District Co-operative Society ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಉತ್ಪಾದನಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯು ಅ. 18 ರಂದು ನಡೆಯಲಿದ್ದು, ಮತದಾರರ ಕರಡು ಪಟ್ಟಿಯನ್ನು ಕಚೇರಿಯ ಪ್ರಚಾರ ಫಲಕದಲ್ಲಿ ಪ್ರಕಟಿಸಲಾಗಿದೆ. ಈ ಕುರಿತು ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಸೆ. 25 ರೊಳಗಾಗಿ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ದೂರನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ.
Indian Railway Catering and Tourism Corporation ಭಾರತ್ ಗೌರವ್ ಪ್ರವಾಸಿ ರೈಲಿನಲ್ಲಿ ಕಾಶಿ ದರ್ಶನ & ದಕ್ಷಿಣ ಯಾತ್ರೆ ಐಆರ್ ಸಿಟಿ ಸಿ ಯಿಂದ ಪ್ರಕಟಣೆ
Indian Railway Catering and Tourism Corporation ಕರ್ನಾಟಕದ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ (HRICE) ಸಹಯೋಗದೊಂದಿಗೆ, ಭಾರತ್ ಗೌರವ್ ಪ್ರವಾಸಿ ರೈಲು ಯೋಜನೆಯಡಿ ಕರ್ನಾಟಕದ ನಿವಾಸಿಗಳಿಗಾಗಿಯೇ ಎರಡು ವಿಶೇಷ ಯಾತ್ರಾ ಪ್ರವಾಸಗಳನ್ನು ಘೋಷಿಸಿದೆ.
ಮೊದಲನೆಯದು ‘ಕಾಶಿ ದರ್ಶನ’ ಯಾತ್ರೆ. ಇದು 9 ದಿನಗಳ ಪ್ರಯಾಣವಾಗಿದ್ದು, ಆಗಸ್ಟ್ 31 ರಿಂದ ಸೆಪ್ಟೆಂಬರ್ 8, 2025 ರವರೆಗೆ ನಡೆಯಲಿದೆ. ಈ ಯಾತ್ರೆಯು ವಾರಣಾಸಿ (ಕಾಶಿ ವಿಶ್ವನಾಥ ದೇವಸ್ಥಾನ, ತುಳಸಿ ಮಾನಸ ದೇವಸ್ಥಾನ ಮತ್ತು ಸಂಕಟ ಮೋಚನ ಹನುಮಾನ್ ದೇವಸ್ಥಾನ), ಅಯೋಧ್ಯೆ (ರಾಮ ಜನ್ಮ ಭೂಮಿ ದೇವಸ್ಥಾನ ಮತ್ತು ಹನುಮಾನ್ ಗಡ್), ಗಯಾ ಮತ್ತು ಬೋಧಗಯಾ (ವಿಷ್ಣುಪಾದ ದೇವಾಲಯ ಮತ್ತು ಮಹಾಬೋಧಿ ದೇವಾಲಯ) ಮತ್ತು ಪ್ರಯಾಗರಾಜ್ (ತ್ರಿವೇಣಿ ಸಂಗಮ ಮತ್ತು ಹನುಮಾನ್ ದೇವಸ್ಥಾನ) ಸೇರಿದಂತೆ ಪ್ರಮುಖ ಪುಣ್ಯಕ್ಷೇತ್ರಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್’ನ ಒಟ್ಟು ವೆಚ್ಚ ಪ್ರತಿ ವ್ಯಕ್ತಿಗೆ ₹22,500/-. ಆದರೆ, ಕರ್ನಾಟಕದಲ್ಲಿ ವಾಸಿಸುವ ಯಾತ್ರಿಕರಿಗೆ ಕರ್ನಾಟಕ ಸರ್ಕಾರದಿಂದ ₹7,500/- ವಿಶೇಷ ಸಬ್ಸಿಡಿ ದೊರೆಯಲಿದ್ದು, ಪರಿಣಾಮಕಾರಿ ವೆಚ್ಚ ₹15,000/- ಕ್ಕೆ ಇಳಿಯಲಿದೆ. ಈ ಪ್ರವಾಸಕ್ಕಾಗಿ ಎಸ್.ಎಂ.ವಿ.ಟಿ ಬೆಂಗಳೂರು/ಯಶವಂತಪುರ, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿಗಳಲ್ಲಿ ಹತ್ತುವ ಅವಕಾಶ ಕಲ್ಪಿಸಲಾಗಿದೆ.
