Wednesday, March 4, 2026
Wednesday, March 4, 2026
Home Blog Page 337

VISL Shivamogga ಡಾ.ಅಂಬೇಡ್ಕತ್ ಜೀವನದಿಂದ ಕಲಿಯಬೇಕಾದ ಅಂಶ ಬಹಳ ಇವೆ- ಬಿ.ಎಲ್.ಚಂದ್ವಾನಿ

0

VISL Shivamogga ವಿಐಎಸ್ ಎಲ್ ವತಿಯಿಂದ ಡಾ ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಎಲ್. ಸುಂದರವಡಿವೇಲು, ಮಹಾಪ್ರಬಂಧಕರು (ನಿರ್ವಹಣೆ ಮತ್ತು ಐಇಡಿ ) ಮತ್ತು ವಿಐಎಸ್ ಎಲ್ ಕಾರ್ಮಿಕರ ಸಮನ್ವಯಾಧಿಕಾರಿ, ಶ್ರೀ ಜೆ. ಜಗದೀಶ, ಅಧ್ಯಕ್ಷರು, ವಿಐಎಸ್ ಎಲ್ ಕಾರ್ಮಿಕರ ಸಂಘ, ಶ್ರೀ ಪಾರ್ಥಸಾರಥಿ ಮಿಶ್ರ, ಅಧ್ಯಕ್ಷರು , ಅಧಿಕಾರಿಗಳ ಸಂಘ, ಶ್ರೀ ಎಸ್.ಸಿ.ಓ. ಶ್ರೀನಿವಾಸ್, ಅಧ್ಯಕ್ಷರು, ವಿಐಎಸ್ ಎಲ್ ಅಸೋಸಿಯೇಷನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಮರ್ಪಿಸಿದರು.

ಶ್ರೀ ಎಲ್. ಸುಂದರವಡಿವೇಲು, ಮಹಾಪ್ರಬಂಧಕರು (ನಿರ್ವಹಣೆ ಮತ್ತು ಐಇಡಿ ) ಮತ್ತು ವಿಐಎಸ್ ಎಲ್ ಕಾರ್ಮಿಕರ ಸಮನ್ವಯಾಧಿಕಾರಿ ಸ್ವಾಗತಿಸಿದರು ಮತ್ತು ಶ್ರೀಮತಿ ಕೆ.ಎಸ್. ಶೋಭ, ಉಪಪ್ರಬಂಧಕರು (ಮಾನವ ಸಂಪನ್ಮೂಲ) ವಂದನಾರ್ಪನೆಗೈದರು.

ಶ್ರೀ ಬಿ.ಎಲ್. ಚಂದ್ವಾನಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ಅವರ ಜೀವನದಿಂದ ಸಂಕ್ಷಿಪ್ತ ಕಲಿಕಾ ಅಂಶಗಳನ್ನು ನೀಡಿದರು ಮತ್ತು ವಿಐಎಸ್ ಎಲ್ ನಲ್ಲಿ ನೌಕರರಿಗೆ ವಿಸ್ತರಿಸಿದ ಕಲ್ಯಾಣ ಕ್ರಮಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ನವೀನ್ ರಾಹುಲ್, ಹಿರಿಯ ಪ್ರಬಂಧಕರು (ನಗರಾಡಳಿತ), ಶ್ರೀ ಎಸ್.ಸಿ.ಓ. ಶ್ರೀನಿವಾಸ್ ಶ್ರೀ ಜೆ. ಜಗದೀಶ ಮತ್ತು ಶ್ರೀ ಪಾರ್ಥಸಾರಥಿ ಮಿಶ್ರ ಮಾತನಾಡಿದರು.

