Tuesday, August 4, 2026
Tuesday, August 4, 2026
Home Blog Page 2057

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಬಲಗೊಳ್ಳುತ್ತಿದೆ

0

ಕೇಂದ್ರಾಡಳಿತ ಪ್ರದೇಶದ ಸರ್ಕಾರವು ಜನರನ್ನು ಸಬಲೀಕರಣಗೊಳಿಸಲು ಹೊಸ, ಪಾರದರ್ಶಕ ಮತ್ತು ಜನಕೇಂದ್ರಿತ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.
ತಮ್ಮ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರ ವಲಯದ ಆಡಳಿತಗಾರರ ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ. ತಮ್ಮ ‘ಆವಾಮ್ ಕಿ ಆವಾಜ್’ ರೇಡಿಯೋ ಕಾರ್ಯಕ್ರಮದ ಮಾಸಿಕ ಸಂಚಿಕೆಯಲ್ಲಿ ಮಾತನಾಡಿದರು. ಲೆಫ್ಟಿನೆಂಟ್ ಗವರ್ನರ್ ಅವರು ನೀಟ್ ( NEET- UG) ಪರೀಕ್ಷೆಯಲ್ಲಿ ರಾಷ್ಟ್ರೀಯ ಟಾಪರ್ ಆದ ತನ್ಮಯ್ ಗುಪ್ತಾ ಮತ್ತು ಕ್ರಿಕೆಟಿಗ ಉಮ್ರಾನ್ ಮಲಿಕ್ ಅವರನ್ನು ಅಭಿನಂದಿಸಿದರು.ಇವರು ಜಮ್ಮು ಮತ್ತು ಕಾಶ್ಮೀರದ ಯುವ ಪೀಳಿಗೆಗೆ ಹೊಸ ರೋಲ್ ಮಾಡೆಲ್ ಎಂದು ಕರೆದರು. ಸರ್ಕಾರದ ಹಲವಾರು ಮಹತ್ವದ ನಿರ್ಧಾರಗಳು ಜನರ ಸಬಲೀಕರಣವನ್ನು ಮುನ್ನಡೆಸುತ್ತಿವೆ. ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಮೊದಲ ಬಾರಿಗೆ 7000 ನೇಮಕಾತಿಗಳನ್ನು ಅರ್ಹತೆಯ ಆಧಾರದ ಮೇಲೆ ಪಾರದರ್ಶಕ ರೀತಿಯಲ್ಲಿ ಮಾಡಲಾಗಿದೆ ಎಂದರು.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ಒಂದು ಬಾರಿ ವಯೋಮಿತಿ ಸಡಿಲಿಕೆ ಮತ್ತು ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಸರ್ಕಾರ ತೆಗೆದುಕೊಂಡಿರುವ ಮತ್ತೊಂದು ಪ್ರಮುಖ ನಿರ್ಧಾರವಾಗಿದೆ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರ ಆಡಳಿತವು ತಳಮಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ ಎಂದು ಸಿನ್ಹಾ ಹೇಳಿದ್ದಾರೆ.
ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು. ಉತ್ತಮ ಆಡಳಿತದ ತತ್ವಗಳನ್ನು ಅನುಷ್ಠಾನಗೊಳಿಸುವುದು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಾರ್ವಜನಿಕ ಸೇವೆಗಳಲ್ಲಿ ಸುಲಭವಾಗಿ ಪ್ರವೇಶಿಸುವಂತೆ ಮಾಡುವುದು. ಜೊತೆಗೆ ಯುವಕರಿಗೆ ಹೆಚ್ಚಿನ ಜೀವನೋಪಾಯದ ಅವಕಾಶಗಳನ್ನು ಸರ್ಕಾರ ಸೃಷ್ಟಿಸುತ್ತಿದೆ ಎಂದು ಅವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬಿಡಿಎ ಸ್ವಚ್ಛಗೊಳಿಸಲು ಶೀಘ್ರ ಕ್ರಮ- ಸಿಎಂ

