ಚಿನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆಭರಣ ಬೇಕೋ, ನಗದು ಹಣ ಬೇಕೋ ಎಂದು ಕೇಳಿದರೆ ಬುದ್ದಿವಂತರ ಆಯ್ಕೆ ಚಿನ್ನವೆ. ನಗದು ಹಣಕ್ಕೆ ಹೋಲಿಸಿದರೆ ಬಿಟ್ ಕಾಯಿನ್ ಮೌಲ್ಯವೇ ಜಾಸ್ತಿ. ಬಿಟ್ ಕಾಯಿನ್ ಗಿಂತ ಚಿನ್ನದ ಮೌಲ್ಯವೇ ಜಾಸ್ತಿ. ಹಾಗಾಗಿ,
ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ವಜ್ರಾಭರಣಗಳ ಮೇಲೆ ಬಂಡವಾಳ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಈಗ ಚಿನ್ನಾಭರಣಗಳ ವಹಿವಾಟು ಶೇಕಡಾ 20 ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ವಜ್ರ ಚಿನ್ನ ಮತ್ತು ಬೆಳ್ಳಿ ಆಭರಣಗಳ ವಹಿವಾಟು ಸಾಮಾನ್ಯ ದಿನಗಳಿಗಿಂತ 20% ಹೆಚ್ಚಾಗಿದೆ. ಇದರಿಂದ ಚಿನ್ನಾಭರಣಗಳ ದರ ಏರಿಕೆಯಾಗಿದೆ. ಹೂಡಿಕೆದಾರರಿಗೆ ಚಿನ್ನ ಅತ್ಯಂತ ಸುರಕ್ಷಿತ. ಹೀಗಾಗಿ, ಕೆಲವರು ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳ ಖರೀದಿಯಲ್ಲಿ ತೊಡಗಿದ್ದಾರೆ ಎಂದು ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾದ ಡಾ. ಬಿ ರಾಮಾಚಾರಿ ಅವರು ತಿಳಿಸಿದ್ದಾರೆ.
2015ರಲ್ಲಿ ಪ್ರತಿ ಗ್ರಾಂ. ಚಿನ್ನಕ್ಕೆ ಸರಾಸರಿ 2,600 ರೂಪಾಯಿ ಇತ್ತು. ಈಗ ಪ್ರತಿ ಗ್ರಾಂ. ಚಿನ್ನದ ಬೆಲೆ 4,650 ರೂಪಾಯಿ ಇದೆ. ಐದು ವರ್ಷಗಳಲ್ಲಿ ನಾನಾ ಹಂತದಲ್ಲಿ ಹೂಡಿಕೆ ಮಾಡುತ್ತಿರುವ ಸಂಖ್ಯೆ ಹೆಚ್ಚಳವಾಗಿದೆ. ಒಟ್ಟಾರೆಯಾಗಿ ಐದು ವರ್ಷಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಶೇಕಡಾ 80 ರಷ್ಟು ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಶ್ರೀಮಂತರು ಹಾಗೂ ರಾಜಕಾರಣಿಗಳು ಚಿನ್ನಾಭರಣಗಳ ಮೇಲೆ ನೂರಾರು ಕೋಟಿ ರೂಪಾಯಿ ಕಪ್ಪು ಹಣ ಹೂಡಿಕೆ ಮಾಡುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಸಾವಿರಾರು ಕೋಟಿ ರೂಪಾಯಿ ಚಿನ್ನದ ವಹಿವಾಟು ನಡೆಯುತ್ತಿತ್ತು. ಇದನ್ನು ತಡೆಯಲು ಕೇಂದ್ರ ಸರಕಾರ ಈಗಾಗಲೇ ಪ್ರತಿ ಆಭರಣಕ್ಕೂ ಶಾಶ್ವತವಾಗಿ ಯುಐಡಿ (ವಿಶೇಷ) ಸಂಖ್ಯೆ ನೀಡುವ ಯೋಜನೆ ಜಾರಿಗೆ ತಂದಿದೆ. ಅಲ್ಲದೆ ಚಿನ್ನ ಖರೀದಿ ಸಂದರ್ಭದಲ್ಲಿ ಚಿನ್ನ ಬೇಡ ಮಾಲೀಕರು ನಕಲಿ ಬಿಲ್ ತಯಾರಿಸಿ ಸರ್ಕಾರಕ್ಕೂ ತೆರಿಗೆ ವಂಚಿಸಿರುವ ಪ್ರಕರಣಗಳು ನಡೆಯುತ್ತಿದ್ದವು. ಅದನ್ನು ತಡೆಯಲು ಹಾಲ್ ಮಾರ್ಕ್ ಯುಐಡಿ ಯೋಜನೆ ಜಾರಿಯಾಗಿದೆ. ಎರಡು ಲಕ್ಷ ರೂಪಾಯಿ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಯ ಚಿನ್ನ ಖರೀದಿಸಿದರೆ ಬಿಲ್ ಹಾಗೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಇಷ್ಟೇಲ್ಲಾ ನಿಯಮಗಳಿದ್ದರೂ ಕಾನೂನುಬಾಹಿರವಾಗಿ ಹಣ ಸಂಪಾದಿಸುವ ಅಧಿಕಾರಿಗಳು, ರಾಜಕೀಯ ನಾಯಕರು ಮತ್ತು ಉದ್ದಿಮೆದಾರರು ಕೋಟ್ಯಂತರ ರೂಪಾಯಿಗಳನ್ನು ಚಿನ್ನದ ಗಟ್ಟಿಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.