Thursday, August 13, 2026
Thursday, August 13, 2026
Home Blog Page 248

Tourism Department – Shivamogga District ಪ್ರವಾಸೊದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷರಾಗಿ ಎನ್.ಗೋಪಿನಾಥ್

0

Tourism Department – Shivamogga District ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷರಾಗಿ ಎನ್.ಗೋಪಿನಾಥ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ವೇದಿಕೆ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಎನ್.ಗೋಪಿನಾಥ್, ಉಪಾಧ್ಯಕ್ಷರಾಗಿ ಆರ್.ರಂಗಪ್ಪ, ಕಾರ್ಯದರ್ಶಿಯಾಗಿ ಜಿ.ವಿಜಯಕುಮಾರ್, ಸಹಕಾರ್ಯದರ್ಶಿಯಾಗಿ ಅ.ನಾ.ವಿಜಯೇಂದ್ರರಾವ್, ಖಚಾಂಚಿಯಾಗಿ ನಿರ್ಮಲಕಾಶಿ, ನಿರ್ದೇಶಕರಾಗಿ ಆರ್.ಮನೋಹರ್, ಲಕ್ಷ್ಮೀ ನಾಗೇಶ್, ಪ್ರೇಮ ಹೆಗ್ಡೆ, ಮಲ್ಲಿಕಾರ್ಜುನ್ ಕಾನೂರ್, ರವೀಂದ್ರ ಆಯ್ಕೆಯಾದರು. ಯೂತ್ ಹಾಸ್ಟೆಲ್ಸ್ ತರುಣೋಣದಯ ಘಟಕ, ಶಿವಮೊಗ್ಗ ಸೈಕಲ್ ಕ್ಲಬ್, ಬೈಕ್ ಕ್ಲಬ್, ಇತಿಹಾಸ ವೇದಿಕೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಲು ಆಹ್ವಾನಿತ ಸದಸ್ಯರಾಗಿರುತ್ತಾರೆ.

ಇಂದಿನ ಕವಿತೆ… ಕವಿ: ಡಾ. ರವಿ. ಎಮ್. ಸಿದ್ಲಿಪುರ

0

ಯಾರೋ ಗೀಚಿದ ಹಳೆಯ ನಕ್ಷೆಯಲಿ
ನೆಲದ ಒಡಲು ಸೀಳಿ ಹೋಗಿದೆ,
ತನ್ನ ಸೀಮೆಯ ದಾಟದಂತೆ ಗಾಳಿಗೆ
ಸಂಪ್ರದಾಯದ ಬೇಲಿ ಬಿದ್ದಿದೆ.

ಒಂದೇ ಮಣ್ಣಿನಲಿ ಮೊಳೆತ ಎರಡು ಕುಡಿಗಳು
ಬಣ್ಣ ಬೆರೆಸಿ ಅರಳಲೆಂದು ಹಂಬಲಿಸಿದರೆ,
ತಾಯಿ ಬೇರೇ ಸರ್ಪವಾಗಿ ಎದೆಯುಬ್ಬಿಸಿ
ಹಸಿರು ಉಸಿರನ್ನೇ ಹಿಸುಕಿ ನಕ್ಕಿದೆ.

ಬಿಳಿ ಬಟ್ಟೆಯ ಮಡಿಕೆ ಮಲಿನವಾಗಬಾರದೆಂದು
ಕೆಂಪು ರಕ್ತವನ್ನೇ ಸುರಿದು ತೊಳೆದವರು,
ಮರ್ಯಾದೆಯ ಮುರುಕು ಪೇಟದ ಅಡಿಯಲ್ಲಿ
ತಮ್ಮದೇ ಕುಡಿಯ ಹೆಣವ ಹೂತಿಟ್ಟರು.

ಮನೆಯ ಹಜಾರದಲ್ಲಿ ಈಗ ನೀರವ ಮೌನ
ಸಿಂಹಾಸನವೇರಿ ವಿಜೃಂಭಿಸುತ್ತಿದೆ,
ಗೌರವದ ಹಳೆಯ ಗೋಡೆಗಳ ಮೇಲೆ
ಕಂದಮ್ಮಗಳ ಆರ್ತನಾದ ಚಿತ್ರವಾಗಿ ಉಳಿದಿದೆ.

ಜಾತಿಯ ಜೇಡರಬಲೆಯಲ್ಲಿ ಸಿಲುಕಿದ ಕನಸು
ರೆಕ್ಕೆ ಬಡಿದು ಬಡಿದು ಸುಸ್ತಾಗಿದೆ,
ಪ್ರೀತಿ ಸತ್ತ ಸಮಾಧಿಯ ಮೇಲೆ ನಿಂತು
ಜಗವಿದು ಇನ್ನೂ ‘ಗೌರವ’ದ ಪಾಠ ಓದಿದೆ..