0

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿಡಿಎ) ಮೇಲಿನ ಭ್ರಷ್ಟಾಚಾರ ಆರೋಪದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳ ವರದಿ ಸಲ್ಲಿಸಿದ ನಂತರ ಶಿಫಾರಸ್ಸುಗಳನ್ನು ತಪ್ಪದೇ ಪಾಲಿಸಲಾಗುವುದು. ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಯಾಗಿ ಇರಲಿ, ಅಧಿಕಾರಿಗಳೇ ಆಗಿರಲಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸಾಮಾನ್ಯ ಜನರಿಂದಲೂ ಬಿಡಿಎ ಅಕ್ರಮಗಳ ಬಗ್ಗೆ ದೂರುಗಳು ಬಂದಿದ್ದವು. ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಕೂಡ ಗಮನ ಸೆಳೆದಿದ್ದರು. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ತನಿಖೆ ಕೈಗೊಳ್ಳಲು ಸೂಚಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಸಾಮಾನ್ಯ ಜನರಿಗೆ ಅಗತ್ಯವಿರುವ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಬಿಡಿಎ ಸ್ವಚ್ಛಗೊಳಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜಸ್ಥಾನ್: ಸಚಿವ ಸಂಪುಟ ಪುನಾರಚನೆ

0

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಚಿವ ಸಂಪುಟ ವಿಸ್ತರಿಸಿದ್ದಾರೆ. 15 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ವಿಸ್ತರಿಸಿದ್ದೇನೆ. 2023ರ ವಿಧಾನಸಭೆ ಗಮನದಲ್ಲಿಟ್ಟುಕೊಂಡು ಇನ್ನೆರಡು ದಿನಗಳಲ್ಲಿ ಖಾತೆ ಹಂಚಿಕೆ ಮಾಡಲಾಗುವುದು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಂಪುಟ ಸದಸ್ಯರ ಗರಿಷ್ಠ ಸಂಖ್ಯೆ 30. ಈಗ ಮುಖ್ಯಮಂತ್ರಿ, 19 ಸಂಪುಟ ಸಚಿವರು ಮತ್ತು 10 ಸಹಾಯಕ ಸಚಿವರೊಂದಿಗೆ ಸಂಪುಟ ಭರ್ತಿಯಾಗಿದೆ. ಮಹಿಳಾ ಪ್ರಾತಿನಿಧ್ಯವೂ ಮೂರಕ್ಕೇರಿದೆ. ದಲಿತ ಸಮುದಾಯದ ನಾಲ್ವರಿಗೆ ಸಚಿವ ಸ್ಥಾನ ನೀಡಲಾಗಿದೆ.
11 ಸಂಪುಟ ಸಚಿವರು ಹಾಗೂ ನಾಲ್ವರು ಸಹಾಯಕ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿನ್ ಪೈಲೆಟ್ ಅವರು 18 ಬೆಂಬಲಿಗ ಶಾಸಕರೊಂದಿಗೆ 2019ರಲ್ಲಿ ಬಂಡಾಯ ಎದ್ದಾಗ ಸರ್ಕಾರಕ್ಕೆ ಬೆಂಬಲ ನೀಡಿದ 13 ಪಕ್ಷೇತರರ ಪೈಕಿ ಕೆಲವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಯಾವೊಬ್ಬ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ. ಬಿಎಸ್ಪಿಯನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದ ಆರು ಶಾಸಕರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಪೈಲೆಟ್ ಗೆ ಬೆಂಬಲ ನೀಡಿದ ಕಾರಣದಿಂದ ವಜಾಗೊಂಡಿದ್ದ ರಮೇಶ್ ಮೀನಾ ಮತ್ತು ವಿಶ್ವೇಂದ್ರ ಸಿಂಗ್ ಪುನಃ ಸಂಪುಟಕ್ಕೆ ಮರಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಚಾಕಲೇಟು, ಚೂಯಿಂಗ್ ಗಮ್ ನಲ್ಲಿ ಡ್ರಗ್ ಸಾಗಣೆ ಜಾಣತನ!

0

ದೇಶದ ಮೂರು ರಾಜ್ಯಗಳಲ್ಲಿ ಎನ್ ಸಿಬಿ ಕಾರ್ಯಾಚರಣೆ ನಡೆಸಿದೆ. ನಿಮಗೆ ಅಚ್ಚರಿಯಾಗಬಹುದು. ನಾವು ತಿನ್ನುವ ಚಾಕ್ಲೇಟ್, ಚೂಯಿಂಗ್ ಗಮ್, ಹಾಗೂ ನೆಟ್ಟು ಬೆಳೆಸುವ ತೆಂಗಿನ ಸಸಿ ಗಳಲ್ಲಿ ಬಚ್ಚಿಟ್ಟು ಸಾಗಿಸಲಾಗು ತ್ತಿದೆ.

