Wednesday, March 4, 2026
Wednesday, March 4, 2026
Home Blog Page 335

District Chamber of Commerce and Industry ಪ್ರಧಾನ ಮಂತ್ರಿಯವರ ಆಶಯದಂತೆ ಪ್ರಸ್ತುತ ಕೌಶಲ್ಯಾಭಿವೃದ್ಧಿಗೆ ಒತ್ತು‌ ನೀಡಲಾಗುತ್ತಿದೆ- ಬಿ.ಗೋಪಿನಾಥ್

0

District Chamber of Commerce and Industry ತಂತ್ರಜ್ಞಾನ ಯುಗದಲ್ಲಿ ನಾವು ಎಷ್ಟೇ ಮುಂದುವರೆದರೂ ಸಹ ಕೌಶಲ್ಯ ಇಲ್ಲದಿದ್ದರೆ ಜೀವನದಲ್ಲಿ ಸಫಲತೆಯನ್ನು ಕಾಣುವುದು ಕಷ್ಟ. ಆದ್ದರಿಂದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಅಡ್ವಾನ್ಸ್ಡ್‌ ಸ್ಕಿಲ್‌ ಡೆವಲಪ್ಮೆಂಟ್ ಸಮಿತಿ ವತಿಯಿಂದ ಹಾಗೂ ಬಾಷ್ ಸಂಸ್ಥೆ ಜೊತೆಗೂಡಿ ಹಮ್ಮಿಕೊಳ್ಳಲಾದ ಕೌಶಲ್ಯ, ಸಾಮಾನ್ಯ ಜ್ಞಾನ ಮತ್ತು ವ್ಯಕ್ತಿತ್ವ ವಿಕಸನ ಜೊತೆಗೆ ಹೊಸ ಹೊಸ ತಂತ್ರಜ್ಞಾನ ಮಾಹಿತಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನದ ಅತ್ಯಂತ ಪರಿಣಾಮಕಾರಿಯಾಗಿದ್ದು, ಪ್ರಧಾನಮಂತ್ರಿ ಅವರ ಆಶಯದಂತೆ ಇತ್ತೀಚಿನ ದಿನಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಸಾಕಷ್ಟು ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ತರಬೇತಿಗಳಲ್ಲಿ ಭಾಗವಹಿಸಿ ಮುಂದಿನ ಕಠಿಣ ಸವಾಲುಗಳ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬೇಕು ಎಂದು ನುಡಿದರು.

ಕೌಶಲ್ಯ ಅಭಿವೃದ್ಧಿ ಸಮಿತಿ ಚೇರ್ಮನ್ ವಸಂತ್ ಹೋಬಳಿದಾರ್ ಮಾತನಾಡಿ, ಇಂದು ಪ್ರತಿಯೊಂದು ಕ್ಷೇತ್ರಗಳನ್ನು ಸಹ ಕೌಶಲ್ಯದ ಕೊರತೆ ತುಂಬಾ ಇದೆ. ವಿದ್ಯೆಯ ಜೊತೆಗೆ ಕೌಶಲ್ಯವನ್ನು ಸಮರ್ಪಕವಾಗಿ ರೂಡಿಸಿಕೊಂಡರೆ ತಕ್ಷಣ ಉದ್ಯೋಗ ಅವಕಾಶಗಳು ಸಿಗುತ್ತವೆ ಎಂದು ನುಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಬಹಳ ದಿನದ ಕನಸು ಇದಾಗಿದೆ. ಎಲ್ಲಾ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಉತ್ತಮವಾದ ಬದುಕು ಕಟ್ಟಿಕೊಳ್ಳಲು ಶಿಬಿರ ಸಹಕಾರಿಯಾಗುತ್ತದೆ. ಆದ್ದರಿಂದ ಇಂತಹ ಕೌಶಲ್ಯ ತರಬೇತಿಯಲ್ಲಿ ತೊಡಗಿಸಿಕೊಂಡು ಮುಂದುವರೆದರೆ ಪರಿಪೂರ್ಣ ವ್ಯಕ್ತಿಗಳಾಗುತ್ತಾರೆ ಎಂದರು.

ಕಾರ್ಯದರ್ಶಿ ಎ.ಎಂ.ಸುರೇಶ್ ಮಾತನಾಡಿ, ವಿದ್ಯೆ ಕಡಿಮೆ ಇದ್ದರೂ ಸಹ ಕೌಶಲ್ಯ ಇದ್ದರೆ ಸುಲಭವಾಗಿ ಉದ್ಯೋಗಗಳನ್ನು ಪಡೆಯಬಹುದು. ಸ್ವಂತ ಉದ್ಯಮದಲ್ಲಿ ಯಶಸ್ಸು ಪಡೆಯಬಹುದು ಎಂದರು.

District Chamber of Commerce and Industry ಅಮೃತ್ ನೋನಿ ಸಂಸ್ಥೆಯ ಸಿಇಒ ಶಶಿಕಾಂತ್ ನಾಡಿಗ್ ಮಾತನಾಡಿ, ಕೌಶಲ್ಯದ ಕೊರತೆಯಿಂದ ಸಾಕಷ್ಟು ಜನ ಪ್ರತಿಭಾವಂತ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ. ಅಮೂಲ್ಯವಾದ ಸಮಯವನ್ನು ಹಾಳು ಮಾಡದೆ ಇಂತಹ ತರಬೇತಿ ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ , ಡಾ. ಲಕ್ಷ್ಮೀದೇವಿ ಗೋಪಿನಾಥ್, ಸ್ಕಿಲ್ ಡೆವಲಪ್ಮೆಂಟ್ ಟ್ರೈನರ್ ಕುಮಾರ್ ದಯಾನಿಧಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

