Tuesday, August 4, 2026
Tuesday, August 4, 2026
Home Blog Page 2058

ಶಿವಮೊಗ್ಗದಲ್ಲಿ ಜಿಲ್ಲಾ ಯುವ ಜನೋತ್ಸವ

0

ವಿದ್ಯಾರ್ಥಿಗಳು, ಯುವಸ್ಪರ್ಧಿಗಳು ತಮ್ಮಲ್ಲಿರುವ ವಿವಿಧ ಪ್ರತಿಭೆಯನ್ನು ಅನಾವರಣಗೊಳಿಸಲು ಯುವಜನೋತ್ಸವ ಉತ್ತಮ ವೇದಿಕೆಯಾಗಿದ್ದು, ಉತ್ತಮ ಸ್ಪರ್ಧೆ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಒಳ್ಳೆಯ ಹೆಸರನ್ನು ತರಬೇಕೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹಾರೈಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಶಿವಮೊಗ್ಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾತನಾಡಿ, ಇಂದಿನ ಪೀಳೆಯಲ್ಲಿ ದೇಶದ ಮುಂದಿನ ಭವಿಷ್ಯ ಅಡಗಿದ್ದು, ಯುವಜನತೆ ಓದಿನೊಂದಿಗೆ ಇತರೆ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇತರೆ ಸಾಂಸ್ಕೃತಿಕ, ಜಾನಪದ, ಶಾಸ್ತ್ರೀಯ ಚಟುವಟಿಕೆಗಳನ್ನು ಉತ್ತೇಜಿಸಲು ಇಂತಹ ಯುವಜನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಇದು ಯುವಜನತೆಯ ಜೀವನದ ಸರ್ವತೋಮುಖ ಬೆಳವಣಿಗೆಗೆ ಕೂಡ ಸಹಕರಿಸುತ್ತದೆ ಎಂದರು.
ಕುವೆಂಪು ವಿವಿಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅಭಿವ್ಯಕ್ತಿಗೊಳಿಸಲು ಇದೊಂದು ಒಳ್ಳೆಯ ವೇದಿಕೆಯಾಗಿದ್ದು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸ್ವಯಂ ಸೇವಕರು ಪಾಲ್ಗೊಂಡಿದ್ದು, ರಾಷ್ಟ್ರಮಟ್ಟದಲ್ಲಿ ಹೆಸರು ತರಬೇಕೆಂದರು.


ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಟಿ.ಮಂಜುನಾಥಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಗಳನ್ನು ಕುವೆಂಪು ರಂಗಮಂದಿರ ಮತ್ತು ಸರ್ಕಾರಿ ನೌಕರರ ಭವನ ಈ ಎರಡು ವೇದಿಕೆಗಳಲ್ಲಿ 15 ರಿಂದ 29 ವರ್ಷದೊಳಗಿನ ಯುವಜನತೆಗೆ ಜಾನಪದ ನೃತ್ಯ(ಗುಂಪು), ಜಾನಪದ ಗೀತೆ(ಗುಂಪು), ಏಕಪಾತ್ರಾಭಿನಯ ವೈಯಕ್ತಿಕ(ಇಂಗ್ಲಿಷ್/ಹಿಂದಿ), ಶಾಸ್ತ್ರೀಯ ಸಂಗೀತ(ಹಿಂದೂಸ್ತಾನಿ ಮತ್ತು ಕರ್ನಾಟಿಕ್), ಶಾಸ್ತ್ರೀಯ ವಾದ್ಯ(ಸಿತಾರ, ಕೊಳಲು, ತಬಲಾ, ವೀಣಾ, ಮೃದಂಗಂ), ಹಾರ್ಮೋನಿಯಂ, ಗಿಟಾರ್, ಶಾಸ್ತ್ರೀಯ ನೃತ್ಯಗಳು(ಮಣಿಪುರಿ, ಒಡಿಸ್ಸಿ, ಕಥಕ್, ಕೂಚುಪುಡಿ, ಭರತನಾಟ್ಯ) ಮತ್ತು ಆಶುಭಾಷಣ (ಹಿಂದಿ/ಇಂಗ್ಲಿಷ್) ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನೆಹರು ಯುವ ಕೇಂದ್ರದ ಸಂಯೋಜಕ ಉಲ್ಲಾಸ್ ಕೆ.ಟಿ.ಕೆ ಇತರೆ ಇಲಾಖೆಯ ಅಧಿಕಾರಿಗಳು, ಯುವ ಸ್ಪರ್ಧಿಗಳು, ನಿರ್ಣಾಯಕರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕಮಲಾ ಹ್ಯಾರಿಸ್ ಗೆ ಅಲ್ಪಸಮಯದ ಅಧ್ಯಕ್ಷಗಿರಿ

