Karnataka Bala Vikas Academy ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಮಕ್ಕಳ ಕ್ಷೇತ್ರದಲ್ಲಿ ರಚಿಸಲ್ಪಟ್ಟ ಆಯ್ದ ಉತ್ತಮ ಪುಸ್ತಕಗಳಿಗೆ “ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿ” ಗಾಗಿ 2024 ನೇ ಸಾಲಿನ ಹಾಗೂ 2025 ನೇ ಸಾಲಿನ ಜನವರಿ ಯಿಂದ ಡಿಸೆಂಬರ್ ತಿಂಗಳ ಅಂತ್ಯದ ಅವಧಿಯಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥಾಸಂಕಲನ, ನಾಟಕ, ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತ ಕೃತಿ, ಮಕ್ಕಳ ಸಾಹಿತ್ಯ ವಿಮರ್ಶಾ ಕೃತಿ ಸೇರಿದಂತೆ ಒಟ್ಟು ಏಳು ಪ್ರಕಾರದ ಮಕ್ಕಳ ಸಾಹಿತ್ಯದ ಕೃತಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಿದೆ.
Karnataka Bala Vikas Academy ಆಸಕ್ತರು ಪ್ರಶಸ್ತಿಗಾಗಿ ಪರಿಗಣಿಸಲು / ಮೌಲ್ಯಮಾಪಾನಗೊಳಿಸಲು ಪ್ರತಿಯೊಂದು ಕೃತಿಯ 4 ಪ್ರತಿಗಳನ್ನು ಹಾಗೂ ಸ್ವವಿವಾರಗಳನ್ನೊಳಗೊಂಡ ಮನವಿಯೊಂದಿಗೆ ಪುಸ್ತಕಗಳನ್ನು ಯಾವ ಸಾಲಿಗೆ ಪರಿಗಣಿಸಬೇಕೆಂಬುದರ ಬಗ್ಗೆ ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಿ ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇಔಟ್ ಹಿಂಭಾಗ, ಕೆ.ಹೆಚ್.ಬಿ. ಕಾಲೋನಿ, ಲಕಮನಹಳ್ಳಿ, ಧಾರವಾಡ -580004 ಇಲ್ಲಿಗೆ ಫೆ. 20 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0836-2465490/ 8050392209/ 7204396275/ 9448981944 ಗಳನ್ನು ಸಂಪರ್ಕಿಸುವುದು.
Karnataka Bala Vikas Academy ಮಕ್ಕಳ ಪುಸ್ತಕ ಚಂದಿರ” ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ
Subhash Chandra Bose ವಿಧಾನಸೌಧದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ ಆಚರಣೆ
Subhash Chandra Bose ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಜನ್ಮದಿನ ಅಂಗವಾಗಿ ವಿಧಾನಸೌಧದ ಈಶಾನ್ಯ ದಿಕ್ಕಿನಲ್ಲಿ ಮರು ಸ್ಥಾಪನೆಯಾದ ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಪ್ರತಿಮೆಯನ್ನು ಸಿದ್ದರಾಮಯ್ಯ ಅವರು ಅನಾವರಣಗೊಳಿಸಿ, ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ, ಶಾಸಕರಾದ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
Thawar Chand Gehlot ರಾಜ್ಯಪಾಲರೊಂದಿಗೆ ಸಿಕ್ಕಿಂ ವಿದ್ಯಾರ್ಥಿಗಳ ಸಂವಾದ
Thawar Chand Gehlot ಭಾರತೀಯ ಸೇನೆಯ ಆಪರೇಷನ್ ಸದ್ಭಾವನ ಅಡಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಏಕೀಕರಣ ಪ್ರವಾಸದ ಭಾಗವಾಗಿ ಬೆಂಗಳೂರಿಗೆ ಭೇಟಿ ನೀಡಿದ್ದ ಸಿಕ್ಕಿಂನ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಂವಾದ ನಡೆಸಿದರು. ಈ ವೇಳೆ ಕ್ಯಾಪ್ಟನ್ ಧನಂಜಯ್ ಜಸ್ರೋಟಿಯಾ ಮತ್ತು ಅಧಿಕಾರಿಗಳು ಹಾಜರಿದ್ದರು.