ಎರಡನೇ ಪ್ರವಾಸ ‘ದಕ್ಷಿಣ ಯಾತ್ರೆ’. ಇದು 6 ದಿನಗಳ ಪ್ರಯಾಣವಾಗಿದ್ದು, ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 16, 2025 ರವರೆಗೆ ನಡೆಯಲಿದೆ. ಈ ಯಾತ್ರೆಯು ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಾದ ಕನ್ಯಾಕುಮಾರಿ (ಭಗವತಿ ದೇವಾಲಯ ಮತ್ತು ವಿವೇಕಾನಂದ ರಾಕ್ ಮೆಮೋರಿಯಲ್), ತಿರುವನಂತಪುರಂ (ಪದ್ಮನಾಭಸ್ವಾಮಿ ದೇವಾಲಯ), ರಾಮೇಶ್ವರಂ (ರಾಮನಾಥಸ್ವಾಮಿ ದೇವಾಲಯ) ಮತ್ತು ಮಧುರೈ (ಮೀನಾಕ್ಷಿ ದೇವಾಲಯ) ಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್’ನ ವೆಚ್ಚ ಪ್ರತಿ ವ್ಯಕ್ತಿಗೆ ₹15,000/-. ಕರ್ನಾಟಕ ರಾಜ್ಯದ ನಿವಾಸಿಗಳಿಗೆ ಕರ್ನಾಟಕ ಸರ್ಕಾರದಿಂದ ₹5,000/- ವಿಶೇಷ ಸಬ್ಸಿಡಿ ಸಿಗಲಿದ್ದು, ಅಂತಿಮ ಬೆಲೆ ₹10,000/- ಆಗಲಿದೆ. ಈ ಪ್ರವಾಸಕ್ಕೆ ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ಮತ್ತು ಎಸ್.ಎಂ.ವಿ.ಟಿ ಬೆಂಗಳೂರುಗಳಿಂದ ಹತ್ತುವ ಅವಕಾಶವಿದೆ.
Indian Railway Catering and Tourism Corporation ಎರಡೂ ಯಾತ್ರೆಗಳನ್ನು ಭಾರತ್ ಗೌರವ್ ಪ್ರವಾಸಿ ರೈಲಿನ ಎಸಿ ತ್ರಿ ಟೈರ್ ವರ್ಗದಲ್ಲಿ ನಿರ್ವಹಿಸಲಾಗುತ್ತದೆ. ಇದು ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸುತ್ತದೆ. ಪ್ಯಾಕೇಜ್’ನಲ್ಲಿ ವಿವಿಧ ಸ್ಥಳಗಳಲ್ಲಿ ಎರಡು/ಮೂರು ಹಂಚಿಕೆಯ ಆಧಾರದ ಮೇಲೆ ಹವಾನಿಯಂತ್ರಿತವಲ್ಲದ ಕೊಠಡಿಗಳಲ್ಲಿ ವಸತಿ, ನಿಗದಿತ ಮಾರ್ಗದ ಪ್ರಕಾರ ಹವಾನಿಯಂತ್ರಿತವಲ್ಲದ ಕೊಠಡಿಗಳಲ್ಲಿ ತಂಗಲು ಮತ್ತು ಸ್ನಾನಕ್ಕೆ ವ್ಯವಸ್ಥೆ, ಎಲ್ಲಾ ಸಸ್ಯಾಹಾರಿ ಊಟಗಳು, ಹವಾನಿಯಂತ್ರಿತವಲ್ಲದ ಬಸ್ಸುಗಳ ಮೂಲಕ ಎಲ್ಲಾ ಸ್ಥಳ ವೀಕ್ಷಣೆ ಮತ್ತು ಪ್ರವಾಸ, ಪ್ರತಿ ಕೋಚ್’ಗೆ ಪ್ರವಾಸ ಮಾರ್ಗದರ್ಶಿಗಳು, ಪ್ರಯಾಣಿಕರಿಗಾಗಿ ಪ್ರಯಾಣ ವಿಮೆ, ಐಆರ್ಸಿಟಿಸಿ ಪ್ರವಾಸ ವ್ಯವಸ್ಥಾಪಕರು, ರೈಲಿನಲ್ಲಿನ ಭದ್ರತೆ ಮತ್ತು ಎಲ್ಲಾ ಅನ್ವಯವಾಗುವ ತೆರಿಗೆಗಳು ಸೇರಿವೆ.
