MESCOM 11 ಕೆವಿ ಮಾರ್ಗದ ನಿರ್ವಹಣಾ ಕೆಲಸವಿರುವುದರಿಂದ ಬೊಮ್ಮನಕಟ್ಟೆ ಎ ಮತ್ತು ಬಿ ಬ್ಲಾಕ್, ಸಾನ್ವಿ ಲೇಔಟ್, ನಿಗಡೆ ಲೇಔಟ್, ಎಂ.ಬಿ.ಎಸ್ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫೆ. 18 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
S.N. Channabasappa ಬ್ರಹ್ಮಕುಮಾರಿ ಈಶ್ವರೀಯ ವಿವಿ ಮೌಲ್ಯಾಧಾರಿತ ಜೀವನವನ್ನು ಉತ್ತೇಜಿಸುತ್ತಿದೆ- ಎಸ್.ಎನ್.ಚನ್ನಬಸಪ್ಪ
S.N. Channabasappa ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯು ವಿಶ್ವಾದ್ಯಂತ ಆಧ್ಯಾತ್ಮಿಕ ಜಾಗೃತಿ, ವೈಯಕ್ತಿಕ ಜೀವನದಲ್ಲಿ ಸಕರಾತ್ಮಕ ಪರಿವರ್ತನೆ ಗುಣವನ್ನು ಬೆಳೆಸುವ ಒಂದು ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವಾ ಸಂಸ್ಥೆಯಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾಶಿ ವಿಶ್ವನಾಥ ದರ್ಶನ ಸ್ವರ್ಣೀಮ ಭಾರತ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂತರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ ಮತ್ತು ಸಮುದಾಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಾಂತಿ, ಏಕತೆ ಮತ್ತು ಮೌಲ್ಯಾಧಾರಿತ ಜೀವನವನ್ನು ಉತ್ತೇಜಿಸುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ನಗರದ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಸ್ವಾತಿ ಮಾತನಾಡಿ, ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ 1937ರಲ್ಲಿ ಸ್ಥಾಪನೆಯಾಗಿ ವಿಶ್ವಾದ್ಯಂತ ಆಧ್ಯಾತ್ಮಿಕ ಮತ್ತು ರಾಜಯೋಗ ಧ್ಯಾನದ ಮೇಲೆ ಕೇಂದ್ರೀಕರಿಸಿದೆ. ಪ್ರಮುಖವಾಗಿ ಮಹಿಳೆಯರೇ ನೇತೃತ್ವ ವಹಿಸುತ್ತಿರುವ ಇದು, 150 ದೇಶಗಳಲ್ಲಿ 10,000ಕ್ಕೂ ಹೆಚ್ಚಿನ ಕೇಂದ್ರಗಳನ್ನು ಹೊಂದಿದೆ ಎಂದರು.
ಶಿವಮೊಗ್ಗದ ಎಲ್ಲ ಶಿವಭಕ್ತರಿಗೆ ಮುಂದಿನ ದಿನಗಳಲ್ಲಿ ಶಿವರಾತ್ರಿ ಹಬ್ಬದಲ್ಲಿ ಜ್ಯೋತಿರ್ಲಿಂಗಗಳ ಮಾದರಿ ಸ್ಥಾಪಿಸಿ ಅವುಗಳ ದರ್ಶನ ಮಾಡಿಸುವ ಯೋಜನೆ ಇದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಹಬ್ಬಗಳು ನಮ್ಮಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಮೂಡಿಸುವುದರ ಜೊತೆಗೆ ದೇಶಭಕ್ತಿಯನ್ನು ಹಾಗೂ ಸಂಸ್ಕೃತಿಯ ಪರಂಪರೆಯನ್ನು ಬಲಪಡಿಸುತ್ತವೆ ಎಂದು ತಿಳಿಸಿದರು.
ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಸಂಸ್ಥೆಯು ಶಾಂತಿಯ “ಜಾಗತಿಕ ಸಂಸ್ಕೃತಿ”ಯನ್ನು ಬೆಳೆಸುತ್ತದೆ. ಜಾತಿ, ಮತ, ಧರ್ಮದ ಭೇದ ಇಲ್ಲದೆ ಸರ್ವ ಧರ್ಮದ ಪ್ರತೀಕವಾಗಿದೆ ಎಂದರು.
S.N. Channabasappa ಅಂಚೆ ಅಧೀಕ್ಷಕ ಎಂ.ಕುಮಾರಸ್ವಾಮಿ ಮಾತನಾಡಿ, ಸಂಸ್ಥೆಯು ಸೇವಾನಿರತ ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ಮತ್ತು ಎನ್ ಟಿ ಎಸ್ ನೌಕರರನ್ನು ಗುರುತಿಸಿ ಸನ್ಮಾನಿಸಿರುವುದು ಮಾದರಿಯಾಗಿದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ವೈದ್ಯ ಡಾ. ಪ್ರಸನ್ನ ಬಸವರಾಜಪ್ಪ, ಡಾ. ಆಕಾಶ್ ಹೊಸ್ತೋಟ, ವಾಹನ ನಿರೀಕ್ಷಕ ಪಿ.ಎಂ.ಮಲ್ಲೇಶಪ್ಪ, ಉಪ ತಹಸೀಲ್ದಾರ್, ಗಿರಿರಾಜ್ ಎಸ್.ಒ, ಶ್ರೀ ಸರಸ್ವತಿ ಸಂಗೀತ ವಿಶ್ವವಿದ್ಯಾಲಯ ಬಿ.ಕೆ.ವಿಜಯಲಕ್ಷ್ಮೀ ರಾಘು, ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ ನಿರ್ದೇಶಕ ಪಿ.ರುದ್ರೇಶ್, ಲೆಕ್ಕಪರಿಶೋಧಕ ಆರ್.ಮನೋಹರ, ತೋಟಗಾರಿಕಾ ಮಹಾವಿದ್ಯಾಲಯ ಡೀನ್ ಡಾ. ಡಿ.ತಿಪ್ಪೇಶ್ ಇತರರಿದ್ದರು.
