Sri Adichunchanagiri Shikshana Trust ವೃತ್ತಿಗೆ ಗೌರವ ಕೊಡಿ, ಯಾವ ವ್ಯಕ್ತಿ ವೃತ್ತಿಗೆ ಗೌರವ ಕೊಡುತ್ತಾನೋ ಆ ವ್ಯಕ್ತಿಯ ಬದುಕು ಹಸನಾಗುವುದು, ಪ್ರತಿಯೊಬ್ಬ ಶಿಕ್ಷಕರು ಮಕ್ಕಳ ಜೊತೆ ಉತ್ತಮ ಒಡನಾಟದಿಂದ ಎಂದು ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿಯವರು ಹೇಳಿದರು.
ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಿವಮೊಗ್ಗ ಶಾಖೆಯ, ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ಬಿಜಿಎಸ್ ಸಭಾ ಭವನದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ವ್ಯಾಪ್ತಿಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಮೂರು ದಿನಗಳವರಗೆ ನಡೆದ ಕಾರ್ಯಗಾರದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಿಕ್ಷಕರು ಮಕ್ಕಳಿಗೆ ಬೇಕು-ಬೇಡಗಳ ಬಗ್ಗೆ ತಿಳಿದು ತರಬೇತಿ ಕೊಟ್ಟಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಪುನಶ್ಚೇತನ ಕಾರ್ಯಕ್ರಮಗಳು ಶಿಕ್ಷಕರಿಗೆ ಮೂರು ದಿನಗಳಿಂದ ನಡೆಯುತ್ತಿದ್ದು, ಶಿಕ್ಷಕರು ವರ್ಷಪೂರ್ತಿ ಶೈಕ್ಷಣಿಕ ಜೀವನದಲ್ಲಿ ಮಕ್ಕಳ ಜೊತೆ ತೊಡಗಿಸಿಕೊಂಡಿರುತ್ತೀರಿ, ಬೇಸಿಗೆ ರಜೆ ಬಂದಿರುವುದರಿಂದ ಬಹಳ ಸಂತೋಷದಿಂದ ಕುಟುಂಬವರ್ಗದವರ ಜೊತೆಗೆ ಸಮಯವನ್ನು ಕಳೆಯುತ್ತಿರುತ್ತೀರಿ, ಶಾಲೆ ಆರಂಭವಾಗುತ್ತಿದ್ದು, ಶಿಕ್ಷಕರಾದ ನೀವು ಮಕ್ಕಳೇ ಸರ್ವಸ್ವ, ವೃತ್ತಿ ಜೀವನ ಶಿಕ್ಷಕರಿಗೆ ವ್ರತ ಇದ್ದ ಹಾಗೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
Sri Adichunchanagiri Shikshana Trust ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮನೋಶಾಸ್ತ್ರಜ್ಞ ಡಾ. ಅರವಿಂದ್ ಮಾತನಾಡುತ್ತಾ, ಶಿಕ್ಷಕರು ತರಗತಿಯಲ್ಲಿ ಮಕ್ಕಳ ಮೊದಲ ಸಮಸ್ಯೆಯನ್ನು ಅರಿತು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನಹರಿಸಬೇಕು. ಈ ರೀತಿ ಮಾಡಿದಾಗ ಮಕ್ಕಳ ಮನಸ್ಸಿನಲ್ಲಿನ ಭಾವನೆಗಳನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ. ಮಕ್ಕಳ ಮನಸ್ಸನ್ನು ಹಾಗೂ ಅವರ ಸಮಸ್ಯೆಗಳನ್ನು ಅರಿತು ಬಗೆಹರಿಸುವ ವ್ಯವಸ್ಥೆ ನಮ್ಮ ದೇಶದಲ್ಲಿ ಕಡಿಮೆ. ಇಂತಹ ಸಮಯದಲ್ಲಿ ಶಿಕ್ಷಕರಿಗೆ ಕಾರ್ಯಗಾರ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲ ಸುರೇಶ್ ಎಸ್.ಹೆಚ್., ಬಿಜಿಎಸ್ ವಸತಿ ಶಾಲೆಯ ಮುಖ್ಯ ಶಿಕ್ಷಕ ಗಿರೀಶ್, ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲ ದಿವ್ಯ ಕರಣಂ, ಮುಖ್ಯ ಶಿಕ್ಷಕಿ ವೀಣಾ ಇನ್ನೂ ಮುಂತಾದವರಿದ್ದರು.