VISL Shivamogga ಶ್ರೀ ಎಮ್.ಪಿ. ನಾಗೇಂದ್ರಪ್ಪ, ಶ್ರೀ ಜಗದೀಶ್ ಬಡಿಗೇರ್, ಶ್ರೀ ಕೊರಮಾರ ಶ್ರೀ ಚಂದ್ರಕಾಂತ, ಕು.ಎನ್.ಪ್ರತೀಕ, ಕು. ಸೋನಾಕ್ಷಿ.ಸಿ.ಕೆ, ಮಾ.ನಿತಿನ್.ಸಿ.ಕೆ, ಮತ್ತು ಕು.ಜಾಹ್ನವಿ ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

2024-25 ನೇ ಸಾಲಿನಲ್ಲಿ ವಿಐಎಸ್ ಎಲ್ ನಲ್ಲಿ ಉನ್ನತ ಸಾಧನೆಗೈದ ವಿಐಎಸ್ ಎಲ್ ನೌಕರರಿಗೆ ಮತ್ತು ಶೈಕ್ಷಣಿಕ ಸಾಧನೆಗೈದ ಅವರ ಮಕ್ಕಳಿಗೆ ಹಾಗೂ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ನೀಡಲಾಯಿತು.

ಶ್ರೀಮತಿ ಗಿರಿಜಾ, ಸುರಕ್ಷತಾ ಇಲಾಖೆ ಕಾರ್ಯಕ್ರಮವನ್ನು ನಿರೂಪಿಸಿದರು.ವಿಐಎಸ್ ಎಲ್ ಮಾನವಸಂಪನ್ಮೂಲ ಇಲಾಖೆ ಕಾರ್ಯಕ್ರಮವನ್ನು ಆಯೋಜಿಸಿತ್ತು.ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಯ ಅಂಗವಾಗಿ 500 ಹೈಬ್ರೀಡ್ ನುಗ್ಗೆ, ಪಪಾಯ, ತುಳಸಿ ಮತ್ತು ಹೊಂಗೆ ಸಸಿಗಳನ್ನ ಸಾರ್ವಜನಿಕರಿಗೆ ವಿಐಎಸ್‌ಎಲ್ ಮುಖ್ಯ ದ್ವಾರದ ಬಳಿ ಮಧ್ಯಾನ್ಹ 2 ಘಂಟೆಯಿಂದ ಸಂಜೆ 5 ಘಂಟೆವರೆಗೆ ಉಚಿತವಾಗಿ ವಿತರಿಸಲಾಯಿತು.

Sahyadri Narayan Multispeciality Hospital ಏಪ್ರಿಲ್ 17 ಎನ್ ಹೆಚ್ ಆಸ್ಪತ್ರೆಯಿಂದ ” ಸರ್ವೈವರ್ಸ್ ಕ್ಲಿನಿಕ್” ಕ್ಯಾನ್ಸರ್ ವಾಸಿಯಾದವರಿಗಾಗಿ ಸಮಾಲೋಚನೆ ಚಟುವಟಿಕೆ

0

Sahyadri Narayan Multispeciality Hospital ಶಿವಮೊಗ್ಗ, ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು, ಕ್ಯಾನ್ಸರ್‌ನಿಂದ ಗುಣಮುಖರಾದವರಿಗಾಗಿ (ಸರ್ವೈವರ್ಸ್) ತನ್ನ ಮಾಸಿಕ ‘ಸರ್ವೈವರ್ಸ್ ಕ್ಲಿನಿಕ್ ‘ ಅನ್ನು ಏಪ್ರಿಲ್ 17 ರಂದು ಮಧ್ಯಾಹ್ನ 2:00 ರಿಂದ 4:00 ಗಂಟೆಯವರೆಗೆ ಆಸ್ಪತ್ರೆಯ ಹರಕೆರೆ ಆವರಣದಲ್ಲಿ ಆಯೋಜಿಸಿದೆ.

ಈ ವಿಶೇಷ ಸಮಾಲೋಚನಾ ಕಾರ್ಯಕ್ರಮದಲ್ಲಿ, ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಭಟ್ ಕೆ. ಅವರು ಮಧ್ಯಾಹ್ನ 2:00 ಗಂಟೆಗೆ “ಕ್ಯಾನ್ಸರ್ ನಂತರದ ನೆಮ್ಮದಿ ಮತ್ತು ಸಂತಸ: ಭಾವನಾತ್ಮಕ ಏರಿಳಿತಗಳ ನಿರ್ವಹಣೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ವಿಭಾಗದ ವೈದ್ಯೆ ಡಾ. ಅಪರ್ಣಾ ಶ್ರೀವತ್ಸ ಅವರು ಕ್ಯಾನ್ಸರ್ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವವರಿಗೆ ವೈದ್ಯಕೀಯ ಸಲಹೆ ಮತ್ತು ಸಮಾಲೋಚನೆ ನಡೆಸಿಕೊಡಲಿದ್ದಾರೆ.