Shivaganga Yoga Center ಹಿಂದೂಗಳ ಪವಿತ್ರ ಹಬ್ಬ, ಶಿವರಾತ್ರಿ- ಎಸ್.ರುದ್ರೇಗೌಡ
Shivaganga Yoga Center ಹಿಂದುಗಳ ಬಹಳ ವಿಶೇಷವಾದ ಪವಿತ್ರ ಹಬ್ಬ ಮಹಾಶಿವರಾತ್ರಿ. ಈ ಪವಿತ್ರ ದಿನ ಮಾಡುವ ಎಲ್ಲಾ ಕೆಲಸಗಳು ಶಿವನಿಗೆ ಸಮರ್ಪಣೆ ಆಗುತ್ತವೆ ಎಂದು ಮಾಜಿ ಎಂಎಲ್‌ಸಿ, ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ಎಸ್.ರುದ್ರೇಗೌಡ ಹೇಳಿದರು.
ಕಲ್ಲಳ್ಳಿಯಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ “ಸಂಪೂರ್ಣ ಯೋಗ ಆರೋಗ್ಯ ಧಾಮ ” ಆವರಣದಲ್ಲಿ ಇರುವ ಧ್ಯಾನಸಕ್ತ ಆದಿ ಯೋಗಿ ಶಿವನ ಮೂರ್ತಿಗೆ ಅರ್ಚನೆ, ಕ್ಷೀರಾಭಿಷೇಕ, ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಾದ್ಯಂತ ಸಡಗರ ಸಂಭ್ರಮದಿಂದ ಮಹಾಶಿವರಾತ್ರಿಯನ್ನು ಭಕ್ತಿಯಿಂದ ಆಚರಣೆ ಮಾಡಲಾಗುತ್ತಿದೆ. ಯೋಗ, ಪ್ರಾಣಾಯಾಮ, ಧ್ಯಾನದ ಜೊತೆಗೆ ಶಿವನ ಪೂಜೆಯು ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ. ಇಂತಹ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಮ್ಮಲ್ಲಿ ಜೀವನೋತ್ಸಾಹ ಹೆಚ್ಚಿಸುತ್ತವೆ ಎಂದು ತಿಳಿಸಿದರು.
ಟ್ರಸ್ಟಿ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಅವರು ಯೋಗ ಕೇಂದ್ರದ ಎಲ್ಲಾ ಶಿಬಿರಾರ್ಥಿಗಳಿಗೆ ಹಾಗೂ ಯೋಗಪಟುಗಳಿಗೆ ಶಿವರಾತ್ರಿ ಹಬ್ಬದ ಶುಭಾಶಯಗಳು ತಿಳಿಸಿ ಶಿವಪೂಜೆಯಲ್ಲಿ ದಂಪತಿ ಸಮೇತ ಪಾಲ್ಗೊಂಡಿದ್ದರು. ಪ್ರೊ. ಎ.ಎಸ್.ಚಂದ್ರಶೇಖರ್ ಹಾಗೂ ಭಾರತಿ ಚಂದ್ರಶೇಖರ್ ಶಿವಪೂಜೆಯಲ್ಲಿ ಪಾಲ್ಗೊಂಡಿದ್ದರು.
ಶಿವನಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಹೂವಿನ ಅಲಂಕಾರಗಳನ್ನ ಮಾಡಿ ಭಕ್ತಿಯಿಂದ ಪೂಜಿಸಲಾಯಿತು. ನಂತರ ಎಲ್ಲರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು.
ಯೋಗ ಶಿಕ್ಷಣಾರ್ಥಿಗಳೇ ತಯಾರಿಸಿದ ಸುಂದರವಾದ ಎಕ್ಕದ ಹೂವಿನ ಮಾಲೆ ಬಹುಆಕರ್ಷಿತವಾಗಿತ್ತು. ಅಭಿಷೇಕಗೊಂಡು ಭಸ್ಮ, ಗಂಧ, ಅರಿಶಿಣ, ಕುಂಕುಮ, ಬಿಲ್ವಪತ್ರೆ ಪುಷ್ಪಗಳಿಂದ ಅಲಂಕೃತವಾಗಿದ್ದ ಧ್ಯಾನಸ್ಥ ಶಿವನ ಮೂರ್ತಿ ದರ್ಶನ ಆಕರ್ಷಕವಾಗಿತ್ತು. ಬ್ರಾಹ್ಮಿ ಕಾಲದಲ್ಲೇ ಯೋಗ ಶಿಕ್ಷಣಾರ್ಥಿಗಳಿಂದ ಸಾಮೂಹಿಕ ಭಜನೆ ಭಕ್ತಿಗೀತೆಗಳಿಂದ ಮಹಾಶಿವರಾತ್ರಿಯಂದು ಭಕ್ತಿ ಸಮರ್ಪಣೆ ಆರಂಭವಾಗಿತ್ತು.
