Shivamogga Trading Academy ದೇಶ, ವಿಶ್ವದ ಆರ್ಥಿಕತೆ ಅರಿವಿನೊಂದಿಗೆ ಮನೆಯಲ್ಲೆ ಕುಳಿತು ಆದಾಯ ಗಳಿಸುವ ಷೇರು ಮಾರುಕಟ್ಟೆಯ ಎಲ್ಲಾ ಜ್ಞಾನ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಆರಂಭಗೊಂಡ ಶಿವಮೊಗ್ಗ ಟ್ರೇಡಿಂಗ್ ಅಕಾಡೆಮಿ ಯಶಸ್ವಿಯಾಗುತ್ತಿದ್ದು ನಿತ್ಯ ಅದರ ಕಲಿಕೆಗೆ ಅಪಾರ ಆಸಕ್ತರು ಆಗಮಿಸುತ್ತಿದ್ದಾರೆ ಎಂದು ಶಿವಮೊಗ್ಗ ಟ್ರೇಡಿಂಗ್ ಅಕಾಡೆಮಿಯ ಚಂದ್ರಶೇಖರ್ ನವುಲೆ ಹಾಗೂ ಹರೀಶ್ ಘಾಟ್ಕೆ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತಾಡುತ್ತಾ, ಕೇವಲ ಮೂರು ದಿನ ಕಲಿತು ನಂತರ ಮನೆಯಲ್ಲಿಯೇ ಕುಳಿತು ದುಡಿಮೆ ಮಾಡುವ, ಸಾಕಷ್ಟು ಆದಾಯ ಗಳಿಸುವ ಅವಕಾಶದ ಷೇರು ಮಾರುಕಟ್ಟೆ ತರಬೇತಿ ನೀಡುವ ತರಬೇತಿ ಕೇಂದ್ರ ಇದೇ ಮೊಟ್ಟಮೊದಲ ಬಾರಿಗೆ ಶಿವಮೊಗ್ಗದ ಪೊಲೀಸ್ ಚೌಕಿಯಲ್ಲಿ ಆರಂಭಗೊಂಡಿದೆಎಂದರು.
ಇದು ಜೂಜಾಟವಲ್ಲ, ಕಾನೂನುಬದ್ದವಾದ ಉತ್ತಮ ಕಂಪನಿಗಳ ಮೇಲೆ ಬಂಡವಾಳ ಹೂಡಿಕೆಯೊಂದಿಗೆ ಲಾಭ ಗಳಿಸಲು ಅಗತ್ಯ ಜ್ಞಾನವನ್ನು ನಿರಂತರವಾಗಿ ನೀಡುವ ಪ್ರಯತ್ನ ಇದಾಗಿದೆ ಕಲಿಕೆಗೆ ಯಾವುದೇ ಗರಿಷ್ಠ ಪ್ರಮಾಣದ ವಿದ್ಯಾರ್ಹತೆಯ ಅಗತ್ಯವಿಲ್ಲ. ಬುದ್ದಿವಂತಿಕೆ ಅತ್ಯಗತ್ಯ. ತಮ್ಮ ಬಿಡುವಿನ ಸಮಯದಲ್ಲಿ ಸುಲಭವಾಗಿ ದುಡಿಯುವ ಅವಕಾಶ ನೀಡುವಂತಹ ಕೇಂದ್ರ ಸರ್ಕಾರದ ಸೆಬಿ ಆಡಳಿತಕ್ಕೊಳಪಟ್ಟ ಷೇರು ಮಾರುಕಟ್ಟೆಯ ಬಗ್ಗೆ ಸಮಗ್ರ ಪರಿಚಯವನ್ನು ನೀಡುವಂತಹ ತರಬೇತಿ ಕೇಂದ್ರ ಇದಾಗಿದೆ ಎಂದು ಹರೀಶ್ ತಿಳಿಸಿದರು.
Shivamogga Trading Academy ಕೇವಲ ಮೂರು ದಿನ ತರಬೇತಿ ಪಡೆದರೆ ಸಾಕು. ನಂತರ ಅವರಿಗೆ ಯಾವಾಗಲೂ ಅದರ ಯಾವುದೇ ಸಮಸ್ಯೆಗಳಿದ್ದರೂ, ಅವುಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಶಿವಮೊಗ್ಗದ ಯುವ ಪ್ರತಿಭಾನ್ವಿತರಾದ ಚಂದ್ರಶೇಖರ್ ನವುಲೆ, ಹರೀಶ್ ಬಿ. ಹಾಗೂ ಕೆನರಾ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಜಗದೀಶ್ ಅವರ ತರಬೇತಿಯನ್ನೊಳಗೊಂಡ ಅಕಾಡೆಮಿಯನ್ನು ಆರಂಭಿಸಲಾಗಿದೆ.
ಷೇರು ಮಾರುಕಟ್ಟೆಯ ಬೇಸಿಕ್ ಮಾಹಿತಿ, ಹಣ ವಿನಿಯೋಗ, ಕಂಪನಿಯ ಆಯ್ಕೆ, ಚಾಟ್ ಅನಲಿಸಿಸ್, ಕ್ಯಾಂಡಲ್ ಅನಾಲಿಸಿಸ್ ಹಾಗೂ ಪ್ರಸ್ತುತ ಷೇರು ಮಾರುಕಟ್ಟೆಯ ಸಮಗ್ರ ಮಾಹಿತಿಯನ್ನು ಅತ್ಯಂತ ಸೂಕ್ಷ್ಮ ಹಾಗೂ ಅರ್ಥಗರ್ಭಿತವಾಗಿ ಹೇಳಿಕೊಡುವಂತಹ ತರಬೇತಿ ಕೇಂದ್ರ ಇದಾಗಿದೆ.
ಶಿವಮೊಗ್ಗದಲ್ಲಿ ಮೊಟ್ಟಮೊದಲ ಬಾರಿಗೆ ಇಂತಹ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದ್ದು, ಮಹಿಳೆಯರು ನಿವೃತ್ತ ಉದ್ಯೋಗಿಗಳು ಹಾಗೂ ಯುವಕ, ಯುವತಿಯರು ಇದರ ಪ್ರಯೋಜನ ಪಡೆಯಬಹುದಾಗಿದ್ದು ಮನೆಯಲ್ಲಿಯೇ ಕುಳಿತು ಹಣ ಗಳಿಸುವ ಅವಕಾಶ ಇದಾಗಿದೆ.
ನೀವು ಕೂಡಿಟ್ಟ ಹಣ ವರ್ಷದಿಂದ ವರ್ಷಕ್ಕೆ ಮೌಲ್ಯ ದಾಖಲೆಯ ಪ್ರಕಾರ ಕಡಿಮೆಯಾಗುತ್ತದೆ. ಆದರೆ ಈ ಹಣವನ್ನು ಅತ್ಯಂತ ಜಾಣ್ಮೆಯಿಂದ ಷೇರು ಮಾರುಕಟ್ಟೆಯಲ್ಲಿ ವಿನಿಯೋಗಿಸಿದರೆ, ಅತಿ ಹೆಚ್ಚು ಲಾಭಗಳಿಸುವ ಅವಕಾಶ ಇಲ್ಲಿ ದೊರೆಯುತ್ತದೆ.