ಈ ಕ್ಲಿನಿಕ್‌ನಲ್ಲಿ ಭಾಗವಹಿಸಲು ಆಸಕ್ತರು ಎನ್‌ಎಚ್ ಕೇರ್ ಆ್ಯಪ್ (NH Care App) ಮೂಲಕ ಅಥವಾ 18003090309 ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

Sahyadri Narayan Multispeciality Hospital ಕಾರ್ಯಕ್ರಮವನ್ನು ಆಸ್ಪತ್ರೆಯ ‘ಕ್ಯಾನ್ಸರ್ ಗೆ ಆನ್ಸರ್’ (Cancer Ge Answer) ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು, ಇದರಿಂದ ಭಾಗವಹಿಸಲು ಸಾಧ್ಯವಾಗದವರೂ ವೀಕ್ಷಿಸಬಹುದು.

Dr. B.R. Ambedkar Jayanti ಅಗ್ನಿಶಾಮಕದಳದ ಸಿಬ್ಬಂದಿಗೆ ಸ್ವಯಂರಕ್ಷಣೆ & ಅವಘಡಗಳೊಂದಿಗೆ ಸೆಣಸಿ ಜೀವ ಆಸ್ತಿ ರಕ್ಷಣೆಯ ಹೊಣೆಯಿರುತ್ತದೆ-ಕೆ.ಮಹಾಬಲೇಶ್ವರ

0

Dr. B.R. Ambedkar Jayanti ಅಗ್ನಿ ಅನಾಹುತ ಸಂಭವಿಸಿದಾಗ ಕ್ಷಣದಲ್ಲಿ ಧಾಮಿಸುವ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಸ್ವಯಂ ರಕ್ಷಣೆಯ ಜೊತೆ ಬೆಂಕಿಯೊಂದಿಗೆ ಹೋರಾಡಿ ಜನರ ಪ್ರಾಣ ಮತ್ತು ಆಸ್ತಿಯನ್ನು ಉಳಿಸುವ ಜವಾಬ್ದಾರಿ ಇರುತ್ತದೆ ಎಂದು ಅಗ್ನಿ ಶಾಮಕ ಠಾಣೆಯ ಠಾಣಾಧಿಕಾರಿ ಕೆ. ಮಹಾಬಲೇಶ್ವರ ಹೇಳಿದರು.
ಪಟ್ಟಣದ ಅಗ್ನಿ ಶಾಮಕ ಠಾಣೆಯಲ್ಲಿ ಹಮ್ಮಿಕೊಂಡ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಪ್ತಾಹ ದಿನಾಚರಣೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಅಗ್ನಿ ಶಾಮಕ ದಳದ ಹುತಾತ್ಮರ ದಿನಾಚರಣೆ ಮತ್ತು ನಿವೃತ್ತ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಗ್ನಿ ಅನಾಹುತಗಳು ಸಂಭವಿಸಿದಾಗ ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಸಪ್ತಾಹದ ಉದ್ದೇಶವಾಗಿದೆ. ಅವಘಡಗಳು ಸಂಭವಿಸಿದಾಗ ಎಚ್ಚೆತ್ತುಕೊಳ್ಳುವುದಕ್ಕಿಂತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಏ.೨೦ರವರೆಗೆ ಸಪ್ತಾಹವನ್ನು ಆಚರಿಸಲಾಗುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದ ಅವರು, ಪಟ್ಟಣದಲ್ಲಿ ಎರಡು ವಾಹನಗಳಿದ್ದು, ಒಂದು ವಾಹನ ಹಾಳಾಗಿದೆ ಮತ್ತೊಂದು ಹದಿನೈದು ವರ್ಷ ತುಂಬಿದ್ದು ಬಳಸುವಂತಿಲ್ಲ. ಆದ್ದರಿಂದ ಸಾರ್ವಜನಿಕರಿಗೆ ತತಕ್ಷಣಕ್ಕೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Dr. B.R. Ambedkar Jayanti ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಾಜು ಹಿರಿಯಾವಲಿ ಮಾತನಾಡಿ, ಅಗ್ನಿ ಅವಘಡ ಹಾಗೂ ಪ್ರವಾಹದಂತಹ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರನ್ನು ರಕ್ಷಿಸುತ್ತಾರೆ. ಅವರ ಸೇವೆ ಶ್ಲಾಘನೀಯವಾಗಿದೆ. ಅವರನ್ನು ಪ್ರತಿಯೊಬ್ಬರು ಗೌರವಿಸಬೇಕಿದೆ. ಪ್ರಸ್ತುತ ಪಟ್ಟಣದ ವಾಹನ ಸೌಲಭ್ಯ ಇಲ್ಲದಿರುವುದರಿಂದ ಶಿರಸಿ, ಸಾಗರ, ಸಿದ್ದಾಪುರದಿಂದ ವಾಹನಗಳನ್ನು ಕರೆಸಬೇಕಿದೆ ಎಂದ ಅವರು, ಉತ್ತಮ ಪರಿಸರ ಮತ್ತು ಸ್ವಚ್ಛತೆಯನ್ನು ಠಾಣೆಯ ಆವರಣದಲ್ಲಿ ಕಾಯ್ದುಕೊಂಡಿರುವುದು ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಗ್ನಿಶಾಮಕ ಠಾಣಾಧಿಕಾರಿಗಳಾದ ಜಿನ್ನಪ್ಪ, ಮಂಜುನಾಥ ರಾವ್ ಹಾಗೂ ನಿವೃತ್ತ ಪ್ರಮುಖ ಅಗ್ನಿಶಾಮಕ ಆನಂದ್ ಎಸ್. ಗೌಡರ್ ಅವರನ್ನು ಸನ್ಮಾನಿಸಲಾಯಿತು.
ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಕೆ.ಎಸ್. ರಮೇಶ್, ಸಿಬ್ಬಂದಿ ವಿ. ನಾಗರಾಜ್, ಮಹೇಶ್ ಮಡಿವಾಳ, ಎಂ.ಆರ್. ಮಂಜುನಾಥ, ಪ್ರಸನ್ನಕುಮಾರ್, ಕೆ.ಎನ್. ಪ್ರಶಾಂತ್, ಎಸ್.ವಿ. ವಿನಯ ಕುಮಾರ್, ಕೆ.ಎಂ. ಅರುಣ, ಎಚ್. ನಿರಂಜನ, ಅಜಯಕುಮಾರ್, ಕೆ.ವಿ. ಮಣಿಕಂಠ ಸೇರಿದಂತೆ ಇತರರಿದ್ದರು.

