ನಾವು ಮಾಡಿದ ಸೇವೆ ದಾನ ಧರ್ಮ ನಮಗೆ ಒಂದಲ್ಲ ಒಂದು ರೀತಿಯಿಂದ ನಮ್ಮ ಕುಟುಂಬವನ್ನು ಕಾಪಾಡುತ್ತದೆ ದಾನದಿಂದ ತೃಪ್ತಿ ಸಿಗುತ್ತದೆ ಎಂದು. ಸಾಗರದ ಹೇಮಾ ಬಿಜಿ ಗೋಣೂರು ಅಭಿಮತ ವ್ಯಕ್ತ ಪಡಿಸಿದರು. ಅವರು ಈ ದಿನ ನಗರದ ಗುಡ್ ಲಕ್ ಆರೈಕೆ ಕೇಂದ್ರ ಅನಾಥಾಶ್ರಮ ದಲ್ಲಿ ಆಶ್ರಮದ ಕಟ್ಟಡ ಕಾಮಗಾರಿಗೆ 1 ಲಕ್ಷ ರೂ ದೇಣಿಗೆ ನೀಡಿ ಮಾತನಾಡಿದರು ದಾನಿಗಳ ಕೈ ಯಾವತ್ತು ಸೋಲುವುದಿಲ್ಲ ನಾವು ಮಾಡಿದ ದಾನದಿಂದ ಅದರ ನಾಲ್ಕು ಪಟ್ಟು ಫಲ ನಮಗೆ ಲಭಿಸಿದೆ ಮನುಕುಲದ ಸೇವೆಗಳನ್ನು ಮಾಡುತ್ತಿರುವ ಸಂಸ್ಥೆಗಳಿಗೆ ಮಾತ್ರ ನಮ್ಮ ಕುಟುಂಬದವರು ದಾನವನ್ನು ಮಾಡುತ್ತಾ ಬಂದಿದ್ದೇವೆ ಈಗಾಗಲೇ ಅಂದರ ವಿಕಾಸ ಕೇಂದ್ರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅನಾಥಾಶ್ರಮಗಳಿಗೆ ಈಗ ಈ ಗುಡ್ ಲಕ್ ಆರೈಕೆ ಕೇಂದ್ರಕ್ಕೆ ದೇಣಿಗೆ ನೀಡಿದ್ದೇವೆ ಆರೈಕೆ ಕೇಂದ್ರದ ಚಟುವಟಿಕೆಗಳನ್ನ ಗಮನಿಸಿ ಅವರು ಮಾಡುತ್ತಿರುವ ಗುಡ್ ಲಕ್ ಆರೈಕೆ ಕೇಂದ್ರದ ನಿಸ್ವಾರ್ಥ ಮಾನವೀಯ ಸೇವೆಗಳು ಸಮಾಜಕ್ಕೆ ಮಾದರಿಯಾಗಿದೆ ಅನಾಥರ ಬುದ್ಧಿಮಾಂದ್ಯ ರ ಹಾಗೂ ಅಶಕ್ತರ ಆರೈಕೆ ಮಾಡುವ ಕೆಲಸ ಸಾಮಾನ್ಯ ವಾದುದಲ್ಲ. ನಾವು ವಿದೇಶದಲ್ಲಿ ವಾಸಿಸಿದರು. Good Luck Care Center ಸಹ ವರ್ಷಕ್ಕೆ ಒಂದು ಬಾರಿ ಬಂದಾಗ ಈ ರೀತಿಯ ಮಾನವೀಯ ಸೇವೆಗಳಿಗೆ ಕೈಜೋಡಿಸುತ್ತೇವೆ ಹಾಗೆ ಸರಿಯಾದ ಫಲಾನುಭವಿಗಳನ್ನು ಗುರುತಿಸಿ ನೀಡುವಂತಹ ದಾನ ಭಗವಂತನಿಗೆ ಸಲ್ಲುತ್ತದೆ ಎಂದು ನುಡಿದರು. ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷರಾದ ರವೀಂದ್ರನಾಥ್ ಐತಾಳ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ನಮ್ಮ ಆಶ್ರಮ ದಾನಿಗಳ ಸಹಾಯದಿಂದ ನಿರ್ಮಾಣವಾಗುವುದರ ಜೊತೆಗೆ ನಮ್ಮ ಸಂಸ್ಥೆಯ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಕೈಜೋಡಿಸಿ ಸಂಸ್ಥೆ ವ್ಯವಸ್ಥಿತವಾಗಿ ನಡೆಯಲು ಸಹಕಾರ ನೀಡಿದ್ದಾರೆ. ಹಾಗೆ ಹಿರಿಯ ನಾಗರೀಕರ ಹಗಲು ಆರೈಕೆ ಕೇಂದ್ರ ಮತ್ತು. ಅನ್ನಪೂರ್ಣ ನಿತ್ಯ ಪ್ರಸಾದ ಯೋಜನೆಗೆ ರೋಟರಿ ,ಫ್ರೆಂಡ್ಸ್ ಸೆಂಟರ್, ಇನ್ನರ್ ವೀಲ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ನೆರವು ಮರೆಯಲು ಸಾಧ್ಯವಿಲ್ಲ ಮತ್ತು ಇಲ್ಲಿ ವಾಸಿಸುವ ನಿವಾಸಿಗಳಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವುದರಿಂದ ಉಚಿತ ಸೇವಾ ಮನೋಭಾವದ ಸ್ವಯಂಸೇವಕ ವೈದ್ಯರ ನೆರವು ಅಗತ್ಯವಿದೆ ಇದನ್ನು ಪರಿಹರಿಸುವ ಪ್ರಯತ್ನ ನಗರದ ಸೇವಾಸಕ್ತ ಸಂಸ್ಥೆಯು ನಡೆಸಿಕೊಡಬೇಕು ಹಾಗೆ ನಗರದಲ್ಲಿರುವ ದಾನಿಗಳು ನಮ್ಮ ಕೇಂದ್ರವನ್ನು ಸಮಯವಿದ್ದಾಗ ಭೇಟಿ ಮಾಡಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿ ವಿನಂತಿಸಿಕೊಂಡರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹಿರೇಮಠ ಉಪಾಧ್ಯಕ್ಷರಾದ ಶಿವಪ್ಪಗೌಡ. ನಿರ್ದೇಶಕರಾದ ಜಿ. ವಿಜಯಕುಮಾರ್. ಅನುಪಮಾ ಹೆಗಡೆ. ಶ್ರೀನಿವಾಸ್. ಬಿಂದು ವಿಜಯ ಕುಮಾರ್. ಹಾಗೂ ಆಶ್ರಮವಾಸಿಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು
DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕಂಡು ಬರುವ ಮಂಗನಕಾಯಿಲೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ನಿರ್ದೇಶನ- ಗುರುದತ್ತ ಹೆಗಡೆ
DC Shivamogga ತೀರ್ಥಹಳ್ಳಿ, ಹೊಸನಗರ, ಸಾಗರ ಮಲೆನಾಡು ತಾಲೂಕುಗಳು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಕಂಡುಬರುವ ಮಂಗನಕಾಯಿಲೆಯ ನಿಯಂತ್ರಣಕ್ಕೆ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಹಾಗೂ ಇತರೆ ಇಲಾಖೆಗಳ ಸಮನ್ವಯದೊಂದಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ಪ್ರಾಥಮಿಕ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಅನುಷ್ಟಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಂಗನ ಕಾಯಿಲೆ ಬಾದಿತ ಪ್ರದೇಶಗಳಲ್ಲಿ ಉಣುಗುಗಳ ನಿಯಂತ್ರಣ ಕುರಿತು ಸರ್ವೇಕ್ಷಣೆ, ಮಂಗಗಳ ಅಸಹಜ ಸಾವಿನ ಕುರಿತು ಸರ್ವೇಕ್ಷಣೆ ಹಾಗೂ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜ್ವರ ಸಮೀಕ್ಷೆ ಮಾಡುವಂತೆ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಿ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದವರು ನುಡಿದರು.
ಮಲೆನಾಡು ಭಾಗಗಳ ಅರಣ್ಯ ಪ್ರದೇಶಗಳಲ್ಲಿ ಸುತ್ತಾಡುವ ಸಾರ್ವಜನಿಕರು, ರೈತರು ಸುರಕ್ಷತಾ ಕ್ರಮವಾಗಿ ಆರೋಗ್ಯ ಇಲಾಖೆಯು ಉಚಿತವಾಗಿ ಒದಗಿಸುವ ಡೀಪಾ ತೈಲವನ್ನು ಲೇಪಿಸಿಕೊಳ್ಳುವಂತೆ ಸೂಚಿಸಿದ ಅವರು, ಜ್ವರ, ಶೀತ, ತಲೆನೋವು, ವಾಂತಿ, ಮೈಕೈ ನೋವು, ನವೆ ಮುಂತಾದ ಅಹಜವಾಗಿರುವ ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣದಲ್ಲಿ ಸ್ಥಳೀಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಸಕಾಲಿಕವಾಗಿ ಸೂಕ್ತ ಚಿಕಿತ್ಸೆಪಡೆದುಕೊಳ್ಳುವಂತೆ ಅವರು ಸೂಚಿಸಿದರು.
