Thursday, August 13, 2026
Thursday, August 13, 2026
Home Blog Page 246

Amruthapura ನಮ್ಮ ದೇಗುಲಸಿರಿ. ನಮ್ಮ ಪರಂಪರೆ ಪ್ರತೀಕ. -ಅಮೃತೇಶ್ವರ ದೇವಾಲಯ. – ದಿಲೀಪ್ ನಾಡಿಗ್.

0

Amruthapura ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಹೆಮ್ಮೆಯ ಅರಸರು ಎಂದರೆ ಹೊಯ್ಸಳ ಸಾಮ್ರಾಜ್ಯದ ಅರಸರು. ಆಡಳಿತದ ಜೊತೆ ಜೊತೆಗೆ, ಶಿಲ್ಪಕಲೆ, ಸಂಸ್ಕೃತಿಗಳ ಪೋಷಕರೂ, ಆಗಿದ್ದವರು ಹೊಯ್ಸಳ ದೊರೆಗಳು, ತಮ್ಮನ್ನು ತಾವು ವಾಸಂತಿಕಾದೇವಿವರಲಬ್ಧ ಪ್ರಸಾದರೆಂದೂ, ದ್ವಾರಾಪುರಾವರಾಧೀಶ್ವರರೆಂದೂ (ಯಾದವಕುಲತಿಲಕ ಶ್ರೀಕೃಷ್ಣನಿಗೆ ಸಮೀಕರಿಸಿಕೊಂಡವರು,) ಛಲದಲ್ಲೂ, ಬಲದಲ್ಲೂ, ಏಕಮೇವಾದ್ವಿತೀಯರೆನಿಸಿಕೊಂಡವರು ಹೊಯ್ಸಳ ರು. ಹೊಯ್ಸಳರ ಅರಸರಲ್ಲಿ ಎರಡನೇ ಬಲ್ಲಾಳರು ನೂರಾರು ದೇವಾಲಯಗಳನ್ನು ನಿರ್ಮಿಸಿದವರು ಅಲ್ಲದೇ ಅಗ್ರಹಾರಗಳನ್ನೂ, ಯಾತ್ರಿನಿವಾಸಗಳನ್ನೂ, ಯಾತ್ರಿಕರಿಗೆ ಸುಂಕವನ್ನು ವಿಧಿಸದೆ ದೇವಾದಾಯ, ರಾಜಾದಾಯಗಳಿಂದ ಕರ್ನಾಟಕದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದವರು(ಇದರ ಬಗ್ಗೆ ಹೆಬ್ಬಾಲೆ ಶಾಸನವನ್ನು ಅಧ್ಯಯನ ಮಾಡಿ) ಹೊಯ್ಸಳ ದೊರೆ ಗಳು. ದೊರೆಗಳಲ್ಲದೆ ದೊರೆಗಳ ಖಾಸಾ ವ್ಯಕ್ತಿಗಳು, ಆಶ್ರಿತ ಕವಿಗಳೂ, ದಂಡನಾಯಕರೂ ಸಹ ಕರ್ನಾಟಕದ ಮೂಲೆಮೂಲೆಗಳಲ್ಲಿ ದೇವಾಲಯಗಳನ್ನೂ, ಅಗ್ರಹಾರಗಳನ್ನೂ, ಅರವಟಿಗೆಗಳನ್ನೂ ನಿರ್ಮಿಸಿದ್ದು ಅದರಲ್ಲಿ ಭದ್ರಾ ನದಿಯ ದಡದಲ್ಲಿರುವ ತರೀಕೆರೆಯ ಅಮೃತಾಪುರದ ಅಮೃತೇಶ್ವರ ದೇವಾಲಯವೂ ಒಂದು. ಅಮೃತೇಶ್ವರ ದೇವಾಲಯವನ್ನು ಎರಡನೇ ವೀರಬಲ್ಲಾಳನ ದಂಡನಾಯಕನಾದ ಅಮೃತೇಶ್ವರ ನು ಕ್ರಿ.ಶ.1196 ರಲ್ಲಿ‌ನಿರ್ಮಿಸಿ ಇದಕ್ಕಾಗಿ ಭೂ ದಾನವನ್ನೂ ಮಾಡಿದ್ದನೆಂದು, ಶಾಸಗಳಿಂದ ತಿಳಿಯಬಹುದು. ಶಿಲ್ಪಕಲೆಗೆ ಹೆಸರಾದ ಪ್ರಮುಖ ದೇವಾಲಯ ಇದಾಗಿದ್ದು ದೇವಾಲಯದ ಹೊರ ಭಿತ್ತಿ ಯಲ್ಲಿ ರಾಮಾಯಣ, ಮಹಾಭಾರತ, ಭಾಗವತದ ಎಲ್ಲ ಬಗೆಯ ಶಿಲ್ಪಗಳನ್ನು ಕೆತ್ತಲಾಗಿದ್ದು, ದೇವಾಲಯದ ಸುಖನಾಸಿಯ ಮೇಲ್ಭಾಗದಲ್ಲಿ ನಟರಾಜನ ನೃತ್ಯಭಂಗಿಯ ಕೆತ್ತನೆಯಂತೂ ಶಿಲ್ಪಿಯ ನೈಪುಣ್ಯತೆಯನ್ನು, ಸೂಕ್ಷ್ಮತೆಯನ್ನು ಕಾಣಬಹುದು. ಹೊರಭಾಗದ ಭಿತ್ತಿಯ ಲ್ಲಿ ಕೃಷ್ಣನಿಗೆ ಸಂಬಂಧಿಸಿದ ಕೆತ್ತನೆಗಳು ಕಣ್ಮನ ಸೆಳೆಯುತ್ತದೆ. ಶ್ರೀಕೃಷ್ಣನ ಜನ್ಮಸಮಯದಲ್ಲಿ ವಸುದೇವನು ಕತ್ತೆಯ ಕಾಲನ್ನು ಹಿಡಿದು ಅರಚದಂತೆ ಬೇಡಿಕೊಳ್ಳುವ ಕೆತ್ತನೆಯಂತೂ ಶಿಲ್ಪಿಯ ಕಲೆಯ ನೈಪುಣ್ಯತೆ ಬಗ್ಗೆ ಅಚ್ಚರಿ ಮೂಡಿಸುತ್ತದೆ. (ದೇವಕಿ, ವಸುದೇವರಿಗೆ ಜನಿಸುವ ಮಕ್ಕಳನ್ನು ಕಂಸನು ಕೊಲ್ಲುತ್ತಿದ್ದದ್ದು‌ ಅವನಿಗೆ ಮಕ್ಕಳು ಜನಿಸುವ ವಿಚಾರ ತಿಳಿಯುತ್ತಿದ್ದದ್ದು ಕತ್ತೆಯ ಅರಚುವಿಕೆಯಿಂದಾಗಿ, ಹಾಗಾಗಿ ಕಾರ್ಯವಾಸಿ ಕತ್ತೆಕಾಲು ಹಿಡಿಯಬೇಕೆಂಬ ಗಾದೆ ಜನಜನಿತವಾಗಿದೆ). ಪುಟ್ಟ ಶ್ರೀಕೃಷ್ಣ ಬೆಣ್ಣೆ ಕದಿಯಂತೆ ಬೆಣ್ಣೆ ಕಡೆಯುವ ಕೋಲಿಗೂ, ಒರಳಿಗೂ ಹಗ್ಗದಿಂದ ಕಟ್ಟಿ ಹಾಕುವ ದೇವಕಿಯ ಶಿಲ್ಪ ಕೆತ್ತನೆಯಂತೂ ಬಾಲ ಕೃಷ್ಣನ ಲೀಲೆಗಳನ್ನು ಕಣ್ತುಂಬಿಸಿಕೊಳ್ಳಬಹುದು. (ಜಾತ್ರೆಗಾಗಿ ಜಾತಕ ಪಕ್ಷಿಯಂತೆ ಕಾಯಬೇಕು, ಭಗವಂತನ ದರ್ಶನಕ್ಕೆ ನಂದಿಯಂತೆ ಸಹನೆ ಇರಬೇಕು, ಭಗವಂತನಿಗೆ ಪ್ರದಕ್ಷಿಣೆ ಹಾಕಲು ಗರುಡನಂತೆ ಏಕತಾನತೆ ಇರಬೇಕು.)

Amruthapura ಈ ಅಮೃತೇಶ್ವರನ ಮೂರ್ತಿಯು ದೂರದ ನೇಪಾಳದ ಗಂಡಕೀ ನದಿಯಿಂದ ತಂದಂತಹ ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದ್ದು ಒಂದೇ ಶಿಲೆಯಲ್ಲಿ ಬ್ರಹ್ಮ, ವಿಷ್ಣು, ಶಿವನನ್ನು ಕಾಣಬಹುದು. ಇಲ್ಲಿ ಅಮೃತೇಶ್ವರ ಪ್ರಮುಖನಾದರೂ ಬ್ರಹ್ಮನಿಗೆ ಅಗ್ರಸ್ಥಾನ ವಿದ್ದು (ಪ್ರಖಾಂಡ ಪಂಡಿತರು, ಅಧ್ಯಾಪಕರು, ಶಿಕ್ಷಣಾರ್ಥಿಗಳೂ 24 ಬ್ರಾಹ್ಮಣ ಕುಟುಂಬಗಳು ಇದ್ದ ಕಾರಣಕ್ಕಾಗಿ ಅಮೃತೇಶ್ವರ‌ ದಂಡನಾಯಕನು ಇಂದಿನ ಅಮೃತಾಪುರಕ್ಕೆ ಬ್ರಹ್ಮಪುರಿ ಅಗ್ರಹಾರವೆಂದು ನಾಮಕರಣ ಮಾಡಿದ್ದನೆಂದು ಶಾಸನದಿಂದ ತಿಳಿದುಬರುತ್ತದೆ.) ಅದಕ್ಕಾಗಿ ಈಶ್ವರನ ಜೊತೆಗೆ ಪಾರ್ವತಿ ಇರದೆ ಶಾರದೆಯನ್ನು ಸ್ಥಾಪಿಸಲಾಗಿದ್ದು, ಈ ಶಾರದೆಯ ಅನುಗ್ರಹದಿಂದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಆರಂಭಿಸಲು, ಮದುವೆಯಾಗದವರು ಶಾರದೆಗೆ ಬಳೆಗಳನ್ನು ಕೊಡುವ ಹರಕೆ ಹೊತ್ತರೆ ಮದುವೆಯಾಗುವುದೆಂದು ಪ್ರತೀತಿ ಇದೆ..

ದೇವಾಲಯದ ರಚನೆಯು ಹೊಯ್ಸಳ ಶೈಲಿಯ ನಕ್ಷತ್ರಾಕಾರದ ಜಗತಿಯ ಮೇಲೆ ರಚಿತವಾಗಿದ್ದು ಗೋಪುರದಲ್ಲಿ ಹೊಯ್ಸಳನ ಲಾಂಛನವಿದ್ದು ಒಟ್ಟು 52 ಕಂಬಗಳಿಂದ ನಿರ್ಮಿತವಾಗಿದ್ದು ಪ್ರತಿಯೊಂದೂ ಕಂಬವೂ ವಿಭಿನ್ನತೆಯನ್ನು ಹೊಂದಿದೆ. ಒಟ್ಟು 250 ಗೋಪುರವನ್ನು ನಿರ್ಮಿಸಲಾಗಿದೆ. ಅಮೃತೇಶ್ವರನ‌ ಸನ್ನಿಧಿಯಲ್ಲಿ (ಹಲವು ಈಶ್ವರನ ‌ದೇವಾಲಯಗಳಲ್ಲಿದ್ದಂತೆ) ಮಕರಸಂಕ್ರಾಂತಿಯಂದು ಸೂರ್ಯನ ಮೊದಲ ಕಿರಣವು ತ್ರಿಮೂರ್ತಿ ಗಳ ಪಾದಸ್ಪರ್ಶಮಾಡುತ್ತಾನೆ.

ಅದ್ಭುತ ಶಿಲ್ಪಕಲೆಯನ್ನು ಹೊಂದಿರುವ ಅಮೃತೇಶ್ವರ ದೇವಾಲಯದ ಛಾವಣಿಯ ಕೆತ್ತನೆ ಕೆಲಸವನ್ನು ಮಾಡುವ ಮೂಲಕ ತನ್ನ ಮೊದಲ ಶಿಲ್ಪಕಲೆಯ ವೃತ್ತಿಯನ್ನು ಅಪ್ರತಿಮನೂ ಪ್ರಾತಃಸ್ಮರಣೀಯ ಶಿಲ್ಪಿ ಯೂ ಆಗಿದ್ದ ಮಲ್ಲಿತಮ್ಮನು ಆಭಿಸಿದನೆಂದು ತಿಳಿಯುತ್ತದೆ. ಈ ದೇವಾಲಯದ ನಾಲ್ಕೂ ದಿಕ್ಕನ್ನು ವೀಕ್ಷಿಸಿದರೆ ಶಿಲ್ಪಿ (ಸ್ಥಪತಿ) ಗೆ ಇದ್ದ ಗಣಿತ ಸೂತ್ರ, ಸೂರ್ಯಚಲನೆಯ ಸಿದ್ಧಾಂತ, ವಿಜ್ಞಾನದ ಬಗ್ಗೆ ಇದ್ದ ಜ್ಞಾನವನ್ನು ಅರಿಯಬಹುದು. ಇದರ ಬಗ್ಗೆ ಕನ್ನಡದ ಕವಿ ಜನ್ನನು ರಚಿಸಿದ ಶಾಸನದಿಂದ ತಿಳಿದುಬರುತ್ತದೆ. ದೇವಾಲಯದ ಇನ್ನೊಂದು ವಿಶೇಷವೆಂದರೆ 200 ವರ್ಷಗಳಿಂದ ನಿರಂತರವಾಗಿ ಉರಿಯುತ್ತಿರುವ ನಂದಾದೀಪವಿದ್ದು ದೇವಾಲಯದ ಸೌಂದರ್ಯವನ್ನು, ಪೂರ್ವಿಕರ ಭಕ್ತಿ, ಭಾವಗಳನ್ನು ಅರಿಯಬಹುದಾಗಿದೆ.ನಮ್ಮ ಹೆಮ್ಮೆ ನಮ್ಮ ಸಂಸ್ಕೃತಿ ನಮ್ಮ‌ ಕರ್ನಾಟಕ ನಮ್ಮ‌ಹೆಮ್ಮೆ, ನಮ್ಮ‌ದೇವಾಲಯಗಳು‌ನಮ್ಮ ಹೆಮ್ಮೆ, ನಮ್ಮ‌ಶಿಲ್ಪಿಗಳು ಅಮರಶಿಲ್ಪಿಗಳು.

ದಿಲೀಪ್ ನಾಡಿಗ್
ಕಾರ್ಯದರ್ಶಿ

ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಆದ್ಯಯನ ವೇದಿಕೆ,‌(ನೋಂ) ಶಿವಮೊಗ್ಗ.

6361124316

Shimoga News ಕುಸುಮ್ – ಬಿ ಯೋಜನೆ. ರೈತರಿಗೆ ಆನ್ ಲೈನ್ ಮಾಹಿತಿ. ರಾಜ್ಯ ಸರ್ಕಾರದಿಂದ ಸಹಾಯವಾಣಿ.

0

Shimoga News ಕುಸುಮ್‌ – ಬಿ ಯೋಜನೆಯಿಂದ ರೈತರು ವಂಚಿತರಾಗಬಾರದು ಮತ್ತು ಮಾಹಿತಿ ಕೊರತೆ ನೀಗಿಸಲು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ನಾಗರಬಾವಿ ಕೇಂದ್ರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಿದೆ.

Shimoga News ಯೋಜನೆಯ ಕಾಂಪೋನೆಂಟ್‌ ಬಿ ಅಡಿ ಸೋಲಾರ್‌ ಪಂಪ್‌ಸೆಟ್‌ ಹಾಕಿಸಿಕೊಳ್ಳುವ ಕುರಿತು ಮಾಹಿತಿ, ಆನ್‌ಲೈನ್‌ ಪಾವತಿ ಮತ್ತು ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ರೈತರು ಮಧ್ಯವರ್ತಿಗಳನ್ನು ಸಂಪರ್ಕಿಸದೆ 080 2220 2100 ಮತ್ತು 80951 32100 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

H B Manjunath ಭಾರತೀಯ ಮತ್ತು ಕನ್ನಡ ಸಂಸ್ಕೃತಿ ವಿಶ್ವದಲ್ಲೇ ಅನುಪಮ- ಡಾ.ಹೆಚ್.ಬಿ.ಮಂಜುನಾಥ್.

0

H B Manjunath ದಾವಣಗೆರೆ.ಡಿ.28. ನಮ್ಮ ದೇಶದ ಹಾಗೂ ನಮ್ಮ ರಾಜ್ಯದ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ ಹಾಗೂ ಮೌಲ್ಯಯುತವಾಗಿದ್ದು ಇದನ್ನು ಮಕ್ಕಳಲ್ಲಿ ರೂಢಿಸುವ ಕೆಲಸ ಮನೆಗಳಲ್ಲಿ ಪೋಷಕರಿಂದಲೇ ಆಗಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಕರೆ ಕೊಟ್ಟರು.

ಅವರು ತ್ಯಾವಣಿಗೆ ಶ್ರೀ ಮಾತಾ ವಿದ್ಯಾಸಂಸ್ಥೆಯ ಪ್ರಕೃತಿ ವಿದ್ಯಾಲಯ ಸಿರಿ ಸಂಭ್ರಮ ಸಮಾರೋಪ ಭಾಷಣ ಮಾಡುತ್ತಾ ವಾರ್ಷಿಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತವೆ ಆದರೆ ಜೀವನ ಪರೀಕ್ಷೆಗಳನ್ನು ಎದುರಿಸುವಲ್ಲಿ ಬೇಕಾಗುವ ಸಂಸ್ಕೃತಿ ಹಾಗೂ ಮೌಲ್ಯಗಳು ಮನೆಗಳಲ್ಲಿ ಪೋಷಕರು ತಾವು ರೂಢಿಸಿಕೊಂಡು ಮಕ್ಕಳಿಗೂ ಹೇಳಿಕೊಡಬೇಕು ಎಂದರು. ಮಾತೃಭಾಷೆಯಾದ ಕನ್ನಡ ಹಾಗೂ ಇದರ ಸಂಸ್ಕೃತಿ ಯಾವತ್ತೂ ಶ್ರೇಷ್ಠ ಆದರೆ ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ಹೋಗಿ ಅವಕಾಶಗಳನ್ನು ಪಡೆಯುವಲ್ಲಿ ಆಂಗ್ಲ ಭಾಷೆಯೂ ಬೇಕಾಗುತ್ತದೆ, ಬಹು ಭಾಷೆಗಳನ್ನು ಕಲಿಯುವುದು ಒಳ್ಳೆಯದು ಆದರೆ ಸಂಸ್ಕೃತಿ ಮಾತ್ರ ನಮ್ಮ ಮಾತೃ ಭಾಷೆಯದೇ ಆಗಿರಬೇಕು ಎಂಬುದನ್ನು ನಿದರ್ಶನದ ಮೂಲಕ ಮಂಜುನಾಥ್ ವಿವರಿಸಿದರು. ಭಾರತದ ವಿದ್ಯಾರ್ಥಿಗಳು ಪ್ರಪಂಚದ ಬೇರೆಲ್ಲ ದೇಶಗಳ ವಿದ್ಯಾರ್ಥಿಗಳಿಗಿಂತಲೂ ಬುದ್ಧಿವಂತರು ಆದರೆ ತಮ್ಮ ಈ ಸಾಮರ್ಥ್ಯದ ಅರಿವು ನಮ್ಮ ವಿದ್ಯಾರ್ಥಿಗಳಿಗಿಲ್ಲ, ಇದನ್ನು ಜಾಗೃತಗೊಳಿಸುವ ಕಾರ್ಯವು ಮನೆಗಳಲ್ಲೂ ಆಗಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ ಜಯಪ್ಪ ಮಾತನಾಡುತ್ತಾ ತಮ್ಮಲ್ಲಿನ ಸಾಂಸ್ಕೃತಿಕ ಪ್ರತಿಭೆಯ ಪ್ರದರ್ಶನವು ಮಕ್ಕಳ ಹಕ್ಕುಗಳಲ್ಲಿ ಒಂದಾಗಿದ್ದು ಶಾಲಾ ವಾರ್ಷಿಕೋತ್ಸವದಲ್ಲಿ ಇದಕ್ಕೆ ಅವಕಾಶವಾಗುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಶಿಕ್ಷಕರ ಹಾಗೂ ಗೆಳೆಯರ ಪಾತ್ರವೂ ಪ್ರಮುಖವಾಗಿರುತ್ತದೆ. ತಂದೆಯ ಜವಾಬ್ದಾರಿ ತಾಯಿಯ ಪ್ರೀತಿ ಸೇರಿ ಮಕ್ಕಳ ವ್ಯಕ್ತಿತ್ವ ರೂಪಗೊಳ್ಳುತ್ತದೆ. ವಿದ್ಯೆಯೊಂದಿಗೆ ಪ್ರಾಣಾಯಾಮ ಯೋಗದಂತಹ ಅನುಷ್ಠಾನಗಳು ಅವಶ್ಯ ಎಂದರು.

H B Manjunath ತ್ಯಾವಣಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಬಸಪ್ಪ ಹೆಚ್ ಬಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಕೃತಿ ವಿದ್ಯಾಲಯದ ಸಂಸ್ಥಾಪಕ ಕೆ.ಜಿ ಲೋಹಿತ್ ಕುಮಾರ್ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ಅಧ್ಯಾಪಕರಾದ ಡಾ. ಪ್ರಸನ್ನ ಕುಮಾರ್ ಬಿ ಸಿ, ಪ್ರತಿಭಾ ಪುರಸ್ಕಾರ ನೆರವೇರಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ ಸಿ ಗೋವಿಂದಸ್ವಾಮಿ ಮಾತುಗಳನ್ನಾಡಿದರು. ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಕವಿತಾ ಶಿಕ್ಷಣದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಲೋಕೇಶ್ ನಾಯಕ್, ಅತ್ತಿಕೆರೆ ಪ್ರಸನ್ನ ಕುಮಾರ್, ಶ್ವೇತಾ, ಮುಖ್ಯೋಪಾಧ್ಯಾಯ ಮನು ಎಸ್ ಆರ್, ಜಮಾಲ್ ವಲಿ ಎಂ, ಆಶಾ ಹೆಚ್ ಎಸ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನೆರವೇರಿದ ನಂತರ ಶಾಲಾ ಮಕ್ಕಳಿಂದ ಅತ್ಯಾಕರ್ಷಕವಾದ ನೃತ್ಯರೂಪಕಗಳು ನೆರವೇರಿದವು.

Kuvempu “ಸುಂದರ ಕವಿ ಕಾಣೋ”ಕುವೆಂಪು ಸ್ಮರಣೆ.-ಡಾ.ಸುಧೀಂದ್ರ.

0

Kuvempu ಕುವೆಂಪು ಅವರ ಇಂಗ್ಲಿಷ್ ಕವಿತೆಗಳನ್ನು ಓದಿ ಪರಿಶೀಲಿಸಿದ ಐರಿಷ್ ಕವಿ ಕಸಿನ್ಸ್
“ಏನಿದೆಲ್ಲ ಕಗ್ಗ? .
ನಿಮ್ಮನ್ನ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶಿಯಾಗಿ ಕಾಣುತ್ತೀರಿ.. ಆದರೆ ಕವಿತೆ ಮಾತ್ರ ಸ್ವದೇಶಿಯಲ್ಲ. ನಿಮ್ಮ ಮಾತೇ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ? ಎಂದು ಕೇಳಿದರು.
ನಂತರ ಇಬ್ಬರ ನಡುವೆ ಕಾವ್ಯ, ಇಂಗ್ಲಿಷ್ ಭಾಷೆ ಮತ್ತು ಕನ್ನಡ ಭಾಷೆ ಮೊದಲಾದ ವಿಚಾರಗಳ ಮಾತುಕತೆ ನಡೆಯಿತು.
ಒಟ್ಟಾರೆ ಹೇಲಕಬೇಕೆಂದರೆ ’ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲದು’ ಎಂದು ಕಸಿನ್ಸ್ ‌ ಅಭಿಪ್ರಾಯ ಪಟ್ಟರಂತೆ.

ಆಗ ಇಪ್ಪತ್ತರ ಬಿಸಿ ವಯಸ್ಸಿನ ಯುವಕ ಕುವೆಂಪು, ಆಕ್ಷಣಕ್ಕೆ ಸಹಜವಾಗಿಯೇ ಸಿಟ್ಟುಗೊಂಡರಂತೆ. ಅಂತಹ ಕುಪಿತ ಮನಸ್ಥಿತಿಯಲ್ಲೇ ಅಲ್ಲಿಂದ ಜಾಗ ಖಾಲಿಮಾಡಿದರು.

” ಅದೊಂದು ಮಹತ್ವದ ಹಾಗೂ ಸ್ಮರಣೀಯವಾದ ದಿನ!”ಎಂದು ನೆನಪಿನ ದೋಣಿಯಲ್ಲಿ ಕುವೆಂಪು ಆ ಸಂದರ್ಭವನ್ನು ಕುರಿತು ಕಸಿನ್ಸ್ ಅವರ ಹಿತವಚನ ಮೇಲೆಮೇಲೆಕ್ಕೆ ತಿರಸ್ಕೃತವಾಗಿದ್ದರು ಸುದೈವದಿಂದ ನನ್ನ ಅಂತಃಪ್ರಜ್ಞೆ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು! ಹಿಂತಿರುಗಿ ಬರುವಾಗಲೇ ದಾರಿಯಲ್ಲಿ ಏನೋ ಒಂದು ಕನ್ನಡ ಕವಿತೆ ರಚಿಸುತ್ತಾ ಗುನುಗುತ್ತಾ ಬಂದೆ ಎಂದು ಬರೆದಿದ್ದಾರೆ.

Kuvempu ಈ ಬದಲಾವಣೆ ಹೊಂದಿದ ನಂತರ ಕುವೆಂಪು ಗಟ್ಟಿಯಾಗಿಯೇ ಬರೆದರು. ಗದ್ಯಧಾಟಿಯಲ್ಲಂತೂ ಅವರ ಶೈಲಿ
ಮನೋಜ್ಞ.ಅನನ್ಯ.
ಕವಿತೆಗಳಲ್ಲಿ ನಿಸರ್ಗ ನರ್ತಿಸುತ್ತದೆ. ನಿಸರ್ಗಕವಿ ಅಂತಲೇ ನಮಗೆ ಅವರು ಜನಜನಿತ.

ಪದವಿ, ಪದಕ, ಬಿರುದು, ಮಾನ‌ ಸಮ್ಮಾನಗಳು ಅವರನ್ನ ಅರಸಿಕೊಂಡು ಬಂದವು. ಕುವೆಂಪು ಅವರೇ ಹೇಳುವಂತೆ” ಛೀ, ಕೀರ್ತಿ ಶನಿ ತೊಲಗಾಚೆ” ಎಂದು ಅವುಗಳನ್ನ ದೂರ ಸರಿಸಿದರು. ಅಷ್ಟೇ ಮೇಲಕ್ಕೇರಿದರು.
ಇಂದವರ ಜನ್ಮದಿನ.
ಸೂರ್ಯೋದಯ,
ಚಂದ್ರೋದಯ ದೇವರ ದಯ ಕಾಣೋ
ಎಂಬಂತೆ ಮಹಾಕವಿಯ ನೆನಪೇ ನಮಗೆ ಒಂದು ಸುಂದರ
” ಅಕ್ಷರಗಳ ಕವಿ ಕಾಣೋ!” ಎಂಬ ಮಿಡಿತ ನಮಗೆ.

Shimoga News “ಗಾನ ವಿಮಾನ” ಏರಿದ ಸಹೃದಯರು.ಮತ್ತೆಮತ್ತೆನೆನಪಾದ ‘ಶಿವಮೊಗ್ಗ ಸುಬ್ಬಣ್ಣ ‘

0

Shimoga News ದಿನಾಂಕ ೨೮-೧೨-೨೦೨೫ ರ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಅಭಿರುಚಿ , ಶಾಮಣ್ಣ ಟ್ರಸ್ಟ್, ಕುವೆಂಪು ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕುವೆಂಪು ವಿರಚಿತ ಹಾಡುಗಳ ಶಿವಮೊಗ್ಗ ಸುಬ್ಬಣ್ಣ ಹಾಡಿರುವ “ಗಾನ ವಿಮಾನ” ಕಾರ್ಯಕ್ರಮ ನಡೆಯಿತು.
ಶಿವಮೊಗ್ಗ ಸುಬ್ಬಣ್ಣ ,ಮಲೆನಾಡಿಗೆ ಚಿರಪರಿಚಿತರು. ಎಲೆಮರೆಯ ಕಾಯಿ ಆಗಿದ್ದ ಪ್ರತಿಭೆ ಹೊರಜಗತ್ತಿಗೆ ಪರಿಚಯವಾಗಲು ಬಹಳ ಕಾಲ ಬೇಕಾಯಿತು.
“ಕಾಡುಕುದುರೆ ” ಚಿತ್ರದ ಗಾಯನಕ್ಕಾಗಿ ಸುಬ್ಬಣ್ಣ ಅವರಿಗೆ ” ರಾಷ್ಟ್ರಪ್ರಶಸ್ತಿಗೆ ಲಭಿಸಿದಾಗ ಇಡೀ ಕನ್ನಡಿಗರೇ ಹೆಮ್ಮೆ ಪಡುವಂತಾಯಿತು.
ಅಲ್ಲಿಂದ ಸುಬ್ಬಣ್ಷ ಹಿಂತಿರುಗಿ ನೋಡಲೇ ಇಲ್ಲ. ಚಿತ್ರಗೀತೆಗಳೇ ಅಲ್ಲದೇ ಭಾವಗೀತೆಗಳಿಗೆ ಜೀವ ತುಂಬಿ ಹಾಡಿದಾಗ.
ಅವರನ್ನ ಮತ್ತಷ್ಟು ಕನ್ನಡ ಸಂಗೀತ ರಸಿಕರು ಮೆಚ್ಚಿಕೊಂಡರು.
ಕನ್ನಡ ಭಾವಗೀತೆಗಳ ಧ್ವನಿಮುದ್ರಣ ಒಂದು ಉದ್ಯಮ ವ್ಯಾಪ್ತಿ ಪಡೆಯುವಲ್ಲಿ ಶಿವಮೊಗ್ಗ ಸುಬ್ಬಣ್ಣ ಅವರ ಕೊಡುಗೆ ಅಪಾರ. ಅವರು ಹಾಡಿದ ಧ್ವನಿಮುದ್ರಿಕೆ,ಕ್ಯಾಸೆಟ್ ಗಳು ಬಿಸಿ ಬಿಸಿ ತಿನಿಸಿನಂತೆ ಮಾರಾಟವಾದವು.
ಕೆಲವು ಧ್ವನಿಮುದ್ರಣ ಕಂಪನಿಗಳು ತಮ್ಮ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಿಕೊಂಡವು ಎನ್ನಬಹುದು.
ಶಿವಮೊಗ್ಗ ಸುಬ್ಬಣ್ಣ ಅವರನ್ನ ಊರು ಶಿವಮೊಗ್ಗ ಮರೆತಿಲ್ಲ.
ಅದಕ್ಕೆ ಸಾಕ್ಷಿಯಾಗಿ
Shimoga News ” ಗಾನ ವಿಮಾನ” ಕಾರ್ಯಕ್ರಮ ಅತ್ಯಂತ ವಿನೂತನ ,ವಿಶಿಷ್ಟವಾಗಿ
ನಡೆಯಿತು.
ವಿನಯ್ ಶಿವಮೊಗ್ಗ ಅವರ ಸೃಜನ ಶೀಲತೆಗೆ ಈ ಕಾರ್ಯಕ್ರಮ ಮೆರುಗು ತಂದಿತು.
ವಿವಿಧ ಕಲಾವಿದರು ಭಾವಗೀತೆಗಳನ್ನ ಹಾಡಿ,ಸುಮಧುರ ವಾತಾವಣ ಸೃಷ್ಟಿಸಿದರು.
ಕುವೆಂಪ ರಂಗಮಂದಿರ ಮತ್ತೊಮ್ಮೆ ಭಾವಗೀತೆಗಳ ಹಕ್ಕಿಗಳ
ಗೂಡಿನಂತೆ ಶೋಭಿಸಿತೆನ್ನಬಹುದು..