ಕರ್ನಾಟಕ, ಆಂಧ್ರ ಪ್ರದೇಶ, ಮತ್ತು ಕೇರಳ ರಾಜ್ಯಗಳ ನಡೆಸಿದ ಡ್ರಗ್ಸ್ ಪತ್ತೆ ಕಾರ್ಯಾಚರಣೆ ಇದು ಕಂಡುಬಂದಿದೆ.

ಬೆಂಗಳೂರಿನಲ್ಲಿ ದೊರೆತ ಪ್ರಾಥಮಿಕ ಮಾಹಿತಿಯನ್ನು ಆಧರಿಸಿ ಮೂರು ರಾಜ್ಯಗಳಲ್ಲಿ ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ಬೆಂಗಳೂರಿನಿಂದ ತಿರುವಂತಪುರ ಕ್ಕೆ ಪಾರ್ಸೆಲ್ ಮೂಲಕ ಡ್ರಗ್ಸ್ ಕಳುಹಿಸಲಾಗುತ್ತಿದೆ ಎಂದು ಮಾಹಿತಿ ದೊರಕಿತ್ತು. ಇದನ್ನು ಆಧರಿಸಿ ತಿರುವನಂತಪುರಂದಲ್ಲಿ ಪಾರ್ಸೆಲ್ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿದೆ. ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎನ್ ಸಿಬಿ ವಲಯ ನಿರ್ದೇಶಕ ಅಮಿತ್ ಘಾವಟೆ ತಿಳಿಸಿದ್ದಾರೆ.

244 ಗ್ರಾಂ ಆಂಫೆಟಮೈನ್ , 25 ಎಲ್ ಎಸ್ ಡಿ ಕಾಗದ ಚೂರುಗಳು, 2 ಗ್ರಾಂ ಮೆಥಾಂಫೆಟಮೈನ್ , 44ಗ್ರಾಂ ಮೆಥಾಂಕ್ಯುಮೈನ್ , ಮತ್ತು 212 ಕೆ.ಜಿ 500 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಎನ್ ಸಿಬಿ ನಿರ್ದೇಶಕ ತಿಳಿಸಿದ್ದಾರೆ.

ಚಾಕ್ಲೇಟ್, ಚೂಯಿಂಗ್ ಗಮ್, ತೆಂಗಿನಕಾಯಿ ಸಸಿಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಸಾಗಿಸಿದ ಆರು ಜನರನ್ನು ಬಂಧಿಸಲಾಗಿದೆ.

ತಮಿಳುನಾಡು ಮತ್ತು ಕೇರಳದಲ್ಲಿ ಹಲವು ದಿನಗಳಿಂದ ಮಳೆ ಬೀಳುತ್ತಿದೆ.ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಪೆಡ್ಲರ್ ಗಳು ಡ್ರಗ್ಸ್ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಪೆಡ್ಲರ್ ಗಳು ತಮ್ಮದೇ ಆದ ಗ್ಯಾಂಗ್ ಮೂಲಕ ಡ್ರಗ್ಸ್ ಸಾಗಣಿಕೆ ಮಾಡುತ್ತಿದ್ದರು. ಈ ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚುವರಿ ತನಿಖೆ ಮುಂದುವರಿಯುತ್ತಿದೆ ಎಂದು ಎನ್ ಸಿಬಿ ವಲಯ ನಿರ್ದೇಶಕ ಅಮಿತ್ ಘಾವಟೆ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆಂಧ್ರಪ್ರದೇಶ: 100 ಗ್ರಾಮಗಳಲ್ಲಿ ರೆಡ್ ಅಲರ್ಟ್ ಘೋಷಣೆ

