Tuesday, August 11, 2026
Tuesday, August 11, 2026
Home Blog Page 219

Raghavendra Yoga Center ಎಸ್‌ಆರ್‌ವೈ ಕೇಂದ್ರದಿಂದ ರಥಸಪ್ತಮಿ ದಿನ 108 ಸೂರ್ಯ ನಮಸ್ಕಾರ ಯಜ್ಞ ಆಯೋಜನೆ

0

Raghavendra Yoga Center ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ರಾಘವೇಂದ್ರ ಯೋಗ ಕೇಂದ್ರ ಹಾಗು ಪತಂಜಲಿ ಯೋಗ ಸಮಿತಿಯಿಂದ ಜ. 25ರ ಭಾನುವಾರ ಬೆಳಿಗ್ಗೆ 5.30ರಿಂದ 7.30ರವರೆಗೆ ವೀರಶೈವ ಕಲ್ಯಾಣ ಮಂದಿರದಲ್ಲಿ ಸೂರ್ಯ ನಮಸ್ಕಾರ ಯಜ್ಞವನ್ನು ಆಯೋಜಿಸಲಾಗಿದೆ.

ಸೂರ್ಯ ದೇವನನ್ನು ಆರಾಧಿಸುವ ದಿನ ರಥಸಪ್ತಮಿ ನಿಮಿತ್ತ 108 ಸೂರ್ಯ ನಮಸ್ಕಾರ ಯಜ್ಞ ನಡೆಯಲಿದೆ. ಕೇಂದ್ರದ ಎಲ್ಲಾ ಯೋಗ ಬಂದುಗಳು ಹಾಗೂ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಲು ಅವಕಾಶವಿದ್ದು, ಸಕಾಲದಲ್ಲಿ ಭಾಗವಹಿಸಿ ಯಜ್ಞವನ್ನು ಯಶಸ್ವಿಗೊಳಿಸಲು ಕೇಂದ್ರದ ಯೋಗ ಸಾಮ್ರಾಟ್ ಗೋಪಾಲಕೃಷ್ಣ ಅವರು ವಿನಂತಿಸಿದ್ದಾರೆ.

ಈ ಅಂಗವಾಗಿ ಜ. 22ರ ನಾಳೆಯಿಂದ ಜ. 24ರವರೆಗೆ ಬೆಳಿಗ್ಗೆ ಮತ್ತು ಸಂಜೆ ಯೋಗ ಕ್ಲಾಸ್ ಸಮಯದಲ್ಲಿ ಉಚಿತವಾಗಿ ಸೂರ್ಯ ನಮಸ್ಕಾರ ಹೇಳಿಕೊಡಲಾಗುತ್ತಿದೆ. ಆಸಕ್ತರು ಮಾಹಿತಿಗೆ ಗೋಪಾಲಕೃಷ್ಣ ಮೊ. 9448414849, ಶಶಿಮೌಳಿ ಮೊ. 9742339404ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

Department of Youth Empowerment and Sports ಶಿವಮೊಗ್ಗ ಜಿಲ್ಲೆಗೆ ಕರ್ನಾಟಕ ಕ್ರೀಡಾಕೂಟದಲ್ಲಿ ಎರಡು ಪದಕ

0

Department of Youth Empowerment and Sports ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟುಗಳು ಶೋಭಿಸಿದರು.

ಜನವರಿ 18 ರಿಂದ 20 ರವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಪ್ರತಿನಿಧಿಸಿದ ಶ್ರೀಮತಿ ಮೀನಾಕ್ಷಿ 57-60 ಕೆಜಿ ತೂಕದ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೆ, ಯೋಗಾನಂದ +90 ಕೆಜಿ ತೂಕದ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಇವರೊಂದಿಗೆ ದಿಗಂತ್ ಮತ್ತು ಶೇಕ್ ಮೊಹಮ್ಮದ್ ಸಾದ್ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆಯನ್ನು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ ಮಾಡಿದರು.

ಈ ಸಂದರ್ಭದಲ್ಲಿ ಶ್ರೀಮತಿ ಕನ್ನಿಕಾ ಪರಮೇಶ್ವರಿ, ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ ಮಂಜೇಗೌಡ, ಪ್ರಧಾನ ಕಾರ್ಯದರ್ಶಿ ಸಾಯಿ ಸತೀಶ್, ತುಮಕೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ತುಮಕೂರು ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಕುಮಾರ್ ಇದ್ದರು.

Department of Youth Empowerment and Sports ವಿಶೇಷವಾಗಿ ಶಿವಮೊಗ್ಗದಿಂದ ಈ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಪ್ರೀತಿ ಶ್ರೀ ಭಾಗವಹಿಸಿದ್ದರು ಮತ್ತು ಕೋಚ್ ಆಗಿ ಸಚಿನ್ ಟಿ ಎಸ್ ಇದ್ದರು. ವಿಜೇತ ಕ್ರೀಡಾಪಟುಗಳಿಗೆ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಶುಭಕೋರಿದ್ದಾರೆ

ಶಿವಮೊಗ್ಗ :ಮೆಸ್ಕಾಂ ಜನ ಸಂಪರ್ಕ ಸಭೆ

0

ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ -3 ರವರೆಗೆ ಗುಡ್‌ಲಕ್ ಸರ್ಕಲ್ ಹತ್ತಿರ, ಎಸ್. ವಿ. ಬಡಾವಣೆಯ ಮೆಸ್ಕಾಂ ಕಚೇರಿಯಲ್ಲಿ ಜ.23 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಗ್ರಾಹಕರು ಜನಸಂಪರ್ಕ ಸಭೆಗೆ ಹಾಜಾರಾಗಿ ತಮ್ಮ ಅಹವಾಲುಗಳನ್ನು ನೀಡಬಹುದಾಗಿರುತ್ತದೆ. ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

Pradhan Mantri Shramayogi Man-Dhan Yojana ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ವಿಶೇಷ ನೋಂದಣಿ ಅಭಿಯಾನ