CET Exam ವಿಪ್ರ ವಿದ್ಯಾರ್ಥಿಗೆ ಸಿಇಟಿ ಪರೀಕ್ಷಾ ಹಾಜರಾತಿಗೆ ಮುನ್ನ ಜನಿವಾರ ತೆಗೆಯಲು ತಾಕೀತು ವ್ಯಾಪಕ ಖಂಡನೆ

0

CET Exam ಎಲ್ಲೆಡೆ ಸಿಇಟಿ ಪರೀಕ್ಷೆಗಳು ನಡೆಯುತ್ತಿದ್ದು ಪರೀಕ್ಷಾ ಕೊಠಡಿಗೆ ಕೆಲ ವಸ್ತುಗಳನ್ನು ವಿದ್ಯಾರ್ಥಿಗಳು ತೆಗೆದುಕೊಂಡು ಹೋಗಬಾರದೆಂಬ ನಿಯಮವಿದೆ. ಆದರೆ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿ ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಸೆಕ್ಯೂರಿಟಿ ಸಿಬ್ಬಂದಿ ಆತನನ್ನು ತಡೆದು ಜನಿವಾರವನ್ನು ತೆಗೆಯುವಂತೆ ತಾಕಿತು ಮಾಡಿದ್ದು ಬೆಳಕಿಗೆ ಬಂದಿದೆ. ಇದು ಖಂಡನೀಯ ಈ ಘಟನೆ ಬ್ರಾಹ್ಮಣ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆಯನ್ನು ಉಂಟು ಮಾಡಿದ್ದು ಜನಿವಾರ ತೆಗೆದು ಪರೀಕ್ಷೆ ಬರೆಯಬೇಕೆಂಬ ಸುತ್ತಲೇ ಏನಾದರೂ ಇದೆಯೇ? ಸಾಮಾನ್ಯ ಜ್ಞಾನವಿಲ್ಲದವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದು ದುರದೃಷ್ಟಕರ ಜನಿವಾರ ತೆಗೆಯಲು ಹೇಳಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮತ್ತು ಕ್ಷಮಾಪಣೆ ಕೇಳಲು ಅಗ್ರಹಿಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕೆಂದು ಕಾಂಗ್ರೆಸ್ ಮುಖಂಡರಾದ ಪಿಎಂ ಮಾಲತೇಶ್ ತಿಳಿಸಿದ್ದಾರೆ.

JCI Shivamogga Sahyadri ಏಪ್ರಿಲ್ 19 & 20 ರಂದು ಜೆಸಿಐ ನಿಂದಸಾರ್ವಜನಿಕ ಸಂವಹನ ಕೌಶಲ ಕಾರ್ಯಾಗಾರ

0

JCI Shivamogga Sahyadri ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಮತ್ತು ಜೆಸಿಐ ಶಿವಮೊಗ್ಗ ಕಾಮರ್ಸ್ ವತಿಯಿಂದ ಶಿವಮೊಗ್ಗ ತಾಲೂಕಿನ ತುಪ್ಪೂರಿನಲ್ಲಿರುವ ಸಾನ್ವಿ ರೆಸಾರ್ಟ್ನಲ್ಲಿ ಏಪ್ರಿಲ್ 19 ಮತ್ತು 20ರಂದು ಪರಿಣಾಮಕಾರಿ ಸಾರ್ವಜನಿಕ ಸಂವಹನ ಕೌಶಲ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಜೆಸಿಐ ಇಂಡಿಯಾ ರಾಷ್ಟ್ರೀಯ ತರಬೇತುದಾರ ವೇಣುಗೋಪಾಲ್ ಹಾಗೂ ವಲಯ ತರಬೇತುದಾರ ಚಂದ್ರಶೇಖರ್ ಮುಖ್ಯ ತರಬೇತಿದಾರರಾಗಿ ಪಾಲ್ಗೊಳ್ಳುವರು. ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಗಣೇಶ್, ಜೆಸಿಐ JCI Shivamogga Sahyadri ಶಿವಮೊಗ್ಗ ಕಾಮರ್ಸ್ ಅಧ್ಯಕ್ಷೆ ನಿವೇದಿತಾ ವಿಕಾಸ್ ಮತ್ತಿತರರು ಪಾಲ್ಗೊಳ್ಳುವರು. ಎರಡು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಮೊಬೈಲ್ ಸಂಖ್ಯೆ 7411879043 ಹಾಗೂ 9740841079 ಗೆ ಸಂಪರ್ಕಿಸಬಹುದಾಗಿದೆ.

Karnataka Examination Authority ಕೃಷಿಕರ ಮಕ್ಕಳಿಗಾಗಿ ಮೀಸಲಿರುವ ಕೃಷಿ ಪದವಿ ಸೀಟುಗಳಿಗೆ ಪ್ರವೇಶ ಪರೀಕ್ಷೆಯ ದಿನಾಂಕ ಮುಂದೂಡಿಕೆ

