Sunday, February 22, 2026
Sunday, February 22, 2026
Home Blog Page 218

District Legal Services Authority ಹೊಸನಗರ ಹತ್ತನೇ ವಾರ್ಡಿಗೆ ದಿಢೀರ್ ಭೇಟಿ ನೀಡಿದ ನ್ಯಾ. ಎಂ.ಎಸ್.ಸಂತೋಷ್

0

District Legal Services Authority ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ ಎಸ್ ರವರು ಹೊಸನಗರದ ವಾರ್ಡ್ ನಂಬರ್ 10 ರಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿಯನ್ನು ಕೊಟ್ಟು ಅಲ್ಲಿನ ಆವರಣವನ್ನು ತಪಾಸಣೆ ಮಾಡಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕರೊಂದಿಗೆ ಮಾತನಾಡಿದರು.

Rotary Shimoga ತುರ್ತು ರಕ್ತನೀಡಬೇಕಾದ ಸಂದರ್ಭ ಬಂದಾಗ ನಿಮ್ಮ ರಕ್ತದ ಗುಂಪಿನ ಅರಿವಿರಬೇಕು- ಕೆ.ಬಿ.ರವಿಶಂಕರ್

0

Rotary Shimoga ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡುವುದು ಅವಶ್ಯಕ. ಇದಕ್ಕಾಗಿ ರಕ್ತದ ಗುಂಪಿನ ಅರಿವು ಇರಬೇಕು. ರಕ್ತದ ವರ್ಗೀಕರಣ ತಿಳಿದುಕೊಳ್ಳಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ.ಬಿ.ರವಿಶಂಕರ್ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೋಟರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಶಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದ ಗುಂಪು ತಪಾಸಣೆ ಹಾಗೂ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಬ್ಬರು ರಕ್ತದ ಗುಂಪು ಪರೀಕ್ಷಿಸಿಕೊಂಡು ದಾಖಲೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷೆ ಮಂಜುಳಾ ಮಾತನಾಡಿ, ವಿದ್ಯಾರ್ಥಿಗಳು ರಕ್ತದ ಗುಂಪನ್ನು ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳದೆ ಏನಾದರೂ ಅವಘಡ ಸಂಭವಿಸಿದಾಗ ಪರೀಕ್ಷೆಗೆ ಒಳಗಾಗುವುದು ಸರಿಯಲ್ಲ. ರಕ್ತದ ಮಾಹಿತಿ ಹೊಂದಿರಬೇಕು ಎಂದರು.

Rotary Shimoga ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಕಾರ್ಯದರ್ಶಿ ಡಾ. ಧನಂಜಯ ರಾಂಪುರ ಮಾತನಾಡಿ, ರಕ್ತದ ಅವಶ್ಯಕತೆ ಹಾಗೂ ಮಹತ್ವದ ಕುರಿತು ಅರಿವು ಹೊಂದಿರುವುದು ಅವಶ್ಯ ಎಂದು ತಿಳಿಸಿದರು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಕ್ತದ ಗುಂಪು ಪರೀಕ್ಷಿಸಿ ಗುರುತಿನ ಪತ್ರ ನೀಡಲಾಯಿತು.
ರಾಮಚಂದ್ರ ಎಸ್.ಸಿ., ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಶರ್ಮಿಳಾ, ಖಜಾಂಚಿ ಲತಾ ಡಿ.ಟಿ, ಹಿರಿಯ ಉಪಾಧ್ಯಕ್ಷ ನರಸಿಂಹ .ಕೆ, ಸದಸ್ಯರಾದ ರಾಘವೇಂದ್ರ ಟಿ.ಜಿ, ರಾಘವೇಂದ್ರ ಕೆ., ಉಮೇಶ, ರಮೇಶ್, ಗಿರೀಶ್, ವೆಂಕಟೇಶ್ ಪ್ರಸಾದ್ ಇತರರಿದ್ದರು.

B.Y.Raghavendra ಭದ್ರಾವತಿ ವಿಐಎಸ್ ಎಲ್.ಮನೆ ಬಾಡಿಗೆ & ರಿಟೆನ್ಷನ್ ಸ್ಕೀಮ್ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಲು ಸಂಸದ ರಾಘವೇಂದ್ರ ಸಾಥ್

0

B.Y.Raghavendra ಲೋಕಸಭಾ ಸದಸ್ಯರಾದ ಶ್ರೀ ಯುತ ಬಿ.ವೈ. ರಾಘವೇಂದ್ರ ರವರ ಆಹ್ವಾನದ ಮೇರೆಗೆ ವಿ ಐಎಸ್ ಎಲ್ ಅಧಿಕಾರಿಗಳು ಭೇಟಿ ನೀಡಿದರು.
ಎರಡು ಸಮಸ್ಯೆಗಳಾದ ಮನೆ ಬಾಡಿಗೆ ಮತ್ತು ರಿಟೆನ್ಷನ್ ಸ್ಕೀಮನ್ನು ರದ್ದು ಮಾಡುವುದರ ಬಗ್ಗೆ ಒಂದು ಪತ್ರವನ್ನು ಮಾನ್ಯ ಶ್ರೀ ತೆಕಾತ್ ಸಿಂಗ್ (IFS) ಕರ್ನಾಟಕ ಕೇಡರ್ ಪರ್ಸನಲ್ ಸೆಕ್ರೆಟರಿ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಿಗೆ ಒಂದು ಪತ್ರವನ್ನು ಬರೆದು, ಈ ಎರಡು ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಿ ಕೊಡಬೇಕೆಂದು ಕೇಳಿಕೊಂಡಿದ್ದರು.