0

ವಿಶ್ವದ ದೊಡ್ಡಣ್ಣ ಎಂದೇ ಹೆಸರುವಾಸಿಯಾಗಿರುವ ಅಮೇರಿಕಾ ದೇಶದ ಅಲ್ಪಾವಧಿಗೆ ಅಧ್ಯಕ್ಷರಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಕಾರ್ಯನಿರ್ವಹಿಸಿದರು.

1 ಗಂಟೆ 25 ನಿಮಿಷಗಳ ಕಾಲ ಶುಕ್ರವಾರ ಅಧ್ಯಕ್ಷೀಯ ಅಧಿಕಾರವನ್ನು ಚಲಾಯಿಸುವ ಮೂಲಕ ಈ ಜವಾಬ್ದಾರಿ ನಿರ್ವಹಿಸಿದ ಅಮೆರಿಕದ ಮೊದಲ ಮಹಿಳೆ ಎಂಬ ಕೀರ್ತಿಗೆ ಕಮಲ ಹ್ಯಾರಿಸ್ ಅವರು ಪಾತ್ರರಾಗಿದ್ದಾರೆ.

ವಾರ್ಷಿಕ ಆರೋಗ್ಯ ತಪಾಸಣೆ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷ ಅವರಿಗೆ ಅರವಳಿಕೆ ನೀಡಬೇಕಿದ್ದ ಕಾರಣ ತಾತ್ಕಾಲಿಕವಾಗಿ ಅಧ್ಯಕ್ಷೀಯ ಅಧಿಕಾರ ಚಲಾಯಿಸುವ ಜವಾಬ್ದಾರಿಯನ್ನು ಕಮಲ ಹ್ಯಾರಿಸ್ ಅವರಿಗೆ ನೀಡಲಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕರ್ನಾಟಕಕ್ಕೆ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ

0

ಸ್ವಚ್ಛತೆಯೆಡೆಗೆ ತ್ವರಿತವಾಗಿ ಸಾಗುತ್ತಿರುವ ರಾಜ್ಯ ವಿಭಾಗದ ಪ್ರಶಸ್ತಿಗೆ ಕರ್ನಾಟಕ ಭಾಜನವಾಗಿದೆ.
ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡುವ 2021 ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ವಿಭಾಗದ ವಿವಿಧ ಪ್ರಶಸ್ತಿಗಳಿಗೆ ರಾಜ್ಯದ 9 ನಗರ ಸ್ಥಳೀಯ ಸಂಸ್ಥೆಗಳು ಆಯ್ಕೆಯಾಗಿವೆ.
ಅರಮನೆ ನಗರಿ ಮೈಸೂರು 2021ರ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿಯಲ್ಲಿ 4 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸಮಗ್ರ ವಿಭಾಗದಲ್ಲಿ ಹನ್ನೊಂದನೇ ಸ್ಥಾನದಲ್ಲಿದೆ.
ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯವು ರಾಷ್ಟ್ರಮಟ್ಟದಲ್ಲಿ 2016ರಿಂದ ಸ್ವಚ್ಛ ಸರ್ವೇಕ್ಷಣಾ ಯೋಜನೆಯನ್ನು ನಡೆಸಿಕೊಂಡು ಬಂದಿದೆ. 2015, 2016 ರಲ್ಲಿ ಮೈಸೂರು ನಗರ ಸತತ ಎರಡು ಬಾರಿ ದೇಶದ ನಂಬರ್ ಒನ್ ಸ್ವಚ್ಛನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 2019ರಲ್ಲಿ ಸಮಗ್ರ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. 2020 ರಲ್ಲಿ ಪ್ರಥಮ ಬಾರಿಗೆ ರಾಂಕಿಂಗ್ ಹಾಗೂ ಸ್ವಚ್ಛನಗರಿ ಗೆ ಪ್ರತ್ಯೇಕ ಪ್ರಶಸ್ತಿ ನೀಡಲಾಯಿತು. ರಾಷ್ಟ್ರದ 4,360 ಪಟ್ಟಣ ಮತ್ತು ನಗರಗಳ ಸ್ಥಳೀಯ ಸಂಸ್ಥೆಗಳ ಕಾರ್ಯ ವೈಖರಿ ಬಗ್ಗೆ ಅವಲೋಕನ ಮತ್ತು ಸಮೀಕ್ಷೆ ನಡೆಸಿರುವ ಕೇಂದ್ರವು ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ಘೋಷಿಸಿದೆ.
ನೂರಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಿರುವ ರಾಜ್ಯಗಳ ಪೈಕಿ ಛತ್ತೀಸ್ ಘಡವು ಸ್ವಚ್ಛ ರಾಜ್ಯ ಪ್ರಶಸ್ತಿ ಪಡೆದಿದ್ದು, ರಾಜ್ಯಕ್ಕೆ 4ನೇ ಸ್ಥಾನ ದೊರೆತಿದೆ.
ಸ್ವಚ್ಛ ಸರ್ವೇಕ್ಷಣಾ ವಿಭಾಗದ ‘3 ಸ್ಟಾರ್’ ಪ್ರಶಸ್ತಿಗೆ ತುಮಕೂರು ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳು ಆಯ್ಕೆಯಾಗಿವೆ. ಹುಬ್ಬಳ್ಳಿ-ಧಾರವಾಡ ಸ್ವಚ್ಛತೆಯೆಡೆಗೆ ತ್ವರಿತವಾಗಿ ಸಾಗುತ್ತಿರುವ ‘ಮಧ್ಯಮ’ ನಗರ ಪ್ರಶಸ್ತಿಗೂ ಪಾತ್ರವಾಗಿವೆ.
50 ಸಾವಿರದಿಂದ 1 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಸಭೆಯು ಸ್ವಚ್ಛತೆಯೆಡೆಗೆ ತ್ವರಿತವಾಗಿ ಸಾಗುತ್ತಿರುವ ನಗರ ಪ್ರಶಸ್ತಿಗೆ, 25 ಸಾವಿರದಿಂದ 50 ಸಾವಿರ ಜನಸಂಖ್ಯೆಯ ವಿಭಾಗದಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ಉತ್ತಮ ಸುಸ್ಥಿರ ನಗರ ಪ್ರಶಸ್ತಿಗೆ ಆಯ್ಕೆಯಾಗಿದೆ. ಹೊಸದುರ್ಗ ಪುರಸಭೆಗೆ ದಕ್ಷಿಣ ವಲಯದ ಸ್ವಚ್ಛನಗರಿ ಪ್ರಶಸ್ತಿ, ಪಿರಿಯಾಪಟ್ಟಣ ಮತ್ತು ಕೆ.ಆರ್ .ನಗರ ಪುರಸಭೆಗಳು ಉತ್ತಮ ನಾಗರಿಕ ಸ್ಪಂದನೆ ವಿಭಾಗದ ಪ್ರಶಸ್ತಿ ಪಡೆದಿವೆ.
ಉತ್ತರಪ್ರದೇಶದ ವಾರಣಾಸಿ ನಗರವು ‘ಉತ್ತಮ ಗಂಗಾ ನಗರ’ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ಬಿಹಾರದ ಮುಂಗೇರ್ ಮತ್ತು ಪಟ್ನಾ ನಗರಗಳು ಈ ವಿಭಾಗದಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.
ಮಧ್ಯಪ್ರದೇಶದ ಇಂದೋರ್ ನಗರವು ಸತತ 5ನೇ ವರ್ಷ ದೇಶದ ಸ್ವಚ್ಛ ನಗರ ಪ್ರಶಸ್ತಿಗೆ ಭಾಜನವಾಗಿದೆ. ಗುಜರಾತ್ ನ ಸೂರತ್ ಮತ್ತು ಆಂಧ್ರಪ್ರದೇಶದ ವಿಜಯವಾಡ, ಉತ್ತರಪ್ರದೇಶದ ಹಾಪುರ್ ಮತ್ತು ಗುಜರಾತ್ ನ ರಾಜ್ಕೋಟ್ ನಗರಗಳು ಕ್ರಮವಾಗಿ ಎರಡರಿಂದ 5ನೇ ಸ್ಥಾನ ಗಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಗಡಿಯಲ್ಲಿ ಚೀನಾ ಚಟುವಟಿಕೆ ಭಾರತಕ್ಕೆ ಸುಳಿವು