ಹೆಚ್ಚಿನ ಮಾಹಿತಿ ಮತ್ತು ಕಾಯ್ದಿರಿಸುವಿಕೆಗಾಗಿ, ಯಾತ್ರಿಕರು ಐಆರ್’ಸಿಟಿಸಿ ಕಚೇರಿಗಳನ್ನು ಸಂಪರ್ಕಿಸಬಹುದು: ಬೆಂಗಳೂರು: 9003140710 / 8595931290 / 8595931291 / 8595931292, ಮೈಸೂರು: 8595931294 & ಹುಬ್ಬಳ್ಳಿ: 8595931293 ಅಥವಾ ವೆಬ್ ಸೈಟ್’ಗೆ: www.irctctourism.comಗೆ ಭೇಟಿ ನೀಡಬಹುದು.
University of Agriculture and Horticulture ಜಿಲ್ಲಾ ಮಟ್ಟದ ಪ್ರಗತಿಪರ ರೈತ/ ರೈತ ಮಹಿಳೆಯರ ಪ್ರಶಸ್ತಿ ಆಯ್ಕೆಗಾಗಿ ಅರ್ಜಿ ಆಹ್ವಾನ
University of Agriculture and Horticulture ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರತಿ ವರ್ಷದಂತೆ ಈ ವರ್ಷವೂ ಕೃಷಿಮೇಳ-2025 ರಲ್ಲಿ “ಜಿಲ್ಲಾ ಮಟ್ಟದ ಪ್ರಗತಿಪರ ರೈತ/ರೈತ ಮಹಿಳೆ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲು ತೀರ್ಮಾನಿಸಲಾಗಿದೆ. ಆಸಕ್ತ ರೈತ/ರೈತ ಮಹಿಳೆಯರಿಂದ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಶಿವಮೊಗ್ಗ ಜಿಲ್ಲೆಯ ಆಸಕ್ತರ ರೈತ/ರೈತ ಮಹಿಳೆಯರು ಅರ್ಜಿಗಳನ್ನು ಕೃಷಿ ವಿಜ್ಞಾನ ಕೇಂದ್ರ, ನವುಲೆ, ಶಿವಮೊಗ್ಗ ಅಥವಾ ಕೃಷಿ ಇಲಾಖೆ, ಓ.ಟಿ.ರಸ್ತೆ, ಶಿವಮೊಗ್ಗ ಇಲ್ಲಿ ಖುದ್ದಾಗಿ ಅಥವಾ uahs.edu.in ವೆಬ್‌ಸೈಟ್ ಮೂಲಕ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಪಹಣಿಯನ್ನು ಲಗತ್ತಿಸಿ ಸೆ. 15 ರೊಳಗೆ ಸಲ್ಲಿಸುವುದು. ಆಯ್ಕೆಯಾದ ರೈತರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಪುರಸ್ಕಾರ ನೀಡಲಾಗುವುದು. University of Agriculture and Horticulture ಹೆಚ್ಚಿನ ಮಾಹಿತಿಗಾಗಿ ಡಾ.ಮಂಜುನಾಥ ಕುದರಿ, ವಿಜ್ಞಾನಿ (ಕೃಷಿ ವಿಸ್ತರಣೆ), ಮೊಬೈಲ್ ನಂ.9480751606 ಅಥವಾ ಡಾ. ನಾಗರಾಜ ಆರ್., ಹಿರಿಯ ತಾಂತ್ರಿಕ ಅಧಿಕಾರಿ, ಕೆ.ವಿ.ಕೆ., ಶಿವಮೊಗ್ಗ, ಮೊಬೈಲ್ ನಂ. 9353493824 ಗಳನ್ನು ಸಂಪರ್ಕಿಸುವುದು.
B.Y. Raghavendra ಶಿವಮೊಗ್ಗದಿಂದ ತಿರುನೆಲ್ವೇಲಿಗೆ ಹೊಸ ರೈಲು. ಸಂಸದ ರಾಘವೇಂದ್ರರ ಸಫಲ ಪ್ರಯತ್ನ.