ಯಾವುದೇ ವ್ಯಕ್ತಿ ಸೋಂಕಿಗೆ ತುತ್ತಾಗಿರುವ ಲಕ್ಷಣಗಳು ಕಂಡುಬಂದಲ್ಲಿ ಅಂತಹ ವ್ಯಕ್ತಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ದಿನದ 24ಗಂಟೆಯೊಳಗಾಗಿ ವರದಿ ಪಡೆದು, ಸೂಕ್ತ ಚಿಕಿತ್ಸೆ ನೀಡುವಂತೆ ಎಲ್ಲಾ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ಸೋಂಕಿನ ನಿಯಂತ್ರಣದಲ್ಲಿ ಸ್ಥಳೀಯರ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದುಕೊಳ್ಳಬೇಕು ಎಂದ ಅವರು, ಡೀಪಾ ತೈಲವು ಮಂಗನ ಕಾಯಿಲೆ ಮಾತ್ರವಲ್ಲ ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ ಎಂದರು.
ಮಂಗನ ಕಾಯಿಲೆಯ ನಿಯಂತ್ರಣ ಕ್ರಮದ ಭಾಗವಾಗಿ ಸ್ಥಳೀಯ ಜನರಲ್ಲಿ ಅರಿವು ಮೂಡಿಸಬೇಕು. ಅದಕ್ಕಾಗಿ ಗ್ರಾಮ ಪಂಚಾಯಿತಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದುಕೊಳ್ಳಬೇಕು. ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯೊಳಗಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಗ್ರಾಮೀಣ ಜನರೂ ಸಹ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಅಹಜವಾಗಿ ಮಂಗಗಳ ಸಾವು ಕಂಡುಬಂದಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಿ ಸಹಕರಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್.ಹೇಮಂತ್ ಅವರು ಹೇಳಿದ್ದಾರೆ. ಎಲ್ಲಾ ತಾಲೂಕುಗಳ ವೈದ್ಯಾಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆಗಳನ್ನು ಕರೆದು, ಅಗತ್ಯ ಕ್ರಮಗಳನ್ನು ನಿರ್ವಹಿಸಲು ಇಲಾಖೆಯ ಅಧೀನ ಅಧಿಕಾರಿ-ಸಿಬ್ಬಂಧಿಗಳಿಗೆ ಸೂಚನೆ ರವಾನಿಸಬೇಕು ಎಂದ ಅವರು, ಸಮಸ್ಯಾತ್ಮಕ ಪ್ರದೇಶಗಳನ್ನು ಗುರುತಿಸಿ, ವಿಶೇಷ ಗಮನಹರಿಸುವ ಮೂಲಕ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಯಾವುದೇ ಸಾವು-ನೋವುಗಳು ಸಂಭವಿಸದಂತೆ ಕ್ರಮ ವಹಿಸಬೇಕು. ಕಾಯಿಲೆಯ ನಿಯಂತ್ರಣಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವುದಾಗಿ ಸೂಚಿಸಿದರು.
ಜಿಲ್ಲೆಯಲ್ಲಿ ಬಾಣಂತಿ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಅದಕ್ಕೆ ಸೂಕ್ತ ಕಾರಣಗಳನ್ನು ಗುರುತಿಸಿ, ನಿಯಂತ್ರಣ ಕ್ರಮ ಅನುಸರಿಸಬೇಕಾದ ಅಗತ್ಯವಿದೆ. ಆದ್ದರಿಂದ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಮೃತರಾದ ಗರ್ಭಿಣಿ, ಬಾಣಂತಿ ಸಾವಿನ ಪ್ರಕರಣಗಳ ಕುರಿತು ತಜ್ಞ ವೈದ್ಯಾಧಿಕಾರಿಗಳ ತಂಡವನ್ನು ರಚಿಸಿ, ಪರಿಶೀಲನೆ ನಡೆಸಿ, ಮುಂದಿನ 15ದಿನಗಳೊಳಗಾಗಿ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು – ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. ಕಳೆದ ಜನವರಿ ಮಾಹೆಯಿಂದೀಚೆಗೆ ಜಿಲ್ಲೆಯಲ್ಲಿ 7380ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, 76ಪ್ರಕರಣಗಳನ್ನು ಗುರುತಿಸಿ, ಸಕಾಲಿಕವಾಗಿ ಚಿಕಿತ್ಸೆ ನೀಡಲಾಗಿದೆ. ಎರಡು ಜೀವಹಾನಿ ಪ್ರಕರಣಗಳು ದಾಖಲಾಗಿವೆ. ಅಸಹಜವಾಗಿ 185 ಮಂಗಗಳ ಸಾವನ್ನೂ ಗುರುತಿಸಿ, ಎಚ್ಚರಿಕೆ ಕ್ರಮ ವಹಿಸಲಾಗಿದೆ. ಅಲ್ಲದೆ ಸರ್ಕಾರದ ಮಾರ್ಗಸೂಚಿಯಂತೆ ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಮೆಗ್ಗಾನ್‌ಬೋಧನಾ ಆಸ್ಪತ್ರೆ, ಸುಬ್ಬಯ್ಯ ಮೆಡಿಕಲ್‌ಕಾಲೇಜು ಮತ್ತು ಕೆ.ಎಂ.ಸಿ. ಮಣಿಪಾಲ್‌ನಲ್ಲಿ ಒಳರೋಗಿಯಾಗಿ ದಾಖಲಾದ ಪ್ರಕರಣಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದವರು ತಿಳಿಸಿದರು.