Shivamogga District Chamber of Commerce and Industry ಮಕ್ಕಳಲ್ಲಿನ ಕ್ರಿಯಾಶೀಲ & ಸೃಜನಶೀಲ ವ್ಯಕ್ತಿತ್ವ ವೃದ್ದಿಗೆ ಬೇಸಿಗೆ ಶಿಬಿರ ಸಹಕಾರಿ- ಸವಿತಾ ನಾಗಭೂಷಣ್

0

Shivamogga District Chamber of Commerce and Industry ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ. ಇಂತಹ ಶಿಬಿರಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಕ್ರಿಯಾಶೀಲ ಹಾಗೂ ಸೃಜನಶೀಲ ವ್ಯಕ್ತಿತ್ವ ವೃದ್ಧಿಸುತ್ತದೆ ಎಂದು ಕವಯತ್ರಿ ಸವಿತಾ ನಾಗಭೂಷಣ್ ಹೇಳಿದರು.

ಕಲಾವಿದ ಚನ್ನಕೇಶವ ಅವರ ನೆನಪಿನಾರ್ಥ ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಎಎಸ್‌ಕೆ ಚೆಲುವರಂಗ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿ, 10 ವರ್ಷಗಳಿಂದ ಎಎಸ್‌ಕೆ ಚೆಲುವರಂಗ ಸಂಸ್ಥೆಯು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, 11 ಉತ್ತಮ ಪ್ರಸಿದ್ಧ ನಾಟಕಗಳನ್ನು ಪ್ರಸ್ತುತಪಡಿಸಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಮಕ್ಕಳು ಹೊಸ ಹೊಸ ವಿಷಯಗಳನ್ನು ಕಲಿಯುವುದರ ಜತೆಯಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಮಾತನಾಡಿ, ಚೆಲುವರಂಗ ಬೇಸಿಗೆ ಶಿಬಿರಕ್ಕೆ ಕಲಾವಿದರಾದ ರಾಜೇಶ್ವರಿ ಕೊಡಗು, ಎಸ್.ಎಫ್.ಹುಸೇನಿ, ಸತೀಶ್ ಪುರಪ್ಪೆಮನೆ, ಲಕ್ಷ್ಮೀ ನಿವಾಸ ಧಾರವಾಹಿಯ ಚಂದ್ರಶೇಖರ ಶಾಸ್ತ್ರಿ, ಇನ್ನಿತರ ಪ್ರತಿಭಾನ್ವಿತ ಕಲಾವಿದರು ಭಾಗವಹಿಸಿ ಮಾರ್ಗದರ್ಶನ ನೀಡುವರು ಎಂದು ತಿಳಿಸಿದರು.