0

ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಧಾರ್ಮಿಕ ಕ್ಷೇತ್ರ ತಿರುಪತಿಯು ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿಯೇ ಈಗ ಆಂಧ್ರಪ್ರದೇಶದಲ್ಲಿ ಅತಿ ದೊಡ್ಡ ಅಣೆಕಟ್ಟೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ.
ಅಣೆಕಟ್ಟೆಯ ಏರಿಗಳಲ್ಲಿನ ಕೆಲವು ಬಿರುಕುಗಳಿಂದ ನೀರು ಸೋರಿಕೆ ಆಗುತ್ತಿರುವುದನ್ನು ಗಮನಿಸಿದ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.
ತಿರುಪತಿ ಬಳಿ ಇರುವ ರಾಮಚಂದ್ರಪುರಂನಲ್ಲಿನ ರಾಯಲಚಿರುವು ಅಣೆಕಟ್ಟಿನಲ್ಲಿ ಬಿರುಕುಗಳು ಕಂಡುಬಂದಿವೆ. ಇದರಿಂದ ಭಾರಿ ಮಳೆ ನಡುವೆ ಮತ್ತೊಂದು ಅನಾಹುತದ ಆತಂಕ ಎದುರಾಗಿದೆ.
ತಕ್ಷಣ ಕ್ರಮ ಕೈಗೊಂಡ ಜಿಲ್ಲಾಡಳಿತವು, ಅಣೆಕಟ್ಟೆ ಕೆಳಭಾಗದಲ್ಲಿರುವ ಸುಮಾರು 100 ಗ್ರಾಮಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ದಾಖಲೆಗಳು ಹಾಗೂ ಅಗತ್ಯ ಪದಾರ್ಥಗಳ ಜೊತೆ ಆದಷ್ಟು ಶೀಘ್ರ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗುತ್ತಿದೆ.
ಚೆನ್ನೈ ಹಾಗೂ ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಮಳೆಯಿಂದ ರಸ್ತೆ ತೀವ್ರ ಹಾನಿಯಾದ ಹಿನ್ನೆಲೆಯಲ್ಲಿ ಪಡುಗು ಪಡುವಿನಲ್ಲಿ ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಪರಿಣಾಮ ನೂರಾರು ಲಾರಿಗಳು ರಸ್ತೆಬದಿ ಸಾಲಾಗಿ ನಿಂತು, ವಾಹನ ದಟ್ಟಣೆ ಉಂಟಾಗಿದೆ. ಕಡಪ ಅನಂತಪುರ ಸಂಪರ್ಕಿಸುವ ಪಾಪ ಗಣಿ ನದಿ ಸೇತುವೆ ಕುಸಿದಿದ್ದು, ಚೆನ್ನೈ- ವಿಜಯವಾಡ ರೈಲ್ವೆ ಮಾರ್ಗದ 17 ಎಕ್ಸ್ ಪ್ರೆಸ್ಸ್ ರೈಲುಗಳ ಸಂಚಾರ ರದ್ದು ಪಡಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಸಂಭವಿಸಿದ ದುರಂತಗಳಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೇಂದ್ರದಿಂದ ಬೇಗ ಪರಿಹಾರ – ಸಚಿವೆ ಶೋಭಾ ಕರಂದ್ಲಾಜೆ

0

ಕರ್ನಾಟಕದಲ್ಲಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರದ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿಯೂ ಸಹ ಬೆಳೆ ಹಾನಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಲ್ಲ ಮಾಹಿತಿ ಲಭ್ಯವಾದ ಬಳಿಕ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಬೆಳೆ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ ತಮಿಳುನಾಡಿನಲ್ಲಿ ಭಾರಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಗೃಹ ಸಚಿವರು ಹಾಗೂ ಪ್ರಧಾನಮಂತ್ರಿಯವರು ಸಂಪರ್ಕದಲ್ಲಿದ್ದಾರೆ. ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಳೆ, ಬೆಳೆ ಹಾನಿ: ಶೀಘ್ರ ಪರಿಹಾರ- ಸಿಎಂ

0

ಚಿಕ್ಕಬಳ್ಳಾಪುರದಲ್ಲಿ ಬಿದ್ದ ಭಾರಿ ಮಳೆ ಪರಿಣಾಮವಾಗಿ, ಹಲವಾರು ಜನ ಮನೆ ಕಳೆದುಕೊಂಡಿದ್ದಾರೆ. ಮನೆ ಕಳೆದುಕೊಂಡವರಿಗೆ ಪರಿಹಾರ ಹಣ ಹಾಗೂ ಬೆಳೆ ಹಾನಿ ಬಗ್ಗೆ ತ್ವರಿತ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಮಂದಿ ತಮ್ಮ ವಾಸದ ಮನೆ ಕಳೆದುಕೊಂಡಿದ್ದಾರೆ. ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಮಳೆಯಿಂದಾಗಿ ಜಖಂ ಆದ ಮನೆಗಳಿಗೆ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ.