B.Y. Raghavendra ಶಿವಮೊಗ್ಗದಿಂದ ತಿರುನೆಲ್ವೇಲಿಗೆ ಮತ್ತು ತಿರುನೆಲ್ವೇಲಿಯಿಂದ ಶಿವಮೊಗ್ಗಕ್ಕೆ ಒಂದು ಹೊಸ ರೈಲನ್ನು ಬಿಡುವಂತೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದು ಸಾರ್ವಜನಿಕರ ಒತ್ತಾಯದ ಮೇರೆಗೆ ಕೇಂದ್ರ ಮತ್ತು ರಾಜ್ಯ ರೈಲ್ವೆ ಸಚಿವರ ಮುಂದೆ ಒಂದು ಹೊಸದಾಗಿ ರೈಲನ್ನು ಮಂಜೂರು ಮಾಡುವಂತೆ ಕೋರಿಕೆ ಸಲ್ಲಿಸಲಾಗಿತ್ತು.
ಕೇಂದ್ರದ ರೈಲ್ವೆ ಸಚಿವರು ಮನವಿಯನ್ನು ಪುರಸ್ಕರಿಸಿ, ಪ್ರಯಾಣಿಕರು ರೈಲನ್ನು ಬಳಕೆ ಮಾಡಿಕೊಳ್ಳುವ ಸಲುವಾಗಿ ಪ್ರಾಯೋಗಿಕವಾಗಿ ರೈಲು ಗಾಡಿ ಸಂಖ್ಯೆ 06103 ದಿನಾಂಕ: 07.09.2025 ರಂದು ಮದ್ಯಾಹ್ನ 03.40 ಕ್ಕೆ ತಿರುನೆಲ್ವೇಲಿಯಿಂದ ಹೊರಟು ಶಿವಮೊಗ್ಗಕ್ಕೆ ದಿನಾಂಕ: 08.09.2025 ರ ಮದ್ಯಾಹ್ನ 01.00 ಕ್ಕೆ ತಲುಪಲಿದೆ. ಹಾಗೂ ಅದೇ ದಿನ ಮದ್ಯಾಹ್ನ ರೈಲು ಗಾಡಿ ಸಂಖ್ಯೆ 06104 ಶಿವಮೊಗ್ಗದಿಂದ ಮದ್ಯಾಹ್ನ 2.20 ಕ್ಕೆ ಹೊರಟು ದಿನಾಂಕ:09.09.2025 ರ ಬೆಳಗ್ಗೆ 09.53 ಕ್ಕೆ ತಿರುನೆಲ್ವೇಲಿಗೆ ತಲುಪಲಿದೆ. ವಿಶೇಷವಾಗಿ ಮುಂದೆ ಬರಲಿರುವ ದಸರಾ, ದೀಪಾವಳಿ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಈ ರೈಲು ವಾರಕ್ಕೆ ಒಮ್ಮೆ ಹಾಗೂ ಎಂಟು ವಾರಗಳು (ಅಂದರೆ 07.09.2025 ರಿಂದ 27.10.2025) ರವರೆಗೆ ಪ್ರಾಯೋಗಿಕವಾಗಿ ಸಂಚರಿಸಲಿದೆ. ಶಿವಮೊಗ್ಗದಿಂದ ಬೀರೂರು, ತುಮಕೂರು, ಬೆಂಗಳೂರು, ಜೋಲಾರ್‌ಪೆಟ್ಟೆ, ಮಧುರೈ, ಮೂಲಕ ತಿರುನೆಲ್ವೇಲಿಗೆ ತಲುಪಲಿದೆ.
B.Y. Raghavendra ಈ ರೈಲನ್ನು ಸಾರ್ವಜನಿಕರು ಹೆಚ್ಚಾಗಿ ಬಳಕೆ ಮಾಡಿಕೊಂಡಲ್ಲಿ ಕಾರ್ಯಸಾಧ್ಯತೆ ಕುರಿತು ಮಾನ್ಯ ರೈಲ್ವೆ ಸಚಿವರ ಮನವೊಲಿಸಿ ಇದೇ ರೈಲನ್ನು ಖಾಯಂ ಆಗಿ ಶಿವಮೊಗ್ಗದಿಂದ ತಿರುನೆಲ್ವೇಲಿವರೆಗೆ ಓಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದೆಂದು, ಹಾಗೂ ಸಾರ್ವಜನಿಕರು ಈ ರೈಲನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡಿ ಕೊಳ್ಳುವಂತೆ ಶಿವಮೊಗ್ಗ ಸಂಸದರಾದ ಬಿ.ವೈ.ರಾಘವೇಂದ್ರ ತಮ್ಮ ಸಾರ್ವಜನಿಕ ಮನವಿಯಲ್ಲಿ ತಿಳಿಸಿದ್ದಾರೆ.