ಬ್ಯಾಂಕ್ ನಲ್ಲಿ ಇಡುವ ಎಫ್ ಡಿ, ಎಲ್ ಐ ಸಿ, ಗೋಲ್ಡ್ ಬಡ್ಡಿ ಹಾಗೂ ಇತರ ಕಡೆಯಿಂದ ಬರುವ ಆದಾಯಗಳು ಅತ್ಯಂತ ಕಡಿಮೆ ವಾರ್ಷಿಕ ಬಡ್ಡಿಯ ಪ್ರಮಾಣವನ್ನು ಹೊಂದಿರುತ್ತವೆ. ಮ್ಯೂಚುಯಲ್ ಫಂಡ್ ಮೂಲಕ ಹಾಗೂ ಷೇರುಗಳ ಮೂಲಕ ಅತಿ ಹೆಚ್ಚು ಲಾಭಗಳಿಸುವ ಅವಕಾಶ, ಅದರ ಬಳಕೆ ವಿಧಿವಿಧಾನಗಳ ಬಗ್ಗೆ ಅತ್ಯಂತ ಸುಲಭವಾಗಿ ತಿಳಿಸಿಕೊಡುವ ಕಾರ್ಯ ಮಾಡಲಾಗುತ್ತದೆ.
ಬೆಂಗಳೂರಿನಂತಹ ನಗರಗಳಲ್ಲಿ ಇಂತಹ ಹಲವು ತರಬೇತಿ ಕೇಂದ್ರಗಳಿದ್ದು, ಅವುಗಳ ಪ್ರವೇಶ ಶುಲ್ಕವೇ ಅತಿ ಹೆಚ್ಚಾಗಿರುತ್ತದೆ. ಇಲ್ಲಿ ಅತ್ಯಂತ ಕಡಿಮೆ ದರದಲ್ಲಿ ಷೇರು ಮಾರುಕಟ್ಟೆಯ ಸಮಗ್ರ ವಿಷಯವನ್ನು ಹೇಳಿಕೊಡುವಂತಹ ಕಾರ್ಯವನ್ನು ಶಿವಮೊಗ್ಗದಲ್ಲಿ ಮಾಡಲಾಗಿದೆ.
ಅತ್ಯಂತ ಸುಲಭವಾಗಿ ನಮ್ಮ ಸ್ಥಳಿಯ ಭಾಷೆಯಲ್ಲಿ ಷೇರು ಮಾರುಕಟ್ಟೆಯ ವ್ಯವಹಾರ ಮಾಡುವುದನ್ನು ಹೇಳಿಕೊಡುವ ತರಬೇತಿ ಕೇಂದ್ರ ಇದಾಗಿದ್ದು, ವಾರದ ಶನಿವಾರದಿಂದ ಸೋಮವಾರದವರೆಗೆ ಬೆಳಗ್ಗೆ 9.45 ರಿಂದ ಸಂಜೆ 4:30ರ ತನಕ ಮೂರು ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಶಿವಮೊಗ್ಗ ಪೊಲೀಸ್ ಚೌಕಿ ಆವರಣದಲ್ಲಿರುವ ಅಮರ್ ಗ್ರಾನೈಟ್ ಪಕ್ಕದ ಮಳಿಗೆಯ ಮೊದಲ ಮಹಡಿಯಲ್ಲಿನ ಟ್ರೇಡಿಂಗ್ ಅಕಾಡೆಮಿಯಲ್ಲಿ ಈಗಾಗಲೇ ತಲಾ ಇಪ್ಪತೈದು ಜನರ ನಾಲ್ಕು ಬ್ಯಾಚ್ ಗಳು ಯಶಸ್ವಿಯಾಗಿ ಮುಗಿದಿವೆ. ಬರುವವರ ಬೇಡಿಕೆ ಹೆಚ್ಚಿದೆ,
ಹೆಚ್ಚಿನ ವಿವರಗಳಿಗೆ ಹಾಗೂ ನೋಂದಣಿಗೆ 99167 99555 ಅಥವಾ 90717 77151 ಗೆ ಸಂಪರ್ಕಿಸಬಹುದು.
ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರಾದ ಗಜೇಂದ್ರ ಸ್ವಾಮಿ ಎಸ್.ಕೆ. ಉಪಸ್ಥಿತರಿದ್ದರು
Shivamogga Trading Academy ಮಾರುಕಟ್ಟೆಯ ಸಮಗ್ರ ಜ್ಞಾನವನ್ನ ಶಿವಮೊಗ್ಗ ಟ್ರೇಡಿಂಗ್ ಅಕಾಡೆಮಿ ನೀಡುತ್ತಿದೆ- ಚಂದ್ರಶೇಖರ್ ನವುಲೆ
The District Child Labour Planning Society ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಶಿರಾಳಕೊಪ್ಪದಲ್ಲಿ ಇಬ್ಬರು ಬಾಲಕರು ಮತ್ತು ಓರ್ವ ಕಿಶೋರ ಕಾರ್ಮಿಕರ ಪತ್ತೆ
The District Child Labour Planning Society ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆಯನ್ವಯ ಏ.28 ರಂದು ಶಿಕಾರಿಪುರ ತಾಲ್ಲೂಕಿನಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ ಇವರ ಸಂಯುಕ್ತಾಶ್ರಯದಲ್ಲಿ ಶಿರಾಳಕೊಪ್ಪದಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿದಾಗ ಉಪ್ಪಿನಕಾಯಿ ತಯಾರಿಕಾ ಘಟಕದಲ್ಲಿ 02 ಬಾಲಕಾರ್ಮಿಕರು ಹಾಗೂ 01 ಕಿಶೋರ ಕಾರ್ಮಿಕ ಪತ್ತೆಯಾಗಿರುತ್ತಾರೆ.
ಈ ಬಾಲಕರನ್ನು ರಕ್ಷಿಸಿ ಪುನರ್ವಸತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ.
ಘಟಕದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅಥವಾ ಕೆಲಸ ಮಾಡಲು ಅವಕಾಶ ಮಾಡಿಕೊಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ನೇಮಿಸಿಕೊಂಡ ಮಾಲೀಕರ ವಿರುದ್ಧ ರೂ.20,000/- ರಿಂದ ರೂ.50,000/-ಗಳವರೆಗೆ ದಂಡವನ್ನು ಅಥವಾ 6 ತಿಂಗಳಿನಿಂದ 2 ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಅರಿವು ಮೂಡಿಸಲಾಯಿತು.
The District Child Labour Planning Society ಈ ತಪಾಸಣೆಯಲ್ಲಿ ಫಕೀರಪ್ಪ ಗೋಡಿ ಕಾರ್ಮಿಕ ನಿರೀಕ್ಷಕರು ಶಿಕಾರಿಪುರ, ರಘುನಾಥ ಎ.ಎಸ್ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆಯ ಮೂರ್ತಿ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಾದ ಅರ್ಪಿತ, ದೀಪ್ತಿ ಹಾಜರಿದ್ದರು.
