Wednesday, May 6, 2026
Wednesday, May 6, 2026
Home Blog Page 1967

ಮೇಲ್ಮನೆಗೆ ಚುನಾವಣೆ ಪ್ರಕ್ರಿಯೆ

0

20 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಇತರೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾರ ರಾಗಿದ್ದು ಇವರಲ್ಲಿ ಎಷ್ಟು ಮಂದಿ ಸದಸ್ಯರು ಮತದಾನಕ್ಕೆ ಅರ್ಹತೆ ಹೊಂದಿದ್ದಾರೆ ಎಂಬುದರ ಬಗ್ಗೆ ಇನ್ನೆರಡು ದಿನಗಳಲ್ಲಿ ಮತದಾರರ ಕರಡು ಪ್ರಕಟಿಸಲಾಗುವುದು. ಆಗಲೇ ಮತದಾರರ ನಿಖರ ಮಾಹಿತಿ ಸಿಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.

ವಿಧಾನಮಂಡಲದ ಮೇಲ್ಮನೆಯಲ್ಲಿ ತಮ್ಮ ಪಕ್ಷದ ಬಲ ಭದ್ರಗೊಳಿಸಿ ಕೊಳ್ಳಲು ಮೂರು ರಾಜಕೀಯ ಪಕ್ಷಗಳು ರಣತಂತ್ರ ಹೂಡುತ್ತಿವೆ. ಚುನಾವಣಾ ಆಯೋಗದ ಆದೇಶ ಹೊರಬಿದ್ದ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ.

ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯತ್ವದ ಅವಧಿ ಮುಗಿದಿದ್ದರೆ ಅವರಿಗೆ ಮತದಾನದ ಹಕ್ಕು ಇರುವುದಿಲ್ಲ. ಚುನಾವಣೆ ನಡೆಯುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅರ್ಹ ಮತದಾರರ ಪ್ರಕಟಿಸುವರು. ಬಿಬಿಎಂಪಿಯ 198, ತಾಲೂಕು ಪಂಚಾಯಿತಿ 3285 ಹಾಗೂ ಜಿಲ್ಲಾ ಪಂಚಾಯಿತಿ 1191 ಸದಸ್ಯರ ಅವಧಿ ಮುಗಿದಿದ್ದು ಮತ ಚಲಾವಣೆಯ ಹಕ್ಕು ಕಳೆದುಕೊಳ್ಳಲಿದ್ದಾರೆ ಎಂದು ಚುನಾವಣಾ ಅಧಿಕಾರಿ ಹೇಳಿದ್ದಾರೆ.

  • ಅರ್ಹ ಮತದಾರರ ಪಟ್ಟಿ…

ಚುನಾವಣೆಯ ಅಧಿಸೂಚನೆ ನವೆಂಬರ್ 16 ರಕ್ಕೆ
ನವೆಂಬರ್ 23 ರಂದು ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕವಾಗಿದೆ.‌ ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 10 ಬೆಳಗ್ಗೆ ಎಂಟರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14 ಮತಗಳ ಎಣಿಕೆ ಪ್ರಕ್ರಿಯೆ ಜರುಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ನ್ಯೂಜಿಲೆಂಡ್ ಪ್ರವಾಸ: ಭಾರತ ಕ್ರಿಕೆಟ್ ತಂಡ ಪ್ರಕಟ

0

ಭಾರತದ ಟಿ ಟ್ವೆಂಟಿ ಕ್ರಿಕೆಟ್ ತಂಡಕ್ಕೆ ನಾಯಕರನ್ನಾಗಿ ‘ಹಿಟ್ ಮ್ಯಾನ್’ ಖ್ಯಾತಿಯ ಬ್ಯಾಟ್ಸ್ ಮ್ಯಾನ್ ರೋಹಿತ್ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್ ಟಿ20 ಸರಣಿಯು ಇದೇ ತಿಂಗಳ 17ರಂದು ನಡೆಯಲಿದ್ದು, ಸರಣಿಯಲ್ಲಿ ಆಡುವ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ.

ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ವಿಶ್ವಕಪ್ ಟೂರ್ನಿ ನಂತರ ವಿರಾಟ್ ಟಿ20 ತಂಡದ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ. ವೇಗಿ ಜಸ್ ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ ಹಾಗೂ ಆಲ್-ರೌಂಡರ್ ಹಾರ್ದಿಕ್ ಪಾಂಡೆ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಕರ್ನಾಟಕದ ಕೆ ಎಲ್ ರಾಹುಲ್ ಅವರನ್ನು ತಂಡದ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕಿವೀಸ್ ವಿರುದ್ಧದ ಟಿ-20 ಸರಣಿಯಲ್ಲಿ ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಋತುರಾಜ್ ಗಾಯಕವಾಡ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವೆಂಕಟೇಶ ಅಯ್ಯರ್, ಯಜುವೇಂದ್ರ ಚಾಹಲ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಇವರುಗಳನ್ನ ಆಯ್ಕೆ ಮಾಡಲಾಗಿದೆ.

ಅಡಕೆ ವಿರುದ್ಧ ಮತ್ತೆ ಅಪಸ್ವರ

0

ಈಗಾಗಲೇ ಕರ್ನಾಟಕದ ಅಡಿಕೆ ಕೃಷಿಕರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಅಡಿಕೆ ರೋಗಕಾರಕ ಪದಾರ್ಥ ಹೊಂದಿಲ್ಲ
ಎಂದು ಸಂಘಟಿತರಾಗಿ ಹೋರಟ ನಡೆಸುತ್ತಿದ್ದಾರೆ.ಆದರೆ ನಡುವೆ ಯಾರದ್ದಾದರೂ ಕೀಟಲೆಗಳು ಇದ್ದೇ ಇರುತ್ತವೆ.
ಅಡಕೆ ,ಉದ್ಯಮವಾಗಿ ಹೇಗೆ ಬೆಳೆಸಬಹುದು ಎಂದು ವಿಚಾರ ಸಂಕಿರಣಗಳು ನಡೆಯುತ್ತಿವೆ.ಇಂತಹ ಸನ್ನಿವೇಶದಲ್ಲಿ ಸಂಸದರೊಬ್ಬರು
ಅಡಕೆ ಕ್ಯಾನ್ಸರ್ ಕಾರಕ ಎಂದು ರಾಗ ಎಳೆಯುತ್ತಿದ್ದಾರೆ….
ಪ್ರಸಂಗ ಹೀಗಿದೆ.

ಮಾರಕ ಕ್ಯಾನ್ಸರ್ ರೋಗಕ್ಕೆ ಅಡಕೆ ಸೇವನೆ ಕಾರಣವಾಗಿದೆ. ಜನರು ಅಡಕೆ ಸೇವಿಸದಂತೆ ನಿಷೇಧಿಸಬೇಕು ಎಂದು ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಾನ್ಯ ಪ್ರಧಾನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುತ್ತಿರುವೆ. ಪಾನ್ ಮಸಾಲದ ಪ್ರಮುಖ ಭಾಗವಾದ ಅಡಕೆ ಸೇವಿಸುವುದರಿಂದ ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ಕಾಯಿಲೆಗೆ ಜನರು ತುತ್ತಾಗಿ ತೊಂದರೆಗೊಳಗಾಗಿರುವುದನ್ನು ಸ್ವತಹ ನಾನೇ ನೋಡಿದ್ದೇನೆ. ಈ ಕಾರಣದಿಂದ ಮಾನವರ ಬಳಕೆಗೆ ಅಡಕೆಯನ್ನು ನಿಷೇಧಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅಲ್ಲದೆ ಅಡಕೆ ಸೇವನೆಯಿಂದ ಅಸ್ತಮಾ ರೋಗ ಉಲ್ಬಣವಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವುದು ಜೊತೆಗೆ ಉಸಿರಾಟ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಈ ಕಾರಣಕ್ಕಾಗಿ 2018ರಲ್ಲಿ ಮಹಾರಾಷ್ಟ್ರ ಸರ್ಕಾರ ಅಡಕೆ ಮಾರಾಟ ಮತ್ತು ಬಳಕೆ ನಿಷೇಧಿಸಿತ್ತು. ಹೀಗಾಗಿ ಮಾನವರ ಬಳಕೆಗೆ ಅಡಕೆ ನಿಷೇಧಿಸಿ ಆದರೆ ಧಾರ್ಮಿಕ ವಿಧಿ ವಿಧಾನಗಳಿಗೆ ಅಡಕೆ ಬಳಸಲು ಅನುಮತಿ ನೀಡಬೇಕೆಂದು ದುಬೆ ಅವರು ಪ್ರಧಾನಿಗಳಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