0

ಅರುಣಾಚ ಪ್ರದೇಶ ಗಡಿಯಲ್ಲಿ ಚೀನಾ ಸೇನೆಯು ಗ್ರಾಮಗಳನ್ನು ನಿರ್ಮಿಸಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಆರಂಭದಲ್ಲೇ ಭಾರತೀಯ ಸೇನೆಯು ರಷ್ಯಾ ನಿರ್ಮಿತ ಎಸ್ -400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ವಾಸ್ತವ ಗಡಿ ರೇಖೆಯಲ್ಲಿ ನಿಯೋಜಿಸಲು ಸಿದ್ಧತೆ ಪ್ರಾರಂಭಿಸಿದೆ.
ಭಾರತದ ಪಾಲಿನ ಎಸ್ -400 ತ್ವರಿತವಾಗಿ ಪೂರೈಕೆ ಆಗುತ್ತಿರುವುದಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಆಪ್ತ ಸಂಬಂಧವೇ ಪ್ರಮುಖ ಕಾರಣ ಎನ್ನಲಾಗಿದೆ. ಇದೇ ಆಪ್ತತೆಯನ್ನು ಮುಂದುವರಿಸಿರುವ ಉಭಯ ನಾಯಕರು, ಡಿ.6 ರಂದು ರಷ್ಯಾದ ಸೋಛಿಯಾ
ಬ್ಲ್ಯಾಕ್ ರೆಸಾರ್ಟ್ನಲ್ಲಿ ಮುಖಾ ಮುಖಿ ಭೇಟಿ ಆಗಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಈಗಾಗಲೇ ಹಂತಹಂತವಾಗಿ ಎಸ್-400 ವ್ಯವಸ್ಥೆಯ ಪ್ರಮುಖ ಉಪಕರಣಗಳು ಒಂದೊಂದಾಗಿ ರಷ್ಯಾದಿಂದ ಭಾರತಕ್ಕೆ ಪೂರೈಕೆಯಾಗಲು ಶುರುವಾಗಿವೆ. ಇದರ ಭಾಗವಾಗಿ ಆಳವಾದ ಪ್ರದೇಶಗಳ ನಿಗಾ ಇರಿಸುವ ಸಾಮರ್ಥ್ಯದ ಅತ್ಯಾಧುನಿಕ ರೆಡಾರ್ ಗಳು ಶೀಘ್ರವೇ ಭಾರತದ ಕೈಸೇರಿವೆ.
ಒಂದನ್ನು ಎಸ್ -400 ಲಡಾಕ್ ನಾ ಉತ್ತರದ ಗಡಿಭಾಗದಲ್ಲಿಯೂ, ಮತ್ತೊಂದನ್ನು ಅರುಣಾಚಲ ಪ್ರದೇಶದ ಗಡಿಯಲ್ಲಿಯೂ ನಿಯೋಜಿಸಲು ಭಾರತೀಯ ಸೇನೆ ತೀರ್ಮಾನಿಸಿದೆ.
ಕೆಲ ತಿಂಗಳ ಹಿಂದೆಯೇ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು (ಪಿಎಲ್ಎ) ಟಿಬೆಟ್, ಅರುಣಾಚಲ ಪ್ರದೇಶ ಮತ್ತು ಲಡಾಕ್ ಗಡಿಯಲ್ಲಿರುವ ತನ್ನ ನಿಂಗ್ಚಿ ಹಾಗೂ ನಾರಿ ಗರ್ ಗುನ್ಸಾ ವಾಯು ನೆಲೆಗಳಲ್ಲಿ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಗಳನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಉದ್ಯೋಗ ವಾರ್ತೆ