0

Karnataka Examination Authority ಕೃಷಿಕರ ಮಕ್ಕಳಿಗಾಗಿ ಮೀಸಲಿರುವ ಕೃಷಿ ಪದವಿ ಸೀಟುಗಳಿಗಾಗಿ ಪ್ರವೇಶ ಪರೀಕ್ಷೆಯ ದಿನಾಂಕಗಳನ್ನು ಮುಂದೂಡಲಾಗಿದ್ದು, ಸಿ.ಇ.ಟಿಯ ನೇತೃತ್ವದಲ್ಲಿ ನಡೆಸಲಾಗುವ ಈ ಪ್ರಾಯೋಗಿಕ ಪರೀಕ್ಷೆ ಎಲ್ಲಾ ಕೃಷಿ ವಿಜ್ಞಾನಗಳಿಗೆ ಹಾಗೂ ಪಶು ವೈದ್ಯಕೀಯ ವಿಜ್ಞಾನಗಳಿಗೆ ಪ್ರವೇಶ ಪ್ರಕ್ರಿಯೆಗಾಗಿ ನಡೆಯಲಿದೆ. ಕೃಷಿಕರ ಕೋಟಾದಲ್ಲಿ ಈಗಗಾಲೇ ಸಿ.ಇ.ಟಿ. ಅರ್ಜಿಯಲ್ಲಿ ಆಯ್ಕೆ ನೀಡಿದವರಿಗೆ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪಲೋಡ್ ಮಾಡುವ ದಿನಾಂಕವನ್ನು ಏ.21 ರ ಮಧ್ಯರಾತ್ರಿ 12:00 ಗಂಟೆಗೆ ಮುಂದೂಡಲಾಗಿದೆ.
ಅಭ್ಯರ್ಥಿಗಳು ಮೂಲ ದಾಖಲಾತಿಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವುದು ಏ. 01 (ಬೆಳಗ್ಗೆ 10.00 ಗಂಟೆಯ ನಂತರ) ರಿಂದ ಏ.21 ರ ಮಧ್ಯರಾತ್ರಿ 12.00 ಗಂಟೆವರೆಗೆ. ಆನ್‌ಲೈನ್ ನಲ್ಲಿ ದಾಖಲಾತಿಗಳ ಪರಿಶೀಲನೆ ಮತ್ತು ಪರೀಕ್ಷೆಗೆ ಅರ್ಹ/ ಅರ್ಹರಲ್ಲದ ಅಭ್ಯರ್ಥಿಗಳ ಪಟ್ಟಿಯ ಸಿದ್ಧತೆ – ಆಯಾ ಕೇಂದ್ರಗಳಲ್ಲಿ ನಿಯೋಜಿಸಿದ ಸಮಿತಿ ಸದಸ್ಯರಿಂದ (ಆಯಾ ವಿಶ್ವವಿದ್ಯಾನಿಲಯಗಳು ನಿಯೋಜಿಸಿದ) ಏ. 04 ರಿಂದ ಏ. 23 ರ ಸಂಜೆ 5.00 ಗಂಟೆವರೆಗೆ. ಕೃಷಿ ಕೋಟಾದಡಿ ಅರ್ಹ / ಅರ್ಹರಲ್ಲದ ಅಭ್ಯರ್ಥಿಗಳ ಪಟ್ಟಿಯನ್ನು ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ಏ.25 ರ ಸಂಜೆ 4.00 ಗಂಟೆಯ ನಂತರ ಪ್ರಕಟಿಸಲಾಗುವುದು. ಅನರ್ಹ ಅಭ್ಯರ್ಥಿಗಳಿಗೆ ಮಾತ್ರ ದಾಖಲೆಗಳ ಬಗ್ಗೆ ಸೃಷ್ಠೀಕರಣ ಮತ್ತು ಸಂಬಂಧಿತ ಕೇಂದ್ರಗಳಲ್ಲಿ ಖುದ್ದಾಗಿ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ಏ. 26 ರಿಂದ ಏ. 27 ರ ಸಂಜೆ 4.00ಗಂಟೆಯವರೆಗೆ. ಪ್ರಾಯೋಗಿಕ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳಲ್ಲಿ ಏ. 28 ರಂದು 1.00 ಗಂಟೆಯ ನಂತರ ಪ್ರಕಟಿಸಲಾಗುವುದು.
Karnataka Examination Authority ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು (Hall ticket) ಡೌನ್‌ಲೋಡ್ ಮಾಡಿಕೊಳ್ಳುವ ದಿನಾಂಕ ಮೇ.01 ರಿಂದ ಮೇ.05 ರಂದು ಸಂಜೆ 4.00 ರಿಂದ 12:00 ಗಂಟೆಯವರೆಗೆ. ಪ್ರಾಯೋಗಿಕ ಪರೀಕ್ಷೆಯನ್ನು ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳ 17 ಕೇಂದ್ರಗಳಲ್ಲಿ ಏಕಕಾಲಕ್ಕೆ ಮೇ .09 ರಂದು ಬೆಳಗ್ಗೆ 9.00 ಗಂಟೆಯಿಂದ ಪ್ರಾರಂಭಿಸಲಾಗುವುದು. ತಡವಾಗಿ ಬರುವ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ. ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳಲ್ಲಿ ಮೇ 12 ರಂದು ಸಂಜೆ 6.00 ಗಂಟೆಯ ನಂತರ ಪ್ರಾಯೋಗಿಕ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗುವುದು. ಸಂಬಂಧಿತ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಆಕ್ಷೇಪ / ಮನವಿಗಳೇನಾದರೂ ಇದ್ದಲ್ಲ್ಲಿ ಮೇ. 13 ರ ಸಂಜೆ 4.00 ಗಂಟೆಯ ಒಳಗೆ ಸಲ್ಲಿಸಬಹುದು. ಪ್ರಾಯೋಗಿಕ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ಮೇ. 15 ರಂದು ಮಧ್ಯಾಹ್ನ 12.00 ಗಂಟೆಯ ನಂತರ ಪ್ರಕಟಿಸಲಾಗುವುದು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ತಿಳಿಸಲಾಗಿದೆ.
ವಿದ್ಯಾರ್ಥಿಗಳು ಬದಲಾದ ದಿನಾಂಕಗಳನ್ನು ತಿಳಿಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ www.uasbangalore.edu.in, www.uasd.edu.in/www.uasd.edu, www.uhsbagalkot.edu.in /uhsbagalkot.karnataka.gov.in, www.uahs.edu.in,
www.uasraichur.edu.in/raichur.karnataka.gov.in, www.kvafsu.edu.in,
http//kea.kar.nic.in, http//pgadmission.kar.nic.in/ugcet/UG_Home.aspx www.kvafsu.edu.in.
ಅಂತರ್ಜಾಲ ತಾಣಗಳಿಗೆ ಭೇಟಿ ನೀಡಬಹುದಾಗಿದೆ.

MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ ಕಛೇರಿಯಲ್ಲಿ ಏಪ್ರಿಲ್ 21 ರಂದು ಜನಸಂಪರ್ಕ ಸಭೆ

0

MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ -3 ಕಛೇರಿಯಲ್ಲಿ ಏ. 21 ರಂದು ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ;9480841339.

India Scouts and Guides ಮಕ್ಕಳಲ್ಲಿನ ಮೊಬೈಲ್, ಕಂಪ್ಯೂಟರ್ ಗೀಳು ತಪ್ಪಿಸಲು ಬೇಸಿಗೆ ಶಿಬಿರ ಸಹಕಾರಿ- ಆರ್‌.ಕೆ. ಸಿದ್ಧರಾಮಣ್ಣ

0

India Scouts and Guides ಮಕ್ಕಳಿಗೆ ಶಿಕ್ಷಣದ ಜತೆಯಲ್ಲಿ ಜೀವನದ ಪರಿಪೂರ್ಣತೆ ಸಾಧಿಸಲು ಹಾಗೂ ಸಾರ್ಥಕತೆ ಹೊಂದಲು ಸಂಸ್ಕಾರ ಅತ್ಯಂತ ಅವಶ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಹೇಳಿದರು.
ಶಿವಮೊಗ್ಗ ನಗರದ ಬಿ.ಎಚ್. ರಸ್ತೆಯಲ್ಲಿರುವ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಆವರಣದಲ್ಲಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ, ಹೊಂಗಿರಣ ಶಿವಮೊಗ್ಗ ಹಾಗೂ ಸಿದ್ದೋಜಿ ರಾವ್ ಗಂಗಾಬಾಯಿ ಫೌಂಡೇಶನ್ ಶಿವಮೊಗ್ಗ ಸಂಯುಕ್ತ ಆಶ್ರಯದಲ್ಲಿ 21 ದಿನದ ಕುಣಿಯೋಣ ಬಾರಾ 2025 ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಮೊಬೈಲ್, ಕಂಪ್ಯೂಟರ್‌ಗಳಿಗೆ ದಾಸರಾಗುತ್ತಿದ್ದು, ಸ್ವಂತಿಕೆ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಶಿಬಿರಗಳ ಮುಖಾಂತರ ರಂಗ ಕಲೆಗಳು, ಕ್ರೀಡೆ, ನಾಟಕ, ಅಭಿನಯ, ನೃತ್ಯ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
India Scouts and Guides ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಡಾ. ನಾಗೇಂದ್ರ ಹೊನ್ನಾಳಿ ಮಾತನಾಡಿ, ಮಕ್ಕಳಿಗೆ ಹೊಸ ಹೊಸ ಚಟುವಟಿಕೆಗಳನ್ನು ಕಲಿಯಲು ಸೃಜನಶೀಲತೆಯನ್ನು ಮತ್ತು ಕ್ರಿಯಾತ್ಮಕ ಆಲೋಚನೆಗಳನ್ನ ಬೆಳೆಸಿಕೊಳ್ಳಲು ಇಂತಹ ಶಿಬಿರಗಳು ಫಲಕಾರಿಯಾಗುತ್ತವೆ. ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಈಗಾಗಲೇ ಪ್ರಪಂಚಾದ್ಯಂತ ಮಕ್ಕಳಲ್ಲಿ ಸೇವಾ ಮನೋಭಾವನೆ ಹಾಗೂ ವ್ಯಕ್ತಿತ್ವ ನಿರ್ಮಾಣ ಮಾಡುವುದರ ಜೊತೆಗೆ ಶಿಸ್ತು ಹಾಗೂ ಸಂಯುಮವನ್ನ ಕಲಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದು ಹೇಳಿದರು.
ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಸ್ಕೌಟ್ ಆಯುಕ್ತ ಎಸ್.ಜಿ.ಆನಂದ್ ಮಾತನಾಡಿ, ರಾಜ್ಯ ಘಟಕದ ಆದೇಶದ ಮೇರೆಗೆ ಇಂತಹ ಬೇಸಿಗೆ ಶಿಬಿರಗಳನ್ನು ಆಯೋಜಿಸುವುದರ ಮುಖಾಂತರ ಮಕ್ಕಳಲ್ಲಿ ಧನಾತ್ಮಕ ಚಟುವಟಿಕೆಗಳನ್ನು ಸಹ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಸ್ಥಾನಿಕ ಆಯುಕ್ತ ಜಿ..ವಿಜಯಕುಮಾರ್ ಮಾತನಾಡಿ, ಹೊಂಗಿರಣ ಸಂಸ್ಥೆ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ನಾಟಕಗಳು ಹಾಗೂ ಹಲವಾರು ಕಲೆಗಳ ಮುಖಾಂತರ ಸಾಕಷ್ಟು ಜನ ಪ್ರತಿಭೆಗಳಿಗೆ ಅವಕಾಶ ನೀಡಿದೆ ಎಂದರು.
ಶ್ರೀ ಸಿದ್ದೋಜಿ ರಾವ್ ಗಂಗಾಬಾಯಿ ಪೌಂಡೇಷನ್ ವತಿಯಿಂದ ಹಲವಾರು ಸಹಕಾರಗಳನ್ನು ನೀಡುವುದರ ಮುಖಾಂತರ ಇಂತಹ ಶಿಬಿರಗಳನ್ನು ಸಚಿನ್ ಅವರು ಪ್ರೋತ್ಸಾಹಿಸುತ್ತಿರುವುದು ಅಭಿನಂದನಾರ್ಹ ಎಂದರು. ರಂಗಭೂಮಿ ಕಲಾವಿದ ಸಾಸ್ವೆಹಳ್ಳಿ ಸತೀಶ್, ಹೊಂಗಿರಣ ಕಲಾವಿದ ಚಂದ್ರಶೇಖರ್ ಗೋಣಿಗೆರೆ, ಕಿರುತೆರೆ ಕಲಾವಿದ ಚಂದ್ರಶೇಖರ್ ಶಾಸ್ತ್ರಿ ಹಾಗೂ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಪದಾಧಿಕಾರಿಗಳು, ಹೊಂಗಿರಣ ತಂಡದ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.

