Mayuri Dance Arts Centre ದೆಹಲಿ ಮತ್ತು ಅಯೋದ್ಯೆಯಲ್ಲಿ ನಡೆಯುತ್ತಿರುವ ನೃತ್ಯ ಕಾರ್ಯಕ್ರಮಕ್ಕೆ ಏ. 18ರ ಶುಕ್ರವಾರದಂದು ದೆಹಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯಲಿರುವ ಕೆಂಪೇಗೌಡ ರಾಷ್ಟ್ರೀಯ ಉತ್ಸವದಲ್ಲಿ ಮತ್ತು ಏ. 21ರ ಸೋಮವಾರ ಅಯೋದ್ಯಯ ರಾಮ ಮಂದಿರದಲ್ಲಿ ನಡೆಯಲಿರುವ ಭರತನಾಟ್ಯ ಕಾರ್ಯಕ್ರಮಕ್ಕೆ ಶಿವಮೊಗ್ಗದ ಮಯೂರಿ ನೃತ್ಯ ಕಲಾ ಕೇಂದ್ರದ ಗುರುಗಳಾದ ವಿದುಶಿ ಶ್ರೀಮತಿ ಶ್ವೇತಾ ಪ್ರಕಾಶ್ ಮತ್ತು ಅವರು ತಮ್ಮ ತಂಡದೊಂದಿಗೆ ಭರತನಾಟ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Mayuri Dance Arts Centre ಮಯೂರಿ ನೃತ್ಯ ಕಲಾ ಕೇಂದ್ರದ ಗುರುಗಳಾದ ವಿದುಶಿ ಶ್ರೀಮತಿ ಶ್ವೇತಾ ಪ್ರಕಾಶ್ ಮತ್ತು ಅವರ ತಂಡದ ನೃತ್ಯ ಕಲಾವಿದರಾದ ಸಾಂಚಿ ಪಿ., ವೈಷ್ಣವಿ ಎಸ್., ರಶ್ಮಿ, ದಾವಿನ್ಯ, ವಿಸ್ಮಿತ, ಭಾವನ, ಸನ್ನಿಧಿ, ಶಿವಾನಿ ಅವರಿಗೆ ಕೇಂದ್ರ ಮತ್ತು ಪೋಷಕರು ಹಾರೈಸಿದ್ದಾರೆ.
Mayuri Dance Arts Centre ದೆಹಲಿಯಲ್ಲಿ ಕೆಂಪೇಗೌಡ ರಾಷ್ಟ್ರೀಯ ಉತ್ಸವಕ್ಕೆ ಶಿವಮೊಗ್ಗದ ಮಯೂರಿ ನೃತ್ಯ ಕಲಾಕೇಂದ್ರದ ತಂಡ ಆಯ್ಕೆ
DC Shivamogga ಬ್ಯಾಂಕುಗಳ ಎಟಿಎಂ ಗಳಲ್ಲಿ ಅಗತ್ಯ ಸುರಕ್ಷತಾ ವ್ಯವಸ್ಥೆ ಮಾಡಿ- ಗುರುದತ್ತ ಹೆಗಡೆ
DC Shivamogga ಶಿವಮೊಗ್ಗ ಜಿಲ್ಲೆಯ ಎಲ್ಲ ಬ್ಯಾಂಕುಗಳಲ್ಲಿ ಸಿಸಿಟಿವಿ, ಎಚ್ಚರಿಕೆ ಗಂಟೆಗಳ ಅಳವಡಿಕೆ, ಭದ್ರತಾ ಸಿಬ್ಬಂದಿ ನಿಯೋಜನೆ, ಪೊಲೀಸ್ ಗಸ್ತು ಸೇರಿದಂತೆ ಅಗತ್ಯವಾದ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಬುಧವಾರ ಜಿಲ್ಲೆಯ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸುರಕ್ಷತಾ ಸಮಿತಿ(ಡಿಎಲ್‌ಎಸ್‌ಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 358 ಬ್ಯಾಂಕುಗಳು, 435 ಎಟಿಎಂ ಗಳು, 05 ಕರೆನ್ಸಿ ಚೆಸ್ಟ್ಗಳು ಇದ್ದು, ಆರ್‌ಬಿಐ ಮಾರ್ಗಸೂಚಿಯನ್ವಯ ಬ್ಯಾಂಕುಗಳಲ್ಲಿ ಹಾಗೂ ಕರೆನ್ಸಿ ಚೆಸ್ಟ್ಗಳಲ್ಲಿ ಸಿಸಿಟಿವಿ, ಸೈರನ್, ಬೆಂಕಿ ನಂದಿಸುವ ಸಾಧನಗಳನ್ನು ಅಳವಡಿಸಬೇಕು ಹಾಗೂ ಅವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಎಚ್ಚರಿಕೆ ಗಂಟೆ ಮತ್ತು ಇತರೆ ಸುರಕ್ಷತಾ ಕ್ರಮಗಳೊಂದಿಗೆ ಕೊಠಡಿ ನಿರ್ವಹಣೆ ಮಾಡಬೇಕು. ಕರನ್ಸಿ ಚೆಸ್ಟ್ಗಳಿಂದ ಹಣ ವರ್ಗಾವಣೆ ವೇಳೆ ಅಗತ್ಯ ಸುರಕ್ಷತಾ ಕ್ರಮಗಳಾದ ಪೊಲೀಸ್ ನಿಯೋಜನೆ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೂ ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸಂಪರ್ಕದಲ್ಲಿರಬೇಕು.
