Monday, August 10, 2026
Monday, August 10, 2026
Home Blog Page 191

S.N. Channabasappa ಸ್ಥಳಿಯ ಪರಂಪರೆಯನ್ನುಳಿಸಿ ಬೆಳೆಸುವ ಕಾರ್ಯಕ್ರಮಗಳು ನಮ್ಮ ಏಕತೆ ಮತ್ತು ಸಾಂಸ್ಜೃತಿಕ ಗೌರವ ಕಾಪಾಡುತ್ತವೆ- ಶಾಸಕ ಚೆನ್ನಿ

0

S.N. Channabasappa ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ, ನಮ್ಮೂರ ಬಳಗ – ಶಿವಮೊಗ್ಗ ಇವರ ವತಿಯಿಂದ ಆಯೋಜಿಸಲಾದ ರಾಷ್ಟ್ರ ಮಟ್ಟದ ಕುರಿ ಕಾಳಗ ಸ್ಪರ್ಧೆಯನ್ನು 
ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು.

ನಾಡಿನ ಸಾಂಪ್ರದಾಯಿಕ ಕ್ರೀಡೆಗಳು ಹಾಗೂ ಗ್ರಾಮೀಣ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಸ್ಪರ್ಧಿಗಳು ಹಾಗೂ ಕ್ರೀಡಾಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಸಂಸ್ಕೃತಿ, ಕ್ರೀಡೆ ಮತ್ತು ಸಹಭಾಗಿತ್ವದ ಮನೋಭಾವವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಆಯೋಜನೆ ಜಾತ್ರಾ ಮಹೋತ್ಸವಕ್ಕೆ ವಿಶೇಷ ಮೆರುಗು ತಂದಿದೆ.
S.N. Channabasappa ಸ್ಥಳೀಯ ಪರಂಪರೆಯನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳು ನಮ್ಮ ಸಮುದಾಯದ ಏಕತೆ ಮತ್ತು ಸಾಂಸ್ಕೃತಿಕ ಗೌರವವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ
ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸಂತ ಶರೀಫರ ಕೃತಿಗಳನ್ನ ಕಟ್ಟಿ ಕೊಟ್ಟ ಭಟ್ಟರು

0

ಲೇ: ಪ್ರಭಾಕರ ಕಾರಂತ.

