Monday, August 10, 2026
Monday, August 10, 2026
Home Blog Page 192

CM Siddharamaiah ನೆಮ್ಮದಿಯನ್ನು ಮರುಸ್ಥಾಪಿಸಿದ ಸಂತೃಪ್ತಿ ನಮಗಿದೆ- ಸಿದ್ಧರಾಮಯ್ಯ

0

CM Siddharamaiah ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುವ ಸಂಕಲ್ಪದೊಂದಿಗೆ ಅಧಿಕಾರ ವಹಿಸಿಕೊಂಡ ನಾವು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದುಷ್ಟಶಕ್ತಿಗಳ ನಿಯಂತ್ರಣಕ್ಕಾಗಿ ಕೋಮುನಿಗ್ರಹ ಪಡೆ ರಚನೆ ಮಾಡಿದ್ದೇವೆ ಹಾಗೂ ವಿಧಾನ ಮಂಡಲದ ಉಭಯ ಸದನಗಳಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ – 2025ಕ್ಕೆ ಅನುಮೋದನೆ ದೊರೆತಿದೆ.
ಕೋಮುಗಲಭೆ, ಮತೀಯವಾದ ಮುಂತಾದ ಯಾವುದೇ ಅಹಿತಕರ ಘಟನೆಗಳು ನಡೆಯದೆ ಸಮಾಜದಲ್ಲಿ ಶಾಂತಿ – ನೆಮ್ಮದಿಯನ್ನು ಮರುಸ್ಥಾಪಿಸಿದ ಸಂತೃಪ್ತಿ ನಮಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

CM Siddharamaiah 1,000 ದಿನಗಳ ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯವನ್ನು ನಾಡಿನ ಜನತೆಗೆ ಅರ್ಪಿಸುತ್ತಿದ್ದೇವೆ. ನಿಮ್ಮ ಪ್ರೀತಿ – ಸಹಕಾರ ಮುಂದೆಯೂ ನಮ್ಮೊಂದಿಗಿರಲಿ ಎಂದಿದ್ದಾರೆ