MESCOM ಏಪ್ರಿಲ್ 19 ಆಲ್ಕೊಳ ಫೀಡರ್ ಎ.ಎಫ್. 3 & 5 ರ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-3 ಮತ್ತು ಎ.ಎಫ್.-5ರ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.19 ರಂದು ಬೆಳಗ್ಗೆ 09-00 ರಿಂದ ಸಂಜೆ 05.00ರವರೆಗೆ ಗಾಡಿಕೊಪ್ಪ, ಪೊಲೀಸ್ ಲೇಔಟ್, ಅಮೃತ ಲೇಔಟ್, ಗುಡ್‌ಲಕ್ ಸರ್ಕಲ್, ಎಸ್.ವಿ.ಬಡಾವಣೆ ಎ ರಿಂದ ಎಫ್ ಬ್ಲಾಕ್, ಶಾರದ ಅಂಧರ ಶಾಲೆ, ಆಲ್ ಹರೀಮ್ ಲೇಔಟ್, ರಾಮಕೃಷ್ಣ ಶಾಲೆಯ ಹತ್ತಿರ, ಮಹಿಳಾ ಪಾಲಿಟೆಕ್ನಿಕ್ ಮತ್ತು ಸ್ವಿಮಿಂಗ್ ಪೂಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Swachh Bharat Mission ಸ್ವಚ್ಛ್ ಭಾರತ್ ಅಭಿಯಾನದಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅರ್ಜಿ ಆಹ್ವಾನ

0

Swachh Bharat Mission ಭಾರತ್ ಮಿಷನ್(ನಗರ) 2.0 ಅಡಿಯಲ್ಲಿ ವೈಯಕ್ತಿಕ ಗೃಹ ಬಳಕೆಯ ಶೌಚಾಲಯ ನಿರ್ಮಾಣ ಮಾಡಲು ಫಲಾನುಭವಿ ಆಯ್ಕೆಗೆ ಶಿರಾಳಕೊಪ್ಪ ಪುರಸಭೆಯು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು ಪಾನ್ ಕಾರ್ಡ್/ವೋಟರ್ ಐಡಿ/ ಪಾಸ್‌ಪೋರ್ಟ್ ಪ್ರತಿ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಎಪ್ರಿಲ್ 30 ರ ಸಂಜೆ 5.30 ಗಂಟೆಯೊಳಗೆ ಪುರಸಭೆ ಕಚೇರಿಯ ಆರೋಗ್ಯ ವಿಭಾಗವನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದು.
ಹಿಂದಿನ ಯಾವುದೇ ಯೋಜನೆ ಅಡಿಯಲ್ಲಿ ಒಂದು ಕುಟುಂಬವು ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಹಣವನ್ನು ಪಡೆದಿದ್ದರೆ, ಅದೇ ಕುಟುಂಬವು ಶೌಚಾಲಯಗಳಿಗೆಂದು ಮತ್ತೊಮ್ಮೆ ಹಣವನ್ನು ಪಡೆಯಲು ಅರ್ಹವಾಗಿರುವುದಿಲ್ಲ ಎಂದು ಶಿರಾಳಕೊಪ್ಪ ಪುರಸಭೆ ಅಧ್ಯಕ್ಷರು ತಿಳಿಸಿದ್ದಾರೆ.

Smart Cards to Labourers ಗುರುತಿಸಲಾದ 91 ವರ್ಗಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಿಕೆ, ಹಿಂದುಳಿದ ವರ್ಗಗಳ ಇಲಾಖೆ ಪ್ರಕಟಣೆ

0

Smart Cards to Labourers ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಪ್ರಾರಂಭಿಕವಾಗಿ 26 ವರ್ಗಗಳ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲಾಗುತ್ತಿತ್ತು.

ಹೊಸದಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1,2ಎ, ಮತ್ತು 3ಬಿ ಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ 38 ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ 27 ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟಾರೆ 91 ವರ್ಗಗಳ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿ ಸೌಲಭ್ಯಗಳನ್ನೊಳಗೊಂಡ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದ್ದು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ನೋಂದಣಿಗೆ ಅರ್ಹ ಕಾರ್ಮಿಕರಲ್ಲಿ ಪ್ರಾರಂಭಿಕವಾಗಿ ಗುರುತಿಸಲಾದ 26 ವರ್ಗಗಳ ಅಸಂಘಟಿತ ಕಾರ್ಮಿಕರ ಪಟ್ಟಿ ಹಮಾಲರು, ಟೈಲರ್‌ಗಳು, ಗೃಹ ಕಾರ್ಮಿಕರು, ಅಗಸರು, ಚಿಂದಿ ಆಯುವವರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೊಟೇಲ್ ಕಾರ್ಮಿಕರು, ಫೋಟೋಗ್ರಾಫರ್‌ಗಳು, ಸ್ವತಂತ್ರ ಲೇಖನ ಬರಹಗಾರರು, ಬೀಡಿ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕರು, ಅಲೆಮಾರಿ ಪಂಗಡದ ಕಾರ್ಮಿಕರು, ಹಗ್ಗ ಸಿದ್ಧಪಡಿಸುವ (ಬೈಜಂತ್ರಿ)ಕಾರ್ಮಿಕರು, ಉಪ್ಪನ್ನು ತಯಾರಿಸುವ ಉಪ್ಪಾರರು, ಬಿದಿರು ವೃತ್ತಿಯಲ್ಲಿರುವ ಮೇದಾರರು, ಚಪ್ಪಲಿ ತಯಾರಿಕೆ ಮತ್ತು ರಿಪೇರಿ ಮಾಡುವ ಕಾರ್ಮಿಕರು, ಕೇಬಲ್ ಕಾರ್ಮಿಕರು, ಕಲ್ಯಾಣ ಮಂಟಪ/ ಸಬಾ ಭವನ/ ಟೆಂಟ್/ ಪೆಂಡಾಲ್‌ಗಳ ಕಾರ್ಮಿಕರು, ಗಾದಿ, ಹಾಸಿಗೆ ಮತ್ತು ದಿಂಬು ತಯಾರಿಕಾ ಕಾರ್ಮಿಕರು (ಪಿಂಜಾರರು/ ನದಾಫರು)
ಹೊಸದಾಗಿ ಸೇರ್ಪಡೆ ಮಾಡಲಾಗಿರುವ 65 ಅಸಂಘಟಿತ ವರ್ಗಗಳು; ಹಿಂದುಳಿದ ವರ್ಗಗಳ ಪ್ರವರ್ಗ-1,2ಎ, 3ಎ, ಮತ್ತು 3ಬಿ ಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರು; ಬಡಗಿ/ಮರದ ಕೆತ್ತನೆ ಕೆಲಸ, ಉಣ್ಣೆ ಮತ್ತು ಕಂಬಳಿ ನೇಯ್ಗೆ ಹಾಗೂ ಕಂಬಳಿ ತಯಾರಕೆ, ಅಡಿಕೆ ಹಾಳೆಯಿಂದ ತಟ್ಟೆತಯಾರಿಕೆ, ಸಿಲ್ಕ್ ರೀಲಿಂಗ್ ಮತ್ತು ಸಿಲ್ಕ್ ಟ್ವಿಸ್ಟಿಂಗ್ ಕೆಲಸ, ಪೊರಕೆ ಕಡ್ಡಿ ತಯಾರಿಕೆ, ಸುಣ್ಣ ಸುಡುವುದು, ವಾಲ ಊದುವುದು, ದನಗಾಹಿ ವೃತ್ತಿ, ಹೈನುಗಾರಿಕೆ (ಗೌಳಿ ವೃತ್ತಿ), ಬಳೆ ವ್ಯಾಪಾರ /ಮೇಣದ ಬತ್ತಿ ತಯಾರಿಕೆ, ಕಂಚು ಕೆಲಸ, ನಾರಿನಿಂದ ವಿವಿಧ ಉತ್ಪನ್ನ ತಯಾರಿಕೆ, ಬೆತ್ತದ ಕೆಲಸ (ರಟ್ಟನ್)ಆಟಿಕೆ/ ಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ, ಚರ್ಮದ ವಸ್ತುಗಳ ತಯಾರಿಕೆ, ಅಗರಬತ್ತಿ ತಯಾರಿಕೆ, ಕಾಯರ್ ಫೈಬರ್ ತಯಾರಿಕೆ, ಸ್ಮಶಾನ ಕಾರ್ಮಿಕರು, ವಿಗ್ರಹ / ಕಲ್ಲು ಕೆತ್ತನೆ ಕೆಲಸ, ಮೀನುಗಾರಿಕೆ, ನಾಟಿ ಔಚಧಿ ತಯಾರಿಕೆ, ಬಣ್ಣ ಶೃಂಗಾರ (ಬ್ಯೂಟಿ ಪಾರ್ಲರ್)ಮಾಡುವ ವೃತ್ತಿ, ಶೀಟ್ ಮೆಟಲ್ ವೃತ್ತಿ, ಬೈಸಿಕಲ್ ರಿಪೇರಿ, ಬಣ್ಣಗಾರಿಕೆ, ಮುದ್ರಣಗಾರಿಕೆ ಮತ್ತು ಹಚ್ಚೆ ಹಾಕುವುದು, ಮ್ಯಾಟ್ ತಯಾರಿಕೆ, ಗಾಡಿ/ ರಥ ತಯಾರಿಕೆ, ಗ್ಲಾಸ್ ಬೀಡ್ಸ್ ತಯಾರಿಕೆ, ಮೆಟಲ್ ಕ್ರಾಫ್ಟ್, ಟಿನ್ ವಸ್ತುಗಳ ತಯಾರಿಕೆ, ಜೇನು ಸಾಕಾಣಿಕೆ, ನಿಟ್ಟಿಂಗ್ ಕೆಲಸ, ಗಾಣದ ಕೆಲಸ, ಮೆಷನರಿ ಕೆಲಸ, ಹೂವು ಕಟ್ಟುವ ವೃತ್ತಿ, ಹೊಸೈರಿ ವಸ್ತುಗಳ ತಯಾರಿಕೆ, ಪಾತ್ರೆಗಳಿಗೆ ಕಲಾಯಿ ಹಾಕುವುದು, ವಾದ್ಯವೃಂದ ವೃತ್ತಿ, ವೆಲ್ಡಿಂಗ್ ಕೆಲಸ, ಕುರಿ ಸಾಕಾಣಿಕೆ.

ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ ಕಾರ್ಮಿಕರು ; ಧಾರ್ಮಿಕ ಭಿಕ್ಷುಕ ವೃತ್ತಿ, ಭವಿಷ್ಯ ನುಡಿಯುವುದು, ಲಾವಣಿ ಪದಗಳನ್ನು ಹಾಡುವುದು, ಹವಾಮಾನ ಪ್ರವಾಧಿಗಳು, ಹಳ್ಳಿಗಾಡಿನ ಸಾಹಸ ಕಲೆಗಳ ಪ್ರದರ್ಶನ, ಗುಂಡು ಎಸೆಯುವುದು, ಲಾಗ ಹಾಕುವುದು, ಎತ್ತಿನ ಬಂಡಿ ತಿರುಗಿಸುವುದು ಇತರೆ ಕಸರತ್ತುಗಳ ವೃತ್ತಿ, ದೇವಸ್ಥಾನಗಳಲ್ಲಿ ನರ್ತಿಸುವುದು, ಭಿಕ್ಷಾಟನೆ, ಅಂಭಾದೇವಿಯ ಆರಾಧಕರು, ಗೋಂಧಳಿ ನೃತ್ಯ ಮಾಡುವುದು, ಜ್ಯೋತಿಷ್ಯ ಗಿಣಿ ಶಾಸ್ತ್ರ, ಹಸ್ತ ಮುದ್ರಿಕೆ ಶಾಸ್ತ್ರ, ಬುಡಬುಡಕಿ ಭವಿಷ್ಯ, ಕಣಿ ಹೇಳುವುದು, ದೇವರ ಕಥೆಗಳು ಹಾಗೂ ಪುರಾಣದ ಕಥೆಗಳನ್ನು ಹೇಳುವ ಹಾಗೂ ಬೊಂಬೆ ಪ್ರದರ್ಶನ, ಮದುವೆ ಮತ್ತು ಹಬ್ಬದ ದಿನಗಳಂದು ಡೋಲು ಬಡಿದು ಹಾಡು ಹೇಳುವುದು, ಅರಿಶಿಣ, ಕುಂಕುಮ ಮಾರಾಟ, ಮಸಾಲೆ ದಿನಸಿ ಮಾರಾಟ, ದೊಂಬರಾಟ, ವಿದೂಷಕ, ಮೋಡಿಗಾರರು, ಕಣ್ಣು ಕಟ್ಟು ವಿದ್ಯೆ, ಗೊಂದಲು ಹಾಕುವುದು (ಪೂಜಾ ವಿಧಾನ), ಗ್ರಾಮ ಚರಿತ್ರೆಗಳ ಪಾರುಪತ್ತೆಗಾರರು, ತಂಬೂರು ಮತ್ತು ಹಾರ್ಮೋನಿಯಂ, ಸಹಾಯದಿಂದ ಪದಗಳನ್ನು ಕಟ್ಟಿ ಹಾಡುವುದು, ಬೊಂಬೆ, ಹೊದಿಕೆ, ಬಾಚಣಿಕೆ ತಯಾರಿಕೆ, ಹಚ್ಚೆ ಹಾಕುವುದು, ಎತ್ತನ್ನು ಹಿಡಿದುಕೊಂಡು ಊರಿಂದ ಊರಿಗೆ ಹೋಗಿ ಭಿಕ್ಷೆ ಬೇಡುವುದು, ಹಠಯೋಗ, ಧರ್ಮ ಪ್ರಚಾರ, ಕಾಲಭೈರವನ ಆರಾಧನೆ, ಕತ್ತಿ ತಯಾರಿಕೆ, ಔಷಧಿ ಮಾರಾಟಗಾರರು, ಭಿಕಾರಿ ವೈದ್ಯ ವೃತ್ತಿ ಗಾರುಡಿಗರು, ಬೀಸುವ ಕಲ್ಲು ಮತ್ತು ವೀಸಣಿಕೆ ಮಾರಾಟ, ಮರದ ಸೌಟುಗಳ ತಯಾರಿಕೆ, ಸೂಜಿ, ದಾರ, ಒಳಕಲ್ಲು ಮಾರಾಟ, ಡ್ರಂ ಬಾರಿಸುವುದು ಮತ್ತು ಕೊಳಲು ನುಡಿಸುವುದು, ಕಬ್ಬಿಣ, ತಾಮ್ರದ ತಂತಿಗಳನ್ನು ಉಪಯೋಗಿಸಿ ವಿಧವಿಧವಾದ ಬಳೆ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು, ತೊಗಲು ಬೊಂಬೆ ಆಡಿಸುವುದು, ಮರಗವನ ಆಡಿಸುವುದು, ಊರುರು ಅಲೆದು ಬಯಲಾಟಗಳ ಪ್ರದರ್ಶನ, ತಾಮ್ರ, ಬೆಳ್ಳಿ, ಕಲ್ಲು, ಹಿತ್ತಾಳೆಗಳಿಂದ ಆಭರಣಗಳನ್ನು ತಯಾರಿಸಿ ಮಾರಾಟ ಮಾಡುವುದು, ಅಲೆಮಾರಿ ಪಶುಪಾಲಕರು, ಕೋಳಿಮೊಟ್ಟೆ/ ಮೀನು ಮಾರಾಟ.

