗೆ ಸರ್ವ ಸಮುದಾಯದವರಲ್ಲಿ ಸೌಹಾರ್ದತೆ ಮೂಡಿಸಲು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರವಹಿಸಿವೆ ಎಂದು ರಾಜ್ಯ ಮಡಿವಾಳ ಸಮಾಜದ ಸಹ ಕಾರ್ಯದರ್ಶಿ ಹಿರಣ್ಯಪ್ಪ ಕುಂಬ್ರಿ ಹೇಳಿದರು.
ಸೊರಬ ತಾಲೂಕಿನ ಪುಟ್ಟನಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ನಿಮಿತ್ತ ಹಮ್ಮಿಕೊಂಡ ಸಾಮಾಜಿಕ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಾಟಕಗಳು ಸಮಾಜದಲ್ಲಿ ಸರ್ವರನ್ನೂ ಒಗ್ಗೂಡಿಸುತ್ತವೆ. ಪ್ರಸ್ತುತ ದಿನಮಾನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿದೆ. ನಾಟಕವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ನಾಟಕಗಳು ನಮ್ಮ ಸುತ್ತಲಿನ ವಿದ್ಯಾಮಾನಗಳನ್ನು ಪ್ರತಿಬಿಂಬಿಸುತ್ತವೆ ಎಂದ ಅವರು, ಗ್ರಾಮದಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯು ಹೆಚ್ಚಾಗುತ್ತಿದೆ ಹಾಗೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ದೇವಸ್ಥಾನ ಸಮಿತಿ ಅಧ್ಯಕ್ಷ ಬಾಸೂರು ಚಂದ್ರೇಗೌಡ ಮಾತನಾಡಿ, ಮನುಕುಲಕ್ಕೆ ನೈತಿಕತೆಯ ಪಾಠಮಾಡಿ ಸತ್ಯ-ಶುದ್ಧ ಸನ್ನಡೆತೆಯ ಸಾತ್ವಿಕ ಬದುಕಿನ ಸಂಸ್ಕಾರ ಅರುಹಿದ ಚೈತ್ಯನ್ಯ ಶಕ್ತಿ ಶ್ರೀ ವೀರಭದ್ರ ದೇವರು. ನಂಬಿ ಬಂದ ಭಕ್ತರಿಗೆ ಇಷ್ಟಾರ್ಥಗಳನ್ನು ಸಿದ್ಧಿಸುವ ಶಕ್ತಿ ಶ್ರೀ ವೀರಭದ್ರ ದೇವರದಲ್ಲಿದೆ. ಗ್ರಾಮದಲ್ಲಿನ ಶ್ರೀ ದೇವರ ದೇವಸ್ಥಾನದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಸರ್ವರ ಸಹಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಎಸ್. ಮಧುಬಂಗಾರಪ್ಪ ಅವರ ಮುಖೇನ ಸರ್ಕಾರದಿಂದ ಅನುದಾನಗಳನ್ನು ಕೊಡಿಸುವಂತೆ ವೇದಿಕೆಯಲ್ಲಿದ್ದ ರಾಜಕೀಯ ಮುಖಂಡರಲ್ಲಿ ಮನವಿ ಮಾಡಿದರು.
ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್ ಮಾತನಾಡಿ, ಕ್ಷೇತ್ರದ ಶಾಸಕರಾದ ಎಸ್. ಮಧುಬಂಗಾರಪ್ಪ ಅವರು ಶಿಕ್ಷಣ ಸಚಿವರಾದ ತರುವಾಯ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಮಾತ್ರವಲ್ಲದೇ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ಈವರೆಗೂ ಆಗಿರದಂತಹ ಚಂದ್ರಗುತ್ತಿಯ ಅಭಿವೃದ್ಧಿ ಪ್ರಾಧಿಕಾರ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಗ್ರಾಮದಲ್ಲಿನ ದೇವಸ್ಥಾನದ ಅಭಿವೃದ್ಧಿಗೆ ಸಚಿವರ ಗಮನಕ್ಕೆ ತಂದು ಅನುದಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
Veerabhadreshwar Temple ಶಿಕ್ಷಕ ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಕೆ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಬಿಜೆಪಿ ಮುಖಂಡ ಗುರುಪ್ರಸನ್ನಗೌಡ ಬಾಸೂರು, ಪ್ರಮುಖರಾದ ಮೋಹನ್ ಕುಮಾರ್ ಜಡ್ಡಿಹಳ್ಳಿ, ಓ.ಬಿ. ರಾಜಶೇಖರ್ ಕೆರೆಕೊಪ್ಪ ಸೇರಿದಂತೆ ಮತ್ತಿತರರಿದ್ದರು. ರಮೇಶ್ ಕೆ. ಪುಟ್ಟನಹಳ್ಳಿ ಸ್ವಾಗತಿಸಿ, ಬಾಲಚಂದ್ರ ನಿರೂಪಿಸಿದರು.