ಕವಿ ಲಕ್ಷ್ಮೀನಾರಾಯಣ ಭಟ್ಟ ಇನ್ನೂ ಶಿವಮೊಗ್ಗದಲ್ಲಿ ಪ್ರೌಢ ಶಾಲೆಯಲ್ಲಿದ್ದಾಗಲೇ ಶಾಲಾ ವಾರ್ಷಿಕೋತ್ಸವಕ್ಕೆ ಆನಕೃ ಅತಿಥಿಯಾಗಿ ಬಂದಿದ್ದರು.”ಸೋರುತಿಹುದು ಮನೆಯ ಮಾಳಿಗೀ… ಅಜ್ಞಾನದಿಂದ”ಪದ್ಯವನ್ನು ಆದರ ಆರ್ಥ ಸಮೇತ ವಿವರಿಸಿ ಸ್ವಾರಸ್ಯವಾಗಿ ಮಾತನಾಡಿ ಅವರು, ಶರೀಫರನ್ನು ಮಕ್ಕಳಿಗೆ ಸೊಗಸಾಗಿ ಪರಿಚಯಿಸಿದ್ದರು.ಶಿವಮೊಗ್ಗ ತುಂಗಾ ತೀರದ ದೊಡ್ಡ ಬ್ರಾಹ್ಮಣ ಬೀದಿಯ ಬಾಲಕ ಭಟ್ಟನಿಗೆ ಅಲ್ಲಿಂದ ಶರೀಫರ ಗೀಳು ಹಿಡಿಯಿತು.ಬೀದಿಯಲ್ಲಿ ಬರುವ ದಾಸರಲ್ಲೆಲ್ಲಾ ಶರೀಫರ ಹಾಡು ಬರುತ್ತಾ ಎಂದು ಕೇಳುವುದು ಬಾಲಕನ ಹವ್ಯಾಸವಾಯಿತು.ಓರ್ವ ಹರಿದಾಸರು ಭಟ್ಟರ ಪುಣ್ಯಕ್ಕೆ ಸಿಕ್ಕೇ ಬಿಟ್ಟರು.ಅವರನ್ನು ಹಾದಿ ಬದಿಯ ಕಟ್ಟೆ ಮೇಲೆ ಕೂರಿಸಿ “ಎಂಥಾ ಮೋಜಿನ ಕುದುರೀ”ಹಾಡನ್ನು ತಂಬೂರಿ ಯೊಂದಿಗೆ ಹಾಡಿಸಿ ಭಟ್ಟರು ಚಪ್ಪಾಳೆ ತಟ್ಟಿ ಆನಂದಿಸಿದರು.ಹರಿದಾಸರಿಗೆ ಮತ್ತೇನಾದರೂ ಕೊಡಲು ಈ ಬಾಲಕ ಬರಿಗೈ ದಾಸ.ಮುಂದೆ ಯಾರು ಕಂಡರೂ ಶರೀಫರ ಹಾಡು ಕೇಳಿ ಬರೆದುಕೊಳ್ಳುವುದು ಭಟ್ಟರ ಅಭ್ಯಾಸ ಆಯಿತು.ಭಟ್ಟರು ದೊಡ್ಡವರಾಗಿ ಓದಿ ವಿಶ್ವ ವಿದ್ಯಾಲಯ ಸೇರಿ ಪಾಠ ಮಾಡಿತೊಡಗಿದಾಗಲೂ,ಊರೂರಿಗೆ ಭಾಷಣಕ್ಕೆ ಹೋಗುವಾಗಲೂ ಶರೀಫರ ಪದ್ಯ ಸಂಗ್ರಹ ನಿಲ್ಲಿಸಲಿಲ್ಲ.ಅದು ಯಾರಬಳಿ ದೊರಕೀತು ಎಂದು ಅವರು ಸರಿಯಾಗಿ ನಿರ್ಧರಿಸಬಲ್ಲವರಾಗಿದ್ದರು.
ಒಮ್ಮೆ ವಿಶ್ವವಿದ್ಯಾಲಯ ಪಠ್ಯ ರಚನಾ ಸಮಿತಿ ಭಟ್ಟರಿಗೆ ಪಠ್ಯಕ್ಕಾಗಿ ದಾಸರಪದ ಸಂಗ್ರಹಿಸಿ ಕೊಡಲು ಕೋರುತ್ತದೆ.ಭಟ್ಟರು ಲಭ್ಯ ಇರುವ ದಾಸರ ಪದ ಸಂಗ್ರಹಿಸಿ ವಿವರಣಿ,ಅಡಿ ಟಿಪ್ಪಣಿ ಯೊಂದಿಗೆ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸುತ್ತಾರೆ.ಇನ್ನೇನು ಆದು ಅಚ್ಚಿಗೆ ಹೋಗಬೇಕು ಆಗ ಭಟ್ಟರಿಗೆ ಮತ್ತೆ ಕರೆ ಬರುತ್ತದೆ.ನಿಮ್ಮ ಸಂಗ್ರಹ ರಂ.ಶೀ.ಮುಗಳಿಯವರ ಪರಿಶೀಲನೆಗೆ ಹೋಗಿತ್ತು.ಅವರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ ಎಂದು ಆವರ ಪತ್ರ ಭಟ್ಟರಿಗೆ ಕೊಡುತ್ತಾರೆ.ಈ ಸಂಗ್ರಹ, ವಿವರಣೆ,ಅಡಿ ಟಿಪ್ಪಣಿ ಎಲ್ಲಾ ತುಂಬಾ ಚೆನ್ನಾಗಿದೆ.ಆದರೆ ಪುರಂದರ ದಾಸರು, ಕನಕ ದಾಸರು ಮುಂತಾದವರ ನಡುವೆ ಓರ್ವ ಮುಸಲ್ಮಾನನ ಪದ್ಯ ಸೇರಿಸಿದ್ದಾರೆ.ಆ ಆರು ಪದ್ಯ ಮತ್ತದಕ್ಕೆ ಸಂಬಂಧಿಸಿದಂತೆ ಇರುವ ಬರಹ ತೆಗೆದು ಉಳಿದಂತೆ ಇದನ್ನು ಪಠ್ಯ ಮಾಡಬಹುದು ಎಂದು ಮುಗಳಿ ಅಭಿಪ್ರಾಯ ಪಟ್ಟಿರುತ್ತಾರೆ.