MESCOM ಶಿವಮೊಗ್ಗ :ಮೆಸ್ಕಾಂ ಜನ ಸಂಪರ್ಕ ಸಭೆ
MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ -3 ಕಛೇರಿಯಲ್ಲಿ ಜ.23 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 9480841339.
ಅಹೋರಾತ್ರಿ ಗಮಕ ವಾಚನದ ಮೂಲಕ ವಿಶ್ವ ದಾಖಲೆಗೆ ಸಿದ್ಧರಾದ ಪ್ರಸಾದ್ ಭಾರದ್ವಾಜ್
24 ಗಂಟೆಗಳ ಗಮಕ ವಾಚನ ಮಾಡುವ ಮೂಲಕ ವಿಶ್ವ ದಾಖಲೆಗೆ ಶಿವಮೊಗ್ಗ ಸಮೀಪದ ಹೊಸಹಳ್ಳಿಯು ಯುವ ಗಮಕಿ , ಪದ್ಮಶ್ರೀ ಗಮಕ ಗಂಧರ್ವ ಹೆಚ್.ಆರ್. ಕೇಶವಮೂರ್ತಿರವರ ಶಿಷ್ಯಪ್ರಸಾದ್ ಭಾರದ್ವಾಜ್ ಮುಂದಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜ. 24 ರ ಮಧ್ಯಾಹ್ನ 3:30ಕ್ಕೆ ಕಾರ್ಯಕ್ರಮ ರವೀಂದ್ರನಗರ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಉದ್ಘಾಟನೆಯಾಗಲಿದೆ. ಸಂಸದ ಬಿ. ವೈ. ರಾಘವೇಂದ್ರ ಉದ್ಘಾಟನೆ ನಡೆಸುವರು. ಮುಖ್ಯ ಅತಿಥಿಗಳಾಗಿ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತೆ, , ಕರ್ನಾಟಕ ಗಮಕಕಲಾ ಪರಿಷತ್ ಮಾಜಿ ಅಧ್ಯಕ್ಷೆ ಬೆಂಗಳೂರು, ಗಂಗಮ್ಮ ಕೇಶವಮೂರ್ತಿ, ಬೆಂಗಳೂರು ಮತ್ತು ಕನ್ನಡ ಸಂಸ್ಕೃತಿ ಇಲಾಖೆ, ಶಿವಮೊಗ್ಗದ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ,
ಅಧ್ಯಕ್ಷತೆಯನ್ನು ಗಮಕ ಕಲಾ ಪರಿಷತ್, ಹೊಸಹಳ್ಳಿ ಇದರ ಅಧ್ಯಕ್ಷ ಹೆಚ್. ಎಸ್. ಸತ್ಯನಾರಾಯಣ ವಹಿಸುವರೆಂದರು.
24 ಗಂಟೆಗಳ ಗಮಕ ವಾಚನ ಮಾಡುವ ಮೂಲಕ ವಿಶ್ವ ದಾಖಲೆ ಮಾಡಲಾಗುವುದು ಸಂಜೆ 5 ಕ್ಕೆ ಗಮಕ ವಾಚನ ಆರಂಭವಾಗುವುದು. ಸಮಾರೋಪ ಸಮಾರಂಭ ಜನವರಿ 25 ಭಾನುವಾರ ಸಂಜೆ : 7-30ಕ್ಕೆ ನಡೆಯಲಿದೆ
ಅಧ್ಯಕ್ಷತೆಯನ್ನು ಸುಬ್ರಮಣ್ಯ ಶಾಸ್ತ್ರೀ, ಶಿವಮೊಗ್ಗ ಅಧ್ಯಕ್ಷರು, ಕರ್ನಾಟಕ ಗಮಕ ಕಲಾ ಪರಿಷತ್ (ರಿ.), ಬೆಂಗಳೂರು ಜಿಲ್ಲಾ ಶಾಖೆ, ಶಿವಮೊಗ್ಗ, ಮುಖ್ಯ ಅತಿಥಿಗಳಾಗಿ : ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಶಾಸಕರು, ಶಿವಮೊಗ್ಗ
ಹೆಚ್.ಎಸ್. ಗೋಪಾಲ, * ಹಿರಿಯ ವ್ಯಾಖ್ಯಾನಗಾರರು ಆಗಮಿಸುವರೆಂದರು.
ಶಿವಮೊಗ್ಗಕ್ಕೆ ತೆರಳಿದ್ದ ಟೆಕ್ನಿಷಿಯನ್ ನಾಪತ್ತೆ
ಹುಂಚಾ ಗ್ರಾಮದ ಮಾರ್ನಮಿ ಬೈಲು ನಿವಾಸಿ ಧನುಷ್ ಎನ್.ಡಿ (25) ಜ. 19 ರಂದು ಬೆಳಿಗ್ಗೆ ಮನೆಯಿಂದ ಶಿವಮೊಗ್ಗದ ಮಹೇಂದ್ರ ಶೋರೂಮ್‌ಗೆ ತೆರಳುವುದಾಗಿ ಹೇಳಿ ಹೊರಟು ಹೋಗಿದ್ದು, ನಂತರ ಮನೆಗೂ ವಾಪಸ್ ಬಾರದೇ ಕಾಣೆಯಾಗಿರುವ ಘಟನೆ ನಡೆದಿದೆ.
ಧನುಷ್ ಶಿವಮೊಗ್ಗಕ್ಕೆ ತೆರಳಿದ ಬಳಿಕ ಕಾಣೆಯಾಗಿದ್ದು, ಸಂಬಂಧಿಕರು ಹಾಗೂ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾಣೆಯಾದ ಯುವಕನ ತಂದೆ ದಿನೇಶ್ ಮರಗಿ ಬಿನ್ ನಾಗಪ್ಪ ಮರಗಿ ಅವರು ನೀಡಿದ ದೂರಿನ ಆಧಾರದಲ್ಲಿ ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 09/2026, ಮನುಷ್ಯ ಕಾಣೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Shivaganga Yoga Center ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ರಥಸಪ್ತಮಿ ಪ್ರಯುಕ್ತ ಅಖಂಡ ಸೂರ್ಯ ನಮಸ್ಕಾರ ಯಜ್ಞ
Shivaganga Yoga Center ಶ್ರೀ ಶಿವಗಂಗಾ ಯೋಗ ಕೇಂದ್ರ, ಕಲ್ಲಹಳ್ಳಿ, ವಿನೋಬನಗರ ಶಿವಮೊಗ್ಗ ಇಲ್ಲಿ ರಥಸಪ್ತಮಿ ಪ್ರಯುಕ್ತ ಮುಂಜಾನೆ 05.30 ಕ್ಕೆ ಭಜನೆ, ಡಾ ಪದ್ಮನಾಭ ಅಡಿಗ ರವರಿಂದ ಭಗವಾನ್ ಸೂರ್ಯದೇವನಿಗೆ ಪೂಜೆ ಮಹಾ ಮಂಗಳಾರತಿ , ಪ್ರೊ. ಟಿ. ಎಸ್. ಹೂವಯ್ಯ ಗೌಡರಿಂದ ರಥಸಪ್ತಮಿ ಆಚರಣೆ ವಿಶೇಷತೆ ಕುರಿತು ಮಾತುಗಳು, ನಂತರ ಶಿವಮೊಗ್ಗದ ಎಲ್ಲಾ ಶಾಖೆಗಳಿಂದ ಆಗಮಿಸಿದ ಯೋಗ ಶಿಕ್ಷಣಾ ರ್ಥಿಗಳಿಂದ ಮಂತ್ರ ಸಹಿತ ಸಾಮೂಹಿಕ ಅಖಂಡ ಸೂರ್ಯ ನಮಸ್ಕಾರ ಯಜ್ಞ ನೆರವೇರಲಿದೆ. Shivaganga Yoga Center ಶ್ರೀ ಶಿವಗಂಗಾ ಯೋಗ ಕೇಂದ್ರದ ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಡಾ ಸಿ. ವಿ. ರುದ್ರಾರಾಧ್ಯರ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನೆರವೇರಲಿವೆ. ಕೇಂದ್ರದ ಅಧ್ಯಕ್ಷರಾದ ಶ್ರೀ ಎಸ್. ರುದ್ರೇಗೌಡರು, ಖಜಾಂಚಿ ಹೊಸತೋಟ ಶ್ರೀ ಸೂರ್ಯನಾರಾಯಣ ರವರು, ವಿಶ್ವಸ್ಥ ಮಂಡಳಿಯ ಸದಸ್ಯರು, ಪೋಷಕ ಸಮಿತಿಯ ಸದಸ್ಯರು ಉಪಸ್ಥಿತರಿರುತ್ತಾರೆ . ಶಿವಮೊಗ್ಗ ನಗರದ ಯೋಗ ಅಭಿಮಾನಿಗಳೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೂರ್ಯದೇವನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ ಎಚ್.ಎಂ. ಚಂದ್ರಶೇಖರಯ್ಯ ಕೋರಿದ್ದಾರೆ.
Rajana Foundation Trust ಭಾರತವನ್ನು ತಿಳಿಯಿರಿ – ಪ್ರೌಢಶಾಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ
Rajana Foundation Trust ರಜನಾ ಫೌಂಡೇಶನ್ ಟ್ರಸ್ಟ್, ಹೊಸಪೇಟೆ ಇವರು ಕನ್ನಡ, ಸಂಸ್ಕೃತಿ, ಸಂಸ್ಕಾರ ಮತ್ತು ರಾಷ್ಟ್ರೀಯತೆಯ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಶಿಕ್ಷಣ ಕ್ಷೇತ್ರ ಹಾಗೂ ಕುಟುಂಬ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ವಿವಿಧ ಚಟುವಟಿಕೆಗಳ ಮೂಲಕ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಕಾರ್ಯಕ್ರಮದ ಅಂಗವಾಗಿ, ಹೊಸಪೇಟೆಯ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ “ಭಾರತವನ್ನು ತಿಳಿಯಿರಿ” ಎಂಬ ವಿಷಯದ ಮೇಲೆ ದಿನಾಂಕ 10-01-2026 ರಂದು ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಪ್ರಥಮ ಹಂತದ ಸ್ಪರ್ಧೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮೂರು ಶಾಲೆಗಳ ವಿದ್ಯಾರ್ಥಿಗಳಿಗೆ ದಿನಾಂಕ 22-01-2026 ರಂದು ಹೊಸಪೇಟೆಯ ಶ್ರೀ ನರ್ಬಾದಬಾಯಿ ಪ್ರೌಢಶಾಲೆಯಲ್ಲಿ ಎರಡನೇ ಹಂತದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಈ ಅಂತಿಮ ಸ್ಪರ್ಧೆಯಲ್ಲಿ ಹೊಸಪೇಟೆ ನೆಹರು ಕಾಲೋನಿಯ ಸರ್ಕಾರಿ ಪ್ರೌಢಶಾಲೆ – ಪ್ರಥಮ ಸ್ಥಾನ
ಶ್ರೀ ನರ್ಬಾದಬಾಯಿ ಪ್ರೌಢಶಾಲೆ – ದ್ವಿತೀಯ ಸ್ಥಾನ, ಕೆ.ಎಸ್.ಪಿ.ಎಲ್. ಪ್ರೌಢಶಾಲೆ – ತೃತೀಯ ಸ್ಥಾನ ಪಡೆದಿರುತ್ತವೆ.
ಕಾರ್ಯಕ್ರಮದಲ್ಲಿ ಕಿರ್ಲೋಸ್ಕರ್ ಆಫೀಸರ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಕಮಲಾ ಗುಮಾಸ್ತೆ ಹಾಗೂ ಹೊಸಪೇಟೆಯ ಖಜಾನೆಯ ನಿವೃತ್ತ ಅಧಿಕಾರಿಗಳಾದ ಶ್ರೀ ವೆಂಕಟೇಶ್ ಮೂರ್ತಿ ಅವರು ಬಹುಮಾನ ಗಳಿಸಿದ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳು ಮತ್ತು ಪದಕಗಳನ್ನು ಪ್ರದಾನ ಮಾಡಿದರು. ಅತಿಥಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರೋತ್ಸಾಹಕಾರಿ ಮಾತುಗಳನ್ನು ಆಡಿದರು. ಈ ಕಾರ್ಯಕ್ರಮದ ಮುಖ್ಯ ರೂವಾರಿಯಾಗಿದ್ದ ರಚನಾ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಅವರು ರಸಪ್ರಶ್ನೆ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಿಕೊಟ್ಟರು.