Shivaganga Yoga Center ಕಾರ್ಯಕ್ರಮದಲ್ಲಿ ಮಂತ್ರ ಸಹಿತ ಸಹಸ್ರ ಬಿಲ್ವಾರ್ಚನೆಯನ್ನು ನೆರೆದಿದ್ದಂತಹ ಭಕ್ತವೃಂದ, ಯೋಗ ಶಿಕ್ಷಣಾರ್ಥಿಗಳು, ವಿಶ್ವಸ್ಥ ಮಂಡಳಿ ಮತ್ತು ಪೋಷಕ ಸಮಿತಿ ಸದಸ್ಯರು ಮತ್ತು ಆಗಮಿಸಿದ ಎಲ್ಲಾ ಸಾರ್ವಜನಿಕರು ವೈಯಕ್ತಿಕವಾಗಿ ಆದಿ ಯೋಗಿ ಶಿವನ ಮೂರ್ತಿಗೆ ಪುಷ್ಪ ಬಿಲ್ವಾರ್ಚನೆಯೊಂದಿಗೆ ಭಕ್ತಿ ಸಮರ್ಪಿಸಿಲು ಅವಕಾಶ ನೀಡಲಾಯಿತು.
ಯೋಗಾಚಾರ್ಯ ಡಾ. ಸಿ.ವಿ. ರುದ್ರರಾಧ್ಯ, ಯೋಗ ಕೇಂದ್ರದ ಕಾರ್ಯದರ್ಶಿ ಎಚ್.ಎಮ್. ಚಂದ್ರಶೇಖರಯ್ಯ, ಯೋಗ ಶಿಕ್ಷಕರಾದ ಕಾಟನ್ ಜಗದೀಶ್, ನೀಲಕಂಠ ರಾವ್, ಜಿಎಸ್ ಓಂಕಾರ್ ಮೂರ್ತಿ, ಪರಿಸರ ನಾಗರಾಜ್. ರೋಟರಿ ಜಿ.ವಿಜಯಕುಮಾರ್. ವಿಜಯ ಬಾಯರ್, ನಾಗರತ್ನಮ್ಮ ಹಾಗೂ ಯೋಗಪಟುಗಳು ಇದ್ದರು.
Industrial and Infrastructure Development Corporation ಆರೇಳು ತಿಂಗಳಿನಲ್ಲಿ ಶಿವಮೊಗ್ಗಕ್ಕೆ ರಾತ್ರಿ ವಿಮಾನ ಸಂಚಾರಕ್ಕೆ ಕ್ರಮ- ನಂಜಯ್ಯನ ಮಠ್
Industrial and Infrastructure Development Corporation ಮುಂದಿನ ಆರೇಳು ತಿಂಗಳ ಅವಧಿಯೊಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ವಿಮಾನಗಳು ಏರಿಳಿಯಲು ಅನುಕೂಲವಾಗುವಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಫೆಬ್ರವರಿ ಮಾಸಾಂತ್ಯದೊಳಗಾಗಿ ಸುಮಾರು 6 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಯ್ಯನಮಠ್ ಅವರು ಹೇಳಿದರು.
ಅವರು ಶಿವಮೊಗ್ಗ ನಗರದ ಹೊರವಲಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಈ ಹಿಂದೆ ನವೀಕರಣಗೊಳ್ಳದೆ ಬಾಕಿ ಉಳಿದಿದ್ದ ವಿಮಾನ ನಿಲ್ದಾಣದ ಪರವಾನಗಿ ನವೀಕರಣದ ಸಮಸ್ಯೆಯನ್ನು ಇತ್ಯರ್ಥಗೊಳಿಸಿ, ಆಡಳಿತಾತ್ಮಕ ಅಡತಡೆಗಳನ್ನು ನಿವಾರಿಸಿಕೊಳ್ಳಲಾಗಿದೆ. ಅಲ್ಲದೇ ಬಾಕಿ ಇದ್ದ 22.00ಲಕ್ಷ ರೂ. ದಂಡ ಪಾವತಿಸಲಾಗಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ಪರವಾನಗಿ ನವೀಕರಿಸುವ ಅಗತ್ಯವಿರುವುದಿಲ್ಲ ಎಂದವರು ತಿಳಿಸಿದರು.
ಹವಾಮಾನ ವೈಪರೀತ್ಯ ಹಾಗೂ ಮತ್ತಿತರ ಹಲವು ಕಾರಣಗಳಿಗಾಗಿ ಇಳಿಯಬೇಕಾದ ವಿಮಾನಗಳು ಇಳಿಯದೇ ಹಿಂದಿರುಗಿ ಹೋಗುವುದನ್ನು ನಿಯಂತ್ರಿಸಲು, ರಾತ್ರಿ ಸಂಚಾರಕ್ಕೆ ಮತ್ತು ಸರಕು ಸಾಗಾಣಿಕೆಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅಗತ್ಯವಾಗಿರುವ ದಿಕ್ಸೂಚಿ ಯಾಂತ್ರಿಕ ವ್ಯವಸ್ಥೆ (DBOR)ಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೇ ವಿದ್ಯುತ್ ಸಂಪರ್ಕ ವ್ಯವಸ್ಥೆಯೂ ಪೂರ್ಣಗೊಂಡಿದೆ ಎಂದರು.
ನೈಟ್‌ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಲು ನಿಯಮಾನುಸಾರ ಸದರಿ ಪ್ರದೇಶದಲ್ಲಿನ ಮಣ್ಣಿನ ಗುಣಮಟ್ಟದ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಇನ್ನೊಂದು ವಾರದಲ್ಲಿ ವರದಿ ಬರುವ ನಿರೀಕ್ಷೆ ಹೊಂದಲಾಗಿದೆ ಎಂದ ಅವರು, ಈ ಎಲ್ಲಾ ಕಾಮಗಾರಿಗಳ ಸಕಾಲಿಕ ಪರಿಶೀಲನೆಗಾಗಿ ತಾವು ಖುದ್ದಾಗಿ ಆಗಮಿಸಿ, ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುವುದಾಗಿ ಅವರು ತಿಳಿಸಿದರು.
ಉಡಾನ್ ಯೋಜನೆ ಮುಂದುವರಿಸಲು ಕೇಂದ್ರಕ್ಕೆ ಮನವಿ : ಶಿವಮೊಗ್ಗದಿಂದ ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಗೋವಾ ಸೇರಿದಂತೆ ಹಲವು ಪ್ರದೇಶಗಳಿಗೆ ನಿರಂತರವಾಗಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಪುರಸ್ಕೃತ ಹಾಗೂ ವಿಮಾನ ಪ್ರಯಾಣಕ್ಕೆ ರಿಯಾಯಿತಿ ಒದಗಿಸುವ ‘ಉಡಾನ್’ ಯೋಜನೆಯ ಅವಧಿ ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ. ಆದ್ದರಿಂದ ಪ್ರಯಾಣಿಕರಿಗೆ ಹೆಚ್ಚಿನ ಪ್ರಯಾಣದರ ಪಾವತಿಸುವ ಹೊರೆ ಬೀಳದಂತೆ ನೋಡಿಕೊಳ್ಳಲು ಸ್ಥಳೀಯ ಸಂಸದರು ಹಾಗೂ ಜನಪ್ರತಿನಿಧಿಗಳ ಸಹಕಾರವನ್ನು ಪಡೆದು, ಸದರಿ ಯೋಜನೆಯನ್ನು ಮುಂದುವರೆಸಲು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದವರು ನುಡಿದರು.
Industrial and Infrastructure Development Corporation ವಿಮಾನ ನಿಲ್ದಾಣದಲ್ಲಿ ಈಗಾಗಲೇ ಕಾಯ್ದಿರಿಸಲಾಗಿರುವ 17ಎಕರೆ ನಿವೇಶನದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ಮತ್ತು ಪಂಚತಾರಾ ಹೋಟೆಲ್‌ನ್ನು ನಿರ್ಮಿಸುವ ಕುರಿತು ಈಗಾಗಲೇ ನಿಗಮದ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಶೀಘ್ರದಲ್ಲಿ ಈ ವಿಷಯದ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಸದರಿ ವಿಮಾನ ನಿಲ್ಧಾಣದಲ್ಲಿ ಪೈಲಟ್ ತರಬೇತಿ ಕೇಂದ್ರ ಆರಂಭಿಸಲು ಈ ಹಿಂದೆ ಖಾಸಗಿ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಯಾವುದೇ ಕಂಪನಿಗಳು ಆಸಕ್ತ ವಹಿಸಿರುವುದು ಕಂಡುಬಂದಿರುವುದಿಲ್ಲ. ಆದಾಗ್ಯೂ ಪೈಲಟ್ ತರಬೇತಿ ಕೇಂದ್ರ ಆರಂಭಿಸಲು ಇನ್ನೊಮ್ಮೆ ಆಸಕ್ತ ತರಬೇತಿ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದರು.
ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಭೂಮಿ ನೀಡಿ ಸಹಕರಿಸಿದ ರೈತರ 370 ಕುಟುಂಬಗಳಿಗೆ ಅಂದಿನ ಅಧಿಕಾರಿ-ಜನಪ್ರತಿನಿಧಿಗಳು ನೀಡಿದ ಭರವಸೆಯಂತೆ ತಲಾ ಒಂದು ನಿವೇಶನ ನೀಡಿರುವುದಿಲ್ಲ. ಈ ಬಗ್ಗೆ ಸಂತ್ರಸ್ಥರು ಅನೇಕ ಬಾರಿ ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಿದ್ದಾರೆ. ಅಲ್ಲದೇ ನ್ಯಾಯಾಲಯವೂ ಕೂಡ ಸಂತ್ರಸ್ಥರ ಪರವಾಗಿ ತೀರ್ಪು ನೀಡಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆಯ ಇತ್ಯರ್ಥಗೊಳಿಸಲು ಖುದ್ದಾಗಿ ಮಾನ್ಯ ಮುಖ್ಯಮಂತ್ರಿಗಳ ಗಮನಸೆಳೆದು ಅಗತ್ಯವಿರುವು ಅನುದಾನ ಬಿಡುಗಡೆಗೊಳಿಸಲು ಒತ್ತಾಯಿಸಲಾಗುವುದು ಎಂದರು.