B.Y.Raghavendra ನಂತರ ಅವರ ಜೊತೆಯಲ್ಲಿ ಮಾನ್ಯ ಶ್ರೀ ಹೆಚ್.ಡಿ. ಕುಮಾರ ಸ್ವಾಮಿಗಳು ಕೇಂದ್ರ ಉಕ್ಕು ಮತ್ತು ಭಾರಿ ಕೖಗಾರಿಕ ಸಚಿವರ ಕಚೇರಿಯಲ್ಲಿ ಭೇಟಿಯಾಗಿ,ಎಂಪಿ ಯವರು ಎರಡೂ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಪ್ರಸ್ತಾಪಿಸಿದರು. ನಂತರ, ಈ ಎರಡು ವಿಷಯಗಳನ್ನು ಶ್ರೀಯುತ ರಾಘವೇಂದ್ರನವರೇ ಬಂದಿರುವುದರಿಂದ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ನಮ್ಮSAIL CMD(Chairman ) ಅವರನ್ನು ನಮ್ಮ ಕಚೇರಿಗೆ ಕರೆಸಿಕೊಂಡು ಆದಷ್ಟು ಬೇಗ ಈ ಬೇಡಿಕೆಗಳನ್ನು ಬಗೆಹರಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ .

Rotary Shimoga ಸಸಿ ನೆಡುವುದಷ್ಟೇ ಅಲ್ಲ ಪಾಲನೆ, ಪೋಷಣೆ ನಮ್ಮ ಹೊಣೆ- ಜಿ.ವಿಜಯ ಕುಮಾರ್

0

Rotary Shimoga ಸಸಿಗಳನ್ನು ನೆಡುವುದರ ಜತೆಯಲ್ಲಿ ಅವುಗಳ ಪಾಲನೆ, ಪೋಷಣೆಯು ಮುಖ್ಯ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಹೇಳಿದರು.

ಕೊಮ್ಮನಾಳು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪರಿಸರ ಜಾಗೃತಿ ಹಾಗೂ ಸಸಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ನಾಶದಿಂದ ಮನುಕುಲವೇ ದುಸ್ಥಿತಿಯಲ್ಲಿದೆ. ಆಧುನಿಕರಣದಿಂದ ಗಿಡಮರಗಳ ಕಡಿತಲೆ ಜಾಸ್ತಿಯಾಗಿದೆ. ಇದರ ಜತೆಗೆ ಪರಿಸರದಿಂದ ನಮಗೆ ಸಿಗುವ ಶುದ್ಧವಾದ ಆಮ್ಲಜನಕದ ಕೊರತೆ ಉಂಟಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ಪ್ರತಿಯೊಬ್ಬರೂ ವಿಶೇಷ ದಿನಗಳಂದು ಒಂದೊAದು ಸಸಿಗಳನ್ನು ನೆಡುವ ಪ್ರತಿಜ್ಞೆ ಮಾಡಬೇಕು. ಅದರ ಜೊತೆಗೆ ಸಸಿಗಳನ್ನು ಪೋಷಣೆ ಮಾಡಬೇಕು. ಇಂದು ನಾವು ನೆಟ್ಟ ಸಸಿ ಮುಂದಿನ ತಲೆಮಾರಿಗಾದರೂ ನೆರಳು ಹಾಗೂ ಫಲ ನೀಡುತ್ತದೆ. ಹಾಗೆ ವಾತಾವರಣವೂ ಕೂಡ ಶುದ್ಧವಾಗಿರುತ್ತದೆ ಎಂದು ಹೇಳಿದರು.

Rotary Shimoga ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ನೆಪ್ಚೂನ್ ಕಿಶೋರ್ ಮಾತನಾಡಿ, ನಾವು ಅಧಿಕಾರ ವಹಿಸಿಕೊಂಡ ನಂತರ ಎಲ್ಲಾ ಬಡಾವಣೆಗಳಲ್ಲಿ ಹಾಗೂ ನಮ್ಮ ಇಂಟರಾಕ್ಟ್ ಕ್ಲಬ್ಬಿನ ಶಾಲೆಗಳ ಆವರಣಗಳಲ್ಲಿ ಮುಖ್ಯರಸ್ತೆಯ ಎಡ ಬಲಗಳಲ್ಲಿ ಒಳ್ಳೆಯ ಸಸಿಗಳನ್ನು ನೀಡುತ್ತಾ ಬಂದಿದ್ದೇವೆ. ಇದು ನಮ್ಮ ಜಿಲ್ಲಾ ಯೋಜನೆಯ ಪ್ರಮುಖ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಾ. ಬಿ.ಆರ್.ಧನಂಜಯ ರಾಂಪುರ ಮಾತನಾಡಿ, ಶಿಕ್ಷಣದ ಜೊತೆಯಲ್ಲಿ ಮಕ್ಕಳಿಗೆ ಕ್ರೀಡೆ ಸಾಂಸ್ಕೃತಿಕ ಹಾಗೂ ಪರಿಸರ ಪ್ರೇಮವನ್ನು ಬೆಳೆಸಬೇಕು. ಅದರ ಮಹತ್ವವನ್ನು ತಿಳಿಸಿಕೊಡಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಚಂದ್ರಪ್ಪ ಮಾತನಾಡಿ, ರೋಟರಿ ಸಂಸ್ಥೆಯ ಸೇವೆ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮೇಲೆ ಇಟ್ಟ ಅಭಿಮಾನಕ್ಕೆ ನಾವು ಸದಾ ಚಿರಋಣಿ ಎಂದರು. ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಗೈಡ್ಸ್ ತರಬೇತಿ ಆಯುಕ್ತರಾದ ಗೀತಾ ಚಿಕ್ಕಮಠ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Lok Adalat ಸಾರ್ವಜನಿಕರು ನ್ಯಾಯಾಲಯ ಶುಲ್ಕವಿಲ್ಲದೇ ಪ್ರಕರಣವನ್ನು ಲೋಕ ಅದಾಲತ್ ನಲ್ಲಿ ದಾಖಲಿಸಬಹುದು- ನ್ಯಾ.ಎಂ.ಎಸ್.ಸಂತೋಷ್