ಎಟಿಎಂ ಗಳಲ್ಲಿ ಸಿಸಿ ಟಿವಿ ಅಳವಡಿಕೆ, ಸೈರನ್ ಮತ್ತು ಬೆಂಕಿ ನಂದಿಸುವ ಸಾಧನಗಳನ್ನು ಅಳವಡಿಸಿ, ಅವು ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ನಿರ್ದಿಷ್ಟಪಡಿಸಿದ ರೀತಿಯಲ್ಲಿ ಎಟಿಎಂ ರೂಂ ಗಳು ಇರಬೇಕು. ಅಧಿಕೃತ ವ್ಯಕ್ತಿಗಳ ಎದುರು ನಗದನ್ನು ಲೋಡ್ ಮತ್ತು ಅನ್‌ಲೋಡ್ ಮಾಡಬೇಕು. ಹತ್ತಿರದ ಪೊಲೀಸ್ ಠಾಣೆಗೆ ಬ್ಯಾಂಕುಗಳ ಜವಾಬ್ದಾರಿಯುತ ವ್ಯಕ್ತಿಗಳ ಸಂಪರ್ಕದ ವಿವರವನ್ನು ನೀಡಿರಬೇಕು. DC Shivamogga ಗ್ರಾಹಕರು ವಂಚನೆಗೊಳಗಾದ ಮಾಹಿತಿ ನೀಡುವಂತಹ ಫಲಕಗಳನ್ನು ಎಟಿಎಂ ಒಳಗೆ ಹಾಕಿರಬೇಕು.
ಬ್ಯಾಂಕುಗಳ ಭದ್ರತಾ ಸಿಬ್ಬಂದಿಗಳು ಮತ್ತು ನಗದು ಬೆಂಗಾವಲು ಕರ್ತವ್ಯನಿರತ ಸಿಬ್ಬಂದಿಗಳ ಗನ್ ಪರವಾನಗಿ ನವೀಕರಣ ಖಾತ್ರಿಪಡಿಸಿಕೊಳ್ಳಬೇಕು. ಭದ್ರತಾ ಸಿಬ್ಬಂದಿಗಳಿಗೆ ಸಮರ್ಪಕ ತರಬೇತಿ ನೀಡಿರಬೇಕು. ನಗದು ವರ್ಗಾವಣೆ ವೇಳೆ ಭದ್ರತಾ ಸಿಬ್ಬಂದಿ ಕೊರತೆ ಇದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆಯಬೇಕು ಎಂದ ಅವರು ಗನ್ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರನ್ನು ಸಂಪರ್ಕಿಸುವಂತೆ ತಿಳಿಸಿದರು.
ಸೈಬರ್ ವಿಭಾಗದ ಡಿವೈಎಸ್‌ಪಿ ಕೃಷ್ಣಮೂರ್ತಿ ಮಾತನಾಡಿ, ಸೈಬರ್ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಅನುಕೂಲ ಮಾಡಿಕೊಡಲು ಬ್ಯಾಂಕುಗಳಲ್ಲಿ ಸಂತ್ರಸ್ತರ ಕೆವೈಸಿ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ನ್ನು ಕೇಳಲಾಗುತ್ತದೆ. ಆ ವೇಳೆ ತಕ್ಷಣಕ್ಕೆ ಸಹಕಾರ ಸಿಗದೆ ವಿಳಂಬವಾಗುತ್ತಿರುವುದಕ್ಕೆ ಅನೇಕ ವೇಳೆ ಸಂತ್ರಸ್ತರನ್ನು ನಷ್ಟದಿಂದ ರಕ್ಷಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಬ್ಯಾಂಕುಗಳು ಕ್ಷಿಪ್ರಗತಿಯಲ್ಲಿ ಸಹಕರಿಸಬೇಕು ಹಾಗೂ ಕೋರ್ಟ್ ಆದೇಶವಾದ ಪ್ರಕರಣಗಳಲ್ಲಿ ತಕ್ಷಣಕ್ಕೆ ಕ್ರಮ ವಹಿಸಬೇಕೆಂದು ಕೋರಿದರು.
ಜಿಲಾಧಿಕಾರಿಗಳು, ಸೈಬರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಬ್ಯಾಂಕುಗಳು ವಿಳಂಬ ವಹಿಸದೇ ಸಹಕರಿಸಬೇಕು. ಹಾಗೂ ಸೈಬರ್ ಪೊಲೀಸ್ ಠಾಣೆಯವರು ಬ್ಯಾಂಕ್‌ವಾರು ಮುಖ್ಯ ಕಚೇರಿಗಳ ಇಮೇಲ್ ಐಡಿಯನ್ನು ಸಂಗ್ರಹಿಸಿ ಅಲ್ಲಿ ವ್ಯವಹರಿಸಿದಲ್ಲಿ ಶೀಘ್ರ ಪ್ರತಿಕ್ರಿಯೆ ಲಭಿಸುವುದು ಎಂದು ತಿಳಿಸಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಚಂದ್ರಶೇಖರ್, ಎಎಸ್‌ಪಿ ಅನಿಲ್ ಕುಮಾರ್ ಭೂಮರಡ್ಡಿ, ವಿವಿಧ ಬ್ಯಾಂಕುಗಳ ಅಧಿಕಾರಿಗಳು ಹಾಜರಿದ್ದರು.
Air Force Association ಬಾಲ ಕಾರ್ಮಿಕರನ್ನ ನೇಮಕ ಮಾಡಿಕೊಂಡರೆ ಕಾನೂನು ಕ್ರಮ- ಜಿಲ್ಲಾ ಕಾರ್ಮಿಕ ಇಲಾಖೆ ಪ್ರಕಟಣೆ
Air Force Association ಏರ್‌ಫೋರ್ಸ್ ಅಸೋಸಿಯೇಷನ್ (ಕರ್ನಾಟಕ ಬ್ರಾಂಚ್) ಮಾಜಿ ಸೈನಿಕರಿಗಾಗಿ ಏ.18 ಮತ್ತು 19 ರಂದು ಎರಡು ದಿನಗಳ ಸ್ಪರ್ಶ್ ಸಹಾಯಕ ಶಿಬಿರವನ್ನು ನಗರದ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದ್ದು, ಏರ್‌ಫೋರ್ಸ್ ಮಾಜಿ ಸೈನಿಕರಿಗೆ ಮಾತ್ರವೆಂದು ತಿಳಿಸಿಲಾಗಿದ್ದು, ಇದೇ ದಿನಾಂಕಗಳಂದು ಎಲ್ಲಾ ಮೂರು ಸೇನೆಯ (ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆ) ಮಾಜಿ ಸೈನಿಕರೂ ಕೂಡ ಭಾಗವಹಿಸಬಹುದೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-23513319/23411081 ಹಾಗೂ ಇಮೇಲ್: afa.bangalore@gmail.com / afakarnataka@gmail.com ಗಳನ್ನುಸಂಪರ್ಕಿಸುವುದು.
Kannada Sahitya Parishad ಕಸಾಪ ಅಧ್ಯಕ್ಷರನ್ನು ಸಭೆಯಲ್ಲಿ ಪ್ರಶ್ನೆ ಮಾಡಿದ್ದು ತಪ್ಪೆ? ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಪ್ರತಿಕ್ರಿಯೆ
Kannada Sahitya Parishad ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ವಿರುದ್ಧ
ಕಸಾಪ ರಾಜ್ಯಾಧ್ಯಕ್ಷರು ನೀಡಿರುವ ಶೋಕಾಶ್ ನೋಟೀಸ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ
ಕನ್ನಡಪರ ಸಂಘಟನೆಗಳು, ಸಾಹಿತ್ಯಾಸಕ್ತರು, ಬರಹಗಾರರು, ಕಸಾಪ ಸದಸ್ಯರು, ಹಿರಿಯ ಸಾಹಿತಿಗಳು ಸೇರಿದಂತೆ
ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದು, ರಾಜ್ಯಾಧ್ಯಕ್ಷ ಸರ್ವಾಧಿಕಾರಿ
ಧೋರಣೆಯನ್ನು ಖಂಡಿಸುತ್ತಿದ್ದಾರೆ.
ರಾಜ್ಯಾಧ್ಯಕ್ಷರ ಬೈಲಾ ತಿದ್ದುಪಡಿ ಸೇರಿದಂತೆ ಇಡೀ ಸಾಹಿತ್ಯ ಪರಿಷತ್ತನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಜೊತೆಗೆ ರಾಜಕೀಯ ಪಕ್ಷವೊಂದರ ಅಂಗವನ್ನಾಗಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಇಂತಹ ಆಕ್ರೋಶ ಇಡೀ ರಾಜ್ಯದಲ್ಲಿ ವ್ಯಕ್ತವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಇಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ಶಿವಮೊಗ್ಗ ಸಾಹಿತ್ಯ ಗ್ರಾಮ ಸೇರಿದಂತೆ ಎಲ್ಲಾ ಮಾಹಿತಿಗಳ ದಾಖಲೆಗಳೊಂದಿದೆತಮ್ಮ ಮನದಾಳದ ಮಾತು ವ್ಯಕ್ತಪಡಿಸಿದ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಿ.ಮಂಜುನಾಥ್ ಅವರು, ಈಗಾಗಲೇ ಅಧ್ಯಕ್ಷರು ನನಗೆ ಶೋಕಾಸ್
Kannada Sahitya Parishad ನೋಟೀಸ್ ನೀಡಿದ್ದಾರೆ. ಇತ್ತೀಚೆಗೆ ಕಸಾಪ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕಾರಿ
ಸಮಿತಿ ಸಭೆಯಲ್ಲಿ ನಾನು ಪ್ರಶ್ನೆ ಮಾಡಿದ್ದೇ ತಪ್ಪು ಎಂದು ಭಾವಿಸಿಕೊಂಡಿದ್ದಾರೆ.
