Wednesday, March 4, 2026
Wednesday, March 4, 2026
Home Blog Page 338

Chamber Of Commerce Shivamogga ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ‘ ಕ್ವಿಜ್’ ಸ್ಪರ್ಧೆಗಳು ಸಹಕಾರಿ- ಬಿ.ಗೋಪಿನಾಥ್

0

Chamber Of Commerce Shivamogga ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ, ಉದ್ಯೋಗಕ್ಕಾಗಿ ಸಂದರ್ಶನಗಳನ್ನು ಧೈರ್ಯವಾಗಿ ಎದುರಿಸುವಲ್ಲಿ, ಸ್ಪರ್ಧಾಳುವಿನ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಕ್ವಿಜ್ ಸ್ಪರ್ಧೆಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ ಎಂದು ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಗೋಪಿನಾಥ್ ಬಿ . ಅವರು ಅಭಿಪ್ರಾಯ ಪಟ್ಟರು.

ಶಿವಮೊಗ್ಗ ನಾಲೆಡ್ಜ್ ಫೋರಂ ವತಿಯಿಂದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೆರೋ ಕ್ಯಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಮಟ್ಟದ ಕ್ವಿಜ್ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸ್ಪರ್ಧೆಗಳು ಯುವಜನತೆಯ ಜ್ಞಾನವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿರುವುದರಿಂದ ಐಎಎಸ್, ಐಪಿಎಸ್, ಕೆಪಿಎಸ್ ಪ ಪರೀಕ್ಷೆಗಳನ್ನು ಸುಲಲಿತವಾಗಿ ಬರೆದು ಯಶಸ್ಸು ಕಾಣಬಹುದು ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಮಾತನಾಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಶ್ರೀಯುತ ಜಿ ವಿಜಯ್ ಕುಮಾರ್ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಪೀಳಿಗೆ ಯಶಸ್ಸನ್ನು ಕಾಣಬೇಕಾದರೆ ಶಿಕ್ಷಣದೊಂದಿಗೆ ವೃತ್ತಿ ಕೌಶಲ್ಯಗಳು ಪ್ರಮುಖವಾಗಿರುವುದರಿಂದ ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವುದರಿಂದ ಅವರು ಯಶಸ್ಸನ್ನು ಕಾಣಲು ಸಾಧ್ಯ ಎಂದರು.

ಫೋರಂನ ಕಾರ್ಯದರ್ಶಿ ಡಾ. ಕೆ. ವಿ. ಗಿರಿಧರ್ ಅವರು ಮಾತನಾಡಿ, ನಮ್ಮಲ್ಲಿ ಪದವೀಧರರೇನೋ ಸಾಕಷ್ಟಿದ್ದಾರೆ, ಆದರೆ ಉದ್ಯೋಗಕ್ಕೆ ಬೇಕಾದ ಕೌಶಲವಿರುವ ವಿದ್ಯಾವಂತರ ಸಂಖ್ಯೆ ತೀರ ಅತ್ಯಲ್ಪ ಎಂದು ವಿಷಾದಿಸಿ, ನಮ್ಮಲ್ಲಿನ ಸಾಮಾನ್ಯ ಜ್ಞಾನದ ಕೊರತೆ, ಸಂವಹನ ಕೌಶಲ್ಯದ ಕೊರತೆ, ಬದ್ಧತೆಯ ಅಭಾವವೇ ಇದಕ್ಕೆಲ್ಲ ಕಾರಣ ಎಂದು ನುಡಿದರು.

ಫೋರಂ ಉಪಾಧ್ಯಕ್ಷ ಉದ್ಯಮಿ ಚೇತನ್ ಅವರು ಮಾತನಾಡಿ, ಶಿವಮೊಗ್ಗ ನಾಲೆಡ್ಜ್ ಫೋರಂ ನಿರಂತರವಾಗಿ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಇದರ ಪ್ರಯೋಜನಗಳನ್ನು ಪಡೆಯಬೇಕು ಎಂದು ಕರೆ ನೀಡಿದರು.

ಫೋರಂನ ಅಧ್ಯಕ್ಷ ಡಾ. ಶಂಕರ್ ನಾರಾಯಣ್ ಅವರು ಮಾತನಾಡಿ ವಿದ್ಯಾರ್ಥಿಗಳು ಕೌಶಲಗಳ ಆಗರವಾಗಬೇಕು.ತನ್ಮೂಲಕ ಭವ್ಯ ಭಾರತ ನಿರ್ಮಾಣದ ಭಾಗವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Chamber Of Commerce Shivamogga ಹೊಯ್ಸಳ ಕಾಲೇಜಿನ ಪ್ರಾಂಶುಪಾಲರಾದ ಪ್ರೌಢಶಾಲೆ ವಿಲಿಯಂ ಡಿ’ಸೋಜಾ, ಭಾರತ್ ಹಾಲ್ ಮಾರ್ಕಿಂಗ್ ಸೆಂಟರ್ ನ ಉದ್ಯಮಿ ಸುಮಿತ್ ಇವರು ಸಾಂದರ್ಭಿಕವಾಗಿ ಮಾತನಾಡಿದರು.

ವಿವಿಧ ಕಾಲೇಜಿಗಳ 16 ತಂಡಗಳು ಈ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎಜುರೈಟ್ ಕಾಲೇಜ್ ಪ್ರಥಮ ಸ್ಥಾನವನ್ನು ಪಡೆಯಿತು . ಈ ತಂಡವನ್ನು ತರುಣ್ ಕಾರಂತ್ ಕೆ. ಬಿ. ಮತ್ತು ರುಚಿತ್ ಕೆ. ರಾಜ್ ಪ್ರತಿನಿಧಿಸಿದ್ದರು.

ಜೆಎನ್ಎನ್ ಸಿಇ ಯ ಚಿನ್ಮಯ ಶೇಖರ್ ಮತ್ತು ವಿನಾಯಕ್ ಹೆಗಡೆ ದ್ವಿತೀಯ ಬಹುಮಾನ ಗಳಿಸಿದರು. ಎನ್‌ಇಎಸ್ಐಎಎಸ್ ಕಾಲೇಜಿನ ತರುಣ್ ಗೋಯಲ್ ಮತ್ತು ಭೂಮಿಕಾ ನಾಡಿಗ್ ತೃತೀಯ ಸ್ಥಾನ ಗಳಿಸಿದರು. ಕಿರಣ್ ಉಡುಪ ಜಿ. ವಿ. ಕಾರ್ಯಕ್ರಮ ನಿರೂಪಿಸಿದರು.

Rotary Shimoga ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಹುನ್ನಾರ ನಡೆಯುತ್ತಿದೆ – ಪ್ರೊ.ಬಿ.ಎಂ.ಕುಮಾರ ಸ್ವಾಮಿ

0

Rotary Shimoga ನಗರೀಕರಣದ ಹೆಸರಿನಲ್ಲಿ ಹೊಸ ಹೊಸ ಕೈಗಾರಿಕೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಹಾಗೂ ಪರಿಸರ ನಾಶವಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ನಷ್ಟವಾಗಲಿದೆ ಎಂದು ಪರಿಸರವಾದಿ ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಸರದ ಕುರಿತು ಮಾತನಾಡಿ, ಅರಣ್ಯ ನಾಶದಿಂದ ಮಣ್ಣಿನ ಸವಕಳಿ ಹಾಗೂ ಗ್ಲೋಬಲ್ ವಾರ್ಮಿಂಗ್, ಭೂಕುಸಿತದಿಂದ ಪರಿಸರ ನಾಶವಾಗುತ್ತಿದೆ. ಮರಗಿಡಗಳ ಸಂಕ್ಷಣೆ ಇಲ್ಲದೆ ವಾಯುಮಾಲಿನ್ಯ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಶುದ್ಧವಾದ ಗಾಳಿ ಸಿಗುತ್ತಿಲ್ಲ ಎಂದು ತಿಳಿಸಿದರು.

ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಹುನ್ನಾರ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ನಾಶ ಹೆಚ್ಚಾಗಿರುವುದರಿಂದ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರುತ್ತಿವೆ. ಕಾಡಿನಲ್ಲಿ ಆಹಾರ ಸಿಗದ ಕಾರಣ ಊರುಗಳಿಗೆ ನುಗ್ಗುತ್ತಿರುವುದರಿಂದ ತೊಂದರೆ ಉಂಟಾಗುತ್ತಿದೆ.

ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾಡನ್ನು ಬೆಳೆಸಿ ನಾಡನ್ನು ಉಳಿಸಬೇಕು ಎಂದರು.

ಪ್ರತಿಯೊಬ್ಬರೂ ಬಡಾವಣೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು. ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ರೋಟರಿ ಸದಸ್ಯರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ರೋಟರಿ ಸಂಸ್ಥೆ ನಿರಂತರವಾಗಿ ಪರಿಸರ ಸಂರಕ್ಷಣೆ ಕಾರ್ಯಗಳನ್ನು ಮಾಡುತ್ತಿದೆ. ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಉತ್ತಮ ಪರಿಸರದಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದು ತಿಳಿಸಿದರು.

Rotary Shimoga ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಚಂದ್ರಹಾಸ ಪಿ.ರಾಯ್ಕರ್, ಎನ್.ಎಚ್.ಶ್ರೀಕಾಂತ್, ಎಸ್.ಸಿ.ರಾಮಚಂದ್ರ, ಎ.ಒ.ಮಹೇಶ್, ಎಸ್.ಗಣೇಶ್, ನಾಗವೇಣಿ, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಮಂಜುನಾಥ್, ಕೆ.ಜಿ.ರಾಮಚಂದ್ರರಾವ್, ದಿನಕರ್, ರೋಟರಿ ಸದಸ್ಯರು ಉಪಸ್ಥಿತರಿದ್ದರು.

MESCOM ಏಪ್ರಿಲ್ 16 ತೀರ್ಥಹಳ್ಳಿ ಮೆಸ್ಕಾಂ ಉಪಕಛೇರಿಯಲ್ಲಿ ಜನಸಂಪರ್ಕ ಸಭೆ

0

MESCOM ತೀರ್ಥಹಳ್ಳಿ ಮೆಸ್ಕಾಂ ಉಪ ವಿಭಾಗ ಕಛೇರಿಯಲ್ಲಿ ಏ. 16 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕಸಭೆ ನಡೆಯಲಿದೆ.

ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

MESCOM ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 9448289508

Klive Special Article ಬೇಸಿಗೆ ರಜೆ.ಮಕ್ಕಳ ಪಾಲಿಗೆ ಚೇತೋಹಾರಿಯಾಗಿರಲಿ. ಪೋಷಕರಿಗೆ ಕಿವಿಮಾತು- ತಾಜುದ್ದೀನ್ ಖಾನ್

0

ಬೇಸಿಗೆ ರಜೆಯಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಯಲ್ಲಿ ಪಾಲಕರ ಪಾತ್ರ.

Klive Special Article ಬಂಧುಗಳೇ ಕಳೆದ ವಾರ ಪತ್ರಿಕೆ ಓದುತ್ತಿರುವಂತಹ ಸಂದರ್ಭದಲ್ಲಿ ಆತಂಕ ಪಡುವಂತಹ ಪ್ರತ್ಯೇಕ ಘಟನೆಗಳನ್ನು ವರದಿಯಾಗಿತ್ತು.
ಘಟನೆ ಒಂದು! ಒಂದು ಗ್ರಾಮದಲ್ಲಿ 8 ರಿಂದ 14 ವರ್ಷದ ಒಳಗಿನ 5 ಜನ ಮಕ್ಕಳು ಕಾಣೆಯಾಗಿದರು ಗ್ರಾಮದ ಜನರೆಲ್ಲರೂ ಇಡೀ ದಿನ ರಾತ್ರಿ ಹುಡುಕಿದರೂ ಮಕ್ಕಳು ಸಿಗಲಿಲ್ಲ ನಂತರ ಒಂದು ಗದ್ದೆಯಲ್ಲಿ ಐದು ಮಕ್ಕಳು ಪತ್ತೆಯಾದರೂ. ಮಕ್ಕಳನ್ನು ವಿಚಾರಿಸಿದಾಗ ಕೆರೆಯಲ್ಲಿ ಮೀನು ಹಿಡಿಯಲು ಹೋಗಿರುವುದಾಗಿ, ಕತ್ತಲಾದ ಕಾರಣ ಮನೆಗೆ ದಾರಿ ತೋಚದೆ ಅಲ್ಲೇ ಉಳಿದುಕೊಂಡಿದ್ದೆವು ಎಂದು ತಿಳಿಸಿದರು.

ಘಟನೆ ಎರಡು ! ಮಕ್ಕಳ ಬೇಸಿಗೆ ರಜೆ ಇದೆ ಎಂದು ಒಂದು ಕುಟುಂಬ ಒಂದು ದೊಡ್ಡ ಕೆರೆಯಲ್ಲಿ ನೀರಿನ ಆಳ ಮತ್ತು ಅಗಲ ತಿಳಿಯದೆ ಆಟ ಆಡುವ ಸಂದರ್ಭದಲ್ಲಿ ಒಂದು ಮಗು ನೀರಿನಲ್ಲಿ ಮುಳುಗುತ್ತಿತ್ತು ಅದನ್ನು ರಕ್ಷಣೆ ಮಾಡಲು ಹೋದ ತಾಯಿ ಮತ್ತು ಅಕ್ಕ ಒಟ್ಟು ಮೂರು ಜನ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡರು,

ಘಟನೆ ಮೂರು!
13 ವರ್ಷದ ಬಾಲಕಿ ಒಬ್ಬಳು ಶಾಲೆಗೆ ರಜೆ ಇರುವ ಕಾರಣ ಟಿವಿ ನೋಡಲು ಪಕ್ಕದ ಮನೆಗೆ ಹೋಗುತ್ತಿದ್ದಳು. ಸುಮಾರು 40 ವರ್ಷದ ಅಂಕಲ್ ಸಲಗೆಯಿಂದ ಮಾತನಾಡಿಸುತ್ತಿದ್ದ. ಬಾಲಕಿ ಯಾಕೋ ತಲೆಸುತ್ತು ಆರೋಗ್ಯ ಸರಿವಿಲ್ಲವೆಂದು ವೈದ್ಯರ ಬಳಿ ತೋರಿಸಿದಾಗ ಅವಳು ಎರಡು ತಿಂಗಳ ಗರ್ಭಿಣಿ ಎಂದು ತಿಳಿಯಿತು.
ವಿಷಯ ತಿಳಿದ ಅಂಕಲ್ ಊರು ಬಿಟ್ಟು ಪರಾರಿಯಾಗಿದ್ದ.
ಪ್ರತಿನಿತ್ಯ ನಡೆಯುವ ಇಂತಹ ಘಟನೆಗಳಿಂದ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.

ಬೇಸಿಗೆ ರಜೆ ಎಂದರೆ ಮಕ್ಕಳು ಆಡುವುದು, ನಲಿಯುವುದು, ಕುಣಿಯುವುದು, ಚೇಷ್ಟೆ ಮಾಡುವುದು, ಸರ್ವೇಸಾಮಾನ್ಯ. ಒಂದು ಕಡೆ ಪೋಷಕರು ಮಕ್ಕಳ ಬೇಸಿಗೆ ರಜೆ ಎಂದರೆ ತುಂಬಾ ಚಿಂತೆಗೆ ಒಳಗಾಗುತ್ತಾರೆ, ಎರಡು ತಿಂಗಳ ಕಾಲ ಮಕ್ಕಳನ್ನು ಹೇಗೆ ಮನೆಗಳಲ್ಲಿ ಸಂಭಲಿಸಬೇಕು ಎನ್ನುವುದೇ ಅವರಿಗೆ ದೊಡ್ಡ ಪ್ರಶ್ನೆ,
ಯಾಕಾದ್ರೂ ಬಂತಪ್ಪ ಈ ಬೇಸಿಗೆ ರಜೆ, ಎಂದು ಹೇಳುವ ಪೋಷಕರೇ ಅಧಿಕ. ಇದಕ್ಕೆ ಮುಖ್ಯ ಕಾರಣ ಪೋಷಕರು ಕಂಫರ್ಟ್ ಜೋನಿನಿಂದ ಹೊರಗೆ ಬಾರದಿರುವುದು.
ಕಂಫರ್ಟ್ ಝೂನ್ ಎಂದರೆ ಮಕ್ಕಳು ಶಾಲೆಗೆ ಹೋಗುವ ಸಂದರ್ಭದಲ್ಲಿ ಬೆಳಗ್ಗೆ ಎದ್ದು ತಿಂಡಿ ತಯಾರಿಸಿ ಮಕ್ಕಳಿಗೆ ತಿನ್ನಿಸಿ ಅವರನ್ನು ರೆಡಿ ಮಾಡಿ ಶಾಲೆಗೆ ಕಳುಹಿಸಿದರೆ ನಂತರ ಮನೆಯಲ್ಲಿ ಬೇರೆ ಕೆಲಸ, ಟಿವಿ ಸೀರಿಯಲ್, ಗಳು ನೋಡುವುದು ಫೋನ್ ಬಳಕೆ ಇತ್ಯಾದಿ, ಆದರೆ ಮಕ್ಕಳು ಮನೆಯಲ್ಲಿ ಇದ್ದರೆ ಇದೆಲ್ಲ ಹೇಗೆ ಸಾಧ್ಯ! ಎಂಬುದೇ ಪೋಷಕರ ಚಿಂತೆ.
ಹಾಗಾದರೆ ಕೆಲವು ವಾರಗಳ ಕಾಲ ಸಿಗುವ ರಜೆ ಪೋಷಕರು ಮಕ್ಕಳೊಟ್ಟಿಗೆ ಹೀಗೆ ಕಳೆಯಬಹುದು,
ನಮ್ಮ ಮಕ್ಕಳ ಮನಸ್ಸು ನಾವು ಮೊದಲು ಅರಿತುಕೊಳ್ಳಬೇಕು. ತಂದೆ ತಾಯಿಗೆ ನಮ್ಮ ಮಗುವಿನ ಮನಸ್ಸು ಏನೆನ್ನುವುದು ಗೊತ್ತಾಗಲಿಲ್ಲವೆಂದರೆ ಇನ್ನೂ ಅದನ್ನು ಯಾರು ತಾನೆ ಅರ್ಥ ಮಾಡಿಕೊಳ್ಳುತ್ತಾರೆ? ಅರ್ಥಮಾಡಿಕೊಳ್ಳಲಿಕ್ಕಾಗದೆ ಇರುವುದರಿಂದಲೇ ಮಕ್ಕಳು ಇವತ್ತು ಮಕ್ಕಳಂತೆ ವರ್ತಿಸುತ್ತಿಲ್ಲ. ಅವರಲ್ಲಿ ಮಕ್ಕಳಲ್ಲಿ ಇರಬೇಕಾದ ಮುಗ್ದತೆ ಕಾಣುತ್ತಿಲ್ಲ, ಮಕ್ಕಳು ಹೀಗಾಗಲು ಯಾರೂ ಕಾರಣವೆಂದು ನೋಡಿದರೆ ಅಲ್ಲಿ ಎದ್ದು ಕಾಣುವುದು ಮಕ್ಕಳ ತಂದೆ ತಾಯಿಯ ಪ್ರತಿಬಿಂಬ! ಹಾಗಾಗಿ ಬೇಸಿಗೆ ರಜೆ ಎಂಬುದು ನಮ್ಮ ಮಕ್ಕಳನ್ನು ಅರಿಯಲು ಇರುವ ಅತ್ಯಂತ ಸುವರ್ಣ ಸಮಯವಾಗಿದೆ.