ಜಿಲ್ಲಾಡಳಿತವು ಅರಣ್ಯ, ಆರೋಗ್ಯ, ಕಂದಾಯ, ಪಶುಸಂಗೋಪನೆ, ಪಂಚಾಯತ್‌ರಾಜ್‌ಇಲಾಖೆಗಳ ಸಹಯೋಗದೊಂದಿಗೆ ಎಲ್ಲಾ ರೀತಿಯ ಮುಂಜಾಗ್ರತಾ ನಿಯಂತ್ರಣ ಕ್ರಮ ವಹಿಸಲಾಗಿದೆ ಎಂದ ಅವರು ಮಂಗನಕಾಯಿಲೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಈ ನಿಯಂತ್ರಣ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದವರು ತಿಳಿಸಿದರು.
DC Shivamogga ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಪಲ್ಸ್‌ಪೋಲಿಯೋ ಕಾರ್ಯಕ್ರಮದ ಮೊದಲ ಸುತ್ತಿನ ಲಸಿಕಾ ಆಂದೋಲನವು ಡಿಸೆಂಬರ್21ರ ಭಾನುವಾರದಂದು ಬೆಳಿಗ್ಗೆ 8 ರಿಂದ ಸಂಜೆ 5ಗಂಟೆಯವರೆಗೆ ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಾದ್ಯಂತ 5ವರ್ಷದೊಳಗಿನ 1,23,338 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 1016ಬೂತ್‌ಗಳನ್ನು ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ.
1905ತಂಡಗಳನ್ನು ನೇಮಿಸಿದ್ದು, 193ಜನರನ್ನು ಉಸ್ತುವಾರಿಗಾಗಿ ನಿಯೋಜಿಸಲಾಗಿದೆ. ಈ ಮಹತ್ವದ ಕಾರ್ಯದಲ್ಲಿ ಭಾಗವಹಿಸುವ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲು ಸೂಚಿಸಲಾಗಿದೆ ಎಂದರು. ಈ ಲಸಿಕಾ ಆಂದೋಲನ ನಡೆಯಲಿರುವ ಅವಧಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಮಕ್ಕಳಿಗೆ ಲಸಿಕೆ ಹಾಕಲು ಮಾಹಿತಿ ನೀಡಿ, ಮಕ್ಕಳನ್ನು ಕರೆತಂದು ಲಸಿಕೆ ಹಾಕಿಸುವಲ್ಲಿ ಶ್ರಮಿಸುವಂತೆ ಸೂಚಿಸಿದ ಅವರು, ನಿಗಧಿಪಡಿಸಲಾಗಿರುವ ದಿನಕ್ಕೂ ಮುನ್ನವೇ ಜನರಲ್ಲಿ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಟರಾಜ್, ಡಾ|| ನಾಗರಾಜ್‌ನಾಯ್ಕ್, ಡಾ|| ಸಿದ್ಧನಗೌಡಪಾಟೀಲ್, ಡಾ|| ಮಲ್ಲಪ್ಪ, ಡಾ|| ಸ್ಮೃತಿ ಸಿ.ರಾಜ್, ಡಾ|| ಅನುಷಾ ಜಿ.ಕೆ., ಡಾ|| ಶಾಂತಕುಮಾರ್, ಡಾ|| ಪ್ರಶಾಂತ್, ಡಾ|| ನಾರಾಯಣ್‌ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.
MESCOM ಶಿಕಾರಿಪುರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ
MESCOM ಶಿಕಾರಿಪುರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ದಿನಾಂಕ 11.12.2025 ರಂದು ಬೆಳಿಗ್ಗೆ11.00 ರಿಂದ 01.00 ಗಂಟೆಯವರೆಗೆ ಜನಸಂಪರ್ಕ ಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ.
ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.
ಸಂಪರ್ಕಿಬಹುದಾದ ದೂರವಾಣಿಸಂಖ್ಯೆ;.9448289519
Shiralakoppa Municipality ಬೀದಿ ನಾಯಿಗಳ ಕಾಟ ನಿಯಂತ್ರಣಕ್ಕೆ ಶಿರಾಳಕೊಪ್ಪ ಪುರಸಭೆಯಿಂದ ಕ್ರಮ ಕೈಗೊಂಡ ಮಾಹಿತಿ
Shiralakoppa Municipality ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿನ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂರ್ಕೀಣಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳ ಆವರಣದಲ್ಲಿ ಬೀದಿ ನಾಯಿಗಳು ವಾಸವಿದ್ದಲ್ಲಿ ಅದರ ಸಂಖ್ಯೆಯನ್ನು ಲೆಕ್ಕ ಮಾಡಿ ಲಿಖಿತವಾಗಿ ಶಿಕಾರಿಪುರ ಪುರಸಭೆಯ ಮುಖ್ಯಾಧಿಕಾರಿಗಳಿಗೆ ತಿಳಿಸುವುದು.