Karnataka Grameen Bank ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಖಾಲಿ ಇರುವ 1425 ಹುದ್ದೆಗಳಿಗೆ ಅರ್ಜಿ ಆಹ್ವಾನ
Karnataka Grameen Bank ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್)ನಿಂದ ಕರ್ನಾಟಕ ಗ್ರಾಮೀಣ ಬ್ಯಾಂಕುಗಳಲ್ಲಿ ಅಗತ್ಯವಿರುವ ಆಫೀಸ್ ಅಸಿಸ್ಟಂಟ್ ಹಾಗೂ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ :
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್), ಆಫೀಸರ್ ಸ್ಕೇಲ್-1 (ಅಸಿಸ್ಟಂಟ್ ಮ್ಯಾನೇಜರ್), ಆಫೀಸರ್ ಸ್ಕೇಲ್-2 (ಮ್ಯಾನೇಜರ್).
ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದೆಲ್ಲೆಡೆ ಗ್ರಾಮೀಣ ಬ್ಯಾಂಕುಗಳಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ :
ಒಟ್ಟು 1425 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ ಹುದ್ದೆಗಳ ಸಂಖ್ಯೆ
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್) 800
ಆಫೀಸರ್ ಸ್ಕೇಲ್-1 (ಅಸಿಸ್ಟಂಟ್ ಮ್ಯಾನೇಜರ್) 500
ಆಫೀಸರ್ ಸ್ಕೇಲ್-2 (ಮ್ಯಾನೇಜರ್) 125
ಶೈಕ್ಷಣಿಕ ಅರ್ಹತೆ :
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ, ಸಿಎ, ಎಂಬಿಎ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ವಯೋಮಿತಿ :
ದಿನಾಂಕ 01/09/2025ಕ್ಕೆ ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು.
ಹುದ್ದೆ ವಯೋಮಿತಿ
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್) ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ
ಆಫೀಸರ್ ಸ್ಕೇಲ್ 1 ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ
ಆಫೀಸರ್ ಸ್ಕೇಲ್-2 (ಮ್ಯಾನೇಜರ್) ಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ
ವಯೋಮಿತಿ ಸಡಿಲಿಕೆ :
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 5 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
- ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷ
ಆಯ್ಕೆ ವಿಧಾನ :
ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. (ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ)
Karnataka Grameen Bank ಪರೀಕ್ಷಾ ಕೇಂದ್ರಗಳು :
ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ.
ಅರ್ಜಿ ಸಲ್ಲಿಕೆಯ ವಿಧಾನ :
ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ಅರ್ಜಿ ಶುಲ್ಕ :
ಆಫೀಸರ್ (ಸ್ಕೇಲ್-1, 2) –
- ಪ.ಜಾತಿ/ ಪ.ಪಂ./ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು – ರೂ. 175
- ಉಳಿದ ಅಭ್ಯರ್ಥಿಗಳು – ರೂ. 850
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್) –
- ಪ.ಜಾತಿ/ ಪ.ಪಂ./ ಪಿಡಬ್ಲ್ಯೂಬಿಡಿ/ ಮಾಜಿ ಸೈನಿಕ ಅಭ್ಯರ್ಥಿಗಳು – ರೂ. 175
- ಉಳಿದ ಅಭ್ಯರ್ಥಿಗಳು – ರೂ. 850
ಶುಲ್ಕ ಪಾವತಿಸುವ ವಿಧಾನ :
ನಿಗದಿಪಡಿಸಿದ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಸೆಪ್ಟೆಂಬರ್ 01, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 21, 2025
- ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 21, 2025
- ಪ್ರಿಲಿಮಿನರಿ ಪರೀಕ್ಷಾ ದಿನಾಂಕ : ನವೆಂಬರ್/ ಡಿಸೆಂಬರ್, 2025
- ಮುಖ್ಯ ಪರೀಕ್ಷಾ ದಿನಾಂಕ : ಡಿಸೆಂಬರ್ 2025/ ಫೆಬ್ರವರಿ, 2026
Tenoxin Junior World Cup ಸಾಗರದ ಗಗನದೀಪ್ ನಿರ್ಮಿಸಿದ ಮಾದರಿಗೆ ಹರಿಯಾಣದಲ್ಲಿ ನಡೆದ ಪ್ರದರ್ಶನದಲ್ಲಿ ರೊಬೋಟಿಕ್ ನಿರ್ಮಿತಿಗೆ ಪ್ರಶಂಸಾಪತ್ರ
Tenoxin Junior World Cup ಹರಿಯಾಣದ ನೊಯಿಡದಲ್ಲಿ 3 ದಿನ ನಡೆದ ಟೆನೋಕ್ಸಿನ್ ಜೂನಿಯರ್ ವರ್ಲ್ಡ್ ಕಪ್ 2025 ರ ರೋಬೋಟಿಕ್ ಪ್ರದರ್ಶನದಲ್ಲಿ ಇನ್ನೋವೆಟಿವ್ನ್ ವಿಭಾಗ ದಲ್ಲಿ ಪ್ರಗತಿ ಕಾಂಪೋಸಿಟ್ ಸ್ಕೂಲಿನ ಹತ್ತನೆ ತರಗತಿ ವಿದ್ಯಾರ್ಥಿ ಗಗನ್ ದೀಪ ಸಾಗರ ತಯಾರು ಮಾಡಿದ್ದ ವ್ಯದ್ಯಕೀಯ ಕ್ಷೇತ್ರಕ್ಕೆ ಸಹಾಯ ಆಗಬಲ್ಲ ಜಿಪಿಎಸ್ ಸಹಿತ ಹಾಗೂ ಆಟೋ ರೆಕಾರ್ಡಿಂಗ್ ರೋಬೋಟಿಕ್ ಅನ್ನು ಪ್ರದರ್ಶಿಸಿ ಪ್ರಶಂಸೆಗೆ ಪಾತ್ರನಾಗಿದ್ದಾನೆ. ವಿವಿಧ ದೇಶಗಳಿಂದ ಸಾವಿರಕ್ಕೂ ಹೆಚ್ಚು ಮಕ್ಕಳು ಮತ್ತು ಯುವಕರು ಆಗಮಿಸಿ ಭಾಗವಹಿಸಿದ್ದರು.
ಸಾಗರದಲ್ಲಿ ಬೀದಿನಾಯಿ ಹಾವಳಿ, ನಿಯಂತ್ರಣಕ್ಕೆ ಒತ್ತಾಯಿಸಿ ಸಾರ್ವಜನಿಕರ ಪ್ರತಿಭಟನೆ
ಸಾಗರ ಪಟ್ಟಣದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ ನಿಯಂತ್ರಿಸಬೇಕು ಹಾಗೂ ಬೀದಿನಾಯಿ ಕಚ್ಚಿ ಚಿಕಿತ್ಸೆ ಪಡೆಯುತ್ತಿರುವವರಿಗೆ ನಗರಸಭೆಯಿಂದ ಪರಿಹಾರ ನೀಡುವಂತೆ ಒತ್ತಾಯಿಸಿ ಮಂಗಳವಾರ ಸಾಗರ ನಾಗರೀಕರ ಒಕ್ಕೂಟ, ಸಾಗರ ಹೆಲ್ಪ್ಲೈನ್, ಪೇಶೆಂಟ್ ರಿಲೀಫ್ ಫೌಂಡೇಶನ್ , SYS ಹಿಸಬಾ ತಂಡ, ಇನ್ನಿತರೆ ಪಕ್ಷಾತೀತ ಜಾತೀಯತಿತ ಸಂಘಟನೆಗಳ ವತಿಯಿಂದ ನಗರಸಭೆ ಅಂಬೇಡ್ಕರ್ ಪ್ರತಿಮೆ ಎದುರು ಮಂಗಳವಾರ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಿನ್ನೆ ಸೋಮವಾರ ಮಧ್ಯಾಹ್ನ ಸಾಗರದ ಜನ್ನತ್ ನಗರದಲ್ಲಿ ಮೂರು ವರ್ಷದ ಪುಟ್ಟ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ನಡೆದಿತ್ತು.
ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಇಂದು ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರಸಭೆಯ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ನಾಗರಿಕರು ಸೇರಿ ಸಾಗರ ನಗರಸಭೆಯ ಆಡಳಿತ, ಅಧಿಕಾರಿಗಳಿಗೆ ಸೇರಿದಂತೆ ಪ್ರಾಣಿ ದಯಾ ಸಂಘದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ಪ್ರಮುಖ ಹಾಗೂ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ ಮಾತನಾಡಿ, ಬೀದಿನಾಯಿ ಹಾವಳಿಯಿಂದ ಜನರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ನಾಯಿ ಮನೆಯ ಮೇಲೆ ಸಹ ಹತ್ತಿ ಉಪಟಳ ನೀಡುತ್ತಿದೆ. ಸೋಮವಾರ ಜನ್ನತ್ ನಗರದಲ್ಲಿ ರಶೀದ್ ಎಂಬುವವರ ಮೂರು ವರ್ಷದ ಮಗ ಮಕ್ಬೂಲ್ ಎಂಬುವವರಿಗೆ ನಾಯಿ ಕಡಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಮಗುವನ್ನು ಶಿವಮೊಗ್ಗ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇಂತಹ ಹಲವು ಪ್ರಕರಣಗಳು ಪಟ್ಟಣದಲ್ಲಿ ನಡೆದಿದೆ. ನಾಯಿ ನಿಯಂತ್ರಣ ಮಾಡಿ ಎಂದರೆ ಪ್ರಾಣಿದಯಾ ಸಂಘದವರನ್ನು ತೋರಿಸಿ ಸುಮ್ಮನಾಗುತ್ತಿದ್ದಾರೆ. ನಗರಸಭೆಯಲ್ಲಿ ನಾಯಿಕಡಿತ ಇನ್ನಿತರೆ ನಡೆದಾಗ ತಿಳಿಸಲು ಸಹಾಯವಾಣಿ ಮಾಡಬೇಕು. ಆದರೆ ಅದನ್ನು ಪಾಲಿಸಿಲ್ಲ. ತಕ್ಷಣ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ತರಬೇಕು. ಬೀದಿನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನಡೆಸಿ ನಗರಸಭೆಯ ಪೌರಾಯುಕ್ತ ಹೆಚ್ ಕೆ ನಾಗಪ್ಪ ಹಾಗೂ ನಗರಸಭೆಯ ಅಧ್ಯಕ್ಷೆ ಮೈತ್ರಿ ಪಾಟೀಲ್ ರವರಿಗೆ ಮನವಿ ಸಲ್ಲಿಸಲಾಯಿತು
ಪ್ರತಿಭಟನೆ ಉದ್ದೇಶಿಸಿ ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ರೈತ ಸಂಘದ ಜಿಲ್ಲಾ ಅಧ್ಯಕ್ಷ ದಿನೇಶ್ ಶಿರವಾಳ , ಪೇಶೆಂಟ್ ರಿಲೀಫ್ ಫೌಂಡೇಶನ್ ಮುಖ್ಯಸ್ಥ ಸದ್ದಾಂ ದೊಡ್ಮನೆ ಸೇರಿದಂತೆ ಅನೇಕರು ಮಾತನಾಡಿದರು.
Karnataka High Court ಕರ್ನಾಟಕ ಆಡಳಿತ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯರಾಗಿ ಡಾ.ಹೆಚ್.ಬಿ.ಪ್ರಭಾಕರ ಶಾಸ್ತ್ರಿ ನೇಮಕ
Karnataka High Court ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಾ. ಎಚ್ ಬಿ ಪ್ರಭಾಕರ ಶಾಸ್ತ್ರೀಯವರನ್ನು ಭಾರತದ ಮಾನ್ಯ ರಾಷ್ಟ್ರಪತಿಗಳು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿದ್ದು ಡಾ. ಪ್ರಭಾಕರ ಶಾಸ್ತ್ರೀಯವರು ಇಂದು ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು. Karnataka High Court ಮೂಲತಃ ದಾವಣಗೆರೆಯವರಾದ ಹೆಚ್ ಬಿ ಪ್ರಭಾಕರ ಶಾಸ್ತ್ರೀ ಅವರು ಹಿರಿಯ ಸಾಹಿತಿ, ಅಂಕಣಕಾರ ಎಚ್ ಆನಂದರಾಮ ಶಾಸ್ತ್ರೀ ಹಾಗೂ ಹಿರಿಯ ಪತ್ರಕರ್ತ, ವ್ಯಂಗ್ಯ ಚಿತ್ರಕಾರ ಡಾ.ಎಚ್ ಬಿ ಮಂಜುನಾಥ ರವರ ಕಿರಿಯ ಸಹೋದರರಾಗಿದ್ದಾರೆ.