ಮತ್ತು ರಾಜ್ಯಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ತಮ್ಮನ್ನು ಬೆಂಬಲಿಸಿಲ್ಲ ಎಂಬ ಕಲ್ಪನೆಯೂ ಅವರಿಗಿದೆ. ಆದ್ದರಿಂದ ವಿನಾಕಾರಣ ಚುನಾವಣೆಯ ಮೂಲಕ ಪ್ರಜಾಪ್ರಭುತ್ವ
ರೀತಿಯಲ್ಲಿ ಆಯ್ಕೆಯಾದ ನನಗೆ ಈ ರೀತಿಯ ನೋಟೀಸ್ ನೀಡುವ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಅವರ ನೋಟೀಸ್‌ಗೆ ನಾನು ಒಂದು ಉತ್ತರವನ್ನು ನೀಡಿದ್ದೇನೆ. ನಾನು ಅವರಲ್ಲಿ ಕೇಳಿಕೊಂಡಿದ್ದು ಏನೆಂದರೆ ಮಾ.21ರಂದು ಕಸಾಪ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕಾರಿ
ಸಮಿತಿ ಸಭೆಯ ನಡವಳಿಕೆಯ ದೃಢೀಕೃತ ಪ್ರತಿಯನ್ನು ನನಗೆ ಕೊಡಿ ಅಲ್ಲಿ ಏನೂ
ತೀರ್ಮಾನವಾಗಿದೆಂಬುದೇ ನನಗೆ ತಿಳಿಯಬೇಕು. ಅದು ತಿಳಿಯದ ಹೊರತು ಪೂರ್ಣ
ಪ್ರಮಾಣದಲ್ಲಿ ನಿಮ್ಮ ನೋಟೀಸ್‌ಗೆ ಉತ್ತರ ಕೊಡಲು ನನಗೆ ಸಾಧ್ಯವಿಲ್ಲ ಎಂದಿದ್ದಾರೆ.
ಚುನಾವಣೆ ಮುಗಿದ ಮೇಲೆ ರಾಜ್ಯಾಧ್ಯಕ್ಷರ ಮತ್ತು ಶಿವಮೊಗ್ಗ ಜಿಲ್ಲಾಧ್ಯಕ್ಷರ ನಡುವೆ
ಒಂದು ರೀತಿಯ ಶೀತಲ ಸಮರವೇ ನಡೆದಿತ್ತು. ಕೇಂದ್ರ ಅಧ್ಯಕ್ಷರ ಸರ್ವಾಧಿಕಾರದ ನಿಲುವನ್ನು
ಈಗಾಗಲೇ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಹಲವು ಜಿಲ್ಲಾಧ್ಯಕ್ಷರು ಮತ್ತು
ಸಾಹಿತ್ಯಾಭಿಮಾನಿಗಳು ಇದನ್ನು ಖಂಡಿಸಿದ್ದಾರೆ. ಶಿವಮೊಗ್ಗದಲ್ಲಿ ನೆನ್ನೆಯೂ ಕೂಡ ನಾಡೋಜ ಕುಂ. ವೀರಭದ್ರಪ್ಪ ಅವರು ಮಹೇಶ್ ಜೋಷಿಯವರ ವಿರುದ್ಧ ಹರಿಹಾಯ್ದು ಅವರದು
ಹಿಟ್ಲರ್ ಸಂಸ್ಕೃತಿ ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದಲ್ಲದೆ,
ಜಿಲ್ಲೆಯ ಅನೇಕ ಸಾಹಿತಿಗಳು, ಬರಹಗಾರರು, ಪ್ರಗತಿಪರರು ಕಸಾಪ ರಾಜ್ಯಾಧ್ಯಕ್ಷರ
ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
ಸಾಹಿತ್ಯ ಗ್ರಾಮಕ್ಕೆ ಸಂಬಂಧಿಸಿದಂತೆ ಕೆಲವು ಆರೋಪಗಳು ನಿಮ್ಮ ಮೇಲೆ ಇವೆಯಲ್ಲ ಎಂಬ
ಪ್ರಶ್ನೆಗೆ ಉತ್ತರಿಸಿದ ಅವರು, ಸಾಹಿತ್ಯಾಗ್ರಾಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ
ಒಂದು ಕೋಟಿ ರೂ. ಅನುದಾನ ನೀಡಿತ್ತು. ಅದರ ಸಂಪೂರ್ಣ ದಾಖಲೆಯನ್ನು ನಾನು ನೀಡಿದ್ದೇನೆ.