ಸಂಸ್ಥೆಯ ಆವರಣದಲ್ಲಿ ಬೀದಿನಾಯಿಗಳ ಉಪಟಳ ತಡೆಯಲು ಹಾಗೂ ಅವುಗಳ ಪ್ರವೇಶ ನಿಯಂತ್ರಿಸಲು ಕ್ರಮ ವಹಿಸುವುದು. ನಗರ ಸ್ಥಳೀಯ ಸಂಸ್ಥೆಯಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಸಹಕರಿಸಲು ಹಾಗೂ ಅವುಗಳ ಪ್ರವೇಶ ನಿರ್ಭಂದಿಸುವುದನ್ನು ಮೇಲ್ವಿಚಾರಣೆ ಮಾಡಲು ಸಂಸ್ಥೆಯ ವತಿಯಿಂದ ಒಬ್ಬ ಜವಾಬ್ಧಾರಿಯುವ ನೌಕರರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡುವುದು. ಸಂಸ್ಥೆಯ ವ್ಯಾಪ್ತಿಯಲ್ಲಿ ಪುನಃ ನಾಯಿಗಳು ವಾಸ ಮಾಡಲು ಅವಕಾಶ ಕೊಟ್ಟಲ್ಲಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಅವನ್ನು ಸ್ಥಳಾಂತರಿಸುವ ವೆಚ್ಛವನ್ನು ಆ ಸಂಸ್ಥೆಯಿಂದಲೇ ವಸೂಲಿ ಮಾಡಲಾಗುವುದು.
ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲಿ ನ್ಯಾಯಾಲಯದ ಆದೇಶದಂತೆ ಅವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದು ಶಿರಾಳಕೊಪ್ಪ ಪುರಸಭೆಯ ಆಡಳಿತಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
Karnataka Maratha Communities Development Corporation ಹೊಲಿಗೆಯಂತ್ರ ವಿತರಣೆ : ಮರಾಠಾ ಅಭಿವೃದ್ದಿ ನಿಗಮದಿಂದ ಯೋಜನೆಯ ಪ್ರಕಟಣೆ
Karnataka Maratha Communities Development Corporation ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮವು 2025-26ನೇ ಸಾಲಿನ ಹೊಲಿಗೆ ಯಂತ್ರ ವಿತರಣಾ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಮರಾಠ ಪ್ರವರ್ಗ -3ಬಿ ಅಡಿಯಲ್ಲಿ 2ಎ ಯಿಂದ 2ಎಫ್ ವರೆಗೆ ಬರುವ ಸಮುದಾಯಕ್ಕೆ ಸೇರಿದ 18 ರಿಂದ 55 ವರ್ಷ ವಯೋಮಿತಿ ಹೊಂದಿದವರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿ 06 ರಿಂದ ಡಿ. 20 ರವರೆಗೆ ವಿಸ್ತರಿಸಲಾಗಿದೆ.
ಅರ್ಜಿದಾರರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂನೆ 3ಬಿಯಲ್ಲಿ ಪಡೆದಿರಬೇಕು . ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರನ್ನು ಮಾತ್ರ ಈ ಸೌಲಭ್ಯಕ್ಕೆ ಪರಿಗಣಿಸಲಾಗುವುದು.
ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 98,000/- ಮತ್ತು ನಗರ ಪ್ರದೇಶದವರಿಗೆ ರೂ. 1.20 ಲಕ್ಷ ರೂ.ಗಳನ್ನು ಮೀರಬಾರುದು ಅಂಗವಿಕಲ ಮಹಿಳೆಯರಿಗೆ ಶೇ.5% ರಷ್ಟು, ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.33% ಹಾಗೂ ತೃತೀಯ ಲಿಂಗಿಗಳಿಗೆ ಶೇ.1% ರಷ್ಟನ್ನು ಮೀಸಲಿರಿಸಿದೆ. ವಿಧವೆಯರಿಗೆ, ಪರಿತ್ಯಕ್ತ ಮಹಿಳೆಯರಿಗೆ, ಹೆಚ್.ಐ.ವಿ. ಪೀಡಿತರಿಗೆ 35 ವರ್ಷ ವಯೋಮಿತಿ ಮೀರಿರಬಾರದು. ಅವಿವಾಹಿತ ಮಹಿಳೆಯರಿಗೆ ಶೇ.2ರಷ್ಟನ್ನು ಮೀಸಲಿರಿಸಿದೆ.
ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಬಯಸುವವರೂ ಸಹ ಆನ್‌ಲೈನ್‌ನಲ್ಲಿ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸುವುದು, ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು.