ಡಾ. ರವಿ ಎಂ. ಸಿದ್ಲಿಪುರ, ಇವರು ಶಿವಮೊಗ್ಗೆಯವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ., ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಮತ್ತು ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಸಂಶೋಧನೆಗೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರ ಲೇಖನಗಳು ವಿವಿಧ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಪರ್ಯಾಯ’, ‘ವಿಮರ್ಶೆ ಓದು’ ಮತ್ತು ‘ಶಾಸನ ಓದು’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವವಿರುವ ಇವರು, ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಲವಗೊಪ್ಪದಲ್ಲಿ ಮಾನವೀಯ ಗುಣ ಮೆರೆದ “ಹರೀಶ್ ನಾಯಕ್”

0

ಬಡವರಿಗೆ, ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುತ್ತಾ ನೊಂದವರ ಬಾಳಿನಲ್ಲಿ ಬೆಳಕಾಗುತ್ತಿರುವ ಕೊಡುಗೈ ದಾನಿ ಯುವ ನಾಯಕ ಹರೀಶ್ ನಾಯ್ಕ್ ಮತ್ತೆ ನೊಂದ ಜೀವಕ್ಕೆ ಆಸರೆಯಾಗಿದ್ದಾರೆ.

ಕೈ ಕಾಲು ಬುದ್ಧಿ ಶಕ್ತಿ ಇವನ್ನೆಲ್ಲ ಕೊಟ್ಟು ಪರೀಕ್ಷೆ ಮಾಡ್ಲಿ. ಆದರೆ, ಎಲ್ಲವನ್ನು ಕಿತ್ಕೊಂಡು, ಒಂದು ಕಡೆ ಬದುಕೋಕೆ ಆಗದೆ, ಇನ್ನೊಂದು ಕಡೆ ಸಾಯಕ್ಕು ಆಗದೆ ಇಂತಹ ಜೀವನ ಕೊಟ್ಟು, ಜಗತ್ತನ್ನು ಫೇಸ್ ಮಾಡು ಜೀವನ ನಡೆಸು ಅಂದರೆ ಹೇಗಾಗುತ್ತೆ ? ಎಂದು ಪ್ರಶ್ನಿಸಿ, ಇಲ್ಲಿ ವಯಸ್ಸಾದ ಜೀವಕ್ಕೆ ಆಸರೆಯಾಗಿದ್ದಾರೆ ಯುವ ನಾಯಕ ಹರೀಶ್ ನಾಯ್ಕ್.

ಶಿವಮೊಗ್ಗದ ಇಂದಿರಾ ಕಾಲೋನಿ ಮಲವಗೊಪ್ಪ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಸೂರಿಲ್ಲದೇ ನಡೆದಾಡಲು ಸಹ ಪರದಾಡುತ್ತಿದ್ದ ನಾಗರಾಜ್ ಎಂಬುವವರಿಗೆ, ಸೂರು ನೀಡಿ, ಜೊತೆಗೆ ಓಡಾಡಲು, ಮೂರು ಚಕ್ರದ ಸೈಕಲ್ ನೀಡಿ ಉಪಚರಿಸಿದ್ದಾರೆ. ಸಮಾಜ ಸೇವಕ ಯುವ ನಾಯಕ ಹರೀಶ್ ನಾಯ್ಕ್ ನೊಂದ ಜೀವಕ್ಕೆ ಆಸರೆಯಾಗಿ, ಸಂಚರಿಸಲು ಮೂರು ಚಕ್ರದ ಸೈಕಲ್ ನೀಡಿ ಸಹಾಯಹಸ್ತ ಚಾಚಿದ್ದಾರೆ. ಇದು ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ಶಶಿಕುಮಾರ್ ನಾಯ್ಕ್. ಕೆಂಚಪ್ಪ ರಘು ಹೇಮತ್ ಶಿವು ಸಿದ್ದು ಉಮೇಶ್ ಈಶಣ್ಣ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟ.ಲಕ್ಷಾಂತರ ರೂ, ಮೌಲ್ಯದ ನಷ್ಟ ಅಂದಾಜು

0

ಅಡುಗೆ ಅನಿಲ ಸಿಲಿಂಡರ್‌ ಸ್ಪೋಟಗೊಂಡು ಮನೆ ಸಂಪೂರ್ಣ ಹಾನಿಯಾಗಿದೆ. ಸಿದ್ದೇಶ್ವರ ನಗರದ 4ನೇ ಅಡ್ಡರಸ್ತೆಯ ಘಟನೆ ಸಂಭವಿಸಿದೆ.

ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಧರ್ಮಪ್ಪ ಎಂಬುವವರು ಬಾಡಿಗೆಗೆ ಇದ್ದ ಮನೆಯಲ್ಲಿ ಸಿಲಿಂಡರ್‌ ಸ್ಪೋಟಗೊಂಡಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಹಾನಿಯಾಗಿವೆ. ಶೀಟ್‌ ಛಾವಣಿ ಹಾರಿ ಹೋಗಿದೆ.

ಇನ್ನು, ಧರ್ಮಪ್ಪ ಅವರ ಕುಟುಂಬದವರು ಮನೆಯಲ್ಲಿ ಇರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸ್ಪೋಟದ ರಭಸಕ್ಕೆ ಪಕ್ಕದ ಮನೆ ಹಾನಿಯಾಗಿದೆ.

ಬೆಂಕಿ ಹೊತ್ತುಕೊಂಡ ಕೂಡಲೆ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ಘಟನೆಯಲ್ಲಿ ಲಕ್ಷಾಂತರ ರುಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ

S.N.Chennabasappa ಶಿವಮೊಗ್ಗದ 31 ನೇ ವಾರ್ಡಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕ ಚೆನ್ನಿ

0

S.N.Chennabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 31ರ ಗೋಪಿಶೆಟ್ಟಿ ಕೊಪ್ಪ ಪ್ರದೇಶಕ್ಕೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಭೇಟಿ ನೀಡಿ, ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದರು.

ಭೇಟಿಯ ವೇಳೆ ಈ ಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಜೊತೆಗೆ ಕೆರೆ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಸ್ಥಳದಲ್ಲಿಯೇ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಿದರು.

S.N.Chennabasappa ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಜಗನ್ನಾಥ್, ಪ್ರಮುಖರಾದ ಶ್ರೀ ಪರಂದಾಮ್ ರೆಡ್ಡಿ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Chamber of Commerce Shivamogga ಸರ್ಕಾರವು ಪಿಂಚಣಿದಾರರಿಗೆ ಆಗುತ್ತಿರುವ ತೊಂದರೆಗಳನ್ನ ಪರಿಹರಿಸಬೇಕು- ಎಸ್.ರುದ್ರೇಗೌಡ

0

Chamber of Commerce Shivamogga ಪಿಂಚಣಿದಾರರಿಗೆ ತಾವು ತಮ್ಮ ಸೇವಾ ಅವಧಿಯಲ್ಲಿ ಮಾಡಿದ ಕೆಲಸಕ್ಕೆ ಸರ್ಕಾರದಿಂದ ಅರ್ಹ ಸೌಲಭ್ಯಗಳು ದೊರೆಯಬೇಕು ಹಾಗೂ ಪಿಂಚಣಿದಾರರು ಸೇವೆಯಲ್ಲಿ ಗಳಿಸಿದ ಅನುಭವವನ್ನು ಸಾರ್ವಜನಿಕರ ಉಪಯೋಗಕ್ಕೆ ಹಂಚಿಕೊಳ್ಳಬೇಕು ಎಂದು ಕೈಗಾರಿಕೋದ್ಯಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಕರ್ನಾಟಕ ಆದಾಯ ತೆರಿಗೆ ಇಲಾಖೆ ಪಿಂಚಣಿದಾರರ ಸಂಘದಿಂದ ( ಕರ್ನಾಟಕ ಮತ್ತು ಗೋವಾ ) ಏರ್ಪಡಿಸಿದ್ದ ಪಿಂಚಣಿದಾರರ ದಿನ 2025 ಸಮಾರಂಭದಲ್ಲಿ ಮಾತನಾಡಿ, ಪಿಂಚಣಿದಾರರು ತಮ್ಮ ಹಕ್ಕಿಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಹೋರಾಡಿ ತಮ್ಮ ಹಕ್ಕನ್ನು ಪಡೆದಿದ್ದರು. ಸರ್ಕಾರ ಪಿಂಚಣಿದಾರರಿಗೆ ಆಗುತ್ತಿರುವ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು ಎ‌ಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಪಿಂಚಣಿಯು ಔದಾರ್ಯವಲ್ಲ ಅಥವಾ ಉದ್ಯೋಗದಾತರ ಇಚ್ಛೆಯನ್ನು ಅವಲಂಬಿಸಿದ ಕೃಪೆಯ ವಿಷಯವಲ್ಲ, ಅಥವಾ ಎಕ್ಸ್-ಗ್ರೇಷಿಯಾ ಪಾವತಿಯೂ ಅಲ್ಲ. ಇದು ಹಿಂದಿನ ಸೇವೆಗಳಿಗೆ ಪಾವತಿಯಾಗಿದೆ ಎಂದು ಹೇಳಿದರು.

