ಕರ್ನಾಟಕ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮದ ವತಿಯಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಲ್ಲಿ ನಿಗಮದಿಂದ ವಾಹನ ಖರೀದಿಗೆ ರೂ.3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂಧು ಪೋರ್ಟೆಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 3-ಎ ನಲ್ಲಿ ಕ್ರಮ ಸಂಖ್ಯೆ 1 ರ(ಎ) ಯಿಂದ (ಟಿ) ರವರೆಗೆ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್‌ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಹಳ್ಳಿಕಾರ್, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮ,ರಡ್ಡಿ, ಗೌಂಡರ್, ನಾಮಧಾರಿಗೌಡ, ಉಪ್ಪಿನ ಕೊಳಗ/ಉತ್ತಮ ಕೊಳಗ ಸಮುದಾಯಕ್ಕೆ ಸೇರಿದ ಜಾತಿಗಳಿಗೆ ಅನ್ವಯವಾಗುತ್ತದೆ.
ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ್ ಕಾರ್ಡನಲ್ಲಿರುವಂತೆ ಅರ್ಜಿದಾರರ ಹೆಸರು ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಕ್ ಪಾಸ್ ಪುಸ್ತಕದಲ್ಲಿಯೂ ಇರುವಂತೆ ಹೊಂದಾಣಿಕೆಯಾಗಬೇಕು. ಕುಟುಂಬದ ವಾರ್ಷಿಕ ವರಮಾನ 3.00 ಲಕ್ಷಗಳ ಒಳಗಿರಬೇಕು ಮತ್ತು ವಯಸ್ಸು 21 ರಿಂದ 45 ವರ್ಷ ಒಳಗಿನವರಾಗಿಬೇಕು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಯಾವುದಾದರು ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು. ಸರ್ಕಾರದ ವಿವೇಚನಾ ಕೋಟಾ/ ನಿಗಮದ ಅಧ್ಯಕ್ಷರು / ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಲ್ಲಿ ಸೌಲಭ್ಯ ಪಡೆಯಬಯಸುವವರು ಸಹ ಆನ್‌ಲೈನ್‌ನಲ್ಲಿಯೇ ಅರ್ಜಿಯನ್ನು ಸಲ್ಲಿಸಬೇಕು.
ಆಸಕ್ತರು ಸೇವಾಸಿಂಧು ಪೋರ್ಟಲ್ ನ ಗ್ರಾಮ್ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಗಳ ಮೂಲಕ ಆನ್ ಲೈನ್ ಮೂಲಕ ಮಾರ್ಚ್ 6 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದರೆ.
ಹೆಚ್ಚಿನ ಮಾಹಿತಿಗೆ ನಿಗಮದ ಜಾಲತಾಣ https://kvcdc.karnataka.gov.in ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಾಲರಾಜ್ ಅರಸ್ ರಸ್ತೆ, ಕೆ.ಇ.ಬಿ. ಸರ್ಕಲ್ ಹತ್ತಿರ,ಶಿವಮೊಗ್ಗ. ದೂ,ಸಂ: 08182-229634 ನ್ನು ಸಂಪರ್ಕಿಸುವುದು.
ಒಕ್ಕಲಿಗ ಅಭಿವೃದ್ಧಿ ನಿಗಮದ ವತಿಯಿಂದ ಆಹಾರವಾಹಿನಿ ಯೋಜನೆ ಸಹಾಯಧನ ಸೌಲಭ್ಯ ಪ್ರಕಟಣೆ.
KSMC and Advertising Limited ಕೆಎಸ್ಎಂಸಿ & ಎ ದ ವ್ಯವಸ್ಥಾಪಕ ನಿರ್ದೇಶಕರಾಗಿ ಬಿ.ಆನಂದ್ ಅಧಿಕಾರ ಸ್ವೀಕಾರ
KSMC and Advertising Limited ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಕೆಎಸ್‍ಎಂಸಿ&ಎ) ವ್ಯವಸ್ಥಾಪಕ ನಿರ್ದೇಶಕರಾಗಿ ಬಿ. ಆನಂದ್ ಅವರು ಅಧಿಕಾರ ವಹಿಸಿಕೊಂಡರು.
ಕೆಎಸ್‍ಎಂಸಿ&ಎ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮೊಹಮ್ಮದ್ ಅತೀಕುಲ್ಲಾ ಷರೀಫ್ ಅವರನ್ನು ಸರ್ಕಾರ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರಿನ ಜಂಟಿನಿರ್ದೇಶಕರ ಹುದ್ದೆಗೆ ವರ್ಗಾವಣೆಗೊಳಿಸಿದ ಹಿನ್ನೆಲೆಯಲ್ಲಿ, ತೆರವಾದ ಸ್ಥಾನಕ್ಕೆ ಚಿತ್ರದುರ್ಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ. ಆನಂದ್ ಅವರನ್ನು ಸರ್ಕಾರ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್‍ಗೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದ್ದು, ಬೆಂಗಳೂರಿನ ಕಚೇರಿಯಲ್ಲಿ ಆನಂದ್ ಅವರು ಗುರುವಾರ ಅಧಿಕಾರ ವಹಿಸಿಕೊಂಡರು.
B.Y. Raghavendra ವಂದೇಮಾತರಂ ಗೀತೆಗೆ ಸರ್ಕಾರದ ಮಹತ್ವದ ಮನ್ನಣೆ ಸ್ವಾಗತಾರ್ಹ ಕ್ರಮ,- ಬಿ.ವೈ.ರಾಘವೇಂದ್ರ
ವಂದೇ ಮಾತರಂ ಗೀತೆಗೆ 150 ವರ್ಷವಾದ ಹಿನ್ನೆಲೆಯಲ್ಲಿ ಕೇಂದ್ರದಿಂದ ಮಹತ್ವದ ನಿರ್ಧಾರ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
B.Y. Raghavendra ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂ ಗೀತೆಯನ್ನು ಹಾಡುವುದು ಅಥವಾ ನುಡಿಸುವುದು ಕಡ್ಡಾಯ. ಪದ್ಮ ಪ್ರಶಸ್ತಿ ಸೇರಿದಂತೆ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ, ರಾಷ್ಟ್ರಪತಿಗಳು ಭಾಗವಹಿಸುವ ಇತರ ಎಲ್ಲಾ ಕಾರ್ಯಕ್ರಮಗಳು, ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆ ನುಡಿಸಬೇಕು ಅಥವಾ ಹಾಡಬೇಕು. 3 ನಿಮಿಷ 10 ಸೆಕೆಂಡ್‌ಗಳ ವಂದೇ ಮಾತರಂ ಗೀತೆಯ 6 ಚರಣಗಳ ಗೀತೆ ನುಡಿಸುವಾಗ ಅಥವಾ ಹಾಡುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಹೊರಡಿಸಿದೆ ಎಂದು ಶಿವಮೊಗ್ಗ ಲೋಕಸಭಾಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ಸೂಚಿಸಿ, ಸ್ವಾಗತಿಸಿದ್ದಾರೆ
Department of Revenue ಜನರ ಅನುಕೂಲ ಮತ್ತು ಪಾರದರ್ಶಕತೆಗೆ ದಾಖಲೆಗಳ ಡಿಜಟಲೀಕರಣ.ಸಾರ್ವಜನಿಕರು ಸಹಕರಿಸಬೇಕು- ಸಚಿವ ಕೃಷ್ಣ ಭೈರೇಗೌಡ.
ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ, ಗ್ರಾಮ ಸೇವಕರು ಮನೆ ಬಾಗಿಲಿಗೆ ಬಂದು ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಜಮೀನುಗಳನ್ನು ಅವರ ವಾರಸುದಾರರ ಹೆಸರಿಗೆ ಪೌತಿ ಖಾತೆ ಮಾಡಿಕೊಡುವ ಅಭಿಯಾನ ಕೈಗೊಂಡಿದ್ದು ವಾರಸುದಾರರು ಇದಕ್ಕೆ ಸಹಕರಿಸಬೇಕೆಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರು ಮನವಿ ಮಾಡಿದರು.
ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇ-ಪೌತಿ ಖಾತೆ ಮಾಡಿಸುವ ಸಂಬಂಧ ವಿಎಓ ಗಳು ವಾರಸುದಾರರನ್ನು ಗುರುತು ಮಾಡಿ ವಿವರಗಳನ್ನು ಪಡೆದು ಕ್ರಮ ಕೈಗೊಳ್ಳಬೇಕು. ಓಟಿಪಿ ಸಮಸ್ಯೆ, ಕೋರ್ಟ್ ವ್ಯಾಜ್ಯ, ಹೆಣ್ಣು ಮಕ್ಕಳಿಗೆ ಆಸ್ತಿ ಕೊಡಬೇಕಾಗುತ್ತದೆಂದು ವಾರಸುದಾರರು ಮಾಹಿತಿ ನೀಡುತ್ತಿಲ್ಲ, ಎರಡು, ಮೂರು ತಲೆಮಾರಗಳ ಪ್ರಕರಣಗಳು ಕಷ್ಟ ಎಂಬ ಸಾಮಾನ್ಯ ಕಾರಣ ನೀಡದೇ ಪ್ರತಿ ಪ್ರಕರಣದಲ್ಲಿ ನಿಖರವಾದ ಕಾರಣ ತಿಳಿದು, ವಾರಸುದಾರರ ಮನವೊಲಿಸಿ ಕ್ರಮ ವಹಿಸಬೇಕು. ಹಾಗೂ 2021 ರ ಸುತ್ತೋಲೆ ಪ್ರಕಾರ ಅಭಿಯಾನ ಮಾದರಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಿದರು.
Department of Revenue ಜಿಲ್ಲೆಯಲ್ಲಿ 89434 ಇ-ಪೌತಿ ಪ್ರಕರಣಗಳು ಇದ್ದು, 12726 ಪೂರ್ಣಗೊಂಡಿದೆ. 45470 ಪ್ರಕರಣಗಳು ಬಾಕಿ ಇದ್ದು ಸಂಬಂಧಿಸಿದ ಅಧಿಕಾರಿಗಳು ಮಿಷನ್ ಮೋಡ್‌ಲ್ಲಿ ಕೆಲಸ ಮಾಡಿ ಮೊದಲ ಹಂತದಲ್ಲಿ ಶೇ.75 ರಷ್ಟು ಕೆಲಸ ಮಾಡುವಂತೆ ಸೂಚಿಸಿದ ಅವರು ರೂ. 5 ಕೋಟಿಯನ್ನು ಗ್ರಾಮ ಆಡಳಿತ ಅಧಿಕಾರಿ ಮತ್ತು ಗ್ರಾಮ ಸೇವಕರಿಗೆ ಪ್ರೋತ್ಸಾಹ ಧನ ರೂಪದಲ್ಲಿ ನೀಡಲಾಗುವುದು.
ಭೂ ಸುರಕ್ಷಾ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಡಿಇಓ ಗಳ ಮೂಲಕ ದಾಖಲೆಗಳನ್ನು ಸ್ಕಾö್ಯನ್ ಮಾಡಿಸಬೇಕು. ಈ ಯೋಜನೆಯಡಿ ಸಾಗರ ತಾಲ್ಲೂಕಿನಲ್ಲಿ ನಿಗದಿತ ಪ್ರಮಾಣದಲ್ಲಿ ಪ್ರಗತಿಯಾಗಿಲ್ಲ. ರೆಕಾರ್ಡ್ ರೂಮ್ ಕೌಂಟರ್ ಮೂಲಕ ಪಡೆಯಲಾಗುವ ದಾಖಲಾತಿಗಳಲ್ಲಿ ಭದ್ರಾವತಿ ತಾಲ್ಲೂಕಿನಲ್ಲಿ ಕಡಿಮೆ ಪ್ರಗತಿ ಇದ್ದು, ಮ್ಯಾನುಯಲ್ ಆಗಿ ದಾಖಲಾತಿ ನೀಡಬಾರದು ಎಂದು ಸೂಚನೆ ನೀಡಿದರು.
ಕಂದಾಯ ಗ್ರಾಮಗಳ ರಚನೆ : ರಿಜಿಸ್ಟರ್ಡ್ ಸೇಲ್ ಡೀಡ್ ಇರುವುದನ್ನು ಬಿಟ್ಟು ಉಳಿದವರಿಗೆ ವಾಸಿಸುವ ಜಾಗಕ್ಕೆ ಹಕ್ಕು ಪತ್ರ ನೀಡಬೇಕು. 4000 ಅಡಿಗೆ ಒಂದು ಟೈಟಲ್ ಸಿಗುತ್ತದೆ. ಹಕ್ಕುಪತ್ರ ನೀಡುವುದರಿಂದ ವಾಸಿಸುವ ಮನೆಯಾದ್ರೂ ಸ್ವಂತ ಆಗುತ್ತದೆ. ಅಧಿಕಾರಿಗಳು ಕಾನೂನಿನಲ್ಲಿ ಅವಕಾಶ ಇರುವುದನ್ನು ಮಾಡಿಕೊಡಬೇಕು. ಅರ್ಹರನ್ನು ಗುರುತಿಸಿ ಮಾರ್ಚ್ 16 ರೊಳಗೆ ಹಕ್ಕುಪತ್ರ ನೀಡಲು ಕ್ರಮವಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಈ ಮೂಲಕ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಮೋಜಿನಿ ವರದಿ: ಮೋಜಿನಿ ಸರ್ವೆಗಾಗಿ 19462 ಅರ್ಜಿಗಳು ಬಂದಿದ್ದು, ಸರ್ವೇ ಇಲಾಖೆಯಲ್ಲಿ 10525 ಬಾಕಿ, ತಹಶಿಲ್ದಾರ್/ಎಸಿ ಕಚೇರಿಯಲ್ಲಿ 7032 ಬಾಕಿ ಸೇರಿದಂತೆ 13557 ಬಾಕಿ ಇದೆ. ಲಭ್ಯವಿರುವ ಸರ್ವೇಯರ್‌ಗಳು, ರೋವರ್‌ಗಳನ್ನು ಬಳಸಿಕೊಂಡು ಸಕಾಲಿಕವಾಗಿ ಸರ್ವೇ ಮಾಡಲು ಕ್ರಮ ವಹಿಸಬೇಕು. ಇಲಾಖೆ ಅಧಿಕಾರಿ, ನೌಕರರು ಆಸಕ್ತಿಯಿಂದ ಬಡವರ ಪರವಾಗಿ ಕೆಲಸ ಮಾಡಬೇಕು ಎಂದರು.
ರೆವೆನ್ಯು ನಿವೇಶನಗಳಿಗೆ ಬಿ-ಖಾತೆ ನೀಡಬೇಕು. ಈ ಕುರಿತು ಅರಿವಿನ ಕೊರತೆ ಇದ್ದು ಅರಿವನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ ಆಸ್ತಿ ವ್ಯವಹಾರಗಳಿಗೆ ಕಷ್ಟವಾಗುತ್ತದೆ. ಹಳೇ ಆಸ್ತಿಗಳಿಗೆ ಇಸ್ವತ್ತು ಸಿಗುತ್ತಿಲ್ಲ. ಆದ್ದರಿಂದ ಡಿಸಿ, ಸಿಇಓ, ಗಳು ಜನರಿಗೆ ತೊಂದರೆಯಾಗದAತೆ ಅಂತಹ ಪ್ರಕರಣಗಳ ಕುರಿತು ಸೂಕ್ತ ಕ್ರಮ ವಹಿಸಬೇಕು ಎಂದು ತಿಳಿಸಿದರು. ರಿಜಿಸ್ರ‍್ಡ್ ಸೇಲ್ ಡೀಡ್ ಇಲ್ಲದವರಿಗೆ ಕಂದಾಯ ಗ್ರಾಮ ರಚನೆ (ನಗರ ಸೇರಿ)ಮೂಲಕ ಮಾತ್ರ ಸಹಾಯ ಮಾಡಬಹುದು. ಇಲ್ಲವಾದಲ್ಲಿ ಅವರಿಗೆ ತ್ರಿಶಂಕು ಪರಿಸ್ಥಿತಿ ಉಂಟಾಗುತ್ತದೆ. ಅದೂ ಕೂಡ ಮಾರ್ಚ್ 16 ರೊಳಗೆ ಮಾಡಬೇಕು ಎಂದರು.
ಇನ್ನು ಮುಂದೆ ಪಹಣಿಯೊಂದಿಗೆ ಸ್ಕೆಚ್, ಆಕಾರ್ ಬಂದ್ ಮತ್ತು ಮ್ಯುಟೇಷನ್ ಸೇರಿದಂತೆ ಸಮಗ್ರ ದಾಖಲೆಗಳು ಜನರಿಗೆ ಲಭ್ಯವಾಗುವಂತಹ ಭೂ ಆಧಾರ್ ಎಂಬ ಯೋಜನೆಗೆ ನೀಲಿನಕ್ಷೆ ಹಾಕಿಕೊಳ್ಳಲಾಗಿದೆ.
ನನ್ನ ಭೂಮಿ ಹೆಸರಿನಲ್ಲಿ ದರಕಾಸ್ತು ಜಮೀನುಗಳ ಪೋಡಿ ಅಭಿಯಾನ ಶುರು ಮಾಡಿದ್ದು, ಹಿಂದೆ ಸರ್ಕಾರದಿಂದ ರೈತರಿಗೆ ಮಂಜೂರಾಗಿರುವ ಭೂಮಿಗೆ ಪಕ್ಕಾ ದಾಖಲೆ ಇಲ್ಲದೇ, ಮಾರಾಟ ಮಾಡಲು, ಭಾಗ ಮಾಡಲು, ಬ್ಯಾಂಕ್ ಸೌಲಭ್ಯ ಪಡೆಯಲು ಆಗದೇ ಅತಂತ್ರ ಸ್ಥಿತಿಯಲ್ಲಿರುವ ರೈತರಿಗೆ ಸರ್ಕಾರವೇ ಜಮೀನಿಗೆ ಹೋಗಿ ದರಕಾಸ್ತು ಪೋಡಿ ಮಾಡಿಸುವ ಅಭಿಯಾನವನ್ನು ಕೈಗೊಂಡಿದೆ. ಈ ಯೋಜನೆಯಡಿ ವೇಗವಾಗಿ ಕೆಲಸ ಆಗುತ್ತಿದೆ. ಹಿಂದಿನ ಐದು ವರ್ಷದಲ್ಲಿ 8542 ಪೋಡಿಯಾಗಿದ್ದರೆ 2025 ರ ಜನವರಿಯಿಂದ 2026 ರ ಜನವರಿಯೊಳಗೆ 1.93 ಲಕ್ಷ ಪೋಡಿ ಮಾಡುವ ಮೂಲಕ ರೈತರ ಭೂಮಿ ಮಾಲೀಕತ್ವಕ್ಕೆ ಖಚಿತತೆ ನೀಡಲಾಗಿದೆ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರು ಮಾಹಿತಿ ನೀಡಿದರು.
K.S. Eshwarappa ಮಹಿಳೆಯರು ಸ್ವಾವಲಂಬಿಗಳಾಗಲು ಮೇಳಗಳು ಆವಶ್ಯಕ- ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
K.S. Eshwarappa ಜೆ ಸಿ ಐ ಶಿವಮೊಗ್ಗ ಭಾವನ ಹಾಗೂ ಶ್ರೀ ಸಾಯಿ ಇವೆಂಟ್ಸ್ ವತಿಯಿಂದ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಿರುವ ಅವರೇ ಬೇಳೆ ಮೇಳ ಬೃಹತ್ ಮಾರಾಟ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರು ಉದ್ಘಾಟಿಸಿದರು
ನಂತರ ಮಾತನಾಡಿದ ಕೆ ಎಸ್ ಈಶ್ವರಪ್ಪನವರು ಮಹಿಳೆಯರು ಸ್ವಹಾಲಂಬಿಯಾಗಿ ಹೊಸ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಇಂತಹ ಮೇಳಗಳು ಅತ್ಯವಶ್ಯಕ ಜೆ ಸಿ ಐ ಭಾವನದಿಂದ ಮಾಡಿರುವ ಈ ಮೇಳವು ಉತ್ತಮವಾಗಿದ್ದು ನಮ್ಮ ದೇಸಿ ಪರಂಪರೆಗಳನ್ನು ಪ್ರಚುರ ಪಡಿಸುತ್ತದೆ ಎಂದು ತಿಳಿಸಿದರು
K.S. Eshwarappa ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಕೆ ರಂಗನಾಥ್ ಜೆ ಸಿ ಐ ವಲಯ ಅಧ್ಯಕ್ಷರಾದ ಮಧುಸೂದನ್ ನಾವಡ, ವಲಯ ಉಪಾಧ್ಯಕ್ಷರಾದ ಕಾರ್ಕಳ ಗಣೇಶ್, ಪೈ ,ವಲಯ ನಿರ್ದೇಶಕರಾದ ರೇಖಾ ರಂಗನಾಥ್,ಜೆ ಸಿ ಐ ಶಿವಮೊಗ್ಗ ಭಾವನ ಅಧ್ಯಕ್ಷರಾದ ಕರಿಬಸಮ್ಮ ಆನಂದ , ಸಾಯಿ ಇವೆಂಟ್ಸ್ ನ ಸೋಮೇಶ್, ಸತೀಶ್ ಹಾಗೂ ಇತರರು ಇದ್ದರು
Department of Health and Family Welfare ಪ್ರಸ್ತುತ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕಿದೆ- ಎನ್.ಹೇಮಂತ್.
Department of Health and Family Welfare ಇತ್ತೀಚಿನ ದಿನಗಳಲ್ಲಿ ಪದವಿ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ವೈಯಕ್ತಿಕ ಸಮಸ್ಯೆಗಳಿಗೆ ಹಲವಾರು ಕಾರಣಗಳಿದ್ದು ಅವರ ವ್ಯಕ್ತಿತ್ವ ವಿಕಸನ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ತಿಳಿಸಿದರು
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ನಿಮ್ಹಾನ್ಸ್ ಬೆಂಗಳೂರು, ಪ್ರಾದೇಶಿಕ ಜಂಟಿ ನಿರ್ದೇಶಕರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಮತ್ತು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪದವಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಮನಸ್ಸಿನ ಆರೋಗ್ಯ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು,
ಇತ್ತೀಚಿನ ದಿನಗಳಲ್ಲಿ ಪದವಿ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ವೈಯಕ್ತಿಕ ಸಮಸ್ಯೆಗಳಿಗೆ ಕಾರಣ ಸಾಮಾಜಿಕ ಸಂಬAಧಗಳು, ದುಶ್ಚಟಗಳು ಸೇರಿದಂತೆ ಹಲವಾರಿವೆ. ಆತ್ಮಹತ್ಯೆ ಪ್ರಕರಣಗಳು ಸಹ ಹೆಚ್ಚಾಗುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮತ್ತು ಮಾನಸಿಕ ಆರೋಗ್ಯ ಕುರಿತಾದ ಈ ರೀತಿಯ ಕಾರ್ಯಾಗಾರಗಳು ಅತಿ ಅವಶ್ಯಕವಾಗಿದೆ ಎಂದರು.
ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಾದ ನಿಖಿಲ್ ಬಿ ಮಾತನಾಡಿ, ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಸಮಗ್ರ ಮಾಹಿತಿ ನೀಡುವ ಹಾಗೂ ದುಶ್ಚಟಗಳಿಗೆ ಕಡಿವಾಣ ಹಾಕುವಂತಹ ಇಂತಹ ಕಾರ್ಯಾಗಾರಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ನಟರಾಜ್ ಮಾತನಾಡಿ, ಜಿಲ್ಲೆಯ ಆಯ್ದ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ತಾಲೂಕು ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳಿಗೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು ತರಬೇತಿ ಪಡೆದ ಪ್ರಾಂಶುಪಾಲರು, ಪ್ರಾಧ್ಯಾಪಕರು ತಮ್ಮ ಕಾಲೇಜುಗಳಲ್ಲಿನ ಪದವಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
Department of Health and Family Welfare ಜಿಲ್ಲಾ ಮಾನಸಿಕ ಆರೋಗ್ಯ ಅನುಷ್ಟಾಧಿಕಾರಿಯಾದ ಡಾ.ಕಿರಣ್ ಮಾತನಾಡಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಇಂತಹ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳ ಮನಸ್ಸಿನ ಆರೋಗ್ಯ ವೃದ್ಧಿಸುವ ನಿಟ್ಟಿನಲ್ಲಿ ಇದೊಂದು ಅತ್ಯುತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳಿಗೆ ಮನೋಬಲ ನೀಡಿ, ಅವರ ವ್ಯಕ್ತಿತ್ವ ವಿಕಸನದೊಂದಿಗೆ ಕುಟುಂಬಕ್ಕೆ ಉತ್ತಮ ವ್ಯಕ್ತಿ ಮತ್ತು ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ನೀಡಬೇಕೆಂಬ ಉದ್ದೇಶದಿಂದ ಈ ವಿನೂತನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ , ಮಾನಸಿಕ ಆರೋಗ್ಯದ ಮಹತ್ವ ಹಾಗೂ ಮಾನಸಿಕ ಆರೋಗ್ಯದ ಕಾಯ್ದೆ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ.ರಾಮ್‌ಪ್ರಸಾದ್,ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಚಂದ್ರಶೇಖರ್, ಅಶೋಕ್, ನವೀದ್ ಖಾನ್, ಅನಿಕೇತ್, ಶ್ರೀನಿವಾಸ್, ಸಚಿನ್ ಮುಂತಾದವರು ಉಪಸ್ಥಿತರಿದ್ದರು.
ಮೆಗಾನ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸೇವಾ ನ್ಯೂನತೆ ಅನುಭವ: ಕರವೇ ಜನಮನ ರಾಜ್ಯ ಸಂಘಟನೆಯಿಂದ ಮನವಿ.
ಕರವೇ ಜನಮನ ರಾಜ್ಯ ಸಂಘಟನೆಯಿಂದ ಶಿವಮೊಗ್ಗ ಮೆಗನ್ ಆಸ್ಪತ್ರೆ ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ ಕರವೇ, ಜನ ಮನ, ರಾಜ್ಯ ಸಂಘಟನೆಯ ಪ್ರತಿಭಟನೆರಾಜ್ಯಾಧ್ಯಕ್ಷರಾದ. ಕೆ ಜನಾರ್ಧನ ಸಾಲಿಯಾನ್ ರವರ ನೇತೃತ್ವದಲ್ಲಿ ಮೆಗ್ಗಾನ್,ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ, ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿ, ಎಚ್ಚರಿಕೆಯೊಂದಿಗೆ ಸರಿಪಡಿಸಿ ಕೊಳ್ಳಲು ಗಡುವು ನೀಡಿ ಮನವಿಯನ್ನು ಕೊಡಲಾಯಿತು. ಪ್ರತಿಭಟನೆಯಲ್ಲಿ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ, ಎನ್, ಮಾಲತೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕಿರಣ್ ಕುಮಾರ್ ಕೆ, ಮತ್ತು ರಾಮಣ್ಣ ರಾಗಿಗುಡ್ಡ, ಪಾರ್ತಿಬನ್, ಜಿಲ್ಲಾ ಸಂಚಾಲಕರಾದ ಹರ್ಷಿತ್ ಭಾರದ್ವಾಜ್, ತಾಲೂಕು ಸಂಚಾಲಕರಾದ ಪ್ರತಾಪ್, ಮತ್ತು ಪದಾಧಿಕಾರಿಗಳಾದ ಶೋಭಾ, ಪುಷ್ಪ,ಪ್ರಮುಖ ರಾದ ಲಕ್ಷ್ಮಿಶ,ಸಂಗೇಶ್ವರ, ಮತ್ತಿತರರು ಭಾಗವಹಿಸಿದ್ದರು.
DVS College of Arts, Science and Commerce ಶಿವಮೊಗ್ಗದಲ್ಲಿ ಪದವಿ ಕಾಲೇಜುಗಳ ಅಧ್ಯಾಪಕರಿಗೆ ಕಾರ್ಯಾಗಾರ
DVS College of Arts, Science and Commerce ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಫೆಬ್ರವರಿ 13ರಂದು ಬೆಳಗ್ಗೆ 10ಕ್ಕೆ ಪದವಿ ಕಾಲೇಜುಗಳ ಅಧ್ಯಾಪಕರಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ವಿದ್ಯಾರ್ಥಿ ಕಲಿಕೆಯ ಮೌಲ್ಯ ನಿರ್ಣಯ ಮತ್ತು ಮೌಲ್ಯಮಾಪನ ತಂತ್ರಗಳು ವಿಷಯ ಕುರಿತು ಆಯೋಜಿಸಿರುವ ಕಾರ್ಯಾಗಾರವನ್ನು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌಧರಿ ಉದ್ಘಾಟಿಸುವರು. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ ಎನ್., ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ಎಸ್.ಆರ್.ನಿರಂಜನ, ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೆ.ಜಿ.ಚಂದ್ರಶೇಖರ ಭಾಗವಹಿಸುವರು.
DVS College of Arts, Science and Commerce ಕುವೆಂಪು ವಿವಿ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕ ಪ್ರೊ. ರಾಜೇಂದ್ರ ಚೆನ್ನಿ ದಿಕ್ಸೂಚಿ ಭಾಷಣ ಮಾಡುವರು. ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಎಚ್.ಕೇಶವ ಅಧ್ಯಕ್ಷತೆ ವಹಿಸುವರು. ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಬಸಪ್ಪಗೌಡ, ಉಪಾಧ್ಯಕ್ಷ ಜಿ.ಮಧುಸೂದನ್, ಕಾರ್ಯದರ್ಶಿ ಎಸ್.ಪಿ.ದಿನೇಶ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಕೋಶಾಧ್ಯಕ್ಷ ಎನ್.ಆರ್.ನಿತಿನ್, ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಕಾರ್ಯಕ್ರಮ ಸಂಯೋಜಕ ಡಾ. ನವೀನ್.ವಿ, ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ ಉಪಸ್ಥಿತರಿರುವರು.
ಹಳ್ಳಿಕೆರೆ ಕೃಷಿ ತರಬೇತಿ ಕೇಂದ್ರದಲ್ಲಿ ” ರೇಡಿಯೊ ಕಿಸಾನ್ ದಿವಸ್ “ಆಚರಣೆ
ರೇಡಿಯೋ ಕಿಸಾನ್ ದಿವಸದ ಹಿನ್ನೆಲೆಯಲ್ಲಿ ಆಕಾಶವಾಣಿ ಭದ್ರಾವತಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಳ್ಳಿಕೆರೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಶಿವಮೊಗ್ಗ ಇವರ ಸಹಯೋಗದಲ್ಲಿ ರೇಡಿಯೋ ಕಿಸಾನ್ ದಿವಸ ಹಾಗೂ ರೈತರಿಗೆ ಸನ್ಮಾನ ಕಾರ್ಯಕ್ರಮವನ್ನು ಭದ್ರಾವತಿ ತಾಲ್ಲೂಕು ಹಳ್ಳಿಕೆರೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಿವಮೊಗ್ಗದ ಜಂಟಿ ಕೃಷಿ ನಿರ್ದೇಶಕರಾದ ಡಾ.ಎಂ. ಕಿರಣಕುಮಾರ್, ಸಹಾಯಕ ಕೃಷಿ ನಿರ್ದೇಶಕರಾದ ಡಾ. ಬಿ.ಆರ್. ಮಮತ, ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ನಿರ್ದೇಶಕರಾದ ಸಿ ಲೋಕೇಶ್ವರ ಮತ್ತು ಶಿವಮೊಗ್ಗ ಜಿಲ್ಲೆ ಕಾರ್ಯದರ್ಶಿ ಡಾ.ಎಂ.ಜಿ.ವೇದಮೂರ್ತಿ, ಆಕಾಶವಾಣಿ ಭದ್ರಾವತಿ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಕೃಷ್ಣಪ್ಪ, ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ಮತ್ತು ಕೃಷಿರಂಗ ವಿಭಾಗದ ಕಾರ್ಯಕ್ರಮ ನಿರ್ವಹಣ ಅಧಿಕಾರಿಗಳಾದ ಡಾ.ಎಸ್.ಎಂ.ಸುಧಾಕರ ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ರೈತರನ್ನು ಸನ್ಮಾನಿಸಿ ಮಾತನಾಡಿದ ಡಾ.ಕಿರಣಕುಮಾರ್ ಆಕಾಶವಾಣಿ ಕೇಳಿ ಇಲಾಖೆಯ ವಿವಿಧ ಸರ್ಕಾರಿ ಯೋಜನೆಗಳನ್ನು ಅನುಸ್ಟಾನ ಮಾಡಿಕೊಂಡಿರುವ ರೈತರು ಇಲಾಖೆಯಿಂದ ಸಿಗುವ ಸೌಲಭ್ಯ ಉಪಯೋಗಿಸಿಕೊಂಡು ಆಧುನಿಕ ಕೃಷಿಗೆ ಬರಲು ಕರೆನೀಡಿದರು. ರೈತರನ್ನು ಸನ್ಮಾನಿಸಿ ಮಾತನಾಡಿದ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ಆಕಾಶವಾಣಿ ೨೦೦೪ ರಲ್ಲಿ ದೇಶಾದ್ಯಂತ ಕಿಸಾನವಾಣಿ ಕಾರ್ಯಕ್ರಮವನ್ನು ಫೆಬ್ರವರಿ 15ರಂದು ಪ್ರಾರಂಭಿಸಿದ ಸವಿನೆನಪಿಗೆ ಪ್ರತೀ ವರ್ಷ ಫೆಬ್ರವರಿ ೧೫ರಂದು ರೇಡಿಯೋ ಕಿಸಾನ್ ದಿವಸ ಆಚರಿಸುತ್ತಿದೆ. ರೈತರ ಸಬಲೀಕರಣ ಯುವರೈತರನ್ನು ಪ್ರೋತ್ಸಾಹಿಸಲು ಮತ್ತು ಆಧುನಿಕ ಕೃಷಿ ಪದ್ದತಿ ಪ್ರೋತ್ಸಾಹಿಸುವ ದ್ಯೇಯವಾಕ್ಯವನ್ನು ಈ ವರ್ಷದ ದ್ಯೇಯವಾಗಿ ಘೋಷಿಸಲಾಗಿದೆ ಅದನ್ನು ಅನುಸರಿಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ 15 ರೈತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೂರಾರು ರೈತರು, ಆಕಾಶವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು. ರೈತರು ವಿಷಯ ತಜ್ಞರೊಂದಿಗೆ ಹತ್ತುಹಲವು ಸಮಸ್ಯೆಗಳನ್ನು ಚರ್ಚಿಸಿ ಉತ್ತರ ಪಡೆದುಕೊಂಡರು. ಭದ್ರಾವತಿ ಆಕಾಶವಾಣಿಯ ಹಿರಿಯ ಉದ್ಘೋಷಕರಾದ ಶ್ರೀ.ಎಂ.ಕೆ.ಶಿವಕುಮಾರ್ ನಿರೂಪಿಸಿದರು.
Rotary Club Shimoga ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ಹೊರಬಂದು ಕುಟುಂಬ ಮತ್ತು ಸಮಾಜದ ಆಸ್ತಿಯಾಗಬೇಕು- ಮಂಜುನಾಥ್.
Rotary Club Shimoga ನಶೆ ಮುಕ್ತ ಭಾರತ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶಿವಮೊಗ್ಗ ಸೈಬರ್ ಕ್ರೆöÊಂ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ವತಿಯಿಂದ ಪೆಸಿಟ್ ಕಾಲೇಜಿನ ಸಭಾಂಗಣದಲ್ಲಿ ನಶೆ ಮುಕ್ತ ಭಾರತ ವಿಷಯ ಕುರಿತು ಮಾತನಾಡಿ, ಮಾದಕ ದ್ರವ್ಯಗಳ ದುಶ್ಚಟಗಳ ಬಗ್ಗೆ, ಅದರಿಂದ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ದುಶ್ಚಟಗಳಿಂದ ಮಕ್ಕಳ ಆರೋಗ್ಯದಲ್ಲಿ ಹಾಗೂ ಕುಟುಂಬದಲ್ಲಿ ಮಕ್ಕಳ ವೈಯಕ್ತಿಕ ಬೆಳವಣಿಗೆಯಲ್ಲಿ ಉಂಟಾಗುವ ಕುಂಠಿತಗಳ ಬಗ್ಗೆ ವಿವರಿಸಿದರು. ಸಮಾಜಕ್ಕೂ ಹಾಗೂ ಕುಟುಂಬದವರಿಗೂ ಭದ್ರ ಬುನಾದಿ ಆಗಬೇಕಾಗಿದ್ದ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಜವಾಬ್ದಾರಿ ಹಾಗೂ ಕರ್ತವ್ಯವನ್ನು ಮರೆತು ಮಾದಕ ವ್ಯಸನಿಗಳಾಗಿದ್ದಾರೆ. ಇದರಿಂದ ಹೊರಬಂದು ಕುಟುಂಬಕ್ಕೆ ಹಾಗೂ ಸಮಾಜಕ್ಕೆ ದೊಡ್ಡ ಆಸ್ತಿಯಾಗಿ ಬೆಳೆಯಬೇಕು ಹಾಗೂ ಭವ್ಯ ಭಾರತದ ಭವಿಷ್ಯದ ಬೆನ್ನೆಲುಬಾಗಿ ವಿದ್ಯಾರ್ಥಿಗಳು ನಿಲ್ಲಬೇಕು ಎಂದರು.
ರೋಟರಿ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಮಾತನಾಡಿ, ತಂದೆ ತಾಯಿ ಹಾಗೂ ಗುರಿ ಹಿರಿಯರು ದೇಶದ ಯುವಜನತೆಯಿಂದ ಹಲವಾರು ಉನ್ನತ ಮಟ್ಟದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ. ಆ ನಿರೀಕ್ಷೆಗೆ ತಕ್ಕಂತೆ ಜೀವನ ನಡೆಸುವುದು ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಕೆ.ಪಿ. ಶೆಟ್ಟಿ, ವಲಯ ಸೇನಾನಿ ಎಸ್.ಪಿ.ಶಂಕರ್, ಮಾಜಿ ಅಧ್ಯಕ್ಷ ಆರ್.ದೇವೇಂದ್ರಪ್ಪ, ದ್ವಾರಕನಾಥ್, ಸತೀಶ್ ಗಾಂಧಿಬಸಪ್ಪ ಹಾಗೂ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ ಇದ್ದರು.