ಆಸಕ್ತರು ಸೇವಾಸಿಂಧು ಪೋರ್ಟಲ್‌ನ ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರೀಕ ಸೇವಾಕೇಂದ್ರಗಳಲ್ಲಿ ಡಿ.20 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
Karnataka Maratha Communities Development Corporation ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ www.kmcdc.karnataka.gov.in ರಲ್ಲಿ ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಮಾರಾಠ ಸಮುದಾಯ ಅಭಿವೃದ್ಧಿ ನಿಗಮ, ಭಾಗ್ಯನಿಲಯ, ಭಂಡಾರಿ ಗ್ಯಾಸ್ ಏಜೆನ್ಸಿ ಎದುರು, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ, ದೂ.ಸಂ.: 08182-229634 ನ್ನು ಸಂಪರ್ಕಿಸುವುದು.
MESCOM ಡಿಸೆಂಬರ್ 11, ಶಿವಮೊಗ್ಗದ ಆರ್ ಎಂ ಎಲ್ ನಗರ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ
MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದ 110 ಕೆವಿ ಲೈನ್‌ನಲ್ಲಿ 3ನೇ ತ್ರೆöÊಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಡಿ. 11 ರಂದು ಬೆಳಗ್ಗೆ 9.00 ರಿಂದ ಮಧ್ಯಾಹ್ನ 3.00ರವರೆಗೆ ನಗರ ಉಪವಿಭಾಗ 2 ರ ಘಟಕ 5 ವ್ಯಾಪ್ತಿಗೆ ಬರುವ ಆರ್.ಎಂ.ಎಲ್. ನಗರ 1ನೇ ಮತ್ತು 2ನೇ ಹಂತ, ಎಲ್.ಎಲ್.ಆರ್. ರಸ್ತೆ, ಜೆ.ಸಿ.ನಗರ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ, ಆನಂದ್‌ರಾವ್ ಬಡಾವಣೆ, ಮಂಜುನಾಥ ಬಡಾವಣೆ, ಟಿಪ್ಪುನಗರ, ಮಿಳಘಟ್ಟ, ಅಣ್ಣಾನಗರ ಸುತ್ತಮುತ್ತ, MESCOM ಗೋಪಿಶೆಟ್ಟಿಕೊಪ್ಪ, ಜಿ.ಎಸ್. ಕ್ಯಾಸ್ಟಿಂಗ್ ಫ್ಯಾಕ್ಟರಿ, ಸಿದ್ದೇಶ್ವರ ಸರ್ಕಲ್, ತುಂಗಾನಗರ ಆಸ್ಪತ್ರೆ, ವೈಷ್ಣವಿ ಲೇಔಟ್, ಭವಾನಿ ಲೇಔಟ್, ಗದ್ದೇಮನೆ ಲೇಔಟ್, ಚಾಲುಕ್ಯನಗರ, ಕೆಹೆಚ್‌ಬಿ ಕಾಲೋನಿ, ಮೇಲಿನ ತುಂಗಾನಗರ, ಸಲೀಮ್ ಫ್ಯಾಕ್ಟರಿ, ಹಳೇ ಗೋಪಿಶೆಟ್ಟಿಕೊಪ್ಪ, ಕಾಮತ್ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
ಡಿಸೆಂಬರ್ 12. ಶಿವಮೊಗ್ಗ ಬಿ.ಹೆಚ್.ರಸ್ತೆಯ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ
ಶಿವಮೊಗ್ಗ ಜಿಲ್ಲಾ ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯಡಿ 2025-26ನೇ ಸಾಲಿನಲ್ಲಿ ಶಿವಮೊಗ್ಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಡಿ. 12 ರಂದು ಬೆಳಗ್ಗೆ 9.30ನ ರಿಂದ ಬಿ.ಹೆಚ್.ರಸ್ತೆಯ ಸರ್ಕಾರಿ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆ (ಕರ್ನಾಟಕ ಸಂಘದ ಪಕ್ಕ) ಆವರಣದಲ್ಲಿ 1-12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಸರ್ಕಾರಿ/ ಅನುದಾನಿತ/ ಅನುದಾನ ರಹಿತ ಶಾಲೆಗಳ ವಿಶೇಷ ಚೇತನ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವೈದ್ಯಕೀಯ ತಪಾಸಣೆ ಶಿಬಿರದಲ್ಲಿ ವೈದ್ಯರಿಂದ ಶಿಫಾರಸ್ಸಾದ ಮಕ್ಕಳಿಗೆ ಸಾಧನ-ಸಲಕರಣೆಗಳನ್ನು ನೀಡಲಾಗುತ್ತಿದ್ದು, ವಿಶೇಷ ಚೇತನ ಮಕ್ಕಳ ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಬಿ.ಇ.ಓ ರಮೇಶ್ ಹಾಗೂ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್ ತಿಳಿಸಿದ್ದಾರೆ.