ಇತ್ತೀಚಿನ ಆಧುನಿಕ ಜಗತ್ತಿನಲ್ಲಿ ಪೋಷಕರು ತಮ್ಮ ಕೆಲಸಗಳಲ್ಲಿ ದಿನನಿತ್ಯ ಬಿಸಿಯಾಗಿರುವುದು ಸರ್ವೇಸಾಮಾನ್ಯ. ಮಕ್ಕಳ ರಜೆಯನ್ನು ಬಹಳ ವ್ಯವಸ್ಥಿತವಾಗಿ ಮಕ್ಕಳೊಂದಿಗೆ ಸಮಯವನ್ನು ಕಳೆಯುವುದೇ ಅಪರೂಪ.
ಶಾಲಾ ದಿನಗಳಲ್ಲಿ ಮಕ್ಕಳು ಶಾಲೆ, ಟ್ಯೂಷನ್, ಪರೀಕ್ಷೆ ಎಂದು ಬ್ಯುಸಿ ಆಗಿರುತ್ತಾರೆ, ಅವರಿಗೂ ಕೂಡ ಪೋಷಕರೊಟ್ಟಿಗೆ ಸಮಯ ಕಳೆಯಲು ಸಾಧ್ಯವಾಗಿವುದಿಲ್ಲ.
ಹಾಗಾಗಿ ಪ್ರತಿ ಪೋಷಕರಿಗೂ ಕೂಡ ಮಕ್ಕಳೊಟ್ಟಿಗೆ ಸಮಯವೂ ಕಳೆಯಲು ಇದೊಂದು ಉತ್ತಮ ಅವಕಾಶ ಎಂದು ಹೇಳಬಹುದು.
ಪೋಷಕರು ತಮ್ಮ ಕಂಫರ್ಟ್ ಜೂನಿನಿಂದ ಹೊರಗಡೆ ಬಂದು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದರಿಂದ ಅವರಲ್ಲಿರುವ ವಿಶೇಷವಾದ ಪ್ರತಿಭೆಯನ್ನು ಗುರುತಿಸಬಹುದು ಕೆಲವು ಮಕ್ಕಳಲ್ಲಿ ಉತ್ತಮವಾದ ಕ್ರೀಡೆ, ಗಾಯನ, ಸ್ವಿಮ್ಮಿಂಗ್, ಡ್ಯಾನ್ಸಿಂಗ್, ಡ್ರಾಯಿಂಗ್, ಹಾಗೂ ಇನ್ನಿತರ ವಿಶೇಷವಾದಂತಹ ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆಯನ್ನು ಪೋಷಕರು ಗುರುತಿಸುವುದರ ಮೂಲಕ ಅದಕ್ಕೆ ಪ್ರೋತ್ಸಾಹ ನೀಡಿ ಉತ್ತಮ ಭವಿಷ್ಯ ರೂಪಿಸಲು ಇದು ಉತ್ತಮ ಅವಕಾಶ.

Klive Special Article ಇತ್ತೀಚಿನ ಮಕ್ಕಳಿಗೆ ಕುಟುಂಬ ಅಂದರೇನು? ನಮ್ಮ ಸಂಸ್ಕೃತಿ ಹೇಗಿದೆ? ನಮ್ಮ ಆಚಾರ ವಿಚಾರಗಳೇನು? ಅಜ್ಜಿ – ಅಜ್ಜ ನೆರೆಹೊರಿಯೊಂದಿಗೆ, ಹೇಗಿರಬೇಕು? ನಮ್ಮ ಕುಟುಂಬದ ಸಂಸ್ಕಾರಗಳೇನು? ಸಂಬಂಧಗಳು ಯಾವ ರೀತಿ ನಿಭಾಯಿಸಬೇಕು? ಇನ್ನೊಬ್ಬರಿಗೆ ಯಾವ ರೀತಿ ಸಹಕಾರ ನೀಡಬೇಕು ಇಂತಹ ಮಾನವೀಯ ಮೌಲ್ಯಗಳನ್ನು ಕಲಿಸುವುದಕ್ಕಾಗಿ ಬೇಸಿಗೆ ರಜೆಯನ್ನು ಬಳಸಿಕೊಳ್ಳಬಹುದು.

ಮಕ್ಕಳಲ್ಲಿ ದೇಶದ ಬಗ್ಗೆ ಅಭಿಮಾನ, ನಾಡು ನುಡಿಯ ಬಗ್ಗೆ ತಿಳಿ ಹೇಳುವುದು, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ, ನೀತಿ ಕಥೆಗಳನ್ನು ತಿಳಿಸುವುದರ ಮೂಲಕ ಪ್ರಾಮಾಣಿಕತೆ, ನ್ಯಾಯ ಹಾಗೂ ಸಂಸ್ಕೃತಿಯ ಮಹತ್ವದ ಕುರಿತು ತಿಳಿಸಬಹುದು.
ಬಹುತೇಕ ಪೋಷಕರು ರಜೆಯ ಸಂದರ್ಭದಲ್ಲಿ ಮಕ್ಕಳು ಹಠ ಮಾಡುತ್ತಾರೆಂದು ಅವರಿಗೆ ತಮ್ಮ ಮೊಬೈಲ್ ಗಳನ್ನು ನೀಡುವುದು ಲ್ಯಾಪ್ಟಾಪ್ಗಳನ್ನು ನೀಡುವುದು ಟಿವಿ ಹಾಕಿ ಕೂರಿಸುವುದು ಮಾಡುತ್ತಾರೆ. ಇದು ಖಂಡಿತಾ ತಪ್ಪು! ಹಿಂದೆಂದೂ ಕಂಡಿಲ್ಲದ ಇಂಟರ್ನೆಟ್, ಸಾಮಾಜಿಕ ಮಾಧ್ಯಮ, ಸೈಬರ್ ಸ್ಪೇಸ್, ನಂತಹ ಡಿಜಿಟಲ್ ತಂತ್ರಜ್ಞಾನಗಳು, ಡಿಜಿಟಲ್ ಗೇಮ್, ಈಗ ಸುಲಭವಾಗಿ ಲಭ್ಯವಿದ್ದು ಅವುಗಳ ಬಳಕೆ ಯಾವುದೇ ನಿಯಂತ್ರಣವಿಲ್ಲದಿರುವುದರಿಂದ ಮಕ್ಕಳು ಸಾಮಾಜಿಕ ಜಾಲತಾಣದ ಮೂಲಕ ಅನೇಕ ಬೇಕು ಬೇಡದ ವಿಡಿಯೋಗಳನ್ನು ನೋಡುವುದರ ಮೂಲಕ ಶೋಷಣೆ ಮತ್ತು ಅವರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಥವಾ ವಿಡಿಯೋ ಗೇಮ್ ಆಡುವುದರ ಮೂಲಕ ಅದರ ಗೀಳು ಹತ್ತಬಹುದು. ಹೆಚ್ಚು ಮೊಬೈಲ್ ಬಳಕೆಯಿಂದ ಮಗುವಿನ ಆರೋಗ್ಯ ನಿಧಾನವಾಗಿ ವಿಷದಂತೆ ಹಾಳು ಮಾಡುತ್ತಾ ಬರಬಹುದು ಮುಖ್ಯವಾಗಿ ಬೆಳೆಯುವ ಮಕ್ಕಳ ಮೆದುಳಿನ ಮೇಲೆ ಮೊಬೈಲಿನ ತರಂಗಗಳು ಭೀಕರ ಪರಿಣಾಮ ಬೀರಬಹುದು. ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುವ ಮೊಬೈಲ್ ಅವರಿಗೆ ಅನೇಕ ಕಾಯಿಲೆಗಳನ್ನು ಕೂಡ ತಂದುಡ್ಡಬಹುದು. ಇತ್ತೀಚಿಗೆ ಪತ್ರಿಕೆಯಲ್ಲಿ ಪ್ರಕಟವಾದ ಜಿಲ್ಲಾ ವರದಿಯಂತೆ ಅತಿಯಾಗಿ ಮೊಬೈಲ್ ಬಳಸುವ ಸುಮಾರು 25 ರಿಂದ 30,000 ಮಕ್ಕಳು ದೃಷ್ಟಿ ದೋಷದ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ, ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಕೂಡ ಅತ್ಯಂತ ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ ಮಕ್ಕಳನ್ನು ಮೊಬೈಲ್ ಅಥವಾ ಟಿವಿ ಸಾಧ್ಯವಾದಷ್ಟು ದೂರ ಇಡುವುದು ಉತ್ತಮ. ಮಕ್ಕಳು ಸಾಮಾನ್ಯವಾಗಿ ಪೋಷಕರು ಹೇಳಿದನಂತೆ ಕೇಳುವುದಕ್ಕಿಂತ ಮಾಡಿದನು ಅನುಸರಿಸುತ್ತಾರೆ ಹಾಗಾಗಿ ಪೋಷಕರೂ ಕೂಡ ಮುಬೈಲ್ ಹಾಗೂ ಟಿವಿಯ ಬಳಕೆ ಕಡಿಮೆ ಮಾಡಬೇಕು ಮಕ್ಕಳೊಟ್ಟಿಗೆ ಹೆಚ್ಚು ಸಮಯ ಕಳೆಯುವುದು ಉತ್ತಮ.

ಪೋಷಕರು ಏನು ಮಾಡಬಹುದು.
ಮನೆಯ ಸಣ್ಣ ಪುಟ್ಟ ಕೆಲಸಗಳಿಗಾಗಿ ಬಳಸಿಕೊಳ್ಳಿ ಸಂಬಂಧಿಕರೊಂದಿಗೆ ಹಾಗೂ ಮಕ್ಕಳ ಸ್ನೇಹಿತರ ಜೊತೆ ಆಗಾಗ ದೂರವಾಣಿಯ ಮೂಲಕ ಮಾತನಾಡಿ, ದೈಹಿಕ ಚಟುವಟಿಗಾಗಿ ಸೈಕಲ್ ಸವಾರಿ, ಗ್ರಾಮೀಣ ಆಟಗಳನ್ನು ಮಕ್ಕಳೊಟ್ಟಿಗೆ ಆಡಿ, ಮನೆಯಲ್ಲಿ ಮಕ್ಕಳಿಗೆ ಒಂಟಿಯಾಗಿ ಇರಲು ಬಿಡಬಾರದು, ಅವರಿಗೆ ಮನೆಯ ಸುತ್ತಮುತ್ತ ಅಥವಾ ಮನೆಯ ಮೇಲ್ಚಾವಣಿಯಲ್ಲಿ ಇರುವಂತಹ ಜಾಗದಲ್ಲಿ ಗಿಡ, ಸೊಪ್ಪು, ತರಕಾರಿ, ಬೆಳೆಸುವ ಅಭ್ಯಾಸ ಮಾಡಿ, ಇದರಿಂದ ಅವರಿಗೆ ಪರಿಸರದ ಬಗ್ಗೆ ಆಸಕ್ತಿಯ ಕೂಡ ಹುಟ್ಟಬಹುದು.
ಪೋಷಕರು ಒಂದು ಟೈಮ್ ಟೇಬಲ್ ಸಿದ್ದಪಡಿಸುವುದರ ಮೂಲಕ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಬೇಕು ಈ ಸಮಯದಲ್ಲಿ ಉತ್ತಮವಾದ ನೀತಿ ಪುಸ್ತಕಗಳು ಓದಿಸುವುದು, ಬರೆಸುವುದು, ಹಾಗೂ ಉತ್ತಮ ಸಂಗೀತ ಕೇಳಿಸುವುದು ಅಭ್ಯಾಸ ಮಾಡಿಸಬೇಕು.
ಮಗು ಯಾವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತದು ಆ ಒಂದು ಪ್ರತಿಭೆಯನ್ನು ಗುರುತಿಸಿ ಅವರಿಗೆ ಹೆಚ್ಚು ಪ್ರೋತ್ಸಾಹಿಸಬೇಕು ಸಾಧ್ಯವಾದರೆ ಅವರಿಗೆ ಮಾರ್ಗದರ್ಶಕರಿಂದ (ಕೋಚ್) ಮಾರ್ಗದರ್ಶನವನ್ನು ಕೊಡಿಸಬೇಕು.

ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಕುಟುಂಬದ ಇತರೆ ಸದಸ್ಯರು ಒಟ್ಟಿಗೆ ಊಟ ಮಾಡುವುದು, ಅಜ್ಜ ಅಜ್ಜಿಯರ ಮಹತ್ವ ತಿಳಿಸುವುದು, ಅಕ್ಕ ತಂಗಿಯರ ಬಾಂಧವ್ಯದ ಬಗ್ಗೆ ತಿಳಿಸುವುದು, ಸಾಧ್ಯವಾದರೆ ಒಮ್ಮೆಯಾದರೂ ಕೂಡ ಹತ್ತಿರದ ವೃದ್ಧಾಶ್ರಮ, ಅನಾಥಾಶ್ರಮ, ಭೇಟಿ ಮಾಡುವುದರ ಮೂಲಕ ಸಮಾಜ ಎಂದರೇನು? ಸಹಕಾರ ಎಂದರೇನು? ನಾವು ಇವರೊಟ್ಟಿಗೆ ಹೇಗೆ ಇರಬೇಕು ಎಂಬುದನ್ನು ತಿಳಿಸುವುದರ ಮೂಲಕ ಉತ್ತಮ ಸಂಸ್ಕಾರ ಬೆಳೆಸಬಹುದು,
ವಸ್ತು ಸಂಗ್ರಹಾಲಯಗಳಿಗೆ ಮನೋರಂಜನ ಕೇಂದ್ರಗಳಿಗೆ ಭೇಟಿ ಮಾಡಿಸುವುದರ ಮೂಲಕ ಅವರಲ್ಲಿ ಜ್ಞಾನವನ್ನು ಹೆಚ್ಚಿಸಬಹುದು.
ಪ್ರತಿ ಪೋಷಕರು ಮಕ್ಕಳೊಟ್ಟಿಗೆ ಮಕ್ಕಳಾಗಿ ಚಿಂತಿಸಿದಾಗ ಮಾತ್ರ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.
ಅವರ ಭಾವನೆಗಳಿಗೆ ಸ್ಪಂದಿಸಬೇಕು ಅವರೊಟ್ಟಿಗೆ ಮಾತನಾಡಬೇಕು ಸರಿ ತಪ್ಪುಗಳನ್ನು ಸರಿಪಡಿಸಬೇಕು.
ಅವರ ಉತ್ತಮ ಕಾರ್ಯಗಳಿಗೆ ಬೆಂಬಲಿಸಬೇಕು ಮತ್ತು ಮಾರ್ಗದರ್ಶನ ನೀಡಬೇಕು.
ಅವರ ಎಲ್ಲಾ ಸಂದರ್ಭಗಳಿಗೂ ಹೊಂದಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು ಅದು ಕುಟುಂಬದೊಂದಿಗೆ ಆಗಲಿ, ಸಂಬಂಧಿಕರೊಂದಿಗೆ ಆಗಲಿ, ಸುತ್ತಮುತ್ತಲಿರುವ ಪರಿಸರಕ್ಕಾಗಲಿ ಹೊಂದಿಕೊಳ್ಳುವಂತೆ ಅವರಿಗೆ ಮಾರ್ಗದರ್ಶನ ನೀಡಬೇಕು.

ಮಕ್ಕಳ ಸುರಕ್ಷತೆಗಾಗಿ ಪೋಷಕರು ವಹಿಸಬೇಕಾದ ವಿಶೇಷ ಜವಾಬ್ದಾರಿಗಳು.
ನಿಮ್ಮ ಮಗುವನ್ನು ಬೇರೆಯವರ ಮನೆಗೆ ಬಿಡುವ ಮೊದಲು ಸ್ವಲ್ಪ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.
ಮಕ್ಕಳ ಮೇಲೆ ಹೆಚ್ಚು ನಿಗಾಡುವುದು, ಅವರೇನು ಮಾಡುತ್ತಿದ್ದಾರೆ ಎಂದು ಅವಲೋಕಿಸುವುದು ಮತ್ತು ಸರಿಯಾದ ರೀತಿ ಮಾರ್ಗದರ್ಶನ ನೀಡುವುದು.

ಮಕ್ಕಳನ್ನು ಒಂಟಿಯಾಗಿ ಟ್ರಿಪ್ ಗಳಿಗೆ ಕಳುಹಿಸುವ ಬದಲು ತಂದೆ ಅಥವಾ ತಾಯಿ ಅವರೊಟ್ಟಿಗೆ ಹೋಗುವುದು ಉತ್ತಮ. ಮಕ್ಕಳು ಗೊತ್ತಿಲ್ಲದ ಪ್ರದೇಶದಲ್ಲಿ ಕೆರೆ ನೀರು ಬಾವಿ ಸಮುದ್ರದಲ್ಲಿ ಆಟ ಆಡುವ ಸಂದರ್ಭದಲ್ಲಿ ಬಹಳ ಜಾಗರೂಕತೆಯಿಂದ ಇರುವುದು ಉತ್ತಮ. ಆ ಪ್ರದೇಶದ ಬಗ್ಗೆ ಸಂಪೂರ್ಣ ಜ್ಞಾನ ನೀರಿನ ಆಳ ಅಗಲ ಗೊತ್ತಿಲ್ಲದಿದ್ದರೆ ನೀರಿನಲ್ಲಿ ಆಡುವುದು ಅಪಾಯಕ್ಕೆ ಕಾರಣವಾಗಬಹುದು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.

ವಸತಿ ನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಇಡೀ ವರ್ಷ ವಿದ್ಯಾಭ್ಯಾಸದ ಒತ್ತಡದಿಂದ ಪರೀಕ್ಷೆ ಎದುರಿಸಿದ ಮಕ್ಕಳು ಮನೆಗೆ ಬಂದಂತಹ ಸಂದರ್ಭದಲ್ಲಿ ಅಥವಾ ಮನೆಯಲ್ಲಿ ನಿರಂತರವಾಗಿ ವಿದ್ಯಾಭ್ಯಾಸ ಮಾಡಿದ ಸಂದರ್ಭದಲ್ಲಿ ಅವರು ಒತ್ತಡಕ್ಕೆ ಒಳಗಾಗಬಹುದು. ಅವರಿಗೆ ಬೇಸಿಗೆ ರಜೆ ಎಂದು ಸಂಪೂರ್ಣವಾಗಿ ಸ್ವತಂತ್ರ ನೀಡುವುದು ಸರಿಯಲ್ಲ ನಿರಂತರ ನಿಮ್ಮ ಮಾರ್ಗದರ್ಶನ, ಮಕ್ಕಳೊಟ್ಟಿಗೆ ಹೆಚ್ಚು ಸಮಯ ಕಳೆಯುವುದರ ಮೂಲಕ ಅವರಲ್ಲಿ ಹೊಸ ಹೊಸ ಅನುಭವಗಳನ್ನು ಕಲಿಸುವುದು, ಸ್ವಾವಲಂಬಿಗಳಾಗಿ ಬದುಕುವುದನ್ನು ತಿಳಿಸಿಕೊಡುವುದು, ಅವರ ಭಾವನೆಗಳನ್ನು ಬುದ್ಧಿಮಟ್ಟವನ್ನು ತಿಳಿಯುವುದರ ಮೂಲಕ ಮಾರ್ಗದರ್ಶನ ನೀಡುವುದು, ಅವರ ಪ್ರತಿಭೆಗೆ ಬೆಂಬಲ ನೀಡಬಹುದು.
ಪೋಷಕರು ಬೇಸಿಗೆ ರಜೆಯನ್ನು ಸರಿಯಾದ ರೀತಿ ಬಳಸಿಕೊಂಡರೆ ನಿಮ್ಮ ಮಕ್ಕಳನ್ನು ಪ್ರಜ್ಞಾವಂತ ನಾಗರೀಕರನ್ನಾಗಿ ಮಾಡಲು ಇದೊಂದು ಉತ್ತಮ ಅವಕಾಶವಾಗಿದೆ, ಎಲ್ಲಾ ಪುಟ್ಟ ಮಕ್ಕಳಿಗೂ ಬೇಸಿಗೆ ರಜೆಯ ಶುಭಾಶಯಗಳು, ನಿಮ್ಮ ಬೇಸಿಗೆ ರಜೆಯು ಸುರಕ್ಷಿತ ಹಾಗೂ ಆರೋಗ್ಯಕರವಾಗಿರಲಿ.
ಮಕ್ಕಳ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಮಕ್ಕಳ ಉಚಿತ ಸಹಾಯವಾಣಿ 1098. ಹಾಗೂ 112 ದೂರವಾಣಿ ಕರೆ ಮಾಡುವುದರ ಮೂಲಕ ಮಕ್ಕಳ ಸುರಕ್ಷಿತ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡೋಣ ಧನ್ಯವಾದಗಳು.

ತಾಜುದ್ದೀನ್ ಖಾನ್
ಅಧ್ಯಕ್ಷರು
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ.