ದೇಶದಾದ್ಯಂತ ಅಡಕೆ ಬಗ್ಗೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಅದರಿಂದ ಟೀ ತಯಾರಿಸಿ ಭೇಷ್ ಅನಿಸಿಕೊಂಡಿರುವ
ನಿವೇದನ್ ನೆಂಪೆ ಅವರನ್ನ ಸಂಪರ್ಕಿಸಲು ಸಂಸದರಿಗೆ ಸೂಚಿಸಬೇಕಿದೆ. ನಮ್ಮ ಕರ್ನಾಟಕದ
ಅಡಕೆ ಪ್ರಾಧಿಕಾರದವರಾದರೂ ಆ ಪುಣ್ಯಾತ್ಮನಿಗೆ
ಮನವರಿಕೆಯಾಗುವ ರೀತಿ ತಿಳಿಸಬೇಕಿದೆ.

ಮತ್ತಷ್ಟು ಕನ್ನಡಿಗರಿಗೆ ಪದ್ಮ ಪುರಸ್ಕಾರ

0

ರಾಜ್ಯದ ಮೂರು ಸಾಧಕರಿಗೆ ಮಂಗಳವಾರ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವೈದ್ಯ ಮತ್ತು ಶಿಕ್ಷಣ ತಜ್ಞ ಬಿ.ಎಂ‌. ಹೆಗ್ಡೆ, ಪ್ಯಾರಾ ಅಥ್ಲೀಟ್ ಕೆ.ವೈ. ವೆಂಕಟೇಶ್, ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಸೇರಿದಂತೆ ಹಲವು ಗಣ್ಯರು ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮ ಪ್ರಶಸ್ತಿ ಸ್ವೀಕರಿಸಿದರು. ಕೆ. ವೈ. ವೆಂಕಟೇಶ್ ಹಾಗೂ ಮಂಜಮ್ಮ ಜೋಗತಿ ಅವರು ಪದ್ಮಶ್ರೀ ಹಾಗೂ ಬಿ.ಎಂ. ಹೆಗ್ಡೆ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಕೆ.ಎಸ್.ಚಿತ್ರಾ , ಅಗ್ರಿ ಶಿಲ್ಪಿ ಸುದರ್ಶನ್ ಸಾಹೂ ಅವರು ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದರೆ, ಎಸ್. ಪಿ. ಬಾಲಸುಬ್ರಮಣ್ಯಂ ಪರವಾಗಿ ಅವರ ಪುತ್ರ ಪದ್ಮವಿಭೂಷಣ ಸ್ವೀಕರಿಸಿದರು.
ಡಾ.ಬಿ.ಎಂ‌. ಹೆಗಡೆ ಅವರು ವ್ಹೀಲ್ ಚೇರ್ ನಲ್ಲಿ ಬಂದು ಪ್ರಶಸ್ತಿ ಪಡೆದುಕೊಂಡರು. ಜೋಗತಿ ಮಂಜಮ್ಮ ಅವರು ಪ್ರಶಸ್ತಿ ಪಡೆದ ಬಳಿಕ ರಾಷ್ಟ್ರಪತಿಯವರಿಗೆ ದೃಷ್ಟಿ ತೆಗೆಯುವ ಮೂಲಕ ಗಮನ ಸೆಳೆದರು.
ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್, ಕೇಂದ್ರದ ಮಾಜಿ ಸಚಿವ ರಾಮ್ ವಿಲಾಸ್ ಪಾಸ್ವಾನ್, ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಘೋಷಿಸಿದ್ದು, ಗೊಗೊಯ್ ಅವರ ಪತ್ನಿ, ಪಾಸ್ವಾನ್ ಅವರ ಪುತ್ರ ಹಾಗೂ ಪಟೇಲ್ ಪುತ್ರ ಪ್ರಶಸ್ತಿ ಸ್ವೀಕರಿಸಿದರು.
ಟೇಬಲ್ ಟೆನಿಸ್ ಆಟಗಾರ್ತಿ ಮೌಮಾದಾಸ್, ಕುಸ್ತಿಪಟು ವೀರೇಂದರ್ ಸಿಂಗ್, ಬಾಂಗ್ಲಾದೇಶ ವಿಮೋಚನೆ ಯುದ್ಧದಲ್ಲಿ ಮಹತ್ವದ ಪಾತ್ರವಹಿಸಿದ ಲೆಫ್ಟಿನೆಂಟ್ ಕರ್ನಲ್ ಖ್ವಾಜಿ ಸಜ್ಜದ್ ಅಲಿ ಜಹೀರ್, ಸೇರಿದಂತೆ 51 ಸಾಧಕರಿಗೆ ರಾಮನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ನಾಲ್ವರಿಗೆ ಪದ್ಮವಿಭೂಷಣ, ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಲಿಖಿಂಪುರ -ಖೇರಿ, ರೈತರು ಹತ್ಯೆ-ತನಿಖಾ ಪ್ರಗತಿ