L.B. Colleges ಸಾಗರದ ಎಲ್ .ಬಿ.ಕಾಲೇಜಿನ ಮುಖ್ಯದ್ವಾರಕ್ಕೆ ಶಿಲಾನ್ಯಾಸ.
L.B. Colleges ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ನೆಡೆಸುತ್ತಿರುವ ಲಾಲ್ ಬಹದ್ದೂರ್ ಕಲಾ, ವಿಜ್ಞಾನ ಮತ್ತು ಎಸ್.ಬಿ.ಸೊರಬನ ಶೆಟ್ಟಿ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಈಗ ಪ್ರಸಿದ್ಧ ಶ್ರವಣಬೆಳಗೊಳದ ಜೈನ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ರವರು ಕಾಲೇಜ್ ನ ಮುಖ್ಯ ದ್ವಾರದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು. ನಂತರ ಗುರು ವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರ್ಶಿರವಚನ ನಿಡಿದರು.
L.B. Colleges ಸಮಾರಂಭದಲ್ಲಿ ಸಾಗರದ ಶಾಸಕರಾದ ಗೋಪಾಲಕೃಷ್ಣ ಬೇಳೂರು,ಎಂ.ಡಿ.ಎಫ್.ಅಧ್ಯಕ್ಷರಾದ ಬಿ.ಅರ್.ಜಯಂತ್, ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಕಾಲೇಜಿ ನ ಮುಖ್ಯಸ್ಥರು, ಉಪನ್ಯಾಸಕರು ವಿದ್ಯಾರ್ಥಿ ಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಕ್ಷಣದ ಪೋಟೊ ಗ್ಯಾಲರಿ
Shimoga News ಮಕ್ಕಳು ಉತ್ಸಾಹದ ಚಿಲುಮೆಗಳು.ಉತ್ತಮ ಊಟ ಆಟ ಪಾಠದೊಂದಿಗೆ ಸಮಾಜದ ಅಭಿವೃದ್ಧಿ- ನ್ಯಾ.ಎಂ.ಎಸ್.ಸಂತೋಷ್
Shimoga News ಮಕ್ಕಳು ಉತ್ಸಾಹದ ಚಿಲುಮೆಗಳಾಗಿದ್ದು, ಉತ್ತಮ ಊಟ-ಆಟ-ಪಾಠದೊಂದಿಗೆ ಪ್ರಗತಿ ಹೊಂದಿ ಜೊತೆಗೆ ಇಡೀ ಸಮಾಜವನ್ನು ಅಭಿವೃದ್ದಿಯೆಡೆ ಕೊಂಡೊಯ್ಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್. ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಿ.09 ರಂದು ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಚಿಗುರು 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳ ಉತ್ಸಾಹ-ಹುರುಪು ನೋಡಿದರೆ ನಮಗೆ ಮತ್ತೊಮ್ಮೆ ಬಾಲ್ಯಾವಸ್ಥೆಗೆ ಹೋಗಬೇಕು ಎನ್ನಿಸುತ್ತಿದೆ.
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮುಖ್ಯವಾಗಿ ಜೀವಿಸುವ, ರಕ್ಷಣೆಯ, ಭಾಗವಹಿಸುವ ಮತ್ತು ಪ್ರಗತಿ ಹೊಂದುವ ಈ ನಾಲ್ಕು ಹಕ್ಕುಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಹೀಗೆ ಈ ಅಂಶಗಳನ್ನೊಳಗೊAಡು ಮುನ್ನಡೆಯಲು ಮಕ್ಕಳು ಸಮರ್ಪಕ ಆಹಾರ, ದೇಹ ದಣಿಯುವ ಆಟ ಮತ್ತು ಪಾಠದಲ್ಲೂ ಮುಂದಿರಬೇಕು. ಈ ರೀತಿಯಾಗಿ ಮಕ್ಕಳು ತಾವು ಪ್ರಗತಿ ಹೊಂದುವ ಜೊತೆಗೆ ಇಡೀ ಸಮಾಜವನ್ನು ಅಭಿವೃದ್ದಿಯೆಡೆ ಕೊಂಡೊಯ್ಯಬಹುದು ಎಂದರು.
ಇಂದಿನ ಚಿಗುರು ಕಾರ್ಯಕ್ರಮದಲ್ಲಿನ ಸ್ಪರ್ಧೆಗಳು ಆಟ ಅನ್ನುವ ಅಂಶಕ್ಕೆ ಸೇರಿದ್ದು ಸ್ಪರ್ಧಾತ್ಮಕ ಮನೋಭಾವದಿಂದ ಮಕ್ಕಳು ಪಾಲ್ಗೊಳ್ಳಬೇಕು. ಗಮನ ಕೇಂದ್ರೀಕರಿಸಿ ಭಾಗವಹಿಸುವ ಪ್ರತಿ ಸ್ಪರ್ಧಾಳು ವಿಜೇತರಾದಂತೆ ಎಂದ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇಂತಹ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿರಿ ಎಂದು ಮಕ್ಕಳಿಗೆ ಕರೆ ನೀಡಿದರು.
