Monday, August 10, 2026
Monday, August 10, 2026
Home Blog Page 193

ಕೆನರಾ ಬ್ಯಾಂಕ್ ಗ್ರಾಮೀಣ ಉದ್ಯೋಗ ತರಬೇತಿ ಕೇಂದ್ರದ ಪ್ರಕಟಣೆ.

0

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ದಿ:02/03/2026 ರಿಂದ 31 ದಿನಗಳ ಕಾಲ ನಿರುದ್ಯೋಗಿ ಮಹಿಳೆಯರಿಗೆ ಉಚಿತ ಎಂಬ್ರಾಯಡರಿ ಆರಿ ವರ್ಕ್ ಮತ್ತು ಸ್ಯಾರಿ ಕುಚ್ಚು ಹಾಕುವುದು, ಬ್ಲೌಸ್ ಗಳಿಗೆ ಆರಿ ವರ್ಕ್ ಮಾಡುವುದು, ಸ್ಯಾರಿ ಕುಚ್ಚು ಮತ್ತು ಫ್ಯಾಬ್ರಿಕ್ ಪೈಂಟಿಂಗ್ ಬಗ್ಗೆ ತರಬೇತಿ ಶಿಬಿರವನ್ನು ಏರ್ಪಡಿಸಿದೆ.

ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 45 ವರ್ಷ ವಯಸ್ಸಿನ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಶಿಬಿರಾರ್ಥಿಗಳಿಗೆ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.

ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ತರಬೇತಿ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.

ಆಸಕ್ತಿಯುಳ್ಳ ಅಭ್ಯರ್ಥಿಗಳು ಫೆ. 21 ಬೆಳಿಗ್ಗೆ 9.00 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ತರಬೇತಿಗೆ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗುವುದು, ಸಂದರ್ಶನಕ್ಕೆ ಹಾಜರಾಗಲು ಅಸಾಧ್ಯವಾದಲ್ಲಿ ಫೆ. 21 ರೊಳಗೆ ಸಂಸ್ಥೆಯ ದೂ. ಸಂ.: 8970476050/ 9591514154/ 9686248369/ 6363139123/ 9505894247 ಗಳನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

ಫೆ.15. ಶಿವಮೊಗ್ಗದಲ್ಲಿ ಸಂತ ಸೇವಾಲಾಲ್ ಜಯಂತಿ ಜಿಲ್ಲಾಡಳಿತದಿಂದ ‌ಆಯೋಜನೆ

0

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಂಜಾರ ಸಂಘ ಶಿವಮೊಗ್ಗ ಇವರ ಸಂಯಕ್ತಾಶ್ರಯದಲ್ಲಿ ಫೆ.15 ರ ಬೆಳಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಏರ್ಪಡಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.

ಶಾಸಕರಾದ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲಾ ಮತ್ತು ತಾಲೂಕು ಬಂಜಾರ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಈ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲೂಕು ಮೇಳಿಗೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಟಿ.ರವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.

ಶಿವಮೊಗ್ಗ ಮಾರಿಕಾಂಬ ಜಾತ್ರೆ ಪೂರ್ವ “ಚಪ್ಪರ ಶಾಸ್ತ್ರ” ಪೂಜೆ

0

ಶಿವಮೊಗ್ಗ ನಗರದ ಇತಿಹಾಸ ಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ -ಫೆಬ್ರವರಿ 24ರಿಂದ 28ರವರೆಗೆ ನಡೆಯಲಿದ್ದು , ಶುಕ್ರವಾರ ಸಂಜೆ ಗಾಂಧಿ ಬಜಾರ್‌ನ ತವರು ಮನೆಯಲ್ಲಿ ಚಪ್ಪರ ಪೂಜೆ ಶಾಸ್ತ್ರ ನಡೆಯಿತು.

ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ,ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಇವರುಗಳು ಪೂಜೆ ಸಲ್ಲಿಸಿ ಚಪ್ಪರ ಶಾಸ್ತ್ರಕ್ಕೆ ಚಾಲನೆ ನೀಡಿದರು.
.ಜಾತ್ರಾ ಮಹೋತ್ಸವದ ಮೊದಲ ದಿನ ದೇವಿಯನ್ನು ಗಾಂಧಿ ಬಜಾರ್ ತವರು ಮನೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಚಪ್ಪರ ಶಾಸ್ತ್ರ ನಡೆದಿದೆ. ಈ ಸಂದರ್ಭದಲ್ಲಿ ಸಮಿತಿಯ , ಪದಾಧಿಕಾರಿಗಳಾದ ಎನ್. ಉಮಾಪತಿ, ಎಂ.ಕೆ.ಸುರೇಶ್‌ಕುಮಾರ್, ಹೆಚ್.ವಿ. ತಿಮ್ಮಪ್ಪ, ಎಸ್. ಹನುಮಂತಪ್ಪ, ಡಿ.ಎಂ. ರಾಮಯ್ಯ, ಎಸ್.ಸಿ. ಲೋಕೇಶ್, ಸೀತಾರಾಮ್ ನಾಯಕ್, ಟಿ.ಎಸ್.ಚಂದ್ರಶೇಖರ್, ಎ.ಹೆಚ್. ಸುನೀಲ್, ಪೂಜಾ ಕನ್ವೀನಿಯರ್ ಸತ್ಯನಾರಾಯಣ್ , ವಿ. ರಾಜು, ಶ್ರೀಧರ್ ಮೂರ್ತಿ ನವುಲೆ, ಪ್ರಕಾಶ್, ಹರೀಶ್‌ಲಾಲು, ಸೋಮಶೇಖರ್ ನಾಡಿಗ್, ವಿಶ್ವ ಕರ್ಮ ಸಮಾಜದ ಪದಾಽಕಾರಿಗಳು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು

Backward Classes Welfare Department ಕಾಡುಗೊಲ್ಲರ ಅಭಿವೃದ್ಧಿ ನಿಗಮದ ವತಿಯಿಂದ ಆಹಾರ ವಾಹಿನಿ‌ ಯೋಜನೆ ಸೌಲಭ್ಯ ಪ್ರಕಟಣೆ

0

Backward Classes Welfare Department ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ದಿ ನಿಗಮದ ವತಿಯಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಲ್ಲಿ ನಿಗಮದಿಂದ ವಾಹನ ಖರೀದಿಗೆ ರೂ. 3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯು ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಹಟ್ಟಿಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಯಗಳಿಗೆ ಅನ್ವಯವಾಗುವುದಿಲ್ಲ.
ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ್ ಕಾರ್ಡಿನಲ್ಲಿರುವಂತೆ ಅರ್ಜಿದಾರರ ಹೆಸರು ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇರುವಂತೆ ಹೊಂದಾಣಿಕೆಯಾಗಬೇಕು. ಕುಟುಂಬ ವಾರ್ಷಿಕ ವರಮಾನ 3 ಲಕ್ಷ ಒಳಗಿರಬೇಕು ಮತ್ತು ವಯಸ್ಸು 21 ರಿಂದ 45 ವರ್ಷ ಒಳಗಿನವರಾಗಿರಬೇಕು. ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸುವಂತಿಲ್ಲ.
Backward Classes Welfare Department ಆಸಕ್ತ ಕಾಡುಗೊಲ್ಲ ಜನಾಂಗದ ಹಿಂದುಳಿದ ವರ್ಗಗಳ ಅರ್ಜಿದಾರರು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಮಾ. 06 ರೊಳಗಾಗಿ ಸಲ್ಲಿಸುವಂತೆ ಕ. ಮ. ಸ. ಅ. ನಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಾಲರಾಜ್ ಅರಸ್ ರಸ್ತೆ, ಕೆ,ಇ.ಬಿ. ಸರ್ಕಲ್ ಹತ್ತಿರ, ಶಿವಮೊಗ್ಗ, ದೂ.ಸಂ: 08182-229634 ನ್ನು ಸಂಪರ್ಕಿಸುವುದು.