0

ಲಿಖಿಂಪುರ -ಖೇರಿಯಲ್ಲಿ ರೈತರು ಸೇರಿ 8 ಮಂದಿಯ ಹತ್ಯೆ ಪ್ರಕರಣವು ಹೊಸ ತಿರುವು ಪಡೆದಿದೆ. ಕೇಂದ್ರ ಗ್ರಹ ಖಾತೆಯ ರಾಜ್ಯ ಸಚಿವ ಶ್ರೀ ಅಜಯ್ ಮಿಶ್ರ ಅವರ ಮಗ ಆಶಿಶ್ ಮಿಶ್ರಾ ಅವರ ಬಂಧೂಕಿನಿಂದ ಹಿಂಸಾಚಾರ ನಡೆದ ದಿನ ಗುಂಡು ಹಾರಿಸಲಾಗಿದೆ ಎಂಬುವುದನ್ನು ವಿಜ್ಞಾನ ವರದಿಯು ದೃಢಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆಶಿಶ್ ಅವರ ಬಂದೂಕು ಮತ್ತು ಅಂಕಿತ ಅವರ ಪಿಸ್ತೂಲಿನಿಂದ ಗುಂಡು ಹಾರಾಟ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಲಿಖಿಂ ಪುರ- ಖೇರಿಯಲ್ಲಿ ಹೇಳಿದ್ದಾರೆ. ಆಶಿಶ್ ಮತ್ತು ಅಂಕಿತ ಅವರೇ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದ್ದರು.
ರೈತರ ಮೇಲೆ ಎಸ್ಯುವಿ ವಾಹನ ಹರಿಸಿ ನಾಲ್ವರನ್ನು ಹತ್ಯೆ ಮಾಡಿದ ಆರೋಪ ಆಶಿಶ್ ಮತ್ತು ಅವರ ಗೆಳೆಯ ಅಂಕಿತ್ ದಾಸ್ ಮೇಲೆ ಇದೆ.
ತನಿಖೆ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಎಫ್ಐಆರ್ ದಾಖಲಾಗಿವೆ. ಆಶಿಶ್, ಅಂಕಿತ್ ಮತ್ತು ಇತರರ ವಿರುದ್ಧ ರೈತರು ಎಫ್ಐಆರ್ ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ 17 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈತರ ಮೇಲೆ ಹರಿದ ವಾಹನದಲ್ಲಿ ತಾವು ಇರಲಿಲ್ಲ ಎಂದು ಆಶಿಶ್ ಮತ್ತು ಅಜಯ್ ಮಿಶ್ರ ಅವರು ತನಿಖೆ ವೇಳೆ ಹೇಳಿದ್ದರು. ಆದರೆ ಎಸ್ ಯುವಿ ವಾಹನದಲ್ಲಿ ಆಶಿಶ್ ಇದ್ದರು ಎಂದು ರೈತರು ಹೇಳಿದ್ದಾರೆ‌.
ಹಿಂಸಾಚಾರದ ಬಳಿಕ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅಜಯ್ ಮಿಶ್ರ ಅವರು ರಾಜೀನಾಮೆ ಕೊಡಬೇಕು ಎಂಬ ಆಗ್ರಹ ಬಲವಾಗಿ ಕೇಳಿ ಬಂದಿತ್ತು. ಆದರೆ, ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಜೊತೆಗೆ ಅವರು ಇತ್ತೀಚೆಗೆ ವೇದಿಕೆ ಹಂಚಿಕೊಂಡಿದ್ದರು. ಪ್ರಕರಣದ ತನಿಖೆಯು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.

ಒನಕೆ ಓಬವ್ವ ಜಯಂತಿ.

0

ರಾಜ್ಯದಾದ್ಯಂತ ನ.11ರಂದು ಓಬವ್ವ ಜಯಂತಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.

ಚಿತ್ರದುರ್ಗದ ಇತಿಹಾಸದಲ್ಲಿ ಒನಕೆ ಓಬವ್ವಳ ಹೆಸರು ಮರೆಯಲು ಸಾಧ್ಯವಿಲ್ಲ. ನವೆಂಬರ್ 11ರಂದು ಓಬವ್ವನ ಜನ್ಮದಿನವಾದ ಕಾರಣ ಈ ದಿನವೇ ಓಬವ್ವ ಜಯಂತಿಯನ್ನಾಗಿ ಘೋಷಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಣೆ ನಡೆಯಲಿದೆ.

ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಕರ್ನಾಟಕದ ಇತರೆ ರಾಣಿಯರ ಸಾಲಿನಲ್ಲಿ ಓಬವ್ವ ಕೂಡ ಒಬ್ಬಳು ಎಂದು ಪರಿಗಣಿಸಲಾಗಿದೆ.

ಫ್ರೀ ಶಿಪ್ ಕಾರ್ಡ್: ಪ.ಜಾ/ ವರ್ಗ ಗಳ ವಿದ್ಯಾರ್ಥಿಗಳಿಗೆ ಸರಳ ಪ್ರವೇಶಾತಿ

0

ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಫ್ರೀಶಿಪ್ ಕಾರ್ಡ್ ವಿತರಣೆ, ಶುಲ್ಕ ಕಟ್ಟದೆ ಫ್ರೀಶಿಪ್ ಕಾರ್ಡ್ ತೋರಿಸಿದರೆ ಕಾಲೇಜು ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಹಲವು ವಿದ್ಯಾರ್ಥಿಗಳು ಕಾಲೇಜು ಪ್ರವೇಶದ ಸಂದರ್ಭದಲ್ಲಿ ಹಣವಿಲ್ಲದೆ ಇರಬಹುದು. ಇದರಿಂದ ಅನೇಕ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಾರೆ.ಇದನ್ನು ತಪ್ಪಿಸಲು ಸರಕಾರ ಫ್ರೀಶಿಪ್ ಕಾರ್ಡ್ ಯೋಜನೆ ಜಾರಿಗೆ ತಂದಿದೆ.
ಫ್ರೀಶಿಪ್ ಕಾರ್ಡ್ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯದೆ ಇರಲಿ ಎಂಬ ದೃಷ್ಟಿಯಿಂದ ರಚಿಸಲಾದ ಯೋಜನೆಯಾಗಿದೆ. ಫ್ರೀಶಿಪ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ತಾವು ಪ್ರವೇಶ ಪಡೆದಿರುವ ಕಾಲೇಜಿಗೆ ಹೋಗಿ ಕಾರ್ಡನ್ನು ತೋರಿಸಿದಲ್ಲಿ, ಯಾವುದೇ ಶುಲ್ಕವಿಲ್ಲದೆ ಉಚಿತ ಪ್ರವೇಶ ಪಡೆಯಬಹುದು.

ಕಾಲೇಜಿಗೆ ಸಮಾಜ ಕಲ್ಯಾಣ ಇಲಾಖೆಯು ವಿದ್ಯಾರ್ಥಿವೇತನ ನೀಡಿ, ಏಳು ದಿನಗಳೊಳಗೆ ಶುಲ್ಕ ಕಟ್ಟುವ ಬಗ್ಗೆ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಇದರಿಂದ ಕಾಲೇಜು ಉಚಿತ ಪ್ರವೇಶ ನೀಡಲಿದೆ. ಉಚಿತ ಪ್ರವೇಶ ಪಡೆದ ನಂತರ ಕಾಲೇಜು ಶುಲ್ಕವನ್ನು ಸಮಾಜ ಕಲ್ಯಾಣ ಇಲಾಖೆ ಪಾವತಿಸಲಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಎಸ್.ಎಸ್.ಪಿ ಪೋರ್ಟಲ್ ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಈ ವೆಬ್ ಪೋರ್ಟಲ್ ನಲ್ಲಿ ಹೋಗಿ ಕಾರ್ಡ್ ಗೆ ಅಪ್ಲೈ ಮಾಡಬೇಕು. ತದನಂತರ ಅದೇ ಪೋರ್ಟಲ್ ನಲ್ಲಿ ಫ್ರೀಶಿಪ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಕಾರ್ಡ್ ಗೆ ವಿದ್ಯಾರ್ಥಿವೇತನದ ನಂಬರ್ ನೀಡಲಾಗಿರುತ್ತದೆ. ಈ ಯೋಜನೆಯಿಂದ ವಿದ್ಯಾರ್ಥಿಗಳು ಶುಲ್ಕ ಪಾವತಿಯ ಸಂಕಷ್ಟದಿಂದ ಪಾರಾಗಬಹುದು.