Sigandur Bridge ಸಿಗಂದೂರು ಸೇತುವೆ ಸೌಲಭ್ಯದ ಬಗ್ಗೆ ಯಾತ್ರಿಗಳಿಂದ ಸಂಸದ ರಾಘವೇಂದ್ರ ಅವರ ಮಚ್ಚುಗೆ

0

Sigandur Bridge ಇಂದು ಬೈಂದೂರಿಗೆ ತೆರಳುವಾಗ, ವಿದೇಶಿಯರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಭೇಟಿಯಾಗಿ, ‘ಸಿಗಂದೂರು ಸೇತುವೆ’ ಮತ್ತು ಶಿವಮೊಗ್ಗ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಸದ ರಾಘವೇಂದ್ರ ಅವರಿಗೆ ಮುಖತಃ ಮೆಚ್ಚುಗೆ ವ್ಯಕ್ತಪಡಿಸಿದರು.

Sigandur Bridge ನಮ್ಮೂರಿನ ಮೂಲಸೌಕರ್ಯಗಳು ಪ್ರವಾಸಿಗರು ಮತ್ತು ಭಕ್ತಾದಿಗಳ ಪ್ರಯಾಣವನ್ನು ಸುಲಭಗೊಳಿಸಿದೆ ಎಂದು ಕೇಳಿ ಸಾರ್ಥಕ ಭಾವ ಮೂಡಿತು. ನಿಮ್ಮೆಲ್ಲರ ಹಾರೈಕೆ ಸದಾ ಇರಲಿ ಎಂದು ಸಂಸದ ಬಿ.ವೈ.ರಾಘವೇಂದ್ರ. ಭಕ್ತ ಪ್ರಮುಖರೊಡನೆ

Breaking News ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ – ಓರ್ವ ಸಾವು

0

Breaking News ಶಿವಮೊಗ್ಗ ನಗರದ ವಿದ್ಯಾನಗರ ಫ್ಲೈಓವರ್ ನಲ್ಲಿ ಘಟನೆ ನಡೆದಿದೆ. ಫ್ಲೈ ಓವರ್ ನಿಂದ ಇಳಿಯುತ್ತಿದ್ದ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಚೆನ್ನಗಿರಿ ತಾಲೂಕಿನ ಹಿರೆಕೊಗಲೂರು ಮೂಲದ ರಾಘವೇಂದ್ರ (40) Breaking News ಮರಣ ಹೊಂದಿದ ವ್ಯಕ್ತಿಯೆಂದು ಗುರುತಿಸಲಾಗಿದೆ. ಮೃತ ದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಯಿತು

D. K. Shivakumar ರೈತರದಿನವು ರೈತರ ಹಕ್ಕು ಮತ್ತು ಗೌರವವನ್ನ ನೆನೆಪಿಸುವ ದಿನ- ಡಿ.ಕೆ.ಶಿವಕುಮಾರ್

0

D. K. Shivakumar ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ರೈತರು ಮತ್ತು ಬೆಂಗಳೂರು ನಗರ ಗ್ರಾಹಕರ ನಡುವಿನ ನೇರ ಸಂಪರ್ಕಕ್ಕೆ ವೇದಿಕೆಯಾಗಿ “ಕೃಷಿ ಸಂತೆ”ಯನ್ನು ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಆಯೋಜಿಸುತ್ತಾ ಬಂದಿದೆ. ಸತತವಾಗಿ ಎಂಟು ಯಶಸ್ವೀ ಸಂತೆಗಳ ನಂತರ, ಈಗ ೯ನೇ ಕೃಷಿ ಸಂತೆಯನ್ನು ಮತ್ತು “ರೈತ ದಿನಾಚರಣೆ”
ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಮೂರು ನೂತನ ಕಟ್ಟಡಗಳನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಡಿ.ಕೆ. ಶಿವಕುಮಾರ್, ಸನ್ಮಾನ್ಯ ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರು ನೆರವೇರಿಸಿ ರೈತರೇ ದೇಶದ ಬೆನ್ನೆಲಬು – ರೈತರ ಶ್ರಮ, ಬೆವರು ಮತ್ತು ಅತ್ಮವಿಶ್ವಾಸವೇ ನಮ್ಮ ದೇಶದ ಆಸ್ತಿ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ರೈತರ ದಿನಾಚರಣೆ/ ಕಿಸಾನ್ ದಿವಸ್ ಆಚರಿಸುತ್ತಿರುವುದು ನನಗೆ ಅಪಾರ ಸಂತೋಷ ನೀಡುತ್ತಿದೆ. ಈ ದಿನವು ರೈತರ ಹಕ್ಕುಗಳು ಮತ್ತು ಗೌರವವನ್ನು ನೆನಪಿಸುವ ಮಹತ್ವದ ದಿನವಾಗಿದೆ. ರೈತನು ದೇಶದ ಆಹಾರ ಭದ್ರತೆಯ ಹರಿಕಾರ. ಅನೇಕ ಸವಾಲುಗಳ ನಡುವೆಯೂ ರೈತನು ನಿರಂತರವಾಗಿ ಶ್ರಮಿಸಿ ದೇಶವನ್ನು ಪೋಷಿಸುತ್ತಿದ್ದಾನೆ. ಕೃಷಿಯಿಲ್ಲದೆ ಜೀವನ ಸಾಧ್ಯವಿಲ್ಲ ಎಂಬ ಸತ್ಯವನ್ನು ನಾವು ಎಲ್ಲರೂ ಅರಿಯಬೇಕು. ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆ, ನವೀನ ಕೃಷಿ ತಂತ್ರಜ್ಞಾನಗಳು ಮತ್ತು ರೈತ ಕೇಂದ್ರಿತ ತರಬೇತಿಗಳು ಕೃಷಿ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುತ್ತಿವೆ. ರೈತ ಸಮೃದ್ಧನಾದರೆ ಗ್ರಾಮೀಣ ಭಾರತ ಸಮೃದ್ಧವಾಗುತ್ತದೆ. ಗ್ರಾಮೀಣ ಭಾರತ ಬಲಿಷ್ಠವಾದರೆ ರಾಜ್ಯ ಮತ್ತು ರಾಷ್ಟç D. K. Shivakumar ಎರಡೂ ಬಲಿಷ್ಠವಾಗುತ್ತವೆ. ಇದರ ಜೊತೆ ವಿ.ವಿ.ಯ ಹಲವು ತಳಿ ತಂತ್ರಜ್ಞಾನಗಳು ರಾಜ್ಯದ ಒಟ್ಟಾರೆ ಉತ್ಪಾದನೆ-ಉತ್ಪಾದಕತೆ ಹೆಚ್ಚಿಸುವಲ್ಲಿ ನೆರವಾಗಿದ್ದು, ಸಮೃದ್ಧ ಕೃಷಿಯತ್ತ ದಿಟ್ಟ ಹೆಜ್ಜೆಯಿಟ್ಟಿದೆ ಎಂದು ಹೇಳಲು ಹರ್ಷಿಸುತ್ತೇನೆ. ಬೆಂಗಳೂರು ವಿಶ್ವವಿದ್ಯಾನಿಲಯದ “ರೈತ ಸಂತೆ” ವಿನೂತನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ರೈತರ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟವಾಗಿ ಸಾಬೀತುಪಡಿಸಿದೆ. ಈ ಸಂಸ್ಥೆ ಕೇವಲ ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಮಾತ್ರವಲ್ಲ, ರೈತರ ಬದುಕು, ಅವರ ಆದಾಯ ಮತ್ತು ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲೂ ಮುಂಚೂಣಿಯಲ್ಲಿದೆ. ರೈತರು ತಮ್ಮ ಬೆಳೆ, ಮಣ್ಣು, ನೀರಿನ ಬಳಕೆ, ಹವಾಮಾನದಿಂದ ಪ್ರಭಾವಿತ ಸಮಸ್ಯೆಗಳು ಮತ್ತು ಇತರ ಕೃಷಿ ಸಂಬAಧಿತ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಪಡೆಯಬಹುದಾಗಿದೆ. ಇದರಿಂದ ರೈತರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಅವರು ತಮ್ಮ ಕೃಷಿಯನ್ನು ಲಾಭದಾಯಕ ವೃತ್ತಿ ಆಗಿ ರೂಪಿಸಿಕೊಳ್ಳಲು ಉತ್ತೇಜನ ಪಡೆಯುತ್ತಾರೆ ಎಂದು ತಿಳಿಸಿ ಮುಂಬರುವ ದಿನಗಳಲ್ಲಿ ಇಂದಿನ ನಗರ ಶಾಲಾ ವಿದ್ಯಾರ್ಥಿಗಳಿಗೆ ರೈತರ ಬದುಕನ್ನು ತೋರಿಸಲು ೨ ದಿನಗಳ ಪ್ರವಾಸವನ್ನು ಕೈಗೊಳ್ಳಲು ವಿಶ್ವವಿದ್ಯಾನಿಲಯಕ್ಕೆ ಸೂಚಿಸಿದರು.

B. Y. Raghavendra ಶಿಕಾರಿಪುರ ಸರ್ಕಾರಿ ಪಪೂ ಕಾಲೇಜಿನ ವಾರ್ಷಿಕೋತ್ಸವ: ವಿದ್ಯಾರ್ಥಿಗಳಿಗೆ ಬಿ.ವೈ.ರಾಘವೇಂದ್ರ ಅವರಿಂದ ಹಿತವಚನ.

0

B. Y. Raghavendra ಶಿಕಾರಿಪುರ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಸಂಸದರಾದ ಬಿ.ವೈ. ರಾಘವೇಂದ್ರ ಅವರು ಉದ್ಘಾಟಿಸಿ ಮಾತನಾಡಿದರು.

B. Y. Raghavendra ಈ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಶಿಕಾರಿಪುರ ತಾಲ್ಲೂಕಿನ ಮುಖಂಡರು, ಗಣ್ಯರು, ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

Droupadi Murmu ಕಾರವಾರ ನೌಕಾನೆಲೆ ಅಧಿಕಾರಿಗಳಿಂದ ರಾಷ್ಟ್ರಪತಿಗಳಿಗೆ ಭವ್ಯ ಸ್ವಾಗತ.

0

Droupadi Murmu ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ , ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮoಕಾಳ ಎಸ್ ವೈದ್ಯ ಸ್ವಾಗತಿಸಿದರು.

Droupadi Murmu ಪ್ರಾದೇಶಿಕ ಆಯುಕ್ತೆ ಜಾನಕಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ. ಎಡಿಜಿಪಿ ಹಿತೇಂದ್ರ,
ಐಜಿಪಿ ಅಮಿತ್ ಸಿಂಗ್, ಎಸ್ಪಿ ದೀಪನ್ ಎಂ. ಎನ್. ಹಾಗೂ ಕಾರವಾರ ನೆವಲ್ ಬೇಸ್ ನ ಫೀಲ್ಡ್ ಆಫೀಸರ್ ಕಮಾಂಡೆಂಟ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಹಾಗೂ ನೌಕಾಪಡೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.