0

Pradhan Mantri Shramayogi Man-Dhan Yojana ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ಹಾಗೂ National Pension Scheme for the Traders and self Employed Persons -NPS-Traders ಯೋಜನೆಗಳಡಿ ಅಸಂಘಟಿತ ವಲಯದ ಕಾರ್ಮಿಕರನ್ನು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳನ್ನು ನೋಂದಾಯಿಸಲು 15 ಜನವರಿ ರಿಂದ 15 ಮಾರ್ಚ್ 2026 ರವರೆಗೆ “ವಿಶೇಷ ನೋಂದಣಿ ಅಭಿಯಾನ” ವನ್ನು ಹಮ್ಮಿಕೊಳ್ಳಲಾಗಿದೆ.
18 ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಈ ಯೋಜನೆಯಡಿ ನೋಂದಾಯಿಸಬಹುದಾಗಿದ್ದು, ವಯಸ್ಸಿಗೆ ಅನುಗುಣವಾಗಿ ಮಾಸಿಕವಾಗಿ ರೂ. 55/- ರಿಂದ ರೂ. 200/- ರವರೆಗೆ ವಂತಿಕೆ ಪಾವತಿ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರದ ವತಿಯಿಂದ ಅಷ್ಟೇ ವಂತಿಕೆ ಪಾವತಿಸಿ ಬ್ಯಾಂಕ್ ಖಾತೆಯಲ್ಲಿ ಈ ಮೊತ್ತವನ್ನು ಸಂಗ್ರಹಿಸಲಾಗುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಮಾಸಿಕ ರೂ.3000/- ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ.
Pradhan Mantri Shramayogi Man-Dhan Yojana ಈ ಯೋಜನೆಯಡಿ ನರೇಗಾ ಕಾರ್ಮಿಕರು, ಎಸ್.ಹೆಚ್.ಜಿ. ಸದಸ್ಯರು, ಕೃಷಿ ಕಾರ್ಮಿಕರು. ಅಂಗನವಾಡಿ ಕಾರ್ಮಿಕರು, ಮಧ್ಯಾಹ್ನದ ಬಿಸಿ ಊಟದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಮೀನುಗಾರರು ಹಾಗೂ ಇನ್ನಿತರೆ ಅಸಂಘಟಿತ ವಲಯಗಳ ಕಾರ್ಮಿಕರು ಹಾಗೂ ವ್ಯಾಪಾರಿಗಳ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಮೊದಲ ತಿಂಗಳ ವಂತಿಕೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಯಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕಾರ್ಮಿಕ ಅಧಿಕಾರಿಗಳು ಶಿವಮೊಗ್ಗ ಉಪವಿಭಾಗ, ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಛೇರಿ, ಶಿವಮೊಗ್ಗ ಹಾಗೂ ತಾಲೂಕು ಕಾರ್ಮಿಕ ನಿರೀಕ್ಷಕರುಗಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

Klive Special Article ಶ್ರೀಮದ್ಭಗವದ್ಗೀತೆ ಮತ್ತುಅಪರಾಧ ಶಾಸ್ತ್ರ

0


ಭಾಗ: 3
ಲೇ: ಡಾ.ರಾಮಕೃಷ್ಣ ಮುದ್ದೇಪಾಲ.

Klive Special Article ಅಪರಾಧ ನಿಯಂತ್ರಣದ ದೃಷ್ಟಿಯಿಂದ ಹಲವು ಆಯಾಮಗಳಲ್ಲಿ ಭಗವದ್ಗೀತೆಯನ್ನು ಪ್ರಯೋಗಿಸಬಹುದು.
೧. ನೈತಿಕ ಮೌಲ್ಯಗಳಿಂದ ವ್ಯಕ್ತಿತ್ವ ಪರಿವರ್ತನೆ:
ಅಭಯಂ ಸತ್ವಸಂಶುದ್ಧಿರ್ಜ್ಞಾನಯೋಗವ್ಯವಸ್ಥಿತಿಃ
ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್‌
ಅಹಿಂಸಾ ಸತ್ಯಮಕ್ರೋಧಸ್ತ್ಯಾಗಃ ಶಾಂತಿರಪೈಶುನಮ್‌
ದಯಾ ಭೂತೇಷ್ವಲೋಲುಪ್ತ್ವಂ ಮಾರ್ದವಂ ಹ್ರೀರಚಾಪಲಮ್‌
ತೇಜಃ ಕ್ಷಮಾ ಧೃತಿಃ ಶೌಚಮದ್ರೋಹೋ ನಾತಿಮಾನಿತಾ
ಭವಂತಿ ಸಂಪದಂ ದೈವೀಮಭಿಜಾತಸ್ಯ ಭಾರತII 16.1,2,3II
ದೈವೀಸಂಪತ್ತುಗಳೆಂದು ಕರೆಯಲ್ಪಡುವ ೨೬ ಗುಣಗಳು ನೈತಿಕ ಮೌಲ್ಯಗಳಾಗಿದ್ದು ಅವುಗಳಲ್ಲಿ ಕೆಲವನ್ನು ಅಳವಡಿಸಿಕೊಂಡರೂ ಅವು ವ್ಯಕ್ತಿತ್ವ ಪರಿವರ್ತನೆ ಮಾಡಬಲ್ಲವು ಅಥವಾ ಆದರ್ಶ ವ್ಯಕ್ತಿತ್ವವನ್ನು ರೂಪಿಸಿ ಅಪರಾಧೀ ಮಾನಸಿಕತೆಯನ್ನು ತೊಡೆಯಬಲ್ಲವು. ಇವುಗಳಿಗೆ ವಿರುದ್ಧವಾಗಿರುವ ಆಸುರೀ ಸಂಪತ್ತುಗಳು ಅಪರಾಧಕ್ಕೆ ಪೂರಕ ಅಂಶಗಳಾಗಿವೆ.
ದಂಭೋ ದರ್ಪೋತಿಮಾನಶ್ಚ ಕ್ರೋಧಃ ಪಾರುಷ್ಯಮೇವಚ‌I
ಅಜ್ಞಾನಂ ಚಾಭಿಜಾತಸ್ಯ ಪಾರ್ಥಸಂಪದಮಾಸುರೀಮ್II16.4II