ದೊರಕುವ ಸೌಲಭ್ಯಗಳು :

ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚ :- ನೋಂದಾಯಿತ ಫಲಾನುಭವಿಯು ವಯೋಸಹಜ/ ಖಾಯಿಲೆ/ಅಕಾಲಿಕ ಅಥವಾ ಇನ್ನಿತರೆ ಕಾರಣಗಳಿಂದ ಮರಣ ಹೊಂದಿದಲ್ಲಿ ಫಲಾನುಭವಿಯ ಕುಟುಂಬದವರಿಗೆ ಅಂತ್ಯಕ್ರಿಯೆ ವೆಚ್ಚಕ್ಕಾಗಿ ರೂ.10,000/- ಗಳ ಧನಸಹಾಯ.
ನೋಂದಣಿಗೆ ಅರ್ಹತೆ:: ಈ ಯೋಜನೆಯು ಕರ್ನಾಟಕ ರಾಜ್ಯದ ನಿವಾಸಿಗಳಿಗೆ ಮಾತ್ರ ಅನ್ವಯ. 18 ರಿಂದ 60 ವಯೋಮಾನದವರು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಪಿ.ಎಫ್. ಹಾಗೂ ಇ.ಎಸ್.ಐ ಸೌಲಭ್ಯ ಹೊಂದಿರಬಾರದು.
ಅವಶ್ಯಕ ದಾಖಲೆಗಳು: ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಬಾವಚಿತ್ರ. ಆಧಾರ್ ಸಂಖ್ಯೆ, ಪಡಿತರ ಚೀಟಿ (ಲಭ್ಯವಿದ್ದಲ್ಲಿ), ಬ್ಯಾಂಕ್ ಪಾಸ್ ಪುಸ್ತಕ.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿ/ಕಾರ್ಮಿಕ ನಿರೀಕ್ಷಕರ ಕಛೇರಿ, ಶಿವಮೊಗ್ಗ ಉಪವಿಭಾಗ, ಶಿವಮೊಗ್ಗ ಕಛೇರಿಯನ್ನು ಸಂಪರ್ಕಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ.ಪಿ ರವರು ತಿಳಿಸಿದ್ದಾರೆ.

ಅಪಘಾತ ಪರಿಹಾರ ಸೌಲಭ್ಯ: –
1) ಅಪಘಾತದಿಂದ ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ ರೂ. 1.00 ಲಕ್ಷ ಪರಿಹಾರ.
2) ಅಪಘಾತದಿಂದ ಸಂಪೂರ್ಣ/ ಭಾಗಶಃ ದುರ್ಬಲತೆ ಹೊಂದಿದಲ್ಲಿ ರೂ. 1.00 ಲಕ್ಷಗಳವರೆಗೆ
ಪರಿಹಾರ.
3) ಆಸ್ಪತ್ರೆ ವೆಚ್ಚ ಮರುಪಾವತಿ ರೂ.50,000/- ಗಳ ವರೆಗೆ( ಅಪಘಾತ ಪ್ರಕರಣಗಳಲ್ಲಿ ಮಾತ್ರ).

Bharat Tours and Guides ಶೇ.100 ಗಣತಿ ಗುರಿ ಸಾಧಸಿದ ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಗೆ ಅಭಿನಂದನಾ ಪತ್ರ

0

ಶಿವಮೊಗ್ಗ ಜಿಲ್ಲಾ ಸೈಟ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಆಯುಕ್ತ ಶಕುಂತಲಾ ಚಂದ್ರಶೇಖರ್ ಅವರು ಸ್ಥಳೀಯ ಸಂಸ್ಥೆ ಕಾರ್ಯದರ್ಶಿಗಳಿಗೆ ಅಭಿನಂದನಾ ಪತ್ರ ನೀಡಿ ಅಭಿನಂದಿಸಿದರು.

ಭಾರತ್ ಸೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ಜಿಲ್ಲಾ ಸಂಸ್ಥೆ ಶಿವಮೊಗ್ಗ ಆಶ್ರಯದಲ್ಲಿ ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಸಹಾಯಕ ಜಿಲ್ಲಾ ಆಯುಕ್ತರುಗಳು ಹಾಗೂ ತರಬೇತಿ ತಂಡದ ನಾಯಕರುಗಳ ಒಂದು ದಿನದ ಕಾರ್ಯಾಗಾರ ನಡೆಯಿತು.

Bharat Tours and Guides ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಅವರು ಶೇ. 100 ರಷ್ಟು ಗಣತಿ ಗುರಿ ಸಾಧಿಸಿದ ಜಿಲ್ಲಾ ಸಂಸ್ಥೆಗೆ ಸಹಕರಿಸಿದ ಸ್ಥಳೀಯ ಸಂಸ್ಥೆ ಕಾರ್ಯದರ್ಶಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು.

ಜಿಲ್ಲಾ ಆಯುಕ್ತರು (ಸೈಟ್ ) ಎಸ್.ಜಿ.ಆನಂದ್ , ಜಿಲ್ಲಾ ಆಯುಕ್ತರು (ರೋವರ್) ಕೆ.ರವಿ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ.ಕೆ.ವಿ., ಜಿಲ್ಲಾ ತರಬೇತಿ ಆಯುಕ್ತರಾದ ಎಚ್.ಶಿವಶಂಕರಪ್ಪ, ಗೀತಾ ಚಿಕ್ಕಮಠ, ಕೇಂದ್ರ ಸ್ಥಾನಿಕ ಆಯುಕ್ತರಾದ ಘನಶ್ಯಾಮ್ ಗಿರಿಮಾಜಿ, ಅಶ್ವಿನಿ ದೊರೈ, ಜಿಲ್ಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಲಕ್ಷ್ಮೀ ರವಿ ಉಪಸ್ಥಿತರಿದ್ದರು. ಜಿಲ್ಲೆಯಾದ್ಯಂತ ಸ್ಕೌಟ್ – ಗೈಡ್ ಚಳುವಳಿಯನ್ನು ಬಲಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
.