B.Y. Raghavendra ನೌಕರರ ಕ್ರಿಯಾಶೀಲತೆ ಗುರುತಿಸಿ ಗೌರವಿಸಿ, ತಪ್ಪಿದ್ದಲ್ಲಿ ಕಿವಿಮಾತು ಹೇಳುವುದು ಉತ್ತಮ ಆಡಳಿತದ ಲಕ್ಷಣ- ಸಂಸದ ಬಿ.ವೈ.ರಾಘವೇಂದ್ರ
B.Y. Raghavendra ನೌಕರರ ಪ್ರಾಮಾಣಿಕ ಕಾರ್ಯಗಳಿಂದ ಆಡಳಿತಾರೂಢ ಸರ್ಕಾರದ ಗೌರವ ಹೆಚ್ಚಾಗಲಿದೆ. ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ನೌಕರರನ್ನು ಗುರುತಿಸಿ, ಗೌರವಿಸಿ, ಪ್ರಶಂಸಿಸುವುದು ಅಂತೆಯೇ ತಪ್ಪು ನಡೆ ಇದ್ದಲ್ಲಿ ಕಿವಿಮಾತು ಹೇಳುವುದು ಕೂಡ ಉತ್ತಮ ಆಡಳಿತದ ಭಾಗವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಜಿಲ್ಲಾಡಳಿತ, ರಾಜ್ಯ ಸರ್ಕಾರಿ ನೌಕರರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ 2023ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನೌಕರರು ಸರ್ಕಾರಕ್ಕೆ ಗೌರವ ತರುವ ನಿಟ್ಟಿನಲ್ಲಿ ಯಾವುದೇ ಲೋಪಗಳಾಗದಂತೆ ಹಾಘೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಮಾಡುವ ಕಾರ್ಯ ರಚನಾತ್ಮಕವೂ, ಮಾದರಿಯೂ ಆಗಿರಬೇಕು ಎಂದವರು ನುಡಿದರು. ಸರ್ಕಾರದ ಸೌಲಭ್ಯವನ್ನರಸಿ, ಇಲಾಖೆಗಳಿಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿ-ಸಿಬ್ಬಂಧಿಗಳು ಸ್ನೇಹಪೂರ್ವಕವಾಗಿ ವರ್ತಿಸಿ, ಕಾಲಮಿತಿಯೊಳಗಾಗಿ ಅವರಿಗೆ ಸೇವೆ ಒದಗಿಸುವ ಮನೋಭಾವ ಹೊಂದಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘವು ಕೈಗೊಂಡಿರುವ ಹಲವು ಮಹತ್ವದ ನಿರ್ಧಾರಗಳು ರಾಜ್ಯ ಸರ್ಕಾರದ ಚುನಾಯಿತ ಜನಪ್ರತಿನಿಧಿಗಳ ಗಮನಸೆಳೆದಿದೆ ಮಾತ್ರವಲ್ಲ ಅರ್ಹ ನೌಕರರಿಗೆ ಸೌಲಭ್ಯವನ್ನು ತಲುಪಿಸುವಲ್ಲಿ ಸಿ.ಎಸ್.ಷಡಾಕ್ಷರಿ ಅವರ ನೇತೃತ್ವದ ಸಂಘಟನೆ ತುಂಬಾ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಯಶಸ್ಸು ಪಡೆದಿದೆ ಎಂದ ಅವರು, ಈಗಾಗಲೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಹೊಂದಿ ಸಾಮಾನ್ಯ ಜೀವನ ನಿರ್ವಹಿಸುತ್ತಿರುವ ನೌಕರರ ಹಿತಕಾಯುವ ನಿಟ್ಟಿನಲ್ಲಿಯೂ ಸಂಘಟನೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಬೇಕು. ಅಗತ್ಯವೆನಿಸಿದಲ್ಲಿ ಅವರೊಂದಿಗೆ ಆತ್ಮೀಯ ಸಮಾಲೋಚನೆ ನಡೆಸಿ, ಅವರ ಸಮಸ್ಯೆಗಳಿಗೆ ಕಿವಿಯಾಗುವಂತೆ ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನೌಕರರು ತಮ್ಮ ಇಲಾಖೆಯಲ್ಲಿ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ದೊರೆಕಿಸುವಲ್ಲಿ ಶ್ರಮಿಸಿದ, ಯಾವುದೇ ಲಾಭದ ನಿರೀಕ್ಷೆಯಿಲ್ಲದೇ ಪಾರದರ್ಶಕವಾಗಿ ಗುಣಮಟ್ಟದ ಸೇವೆ ನೀಡಿದ ನೌಕರರನ್ನು ಗುರುತಿಸಿ ಗೌರವಿಸುವುದಲ್ಲಿ ಇತರೆ ನೌಕರರಿಗೆ ಸೇವೆ ಸಲ್ಲಿಸಲು ಪ್ರೇರಣೆಯಾಗಲಿದೆ. ಮಾತ್ರವಲ್ಲ ನೌಕರರಲ್ಲೂ ಸೇವೆ ಮಾಡಿದ ಸಾರ್ಥಕ ಭಾವ ಮೂಡಲಿದೆ. ಹೆಮ್ಮೆ ಎನಿಸಲಿದೆ ಎಂದರು.
B.Y. Raghavendra ಪ್ರಶಸ್ತಿ ಪುರಸ್ಕಾರಗಳಿಗೆ ರಾಜಕೀಯ ಮತ್ತಿತರ ಲಾಭಿ ಮಾಡುವ ಜನರ ಮಧ್ಯದಲ್ಲಿ ಅರ್ಜಿ ಸಲ್ಲಿಸದೇ ಇರುವ ಹಾಗೂ ತೆರೆಯ ಮರೆಯಲ್ಲಿ ತಮ್ಮ ದೈನಂದಿನ ಕಾರ್ಯದಲ್ಲಿ ಮಗ್ನರಾಗಿದ್ದ ಅರ್ಹ ನೌಕರರನ್ನು ಗುರುತಿಸಿ, ಗೌರವಿಸುತ್ತಿರುವುದು ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ ಎಂದ ಅವರು, ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಹತ್ತು ಮಂದಿಗೆ ತಲಾ 25,000 ರೂ.ಗಳ ನಗದು ಪುರಸ್ಕಾರ ಹಾಗೂ ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ನೌಕರರಿಗೆ ರೂ.50,000/-ಗಳ ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದರು.
ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ನಿಶ್ಚಿತವಾಗಿ ಯಶಸ್ಸು ಕಾಣುತ್ತೇವೆ. ನೌಕರರು ವದಂತಿಗಳಿಂದ ಆತಂಕಿತರಾಗುವ ಅಗತ್ಯವಿಲ್ಲ ಎಂದರು.
2023 ನೇ ಸಾಲಿನ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬಾಜನರಾದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ವಿಜಯಕುಮಾರ್ ಎಂ.ಭತ್ತದ್, ಖಜಾನೆ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಹೆಚ್.ಎಸ್.ಸಾವಿತ್ರಿ ಮತ್ತು ಆರೋಗ್ಯ ಇಲಾಖೆಯ ಶುಶ್ರೂ಼ಷಾಧಿಕಾರಿ ಶ್ರೀಮತಿ ಶೈಲಜ ಎಂ.ಟಿ. ಅವರಿಗೆ ಇದೇ ವೇದಿಕೆಯಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಗೌರವಿಸಲಾಯಿತು.