ಅದಕ್ಕೆ ಸಂಬಂಧಿಸಿದಂತೆ ಟೆಂಡರ್‌ನಿಂದ ಹಿಡಿದು ಕಾಮಗಾರಿ ಮುಗಿಯುವ ತನಕದ ಎಲ್ಲಾ
ದಾಖಲೆಗಳನ್ನು ಪೋಟೋ ಸಮೇತ ಕಳಿಸಿದ್ದೇನೆ. ಎಲ್ಲಿಯೂ ಲೋಪವಾಗಿಲ್ಲ. ವಿಶೇಷ ಎಂದರೆ
ಒಂದು ಕೋಟಿಯ ಕಾಮಗಾರಿ ಮುಗಿದ ಮೇಲೆ ಕಾಮಗಾರಿ ನಿಂತಿತ್ತು. ಸರ್ಕಾರ ಮತ್ತೆ 50 ಲಕ್ಷ
ನೀಡಿದೆ. ಸರಿಯಾದ ದಾಖಲೆ ಇಲ್ಲದಿದ್ದರೆ ಮತ್ತೇಕೆ ಹಣ ನೀಡುತ್ತಿತ್ತು ಎಂದರು.
ಒಟ್ಟಾರೆ ಕನ್ನಡ ಸಾಹಿತ್ಯ ಪರಿಷತ್ ನ ದಿಕ್ಕು ಬದಲಾಗುತ್ತಿದೆ. ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಮಧ್ಯ ಪ್ರವೇಶ ಮಾಡಿ ಈ ಶೀತಲ ಸಮರವನ್ನು ಮುಗಿಸಬೇಕಾಗಿದೆ. ಏಕೆಂದರೆ ಸಾಹಿತ್ಯ
ಪರಿಷತ್ತು ಸಮಾಜದ ಮತ್ತು ಸಮುದಾಯದ ಕಣ್ಮಣಿಯಾಗಿದೆ. ಇಲ್ಲಿ ಸರ್ವಾಧಿಕಾರಕ್ಕೆ ಜಾಗ
ಇರಬಾರದು ಅಲ್ಲವೇ?
Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ
ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಯ ಆಸ್ತಿ ಗಳನ್ನು ಮುಟ್ಟು ಗೋಲು ಹಾಕಿ ಕೊಳ್ಳಲು ಪ್ರಯತ್ನಿಸುತ್ತಿದೆ ಇದನ್ನು ಜಿಲ್ಲಾ ಯುವ ಕಾಂಗ್ರೇಸ್ ಖಂಡಿಸುತ್ತದೆ
Sonia Gandhi ಈ ಸಂದರ್ಭದಲ್ಲಿ KPCC ಪ್ರಧಾನ ಕಾರ್ಯದರ್ಶಿ ಎನ್ ರಮೇಶ್ ಮಾತನಾಡಿ ಕಾಂಗ್ರೇಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮುಂದುವರಿಸಿದೆ ಇವರ ಒಡೆತನದಲ್ಲಿ ಇರುವ ನೇಷ್ನಲ್ ಹೆರಾಲ್ಡ್ ಸಂಸ್ಥೆ ಯನ್ನೇ ಮುಚ್ಚಿ ಹಾಕುವ ಹುನ್ನಾರ ನೆಡೆಸುತ್ತಿದ್ದು ಈಗಾಗಲೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಇಡಿ ಆರೋಪ ಪಟ್ಟಿ ಸಲ್ಲಿಸಿದೆ ಇದನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ ಎಂದು ದೂರಿದರು
ಬ್ಲಾಕ್ ಕಾಂಗ್ರೆಸ್ ನ ಶಿವಕುಮಾರ್ ಮಾತನಾಡಿ
ಬಿ ಜೆ ಪಿ ಸರ್ಕಾರ ಅಧಿಕಾರಕ್ಕೆ ಬಂದ್ ಮೇಲೆ ಕಾಂಗ್ರೆಸ್ ನಾಯಕರು ಸೇರಿದಂತೆ ವಿರೋಧ ಪಕ್ಷ ದ ನಾಯಕರು ಗಳ ವಿರುದ್ಧ ಇಡಿ ಐಟಿ ಮುಂತಾದ ತನಿಖಾ ಸಂಸ್ಥೆ ಗಳನ್ನು ಮುಂದಿಟ್ಟು ಕೊಂಡು ದಾಳಿ ನೆಡೆಸಲು ಮುಂದಾಗಿದೆ ಕೇಂದ್ರ ಸರ್ಕಾರ ಈ ತನಿಖೆ ಸಂಸ್ಥೆಗಳ ಜುಟ್ಟನ್ನು ತನ್ನ ಕೈನಲ್ಲಿ ಇಟ್ಟುಕೊಂಡು ಷಡ್ಯಂತರದ ಮೂಲಕ ವಿರೋಧ ಪಕ್ಷಗಳನ್ನು ಬಗ್ಗು ಬಡಿಯಲು ಮುಂದಾಗಿದೆ
ಕೂಡಲೇ ರಾಷ್ಟ್ರ ಪತಿಗಳು ಮದ್ಯಪ್ರವೇಶ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕ್ರಮ ತೆಗೆದು ಕೊಳ್ಳ ಬೇಕು ಮತ್ತು ದ್ವೇಷ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರವನ್ನು ವಜಾ ಮಾಡಬೇಕು ಎಂದು ಜಿಲ್ಲಾ ಯುವ ಕಾಂಗ್ರೇಸ್ ಆಗ್ರಹಿಸುತ್ತಿದೆ ಈ ಸಂದರ್ಭದಲ್ಲಿ PLD ಬ್ಯಾಂಕ್ ಅಧ್ಯಕ್ಷರಾದ ವಿಜಯಕುಮಾರ್, ಚೇತನ್, ಮಧುಸೂದನ್, ಇಮ್ರಾನ್, ಅಕ್ಬರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ಚರಣ್, ಪ್ರವೀಣ್, ಗಿರೀಶ್, ಸಕ್ಲೇನ್, ಅನಿಲ್ ಪಾಟೀಲ್, ಧನುಷ್, ಮಲಗಪ್ಪ ಶಿವು, ಆಕಾಶ್, NSUI ಜಿಲ್ಲಾಧ್ಯಕ್ಷ ವಿಜಯ್, ರವಿ ಕಟಿಕೆರೆ, ಚಂದ್ರ ಜಿ ರಾವ್, ಸುಭಾನ್, ಅಭಿ, ಆದಿತ್ಯ, ವರುಣ್ ವಿ ಪಂಡಿತ್ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು
MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ
MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.18 ರಂದು ಬೆಳಗ್ಗೆ 09-00 ರಿಂದ ಸಂಜೆ 05.00ರವರೆಗೆ ಇಂದಿರಾ ಗಾಂಧಿ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಜಯದೇವ ಬಡಾವಣೆ, ಕಾಶಿಪುರ, ಲಕ್ಕಪ್ಪ ಲೇಔಟ್, ಕಲ್ಲಳ್ಳಿ ಎ ಯಿಂದ ಎಫ್ ಬ್ಲಾಕ್‌ಗಳು, ತಿಮ್ಮಕ್ಕ ಲೇಔಟ್, ಹುಡ್ಕೋ ಕಾಲೋನಿ, ಲಕ್ಷ್ಮೀಪುರ ಬಡಾವಣೆ, ಕುವೆಂಪು ಬಡಾವಣೆ, ಸಿದ್ಧರಾಮ ಬಡಾವಣೆ, ರೇಣುಕಾಂಬ ಬಡಾವಣೆ, ಹನುಮಂತಪ್ಪ ಲೇಔಟ್, ತಮಿಳ್ ಕ್ಯಾಂಪ್, ಕೆಂಚಪ್ಪ ಲೇಔಟ್, MESCOM ಎನ್.ಎಂ.ಸಿ.ಕಾಂಪೌಂಡ್ ಸೂಡಾ ಕಚೇರಿ, ದಯಾನಂದ ಪ್ರಿಂಟರ್ಸ್, ಸವಿ ಬೇಕರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ
ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದತ್ತಿ ದಾನಿಗಳಾದ ಶ್ರೀಮತಿ ಮಾನಸ ಶಿವರಾಮಕೃಷ್ಣರವರು ತಮ್ಮ ತಂದೆ ತಾಯಿಗಳಾದ ಶ್ರೀ ವಿ. ಎಚ್. ನಾಗೇಂದ್ರಜೋಯಿಸ್ ಮತ್ತು ಶ್ರೀಮತಿ ನಾಗರತ್ನಮ್ಮ ಎನ್. ಜೋಯಿಸ್ ಇವರ ಸ್ಮರಣಾರ್ಥ “ಪ್ರಬಂಧ”ಕುರಿತಾದ ದತ್ತಿ ಕಾರ್ಯಕ್ರಮ ನಡೆಸಿಕೊಟ್ಟರು. ಕು. ವಿಧಾತ್ರಿಯ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮಕ್ಕೆ ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ಮಾಲಾ ರಾಮಚಂದ್ರ ಎಲ್ಲರನ್ನೂ ಸ್ವಾಗತಿಸಿದರು. ಸಂಘದ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಸಿ. ಎಸ್. ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ಎಸ್. ವಿ ಚಂದ್ರಕಲಾರವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಶ್ರೀಮತಿ ಮಾನಸ ಶಿವರಾಮಕೃಷ್ಣರವರು ಉದ್ಘಾಟಿಸಿ, ತಮ್ಮ ತಂದೆ ತಾಯಿಗಳ ಧನಾತ್ಮಕ ಹಾಗೂ ಸಮಾಜಮುಖಿ ಚಿಂತನೆಯ ಅನುಕರಣೀಯ ಗುಣಗಳನ್ನು ಸ್ಮರಿಸಿಕೊಂಡರು. ಶ್ರೀಮತಿ ಲಕ್ಷೀ ಶಾಸ್ತ್ರೀ ಯವರು ಪ್ರಬಂಧ ರಚನೆ -ವಿಸ್ತಾರ ಕುರಿತು ಸೋದಾಹರಣೆಗಳ ಮೂಲಕ ಸವಿಸ್ತಾರವಾಗಿ ವಿವರಿಸಿದರು. ಲೇಖಕಿ ಸು. ವಿಜಯಲಕ್ಷೀ ಯವರು ಸೊಗಸಾದ ಸ್ವರಚಿತ ಪ್ರಬಂಧ ಮಂಡಿಸಿದರು. ಖ್ಯಾತ ಗಾಯಕಿಯರಾದ ಶ್ರೀಮತಿ ವಿಜಯಾ ಕಾಂತೇಶ್, ಸುಜಯಾ ರಾಧಾಕೃಷ್ಣ, ಅಂಬಿಕಾ ದೇವರಾಜ್ ಸುಶ್ರಾವ್ಯವಾಗಿ ಭಾವಗೀತೆಗಳನ್ನು ಹಾಡಿದರು. ಶ್ರೀಮತಿ ಆಶಾಲತಾರವರು ನಿರೂಪಣೆ ಹಾಗೂ ವಂದನಾರ್ಪಣೆ ಮಾಡಿದರು.