ಭಟ್ಟರಿಗೆ ಬೇಗ ಆವರು ಹೇಳಿದಂತೆ ಮಾಡಿಕೊಡಿ,ಪಠ್ಯ ಅಚ್ಚಿಗೆ ತಡವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.ಭಟ್ಟರು ನಾನು ಹಾಗೆ ಮಾಡಲಾರೆ ಎಂದುತ್ತರಿಸುತ್ತಾರೆ.ಈಗಲೇ ತಡವಾಗಿದೆ, ಬೇರೆಯದೇ ಸಂಗ್ರಹ ಮಾಡಿಸುವಂತಲೂ ಇಲ್ಲ.ನೀವು ಹೀಗೆ ಹೇಳಿದರೆ ಏನು ಮಾಡಬೇಕು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.ಭಟ್ಟರೇ ಅದಕ್ಕೊಂದು ಪರಿಹಾರ ಹೇಳುತ್ತಾರೆ.ಇದೇ ಸಂಗ್ರಹ ಬೇರೊಬ್ಬರಿಂದ ನಿಮಗೆ ಬೇಕಾದಂತೆ ಮಾರ್ಪಡಿಸಿ ಅವರ ಹೆಸರಿನಲ್ಲೇ ಆಚ್ಚು ಹಾಕಿ.ಅದರ ಗೌರವ ಸಂಭಾವನೆಯನ್ನೂ ಅವರಿಗೇ ಕೊಟ್ಟುಕೊಳ್ಳಿ.ನಾನು ಯಾವುದೇ ಕಾರಣಕ್ಕೂ ಈ ಸಂಗ್ರಹದಲ್ಲಿ ಬದಲಾವಣೆ ಮಾಡುವುದೇ ಇಲ್ಲ ಎಂದು ಖಡಕ್ ಉತ್ತರ ನೀಡುತ್ತಾರೆ.ನೀವು ಹೀಗೆ ಹಠ ಮಾಡಿದರೆ…ಎಂದು ಅಧಿಕಾರಿಗಳು ಮಾತು ನಿಲ್ಲಿಸಿದಾಗ ಏನು ಮಾಡುತ್ತೀರಿ, ಉಪಕುಲಪತಿಗಳಿಗೆ ದೂರು ಕೋಡುವಿರಿ ತಾನೆ,ಹಾಗೇ ಮಾಡಿ ಎಂದು ಹೇಳಿ ಭಟ್ಟರು ನಿರ್ಗಮಿಸುತ್ತಾರೆ.
ಆದೇ ದಿನ ಭಟ್ಟರಿಗೆ ಉಪಕುಲಪತಿಗಳ ಬುಲಾವ್ ಬರುತ್ತದೆ.ಆಗ ಆ ಸ್ಥಾನದಲ್ಲಿದ್ದವರು ದಕ್ಷ ಐಎಎಸ್ ಅಧಿಕಾರಿ ಜೈರಾಮನ್.ವಿಶ್ವವಿದ್ಯಾಲಯದಲ್ಲಿ ಆದ ಕೆಲ ಅವ್ಯವಹಾರ ಕಂಡು ಸರಿಪಡಿಸಲೆಂದೇ ಸರ್ಕಾರ ಅವರನ್ನು ನೇಮಿಸಿರುತ್ತದೆ.ತಮ್ಮೆದುರು ಬಂದು ನಿಂತ ವ್ಯಕ್ತಿಯನ್ನು “ನೀವೇ ಏನ್ರೀ ಲಕ್ಷ್ಮೀನಾರಾಯಣ ಭಟ್ಟ.ಮುಗಳಿ ಯವರ ಕುರಿತು ನಿಮಗೇನಾದರೂ ಗೋತ್ತೇನ್ರೀ.ಅಂತವರು ಕೊಟ್ಟ ಸೂಚನೆ ಪಾಲಿಸುವುದು ಬಿಟ್ಟು ಸಲ್ಲದ ಕ್ಯಾತೆ ತೆಗೆದಿದ್ದೀರಂತೆ.ಪ್ರಸಿದ್ದ ದಾಸರ ಜೊತೆಗೆ ಯಾರೋ ಮುಸಲ್ಮಾನನ ಪದ್ಯ ಸೇರಿಸಿದ್ದಲ್ಲದೇ ಆದು ತೆಗೆಯಲಾರೆ ಎಂದು ಬೇರೆ ಹೇಳಿದಿರಂತೆ.ಸುಮ್ಮನೇ ಸಮಸ್ಯೆ ಮಾಡದೇ ಬದಲಾಯಿಸಿ ಕೊಡಿ” ಎಂದು ಆಜ್ಞೆ ನೀಡಿದರು.ಭಟ್ಟರು ತೆಪ್ಪಗೆ ಈಚೆಗೆ ಬಾರದೇ ನಿಂತೇ ಇರುವುದು ಕಂಡು ಸಿಡಿಮಿಡಿಗೊಂಡು ಆರ್ಥವಾಗಲಿಲ್ಲವೇನ್ರೀ ಎಂದು ಕುಲಪತಿಗಳು ಪ್ರಶ್ನಿಸಿದರು.ಆರ್ಥವಾಯಿತು, ನನಗೆ ಸ್ವಲ್ಪ ಮಾತನಾಡಲು ಅವಕಾಶ ನೀಡಬೇಕು ಎಂದು ಭಟ್ಟರು ಉತ್ತರಿಸಿದರು.ಅದೇನು ಬೇಗ ಹೇಳಿ,ನನಗೆ ಬೇಕಾದಷ್ಟು ಕೆಲಸ ಇದೆ ಎಂದು ಉಪಕುಲಪತಿ ಸಿಡುಕುತ್ತಾರೆ.ನಾನು ಓರ್ವ ಸಮರ್ಥರಾದ ದಾಸರ ಪದ್ಯವನ್ನೇ ಸೇರಿಸಿದ್ದು.ಆವರು ಉಳಿದವರಿಗಿಂತ ಕಡಿಮೆ ಇಲ್ಲ.ಯಾವನೋ ಸಾಬರಲ್ಲ ಅವರು.ಶರೀಫರು.ಧರ್ಮದ ಆಧಾರದಲ್ಲಿ ಆವರ ಶ್ರೇಷ್ಠ ತತ್ವಪದ ಕೈಬಿಡಲು ಯಾರು ಹೇಳಿದರೂ ನನಗೆ ಒಪ್ಪಿಗೆ ಇಲ್ಲ ಸಾರ್ ಎನ್ನುತ್ತಾರೆ.
ಶರೀಫರು ಮಹಾನ್ ಕೀರ್ಥನಕಾರರು, ಸಾಧಕರು ಎಂದು ಭಟ್ಟರು ಸೇರಿಸುತ್ತಾರೆ.ಏನು ಅಷ್ಟು ದೊಡ್ಡವರೇ ಉಪಕುಲಪತಿ ಕುತೂಹಲದಿಂದ ಪ್ರಶ್ನಿಸುತ್ತಾರೆ.ಹೌದು ಸರ್ ಅವರ ತತ್ವಪದಗಳು ಬಹು ಶ್ರೇಷ್ಠ ವಾಗಿವೆ.ಆವರು ಧರ್ಮ ಮೀರಿದವರು.ಇಷ್ಟಕ್ಕೂ ಅವರಿಗೆ ಉಪನಯನ ಸಹ ಆಗಿತ್ತು ಎಂದು ಭಟ್ಟರು ವಿವರಿಸತೊಡಗುತ್ತಾರೆ.ಓಹೋ ನೀವೂ ಉಪನಯನಕ್ಕೆ ಹೋಗಿದ್ದರೇನ, ಏನೆಲ್ಲಾ ಕಾಕಬೂಕ ಕಥೆ ಕಟ್ಟುತ್ತೀರ ಎಂದು ಉಪಕುಲಪತಿ ಮತ್ತೆ ಅಸಹನೆ ತೋರುತ್ತಾರೆ.ಅವಕಾಶ ಇದ್ದರೆ ನಾನು ಹೋಗುವವನೇ,ಆದರೆ ಕಳೆದ ಶತಮಾನದ ಸಮಾರಂಭಕ್ಕೆ ಹೋಗುವುದು ಹೇಗೆ.ಅದಕ್ಕೆ ಸಾಕ್ಷಿ ಇದೆ ಎನ್ನುತ್ತಾರೆ ಭಟ್ಟರು.ಏನು ಸಾಕ್ಷಿ ಎಂದಾಗ ಪದ್ಯ ಬರೆದಿಟ್ಟಿದ್ದಾರೆ ಸರ್.ತಮ್ಮ ಗುರು ಗೋವಿಂದ ಭಟ್ಟರು ಜನಿವಾರ ಹಾಕಿದ ಕುರಿತೇ ಪದ್ಯ ಇದೆ.ಇಷ್ಟು ಹೇಳಿದ ಭಟ್ಟರು” ಹಾಕಿದ ಜನಿವಾರವಾ…”ಪದ್ಯ ಹೇಳುತ್ತಾ ಅದರ ಆರ್ಥ ವಿವರಿಸುತ್ತಾ ತರಗತಿಯಲ್ಲಿ ಪಾಠ ಮಾಡುವಂತೆಯೇ ಉಪಕುಲಪತಿಗಳಿಗೆ ಪಾಠ ಮಾಡುತ್ತಾರೆ.ಈ ಆಕರ್ಷಕ ಪಾಠದ ಮೋಡಿಗೊಳಗಾದ ಉಪಕುಲಪತಿ ವಿದೇಯ ವಿದ್ಯಾರ್ಥಿಯಾಗಿ ಪಾಠ ಕೇಳುತ್ತಾರೆ.ಪಾಠ ಮುಗಿದ ಮೇಲೆ ಉಪಕುಲಪತಿಗಳು ಭೇಷ್,ನೀವು ಸರಿಯಾಗೇ ಆ ಪದ್ಯ ಸೇರಿಸಿದ್ದೀರಿ.ಯಾರು ಹೇಳಿದರೂ ಇದರ ಬದಲಾವಣೆ ಬೇಡ ಎಂದು ಹೇಳಿ ಯಥಾ ಪ್ರಕಟಣೆಯ ಆದೇಶ ಹೊರಡಿಸುತ್ತಾರೆ.ಕಲ್ಲು ಸಕ್ಕರೆ ಕೊಳ್ಳಿರೋ ಎಂಬ ಆ ಭಟ್ಟರ ಸಂಪಾದಿತ ತತ್ವಪದಗಳ ಕೃತಿ ಈವತ್ತಿಗೂ ಅತ್ಯುತ್ತಮ ಸಂಗ್ರಹ ಎನಿಸಿದೆ.
ಒಮ್ಮೆ ಅಶ್ವಥ್ ಕೆಲ ಹೊಸ ಹಾಡಿಗೆ ಭಟ್ಟರಲ್ಲಿ ಕೋರಿಕೆ ಇಡುತ್ತಾರೆ.ಭಟ್ಟರು ಒಂದೆರಡು ದಿನದಲ್ಲೇ ಶರೀಫರ ಕೆಲ ಹಾಡನ್ನು ಕೊಡುತ್ತಾರೆ.ಮತ್ತೆ ಭಟ್ಟರು ಸಿಕ್ಕಾಗ ಇದೇನು ನಿಮ್ಮ ಹಾಡು ಕೊಡಿ ಅಂದರೆ ಇದ್ಯಾವುದೋ “ಕೆಟ್ಟ ಗಂಡೇ ಚೌಡೇರು,ರಂಡೇರೈವರ ಕೂಡಿ ನಗುತಲಿ ಬಂದು…” ಇಂತಹಾ ಹಾಡು ಕೊಟ್ಟಿದ್ದೀರಲ್ಲ.ಇದನ್ನು ಹಾಡಿದರೆ ಜನ ಕಲ್ಲು ಹೊಡೆಯುತ್ತಾರೆ ಅಷ್ಟೇ ಎಂದು ಅಶ್ವಥ್ ತಿಳಿಸುತ್ತಾರೆ.
ಅಶ್ವಥ್ ಮತ್ತು ಭಟ್ಟರು ಆತ್ಮೀಯ ಸ್ನೇಹಿತರೇನೋ ಹೌದು,ಆದರೆ ಆವರ ನಡುವೆ ಆಗೀಗ ಕಲಹ ನೆಡೆಯುವುದೂ ಇತ್ತು!.