2023ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದ ನೌಕರರಾದ ಡಾ|| ಶಾಂತರಾಜ್, ಆರೋಗ್ಯ ಇಲಾಖೆ, ಷಣ್ಮುಖ ಕೃಷಿ ಇಲಾಖೆ, ಶ್ರೀಮತಿ ಸುನಿತಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ವಿನಯ್ ಎಸ್.ಬಿ. ಕಂದಾಯ ಇಲಾಖೆ, ಕೆ.ಆರ್.ರಾಮಪ್ಪ ಪಶು ಸಂಗೋಪನಾ ಇಲಾಖೆ, ಜಿ.ಮುನಿಯಲ್ಲಪ್ಪ ತಾಂತ್ರಿಕ ಶಿಕ್ಷಣ ಇಲಾಖೆ, ಶ್ರೀಮತಿ ನೀಲಮ್ಮ, ಆರೋಗ್ಯ ಇಲಾಖೆ, ರಾಜ್‌ಕುಮಾರ್ ಗ್ರಂಥಾಲಯ ಇಲಾಖೆ, ಪಿ.ಜೆ.ಜಾನ್ ಆರೋಗ್ಯ ಇಲಾಖೆ ಹಾಗೂ ಎಸ್.ಆರ್.ಶಂಕರ್ ಕಂದಾಯ ಇಲಾಖೆ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಶ್‌ಬಾನು, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಕರ್ನಾಟಕ ರಾಜ್ಯ ಬೋವಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಎಸ್.ರವಿಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾ̧ರ್ ರಂಗನಾಥ್, ಆರ್.ಪಾಪಣ್ಣ, ಸೇರಿದಂತೆ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳು, ತಾಲೂಕು ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.
• 2023ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬಾಜನರಾದ 10ಜನರನ್ನು ಗುರುತಿಸಿ 25,000/-ರೂ.ಗಳ ನಗದು ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುತ್ತಿದೆ. ಅತಿಶೀಘ್ರದಲ್ಲಿ 2024ನೇ ಸಾಲಿನಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬಾಜನರಾದವರನ್ನು ಗುರುತಿಸಿ ಮತ್ತೊಂದು ವೇದಿಕೆಯಲ್ಲಿ ಗೌರವಿಸಲಾಗುವುದು. ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪ್ರತಿ ಕಾರ್ಯ ಚಟುವಟಿಕೆಗಳು ರಾಜ್ಯಕ್ಕೆ ಮಾದರಿಯಾಗಿವೆ. ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಸಂಘವು ಆಯೋಜಿಸುವ ಪ್ರತಿ ಕಾರ್ಯಕ್ರಮಗಳಲ್ಲಿ ನೌಕರರ ಕುಟುಂಬದ ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು, ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಗುರುದತ್ತ ಹೆಗಡೆ, ಜಿಲ್ಲಾಧಿಕಾರಿಗಳು.
• ಗ್ಯಾರಂಟಿ ಯೋಜನೆಗಳಲ್ಲಿ ಅದರಲ್ಲೂ ವಿಶೇಷವಾಗಿ ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನದಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿಯೇ ಉಚ್ಚ ಸ್ಥಾನದಲ್ಲಿದೆ. ಈ ಪ್ರಶಂಸೆಗೆ ಬಾಜನರಾದ ಎಲ್ಲಾ ನೌಕರರು ಅಭಿನಂದನಾರ್ಹರು. – ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ,
ಮೇ 29, ಶಿವಮೊಗ್ಗದಲ್ಲಿ ಉದ್ಯೋಗ ವಿನಿಮಯ ಕಛೇರಿಯಿಂದ ಉದ್ಯೋಗ ಮೇಳ
ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೇ.09 ರ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮೋ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, 2ನೇ ಕ್ರಾಸ್, ಪಂಪನಗರ, ಸಾಗರರಸ್ತೆ, ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ :08182-255293/ 9380663606/ 9901914601 ಗಳನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.
Klive Special Article “ಆಪರೇಷನ್ ಸಿಂಧೂರ್” ಭರ್ಜರಿ ಆರಂಭ
Klive Special Article ಯುದ್ಧವೆಂದರೆ ನಮಗೆ ತಿಳಿದಂತೆ ಘೋಷಣೆಮಾಡಿ ಆಕ್ರಮಣ ಮಾಡುವುದು. ಇದು ತುರ್ತು ಸ್ಥಿತಿಯಲ್ಲಿ ಮಾತ್ರ. ಆದರೆ ಯೋಜಿತವಾಗಿ ದಾಳಿ ಮಾಡುವ ಶತ್ರುದೇಶದ ಮೋಸದ ದಾಳಿಗೆ ಪ್ರತ್ಯುತ್ತರ ನೀಡುವಾಗ ಘೋಷಣೆಯೇ ಬೇಕಿಲ್ಲ. ಘೋಷಣೆಗಿಂತ ಬುದ್ಧಿವಂತ ಕ್ರಮ ಎಂದರೆ ಶತ್ರುವಿನ ಶಕ್ತಿಕೇಂದ್ರಗಳನ್ನ ಧ್ವಂಸಮಾಡುವುದು.
ಈ ಕ್ರಮದಲ್ಲಿ ನಾಗರಿಕರಿಗೆ ಅಪಾಯ ಕಡಿಮ.
ಈಗ ಪಾಪಿ ಪಾಕಿಗಳಿಗೆ ಶಾಸ್ತಿಮಾಡಲು ನಮ್ಮ ದೇಶ ವಿವೇಕದಿಂದ ಸಂಯಮದಿಂದ ದಾಳಿ ಆರಂಭಿಸಿದೆ.
ಮೊದಲಿಗೆ ಸಿಂಧುನದಿ ಒಪ್ಪಂದ ಅಮಾನತು. ಚಿನಾಬ್ ನದಿಯ ನೀರಿನ ಹರಿವು ಸ್ಥಂಭನ. ಈಗ
ಯುದ್ಧ ಶುರುವಾಗೇ ಬಿಟ್ಟಿತು ಅಂದುಕೊಳ್ಳುತ್ತಿದ್ದಂತೆಯೇ ಒಂಭತ್ತು ಉಗ್ರರ ನೆಲೆಗಳ ಧ್ವಂಸ. ಅದೇ “ಆಪರೇಷನ್ ಸಿಂಧೂರ” ದ ಮಹತ್ತು.
ಮಹಿಳೆಯರ ಸಿಂಧೂರ ಅಳಿಸಲು ಬೆಂಬಲಿಸಿದವರ
ಬುಡಸಮೇತ ಮಟ್ಟಹಾಕುವ ಕಾರ್ಯಕ್ಕೆ ಈ ಹೆಸರು ಪ್ರಧಾನಿ ಮೋದಿಯವರೇ ಇಟ್ಟರು ಎಂಬುದು ವಿಶೇಷ.
ಈ ಬೆಳಿಗ್ಗೆ 1.04 ಘಂಟೆಯಿಂ 1-30 ವರೆಗೆ ತೀವ್ರ ವೈಮಾನಿಕ ದಾಳಿಯಿಡಲಾಗಿದೆ.
ಉಗ್ರರ ಅಡಗುದಾಣ, ತರಬೇತಿ ಸ್ಥಳಗಳನ್ನೇ
ಗುರಿಯಾಗಿಸಿದ ಭಾರತದ ಕ್ರಮದ ಜಾಗತಿಕವಾಗಿ ಬೆಂಬಲ ಕೂಡ ಸಿಕ್ಕಿದೆ.
ಚೀನಾ ಮಾತ್ರ ಅಸ್ಪಷ್ಟವಾಗಿ ಹೇಳಿಕೆ ನೀಡಿದೆ.