0

Lok Adalat ಹೊಸನಗರ ತಾಲೂಕಿನ ವಕೀಲ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಕೀಲರೊಂದಿಗೆ ಮತ್ತು ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ ಎಸ್ ರವರು ಹೊಸನಗರ ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಫಾರೂಕ್ ಝಾರೆ ಮತ್ತು ಸದರಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಮಾರುತಿ ಶಿಂಧೆ ರವರ ಉಪಸ್ಥಿತಿಯಲ್ಲಿ ಸಭೆಯನ್ನು ಉದ್ದೇಶಿಸಿ ದಿನಾಂಕ 13.09.2025 ರಂದು ಆಯೋಜಿಸಲಾಗಿರುವ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಮಾಹಿತಿಯನ್ನು ನೀಡಿದರು.

Lok Adalat ಈ ಸಂದರ್ಭದಲ್ಲಿ ಖಾಯಂ ಲೋಕ ಅದಾಲತ್ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಂತೋಷ್ ಎಂ ಎಸ್ ರವರು ಶಿವಮೊಗ್ಗ ಜಿಲ್ಲೆಯು ಮಂಗಳೂರಿನಲ್ಲಿ ಸ್ಥಾಪಿಸಲಾದ ಖಾಯಂ ಲೋಕ ಅದಾಲತ್ತಿನ ವ್ಯಾಪ್ತಿಯಲ್ಲಿ ಒಳಪಡುತ್ತಿದ್ದು ಅಲ್ಲಿ ಸಾರ್ವಜನಿಕ ಉಪಯುಕ್ತ ಸೇವೆಯನ್ನು ನೀಡುತ್ತಿರುವ ಸಂಸ್ಥೆಗಳು ಹಾಗೂ ಅಂತಹ ಸಂಸ್ಥೆಗಳ ವಿರುದ್ಧ ಸಾರ್ವಜನಿಕರು ಪ್ರಕರಣವನ್ನು ಯಾವುದೇ ನ್ಯಾಯಾಲಯದ ಶುಲ್ಕವಿಲ್ಲದೆ ದಾಖಲಿಸಬಹುದು ಮತ್ತು ರಾಜಿ ಸಂಧಾನದ ಮೂಲಕ ಅಥವಾ ವಿಚಾರಣೆಯ ಮೂಲಕವು ನ್ಯಾಯಾಲಯದಲ್ಲಿ ನೀಡುವಂತಹ ತೀರ್ಪನ್ನು ಒಂದು ಕೋಟಿ ರೂಪಾಯಿ ಮೊತ್ತದ ಒಳಗಿನ ಪರಿಹಾರವನ್ನು ಪಡೆದುಕೊಳ್ಳಬಹುದು. ಅಂತಹ ತೀರ್ಪಿನ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿ ಸದರಿ ಖಾಯಂ ಲೋಕ ಅದಾಲತ್ ನ ಸೇವೆಯ ಉಪಯೋಗವನ್ನು ಸಾರ್ವಜನಿಕರು ಮತ್ತು ಸಾರ್ವಜನಿಕ ಉಪಯುಕ್ತ ಸೇವೆಗಳನ್ನು ನೀಡುವ ಸಂಸ್ಥೆಗಳು ಅಲ್ಲದೆ ಎಲ್ಲಾ ವಕೀಲರು ಪಡೆದುಕೊಳ್ಳಬೇಕು ಎಂದು ಮಾಹಿತಿಯನ್ನು ನೀಡಿದರು. ಈ ವೇಳೆ ಖಾಯಂ ಲೋಕದಲತ್ ಕುರಿತು ಸಂಪೂರ್ಣ ಮಾಹಿತಿ ಇರುವ ಫಲಕವನ್ನು ಅನಾವರಣ ಮಾಡಿ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಿಗೆ ಸಾರ್ವಜನಿಕ ಪ್ರಕಟಣೆಗೆ ಹಸ್ತಾಂತರಿಸಲಾಯಿತು.

Rotary Club Shimoga ತಾಯಿ ಹಾಲು ಬೇರಾವುದಕ್ಕೂ ಸಮಾನವಲ್ಲ, ಮಗುವಿಗೆ ದಿವ್ಯೌಷಧಿ- ಡಾ.ಕಾಂಚನಾ

0

Rotary Club Shimoga ಇನ್ನರ್ ವೀಲ್ ಕ್ಲಬ್ ಆಫ್ ಶಿವಮೊಗ್ಗ ರಿವರ್ ಸೈಡ್ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಇವರ ಸಂಯುಕ್ತ ಆಶ್ರಯದಲ್ಲಿ, ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ “ತಾಯಿ ಹಾಲು ಮಕ್ಕಳಿಗೆ ಅಮೃತ” ಎಂಬ ಧ್ಯೇಯ ವಾಕ್ಯದೊಂದಿಗೆ ನಾಡಹಬ್ಬದಂತಾಗಿ ನಡೆದ ಶ್ರೇಷ್ಠ ಆರೋಗ್ಯ ಜಾಗೃತಿ ಕಾರ್ಯಕ್ರಮ, ಮಿಳ್ಳಗಟ್ಟ ಸರ್ಕಾರಿ ಶಾಲೆಯ ಅಂಗನವಾಡಿ ಕೇಂದ್ರದಲ್ಲಿ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಡಾ. ಕಾಂಚನಾ, ವೈದ್ಯಾಧಿಕಾರಿ, ನಗರ ಆರೋಗ್ಯ ಕೇಂದ್ರ, ಶಿವಮೊಗ್ಗ ಇವರು ಉದ್ಘಾಟಿಸಿ ಮಾತನಾಡಿದರು. ಅವರು ತಾಯಿ ಹಾಲಿನ ಪೌಷ್ಟಿಕತೆಯ ಮಹತ್ವ, ಮಗುವಿನ ಆರೋಗ್ಯದಲ್ಲಿ ಅದರ ಪಾತ್ರ, ತಾಯಂದಿರ ಆಹಾರ ನಿಯಮಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು. “ತಾಯಿ ಹಾಲು ಬೇರಾವುದಕ್ಕೂ ಸಮಾನವಲ್ಲ. ಇದು ಔಷಧಿಯಂತೆ ಕೆಲಸ ಮಾಡುವ ನೈಸರ್ಗಿಕ ಪೌಷ್ಟಿಕಾಂಶ,” ಎಂದು ಅವರು ಒತ್ತಿ ಹೇಳಿದರು.

ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಶೀಲಾ ಸುರೇಶ್ ಅವರು ಹೆಣ್ಣುಮಕ್ಕಳ ರಕ್ಷಣೆಗಾಗಿ “ಗುಡ್ ಟಚ್ – ಬ್ಯಾಡ್ ಟಚ್” ಕುರಿತು ತಾಯಂದಿರಲ್ಲಿ ಅರಿವು ಮೂಡಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭ ಎಲ್ಲಾ ತಾಯಂದಿರಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಿ ಶುಭಾಶಯಗಳನ್ನು ಕೋರಿದರು.

ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷರಾದ ಶ್ರೀ ಕೆ.ಎಸ್. ವಿಶ್ವನಾಥ ನಾಯಕ ಅವರು “ತಾಯಿ” ಎಂಬ ಪದದ ಒಳರಂಗವನ್ನು ಮನಮಿಡಿಯುವ ಶೈಲಿಯಲ್ಲಿ ವಿವರಿಸಿದರು. “ತಾಯಿಯ ಪ್ರೀತಿ ಮತ್ತು ತಾಯಿಯ ಎದೆಹಾಲು ಎರಡೂ ಶುದ್ಧವಾದ ನಿಸ್ವಾರ್ಥದ ದೀಪಗಳು,” ಎಂಬ ಸಂದೇಶವನ್ನು ಅವರು ನೀಡಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಪ್ರತಿಮಾ ಡಾಕಪ್ಪಗೌಡ ರವರು ನಿರೂಪಣೆಯನ್ನು ನಿಭಾಯಿಸಿ ಸಂಪೂರ್ಣ ಕಾರ್ಯಕ್ರಮವನ್ನು ಸೊಗಸಾಗಿ ನಿರ್ವಹಿಸಿ ಯಶಸ್ವಿಗೊಳಿಸಲು ಪ್ರಮುಖ ಪಾತ್ರವಹಿಸಿದರು.

ಹಾಗೆಯೇ ಇನ್ನರ್ ವೀಲ್ ಕಾರ್ಯದರ್ಶಿ ಶ್ರೀಮತಿ ರೂಪಾ ರವಿ, ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀ ನಿತಿನ್ ಯಾದವ್, ಶ್ರೀಮತಿ ಸುಪ್ರಿಯಾ ಜಗನ್ನಾಥ್ ಹಾಗೂ ಇನ್ನರ್ ವೀಲ್ ಕ್ಲಬ್‌ನ ಹಲವು ಸಕ್ರಿಯ ಮಹಿಳಾ ಸದಸ್ಯರು ತಮ್ಮ ಸನ್ನಿಧಿಯಿಂದ ಕಾರ್ಯಕ್ರಮಕ್ಕೆ ನಿಜವಾದ ಸೌಂದರ್ಯ ತಂದರು.

Rotary Club Shimoga ರೋಟರಿ ಕ್ಲಬ್ ರಿವರ್ ಸೈಡ್‌ನ ಮಾಜಿ ಅಧ್ಯಕ್ಷರಾದ ಮಲ್ಲೇಶ್ ಸಿ.ಎಂ., ದೇವೇಂದ್ರಪ್ಪ ಆರ್., ಪ್ರತಾಪ್ ಎಲ್. ಹಾಗೂ ಅನೇಕ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಸಹ ಭಾಗವಹಿಸಿ ತಮ್ಮ ಅನುಭವದ ಆಧಾರದಲ್ಲಿ ತಾಯಂದಿರಿಗೆ ಉತ್ಸಾಹ ತುಂಬಿದರು.