ಚಿಕ್ಕಬಳ್ಳಾಪುರದ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಂಕಷ್ಟಗಳನ್ನು ಮುಖ್ಯಮಂತ್ರಿಗಳು ಆಲಿಸಿದರು. ಇದರ ಬಗ್ಗೆ ಕ್ರಮ ಕೈಗೊಳ್ಳಲು ಬೆಂಗಳೂರಿನ ಉನ್ನತ ಅಧಿಕಾರಿಗಳು, ಸಚಿವರ ಸಭೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ನಿರಾಶ್ರಿತರ ನೆರವಿಗೆ ತಕ್ಷಣ ಧಾವಿಸಬೇಕು. ವಿಪತ್ತು ನಿರ್ವಹಣಾ ತಂಡ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು. ಬೆಳೆಹಾನಿಗೆ ಸಂಬಂಧಿಸಿದ ಪರಿಹಾರ ನೀಡಲು ಪ್ರಸ್ತಾವನೆ ಸಿದ್ಧಪಡಿಸಬೇಕು. ನಷ್ಟದ ಅಂದಾಜಿನ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಚಿನ್ನದ ಹೂಡಿಕೆಯತ್ತ ಮನಸ್ಸು ಕೊಟ್ಟ ಜನ

0

ಚಿನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆಭರಣ ಬೇಕೋ, ನಗದು ಹಣ ಬೇಕೋ ಎಂದು ಕೇಳಿದರೆ ಬುದ್ದಿವಂತರ ಆಯ್ಕೆ ಚಿನ್ನವೆ. ನಗದು ಹಣಕ್ಕೆ ಹೋಲಿಸಿದರೆ ಬಿಟ್ ಕಾಯಿನ್ ಮೌಲ್ಯವೇ ಜಾಸ್ತಿ. ಬಿಟ್ ಕಾಯಿನ್ ಗಿಂತ ಚಿನ್ನದ ಮೌಲ್ಯವೇ ಜಾಸ್ತಿ. ಹಾಗಾಗಿ,
ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ವಜ್ರಾಭರಣಗಳ ಮೇಲೆ ಬಂಡವಾಳ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಈಗ ಚಿನ್ನಾಭರಣಗಳ ವಹಿವಾಟು ಶೇಕಡಾ 20 ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ವಜ್ರ ಚಿನ್ನ ಮತ್ತು ಬೆಳ್ಳಿ ಆಭರಣಗಳ ವಹಿವಾಟು ಸಾಮಾನ್ಯ ದಿನಗಳಿಗಿಂತ 20% ಹೆಚ್ಚಾಗಿದೆ. ಇದರಿಂದ ಚಿನ್ನಾಭರಣಗಳ ದರ ಏರಿಕೆಯಾಗಿದೆ. ಹೂಡಿಕೆದಾರರಿಗೆ ಚಿನ್ನ ಅತ್ಯಂತ ಸುರಕ್ಷಿತ. ಹೀಗಾಗಿ, ಕೆಲವರು ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳ ಖರೀದಿಯಲ್ಲಿ ತೊಡಗಿದ್ದಾರೆ ಎಂದು ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾದ ಡಾ. ಬಿ ರಾಮಾಚಾರಿ ಅವರು ತಿಳಿಸಿದ್ದಾರೆ.
2015ರಲ್ಲಿ ಪ್ರತಿ ಗ್ರಾಂ. ಚಿನ್ನಕ್ಕೆ ಸರಾಸರಿ 2,600 ರೂಪಾಯಿ ಇತ್ತು. ಈಗ ಪ್ರತಿ ಗ್ರಾಂ. ಚಿನ್ನದ ಬೆಲೆ 4,650 ರೂಪಾಯಿ ಇದೆ. ಐದು ವರ್ಷಗಳಲ್ಲಿ ನಾನಾ ಹಂತದಲ್ಲಿ ಹೂಡಿಕೆ ಮಾಡುತ್ತಿರುವ ಸಂಖ್ಯೆ ಹೆಚ್ಚಳವಾಗಿದೆ. ಒಟ್ಟಾರೆಯಾಗಿ ಐದು ವರ್ಷಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಶೇಕಡಾ 80 ರಷ್ಟು ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಶ್ರೀಮಂತರು ಹಾಗೂ ರಾಜಕಾರಣಿಗಳು ಚಿನ್ನಾಭರಣಗಳ ಮೇಲೆ ನೂರಾರು ಕೋಟಿ ರೂಪಾಯಿ ಕಪ್ಪು ಹಣ ಹೂಡಿಕೆ ಮಾಡುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಸಾವಿರಾರು ಕೋಟಿ ರೂಪಾಯಿ ಚಿನ್ನದ ವಹಿವಾಟು ನಡೆಯುತ್ತಿತ್ತು. ಇದನ್ನು ತಡೆಯಲು ಕೇಂದ್ರ ಸರಕಾರ ಈಗಾಗಲೇ ಪ್ರತಿ ಆಭರಣಕ್ಕೂ ಶಾಶ್ವತವಾಗಿ ಯುಐಡಿ (ವಿಶೇಷ) ಸಂಖ್ಯೆ ನೀಡುವ ಯೋಜನೆ ಜಾರಿಗೆ ತಂದಿದೆ. ಅಲ್ಲದೆ ಚಿನ್ನ ಖರೀದಿ ಸಂದರ್ಭದಲ್ಲಿ ಚಿನ್ನ ಬೇಡ ಮಾಲೀಕರು ನಕಲಿ ಬಿಲ್ ತಯಾರಿಸಿ ಸರ್ಕಾರಕ್ಕೂ ತೆರಿಗೆ ವಂಚಿಸಿರುವ ಪ್ರಕರಣಗಳು ನಡೆಯುತ್ತಿದ್ದವು. ಅದನ್ನು ತಡೆಯಲು ಹಾಲ್ ಮಾರ್ಕ್ ಯುಐಡಿ ಯೋಜನೆ ಜಾರಿಯಾಗಿದೆ. ಎರಡು ಲಕ್ಷ ರೂಪಾಯಿ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಯ ಚಿನ್ನ ಖರೀದಿಸಿದರೆ ಬಿಲ್ ಹಾಗೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಇಷ್ಟೇಲ್ಲಾ ನಿಯಮಗಳಿದ್ದರೂ ಕಾನೂನುಬಾಹಿರವಾಗಿ ಹಣ ಸಂಪಾದಿಸುವ ಅಧಿಕಾರಿಗಳು, ರಾಜಕೀಯ ನಾಯಕರು ಮತ್ತು ಉದ್ದಿಮೆದಾರರು ಕೋಟ್ಯಂತರ ರೂಪಾಯಿಗಳನ್ನು ಚಿನ್ನದ ಗಟ್ಟಿಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರೈಲು ಹಳಿ ಸ್ಪೋಟ :ಹೈ ಅಲರ್ಟ್