ಸಭೆಯಲ್ಲಿ ವಿಮಾನ ನಿಲ್ದಾಣದ ಮುಖ್ಯಸ್ಥ ಕ|| ಶಮಂತ್, ವಿದ್ಯಾಧರ್ ಸಾಲಿಮಠ್, ಮುಖಂಡ ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.
ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಬಗ್ಗೆ ವಿಚಾರಗೋಷ್ಠಿ ನಡೆಸಲು ಸಂಘಸಂಸ್ಥೆಗಳಿಂದ ಅರ್ಜಿ ಆಹ್ವಾನ
2025-26 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಅಧಿನಿಯಮ ಮತ್ತು ಪಿಸಿಆರ್ ಕಾಯ್ದೆಯ ಬಗ್ಗೆ ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ಜಾಗೃತಿ/ಅರಿವು ಮೂಡಿಸಲು ವಿಚಾರಗೋಷ್ಟಿ ಮತ್ತು ಕಾರ್ಯಾಗಾರಗಳನ್ನು ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಆಯೋಜಿಸುವ ಸಲುವಾಗಿ ಸಂಘ/ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯೊಂದಿಗೆ ಸಂಘ/ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ, ನವೀಕರಣ ಪ್ರಮಾಣ ಪತ್ರ, ಕಳೆದ 3 ವರ್ಷದ ಆಡಿಟ್ ವರದಿ, ಸಂಘ ಸಂಸ್ಥೆಯು ಪರಿಶಿಷ್ಟ ಜಾತಿ/ವರ್ಗದ ಅಭಿವೃದ್ದಿಗಾಗಿ 5 ವರ್ಷ ಸೇವೆ ಸಲ್ಲಿಸಿರುವ ಬಗ್ಗೆ ದೃಢೀಕೃತ ದಾಖಲೆ, ಈ ಹಿಂದೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ದಾಖಲೆಗಳು, ಛಾಯಾಚಿತ್ರ, ಪತ್ರಿಕಾ ವರದಿ, ಸಂಸ್ಥೆಯು ದೌರ್ಜನ್ಯ ಪ್ರತಿಬಂಧಕ ಅಧಿನಿಯಮ-1989 ರ ಅನುಷ್ಟಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿರುವ ಬಗ್ಗೆ ದಾಖಲೆಗಳು, ಪ್ರಕಟಣೆಗಳು, ಕರಪತ್ರ, ಭಿತ್ತಿ ಪತ್ರ ಇತ್ಯಾದಿ ಲಗತ್ತಿಸಬೇಕು.
ಆಸಕ್ತ ಸ್ವಯಂ ಸೇವಾ ಸಂಘ/ಸAಸ್ಥೆಯವರು ಫೆ.19 ರೊಳಗೆ ಪೂರಕ ದಾಖಲೆಳೊಂದಿಗೆ ಪ್ರಸ್ತಾವನೆಯನ್ನು ಸಮಾಜ ಕಲ್ಯಾಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ಪೃಥ್ವಿ ಮ್ಯಾನ್ಶನ್, 100 ಅಡಿ ರಸ್ತೆ, ವಿನೋಬ ನಗರ ಶಿವಮೊಗ್ಗ ಇಲ್ಲಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲೇಶಪ್ಪ ತಿಳಿಸಿದ್ದಾರೆ.
Shivaganga Yoga Center ಶ್ರೀಆದಿ ಚುಂಚನಗಿರಿ ಶಾಖಾಮಠದಲ್ಲಿ ವೈಭವದ ಶಿವರಾತ್ರಿ ಆಚರಣೆ
Shivaganga Yoga Center ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶಿವಮೊಗ್ಗ ಶಾಖೆಯ ವತಿಯಿಂದ, ಗುರುಪುರದಲ್ಲಿರುವ ಪುರಾತನ ಕಾಲದ ಶ್ರೀವೀರ ಸೋಮೇಶ್ವರ ಸನ್ನಿಧಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖೆಯ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಹಾಗೂ ಬಿಲ್ವಪತ್ರೆ, ಪುಷ್ಪಗಳಿಂದ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಪೂಜ್ಯರಿಂದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗದ ಮಹಿಳಾ ಭಜನಾ ಮಂಡಳಿಗಳಾದ ಶ್ರೀ ಪಾಂಡುರಂಗ ಭಜನಾ ಮಂಡಳಿ, ಶ್ರೀ ಆರ್ಯವೈಶ್ಯ ಭಜನಾ ಮಂಡಳಿ,
ಶ್ರೀ ಮುದ್ದು ಗಣಪ ಭಜನಾ ಮಂಡಳಿ, ಹಾಗೂ ಶಾಲಾ ಮಕ್ಕಳಿಂದ ಭಜನೆ, ಶಿವ ಸಂಕೀರ್ತನೆಗಳೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್., ಶಿಕ್ಷಕರು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು.