CM Siddharamaiah ರಾಜ್ಯದ ವಿಮಾನ ನಿಲ್ದಾಣಗಳ ಅಭಿವೃದ್ಧಿ ಬಗ್ಗೆ ‌ಕೇಂದ್ರ ಸಚಿವರೊಂದಿಗೆ ಸಿದ್ಧರಾಮಯ್ಯ ಮಾತುಕತೆ

0

CM Siddharamaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಇಂದು ನಾಗರಿಕ ಕೇಂದ್ರ ವಿಮಾನ ಯಾನ ಸಚಿವ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿ ಮಾಡಿ ಮೈಸೂರು, ಕಲಬುರಗಿ, ವಿಜಯಪುರ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕಾನೂನು ಸಲಹೆಗಾರ ಪೊನ್ನಣ್ಣ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಹಾಜರಿದ್ದರು.

ದೇಖೋ ಅಪ್ನಾ ದೇಶ್ ಫೋಟೋ ಸ್ಪರ್ಧೆ

0

ಪ್ರವಾಸೋದ್ಯಮವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲು ಹಾಗೂ ಎಲ್ಲಾ ವರ್ಗಗಳ ಅಂದರೆ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ಕರಕುಶಲ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದ ಪ್ರಮುಖ ತಾಣಗಳನ್ನು ಗುರುತಿಸಿ ವಿಶ್ವ ದರ್ಜೆಯಲ್ಲಿ ಅಭಿವೃದ್ದಿಪಡಿಸಲು ಕೇಂದ್ರ ಪ್ರವಾಸೋದ್ಯಮದಿಂದ ಡಿಸ್ಕವರ್ ದಿ ಬ್ಯೂಟಿ ಆಫ್ ಇಂಡಿಯಾ ಶೀರ್ಷಿಕೆಯಡಿ ‘ದೇಖೋ ಅಪ್ನಾ ದೇಶ್ ಫೋಟೊ ಕಂಟೆಸ್ಟ್ – 2025’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಐತಿಹಾಸಿಕ ಸ್ಮಾರಕಗಳು, ವನ್ಯಜೀವಿ ಧಾಮಗಳು, ಜಿ.ಟಿ.ಟ್ಯಾಗ್ ಹೊಂದಿರುವ ಕರಕುಶಲ ಮತ್ತು ಕೈಮಗ್ಗಗಳು, ಭೂ ದೃಶ್ಯ(ಲ್ಯಾಂಡ್‌ಸ್ಕೇಪ್), ಸಾಹಸ ತಾಣಗಳು ವಿಭಾಗಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯಮಟ್ಟದಲ್ಲಿ ಹೆಚ್ಚಿನ ಪ್ರಚಾರವನ್ನು ನೀಡಲು ಜಿಲ್ಲೆಯ ಪ್ರಮುಖ ಅತ್ಯಾಕರ್ಷಕ ಪ್ರವಾಸಿ ತಾಣಗಳ ಛಾಯಾಚಿತ್ರಗಳನ್ನು ಸೆರೆ ಹಿಡಿದು, ಪ್ರವಾಸಿ ತಾಣಗಳ ಕಿರು ವಿವರಣೆಯೊಂದಿಗೆ Dekhoapnadeshphotos@gmail.com ಇ-ಮೇಲ್ ಗೆ ನೇರವಾಗಿ ಛಾಯಾಗ್ರಾಹಕರು, ಸಾರ್ವಜನಿಕರು, ಪ್ರವಾಸಿಗರು ದಿನಾಂಕ: 07-04-2025 ರೊಳಗಾಗಿ ಕಳುಹಿಸಿಕೊಡುವಂತೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Sri Rama Navami ಏಪ್ರಿಲ್ 6 & 10 ರಂದು ಶಿವಮೊಗ್ಗ‌ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿವಧೆ & ಮಾಂಸ ಮಾರಾಟ ನಿಷೇಧ

0

Sri Rama Navami ಏ.06 ರಂದು ಶ್ರೀರಾಮ ನವಮಿ ಹಬ್ಬ ಹಾಗೂ ಏ. 10 ರಂದು ಮಹಾವೀರ ಜಯಂತಿ ಪ್ರಯುಕ್ತ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ.
ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಏ.06 ಮತ್ತು 10 ರಂದು ಎರಡು ದಿನ ಬಂದ್ ಮಾಡಿ ಸಹಕರಿಸಬೇಕು. ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆ ತಿಳಿಸಿದ್ದಾರೆ.

Department of Backward Classes Welfare ಶುಲ್ಕ‌ ಮರುಪಾವತಿ ಸೌಲಭ್ಯ, ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆಯ ಪ್ರಕಟಣೆ

0

Department of Backward Classes Welfare ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2024-25ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಎಲ್ಲಾ ಕೋರ್ಸುಗಳಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಶುಲ್ಕ ಮರುಪಾವತಿ ಸೌಲಭ್ಯಕ್ಕಾಗಿ www.ssp.postmartic.karnataka.gov.in ವೆಬ್‌ಸೈಟ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ಮೇ-31 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿ ಹಾಗೂ ಕಾರ್ಯಕ್ರಮಗಳ ವಿವರ ಅರ್ಹತೆ ಸಲ್ಲಿಸಬೇಕಾದ ದಾಖಲೆಗಳು ಹಾಗೂ ಸಂಬಂಧಿಸಿದ ಸರ್ಕಾರಿ ಆದೇಶಗಳ ಬಗ್ಗೆ ಮಾಹಿತಿಗಾಗಿ www.bcwd.karnataka.gov.in ವೆಬ್‌ಸೈಟ್, ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ಇಮೇಲ್ postmartichelp@karnataka.gov.in, bcwdhelpline@gmail.com, ದೂ.ಸಂ.: 1902, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಸಹಾಯವಾಣಿ 8050770005 ಗಳನ್ನು ಸಂಪರ್ಕಿಸುವುದು.

Shivaganga Yoga Center ಶಿವಗಂಗಾ ಯೋಗಕೇಂದ್ರದಿಂದ ಯೋಗ ಶಿಬಿರಗಳು ಬಡಾವಣೆಗಳಿಗೆ ವಿಸ್ತಾರವಾಗಿದೆ- ಎಸ್.ರುದ್ರೇಗೌಡ