Rajana Foundation Trust ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ ಪೂರ್ಣಗೊಳಿಸುವಲ್ಲಿ ಹೊಸಪೇಟೆಯ ರಚನಾ ಫೌಂಡೇಶನ್ ಸಂಚಾಲಕರು ಹಾಗೂ ಕಿರ್ಲೋಸ್ಕರ್ ಕಾರ್ಖಾನೆಯ ಸುರಕ್ಷತಾ ವಿಭಾಗದ ಮ್ಯಾನೇಜರ್ ಶ್ರೀ ಮುರುಳೀಧರ್ ನಾಡಿಗೇರ್ ಅವರು ಕಳೆದ ಒಂದು ತಿಂಗಳಿನಿಂದ ಶ್ರಮವಹಿಸಿ ಪ್ರಮುಖ ಪಾತ್ರವಹಿಸಿದರು. ಕಾರ್ಯಕ್ರಮವು ಭಾರತಮಾತೆಗೆ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭವಾಗಿ ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಯಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಕಮಲಾ ಗುಮಾಸ್ತೆ, ಶ್ರೀ ವೆಂಕಟೇಶ್ ಮೂರ್ತಿ ಹಾಗೂ ಈ ಕಾರ್ಯಕ್ರಮ ಆಯೋಜನೆಗೆ ನೇರ ಸಹಕಾರ ನೀಡಿದ ನರ್ಬಾದಬಾಯಿ ಪ್ರೌಢಶಾಲೆಯ ಉಪಾಧ್ಯಾಯಿನಿ ಶ್ರೀಮತಿ ರೀಥಾ ಇವರನ್ನು ಸನ್ಮಾನಿಸಿ ಧನ್ಯವಾದಗಳನ್ನು ಸಲ್ಲಿಸಲಾಯಿತು.
ವರಧಿ
ಮುರುಳೀಧರ್ ನಾಡಿಗೇರ್
Canara Bank Rural Self Employment Training Institute ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವಿವಿಧ ತರಬೇತಿಗೆ ಅರ್ಜಿ ಆಹ್ವಾನ
Canara Bank Rural Self Employment Training Institute ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರು (ಶಿವಮೊಗ್ಗ ತಾಲ್ಲೂಕು) ಇಲ್ಲಿ ಉಚಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಯು 18 ರಿಂದ 49 ವರ್ಷ ವಯೋಮಿತಿ ಒಳಗಿನವರಾಗಿರಬೇಕು ಮತ್ತು 8ನೇ ತರಗತಿ ಉತ್ತೀರ್ಣರಾಗಿರಬೇಕು.
ಮತ್ತು ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿದು ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ.
ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
12 ದಿನಗಳ ಪಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯು 21/01/2026ರಿಂದ ಪ್ರಾರಂಭಗೊಳ್ಳಲಿದೆ.
06 ದಿನಗಳ ವಿಭಿನ್ನ ರೀತಿಯ ಬ್ಲೌಸ್ ಡಿಸೈನ್ ತರಬೇತಿ
26/01/2026 ರಿಂದ ಆರಂಭವಾಗಲಿದೆ.
13 ದಿನಗಳ ಕೃಷಿ ಉದ್ಯಮಿ ( ಸಮಗ್ರ ಕೃಷಿ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಎರೆಹುಳೂ ಗೊಬ್ಬರ ತಯಾರಿಕೆ ಇತ್ಯಾದಿ ) ತರಬೇತಿಯು
02/02/2026 ರಿಂದ ಆರಂಭವಾಗಲಿದೆ.
13 ದಿನಗಳ ಮಹಿಳಾ ಟೈಲರಿಂಗ್ ತರಬೇತಿಯು
09/02/2026 ರಿಂದ ಪ್ರಾರಂಭವಾಗಲಿದೆ.
Canara Bank Rural Self Employment Training Institute ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ:
ನಿರ್ದೇಶಕರು,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು-೫೭೭ ೨೧೬ (ಶಿವಮೊಗ್ಗ ತಾಲ್ಲೂಕು)
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. ೯೪೮೧೯೫೫೭೨೧,
೯೭೪೩೪೨೯೫೯೫, ೮೭೨೨೩೮೪೫೪೧, ೯೧೬೪೪೧೧೫೮೦, ೯೪೪೯೩೭೧೫೭೯, ೯೬೩೨೯೬೧೭೦೭
ಸಂಪರ್ಕಿಸಬಹುದು.