ಅಂಗನವಾಡಿ ಶಿಕ್ಷಕರು, ಸಮುದಾಯ ಪ್ರೇರಕರು, ಸ್ಥಳೀಯ ತಾಯಂದಿರು, ಗರ್ಭಿಣಿಯರು ಸೇರಿ ಹಲವು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ ಈ ಕಾರ್ಯಕ್ರಮ, ತಾಯಿ ಹಾಲಿನ ಪವಿತ್ರತೆಯ ಪಾಠವನ್ನು ಎಲ್ಲರ ಹೃದಯದಲ್ಲಿ ಅಚ್ಚಳಿಯದೆ ನಿರಂತರವಾಗಿ ಉಳಿಯುವಂತೆ ಮಾಡಿದರು.

Department of Youth Empowerment and Sports ಶಿವಮೊಗ್ಗ ಜಿಲ್ಲೆಯಲ್ಲಿನ ತಾಲ್ಲೂಕು‌ ಮಟ್ಟದ ದಸರಾ ಕ್ರೀಡಾಕೂಟ, ನಡೆಸಲಿರುವ ದಿನಾಂಕಗಳ ಮಾಹಿತಿ

0

Department of Youth Empowerment and Sports ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2025-26 ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ.

ಕ್ರೀಡಾ ಕೂಟವನ್ನು ಆಯಾ ತಾಲ್ಲೂಕುಗಳಲ್ಲಿ ಆಯೋಜನೆ ಮಾಡಲಾಗಿದೆ. ದಿ: 16-08-2025 ರಂದು ನೆಹರು ಕ್ರೀಡಾಂಗಣ ಶಿವಮೊಗ್ಗ. ದಿ: 17-08-2025 ರಂದು ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ ತೀರ್ಥಹಳ್ಳಿ. ದಿ: 22-08-2025 ತಾಲ್ಲೂಕು ಕ್ರೀಡಾಂಗಣ ಶಿಕಾರಿಪುರ. ದಿ: 23-08-2025 ರಂದು ತಾಲ್ಲೂಕು ಕ್ರೀಡಾಂಗಣ ಹೊಸನಗರ. ದಿ: 24-08-2025 ರಂದು ನೆಹರೂ ಮೈದಾನ ಸಾಗರ, ವಿ.ಐ.ಎಸ್.ಎಲ್. ಕ್ರೀಡಾಂಗಣ ಭದ್ರಾವತಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಸೊರಬ ಇಲ್ಲಿ ನೆಡೆಸಲಾಗುವುದು.

ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಫುಟ್ ಬಾಲ್, ಖೋ ಖೋ, ಕಬಡ್ಡಿ, ಥ್ರೋಬಾಲ್, ಮತ್ತು ಯೋಗಾಸನ ಸ್ಪರ್ಧೆಗಳನ್ನು ಮಾತ್ರ ಏರ್ಪಡಿಸಲಾಗಿದೆ.

ವೈಯಕ್ತಿಕ ಕ್ರೀಡೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ.

ಆಯಾ ತಾಲ್ಲೂಕಿನ ಕ್ರೀಡಾಪಟುಗಳು ಆಯಾ ತಾಲ್ಲೂಕಿನಲ್ಲಿ ಮಾತ್ರ ಭಾಗವಹಿಸಲು ಅರ್ಹತೆ ಹೊಂದಿರುತ್ತಾರೆ. ಭಾಗವಹಿಸುವ ಸಮಯದಲ್ಲಿ ಮೂಲ ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿರುತ್ತದೆ. ಬೇರೆ ತಾಲ್ಲೂಕಿನ ಆಟಗಾರರು ಭಾಗವಹಿಸಬೇಕಾದರೆ ಆ ತಾಲ್ಲೂಕಿನಲ್ಲಿ ಅವರು ಶಿಕ್ಷಣ ಪಡೆಯುತ್ತಿರಬೇಕು. ಒಂದು ವೇಳೆ ಬೇರೆ ತಾಲ್ಲೂಕಿನ ಆಟಗಾರರು ಕ್ರೀಡೆಯಲ್ಲಿ ಪಾಲ್ಗೂಂಡಲ್ಲಿ ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಲಾಗುವುದು.

Department of Youth Empowerment and Sports ಒಬ್ಬರಿಗೆ ಎರಡು ವೈಯಕ್ತಿಕ ಹಾಗೂ ಒಂದು ಗುಂಪು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದ್ದು, ಬೆಳಿಗ್ಗೆ 9.30 ಗಂಟೆಯೊಳಗೆ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಆಟವಾಡುವ ಅವಕಾಶ ಮತ್ತು ಉಪಹಾರದ ವ್ಯವಸ್ಥೆ ಇರುತ್ತದೆ. ಕ್ರೀಡಾಕೂಟವನ್ನು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ಹಾಜರಿರದ ತಂಡಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು, ಮನವಿಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳು, ದೂ.ಸಂ.08182-223328 ಗೆ ಸಂರ್ಕಿಸಬಹುದು ಎಂದು ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ ತಿಳಿಸಿದ್ದಾರೆ.

