S. N. Channabasappa ಇಂದು ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ನೆಹರು ರಸ್ತೆ ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಮಹತ್ವದ ಸಭೆ ನಡೆಸಿ,
1. ಯುಜಿಡಿ ಕಾಮಗಾರಿಗಳು: ನೆಹರು ರಸ್ತೆಯಲ್ಲಿ ಯುಜಿಡಿ ಕಾಮಗಾರಿಗಳ ಪ್ರಗತಿ ಹಾಗೂ ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
2. ಟ್ರಾನ್ಸ್‌ಫಾರ್ಮರ್ ಸ್ಥಳಾಂತರ: ರಸ್ತೆಯಲ್ಲಿ ಸ್ಥಾಪಿತ ಎಲೆಕ್ಟ್ರಿಕಲ್ ಟ್ರಾನ್ಸ್‌ಫಾರ್ಮರ್‌ಗಳಿಂದ ಉಂಟಾಗುತ್ತಿರುವ ಅಡಚಣೆಗಳನ್ನು ಪರಿಹರಿಸಲು ಅವುಗಳನ್ನು ಸುರಕ್ಷಿತ ಸ್ಥಳಗಳಿಗೆ ತುರ್ತು ಆಧಾರದ ಮೇಲೆ ಸ್ಥಳಾಂತರಗೊಳಿಸಲು ತಿಳಿಸಿದರು.
3. ಪಾರ್ಕಿಂಗ್ ವ್ಯವಸ್ಥೆ: ನೆಹರು ರಸ್ತೆಗೆ ಹೊಂದಿಕೊಂಡಿರುವ ಕನ್ಸರ್ವೆನ್ಸಿ ರಸ್ತೆಗಳಲ್ಲಿ ಪಾರ್ಕಿಂಗ್ ಸೌಲಭ್ಯ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಯೋಜನೆ ಮುಂದಿನ ಕೆಲ ದಿನಗಳಲ್ಲಿ ಜಾರಿಗೊಳಿಸಲು ಬೇಕಾಗಿರುವಂತಹ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
4. ಬೀದಿ ದೀಪಗಳ ಅಳವಡಿಕೆ: ಕನ್ಸರ್ವೆನ್ಸಿ ರಸ್ತೆಗಳ ಬೆಳಕಿನ ಕೊರತೆಯನ್ನು ನಿವಾರಣೆಗೆ ಬೀದಿ ದೀಪಗಳ ಅಳವಡಿಕೆಗೆ ಸಂಬಂಧಿಸಿದ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಆದೇಶ ಆದೇಶಿಸಿದರು.
S. N. Channabasappa ಸಭೆಯಲ್ಲಿ ಪಾಲಿಕೆ ಮತ್ತು ಮೆಸ್ಕಾಂನ ಅಧಿಕಾರಿಗಳು, ನೆಹರೂ ರಸ್ತೆ ವರ್ತಕ ಸಂಘದ ಅಧ್ಯಕ್ಷರಾದ ಬಿ.ಎ.ರಂಗನಾಥ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.