Karnataka Working Journalists ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸದಸ್ಯರಿಗೆ ಐಡಿ ಕಾರ್ಡ್ ವಿತರಣೆ

0

Karnataka Working Journalists ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವತಿಯಿಂದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಇದರಿಂದ ಸದಸ್ಯರ ವೃತ್ತಿಪರ ಜೀವನಕ್ಕೆ ಅನುಕೂಲವಾಗಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಿ.ಜಿ. ನಾಗರಾಜ ತಿಳಿಸಿದರು. ಮಥುರಾ ಪ್ಯಾರಡೈಸ್‍ನ ಸಭಾಂಗಣದಲ್ಲಿ ಆಯೋಜಿಸಿದ್ದ ಸದಸ್ಯರಿಗೆ ಐಡಿ ಕಾರ್ಡ್ ವಿತರಣೆ ಮಾಡಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಶಿವಮೊಗ್ಗದಲ್ಲಿ ಸಕ್ರಿಯವಾಗಿದ್ದು, ಅತೀ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಪತ್ರಕರ್ತರು ಸದಸ್ಯತ್ವ ಪಡೆದಿದ್ದಾರೆ. ಸಂಘಟನೆ ಸದೃಢವಾಗಿದೆ. ನಮ್ಮ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಸಹಕಾರದಿಂದ ಪತ್ರಕರ್ತರ ಅಭ್ಯುದಯಕ್ಕಾಗಿ ಸಂಘಟನೆ ವತಿಯಿಂದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಂಘದ ಸದಸ್ಯರಿಗೆ ಅಪಘಾತವಾದ ಸಂದರ್ಭದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ 5 ಲಕ್ಷ ರೂ.ಗಳ ಆಕ್ಸಿಡೆಂಟ್-ವೈದ್ಯಕೀಯ ವಿಮೆ ಸೌಲಭ್ಯ, ವರದಿಗಾರರಿಗೆ ಪ್ರತಿ ತಿಂಗಳು 500 ರೂ.ಗಳ ಪೆಟ್ರೋಲ್ ವೆಚ್ಚ ನೀಡುವುದು, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾಭ್ಯಾಸಕ್ಕೆ ನೆರವು, ಸದಸ್ಯರ ಕುಟುಂಬಗಳೊಂದಿಗೆ ವಾರ್ಷಿಕ ಕ್ರೀಡಾಕೂಟ, ಪ್ರತಿ ವರ್ಷ ಸದಸ್ಯರಿಗೆ ಉಚಿತ ಪ್ರವಾಸ, ಪ್ರತಿ ದೀಪಾವಳಿ ಹಬ್ಬಕ್ಕೆ ಸಂಘದ ವತಿಯಿಂದ ಸದಸ್ಯರಿಗೆ ಪಟಾಕಿ ಹಾಗೂ ಬಟ್ಟೆ ವಿತರಣೆ, ಸದಸ್ಯರು ಅಕಾಲಿಕವಾಗಿ ಮೃತಪಟ್ಟಲ್ಲಿ ಅಂತ್ಯಕ್ರಿಯೆಗೆ 10 ಸಾವಿರ ರೂ.ಗಳ ನೆರವು, ಅನಾರೋಗ್ಯಕ್ಕೆ ತುತ್ತಾದಲ್ಲಿ 5 ಸಾವಿರ ರೂ.ಗಳ ತುರ್ತು ನೆರವು ನೀಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಎಲ್ಲಾ ಯೋಜನೆಗಳನ್ನೂ ಹಂತಹಂತವಾಗಿ ಜಾರಿಗೊಳಿಸುತ್ತಿದ್ದು, ಪ್ರತಿ ವರ್ಷವೂ ಮುಂದುವರೆಯಲಿದೆ. ಈ ಎಲ್ಲಾ ಯೋಜನೆಗಳಿಗೆ ಸದಸ್ಯರಿಂದ ಯಾವುದೇ ಹಣ ಸಂಗ್ರಹ ಮಾಡದೇ ಸಂಘದ ವತಿಯಿಂದಲೇ ಭರಿಸಲಾಗುವುದು ಎಂದರು.
Karnataka Working Journalists ಈಗಾಗಲೇ ಜಾರಿಯಲ್ಲಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸೌಲಭ್ಯಗಳನ್ನು ಸದಸ್ಯರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಕೆ.ಹೆಚ್.ಬಿ.ಯಿಂದ ಸಂಘದ ಸದಸ್ಯರಿಗೆ ನಿವೇಶನ ಒದಗಿಸಲು ಪ್ರಯತ್ನಿಸಲಾಗುವುದು. ಸದಸ್ಯರು ವೃತ್ತಿಯಲ್ಲಿ ನೈಪುಣ್ಯತೆ ಹೊಂದುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಈಗಾಗಲೇ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಂಗ್ಲೆಯವರು ಎಲ್ಲಾ ಪತ್ರಕರ್ತರಿಗೂ ಬಸ್ ಪಾಸ್ ವಿತರಣೆ ಮಾಡಬೇಕು ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಸೌಲಭ್ಯ ವಿಸ್ತರಿಸಲು ಹೋರಾಟ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಯೋಜನೆಯ ಸೌಲಭ್ಯ ಎಲ್ಲ ಸದಸ್ಯರಿಗೂ ಸಿಗಲು ಶ್ರಮಿಸಲಾಗುವುದು ಎಂದರು.
ಶಿವಮೊಗ್ಗದ ಸರ್ಕಾರಿ ಪತ್ರಿಕಾ ಭವನದ ಹೋರಾಟವು ತಾರ್ಕಿಕ ಅಂತ್ಯ ಕಾಣುವ ವಿಶ್ವಾಸವಿದೆ. ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಯುತ್ತಿದ್ದು, ನಾವು ನೂರಾರು ಪುಟದ ದಾಖಲಾತಿಗಳನ್ನು ಸಲ್ಲಿಸಿದ್ದೇವೆ. ಶೀಘ್ರದಲ್ಲೇ ಪತ್ರಿಕಾ ಭವನಕ್ಕೆ ಆಡಳಿತಾಧಿಕಾರಿ ನೇಮಕವಾಗಿ, ಸಾರ್ವಜನಿಕರಿಗೆ ಕೇವಲ 500 ರೂ.ಗಳಲ್ಲೆ ಪ್ರೆಸ್ ಮೀಟ್ ಮಾಡಲು ಅವಕಾಶವಾಗಲಿದೆ. ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ಈ ಸರ್ಕಾರಿ ಪತ್ರಿಕಾ ಭವನದಲ್ಲಿ ಮುಕ್ತ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೇ 24ರಂದು ಸಂಘದ ರಾಜ್ಯಮಟ್ಟದ 3ನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿದ್ದು, ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಸದರಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಚಿತ್ರಪ್ಪ ಯರಬಾಳ, ಪ್ರಧಾನ ಕಾರ್ಯದರ್ಶಿ ಡಿ.ಪಿ. ಅರವಿಂದ್, ಖಜಾಂಚಿ ಕೆ.ವಿ. ಸತೀಶ್ ಗೌಡ, ಸಹಕಾರ್ಯದರ್ಶಿ ಶಿವರಾಜ್ ಬಿ.ಸಿ., ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ ಎಂ., ಕಾರ್ಯಕಾರಿ ಸಮಿತಿ ಸದಸ್ಯರಾದ ಗಿರೀಶ್ ಬಿ.ಸಿ., ಭರದ್ವಾಜ್ ಯು.ಎಸ್., ನಂದನ್ ಕುಮಾರ್ ಸಿಂಗ್, ಕಾನೂನು ಸಲಹೆಗಾರರು ಮತ್ತು ಮಾರ್ಗದರ್ಶಕರಾದ ಷಡಾಕ್ಷರಪ್ಪ ಜಿ.ಆರ್., ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Rotary Club Shimoga ಡಾ.ಅಂಬೇಡ್ಕರ್ ಭಾರತದ ಇತಿಹಾಸದಲ್ಲಿ ಸ್ಮರಣೀಯ ವ್ಯಕ್ತಿ- ಜಿ ಕಿರಣ್ ಕುಮಾರ್

0

Rotary Club Shimoga ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಮಾನತೆಯ ಹರಿಕಾರ. ದೇಶದ ಮೊದಲ ಕಾನೂನಿನ ಸಚಿವರು, ಭಾರತ ದೇಶ ಕಂಡ ಮಹಾನ್ ವ್ಯಕ್ತಿ. ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಜಿ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಬೃಹತ್ ಸಂವಿಧಾನಕ್ಕೆ ಇವರ ಕೊಡುಗೆ ಅಪಾರ ಹಾಗೂ ಇವರು ಅದ್ಭುತ ಸಂದೇಶ ನೀಡಿದ್ದಾರೆ. ಇತಿಹಾಸವನ್ನು ಮರೆತವರು ಇತಿಹಾಸ ನಿರ್ಮಿಸಲಾರರು, ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು. ವಿದ್ಯಾವಂತರಾಗಿ ಸಂಘಟಿತರಾಗಿ, ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಭಾರತದ ಇತಿಹಾಸದಲ್ಲಿ ಸ್ಮರಣೀಯ ವ್ಯಕ್ತಿ. ಭಾರತೀಯ ಸಮಾಜಕ್ಕೆ ಅವರ ಕೊಡುಗೆ ಅಪಾರ. ಏ.14ರಂದು ಅವರ ಜಯಂತಿ ಆಚರಣೆ ದೇಶಾದ್ಯಂತ ಆಚರಿಸಲಾಗುತ್ತದೆ. ಅಂಬೇಡ್ಕರ್ ಅವರು ಸಮಾಜ ಸುಧಾರಕರಾಗಿದ್ದರು. ನ್ಯಾಯಶಾಸ್ತ್ರಜ್ಞ ಹಾಗೂ ಅರ್ಥಶಾಸ್ತ್ರಜ್ಞರಾಗಿದ್ದರು ಎಂದರು.
Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಈಶ್ವರ್, ಪಿಡಿಜಿ ಎನ್.ಪ್ರಕಾಶ್, ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಚುಡಾಮಣಿ ಪವಾರ್, ಆನಂದ್, ಗುರುರಾಜ್, ಧರ್ಮೇಂದ್ರ ಸಿಂಗ್, ಬಸವರಾಜ್, ರಮೇಶ್, ಸಂತೋಷ್, ಜಯಶೀಲ ಶೆಟ್ಟಿ, ವಿನುತಾ ಅಶ್ವಿನ್, ಭರತ್, ಧನಂಜಯ್, ಜಗದೀಶ್ ಮೋಹನ್ ಉಪಸ್ಥಿತರಿದ್ದರು.