Klive Special Article ಮಂಗಳಕರ ರಾತ್ರಿ…ಶಿವರಾತ್ರಿ ಲೇ: ಎನ್. ಜಯಭೀಮ ಜೊಯ್ಸ್. ಶಿವಮೊಗ್ಗ

0

Klive Special Article ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾಗಿದೆ. ಈ ಹಬ್ಬದ ವೈಶಿಷ್ಟ್ಯವೆಂದರೆ
ಇಡೀದಿನ ಉಪವಾಸ,ಜಾಗರಣೆಗಳನ್ನು ಮಾಡಿ,
ನಾಲ್ಕು ಯಾಮಗಳಲ್ಲಿಯೂ ಶಿವಪೂಜೆಯನ್ನು ಮಾಡುವುದರ ಮೂಲಕ ಆಚರಿಸಲಾಗುತ್ತದೆ.ಇಡೀ
ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಆಚರಿಸುವ ಹಬ್ಬ ಇದಾಗಿದೆ.
ಶಿವಭಕ್ತರ ಪಾಲಿಗೆ ಮಂಗಳಕರರಾತ್ರಿ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು
ಹೊತ್ತು ಪೂಜೆ ನಡೆಯುತ್ತದೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ, ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ದಯಪಾಲಿಸು ಎಂದು ಶಿವನನ್ನು ಪ್ರಾರ್ಥಿಸುವ ಶುಭ ದಿನವೇ ಶಿವ
ರಾತ್ರಿ. ಅಜ್ಞಾನವೆಂಬೊ ಅಂಧಕಾರ ತುಂಬಿರುವಲ್ಲಿ ಶಿವನು ತನ್ನ ಕಟಾಕ್ಷದಿಂದ ಅಜ್ಞಾನವನ್ನು ಪರಿಹರಿಸಿ
ಜ್ಞಾನದ ಬೆಳಕನ್ನು ನೀಡುತ್ತಾನೆ ಎಂಬ ದೃಢವಾದ ನಂಬಿಕೆ ಇದೆ.
ಶಿವಪುರಾಣದಲ್ಲಿ ಹೇಳಿರುವ ಪ್ರಕಾರ ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿಅನುಗ್ರಹಮಾಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ತಿಳಿಸಿದ್ದಾನೆ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡೀ ಶಿವನ ಕುರಿತು ಜಪ ಮಾಡುತ್ತಾ,ತಪಸ್ಸು ಮಾಡಿ ಶಿವನ ಮೆಚ್ಚಿಕೆಗೆ ಪಾತ್ರಳಾಗಿ ವಿವಾಹವಾದಳೆಂಬುದು ಪ್ರತೀತಿ. ಶಿವರುದ್ರ ತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ ಅದನ್ನು ಶಿವ ಕುಡಿದ.ವಿಷವನ್ನು ಗಂಟಲೊಳಗಿಂದ ಇಳಿಯದಂತೆ ಪಾರ್ವತೀ ಇಡೀ ರಾತ್ರಿತಡೆದಳು ಎಂದು ತಿಳಿಸುತ್ತದೆ ಶಿವಪುರಾಣ.
ವಿಷಕುಡಿದಪರಿಣಾಮವಾಗಿಶಿವನಕಂಠ(ಗಂಟಲು)ನೀಲಿ ಬಣ್ಣಕ್ಕೆತಿರುಗುತ್ತದೆ. ಆದ್ದರಿಂದಲೇ ಶಿವನನ್ನು “ನೀಲಕಂಠ”ಎಂದು ಕರೆಯುತ್ತಾರೆ. ವಿಷ್ಣುಅಲಂಕಾರ ಪ್ರಿಯನಾದರೆ,ಶಿವ ಅಭಿಷೇಕ ಪ್ರಿಯ,ಸತತ ಜಲಾ
ಭಿಷೇಕ ಪ್ರಿಯನು.
Klive Special Article ಶಿವನು ಭೋಲೇನಾಥ ಅಂದರೆ ಮುಗ್ಧನು. ಬೇಡಿದ್ದ
ನ್ನು ನೀಡುವ ದಯಾಳು.ಲಂಕಾಧೀಶ ರಾವಣನಿಗೆ ಅವನಭಕ್ತಿಗೆ ಮೆಚ್ಚಿ ಆತ್ಮಲಿಂಗವನ್ನೇ ಕೊಡುತ್ತಾನೆ. ಶಿವಭಕ್ತ ಮಾರ್ಕಂಡೇಯನ ಭಕ್ತಿಗೆ ಮೆಚ್ಚಿ ಅವನನ್ನು ಚಿರಂಜೀವಿಯನ್ನಾಗಿ ಮಾಡುತ್ತಾನೆ. ಶಿವಭಕ್ತಸಿರಿಯಾಳನಿಗೂ ಒಲಿದ ಶಿವ. ಕರುಣಾಮಯಿಯಾದ ಶಿವನು ಭಕ್ತಿಗೆ ಒಲಿಯುವನು.
ಶಿವನ ದೇವಾಲಯಗಳಲ್ಲಿ ರಾತ್ರಿಯಿಡೀ ಪೂಜಾದಿಗಳು,ಶಿವನಸ್ತೋತ್ರ ಪಾರಾಯಣ ಎಲ್ಲವೂ ನಡೆಯುವವು. ಶಿವರಾತ್ರಿಯ ಮಾರನೆಯ ದಿನ ಪಾರಣೆಯನ್ನು ಮಾಡಿ ಶಿವರಾತ್ರಿ ಹಬ್ಬವನ್ನು ಆಚರಿಸುವರು.
ಶಿವರಾತ್ರಿ ಹಬ್ಬದಂದು ಭಕ್ತರು ಶಿವನ ದೇವಾಲಯ
ಗಳಿಗೆ ಹೋಗಿ ಶಿವನ ದರ್ಶನ ಮಾಡಿ ಧನ್ಯರಾಗುವರು.
ಶಿವರಾತ್ರಿ ಹಬ್ಬದಂದು ಎಲ್ಲರಿಗೂ ಸನ್ಮಂಗಳವನ್ನು ಕರುಣಿಸುವಂತೆ ಪರಮೇಶ್ವರನಲ್ಲಿ ಭಕ್ತಿಯಿಂದ
ಪ್ರಾರ್ಥನೆ ಮಾಡೋಣ.