Shivamogga District Chamber of Commerce and Industry ಕಿರುತೆರೆ ಕಲಾವಿದ ಅಜಯ್ ನೀನಾಸಂ ಮಾತನಾಡಿ, ಶಿಬಿರದ ರೂಪುರೇಷೆ ಹಾಗೂ ಬೇಸಿಗೆ ಶಿಬಿರದ ಬಗ್ಗೆ ವಿವರಣೆ ನೀಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಇಂತಹ ಶಿಬಿರಗಳಲ್ಲಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹಾಕುವ ಜತೆಗೆ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು.
ಪ್ರಮುಖರಾದ ಗಣೇಶ್ ಬಿಳಗಿ, ತೇಜಶ್ರೀ ಹಾಗೂ ಎಎಸ್‌ಕೆ ಚೆಲುವರಂಗ ತಂಡದ ಕಲಾವಿದರ ಹಾಜರಿದ್ದರು.

Department of Social Welfare ಅರ್ಹತಾ ಪರೀಕ್ಷೆ ಮೂಲಕ 6 ನೇ ತರಗತಿಯ 35 ಸ್ಥಾನಗಳಿಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖಾ ಪ್ರಕಟಣೆ

0

Department of Social Welfare ಸಮಾಜ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ ಅರ್ಹತಾ ಪರೀಕ್ಷೆಯ ಮೂಲಕ 6ನೇ ತರಗತಿಯ 35 ಸ್ಥಾನಗಳಿಗೆ ದಾಖಲಿಸಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಅಂತರ್ಜಾಲ ತಾಣ htpps://swd.karnataka.gov.in ರಲ್ಲಿ ಅರ್ಜಿ ಸಲ್ಲಿಸಿ, ಅರ್ಜಿ ಹಾಗೂ ದಾಖಲೆಗಳನ್ನು ಉಪನಿರ್ದೇಶಕರು ಹಾಗೂ ಎಲ್ಲಾ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಮೇ 03 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Department of Social Welfare ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ದೂ.ಸಂ.: 08182-249241 ನ್ನು ಹಾಗೂ ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸುವುದು.

Chamber Of commerce Shivamogga ಪಿ.ಲಂಕೇಶ್ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರಿಗೆ ಜಿಲ್ಲಾ ವಾಣಿಜ್ಯ & ಕೈಗಾರಿಕಾ ಸಂಘದಿಂದ ಸನ್ಮಾನ

0

Chamber Of commerce Shivamogga ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಸಾಧಕ ಪತ್ರಕರ್ತರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ಜೀವಮಾನ ಸಾಧನೆಗಾಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಪಿ.ಲಂಕೇಶ್ ಪ್ರಶಸ್ತಿಯನ್ನು ಕನ್ನಡಪ್ರಭ ಪ್ರಧಾನ ವರದಿಗಾರ ಗೋಪಾಲ್ ಯಡಗೆರೆ, ಶಿವಮೊಗ್ಗ ಟೈಮ್ಸ್ ಸಂಪಾದಕ ಎಸ್.ಚಂದ್ರಕಾಂತ್, ಸಂಯುಕ್ತ ಕರ್ನಾಟಕದ ಪತ್ರಕರ್ತ ಕೆ.ತಿಮ್ಮಪ್ಪ ಅವರಿಗೆ ನೀಡಿ ಅಭಿನಂದಿಸಲಾಯಿತು.