Mallikarjuna Murugarajendra Swamiji ಆಸ್ಪತ್ರೆಗಳು ಕಡಿಮೆಯಾಗಬೇಕು. ಯೋಗ ಕೇಂದ್ರಗಳು ಹೆಚ್ಚಾಗಬೇಕು-ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರಶ್ರೀ

0

Mallikarjuna Murugarajendra Swamiji ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು ಅತ್ಯಂತ ಅಗತ್ಯ ಎಂದು ಶಿವಗಂಗಾ ಯೋಗಕೇಂದ್ರದ ಮಹಾಪೋಷಕ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಕಲ್ಲಹಳ್ಳಿ ವಿನೋಬನಗರದ ಶಿವಗಂಗಾ ಕಟ್ಟಡದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ನೂತನ ವಿಶ್ವಸ್ಥ ಸಮಿತಿ, ಸಂಸ್ಥೆಯ ಪೋಷಕರು, ಯೋಗ ಶಿಕ್ಷಕರ ಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಅವರು ಶಿವಮೊಗ್ಗ ನಗರದಲ್ಲಿ ಆರಂಭಿಸಿದ ಯೋಗ ದಾಸೋಹ ಒಂದು ರೀತಿಯಲ್ಲಿ ಯೋಗದ ವಸಂತ ಕಾಲ, ಅವರದ್ದು ಭಗೀರಥ ಪ್ರಯತ್ನ. ಸಂಸ್ಥೆಯ ಬೆಳವಣಿಗೆ ಕೇವಲ ಹಣದಿಂದ ಸಾಧ್ಯವಿಲ್ಲ, ಸೇವಾ ಮನೋಭಾವ ಇದ್ದರೆ ಅದು ಬೆಳೆಯುತ್ತದೆ. ಆಸ್ಪತ್ರೆಗಳು ಕಡಿಮೆಯಾಗಬೇಕು ಯೋಗ ಕೇಂದ್ರಗಳು ಹೆಚ್ಚಾಗಬೇಕು. ಆಸೆಗಳು ಮಿತಿಯಲ್ಲಿದ್ದು, ತ್ಯಾಗ ಸೇವೆಯಲ್ಲಿ ಸುಖವಿದೆ. ಪ್ರಪಂಚವೇ ಭಾರತದ ಯೋಗವನ್ನು ಗಮನಿಸುತ್ತಿದೆ. ಮನೆಮನೆಗೂ ಯೋಗವನ್ನು ತಲುಪಿಸಬೇಕು ಎಂದು ತಿಳಿಸಿದರು.
ಯೋಗಾಚಾರ್ಯ ಸಿ. ವಿ. ರುದ್ರಾರಾಧ್ಯ ಮಾತನಾಡಿ, ಶ್ರೀ ಶಿವಗಂಗಾ ಯೋಗ ಕೇಂದ್ರದ ಬೆಳವಣಿಗೆಯಲ್ಲಿ ಸ್ವಾಮೀಜಿ ಅವರ ಮಾರ್ಗದರ್ಶನ ವಿಶ್ವಸ್ತ ಮಂಡಳಿ ಮತ್ತು ನಗರದ ಎಲ್ಲಾ ಜನತೆ ಸಹಕಾವಿದೆ ಎಂದರು.
ಶಿವಗಂಗಾ ಯೋಗಕೇಂದ್ರದ ನೂತನ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಮಾತನಾಡಿ, ಯೋಗ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚು. ಅವರಿಗೆ ಇರಬೇಕಾದ ಆಳವಾದ ಜ್ಞಾನ ಶಿಸ್ತು, ಶಾಖೆಗಳಲ್ಲಿ ಶುಚಿತ್ವ, ಪಾಲಿಸಬೇಕಾದ ನೀತಿ ನಿಯಮಗಳನ್ನು ತಿಳಿಸಿದರು.
Mallikarjuna Murugarajendra Swamiji ಲೆಕ್ಕ ಪರಿಶೋದಕ ಕೆ.ವಿ.ವಸಂತಕುಮಾರ್ ಮಾತನಾಡಿ, ಶಿಕ್ಷಕರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿದರೆ ಉತ್ತಮ ಪ್ರಜೆಗಳು ದೇಶವನ್ನಾಳುತ್ತಾರೆ ಎಂದರು. ಕಾರ್ಯದರ್ಶಿ ಹೆಚ್.ಎಂ. ಚಂದ್ರಶೇಖರಯ್ಯ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಹೊಸತೋಟ ಸೂರ್ಯನಾರಾಯಣ ವಂದಿಸಿದರು.
ಕೈಗಾರಿಕೋದ್ಯಮಿ ಹಾಲಪ್ಪ, ಕಲಗೋಡು ರತ್ನಾಕರ್, ಎಸ್.ಎಸ್.ಜ್ಯೋತಿ ಪ್ರಕಾಶ್, ಕೆ.ಇ.ಕಾಂತೇಶ್, ಡಿ.ಎಂ.ಚಂದ್ರಶೇಖರ್, ಷಡಕ್ಷರಿ, ಜಿ.ವಿಜಯಕುಮಾರ್. ಜಿಎಸ್.ಓಂಕಾರ್, ಕಾಟನ್ ಜಗದೀಶ್, ಡಿಎಸ್.ಚಂದ್ರಶೇಖರ್ ಹಾಗೂ ಯೋಗ ಶಿಕ್ಷಕರು ಉಪಸ್ಥಿತರಿದ್ದರು.

Ambedkar Jayanti ಗ್ರಾಮಾಂತರ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು- ಡಿ.ಬಿ.ವಾಗ್ದೇವಿ

0

Ambedkar Jayanti ಗ್ರಾಮಾಂತರದ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅವರಲ್ಲಿಯೂ ಸಹ ಸಾಕಷ್ಟು ಪ್ರತಿಭೆ ಇದ್ದೇ ಇರುತ್ತದೆ ಅವರಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವುದು ಸಂಘ ಸಂಸ್ಥೆಗಳ ಆದ್ಯ ಕರ್ತವ್ಯ ಸರ್ಕಾರದಿಂದ ಎಷ್ಟೇ ಸಹಕಾರ ಇದ್ದರು ಸಂಘ ಸಂಸ್ಥೆಗಳ ನೆರವು ಸಿಕ್ಕಾಗ ಆ ಮಕ್ಕಳು ಶಿಕ್ಷಣದಲ್ಲಿಯೂ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಪರಿಪೂರ್ಣತೆಯನ್ನು ಹೊಂದುತ್ತಾರೆ ಎಂದು ಇನ್ನರ್ವಿಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ಡಿ ಬಿ ವಾಗ್ದೇವಿಯವರು ನುಡಿದರು. ಅಂಬೇಡ್ಕರ್ ಜಯಂತಿಯ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂಚಿನಹಳ್ಳಿಗೆ ಲೈಬ್ರರಿಯಾ ಪುಸ್ತಕಗಳನ್ನು ಇಡಲು ಇನ್ನರ್ವಿಲ್ ಸದಸ್ಯನಿಯರ ಸಹಕಾರದಿಂದ ಎರಡು ದೊಡ್ಡ ಅಲ್ಮೆರಗಳನ್ನು ಕೊಡುಗೆಯಾಗಿ ನೀಡಿ ನಂತರ ಲೇಖನ ಸಾಮಗ್ರಿಗಳನ್ನು ವಿತರಿಸಿದರು ಈಗಾಗಲೇ ಇನ್ನರ್ ವೀಲ್ ಶಿವಮೊಗ್ಗ ಸಂಸ್ಥೆ ವತಿಯಿಂದ ಗ್ರಾಮಾಂತರ ಪ್ರದೇಶದಲ್ಲಿ ಹಲವಾರು ಸೇವಾ ಚಟುವಟಿಕೆಗಳನ್ನ ಹಮ್ಮಿಕೊಳ್ಳುವುದರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನಮ್ಮ ಸದಸ್ಯನಿಯರ ಸಹಕಾರದಿಂದ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ವಿವಿಧ ಬಡಾವಣೆಗಳಲ್ಲಿ ಮಹಿಳೆಯರ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖಾಂತರ ಮಾನವೀಯ ಸೇವೆಗಳನ್ನು ಮಾಡುತ್ತಾ ಬಂದಿದ್ದೇವೆ ಎಂದು ನುಡಿದರು. Ambedkar Jayanti ಇದೇ ಸಂದರ್ಭದಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಬಿಂದು ವಿಜಯ ಕುಮಾರ್ ಅವರು ಮಾತನಾಡುತ್ತಾ ಸಂಘ ಸಂಸ್ಥೆಗಳಿಂದ ನೀಡಿದಂತಹ. ಕೊಡುಗೆಗಳು ಯಾವುದೇ ಕಾರಣಕ್ಕೂ ಉಪಯೋಗವಾಗಬಾರದು ಎಂದು ದೇಣಿಗೆ ನೀಡಿದ ದಾನಿಗಳನ್ನುಸ್ಮರಿಸಿದರು. ಕಾರ್ಯಕ್ರಮದಲ್ಲಿ ಇನ್ನರ್ವೀಲ್ ಮಾಜಿ ಅಧ್ಯಕ್ಷರಾದ. ಸುನಂದಾ ಜಗದೀಶ್. ವಾಣಿ ಪ್ರವೀಣ್. ಕಾರ್ಯದರ್ಶಿ ಲತಾ ಸೋಮಣ್ಣ ಹಾಗೂ ಮುಖ್ಯ ಶಿಕ್ಷಕರು ಮತ್ತು ಇನ್ನರ್ ವಿಲ್ ಪದಾಧಿಕಾರಿಗಳು ಉಪಸ್ಥಿತರಿದ್ದರು

Madhu Bangarappa ನಮ್ಮ ತಂದೆತಾಯಿಯಂತೆ ಅಂಬೇಡ್ಕರ್ ನಮ್ಮ ಜೀವನದ ಬಹಳ ಮುಖ್ಯ ವ್ಯಕ್ತಿ- ಮಧು ಬಂಗಾರಪ್ಪ

0

Madhu Bangarappa ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ನಾವೆಲ್ಲಾ ಒಂದೇ ತಾಯಿಯ ಮಕ್ಕಳಂತೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ತೋರಿಸಿರುವ ಹಾದಿಯಲ್ಲಿ ಒಟ್ಟಾಗಿ ನಡೆಯೋಣ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 134 ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆಯಿAದ ಮಾತ್ರ ಶಕ್ತಿ ಎಂದು ಅಂಬೇಡ್ಕರ್‌ರವರು ತೋರಿಸಿದ್ದಾರೆ. ಸಂಘಟನೆ ರೂಪ ಬೇರೆ ಬೇರೆಯಾಗಿದ್ದರೂ ಉದ್ದೇಶ ಒಂದೇ ಇರುತ್ತದೆ. ಅಂದು ಬ್ರಿಟಿಷರಿಗೆ ಹೆಚ್ಚಿನ ಶಕ್ತಿ ಇರಲಿಲ್ಲ. ಬದಲಾಗಿ ಅವರು ನಮ್ಮನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿದ್ದರಿಂದ ಹಾಗೆ ಕಂಡರು. ಎಲ್ಲರನ್ನು ಒಗ್ಗೂಡಿಸುವ ಕೆಲಸವನ್ನು ಅಂಬೇಡ್ಕರ್‌ರAತಹ ಮಹನೀಯರು ಮಾಡಿದರು. ವೈವಿಧ್ಯತೆಯಿಂದ ಕೂಡಿರುವ ನಮ್ಮ ದೇಶಕ್ಕೆ ಅದ್ಭುತವಾದ ಸಂವಿಧಾನ ನೀಡುವಲ್ಲಿ ಬಹು ದೊಡ್ಡ ಕೊಡುಗೆ ಇತ್ತ ಇವರು ನಮ್ಮ ಸಂವಿಧಾನ ಶಿಲ್ಪಿ ಎನಿಸಿಕೊಂಡಿದ್ದಾರೆ.
ಅಂಬೇಡ್ಕರ್‌ರವರು ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಜಾತಿ ವ್ಯವಸ್ಥೆ, ಅಸೃಶ್ಯತೆ ವಿರುದ್ದ ಹೋರಾಡಿ, ಅನೇಕ ಸುಧಾರಣೆಗಳನ್ನು ತಂದರು.
ನಮ್ಮ ಸಂವಿಧಾನದ ಪೀಠಿಕೆ ಬಗ್ಗೆ ಮುಖ್ಯವಾಗಿ ವಿದ್ಯಾರ್ಥಿಗಳು ತಿಳಿಯಬೇಕೆಂಬ ಉದ್ದೇಶದಿಂದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯವಾಗಿ ಓದುವ ಆದೇಶವನ್ನು ರಾಜ್ಯ ಸರ್ಕಾರ ಮಾಡಿದ್ದು, 1.8 ಕೋಟಿ ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದರು.
ಮುಖ್ಯವಾಗಿ ಮಾನವೀಯತೆ ಮೆರೆಯಬೆಕು. ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂದು ಬಾಬಾಸಾಹೇಬ್ ಹೇಳುತ್ತಿದ್ದು, ನಮ್ಮ ತಂದೆ ತಾಯಿಯಂತೆ ಅಂಬೇಡ್ಕರ್‌ರವರು ನಮ್ಮ ಜೀವನದ ಬಹಳ ಮುಖ್ಯ ವ್ಯಕ್ತಿಯಾಗಿದ್ದಾರೆ.
ಪಿಯುಸಿಯಲ್ಲಿ ನಪಾಸಾದ ವಿದ್ಯಾರ್ಥಿಗಳಿಗೆ 2 ಮತ್ತು 3 ನೇ ಪರೀಕ್ಷೆ ಬರೆಯುವ ಅವಕಾಶವಿದ್ದು ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಉಚಿತ ಗ್ಯಾರಂಟಿ ಯೋಜನೆಗಳು ಬಡವರು, ಹಿಂದುಳಿದವರಿಗೆ ಅತ್ಯಂತ ಸಹಕಾರಿಯಾಗಿವೆ ಎಂದರು.
ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ಭೂ ಮಂಡಲ ಇರುವವರೆಗೆ ಸಂವಿಧಾನವನ್ನು ಯಾರೂ ಬದಲಾಯಿಸದಂತಹ ಸಂವಿಧಾನ ನೀಡಿದ ಧೀಮಂತ, ದಾರ್ಶನಿಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್. ಶೋಷಿತ ವರ್ಗದ ಧ್ವನಿಯಾಗಿ, ಅವರ ಉಸಿರಾಗಿ ಜೀವನವನ್ನು ಕಟ್ಟಿಕೊಟ್ಟಿದ್ದಾರೆ. ಓರ್ವ ಆರ್ಥಿಕ ತಜ್ಞರೂ ಆಗಿದ್ದ ಅಂಬೇಡ್ಕರ್ ರಿಸರ್ವ್ ಬ್ಯಾಂಕ್ ಇಂಡಿಯಾ ಸ್ಥಾಪನೆಗೆ ಒತ್ತು ನೀಡಿದ್ದರು.
Madhu Bangarappa ಉದಾರವಾದಿ ಕೈಗಾರಿಕಾ ನೀತಿ, ನದಿ ಜೋಡಣೆ, ರಾಷ್ಟ್ರೀಯ ಜಲ ನೀತಿ ನೀಡುವ ಪ್ರಯತ್ನ ಮಾಡಿದ್ದರು. ಹಿಂದುಳಿದವರು, ಪರಿಶಿಷ್ಟ ಜಾತಿ, ಪಂಗಡದವರು, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದರು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಇವರು 9 ಭಾಷೆ ಬಲ್ಲವರಾಗಿದ್ದು, ಉತ್ತಮ ವರ್ಣಚಿತ್ರಕಾರರಾಗಿದ್ದು ಇವರ ಸ್ವಂತ ಗ್ರಂಥಾಲಯದಲ್ಲಿ 50 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳಿದ್ದವು
ರಾಜ್ಯ ಸರ್ಕಾರ ಶಾಲಾ-ಕಾಲೇಜು ಮಕ್ಕಳಿಗೆ ಸಂವಿಧಾನ ಪೀಠಿಕೆ ಓದಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ಡಾ.ಅಂಬೇಡ್ಕರ್ ಜನ್ಮ ಸ್ಥಳದಲ್ಲಿ ಸುಮಾರು ರೂ. 300 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಧೀಕ್ಷಾಭೂಮಿ ಅಭಿವೃದ್ಧಿಪಡಿಸಲಾಗಿದೆ. ಪ.ಜಾ ಪ. ಪಂ ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ , ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ, ಉಚಿತ ಉಜ್ವಲ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಹಿಂದುಳಿದವರ ಏಳಿಗೆಗಾಗಿ ನೀಡಲಾಗುತ್ತಿದೆ ಎಂದ ಅವರು ಪಕ್ಷಾತೀತ, ಜಾತ್ಯಾತೀತವಾಗಿ ಅಂಬೇಡ್ಕರ್ ಅವರ ಆಶಯದಂತೆ ಬದುಕೋಣ ಎಂದರು.
ಶಾಸಕರಾದ ಎಸ್.ಎನ್ ಚನ್ನಬಸಪ್ಪ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದು ಶಕ್ತಿ. ಅವರ ಚಿಂತನೆಗಳನ್ನು ಅಳವಡಿಸಿಕೊಂಡು ನಾವೆಲ್ಲ ಒಂದೇ ಎಂಬ ಭಾವನೆಯಿಂದ ರಾಜಕೀಯ, ಸಾಮಾಜಿಕವಾಗಿ ಜೊತೆಯಾಗಿ ಸಾಗಬೇಕು. ಇದು ಅಂಬೇಡ್ಕರ್ ಅವರ ಆಶಯವಾಗಿದ್ದು ಅದರಂತೆ ನಾವು ನಡೆದುಕೊಳ್ಳಬೇಕೆಂದರು.
ಶಾಸಕರಾದ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್‌ರವರನ್ನು ಇಡೀ ಪ್ರಪಂಚ ಗೌರವಯುತವಾಗಿ, ಪ್ರೀತಿಯಿಂದ ಕಾಣುತ್ತಿದೆ. ಅವರು ಬೆಳೆದು ಬಂದ ರೀತಿ ಮಾದರಿಯಾಗಿದ್ದು ನಮ್ಮೆಲ್ಲರ ಧ್ವನಿ ಅವರು. ಮಹಿಳಾ ಸಮಾಜನತೆ ಬಗ್ಗೆ ಚಿಂತಿಸಿದ ಮೊದಲಿಗರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾಶಾಸ್ತç ವಿಭಾಗದ ಮುಖ್ಯಸ್ಥರಾದ ಪ್ರೊ.ಮೇಟಿ ಮಲ್ಲಿಕಾರ್ಜುನ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಜಗತ್ತು ಕಂಡ ಮುಖ್ಯ ಚಿಂತಕ. ಲೋಕ ಜ್ಞಾನಿ. 130 ವರ್ಷಗಳ ಕಾಲ ಬೇರೆ ಬೇರೆ ಸ್ವರೂಪದಲ್ಲಿ ಇವರನ್ನು ಅನುಸರಿಸಲಾಗುತ್ತಿದೆ. ಅವರು ಪ್ರತಿಪಾದಿಸಿದ ವಿಚಾರಗಳನ್ನು ರಾಜ್ಯ ಸರ್ಕಾರ 22 ಸಂಪುಟಗಳಲ್ಲಿ ಪ್ರಕಟಿಸಿದೆ. ಈ ಸಂಪುಟಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಅದನ್ನೆಲ್ಲ ನಾವು ಓದಬೇಕಿದೆ. 537 ವಿಶೇಷ ಭಾಷಣ ಮಾಡಿದ್ದಾರೆ. ಪ್ರಭುತ್ವ ಮತ್ತು ಜನತೆ ಕುರಿತು ಮಹತ್ವದ ಚಿಂತನೆ ನೀಡಿದ್ದಾರೆ.
ಒಟ್ಟಾರೆ ಬದುಕಿನ ಚರ್ಚೆ, ಅವರ ವಿಚಾರಗಳು, ಚಿಂತನೆಗಳು ನಮಗೆ ಒತ್ತಾಸೆಯಾಗಿ, ಬೆನ್ನೆಲುಬಾಗಿ ನಿಂತಿವೆ. ಹಸನಾದ, ವ್ಯವಸ್ಥಿತವಾದ, ಆದರ್ಶ ಬದುಕಿಗೆ ಅವರು ಮಾದರಿಯಾಗಿದ್ದಾರೆ. ಅಸ್ಪೃಶ್ಯರಾಗಿ ಅನೇಕ ಕಷ್ಟಗಳನ್ನು ಸಹಿಸಿದ್ದರೂ ಭಾರತವೆಂಬ ಭವ್ಯ, ಪ್ರಜಾಸತ್ತಾತ್ಮಕ ದೇಶ ಕಟ್ಟಲು ಸಹರಿಯಾಗಿದ್ದಾರೆ. ನೆಮ್ಮದಿಯ ಬದುಕು ಬದುಕಲು ತತ್ವಗಳನ್ನು ರೂಪಿಸಿದ್ದಾರೆ. ಮಹಿಳಾ ಸಬಲೀಕರಣ, ಮಹಿಳೆಯರ ಸ್ವಾಯತ್ತತೆಗಾಗಿ ಅನೇಕ ಯೋಜನೆಗಳನ್ನು ಅವತ್ತೇ ರೂಪಿಸಿದ್ದರು. ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಮಾಜಿಕ ಚಿಂತನೆಗಳನ್ನು ಕಟ್ಟಿಕೊಡಲು ಅವರು ಬುದ್ದ ಮಾರ್ಗ ಅನುಸರಿಸಿದ್ದಾರೆ.ಅಧ್ಯಯನ ಶೀಲರಾದ ಇವರು ಖಚಿತ ನಿಲುವು ತಾಳುವ ಮುನ್ನ ಅಧ್ಯಯನ ನಡೆಸುತ್ತಿದ್ದರು. ಜಾತ್ಯಾತೀತತೆ ಬಗ್ಗೆ ಸ್ಪಷ್ಟ ತಿಳುವಳಿಕೆ, ನಿಲುವು ಹೊಂದಿದ್ದ ಇವರು ನಮಗೆ ದಾರಿದೀಪ. ಇವರ ಚಿಂತನೆಗಳು ನಮಗೆ ಊರುಗೋಲಾಗಿವೆ.
ಪೀಠಿಕೆಯಲ್ಲಿ ನಮ್ಮ ದೇಶ ಹೇಗೆ ಸಾಗಬೇಕೆಂಬ ಕುರಿತು ಸ್ಪಷ್ಟ ಸೂತ್ರಗಳನ್ನು ನೀಡಿದ್ದಾರೆ. ಒಂದು ದೇಶಕ್ಕೆ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ವಾತಂತ್ರ‍್ಯ ಏಕಕಾಲದಲ್ಲಿ ಒದಗಿಬಂದರೆ ಅದು ಮಾದರಿ ದೇಶ ಆಗುತ್ತದೆ ಎಂಬ ವಿಚಾರ ಮಂಡಿಸಿದ್ದಾರೆ. ಅವರ ಚಿಂತನೆ, ವಿಚಾರಗಳನ್ನು ಪ್ರತಿ ಶಾಲಾ ಕಾಲೇಜುಗಳಲ್ಲಿ ಅತ್ಯಂತ ಜತನದಿಂದ ಅಧ್ಯಯನ ಮಾಡಿದರೆ ನಮ್ಮ ದೇಶ ಇನ್ನೂ ಉತ್ತಮ ಮತ್ತು ಮಾದರಿ ದೇಶವಾಗುತ್ತದೆ ಎಂದ ಅವರು ಅವರ ಚಿಂತನೆಗಳು ಕಣ್ಣೆದುರಿನ ಬೆಳಕು. ಅವರ ಚಿಂತನೆ ಚರಂತನವಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಸಕ್ಷಮ ಅಂಗನವಾಡಿ ಕೇಂದ್ರಗಳಿಗೆ ಎಲ್ ಇ ಡಿ ಟಿವಿ ವಿತರಣೆ ಮಾಡಲಾಯಿತು. ಭಾಗ್ಯಲಕ್ಷ್ಮಿ ಯೋಜನೆಯಡಿ 18 ವರ್ಷ ತುಂಬಿದ ಫಲಾನುಭವಿಗಳಿಗೆ ಪರಿಪಕ್ವ ಮೊತ್ತ ನೀಡಲಾಯಿತು. ಸುಕನ್ಯಾ ಸಮೃದ್ದಿ ಯೋಜನೆಯ ಫಲಾನುಭವಿಗಳಿಗೆ ಪಾಸ್ ಬುಕ್ ವಿತರಣೆ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಾದೇಶ ಪತ್ರ ನೀಡಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.
ಅಂಬೇಡ್ಕರ್ ಭವನದ ಆವರಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಜೀವನ ಕುರಿತಾದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.
ವಿಧಾನ ಪರಿಷತ್ ಶಾಸಕರಾದ, ಬಲ್ಕೀಶ್ ಬಾನು, ಡಿ.ಎಸ್.ಅರುಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಷಡಕ್ಷರಿ, ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಎಸಿ ಸತ್ಯನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