0

ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 07 ಸಂಖ್ಯೆಯ ಪ್ರೋಸೆಸ್ ಜಾರಿಕಾರ(ಪ್ರೋಸೆಸ್ ಸರ್ವರ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಶಿವಮೊಗ್ಗದ ಜಿಲ್ಲಾ ನ್ಯಾಯಾಲಯ ವೆಬ್‍ಸೈಟ್https://districts.ecourts.gov.in/shivamogga-onlinerecruitment ಅಥವಾ http://karnatakajudiciary.kar.nic.in/districtrecruitment.asp ನಲ್ಲಿ ನೀಡಲಾದ ಲಿಂಕ್ ಮೂಲಕ ಆನ್‍ಲೈನ್‍ನಲ್ಲಿ ನವೆಂಬರ್ 23 ರಿಂದ ಡಿಸೆಂಬರ್ 30 ರೊಳಗೆ ಸಲ್ಲಿಸಬಹುದು.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ ಕನಿಷ್ಟ 18 ವರ್ಷ ಮತ್ತು ಸಾಮಾನ್ಯ ವರ್ಗಕ್ಕೆ ಗರಿಷ್ಟ 35 ವರ್ಷ, 2ಎ, 2ಬಿ, 3ಎ, 3ಬಿ ಗೆ 38 ವರ್ಷಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 01 ಕ್ಕೆ 40 ವರ್ಷಗಳ ವಯೋಮಿತಿ(ವಿಧವೆ ಮತ್ತು ಅಂಗವಿಕಲರಿಗೆ 10 ವರ್ಷ ಸಡಿಲಿಕೆ ಹಾಗೂ ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು) ಇದೆ.
ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಯ ಅರ್ಜಿ ಶುಲ್ಕ ರೂ.200 ಆಗಿದ್ದು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ.100 ಹಾಗೂ ಪ.ಜಾತಿ, ಪ.ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ. ನಿಗದಿತ ಶುಲ್ಕವನ್ನು ನ್ಯಾಯಾಲಯ ಮೇಲೆ ನೀಡಲಾದ ವೆಬ್‍ಸೈಟ್ ಲಿಂಕ್‍ಗಳ ಮುಖಾಂತರ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಟೇಟ್ ಬ್ಯಾಂಕ್ ಕಲೆಕ್ಟ್ ಮೂಲಕ ಆನ್‍ಲೈನ್ ಪೇಮೆಂಟ್ ಸೌಲಭ್ಯದ ಮೂಲಕ ಪಾವತಿಸತಕ್ಕದ್ದು. ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅಭ್ಯರ್ಥಿಯ ಆಯ್ಕೆಯು ಕರ್ನಾಟಕ ಅಧೀನ ನ್ಯಾಯಾಲಯಗಳ(ಲಿಪಿ ಮತ್ತು ಇತರೆ ಹುದ್ದೆಗಳ)(ನೇಮಕಾತಿ) ನಿಯಮ 1982 ಮತ್ತು (ತಿದ್ದುಪಡಿ) ನಿಯಮ 2007 ರ ಪ್ರಕಾರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ವೆಬ್‍ಸೈಟ್‍ನ್ನು ವೀಕ್ಷಿಸಬಹುದೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮುಸ್ತಫ ಹುಸೇನ್ ಎಸ್.ಎ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕುಲ್ಗಾಂ : ಉಗ್ರನ ಹತ್ಯೆ, ವಿದ್ಯಾರ್ಥಿಗಳ ರಕ್ಷಣೆ