Sri Adichunchanagiri Shikshana Trust ಯಾವ ವ್ಯಕ್ತಿಯು ವೃತ್ತಿಗೆ ಗೌರವ ಕೊಡುತ್ತಾನೋ ಅವರ ಬದುಕು ಹಸನ- ಶ್ರೀ ಸಾಯಿನಾಥ ಶ್ರೀ
MESCOM ಮೇ 25.ಮಂಡ್ಲಿ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ.ಮೆಸ್ಕಾಂ ಪ್ರಕಟಣೆ
MESCOM ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ ಮೇ 25 ರಂದು ಬೆಳಗ್ಗೆ 09.00 ರಿಂದ ಸಂಜೆ 6.00 ರವರೆಗೆ ಈ ವ್ಯಾಪ್ತಿಗೆ ಸೇರಿರುವ ಪಿಯರ್‌ಲೈಟ್, ಪೇಪರ್ ಪ್ಯಾಕೇಜ್,ಕೆ.ಆರ್. ಕುಡಿಯುವ ನೀರಿನ ಸ್ಥಾವರ, ಮಂಡ್ಲಿ ಕೈಗಾರಿಕಾ ಪ್ರದೇಶ, ಸೀಗೆಹಟ್ಟಿ, ರವಿವರ್ಮ ಬೀದಿ, ಬಿ.ಬಿ.ರಸ್ತೆ, ಗಾಂಧಿಬಜಾರ್, ಬುದ್ಧನಗರ, ಆರ್.ಎಂ.ಎಲ್.ನಗರ, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಫ್ಯಾಕ್ಟರಿ, ನ್ಯೂಮಂಡ್ಲಿ, ಮಂಜುನಾಥ ಪೆಟ್ರೋಲ್ ಬಂಕ್, ವಿಜಯವಾಣಿ ಪ್ರೆಸ್ ಹತ್ತಿರ, ಎನ್.ಟಿ.ರಸ್ತೆ, ಹರಕೆರೆ, ಹಳೇಮಂಡ್ಲಿ, ಗಂಧರ್ವನಗರ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್ ಮಿಲ್, ಬೆನಕೇಶ್ವರ ರೈಸ್ ಮಿಲ್, ಸವಾಯಿಪಾಳಯ, ಕುರುಬರ ಪಾಳ್ಯ, ಓ.ಟಿ.ರಸ್ತೆ, ಪಂಚವಟಿ ಕಾಲೋನಿ, ಗೋಪಿಶೆಟ್ಟಿಕೊಪ್ಪ, ಜಿ.ಎಸ್.ಕ್ಯಾಸ್ಟಿಂಗ್ ಫ್ಯಾಕ್ಟರಿ, ಇಲಿಯಾಜ್‌ನಗರ 1 ರಿಂದ 14ನೇ ಕ್ರಾಸ್, ಸಿದ್ದೇಶ್ವರ ಸರ್ಕಲ್, ಫಾರೂಕ್ಯ ಶಾದಿಮಹಲ್, ಚಾಲುಕ್ಯನಗರ, ಕೆಹೆಚ್‌ಬಿ ಕಾಲೋನಿ, ಮಂಡಕ್ಕಿಭಟ್ಟಿ, ಮೇಲಿನ ಮತ್ತು ಕೆಳಗಿನ ತುಂಗಾನಗರ, MESCOM ಅಮೀರ್ ಅಹಮದ್ ಸರ್ಕಲ್, ಟಿಪ್ಪುನಗರ, ಮಂಜುನಾಥ ಬಡಾವಣೆ, ಇಲಿಯಾಜ್‌ನಗರ ಲಾರಿ ಗ್ಯಾರೇಜ್, ಬಿಹೆಚ್ ರಸ್ತೆ, ಸಾಗರ ನರ್ಸರಿ, ಚಾನಲ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶ ಮ್ತು ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್, ಹನುಮಂತಾಪುರ, ಶರಾವತಿನಗರ, ಶಾರದ ಕಾಲೋನಿ, ಗಾಜನೂರು ಗ್ರಾಮಾಂತರ ಪ್ರದೇಶ, ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ, ಹೊಸಳ್ಳಿ, ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಸ್ಕಾಂ ಪ್ರಕಟಣೆ ತಿಳಿಸಿದೆ.