ಪ್ರಸ್ತುತ ಈ ಕಾರ್ಡ್ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ಈ ಯೋಜನೆ ಜಾರಿಗೆ ತರುವ ಸಂಭವವಿದೆ.

ಆರಕ್ಷಕರಿಂದ, ಜನರಕ್ಷಣಾ ಕಾರ್ಯ

0

ಕುವೆಂಪು ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ನಿಧಾನಗತಿಯಿಂದಾಗಿ ವಾಹನ ಚಾಲಕರಿಗೆ ದಿನನಿತ್ಯವೂ ನರಕ ದರ್ಶನವಾಗುತ್ತಿದೆ.

ಪ್ರತಿಯೊಂದು ರಸ್ತೆಯು ಗುಂಡಿಮಯವಾಗಿದೆ. ಜೈಲು ಸರ್ಕಲ್ ನಲ್ಲಿ ಕುವೆಂಪು ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಲಾಗಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ರಸ್ತೆಯ ಗುಂಡಿಗಳಿಗೆ ಸರಿಯಾಗಿ ಮಣ್ಣು ಮುಚ್ಚಿಸದೆ ಇರುವುದರಿಂದ, ವಾಹನ ಸವಾರರು ಇಲ್ಲಿ ಸಂಚರಿಸಲು ಪರದಾಡುತ್ತಿದ್ದಾರೆ. ಇದನ್ನು ಗಮನಿಸಿದ ಸಂಚಾರಿ ಪೊಲೀಸರು ತಾವೇ ರಸ್ತೆ ಗುಂಡಿಗಳಿಗೆ ಮಣ್ಣು ಹಾಕಿ, ವಾಹನ ಸವಾರರಿಗೆ ನೆರವಾಗುವಂತೆ ಮಾಡಿದ್ದಾರೆ. ಇದರಿಂದ ವಾಹನ ಸಂಚಾರರಿಗೆ ಸಹಾಯಕವಾಗಿದೆ ಪೊಲೀಸರ ಕಾರ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂಚಾರಿ ಠಾಣೆ ಎಸ್.ಎಸ್.ಐ. ಮಂಜುನಾಥ್ ಹಾಗೂ ಚಾಲಕ ಪ್ರಕಾಶ್ ಸಿಬ್ಬಂದಿ ಹನುಮಂತಪ್ಪ ಇವರುಗಳು ಜೈಲು ಸರ್ಕಲ್ ನಲ್ಲಿ ಗುಂಡಿ ಮುಚ್ಚಿದ್ದಾರೆ. ಇದರಿಂದ ವಾಹನ ಸವಾರರು ಕೊಂಚ ನಿರಾಳರಾಗಿದ್ದಾರೆ.

ಜೈ ಪೋಲಿಸ್.