  1. ಅಪರಾಧ ಮೂಲದ ವಿಶ್ಲೇ಼ಷಣೆ: ೧೪ನೇ ಅಧ್ಯಾಯದಲ್ಲಿ ತ್ರಿಗುಣಗಳನ್ನು ವಿಶ್ಲೇಷಿಸಲಾಗಿದೆ. ಸತ್ವಗುಣ ನೈತಿಕ ಬದುಕಿಗೆ ಪೂರಕವಾದರೆ ರಜೋಗುಣ ಕಾಮ, ಕ್ರೋಧದಿಂದ ಮತ್ತು ತಮೋಗುಣ ಅಜ್ಞಾನದಿಂದ ಅಪರಾಧವನ್ನು ಪ್ರೇರೇಪಿಸುತ್ತವೆ.
    ೩. ನಿಷ್ಕಾಮ ಕರ್ಮಯೋಗ, ಕರ್ತವ್ಯ ಪ್ರಜ್ಞೆ : ಗೀತೆಯ ಪ್ರಸಿದ್ಧ ವಾಕ್ಯವಾದ ” ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” (೨.೪೭) ವ್ಯಕ್ತಿಗೆ ಕರ್ತವ್ಯಪ್ರಜ್ಞೆಯನ್ನು ಮೂಡಿಸಿ ಅಪರಾಧ ಪ್ರಜ್ಞೆಯನ್ನು ಹಿಮ್ಮೆಟ್ಟಿಸುತ್ತದೆ. ಪ್ರತಿಯೊಂದು ಕೃತ್ಯಕ್ಕೂ ಫಲವಿದೆ ಎಂಬ ಭಾವನೆ ವ್ಯಕ್ತಿಯನ್ನು ಅಪರಾಧ ಮಾಡಲು ಹಿಂಜರಿಯುವಂತೆ ಮಾಡುತ್ತದೆ.
    ೪. ಧರ್ಮಾಧರ್ಮ ವಿವೇಚನೆ: ನೈತಿಕ ಮೌಲ್ಯಗಳ ಸಾರವೆಂದು ಗುರುತಿಸಲ್ಪಡುವ “ಧರ್ಮ” ವನ್ನು ಭಗವದ್ಗೀತೆ ಬೋಧಿಸುತ್ತದೆ.
    ಶ್ರೇಯಾನ್‌ ಸ್ವಧರ್ಮೋ ವಿಗುಣಃ ಪರಧರ್ಮಾತ್‌ ಸ್ವನುಷ್ಠಿತಾತ್‌I
    ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃII3.35II
    ಸ್ವಧರ್ಮವು ವಿಗುಣವಾಗಿದ್ದರೂ ಚೆನ್ನಾಗಿ ಅನುಷ್ಠಾನ ಮಾಡಿದ ಪರಧರ್ಮಕ್ಕಿಂತ ಒಳ್ಳೆಯದು. ಸ್ವಧರ್ಮದಲ್ಲಿ ಮರಣವು ಶ್ರೇಯಸ್ಕರವಾದದ್ದು; ಪರಧರ್ಮವು ಭಯಂಕರವಾದದ್ದು.
    ಸ್ವಧರ್ಮಾನುಷ್ಠಾನವು ವ್ಯಕ್ತಿಯು ಅಪರಾಧದಂತಹ ಅಧಃಪಾತಕ್ಕೆ ಈಡಾಗುವುದನ್ನು ತಡೆಗಟ್ಟುತ್ತದೆ.
    ೫.ಭಕ್ತಿಮಾರ್ಗ: ಭಕ್ತಿಮಾರ್ಗವನ್ನು ಆಶ್ರಯಿಸಿದವನು ದುಷ್ಪ್ರವೃತ್ತಿಯವನಾದರೂ ಪರಿವರ್ತನೆ ಹೊಂದಿ ಪಾಪ ಬುದ್ಧಿಯನ್ನು ಕಳೆದುಕೊಳ್ಳುತ್ತಾನೆ.
    ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್‌I
    ಸಾಧುರೇವ ಸ ಮಂತವ್ಯ: ಸಮ್ಯಗ್ವ್ಯವಸಿತೋ ಹಿ ಸಃII9.30II
    ಅತ್ಯಂತ ದುರಾಚಾರಿಯಾಗಿದ್ದರೂ ಅನನ್ಯಭಕ್ತಿಯಿಂದ ನನ್ನನ್ನು ಭಜಿಸಿದರೆ ಅವನು ಸಾಧುವೆಂದೇ ತಿಳಿಯತಕ್ಕದ್ದು, ಯಾಕೆಂದರೆ ಅವನು ನಿಶ್ಚಯ ಬುದ್ಧಿಯುಳ್ಳವನು.
    ಕ್ಷಿಪ್ರಂ ಭವತಿ ಧರ್ಮತ್ಮಾ ಶಶ್ವಚ್ಛಾಂತಿಂ ನಿಗಚ್ಛತಿI
    ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿII9.31II