ಟಗರು ಕಾಳಗ ಸ್ಪರ್ಧೆಗೆ ಯಶ ಕೋರಿದ ನಟ ಡಾಲಿ ಧನಂಜಯ್

0

ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 15ರಂದು ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಬಾರಿ ಟಗರು ಕಾಳಗದ ದ ‘ಸಂಗೊಳ್ಳಿ ರಾಯಣ್ಣ , ವೀರ ಶಿವಪ್ಪ ನಾಯಕ, ಭಗೀರಥ,ವೀರ ಸಿಂಧೂರ ಲಕ್ಷ್ಮಣ ಟ್ರೋಫಿಗಳನ್ನು ಸ್ಯಾಂಡಲ್‌ವುಡ್‌ನ ನಟರಾಕ್ಷಸ ಡಾಲಿ ಧನಂಜಯ್ ರವರು ಅನಾವರಣಗೊಳಿಸಿ ಶಿವಮೊಗ್ಗ ಮಾರಿ ಜಾತ್ರೆಯ ಟಗರು ಕಾಳವು ಯಶಸ್ವಿಯಾಗಲೆಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ. ರಂಗನಾಥ್, ಗೌರವ ಸಂಚಾಲಕರುಗಳಾದ ನಾಗರಾಜ್ ಕಂಕರಿ, ಎಚ್ ಪಾಲಾಕ್ಷಿ, ಐಡಿಯಲ್ ಗೋಪಿ, ಪಿ.ಎಚ್ ಮಾಲ್ತೇಶ್, ಸಂಚಾಲಕರುಗಳಾದ ಹೆಚ್. ಪಿ. ಗಿರೀಶ್, ಎಂ ರಾಕೇಶ್, ರಾಜೇಶ್ ಮಂದಾರ, ಮನ್ವಿತ್ ಹಾಗೂ ಇತರರಿದ್ದರು.

ಫೆ.19. ಶಿವಮೊಗ್ಗದಲ್ಲಿ ಸಾಮೂಹಿಕ ರುದ್ರಹೋಮ‌ ಆಯೋಜನೆ

0

ವಿನೋಬನಗರದ ಚಾಚಾ ನೆಹರೂ ಪಾರ್ಕ್ ಪಕ್ಕದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ದೇವಸ್ಥಾನದ ಹಿಂಭಾಗದಲ್ಲಿರುವ ಲಿಂಗ ಮುದ್ರೆಕಲ್ಲು ಮುಂಭಾಗ ಸಾಮೂಹಿಕ ರುದ್ರ ಹೋಮವನ್ನು ಫೆ.16ರ ಬೆಳಿಗ್ಗೆ 10:30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಚೈತನ್ಯ ಸಮಿತಿ ತಿಳಿಸಿದೆ.
ಎಸ್.ದತ್ತಾತ್ರಿ ಭಟ್‌ರ ಪ್ರಧಾನ ಪೌರೋಹಿತ್ಯದಲ್ಲಿ ರುದ್ರಹೋಮ ನಡೆಯಲಿದ್ದು, ಸೇವಾ ಶುಲ್ಕ 250 ರೂ.ಇದ್ದು, ಫೆ.15ರ ಸಂಜೆಯೊಳಗಾಗಿ ಹೆಸರು ನೋಂದಾಯಿಸುವಂತೆ ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ.ಕೆ.ಮುರುಳೀಧರ್ ಭಟ್ ತಿಳಿಸಿದ್ದಾರೆ.

DVS College of Arts, Science and Commerce ಅಧ್ಯಾಪಕರೇ ಸ್ವತಃ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು ಅವಶ್ಯಕವಾಗಿದೆ- ಪ್ರೊ.ರಾಜೇಂದ್ರ ಚೆನ್ನಿ

0

DVS College of Arts, Science and Commerce ಅಧ್ಯಾಪಕರು ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡುವಾಗ ಸ್ವತಃ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಕುವೆಂಪು ವಿವಿ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಪದವಿ ಕಾಲೇಜುಗಳ ಅಧ್ಯಾಪಕರಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ವಿದ್ಯಾರ್ಥಿ ಕಲಿಕೆಯ ಮೌಲ್ಯ ನಿರ್ಣಯ ಮತ್ತು ಮೌಲ್ಯಮಾಪನ ತಂತ್ರಗಳು ವಿಷಯ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳ ಕಲಿಕೆಯು ಒಂದೇ ರೀತಿಯಲ್ಲಿ ಇರದೆ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಮಟ್ಟವು ವಿಭಿನ್ನವಾಗಿ ಇರುತ್ತದೆ. ಆ ವಿಭಿನ್ನತೆಯನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಅಧ್ಯಾಪಕರು ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಬೇಕಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಈ ಮೌಲ್ಯಮಾಪನ ಎಂಬುದು ಸಾಂಪ್ರದಾಯಿಕತೆಗಿಂತ ಭಿನ್ನವಾಗಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಅಗತ್ಯಗಳು ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಬೋಧನೆ ಮಾಡಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಎಚ್.ಕೇಶವ ಮಾತನಾಡಿ, ಪ್ರತಿಯೊಬ್ಬ ಅಧ್ಯಾಪಕನು ಸರಿಯಾಗಿ ತಯಾರಿ ನಡೆಸಿಕೊಂಡು ಅಧ್ಯಾಪನ ಮಾಡಿದಾಗ ಮಾತ್ರ ವಿದ್ಯಾರ್ಥಿಗಳಿಗೆ ಸಂಪೂರ್ಣ ಜ್ಞಾನ ವರ್ಗಾವಣೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಬಸಪ್ಪಗೌಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡುವ ರೀತಿಯಲ್ಲಿ ಅಧ್ಯಾಪಕರು ಹೆಚ್ಚು ಹೆಚ್ಚು ಜ್ಞಾನವನ್ನು ಪಡೆದುಕೊಂಡು ಪಾಠ ಪ್ರವಚನಗಳನ್ನು ನೆರವೇರಿಸಬೇಕು. ಇಂದು ಮೊದಲು ಮೌಲ್ಯಮಾಪನ ಆಗಬೇಕಾಗಿರುವುದು ವಿದ್ಯಾರ್ಥಿಗಳದ್ದಲ್ಲ, ಅಧ್ಯಾಪಕರದ್ದು ಎಂದು ತಿಳಿಸಿದರು.

DVS College of Arts, Science and Commerce ವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಜಿ.ಮಧು, ಬೆಂಗಳೂರಿನ ಕ್ರೈಸ್ಟ್‌ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಪ್ರಮೋದ್ ಕುಮಾರ್, ಕಾರ್ಯಕ್ರಮ ಸಂಯೋಜಕ ಡಾ. ನವೀನ್.ವಿ, ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ, ಸಹಾಯಕ ಪ್ರಾಧ್ಯಾಪಕಿ ಪಿ.ಅರ್ಪಿತಾ, ಡಯಾನ ಎ ಡಿಬೆರ್ಟಾ ಉಪಸ್ಥಿತರಿದ್ದರು.

Meggan Hospital Shivamogga ಶಿವಮೊಗ್ಗ ಹಿರಿಯ ಪ್ರಸೂತಿ ತಜ್ಞ ಡಾ.ಚಿನ್ನಯ್ಯ ನಿಧನ

0

Meggan Hospital Shivamogga ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ನಿವೃತ್ತ ವಸತಿ ವೈದ್ಯಾಧಿಕಾರಿಗಳು ಹಾಗೂ ಹಿರಿಯ ಪ್ರಸೂತಿ ತಜ್ಞರಾದ ಡಾ. ಎ.ಎಸ್.ಚಿನ್ನಯ್ಯ (88 ವರ್ಷ) ಅವರು ವಯೋಸಹಜ ಕಾರಣಗಳಿಂದ ಫೆ.12 ರಂದು ನಿಧನರಾಗಿದ್ದಾರೆ.

ಡಾ. ಎ.ಎಸ್.ಚಿನ್ನಯ್ಯ ಇವರು ಕೊಪ್ಪ ತಾಲ್ಲೂಕಿನ ಹರಿಹರಪುರ ಮೂಲದವರು. ಆ ಭಾಗದ ಅತೀ ಕಿರಿಯ ವೈದ್ಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಇವರು ಬೆಂಗಳೂರಿನ ಪ್ರತಿಷ್ಠಿತ ಬೌರಿಂಗ್ ಸಂಸ್ಥೆಯಲ್ಲಿ ಎಲ್.ಎಂ.ಪಿ (LMP) ಪದವಿ ಪಡೆದ ನಂತರ, 1966 ರಲ್ಲಿ ಮಣಿಪಾಲದ ಕೆ.ಎಂ.ಸಿ (KMC) ಯಲ್ಲಿ ಎಂಬಿಬಿಎಸ್ ಪೂರೈಸಿದರು. ಬಳಿಕ ಗುಲ್ಬರ್ಗಾ ವಿಶ್ವವಿದ್ಯಾಲಯದ ಅಡಿಯಲ್ಲಿ ಬಳ್ಳಾರಿಯ ಪ್ರಸೂತಿ ಶಾಸ್ತ್ರದಲ್ಲಿ ಎಂ.ಡಿ (MD) ಸ್ನಾತಕೋತ್ತರ ಪದವಿ ಪಡೆದರು.

ಡಾ. ಎ.ಎಸ್.ಚಿನ್ನಯ್ಯ ರವರು ದಶಕಗಳ ಕಾಲ ದಕ್ಷಿಣ ಕರ್ನಾಟಕದ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಮೊದಲು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೃತ್ತಿ ಜೀವನ ಆರಂಭಿಸಿ, ನಂತರ ಚಿಕ್ಕಮಗಳೂರಿನಲ್ಲಿಯೂ ಸೇವೆ ಸಲ್ಲಿಸಿದರು. ಬಳಿಕ ಮೆಗ್ಗಾನ್ ಆಸ್ಪತ್ರೆಗೆ ಮರಳಿ, ಅಲ್ಲಿಯೇ ವಸತಿ ವೈದ್ಯಾಧಿಕಾರಿಗಳಾಗಿ (RMO) ಸುದೀರ್ಘ ಸೇವೆ ಸಲ್ಲಿಸಿ 1994ರಲ್ಲಿ ನಿವೃತ್ತರಾದರು. ಶಿಸ್ತುಬದ್ಧ ಜೀವನ, ರೋಗಿಗಳ ಮೇಲಿನ ಕಾಳಜಿ ಹಾಗೂ ವೃತ್ತಿಪರತೆಗೆ ಇವರು ಹೆಸರಾಗಿದ್ದರು.

ಮೃತರು ಪುತ್ರಿಯರಾದ ಮಲ್ಲಿಕಾ, ಮಧುರ, ಒಬ್ಬ ಪುತ್ರ ಹಾಗೂ ಅಸಗೋಡು ಕುಟುಂಬದ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಪತ್ನಿ ಶ್ರೀಮತಿ ಲೀಲಾ ಅವರು ಈ ಹಿಂದೆಯೇ ದೈವಾಧೀನರಾಗಿದ್ದಾರೆ.

Meggan Hospital Shivamogga ಮೃತರ ಅಂತ್ಯಕ್ರಿಯೆಯು ಫೆ.14 ರ ಶನಿವಾರದಂದು 11:00 ಗಂಟೆಗೆ ಅವರ ಪೂರ್ವಜರ ನಿವಾಸವಾದ ಅಸಗೋಡು ಗ್ರಾಮದಲ್ಲಿ ನೆರವೇರಲಿದೆ ಎಂದು ಅಸಗೋಡು ಕುಟುಂಬದವರು ತಿಳಿಸಿರುತ್ತಾರೆ.

Karnataka State Legal Services Authority ಶಿವಮೊಗ್ಗದಲ್ಲಿ ಅರೆಕಾಲಿಕ ಕಾನೂನು ಸ್ವಯಂಸೇವಕರಿಗೆ ತರಬೇತಿ ಕಾರ್ಯಾಗಾರ

0

Karnataka State Legal Services Authority ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಔಟ್ ಲಾಡ್ ಇಂಡಿಯಾ ಇವರುಗಳ ಸಹಯೋಗದೊಂದಿಗೆ ಫೆ. 16 ರಿಂದ 19 ರವರೆಗೆ ನಗರದ ಡಿ.ಎ.ಆರ್. ಸಭಾಂಗಣದಲ್ಲಿ ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ತಾಲೂಕಿನ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಮಂಜುನಾಥ ಜಿ.ಎ.ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿ.ಕಾ.ಸೇ.ಪ್ರಾ.ದ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ಸಮಿತಿ ಅಧ್ಯಕ್ಷರಾದ ಅಭಯ ಧನಪಾಲ ಚೌಗಲಾ ಪಾಲ್ಗೊಳ್ಳಲಿದ್ದಾರೆ.

Karnataka State Legal Services Authority ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿ.ಕಾ.ಸೇ.ಪ್ರಾ.ದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್.ರವರಿಂದ ಪ್ರಾಸ್ತಾವಿಕ ನುಡಿ ಹಾಗೂ ಸಿದ್ದಾರ್ಥರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಫೆಬ್ರವರಿ 17 &18 . ಶಿವಮೊಗ್ಗದ ಚನ್ನಪ್ಪ ಲೇಔಟ್ ಸುತ್ತಮುತ್ತ ವಿದ್ಯುತ್ ನಿಲುಗಡೆ ಮೆಸ್ಕಾಂ ಪ್ರಕಟಣೆ

0

ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ -2ರ ವ್ಯಾಪ್ತಿಯಲ್ಲಿ ಫೆ. 17 ಮತ್ತು 18 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00ರವರೆಗೆ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಚನ್ನಪ್ಪ ಲೇಔಟ್, ಎ.ಎನ್.ಕೆ.ರಸ್ತೆ, ಗಾಂಧಿನಗರ ಮುಖ್ಯರಸ್ತೆ, ಅಚ್ಯುತರಾವ್ ಲೇಔಟ್, ಜಿಲ್ಲಾ ಪಂಚಾಯತ್ ಮುಖ್ಯರಸ್ತೆ, ಕುವೆಂಪು ರಸ್ತೆ, ಸವಳಂಗ ರಸ್ತೆ, ವೆಂಕಟೇಶನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Karnataka Nomadic and Semi-Nomadic Community Development Corporation ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಅಭಿವೃದ್ಧಿ ನಿಗಮದಿಂದ ಯೋಜನೆ ಸೌಲಭ್ಯ ಮಾಹಿತಿ

0

Karnataka Nomadic and Semi-Nomadic Community Development Corporation ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಅಭಿವೃದ್ದಿ ನಿಗಮದ ವತಿಯಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಲ್ಲಿ ನಿಗಮದಿಂದ ವಾಹನ ಖರೀದಿಗೆ ರೂ.3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂದು ಪೋರ್ಟೆಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯು ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಹಿಂದುಳಿದ ವರ್ಗಗಳ ಪ್ರವರ್ಗ-1ರ ಬುಂಡ್ ಬೆಸ್ತರ್, ಬೈಲ ಪತ್ತರ್, ಭೈರಾಗಿ (ಬಾವ), ಬಜಿನಿಯ, ಬಾಲಸಂತೋಶಿ-ಜೋಶಿ, ಬಾಜಿಗರ್, ಭರಡಿ, ಬುಡ್ ಬುಡಕಿ – ಜೋಶಿ- ಗೋಂಧಳಿ, ಚಾರ, ಚಿತ್ರಕಶಿ-ಜೋಶಿ, ದರ್ವೇಶ್, ದವೇರಿ, ಧೋಲಿ, ದೊಂಬರಿ, ದೊಂಬಿದಾಸ, ದುರ್ಗ-ಮುರ್ಗ (ಬುರ್ ಬುರಚ), ಗರಡಿ, ಘಿಸಡಿ, ಗೊಲ್ಲ, ಗೋಂಧಳಿ, ಗೋಪಲ್, ಹೆಳವ, ಹಾವ್ ಗಾರ (ಹಾವಡಿಗರ್), ಜೋಗಿ, ಜೋಶಿಸಾದ ಜೋಶಿ, ಕಾಶಿಕಪಾಡಿ, ಕಡಬು, ಕೆಲ್ ನಾರಿ, ಕಿಳ್ಳೆಕ್ಯಾತನ್, ಕೊಲಾತಿ, ಮಸನಿಯ ಯೋಗಿ, ನಂದಿವಾಲ ಜೋಶಿ, ಘೋಂಡಲ್ ಪುಲ್ ಮಲ್ಲಿ, ನಾಥವಂಧಿ ಡೌರಿ ಗೋಸಾವಿ, ನೀರ್ಶಿಕಾರಿ, ಪಂಗಲ್, ಪಿಚಗುಂಡಲು, ಸನ್ ಸಿಯ, ಸರಾನಿಯ, ಸರೋಡಿ, ಶಿಕ್ಕಲಿಗಾರ್, ತಿರುಮಲಿ, ಪಡಿ, ವಗ್ರಿ, ವ್ಯಡು, ವಾಸುದೇವ್, ವಿರ್ ಪ್ರವರ್ಗ-1 ಈ ಎಲ್ಲಾ ಜಾತಿಗೆ ಸೇರಿದವರಾಗಿರಬೇಕು.

ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು, ಆಧಾರ್ ಕಾರ್ಡ್ ನಲ್ಲಿರುವಂತೆ ಅರ್ಜಿದಾರರ ಹೆಸರು ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇರುವಂತೆ ಹೊಂದಾಣಿಕೆಯಾಗಬೇಕು.ಕುಟುಂಬದ ವಾರ್ಷಿಕ ವರಮಾನ ರೂ.3.00 ಲಕ್ಷಗಳ ಒಳಗಿರಬೇಕು ಹಾಗೂ ಅರ್ಜಿದಾರರ ವಯಸ್ಸು 21 ರಿಂದ 45 ವರ್ಷ ಒಳಗಿನವರಾಗಿರಬೇಕು.

ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸುವಂತಿಲ್ಲ.

ಆಸಕ್ತರು ಸೇವಾಸಿಂದು ಪೋರ್ಟೆಲ್ http://sevasindhukarnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್, ಮತ್ತು ಕರ್ನಾಟಕ ಒನ್, ಸೇವಾ ಕೇಂದ್ರಗಳಲ್ಲಿ ಮಾ. 06 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ನಿಗಮದ ಜಾಲತಾಣ http://kaadc.karnataka.gov.in/kn/ ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಟ್ಟಡ, ಬಾಲರಾಜ್ ಅರಸ್ ರಸ್ತೆ, ಕೆ.ಇ.ಬಿ. ಸರ್ಕಲ್ ಹತ್ತಿರ, ಶಿವಮೊಗ್ಗ,ದೂ. ಸಂ:08182-229634ನ್ನು ಸಂಪರ್ಕಿಸುವುದು.

MESCOM ಆನವಟ್ಟಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ.17 ರಂದು ಜನಸಂಪರ್ಕ ಸಭೆ

0

MESCOM ಆನವಟ್ಟಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 17 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ.

ಮೆಸ್ಕಾಂನ ಈ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;.9448998783.