Ambedkar Jayanti 2025 ಡಾ.ಅಂಬೇಡ್ಕರ್ ಪ್ರತಿಪಾದಿಸಿದ ಸಮಾಜ ನಿರ್ಮಾಣಕ್ಕೆ ನಮ್ಮ ಸರ್ಕಾರದ ಪ್ರಮಾಣಿಕ ಪ್ರಯತ್ನ- ‘ಸೀಎಂ’ಸಿದ್ಧರಾಮಯ್ಯ.

0

Ambedkar Jayanti 2025 ನಮ್ಮ ಸರ್ಕಾರ ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರ ಅನುಸರಿಸುವ ಪ್ರಯತ್ನ ಮಾಡುತ್ತಿದ್ದು, ಅವರು ಬಯಸಿದಂತ ಸಮಾಜವನ್ನು ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ನಮ್ಮ ಸರ್ಕಾರ ಅತ್ಯಂತ ಗೌರವ, ನಮ್ರತೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವನ್ನು ಆಚರಿಸುತ್ತಿದೆ. ಅಂಬೇಡ್ಕರ್ ಅವರು ಕೇವಲ ದಲಿತರ ನಾಯಕರಾಗಿರದೇ ಸಮಾಜದಲ್ಲಿ ಶೋಷಿತರು, ಅನ್ಯಾಯ ಹಾಗೂ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಅನ್ಯಾಯದಿಂದ ಮುಕ್ತಿ ಪಡೆಯಬೇಕೆಂದು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದು ಡಾ.ಅಂಬೇಡ್ಕರ್ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಹಾನ್ ಮೇಧಾವಿಯಾಗಿದ್ದ ಅಂಬೇಡ್ಕರ್, ತಮ್ಮ ಸ್ವಾರ್ಥಕ್ಕಾಗಿ ಓದಿಕೊಳ್ಳದೆ ಶೋಷಿತರ, ಅಸ್ಪೃಶ್ಯತೆಯಿಂದ ನರಳುತ್ತಿರುವ ಜನರಿಗೆ ವಿಮೋಚನೆ ನೀಡಲೆಂದೇ ಜ್ಞಾನಾರ್ಜನೆ ಮಾಡಿಕೊಂಡಿದ್ದರು. ದೇಶದ ಕೆಲವೇ ಮೇಧಾವಿಗಳಲ್ಲಿ ಅವರೂ ಒಬ್ಬರು. ದೇಶ ಕಂಡ ಮಹಾನ್ ನಾಯಕರು ಹಾಗೂ ಮಾನವತಾವಾದಿ. ಎಲ್ಲರೂ ಮನುಷ್ಯರಾಗಿ ಬದುಕಬೇಕು. ಸಮಾಜದಲ್ಲಿ ಎಲ್ಲರಿಗೂ ಸಮಾನತೆ ದೊರಕಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರಕಬೇಕು. ಹಾಗಾದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು. ಅಸ್ಪೃಶ್ಯತೆ ನಾಶವಾಗಬೇಕು ಎಂದು ಅಂಬೇಡ್ಕರ್ ಶ್ರಮಿಸಿದ್ದರು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಗುಣಗಾನ ಮಾಡಿದರು.

ಇತ್ತೀಚೆಗೆ ಕೆಲವರು ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ್ ಅವರನ್ನು ತಮಗೆ ಸೇರಿದವರೆಂದು ಬಿಂಬಿಸಲು ಪ್ರಾರಂಭಿಸಿದ್ದಾರೆ. ಮಹಾತ್ಮ ಗಾಂಧಿಯವರನ್ನು ಕೊಂದವರು, ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ ಮನುವಾದಿಗಳೇ ಇಂದು ಅವರನ್ನು ತಮ್ಮ ಸ್ವಂತ ಎನ್ನಲು ಪ್ರಾರಂಭಿಸಿದ್ದಾರೆ. ಸಂವಿಧಾನ ಜಾರಿಗೆ ಬಂದ ನಾಲ್ಕೈದು ದಿನಗಳಲ್ಲೇ ‘ದಿ ಆರ್ಗನೈಜರ್’ ಪತ್ರಿಕೆಯಲ್ಲಿ ವಿರೋಧ ಮಾಡಿ ಬರೆದಿದ್ದರು. ಈಗ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತ್ತು ಎಂದು ಮಾತನಾಡುತ್ತಾರೆ. ಅಂಬೇಡ್ಕರ್ ಅವರೇ ನನ್ನನ್ನು ಸೋಲಿಸಿದವರು ಸಾವರ್ಕರ್ ಮತ್ತು ಕಮ್ಯುನಿಸ್ಟ್ ನಾಯಕ ಎಸ್.ಎ ಡಾಂಗೆ ಎಂದು ಪತ್ರ ಬರೆದಿದ್ದರು.

Ambedkar Jayanti 2025 ಬಿಜೆಪಿ ಸ್ವಾರ್ಥಕ್ಕಾಗಿ ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಅವರನ್ನು ತಮ್ಮದೇ ಸ್ವಂತ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಅಂಬೇಡ್ಕರ್ ಅವರು ‘ನಾನು ಹಿಂದೂ ಆಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯಲಾರೆ’ ಎಂದು ಹೇಳಿದ್ದರು. ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಿಸಿ, ಅದು ಸಾಧ್ಯವಾಗುವುದಿಲ್ಲ ಎಂದು ಅರಿವಾದ ನಂತರ ಹಿಂದೂ ಧರ್ಮವನ್ನು ತ್ಯಜಿಸಿ, ಮಾನವೀಯತೆ ಮತ್ತು ಸಮಾನತೆ ಇದ್ದ ಭೌದ್ಧ ಧರ್ಮವನ್ನು ಸ್ವೀಕರಿಸಿದರು.

ಬಿಜೆಪಿಯವರು ಜವಾಹಾರ್ ನೆಹರೂ ಅವರನ್ನು ವಿರೋಧಿಸುತ್ತಾರೆ. ಅಂಬೇಡ್ಕರ್ ಅವರನ್ನು ನೆಹರೂ ವಿರೋಧಿಸಲಿಲ್ಲ. ಹಾಗಿದ್ದರೆ, ಅಂಬೇಡ್ಕರ್ ಅವರನ್ನು ಸಂವಿಧಾನ ಬರೆಯಲು ಆಯ್ಕೆ ಮಾಡುತ್ತಿರಲಿಲ್ಲ. ಹಿಂದೂ ಕೋಡ್ ಬಿಲ್ ತಂದಾಗ ನೆಹರೂ ಅದರ ಪರವಾಗಿಯೇ ಇದ್ದರು. ನಮ್ಮಲ್ಲಿರುವ ಕೆಲವು ಶಕ್ತಿಗಳು ನೆಹರೂ ಅವರಿಗೆ ಅದನ್ನು ಜಾರಿ ಮಾಡಲು ಬಿಡಲಿಲ್ಲ. ಆದರೆ ಹಿಂದೂ ಕೋಡ್ ಬಿಲ್ ನಲ್ಲಿರುವ ಅಂಶಗಳನ್ನು ನೆಹರೂ ಅವರು ಅವರ ಅಧಿಕಾರದ ಅವಧಿಯಲ್ಲಿ ಜಾರಿ ಮಾಡುವ ಪ್ರಯತ್ನ ಮಾಡಿದ್ದರು ಎಂದು ಸಿದ್ಧರಾಮಯ್ಯ ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯ ಅಂಗವಾಗಿ ವಿಧಾನಸೌಧದಲ್ಲಿರುವ ಬಾಬಾ ಸಾಹೇಬರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು