Friday, June 5, 2026
Friday, June 5, 2026

Department of Revenue ಜನರ ಅನುಕೂಲ ಮತ್ತು ಪಾರದರ್ಶಕತೆಗೆ ದಾಖಲೆಗಳ ಡಿಜಟಲೀಕರಣ.ಸಾರ್ವಜನಿಕರು ಸಹಕರಿಸಬೇಕು- ಸಚಿವ ಕೃಷ್ಣ ಭೈರೇಗೌಡ.

Date:

ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ, ಗ್ರಾಮ ಸೇವಕರು ಮನೆ ಬಾಗಿಲಿಗೆ ಬಂದು ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಜಮೀನುಗಳನ್ನು ಅವರ ವಾರಸುದಾರರ ಹೆಸರಿಗೆ ಪೌತಿ ಖಾತೆ ಮಾಡಿಕೊಡುವ ಅಭಿಯಾನ ಕೈಗೊಂಡಿದ್ದು ವಾರಸುದಾರರು ಇದಕ್ಕೆ ಸಹಕರಿಸಬೇಕೆಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರು ಮನವಿ ಮಾಡಿದರು.
ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇ-ಪೌತಿ ಖಾತೆ ಮಾಡಿಸುವ ಸಂಬಂಧ ವಿಎಓ ಗಳು ವಾರಸುದಾರರನ್ನು ಗುರುತು ಮಾಡಿ ವಿವರಗಳನ್ನು ಪಡೆದು ಕ್ರಮ ಕೈಗೊಳ್ಳಬೇಕು. ಓಟಿಪಿ ಸಮಸ್ಯೆ, ಕೋರ್ಟ್ ವ್ಯಾಜ್ಯ, ಹೆಣ್ಣು ಮಕ್ಕಳಿಗೆ ಆಸ್ತಿ ಕೊಡಬೇಕಾಗುತ್ತದೆಂದು ವಾರಸುದಾರರು ಮಾಹಿತಿ ನೀಡುತ್ತಿಲ್ಲ, ಎರಡು, ಮೂರು ತಲೆಮಾರಗಳ ಪ್ರಕರಣಗಳು ಕಷ್ಟ ಎಂಬ ಸಾಮಾನ್ಯ ಕಾರಣ ನೀಡದೇ ಪ್ರತಿ ಪ್ರಕರಣದಲ್ಲಿ ನಿಖರವಾದ ಕಾರಣ ತಿಳಿದು, ವಾರಸುದಾರರ ಮನವೊಲಿಸಿ ಕ್ರಮ ವಹಿಸಬೇಕು. ಹಾಗೂ 2021 ರ ಸುತ್ತೋಲೆ ಪ್ರಕಾರ ಅಭಿಯಾನ ಮಾದರಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಿದರು.
Department of Revenue ಜಿಲ್ಲೆಯಲ್ಲಿ 89434 ಇ-ಪೌತಿ ಪ್ರಕರಣಗಳು ಇದ್ದು, 12726 ಪೂರ್ಣಗೊಂಡಿದೆ. 45470 ಪ್ರಕರಣಗಳು ಬಾಕಿ ಇದ್ದು ಸಂಬಂಧಿಸಿದ ಅಧಿಕಾರಿಗಳು ಮಿಷನ್ ಮೋಡ್‌ಲ್ಲಿ ಕೆಲಸ ಮಾಡಿ ಮೊದಲ ಹಂತದಲ್ಲಿ ಶೇ.75 ರಷ್ಟು ಕೆಲಸ ಮಾಡುವಂತೆ ಸೂಚಿಸಿದ ಅವರು ರೂ. 5 ಕೋಟಿಯನ್ನು ಗ್ರಾಮ ಆಡಳಿತ ಅಧಿಕಾರಿ ಮತ್ತು ಗ್ರಾಮ ಸೇವಕರಿಗೆ ಪ್ರೋತ್ಸಾಹ ಧನ ರೂಪದಲ್ಲಿ ನೀಡಲಾಗುವುದು.
ಭೂ ಸುರಕ್ಷಾ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಡಿಇಓ ಗಳ ಮೂಲಕ ದಾಖಲೆಗಳನ್ನು ಸ್ಕಾö್ಯನ್ ಮಾಡಿಸಬೇಕು. ಈ ಯೋಜನೆಯಡಿ ಸಾಗರ ತಾಲ್ಲೂಕಿನಲ್ಲಿ ನಿಗದಿತ ಪ್ರಮಾಣದಲ್ಲಿ ಪ್ರಗತಿಯಾಗಿಲ್ಲ. ರೆಕಾರ್ಡ್ ರೂಮ್ ಕೌಂಟರ್ ಮೂಲಕ ಪಡೆಯಲಾಗುವ ದಾಖಲಾತಿಗಳಲ್ಲಿ ಭದ್ರಾವತಿ ತಾಲ್ಲೂಕಿನಲ್ಲಿ ಕಡಿಮೆ ಪ್ರಗತಿ ಇದ್ದು, ಮ್ಯಾನುಯಲ್ ಆಗಿ ದಾಖಲಾತಿ ನೀಡಬಾರದು ಎಂದು ಸೂಚನೆ ನೀಡಿದರು.
ಕಂದಾಯ ಗ್ರಾಮಗಳ ರಚನೆ : ರಿಜಿಸ್ಟರ್ಡ್ ಸೇಲ್ ಡೀಡ್ ಇರುವುದನ್ನು ಬಿಟ್ಟು ಉಳಿದವರಿಗೆ ವಾಸಿಸುವ ಜಾಗಕ್ಕೆ ಹಕ್ಕು ಪತ್ರ ನೀಡಬೇಕು. 4000 ಅಡಿಗೆ ಒಂದು ಟೈಟಲ್ ಸಿಗುತ್ತದೆ. ಹಕ್ಕುಪತ್ರ ನೀಡುವುದರಿಂದ ವಾಸಿಸುವ ಮನೆಯಾದ್ರೂ ಸ್ವಂತ ಆಗುತ್ತದೆ. ಅಧಿಕಾರಿಗಳು ಕಾನೂನಿನಲ್ಲಿ ಅವಕಾಶ ಇರುವುದನ್ನು ಮಾಡಿಕೊಡಬೇಕು. ಅರ್ಹರನ್ನು ಗುರುತಿಸಿ ಮಾರ್ಚ್ 16 ರೊಳಗೆ ಹಕ್ಕುಪತ್ರ ನೀಡಲು ಕ್ರಮವಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಈ ಮೂಲಕ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಮೋಜಿನಿ ವರದಿ: ಮೋಜಿನಿ ಸರ್ವೆಗಾಗಿ 19462 ಅರ್ಜಿಗಳು ಬಂದಿದ್ದು, ಸರ್ವೇ ಇಲಾಖೆಯಲ್ಲಿ 10525 ಬಾಕಿ, ತಹಶಿಲ್ದಾರ್/ಎಸಿ ಕಚೇರಿಯಲ್ಲಿ 7032 ಬಾಕಿ ಸೇರಿದಂತೆ 13557 ಬಾಕಿ ಇದೆ. ಲಭ್ಯವಿರುವ ಸರ್ವೇಯರ್‌ಗಳು, ರೋವರ್‌ಗಳನ್ನು ಬಳಸಿಕೊಂಡು ಸಕಾಲಿಕವಾಗಿ ಸರ್ವೇ ಮಾಡಲು ಕ್ರಮ ವಹಿಸಬೇಕು. ಇಲಾಖೆ ಅಧಿಕಾರಿ, ನೌಕರರು ಆಸಕ್ತಿಯಿಂದ ಬಡವರ ಪರವಾಗಿ ಕೆಲಸ ಮಾಡಬೇಕು ಎಂದರು.
ರೆವೆನ್ಯು ನಿವೇಶನಗಳಿಗೆ ಬಿ-ಖಾತೆ ನೀಡಬೇಕು. ಈ ಕುರಿತು ಅರಿವಿನ ಕೊರತೆ ಇದ್ದು ಅರಿವನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ ಆಸ್ತಿ ವ್ಯವಹಾರಗಳಿಗೆ ಕಷ್ಟವಾಗುತ್ತದೆ. ಹಳೇ ಆಸ್ತಿಗಳಿಗೆ ಇಸ್ವತ್ತು ಸಿಗುತ್ತಿಲ್ಲ. ಆದ್ದರಿಂದ ಡಿಸಿ, ಸಿಇಓ, ಗಳು ಜನರಿಗೆ ತೊಂದರೆಯಾಗದAತೆ ಅಂತಹ ಪ್ರಕರಣಗಳ ಕುರಿತು ಸೂಕ್ತ ಕ್ರಮ ವಹಿಸಬೇಕು ಎಂದು ತಿಳಿಸಿದರು. ರಿಜಿಸ್ರ‍್ಡ್ ಸೇಲ್ ಡೀಡ್ ಇಲ್ಲದವರಿಗೆ ಕಂದಾಯ ಗ್ರಾಮ ರಚನೆ (ನಗರ ಸೇರಿ)ಮೂಲಕ ಮಾತ್ರ ಸಹಾಯ ಮಾಡಬಹುದು. ಇಲ್ಲವಾದಲ್ಲಿ ಅವರಿಗೆ ತ್ರಿಶಂಕು ಪರಿಸ್ಥಿತಿ ಉಂಟಾಗುತ್ತದೆ. ಅದೂ ಕೂಡ ಮಾರ್ಚ್ 16 ರೊಳಗೆ ಮಾಡಬೇಕು ಎಂದರು.

ಇನ್ನು ಮುಂದೆ ಪಹಣಿಯೊಂದಿಗೆ ಸ್ಕೆಚ್, ಆಕಾರ್ ಬಂದ್ ಮತ್ತು ಮ್ಯುಟೇಷನ್ ಸೇರಿದಂತೆ ಸಮಗ್ರ ದಾಖಲೆಗಳು ಜನರಿಗೆ ಲಭ್ಯವಾಗುವಂತಹ ಭೂ ಆಧಾರ್ ಎಂಬ ಯೋಜನೆಗೆ ನೀಲಿನಕ್ಷೆ ಹಾಕಿಕೊಳ್ಳಲಾಗಿದೆ.
ನನ್ನ ಭೂಮಿ ಹೆಸರಿನಲ್ಲಿ ದರಕಾಸ್ತು ಜಮೀನುಗಳ ಪೋಡಿ ಅಭಿಯಾನ ಶುರು ಮಾಡಿದ್ದು, ಹಿಂದೆ ಸರ್ಕಾರದಿಂದ ರೈತರಿಗೆ ಮಂಜೂರಾಗಿರುವ ಭೂಮಿಗೆ ಪಕ್ಕಾ ದಾಖಲೆ ಇಲ್ಲದೇ, ಮಾರಾಟ ಮಾಡಲು, ಭಾಗ ಮಾಡಲು, ಬ್ಯಾಂಕ್ ಸೌಲಭ್ಯ ಪಡೆಯಲು ಆಗದೇ ಅತಂತ್ರ ಸ್ಥಿತಿಯಲ್ಲಿರುವ ರೈತರಿಗೆ ಸರ್ಕಾರವೇ ಜಮೀನಿಗೆ ಹೋಗಿ ದರಕಾಸ್ತು ಪೋಡಿ ಮಾಡಿಸುವ ಅಭಿಯಾನವನ್ನು ಕೈಗೊಂಡಿದೆ. ಈ ಯೋಜನೆಯಡಿ ವೇಗವಾಗಿ ಕೆಲಸ ಆಗುತ್ತಿದೆ. ಹಿಂದಿನ ಐದು ವರ್ಷದಲ್ಲಿ 8542 ಪೋಡಿಯಾಗಿದ್ದರೆ 2025 ರ ಜನವರಿಯಿಂದ 2026 ರ ಜನವರಿಯೊಳಗೆ 1.93 ಲಕ್ಷ ಪೋಡಿ ಮಾಡುವ ಮೂಲಕ ರೈತರ ಭೂಮಿ ಮಾಲೀಕತ್ವಕ್ಕೆ ಖಚಿತತೆ ನೀಡಲಾಗಿದೆ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DK Shivakumar ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು. ಜನಗಳ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ- ಡಿ.ಕೆ.ಶಿವಕುಮಾರ್.

DK Shivakumar ಸರ್ಕಾರದ ಎಲ್ಲಾ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಎಲ್ಲಾ...

Shivamogga News ತೆರಿಗೆ ಸಲಹೆಗಾರರೆ…ನಿಮಗಾಗಿ ಜೂನ್ 5 ರಂದು ವಿಶೇಷ ವಿಚಾರ ಸಂಕಿರಣ

Shivamogga News ಶಿವಮೊಗ್ಗ ಜಿಲ್ಲಾ ಟ್ಯಾಕ್ಸ್ ಬಾರ್ ವತಿಯಿಂದ ದಿನಾಂಕ 05-06-2026...

B.Y. Raghavendra ನಿಮ್ಮ ಆಡಳಿತ ಸಹಕಾರ,ಸಮನ್ವಯ , ಸಾರ್ಥಕತೆಯಿಂದ ಮುನ್ನಡೆಯಲಿ” – ಸಂಸದ ಬಿ.ವೈ.ರಾಘವೇಂದ್ರ ಹಾರೈಕೆ

B.Y. Raghavendra ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ...