Sunday, June 7, 2026
Sunday, June 7, 2026

ಶಿವಮೊಗ್ಗದಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಕೆಐಡಿಬಿಯಿಂದ ಭೂಮಿ ಒದಗಿಸುವ ಅಗತ್ಯವಿದೆ-:ಡಿ.ಜಿ.ಬೆನಕಪ್ಪ

Date:

ಶಿವಮೊಗ್ಗ ಕೈಗಾರಿಕಾ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲು ಈಗಾಗಲೇ ಸ್ಥಾಪಿತವಾಗಿರುವ ಕೈಗಾರಿಕೆಗಳಿಗೆ ಹೆಚ್ಚುವರಿ ವಿದ್ಯುತ್ ಸಂಪರ್ಕ ಹಾಗೂ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಕೆಐಎಡಿಬಿ ವತಿಯಿಂದ ಹೊಸ ಕೈಗಾರಿಕಾ ಭೂಮಿ ಒದಗಿಸುವ ಅವಶ್ಯಕತೆ ಇದೆ ಎಂದು ಶಿವಮೊಗ್ಗ ಭದ್ರಾವತಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ ಹೇಳಿದರು

ಬೆಂಗಳೂರಿನ ಎಫ್‌ಕೆಸಿಸಿಐ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಇತ್ತೀಚಿನ ಸರ್ಕಾರದ ಉದ್ದೇಶಿತ ಕನಿಷ್ಟ ವೇತನ ಜಾರಿಯನ್ನು ತಡೆ ಹಿಡಿದು, ಎಂಎಸ್‌ಎಂಇ ಕೈಗಾರಿಕೆಗಳು ಹೊರ ರಾಜ್ಯಗಳಿಗಿಂತ ಪೈಪೋಟಿ ದರದಲ್ಲಿ ಉತ್ಪಾದನೆ ಮಾಡಲು ಸಹಕರಿಸುವಂತ ವಾತಾವರಣ ನಿರ್ಮಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕೆಐಎಡಿಬಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಕೈಗಾರಿಕೆಗಳ ಉದ್ದೇಶಿತ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಹಾಗೂ ಹೊಸ ಕೈಗಾರಿಕೆ ಸ್ಥಾಪಿಸಲು ಹೆಚ್ಚುವರಿ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ಕಲ್ಪಿಸುತ್ತಿಲ್ಲ. ಹೀಗಾಗಿ ಕೈಗಾರಿಕೆಗಳು ಗ್ರಾಹಕರ ಬೇಡಿಕೆಯನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಹಿನ್ನಡೆಯಾಗಿದೆ. ವಿದೇಶಿ ಗ್ರಾಹಕರು ಬೇರೆ ರಾಜ್ಯಗಳತ್ತ ಮುಖ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಕೆಐಎಡಿಬಿ ನಿರ್ಮಿತ ಸೋಗಾನೆ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರ ರೈತರಿಗೆ ಸಾಗುವಳಿ ಚೀಟಿ ಹಾಗೂ ಹಲವಾರು ಎಕರೆಗಳಷ್ಟು ಭೂಮಿಯನ್ನು ಬೇರೆ ಉದ್ದೇಶಗಳಿಗೆ ನೀಡಿದೆ. ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಹೈಕೋರ್ಟ್ ಪರಿಸರ ಸೂಕ್ಷ್ಮ ಪ್ರದೇಶ ಎಂದು ತಡೆಯಾಜ್ಞೆ ಹೊರಡಿಸಿದೆ. ಹೀಗಾಗಿ ಶಿವಮೊಗ್ಗದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ನವೋದ್ಯಮಿಗಳಿಗೆ ಮರಿಚೇಕೆಯಾಗಿದೆ ಎಂದರು.

ಎಫ್‌ಕೆಸಿಸಿಐ ವತಿಯಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿ ಕೈಗಾರಿಕೆಗಳ ಕುಂದು-ಕೊರತೆಗಳ ಬಗ್ಗೆ ಗಮನ ಸೆಳೆಯಬೇಕು. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.

ಫೆಬ್ರವರಿ 28ರಂದು ಶನಿವಾರದಂದು ಜೆಎನ್‌ಎನ್‌ಸಿಸಿ ಕಾಲೇಜನಲ್ಲಿ ನಡೆಯಲಿರುವ “ಬಿಯಾಂಡ್ ಬೆಂಗಳೂರು” ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷರು ಭಾಗವಹಿಸಲಿದ್ದು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗದ ಎಲ್ಲಾ ಕೈಗಾರಿಕಾ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಒಂದು ಮನವಿಯನ್ನು ಈ ಕುರಿತು ನೀಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಉಪಾಧ್ಯಕ್ಷರಾದ ಬಿ.ಪಿ.ಶಶಿಧರ್, ಎನರ್ಜಿ ಕಮಿಟಿ ಅಧ್ಯಕ್ಷ ಬಿ.ಮುರಳಿಕೃಷ್ಣ, ಕಾಸಿಯಾ ಸುದ್ದಿ ವಿಭಾಗದ ಉಪ ಸಮಿತಿ ಅಧ್ಯಕ್ಷ ಎಸ್.ಕೃಷ್ಣಾನಂದ ಇತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashavani Bhadravati ಜೂನ್ ತಿಂಗಳ ಪ್ರತೀ ಭಾನುವಾರ ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕ ” ಜೈಲು ಹಕ್ಕಿಗಳ ಗಾನಸುಧೆ” ಆಲಿಸಿ.

Akashavani Bhadravati ಭದ್ರಾವತಿ ಆಕಾಶವಾಣಿಯಲ್ಲಿ ಜೂನ್ 2026ರ ಪ್ರತಿ ಭಾನುವಾರ ಸಂಜೆ 4.00...

DK Shivakumar ಕೆಂಪೇಗೌಡ ದಿನಾಚರಣೆಯಂದು 15 ಲಕ್ಷ ಸಸಿನೆಡುವ ವಿಶೇಷ ಕಾರ್ಯಕ್ರಮ- ಸೀಎಂ ಡಿ.ಕೆ.ಶಿವಕುಮಾರ್

DK Shivakumar ಎಲ್ಲರೂ ಪರಿಸರವನ್ನು ಕಾಪಾಡುವ ಮೂಲಕ ರಾಜ್ಯವನ್ನು ಹಸಿರಾಗಿಸಬೇಕು. ಪ್ರತಿ ಮನೆಯಲ್ಲಿ...

World Environment Day ಪರಿಸರ ಮಾಲಿನ್ಯ ರಕ್ಷಣೆಗೆ ಕೃತಕ‌ ಬುದ್ಧಿಮತ್ತೆ ಬಳಕೆ ಅಗತ್ಯ- ಜಿ.ಎ.ಹಿರೇಮಠ್.

World Environment Day ಪರಿಸರ ಮಾಲಿನ್ಯದ ಮೂಲಗಳನ್ನು ಪತ್ತೆ ಹಚ್ಚಲು ಹಾಗೂ ನೈಜ,...