ಉದ್ಯೋಗದಾತರಿಗಾಗಿ ನಿರಂತರ ಶ್ರಮಿಸಿದವರಿಗೆ ಸಾಮಾಜಿಕ-ಆರ್ಥಿಕ ನ್ಯಾಯವನ್ನು ಒದಗಿಸುವ ಸಾಮಾಜಿಕ ಕಲ್ಯಾಣ ಕ್ರಮ ಪಿಂಚಣಿ. ಎಲ್ಲಾ ಪಿಂಚಣಿದಾರರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವು ಒಟ್ಟಾಗಿ ಹೋರಾಟ ಮುಂದುವರಿಸೋಣ ಎಂದು ತಿಳಿಸಿದರು.

ಆದಾಯ ತೆರಿಗೆ ಇಲಾಖೆ ಪಿಂಚಣಿದಾರರ ಸಂಘದ ಅಧ್ಯಕ್ಷ ಆರ್.ಬಿ.ದೇಶಪಾಂಡೆ ಮಾತನಾಡಿ, ಡಿಸೆಂಬರ್ 17 ಭಾರತದಲ್ಲಿ ಪಿಂಚಣಿದಾರರಿಗೆ ಒಂದು ಮಹತ್ವದ ದಿನವಾಗಿದೆ. 1982ರ ಈ ದಿನ ಸುಪ್ರೀಂ ಕೋರ್ಟ್ ನಿವೃತ್ತ ಅಧಿಕಾರಿಗಳು ಮತ್ತು ಪಿಂಚಣಿದಾರರಿಗೆ ಘನತೆ ಮತ್ತು ಸಭ್ಯತೆ ಖಾತರಿಪಡಿಸುವ ಹೆಗ್ಗುರುತು ಆಗಿದ್ದು, ತೀರ್ಪಿನ ಮೂಲಕ ಸಮುದಾಯಕ್ಕೆ ಘನತೆ ಮತ್ತು ಅನುಗ್ರಹವನ್ನು ತರಲು ವರ್ಷಗಳ ಕಾಲ ಹೋರಾಡಿದ ಡಿ.ಎಸ್. ನಕಾರ ಅವರನ್ನು ಸ್ಮರಿಸಲು ನಮ್ಮ ದೇಶದಲ್ಲಿ ‘ಪಿಂಚಣಿದಾರರ ದಿನ’ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪಿಂಚಣಿದಾರರು ಕಾನೂನು ಹೋರಾಟದ ಮೂಲಕ ತಮ್ಮ ಹಕ್ಕನ್ನು ಪಡೆದಿದ್ದನ್ನು ನೆನಪಿಸಿದರು. ಪಿಂಚಣಿದಾರರು ಒಗ್ಗಟ್ಟಾಗಿ ಹೋರಾಡಿದರೆ ತಮಗೆ ಸಿಗಬೇಕಾದ ಅರ್ಹ ಸೌಲಭ್ಯಗಳನ್ನು ಪಡೆಯಬಹುದು ಎಂದರು.

ಸಂಘದ ಕಾರ್ಯದರ್ಶಿ ಬಿ.ವಿ.ವೆಂಕಟೇಶ್ ಮಾತನಾಡಿ, ವ್ಯಾಲಿಡೇಷನ್ ಕಾಯ್ದೆ 2025 ರ ಬಗ್ಗೆ ಮಾಹಿತಿ ನೀಡಿ 8ನೇ ವ್ಯಾಲಿಡೇಷನ್ ಕಾಯ್ದೆ 2025 ರ ಕೇಂದ್ರೀಯ ವೇತನ ಆಯೋಗದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ವಿವರಿಸಿ ರಾಷ್ಟ್ರೀಯ ಪಿಂಚಣಿದಾರ ಸಂಘವು ವ್ಯಾಲಿಡೇಷನ್ ಕಾಯ್ದೆ 2025ರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದೆ ಎಂದು ಸಭೆಗೆ ಮಾಹಿತಿ ನೀಡಿದರು

ಹಿರಿಯ ಪಿಂಚಣಿ ಬಾಬು ಕುಟ್ಟನ್ ಪಿಳ್ಳೆ ಅವರು ಪಿಂಚಣಿದಾರರಿಗೆ ಹೆಚ್ಚಿನ ಸೌಲಭ್ಯವು ಸರ್ಕಾರದ ಮಟ್ಟದಲ್ಲಿ ದೊರೆಯಬೇಕು ಎಂದರು.

Chamber of Commerce Shivamogga ಆದಾಯ ತೆರಿಗೆ ಇಲಾಖೆ ಪಿಂಚಣಿದಾರರ ಸಂಘವು ಪಿಂಚಣಿದಾರರ ಅನುಕೂಲಕ್ಕಾಗಿ ತಂದಿರುವ ಎರಡನೇ ಆವೃತ್ತಿಯ ಡೈರೆಕ್ಟರಿಅನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಬಿಡುಗಡೆಗೊಳಿಸಿದರು.

ಕರ್ನಾಟಕ ಆದಾಯ ತೆರಿಗೆ ಇಲಾಖೆ ( ಕರ್ನಾಟಕ ಮತ್ತು ಗೋವಾ ) ಪಿಂಚಣಿದಾರರ ಸಂಘದ ಉಪಾಧ್ಯಕ್ಷೆ ಉಷಾ ಶಾಂತರಾಮ್, ಕಾರ್ಯದರ್ಶಿ ಬಿ.ವಿ.ವೆಂಕಟೇಶ್, ಸಹ ಕಾರ್ಯದರ್ಶಿ ಜಿ.ನಿರ್ಮಲ, ಹಿರಿಯ ಸದಸ್ಯ ಎಂ.ಜಿ.ವಾಸುದೇವಮೂರ್ತಿ, ವಿಶ್ವನಾಥ್ , ಸಂಘದ ಪದಾಧಿಕಾರಿಗಳು, ಸದಸ್ಯರು, ಲೆಕ್ಕ ಪರಿಶೋಧಕ ಎನ್.ಎಲ್.ಪ್ರಸಾದ್ ಭಾಗವಹಿಸಿದ್ದರು.

Backward Classes Welfare Department ಪಿ ಹೆಚ್ ಡಿ ವಿದ್ಯಾರ್ಥಿಗಳಿಗೆ ವ್ಯಾಸಂಗ ವೇತನ/ ಫೆಲೋಷಿಪ್ ಗಾಗಿ ಅರ್ಜಿ ಆಹ್ವಾನ

0

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ/ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿಹೆಚ್.ಡಿ. ಅಧ್ಯಯನ ಮಾಡುತ್ತಿರುವ (ಫೆ.10, 2025 ಮತ್ತು ಅದರ ನಂತರ ಪ್ರಥಮ ವರ್ಷದ ಪಿಹೆಚ್.ಡಿ ಪ್ರಾರಂಭಿಸಿರಬೇಕು) ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿದ ಹೊಸ ವಿದ್ಯಾರ್ಥಿಗಳಿಂದ ಮಾತ್ರ ಮಾಸಿಕ ವ್ಯಾಸಂಗ ವೇತನ/ಫೆಲೋಶಿಫ್ ಪಡೆಯಲು ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ದೃಢೀಕೃತ ದಾಖಲಾತಿಗಳನ್ನು ಲಗತ್ತಿಸಿ ದಿ: 09/12/2026 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Backward Classes Welfare Department ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂ.: 8050770004, ವೆಬ್‌ಸೈಟ್ https://bcwd.karnataka.gov.in, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-222129 ನ್ನು ಸಂಪರ್ಕಿಸುವುದು.

CM Siddharamaih ತಾಂಡ ಮತ್ತು ಗೊಲ್ಲರಹಟ್ಟಿಗಳ 1.08 ಲಕ್ಷ ನಿವಾಸಿಗಳಿಗೆ ಹಕ್ಕು ಪತ್ರ ನೀಡಲಾಗಿದೆ- ಸಿದ್ಧರಾಮಯ್ಯ