    Klive Special Article ಅಂಥವನು ಬೇಗ ಧರ್ಮಾತ್ಮನಾಗಿ ಶಾಶ್ವತವಾದ ಶಾಂತಿಯನ್ನು ಹೊಂದುತ್ತಾನೆ. ನನ್ನ ಭಕ್ತನು ನಾಶವಾಗುವುದಿಲ್ಲ ಎಂದು ತಿಳಿದುಕೊ.
    ೬. ಜ್ಞಾನಯೋಗ: ಒಂದು ದೃಷ್ಟಿಯಿಂದ ನೋಡಿದರೆ ಅಪರಾಧಕ್ಕೆ ಅಜ್ಞಾನವೇ ಮೂಲವಾಗಿರುತ್ತದೆ. ” ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ (೪.೩೮)” ಎಂದರೆ ಈ ಲೋಕದಲ್ಲಿ ಜ್ಞಾನಕ್ಕೆ ಸಮನಾದ ಪವಿತ್ರವಸ್ತುವು ಯಾವುದೂ ಇರುವುದಿಲ್ಲ. ಜ್ಞಾನವನ್ನು ಪಡೆದವನು ಪರಮಶಾಂತಿಯನ್ನು ಪಡೆಯುತ್ತಾನೆ.
    ೭. ಮನೋನಿಯಂತ್ರಣ: ಇದು ಅಪರಾಧನಿಯಂತ್ರಣದಲ್ಲಿ ಅತಿ ಮಹತ್ವದ ವಿಷಯ ಆಗಿದ್ದು ಮನುಷ್ಯ ಯಾಕೆ ಪಾಪ ಮಾಡುತ್ತಾನೆ ಎನ್ನುವ ಅರ್ಜುನನ ಪ್ರಶ್ನೆಗೆ ಉತ್ತರ ಕೊಡುತ್ತ ಶ್ರೀಕೃಷ್ಣನು “ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ(೩.೩೭)” ಅಂದರೆ ರಜೋಗುಣದಿಂದ ಹುಟ್ಟಿದ ಕಾಮ ಕ್ರೋಧಗಳೇ ಪಾಪಕ್ಕೆ ಕಾರಣವೆಂದು ವಿವರಿಸಿ ಇವುಗಳ ಆಶ್ರಯವಾಗಿರುವ ಇಂದ್ರಿಯ, ಮನಸ್ಸು ಬುದ್ಧಿಗಳನ್ನು ನಿಯಂತ್ರಿಸಿದರೆ ಅವುಗಳನ್ನು ನಿಯಂತ್ರಿಸಬಹುದೆಂದು ತಿಳಿಸುತ್ತಾನೆ.
    ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್‌I
    ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇII6.35II
    ಮನಸ್ಸು ದುರ್ನಿಗ್ರಹವಾದದ್ದು ಮತ್ತು ಚಂಚಲವಾದದ್ದು. ಅಭ್ಯಾಸದಿಂದಲೂ ಮತ್ತು ವೈರಾಗ್ಯದಿಂದಲೂ ಅದನ್ನು ನಿಗ್ರಹಿಸಬಹುದು.
    ೮.ಸಮದರ್ಶಿತ್ವ: ವಿದ್ಯಾವಿನಯಸಂಪನ್ನೇ…..(೫.೧೮) ಮುಂತಾದ ಶ್ಲೋಕಗಳಲ್ಲಿ ಗೀತೆಯು ಎಲ್ಲರನ್ನು ಸಮನಾಗಿ ನೋಡುವುದನ್ನು ಬೋಧಿಸುತ್ತದೆ. ಸಮದರ್ಶಿತ್ವ, ಸಹಾನುಭೂತಿ, ಸೌಹಾರ್ದತೆ ಮತ್ತು ಸಹಕಾರಗಳಿಂದ ಅಪರಾಧವನ್ನು ತೊಡೆಯಬಹುದು. ಸಮದರ್ಶಿತ್ವವನ್ನು ೬ನೇ ಅಧ್ಯಾಯದ ೨೯,೩೦,೩೧,೩೨ನೇ ಶ್ಲೋಕಗಳಲ್ಲಿ ಚೆನ್ನಾಗಿ ವಿವರಿಸಲಾಗಿದೆ.
    ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋsರ್ಜುನI
    ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃII6.32II
    ಯಾವನು ಎಲ್ಲ ಪ್ರಾಣಿಗಳಲ್ಲಿಯೂ ಸುಖವನ್ನಾಗಲಿ ದುಃಖವನ್ನಾಗಲಿ ತನ್ನಂತೆಯೇ ಸಮವಾಗಿ ನೋಡುವನೋ ಆ ಯೋಗಿಯು ಶ್ರೇಷ್ಠನೆಂದು ನನ್ನ ಅಭಿಪ್ರಾಯ.