Klive Special Article ನಿಮ್ಮೂರಿನ ಇತಿಹಾಸ ನಿಮಗೆಷ್ಟು ಗೊತ್ತು? ವಿವರಣೆ: ದಿಲೀಪ್ ನಾಡಿಗ್. ಶಿವಮೊಗ್ಗ

0

Klive Special Article ಕೆಳದಿ ಸಾಮ್ರಾಜ್ಯ ಎಂದರೆ ಮಲೆನಾಡಿನ ಆತ್ಮ, ಕೆಳದಿಯೆಂದರೆ ಕಲೆ, ಸಾಹಿತ್ಯ, ಸಂಸ್ಕೃತಿಗಳ ಸಮ್ಮಿಳತವಾದ ರಸಾಯನ, ಈ ಸಾಮ್ರಾಜ್ಯದ ಲ್ಲಿ ಏನಿತ್ತು ಎಂದು ಕೇಳುವುದರ ಬದಲು ಏನಿರಲಿಲ್ಲ ಎಂದು ಯೋಚಿಸುವ ಹಾಗೆ ಮಾಡುತ್ತದೆ. ಕಲೆಗಾರರು, ಕವಿಗಳು, ಸಾಹಿತ್ಯಗಳ ಸುಗ್ಗಿಯ ತವರೂರು, ಯುದ್ಧ ಎಷ್ಟೋ ನಡೆದವು, ಆದರೆ ಅಶಾಂತಿ ತಲೆದೋರಿದ ಪ್ರಸಂಗಗಳೇ ಇಲ್ಲ. ಕೆಳದಿ ಸಾಮ್ರಾಜ್ಯದ ಮಲೆನಾಡಿನ ಜನ ಸಮೃದ್ಧರಾಗಿದ್ದರು, ತಾವೂ ಸಮೃದ್ದರಾಗಿ ಇತರರಿಗೂ ಸಂತೋಷದಿಂದ ಅತಿಥಿ ದೇವೋಭವ ಎಂದು ಹಂಚಿದವರು. ಇದು ಮಲೆನಾಡಿನ ಶತ,ಶತಮಾನದಿಂದಲೂ ನಡೆದು ಬಂದ ಸಂಸ್ಕಾರ, ಸಂಸ್ಕೃತಿಗಳ ಪ್ರಭಾವ. ಕೆಳದಿಯ ಮಲ್ಲರು, ಮಲೆನಾಡಿಗರ ಮಾತು, ವಿನೋದಗಳು, ನೃತ್ಯ, ಸಂಗೀತ, ನಾಟಕ, ಯಕ್ಷಗಾನ, ನಂದಿಕೋಲು, ಗೊಂಬೆಯಾಟ, ದೊಂಬರಾಟ, ಮಾಯಾ ಜಾಲ, ಕಣ್ಕಟ್ಟು ವಿದ್ಯೆಗಳು, ಧರ್ಮರಾಯನ ಕರಗ ಉತ್ಸವಗಳು, ಜಾತ್ರೆಗಳು, ಎಲ್ಲವೂ ಕೆಳದಿ ಸಾಮ್ರಾಜ್ಯದ, ಅಪ್ಪಟ ಮಲೆನಾಡಿನ ಸೊಗಡು.

ಕೆಳದಿಯ ಹಿರಿಯ ವೆಂಕಟಪ್ಪ ನಾಯಕರು (ಕ್ರಿ.ಶ. 1563-1629) ಇಕ್ಕೇರಿ ಯ ಅರಮನೆಯಲ್ಲಿ ನಾಟಕ ಶಾಲೆಯೊಂದನ್ನು ಕಟ್ಟಿಸಿದ್ದರೆಂದು ಕೆಳದಿ ನೃಪವಿಜಯದಲ್ಲಿದೆ.
“ಮುಗುಳ್ದಿಕ್ಕೇರಿಯರಮನೆಯೊಳ್ ವಿಚಿತ್ರತರರಚನಾಕೌಶಲ್ಯದಿಂ ನಾಟಕಶಾಲೆಯಂ ನಿರ್ಮಾಣಂಗೈಸಿ” ಎಂದು ಹೇಳಲಾಗಿದೆ.

ಚೊಕ್ಕನಾಥನೆಂಬ ಕವಿಯು ಕೆಳದಿಯ ಕಿರಿಯ ಅರಸ ಬಸವಪ್ಪನಾಯಕನ ಆಸ್ಥಾನ ಕವಿಯಾಗಿದ್ದ. ಇವನು ಸಂಸ್ಕೃತ ದಲ್ಲಿ ಬರೆದ”ಸೇವಂತಿಕಾಪರಿಣಯ” ನಾಟಕದಲ್ಲಿ ಕೇರಳದ ರಾಜ ಮಿತ್ರವರ್ಮನ ಪುತ್ರಿ ಸೇವಂತಿಗೂ ಕಿರಿಯ ಬಸಪ್ಪನಾಯಕನಿಗೂ ವಿವಾಹ ನಡೆದಂತೆ ಚಿತ್ರಿಸಿದ್ದಾನೆ.
ಇನ್ನು ನರ್ತಕಿಯರು ಬಹುಶಃ ವೇಶ್ಯೆ ಯರೆ ಅಧಿಕವಾಗಿರುತ್ತಿದ್ದರು. ಆಸ್ಥಾನ ನರ್ತಕಿಯರು, ಆಸ್ಥಾನ ವಿದ್ವಾಂಸ ರು, ಆಸ್ಥಾನ ಜ್ಯೋತಿಷ್ಯರು, ರಾಜವೈದ್ಯರು, ಕರಣಿಕರು, ಶಾನುಭೋಗರು, ರಾಜ ಪುರೋಹಿತರು, ಅರ್ಚಕರು, ಆಗಮಿಕರು, ಸುಂಕದವರು, ಮನೆವಾರ್ತೆಯವರು, ಓಲೆಕಾರರು, ಹರಿಗೋಲಿನವರು, ಇವರೆಲ್ಲರೂ ಇರುತ್ತಿದ್ದರು, ಜೊತೆಗೆ ಬೇಹುಗಾರಿಕಾ ಕೆಲಸವನ್ನೂ ಮಾಡುತ್ತಿದ್ದರು. ನರ್ತಕಿಯರಿಗೆ “ಗಣಿಕೆಯರು” ಎಂದೂ ಕರೆಯಲಾಗುತ್ತಿತ್ತು. ಆಸ್ಥಾನ ನರ್ತಕಿಯರಿಗೆ ರಾಜ ನರ್ತಕಿ ಎಂದು ಕರೆಯುತ್ತಿದ್ದರು.