ಒಮ್ಮೆ ಅಶ್ವಥ್ ಜೊತೆಗೆ ಚಿಂತಾಮಣಿಗೆ ಸ್ನೇಹ ಕೂಟಕ್ಕೆ ಭಟ್ಟರು ಹೋಗಿದ್ದರು.ಅಂದು ಆಶ್ವಥ್ ಶಿವರುದ್ರಪ್ಪನವರ “ಎಲ್ಲೋ ಹುಡುಕಿದೆ ಇಲ್ಲದ ದೇವರ,ಕಲ್ಲು ಮಣ್ಣುಗಳ ಗುಡಿಯೊಳಗೆ”ಹಾಡನ್ನು ಹಾಡುತ್ತಾರೆ.ಹಾಡು ಹೇಗಿದೆ ಎಂದು ಭಟ್ಟರನ್ನು ಪ್ರಶ್ನಿಸುತ್ತಾರೆ.ಚೆನ್ನಾಗಿ ಹಾಡಿದಿರಿ ಎಂದು ಭಟ್ಟರಿಂದ ಉತ್ತರ ಬಂದಾಗ ಗೀತೆ ಹೇಗಿದೆ ಎಂದು ಉಪ ಪ್ರಶ್ನೆ.ನನಗೆ ಆದರ ಭಾವ ಇಷ್ಟ ಆಗಲಿಲ್ಲ ಎನ್ನುತ್ತಾರೆ.ಶಿವರುದ್ರಪ್ಪನವರ ಗೀತೆಗೇ ಭಟ್ಟರು ಹೀಗೆ ಹೇಳುವುದು ಅಶ್ವಥ್ ಗೆ ಸರಿ ಕಾಣುವುದಿಲ್ಲ.ಏನು ಭಾವ ಎಂದವರು ಕೆಣಕುತ್ತಾರೆ.ದೇವರೇ ಇಲ್ಲ ಎನ್ನುತ್ತದೆ ಈ ಪದ್ಯ.ನಮಗೆ ಪವಿತ್ರವಾದ ಗುಡಿ ಇಲ್ಲಿ ಬರೇ ಕಲ್ಲು ಮಣ್ಣು.ಇಲ್ಲದ ದೇವರು ಅನ್ನೋ ಬದಲು ಕಾಣದ ದೇವರ ಅನ್ನಬಹುದಿತ್ತು.ಭಟ್ಟರ ವಿವರಣೆ ಆಶ್ವಥ್ ಗೆ ಇಷ್ಟವಾಗಲಿಲ್ಲ.ಅವರಿಗೆ ಸಮರ್ಪಕವಾಗಿ ಸಮರ್ಥಿಸಿಕೊಳ್ಳಲೂ ಆಗಲಿಲ್ಲ.ಅವರಿಗೆ ಕೋಪದ ಜೊತೆಗೆ ಗಂಟಲೂ ಏರತೊಡಗಿತು.ಭಟ್ಟರೇನೂ ಶರಣಾಗುವವರಲ್ಲ.ತರ್ಕಬದ್ದವಾದ ಅವರ ಮಾತುಗಳಿಗೆ ಅಲ್ಲಿದ್ದವರು ತಲೆದೂಗಿದರೂ ಆಶ್ವಥ್ ಅಸಮಾಧಾನಗೊಂಡರು.ಅಷ್ಟರಲ್ಲಿ ಇಬ್ಬರನ್ನೂ ಬೇರ್ಪಡಿಸಬೇಕಾಯಿತು ಉಳಿದವರು.ಜೊತೆಯಾಗಿ ಚಿಂತಾಮಣಿ ಹೋದವರು ಬೇರೆ ಬೇರೆಯಾಗಿ ಬೆಂಗಳೂರಿಗೆ ಹಿಂದಿರುಗಿದರು.ಮುನಿಸು ಬಹಳ ಕಾಲ ಉಳಿಯಲಿಲ್ಲ.ಬೆಳಗಾಗುತ್ತಲೇ ಭಟ್ಟರ ಮನೆಯಲ್ಲಿದ್ದರು ಅಶ್ವಥ್.ನೀವು ಸರಿಯಾಗೇ ಹೇಳಿದಿರಿ.ನಾನೇ ಏನೇನೋ ಮಾತನಾಡಿದೆ ಎಂದು ಆಶ್ವಥ್ ಹೇಳಿದಾಗ ಭಟ್ಟರು ಕ್ಷಮಿಸಿ ಬಿಡುತ್ತಾರೆ.ಭಟ್ಟರು ಈ ಗೀತೆ ನನ್ನಿಂದ ಹಾಡಿಸಿ ಕಲ್ಲು ಹೊಡೆಸಿ ಯಾವುದೋ ಜಗಳದ ಸೇಡು ತೀರಿಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೇನ ಎಂದು ಅಶ್ವಥ್ ಗೆ ಅನಿಸಿರಲೂ ಸಾಕು.
ಭಟ್ಟರು ಶರೀಫರ ಕುರಿತು ಅಶ್ವಥ್ ರಿಗೆ ಮತ್ತೆ ಪಾಠ ಮಾಡುತ್ತಾರೆ.ಅಶ್ವಥ್ ರಿಗೂ ಶರೀಫರ ಹುಚ್ಚು ಹಿಡಿಸುತ್ತಾರೆ.ಶರೀಫರ ಹತ್ತು ಕೀರ್ತನೆಗಳನ್ನು ಆಶ್ವಥ್ ರಿಂದಲೇ ಹಾಡಿಸಿ ಕ್ಯಾಸೆಟ್ ಮಾಡಿಸುತ್ತಾರೆ.ಅದು ಜನರ ಹುಚ್ಚೆಬ್ಬಿಸುತ್ತದೆ.ಮುಂದೆ ಆಶ್ವಥ್ ರಿಂದ ಶರೀಫರ ಎಂಟು ಕ್ಯಾಸೆಟ್ ಮಾಡಿಸುತ್ತಾರೆ.ಶರೀಫರ ಕುರಿತು ಭಟ್ಟರು ಒಂದು ಪುಸ್ತಕ ರಚಿಸುತ್ತಾರೆ.ತಮಗೆ ಶರೀಫರ ಕುರಿತು ಹಿಡಿದ ಹುಚ್ಚನ್ನು ಲೋಕಕ್ಕೆ ಹಬ್ಬಿಸುತ್ತಾರೆ.ಶಿಶುನಾಳದಂತ ಸಣ್ಣ ಊರವರೇ ಮರೆತಿದ್ದ ಶರೀಫರನ್ನು ಲೋಕ ವಿಖ್ಯಾತ ಮಾಡುತ್ತಾರೆ.ಕನ್ನಡಕ್ಕೆ ಇಷ್ಟು ಉಪಕಾರ ಮಾಡಿದ ಭಟ್ಟರನ್ನು ಮರೆಯುವುದುಂಟೇ.

Chamber Of Commerce Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು- ಡಿ.ಎಸ್.ಅರುಣ್

0

Chamber Of Commerce Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿರಂತರವಾಗಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಫೆರೋಕಾಸ್ಟ್ ಸಭಾಂಗಣದಲಿ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ, ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

ಇಂದಿನ ಯುಗದಲ್ಲಿ ಆಹಾರ ಪದ್ಧತಿ, ಜೀವನಶೈಲಿ ಬದಲಾಗಿದ್ದು, ಒತ್ತಡ, ಮಾಲಿನ್ಯ ವಾತಾವರಣದಿಂದ ಆರೋಗ್ಯ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯ ಕಾಳಜಿ ವಹಿಸಬೇಕು. ಪ್ರಕೃತಿ ಚಿಕಿತ್ಸೆ ಬಗ್ಗೆ ಹಿಂದೂ ಸಮಾಜ ಹೆಚ್ಚಿನ ಆಸಕ್ತಿ ಹೊಂದುತ್ತಿದೆ ಎಂದು ತಿಳಿಸಿದರು.

ಜನನಿ ಸಮೂಹ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಉದಯಶಂಕರ ಭಟ್ ಮಾತನಾಡಿ, ಶರೀರಕ್ಕೆ ರೋಗಗಳು ಬಂದಾಗ ಅವುಗಳನ್ನು ಪರಿಹರಿಸುವ ಶಕ್ತಿ ಪಂಚಭೂತಗಳಲ್ಲಿದೆ ಎಂಬ ತತ್ವವನ್ನು ಆಧರಿಸಿರುವುದು ಪ್ರಕೃತಿ ಚಿಕಿತ್ಸೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿ.ಆರ್.ಧನಂಜಯ ಮಾತನಾಡಿ, ಪ್ರತಿ ದಿನದ ಆಹಾರ ಪದ್ಧತಿ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

Chamber Of Commerce Shivamogga ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಯೋಗ, ಪ್ರಕೃತಿ ಚಿಕಿತ್ಸೆಯು ಇಂದಿನ ಕಾಲಘಟ್ಟದಲ್ಲಿ ತುಂಬಾ ಅಗತ್ಯವಾಗಿದ್ದು, ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ಚಿಕಿತ್ಸೆ ಅನುಸರಿಸಬೇಕು ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸಂತೋಷ್ ಕುಮಾರ್ ಬಿ.ಎನ್, ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ವಾಗೀಶ್ ಕೋಟಿ, ಜನನಿ ಆಸ್ಪತ್ರೆಯ ಡಾ. ಬಿ.ಜಯರಾಮ್, ಡಾ. ನಿಶ್ಚಿತ್, ಡಾ. ಸಹನಾ, ಪೂಜಾ ದೇವರಾಜ್, ಸಂದೀಪ್, ಅನಿಶ್, ಕೃಷ್ಣಮೂರ್ತಿ, ಮಧುಮಲಾ, ಉಮಾಮಣಿ, ಬಿಂದು ವಿಜಯಕುಮಾರ್, ಗಿರಿಜಾ ಧನಂಜಯ, ವೀಣಾ ಕಿಶೋರ್, ರೋಟರಿ, ಜೆಸಿಐ ಸದಸ್ಯರು ಇದ್ದರು.

Shakti scheme ಇನ್ನುಮುಂದೆ ಫ್ರೀ ಬಸ್ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್

0

Shakti scheme ʼಶಕ್ತಿʼ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಪ್ರಯಾಣಿಕರಿಗೆ ರಾಜ್ಯ ಸರ್ಕಾರವು ಉಚಿತವಾಗಿ ಸ್ಮಾರ್ಟ್‌ಕಾರ್ಡ್‌ ನೀಡಲು ನಿರ್ಧರಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಮೂಲಕ ಸ್ಮಾರ್ಟ್‌ಕಾರ್ಡ್‌ ವಿತರಿಸುವ ನಿರ್ಣಯಕ್ಕೆ ಬರಲಾಗಿದೆ.

Shakti scheme ಇನ್ನುಮುಂದೆ ಆಧಾರ್‌ ಕಾರ್ಡ್‌ ಬದಲು ಸ್ಮಾರ್ಟ್ ಕಾರ್ಡ್‌ ಬಳಸಿ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ನಿಶ್ಚಿಂತರಾಗಿ ಪ್ರಯಾಣಿಸಬಹುದಾಗಿದೆ ಎಂದು ಪ್ರಕಟಿಸಲಾಗಿದೆ.

DVS College of Arts, Science and Commerce ಹೃದಯಾಘಾತಕ್ಕೆ ನಮ್ಮ ದವಡೆ ಮತ್ತು ದಂತದಲ್ಲಿನ ರೋಗಲಕ್ಷಣಗಳೂ ಕಾರಣ- ಡಾ.ಎಚ್.ಮಂಜನಾಥ್

0

DVS College of Arts, Science and Commerce ಪ್ರಪಂಚದಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳಿಗೆ ಮುಖ್ಯ ಕಾರಣ ನಮ್ಮ ದವಡೆ ಮತ್ತು ದಂತಗಳಲ್ಲಿ ಕಂಡುಬರುವ ರೋಗ ಲಕ್ಷಣಗಳಾಗಿವೆ ಎಂದು ದಂತ ವೈದ್ಯ ಡಾ ಎಚ್.ಮಂಜುನಾಥ್ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸುಬ್ಬಯ್ಯ ದಂತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ದಂತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಯುವಜನರು ಗುಟ್ಕಾ ಸೇವನೆ, ತಂಬಾಕು ಸೇವನೆ ಸೇರಿದಂತೆ ಮಾದಕ ವ್ಯಸನಕ್ಕೆ ದಾಸರಾಗುತ್ತಿರುವುದರಿಂದ ಬಾಯಿ, ದವಡೆ ಹಾಗೂ ದಂತಗಳ ಸವಕಳಿ ಮತ್ತು ರೋಗ ಹೆಚ್ಚಾಗಿ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ಜನರು ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ ಸ್ವಚ್ಛತೆಯ ಕಡೆಗೆ ಮತ್ತು ಉತ್ತಮ ಆರೋಗ್ಯದ ಅಭ್ಯಾಸಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಸುಬ್ಬಯ್ಯ ದಂತ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶಿವರಾಜ್ ಮಾತನಾಡಿ, ಮುಖ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಯುವಜನರ ಪಾತ್ರ ಬಹಳ ಮುಖ್ಯವಾಗಿದೆ. ಇಂದಿನ ಕ್ಯಾನ್ಸರ್ ಹೃದಯಾಘಾತ ಇನ್ನಿತರ ಕಾಯಿಲೆಗಳ ಮೂಲ ನಮ್ಮ ಬಾಯಿಂದಲೇ ಪ್ರಾರಂಭವಾಗುತ್ತವೆ. ಆದ್ದರಿಂದ ಇವುಗಳ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಜವಾಬ್ದಾರಿಯುತ ವ್ಯಕ್ತಿಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.

ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ಪಿ.ದಿನೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿದ್ದು, ತಂಬಾಕು ಸೇವನೆ ಮಾಡುವ, ಗುಟ್ಕಾ ತಿನ್ನುವ ಯುವಜನರು ಮುಂದೆ ಸಂಭವಿಸಬಹುದಾದ ಮಾರಕ ರೋಗಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಕೆಟ್ಟ ಅಭ್ಯಾಸಗಳನ್ನು ಈಗಿನಿಂದಲೇ ತ್ಯಜಿಸಬೇಕು ಎಂದು ಹೇಳಿದರು.

DVS College of Arts, Science and Commerce ದೇಶೀಯ ವಿದ್ಯಾಶಾಲಾ ಸಮಿತಿ ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ದಂತ ತಪಾಸಣೆ ಮತ್ತು ಚಿಕಿತ್ಸೆ ವೆಚ್ಚಗಳು ಹೆಚ್ಚಾಗುತ್ತಿದ್ದು, ಆದಷ್ಟು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಗಳು ದೊರೆಯುವಂತೆ ಆಗಬೇಕು ಎಂದು ತಿಳಿಸಿದರು.

ಸುಬ್ಬಯ್ಯ ದಂತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಾಯಕ ಪ್ರಾಧ್ಯಾಪಕಿ ಡಾ. ಆರ್.ಪರಿಮಳಾ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಪ್ರೊ. ಎನ್.ಕುಮಾರಸ್ವಾಮಿ ಇತರರಿದ್ದರು.

ಫೆ. 17. ವೀರೇಶ್ವರ ಪುಣ್ಯಾಶ್ರಮದಲ್ಲಿ ಕು.ಶ್ರೀಗೌರಿ ಎಂ.ಜೋಷಿ ಅವರ ಗಾಯನ

0

ಶಿವಮೊಗ್ಗ ನಗರದ ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಗಾನಲಹರಿ ೧೧೭ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮವನ್ನು ಫೆ. ೧೭ರ ಮಂಗಳವಾರ ಸಂಜೆ ೬.೩೦ಕ್ಕೆ ಆಯೋಜಿಸಲಾಗಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸಿದ್ದರು. ನಗರದ ಶ್ರೀರಾಮ ಕ್ಷತ್ರಿಯ ಭಜನಾ ಮಂಡಳಿಯಿಂದ ಭಜನಾ ಸೇವೆ ಮತ್ತು ಆಶ್ರಮದ ಅಂಧ ಮಕ್ಕಳು ಪ್ರಾರ್ಥಿಸಲಿದ್ದಾರೆ. ದಾವಣಗೆರೆಯ ಗಾಯಕರಾದ ಕು. ಶ್ರೀಗೌರಿ ಎಂ. ಜೋಶಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕತ ರಾಮಣ್ಣ ಭಜಂತ್ರಿ, ವೀರಭದ್ರಶಾಸ್ತ್ರಿ ವೇದ ಘೋಷ, ವಿನಾಯಕ ಭಟ್ ತಬಲ, ಸಿದ್ದಣ್ಣ ಬಡಿಗೇರ್ ಹಾರ್‍ಮೋನಿಯಂ ಜೊತೆ ಸಾಥ್ ನೀಡಲಿದ್ದಾರೆ. ರೇವಣ್ಣ ಸಿದ್ದಯ್ಯ ಶಾಸ್ತ್ರಿಗಳು ನಿರೂಪಿಸಲಿದ್ದಾರೆ.

Krishna Bhairegowda ಸದ್ದಿಲ್ಲದೇ ನಡೆದ ಕ್ರಾಂತಿ: ರಾಜ್ಯ ಸರ್ಕಾರದ ಭೂ ಗ್ಯಾರಂಟಿ- ಸಚಿವ ಕೃಷ್ಣ ಭೈರೇಗೌಡ

0

Krishna Bhairegowda ದಾಖಲೆ ರಹಿತ ಜನವಸತಿಗಳಿಗೆ ಕಂದಾಯ ಗ್ರಾಮದ ಭಾಗ್ಯ ಇದು ರಾಜ್ಯದ ಕಂದಾಯ ಇಲಾಖೆಯ ಹೊಸ ಉಪಕ್ರಮವಾಗಿದೆ.

ಹಲವು ವರ್ಷಗಳಿಂದ ಗ್ರಾಮದ ಸ್ಥಾನಮಾನವಿಲ್ಲದೆ, ಸೌಲಭ್ಯಗಳಿಂದ ವಂಚಿತರಾಗಿದ್ದ ಜನವಸತಿ ಪ್ರದೇಶಗಳಿಗೆ ದಾಖಲೆಯನ್ನು ಕಲ್ಪಿಸಿ ಅವರ ವಾಸಿಸುವ ಹಕ್ಕನ್ನು ಎತ್ತಿ ಹಿಡಿದಿದೆ.

2023ರ ವರೆಗೆ ಕೇವಲ 1.08 ಲಕ್ಷ ಜನರಿಗೆ ಮಾತ್ರ ಮ್ಯಾನುವಲ್‌ ಹಕ್ಕುಪತ್ರ ನೀಡಲಾಗಿತ್ತು. ಆದರೆ ಇಂದು ಅಂತಹ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ, ಹಕ್ಕುಪತ್ರ ವಿತರಣೆಗೆ ವೇಗ ನೀಡಲಾಗಿದೆ. ಈ ಮೂಲಕ ಇದೊಂದು ಜನಪರ ಕ್ರಾಂತಿಯಾಗಿ ಬದಲಾಗಿದೆ.