MESCOM ಶಿವಮೊಗ್ಗ :ಮೆಸ್ಕಾಂ ಜನ ಸಂಪರ್ಕ ಸಭೆ

0

MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ -3 ಕಛೇರಿಯಲ್ಲಿ ಜ.23 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 9480841339.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶಿವಮೊಗ್ಗ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ

0

ಶಿವಮೊಗ್ಗ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶಿವಮೊಗ್ಗ ಇವರ ವತಿಯಿಂದ ಜ.26 ರ ಬೆಳಗ್ಗೆ 09 ಗಂಟೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಧ್ವಜಾರೋಹಣವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರು ನೆರವೇರಿಸುವರು.
ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ/ಮಂಡಳಿ/ಪ್ರಾಧಿಕಾರಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿ.ಪಂ ಸಿಇಓ, ಮಹಾನಗರ ಪಾಲಿಕೆ ಆಯುಕ್ತರು, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಮಾಧ್ಯಮದವರು, ಸರ್ಕಾರಿ ಅಧಿಕಾರಿಗಳು/ನೌಕರರು, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವರು.
ಸಂಜೆ 5 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಪೊಲೀಸ್ ಬ್ಯಾಂಡ್ ಮತ್ತು ನಗರದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ.

ಗೃಹರಕ್ಷಕ ದಳಕ್ಕೆ ಸೇರಲು ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲೆಯ ಸ್ಥಳೀಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ “ನಿಷ್ಕಾಮ ಸೇವೆ ದ್ಯೇಯದ” ಅಡಿಯಲ್ಲಿ ಸೇವೆ ಸಲ್ಲಿಸಲು ಸಿದ್ದರಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಗೃಹರಕ್ಷಕರಾಗಲು ಬೇಕಾದಆರ್ಹತೆ:-ಭಾರತೀಯ ಪ್ರಜೆಯಾಗಿರ ಬೇಕು. 19 ವರ್ಷದ ಮೇಲ್ಪಟ್ಟು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, 10ನೇ ತರಗತಿ ಉತ್ತೀರ್ಣರಾಗಿರಬೇಕು. ವೈದ್ಯಕೀಯವಾಗಿ ಸಶಕ್ತರಾಗಿರಬೇಕು. ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು / ಆರೋಪ ಅಥವಾ ಅಪರಾಧಿ ಎಂದು ದಾಖಲಾಗಿರದಿದ್ದಲ್ಲಿ ಅಂತಹವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆಸಕ್ತರು ನಿಗದಿತ ಅರ್ಜಿಯನ್ನು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಿವಮೊಗ್ಗ. 08182 – 295630 & 255630 ಅಥವ ಜಿಲ್ಲೆಯ ಎಲ್ಲಾ ಗೃಹರಕ್ಷಕ ದಳ ಘಟಕ/ ಉಪ ಘಟಕಗಳ ಕಛೇರಿಗಳಲ್ಲಿ ಪಡೆದು, ಭರ್ತಿಮಾಡಿದ ಅರ್ಜಿಗಳನ್ನು ಫೆ. 03 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸಮಾದೇಷ್ಟರು ಡಾ. ಚೇತನ ಹೆಚ್.ಪಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಗೃಹರಕ್ಷಕ ದಳ ಘಟಕ ಉಪ ಘಟಕ ಮತ್ತು ಘಟಕಾಧಿಕಾರಿಗಳು ಮೊಬೈಲ್ ನಂಬರ್‌ನ್ನು ಸಂಪರ್ಕಿಸುವುದು. ಶಿವಮೊಗ್ಗ, ಹೆಚ್.ಸಿ.ಶ್ರೀಧರ ಮೂರ್ತಿ-9964157471, ಕುಂಸಿ- ಎಂ.ಕುಮಾರ- 8197013844, ಹಾರನಹಳ್ಳಿ -ಜಿ.ರುದ್ರೇಶ್ -9972163398, ಭದ್ರಾವತಿ -ಜಗದೀಶ-9900283490, ಹೊಳೆಹೊನ್ನೂರು- ಅಕ್ರಾಉಲ್ಲಾ-9986104590, ತೀರ್ಥಹಳ್ಳಿ – ದಿಲೀಪ್ ಬಿ.ಎನ್. -7975957665, ಸಾಗರ – ಕೆ.ಎಸ್.ಮಂಜುನಾಥ – 8073831409, ಜೋಗ – ಡಿ.ಸಿದ್ದರಾಜು – 9449699459, ಶಿಕಾರಿಪುರ- ಕೆ.ವಿ.ಮಹೇಶ-9901325146, ಶಿರಾಳಕೊಪ್ಪ -ಎಂ.ವೀರಭದ್ರಸ್ವಾಮಿ-9741629961, ಹೊಸನಗರ- ಎಂ.ಅರ್.ಟೀಕಪ್ಪ-9901002423, ರಿಪ್ಪನ್‌ಪೇಟೆ -ಟಿ ಶಶಿಧರ್ ಆಚಾರ್ಯ್-9741477689, ಸೊರಬ- ಹೆಚ್.ಎಂ.ಪ್ರಶಾAತ್, 7976306266.

S.N.Chennabasappa ವ್ಯಕ್ತಿತ್ವ ರೂಪಿಸಿಕೊಳ್ಳಲು ನಿಜಶರಣರ ವಚನ ಅಳವಡಿಸಿಕೊಳ್ಳಬೇಕು –ಎಸ್.ಎನ್. ಚನ್ನಬಸಪ್ಪ

0

S.N.Chennabasappa ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ನಿಜಶರಣರ ವಚನಗಳನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು. ನಿಜಶರಣರು ಅವರಿಗೋಸ್ಕರ ಅಲ್ಲದೆ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡವರು ಎಂದು ಶಾಸಕರು ಎಸ್ ಎನ್ ಚನ್ನಬಸಪ್ಪ ಹೇಳಿದರು.
ಅವರು ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತೋತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.
ಅಂಬಿಗರ ಚೌಡಯ್ಯರ ಸಮಾಜಸೇವೆ ಮಾಡುವ ಸಹಜ ಕ್ರಿಯೆಯಿಂದ ನಿಜಶರಣ ಎಂಬ ಹೆಸರು ಬಂದಿದೆ. ನಿಜಶರಣರು ನಮಗೆ ಸಂಸ್ಕೃತಿ, ಸಂಸ್ಕಾರ ಭಾವನೆಯ ಅರಿವನ್ನು ಮೂಡಿಸಿದ್ದಾರೆ. ಎಲ್ಲ ವಚನ ಸಾಹಿತ್ಯ ಒಂದೆಡೆ ಸೇರಿಸುವ ಪ್ರಯತ್ನ ಕರ್ನಾಟಕ ಸರ್ಕಾರ ನಡೆಸುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಎಸ್. ಬಿ. ವಾಸುದೇವ ರವರು ವಿಶೇಷ ಉಪನ್ಯಾಸ ನೀಡಿ ಭಕ್ತಿ ತೋರಿಕೆಯಾಗಿರದೇ ಅಂತರಾತ್ಮದಿಂದ ಅದನ್ನು ಸ್ಪರ್ಶಿಸಬೇಕು. 12 ನೇ ಶತಮಾನದಲ್ಲಿ ಕ್ರಾಂತಿಯ ರೂಪದಲ್ಲಿ ಹುಟ್ಟಿಕೊಂಡವರೇ ಅಂಬಿಗರ ಚೌಡಯ್ಯ. ಮಾನವನಿಗೆ ಬೇಕಾಗಿರುವುದು ಅಗತ್ಯ ಜ್ಞಾನ ಎಂದು ತಿಳಿಸಿದರು.
ಮನುಷ್ಯನ ವ್ಯಕ್ತಿತ್ವಕ್ಕೆ ಅಂಬಿಗರ ಚೌಡಯ್ಯನವರ ವಚನಗಳು ನಾಟುತ್ತವೆ. ಅದಕ್ಕನುಗುಣವಾಗಿ ಮೇಲು-ಕೀಳು ಎಂಬ ಭಾವನೆ ತೊಡೆದು ಹಾಕಬೇಕು.
S.N.Chennabasappa ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಮೇಶ್ ಹೆಚ್ ರವರು ಗಣ್ಯರಿಗೆ ಸ್ವಾಗತಿಸಿದರು.
ವೇದಿಕೆಯ ಮೇಲೆ ಜಿಲ್ಲಾ ಗಂಗಾಮತ ಸಂಘ ಅಧ್ಯಕ್ಷರಾದ ಡಿ ಬಿ ಕೆಂಚಪ್ಪ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Klive Special Article ದಾಖಲೆ ನಿರ್ಮಿಸಿದ ವೀಣೆಯ ಝೇಂಕಾರ