District Health and Family Welfare Officer ಜೂನ್ 2 ರಂದು ಕೀಟ ಸಂಗ್ರಹಕಾರರ ಹುದ್ದೆಗೆ ನೇರ ಸಂದರ್ಶನ
District Health and Family Welfare Officer ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಒಂದು ಕೀಟ ಸಂಗ್ರಹಕಾರರ ಹುದ್ದೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನಗದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ 1 ವರ್ಷದ ಅವಧಿಗೆ ಸಂಚಿತ ವೇತನ ರೂ. 16575-00 ರಂತೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಜೂನ್ 02 ರಂದು ಜಿಲ್ಳಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 11 ಕ್ಕೆ ನೇರ ಸಂದರ್ಶನ ಕರೆಯಲಾಗಿದೆ.
ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಪಿಯುಸಿ District Health and Family Welfare Officer ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳನ್ನು ಸಂಪರ್ಕಿಸುವುದು.
International skating competition ಇಂಡೋನೇಷ್ಯಾ ಅಂತಾರಾಷ್ಟ್ರೀ ಸ್ಕೇಟಿಂಗ್ ಸ್ಪರ್ಧೆಗೆ ಶಿವಮೊಗ್ಗ ಮೂವರ ಆಯ್ಕೆ.
International skating competition ಇಂಡೋನೇಷ್ಯಾದಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿರುವ ಸ್ಪರ್ಧಿಗಳಾದ ರೋಷನ್‌ಎಂ. ದೇಶ್ನ ಡಿ., ಹಾಗೂ ಎಂಎಸ್. ಹರ್ಷಿತಾ ಅವರನ್ನು ಶಿವಮೊಗ್ಗ ಡಿಸ್ಟಿಕ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್, ಸಹ್ಯಾದ್ರಿ ರೋಲರ್ ಸ್ಕೇಟಿಂಗ್ ಕ್ಲಬ್, ಹರ್ಷಿತ ರೋಲರ್ ಸ್ಕೇಟಿಂಗ್ ಸಂಸ್ಥೆ ಹಾಗೂ ಭದ್ರಾ ರೋಲರ್ ಸ್ಕೇಟಿಂಗ್ ಸಂಸ್ಥೆಯ ಪದಾಧಿಕಾರಿಗಳು, ಪೋಷಕರು ಹಾಗೂ ತರಬೇತುದಾರ ಶೇಖರ್ ಬಾಬು ಅವರು ಅಭಿನಂದಿಸಿದ್ದಾರೆ.
Karnataka Sangha ಮೇ 24. ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಕಾದಂಬರಿಕಾರ ಸಂತೋಷ ಕುಮಾರ್ ಮೆಹಂದಳೆ ಉಪನ್ಯಾಸ
Karnataka Sangha ದಿನಾಂಕ 24 ಮೇ 2025ರ ಶನಿವಾರ, ಸಂಜೆ ೫:೩೦ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣಶಾಸ್ತಿç ಇವರ ಅಧ್ಯಕ್ಷತೆಯಲ್ಲಿ ತಿಂಗಳ ಅತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
Karnataka Sangha ಉತ್ತರ ಕನ್ನಡ ಜಿಲ್ಲೆ, ಕೈಗಾದ ಶ್ರೀ ಸಂತೋಷಕುಮಾರ ಮೆಹೆಂದಳೆ, ಕಾದಂಬರಿಕಾರರು, ಇವರು ‘ಐತಿಹಾಸಿಕ ಕಾದಂಬರಿಯ ರಚನೆಯಲ್ಲಿ ಸೃಜನಶೀಲತೆ ಹಾಗೂ ಸವಾಲುಗಳು’ ವಿಷಯದ ಕುರಿತು ಮಾತನಾಡಲಿದ್ದಾರೆ.
ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸಲಾಗಿದೆ.
KARNATAKA RESIDENTIAL EDUCATIONAL INSTITUTIONS SOCIETY ವಸತಿ ಶಾಲೆಗಳ ಪ್ರವೇಶಕ್ಕೆ ವಿಶೇಷ ವರ್ಗದಡಿ ವಿದ್ಯಾರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನ
KARNATAKA RESIDENTIAL EDUCATIONAL INSTITUTIONS SOCIETY 2025-26ನೇ ಶೈಕ್ಷಣಿಕ ಸಾಲಿಗೆ ಶಿವಮೊಗ್ಗ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕವಶಿಸಸಂ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಅಟಲ್ ಬಿಹಾರಿ ಪಾಜಪೇಯಿ/ ಕಿತ್ತೂರು ರಾಣಿ ಚೆನ್ನಮ್ಮ / ಡಾ|| ಬಿ.ಆರ್. ಅಂಬೇಡ್ಕರ್/ ಶ್ರೀಮತಿ ಇಂದಿರಾ ಗಾಂಧಿ/ ನಾರಾಯಣ ಗುರು ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಕೆಲವು ವಿಶೇಷ ವರ್ಗದಡಿ ಪ್ರವೇಶಾವಕಾಶವನ್ನು ಕಲ್ಪಿಸಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ
ಸಫಾಯಿ ಕರ್ಮಚಾರಿ/ ಗುರುತಿಸಿದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್/ ಚಿಂದಿ ಆಯುವವರು / ಸ್ಮಶಾನ ಕಾರ್ಮಿಕರ ಮಕ್ಕಳು. ಬಾಲ ಕಾರ್ಮಿಕರು/ ಜೀತ ವಿಮುಕ್ತ ಕಾರ್ಮಿಕರ ಮಕ್ಕಳು/ ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು. 25% ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮಕ್ಕಳು/ ಹೆಚ್.ಐ.ವಿ.ಗೆ ತುತ್ತಾದ ಪೋಷಕರ ಮಕ್ಕಳು/ ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಮಕ್ಕಳು/ ಅನಾಥ ಮಕ್ಕಳು. ಗುರುತಿಸಿರುವ ಅಲೆಮಾರಿ/ ಅರೆ ಅಲೆಮಾರಿ/ ಸೂಕ್ಷ್ಮ- ಅತೀ ಸೂಕ್ಷ್ಮ ಸಮುದಾಯದ/ಸೈನಿಕರ ಮತ್ತು ಮಾಜಿ ಸೈನಿಕರ/ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು. ಪ.ಜಾ./ಪ.ಪಂ.ಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು ಈ ಎಲ್ಲಾ ವಿಶೇಷ ವರ್ಗಗಳು ಅರ್ಜಿ ಸಲ್ಲಿಸಬಹುದಾಗಿದೆ.
KARNATAKA RESIDENTIAL EDUCATIONAL INSTITUTIONS SOCIETY ಆಸಕ್ತರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವೆಬ್‌ಸೈಟ್ https://kreis.karnataka.gov.in ಲಿಂಕ್‌ನಲ್ಲಿ ಅಥವಾ ನೇರವಾಗಿ ವಸತಿ ಶಾಲೆಗೆ ತೆರಳಿ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿ 9482300400 ನ್ನು ಸಂಪರ್ಕಿಸುವುದು.
Photography shimoga ಪರಿಶಿಷ್ಠ ಜಾತಿಒಳ ಮೀಸಲಾತಿಆನ್ ಲೈನ್ ಮೂಲಕಸ್ಬಯಂಘೋಷಣೆಅಂತಿಮ ದಿನಾಂಕ ವಿಸ್ತರಣೆ
Photography shimoga ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತಂತೆ ಗೌರವಾನ್ವಿತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ್‌ರವರ ಏಕಸದಸ್ಯ ವಿಚಾರಣಾ ಆಯೋಗದಿಂದ ಒಳ ಮೀಸಲಾತಿ ಕಲ್ಪಿಸಲು ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ದಿನಾಂಕ:05-05-2025 ರಿಂದ ರಾಜ್ಯಾದ್ಯಂತ ಮೂರು ಹಂತದಲ್ಲಿ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದ್ದು, ಸಮೀಕ್ಷೆಯ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ. ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳುವ ದಿನಾಂಕ ಮೇ 05 ರಿಂದ 25, ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ Photography shimoga ಕೈಗೊಳ್ಳುವ ದಿನಾಂಕ ಮೇ 26 ರಿಂದ 28 ಹಾಗೂ ಸ್ವಯಂ ಘೋಷಣೆ (ಆನ್‌ಲೈನ್ ಮೂಲಕ) ಅವಧಿ ಮೇ 19 ರಿಂದ 28ರವರೆಗೆ ವಿಸ್ತರಿಸಲಾದ ದಿನಾಂಕದ ಬಗ್ಗೆ ಜಿಲ್ಲೆಯ ನಾಗರೀಕರಿಗೆ ಮಾಹಿತಿ ನೀಡುವ ಸಲುವಾಗಿ ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿಗಳು ಈ ದಿನ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಶಿವಮೊಗ್ಗ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಕ್ಷೇತ್ರ ಶಿಕ್ಷಣಾಧಿಕಾರಿ, ಶಿವಮೊಗ್ಗ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
KARNATAKA STATE ACTION PLAN ON CLIMATE CHANGE ಹವಾಮಾನ ಬದಲಾವಣೆ ನಿರ್ವಹಣೆಗೆ ವೈಜ್ಞಾನಿಕ ಕ್ರಿಯ ಯೋಜನೆಗಳು ಅಗತ್ಯ- ಸುಜಾತ
KARNATAKA STATE ACTION PLAN ON CLIMATE CHANGE ಪರಿಸರದ ಮೇಲಾಗುತ್ತಿರುವ ಒತ್ತಡ ಮತ್ತು ಮಾಲಿನ್ಯದಿಂದಾಗಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿದ್ದು ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವೈಜ್ಞಾನಿಕ ಕ್ರಿಯಾ ಯೋಜನೆಗಳು ಹಾಗೂ ಸರಳ ಜೀವನ ನಮ್ಮದಾಗಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸುಜಾತ ಹೇಳಿದರು.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಇವರ ಸಹಯೋಗದಲ್ಲಿ ಬುಧವಾರ ಎಂಎಡಿಬಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ‘ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ರಾಜ್ಯ ಕ್ರಿಯಾ ಯೋಜನೆ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪರಿಸರದ ಮೇಲಾಗುತ್ತಿರುವ ನಿರಂತರ ಒತ್ತಡ ಹಾಗೂ ಪರಿಸರ ಮಾಲಿನ್ಯದಿಂದಾಗಿ ಹವಾಮಾನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣುತ್ತಿದ್ದು ಇದರಿಂದ ಮಾನವನ ಜೀವನದ ಮೇಲೆ ಅನೇಕ ದುಷ್ಟರಿಣಾಮಗಳೂ ಆಗುತ್ತಿದೆ. ಇದಕ್ಕೆಲ್ಲ ಕಾರಣ ನಾವೇ ಆಗಿದ್ದು, ಕೈಗಾರಿಕೆಗಳು ಸೇರಿದಂತೆ ಮನುಷ್ಯ ಕೈಗೊಳ್ಳವ ಅನೇಕ ಪ್ರಕ್ರಿಯೆಗಳಿಂದ ಪರಿಸರ ಮಾಲಿನ್ಯ, ಅಸಮತೋಲನ ಉಂಟಾಗುತ್ತಾ ಬಂದಿದೆ.
ಆದ್ದರಿAದ ನಾವೆಲ್ಲ ಸರಳ ಜೀವನ, ಅಹಿಂಸೆ ತತ್ವವನ್ನು ಅಳವಡಿಸಕೊಳ್ಳಬೇಕು. ಪ್ರಕೃತಿಯ ವಿರುದ್ದ ಹೋಗುತ್ತಿದ್ದೇವೆ. ಅತಿಯಾದ ಕೈಗಾರಿಕೋದ್ಯಮ, ರಾಸಾಯನಿಕಗಳ ಬಳಕೆಯಿಂದ ಗ್ಲೋಬಲ್ ವಾರ್ಮಿಂಗ್ ಆಗುತ್ತಿದೆ. ದೇಶಗಳ ನಡುವೆ ಸ್ಪರ್ಧೆ ಹೆಚ್ಚುತ್ತಿದೆ. ಇಡೀ ಭೂಮಿ ಸುಡುವಷ್ಟು ಸ್ಪೋಟಕ ನಮ್ಮಲ್ಲಿದೆ. ಅಸಂಬದ್ದವಾದ ಬದುಕನ್ನು ಬದುಕುತ್ತಿದ್ದೇವೆ. ಹಳ್ಳಿಗಳಲ್ಲೂ ಸಾಕಷ್ಟು ಘನತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಿಂದ ನಮ್ಮ ಆರೋಗ್ಯ, ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಮಾರಕವಾಗಲಿದೆ. ವಿಶ್ವಾದ್ಯಂತ ಪರಿಸರ ಸಂರಕ್ಷಿಸುವ ಕುರಿತು ಜಾಗೃತಿ ಮೂಡಬೇಕಿದ್ದು ಒತ್ತಡ ರಹಿತ ಬದುಕು ನಮ್ಮದಾಗಿಸಿಕೊಳ್ಳಲು ಸರಳತೆಯನ್ನು ರೂಢಿಸಿಕೊಳ್ಳಬೇಕಿದೆ ಎಂದರು.