Grihalakshmi Digital Marketing ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಡಿಜಿಟಲ್ ಮಾರುಕಟ್ಟೆ ಆ್ಯಪ್ ಬಳಕೆಗೆ ಬಿಡುಗಡೆ

0

Grihalakshmi Digital Marketing ಮಹಿಳಾ ಉದ್ಯಮಿದಾರರು ತಾವು ತಯಾರಿಸಿದ ಉತ್ಪನ್ನಗಳಿಗೆ ಡಿಜಿಟಲ್ ವೇದಿಕೆಯ ಮೂಲಕ ಮಾರುಕಟ್ಟೆ ಒದಗಿಸುವ ಸೌಲಭ್ಯ ಕಲ್ಪಿಸಲಾಗಿದ್ದು, ಜ.09 ರಂದು ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆಪ್‌ನ್ನು ಬಿಡುಗಡೆ ಮಾಡಲಾಗಿದೆ.
ಮಹಿಳಾ ಉದ್ಯಮಿಗಳ ನೊಂದಣಿ ಕಾರ್ಯ ಕೈಗೊಳ್ಳಲು ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ಗುಂಪಿನ ಸದಸ್ಯರು, ಎನ್.ಆರ್ ಎಲ್.ಎಂ ಫಲಾನುಭವಿಗಳು ಉದ್ಯಮಿಗಳು, ಅಕ್ಕ ಕೆಫೆ ಘಟಕಗಳನ್ನು ನಿರ್ವಹಿಸುತ್ತಿರುವ ಮಹಿಳೆಯರು, ಕರ್ನಾಟಕ ಸ್ಮಾಲ್ ಸ್ಕೆಲ್ ಇಂಡಸ್ಟ್ರೀಸ್ ಅಸೋಸಿಯೇಷನ್ (ಕಾಸಿಯಾ) ಘಟಕಗಳ ಮಹಿಳಾ ಉದ್ಯಮಿಗಳು, ರುಡ್ ಸೆಟ್-ಆರ್. ಎಸ್, ಇಟಿಐ (ಧರ್ಮಸ್ಥಳ) ಮೂಲಕ ತರಬೇತಿ ಪಡೆದು ಸ್ವ-ಉದ್ಯೋಗ ನಡೆಸುತ್ತಿರುವ ಮಹಿಳೆಯರು ಮಹಿಳಾ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಪಡೆದ ಮಹಿಳಾ ಫಲಾನುಭವಿಗಳು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಯಶಸ್ವಿ ಮಹಿಳಾ ಉದ್ಯಮಿಗಳು ತಾವು ತಯಾರಿಸುವ ಉತ್ಪನ್ನಗಳ ಮಾಹಿತಿ ನೀಡಲು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಅಭಿವೃದ್ಧಿ ನಿಗಮ ಅಭಿವೃದ್ಧಿ ನಿರೀಕ್ಷಕರನ್ನು ಸಂಪರ್ಕಿಸುವಂತೆ ಇಲಾಖೆಯ ಉಪನಿರ್ದೇಶಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ದೂ.ಸಂ.: 08182-295514 ಕ್ಕೆ ಸಂಪರ್ಕಿಸಬಹುದಾಗಿದೆ.

ಗ್ರಾಮೀಣರಲ್ಲಿ ಸಾಂಸ್ಕೃತಿಕವಾಗಿ ನಾಟಕಗಳ ಒಲವು ತನ್ನತನವಾಗಿ ಉಳಿದಿದೆ- ಸುನೀಲ್ ಗೌಡ.

0

ಆಧುನಿಕತೆಯ ಅಬ್ಬರದಲ್ಲಿ ಟಿವಿ ಮತ್ತು ಮೊಬೈಲ್ ಮಾಧ್ಯಮಗಳು ಮನುಷ್ಯನನ್ನು ಆವರಿಸಿಕೊಂಡಿದ್ದರೂ, ಗ್ರಾಮೀಣ ಭಾಗದ ಸಂಸ್ಕೃತಿಯಲ್ಲಿ ಸಾಮಾಜಿಕ ನಾಟಕಗಳು ಇಂದಿಗೂ ತನ್ನ ತನ ಉಳಿಸಿಕೊಂಡಿವೆ ಎಂದು ತಾಪಂ ಮಾಜಿ ಸದಸ್ಯ ಸುನೀಲ್ ಗೌಡ ಹೇಳಿದರು.

ಸೊರಬ ತಾಲೂಕಿನ ಚಂದ್ರಗುತ್ತಿ ಹೋಬಳಿಯ ಹಿರೇಕಲಗೋಡು ಗ್ರಾಮದಲ್ಲಿ ಈಶ್ವರ ಬಸವೇಶ್ವರ ದೇವರ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಬಸವೇಶ್ವರ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಅಣ್ಣನ ಅರಮನೆ ಅರ್ಥಾತ್ ಕರ್ನಾಟಕದ ಹುಲಿ ಎಂಬ ಸಾಮಾಜಿಕ ನಾಟಕದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಳ್ಳಿಗಳಲ್ಲಿ ಜಾತಿ-ಧರ್ಮದ ಹಂಗಿಲ್ಲದೆ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುವುದು ಶ್ಲಾಘನೀಯ. ನಾಟಕ, ಕ್ರೀಡೆ ಅಂತಹ ಕಾರ್ಯಕ್ರಮಗಳು ಗ್ರಾಮದ ಸಂಘಟನೆಗೆ ಪೂರಕವಾಗಿವೆ, ನಮ್ಮ ಮಣ್ಣಿನ ಪ್ರತಿಭೆಗಳಿಗೆ ವೇದಿಕೆ ನೀಡಿ ಪ್ರೋತ್ಸಾಹಿಸುವುದು ಅಗತ್ಯವಿದ್ದು‌. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಗ್ರಾಮದ ಸಮಸ್ಯೆಗಳನ್ನು ಅರಿಯಲು ನೆರವಾಗುತ್ತವೆ ಎಂದರು.

ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಎಸ್ ಮಧು ಬಂಗಾರಪ್ಪ ಅವರ ಪ್ರಯತ್ನದಿಂದ ಗುಡ್ನಾಪುರದಿಂದ ಹಿರೇಕಲಗೋಡು ಗ್ರಾಮದವರೆಗಿನ ರಸ್ತೆ ಕಾಮಗಾರಿಗೆ 1 ಕೋಟಿ ರೂ‌. ಅನುದಾನ ಬಿಡುಗಡೆಯಾಗಿದ್ದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ. ಗ್ರಾಮದಲ್ಲಿ ಸಮುದಾಯ ಭವನ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಯನ್ನು ಸಚಿವ ಎಸ್.ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

Shivalaya Temple ವಿನೋಬಾ ನಗರ ಶಿವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಶಿವಲಿಂಗ ಸ್ಪರ್ಶ ಪೂಜಾ ಅವಕಾಶ

0

ಜಾತಿ ಮತ ಪಂಥಗಳನ್ನು ಮೀರಿದ ವಿನೋಬ ನಗರದ ಶ್ರೀ ಶಿವಾಲಯ ದೇವಸ್ಥಾನ ಸರ್ವರಿಗೂ ಶಿವಲಿಂಗವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಲು ಮುಕ್ತ ಅವಕಾಶವನ್ನು ನೀಡಿರುವ ಸರ್ವ ಸಮನ್ವಯ ಕೇಂದ್ರ ವಿನೋಬನಗದ ಶ್ರೀ ಶಿವಾಲಯ ದೇವಸ್ಥಾನ,ನಗರದ ಪ್ರಮುಖ ಧಾರ್ಮಿಕ ತಾಣಗಳ ಪೈಕಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಶ್ರೀ ಶಿವಾಲಯ ದೇವಸ್ಥಾನ ಶಿವ ಭಕ್ತರ ಪಾಲಿಗೆ ಶ್ರದ್ಧೆಯ ತಾಣವಾಗಿದೆ.
ಕಳೆದ 31ವರ್ಷಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ವಿನೋಬನಗರ ಶ್ರೀ ಶಿವಾಲಯದಲ್ಲಿ ಜತಿ ಮತ ಭೇದವಿಲ್ಲದೆ ಎಲ್ಲಾ ಜತಿ ಜನಾಂಗ ಭಕ್ತರು ಪ್ರತಿ ನಿತ್ಯ ದರ್ಶನವನ್ನು ಪಡೆಯುತ್ತಾರೆ, ಸೋಮವಾರ, ಹುಣ್ಣಿಮೆ, ಅಮಾವಾಸ್ಯೆ, ಹಬ್ಬದ ದಿನಗಳಲ್ಲಿ ಹಾಗೂ ಶ್ರಾವಣ, ಕಾರ್ತಿಕ ಮಾಸದಲ್ಲಿ ವಿಶೇಷ ಪೂಜ ಕಾರ್ಯ ಕ್ರಮಗಳು ಇಲ್ಲಿ ನಡೆಯುತ್ತವೆ.
ಈ ಎಲ್ಲಾ ದಿನಗಳಲ್ಲಿ ಶಿವನಿಗೆ ಮಾಡಲಾಗುವ ವಿಶೇಷ ಅಲಂಕಾರಗಳು ಶಿವಮೊಗ್ಗದ್ದ ಎಲ್ಲಾ ಭಕ್ತರ ಗಮನವನ್ನು ಸೆಳೆದಿದೆ, ಅಭಿಷೇಕ ಮಾಡಿಸಲು ಇಚ್ಚಿಸುವ ಎಲ್ಲಾ ಜಾತಿ ವರ್ಗದ ಭಕ್ತರಿಗೂ ಗರ್ಭಗುಡಿಯ ಶಿವಲಿಂಗ ಮೂರ್ತಿ ಯನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಲು ಅವಕಾಶವಿದೆ, ಕಾಶಿಯಲ್ಲಿಯೂ ಇಂತಹ ಆಚರಣ ಪದ್ಧತಿ ಇದೆ, ಶಿವಲಿಂಗವನ್ನು ಸ್ಪರ್ಶಿಸುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ, ಪಂಚೆ ತೊಟ್ಟು ಶರ್ಟು ತೆಗೆದು ಸಾಮಾನ್ಯರು ಕೂಡ ಶಿವಲಿಂಗವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಬಹುದು.
ಇಲ್ಲಿ ಪ್ರತಿ ಸೋಮವಾರ ಭಕ್ತರಿಗೆ ಪ್ರಸಾದ ವಿನಿಯೋಗ ಇರುತ್ತದೆ. ಸೋಮವಾರ ಭಕ್ತರು ಬೇಡಿ ನಿಂತು ಹೂ ಅಪ್ಪಣೆಯನ್ನು ಪಡೆಯುತ್ತಾರೆ, ವಿಶೇಷ ದಿನಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನಾಂಗದವರು ಸಹ ಬಂಧು ಪೂಜೆ ಸಲ್ಲಿಸುವುದು ಹಾಗೂ ಶಿವರಾತ್ರಿ ದಿನ 15ರಿಂದ 20 ಸಾವಿರ ಶಿವಭಕ್ತರು ಆಗಮಿಸಿ ದೇವರ ದರ್ಶನವನ್ನು ಪಡೆಯುವುದು ವಿಶೇಷವಾಗಿದೆ. ಮಹಾ ಶಿವರಾತ್ರಿ ನಿಮಿತ್ತ ವಿಶೇಷ ಪೂಜಾ ಕಾರ್ಯ ಕ್ರಮಗಳು ಫೆ. 15ರ ಭಾನುವಾರ ಬೆಳಿಗ್ಗೆ 5ಗಂಟೆಗೆ ರುದ್ರಾಭಿಷೇಕ ದೊಂದಿಗೆ ಪ್ರಾರಂಭವಾಗುವ ಮೂಲಕ ಸಾರ್ವಜನಿಕರ ಧರ್ಶನಕ್ಕೆ ಅಂದು ರಾತ್ರಿ 12ರವರೆಗೆ ಅವಕಾಶವಿದ್ದು, ಪ್ರಸಾದ ವಿನಯೋಗ ಕೂಡ ನಡೆಯಲಿದೆ. ಫೆ. 16ರ ಸೋಮವಾರ ಸ್ವಾಮಿಗೆ ವಿಶೇಷ ರುದ್ರಾಭಿಷೇಕದೊಂದಿಗೆ ಶಿವರಾತ್ರಿಯನ್ನು ಸಂಪನ್ನಗೊಳಿಸಲಾಗುವುದು.

ಪ್ರಸ್ತುತ ಮುದ್ರಣ ಯಂತ್ರಗಳು ತಂತ್ರಜ್ಞಾನಕ್ಕನುಗುಣವಾಗಿ ರೂಪಾಂತರಗೊಂಡಿವೆ- ಎಂ.ಮಾಧವಾಚಾರ್

0

ಪ್ರಸ್ತುತ ಮುದ್ರಣ ಯಂತ್ರಗಳು ತಂತ್ರಜ್ಞಾನದ ಉನ್ನತೀಕರಣದೊಂದಿಗೆ ಲೇಟರ್ ಪ್ರೆಸ್, ಸಿಲೆಂಡರ್ ಮಿಷಿನ್, ಆಫ್‌ಸೆಟ್ ಮುದ್ರಣ, ಸ್ಕ್ರೀನ್‌ ಪ್ರಿಂಟಿಂಗ್ ಇತ್ಯಾದಿ ರೂಪಗಳಿಗೆ ರೂಪಾಂತರಗೊಂಡು ಇಂದಿನ ಡಿಟಿಟಲ್ ಯುಗಕ್ಕೆ ತೆರೆದುಕೊಂಡಿದೆ ಎಂದು ಶಿವಮೊಗ್ಗದ ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷ ಎಂ.ಮಾಧವಾಚಾರ್ ಹೇಳಿದರು.

ರೋಟರಿ ಆರ್‌ಎಂಬಿ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮುದ್ರಣ ತಂತ್ರಜ್ಞಾನದ ಬಗ್ಗೆ ಮಾತನಾಡಿ, 6ನೇ ಶತಮಾನದಲ್ಲಿ ಪ್ರಥಮವಾಗಿ ಚೀನಾ ದೇಶದಲ್ಲಿ ಮರದ ಅಕ್ಷರಗಳನ್ನು ತಯಾರಿಸಿ ಮುದ್ರಿಸುವ ಮೂಲಕ ಆರಂಭಗೊಂಡಿತು. ನಂತರ 15ನೇ ಶತಮಾನದಲ್ಲಿ ಆವಿಷ್ಕಾರಗೊಂಡು ಜರ್ಮನಿಯ ಜೋಹಾನ್ಸ್ ಬರ್ಗ್ನಲ್ಲಿ, ಯೂರೋಪ್‌ನ ದೇಶಗಳಲ್ಲಿ ಮುದ್ರಣ ಕ್ರಾಂತಿಯಾಯಿತು ಎಂದು ತಿಳಿಸಿದರು.

ಸೀಸದ ಅಕ್ಷರಗಳನ್ನು ಎರಕ ಹೋಯ್ದು ತಯಾರಿಸಿ, ಯೋಹಾನ್ಸ್ ಗೂಟೆನ್ ಬರ್ಗ್ ಪ್ರಥಮ ಮುದ್ರಣ ಯಂತ್ರವನ್ನು ಬಳಸಿ, ಲೆಟರ್ ಪ್ರೆಸ್ ಮಾದರಿಯಲ್ಲಿ ಬೈಬಲ್ ಪುಸ್ತಕಗಳನ್ನು ಪ್ರಥಮ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಮುದ್ರಿಸಲಾಯಿತು ಎಂದರು.

ಪ್ರಸ್ತುತ ಮುದ್ರಣ ಯಂತ್ರಗಳು ತಂತ್ರಜ್ಞಾನದ ಉನ್ನತೀಕರಣದೊಂದಿಗೆ ಸಾಗುತ್ತಿದೆ. ಇಂದಿನ ವೇಗದ ಯುಗಕ್ಕೆ ಅನುಗುಣವಾಗಿ ಡಿಜಿಟಲ್ ಪ್ರಿಂಟ್, ಆಫ್‌ಸೆಟ್ ಪ್ರಿಂಟಿಂಗ್, ಫ್ಲೆಕ್ಸ್ ಪ್ರಿಂಟ್, ಯುವಿ ಹಾಗೂ ಸ್ಪಾಟ್ ಯೂವಿ, ಲಿಕ್ವಿಡ್ ಯು.ವಿ., ಗೋಲ್ಡ್ ಫಾಯಿಲ್, ಎಂಬೋಜಿಂಗ್ ಮುದ್ರಣವಾಗಿ ಆವಿಷ್ಕಾರಗೊಂಡಿದೆ. ಇಂದಿನ ಆಧುನಿಕ ವೆಬ್ ಆಫ್‌ಸೆಟ್ ಯಂತ್ರಗಳನ್ನು ಬಳಸಿ ದಿನಪತ್ರಿಕೆಗಳು ಗಂಟೆಗೆ 40 ರಿಂದ 60 ಸಾವಿರದವರೆಗೂ ವೇಗವಾಗಿ ಬಹುವರ್ಣದಲ್ಲಿ ಮುದ್ರಣಗೊಳ್ಳುತ್ತಿವೆ ಎಂದು ತಿಳಿಸಿದರು.

ಶಿವಮೊಗ್ಗ ನಗರದಲ್ಲಿ 130 ವರ್ಷದ ಹಿಂದೆಯೇ ಮುದ್ರಣಾಲಯ ಇದ್ದ ದಾಖಲೆಗಳು ನಮ್ಮಲ್ಲಿ ಇವೆ. ಇಂದಿನ ಆಧುನಿಕ ತಂತ್ರಜ್ಞಾನದಿಂದ ತಯಾರಿಸಿದ ಮುದ್ರಣ ಸಾಮಗ್ರಿಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್ ಎಂ ಬಿ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಇಂದು ಮುದ್ರಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರತಿಯೊಂದು ಕ್ಷೇತ್ರದಲ್ಲೂ ಸಹ ಮುದ್ರಣದ ಅವಶ್ಯಕತೆ ತುಂಬಾ ಇದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬದಲಾದ ಹಾಗೆ ಸಾಕಷ್ಟು ಹೊಸ ಆವಿಷ್ಕಾರಗಳು ಮೂಡಿಬಂದಿವೆ. ಆದ್ದರಿಂದ ಕಾಲ ಕಾಲಕ್ಕೆ ತಕ್ಕಂತೆ ನಾವು ಸಹ ಬದಲಾವಣೆಯಾಗಬೇಕು ಎಂದರು.

ಆರ್ ಎಂ ಬಿ ಕಾರ್ಯದರ್ಶಿ ಎಸ್.ಪಿ.ಶಂಕರ್, ಖಜಾಂಚಿ ಕಿಶೋರ್ ಕುಮಾರ್, ಜಿ.ವಿಜಯ ಕುಮಾರ್, ಗೋವರ್ಧನ್ ಪಿ.ಬಿ. ಮತ್ತಿತರರು ಉಪಸ್ಥಿತರಿದ್ದರು.

National Health Campaign ಸಲಹಾ ಔಷಧಕಾರ ಮತ್ತು ಪ್ರಯೋಗ ಶಾಲಾ ತಂತ್ರಜ್ಞರ ಹುದ್ದೆಗೆ ನೇರ ಸಂದರ್ಶನಕ್ಕೆ ಕರೆ

0

National Health Campaign ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದ ಎನ್.ಪಿ.ಎನ್.ಸಿ.ಡಿ. ಕಾರ್ಯಕ್ರಮದಲ್ಲಿ ಖಾಲಿಯಿರುವ ಶಿಕಾರಿಪುರ ಜಿಲ್ಳಾ ಮಟ್ಟದ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ಮೆಡಿಸಿನ್-2 ಹುದ್ದೆಗಳು ಮತ್ತು ಹೊಸನಗರ ತಾಲೂಕು ಮಟ್ಟದ ಆಸ್ಪತ್ರೆಯಲ್ಲಿ ಪ್ರಯೋಗಶಾಲಾ ತಂತ್ರಜ್ಞರ -1 ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇರನೇಮಕಾತಿ ಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಕರೆ ನೀಡಲಾಗಿದೆ.
ಆಸಕ್ತರು ಫೆ. 20 ರಂದು ಬೆಳಗ್ಗೆ 11.00 ರಿಂದ ಮಧ್ಯಾಹ್ನ 5.00ರವರೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ತಮ್ಮ ದಾಖಲೆಗಳ ಮೂಲಪ್ರತಿ ಮತ್ತು ಛಾಯಾಪ್ರತಿಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. National Health Campaign ಕನ್ಸಲ್ಟೆಂಟ್ ಹುದ್ದೆಗೆ ಎಂ.ಬಿ.ಬಿ.ಎಸ್., ಎಂ.ಡಿ ಆಗಿದ್ದು, 3 ವರ್ಷಗಳ ಸ್ಪೆಷಲಿಸ್ಟ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು. ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗೆ ಎಸ್.ಎಸ್.ಎಲ್.ಸಿ. + ಪಿ.ಯು.ಸಿ. ಹಾಗೂ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಹೊಂದಿದ್ದು, 2 ವರ್ಷ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿರುವ ಅನುಭವವಿರಬೇಕು.

ಶಿವರಾತ್ರಿ ಜಾತ್ರೆ,ಫೆ.15 & 16 ರಂದು ಶಿವಮೊಗ್ಗ-ತೀರ್ಥಹಳ್ಳಿ ರಸ್ತೆ ವಾಹನ ಸಂಚಾರ ತಾತ್ಕಾಲಿಕ ಬದಲಾವಣೆ ಆದೇಶ

0

ಶಿವಮೊಗ್ಗ ನಗರದ ಹರಕೆರೆ ಶ್ರೀ ರಾಮೇಶ್ವರ ಸ್ವಾಮಿ ಮತ್ತು ಸೂಳೆಬೈಲ್ ಬೆಟ್ಟದ ಮಲ್ಲೇಶ್ವರ ದೇವಸ್ಥಾನದಲ್ಲಿ ಫೆ. 15 ರಂದು ಶಿವರಾತ್ರಿ ಹಬ್ಬದ ಪ್ರಯುಕ್ತ ಸಾವಿರಾರು ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ಹೋಗುವುದರಿಂದ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿ ಫೆ. 15 ರ ಬೆಳಗ್ಗಿನ 4.00 ರಿಂದ ಫೆ. 16 ರ ಬೆಳಗ್ಗಿನ ಜಾವದವರೆಗೆ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ನೀಡಿದ್ದಾರೆ.
ತೀರ್ಥಹಳ್ಳಿ ಮಾರ್ಗವಾಗಿ ಓಡಾಡುವ ವಾಹನಗಳನ್ನು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ವಾಹನಗಳು ಗಜಾನನ ಗ್ಯಾರೇಜ್ ಪಕ್ಕದ ರಸ್ತೆಯಲ್ಲಿ ಹೋಗಿ ರಾಮಿನಕೊಪ್ಪ ಚಾನಲ್ ಮಾರ್ಗವಾಗಿ ಎನ್.ಹೆಚ್. ಆಸ್ಪತ್ರೆ ಪಕ್ಕದ ರಸ್ತೆಗೆ ಬಂದು ಸೇರುವುದು. ಹಾಗೂ ತೀರ್ಥಹಳ್ಳಿಯಿಂದ ಬರುವ ಎಲ್ಲಾ ವಾಹನಗಳು ಎನ್.ಹೆಚ್.ರಸ್ತೆಯ ಪಕ್ಕದ ರಸ್ತೆಯ ಮೂಲಕ ರಾಮಿನ ಕೊಪ್ಪ ಚಾನಲ್ ಕ್ರಾಸ್ ನಿಂದ ಗಜಾನನ ಗ್ಯಾರೇಜ್ ಮೂಲಕ ಬಂದು ಶಿವಮೊಗ್ಗ ಸೇರುವಂತೆ ಆದೇಶದಲ್ಲಿ ತಿಳಿಸಿರುತ್ತಾರೆ.