Karnataka Madiwala Machideva Development Corporation ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ ಆಹಾರವಾಹಿನಿ ಸೌಲಭ್ಯ
Karnataka Madiwala Machideva Development Corporation ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ಜನರಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಲ್ಲಿ ನಿಗಮದಿಂದ ವಾಹನ ಖರೀದಿಗೆ ರೂ.3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂಧು ಪೋರ್ಟೆಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯು ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಅಲೆಮಾರಿ/ಅರೆಅಲೆಮಾರಿ ಸಮುದಾಯ,, ಒಕ್ಕಲಿಗೆ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ ಮತ್ತು ಇದರ ಉಪಜಾತಿ ಸಮುದಾಯಗಳನ್ನು ಹೊರತುಪಡಿಸಿ ಮಡಿವಾಳ ಮಾಚಿದೇವ ಸಮುದಾಯಕ್ಕೆ ಮಾತ್ರ ಸೇರಿದವರಾಗಿರಬೇಕು.
ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ್ ಕಾರ್ಡನಲ್ಲಿರುವಂತೆ ಅರ್ಜಿದಾರರ ಹೆಸರು ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಕ್ ಪಾಸ್ ಪುಸ್ತಕದಲ್ಲಿಯೂ ಇರುವಂತೆ ಹೊಂದಾಣಿಕೆಯಾಗಬೇಕು.
ಕುಟುಂಬದ ವಾರ್ಷಿಕ ವರಮಾನ 3.00 ಲಕ್ಷಗಳ ಒಳಗಿರಬೇಕು ಮತ್ತು ವಯಸ್ಸು 21 ರಿಂದ 45 ವರ್ಷ ಒಳಗಿನವರಾಗಿಬೇಕು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಯಾವುದಾದರು ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು.
ಆಸಕ್ತರು ಸೇವಾಸಿಂಧು ಪೋರ್ಟಲ್ http://sevasindhukarnataka.gov.in ನ ಗ್ರಾಮ್ ಒನ್, ಬೆಂಗಳೂರು ಒನ್, ಕರ್ನಾಟಕ ಒನ್‌ಗಳ ಮೂಲಕ ಆನ್‌ಲೈನ್ ಮೂಲಕ ಮಾರ್ಚ್ 6 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
Karnataka Madiwala Machideva Development Corporation ಹೆಚ್ಚಿನ ಮಾಹಿತಿಗೆ ನಿಗಮದ ಜಾಲತಾಣ https://kmmdc.karnataka.gov.in ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಾಲರಾಜ್ ಅರಸ್ ರಸ್ಥೆ, ಕೆ.ಇ.ಬಿ. ಸರ್ಕಲ್ ಹತ್ತಿರ,ಶಿವಮೊಗ್ಗ. ದೂ,ಸಂ: 08182-229634 ನ್ನು ಸಂಪರ್ಕಿಸಬಹುದಾಗಿದೆ.
ಲೋಕಾಯುಕ್ತ ಬಲೆಗೆ ಬಿದ್ದ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಗ್ರಾಮ ಸಹಾಯಕ
ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಿಶೇಷ ಭೂ ಸ್ವಾಧೀನಾಧಿಕಾರಿ ಮತ್ತು ಗ್ರಾಮ ಸಹಾಯಕರನ್ನು ಅವರನ್ನು ವಶಕ್ಕೆ ಪಡೆದಿದ್ದಾರೆ.
40 ಸಾವಿರ ರೂ. ಲಂಚ ಪಡೆಯುವಾಗ ಗ್ರಾಮ ಸಹಾಯಕ ರಾಜೇಶ್ ಹಾಗೂ ವಿಶೇಷ ಭೂ ಸ್ವಾಧೀನಾಧಿಕಾರಿ ಸಿದ್ಧಲಿಂಗರೆಡ್ಡಿ ಅವರನ್ನ ವಶಕ್ಕೆ ಪಡೆದಿದ್ದಾರೆ.
ಸಿದ್ದಲಿಂಗರೆಡ್ಡಿ ಅವರು ಈ ಹಿಂದೆ ಶಿವಮೊಗ್ಗದ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಕೆಲ ತಿಂಗಳ ಹಿಂದೆಯಷ್ಟೇ ವಿಶೇಷ ಭೂ ಸ್ವಾಧೀನಾಧಿಕಾರಿ ವರ್ಗಾವಣೆಯಾಗಿದ್ದ ಸಿದ್ದಲಿಂಗ ರೆಡ್ಡಿ ಅವರು
ತಮ್ಮ ಸಹಾಯಕನ ಮೂಲಕ
ಕಾರಿನ ಮಾಸಿಕ ಬಾಡಿಗೆ ಹಣ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಕಾರು ಚಾಲಕ ಕೇಶವಮೂರ್ತಿ ದೂರಿನನ್ವಯ ಲೋಕಾಯುಕ್ತ ಟೀಮ್ ದಾಳಿ ನಡೆಸಲಾಗಿತ್ತು.