KARNATAKA STATE ACTION PLAN ON CLIMATE CHANGE ಜಿ.ಪಂ ಮುಖ್ಯ ಯೋಜನಾಧಿಕಾರಿ ಹನುಮಾನಾಯ್ಕ ಮಾತನಾಡಿ, ಹವಾಮಾನ ವೈಪರೀತ್ಯಗಳನ್ನು ನಿರ್ವಹಿಸಲು ವೈಜ್ಞಾನಿಕವಾದ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಹವಾಮಾನ ಬದಲಾವಣೆ ಕುರಿತು ರಾಜ್ಯ ಕ್ರಿಯಾ ಯೋಜನೆ ರೂಪಿಸಿದ್ದು ಇದನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ತಿಳಿದುಕೊಂಡು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ.
ಜಿಲ್ಲಾ ಅಧಿಕಾರಿಗಳನ್ನು ಈ ಕ್ರಿಯಾ ಯೋಜನೆಯ ಪ್ರಮುಖ ಅಂಶಗಳಿಗೆ ಪರಿಚಯಿಸಲು, ಇಲಾಖಾ ಜವಾಬ್ದಾರಿಗಳನ್ನು ಸ್ಪಷ್ಟಪಡಿಸಲು ಮತ್ತು ಜಿಲ್ಲಾ ಮಟ್ಟದಲ್ಲಿ ಹವಾಮಾನ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯನ್ನು ಈ ಕಾರ್ಯಾಗಾರದಲ್ಲಿ ತಿಳಿಸಲಾಗುವುದು.
ಹವಾಮಾನ ಬದಲಾವಣೆ ಕುರಿತಾದ ರಾಜ್ಯ ಕ್ರಿಯಾ ಯೋಜನೆಯನ್ನು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ, ಭಾರತ ಸರ್ಕಾರ ಅನುಮೋದಿಸಿರುವ ಹಿನ್ನೆಲೆಯಲ್ಲಿ ಹವಾಮಾನ ಬದಲಾವಣೆ ಕಾರ್ಯತಂತ್ರಗಳನ್ನು ಮುಖ್ಯವಾಹಿನಿಗೆ ತರಲು ಈ ಕಾರ್ಯಾಗಾರ ಏರ್ಪಡಿಸಲಾಗಿದ್ದು ಅಧಿಕಾರಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಬೆಂಗಳೂರಿನ ತರಬೇತಿ ಅಸೋಸಿಯೇಟ್ ರುಚಿತಾಶ್ರೀ ಮಾತನಾಡಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಕರ್ನಾಟಕ ಸರ್ಕಾರವು ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯ ಅಡಿಯಲ್ಲಿ 2002 ರಲ್ಲಿ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾಗಿದೆ. ಅನ್ವಯಿಕ ಮತ್ತು ನೀತಿ ಸಂಶೋಧನೆ ನಡೆಸುತ್ತದೆ ಮತ್ತು ಪ್ರಸ್ತುತ ಪರಿಸರ ಸಮಸ್ಯೆಗಳ ಕುರಿತು ಸಾಮರ್ಥ್ಯ-ನಿರ್ಮಾಣ ತರಬೇತಿಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು. ಹಾಗೂ ಪಿಪಿಟಿ ಪ್ರದರ್ಶನದ ಮೂಲಕ ಹವಾಮಾನ ಬದಲಾವಣೆ ಕಾರಣಗಳು, ಜಾಗತಿಕ ಮತ್ತು ಭಾರತೀಯ ಉಪ ಕ್ರಮಗಳು ಸೇರಿದಂತೆ ರಾಜ್ಯ ಕ್ರಿಯಾ ಯೋಜನೆಯ ಮುಖ್ಯಾಂಶಗಳನ್ನು ವಿವರಿಸಿದರು.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಡಾ.ಶೃತಿ ಮಾತನಾಡಿ, ಹವಾಮಾನ ಬದಲಾವಣೆಗಾಗಿ ರಾಜ್ಯ ನೋಡಲ್ ಏಜೆನ್ಸಿಯಾಗಿ, ಹವಾಮಾನ ಬದಲಾವಣೆಯ ಕುರಿತಾದ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಈ ಸಂಸ್ಥೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹವಾಮಾನ-ಹೊಂದಾಣಿಕೆಯ ಯೋಜನೆಯ ತಯಾರಿಕೆ ಮತ್ತು ಹವಾಮಾನ-ಸಂಬAಧಿತ ತರಬೇತಿ ಕಾರ್ಯಗಾರವನ್ನು ನಡೆಸುತ್ತಿದ್ದು, ಹವಾಮಾನ ಬದಲಾವಣೆಯ ಪರಿಗಣನೆಗಳನ್ನು ರಾಜ್ಯ ಮಟ್ಟದ ನೀತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಸಂಯೋಜಿಸುವ ಮೂಲಕ ಹೊಂದಾಣಿಕೆ ಮತ್ತು ತಗ್ಗಿಸುವಿಕೆಯ ಪ್ರಯತ್ನಗಳನ್ನು ಇದು ಬೆಂಬಲಿಸುತ್ತದೆ.
ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ(ಕೆಎಸ್‌ಎಪಿಸಿಸಿ) ರಾಜ್ಯಾದ್ಯಂತ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಾಗ ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಲು ಒಂದು ಕಾರ್ಯತಂತ್ರದ ಚೌಕಟ್ಟನ್ನು ಒದಗಿಸುತ್ತದೆ. ಇದು ಅಂತರರಾಷ್ಟ್ರೀಯ ಹವಾಮಾನ ಒಪ್ಪಂದಗಳ ಅಡಿಯಲ್ಲಿ ಭಾರತದ ರಾಷ್ಟ್ರೀಯ ಬದ್ಧತೆಗಳೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಧಿಸಬಹುದಾದ ಸ್ಥಳೀಯ ಮಟ್ಟದ ಕ್ರಿಯೆಯ ಮಹತ್ವವನ್ನು ಒತ್ತಿ ಹೇಳುತ್ತದೆ.
ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ನೀರು, ಇಂಧನ, ಸಾರಿಗೆ, ಕೈಗಾರಿಕೆಗಳು, ತ್ಯಾಜ್ಯ ನಿರ್ವಹಣೆ ಮತ್ತು ಆರೋಗ್ಯ ಎಂಬ ಹತ್ತು ಪ್ರಮುಖ ವಲಯಗಳಲ್ಲಿ ಈ ಕ್ರಿಯಾ ಯೋಜನೆ 200 ಕ್ರಿಯಾ ಅಂಶಗಳನ್ನು ವಿವರಿಸುತ್ತದೆ. ಹವಾಮಾನ ಅಪಾಯಗಳಿಗೆ ಪ್ರತಿಕ್ರಿಯೆಯಾಗಿ ಹೊಂದಾಣಿಕೆ ಮತ್ತು ಅಪಾಯಗಳ ತಗ್ಗಿಸುವಿಕೆಯ ಪ್ರಯತ್ನಗಳೆರಡನ್ನೂ ಮಾರ್ಗದರ್ಶನ ಮಾಡಲು ಈ ಕ್ರಿಯಾ ಅಂಶಗಳನ್ನು ವಿನ್ಯಾಸಗೊಳಿಸಲಾಗಿದೆ.
ಅನುಷ್ಠಾನವನ್ನು ಬೆಂಬಲಿಸಲು, ಸಂಸ್ಥೆಯು ಹವಾಮಾನ ಪರಿಣಾಮಗಳು ಮತ್ತು ಶಿಫಾರಸು ಮಾಡಲಾದ ತಂತ್ರಗಳನ್ನು ಎತ್ತಿ ತೋರಿಸುವ ವಲಯ-ನಿರ್ದಿಷ್ಟ ನೀತಿ ಸಂಕ್ಷಿಪ್ತ ವಿವರಣೆಗಳನ್ನು ಸಿದ್ಧಪಡಿಸಿದೆ ಎಂದ ಅವರು ಪಿಪಿಟಿ ಮೂಲಕ ಕ್ರಿಯಾ ಯೋಜನೆಯ ಉಪಕ್ರಮಗಳ ಬಗ್ಗೆ ತಿಳಿಸಿದರು.