ಉಗ್ರರ ಮೇಲಿನ ದಾಳಿಯ ನೈಜ ಸೇನಾವರದಿಯನ್ನ ಸೂಕ್ತವಾಗಿ ರಷ್ಯಾ ಮತ್ತು ಅಮೆರಿಕಾಗೆ ರವಾನಿಸಲಾಗಿದೆ.
ಬಿಂಬೆರ್, ಸರ್ಜಾಲ್, ಕೋಟ್ಲಿ.ಮುಜಾಫರ್ ಬಾದ್.ಮುರಿಡಿಕೆ ಸಿಯಾಲ್ ಕೋಟ್ ಮುಂತಾದ ಉಗ್ರರ ನೆಲೆಗಳನ್ನ ಬೂದಿಮಾಡಲಾಗಿದೆ
ಇದರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಐದು ತಾಣಗಳಿವೆ. ಪಾಕ್ ಪ್ರದೇಶದ ನಾಲ್ಕು ತಣಗಳು ಸೇರಿವೆ.
ಲೋಕಸಭೆಯ
Klive Special Article ವಿಪಕ್ಷನಾಯಕ ರಾಹುಲ್ ಗಾಂಧಿ ಅವರು ನಮ್ಮ ಭಾರತೀಯ ಸೇನೆ ಬಗ್ಗೆ ಹೆಮ್ಮೆ ಮತ್ತು ಗೌರವ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ
ಸಿದ್ಧರಾಮಯ್ಯ ಅವರು ವಿಶೇಷ ಪತ್ರಿಕಾಗೋಷ್ಠಿಯಲ್ಲಿ
ನಮ್ಮ ಸೇನೆಗೊಂದು ಸಲಾಮ್ ಎಂದಿದ್ದಾರೆ
City Institute of Bangalore ಇಂದು ಒತ್ತಡದ ಪ್ರಪಂಚದಲ್ಲಿ ಪರಸ್ಪರ ಒಡನಾಟ ಕಡಿಮೆಯಾಗುತ್ತಿದೆ- ಬಿ.ಜಿ.ಧನರಾಜ್
City Institute of Bangalore ಸಂಘ ಸಂಸ್ಥೆಗಳ ಪ್ರಗತಿಗೆ ಕಾರಣರಾದ ಹಿರಿಯರು, ಮಾಜಿ ಅಧ್ಯಕ್ಷರು ಗೌರವಿಸುವುದರಿಂದ ಇತರರಿಗೂ ಪ್ರೇರಣೆ ದೊರೆಯುತ್ತದೆ ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಹೇಳಿದರು.
ಬೆಂಗಳೂರಿನ ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಆಯೋಜಿಸಿದ್ದ ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷರಿಗೆ ಗೌರವ ಸಮರ್ಪಣೆ ಹಾಗೂ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಒತ್ತಡದ ಪ್ರಪಂಚದಲ್ಲಿ ಪರಸ್ಪರರಲ್ಲಿ ಒಡನಾಟ ಕಡಿಮೆಯಾಗುತ್ತಿದೆ. ಕಷ್ಟ ಸುಖ ಭಾವನೆಗಳನ್ನು ಹಂಚಿಕೊಳ್ಳಲು ಸಮಯವೇ ಇಲ್ಲದಾಗಿದೆ. ಇಂತಹ ಸಂದರ್ಭದಲ್ಲಿ 58 ವಸಂತಗಳನ್ನ ಮುಗಿಸಿದ ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷರ ಅನುಭವ ಹಾಗೂ ಸಾಧನೆ ಇಂದಿಗೂ ಸಹ ದಾರಿ ದೀಪವಾಗಿದೆ ಎಂದು ನುಡಿದರು.
ಈಗಾಗಲೇ ನಮ್ಮ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಫ್ರೆಂಡ್ಸ್ ಸೆಂಟರ್ ಸಂಸ್ಥೆಗೆ ತಮ್ಮ ಕಾಲಾವಧಿಯಲ್ಲಿ ವಿಶೇಷವಾದ ಸೇವೆ ಸಲ್ಲಿಸುವುದರ ಮುಖಾಂತರ ಸಂಸ್ಥೆ ಗೌರವವನ್ನು ಹೆಚ್ಚಿಸಿ ಫ್ರೆಂಡ್ಸ್ ಸೆಂಟರ್‌ನ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶ್ರೀನಿಧಿ ವೆಂಕಟೇಶ್ ಮಾತನಾಡಿ, ಸಂಸ್ಥೆ ಇದುವರೆಗೂ ಮಾಡಿದ ಕಾರ್ಯ ಸಾಧನೆಗಳ ಬಗ್ಗೆ ಸಭೆಗೆ ವಿವರಿಸಿದರು. ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್ ಅವರು ಸಂಸ್ಥೆಯ ಸಾಧನೆ ಬಗ್ಗೆ ತಿಳಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಮಾಜಿ ಅಧ್ಯಕ್ಷ ಎಸ್ ದತ್ತಾತ್ರಿ ಅವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.
City Institute of Bangalore ಮಾಜಿ ಅಧ್ಯಕ್ಷರಾದ ಟಿ.ಎನ್.ಲಕ್ಷ್ಮೀಕಾಂತ್, ಡಿ.ಆರ್.ಅನಂತರಾಮ್, ಎಸ್.ಆರ್.ವೆಂಕಟರಾಮ್, ಸುಮಾ ಭಾಸ್ಕರ್ ಸನ್ಮಾನ ಸ್ವೀಕರಿಸಿ ತಮ್ಮ ಅನುಭವಗಳನ್ನ ಹಂಚಿಕೊಂಡರು.
ಸಮಾರಂಭದಲ್ಲಿ ಎಚ್.ಕೆ.ಲೋಕೇಶ್, ಸುರೇಶ್ ಬಾಬು, ಮಲ್ಲಿಕಾರ್ಜುನ ಕಾನೂರು, ಸುನಂದಾ ವಿ ಮೂರ್ತಿ, ಜಿ.ವಿಜಯಕುಮಾರ್, ಜಿ.ಸತ್ಯನಾರಾಯಣ್, ಡಿ.ಪಿ.ಮೋಹನ್, ಮೋಹನ್, ಗುರುನಾಥ್, ಡಾ. ರಂಜನಾ ಧನರಾಜ್, ಶ್ರೀ ರಂಜಿನಿ ದತ್ತಾತ್ರಿ, ಕೀರ್ತನಾ ದತ್ತಾತ್ರಿ ಹಾಗೂ ಕುಟುಂಬದವರು ಉಪಸ್ಥಿತರಿದ್ದರು.
Aurobindo Independent Pre-Graduate College ಒಳ್ಳೆಯ ಗುರಿ ಸಾಧಿಸಲು ನಿರಂತರ ಶ್ರಮಿಸಬೇಕು- ಐಎಎಸ್ ( 421) ಬಿ.ಎಂ.ಮೇಘನಾ
Aurobindo Independent Pre-Graduate College ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಒಂದು ಒಳ್ಳೆಯ ಗುರಿ ಇಟ್ಟುಕೊಂಡು ಸಾಧನೆಯತ್ತ ನಿರಂತರ ಶ್ರಮಿಸಬೇಕು ಎಂದು ರಾಷ್ಟ್ರ ಮಟ್ಟದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 421ನೇ ರಾಂಕ್ ಪಡೆದ ಜಾವಳ್ಳಿಯ ಶ್ರೀ ಅರಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಬಿ.ಎಂ.ಮೇಘನಾ ಹೇಳಿದರು.