Department of School Education and Literacy ದ್ವಿತೀಯ ಪಿಯು ಪರೀಕ್ಷೆ ಸಮರ್ಪಕ ನಿರ್ವಹಣೆ ಬಗ್ಗೆ ಸಚಿವ ಮಧು ಬಂಗಾರಪ್ಪ ‘ಡೀಸಿ’ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್
Department of School Education and Literacy ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್, ಮಧು ಬಂಗಾರಪ್ಪನವರು ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸುವ ದ್ವಿತೀಯ
ಪಿಯುಸಿ ಪರೀಕ್ಷೆ-2 ರ ಕುರಿತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ “ವಿಡಿಯೋ ಕಾನ್ಫರೆನ್ಸ್” ಮೂಲಕ ಸಭೆನಡೆಸಿ, ಪರೀಕ್ಷಾ ಸಂಬಂಧ ಕೈಗೊಗೊಳ್ಳಬೇಕಾಗಿರುವ ವಿವಿಧ ವಿಷಯಗಳ ಕುರಿತು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
2025 ದ್ವಿತೀಯ ಪಿಯುಸಿ ಪರೀಕ್ಷೆ – 1 ಕ್ಕೆ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಪರೀಕ್ಷೆ-2 ಅಥವಾ ಪರೀಕ್ಷೆ-3 ಕ್ಕೆ ಮಂಡಳಿಯ ನಿಯಮಾನುಸಾರ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ. ಮಕ್ಕಳು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು.
ಈಗಾಗಲೇ ಎರಡನೇ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇಲಾಖೆಯಿಂದ ವಿದ್ಯಾರ್ಥಿಗಳನ್ನು ಸಿದ್ದಪಡಿಸಲು ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ಅಣುಕು ಪರೀಕ್ಷೆಗಳನ್ನು ನೆಡಸಲಾಗುತ್ತಿದ್ದು ಇದರ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳು ಗಮನಹರಿಸಿ. ಜೊತೆಗೆ ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ವಿದ್ಯಾರ್ಥಿಗಳ ಪೋಷಕರು ಮಕ್ಕಳ ಪರೀಕ್ಷೆ ಬರೆಯಲು ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದರು.
ವಿಶೇಷವಾಗಿ ವಲಸೆ ಕಾರ್ಮಿಕರ ಮಕ್ಕಳನ್ನು ಗಮನಹರಿಸಿ ಅವರನ್ನು ಗುರುತಿಸಿ ಕಡ್ಡಾಯವಾಗಿ ಪರೀಕ್ಷೆಗೆ ಹಾಜರುಪಡಿಸಲು ಬೇಕಾದ ಎಲ್ಲಾ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
Department of School Education and Literacy ಈ ವರ್ಷದ ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಪರೀಕ್ಷೆ ಬರೆಯಬಹುದಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಿಯಾಗದಂತೆ ಕ್ರಮ ಕೈಗೊಳ್ಳಲು ಇರಾಕ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರಶ್ಮಿ ಮಹೇಶ್, ಪದವಿ ಪೂರ್ವ ನಿರ್ದೇಶಕರಾದ ಶ್ರೀಮತಿ ಸಿಂಧೂ ಬಿ ರೂಪೇಶ್, ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷರಾದ ಶ್ರೀ ಬಸವರಾಜೇಂದ್ರ, ಡಿ.ಎಸ್.ಇ.ಆರ್.ಟಿ ನಿರ್ದೇಶಕರಾದ ಶ್ರೀ ಹೆಚ್.ಎನ್ ಗೋಪಾಲಕೃಷ್ಣ ಉಪಸ್ಥಿತರಿದ್ದರು.
S.N. Chennabasappa ಶಿವಮೊಗ್ಗ ನೆಹರು ರಸ್ತೆಯಲ್ಲಿನ ಟ್ರಾಫಿಕ್ , ವಾಹನ ಪಾರ್ಕಿಂಗ್ ಸಮಸ್ಯೆ ಬಗ್ಗೆ ವರ್ತಕ ಸಂಘದೊಂದಿಗೆ ಶಾಸಕ ಚೆನ್ನಿ ಚರ್ಚೆ
S.N. Chennabasappa ಶಿವಮೊಗ್ಗ ನಗರದ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ನಗರದ ಹೃದಯಭಾಗದ ನೆಹರು ರಸ್ತೆಗೆ ಭೇಟಿ ನೀಡಿ, ಅಲ್ಲಿನ ನೆಹರು ರಸ್ತೆ ವರ್ತಕರ ಸಂಘದ ಸದಸ್ಯರೊಂದಿಗೆ ವಿಶೇಷ ಸಭೆ ನಡೆಸಿ, ಸಭೆಯಲ್ಲಿ ವಿವಿಧ ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಚರ್ಚಿಸಲಾದ ಪ್ರಮುಖ ವಿಷಯಗಳು:
- ಟ್ರಾಫಿಕ್ ಸಮಸ್ಯೆ: ನೆಹರು ರಸ್ತೆಯಲ್ಲಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ವ್ಯಾಪಾರಿಗಳ ಸಲಹೆ-ಪರಾಮರ್ಶೆ ಪಡೆದುಕೊಳ್ಳಲಾಯಿತು.
- ಪಾರ್ಕಿಂಗ್ ವ್ಯವಸ್ಥೆ: ನೆಹರು ರಸ್ತೆಗೆ ಬರುವ ವಾಹನಗಳನ್ನು ಕನ್ಸರ್ವೆನ್ಸಿ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಬೇಕಾಗಿರುವಂತಹ ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳಲು ನಿರ್ಧರಿಸಲಾಯಿತು.
- ನೆಹರು ರಸ್ತೆಯಲ್ಲಿ ಯುಜಿಡಿ ಬ್ಲಾಕ್ ಆಗುತ್ತಿರುವ ಸಮಸ್ಯೆಯಿಂದ ಸಾರ್ವಜನಿಕರಿಗೆ ಎದುರಾಗುತ್ತಿರುವ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
- ಅದೇ ರೀತಿ, ನೆಹರು ರಸ್ತೆಯಲ್ಲಿರುವ ಮಹಾನಗರ ಪಾಲಿಕೆಯ ಶೌಚಾಲಯ ಶಿಥಿಲಾವಸ್ಥೆಯಲ್ಲಿದ್ದು, ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳ ಒದಗಿಸುವ ನಿಟ್ಟಿನಲ್ಲಿ ನೂತನ ಶೌಚಾಲಯ ನಿರ್ಮಾಣದ ಕುರಿತು ಚರ್ಚೆ ನಡೆಸಿದರು.
S.N. Chennabasappa ಸಭೆಯಲ್ಲಿ ನೆಹರು ರಸ್ತೆಯ ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಸದಸ್ಯರು, ಡಿವೈಎಸ್ಪಿ ಬಾಬು ಅಂಜನಪ್ಪ, ಟ್ರಾಫಿಕ್ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಭಾಗವಹಿಸಿದ್ದರು.
Agnipath scheme ಅಗ್ನಿವೀರ್ – 2025-26 ನೇಮಕಾತಿಗೆ ಶಿವಮೊಗ್ಗ ಜಿಲ್ಲೆಯ ಅರ್ಹ ಅವಿವಾಹಿತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Agnipath scheme ಅಗ್ನಿಪಥ್ ಯೋಜನೆಯಡಿ 2025-26ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಆನ್‌ಲೈನ್ ನೋಂದಣಿಯ ಕೊನೆಯ ದಿನಾಂಕವನ್ನು ಏ. 25 ರವರೆಗೆ ವಿಸ್ತರಿಸಲಾಗಿದೆ ಎಂದು ಶಿವಮೊಗ್ಗ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
Agnipath scheme ನೋಂದಣಿ ಪೊರ್ಟಲ್- WWW.JOININDINARMY.NIC.IN ಹಾಗೂ ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೇನಾ ನೇಮಕಾತಿ ಕಛೇರಿ ದೂರವಾಣಿ ಸಂಖ್ಯೆ- 0824-2951279 ಹಾಗೂ ಇಮೇಲ್: aromangalore2021@gmail.com ಸಂಪರ್ಕಿಸಬಹುದಾಗಿದೆ.