ನೆಲದ ಧ್ವನಿ ಡಿಜಿಟಲ್ ಮೀಡಿಯಾ ಸಂಪಾದಕ ಶಿವಾನಂದ ಕರ್ಕಿ ಹಾಗೂ ಸೊರಬ ಕನ್ನಡಪ್ರಭ ವರದಿಗಾರ ಎಚ್.ಕೆ.ಎಸ್.ಸ್ವಾಮಿ ಅವರಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ ನೀಡಿ ಗೌರವಿಸಿತು.

ಐವರು ಪ್ರಶಸ್ತಿ ಪುರಸ್ಕೃತರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ನೇತೃತ್ವದಲ್ಲಿ ಅಭಿನಂದಿಸಲಾಯಿತು.

Chamber Of commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ವಿ.ಕೆ.ಜೈನ್, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಜಿ.ಬೆನಕಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹಾಜರಿದ್ದರು.

Doddapete Police Shivamogga ಚಿಕಿತ್ಸೆ ಫಲಕಾರಿಯಾಗದೇ ಅಪರಿಚಿತ ವ್ಯಕ್ತಿ ಸಾವು, ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ

0

Doddapete Police Shivamogga ಶಿವಮೊಗ್ಗ ನಗರದ ಸರ್ಕಾರಿ ಬಸ್ ನಿಲ್ದಾಣದ ಸಮೀಪ ಏ.09 ರಂದು ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪ್ರಜ್ಞೆಯಿಲ್ಲದೆ ಬಿದ್ದಿದ್ದು, ಸಾರ್ವಜನಿಕರ ಸಹಾಯದಿಂದ ಮೆಗ್ಗಾನ್ ಆಸ್ಪತೆಗೆ ಸೇರಿಸಲಾಗಿತ್ತು. ವೈದ್ಯರು ಪರೀಕ್ಷಿಸಿ ಕಾಯಿಲೆಗೆ ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿರುತ್ತಾರೆ.
ಮೃತ ವ್ಯಕ್ತಿಯ ಚಹರೆ 5.4 ಅಡಿ ಎತ್ತರ, ಕಪ್ಪು ಮೈಬಣ್ಣ, ದುಂಡನೆಯ ಮುಖ, ದೃಢವಾದ ಮೈಕಟ್ಟು ಹೊಂದಿದ್ದು, ಬಲಗೈನ ಒಳಭಾಗದಲ್ಲಿ ಸುರೇಶ ಹಾಗೂ ಅಸ್ಪಷ್ಟವಾಗಿರುವ ಚಿತ್ರದ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ಕೆಂಪು, ನೀಲಿ ಬಣ್ಣದ ತುಂಬು ತೋಳಿನ ಟೀಶರ್ಟ್, ಕಂದು, ಕ್ರೀಂ ಮತ್ತು ಕಪ್ಪು ಬಣ್ಣದ ಪ್ರಿಂಟೆಡ್ ನೈಟ್ ಪ್ಯಾಂಟ್ ಧರಿಸಿರುತ್ತಾನೆ.
Doddapete Police Shivamogga ಈ ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9916882544 ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Sri Adichunchanagiri Independent Pre-Graduate College ಆದಿಚುಂಚನಗಿರಿ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿ ತೇಜಸ್ ಧನೀಗೌಡ ಸಾಧನೆಗೆ ಪ್ರಶಂಸೆ

0

Sri Adichunchanagiri Independent Pre-Graduate College 2024- 2025 ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತೇಜಸ್ ಧನೀಗೌಡ ಶ್ರೀಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದು, 600 ಕ್ಕೆ 587 ಅಂಕ ಗಳಿಸುವ ಮೂಲಕ ಶೇ 97.83 ಫಲಿತಾಂಶ ದೊಂದಿಗೆ ಅತ್ಯುತ ಶ್ರೇಣಿಯಲ್ಲಿ ಪಾಸಾಗಿದ್ದು, ಈ ವಿದ್ಯಾರ್ಥಿಯು ರಾಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರದಲ್ಲಿ ಶೇ. 100 ಫಲಿತಾಂಶ ಪಡೆದಿರುವುದು ಹಿರಿಮೆಯ ಸಂಗತಿ.
ಈ ಪ್ರತಿಭಾನ್ವಿತ ವಿದ್ಯಾರ್ಥಿ ನಗರದ ಸಂಧ್ಯಾ ನಾಗರಾಜ್ ಪುತ್ರರಾಗಿರುತ್ತಾನೆ.
Sri Adichunchanagiri Independent Pre-Graduate College ವಿದ್ಯಾರ್ಥಿಗಳ ಸಾಧನೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಗುರುರಾಜ್ ಎಸ್. ವಿ., ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