ತಾಲೂಕಿನ ಜಾವಳ್ಳಿಯ ಶ್ರೀ ಅರಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಂವಾದ ಕರ‍್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ನಂತರ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲಿ ದೊಡ್ಡ ಗುರಿ ಹೊಂದಿದರೆ ಸಾಲದು. ಅದರ ಸಾಧನೆಯ ಬೆನ್ನತ್ತಿ ಸಾಗಬೇಕು. ಆಗ ನಮಗೆ ಕಲಿಕೆಯ ಹಂಬಲ ಹೆಚ್ಚುತ್ತದೆ. ಪ್ರತಿಯೊಬ್ಬರೂ ಸಾಮಾನ್ಯ ಜ್ಞಾನ ಹೊಂದಿರುತ್ತಾರೆ. ಆದರೆ ಅದನ್ನು ಅಸಮಾನ್ಯಗೊಳಿಸಲು ಸತತ ಅಭ್ಯಾಸ ಹಾಗೂ ಪ್ರಯತ್ನದಿಂದ ಮಾತ್ರ ಸಾಧ್ಯವಾಗುತ್ತದೆ. ಒಮ್ಮೆಲೆ ಗುರಿ ಸಾಧನೆ ಮಾಡಲು ಸಾಧ್ಯವಾಗದೆ ಇದ್ದಾಗ ವಿಚಲಿತರಾಗದೆ ಸಾಧಿಸುವ ವರೆಗೆ ಇನ್ನಷ್ಟು ಶ್ರಮ ವಹಿಸಿದಾಗ ಖಂಡತವಾಗಿ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳು ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಂಡು ಉಜ್ವಲ ಭವಿಷ್ಯ ಹಾಗೂ ಉತ್ತಮ ಸಮಾಜ ರೂಪಿಸಬಹುದು.
ಈ ದಿಸೆಯಲ್ಲಿ ನನಗೆ ಶ್ರೀ ಅರಬಿಂದೋ ಕಾಲೇಜು ಸಂಪೂರ್ಣ ಸಹಕಾರ ನೀಡಿದೆ ಎಂದು ಸ್ಮರಿಸಿದರು.
ಕಾಲೇಜು ಪ್ರಾಂಶುಪಾಲ ಕೆ.ನಾಗರಾಜ್ ಮಾತನಾಡಿ, ಬಿ.ಎಂ.ಮೇಘನಾ ಅವರು ಶ್ರೀ ಅರಬಿಂದೋ ಕಾಲೇಜಿನಲ್ಲಿ 2012-13ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದಾರೆ. ಈಗ ಪ್ರತಿಷ್ಠಿತ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿರುವುದು ನಮ್ಮ ಸಂಸ್ಥೆ ಹಾಗೂ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿ ಇನ್ನಷ್ಟು ಸಮಾಜಮುಖಿ ಕಾರ್ಯ ಮಾಡಿ ರಾಷ್ಟ್ರದ ಆಸ್ತಿ ಆಗಲಿ ಎಂದು ಹಾರೈಸಿದರು.
Aurobindo Independent Pre-Graduate College ಕಾಲೇಜಿನ ಉಪ ಪ್ರಾಂಶುಪಾಲರಾದ ಎಸ್.ಎಂ.ಜೋಸೆಫ್, ವಿದ್ಯಾ ಸಂಸ್ಥೆಯ ಕರ‍್ಯದರ್ಶಿ ಬಿ.ಎಲ್.ನೀಲಕಂಠಮೂರ್ತಿ, ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಎಂ.ಹೆಗಡೆ, ಬಿ.ಎಂ.ಮೇಘನಾ ಅವರ ಪೋಷಕರಾದ ವಕೀಲ ಮೋಹನ್, ನಿವೃತ್ತ ಕನ್ನಡ ಉಪನ್ಯಾಕಿ ವತ್ಸಲಾ, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
The Nut Research Centre ಅಡಿಕೆಗೆ ಕೆಂಪು ಮೂತಿ ಹುಳುಕಾಟದ ಸಮಸ್ಯೆ, ನಿರ್ವಹಣಾ ಮಾಹಿತಿ – ಡಾ.ನಾಗರಾಜ ಅಡಿವಪ್ಪರ್
The Nut Research Centre ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ಕೆಂಪು ಮೂತಿ ಹುಳು ಸೊರಬ ಮತ್ತು ಸಾಗರ ಭಾಗದ ಅಡಿಕೆ ತೋಟಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದು, ರೈತರಿಗೆ ಸಮಸ್ಯೆಯಾಗಿದೆ. ಇವುಗಳ ನಿರ್ವಹಣಾ ಕ್ರಮಗಳ ಮಾಹಿತಿಯನ್ನು ಡಾ.ನಾಗರಾಜಪ್ಪ ಅಡಿವಪ್ಪರ್, ಮುಖ್ಯಸ್ಥರು, ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ ಇವರು ತಿಳಿಸಿದ್ದಾರೆ.
4 ರಿಂದ 5 ವರ್ಷದ ತೋಟದಲ್ಲಿ ಇದರ ಬಾಧೆ ಹೆಚ್ಚಾಗಿದ್ದು, ಗರಿಗಳು ಹಳದಿಯಾಗಿ ಬಾಡಿದಂತೆ ಕಾಣಿಸುತ್ತದೆ. ಕಾಂಡದ ಭಾಗದಲ್ಲಿ ರಂಧ್ರಗಳಾಗಿ ಕಂದು ಬಣ್ಣದ ರಸ ಸೋರುತ್ತದೆ. ತೀವ್ರ ಹಾನಿಗೊಳಗಾದ ಮರಗಳಲ್ಲಿ ಕಾಂಡದ ಭಾಗದಲ್ಲಿ ನಾರಿನ ಅಂಶ ಹೊರಬರುತ್ತದೆ. ಹಾನಿಗೊಳಗಾದ ಮರಗಳನ್ನು ಸೀಳಿ ನೋಡಿದಾಗ ವಿವಿಧ ಹಂತದ ಹುಳುಗಳನ್ನು ಕಾಣಬಹುದು. ಇದರಿಂದ ಬೆಳವಣಿಗೆ ಕುಂಠಿತವಾಗುತ್ತದೆ. ತೀವ್ರಹಾನಿಗೊಳಗಾದ ಮರಗಳು ಗಾಳಿ, ಮಳೆಗೆ ಬೀಳುತ್ತವೆ.
ನಿರ್ವಹಣಾ ಕ್ರಮಗಳು:
ಹುಳುವಿನ ಕಡೆ ಒಂದು ರಂಧ್ರವನ್ನು ಮಾಡಿ ಅದಕ್ಕೆ 4 ಮಿ.ಲೀ ಕ್ಲೊರಾಂಟ್ರಿನಿಲಿಪ್ರೋಲ್ 18.5 ಎಸ್.ಸಿ ಅಥವಾ 4 ಮಿ.ಲೀ ಇಂಡಾಕ್ಸಾಕಾರ್ಬ 14.5 ಎಸ್.ಸಿ ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸುರಿಯಬೇಕು ಮತ್ತು ಸುಳಿಯಲ್ಲಿರುವ ರಂಧ್ರದಲ್ಲಿಯೂ ಕೂಡ ಸುರಿಯಬೇಕು. ಶೇ.5 ರ ಮೆಲಾಥಿಯಾನ್ ಪುಡಿ ಹಾಗೂ ಮರಳು ಸಮಪ್ರಮಾಣದಲ್ಲಿ ಬೆರೆಸಿ ಏಪ್ರಿಲ್ – ಮೇ ಹಾಗೂ ಸೆಪ್ಟೆಂಬರ್–ಅಕ್ಟೋಬರ್ ತಿಂಗಳುಗಳಲ್ಲಿ ಎಲೆಯ ಸಂದುಗಳಲ್ಲಿ ಹಾಕಬೇಕು. ಯಾವುದೇ ಮರಗಳ ಕಾಂಡದಲ್ಲಿ ಗಾಯಗಳಾಗದಂತೆ ಎಚ್ಚರವಹಿಸಬೇಕು.
The Nut Research Centre ಗಾಯಗಳಾಗಿದ್ದಲ್ಲಿ 5.0 ಮಿ.ಲೀ ಕ್ಲೋರೋಫೈರಿಫಾಸ್ 20 ಇ.ಸಿ ಸಂದುಗಳಲ್ಲಿ ಹಾಕಿ ಮಣ್ಣಿನ ಮಿಶ್ರಣದಿಂದ ಮುಚ್ಚಬೇಕು. ಕ್ಲೊರಾಂಟ್ರಿನಿಲಿಪ್ರೊಲ್ 18.5 ಎಸ್.ಸಿ (2 ಮಿ.ಲೀ + 500 ಮಿ.ಲೀ ನೀರು) ಅಥವಾ ಇಂಡಾಕ್ಸಾಕಾರ್ಬ 77.78 ಎಸ್.ಸಿ (2 ಮಿ.ಲೀ + 500 ಮಿ.ಲೀ ನೀರು) ಬೇರುಗಳ ಮುಖಾಂತರ ಕೊಡಬೇಕು.
ಪ್ರತಿ ಹೆಕ್ಟೇರ್‌ಗೆ ಒಂದರಂತೆ ಮೋಹಕ ಬಲೆಯನ್ನು ಇಡಬೇಕು ಮತ್ತು 6 ತಿಂಗಳಿಗೊಮ್ಮೆ ಲ್ಯೂರ್‌ನ್ನು ಬದಲಾಯಿಸಬೇಕು.
DVS College of Arts, Science and Commerce ಬೌದ್ಧಿಕ ಆಸ್ತಿಹಕ್ಕು, ರಾಷ್ಟ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ- ಡಾ.ಜಿ.ರಾಜಶೇಖರ್
DVS College of Arts, Science and Commerce ಬೌದ್ಧಿಕ ಆಸ್ತಿಗಳ ಹಕ್ಕು ರಾಷ್ಟ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ವಿದ್ಯಾರ್ಥಿಗಳು ಈ ವಿಷಯವನ್ನು ಆಳವಾಗಿ ಅರಿತು ಹೆಚ್ಚು ಹೆಚ್ಚು ಸಂಶೋಧನೆಗಳನ್ನು ಮಾಡಿ ದೇಶಕ್ಕೆ ಕೊಡುಗೆಯನ್ನು ನೀಡಬೇಕು ಎಂದು ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕ ಡಾ. ರಾಜಶೇಖರ್ ಜಿ.ಆರ್. ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಆಯೋಜಿಸಿದ್ದ “ಇಟೆಲೆಕ್ಟುಯಲ್ ಪ್ರಾಪರ್ಟಿ ರೈಟ್ಸ್ ಅಂಡ್ ಸೈಟೇಷನ್ ಮ್ಯಾನೇಜ್ಮೆಂಟ್” ವಿಚಾರವಾಗಿ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತವು ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ವರ್ಷಗಳಿಂದ ವರ್ಷಕ್ಕೆ ಭಾರತದಲ್ಲಿ ನೋಂದಣಿಯಾಗುತ್ತಿರುವ ಪೇಟೆಂಟ್ಸ್, ಕಾಪಿರೈಟ್ಸ್, ಕೈಗಾರಿಕೆಗಳ ವಿನ್ಯಾಸಗಳು ಹೆಚ್ಚಾಗುತ್ತಿವೆ. ನಾವು ಅಭಿವೃದ್ಧಿಶೀಲ ರಾಷ್ಟ್ರವಾಗುವತ್ತ ದಾಪುಗಾಲಿಡುತ್ತಿದ್ದೇವೆ ಎಂದು ತಿಳಿಸಿದರು.
ಡಿವಿಎಸ್ ಕಾಲೇಜಿನ ಗ್ರಂಥಪಾಲಕ ನಿರಂಜನ ಕೆ ಮಾತನಾಡಿ, ಬೌದ್ಧಿಕ ಆಸ್ತಿ ಹಕ್ಕನ್ನು ವಿಸ್ಕೃತವಾಗಿ ಅಧ್ಯಯನ ಮಾಡಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಔನ್ನತ್ಯವನ್ನು ಕಾಣಬಹುದು ಮತ್ತು ಯಾವುದಾದರೂ ಮಾಹಿತಿಯನ್ನು ಯಾವುದೇ ಮೂಲದಿಂದ ಪಡೆದರೂ ಆ ಗ್ರಂಥಗಳ, ಲೇಖಕರ ಮಾಹಿತಿಯನ್ನು ಉಲ್ಲೇಖದಲ್ಲಿ ತಿಳಿಸಿದಾಗ ಆ ಗ್ರಂಥಗಳು ಉತ್ಕೃಷ್ಟವಾಗುತ್ತವೆ ಎಂದು ತಿಳಿಸಿದರು.
ದೇಶೀಯ ವಿದ್ಯಾಶಾಲಾ ಸಮಿತಿ ಕೋಶಾಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಯಾವುದೇ ಕೌಶಲ್ಯಗಳಿದ್ದರೆ, ಹೊಸ ಸಂಶೋಧನೆಗಳನ್ನು ಮಾಡಿದರೆ ತಕ್ಷಣ ಪೇಟೆಂಟ್‌ಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗುವ ಅವಕಾಶಗಳಿವೆ ಎಂದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯಗಳನ್ನು ಹೊರತಂದು ಮಾದರಿಯಾಗಲು ಕರೆ ನೀಡಿದರು.
DVS College of Arts, Science and Commerce ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಮಾತನಾಡಿ, ನಮ್ಮಲ್ಲಿ ಯಾವುದೇ ಜಾತಿ, ಧರ್ಮಗಳಿದ್ದರೂ ಎಲ್ಲರೂ ಒಂದಾಗಿ ರಾಷ್ಟ್ರವನ್ನು ಕಟ್ಟೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಎನ್.ಕುಮಾರಸ್ವಾಮಿ, ಸಾನಿಯ ಆಪ್ಸಾ, ಇಳಾ ಬಿ.ಎಲ್ , ದೀಕ್ಷಾ ಇತರರಿದ್ದರು.
DC Shivamogga ಶಿವಮೊಗ್ಗದಲ್ಲಿ ಮೇ 18 ರಿಂದ 20 ವರೆಗೆ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ & ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ- ಗುರುದತ್ತ ಹೆಗಡೆ
DC Shivamogga ಶಿವಮೊಗ್ಗ ಜಿಲ್ಲಾಡಳಿತವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಮೇ 18ರಿಂದ 20ರವರೆಗೆ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಶಿವಮೊಗ್ಗದಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದೆ.
ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ-2025ರ ಕುರಿತು ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರಾಜ್ಯದ ಎಲ್ಲಾ ಜಿಲ್ಲೆಗಳ ಸುಮಾರು 15000ಕ್ಕೂ ಹೆಚ್ಚಿನ ನೌಕರ ಕ್ರೀಡಾಪಟುಗಳು ಆಗಮಿಸುವ ನಿರೀಕ್ಷೆಯಿದ್ದು, ಅವರ ವಸತಿ ಹಾಗೂ ಊಟೋಪಹಾರ ಮತ್ತು ಸಾರಿಗೆ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನಗರದ ನೆಹರೂ ಕ್ರೀಡಾಂಗಣ, ಜೆ.ಎನ್.ಎನ್.ಸಿ.ಇ. ಕಾಲೇಜು ಮತ್ತು ಗೋಪಾಳದ ಕ್ರೀಡಾಸಂಕೀರ್ಣಗಳಲ್ಲಿ ವಿವಿಧ ಕ್ರೀಡೆಗಳನ್ನು ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇದರೊಂದಿಗೆ ನಗರದ ಕುವೆಂಪು ರಂಗಮಂದಿರ ಮತ್ತು ಡಾ|| ಬಿ.ಆರ್.ಅಂಬೇಡ್ಕರ್‌ಭವನಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲು ಸ್ಥಳಗಳನ್ನು ಗುರುತಿಸಲಾಗಿದೆ.
ಅಲ್ಲದೇ ಅಗತ್ಯವಿದ್ದಲ್ಲಿ ಇನ್ನಷ್ಟು ಸಮನಾಂತರ ವೇದಿಕೆಗಳನ್ನು ಸೃಜಿಸಲು ಉದ್ದೇಶಿಸಲಾಗಿದೆ ಎಂದರು.
ಮೂರು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟವು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಜೊತೆಗೆ ಆಹ್ವಾನಿತ ಕ್ರೀಡಾಪಟುಗಳು ಸ್ಥಳೀಯ ನಾಗರೀಕರಿಗಾಗಿ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಲು ಉದ್ಧೇಶಿಲಾಗಿದೆ.
ಕಾರ್ಯಕ್ರಮಗಳು ನಡೆಯುವ ಈ ಮೂರು ದಿನಗಳ ಕಾಲ ಯಾವುದೇ ಅಡಚಣೆ ಉಂಟಾಗದಂತೆ ನಿರಂತರವಾಗಿ ವಿದ್ಯುತ್ ಒದಗಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಅಲ್ಲದೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸುವ ಉದ್ದೇಶದಿಂದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಕ್ರೀಡಾಕೂಟದ ವ್ಯವಸ್ಥಿತ ನಿರ್ವಹಣೆಗಾಗಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಕ್ರೀಡೆಗಳಲ್ಲಿ ಉತ್ತಮ ಹಾಗೂ ನುರಿತ ತೀರ್ಪುಗಾರರನ್ನು ನೇಮಿಸಲು ಉದ್ದೇಶಿಸಲಾಗಿದೆ. ಅಗತ್ಯವಿದ್ದಲ್ಲಿ ನೆರೆಯ ಜಿಲ್ಲೆಗಳ ನುರಿತ ತೀರ್ಪುಗಾರರನ್ನು ಬಳಸಿಕೊಳ್ಳಲು ಯತ್ನಿಸಲಾಗುವುದು ಎಂದ ಅವರು, ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಹಾಗೂ ಅವರು ತಂಗುವ ಸ್ಥಳಕ್ಕೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಅಲ್ಲದೇ ಈ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಕ್ರೀಡಾಪಟುಗಳ ಆರೋಗ್ಯ, ಆಕಸ್ಮಿಕ ಅಗ್ನಿ ಅವಘಡ ಸೇರಿದಂತೆ ತಕ್ಷಣದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಹಾಗೂ ತುರ್ತು ಮಾಹಿತಿಗಾಗಿ ಸಂಪರ್ಕಿಸಲು ಅಧಿಕಾರಿಗಳೊಬ್ಬರನ್ನು ನೇಮಿಸಲಾಗುವುದು. ಕಾರ್ಯಕ್ರಮವನ್ನು ಇನ್ನಷ್ಟು ಅಚ್ಚುಕಟ್ಟಾಗಿ ರೂಪಿಸುವಲ್ಲಿ ಎನ್.ಎಸ್.ಎಸ್., ಎನ್.ಸಿ.ಸಿ., ಸ್ಕೌಟ್ ಮತ್ತು ಗೈಡ್ಸ್‌ಗಳ ಸಹಕಾರವನ್ನು ಪಡೆದುಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಈಗಾಗಲೇ ರಾಜ್ಯ ಮಟ್ಟದ ಕ್ರೀಡಾ ಇಲಾಖೆಯ ಆಯುಕ್ತರೊಂದಿಗೆ ಮೊದಲ ಸುತ್ತಿನ ಸಮಾಲೋಚನಾ ಸಭೆ ನಡೆಸಲಾಗಿದ್ದು, ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅಂತೆಯೇ ಆತಿಥೇಯ ಜಿಲ್ಲೆ ಶಿವಮೊಗ್ಗದಲ್ಲೂ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆದು ಸುದೀರ್ಘವಾಗಿ ಚರ್ಚಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಮೊದಲ ದಿನ ಸಂಜೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸಲಿರುವರು. ಅಂತೆಯೇ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ಆಗಮಿಸಲಿರುವರು.
ಈ ಉದ್ಘಾಟನಾ ಕಾರ್ಯಕ್ರಮದ ನಂತರ ನಾಡಿನ ಹೆಸರಾಂತ ಗಾಯಕ ರಾಜೇಶ್‌ಕೃಷ್ಣನ್ ಅವರಿಂದ ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಅದೇ ದಿನ ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡು ವಸತಿ ಸ್ಥಳದ ಮಾಹಿತಿ ಪಡೆದುಕೊಳ್ಳುವರು ಎಂದವರು ತಿಳಿಸಿದರು.
ಮೇ 19ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ವಿವಿಧ ಸಮನಾಂತರ ವೇದಿಕೆಗಳನ್ನು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಅದೇ ದಿನ ಸಂಜೆ ಜಾನಪದ ದಿಬ್ಬಣ ಎಂಬ ನಾಡಿನ ಜನಪದ ಕಲಾತಂಡಗಳಿಂದ ಕಾರ್ಯಕ್ರಮ ವೈವಿಧ್ಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹೆಸರಾಂತ ಜನಪದ ಕಲಾತಂಡಗಳು ಆಗಮಿಸಲಿವೆ. ಮೇ 20ರಂದು ಎಂದಿನಂತೆ ಬೆಳಿಗ್ಗೆಯಿಂದ ಸಂಜೆಯವರೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಅಂದು ಸಂಜೆ ಸಮಾರೋಪ ಸಮಾರಂಭವು ಆಹ್ವಾನಿತ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ ನಡೆಯುವ ಮನೋರಂಜನಾ ಕಾರ್ಯಕ್ರಮಗಳಲ್ಲಿ ಆಹ್ವಾನಿತ ಕ್ರೀಡಾಳುಗಳು, ಸ್ಥಳೀಯ ನೌಕರರು, ಅವರ ,ಕುಟುಂಬದವರು ಸೇರಿದಂತೆ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಸುಜಾತಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಮೋಹನ್‌ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