0

CM Siddharamaih ಬಹುಕಾಲದಿಂದ ತಾಂಡ, ಹಟ್ಟಿ ಗೊಲ್ಲರಹಟ್ಟಿಗಳಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳಿಗೆ ದಾಖಲೆ ಇಲ್ಲದೆ ನೆಮ್ಮದಿಯ ಜೀವನ ಅಸಾಧ್ಯವಾಗಿತ್ತು. ಇಂತಹವರಿಗೆ ಹಕ್ಕುಪತ್ರ ಮತ್ತು ದಾಖಲೆಯನ್ನು ಒದಗಿಸಿಕೊಡಲು ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ 2017ರಲ್ಲಿ ಕಾನೂನು ತಿದ್ದುಪಡಿ ಮಾಡಲಾಗಿದೆ. ಇದರ ಮುಖಾಂತರ ಕಾಲಾನುಕಾಲದಿಂದ ಅತಂತ್ರದಲ್ಲಿ ಬದುಕುತ್ತಿದ್ದ ಕುಟುಂಬಗಳ ಸೂರಿಗೆ ದಾಖಲೆಗಳ ಗ್ಯಾರಂಟಿ ನೀಡುವ ಕೆಲಸ ಪ್ರಗತಿಯಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಈ ಕಾನೂನು 2017ರಲ್ಲಿ ತಿದ್ದುಪಡಿ ಆದ ನಂತರ 2023ರ ಮೇ ವರೆಗೆ 6 ವರ್ಷಗಳಲ್ಲಿ 1.08 ಲಕ್ಷ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಮೇ 2023 ರಿಂದ 2025ರವರೆಗೆ 1.11 ಲಕ್ಷ ಹಕ್ಕುಪತ್ರಗಳನ್ನು ನೀಡಲಾಗಿದೆ. ಮೇ 2025ರ ನಂತರ 1.10 ಲಕ್ಷ ಹಕ್ಕುಪತ್ರಗಳನ್ನು ನೀಡುವ ಪ್ರಕ್ರಿಯೆ ಕೂಡಲೇ ಪೂರ್ಣಗೊಳಿಸಿ, 2026ರ ಫೆಬ್ರವರಿ ತಿಂಗಳ ಒಳಗಾಗಿ 1.10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಸರ್ಕಾರ ತೀರ್ಮಾನಿಸಿದೆ.

ದಶಕಗಳ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯ ಕಂದಾಯ ಗ್ರಾಮ ರಚನೆ ಅಭಿಯಾನದ ಮುಖಾಂತರ ನಡೆಯುತ್ತಿದೆ. ದಾಖಲೆ ರಹಿತ ವಸತಿ ಪ್ರದೇಶ ಮತ್ತು ಮನೆಗಳನ್ನು ಗುರುತಿಸಿ ಸರ್ವೆ ಮಾಡಿ, ದಾಖಲೆಗಳನ್ನು ತಯಾರಿಸಿ, ಅಧಿಸೂಚನೆ ಹೊರಡಿಸಿ, ಹಕ್ಕುಪತ್ರ ನೀಡಿ, ಕ್ರಯಪತ್ರದಂತೆ ನೋಂದಣಿ ಮಾಡಿ ಸ್ಥಳೀಯ ಸಂಸ್ಥೆಯಲ್ಲಿ ಪಕ್ಕಾ ಖಾತೆ ಮಾಡುವುದರ ಮುಖಾಂತರ ಸಂಪೂರ್ಣ ಮಾಲಿಕತ್ವದ ಗ್ಯಾರಂಟಿ ನೀಡುವ ಈ ಕಾರ್ಯ ರಾಜ್ಯಾದ್ಯಂತ ಅಭಿಯಾನದ ಮಾದರಿಯಲ್ಲಿ ನಡೆಯುತ್ತಿದೆ.

CM Siddharamaih ಬಹುತೇಕ ಬಡ ಕುಟುಂಬಗಳೇ ಇದರ ಫಲಾನುಭವಿಗಳಾಗಿದ್ದಾರೆ. ಯಾರಿಂದಲೂ ಅರ್ಜಿಗೆ ಕಾಯದೆ, ಕಂದಾಯ ಇಲಾಖೆಯ ಅಧಿಕಾರಿಗಳೇ ಸ್ವತಃ ಜನರ ಮನೆ ಬಾಗಿಲಿಗೆ ಹೋಗಿ ಇಷ್ಟೂ ಕೆಲಸವನ್ನು ಮಾಡಿಕೊಡುತ್ತಿದ್ದಾರೆ. ಇದರಲ್ಲಿ ಆಗಿರುವ ಪ್ರಗತಿಯನ್ನುಒಳಗೊಂಡರೆ ಒಟ್ಟು 4 ಲಕ್ಷ ಕುಟುಂಬಗಳಿಗೆ ಶಾಶ್ವತ ನೆಮ್ಮದಿ ನೀಡಿದಂತಾಗುತ್ತದೆ ಎಂದು ಹೇಳಿದ್ದಾರೆ.