Department of Fisheries ವಿಶೇಷ ಘಟಕ & ಗಿರಿಜನ ಉಪಯೋಜನೆಯಡಿ ಪ.ಜಾ/ ಪ.ಪಂಗಡದ ಮೀನು ಮಾರಾಟಗಾರರಿಗೆ ಆರ್ಥಿಕ ನೆರವು. ಇಲಾಖೆ ಪ್ರಕಟಣೆ
Department of Fisheries 2025-26 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ರಾಜ್ಯವಲಯದಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನು ಮಾರಾಟಗಾರರಿಗೆ ಆರ್ಥಿಕ ನೆರವು ನೀಡಲು ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.50 ರಷ್ಟು ಅಥವಾ ರೂ.3 ಲಕ್ಷ ಆರ್ಥಿಕ ನೆರವನ್ನು ಇಲಾಖಾ ಷರತ್ತು ಮತ್ತು ನಿಬಂಧನೆಗಳಿಗೊಳಪಟ್ಟು ಅನುಷ್ಟಾನಗೊಳಿಸಲಾಗುತ್ತಿದೆ. ಜಿಲ್ಲೆಗೆ ಪರಿಶಿಷ್ಟ ಜಾತಿ-2 ಮತ್ತು ಪರಿಶಿಷ್ಟ ಪಂಗಡ-1 ಮೀನು ಮಾರಾಟಗಾರರಿಗೆ ಗುರಿಯನ್ನು ನಿಗದಿಪಡಿಸಲಾಗಿದ್ದು, ಅರ್ಹ ಮೀನು ಮಾರಾಟಗಾರರು ಸೆ.20 ರ ಒಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರಿಗೆ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
Department of Fisheries ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕ, ಶಿವಮೊಗ್ಗ- 9986040981, ಭದ್ರಾವತಿ-9743370815, ಶಿಕಾರಿಪುರ-9686939028, ಸಾಗರ ಮತ್ತು ಹೊಸನಗರ-9538044365, ಸೊರಬ-9535386449, ತೀರ್ಥಹಳ್ಳಿ-8655132438 ಗೆ ಸಂಪರ್ಕಿಸುವುದು.
School education and literacy ಮೆಟ್ರಿಕ್ ಪೂರ್ವ/ ಮೆಟ್ರಿಕ್ ನಂತರದ ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ. ಇಲಾಖೆ ಪ್ರಕಟಣೆ
School education and literacy ಶಿವಮೊಗ್ಗ ಜಿಲ್ಲೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ 2024-25ನೇ ಸಾಲಿನ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ತಂತ್ರಾಂಶದ (SSP) ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, (DBT) ತಂತ್ರಾಂಶದ ಮೂಲಕ ಅರ್ಹ ವಿದ್ಯಾರ್ಥಿಗಳ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ವಿದ್ಯಾರ್ಥಿವೇತನ ಪಾವತಿಸಲಾಗುತ್ತಿದೆ.
School education and literacy ವಿದ್ಯಾರ್ಥಿವೇತನ ಮಂಜೂರು ಮಾಡುವ ಸಲುವಾಗಿ ಆಧಾರ್ ಸೀಡಿಂಗ್ ಆಗದೇ ಇರುವ ಎಲ್ಲಾ ಅರ್ಹ ವಿದ್ಯಾರ್ಥಿಗಳು ಆಧಾರ್ ಸೀಡಿಂಗ್ ಮಾಡಿಸಿಕೊಳ್ಳಲು ಸೆ.07 ರವರೆಗೆ ವಿಶೇಷ ಆಧಾರ್ ಸೀಡಿಂಗ್ ಅಭಿಯಾನವನ್ನು ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸೆ.07 ರ ಒಳಗಾಗಿ ಅರ್ಹ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ. ಶ್ರೀನಿವಾಸ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಶಿವಮೊಗ್ಗ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆಗಳನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸುವುದು.