ಇಬ್ಬರನ್ನೂ ಲೋಕಾಯುಕ್ತ ಕಚೇರಿಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಶಿವರಾತ್ರಿ ವಿಶೇಷ ಸಿನಿಮಾ, ಪ್ರಶಾಂತ್ ಸಾಗರ ನಿರ್ದೇಶನದ “ಕೌತುಕ” ಪ್ರದರ್ಶನ- ವಿನಯ್ , ಶಿವಮೊಗ್ಗ
ಮಹಾಶಿವರಾತ್ರಿಯ ಪೂಜೆ , ಭಜನೆ, ಉಪವಾಸ, ಅರ್ಚನೆಯ ಪರಂಪರಾಗತ ಆಚರಣೆಗಳು ಒಂದೆಡೆಯಾದರೇ….. ಪರಿಸರವೇ ಪರಮೇಶ್ವರನೆಂಬ ಜಾಗೃತಿಯ ಪರ್ವ ಒಂದೆಡೆ!!! ಶಿವಮೊಗ್ಗದಲ್ಲಿ ತಮ್ಮ ಕನಸಿನ ಈಶ್ವರವನದಲ್ಲಿ ನವ್ಯಶ್ರೀ ನಾಗೇಶ್ ಅವರ ಪರಿಸರ ಶಿವರಾತ್ರಿಯ ಸಂಭ್ರಮ ಮುಗಿಲು ಮುಟ್ಟಿದೆ .
ಪ್ರಕೃತಿಯಲ್ಲಿ ಪರಶಿವನನ್ನು ಕಾಣುವ ಒಳನೋಟಕ್ಕೊಂದು ಸಂಸ್ಕಾರ ಬೇಕು. ನಮ್ಮ ಸಾಗರದ ಪ್ರಶಾಂತ್ ಇಂಥಹ ಸೂಕ್ಷ್ಮಮತಿಯುಳ್ಳ ಕಿರುಚಿತ್ರ ನಿರ್ದೇಶಕ . ಇವರು ತಪ್ಪಸ್ಸಿನಂತೆ ತಾಳ್ಮೆಯಿಂದ ನಿರ್ಮಿಸಿದ ಕಿರುಚಿತ್ರ “ಕೌತುಕ” ಇಂದು ಸಂಜೆ 6.30 ಗೆ ಅಬ್ಬಲಗೆರೆ ಬಳಿ ಇರುವ ಈಶ್ವರವನದ ಹಸಿರು ಸಮುಚ್ಛಯದಲ್ಲಿ ಪ್ರದರ್ಶನವಾಗಲಿದೆ .
Navyashree Eeshwaravan Charitable Trust ಒಬ್ಬರ ಪ್ರಾಣವುಳಿಸಿದ ಪುಣ್ಯ ರಕ್ತದಾನದಿಂದ ಬರುತ್ತದೆ- ನವ್ಯಶ್ರೀ ನಾಗೇಶ್
ನೊಂದವರು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಪರಶಿವನ ಅನುಗ್ರಹ ಪಡೆಯಬಹುದು. ಮತ್ತೊಬ್ಬರ ಜೀವ ಉಳಿಸುವಂತಹ ರಕ್ತದಾನ ಮಹಾದಾನಗಳಲ್ಲೊಂದು. ಇಂತಹ ದಾನದ ಮೂಲಕ ಶಿವನ ಅನುಗ್ರಹ ಲಭಿಸುತ್ತದೆ. ಶಿವರಾತ್ರಿಯ ಉಪವಾಸ, ಜಾಗರಣೆಗಿಂತ ಹೆಚ್ಚು ಪುಣ್ಯ ಪ್ರಾಪ್ತವಾಗುತ್ತದೆ ಎಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ನವ್ಯಶ್ರೀ ನಾಗೇಶ್ ಅವರು ಹೇಳಿದರು.
ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ವತಿಯಿಂದ ತಾಲೂಕಿನ ಅಬ್ಬಲಗೆರೆಯ ಈಶ್ವರವನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ. 15ರಂದು ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಶಿವರಾತ್ರಿಯಂದು ಓಂ ನಮಃ ಶಿವಾಯ ಎಂದು ಜಪ-ತಪ, ಪೂಜೆ, ಭಜನೆ, ಆರಾಧನೆ, ಉಪವಾಸ, ಜಾಗರಣೆ ಮಾಡುವ ಮೂಲಕ ಶಿವನ ಅನುಗ್ರಹಕ್ಕೆ ಪ್ರಾಪ್ತರಾಗಲು, ಪುಣ್ಯ ಸಂಪಾದಿಸಲು ಪೂಜಾ ಕೈಂಕರ್ಯವನ್ನು ಕೈಗೊಳ್ಳಲಾಗುತ್ತದೆ. ಪರಿಸರವೇ ಪರಮೇಶ್ವರ ಎಂಬ ಜಾಗೃತಿಯ ಪರ್ವದೊಂದಿಗೆ ಶಿವರಾತ್ರಿ ಪ್ರಯುಕ್ತ ರಕ್ತದಾನ ಮಾಡಬೇಕೆಂದು ಕರೆ ನೀಡಿದರು.