B.Y.Raghavendra ಪ್ರಕೃತಿಯೊಂದಿಗೆ ಅವಿನಾಭಾವ ಬೆಸೆಯುವ ಆಯುರ್ವೇದ, ವಿಶ್ವಕ್ಕೆ ಭಾರತದ ಕೊಡುಗೆ- ಬಿ.ವೈ.ವಿಜಯೇಂದ್ರ

0

B.Y.Raghavendra ಆಯುರ್ವೇದ ಎನ್ನುವುದು ಕೇವಲ ವೈದ್ಯಕೀಯ ಚಿಕಿತ್ಸಾ ಪದ್ಧತಿ ಮಾತ್ರವಲ್ಲ, ಅದು ರೋಗ ಬರದಂತೆ ತಡೆಯುವ ಪ್ರಾಚೀನ ಭಾರತದ ಜೀವನ ವಿಧಾನವೂ ಹೌದು. ಪ್ರಕೃತಿಯೊಂದಿಗೆ ಮನುಷ್ಯರ ಅವಿನಾಭಾವ ಸಂಬಂಧ ಬೆಸೆಯುವ ಆಯುರ್ವೇದ ವಿಶ್ವಕ್ಕೆ ಭಾರತದ ಕೊಡುಗೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ 2ನೇ ‘ಆಯುರ್ವೇದ ವಿಶ್ವ ಶೃಂಗಸಭೆ’ಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ,ಶಾಸಕ ಬಿ.ವೈ.ವಿಜಯೇಂದ್ರ ಅವರು ಭಾಗವಹಿಸಿದ್ದರು.

B.Y.Raghavendra ಈ ಸಂದರ್ಭದಲ್ಲಿ ಹರಿಹರಪುರ ಪರಮಪೂಜ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು, ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಸ್ವಾಮಿ ನಿತ್ಯಸ್ಥಾನಾನಂದರು, ಗೌರಿಗದ್ದೆಯ ಪೂಜ್ಯ ಶ್ರೀ ಅವದೂತ ವಿನಯ್ ಗುರೂಜಿಗಳು ದಿವ್ಯಸಾನ್ನಿಧ್ಯ ವಹಿಸಿದ್ದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ವಿ.ಸದಾನಂದ ಗೌಡ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Klive Special Article ನಿಮ್ಮೂರು ಇತಿಹಾಸ ನಿಮಗೆಷ್ಟು ಗೊತ್ತು? ಬೆಳಗುತ್ತಿ ಅರಸರು

0

ಭಾಗ- 3

ಲೇ: ದಿಲೀಪ್ ನಾಡಿಗ್

Klive Special Article ಸಂತೆಬೆನ್ನೂರಿನ ಕೆಂಗ ಹನುಮಂತನೂ, ತರೀಕೆರೆ ಪಾಳೆಯಗಾರರು ದಂಗೆ ಎದ್ದು ಸ್ವತಂತ್ರರಾದರು, ಆಗ ಬೆಳಗುತ್ತಿ ಅರಸ ದಾಸಪ್ಪನು ಇವರ ಹುಟ್ಟಡಗಿಸಲು ಬಂಕಾಪುರದ ರಂಗರಾಯನ ಸಹಾಯ ಕೇಳಿದ್ಸು ರಂಗರಾಯನು ದಾಸಪ್ಪನಿಂದ ಐದುಸಾವಿರ ರೂಪಾಯಿ ಪಡೆದು ತಟಸ್ಥ ನಾದನು. ನಂತರದಲ್ಲಿ ದಾಸಪ್ಪನು ಬೀಜಾಪುರದ ಸುಲ್ತಾನನ ಸಹಾಯ ಕೇಳಲು ಸುಲ್ತಾನನು ಬಿಲಾವರ್ ಖಾನನೆಂಬ ಸೇನಾಪತಿಯನ್ನು ಕಳುಹಿಸಿದನು. ಆದರೆ ಬಿಲಾವರ್ ಖಾನನು ಬೆಳಗುತ್ತಿ ಯನ್ನು ವಶಪಡಿಸಿಕೊಂಡು ಬೀಜಾಪುರದ ಆಡಳಿತಕ್ಕೆ ಸೇರಿಸಿದನು. ಬಿಲಾವರ್ ಖಾನ್ ಸುಲ್ತಾನನ ಆದೇಶದಂತೆ ದಾಸಪ್ಪನಿಗೆ ಹಾಗೂ ಅವನ ವಂಶಜರಿಗೆ ಜೀವನೋಪಾಯಕ್ಕಾಗಿ ಉಡುಗಣಿ, ಮಹಾದೇವ ಪುರ, ಹಾರನಹಳ್ಳಿ, ಚಂದ್ರಗುತ್ತಿ 7 ತಾಲ್ಲೂಕ್ ಗಳನ್ನು 86 ಗ್ರಾಮಗಳನ್ನು ನೀಡಿದನೆಂದು ಬೆಳಗುತ್ತಿ ಯ ಕೈಫಿಯತ್ತಿನಲ್ಲಿ ಉಲ್ಲೇಖವಾಗಿದೆ. ದಾಸಪ್ಪನ ಮಗನಾದ ಇಮ್ಮಡಿ ವೆಂಕಟಾದ್ರಿ ಯು ಬಿಲಾವರ್ ಖಾನನನ್ನು ಬೆಳಗುತ್ತಿಯಿಂದ (ಕ್ರಿ.ಶ. 1571 ರಿಂದ ಕ್ರಿ.ಶ. 1616) ಒದ್ದು ಓಡಿಸಿ ಒಂಬತ್ತು ಲಕ್ಷ ರೂಪಾಯಿ ವರಹಗಳ ನಾಡನ್ನು ವಶಪಡಿಸಿಕೊಂಡು ತನ್ನ ಎರಡನೆ ಪತ್ನಿಯ ಮಗನಾದ ಚೌಡಗೌಡನನ್ನು ಆಡಳಿತ ನಡೆಸಲು ನೇಮಿಸಿದನು. ಇವನ‌ಮಗನಾದ ಸದಾಶಿವ ನನ್ನು ಸರ್ವಾಧಿಕಾರಿ ಯನ್ನಾಗಿ ಮಾಡಿ “ರಾಮಬಾಣ” ವೆಂಬ ಪಟ್ಟದಾನೆಯನ್ನು ನೀಡಿದನು. ಇದು ಸೊಂಡಿಲಿನಿಂದ ಮಣ್ಣನ್ನು ತೆಗೆದು ತೂರುತ್ತಿದ್ದದ್ದನ್ನು ಕಂಡ ಅರಮನೆಯ ಗುರುಗಳು ಇದು ಬೆಳಗುತ್ತಿಯ ಅವನತಿಯ ಸಂಕೇತ ವೆಂದು ಹೇಳಿದ್ದು ಸುಳ್ಳಾಗದೆ ಬೀಜಾಪುರದಿಂದ ಮತ್ತೆ ಬಂದ ಬಿಲಾವರ್ ಖಾನನು ಪುನಃ ಬೆಳಗುತ್ತಿ ಯನ್ನು ವಶಪಡಿಸಿಕೊಂಡು ಮತ್ತೆ 86 ಗ್ರಾಮಗಳನ್ನು ನೀಡಿದನು.