S.N. Chennabasappa ಶಿವಮೊಗ್ಗ 33 ನೇ ವಾರ್ಡ್ ಗೆ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕ ಚೆನ್ನಿ

0

S.N. Chennabasappa ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ವಾರ್ಡ್ ನಂ. 33ರ ಕುರುಬರ ಪಾಳ್ಯ ಪ್ರದೇಶಕ್ಕೆ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ನಿಕಟವಾಗಿ ಮಾಹಿತಿ ಸಂಗ್ರಹಿಸಿದರು.

ಈ ವೇಳೆ ಬಡಾವಣೆಯ ಯುಜಿಡಿ ವ್ಯವಸ್ಥೆ ಹಾಗೂ ರಸ್ತೆಗಳ ದುರಸ್ಥಿಗೆ ಸಂಬಂಧಿಸಿದ ಹಲವು ಪ್ರಮುಖ ಅಂಶಗಳನ್ನು ನಿವಾಸಿಗಳು ತಿಳಿಸಿದ್ದು, ತಕ್ಷಣದ ಕ್ರಮಗಳೊಂದಿಗೆ ಈ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸೂಚನೆಗಳನ್ನು ನೀಡಿದರು.

S.N. Chennabasappa ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು,ವಾರ್ಡಿನ ಪ್ರಮುಖರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Department of Legal Metrology ಅಂಗಡಿಯಲ್ಲಿ ವಸ್ತು ಖರೀದಿಸುವಾಗ ಗ್ರಾಹಕರು ಏನೇನು ಮಾಹಿತಿ ತಿಳಿಯಬೇಕು? ಇಲ್ಲಿದೆ ವಿವರ..!