Klive Special Article ಕೆಳದಿ ಆಸ್ಥಾನ ನರ್ತಕಿಯಾಗಿದ್ದ ಹಿರೇಜೇನಿಯ ಜಂಬುಖಂಡಿ ಚೆನ್ನಿ ಎಂಬ ಪ್ರಸಿದ್ಧ ವೇಶ್ಯೆಯು ಇಲ್ಲಿ ಮಹತ್ತಿನ ಮಠವನ್ನು ಕಟ್ಟಿಸಿದ್ದಳೆಂದು ಹೇಳುತ್ತಾರೆ. ಕಾರಣಗಿರಿ(ಕಾರ್ಗಡಿ) ಅಕ್ಕಮ ಎಂಬುವವಳು ಪ್ರಸಿದ್ದ ನೃತ್ಯಗಾರ್ತಿಯಾಗಿದ್ದು ಇವಳಹೆಸರಿನಲ್ಲಿ “ಅಕ್ಕಮಚೌಕಿ” ಎಂಬ ಕೆರೆಯು ಇದ್ದು ಇದರ ದಡದಲ್ಲಿ ಅವಳು ವಾಸ ಮಾಡುತ್ತಿದ್ದ ಮನೆಯ ಅವಶೇಷಗಳು ಈಗಲೂ ಇದೆ.

CM Siddharamaiah ಸಾರಿಗೆ ನಿಗಮ ನೌಕರರ ಮುಷ್ಕರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಹತ್ವದ ಸಭೆ

0

CM Siddharamaiah ವಿಧಾನಸೌಧ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಸಿಎಂ ಸಿದ್ದರಾಮಯ್ಯನವರು ಸಭೆ ನಡೆಸಿದರು.

ಸಾರಿಗೆ ನಿಗಮದ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಈಗಾಗಲೇ ಕೆಲವು ಸುತ್ತಿನ ಸಭೆ ನಡೆಸಲಾಗಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ನಾಳೆ ಕರೆದಿರುವ ಮುಷ್ಕರವನ್ನು ವಾಪಾಸು ಪಡೆಯಬೇಕು ಎಂದರು.

2016ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ವೇತನ ಪರಿಷ್ಕರಣೆ ಮಾಡಿದ್ದೆ. ಆಗ ಶೇ. 12.5 ರಷ್ಟು ಹೆಚ್ಚಳ ಮಾಡಲಾಗಿತ್ತು. ಬಳಿಕ 2020 ರಲ್ಲಿ ಕೋವಿಡ್ ಕಾರಣಕ್ಕೆ ಅಂದಿನ ಸರ್ಕಾರ ವೇತನ ಪರಿಷ್ಕರಣೆ ಮಾಡಿಲ್ಲ. ದಿನಾಂಕ 2023ರ ಮೇ 01 ರ ಹಿಂದಿನ ಸರ್ಕಾರ ಇದ್ದಾಗ ವೇತನ ಪರಿಷ್ಕರಣೆ ಒಪ್ಪಂದವಾಗಿತ್ತು. ಆಗ ಮೂಲವೇತನ 15 ಶೇಕಡಾ ಪರಿಷ್ಕರಣೆ ಮಾಡಲು ತೀರ್ಮಾನವಾಗಿತ್ತು. ಆಗ ನೀವು ಅದನ್ನು ಒಪ್ಪಿಕೊಂಡಿದ್ದೀರಿ ಎಂದು ತಿಳಿಸಿದರು.

ವೇತನ ಪರಿಷ್ಕರಣೆ ಕುರಿತಾಗಿ ಶ್ರೀನಿವಾಸ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ದಿನಾಂಕ 2022ರ ಜೂನ್‌ 01 ರಿಂದ 2023ರ ಫೆಬ್ರವರಿ 28ರ ವರೆಗೆ ಬಾಕಿ ವೇತನ ಕೊಡಬಹುದು ಎಂದು ಶಿಫಾರಸು ಮಾಡಿತ್ತು.ಸಾರಿಗೆ ಸಂಘಟನೆಗಳ ಪ್ರತಿನಿಧಿಗಳು ಸಹ ಸಮಿತಿ ಮುಂದೆ ಹಾಜರಾಗಿ ಅಹವಾಲು ಸಲ್ಲಿಸಿದ್ದರು. ಶ್ರೀನಿವಾಸ ಸಮಿತಿಯ ಶಿಫಾರಸ್ಸು ಸರ್ಕಾರ ಒಪ್ಪಿಕೊಂಡಿದೆ. ನೀವು ಸಹ ಸದರಿ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಳ್ಳಬೇಕು ಎಂದರು.