ಹೊಸಪೇಟೆಯಲ್ಲಿ 1,11,111 ಜನರಿಗೆ ಈಗಾಗಲೇ ಡಿಜಿಟಲ್‌ ಹಕ್ಕುಪತ್ರ ನೀಡಲಾಗಿದೆ.
ಫೆಬ್ರವರಿ 14ರಂದು ಹಾವೇರಿಯಲ್ಲಿ 1,06,724 ಜನರಿಗೆ ಡಿಜಿಟಲ್‌ ಹಕ್ಕುಪತ್ರಗಳನ್ನು ವಿತರಿಸಲಾಗಿದೆ

ಕೇವಲ ಹಕ್ಕುಪತ್ರವಲ್ಲ, ನೋಂದಣಿಯೊಂದಿಗೆ ಇ-ಸ್ವತ್ತು ಕೂಡ ಜನರ ಕೈಸೇರುತ್ತಿದೆ. ಶೀಘ್ರದಲ್ಲೇ 1,50,000 ಜನರಿಗೆ ಡಿಜಿಟಲ್‌ ಹಕ್ಕುಪತ್ರ ಸಿಗಲಿದೆ.

Krishna Bhairegowda ಇದು ಸದ್ದಿಲ್ಲದೇ ನಡೆದ ಕ್ರಾಂತಿ. ಪ್ರಣಾಳಿಕೆಯಲ್ಲಿ ಹೇಳದೇ ಜಾರಿ ಮಾಡಿದ ʼಭೂ ಗ್ಯಾರಂಟಿʼ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ..

ಶಿವಮೊಗ್ಗದಲ್ಲಿ ಶಿವರಾತ್ರಿಯ ಸಡಗರ ಶುರು

0

ನಾಡಿನೆಲ್ಲೆಡೆ ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲೂ ಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ.

ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ- ಜಾತ್ರೋತ್ಸವ ನಡೆಯುತ್ತಿದೆ. ಶಿವಮೊಗ್ಗ ವಿನೋಬನಗರದ ಶಿವಾಲಯ ಹಾಗೂ ಹರಕರೆ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿದವು.ಪುರದಾಳು ಬಸವೇಶ್ವರ ದೇವಾಲಯ, ತೀರ್ಥಹಳ್ಳಿ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವರಾತ್ರಿ ಹಿನ್ನೆಲೆ ಗಣ ಹೋಮ, ಪಂಚಾಮೃತ, ಅಭಿಷೇಕ ಸೇರಿದಂತೆ ವಿಶೇಷ ಪೂಜೆ ನಡೆದವು. ಆಡಳಿತ ಮಂಡಳಿಯ ವತಿಯಿಂದ ಭಕ್ತರಿಗೆ ಉಪಹಾರ- ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

Sahyadri College of Commerce and Management ಶಾಲಾಕಟ್ಟಡಕ್ಕೆ ಸುಣ್ಣಬಣ್ಣ ಮಾಡಿ ಸೌಂದರ್ಯ ಹೆಚ್ಚಿಸಿದ ಎನ್ಎಸ್ಎಸ್ ಶಿಬಿರಾರ್ಥಿಗಳು

0

Sahyadri College of Commerce and Management ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್ಎಸ್ಎಸ್ ಘಟಕಗಳ ವತಿಯಿಂದ ಆಯನೂರು ಸಮೀಪದ ದೊಡ್ಡಮತ್ತಲಿ ಗ್ರಾಮದಲ್ಲಿ ಆಯೋಜಿಸಿರುವ ವಾರ್ಷಿಕ ಶಿಬಿರದಲ್ಲಿ ಇಂದು ಶಾಲೆಗೆ ಸುಣ್ಣಬಣ್ಣ ಮಾಡುವುದರ ಜೊತೆಗೆ ಅಲಂಕಾರಿಕವಾಗಿ ಹಸೆ ಚಿತ್ತಾರದ ಕೆಲಸವನ್ನು ಮಾಡಲಾಯಿತು. ಎನ್ಎಸ್ಎಸ್ ನ ಹಿರಿಯ ಸ್ವಯಂಸೇವಕರು, ಶಿಬಿರದ ವಿದ್ಯಾರ್ಥಿಗಳು, ಆಸಕ್ತ ಅಧ್ಯಾಪಕರು ಸೇರಿಕೊಂಡು ಹಸೆ ಚಿತ್ತಾರವನ್ನು ಬಿಡಿಸುತ್ತಿದ್ದಾರೆ. ಮೂರು ದಿನಗಳ ಕಾಲ ಈ ಕಾರ್ಯ ನಡೆಯಲಿದೆ.

ಸಂತ ಸೇವಾಲಾಲ್ ಜಯಂತಿಯಲ್ಲಿ ಪಾಲ್ಗೊಂಡ ಸಂಸದ ರಾಘವೇಂದ್ರ

0

ಬಂಜಾರ ಕಾಶಿ ಸೂರಗೊಂಡನಕೊಪ್ಪದಲ್ಲಿ ಸಂತಗುರು ಸಂತ ಸೇವಾಲಾಲ್ ಮಹಾರಾಜ್ ಅವರ 287ನೇ ಜಯಂತಿ ಮಹೋತ್ಸವ ನಡೆಯಿತು.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರವಾದ ಸುರಗೊಂಡನಕೊಪ್ಪದಲ್ಲಿ (ಭಾಯಗಡ್) ನಡೆದ ಸಂತಗುರು ಸೇವಾಲಾಲ್ ಮಹಾರಾಜ್ ಅವರ 287ನೇ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ , ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್,ದಾವಣಗೆರೆ ಸಂಸದೆ
ಡಾ. ಪ್ರಭಾ ಮಲ್ಲಿಕಾರ್ಜುನ್,
ಶ್ರೀ ಪಿ. ರಾಜೀವ್ ,ಮಾಜಿ ಶಾಸಕರು,
ಶ್ರೀ ಎಂ.ಪಿ. ರೇಣುಕಾಚಾರ್ಯ ,ಮಾಜಿ ಶಾಸಕರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.