0

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಅರವತ್ತು ವಿದ್ಯಾರ್ಥಿಗಳ ರಕ್ಷಣೆ ಮಾಡಿ, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಒಬ್ಬ ಉಗ್ರನನ್ನು ಹತ್ಯೆಗೈಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಶ್ ಮುಂಜಿ ಪ್ರದೇಶದಲ್ಲಿ ಉಗ್ರರು ಅಡಗಿರುವ ಗುಪ್ತಚರ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಮತ್ತು ಸ್ಥಳೀಯ ಪೊಲೀಸರ ತಂಡವೂ ಕಾರ್ಯಾಚರಣೆಗೆ ಮುಂದಾಗಿದೆ.
ಮೃತ ಉಗ್ರನನ್ನು ಮುದಾಸಿರ್ ಅಹಮದ್ ಎಂದು ಗುರುತಿಸಲಾಗಿದ್ದು, 2018 ರಿಂದಲೂ ದಕ್ಷಿಣ ಕುಲ್ಗಾಮ್ ನಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ. ಭದ್ರತಾ ಪಡೆಗಳು ಕಾರ್ಯಾಚರಣೆ ಪ್ರಾರಂಭಿಸುವ ಮೊದಲೇ ಉಗ್ರರು ಅಡಗಿದ್ದ ಪ್ರದೇಶದ ಸುತ್ತಮುತ್ತಲಿದ್ದ ಶಾಲೆಗಳಲ್ಲಿನ 60 ಮಕ್ಕಳು ಹಾಗೂ ಸ್ಥಳೀಯರನ್ನು ಸುರಕ್ಷಿತವಾಗಿ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ನಂತರ ಉಗ್ರರನ್ನು ಸದೆಬಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬಲವಾದ ಸಾಕ್ಷ್ಯ ಇಲ್ಲ : ಜಾಮೀನು ನೀಡಲಾಗಿದೆ

ಐಷಾರಾಮಿ ಹಡಗಿನಲ್ಲಿನ ಡ್ರಗ್ಸ್ ಪಾರ್ಟಿ ಪ್ರಕರಣದ ಆರೋಪಿಯಾಗಿರುವ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಹಾಗೂ ಇತರ ಇಬ್ಬರು ಅಪರಾಧ ಎಸಗಿದ್ದಾರೆ ಎಂಬುದಕ್ಕೆ ಯಾವುದೇ ಬಲವಾದ ಸಾಕ್ಷಿಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದ ಸಂಬಂಧ ಆರ್ಯನ್ ಖಾನ್, ಅರ್ಬಾಜ್ ಹಾಗೂ ಧಮೇಚಾ ಅವರಿಗೆ ಅಕ್ಟೋಬರ್ 28ರಂದು ಜಾಮೀನು ನೀಡಲಾಗಿತ್ತು.

ಡ್ರಗ್ಸ್ ಪಾರ್ಟಿ ಪ್ರಕರಣದ ಈ ಮೂವರು ಆರೋಪಿಗಳ ವಾಟ್ಸಪ್ ಚಾಟ್ ಗಳಲ್ಲಿ ಆಕ್ಷೇಪಾರ್ಹ ಎನ್ನಬಹುದಾದಂತಹ ಯಾವುದೇ ಅಂಶಗಳಿಲ್ಲ, ಅಪರಾಧ ಎಸಗಲು ಆರೋಪಿಗಳು ಪಿತೂರಿ ನಡೆಸಿದ್ದಾರೆ ಎಂಬುದನ್ನು ಸಹ ಈ ಚಾಟ್ ಗಳು ತೋರಿಸುತ್ತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ತಾಳಗುಪ್ಪದಲ್ಲಿ ಸಂಭ್ರಮಾಚರಣೆ

0

ತಾಳಗುಪ್ಪ: ಕೇಂದ್ರ ಸರ್ಕಾರದ ಕೃಷಿ ಮಸೂದೆ ವಾಪಸಾತಿ ನಿರ್ಧಾರ ರೈತ ತಾಳಗುಪ್ಪ: ಕೇಂದ್ರ ಸರ್ಕಾರದ ಕೃಷಿ ಮಸೂದೆ ವಾಪಸಾತಿ ನಿರ್ಧಾರ ರೈತ ಹೋರಾಟಕ್ಕೆ ಸಂದ ಜಯ ಎಂದು ಶಿವಮೊಗ್ಗ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಚಂದ್ರಶೇಖರ  ಗೂರ್ಲುಕೆರೆ ಹೇಳಿದರು. ಅವರು ತಾಳಗುಪ್ಪದಲ್ಲಿ ಸಂಭ್ರಮಾಚರಣೆಯ ಪ್ರಯುಕ್ತ ಪಟಾಕಿ ಸಿಡಿಸಿ ಮಾತನಾಡಿದರು. 

ರೈತರ ವಿರೋಧವಾಗಿ ಯಾವುದೇ ಸರ್ಕಾರ ನಿರ್ಧಾರ ತೆಗೆದುಕೊಂಡರು ಅದು ಅಸಾದ್ಯ ಎಂಬುದು ಈ ಕೃಷಿ ಮಸೂದೆ ವಾಪಸಾತಿ ನಿಲುವಿನಿಂದ ತಿಳಿದಿದೆ. ಸರ್ಕಾರಗಳು ರೈತ ಸ್ನೇಹಿಯಾಗಿದ್ದರೆ ಮಾತ್ರಾ ಉಳಿಯಲು ಸಾದ್ಯ, ರಾಜ್ಯ ಸರ್ಕಾರವೂ ರೈತ ವಿರೋಧಿ ಮಸೂದೆಗಳನ್ನು ವಾಪಸು ಪಡೆಯಬೇಕು, ಇಲ್ಲದಿದ್ದಲ್ಲಿ ಇದೇ ಮಾದರಿ ಹೋರಾಟ ಮಾಡಲಾಗುವುದು ಎಂದರು.

ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮೂಗೀಮನೆ ಗಣಪತಿ ಹೆಗಡೆ, ಮೆಡಿಕಲ್ ರಾಮಣ್ಣ, ಆಟೋ ಚಾಲಕರ ಸಂಘದ ಅಧ್ಯಕ್ಷ ಮಾದೇವ್, ಮತ್ತಿತರರು ಪಾಲ್ಗೊಂಡಿದ್ದರು. 

ವರದಿ ಕೃಪೆ – ರಾಘವೇಂದ್ರ ಶರ್ಮ ತಲವಾಟ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬಿಡಿಎ ಗೆ ಎಸಿಬಿ ಧಾಳಿ

0

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಧಾಳಿ ನಡೆಸಿ ನೂರಾರು ಕೋಟಿ ರೂಪಾಯಿ ಮೌಲ್ಯದ ಅಕ್ರಮಗಳನ್ನು ಪತ್ತೆಹಚ್ಚಿದೆ.

ನಿವೇಶನ ಹಂಚಿಕೆ ಭೂಸ್ವಾಧೀನ ಮತ್ತು ಜಮೀನು ಮಾಲೀಕರಿಗೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ದೂರುಗಳನ್ನು ಆಧರಿಸಿ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ. ಬೆಂಗಳೂರು ನಗರದ ಘಟಕದ ಕಚೇರಿಯಲ್ಲಿ ಬಿಡಿಎ ಅಧಿಕಾರಿಗಳ ವಿರುದ್ಧ ಎಸಿಬಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಏಕಕಾಲಕ್ಕೆ 30 ಹೆಚ್ಚು ಕಚೇರಿಗಳಲ್ಲಿ ಎಸಿಬಿ ಶೋಧ ನಡೆಸಿ ನೂರಾರು ಕಡತಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ.