ಜಿ.ಪಂ. ಎನ್‌ಆರ್‌ಡಿಎಂಸ್ ಅಧಿಕಾರಿ ಶಂಕರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Department Of Pre-University Education ದ್ವಿತೀಯ ಪಿಯು 3 ನೇ ಪರೀಕ್ಷೆಗೆ ನೋಂದಣಿ. ವಿದ್ಯಾರ್ಥಿಗಳಿಗೆ ಮಾಹಿತಿ
Department Of Pre-University Education ದ್ವಿತೀಯ ಪಿಯುಸಿ 3 ನೇ ಪರೀಕ್ಷೆಯನ್ನು ಜೂ.9 ರಿಂದ 20 ರವರೆಗೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಮೇ.28 ಕೊನೆಯ ದಿನವಾಗಿದೆ.
ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ-2 ಕ್ಕೆ ಅವಕಾಶ ಕಲ್ಪಿಸಿತ್ತು. ಅದರಿಂದ ರಾಜ್ಯದಲ್ಲಿ 60,692 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈಗ 3 ನೇ ಪರೀಕ್ಷೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಫಲಿತಾಂಶ ಪೂರ್ಣಗಳ್ಳದ ಎಲ್ಲಾ ವಿದ್ಯಾರ್ಥಿಗಳು ನೊಂದಾಯಿಸಿಕೊAಡು ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾಹಿತಿಯನ್ನು ನೀಡಲಾಗಿದೆ. ಹಾಗೂ ನೊಂದಾಯಿಸಿಕೊAಡ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗುವಂತೆ ಕ್ರಮಕೈಗೊಳ್ಳಲು ಹಾಗೂ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ತರಗತಿಯನ್ನು ನಡೆಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.
ಪುನರಾವರ್ತಿತ/ಫಲಿತಾಂಶ ಪೂರ್ಣಗೊಳ್ಳದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ರಂತೆ ಪರೀಕ್ಷೆ-3ರಲ್ಲೂ ಪರೀಕ್ಷಾ ಶುಲ್ಕ ಪಾವತಿಗೆ ವಿನಾಯಿತಿ ನೀಡಲಾಗಿದೆ. 2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಕ್ಕೆ ನೊಂದಾಯಿಸಿಕೊAಡು ಹಾಜರಾತಿ ಕೊರತೆಯಿಂದ ಪರೀಕ್ಷೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ 2025ರ ದ್ವಿತೀಯ ಪಿಯುಸಿ ಪರೀಕ್ಷೆ-3 ರಲ್ಲಿ ಖಾಸಗಿ ಅಭ್ಯರ್ಥಿಯಾಗಿ ನೊಂದಾಯಿಸಿ ಪರೀಕ್ಷೆ ಬರೆಯಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ತಾವು ಇಚ್ಚಿಸಿದ ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅನುತ್ತೀರ್ಣರಾದ/ಫಲಿತಾಂಶ ಪೂರ್ಣಗೊಳ್ಳದ ವಿದ್ಯಾರ್ಥಿಗಳನ್ನು ಪರೀಕ್ಷೆ-3ರಲ್ಲಿ ಕಡ್ಡಾಯವಾಗಿ ನೊಂದಾಯಿಸಲು ಕ್ರಮಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.
Department Of Pre-University Education ಪರೀಕ್ಷೆ-1ರಲ್ಲಿ ನೊಂದಾಯಿಸಿಕೊAಡು ಅನಿವಾರ್ಯ ಕಾರಣಗಳಿಂದ ಪರೀಕ್ಷೆ ಬರೆಯದೇ ಇರುವ ವಿದ್ಯಾರ್ಥಿಗಳು ಪರೀಕ್ಷೆ-3 ರಲ್ಲಿ ನೊಂದಾಯಿಸಿ ಪರೀಕ್ಷೆಗೆ ಹಾಜರಾಗಬಹುದಾಗಿದೆ. 2006 ರಿಂದ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೂ ಪರೀಕ್ಷೆ-3 ರಲ್ಲಿ ನೊಂದಾಯಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಮರುಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮರು ಮೌಲ್ಯಮಾಪನದ ಫಲಿತಾಂಶಕ್ಕೆ ಕಾಯದೇ ನಿಗದಿತ ದಿನಾಂಕದೊಳಗೆ ಪರೀಕ್ಷೆ-3 ರಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