ಮಕ್ಕಳ ಆಗಮನ : ಅಂಗನವಾಡಿ ಸಡಗರ

0

ಕೋವಿಡ್-19 ಕಾರಣದಿಂದಾಗಿ ಸುಮಾರು ಒಂದೂವರೆ ವರ್ಷದಿಂದ ದೇಶದಾದ್ಯಂತ ಅಂಗನವಾಡಿ ಕೇಂದ್ರಗಳು ಸ್ಥಗಿತಗೊಂಡಿದ್ದವು.
ರಾಜ್ಯದಾದ್ಯಂತ ಅಂಗನವಾಡಿ,ಎಲ್.ಕೆ. ಜಿ-ಯುಕೆಜಿ ಬೌದ್ಧಿಕ ತರಗತಿಗಳು ಆರಂಭಗೊಂಡಿದೆ. ಅಂಗನವಾಡಿಯತ್ತ ಆಗಮಿಸಿದ ಪುಟಾಣಿಗಳಿಗೆ ಚಾಕಲೇಟ್,ಸಿಹಿ ತಿನಿಸುಗಳು, ಬಲೂನನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಚಿಣ್ಣರನ್ನು ಸ್ವಾಗತಿಸಲು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತರಗತಿಗಳನ್ನು ಸಂಪೂರ್ಣವಾಗಿ ಶುಚಿ ಗೊಳಿಸಿ, ಸ್ಯಾನಿಟೈಸ್ ಮಾಡಲಾಗಿದೆ.ಹಾಗೂ ಚಿಣ್ಣರ ಆಗಮನಕ್ಕೆ ಬಲೂನ್ ಗಳಿಂದ ತರಗತಿಗಳನ್ನು ಸಿಂಗರಿಸಲಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಚೀನಾ, ಅಮೆರಿಕವನ್ನ ನಕಲು ಮಾಡುತ್ತಿದೆ

0

ಅಮೆರಿಕ ನೌಕಾಪಡೆಯ ಯುದ್ಧ ವಿಮಾನಗಳ ಪೂರ್ಣ ಮಾದರಿ, ಆರ್ ಲೀಗ್ ಬರ್ಕ್ ಮಾರ್ಗದರ್ಶಿ ಕ್ಷಿಪಣಿ ಧ್ವಂಸದ ಎರಡು ಮಾದರಿಗಳು, ಆರು ಮೀಟರ್ ಉದ್ದದ ರೈಲು ವ್ಯವಸ್ಥೆ, ಅದರ ಮೇಲೆ ಹಡುಗು ಗಾತ್ರದ ನಿರ್ದಿಷ್ಟ ಗುರಿ ಇರುವಂತೆ ಮಾದರಿಯನ್ನು ರೂಪಿಸಲಾಗಿದೆ. ಈ ಸಂಕೀರ್ಣವನ್ನು ಭೂಮಿಯಿಂದ ಭೂಮಿಗೆ ಉಡಾವಣೆ ಮಾಡಬಹುದಾದ ಕ್ಷಿಪಣಿಗಳ ಪ್ರಯೋಗಕ್ಕೆ ಬಳಸಲಾಗುತ್ತಿದೆ ಎಂದು ಜಿಯೊಸ್ಪೆಷಿಯಲ್ ಇಂಟೆಲಿಜೆನ್ಸ್ ಕಂಪನಿಯ ಮೂಲಗಳನ್ನು ಆಧರಿಸಿ ಅಮೇರಿಕಾದ ನೌಕಾ ಸಂಸ್ಥೆಯು ತಿಳಿಸಿದೆ.
ಅಮೆರಿಕ ನೌಕಾಪಡೆ ಯುದ್ಧ ವಿಮಾನಗಳು, ಇತರೆ ಯುದ್ಧ ಹಡಗುಗಳ ಮಾದರಿಗಳನ್ನು ಚೀನಾ ಸೇನೆಯು, ಅಲ್ಲಿನ ಮರುಭೂಮಿ ಕ್ಸಿನ್ ಜಿಯಾಂಗ್ ನಲ್ಲಿ ರೂಪಿಸಿದೆ. ತರಬೇತಿ ಗುರಿಯಾಗಿ ಬಳಸುವುದು ಇದರ ಉದ್ದೇಶ ಎನ್ನಲಾಗಿದೆ.
ಚೀನಾದ ಹಡಗು ನಿರೋಧಕ ಕ್ಷಿಪಣಿ ಕಾರ್ಯಕ್ರಮದ ಉಸ್ತುವಾರಿಯನ್ನು ಅಲ್ಲಿನ ಪೀಪಲ್ಸ್ ಲಿಬರೇಷನ್ ಆರ್ಮಿ ರಾಕೆಟ್ ಫೋರ್ಸ್ (ಪಿಎಲ್ಎಆರ್ ಎಫ್) ಹೊಂದಿದೆ. ಚೀನಾದ ರಕ್ಷಣಾ ಸಚಿವಾಲಯ ಈ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.