0

Shivaganga Yoga Center ಪ್ರತಿಯೊಬ್ಬರೂ ಯೋಗ ಅಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಅಭ್ಯಾಸ ಮಾಡಬೇಕು ಎಂದು ಶಿವಗಂಗಾ ಯೋಗ ಕೇಂದ್ರದ ಟ್ರಸ್ಟಿನ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.
ಕೃಷಿನಗರದ ಶಕ್ತಿ ಗಣಪತಿ ದೇವಸ್ಥಾನದ ಸಮಿತಿ ಹಾಗೂ ಶಿವಗಂಗಾ ಯೋಗ ಕೇಂದ್ರದ ವತಿಯಿಂದ ಕೃಷಿ ನಗರ, ಬಸವೇಶ್ವರ ನಗರ ಹಾಗೂ ಡಾಲರ್ಸ್ ಕಾಲೊನಿ ನಿವಾಸಿಗಳಿಗೆ ಹಮ್ಮಿಕೊಳ್ಳಲಾದ 21 ದಿನದ ಯೋಗ ಹಾಗೂ ಪ್ರಾಣಯಾಮ ಧ್ಯಾನದ ಮತ್ತು ಆರೋಗ್ಯ ಮಾಹಿತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಯೋಗ, ಪ್ರಾಣಾಯಾಮ ಹಾಗೂ ಧ್ಯಾನದ ಅಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಯೋಗಕ್ಕೆ ವಿಶೇಷವಾದ ಮಹತ್ವ ನೀಡಿದ್ದಾರೆ. ಶಿವಗಂಗಾ ಯೋಗ ಕೇಂದ್ರದ ವತಿಯಿಂದ ಆಯೋಜಿಸುತ್ತಿರುವ ಇಂತಹ ಯೋಗ ಶಿಬಿರಗಳು ಬಡಾವಣೆಗಳಲ್ಲಿ ಮನೆ ಮನಗಳನ್ನು ತಲುಪುತ್ತಿವೆ. ಬಾಲ್ಯದಿಂದಲೇ ಯೋಗಭ್ಯಾಸ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಮಾತನಾಡಿ, ಯೋಗ ವ್ಯಾಯಾಮವಲ್ಲ, ಅದು ಆರೋಗ್ಯವಂತ ಮನುಷ್ಯರನ್ನು ನಿರ್ಮಾಣ ಮಾಡುವ ಒಂದು ದಿವ್ಯ ಶಕ್ತಿ. ಋಷಿ ಮುನಿಗಳ ಕಾಲದಿಂದಲೂ ಯೋಗಕ್ಕೆ ತನ್ನದೇ ಆದ ಇತಿಹಾಸವಿದೆ. ಆದ್ದರಿಂದ ಪೋಷಕರು ತಾವು ಯೋಗ ಮಾಡಬೇಕು. ಈ ರೀತಿಯ ಶಿಬಿರಗಳನ್ನು ಶಿವಮೊಗ್ಗ ನಗರದ ಪ್ರತಿಯೊಂದು ಬಡಾವಣೆಗಳಲ್ಲಿ ಮಾಡುವ ಮಹಾದಾಸೆ ಇದೆ ಎಂದು ನುಡಿದರು.
Shivaganga Yoga Center ಕಾರ್ಯಕ್ರಮದ ಸಂಚಾಲಕ ಬಳ್ಳೇಕೆರೆ ಸಂತೋಷ ಮಾತನಾಡಿ, ಈಗಾಗಲೇ 21 ದಿನಗಳ ಕ್ಯಾಂಪಿನಿಂದ ಹಲವಾರು ಜನ ಯೋಗ ಶಿಬಿರಾರ್ಥಿಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಬರುವ ದಿನಗಳಲ್ಲಿ ಪ್ರತಿನಿತ್ಯ ಯೋಗವನ್ನು ಕೃಷಿ ನಗರದ ಶಕ್ತಿ ಗಣಪತಿ ದೇವಸ್ಥಾನದ ಆವರಣದಲ್ಲಿ ನಿರಂತರವಾಗಿ ನಡೆಸಲಾಗುವುದು ಎಂದು ನುಡಿದರು.
ಶಕ್ತಿ ಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ಟಿಡಿ ಅರವಿಂದ್ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಕೃಷಿ ನಗರ ಗಣಪತಿ ದೇವಸ್ಥಾನ ಸಮಿತಿಯ ಗಣಪತಿ ಮತ್ತು ಯೋಗ ಶಿಕ್ಷಕ ಚಂದ್ರಶೇಖರಯ್ಯ. ನಾಗರತ್ನಮ್ಮ, ಕಾಟನ್ ಜಗದೀಶ್, ಜಿ.ವಿಜಯಕುಮಾರ್, ಮಹಾಬಲೇಶ್ವರ ಹೆಗಡೆ, ಪರಮೇಶ್ವರ್, ಶಶಿಕುಮಾರ್, ಎಸ್ ಪಿ ನಟರಾಜ್, ನೀಲಕಂಠ ರಾವ್, ಬಬಲೇಶ್ವರ ಹೆಗಡೆ, ಬರೋಡ ಬ್ಯಾಂಕಿನ ಮುಖ್ಯ ಅಧಿಕಾರಿ ಕಮಲೇಶ್, ಎಸ್ ಬಿ ಐ ಬ್ಯಾಂಕಿನ ಅಧಿಕಾರಿಗಳು ಸಿಬ್ಬಂದಿ ಹಾಗೂ 200ಕ್ಕೂ ಹೆಚ್ಚು ಯೋಗ ಶಿಬಿರಾರ್ಥಿಗಳು ಇದ್ದರು.

Kuvempu University ಕುವೆಂಪು ವಿವಿ‌ ಮಟ್ಟದ ಅಂತರ ಕಾಲೇಜು ಎನ್.ಎಸ್.ಎಸ್. ಶಿಬಿರದ ಉದ್ಘಾಟನೆ

0

Kuvempu University ವಿಶ್ವ ವಿದ್ಯಾಲಯ ಆವರಣದಲ್ಲಿ ಕುವೆಂಪು ವಿಶ್ವ ವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಎನ್ ಎಸ್ ಎಸ್ ಶಿಬಿರವನ್ನು ಶ್ರೀ ಸಂತೋಷ್ ಎಮ್.ಎಸ್. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಇವರು ಉದ್ಘಾಟಿಸಿದರು.

ಮಾನ್ಯ ಕುಲಪತಿಗಳಾದ ಪ್ರೊ.ಶರತ್ ಅನಂತಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗೋಪಿನಾಥ್ ಎಸ್ ಎಂ, ಪರೀಕ್ಷಾoಗ ಕುಲಸಚಿವರು, ಡಾ. ಎ. ಟಿ. ಪದ್ಮೇಗೌಡ, ರಾ ಸೇ ಯೋ ಸಲಹಾ ಸಮಿತಿ ಸದಸ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

Kuvempu University ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ಶುಭಾ ಮರವಂತೆ ಇವರು ಪ್ರಸ್ತಾವಿಕ ಮತ್ತು ಸ್ವಾಗತ ಮಾಡಿದರು. ಡಾ. ಹಾ.ಮ. ನಾಗಾರ್ಜುನ ಇವರು ವಂದಿಸಿದರು. ವಿ ವಿ ರಾ ಸೇ ಯೋ ಸಲಹಾ ಸಮಿತಿ ಸದಸ್ಯರಾದ ಶ್ರೀಮತಿ ದಿವ್ಯ ಪ್ರವೀಣ್, ಎನ್ ಎಸ್ ಎಸ್ ಅಧಿಕಾರಿಗಳಾದ ಶ್ರೀ ಗಿರಿಧರ್ ಅವರು ಉಪಸ್ಥಿತರಿದ್ದರು. ದಿನಾಂಕ 03/04/2025 ರಿಂದ 09/03/2025 ರವರೆಗೆ ನಡೆಯಲಿರುವ
ಈ ಶಿಬಿರದಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ 150 ಸ್ವಯಂ ಸೇವಕರು ಮತ್ತು ಸ್ವಯಂ ಸೇವಕಿಯರು ಭಾಗವಹಿಸಿದ್ದಾರೆ.