0

Klive Special Article ಶಿವಮೊಗ್ಗ ನಿಜವಾಗಿಯೂ ಸಾಂಸ್ಕೃತಿಕವಾಗಿ ಶ್ರೀಮಂತವಾದ ಊರು. ಅದು ಅನೇಕ ಕಲಾವಿದರನ್ನು ತನ್ನ ಮಡಿಲಲ್ಲಿ ಪೋಷಿಸುತ್ತಿದೆ. ಈ ಊರು ನೃತ್ಯ, ಸಂಗೀತ, ನಾಟಕ, ಯಕ್ಷಗಾನವೇ ಮೊದಲಾದ ಎಲ್ಲ ಪ್ರಕಾರಗಳಲ್ಲಿ ಶ್ರೇಷ್ಠವಾದ ಕಲಾವಿದರನ್ನು ಹೊಂದಿದೆ. ಇಲ್ಲಿ ಅನೇಕ ಸಂಗೀತ ವಿದ್ಯಾಲಯಗಳು ತಮ್ಮದೇ ಆದಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದು ಆಕರ್ಷಿಸಿರುವುದು ಒಂದೆಡೆಯಾದರೆ, ತಮ್ಮ ಸಂಗೀತ ಶಾಲೆಯ ರಜತ ಸಂಭ್ರಮಕ್ಕೆ “ವೀಣಾ ತ್ರಿಶತೋತ್ಸವ” ಆಚರಿಸಿ ಒಂದು ದಾಖಲೆಯನ್ನು ನಿರ್ಮಿಸಿದ್ದು ಶ್ರೀಸರಸ್ವತಿ ಸಂಗೀತ ವಿದ್ಯಾಲಯ. ಅದರ ಮುಖ್ಯಸ್ಥರಾದ ವಿ ll ಶ್ರೀಮತಿ ವಿಜಯಲಕ್ಷ್ಮಿರಾಘು ಅವರ ಶಿಷ್ಯವೃಂದದ ಜೊತೆಗೆ ಅನೇಕ ವಿದ್ಯಾಸಂಸ್ಥೆಗಳ ಸಹಕಾರದೊಂದಿಗೆ ನೀಡಿದ ವೀಣೆಯ ಅದ್ಭುತ ಕಾರ್ಯಕ್ರಮ ಐತಿಹಾಸಿಕ ದಾಖಲೆಯಾಯ್ತು. ಎರಡು ದಿನಗಳ ಕಾಲ ಅಲ್ಲಮಪ್ರಭು ಮೈದಾನದಲ್ಲಿ ಸುಂದರವಾದ ವೇದಿಕೆ ಹಾಗೂ ವೀಕ್ಷಕರಿಗೆ ಎಲ್ಲೂ ತೊಂದರೆಯಾಗದಿರುವಂತಹ ಆಸನದ ವ್ಯವಸ್ಥೆಯಿಂದ ಆಯೋಜಿತವಾದ ಈ ಕಾರ್ಯಕ್ರಮ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿತು.

ಮೊದಲ ದಿನ ವಿll ಇಂದು ನಾಗರಾಜ್ ಹಾಗು ಲಕ್ಷ್ಮೀನಾಗರಾಜ್ ಅವರ ಹಾಡುಗಾರಿಕೆ ಕರ್ಣಾನಂದವನ್ನು ನೀಡಿದರೆ, ಮರುದಿನದ ಉದ್ಘಾಟಕರಾಗಿ ಆಗಮಿಸಿದ ಮಹಾರಾಜರೂ ಸಂಸದರೂ ಶ್ರೀಯದುವೀರ ಒಡೆಯರ್ ಅವರು, ಮುಖ್ಯ ಅತಿಥಿಗಳಾದ ವಿ ll ಶ್ರೀಮತಿ ರೇವತಿ ಕಾಮತ್ ಮೊದಲಾದವರಿಂದ ಕೂಡಿದ ಅಚ್ಚುಕಟ್ಟಾದ ಸಭಾ ಕಾರ್ಯಕ್ರಮವಾದರೆ ವೇದಿಕೆ ಕಾರ್ಯಕ್ರಮ ಮುಗಿದು ವೀಣಾ ತ್ರಿಶತಿಯ ಉದ್ಘಾಟನೆಯ ದೃಶ್ಯವೇ ನೋಡುಗರಿಗೆ ಆ ಕಲ್ಪನೆ ವಾವ್ ಎಂಬ ಅನುಭವ ನೀಡಿತು. ಅಲ್ಲಿ ನುಡಿಸಿದ ಪ್ರತಿಯೊಂದು ಹಾಡುಗಳೂ ವಿಶೇಷವೇ ಅದರಲ್ಲೂ ಸಾಮಜವರಗಮನ, ಮಾಮವತು, ತಾಯಿ ಶಾರದೆ, ವಿಶ್ವವಿನೂತನ, ಅಯಿಗಿರಿ ನಂದಿನಿ ಹೀಗೆ ಒಂದಕ್ಕಿಂತ ಒಂದು ಅತ್ಯದ್ಭುತವಾದ ಪ್ರಸ್ತುತಿಯಾಗಿದ್ದವು. ಜೊತೆಗೆ ಮೈಸೂರ್ ಸಂಸ್ಥಾನದ ಪರಂಪರೆಯಲ್ಲಿ ಗೌರವಿಸುವ ವೀಣೆಯನ್ನು ಶ್ರೀ ಯದುವೀರ್ ಒಡೆಯರ್ ಅವರು ನುಡಿಸುವ ಪ್ರಯತ್ನಿಸಿದ್ದು ಒಂದು ವಿಶೇಷವೇ ಆಯಿತು. ಹಾಗೆಯೇ ಎಲ್ಲವುಗಳಲ್ಲೂ ಕಂಡು ಬಂದ ಏಕತಾನತೆ, ಪಕ್ಕ ವಾದ್ಯದವರ ವಿದ್ವತ್ ಪೂರ್ಣ ಸಾಥ್ ಈ ಕಾರ್ಯಕ್ರಮಕ್ಕೆ ಒಳ್ಳೆಯ ಮೆರುಗು ತಂದಿತ್ತು. ಆಗಮಿಸಿದ ಸಹೃದಯ ರಸಿಕರು ಈ ಎಲ್ಲ ಸೊಬಗನ್ನು ಕಣ್ತುಂಬಿಕೊಂಡು, ಮನಕಾನಂದದ ರಸಾನುಭೂತಿ ಅನುಭವಿಸಿದರು.

Klive Special Article ಅಷ್ಟೇ ಅಲ್ಲದೆ ಈ ಕಾರ್ಯಕ್ರಮದಲ್ಲಿ ನಗರದ ಎಲ್ಲಾ ಸಂಗೀತ ಶಾಲೆಯ ನೃತ್ಯ ಶಾಲೆಯ ಹಾಗೂ ಇತರ ಪ್ರಮುಖರನ್ನು, ಗಣ್ಯರನ್ನು ಸನ್ಮಾನಿಸಿದ್ದು, ಗುರುವಂದನೆ, ಹಾಗೂ ಮಾತಾಪಿತೃಗಳ ಹೆಸರಿನಲ್ಲಿ ಒಬ್ಬ ಅಂಧ ವಿದ್ಯಾರ್ಥಿನಿಗೆ ವೀಣೆಯನ್ನೇ ನೀಡಿದ್ದು ಇವೆಲ್ಲವೂ ಅತ್ಯಂತ ಭಾವುಕ ಕ್ಷಣಗಳಾದವು. ಜೊತೆಗೆ ಸಾಧಕರ ಸನ್ಮಾನ, ಸಂಗೀತ ಶಾಲೆಗೆ ಹೆಮ್ಮೆ ತಂದ ವಿದ್ಯಾರ್ಥಿಗಳ ಹಾಗೂ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದ್ದು ಸಹ ಗಮನಾರ್ಹವಾಗಿತ್ತು. ಈ ಎಲ್ಲದಕ್ಕೂ ಕಳಶಪ್ರಾಯದಂತೆ ಮೆರುಗು ತಂದಿದ್ದು ನಿರೂಪಕರ ನಿರೂಪಣೆ, ನಿಜವಾಗಿಯೂ ಪ್ರೇಕ್ಷಕರನ್ನು ಚಳಿಯ ಹೊತ್ತಿನಲ್ಲೂ ಐತಿಹಾಸಿಕ ದಾಖಲೆಯಾದ ಆ ಸಂದರ್ಭವೆಲ್ಲವೂ ಮನದಲ್ಲಿ ಅಚ್ಚಳಿಯದೆ ಉಳಿಯುವಂತಾಗಲು ನಿರೂಪಕರ ಸಂದರ್ಭೋಚಿತ ಅರ್ಥಪೂರ್ಣ ಹಾಗೂ ಜೋಶ್ ನಿಂದ ಕೂಡಿದ ನಿರೂಪಣೆ ಗಮನ ಸೆಳೆಯಿತು.

ಇವುಗಳ ಜೊತೆಯಲ್ಲಿ ಸೌಂಡ್ ಸಿಸ್ಟಮ್ ನ ಚಿನ್ನು ರವರ ಅದ್ಭುತ ಕಲ್ಪನೆಯ ವೇದಿಕೆ, ಹಾಗೆಯೇ ಪರಂಪರಾದವರು ಆಯೋಜಿಸಿದ ದೇಸಿ ವಸ್ತುಗಳ ಮೇಳ. ನಗರದ ಜನತೆಗೆ ಚಿತ್ತಾಕರ್ಷಕವಾಗಿತ್ತು. ಆಹಾರ ಮೇಳದ ಕಡೆಯಂತೂ ಜನ ಒಳ್ಳೆಯ ಆಹಾರ ಸವಿಯುತ್ತಾ ಉದರಾನಂದ ಒಂದೆಡೆಯಾದರೆ, ವೀಣೆಯ ನಾದದ ಝೇಂಕಾರದ ಕರ್ಣಾನಂದ ಮತ್ತೊಂದೆಡೆ ಎಲ್ಲವೂ ಅಲ್ಲಿ ವೈಶಿಷ್ಟ್ಯಪೂರ್ಣವಾಗಿತ್ತು.

ಸರಸ್ವತಿಯ ವೀಣೆಯ ನಾದದ ಝೇಂಕಾರ ನಗರದೆಲ್ಲೆಡೆ ಒಂದು ಧನಾತ್ಮಕ ವೈಬ್ ಮೂಡಿಸಿದ್ದಂತು ಸತ್ಯ. ಅಚ್ಚುಕಟ್ಟಾದ ಒಟ್ಟು ಆಯೋಜನೆ ನಗರದ ಎಲ್ಲಾ ಪ್ರಮುಖ ಸಂಗೀತ ಶಾಲೆಗಳವರನ್ನು ಜೋಡಿಸಿಕೊಂಡು ಶಾಸ್ತ್ರೀಯ ಸಂಗೀತಕ್ಕಿರುವಂತಹ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಒಂದು ವೈವಿಧ್ಯತೆ ಮತ್ತು ಏಕತೆ ಮೂಡಿಸಿದ ಕಾರ್ಯಕ್ರಮ ಇದಾಗಿತ್ತು. ಒಟ್ಟಾರೆಯಾಗಿ ಓಂಕಾರದ ಶಂಖನಾದಕಿಂತ ಕಿಂಚಿದೂನಮ್ ಎಂಬ ಕವಿವಾಣಿಯು ಇಲ್ಲಿ ನೆನಪಾಗುವಂತಾಯ್ತು. ನಗರದ ಸಮಸ್ತ ಸಹೃದಯ ಪ್ರೇಕ್ಷಕರ ಪರವಾಗಿ ವಿದುಷಿ ಶ್ರೀಮತಿ ವಿಜಯಲಕ್ಷ್ಮಿ ರಾಘು ಹಾಗೂ ಅವರ ಬೆಂಬಲಕ್ಕೆ ನಿಂತ ಅವರ ಮನೆಯವರಾದ ಶ್ರೀ ಟಿ. ಎಸ್. ವೆಂಕಟರಾವ್, ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ಗೌರವ ಅಧ್ಯಕ್ಷರು, ಸುಶ್ರಾವ್ಯ ಸಂಗೀತ ವಿದ್ಯಾಲಯದ ಮುಖ್ಯಸ್ಥರಾದ ಶ್ರೀಮತಿ ವಿ ll ಜಯಶ್ರೀ ನಾಗರಾಜ್, ಸಾಯಿ ಶೃತಿ ಸಂಗೀತ ವಿದ್ಯಾಲಯದ ಮುಖ್ಯಸ್ಥರಾದ ಶ್ರೀ ಪದ್ಮಿನಿ ಸುಧೀರ್ ಇವರೆಲ್ಲರಿಗೂ ಅನಂತಾನಂತ ಧನ್ಯವಾದಗಳು. ವೀಣಾ ನಾದದ ಝೇಂಕಾರದ ಅನುರಣನ ಸ್ಮೃತಿಪಟಲದಲ್ಲಿ ಜೀವಿತಾವಧಿಯ ಮಹತ್ವದ ಕಾರ್ಯಕ್ರಮವಾಗಿ ಉಳಿಯುತ್ತದೆ ಎನ್ನುವುದಂತು ನಿಸ್ಸಂಶಯ.

ದಾಸ ಶ್ರೇಷ್ಠರ ಆರಾಧನೆಯ ಪುಣ್ಯ ಪರ್ವಕಾಲದಲ್ಲಿ, ತಮ್ಮ ಸಂಸ್ಥೆಯ ರಜತ ಮಹೋತ್ಸವದ ಸಂದರ್ಭದಲ್ಲಿನ ಈ ಕಾರ್ಯಕ್ರಮ ನಗರದ ಮಟ್ಟಿಗೆ ಒಂದು ಐತಿಹಾಸಿಕ ದಾಖಲೆಯೇ ಸರಿ. ಈ ಅದ್ಭುತ ಕಾರ್ಯಕ್ರಮಕ್ಕೆ ನಾವೆಲ್ಲ ಸಾಕ್ಷಿಯಾದೆವಲ್ಲ ಎಂಬ ಭಾವ ಮನದಲ್ಲಿ ಮತ್ತಷ್ಟು ಹೆಮ್ಮೆಯನ್ನು ತರಿಸುತ್ತದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಅದೆಷ್ಟು ಪದಗಳಿಂದ ಬಣ್ಣಿಸಿದರೂ ಕಡಿಮೆಯೇ ಎನಿಸುತ್ತಿದೆ ನನ್ನ ಪಾಲಿಗೆ. ನನಗಂತೂ ವೀಣೆ ವಿಜಯಲಕ್ಷೀ ಎಂದೇ ಕರೆಸಿಕೊಳ್ಳುವ ಅವರು ಬೃಹತ್ ವೇದಿಕೆಯಲ್ಲಿ ಪಕ್ಕ ವಾದ್ಯಗಳ ನಡುವೆ ಸಾಕ್ಷಾತ್ ಸರಸ್ವತಿಯ ಹಾಗೆ ಕಂಡುಬಂದರು. ಅನೇಕ ವಿದ್ಯಾ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿತವಾದ ಕಾರ್ಯಕ್ರಮ ಇದಾಗಿತ್ತು. ಈ ಹಿಂದೆ ಪಂಚವೀಣೆ, ನವವೀಣೆ, ದಶವೀಣೆ, 25 ವಿಧಗಳ ಸಮೂಹ ಅಲ್ಲದೇ ಅಷ್ಟೋತ್ತರ ಶತವೀಣಾ ವೈಭವ ಇವುಗಳನ್ನು ಕಂಡ ನಾವು ವೀಣಾ ತ್ರಿಶತೋತ್ಸವ ಅಂದರೆ 300 ವೀಣೆಗಳು ಏಕಕಾಲದಲ್ಲಿ, ಏಕಲಯದಲ್ಲಿ ನಾದವನ್ನು ಹೊಮ್ಮಿಸಿ ಈಗಲೂ ಅದನ್ನು ನೆನೆಸಿಕೊಂಡರೆ ರೋಮಾಂಚನವಾಗುವಂತೆ ಮಾಡಿದ ಕಾರ್ಯಕ್ರಮವಾಗಿತ್ತು. ಈ ಕಲ್ಪನೆಗೆ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು.

ಡಾ. ಮೈತ್ರೇಯಿ ಆದಿತ್ಯ
ಸಂಸ್ಕೃತ ಉಪನ್ಯಾಸಕರು
ಪೇಸ್ ಪಿ ಯು ಕಾಲೇಜ್, ಶಿವಮೊಗ್ಗ.