0

Department of Legal Metrology ಗ್ರಾಹಕರು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವ ಸಮಯದಲ್ಲಿ ವರ್ತಕರು ಉಪಯೋಗಿಸುವ ತೂಕ/ಅಳತೆ/ತೂಕದ ಸಾಧನಗಳು/ಅಳತೆ ಸಾಧನಗಳು, ತೂಕ ಮತ್ತು ಅಳತೆ ಇಲಾಖೆಯಿಂದ ನಿಗದಿತ ಸಮಯದಲ್ಲಿ ಅವುಗಳ ನಿಖರತೆಗಾಗಿ ಪರಿಶೀಲಿಸಿ ಮುದ್ರೆ ಮಾಡಿಸಿಕೊಂಡಿದ್ದಾರೆಯೇ ಹಾಗೂ ಪ್ರಮಾಣ ಪತ್ರ ಹೊಂದಿದ್ದಾರೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ವಸ್ತುಗಳನ್ನು ಅಥವಾ ಸಾಮಗ್ರಿಗಳನ್ನು ಖರೀದಿಸಬೇಕೆಂದು ಕಾನೂನು ಮಾಪನಶಾಸ್ತ್ರ ಇಲಾಖೆ ತಿಳಿಸಿದೆ.
ಗ್ರಾಹಕರು ಅಂಗಡಿಯಲ್ಲಿ ವಸ್ತುಗಳನ್ನ ಖರೀದಿಸುವಾಗ ತಯಾರಕರ/ಪ್ಯಾಕರ್ ರವರ/ಆಮದುದಾರರ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಐಡಿ, ಸಾಮಗ್ರಿ ಅಥವಾ ವಸ್ತುವಿನ ಹೆಸರು, ಸಾಮಗ್ರಿಯ ನಿವ್ವಳ ತೂಕ(ಸ್ಟಾö್ಯಂಡರ್ಡ್ ಯೂನಿಟ್‌ಗಳಲ್ಲಿ-ಗ್ರಾಂ/ಲೀಟರ್/ಸAಖ್ಯೆ), ಸಾಮಗ್ರಿಗಳು ತಯಾರಾದ ತಿಂಗಳು ಮತ್ತು ವರ್ಷ, ಎಂಆರ್‌ಪಿ ಅಥವಾ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ ರೂ….(ಎಲ್ಲಾ ತೆರಿಗೆ ಸೇರಿ), ಅನ್ವಯಿಸುವಂಥ ಪದಾರ್ಥಗಳಿಗೆ ಸಾಮಗ್ರಿ ಅಳತೆ(ಸ್ಟಾö್ಯಂಡರ್ಡ್ ಯೂನಿಟ್‌ಗಳಲ್ಲಿ) ಪರಿಶೀಲಿಸಿಕೊಳ್ಳಬೇಕು.
Department of Legal Metrology ಪೊಟ್ಟಣ ಸಾಮಗ್ರಿಗಳನ್ನು ಎಂಆರ್‌ಪಿ ಗಿಂತಲೂ ಅಧಿಕ ಬೆಲೆಗೆ ಮಾರಾಟ ಮಾಡುವುದು ದಂಡಾರ್ಹ ಅಪರಾಧ. ಪೊಟ್ಟಣ ಸಾಮಗ್ರಿಗಳ ಮೇಲೆ ಎಂಆರ್‌ಪಿ/ಮೇಲೆ ಹೇಳಲಾದ ಯಾವುದೇ ಕಡ್ಡಾಯ ಘೋಷಣೆಗಳನ್ನು ತಿದ್ದುವುದು/ಅಳಿಸುವುದು/ಸ್ಟಿಕ್ಕರ್ ಬಳಸಿ ಮಾರ್ಪಡಿಸುವುದು ದಂಡಾರ್ಹ ಅಪರಾಧವಾಗಿದೆ. ಉಲ್ಲಂಘನೆಗಳು ಏನಾದರೂ ಕಂಡುಬAದಲ್ಲಿ ಸಹಾಯವಾಣಿ ಸಂಖ್ಯೆ 18005991100 ಗೆ ದೂರನ್ನು ಸಲ್ಲಿಸಬಹುದು. ಹಾಗೂ ಕಾನೂನು ಮಾಪನಶಾಸ್ತç ಸಹಾಯಕ ನಿಯಂತ್ರಕರ ಕಚೇರಿ, ಜಿಲ್ಲಾ ಮಾಪನ ಭವನ, ಅಟಲ್ ಬಿಹಾರಿ ವಾಜಪೇಯಿ ಬಡಾವಣೆ, ಮಾಧವ ಮಂಗಲ ಸಭಾಭವನÀದ ಹತ್ತಿರ, ಸಾಗರ ರಸ್ತೆ ಶಿವಮೊಗ್ಗ ಇಲ್ಲಿ ಸಹ ದೂರನ್ನು ಸಲ್ಲಿಸಬಹುದು.
ವರ್ತಕರು/ಮಾರಾಟಗಾರರು/ನ್ಯಾಯಬೆಲೆ ಅಂಗಡಿಗಳು/ಪೆಟ್ರೋಲ್ ಬಂಕ್‌ಗಳು/ಕೈಗಾರಿಕೋದ್ಯಮಗಳು ದಿ ಲೀಗಲ್ ಮೆಟ್ರಾಲಜಿ ಆಕ್ಟ್ 2009, ಪೊಟ್ಟಣ ಸಾಮಗ್ರಿ ನಿಯಮ 2011 ಹಾಗೂ ಇತರೆ ನಿಯಮಗಳು 2011 ರ ಮೇಲ್ಕಂಡ ಅಂಶಗಳನ್ನು ಕಡ್ಡಾಯವಾಗಿ ಚಾಚೂ ತಪ್ಪದೇ ಪಾಲಿಸಿ ಗ್ರಾಹಕರಿಗೆ ನ್ಯಾಯ ಒದಗಿಸಬೇಕು. ತಪ್ಪಿದಲ್ಲಿ ಸದರಿ ನಿಯಮಗಳ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು.
ಈ ನಿಟ್ಟಿನಲ್ಲಿ ಇಲಾಖೆಯು ಈಗಾಗಲೇ ಸುಮೊಟೊ ಅಧಿಕಾರದಲ್ಲಿ ಸಾಕಷ್ಟು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಹೆಚ್.ಎಸ್.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.