Shimoga News ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ ಮಾತನಾಡಿ, ಮಕ್ಕಳು ತಮ್ಮಲ್ಲಿರುವ ವಿವಿಧ ಪ್ರತಿಭೆಗಳನ್ನು ಅನಾವರಣಗೊಳಿಸಲು ಇದೊಂದು ಅತ್ಯುತ್ತಮ ವೇದಿಕೆಯಾಗಿದ್ದು, ಮಕ್ಕಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ರಾಷ್ಟç ಮಟ್ಟದವರೆಗೆ ಗುರುತಿಸಿಕೊಂಡು ಜಿಲ್ಲೆಗೆ ಕೀರ್ತಿ ತರಬೇಕೆಂದು ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಮಾತನಾಡಿ ಚಿಗುರು ಕಾರ್ಯಕ್ರಮದಲ್ಲಿ 6 ರಿಂದ 14 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದಾಗಿದ್ದು ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಮತ್ತು ಕರ್ನಾಟಕ ವಾದ್ಯ ಸಂಗೀತ, ಸುಗಮ ಸಂಗೀತ, ಜಾನಪದಗೀತೆ, ಸಮೂಹ ನೃತ್ಯ, ಯಕ್ಷಗಾನ, ಏಕಪಾತ್ರಭಿನಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಇಂದಿನ ಚಿಗುರು ಕಾರ್ಯಕ್ರಮದಲ್ಲಿ ಸುಮಾರು 60 ರಿಂದ 70 ಮಕ್ಕಳು ಪಾಲ್ಗೊಂಡಿದ್ದಾರೆAದರು.
ರಂಗಾಯಣದ ಆಡಳಿತಾಧಿಕಾರಿ ಶೈಲಜಾ ಎ ಸಿ, ಶಿವಮೊಗ್ಗ ತಾಲ್ಲೂಕು ಸಿಡಿಪಿಓ ಗಂಗಾಬಾಯಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಸ್ಪರ್ಧಾಳುಗಳು, ವಿದ್ಯಾರ್ಥಿಗಳು ಹಾಜರಿದ್ದರು.

YADAV School Of Chess ಆನ್ ಲೈನ್ ಮೂಲಕಹಿಂದುಳಿದ & ಬಡಮಕ್ಕಳಿಗೆಒಂದು ತಿಂಗಳ ಚೆಸ್ ಕ್ರೀಡಾ ತರಬೇತಿ
YADAV School Of Chess ರಾಜೇಂದ್ರ ನಗರದಲ್ಲಿರುವ ಪ್ರತಿಷ್ಠಿತ ಯಾದವ ಸ್ಕೂಲ್ ಆಫ್ ಚೆಸ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಮತ್ತು ಬಡ ಮಕ್ಕಳಿಗೆ ಆನ್‌ಲೈನ್ ಮೂಲಕ ಡಿ. ೧೦ರಿಂದ ಜ. ೧೦ರವರೆಗೆ ಒಂದು ತಿಂಗಳ ಕಾಲ ಪ್ರತಿದಿನ ರಾತ್ರಿ ೭ರಿಂದ ೮ಗಂಟೆವರೆಗೆ ತರಬೇತಿ ನೀಡಲಾಗುತ್ತಿದೆ.
YADAV School Of Chess ಮೊದಲು ನೋಂದಾಯಿಸಿದ ಐವತ್ತು ಮಕ್ಕಳಿಗೆ ಮಾತ್ರ ಅವಕಾಶ ವಿದ್ದು, ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ಸೇರಿಸಬಹುದಾಗಿದೆ. ಇದೊಂದು ಉತ್ತಮ ಅವಕಾಶ ವಾಗಿದ್ದು, ಚೆಸ್ ಕಲಿಯುವುದರಿಂದ ಮಕ್ಕಳಿಗೆ ಓದಲು ಏಕಾಗ್ರತೆ ಸಿಗುತ್ತದೆ. ಜೊತೆಗೆ ಶಿಸ್ತು ಕಲಿಸುತ್ತದೆ ಎಂದು ಅಂತರ ರಾಷ್ಟ್ರೀಯ ತೀರ್ಪುಗಾರ ಮತ್ತು ತರಬೇತುದರ ಪ್ರಾಣೇಶ್ ಯಾದವ್ ಅವರು ತಿಳಿಸಿದ್ದಾರೆ.
ಮಾಹಿತಿಗೆ ಮೊ. 9242401702 ಅಥವಾ 9743819678ರಲ್ಲಿ ಸಂಪರ್ಕಿಸಬಹುದಾಗಿದೆ.