0

ಜಾರ್ಖಂಡಿನ ರಿಚುಗುಟಾ ಮತ್ತು ಡೆಮು ನಿಲ್ದಾಣಗಳ ನಡುವಿನ ರೈಲ್ವೆ ಹಳಿಗಳನ್ನು ಸ್ಪೋಟ ಸಂಭವಿಸಿದೆ. ದಾಳಿ ಬೆನ್ನಲ್ಲೇ ಈ ವಿಭಾಗದ ಎಲ್ಲಾ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಪಲಮು ವಲಯದ ಡಿಐಜಿ ರಾಜಕುಮಾರ್ ತಿಳಿಸಿದ್ದಾರೆ.
ಜಾರ್ಖಂಡ್ ನ ಲಾತೇಹಾರ್ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ ( ಮಾವೋವಾದಿ) ಸಂಘಟನೆಯ ಸದಸ್ಯರು ರೈಲು ಹಳಿಯನ್ನು ಸ್ಪೋಟಿಸಿದ್ದಾರೆ. ಇದರಿಂದಾಗಿ ಈ ಮಾರ್ಗದಲ್ಲಿ ಬಂದ ಧನ್ ಬಾಗ್ ವಿಭಾಗದ ಡೀಸೆಲ್ ರೈಲ್ವೆ ಇಂಜಿನ್ ಹಳಿ ತಪ್ಪಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಿಂದಾಗಿ ಬರ್ಕಾಕಾನಾಗಡ್ವಾ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಈ ಮಾರ್ಗದ ಹಲವು ರೈಲುಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಪಿಐ (ಮಾವೋವಾದಿ) ತನ್ನ ನಾಯಕ ಪ್ರಶಾಂತ್ ಬೋಸ್ ಅವರ ಬಂಧನವನ್ನು ವಿರೋಧಿಸಿ, ಶನಿವಾರ ರಾಷ್ಟ್ರವ್ಯಾಪ್ತಿ ಬಂದ್ ಗೆ ಕರೆ ನೀಡಿತ್ತು. ಬೋಸ್ ತಲೆಗೆ ಸರ್ಕಾರ ಒಂದು ಕೋಟಿ ರೂಪಾಯಿ ನಗದು ಪುರಸ್ಕಾರ ಘೋಷಿಸಿತ್ತು. ಜಾರ್ಖಂಡ್, ಬಿಹಾರ್, ಒಡಿಶಾ, ಪಶ್ಚಿಮ ಬಂಗಾಳ, ಛತ್ತಿಸ್ ಗಢ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಭಾಗದಲ್ಲಿ ನಡೆದಿರುವ ನೂರಕ್ಕೂ ಹೆಚ್ಚು ದಾಳಿಗಳ ಪ್ರಧಾನ ಸಂಚುಕೋರ ಬೋಸ್ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವರುಣನ ಆರ್ಭಟ ಅಪಾರ ಬೆಳೆ ಹಾನಿ

0

ಕಳೆದ ಕೆಲವು ವಾರಗಳಿಂದ ವರುಣನ ಆರ್ಭಟಕ್ಕೆ ಇಡೀ ರಾಜ್ಯದ ಜನತೆ ತತ್ತರಿಸಿದೆ. ಮಳೆಯಿಂದಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಸೋಲ ಮಾಡಿ ಬೆಳೆದಂತಹ ಬೆಳೆಗಳಿಂದ ಮಳೆರಾಯನ ಅವಾಂತರದಿಂದ ಸಂಪೂರ್ಣ ನೀರುಪಾಲಾಗಿದೆ.

ಅಕಾಲಿಕ ಮಳೆಯಿಂದಾಗಿ ರಾಜ್ಯದ 21 ಜಿಲ್ಲೆಗಳಲ್ಲಿ ಭತ್ತ, ಮೆಕ್ಕೆಜೋಳ, ರಾಗಿ ಸೇರಿದಂತೆ ಪ್ರಮುಖ ಬೆಳೆಗಳೆಲ್ಲ ನೆಲಕಚ್ಚಿವೆ ಹಿಂಗಾರಿನ ಕೊನೆ ಅವಧಿಯಲ್ಲಿ ಬಿತ್ತಿ ದಂತಹ ಬೀಜವೂ ನೀರಿನಲ್ಲಿ ಕೊಚ್ಚಿ ಹೋಗಿವೆ. ವಾಣಿಜ್ಯ ಬೆಳೆಗಳು ನಾಶವಾಗಿದ್ದು ಇದರಿಂದ ರೈತರು ಹೈರಾಣಾಗಿದ್ದಾರೆ.

ಮಳೆರಾಯನ ಆರ್ಭಟಕ್ಕೆ ಪ್ರಮುಖ ಬೆಳೆಗಳಾದ 10,000 ಹೆಕ್ಟೇರ್ ಕಾಫಿ, 36,000 ಈರುಳ್ಳಿ, 53,000 ಹೆಕ್ಟೇರ್ ರಾಗಿ, 47,000 ಭತ್ತ, 20,000 ಹೆಕ್ಟೇರ್ ಕಡಲೆ, 9,000 ಹೆಕ್ಟೇರ್ ಅಡಿಕೆ, 20,000 ಹೆಕ್ಟೇರ್ ಮೆಕ್ಕೆಜೋಳ, 5,000 ಹೆಕ್ಟೇರ್ ಮೆಣಸು ಹಾಗೂ 5,000 ಹೆಕ್ಟೇರ್ ಸೂರ್ಯಕಾಂತಿ ಬೆಳೆಗಳು ನಾಶವಾಗಿವೆ ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.