ಬೆಂಗಳೂರು ನಗರದ ವಿವಿಧೆಡೆ ನಿರ್ಮಾಣವಾಗುತ್ತಿರುವ ಅಂತಹ ಬಡಾವಣೆಗಳಲ್ಲಿ ಕೆಲವರಿಗೆ ಅರ್ಹತೆ ಇಲ್ಲದಿದ್ದರೂ ಮೂಲಸೌಕರ್ಯಕ್ಕೆ ಕಾಯ್ದಿರಿಸಿದ ನಿವೇಶನಗಳ ಹಂಚಿಕೆ ಮಾಡಲಾಗಿದೆ. ಬಿಡಿಎ ಅಧಿಕಾರಿಗಳು ಕೆಲವು ಖಾಸಗಿ ಸಂಘಗಳ ಪಾತ್ರ ಅಧಿಕಾರಿಗಳ ಜೊತೆಗೂಡಿ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವುದು, ಒಂದೇ ನಿವೇಶನವನ್ನು ಇಬ್ಬರಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿರುವುದು ಹಾಗೂ ಫಲಾನುಭವಿಗಳು ಪಾವತಿಸಿದ ಹಣವನ್ನು ಪ್ರಾಧಿಕಾರದ ಬ್ಯಾಂಕ್ ಖಾತೆಗೆ ವರ್ಗಾಯಿಸುವ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಾಕ್ಷಿಗಳು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಧಾಳಿಯಲ್ಲಿ ಬೆಂಗಳೂರು ನಗರದ ಎಸಿಬಿ ಎಸ್ಪಿ ಜಿ.ಹೆಚ್.ಸತೀಶ್ ಚಂದ್ರ, ಆಡಳಿತ ವಿಭಾಗದ ಎಸ್ಪಿ ಅಬ್ದುಲ್ ಅಹದ್ ಮತ್ತು ಕೇಂದ್ರ ಸ್ಥಾನದ ಎಸ್ಪಿ ಉಮಾ ಪ್ರಶಾಂತ್ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಉತ್ತರಕರ್ನಾಟಕ:ಮಳೆಗೆ ತತ್ತರ!

0

ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ನಾಶ ಹಾಗೂ ಜೀವ ಹಾನಿಯಾಗಿದೆ.

ಧಾರವಾಡ, ಹಾವೇರಿ, ವಿಜಯನಗರ, ಉತ್ತರ ಕನ್ನಡ ಇನ್ನು ಹಲವಾರು ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಈರುಳ್ಳಿ, ಮೆಣಸಿನಕಾಯಿ, ಭತ್ತ ಬೆಳೆಗಳಿಗೆ ಹಾನಿಯಾಗಿವೆ.

ಹಾವೇರಿ ಜಿಲ್ಲೆಯಲ್ಲಿ 567 ಮನೆಗಳು, ವಿಜಯನಗರ ಜಿಲ್ಲೆಯಲ್ಲಿ 65 ಮನೆಗಳು ಹಾನಿಯಾಗಿವೆ. ಹುಬ್ಬಳ್ಳಿಯಲ್ಲಿ 9 ಮನೆಗಳು ಕುಸಿದಿದೆ. ಒಟ್ಟು 1331 ಹೆಕ್ಟೇರ್ ಬೆಳೆ ಹಾಳಾಗಿದೆ.

ನವೆಂಬರ್ 23ರ ವರೆಗೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದಲ್ಲಿ ರಾತ್ರಿ ಮನೆ ಕುಸಿದು ಪ್ರಭಾಕರ್ ಎಂಬಾತ ಮೃತಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹಂಪಿ ಸ್ನಾನಘಟ್ಟ, ಚಕ್ರತೀರ್ಥ, ವಿಜಯನಗರ ಕಾಲದ ಕಾಲುಸೇತುವೆ, ಪುರಂದರ ಮಂಟಪ ಸ್ಮಾರಕಗಳು ಜಲಾವೃತಗೊಂಡಿವೆ.1633 ಅಡಿ ಸಾಮರ್ಥ್ಯದ ತುಂಗಭದ್ರಾ ಜಲಾಶಯ ಪೂರ್ಣ ವಾಗಿ ಭರ್ತಿಯಾಗಿದ್ದು,ನದಿಗೆ ನೀರು ಹರಿಸಲಾಗುತ್ತಿದೆ. ಒಳಹರಿವಿನ ಪ್ರಮಾಣ 50ಸಾವಿರ ಕ್ಯೂಸೆಕ್ ಇದೆ. ಅಷ್ಟೇ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದೆ. 12 ಕ್ರಸ್ಟ್ ಗೇಟ್ ಗಳಿಂದ ನೀರು ಹರಿಸಲಾಗುತ್ತಿದೆ. ನದಿಯಂಚಿನಲ್ಲಿ ವಾಸಿಸುತ್ತಿರುವ ಜನರಿಗೆ ಎಚ್ಚರಿಕೆ ಯಲ್ಲಿ ಇರುವಂತೆ ತಿಳಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.