ಸಮಿತಿಯ ಶಿಫಾರಸು ಆಧಾರದಲ್ಲಿ ಈ ಕುರಿತು ದಿನಾಂಕ 2023ರ ಮಾರ್ಚ್‌ 01 ರಿಂದ ಜಾರಿಗೆ ಬರುವಂತೆ ಅಂದಿನ ಸರ್ಕಾರ ಅಧಿಸೂಚನೆ ಸಹ ಹೊರಡಿಸಿತ್ತು. ಆದರೆ ಈಗ 38 ತಿಂಗಳ ಬಾಕಿ ವೇತನ ಪಾವತಿಗೆ ಬೇಡಿಕೆ ಇರಿಸಿರುವುದು ಸಮಂಜಸವಲ್ಲ ಎಂದರು.

ನಾವು ಅಧಿಕಾರಕ್ಕೆ ಬಂದಾಗ ಎಲ್ಲಾ ನಿಗಮಗಳಿಗೆ ಒಟ್ಟಾರೆ 4 ಸಾವಿರ ಕೋಟಿ ಸಾಲ ಇತ್ತು. 2018 ರಲ್ಲಿ ಕೇವಲ ರೂ.14 ಕೋಟಿ ಮಾತ್ರ ಬಾಕಿಯಿತ್ತು. ಪ್ರಸ್ತುತ ಯಾವ ಸಾರಿಗೆ ನಿಗಮ ಸಹ ಲಾಭದಲ್ಲಿಲ್ಲ. ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲಾ ನಿಗಮದವರು ಸಹಕರಿಸಬೇಕು ಎಂದು ತಿಳಿಸಿದರು.

ಸಾರಿಗೆ ನೌಕರರ ಸಂಘದ ಚುನಾವಣೆ ನಡೆಸುವ ಕುರಿತು ಪರಿಶೀಲನೆ ನಡೆಸಲಾಗುವುದು. ಎಲ್ಲಾ ಅಹವಾಲುಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಸರ್ಕಾರ ಸಿದ್ಧವಿದೆ ಎಂದು ಮಾಹಿತಿ ನೀಡಿದರು.

CM Siddharamaiah ಸಭೆಯಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆಎಸ್‌ಆರ್‌ಟಿಸಿ ಅಧ್ಯಕ್ಷರಾದ ಎಸ್.ಆರ್. ಶ್ರೀನಿವಾಸ್, ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಅಧ್ಯಕ್ಷ ರಾಜುಕಾಗೆ, ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

B.Y. Raghavendra ಶಿವಮೊಗ್ಗಕ್ಕೆ ಹೊಸ ಅತಿಥಿ ಪ್ರವಾಸ ಆಕರ್ಷಣೆ

0

B.Y. Raghavendra ಭಾರತೀಯ ವಾಯುಪಡೆಯಲ್ಲಿ ಪೈಲಟ್ ತರಬೇತಿಗಾಗಿ ಎಚ್.ಎ.ಎಲ್ ನಿರ್ಮಿಸಿರುವ ಎಚ್.ಜೆ.ಟಿ 16 – ಕಿರಣ್ ಯುದ್ಧ ವಿಮಾನ ತನ್ನ ಸುದೀರ್ಘ 50 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ನೀಡಲಾಗಿದೆ.

ಈ ಯುದ್ಧ ತರಬೇತಿ ವಿಮಾನವನ್ನು ನಮ್ಮ ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಸ್ಥಾಪಿಸುವ ಸಲುವಾಗಿ ಮಾನ್ಯ ರಕ್ಷಣಾ ಸಚಿವರಾದ ಶ್ರೀ ರಾಜಾನಾಥ ಸಿಂಗ್ ಅವರಲ್ಲಿ ಮಾಡಿಕೊಂಡ ಮನವಿಯ ಪರಿಣಾಮ ಕಳೆದ ಎರಡು ದಿನಗಳ ಹಿಂದೆ ನಗರಕ್ಕೆ ಆಗಮಿಸಿದೆ.

ಇಂದು ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಯುದ್ಧ ವಿಮಾನ ಅಳವಡಿಕೆಗೆ ಬೇಕಾದ ಅಗತ್ಯ ಕ್ರಮಗಳ ಕುರಿತು ಚರ್ಚಿಸಿ ಪರಿಶೀಲನೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಯಿತು.

ಈಗಾಗಲೇ ಯುದ್ಧ ಟ್ಯಾಂಕರ್ ಅಳವಡಿಕೆ ಮಾಡಿ ಜನಾಕರ್ಷಣೆಯ ಕೇಂದ್ರವಾಗಿರುವ ಈ ಸ್ಥಳದಲ್ಲಿ ಮತ್ತೊಂದು ಯುದ್ಧ ವಿಮಾನ ಅಳವಡಿಕೆ ಮಾಡುತ್ತಿರುವುದು ಕ್ಷೇತ್ರದ ಜನರಲ್ಲಿ ದೇಶಾಭಿಮಾನ, ಸೈನ್ಯಕ್ಕೆ ಸೇರುವ ಬಯಕೆ ಹೆಚ್ಚಾಗಲಿದೆ ಎಂಬ ಆಶಾಭಾವ ನನ್ನದು.

B.Y. Raghavendra ಈ ಮಹತ್ಕಾರ್ಯಕ್ಕೆ ಸಹಕರಿಸಿದ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ರಕ್ಷಣಾ ಸಚಿವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅವರು ಹೇಳಿದ್ದಾರೆ.