Klive Special Article ಬೆಳಗುತ್ತಿ ಯನ್ನು ಕ್ರಿ.ಶ. 1611 ರಿಂದ ಕ್ರಿ.ಶ. 1622 ರವರೆಗೆ ಎರಡನೆ ವೆಂಕಟಾದ್ರಿ ಯ ಮಗನಾದ ತಿಮ್ಮಪ್ಪನು ಕ್ರಿ.ಶ. 1623 ರಿಂದ ಕ್ರಿ.ಶ. 1642 ರವರೆಗೆ ದೊಡ್ಡಪ್ಪನಾಯಕನು ಕ್ರಿ.ಶ. 1642 ರಿಂದ ಕ್ರಿ.ಶ. 1643 ರವರೆಗೆ ನರಸಪ್ಪ ಮತ್ತು ಕ್ರಿ.ಶ. 1644 ರಿಂದ ಕ್ರಿ.ಶ. 1666 ರವರೆಗೆ ರಾಘವಪ್ಪನು ಆಳಿದರು. ಈ ನಡುವೆ ಸಿಸ್ತಿನ ಶಿವಪ್ಪನಾಯಕನು ಕ್ರಿ.ಶ. 1645 ರಲ್ಲಿ ಬೆಳಗುತ್ತಿ ಯನ್ನು ವಶಪಡಿಸಿಕೊಂಡು ಕೆಳದಿ ರಾಜ್ಯಕ್ಕೆ ಸೇರಿಸಿಕೊಂಡನು. ಮುಂದೆ ಕ್ರಿ.ಶ. 1668 ರಿಂದ ಕ್ರಿ.ಶ. 1707 ರವರೆಗೆ ವೆಂಕಟಪ್ಪನೂ ಕ್ರಿ.ಶ. 1708ರಿಂದ ಕ್ರಿ.ಶ. 1762 ರವರೆಗೆ ರಾಜರ್ಶಿ 2ನೇ ತಿಮ್ಮಪ್ಪನೂ ಕೆಳದಿಯ ಅಧೀನದಲ್ಲಿ ಆಳಿದರು. 3ನೇ ತಿಮ್ಮಪ್ಪನು ಇವರ ಅಧೀನದಲ್ಲಿ ಕ್ರಿ.ಶ. 1763 ರವರೆಗೆ ಸಣ್ಣ ಸೈನ್ಯವನ್ನು ಇಟ್ಟುಕೊಂಡಿದ್ದನು.

ಮುಂದುವರೆಯುತ್ತದೆ.

ದಿಲೀಪ್ ನಾಡಿಗ್

ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ (ರಿ), ಶಿವಮೊಗ್ಗ.
6361124316.