ಸಕಾಲದಲ್ಲಿ ರಕ್ತ ಸಿಗದೆ ಸಾಕಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂದು ರಕ್ತದ ಕೊರತೆ ಸಾಕಷ್ಟು ಎದ್ದು ಕಾಣುತ್ತಿದೆ. ಯುವಕರು ರಕ್ತದಾನ ಮಾಡಲು ಜಾಗೃತಿಯ ಕೊರತೆ ಇದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಚೈತನ್ಯ ಮೂಡುತ್ತದೆ ಹಾಗೂ ಸದಾಕಾಲ ಆರೋಗ್ಯವಂತರಾಗಿ ಇರುತ್ತಾರೆ ಎಂದು ತಿಳಿಸಿದರು.
ಅಪಘಾತ, ಆಪರೇಷನ್, ಹೆರಿಗೆ, ರಕ್ತಸ್ರಾವ ಮತ್ತಿತರೆ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ರಕ್ತದಾನಿಗಳು ದೊರೆಯದಿದ್ದಲ್ಲಿ ಪ್ರಾಣಕ್ಕೆ ಕುತ್ತು ಬರುವ ಅಥವಾ ಪ್ರಾಣವೇ ಹೊರಟು ಹೋಗುವಂತಹ ಸಂದರ್ಭಗಳೂ ಇರುತ್ತವೆ. ಇದನ್ನು ತಪ್ಪಿಸಲು ಅಗತ್ಯವಾದ ರಕ್ತ ಸಂಗ್ರಹ ಅತಿಮುಖ್ಯ. ಅರ್ಹ ರಕ್ತದಾನಿಗಳು ರಕ್ತದಾನ ಮಾಡುವುದರ ಮುಖಾಂತರ ಸದೃಢವಾದ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಕೈಜೋಡಿಸಬೇಕೆಂದರು.
ಕೇವಲ ವಿಭೂತಿ ಧರಿಸಿ ಓಂ ನಮಃ ಶಿವಾಯ ಎನ್ನುವುದಕ್ಕಿಂತ ಪ್ರಕೃತಿಯ ಮಡಿಲಲ್ಲಿ ಪ್ರತಿಯೊಂದು ಕಣದಲ್ಲೂ ಇರುವ ಶಿವತತ್ವವನ್ನು ಅನುಭವಿಸುವುದೇ ನಿಜವಾದ ಪೂಜೆ. ಈಶ್ವರ ಎಂದರೆ ಎಲ್ಲೋ ದೂರದ ಲೋಕದಲ್ಲಿರುವ ಅಸ್ತಿತ್ವವಲ್ಲ, ಜಗತ್ತಿನ ಪ್ರತಿಯೊಂದು ಕಣದಲ್ಲೂ ವ್ಯಾಪಿಸಿರುವ ಚೈತನ್ಯ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್ ಅವರು ಮಾತನಾಡಿ ಶಿವಮೊಗ್ಗದಲ್ಲಿ ಸಾಕಷ್ಟು ರಕ್ತದಾನಿಗಳಿದ್ದರೂ ಸಹ ರಕ್ತದ ಕೊರತೆ ಉಂಟಾಗುತ್ತದೆ. ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ರಕ್ತದಾನ ಮಾಡುವುದರಿಂದ ದೀರ್ಘಾಯುಷ್ಯ ಉಳ್ಳವರಾಗುತ್ತಾರೆ ಹಾಗೂ ನಮ್ಮ ದೇಹದಲ್ಲಿ ಗೊತ್ತಿಲ್ಲದೆ ಇರುವಂತಹ ಯಾವುದಾದರೂ ಕಾಯಿಲೆಗಳಿದ್ದರೆ ಈ ರಕ್ತದಾನದಿಂದ ತಿಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವುದರ ಮುಖಾಂತರ ರಕ್ತದ ಕೊರತೆಯನ್ನು ನೀಗಿಸೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 120 ಬಾರಿ ರಕ್ತದಾನ ಮಾಡಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಧರಣೇಂದ್ರ ದಿನಕರ್, ಈ ಶಿವರಾತ್ರಿಯ ಪವಿತ್ರ ದಿನದಂದು ರಕ್ತದಾನ ಮಾಡಿದರೆ ತೃಪ್ತಿ ಸಿಗುವುದರ ಜೊತೆಗೆ ನಾಲ್ಕು ಜನರ ಪ್ರಾಣ ಉಳಿಸಿದ ಫಲ ನಮಗೆ ದೊರೆಯುತ್ತದೆ. ನವ್ಯಶ್ರೀ ನಾಗೇಶ್ ಅವರ ಸೇವೆ ಅಮೋಘ ಎಂದು ನೋಡಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಚಿ ಆರ್. ಮನೋಹರ್, ಆರತಿ ತಿವಾರಿ, ಸಂತೋಷ್ ಎಲಿಗಾರ್, ನಾಗರಾಜ್ ಶೆಟ್ಟರ್, ಪಿ. ಪ್ರದೀಪ್, ಎಸ್. ಸುಬ್ರಹ್ಮಣ್ಯ, ವಿಜಯಕುಮಾರ್, ಲಕ್ಷಿö್ಮ, ಡಾ. ದಿನಕರ್, ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ಪದಾಧಿಕಾರಿಗಳಾದ ಶಶಿಕಲಾ ನಾಗೇಶ್, ಶರತ್, ಶರಣ್ಯ, ಹಾಗೂ ರಕ್ತದಾನಿಗಳು ಉಪಸ್ಥಿತರಿದ್ದರು.
